ಲಾಕ್ ಡೌನ್ ನ ನಂತರದ ಆರ್ಥಿಕ ಯೋಜನೆ

@@NEWS_SUBHEADLINE_BLOCK@@

Udyam Prakashan Kannad    22-Sep-2020   
Total Views |


1-2_1  H x W: 0

ಲಾಕ್ ಡೌನ್ ನಂತರ ಕೈಗಾರಿಕೋದ್ಯಮಗಳಿಗೆ ತಮ್ಮ ವ್ಯವಹಾರಗಳನ್ನು ಮತ್ತೆ ಪ್ರಾರಂಭಿಸಲು ಸಹಾಯವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿಶೇಷವಾದ ಪ್ಯಾಕೆಜ್ ಘೋಷಿಸಿತು. ಈ ಕುರಿತಾದ ವಿವರಗಳನ್ನು ನಾವು ಜುಲೈ 2020 ತಿಂಗಳ ಸಂಚಿಕೆಯಲ್ಲಿ ತಿಳಿದುಕೊಂಡೆವು. ದೀರ್ಘಕಾಲಾವಧಿಯಲ್ಲಿ ನಿಂತಿರುವ ಮತ್ತು ಅಡೆತಡೆಗಳನ್ನು ಎದುರಿಸಿರುವ ಕೈಗಾರಿಕೋದ್ಯಮಗಳನ್ನು ಮತ್ತೆ ಪ್ರಾರಂಭಿಸುವಾಗ ಹೆಚ್ಚಿನ ಕಂಪನಿಗಳು ವ್ಯವಹಾರದಲ್ಲಿ ಕಾಲೂರಲು ಆದ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಲಾಕ್ ಡೌನ್ ಪ್ರಾರಂಭವಾಗುವ ಮುನ್ನ ಹಲವಾರು ಆರ್ಡರ್ ಗಳ ಕೆಲಸವು ಬಾಕಿ ಉಳಿದಿತ್ತು. ಅದರಲ್ಲಿ ಕೆಲವು ಆರ್ಡರ್ ಗಳನ್ನು ಲಾಕ್ ಡೌನ್ ನಂತರವೂ ಪೂರ್ತಿ ಮಾಡಬೇಕು, ಎಂಬ ಬೇಡಿಕೆಯನ್ನು ಗ್ರಾಹಕರು ನೀಡಿದ್ದಲ್ಲಿ, ಇಂತಹ ಆರ್ಡರ್ ಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಬಿಲ್ಲಿಂಗ್ ಹೇಗೆ ಪ್ರಾರಂಭಿಸಬಹುದು, ಈ ಕುರಿತು ಉದ್ಯಮಿಗಳು ಗಮನ ಹರಿಸುತ್ತಿದ್ದಾರೆ. ಈ ಎಲ್ಲ ಕೆಲಸಗಳನ್ನು ಮಾಡುವಲ್ಲಿ ಕೇಂದ್ರ ಸರ್ಕಾರದ ವಿಶೇಷ ಸಾಲದ ಯೋಜನೆಯ ಲಾಭವು ಉದ್ಯಮಿಗಳಿಗೆ ಸಿಗಬಲ್ಲದು.
 
ಇತ್ತೀಚೆಗೆ ಸಾಲಗಳಿಗೆ 20% ತನಕ ಸವಲತ್ತಿನ ಬಡ್ಡಿಯಲ್ಲಿ ಸುಲಭವಾಗಿ ಸಿಗುವ ಸಾಲವನ್ನು ಹಳೆಯ ಆರ್ಡರ್ ಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನು ಖರೀದಿಸುವುದು, ಕೆಲಸಗಾರರಿಗೆ ನೀಡಬೇಕಿರುವ ಹಳೆ ಬಾಕಿ ಸಂಬಳವನ್ನು ಕೊಟ್ಟು ಅವರನ್ನು ಮತ್ತೆ ಕೆಲಸಕ್ಕೆ ಸೇರ್ಪಡಿಸುವುದು, ಪೂರೈಕೆಗಾರರ ಹಳೆ ಬಾಕಿಯನ್ನು ಸಲ್ಲಿಸಿ ಹೊಸದಾಗಿ ಕಚ್ಚಾ ವಸ್ತುಗಳನ್ನು ಎರವಲಾಗಿ ಪಡೆಯುವುದು ಇಂತಹ ಅಂಶಗಳನ್ನು ಪೂರ್ತಿಗೊಳಿಸಲು ತಕ್ಷಣವೇ ಉಪಯೋಗಿಸಿ ವ್ಯವಹಾರಗಳನ್ನು ಸರಳೀಕರಿಸಬಹುದು. ಬ್ಯಾಂಕ್ ಗಳಿಂದ ಈ ರೀತಿಯ ಸಾಲಗಳನ್ನು ಯಾವುದೇ ಅರ್ಜಿ ಸಲ್ಲಿಸದೇ ನೀಡಲಾಗುತ್ತಿದೆ. ಅಲ್ಲದೇ ಇದರ ಮರುಪಾವತಿಗೆ ದೀರ್ಘ ಕಾಲಾವಧಿಯ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಬಂಡವಾಳವನ್ನು ಹೂಡಲು ಬ್ಯಾಂಕ್ ಗಳಿಂದ ನೀಡಲಾಗುವ ಕ್ಯಾಶ್ ಕ್ರೆಡಿಟ್ ಅಥವಾ ಓವರ್ ಡ್ರಾಫ್ಟ್ ನಂತೆಯೇ, ಈ ಸಾಲವು ಕೂಡಾ ಒಂದು ವರ್ಷದ ಕಾಲಾವಧಿಗೆ ಕಾರ್ಯವಾಹಿ ಬಂಡವಾಳ ಎಂಬುದಾಗಿ ಬ್ಯಾಂಕ್ ಗಳು ನೀಡಿರುವ ಟರ್ಮ್ ಲೋನ್ ಎಂದು ಹೇಳಬಹುದು. ಈ ವಿಶೇಷ ಸಾಲದ ಪ್ಯಾಕೇಜ್ ನ ಹೊರತಾಗಿ MSME ಕ್ಷೇತ್ರಕ್ಕೆ ಹೆಚ್ಚುವರಿಯಾದ ಯಾವುದೇ ಅಡಮಾನ (ಶ್ಯುರಿಟಿ) ಇಲ್ಲದ ಸಾಲದ ಯೋಜನೆಗಳು ಲಾಕ್ ಡೌನ್ ನ ಮುಂಚಿನಿಂದಲೂ ಉಪಲಬ್ಧವಿವೆ. ಆದ್ದರಿಂದ ಸದ್ಯಕ್ಕೆ ಯಾವುದೇ ರೀತಿಯ ಸಾಲವಿಲ್ಲದ ಕೈಗಾರಿಕೋದ್ಯಮಿಗಳು, ಇದರಿಂದಾಗಿ ಇಂತಹ ಹೊಸ ಯೋಜನೆಯಡಿಯಲ್ಲಿ ವಿಶೇಷ ಸಾಲವನ್ನು ಪಡೆಯುವಲ್ಲಿ ಅನರ್ಹರಾಗಿದ್ದಾರೋ, ಇಂತಹ ಕೈಗಾರಿಕೋದ್ಯಮಿಗಳು ಸುಲಭವಾಗಿ ಉಪಲಬ್ಧವಿರುವ ಸಾಲದ ಹೊರತಾಗಿ ಇನ್ನಿತರ ಯೋಜನೆಗಳ ಲಾಭವನ್ನು ಪಡೆಯಬಲ್ಲರು. ಅರ್ಥಾತ್, ಈ ರೀತಿಯ ಸಾಲದ ಯೋಜನೆಗಳನ್ನು ಪಡೆಯುವಾಗ ಕೈಗಾರಿಕೋದ್ಯಮಿಗಳು ಅನೇಕ ಅಂಶಗಳನ್ನು ಗಮನದಲ್ಲಿಡಬೇಕು. ಈ ಯೋಜನೆಯಲ್ಲಿ ಸಿಕ್ಕಿರುವ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದೆ ಮತ್ತು ಅದನ್ನು ಮರುಪಾವತಿಸಲೇ ಬೇಕು. ಇಂತಹ ಸಾಲಕ್ಕೆ ಸವಲತ್ತಿನ ಬಡ್ಡಿಯನ್ನೂ ನೀಡಬೇಕಾಗುತ್ತದೆ. ಆದ್ದರಿಂದ ಈ ರೀತಿಯ ಸಾಲವನ್ನು ಪಡೆಯುವ ಮುನ್ನ ಅದನ್ನು ಹೇಗೆ ಉಪಯೋಗಿಸುವುದು, ಈ ಕುರಿತು ಆರ್ಥಿಕ ಯೋಜನೆ, ಬಡ್ಡಿ ಮತ್ತು ಅಸಲಿನ ಮರುಪಾವತಿ ಮಾಡುವ ನಿಟ್ಟಿನಲ್ಲಿ ಸಮರ್ಥರಾಗಿದ್ದಾರೆಯೇ, ಎಂಬಿತ್ಯಾದಿ ಅಂಶಗಳನ್ನು ಖಚಿತಪಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಪಡೆದ ಸಾಲದ ಹಣವನ್ನು ಸೂಕ್ತವಲ್ಲದ ರೀತಿಯಲ್ಲಿ ಖರ್ಚು ಮಾಡಿದಲ್ಲಿ, ಈ ಸಾಲದ ಮರುಪಾವತಿಗೆ ಮತ್ತೆ ಸಾಲ ಪಡೆಯುವ ಪರಿಸ್ಥಿತಿಯನ್ನು ಕೈಗಾರಿಕೋದ್ಯಮಿಗಳು ಎದುರಿಸಬೇಕಾಗಬಹುದು.



ಈ ಸಾಲದ ಕುರಿತು ಆರ್ಥಿಕ ಯೋಜನೆಯ ವಿಚಾರ ಮಾಡಿದಾಗ ಹಲವಾರು ಅಂಶಗಳನ್ನು ಗಮನಿಸಬೇಕು. ನಿಂತಿರುವ ಉದ್ಯಮಗಳ ವ್ಯವಹಾರಗಳನ್ನು ಮತ್ತೆ ಪ್ರಾರಂಭಿಸುವಾಗ ರನಿಂಗ್ ಕ್ಯಾಪಿಟಲ್ (ಕಾರ್ಯವಾಹಿ ಬಂಡವಾಳ) ಅಂದರೆ ಮರುಕಳಿಸುವ ಖರ್ಚುಗಳಿಗೆ (ರಿಕರಿಂಗ್ ಎಕ್ಸ್ ಪೆನ್ಸೆಸ್) ಬೇಕಾಗುವ ಹಣವು ಸಾಕಷ್ಟು ಪ್ರಮಾಣದಲ್ಲಿ ಉಪಲಬ್ಧವಾಗಬೇಕು, ಎಂಬುದಕ್ಕಾಗಿಯೇ, ಈ ಸಾಲವನ್ನು ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಆರ್ಥಿಕ ಯೋಜನೆಯನ್ನು ಮಾಡುವಾಗ ವರ್ಕಿಂಗ್ ಕ್ಯಾಪಿಟಲ್ ಮ್ಯಾನೆಜ್ ಮೆಂಟ್ ಈ ಅಂಶದ ಕುರಿತು ಪ್ರಾಮುಖ್ಯವಾಗಿ ವಿಮರ್ಶೆಯನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಕಾರ್ಯವಾಹಿ ಬಂಡವಾಳ ಅಂದರೆ ವರ್ಕಿಂಗ್ ಕ್ಯಾಪಿಟಲ್ ಯಾವುದೇ ಕೈಗಾರಿಕೋದ್ಯಮಗಳಿಗೆ ಮಹತ್ವದ್ದಾಗಿರುತ್ತದೆ. ಇಂತಹ ಕಾರ್ಯವಾಹಿ ಬಂಡವಾಳವು ಸಾಕಷ್ಟು ಪ್ರಮಾಣದಲ್ಲಿ, ಯೋಗ್ಯ ಜಾಗದಲ್ಲಿ ಮತ್ತು ಸೂಕ್ತ ಸಮಯದಲ್ಲಿ ಉಪಲಬ್ಧವಾಗದಿದ್ದಲ್ಲಿ, ಉದ್ಯಮದ ಸೆಟಪ್ ಎಷ್ಟು ದೊಡ್ಡದಿದ್ದರೂ, ಉತ್ತಮ ಸ್ಥಿತಿಯಲ್ಲಿದ್ದರೂ ಕೂಡಾ ಆ ಉದ್ಯಮವು ಆರ್ಥಿಕವಾದ ಅಡಚಣೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ.
ಯೋಗ್ಯ ರೀತಿಯಲ್ಲಿ ಆರ್ಥಿಕ ನಿರ್ವಹಣಾ ವ್ಯವಸ್ಥೆ ಅಂದರೆ ಏನು ಎಂಬುದನ್ನು ಹೇಳುವುದಾದಲ್ಲಿ ವಾಹನವನ್ನು ನಡೆಸುವ ಉದಾಹರಣೆಯನ್ನು ನೀಡಬಹುದು. ವಾಹನವನ್ನು ಸರಿಯಾಗಿ ನಡೆಸಿ ತಮಗೆ ಬೇಕಾಗಿರುವ ಸ್ಥಾನಕ್ಕೆ ತಲುಪುವುದಾದಲ್ಲಿ ಡ್ರೈವರ್ ನ ಡ್ರೈವಿಂಗ್ ನಲ್ಲಿರುವ ಜಾಣತನ, ವಾಹನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಇಂಧನವನ್ನು ಪೂರೈಸುವುದು ಮತ್ತು ತಮಗೆ ಬೇಕಾದಲ್ಲಿ ಬ್ರೇಕ್ ಒತ್ತುವುದೂ ಕೂಡಾ ಅಷ್ಟೇ ಮಹತ್ವದ್ದಾಗಿದೆ. ಇಂಧನವಿಲ್ಲದಿದ್ದಲ್ಲಿ ವಾಹನ ಮುಂದೆ ಚಲಿಸದು, ಬ್ರೇಕ್ ಇಲ್ಲದಿದ್ದಲ್ಲಿ ತಮಗೆ ಬೇಕಾದ ಜಾಗದಲ್ಲಿ ವಾಹನ ನಿಲ್ಲಿಸುವುದು ಅಸಾಧ್ಯ, ಹೆಚ್ಚು ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಬ್ರೇಕ್ ಇಲ್ಲದಿದ್ದಲ್ಲಿ ಅಪಘಾತಗಳ ಸಾಧ್ಯತೆ ಇರುತ್ತದೆ. ಅಲ್ಲದೇ ಮುಂದಿನ ಪ್ರವಾಸವೂ ನಿಲ್ಲುತ್ತದೆ. ಅಂದರೆ ಇಂಧನದ ಪೂರೈಕೆ ಮತ್ತು ಬ್ರೇಕ್ ಯೋಗ್ಯ ರೀತಿಯಲ್ಲಿ ಬಳಸಬೇಕು. ಇವೆರಡೂ ಅಸಾಧ್ಯವಾದಲ್ಲಿ ವಾಹನದಲ್ಲಿ ಪ್ರವಾಸ ಮಾಡುವುದು ಅಸಾಧ್ಯ. ಇದೇ ತತ್ವವು ಕೈಗಾರಿಕೋದ್ಯಮಗಳಲ್ಲಿಯೂ ಅನ್ವಯಿಸುತ್ತದೆ. ಇಂಧನದ ಬದಲಾಗಿ ಕಾರ್ಯವಾಹಿ ಬಂಡವಾಳ ಮತ್ತು ಕಾರ್ಯವಾಹಿ ಬಂಡವಾಳದ ವ್ಯವಸ್ಥೆಯನ್ನು ವಿಶೇಷವಾಗಿ ಹೇಳಲಾಗುತ್ತದೆ.
ವಿಶೇಷ ಪ್ಯಾಕೇಜ್ ನಲ್ಲಿ ಇನ್ನಿತರ ಅವಕಾಶಗಳ ಕುರಿತು ವಿಚಾರ ಮಾಡಿದಲ್ಲಿ ಈ ಉದ್ಯಮಗಳು ಸರ್ಕಾರಿ ಬಿಲ್ ಗಳನ್ನು 45 ದಿನಗಳಲ್ಲಿಯೇ ಪಾವತಿಸಬೇಕು, E-ಮಾರ್ಕೆಟ್ ಉಪಲಬ್ಧ ಮಾಡಿಕೊಡಬೇಕು, ಚಿಕ್ಕ ಉದ್ಯಮಗಳಿರುವ ಕಂಪನಿಗಳಲ್ಲಿ ಕೇಂದ್ರ ಸರ್ಕಾರದ ಷೇರುಗಳನ್ನು ಖರೀದಿಸಿ ಅವರಿಗೆ ಬಂಡವಾಳವನ್ನು ಪೂರೈಸುವುದು, NPA ಆಗಿರುವ ಕೈಗಾರಿಕೋದ್ಯಮಗಳಿಗೆ ಹೊಸದಾಗಿ ವಿಶೇಷವಾದ ಸಾಲವನ್ನು ನೀಡುವುದು ಇಂತಹ ಅಂಶಗಳು ಒಳಗೊಂಡಿವೆ. ಅರ್ಥಾತ್ ಇವೆಲ್ಲವೂ ಸರ್ಕಾರಿ ಯೋಜನೆಗಳಾಗಿದ್ದರಿಂದ ಅವುಗಳು ಕೇವಲ ಬರವಣಿಗೆಯಲ್ಲಿ ಉಳಿಯದೇ, ಅದರ ನೇರವಾದ ಲಾಭವನ್ನು ಕೈಗಾರಿಕೋದ್ಯಮಿಗಳು ಪಡೆಯಬೇಕು, ಇದಕ್ಕೋಸ್ಕರ ಸಂಬಂಧಪಟ್ಟ ವ್ಯವಸ್ಥೆಯಲ್ಲಿ ಸರ್ಕಾರದಿಂದ ಆಗಾಗ ಮಾಡಲಾಗುತ್ತಿರುವ ಬದಲಾವಣೆಗಳನ್ನೂ ಗಮನಿಸಬೇಕು.



ವಿಶೇಷ ಪ್ಯಾಕೇಜ್ ನ ಹೊರತಾಗಿ ಹಿಂದಿನಿಂದಲೂ MSME ಕ್ಷೇತ್ರಕ್ಕೆ ಯಾವ ಯೋಜನೆಗಳು ಮತ್ತು ಕಾನೂನುಗಳು ಸರ್ಕಾರದಿಂದ ನೀಡಲಾಗುತ್ತಿವೆಯೋ, ಇದರಿಂದ ಕಾರ್ಯವಾಹಿ ಬಂಡವಾಳದ ನಿಟ್ಟಿನಲ್ಲಿ ಉದ್ಯಮಿಗಳು ಲಾಭವನ್ನು ಪಡೆಯಬಲ್ಲರು. ಇದರಲ್ಲಿರುವ ಮಹತ್ವದ ಅಂಶವೆಂದರೆ MSME ಕ್ಷೇತ್ರದಲ್ಲಿ ಬಹುಶಃ ಹೆಚ್ಚಿನ ಉದ್ಯಮಗಳು ಎನ್ಸಿಲರಿ ಅಥವಾ ಬೃಹತ್ ಕೈಗಾರಿಕೋದ್ಯಮಗಳಿಗೆ ಸಂಬಂಧಪಟ್ಟಿವೆ. ಇಂತಹ ಉದ್ಯಮಗಳು ದೊಡ್ಡ ಕಂಪನಿಗಳಿಗೆ ಪೂರೈಸುವಂತಹ ವಸ್ತುಗಳು ಅಥವಾ ಸೇವೆಯನ್ನು ಎರವಲಾಗಿ (ಕ್ರೆಡಿಟ್) ನೀಡುತ್ತಾರೆ. ಇಂತಹ ಎರವಲಾಗಿ ನೀಡಿರುವ ವಸ್ತುಗಳ ಹಣವನ್ನು ಪಡೆಯುವಲ್ಲಿ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಹಣವು ಸಕಾಲಿಕವಾಗಿ ಸಿಗುವುದಿಲ್ಲ. ಕಾರ್ಯವಾಹಿ ಬಂಡವಾಳವು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದಲ್ಲಿ ಕೈಗಾರಿಕೋದ್ಯಮಗಳ ಆರ್ಥಿಕ ಚಕ್ರದಲ್ಲಿ ವಿಪರೀತ ಪರಿಣಾಮವು ಉಂಟಾಗಿ ಉದ್ಯಮಗಳಲ್ಲಿ ತುಂಬಾ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿಯ ಸಮಸ್ಯೆಗಳಿಂದ ಬಿಡುಗಡೆಯನ್ನು ಹೊಂದಲು ಚಿಕ್ಕ ಉದ್ಯಮಿಗಳಿಗೆ ರಕ್ಷಣೆಯನ್ನು ನೀಡಲು ಸರ್ಕಾರವು 2006 ರಿಂದ MSME ಡೆವಲಪ್ ಮೆಂಟ್ ಕಾನೂನಿನ ಪ್ರಕಾರ ಚಿಕ್ಕ ಉದ್ಯಮಿಗಳ ಎಲ್ಲ ರೀತಿಯ ಪಾವತಿಸಬೇಕಾದ ಮೊತ್ತವನ್ನು ಕಂಪನಿಗಳು PO ನಲ್ಲಿರುವ ಶರತ್ತುಗಳ ಪ್ರಕಾರವೇ ಅಥವಾ 45 ದಿನಗಳ ಕಾಲಾವಧಿಯಲ್ಲಿ ಮರುಪಾವತಿಸಬೇಕು. ಮರುಪಾವತಿಸದಿದ್ದಲ್ಲಿ ಅಥವಾ ನಿಗದಿತ ಸಮಯದಲ್ಲಿ ಮರುಪಾವತಿಸದಿದ್ದಲ್ಲಿ ಭಾರಿ ಪ್ರಮಾಣದ ಬಡ್ಡಿಯನ್ನು ವಿಧಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ತಮ್ಮ ವ್ಯವಹಾರದ ಸಂಬಂಧಗಳಿಗೆ ಯಾವುದೇ ರೀತಿಯ ಅಡಚಣೆಯಾಗಬಾರದು ಈ ಕುರಿತು ಮುತುವರ್ಜಿ ವಹಿಸಿ ಇಂತಹ ಹಳೆ ಬಾಕಿ ಇದ್ದಲ್ಲಿ ಉದ್ಯಮಿಗಳು, ದೊಡ್ಡ ಕಂಪನಿಗಳಿಗೆ ಅದರ ಕುರಿತು ಸೂಚನೆಯನ್ನು ನೀಡಿ ತಮ್ಮ ಹಳೆ ಬಾಕಿಯನ್ನು ಆದಷ್ಟು ಬೇಗ ಪಡೆಯುವಲ್ಲಿ ಪ್ರಯತ್ನ ಮಾಡಬಲ್ಲರು.



ಇದೇ ರೀತಿ ಚಿಕ್ಕ ಉದ್ಯಮಿಗಳಿಗೆ ಬರಬೇಕಾಗಿರುವ ಬಾಕಿ ಮೊತ್ತಗಳಿದ್ದಲ್ಲಿ ಅದನ್ನು ಬಿಲ್ ಡಿಸ್ಕೌಂಟಿಂಗ್ ಮಾಡಿ ಬ್ಯಾಂಕ್ ಗಳು ಇಂತಹ ಕೈಗಾರಿಕೋದ್ಯಮಿಗಳಿಗೆ ಸಾಲವನ್ನು ಪೂರೈಸಲು ಟ್ರೇಡ್ ರಿಸಿವೆಬಲ್ ಡಿಸ್ಕೌಂಟಿಂಗ್ ಸಿಸ್ಟಮ್ (TReDS) ಎಂಬ ಯೋಜನೆಯನ್ನು MSME ಕ್ಷೇತ್ರಕ್ಕೆ ಅನ್ವಯಿಸಿದ್ದಾರೆ. ಇದರಿಂದಾಗಿ ಇಂತಹ ಉದ್ಯಮಗಳಿಗೆ ಕಾರ್ಯವಾಹಿ ಬಂಡವಾಳದ ಪೂರೈಕೆ ಸೂಕ್ತ ಸಮಯದಲ್ಲಿ ಸಿಗಬಲ್ಲದು. ಇದರೊಂದಿಗೆ ಲಾಕ್ ಡೌನ್ ನ ವಿಚಾರವನ್ನು ಮಾಡಿ ಸರ್ಕಾರವು GST ಮತ್ತು Income Tax Return ಫೈಲಿಂಗ್ ಮತ್ತು ಅದಕ್ಕೆ ಸಂಬಂಧಪಟ್ಟ ತೆರಿಗೆಗಳನ್ನು ಪಾವತಿಸಲು ಸಮಯಾವಕಾಶವನ್ನು ನೀಡಿದೆ. ತೆರಿಗೆ ಸಲಹೆಗಾರರಿಂದ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದು ಉದ್ಯಮಿಗಳು ಇಂತಹ ಪಾವತಿಸಬೇಕಾಗಿರುವ ಮೊತ್ತವನ್ನು ಮುಂದೂಡಿಸಬಲ್ಲರು. ಆದ್ದರಿಂದ ತಮ್ಮಲ್ಲಿರುವ ಹಣವನ್ನು ಇನ್ನಿತರ ತುರ್ತು ಬೇಡಿಕೆಗಳಿಗೆ ಬಳಸಬಹುದು.



ಕೊರೋನಾ ಸಂಕಷ್ಟದಿಂದ ಚೇತರಿಸಿದ ಉದ್ಯಮಿಗಳು ತಮ್ಮ ವ್ಯವಹಾರಗಳಲ್ಲಿ ಮತ್ತೆ ಕೇವಲ ಕಾಲೂರುವ ಗುರಿಯನ್ನು ಇಡದೇ, ಈ ಸಂಕಷ್ಟವನ್ನು ಒಂದು ಸುವರ್ಣಾವಕಾಶವೆಂದು ಭಾವಿಸಿ ಕೆಲಸವನ್ನು ಪ್ರಾರಂಭಿಸಬೇಕು. ಕೈಗಾರಿಕೋದ್ಯಮಗಳಲ್ಲಿ ವ್ಯವಸ್ಥಾಪನೆಯನ್ನು ಸೂಕ್ತವಾಗಿ ಮಾಡಲು ಆವಶ್ಯಕವಾಗಿರುವ ಕೆಲಸಗಳನ್ನು ಯೋಗ್ಯರೀತಿಯಲ್ಲಿ ನಿರ್ವಹಿಸಬೇಕು. ಕೆಲಸದ ಒತ್ತಡದಿಂದಾಗಿ ಈ ತನಕ ಹಲವಾರು ಕೆಲಸಗಳನ್ನು ಪೂರ್ತಿ ಮಾಡುವುದು ಮತ್ತು ಸುಧಾರಣೆಗಳನ್ನು ಮಾಡುವುದು ಅಸಾಧ್ಯವಾಗಿದ್ದಲ್ಲಿ, ಇಂತಹ ಕೆಲಸಗಳನ್ನು ಇಂದಿನ ಸುವರ್ಣಾವಕಾಶದಲ್ಲಿ ಪೂರ್ತಿಗೊಳಿಸಬೇಕು. ಇದರಿಂದಾಗಿ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಉದ್ಯಮಗಳಿಗೆ ತಳವೂರಿ ನಿಲ್ಲಲು ಸಹಾಯವಾಗುತ್ತದೆ. ಡಾರ್ವಿನ್ ನ ಕ್ರಾಂತಿಯ ವಾದಕ್ಕೆ ಅನುಸಾರವಾಗಿ ಯಾವ ಜೀವಿಗಳು ಪರಿಸರದಲ್ಲಾದ ಬದಲಾವಣೆಗಳೊಂದಿಗೆ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೋ, ಅವರು ಕಾಲಕ್ಕೆ ತಕ್ಕಂತೆ ಮುಂದಿನ ದಾರಿಯಲ್ಲಿ ಪ್ರವಾಸ ಮಾಡಬಲ್ಲರು. ಈ ರೀತಿಯ ಬದಲಾವಣೆಗಳನ್ನು ಮಾಡದೇ ಇರುವರಿಗೆ ಮಾತ್ರ ಈ ಪರಿಸರದಲ್ಲಿ ಜೀವನ ಸಾಗಿಸುವ ದಾರಿ ತುಂಬಾ ಕಷ್ಟಕರವಾಗುತ್ತದೆ. ಕೈಗಾರಿಕೋದ್ಯಮಿಗಳಿಗೆ ಕೊರೋನಾ ಮತ್ತು ಅದರ ನಂತರ ಉದ್ಭವಿಸಿರುವ ಲಾಕ್ ಡೌನ್ ಇದೊಂದು ಭೀಕರವಾದ ಸಂಕಟವಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹಿಮ್ಮೆಟ್ಟದೇ ಉದ್ಯಮಿಗಳು ಸ್ವತಃ ಮತ್ತು ಉದ್ಯಮದ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಮಾಡುವುದೂ ಅತ್ಯಾವಶ್ಯಕವಾಗಿದೆ.



ಉದ್ಯಮಿಗಳಿಗಿರುವ ಆರ್ಥಿಕ ಅರಿವು ತುಂಬಾ ದೊಡ್ಡ ಪಾಲನ್ನು ವಹಿಸಲಿದೆ. ಅನೇಕ ಚಿಕ್ಕ ಉದ್ಯಮಿಗಳು ಈ ತನಕ ಈ ಅಂಶವನ್ನು ಒಂದು ಕ್ಲಿಷ್ಟ ಮತ್ತು ಉತ್ಪಾದನೆ ಇಲ್ಲದ ಅಂಶವೆಂದು ನೋಡುತ್ತಿದ್ದರು. ಅಲ್ಲದೇ ಅದು ತಪ್ಪಾಗಿದೆ ಮತ್ತು ಅದರಿಂದಾಗಿ ಯಾವುದೇ ರೀತಿಯ ಲಾಭವಿಲ್ಲ, ಎಂದು ಹೇಳುತ್ತಿದ್ದರು. ಫೈನಾನ್ಸ್ ಮತ್ತು ಅಕೌಂಟ್ಸ್ ಇದನ್ನು ಕೇವಲ ತೆರಿಗೆಗಳನ್ನು ಪಾವತಿಸಲು ಅಥವಾ ರಿಟರ್ನ್ ತುಂಬಿಸಲು ಮಾತ್ರ ಅನುಸರಿಸಲಾಗುತ್ತಿತ್ತು. ಅಲ್ಲದೇ ಇದೊಂದು ವಾರ್ಷಿಕ ಪ್ರಕ್ರಿಯೆ ಎಂಬುದಾಗಿ ನೋಡುತ್ತಿದ್ದರು. ಆದರೆ ವಾಹನವನ್ನು ನಡೆಸುವಾಗ ಡ್ಯಾಶ್ ಬೋರ್ಡ್ ನಲ್ಲಿರುವ ಎಲ್ಲ ವಿವರಗಳನ್ನು ನಿರೀಕ್ಷಿಸುತ್ತೇವೆಯೋ, ಹಾಗೆಯೇ ಆರ್ಥಿಕ ವ್ಯವಹಾರಗಳಲ್ಲಿರುವ ಅಕೌಂಟ್ಸ್ ಎಂಬುದನ್ನು ಡ್ಯಾಶ್ ಬೋರ್ಡ್ ಎಂಬುದಾಗಿ ತಿಳಿದು, ನಿರೀಕ್ಷಿಸುತ್ತಿರಬೇಕು. ಇದು ಉದ್ಯಮಗಳ ದೃಷ್ಟಿಯಲ್ಲಿ ತುಂಬಾ ಆವಶ್ಯಕವಾದ ಅಂಶವಾಗಿದೆ. ಇದನ್ನು ಆರ್ಥಿಕ ಸಾಕ್ಷರತೆ ಅಂದರೆ ವರ್ಕಿಂಗ್ ಕ್ಯಾಪಿಟಲ್ ಮ್ಯಾನೆಜ್ ಮೆಂಟ್ ಎಂದು ಹೇಳಬದುದು. ಹಾಗೆಯೇ MIS ಅಂದರೆ ಆರ್ಥಿಕ ಸ್ಥಿತಿಯ ಕುರಿತು ಆಗಾಗ ಸಿಗಬೇಕಾಗಿರುವ ಮ್ಯಾನೆಜ್ ಮೆಂಟ್ ರಿಪೋರ್ಟ್ಸ್, ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್-ಲಾಸ್ ಅಕೌಂಟ್ಸ್ ಇತ್ಯಾದಿಗಳನ್ನೂ ತಿಳಿದುಕೊಳ್ಳಬೇಕು. GST ಹಾಗೆಯೇ ಇನ್ನಿತರ ಆರ್ಥಿಕ ಕಾನೂನುಗಳಲ್ಲಿರುವ ಮಹತ್ವದ ಮೀಸಲಾತಿಗಳನ್ನು ಮತ್ತು ಕಾಸ್ಟಿಂಗ್ ತಿಳಿದುಕೊಳ್ಳುವುದೂ ಅಗತ್ಯವಾಗಿದೆ. ಇಂತಹ ಅನೇಕ ಅಂಶಗಳ ಕುರಿತಾದ ಯೋಜನೆಗಳು ಮತ್ತು ತತ್ವಗಳನ್ನು ಮುಂದಿನ ಸಂಚಿಕೆಯ ಅಂಕಣದಲ್ಲಿ ತಿಳಿದುಕೊಳ್ಳೋಣ.



ಭೀಕರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ವೃಕ್ಷಗಳು, ಮತ್ತು ಅದರ ನಂತರ ನದಿ ಮತ್ತು ನಾಲೆಗಳಲ್ಲಿ ಉಳಿಯುವ ವೃಕ್ಷಗಳ ಚಿಕ್ಕ ಗಿಡಗಳ ಕುರುಹುಗಳಂತೆ ಸಣ್ಣ ಉದ್ಯಮಿಗಳು, ತಮಗೆ ಎದುರಾಗಿರುವ ಪರಿಸ್ಥಿತಿಯನ್ನು ಸುವರ್ಣಾವಕಾಶವೆಂದು ತಿಳಿದು, ಕೊರೋನಾ ನಂತರ ಬದಲಾಗಿರುವ ಆರ್ಥಿಕ ಸ್ಥಿತಿಯೊಂದಿಗೆ ಹೊಂದಾಣಿಸಿಕೊಳ್ಳಬೇಕು. ಇದೇ ರೀತಿ ಈ ಪರಿಸ್ಥಿತಿಯಲ್ಲಿ ಕಾಲೂರಿ ನಿಲ್ಲುವಾಗ ಕೈಗಾರಿಕೋದ್ಯಮಿಗಳು ತಮ್ಮ ಉದ್ಯಮದ ರಚನೆ ಮತ್ತು ಪದ್ಧತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುವುದೂ ಅತ್ಯಾವಶ್ಯಕವಾಗಿದೆ. ಉದಾಹರಣೆ, ವೆಬ್ ಸೈಟ್ ಮತ್ತು E ಕಾಮರ್ಸ್ ಗಳ ಬಳಕೆ, ಸೋಶಲ್ ಮಿಡಿಯಾ ಮೂಲಕ ಮಾರ್ಕೆಟಿಂಗ್ ಮತ್ತು ಪ್ರಮೋಶನ್ ಮಾಡುವುದು, ಆಟೊಮೈಸೇಶನ್ ಹೆಚ್ಚೆಚ್ಚಾಗಿ ಬಳಸುವುದು, ಸೇಲ್ಸ್ ಮತ್ತು ಪರ್ಚೆಸ್ ಗಳಿಗೆ ಸಂಬಂಧಪಟ್ಟ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡುವುದು, ಇತ್ಯಾದಿ ವಿವಿಧ ಆವಶ್ಯಕವಾದ ಅಂಶಗಳ ಕುರಿತು ನಾವು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಲಿದ್ದೇವೆ.

 
1-2_2  H x W: 0
 ಮುಕುಂದ ಅಭ್ಯಂಕರ್
 ಚಾರ್ಟರ್ಡ್ ಅಕೌಂಟಂಟ್
 9822475611
 [email protected]
 ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳಿಗೋಸ್ಕರ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಕರಾಗಿದ್ದಾರೆ.
@@AUTHORINFO_V1@@