ಎಂಗ್ಯುಲರ್ ವೀಲ್ ಹೆಡ್ ಗ್ರೈಂಡರ್

@@NEWS_SUBHEADLINE_BLOCK@@

Udyam Prakashan Kannad    17-Sep-2020
Total Views |


1_1  H x W: 0 x
ರೇಣುಕಾ ಗ್ರೈಂಡಿಂಗ್ ಸಲ್ಯೂಶನ್ಸ್, ಬೆಂಗಳೂರು ಈ ಕಂಪನಿಯು ಭಾರತದಲ್ಲಿ ಪ್ರಮುಖ ಗ್ರೈಂಡಿಂಗ್ ಮಶಿನ್ ಉತ್ಪಾದಿಸುವ ಕಂಪನಿಯಾಗಿದೆ. ಕಂಪನಿಯು ಕಳೆದ ಮೂವತ್ತು ವರ್ಷಗಳಿಂದ ಶಿಯರಿಂಗ್ ಮಶಿನ್, ಸಿಲಿಂಡ್ರಿಕಲ್ ಮತ್ತು ಸೆಂಟರ್ ಲೆಸ್ ಗ್ರೈಂಡಿಂಗ್ ನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇತ್ತೀಚೆಗೆ ಈ ಕಂಪನಿಯು ನೂರಕ್ಕಿಂತಲೂ ಹೆಚ್ಚು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಸೇವೆಯನ್ನು ನೀಡುತ್ತಿದೆ. ಉತ್ಪಾದನೆಗಳಲ್ಲಿರುವ ವಿಶ್ವಾಸ ಮತ್ತು ಸಕಾಲದಲ್ಲಿ ಸೇವೆಯನ್ನು ನೀಡಿ ಗ್ರಾಹಕರ ಬೇಡಿಕೆಗಳನ್ನು ಪೂರ್ತಿಗೊಳಿಸುತ್ತಿದೆ. ಅಲ್ಲದೇ ಆಗಾಗ ಏದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಲ್ಲಿ ಈ ಕಂಪನಿಯು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಬಳಕೆಗಾರಿಗೆ ಪೂರೈಸುವಂತಹ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಮಶಿನ್ ಗಳನ್ನು ತಯಾರಿಸುವಲ್ಲಿ ಈ ಕಂಪನಿಯು ಮುಂಚೂಣಿಯಲ್ಲಿದೆ. ಇದರೊಂದಿಗೆ ಗ್ರಾಹಕರ ಆವಶ್ಯಕತೆಗೆ ಅನುಸಾರವಾಗಿ ಮತ್ತು ಬೇಡಿಕೆಗಳಿಗೆ ಹೊಂದಿಕೊಂಡು ಮಶಿನ್ ಗಳಿಗೆ ರೀಗ್ರೈಂಡಿಂಗ್ ಅಥವಾ ರೆಟ್ರೋಫಿಟಿಂಗ್ ಮಾಡುವಲ್ಲಿಯೂ ಕಂಪನಿಗೆ ದೀರ್ಘ ಅನುಭವವಿದೆ.
ಇಂತಹ ಕೆಲಸಗಳನ್ನು ಮಾಡುತ್ತಿರುವಾಗ ಈ ಕಂಪನಿಗೆ ಮಹತ್ವದ ಅಂಶಗಳು ಗಮನಕ್ಕೆ ಬಂದವು. ಪಿಸ್ಟನ್ ಪಂಪ್, ಟ್ರಾನ್ಸ್ ಮಿಶನ್, ಪ್ರೊಪೆಲರ್ ಶಾಫ್ಟ್ ಗಳ ಯಂತ್ರಭಾಗಗಳಿಗೆ ಮಾರುಕಟ್ಟೆಯಲ್ಲಿ ಸಿ.ಎನ್.ಸಿ. ಎಂಗ್ಯುಲರ್ ವೀಲ್ ಹೆಡ್ ಗ್ರೈಂಡಿಂಗ್ ನ ಆವಶ್ಯಕತೆಯು ಹೆಚ್ಚಾಗಿದೆ, ಎಂಬ ಅಂಶವೂ ಗಮನಕ್ಕೆ ಬಂತು. ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಬೇಡಿಕೆ ಮತ್ತು ಕಂಪನಿಗೆ ಇರುವ ಸುದೀರ್ಘವಾದ ಅನುಭವ ಇವುಗಳನ್ನು ಗಮನಿಸಿ, ಇಂತಹ ಮಶಿನ್ ಗಳನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸುವ ನಿರ್ಧಾರವನ್ನು ಮಾಡಲಾಯಿತು. ಎಂಗ್ಯುಲರ್ ವೀಲ್ ಹೆಡ್ ಗ್ರೈಂಡರ್ ಮಶಿನ್ ತಯಾರಿಕೆಯನ್ನು ಮೊತ್ತ ಮೊದಲಾಗಿ ಮಾಡಲಾಯಿತು. ಇದಕ್ಕೆ ಉಪಯುಕ್ತವಾದ ಡಿಸೈನ್ ಗಳನ್ನು ತಯಾರಿಸಲು ಹೊಸದಾಗಿಯೇ ಒಂದು ತಂಡದ ನೇಮಕಾತಿಯನ್ನು ಮಾಡಲಾಯಿತು. ನಂತರ ಒಂದು ಮಶಿನ್ ಕಂಪನಿಯಲ್ಲಿಯೇ ಅಭಿವೃದ್ಧಿ ಪಡಿಸಲಾಯಿತು. ಇತ್ತೀಚೆಗೆ ಎಂಗ್ಯುಲರ್ ವೀಲ್ ಹೆಡ್ ಗ್ರೈಂಡರ್ ಆಮದು ಮಾಡುವುದಕ್ಕಿಂತ ಭಾರತದಲ್ಲಿರುವ ಈ ಕಂಪನಿಯ ಮಶಿನ್ ಖರೀದಿಸುವುದು ಸೂಕ್ತವೆನ್ನಿಸಿದೆ.

ಸವಾಲುಗಳು

2_1  H x W: 0 x 
ಎಂಗ್ಯುಲರ್ ಹೆಡ್ ಗ್ರೈಂಡಿಂಗ್ ಮಶಿನ್ ಅಭಿವೃದ್ಧಿ ಮಾಡುತ್ತಿರುವಾಗ ಡಿಸೈನ್ ಮತ್ತು ಉತ್ಪಾದನೆಯ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮಶಿನ್ ಗಳ ಭಾಗಗಳನ್ನು ವಿಶಿಷ್ಟ ಟಾಲರನ್ಸ್ ನಲ್ಲಿ ನಿರ್ಮಿಸಲಾಗುತ್ತದೆ, ಎಂಬ ಅಪೇಕ್ಷೆಯು ಡಿಸೈನ್ ಮಾಡುವವರಿಗಿತ್ತು. ಆದರೆ ಪ್ರತ್ಯಕ್ಷ ಉತ್ಪಾದನೆ ಮಾಡುತ್ತಿರುವಾಗ ಡಿಸೈನ್ ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕಾಯಿತು. ಈ ಬದಲಾವಣೆಗಳನ್ನು ಮಾಡುತ್ತಿರುವಾಗ ಅಂತಿಮ ಪರಿಣಾಮವು ಅಪೇಕ್ಷಿಸಿದಂತೆ ಲಭಿಸಬಹುದು, ಎಂಬುದರ ಕುರಿತು ಮುತುವರ್ಜಿಯನ್ನು ವಹಿಸಿ ಈ ಯಂತ್ರಭಾಗಗಳ ಗಾತ್ರ ಮತ್ತು ಅಸೆಂಬ್ಲಿಯ ಪ್ರಕ್ರಿಯೆಗೋಸ್ಕರ ಮತ್ತೆ ಹೊಸ ಡಿಸೈನ್ ತಯಾರಿಸಲಾಯಿತು. ಡಿಸೈನ್ ಮಾಡುವುದು, ಉತ್ಪಾದನೆಗೋಸ್ಕರ ಆವಶ್ಯಕವಾಗಿರುವ ಯಂತ್ರಚಿತ್ರಗಳನ್ನು ತಯಾರಿಸುವುದು ಮತ್ತು ವಿಶಿಷ್ಟ ಉತ್ಪಾದನೆಗೋಸ್ಕರ ಅತ್ಯಾವಶ್ಯಕವಾಗಿರುವ ನಿರ್ಮಿತಿಯ ಸೆಟಪ್ ಸಜ್ಜುಗೊಳಿಸುವುದು ಇತ್ಯಾದಿ ಅಂಶಗಳನ್ನು ಅಚ್ಟುಕಟ್ಟಾಗಿ ನಿರ್ವಹಿಸುವಂತಹ ತಂಡವನ್ನು ಒಟ್ಟುಗೂಡಿಸುವುದೂ ಒಂದು ದೊಡ್ಡ ಸವಾಲಾಗಿತ್ತು. ನಾವು ಮಾಡಿರುವ ವೀಲ್ ಹೆಡ್ ಸ್ಪಿಂಡಲ್ ನ ಡಿಸೈನ್ ಸಾಬೀತು ಪಡಿಸುವಲ್ಲಿ ತುಂಬಾ ಅಡಚಣೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಅವುಗಳನ್ನು ಪರಿಹರಿಸುವಲ್ಲಿ ಯಶಸ್ಸು ಲಭಿಸಿತು.
ಈ ಮಶಿನ್ ನ ಡಿಸೈನ್ ಎಂಗ್ಯುಲರ್ ವೀಲ್ ಗ್ರೈಂಡಿಂಗ್ ಗೋಸ್ಕರ ಹಾಗೆಯೇ ಇಂಟರ್ನಲ್ ವೀಲ್ ಗ್ರೈಂಡಿಂಗ್ ಗೋಸ್ಕರವೂ ಮಾಡಲಾಗಿದೆ. ಈ ವೈಶಿಷ್ಟ್ಯಗಳಿಂದಾಗಿ ಅದಕ್ಕೆ ಒಂದು ಸ್ಪೆಶಲ್ ಪರ್ಪಸ್ ಮಶಿನ್ ನ (ಎಸ್.ಪಿ.ಎಮ್.) ಗುಣಮಟ್ಟವು ಲಭಿಸಿತು. ಈ ಮಶಿನ್ ಒಂದು ಮೈಕ್ರಾನ್ ನಷ್ಟು ನಿಖರತೆಗೋಸ್ಕರ ಡಿಸೈನ್ ಮಾಡುವುದೂ ಅತ್ಯಾವಶ್ಯಕವಾಗಿತ್ತು. ಸಿಲಿಂಡ್ರಿಕಲ್ ಸರ್ಫೇಸ್ ಗ್ರೈಂಡರ್ ಮತ್ತು ಎಂಗ್ಯುಲರ್ ಗ್ರೈಂಡರ್ ಇವೆರಡರಲ್ಲಿರುವ ಜಾಮೆಟ್ರಿಕ್ ವ್ಯತ್ಯಾಸದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದೇ, ಎಂಬುದನ್ನು ಪರಿಶೀಲಿಸಲು ಮಶಿನ್ ಮತ್ತೆ ಮತ್ತೆ ಪರೀಕ್ಷಿಸಿಲಾಯಿತು. ಈ ಮಶಿನ್ ನ ಎಲ್ಲ ಯಂತ್ರಭಾಗಗಳ ನಿರ್ಮಿತಿಯನ್ನು ಇದೇ ಕಾರ್ಖಾನೆಯಲ್ಲಿ ಮಾಡಲಾಯಿತು. ಕೇವಲ ಕಾಸ್ಟಿಂಗ್ ಇನ್ನಿತರರಿಂದ ಮಾಡಿಸಿಕೊಳ್ಳಲಾಯಿತು. ಮಶಿನ್ ನಿಂದ ತಯಾರಿಸಲ್ಪಡುವ ಉತ್ಪಾದನೆಯ ನಿಖರತೆಯನ್ನು ಒಂದು ಮೈಕ್ರಾನ್ ಗಿಂತ ಕಡಿಮೆ ಅಳವಡಿಸುವುದನ್ನು ನಿರ್ಧರಿಸಲು, ಎಲ್ಲ ಯಂತ್ರಭಾಗಗಳಲ್ಲಿ ಉಚ್ಚ ಗುಣಮಟ್ಟದ ನಿರ್ದೋಷತ್ವವನ್ನು ಕಾಪಾಡಲಾಯಿತು.
ಉತ್ಪಾದನೆಯ ಪ್ರಕ್ರಿಯೆಯಲ್ಲಿ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ ಟೇಪರ್ ಮತ್ತು ಪ್ರೊಫೈಲ್ ನಲ್ಲಿರುವ ವ್ಯತ್ಯಾಸದಂತಹ ಸಮಸ್ಯೆಗಳನ್ನು ವೀಲ್ ಗೆ ಮತ್ತೆ ಡ್ರೆಸಿಂಗ್ ಮಾಡಿ ನೀಗಿಸಲಾಯಿತು. ಇಂತಹ ಕ್ಲಿಷ್ಟವಾದ ಯಂತ್ರಭಾಗಗಳಿಗೆ ಯಂತ್ರಣೆಯ ಪ್ರೊಗ್ರಾಮ್ ತಯಾರಿಸುವುದು ಕೂಡಾ ಒಂದು ದೊಡ್ಡ ಸವಾಲೇ ಆಗಿತ್ತು. ಸಾಫ್ಟ್ ವೇರ್ ನ ತಂಡವು ಈ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸಿತು. ಹಲವಾರು ಪ್ರೊಗ್ರಾಮ್ ಗಳನ್ನು ಸೂಕ್ತವಾಗಿ ಸೆಟ್ ಮಾಡುವಲ್ಲಿ ಮತ್ತು ಅಪೇಕ್ಷಿಸಿರುವ ಗುಣಮಟ್ಟವನ್ನು ಪಡೆಯುವಲ್ಲಿ ಆರು ದಿನಗಳಿಗಿಂತ ಹೆಚ್ಚು ಕಾಲಾವಧಿಯ ಪರೀಕ್ಷಣೆಯನ್ನು ಮಾಡಬೇಕಾಯಿತು.

ಎಂಗ್ಯುಲರ್ ವೀಲ್ ಹೆಡ್ ಗ್ರೈಂಡರ್ ನ ವೈಶಿಷ್ಟ್ಯಗಳು 

4_1  H x W: 0 x 
 
ವೀಲ್ ಹೆಡ್ ನ ಆವಶ್ಯಕತೆಗೆ ಅನುಸಾರವಾಗಿ ಬೇರೆಬೇರೆ ಅಗಲವಿರುವ ವೀಲ್ ಗಳನ್ನು ಬಳಸುವ ವ್ಯವಸ್ಥೆಯನ್ನು ಮಾಡಲಾಯಿತು.
⦁ ಸ್ಪಿಂಡಲ್ ನಲ್ಲಿ ಮೈಕ್ರೊಸ್ಫಿಯರ್ ಬೇರಿಂಗ್ ಬಳಸಿದ್ದರಿಂದ ಮತ್ತು ಯೋಗ್ಯ ಆಯಿಲ್ ಹಾಕಿದ್ದರಿಂದ ಅದರ ಬಾಳಿಕೆಯಲ್ಲಿ ಗಮನಾರ್ಹವಾದ ಹೆಚ್ಚಳವಾಯಿತು. ಇದರಿಂದಾಗಿ ನಾವು ಅದರ ಕುರಿತು ಆಜೀವ ಪರ್ಯಂತ ಹೊಣೆಗಾರಿಕೆಯನ್ನು ನೀಡಿದ್ದೇವೆ. ಮೈಕ್ರೊಸ್ಫಿಯರ್ ಬೇರಿಂಗ್ ಇದು ಸಾಮಾನ್ಯವಾದ ಬೇರಿಂಗ್ ಅಲ್ಲ, ಇದು ಹೈಡ್ರೋಡೈನ್ಯಾಮಿಕ್ ಆಗಿರುತ್ತದೆ.
⦁ ಆವಶ್ಯಕತೆಗೆ ತಕ್ಕಂತೆ ವಿವಿಧ ಸಾಮರ್ಥ್ಯವಿರುವ ಮಶಿನ್ ನ ವಿವಿಧ ಮಾಡೆಲ್ ಗಳು ಉಪಲಬ್ಧವಿವೆ.
⦁ ಹೊರ ವ್ಯಾಸ (ಓ.ಡಿ.) ಮತ್ತು ಫೇಸ್ ಈ ಎರಡೂ ಗ್ರೈಂಡಿಂಗ್ ಗಳು ಒಂದೇ ಬಾರಿ ಮಾಡಬಹುದಾಗಿದೆ.
⦁ ವೀಲ್ ಗೆ ಅಪೇಕ್ಷಿಸಿರುವ ಪ್ರೊಫೈಲ್ ನೀಡಿ ಒಂದೇ ಬಾರಿ ಹೆಚ್ಚು ವ್ಯಾಸಗಳ ಗ್ರೈಂಡಿಂಗ್ ಮಾಡಬಹುದಾಗಿದೆ.
⦁ ಒಂದೇ ಸೆಪಟ್ ನಲ್ಲಿ ಒಂದಕ್ಕಿಂತ ಹೆಚ್ಚು ವ್ಯಾಸಗಳ, ಮೂಲೆಗಳ ತ್ರಿಜ್ಯಗಳೊಂದಿಗೆ ಪರಸ್ಪರ ಅಂಟಿರುವ ಸರ್ಫೇಸ್ (ಅಡ್ ಜಾಯ್ ನಿಂಗ್ ಫೇಸ್), ಚ್ಯಾಂಫರ್ ಇವೆಲ್ಲವೂ ಒಂದೇ ಬಾರಿ ಗ್ರೈಂಡಿಂಗ್ ಮಾಡಬಹುದಾದಂತಹ ಡಿಸೈನ್.
⦁ ಒಂದೇ ಮಶಿನ್ ನಲ್ಲಿ ಗ್ರೈಂಡಿಂಗ್ ವೀಲ್ ಮತ್ತು ಅದಕ್ಕೆ ಸಾಕಷ್ಟು ಟೆಂಪ್ಲೇಟ್ ಇಂತಹ ಜೋಡಿಯನ್ನು ಕಡಿಮೆ ಸಮಯದಲ್ಲಿ ಬದಲಾಯಿಸಿ ವಿವಿಧ ವ್ಯಾಸ ಮತ್ತು ಉದ್ದವಿರುವ ಕಾರ್ಯವಸ್ತುಗಳ ಬೃಹತ್ ಪ್ರಮಾಣದಲ್ಲಿರುವ ಉತ್ಪಾದನೆಯನ್ನು ಲಾಭಕಾರಿಯಾಗಿ ಮಾಡಬಹುದಾಗಿದೆ.

ಲಾಭಗಳು
⦁ ಉತ್ಪಾದನೆಯ ಸಾಮರ್ಥ್ಯದಲ್ಲಿ ಹೆಚ್ಚಳ, ಉತ್ಪಾದನೆಗೆ ಬೇಕಾಗುವ ಕಾಲಾವಧಿ ಕಡಿಮೆಯಾಗಿದೆ.
⦁ ಮಾರುಕಟ್ಟೆಯಲ್ಲಿ ಇತರ ಮಶಿನ್ ಹೋಲಿಸಿದಲ್ಲಿ ಬೆಲೆಯು ಲಾಭಕಾರಿಯಾಗಿದೆ.
⦁ ಉಪಕರಣಗಳಿಗೋಸ್ಕರ ಹೂಡಿರುವ ಬಂಡವಾಳವು ಲಾಭಕಾರಿಯಾಗುತ್ತದೆ.
⦁ ಬಳಕೆಗಾರರಿಗೆ ಇಂಟರ್ ಫೇಸ್ ಮತ್ತು ನಿರ್ವಹಣೆ ಮಾಡುವುದು ಸುಲಭ. (ಯೂಸರ್ ಫ್ರೆಂಡ್ಲಿ)
⦁ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವವರಿಗೆ ಉಪಯುಕ್ತ.
⦁ ಪ್ಲಂಜ್ ಗ್ರೈಂಡಿಂಗ್ ಮತ್ತು ಪ್ರೊಫೈಲ್ ಗ್ರೈಂಡಿಂಗ್ ಮಾಡಬಹುದಾಗಿದೆ.
ಹೊಸ ಮಶಿನ್ ಗಳ ಉತ್ಪಾದನೆಯೊಂದಿಗೆ ಹಳೆಯ ಮಶಿನ್ ಗಳನ್ನು ಯೋಗ್ಯವಾಗಿ ರೆಟ್ರೋಫಿಟಿಂಗ್ ಮಾಡುವಲ್ಲಿ ನಾವು ನುರಿತರಾಗಿದ್ದೇವೆ. ರೆಟ್ರೋಫಿಟಿಂಗ್ ಮಾಡಿದ ನಂತರ ಗ್ರಾಹಕರಿಂದ ಬಂದಿರುವ ಕೆಲವು ಅನುಭವಗಳನ್ನು ಈ ಮುಂದೆ ನೀಡಲಾಗಿದೆ.

ಗ್ರಾಹಕರ ಅನುಭವಗಳು

5_1  H x W: 0 x 
 
ಮಹಾರಾಷ್ಟ್ರದ ನಾಶಿಕ್ ಎಂಬಲ್ಲಿರುವ ಶರೀನ್ ಆಟೊ ಪ್ರೈ.ಲಿ.ನ ಕಿಶೋರ್ ಪಾಟೀಲ್ ಮತ್ತು ದತ್ತಾ ದರಗುಡೆ ಇವರ ಹೇಳಿಕೆಯಂತೆ, ‘’ಈ ಹಿಂದೆ ಟ್ರಾನ್ಸ್ ಮಿಶನ್ ಲೈನ್ ಗೋಸ್ಕರ ಬೇಕಾಗುವ ಯಂತ್ರಭಾಗಗಳು, ಗ್ರೈಂಡಿಂಗ್ ನ ಉದ್ದ ಹೆಚ್ಚು ಇರುವುದರಿಂದ ಗ್ರೈಂಡಿಂಗ್ ನ ಕೆಲಸವನ್ನು ಸಿಲಿಂಡ್ರಿಕಲ್ ಗ್ರೈಂಡಿಂಗ್ ಮಶಿನ್ ನಲ್ಲಿ ಸ್ಲೈಡಿಂಗ್ ನ ರೀತಿಯಲ್ಲಿ ಮಾಡುತ್ತಿದ್ದೆವು. ಆದರೆ ಅದರಲ್ಲಿ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿತ್ತು. ಸ್ಲೈಡಿಂಗ್ ಮಶಿನ್ ನಲ್ಲಿ ಕಡಿಮೆ ಅಗಲವಿರುವ ವೀಲ್ ಅಳವಡಿಸಬೇಕಾಗುತ್ತಿತ್ತು. ಹಾಗೆಯೇ ಯಂತ್ರಣೆಗೆ ತಗಲುವ ಸಮಯವು ಹೆಚ್ಚಾಗಿದ್ದು ಸುತ್ತುವಿಕೆಯ ಸಮಯವು 4 ನಿಮಿಷಗಳಷ್ಟಿತ್ತು. ಸರ್ಫೇಸ್ ಫಿನಿಶ್ 0.5 Ra ನೀಡಿದಲ್ಲಿ, ಅದನ್ನು ಡ್ರೆಸಿಂಗ್ ಮಾಡಿದ ನಂತರ 0.6 ರಿಂದ 0.7 Ra ಯ ತನಕ ತಲುಪುತ್ತಿತ್ತು. ಅನೇಕ ಕೆಲಸಗಳನ್ನು ಮ್ಯಾನ್ಯುಯಲಿ ಮಾಡಬೇಕಾಗಿತ್ತು. ಇದಕ್ಕೋಸ್ಕರ ನಾವು ನಮ್ಮಲ್ಲಿರುವ ಕಿರ್ಲೋಸ್ಕರ್ ಸಿಲಿಂಡ್ರಿಕಲ್ ಗ್ರೈಂಡಿಂಗ್ ಮಶಿನ್ ರೆಟ್ರೋಫಿಟ್ ಗೆ, ಗ್ರೈಂಡಿಂಗ್ ಮಶಿನ್ ನ ರೀಕಂಡೀಶನಿಂಗ್ ಅಥವಾ ರೆಟ್ರೋಫಿಟಿಂಗ್ ಮಾಡುವ ದೀರ್ಘ ಅನುಭವವು ರೇಣುಕಾ ಇಂಜಿನಿಯರಿಂಗ್ ಇವರಿಗೆ ಇತ್ತು. ಆದುದರಿಂದ ಈ ಕೆಲಸವನ್ನು ನಾವು ಅವರಿಗೆ ಹಸ್ತಾಂತರಿಸಿದೆವು.’’

ರೆಟ್ರೋಫಿಟ್ ನಂತರ ಲಭಿಸಿರುವ ಲಾಭಗಳು

1_1  H x W: 0 x 
 
ಎಂಗ್ಯುಲರ್ ವೀಲ್ ಗ್ರೈಂಡಿಂಗ್ ಮಶಿನ್ ಗೆ 110 ರಿಂದ 115 ಮಿ.ಮೀ. ಅಗಲವಿರುವ ವೀಲ್ ಮೌಂಟ್ ಮಾಡಬಲ್ಲೆವು. ಹಾಗೆಯೇ ವೀಲ್ ನಲ್ಲಿ ಒಂದೇ ಬಾರಿ ಟೆಂಪ್ಲೇಟ್ ಮೂಲಕ ಎರಡು ವ್ಯಾಸ ಡ್ರೆಸಿಂಗ್ ಮಾಡಿ ತಯಾರಿಸುವುದು ಸಾಧ್ಯವಾಗಿದೆ. ಆದ್ದರಿಂದ ಒಂದೇ ಸಲ ಎರಡು ವ್ಯಾಸಗಳ ಗ್ರೈಂಡಿಂಗ್ ಸಾಧ್ಯ.
⦁ ಯಂತ್ರಭಾಗಗಳಿಗೆ ತ್ರಿಜ್ಯದಲ್ಲಿ ಗ್ರೈಂಡಿಂಗ್ ಮಾಡುವುದಾದಲ್ಲಿ ಆ ತ್ರಿಜ್ಯಗಳನ್ನು ಟೆಂಪ್ಲೇಟ್ ನಿಂದ ವೀಲ್ ಗೆ ನೀಡುವುದು ಸಾಧ್ಯ ಮತ್ತು ಅದಕ್ಕೆ ಅನುಸಾರವಾಗಿ ಯಂತ್ರಭಾಗಗಳಲ್ಲಿ ಬೇಕಾಗಿರುವ ಆಕಾರದ ಗ್ರೈಂಡಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಯಂತ್ರಭಾಗಗಳಲ್ಲಿ ರೇಡಿಯಸ್ ಗ್ರೈಂಡಿಂಗ್ ನ ದೋಷಗಳು ಇಲ್ಲದಂತಾದವು.
⦁ ಗ್ರೈಂಡಿಂಗ್ ಗೋಸ್ಕರ ಪ್ರತಿಯೊಂದು ವ್ಯಾಸಕ್ಕೆ ವಿಶಿಷ್ಟವಾದ ಉದ್ದವನ್ನು ನೀಡಲಾಗಿದೆ. ಈ ಮಶಿನ್ ನಲ್ಲಿ ಟೆಂಪ್ಲೇಟ್ ಗೆ ಅನುಸಾರವಾಗಿ ಒಂದು ಸಲ ಡ್ರೆಸಿಂಗ್ ಮಾಡಿದರೆ, ಯಂತ್ರಭಾಗಗಳಲ್ಲಿ ಅಷ್ಟೇ ಉದ್ದದ ಗ್ರೈಂಡಿಂಗ್ ನಿರ್ದೋಷವಾಗಿ ಮಾಡುವುದು ಸಾಧ್ಯ.
⦁ ಮಶಿನ್ ನ ನಿಖರತೆಯಲ್ಲಿ ತುಂಬಾ ಹೆಚ್ಚಳವಾಯಿತು.
⦁ ಹ್ರೈಡ್ರಾಲಿಕ್ ಪೈಪಿಂಗ್ ನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿ ಸುಲಭತೆಯನ್ನು ಕಲ್ಪಿಸಲಾಯಿತು.
⦁ ಆಪರೇಟಿಂಗ್ ಪ್ಯಾನೆಲ್ ನಲ್ಲಿ ಮಾಡಿರುವ ಬದಲಾವಣೆಗಳಿಂದಾಗಿ ನಿರ್ವಹಣೆಯು ಹೆಚ್ಚು ಸುಲಭವಾಯಿತು.
⦁ ಎರಡು ಸೆಟಪ್ ಗಳ ಬದಲಿಗೆ ಒಂದೇ ಸೆಟಪ್ ನಲ್ಲಿ ಕೆಲಸ ಮಾಡಿ ರೊಟೇಶನ್ ಟೈಮ್ 45 ಸೆಕಂಡುಗಳಿಂದ ಒಂದು ನಿಮಿಷದಷ್ಟು ಕಡಿಮೆಯಾಯಿತು.
⦁ ಈ ಮಶಿನ್ ನಲ್ಲಿ ಕಟಿಂಗ್ ನ ಸಮಯವು 45 ಸೆಕಂಡುಗಳು, ಲೋಡಿಂಗ್ ಮತ್ತು ಅನ್ ಲೋಡಿಂಗ್ ನ ಸಮಯವು 15 ಸೆಕಂಡುಗಳಷ್ಟಾಯಿತು.
 
 
7_1  H x W: 0 x
⦁ ಒಂದು ಸಲ ಡ್ರೆಸಿಂಗ್ ನ ತರಂಗಗಳನ್ನು ನಿಗದಿಸಿದಲ್ಲಿ, ಉದಾಹರಣೆ 30 ಯಂತ್ರಭಾಗಗಳ ನಂತರ ಡ್ರೆಸಿಂಗ್ ಮಾಡುವುದಾದಲ್ಲಿ 30 ಯಂತ್ರಭಾಗಗಳ ನಂತರ ಸ್ವಯಂಚಾಲಿತವಾಗಿ ಡ್ರೆಸಿಂಗ್ ಆರಂಭಗೊಳ್ಳುತ್ತದೆ.
ದೊಡ್ಡ ಯಂತ್ರಭಾಗಗಳನ್ನು ಈಗ ಎರಡು ಸೆಟಪ್ ಗಳ ಬದಲಾಗಿ ಒಂದೇ ಸೆಟಪ್ ನಲ್ಲಿ ಮಾಡಲಾಗುತ್ತದೆ. ಹಾಗೆಯೇ ಅದಕ್ಕೆ ಡ್ರೆಸಿಂಗ್ ಅಟಾಚ್ ಮೆಂಟ್ ನೀಡಿದರೆ, ಎರಡೂ ಪ್ಯಾರಾಮೀಟರ್ ಸೆಟ್ ಮಾಡುಲ್ಪಡುತ್ತವೆ.
⦁ ಎಂಗ್ಯುಲರ್ ವೀಲ್ ಹೆಡ್ ಗ್ರೈಂಡಿಂಗ್ ಮಶಿನ್ ನಲ್ಲಿರುವ ಇನ್ ಪ್ರೊಸೆಸ್ ಗೇಜಿಂಗ್ (IPG) ಪ್ರಣಾಳಿಕೆಯಿಂದಾಗಿ ಮಾಪನಗಳ ನಿಖರತೆಯು ಉಚ್ಚಮಟ್ಟದಲ್ಲಿ ಸಿಗುವಲ್ಲಿ ಸಹಾಯವಾಯಿತು. ಎಂಗ್ಯುಲರ್ ವೀಲ್ ಗ್ರೈಂಡಿಂಗ್ ನಂತರ ಮಶಿನ್ ನಲ್ಲಿ ಇಂತಹ ವಿಶೇಷವಾದ ಆವಶ್ಯಕತೆಯು ಇರುತ್ತದೆ. ಇದರ ವ್ಯಾಸಕ್ಕೆ ಗ್ರೈಂಡಿಂಗ್ ಆಗುತ್ತಿರುವಾಗ ಈ ಉಪಕರಣಗಳನ್ನು ನಿರ್ದೋಷವಾಗಿ ಬಳಸಲ್ಪಡುತ್ತವೆ. ಕಾರ್ಯವಸ್ತುವಿನ ವ್ಯಾಸವು ಅಪೇಕ್ಷಿಸಿರುವ ಮಾಪನದಷ್ಟು ಆದ ನಂತರ ಕಾರ್ಯವಸ್ತುವಿಗೆ ತಾಗುವ ಈ ಉಪಕರಣದ ಭಾಗವು ಆ ವ್ಯಾಸದ ಸಂಪರ್ಕಕ್ಕೆ ತರಲಾಗುತ್ತದೆ. ಉಪಕರಣದಲ್ಲಿರುವ ಡಯಲ್, ವ್ಯಾಸದಲ್ಲಿ ಎಷ್ಟು ಮಟೀರಿಯಲ್ ತೆಗೆಯುವುದು ಉಳಿದಿದೆ, ಎಂಬುದನ್ನು ತೋರಿಸುತ್ತದೆ.
⦁ ಎಂಗ್ಯುಲರ್ ವೀಲ್ ಹೆಡ್ ಗ್ರೈಂಡಿಂಗ್ ಮಶಿನ್ ನಲ್ಲಿ IPG ಪ್ರಣಾಳಿಕೆಯಿಂದಾಗಿ ಲೋಡ್ ಮಾಡಿರುವ ಯಂತ್ರಭಾಗದ ಫಿನಿಶ್ ವ್ಯಾಸವಿದ್ದಲ್ಲಿ ಅದರಂತೆ IPG ಯಲ್ಲಿ ಝೀರೋ ಸೆಟಿಂಗ್ ಮಾಡಬೇಕು. ಫಿನಿಶ್ ವ್ಯಾಸ ಮಾಡಲಾಗುವ ಯಂತ್ರಣೆಯಲ್ಲಿ ಒರಟು (ಕೋರ್ಸ್), ಸೆಮಿಫಿನಿಶ್ ಮತ್ತು ಫಿನಿಶ್ ಈ ಮೂರು ಹಂತಗಳಲ್ಲಿ ಗ್ರೈಂಡಿಂಗ್ ನ ಸೆಟಿಂಗ್ ಮಾಡಲಾಗುತ್ತದೆ. ಇದರಲ್ಲಿ ಯಂತ್ರಭಾಗಗಳ ಗ್ರೈಂಡಿಂಗ್ ಅಲೌನ್ಸ್ 0.5 ರಿಂದ 0.3 ಮಿ.ಮೀ..ನಷ್ಟು ಯಂತ್ರಣೆಯನ್ನು ರಫ್ ಫೀಡ್ ನಲ್ಲಿ ಮಾಡುವುದು ಸಾಧ್ಯ. ಅದರ ನಂತರದ 50 ಮೈಕ್ರಾನ್ ಗಳ ಯಂತ್ರಣೆಯನ್ನು ಸೆಮಿಫಿನಿಶ್ ಫೀಡ್ ನಲ್ಲಿ ಮಾಡಲಾಗುತ್ತದೆ. ಮುಂದಿನ 10 ಮೈಕ್ರಾನ್ ಗಳ ಯಂತ್ರಣೆಯನ್ನು ಫಿನಿಶ್ ಫೀಡ್ ಅಳವಡಿಸಿ ಮಾಡಬಹುದಾಗಿದೆ ಮತ್ತು ಇದರಿಂದಾಗಿ ಸರ್ಫೇಸ್ ಫಿನಿಶ್ ಬೇಕಾದಂತೆ ಸಿಗುತ್ತದೆ. IPG ಪ್ರಣಾಳಿಕೆಯಿಂದಾಗಿ ಗ್ರೈಂಡಿಂಗ್ ಸೈಕಲ್ ಇಲೆಕ್ಟ್ರಾನಿಕ್ ರೀತಿಯಲ್ಲಿ ನಿಯಂತ್ರಿಸಬಹುದಾಗಿದೆ. ಕೋರ್ಸ್ ಫೀಡ್ ನ ವ್ಯಾಸವನ್ನು ಸೆಟ್ ಮಾಡಿದ್ದಲ್ಲಿ ಮತ್ತು ಕಾರ್ಯವಸ್ತುವಿನ ಆ ವ್ಯಾಸದ ತನಕ ಯಂತ್ರಣೆಯಾದಲ್ಲಿ, ಮಶಿನ್ ಫೀಡ್ ತನ್ನಷ್ಟಕ್ಕೆ ಸೆಮಿಫಿನಿಶ್ ಸೆಟಿಂಗ್ ನಲ್ಲಿ ಬದಲಾಯಿಸಲ್ಪಡುತ್ತದೆ. ಅಂದರೆ ಒಂದು ವೇಳೆ ಫೀಡ್ 0.1 ಮಿ.ಮೀ. ಇದ್ದಲ್ಲಿ, ಅದು 0.05 ಮಿ.ಮೀ. ತನಕ ಹೆಚ್ಚಾಗುತ್ತದೆ. ಅದರ ನಂತರ 0.01 ಮಿ.ಮೀ.ತನಕ ಬರುತ್ತದೆ. ಒಮ್ಮೆ ಯಂತ್ರಭಾಗಗಳಿಗೆ ಸೆಟ್ ಮಾಡಿರುವ ಆಕಾರವು ಆದಲ್ಲಿ ಸ್ವಯಂಚಾಲಿತವಾಗಿ ವೀಲ್ ಹಿಂದೆ ತಳ್ಳಿ ನಿಲ್ಲಿಸಲಾಗುತ್ತದೆ. ಇದರಿಂದಾಗಿ ಈ ಪ್ರಕ್ರಿಯೆಯಲ್ಲಿ ಮ್ಯಾನ್ಯುವಲ್ ಕೆಲಸವು ಕಡಿಮೆಯಾಗಿದೆ. ಯಂತ್ರಭಾಗಗಳನ್ನು ರಿಜೆಕ್ಟ್ ಮಾಡುವ ಪ್ರಮಾಣವು ಸೊನ್ನೆಯಾಯಿತು. IPG ಬಳಸದೇ ಈ ಮಶಿನ್ 5 ಮೈಕ್ರಾನ್ ನಷ್ಟು ನಿರ್ದೋಷತ್ವವನ್ನು ನೀಡುತ್ತದೆ.
⦁ ಪ್ರತಿಯೊಂದು ಕಾರ್ಯವಸ್ತುವಿನಲ್ಲಿ ಒಂದೇ ಸಲ ಗ್ರೈಂಡಿಂಗ್ ಮಾಡುವಂತಹ ವ್ಯಾಸ ಮತ್ತು ಅದರ ಉದ್ದಕ್ಕೆ ಅನುಸಾರವಾಗಿ ಒಂದು ಟೆಂಪ್ಲೇಟ್ ತಯಾರಿಸಲಾಗಿರುತ್ತದೆ. ಆ ಟೆಂಪ್ಲೇಟ್ ಮಶಿನ್ ನಲ್ಲಿ ವಿಶಿಷ್ಟ ಜಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಅಳವಡಿಸಲಾಗಿರುತ್ತದೆ. ಇದಕ್ಕೋಸ್ಕರ ಟೆಂಪ್ಲೇಟ್ ಮತ್ತು ಮಶಿನ್ ನಲ್ಲಿ ರೆಫರನ್ಸ್ ಸರ್ಫೇಸ್ ನಿರ್ಧರಿಸಲಾಗಿರುತ್ತದೆ. ಟೆಂಪ್ಲೇಟ್ ಬದಲಾಯಿಸುವುದು ಸುಲಭವಾಗುವ ನಿಟ್ಟಿನಲ್ಲಿ ಅದನ್ನು ಮಶಿನ್ ನಲ್ಲಿ ದೃಢವಾಗಿ ಅಳವಡಿಸಲು ಎರಡು ಅಥವಾ ಮೂರು ರಂಧ್ರಗಳನ್ನು ನೀಡಲಾಗಿರುತ್ತವೆ. ಬಳಕೆಗಾರರು ಅವರಿಗೆ ಸುಲಭವಾಗುವಂತೆ ಕಾರ್ಯವಸ್ತುವಿನ ಅಗತ್ಯಕ್ಕೆ ತಕ್ಕಂತೆ ಟೆಂಪ್ಲೇಟ್ ಮತ್ತು ಗ್ರೈಂಡಿಂಗ್ ವೀಲ್ ನ ಜೋಡಿಯನ್ನು ತಯಾರಿಸಿ ಇಡುತ್ತಾರೆ. ಅಪೇಕ್ಷಿಸಿರುವ ಆಕಾರವನ್ನು ಪಡೆಯಲು ಹೆಚ್ಚು ಡ್ರೆಸಿಂಗ್ ಮಾಡಿದ್ದರಿಂದ ವೀಲ್ ಅನಾವಶ್ಯಕವಾದ ಹಾಳಾಗುವಿಕೆಯನ್ನು ತಡೆಯಬಹುದು.
⦁ ಈ ಎಲ್ಲ ಅಂಶಗಳಿಂದಾಗಿ ಮಾನವನ ಹಸ್ತಕ್ಷೇಪ ಕಡಿಮೆಯಾದರೂ ಕೂಡಾ ತರಬೇತಿ ಪಡೆದಿರದ ಸಿಬ್ಬಂಧಿಯೂ ಸಹಜವಾಗಿ ಕೆಲಸ ನಿರ್ವಹಿಸಬಲ್ಲರು.

 
 

1_1  H x W: 0 x 
 ರಾಮಪ್ಪ ಬಿ.
 ವ್ಯವಸ್ಥಾಪಕ ನಿರ್ದೇಶಕರು
 ರೇಣುಕಾ ಗ್ರೈಂಡಿಂಗ್ ಸಲ್ಯೂಶನ್ಸ್
 9845080082
 [email protected]
ರಾಮಪ್ಪ ಬಿ. ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರಿಗೆ ಮಶಿನ್ ಟೂಲ್ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವವಿದೆ. ರೇಣುಕಾ ಗ್ರೈಂಡಿಂಗ್ ಸಲ್ಯೂಶನ್ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
@@AUTHORINFO_V1@@