ಅಜಿತ್ ಗೆ ಇಂದು ತುಂಬಾ ಖುಷಿಯಾಗಿತ್ತು. ಅದಕ್ಕೆ ಕಾರಣವೂ ಅಷ್ಟೇ ಮಹತ್ವದ್ದಾಗಿತ್ತು. ಅವರ ತಂಡಕ್ಕೆ ಕಂಪನಿಯಲ್ಲಿ ಕೈಜನ್ ಸ್ಪರ್ಧೆಯಲ್ಲಿ ಮೊದಲ ಬಹುಮಾನವು ಲಭಿಸಿತ್ತು. ಇದಕ್ಕೋಸ್ಕರ ಕೈಜನ್ ನಲ್ಲಿ ಸಹಭಾಗಿಗಳಾದ ತಂಡದೊಂದಿಗೆ ಸೆಲಿಬ್ರೆಶನ್ ಮಾಡುವುದನ್ನೂ ನಿರ್ಧರಿಸಲಾಯಿತು. ಇದರಿಂದಾಗಿ ಅಜಿತ್ ತುಂಬಾ ಸಂತೋಷದಲ್ಲಿಯೇ ತನ್ನ ಕಾರಿನೆಡೆಗೆ ಹೋದನು. ಅಜಿತ್ ಈ ಹೊಸ ಕಂಪನಿಯಲ್ಲಿ ಸೇರ್ಪಡೆಯಾಗಿ ಆರು ತಿಂಗಳೇ ಕಳೆದಿದ್ದವು. ಈ ಕಡಿಮೆ ಕಾಲಾವಧಿಯಲ್ಲಿ ಅಪ್ರಿಸಿಯೇಶನ್ ಮತ್ತು ಪಾರ್ಟಿ. ಇದು ಖಂಡಿತವಾಗಿಯು ಹೆಮ್ಮೆಯ ವಿಷಯ.
ಅಜಿತ್ ಪಾರ್ಕಿಂಗ್ ಗೆ ತಲುಪಿದಾಗ ಅವನಿಗೆ ಆರು ತಿಂಗಳಿನಿಂದ ಹಿಂದಿನ ಮುಂಜಾನೆಯ ನೆನಪಾಯಿತು. ಅಲ್ಲದೇ ಅವನಿಗೆ ತುಂಬಾ ಆಶ್ಚರ್ಯವೂ ಆಯಿತು. ಅದೇ ದಿನ ಕಂಪನಿಯಲ್ಲಿ 5s ಆಡಿಟ್ ಇತ್ತು. ಅಜಿತ್ ಸೇರ್ಪಡೆಯಾದ ಮೊದಲನೇ ತಿಂಗಳಾಗಿತ್ತು. ಬೆಳಿಗ್ಗೆ ಅಜಿತ್ ಮತ್ತು ಅವರ ತಂಡ ಆಡಿಟ್ ಗೋಸ್ಕರ ಸಿದ್ಧರಾಗಿದ್ದರು. ಶಾಪ್ ಫ್ಲೋರ್ ನಲ್ಲಿ ಒಂದು ರೌಂಡ್ ಹೊಡೆದು ಅಜಿತ್ ತನ್ನ ಕೇಬಿನ್ ನಲ್ಲಿ ಬಂದು ಕುಳಿತುಕೊಂಡನು. ಕೇಬಿನ್ ನಲ್ಲಿ ಬಂದಾಕ್ಷಣ ಅವನಿಗೆ ಇಡೀ ಕೇಬಿನ್ ನಲ್ಲಿ ಆಯಿಲ್ ನ ಹೆಜ್ಜೆಗಳು ಕಂಡುಬಂದವು. ಇಂತಹ ಆಯಿಲ್ ನ ಹೆಜ್ಜೆಗಳನ್ನು ನೋಡಿ ಅವನಿಗೆ ಸಿಕ್ಕಾಪಟ್ಟೆ ಸಿಟ್ಟು ಬರಲಾರಂಭಿಸಿತು.
ಏನಪ್ಪಾ, ಇದೇನು? ನಿನ್ನೆ ಎಲ್ಲರಿಗೂ ಮನದಟ್ಟಾಗುವಂತೆ ಹೇಳಿದ್ದೆ. ಬ್ರೋಚಿಂಗ್ ಆಪರೇಟರ್ ಗೆ ಹತ್ತು-ಇಪ್ಪತ್ತು ಸಲ ಹೇಳಿ ಆಯಿತು. ಈ ಜಾಗ ಬಿಟ್ಟು ಎಲ್ಲಿಯೂ ತಿರುಗಾಡಬಾರದು. ಆದರೂ ಕೂಡಾ ಇವನು ಕೇಬಿನ್ ಗೆ ಹೇಗೆ ಬಂದ?
ಬ್ರೋಚಿಂಗ್ ಮಶಿನ್ ನಲ್ಲಿ ಆಪರೇಟರ್ ಎಲ್ಲಿಯೂ ತಿರುಗಾಡಿದರೂ ಕೂಡಾ ಆಯಿಲ್ ನಿಂದ ಕೂಡಿರುವ ಹೆಜ್ಜೆಗಳೊಂದಿಗೆ ತಿರುಗಾಡುತ್ತಾನೆ. ಶಾಪ್ ಫ್ಲೋರ್ ಮಾತ್ರ ಇದರಿಂದಾಗಿ ಎಲ್ಲಡೆಯೂ ಆಯಿಲ್ ಮಯವಾಗುತ್ತದೆ. ಶಾಪ್ ಫ್ಲೋರ್ ಈ ರೀತಿಯಲ್ಲಿ ಆಯಿಲ್ ನ ಹೆಜ್ಜೆಗಳಿಂದ ಕೂಡಿರುವ ಕಾರಣವೆಂದರೆ, ಬ್ರೋಚಿಂಗ್ ಮಶಿನ್ ಆಪರೇಟರ್ ಮತ್ತು ಅವನ ಕಾಲಿಗೆ ತಾಗಿರುವ ಆಯಿಲ್. ಇಡೀ ಶಾಪ್ ಫ್ಲೋರ್ ನಲ್ಲಿ ಒಂದೇ ಮಶಿನ್ ನಲ್ಲಿ ನೀಟ್ ಕಟಿಂಗ್ ಆಯಿಲ್ ಬಳಸಲಾಗುತ್ತಿತ್ತು. ನೀಟ್ ಕಟಿಂಗ್ ಆಯಿಲ್ ಬಳಸುವಾಗ ಹಲವಾರು ಸೈಡ್ ಇಫೆಕ್ಟ್ ಗಳು ಸಂಭವಿಸುವುದು ಸಾಮಾನ್ಯ. ಶಾಪ್ ಫ್ಲೋರ್ ನಲ್ಲಿ ಅಸ್ವಚ್ಛತೆಯಾಗುವುದು, ಆಪರೇಟರ್ ನ ದೂರುಗಳು, ಆಯಿಲ್ ನಿಂದಾಗಿ ಅಂಟು-ಅಂಟಾಗುವ ಪರಿಸರ, ಚಿಪ್ ಬೇರೆಯಾಗಿಯೇ ಇಡುವ ಪರಿಸ್ಥಿತಿ, ಇಂತಹ ಅನೇಕ ಅಂಶಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ಎಲ್ಲ ಅಂಶಗಳನ್ನು ಬದಿಗಿಟ್ಟು ಅಜಿತ್ ತಕ್ಷಣ ಆಯಿಲ್ ನಿಂದ ಉಂಟಾಗಿರುವ ಕುರುಹುಗಳನ್ನು ಸ್ವಚ್ಛಗೊಳಿಸಿ ಗಡಿಬಿಡಿಯಲ್ಲಿಯೇ ಇಚ್ಛೆ ಇಲ್ಲದಿದ್ದರೂ ಆಡಿಟ್ ಗೆ ಸಿದ್ಧನಾದನು. ಆದರೆ ಆಡಿಟ್ ಮುಗಿದ ನಂತರ ತಕ್ಷಣ ಒಂದು ಮೀಟಿಂಗ್ ಏರ್ಪಡಿಸಿದನು. ಈ ಮೀಟಿಂಗ್ ನಲ್ಲಿ ಬ್ರೋಚಿಂಗ್ ಮಶಿನ್ ನ ಆಯಿಲ್ ಕುರಿತು ಏನಾದರೂ ನಿರ್ಧಾರವನ್ನು ಕೈಗೊಳ್ಳುವುದನ್ನು ತೀರ್ಮಾನಿಸಿದನು.
ಈ ನಡುವೆ, ‘’ಸಾಹೆಬ್ರೇ, ಎನ್ರೀ ಹೀಗೆಲ್ಲಾ ಮಾಡುವುದು? ಕಳೆದ ಇಪ್ಪತ್ತು ವರ್ಷಗಳಿಂದ ನಾವು ಇಲ್ಲಿ ಬ್ರೋಚಿಂಗ್ ಮಶಿನ್ ನಲ್ಲಿ ಇದೇ ಆಯಿಲ್ ಬಳಸುತ್ತಿದ್ದೇವೆ. ಎಲ್ಲ ಮಶಿನ್ ಗಳಿಗೆ ಬೇಕಾಗುವ ಆಯಿಲ್ ಬದಲಾಯಿಸಿದೆವು, ಅದರೆ ಬ್ರೋಚಿಂಗ್ ಮಶಿನ್ ನ ಆಯಿಲ್ ಬದಲಾಯಿಸಬೇಕು, ಎಂಬ ವಿಚಾರ ನಮ್ಮ ಮನಸ್ಸಿನಲ್ಲಿ ಬಂದಿಲ್ಲ. ನೀವು ಹೊಸದಾಗಿ ಸೇರ್ಪಡೆಯಾಗಿದ್ದೀರಿ. ಸುಮ್ಮಸುಮ್ಮನೆ ಬೇಡವಾದ ಪ್ರೊಜೆಕ್ಟ್ ಪ್ರಾರಂಭಿಸಬೇಡಿ,’’ ಎಂಬುದಾಗಿ ವಿಶ್ರಾಂತರಾಗಲು (ನಿವೃತ್ತರಾಗಲು) ಎರಡು ವರ್ಷ ಉಳಿದಿರುವ ವರಿಷ್ಠ ಆಪರೇಟರ್ ಕದಮ್ ಎಂಬುವರು ಹೇಳಿದರು.
‘’ಇಪ್ಪತ್ತು ವರ್ಷಗಳ ಹಿಂದೆ ಈ ಬ್ರೋಚಿಂಗ್ ಮಶಿನ್ ಇಲ್ಲಿಗೆ ತಂದು ಕೆಲಸ ಪ್ರಾರಂಭಿಸಿದಾಗ ನಮಗೆ ಯಾವ್ಯಾವ ಅಡಚಣೆಗಳನ್ನು ಎದುರಿಸಬೇಕಾಯಿತು, ಎಂಬುದು ನಮಗೆ ತಿಳಿದ ವಿಷಯವಾಗಿದೆ. ಬ್ರೋಚ್ ತುಂಡಾಗುವುದು, ರಿಜೆಕ್ಷನ್, ಬ್ರೋಚ್ ಜಾಮ್ ಆಗುವುದು ಇಂತಹ ಅನೇಕ ರೀತಿಯ ಅಡಚಣೆಗಳನ್ನು ನಮ್ಮ ತಂಡವು ಎದುರಿಸಿತು. ಅನೇಕ ಬಾರಿ ಟ್ರಾಯಲ್ ಮಾಡಿಯೂ ಹೈ ವಿಸ್ಕಾಸಿಟಿ ಮತ್ತು ಸಲ್ಫರ್ ಕಂಟೆಂಟ್ ಇರುವ ಈ ಆಯಿಲ್ ನ ಆಯ್ಕೆಯನ್ನು ನಾವೇ ಮಾಡಿದ್ದೆವು. ಆಗಿನಿಂದ ಈ ಮಶಿನ್ ಸ್ಮೂತ್ ಆಗಿ ಕೆಲಸ ನಿರ್ವಹಿಸುತ್ತಿದೆ,’’ ಎಂಬುದಾಗಿ ಕದಮ್ ಇವರು ಹೇಳಿದರು.
‘’ಯಾರೇ ಸಾಹೆಬ್ರು ಬಂದರೂ ಕೂಡಾ ಅವರಿಗೆ ನಾವು ಮೊದಲು ದಬಾಯಿಸುತ್ತೇವೆ. ಮಶಿನ್ ಕಡೆಗೆ ಓರೆ ಕಣ್ಣಿನಿಂದ ನೋಡಬಾರದು. ಹಾಗೆ ನೋಡಿದರೆ ಅದು ಅಪಶಕುನ. ಅದರಲ್ಲಿಯೂ ನೀವು ಮೊದಲನೆಯದಾಗಿ ಇದೇ ಪ್ರೊಜೆಕ್ಟನ್ನು ಪ್ರಾರಂಭಿಸುತ್ತಿದ್ದೀರಿ. ಸಾಹೆಬ್ರೇ ಬಿಟ್ಟು ಬಿಡಿ. ನನ್ನ ರಿಟೈರ್ ಮೆಂಟ್ ಗೆ ಎರಡು ವರ್ಷಗಳೇ ಉಳಿದಿವೆ. ಯಾಕೆ ಇಲ್ಲ-ಸಲ್ಲದ ಕೆಲಸಗಳನ್ನು ನಮಗೆ ಹೇಳುತ್ತೀರಿ. ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ,’’ ಎಂಬುದಾಗಿ ಮತ್ತೆ ಶ್ರೀ. ಕದಮ್ ಹೇಳಿದರು.
ಅಜಿತ್ 18 ವರ್ಷ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ ನುರಿತ ಮತ್ತು ಅನುಭವಿಯಾಗಿದ್ದ. ಈ ಹೊಸ ಪ್ರೊಜೆಕ್ಟ್ ಗೋಸ್ಕರ ಶ್ರೀ. ಕದಮ್ ಇವರ ನೆರವು ಮತ್ತು ಸಹಕಾರ ಖಂಡಿತವಾಗಿಯೂ ಆಗಲಿದೆ, ಎಂಬುದು ಅಜಿತ್ ಗೆ ಮನವರಿಕೆಯಾಗಿತ್ತು. ಆದ್ದರಿಂದ್ ಅವನು ಮೀಟಿಂಗ್ ನಲ್ಲಿದ್ದ ಎಲ್ಲರಿಗೂ ‘’ನಾವು ಎಲ್ಲರೂ ಸೇರಿ ನಿರ್ಧಾರ ಮಾಡೋಣ,’’ ಎಂಬ ಆಶ್ವಾಸನೆಯನ್ನು ನೀಡಿದನು. ಸರಿಯಾಗಿ ವಿಚಾರ ಮಾಡಿ, ಅಭ್ಯಾಸವನ್ನೂ ಮಾಡಿ ಬದಲಾವಣೆಗಳನ್ನು ಮಾಡಿದಲ್ಲಿ ಈ ಪ್ರೊಜೆಕ್ಟ್ ಯಶಸ್ವಿಯಾಗಬಲ್ಲದು. ಅಲ್ಲದೇ ತಮ್ಮೆಲ್ಲರು ಅನುಭವವೂ ಉಪಯೋಗಕ್ಕೆ ಬರಲಿದೆ, ಅನುಭವದ ಸಹಾಯವೂ ಆಗಲಿದೆ, ಎಂಬುದಾಗಿ ಒಂದೇ ವಾಕ್ಯದ ಉತ್ತರವನ್ನು ನೀಡಿ ಅಜಿತ್ ಇವನು ಒಂದು ತೀಕ್ಷ್ಣವಾದ ಬಾಣವನ್ನೇ ಎಸೆದನು.
''ಮುಂದಿನ ದಿನ ಬೆಳಿಗ್ಗೆ ಏರ್ಪಡಿಸಲಾದ ಕೈಜನ್ ನ ಮೀಟಿಂಗ್ ನಲ್ಲಿ, ನನಗೆ ಈ ಬ್ರೋಚಿಂಗ್ ಮಶಿನ್ ನ ಆಯಿಲ್ ನಿಂದ ಉದ್ಭವಿಸುವ ಎಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ನೀಗಿಸಬೇಕು. ಇದಕ್ಕೋಸ್ಕರ ನಾನು ನಾಲ್ಕು ಜನರ ಒಂದು ಟೀಮ್ ನಿರ್ಧರಿಸಿದ್ದೇನೆ. ಮುಂದಿನ ಎರಡು ತಿಂಗಳ ಕಾಲಾವಧಿಯಲ್ಲಿ ಈ ಮಶಿನ್ ನಲ್ಲಿಯೇ ಕೆಲಸ ನಿರ್ವಹಿಸಿರಿ. ಮಶಿನ್ ನಲ್ಲಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ದೂರ ಮಾಡಿ ತೋರಿಸಿರಿ,’’ ಎಂಬುದಾಗಿ ಅಜಿತ್ ಘೋಷಿಸಿದನು. ನಾಲ್ಕು ಜನರ ತಂಡದಲ್ಲಿ ವರಿಷ್ಠ ಆಪರೇಟರ್ ಶ್ರೀ. ಕದಮ್, ಅವರೊಂದಿಗೆ ನಿರ್ವಹಣೆಯನ್ನು ಮಾಡುತ್ತಿದ್ದ ಇಂಜಿನಿಯರ್ ರೋಹಿತ್, ಪ್ರೊಡಕ್ಷನ್ ಇಂಜಿನಿಯರ್ ಸುದಾಮ್ ಮತ್ತು ಆಪರೇಟರ್ ದೀಪಕ್ ಹೀಗೆ ನಾಲ್ಕು ಜನರ ಆಯ್ಕೆಯನ್ನು ಅವನು ಮಾಡಿದನು.
ತಂಡದವರೆಲ್ಲಾ ಸೇರಿ ಮೊದಲಾಗಿ ಬ್ರೇನ್ ಸ್ಟಾರ್ಮಿಂಗ್ ಮೀಟಿಂಗ್ ನಲ್ಲಿ ಸಮಸ್ಯೆಗಳ ಕುರಿತಾದ ಎಲ್ಲ ವಿಚಾರಗಳನ್ನು ವಿಮರ್ಶಿಸಲಾಯಿತು.
‘’ರೋಹಿತ್, ಮೊದಲು ಯಾವ ಯಾವ ಸಮಸ್ಯೆಗಳನ್ನು ಬಿಡಿಸಬೇಕು, ಎಂಬುದರ ಕುರಿತು ಪಟ್ಟಿ ಮಾಡೋಣ ಮತ್ತು ಅದರ ಮೂಲ ಕಾರಣವನ್ನು (ರೂಟ್ ಕಾಜ್) ಹುಡುಕೋಣ,’’ ಎಂಬುದಾಗಿ ಸುದಾಮನು ಹೇಳಿದನು.
ಸಮಸ್ಯೆಗಳ ಪಟ್ಟಿ
1. ಮಶಿನ್ ನ ಸುತ್ತಮುತ್ತದ ಜಾಗದಲ್ಲಿ ಅಂಟುತನ ಉಂಟಾಗುವುದು.
2. ಆಪರೇಟರ್ ಬ್ರೋಚಿಂಗ್ ಮಶಿನ್ ನಲ್ಲಿ ಕೆಲಸ ಮಾಡಲು ಒಪ್ಪದಿರುವುದು.
3. ಬ್ರೋಚಿಂಗ್ ಮಶಿನ್ ಗೋಸ್ಕರ ಬೇರೆಯೇ ಆಯಿಲ್ ನ ಸಂಗ್ರಹಿಸಿ ಇಡಬೇಕಾಗುತ್ತದೆ.
4. ಆಪರೇಟರ್ ನ ಬೂಟ್ಸ್ ಗಳಿಗೆ ಆಯಿಲ್ ತಾಗಿ ಎಲ್ಲೆಡೆಯೂ ಪಸರಿಸುತ್ತದೆ.
5. ಮಶಿನ್ ನಿಂದ ತೆಗೆದಿರುವ ಕಾರ್ಯವಸ್ತುಗಳು ಆಯಿಲ್ ನಿಂದ ತುಂಬಿರುತ್ತವೆ.
6. ಚಿಪ್ ಅಂಟು-ಅಂಟಾಗಿರುವುದು. ಇದರಿಂದಾಗಿ ಆಯಿಲ್ ವ್ಯರ್ಥವಾಗುತ್ತದೆ, ಇತ್ಯಾದಿ.
ಈ ರೀತಿಯ ಅನೇಕ ಸಮಸ್ಯೆಗಳ ಕುರಿತು ವಿಚಾರ ಮಾಡಿದಾಗ, ಎಲ್ಲ ಸಮಸ್ಯೆಗಳಿಗೆ ಬ್ರೋಚಿಂಗ್ ಮಶಿನ್ ನಲ್ಲಿ ಬಳಸಲಾಗುವ ‘ನೀಟ್ ಕಟಿಂಗ್ ಆಯಿಲ್’ ಇದೊಂದು ಕಾರಣ ಎಂಬುದರ ಅರಿವಾಯಿತು.
‘’ನಾನು ಯಾವಾಗಲೂ ವಿಚಾರ ಮಾಡಿದೆ, ಈ ಒಂದೇ ಮಶಿನ್ ನಲ್ಲಿ ಯಾವಾಗಲೂ ನೀಟ್ ಕಟಿಂಗ್ ಆಯಿಲ್ ಯಾಕೆ ಬಳಸುತ್ತಾರೆ? ಬಹುಶಃ ಇದರ ಕುರಿತಾಗಿ ಶ್ರೀ. ಕದಮ್ ಇವರು ಖಂಡಿತವಾಗಿಯೂ ಸರಿಯಾಗಿ ಹೇಳಬಲ್ಲರು,’’ ಎಂಬುದಾಗಿ ಸುದಾಮನು ಹೇಳಿದನು.
ಅದರ ಕುರಿತು ದೀಪಕ್ ಹೇಳುತ್ತಾನೆ, ‘’ನಿಜವಾಗಿಯೂ ಈ ಆಯಿಲ್ ನಿಂದ ತುಂಬಾ ತೊಂದರೆಯಾಗುತ್ತಿದೆ. ಮನೆಗೆ ಹೋದರೂ ಕೂಡಾ ಈ ಆಯಿಲ್ ನ ವಾಸನೆ ಮೈ-ಕೈಯಿಂದ ಹೋಗುವುದಿಲ್ಲ. ಸ್ನಾನ ಮಾಡಲು ಹತ್ತು-ಹದಿನೈದು ನಿಮಿಷಗಳು ಬೇಕಾಗುತ್ತವೆ.’’
ರೋಹಿತ್ ಹೇಳುತ್ತಾನೆ, ‘’ಏನು ಶ್ರೀ. ಕದಮ್ ಸಾಹೆಬ್ರೇ, ನಮಗೆ ಹೇಳಿ ಈ ಆಯಿಲ್ ನ ಗುಟ್ಟು.’’
ಈಗ ಶ್ರೀ. ಕದಮ್ ಹೇಳುತ್ತಾರೆ, ‘’ಏನ್ರಿ, ಏನೂ ಇಲ್ಲ. ಅದರಲ್ಲಿ ಏನಿದೆ ಗುಟ್ಟು. ಬೇರೆ ಯಾವುದೇ ಆಯಿಲ್ ಇದಕ್ಕೆ ಸರಿಹೊಂದುವುದಿಲ್ಲ. ಬ್ರೋಚಿಂಗ್ ಮಾಡುವಾಗ ಸಿಕ್ಕಾಪಟ್ಟೆ ಬಿಸಿಯೂ ಆಗುತ್ತದೆ, ಅಲ್ಲದೇ ಮಶಿನ್ ಗೆ ಲೋಡ್ ಕೂಡಾ ತುಂಬಾ ಬರುತ್ತದೆ, ಲುಬ್ರಿಸಿಟೀ ಇಲ್ಲದಿದ್ದಲ್ಲಿ ಬ್ರೋಚ್ ನ ಆಯುಷ್ಯ ಕೂಡಾ ಹೆಚ್ಚು ಬರುವುದಿಲ್ಲ. ಬ್ರೋಚ್ ಬದಲಾಯಿಸಲೂ ತುಂಬಾ ಸಮಯ ಬೇಕಾಗುತ್ತದೆ, ಇದು ಬೇರೆಯೇ ವಿಷಯ. ಸಂಕ್ಷಿಪ್ತವಾಗಿ ಹೇಳುವುದಾದರೆ ‘ನೀಟ್ ಕಟಿಂಗ್ ಆಯಿಲ್’ ಬಳಸಿದರೆ ಯಾವುದೇ ರೀತಿಯ ಅಡಚಣೆಗಳನ್ನು ಎದುರಿಸಬೇಕಾಗುವುದಿಲ್ಲ. ವಾಟರ್ ಸೊಲ್ಯುಬಲ್ ಆಯಿಲ್ ಈ ಮಶಿನ್ ನಲ್ಲಿ ನಡೆಯುವುದಿಲ್ಲ.’’
‘’ಕಾರಣ ಏನು?’’ ಎಂಬುದಾಗಿ ರೋಹಿತ್ ಕೇಳುತ್ತಾನೆ.
ಆಗ ಶ್ರೀ. ಕದಮ್ ಇದರ ಕುರಿತು ಸ್ಪಷ್ಟೀಕರಣವನ್ನು ಈ ಮುಂದಿನಂತೆ ನೀಡುತ್ತಾರೆ.
1. ವಾಟರ್ ಸೋಲ್ಯುಬಲ್ ಆಯಿಲ್ ತುಂಬಾ ತೆಳ್ಳಗೆ ಇರುತ್ತದೆ. ಆದ್ದರಿಂದ ಬ್ರೋಚ್ ನಲ್ಲಿ ಅದರ ಫಿಲ್ಮ್ ನಿಲ್ಲುವುದಿಲ್ಲ.
2. ವಾಟರ್ ಸೋಲ್ಯುಬಲ್ ಆಯಿಲ್ ನ ಕಾಂನ್ಸೆಟ್ರೇಶನ್ ಯಾವಾಗಲೂ 5% ಅಳವಡಿಸಿದಲ್ಲಿ ಬ್ರೋಚ್ ಗೆ ಅಪೇಕ್ಷಿಸಿರುವ ಬಾಳಿಕೆ ಬರುವುದಿಲ್ಲ.
3. ವಾಟರ್ ಸೋಲ್ಯುಬಲ್ ಆಯಿಲ್ ನ ನಿರ್ವಹಣೆ ಸ್ವಲ್ಪ ಕ್ಲಿಷ್ಟವಾಗಿದೆ. ಟಾಪ್ ಅಪ್ ಮಾಡುವಾಗ ಕಾಂನ್ಸೆಟ್ರೇಶನ್ ಕಾಪಾಡದಿದ್ದಲ್ಲಿ ಎಲ್ಲಾ ಕೆಲಸ ಹಾಳಾಗುತ್ತದೆ.
ಇದನ್ನು ಕೇಳಿದಾಕ್ಷಣ ಎಲ್ಲರೂ ಇಂತಹ ಗಂಭೀರ ಸಮಸ್ಯೆಗೆ ಯಾವ ರೀತಿಯಲ್ಲಿ ಪರೀಕ್ಷೆ ಮಾಡುವುದು, ಎಂಬುದಾಗಿ ವಿಚಾರ ಮಾಡುತ್ತಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದಕ್ಕೆ ಒಂದೇ ರಾಮಬಾಣದಂತಹ ಉಪಾಯವೆಂದರೆ ನೀಟ್ ಕಟಿಂಗ್ ಆಯಿಲ್ ಮತ್ತು ಹೆಚ್ಚು ಲುಬ್ರಿಸಿಟಿಗೋಸ್ಕರ ಸಲ್ಫರ್.
ಸುದಾಮ್ ಹೇಳುತ್ತಾನೆ, ‘’ಸಲ್ಫರ್ ತುಂಬಾ ಹಾನಿಕಾರಕವಾಗಿದೆ ಎಂಬುದನ್ನು ನಾನು ಕೇಳಿದ್ದೇನೆ. ಅನೇಕ ದೇಶಗಳಲ್ಲಿ ಇದರ ಬಳಕೆಯನ್ನು ನಿಲ್ಲಿಸಿದ್ದಾರೆ. ನಿಜವಾಗಿ ನೋಡಿದರೆ ಈ ಆಯಿಲ್ ಒಂದು ವಿಷವೇ ಸರಿ. ಇದರಲ್ಲಿ ಇನ್ನೇನು ಪರೀಕ್ಷೆ ಮಾಡುವುದು? ಹೆಚ್ಚು ಲುಬ್ರಿಸಿಟಿಗೋಸ್ಕರ ಈಗ ವಾಟರ್ ಸೋಲ್ಯುಬಲ್ ಆಯಿಲ್ ಕೂಡಾ ಒಳ್ಳೆಯದಾಗಿದೆ.’’
ತಕ್ಷಣ ರೋಹಿತ್ ಹೇಳುತ್ತಾನೆ, ‘’ಚುಟುಕಾಗಿ ಹೇಳುವುದಾದಲ್ಲಿ ಹೆಚ್ಚು ಲುಬ್ರಿಸಿಟಿ ಇರುವ ಮತ್ತು ಉಷ್ಣಾಂಶವನ್ನು ಸಾಗಿಸುವ, ಕಡಿಮೆ ಅಂಟುತನ ಇರುವ ಅಂದರೆ ವಾಟರ್ ಸೋಲ್ಯುಬಲ್ ಆಯಿಲ್ ನ ಆವಶ್ಯಕತೆ ಇದೆ. ಅಲ್ಲದೇ ಅದು ಸುರಕ್ಷಿತವಾಗಿಯೂ ಇರುತ್ತದೆ,’’ ಎಂದು ರೋಹಿತ್ ಚಡಪಡಿಸುತ್ತಾ ಹೇಳಿದನು. ಇದರ ನಂತರ ಈ ತಂಡವು ಇಂತಹ ಆಯಿಲ್ ನ ಹುಡುಕಾಟವನ್ನು ಪ್ರಾರಂಭಿಸಿದರು.
ಸ್ವಲ್ಪ ಹುಡುಕಾಟ ಮಾಡಿದ ನಂತರ ತಂಡಕ್ಕೆ ಉತ್ತರವೂ ಸಿಕ್ಕಿತು. ಇತ್ತೀಚೆಗೆ ವೆಜಿಟೇಬಲ್ ಆಯಿಲ್ ನಿಂದ ಕೂಡಿರುವ ಉಚ್ಚಮಟ್ಟದ ವಾಟರ್ ಸೊಲ್ಯುಬಲ್ ಆಯಿಲ್ ಮಾರುಕಟ್ಟೆಯಲ್ಲಿವೆ. ಇದು ಯಾವಾಗಲೂ ಬಳಸುವ ಆಯಿಲ್ ಗಿಂತ ಅಂದರೆ 5% ದಿಂದ 6% ಗಿಂತ ಹೆಚ್ಚು ಅಂದರೆ 10% ದಿಂದ 15% ದಷ್ಟು ಕಾಂನ್ಸೆಟ್ರೇಶನ್ ನಿಂದ ಬ್ರೋಚಿಂಗ್ ನಂತಹ ಕೆಲಸಕ್ಕೆ ಬಳಸಬಹುದಾಗಿದೆ. ಇದನ್ನು ಕೇಳಿ ಅಜಿತ್ ತನ್ನ ತಂಡಕ್ಕೆ ತಕ್ಷಣ ಆ ಆಯಿಲ್ ನ ಟ್ರಯಲ್ ಮಾಡಲು ಹೇಳುತ್ತಾನೆ. ಮನಸ್ಸಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಸ್ವಸ್ಥತೆ ಇತ್ತು. ಆದರೆ ರಿಸ್ಕ್ ತೆಗೆದುಕೊಂಡು ಇದನ್ನು ಮಾಡಲೇಬೇಕಾಗಿತ್ತು.
ದೀಪಕ್ ಮತ್ತು ಅವರ ತಂಡವು ಮಶಿನ್ ನ ‘ನೀಟ್’ ಆಯಿಲ್ ತೆಗೆದು ಮಶಿನ್ ಸ್ವಚ್ಛಗೊಳಿಸಿದರು. ಮಶಿನ್ ಟ್ರಯಲ್ ಗೆ ತಯಾರಾಯಿತು. ಪ್ರಾರಂಭದಲ್ಲಿ ಕಾಂನ್ಸೆಟ್ರೇಶನ್ 15% ಅಳವಡಿಸುದನ್ನು ತಂಡವು ನಿರ್ಧರಿಸಿತು. ಒಂದು ವೇಳೆ ಯಾವುದೇ ರೀತಿಯ ಅಡಚಣೆಗಳು ಎದುರಾಗದೇ ಇದ್ದಲ್ಲಿ ಹಂತ ಹಂತವಾಗಿ ಒಂದೊಂದು ಶೇಕಡಾ ಕಡಿಮೆ ಮಾಡಿ ಹತ್ತು ಶೇಕಡಾ ತನಕ ತರುವುದನ್ನು ನಿರ್ಧರಿಸಲಾಯಿತು.
ಗಣಪತಿಯನ್ನು ಸ್ಮರಿಸಿ ಶ್ರೀ. ಕದಮ್ ಇವರು ಮಶಿನ್ ಆನ್ ಮಾಡಿದರು.
ಮೊದಲನೆಯ ಜಾಬ್ ಹೊರ ಬರುವಾಗ ಕದಮ್ ಇವರ ಕಣ್ಣಲ್ಲಿ ಬೇರೆಯೇ ರೀತಿಯ ಭಾವನೆಗಳು ಮೂಡಿಬಂದವು. ಈ ಟ್ರಯಲ್ ಯಶಸ್ವಿಯಾಗುತ್ತದೆ, ಎಂಬುದಾಗಿ ಶ್ರೀ. ಕದಮ್ ಇವರು ನಿಧಾನವಾಗಿಯೇ ಹೇಳಿದರು. "ಇದು ಈ ಬರೇ ಪ್ರಾರಂಭ, ಬ್ರೋಚ್ ಹಾಳಾಗುವ ತನಕ ಟ್ರಯಲ್ ಮಾಡೋಣ ಮತ್ತು ನಂತರ ನಿರ್ಧರಿಸೋಣ,’’ ಎಂದು ರೋಹಿತ್ ಹೇಳಿದ.
ಈ ಟ್ರಯಲ್ ಪ್ರಾರಂಭಿಸಿ ಇಂದಿಗೆ ಸುಮಾರು ಮೂರು ತಿಂಗಳ ಕಾಲಾವಧಿಯಾಯಿತು. ಮಶಿನ್ ಸರಿಯಾಗಿ ನಡೆಯುತ್ತಿದೆ. ಮಶಿನ್ ಸರಿಯಾಗಿ ಆನ್ ಆಗುತ್ತದೆ. ಕಟಿಂಗ್ ಕೂಡಾ ಹಿಂದಿನಂತೆಯೇ ಆಗಲಾರಂಭಿಸಿತು. ಈ ಹಿಂದಿನ ಎಲ್ಲ ಸಮಸ್ಯೆಗಳು ಇಲ್ಲದಂತಾದವು. ಮೂರು ತಿಂಗಳ ನಂತರ ಟ್ರಯಲ್ ಕೊನೆಗೊಂಡಿತು.
ತಂಡಕ್ಕೆ ಈ ಕೆಳಗಿನ ಅಂಶಗಳು ಗಮನಕ್ಕೆ ಬಂದವು.
1. ಕಾರ್ಯವಸ್ತುವಿನ ಮಾಪನದಲ್ಲಿ ಮತ್ತು ಗುಣಮಟ್ಟದಲ್ಲಿ ಯಾವುದೇ ರೀತಿಯ ನಕಾರಾತ್ಮಕವಾದ ಬದಲಾವಣೆಗಳು ಕಂಡುಬಂದಿಲ್ಲ.
2. ಆಯಿಲ್ ನ ಕಾಂನ್ಸೆಟ್ರೇಶನ್ ಹೆಚ್ಚು ಇರುವುದರಿಂದ ಭಾಗಗಳಿಗೆ ತುಕ್ಕು ಹಿಡಿಯಲಿಲ್ಲ.
3. ಬ್ರೋಚ್ ನ ಬಾಳಿಕೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕವಾದ ಬದಲಾವಣೆಗಳು ಕಂಡುಬಂದಿಲ್ಲ.
4. ಯಾವಾಗಲೂ ಇರುವುದಕ್ಕಿಂತ ತುಂಬಾ ಕಡಿಮೆ ಉಷ್ಣಾಂಶವು ತಯಾರಾಗುತ್ತಿತ್ತು.
5. ಮಶಿನ್ ನ ಸುತ್ತಮುತ್ತದ ವಾತಾವರಣದಲ್ಲಿ ಸಕಾರಾತ್ಮಕವಾದ ಬದಲಾವಣೆಗಳು ಗಮನಕ್ಕೆ ಬಂದವು.
6. ಆಪರೇಟರ್ ತುಂಬಾ ಖುಷಿಯಾಗಿರುವುದು ಕಂಡುಬಂತು. ಕಾರಣ ಮುಂಚಿನ ಆಯಿಲ್ ನಿಂದ ಎದುರಿಸಬೇಕಾಗಿದ್ದ ಸಮಸ್ಯೆಗಳು ಇಲ್ಲದಂತಾದವು.
7. ಆಯಿಲ್ ನ ಖರ್ಚಿನಲ್ಲಿ 20% ಉಳಿತಾಯವಾಯಿತು.
ತಂಡವು ಈ ರೀತಿಯಲ್ಲಿ ಮಾಡಿದ ಬದಲಾವಣೆಗಳಿಂದಾಗಿ ಹಣದ ಉಳಿತಾಯವಾಯಿತು. ಶಾಪ್ ಫ್ಲೋರ್ ನಲ್ಲಿದ್ದ ಗೊಂದಲದ ವಾತಾವರಣ ಇಲ್ಲದಂತಾಯಿತು, ಇದು ಮಾತ್ರ ಗಮನಿಸಬೇಕಾದ ಅಂಶ.
ಮಂದಾರ್ ಗೋಕರ್ಣ
ನಿರ್ದೇಶಕರು,
ಸಂಜಯ್ ಟೂಲ್ಸ್ ಅಂಡ್ ಅಢೆಸಿವ್
9822028518
[email protected]ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿರುವ ಮಂದಾರ್ ಗೋಕರ್ಣ ಇವರು ಕಳೆದ ಅನೇಕ ವರ್ಷಗಳ ಕಾಲಾವಧಿಯಲ್ಲಿ ಸೆಂಡ್ ವಿಕ್ ಎಂಬ ಕಂಪನಿಯ ಟೂಲ್ ವಿತರಕರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ಅವರು ಮಶಿನ್ ಸ್ವಚ್ಛ ಮಾಡಲು ಬಳಸಲಾಗುವ ಉತ್ಪಾದನೆಗಳನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.