ಸ್ಪೈರಲ್ ಬೆವೆಲ್ ಮತ್ತು ಹೈಪ್ಯೊಡ್ ಗಿಯರ್

@@NEWS_SUBHEADLINE_BLOCK@@

Udyam Prakashan Kannad    29-Jul-2020
Total Views |
 
ಮೆಕ್ಯಾನಿಕಲ್ ಶಕ್ತಿ (ಎನರ್ಜಿ) ಪ್ರಸರಣವನ್ನು (ಟ್ರಾನ್ಸ್ ಮಿಶನ್) ಅನೇಕ ಮಾಧ್ಯಮಗಳಿಂದ ಮಾಡಲಾಗುತ್ತದೆ. ಶಕ್ತಿಯ ಪ್ರಸರಣವು ನಿರ್ದೋಷವಾಗಿ, ದೃಢವಾಗಿ ಮತ್ತು ವಿಶ್ವಾಸಾರ್ಹವಾಗಿ ನಿಯಂತ್ರಿಸಲು ಗಿಯರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ವಿಭಿನ್ನ ಅಪ್ಲಿಕೇಶನ್ ಗಳಿಗೋಸ್ಕರ ಅನೇಕ ಗಿಯರ್ ವ್ಯವಸ್ಥೆಗಳು ಇವೆ.
 
ಶಕ್ತಿಯ ಪ್ರಸರಣದ ದಿಕ್ಕಿಗೆ ಅನುಸಾರವಾಗಿ ಗಿಯರ್ ಪ್ರಸರಣವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.
1. ಸಮಾನಾಂತರ ಅಕ್ಷದಲ್ಲಿರುವ ಪ್ರಸರಣ. ಉದಾಹರಣೆ- ಸ್ಪರ್ ಗಿಯರ್, ಹೆಲಿಕಲ್ ಗಿಯರ್.
2. ಒಂದನ್ನೊಂದು ಕತ್ತರಿಸುವ ಅಥವಾ ಓರೆ (ಸ್ಕ್ಯೂ) ಅಕ್ಷಗಳಲ್ಲಿ ಪ್ರಸರಣ.

2_2  H x W: 0 x 
 
ಉದಾಹರಣೆ, ವರ್ಮ್ ಗಿಯರ್, ನೇರ (ಸ್ಟ್ರೇಟ್) ಅಥವಾ ಸ್ಪೈರಲ್ ಬೆವೆಲ್ ಗಿಯರ್ ಮತ್ತು ಹೈಪ್ಯೊಡ್ ಗಿಯರ್.
ಈ ಲೇಖನದಲ್ಲಿ ನಾವು ಸ್ಪೈರಲ್ ಆಕಾರದ ಬೆವೆಲ್ ಮತ್ತು ಹೈಪ್ಯೊಡ್ ಗಿಯರ್ ಕುರಿತು ವಿವರವಾಗಿ ಚರ್ಚಿಸೋಣ.
ಶಕ್ತಿಯು ಯಾವಾಗ ಒಂದೇ ಶಾಫ್ಟ್ ನಿಂದ ಇನ್ನೊಂದು ಶಾಫ್ಟ್ ಕಡೆಗೆ ಪ್ರಸರಿಸಲಾಗುತ್ತದೆಯೋ, ಮತ್ತು ಶಾಫ್ಟ್ ನ ಅಕ್ಷವು ಒಂದನ್ನೊಂದು ತುಂಡರಿಸುತ್ತವೆ ಅಥವಾ ಓರೆಯಾದ ಸ್ಥಿತಿಯಲ್ಲಿರುತ್ತವೆ, ಆಗ ಪ್ರಸರಿಸಲು ಬಳಸಲಾಗುವ ಗಿಯರ್, ಬೆವೆಲ್ ಗಿಯರ್ ಎಂಬುದಾಗಿ ಗುರುತಿಸಲಾಗುತ್ತದೆ. ಬೆವೆಲ್ ಗಿಯರ್ ನ ವರ್ಗೀಕರಣವನ್ನು ಈ ಮುಂದಿನಂತೆ ಮೂರು ವಿಧದಲ್ಲಿ ಮಾಡಲಾಗುತ್ತದೆ.
 
1. ಸ್ಟ್ರೇಟ್ ಬೆವೆಲ್ ಗಿಯರ್
2. ಸ್ಪೈರಲ್ ಆಕಾರದ ಬೆವೆಲ್ ಗಿಯರ್
3. ಹೈಪ್ಯೊಡ್ ಗಿಯರ್
ಸ್ಟ್ರೇಟ್ ಬೆವೆಲ್ ಗಿಯರ್ ನಲ್ಲಿ ಗಿಯರ್ ಪ್ರೊಫೈಲ್ ನೇರವಾಗಿರುತ್ತವೆ. (ಚಿತ್ರ ಕ್ರ. 1)

2_1  H x W: 0 x 
 
ಸ್ಪೈರಲ್ ಆಕಾರವು ಬೆವೆಲ್ ಗಿಯರ್ ನಲ್ಲಿ ಗಿಯರ್ ಪ್ರೊಫೈಲ್ ಸ್ಪೈರಲ್ ಫಾರ್ಮ್ ನ ಆಕಾರದಲ್ಲಿರುತ್ತವೆ. (ಚಿತ್ರ ಕ್ರ. 2)ಹೈಪ್ಯೊಡ್ ಗಿಯರ್ ನಲ್ಲಿ ಗಿಯರ್ ಪ್ರೊಫೈಲ್ ಸ್ಪೈರಲ್ ಆಕಾರದ ಫಾರ್ಮ್ ನಲ್ಲಿರುತ್ತದೆ. (ಸ್ಪೈರಲ್ ಗಿಯರ್ ನಂತೆ). ಇದರ ಹೊರತಾಗಿ ಅದರಲ್ಲಿ ಪಿನಿಯನ್ ನ ಅಕ್ಷದಲ್ಲಿ ಆಫ್ ಸೆಟ್ ಇರುತ್ತದೆ. (ಇದನ್ನು ಹೈಪ್ಯೊಡ್ ಆಫ್ ಸೆಟ್ ಎಂದು ಹೇಳುತ್ತಾರೆ) ಆದ್ದರಿಂದ ಈ ಗಿಯರನ್ನು ಹೈಪ್ಯೊಡ್ ಗಿಯರ್ ಎಂದು ಹೇಳಲಾಗುತ್ತದೆ. (ಚಿತ್ರ ಕ್ರ. 3)
ಮೇಲಿನ ವ್ಯಾಖ್ಯೆಯಂತೆ ಹೈಪ್ಯೊಡ್ ಗಿಯರ್ ಅಂದರೆ ಸ್ಪೈರಲ್ ಆಕಾರದ ಬೆವೆಲ್ ಗಿಯರ್ ಆಗಿರುತ್ತವೆ, (ಅವುಗಳಲ್ಲಿ ಕೇವಲ ಹೈಪ್ಯೊಡ್ ಅಥವಾ ಪಿನಿಯನ್ ಆಫ್ ಸೆಟ್ ಇರುತ್ತದೆ) ಎಂಬುದು ಗಮನಕ್ಕೆ ಬರುತ್ತದೆ. ಆದರೂ ಕೂಡಾ ಅವುಗಳಲ್ಲಿ ಇನ್ನಿತರ ಹಲವಾರು ವೈಶಿಷ್ಟ್ಯಗಳಿವೆ.
 
ಒಂದರಲ್ಲೊಂದು ಅಳವಡಿಸಲ್ಪಡುವ ಎರಡು ಗಿಯರ್ ಗಳಲ್ಲಿರುವ ಸಂಪರ್ಕದ ಪ್ಯಾಟರ್ನ್ ಇದು ಸಾಮಾನ್ಯ ಮತ್ತು ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ಗಿಯರ್ ನಲ್ಲಿರುವ ಮೂಲಭೂತ ವ್ಯತ್ಯಾಸವಾಗಿದೆ.
 
ಸ್ಪರ್ ಗಿಯರ್ ಮತ್ತು ಹೆಲಿಕಲ್ ಗಿಯರ್ ನಲ್ಲಿರುವ ಸಂಪರ್ಕ, ಗಿಯರ್ ನ ಪಿಚ್ ಲೈನ್ ಗೆ ತಾಗಿರುವ ರೇಖೆಗಳ ಸಂಪರ್ಕದಲ್ಲಿರುತ್ತದೆ. ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ನ ಕುರಿತು ಹಲ್ಲುಗಳ ಸರ್ಫೇಸ್ ಏರಿಯಾ ಸಂಪರ್ಕದಲ್ಲಿರುತ್ತದೆ. ಈ ಸರ್ಫೇಸ್ ಸಂಪರ್ಕ ಏರಿಯಾದಿಂದಾಗಿ ಸ್ಪರ್ ಮತ್ತು ಹೆಲಿಕಲ್ ಗಿಯರ್ ನ ಹೋಲಿಕೆಯಲ್ಲಿ ಈ ಗಿಯರ್ ಮೂಲಕ ಹೆಚ್ಚು ಶಕ್ತಿ ಅಥವಾ ಭಾರವು ಪ್ರಸರಿಸಲ್ಪಡುತ್ತದೆ.
 
ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ಇದು ಯಾವಾಗಲೂ ಒಂದು ರೀತಿಯ ಸಂಯೋಗವಾಗಿರುತ್ತದೆ. ಅವುಗಳು ಜೋಡಿಯಲ್ಲಿಯೇ ಉಪಲಬ್ಧವಿರುತ್ತವೆ. ಕ್ರೌನ್ ವೀಲ್ ಮತ್ತು ಪಿನಿಯನ್ ನ ಉತ್ಪಾದನೆಯನ್ನು ಸ್ವತಂತ್ರವಾಗಿಯೇ ಮಾಡಲಾಗುತ್ತದೆ. ಆದರೂ ಕೂಡಾ ಮಶಿನ್ ನಲ್ಲಿರುವ ಮೊದಲ ತುಂಡಿನ ಹೋಲಿಕೆಯನ್ನು ಮಾಸ್ಟರ್ ಗಿಯರ್ ಅಥವಾ ಪಿನಿಯನ್ ನೊಂದಿಗೆ ಮಾಡಲಾಗುತ್ತದೆ. ಇದನ್ನು ಗಿಯರ್ ಜೋಡಿಯ ಸಾಫ್ಟ್ ಚೆಕಿಂಗ್ ಎಂದೂ ಹೇಳುತ್ತಾರೆ. ಪ್ರಕ್ರಿಯೆಯ ಪ್ರವಾಹದ ಅಭ್ಯಾಸವನ್ನು ಮಾಡುವಾಗ ನಾವು ಈ ಸಾಫ್ಟ್ ಚೆಕಿಂಗ್ ನ ವಿವರಗಳನ್ನು ಚರ್ಚಿಸೋಣ. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಒಂದರಲ್ಲೊಂದು ಅಳವಡಿಸಲ್ಪಡುವ ಗಿಯರ್ ಜೋಡಿಯಾಗಿ ತಯಾರಿಸಲ್ಪಡುತ್ತವೆ ಮತ್ತು ಪಿನಿಯನ್ ನ ತಯಾರಿಕೆಯಲ್ಲಿ ಅದರ ಮಾಸ್ಟರ್ ಕ್ರೌನ್ ವೀಲ್ ಯಂತ್ರಣೆಯಲ್ಲಿ ಅದನ್ನು ಮಾಸ್ಟರ್ ಪಿನಿಯನ್ ನೊಂದಿಗೆ ಹೋಲಿಸಲಾಗುತ್ತದೆ. ಯೋಗ್ಯವಾಗಿರುವ ಮೌಂಟಿಂಗ್ ಆಯಾಮಗಳು (ಡೈಮೆನ್ಶನ್ಸ್) ಹಲ್ಲುಗಳ ಯೋಗ್ಯ ಸಂಪರ್ಕವನ್ನು ಸಾಧಿಸಲು ಇದು ಅತ್ಯಾವಶ್ಯಕವಾಗಿದೆ.

5_2  H x W: 0 x 
 
ಯೋಗ್ಯವಾದ ಸಂಪರ್ಕದ ಸ್ಥಿತಿ ಮತ್ತು ಕ್ರೌನ್ ವೀಲ್ ಮತ್ತು ಪಿನಿಯನ್ ನ ಮೌಂಟಿಂಗ್ ಆಯಾಮ (ಡೈಮೆನ್ಶನ್ಸ್) ಇವುಗಳ ಸಂಯೋಗವು ಗಿಯರ್ ನಲ್ಲಿ ಪ್ರಮುಖವಾದ ಆವಶ್ಯಕತೆಯಾಗಿರುತ್ತದೆ. ಬೆಕ್ ಲೆಸ್ ಮತ್ತು ಹಲ್ಲುಗಳ ಇಂಟರ್ ಫರನ್ಸ್) ಇದರ ಮಾಪನಗಳನ್ನೂ ಉತ್ಪಾದನೆಯಲ್ಲಿ ಪರಿಶೀಲಿಸಬೇಕಾಗುತ್ತದೆ ಮತ್ತು ಇದರಲ್ಲಿರುವ ಘಟಕಗಳನ್ನು ಕಾಪಾಡಬೇಕಾಗುತ್ತದೆ.
 
ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ಗಿಯರ್ ತಿಳಿಯಲು ಈ ಗಿಯರ್ ನ ಕುರಿತು ಬಳಸಲಾಗುವ ಕೆಲವು ವಿಶಿಷ್ಟವಾದ ಗಿಯರ್ ಗಳ ಸಂಜ್ಞೆಗಳನ್ನು (ಕೋಷ್ಟಕ ಕ್ರ. 1) ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಸ್ಪೈರಲ್ ಆಕಾರ ಮತ್ತು ಹೈಪ್ಯೊಡ್ ಗಿಯರ್ ಕುರಿತಾದ ವಿವರಗಳನ್ನು ಚಿತ್ರ ಕ್ರ. 4 ಮತ್ತು 5 ರಲ್ಲಿ ತೋರಿಸಲಾಗಿದೆ.
 
ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ಗಿಯರ್ ನ ಡಿಸೈನ್ ನ ನಿಯತಾಂಕಗಳು (ಪ್ಯಾರಾಮೀಟರ್)
ಸ್ಪೈರಲ್ ಆಕಾರ ಅಥವಾ ಹೈಪ್ಯೊಡ್ ಗಿಯರ್ ಡಿಸೈನ್ ಮಾಡುವಾಗ ಈ ಕೆಳಗಿನ ನಿಯತಾಂಕಗಳ ಕುರಿತು ವಿಚಾರ ಮಾಡಲಾಗುತ್ತದೆ.

5_1  H x W: 0 x 
 
1. ಗಿಯರ್ ಜಾಮೆಟ್ರಿ
2. ಸಾಮರ್ಥ್ಯದ ಗಣನೆ
3. ಮಶಿನ್, ಟೂಲಿಂಗ್, ಕಟರ್ ಮತ್ತು ಇನ್ನಿತರ ಉತ್ಪಾದನೆಗಳ ಸೌಲಭ್ಯಗಳ ಉಪಲಬ್ಧವಿರುವ ಮೂಲಗಳನ್ನು ಬಳಸಿ ಯಂತ್ರಣೆ ಅಥವಾ ಉತ್ಪಾದನೆಯನ್ನು ಮಾಡುವುದು ಸೂಕ್ತ.
ಈ ಎಲ್ಲ ಅಂಶಗಳನ್ನು ಗಮನಿಸಿ ಮತ್ತೆ ಮತ್ತೆ ಪರೀಕ್ಷಣೆಯನ್ನು ಮಾಡುವುದು ಮತ್ತು ದುರಸ್ತಿಯನ್ನೂ ಮಾಡಿ ಐಟರೇಶನ್ ರೀತಿಯಲ್ಲಿ ಡಿಸೈನ್ ಗೆ ಅಂತಿಮ ರೂಪವನ್ನು ನೀಡಲಾಗುತ್ತದೆ.
 
ಗಿಯರ್ ನ ಜಾಮೆಟ್ರಿ : ಉದ್ದ, ಅಗಲ, ಎತ್ತರ ಇತ್ಯಾದಿ ನಿಯತಾಂಕಗಳ (ಪ್ಯಾರಾಮೀಟರ್) ಭಾಷೆಯಲ್ಲಿ ಗಿಯರ್ ಬಾಕ್ಸ್ ನ ಸಂಪೂರ್ಣವಾದ ಆಕಾರವನ್ನು ಜಾಮೆಟ್ರಿಯ ಮೂಲಕ ನಿರ್ಧರಿಸಲಾಗುತ್ತದೆ. ಕ್ರೌನ್ ವೀಲ್ ಗಳ* ಹೆಚ್ಚಿನ ವ್ಯಾಸ, ಅದರ ದಪ್ಪ, ಗಿಯರ್ ಬಾಕ್ಸ್ ಹೌಸಿಂಗ್ ನಲ್ಲಿ ತುಂಬುವಷ್ಟೇ ಪಿನಿಯನ್ ನ ಉದ್ದ, ಹೈಪ್ಯೊಡ್ ಪಿನಿಯನ್ ಆಫ್ ಸೆಟ್ ನ ಕುರಿತು ಗ್ರೌಂಡ್ ಕ್ಲಿಯರನ್ಸ್ ಇವೆಲ್ಲದರ ಕುರಿತಾದ ನಿರ್ಣಯವು ಜಾಮೆಟ್ರಿಯಲ್ಲಿಯೇ ಅವಲಂಬಿಸಿರುತ್ತದೆ.

7_2  H x W: 0 x 
 
ಸಾಮರ್ಥ್ಯ (ಸ್ಟ್ರೆಂಥ್)
ಜಾಮೆಟ್ರಿಗೆ ಕೊನೆಯ ರೂಪ ಕೊಟ್ಟನಂತರ ಮುಂದಿನ ಹಂತವೆಂದರೆ ಆವಶ್ಯಕವಿರುವ ಔಟ್ ಪುಟ್ ನ ಚಲನೆಗೆ ಇನ್ ಪುಟ್ ಚಲನೆಯಲ್ಲಿ ಎಷ್ಟು ಮತ್ತು ಹೇಗೆ ಇಳಿತ ಮಾಡುವುದು ಎಂಬುದರ ಕುರಿತು ತೀರ್ಮಾನಿಸಬೇಕಾಗುತ್ತದೆ. ಇಳಿತವನ್ನು ನಿರ್ಧರಿಸಿದ ನಂತರ ಕ್ರೌನ್ ವೀಲ್ ಮತ್ತು ಪಿನಿಯನ್ ನಲ್ಲಿರುವ ಹಲ್ಲುಗಳ ಸಂಖ್ಯೆನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಕಮರ್ಶಿಯಲ್ ವಾಹನಗಳಿಗೆ ಅಥವಾ ಟ್ರಕ್ ಗಳಿಗೆ ವೇಗ ಮತ್ತು ಟಾರ್ಕ್ ನ ಕುರಿತಾದ ವಿಚಾರವನ್ನು ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.
 
ಇಂಜಿನ್ ನ ಆರ್.ಪಿ.ಎಮ್. ಮತ್ತು ಮೊದಲ, ಎರಡನೇ, ಮೂರನೇ, ನಾಲ್ಕನೇ ಮತ್ತು ರಿವರ್ಸ್ ಗಿಯರ್ ನಲ್ಲಿರುವ ಗಿಯರ್ ಬಾಕ್ಸ್ ನ ಗುಣಾಕಾರವು ತಿಳಿದಿದ್ದಲ್ಲಿ ಕ್ರೌನ್ ವೀಲ್ ಮತ್ತು ಪಿನಿಯನ್ ನಲ್ಲಿರುವ ಹಲ್ಲುಗಳ ಸಂಖ್ಯೆದನ್ನು ನಿರ್ಧರಿಸಬಹುದು.

7_1  H x W: 0 x 
 
ಒಂದು ಬಾರಿ ಕ್ರೌನ್ ವೀಲ್ ಮತ್ತು ಪಿನಿಯನ್ ನಲ್ಲಿರುವ ಹಲ್ಲುಗಳ ಸಂಖ್ಯೆಯನ್ನು ನಿರ್ಧರಿಸಿದಲ್ಲಿ, ಬೆಂಡಿಂಗ್, ಸ್ಕೋರಿಂಗ್, ಫಟಿಗ್ ಮತ್ತು ಪಿಟಿಂಗ್ ನಲ್ಲಿ ಗಿಯರ್ ಹಲ್ಲುಗಳ ಬಲದಿಂದ ಲೆಕ್ಕಿಸ ಬೇಕಾಗುತ್ತದೆ. ವಾಹನ ಉದ್ಯಮಗಳಲ್ಲಿ ಅಪ್ಲಿಕೇಶನ್ ನ ಕುರಿತು ಗಿಯರ್ ಬಾಕ್ಸ್ ನಿಂದ ಬರುವ ಎಲ್ಲ ಗಿಯರ್ ಗಳ ಗುಣಾಕಾರವು ಟಾರ್ಕ್ ಗೆ ಪರಿಶೀಲಿಸಿ ನೋಡಬೇಕಾಗುತ್ತದೆ. ಕ್ರೌನ್ ವೀಲ್ ಮತ್ತು ಪಿನಿಯನ್ ನ ಹಲ್ಲುಗಳ ಥೆರಾಟಿಕಲ್ ಬಾಳಿಕೆಯು ಮೇಲಿನ ಎಲ್ಲ ಆವಶ್ಯಕತೆಗಳಲ್ಲಿ ಸಮತೋಲಿತವಾಗಿವೆಯೇ, ಎಂಬುದರ ಕುರಿತು ಖಾತರಿ ವಹಿಸಬೇಕು. ಲೆಕ್ಕ ಮಾಡುವಾಗ ಈ ಗಿಯರ್ ಬಾಕ್ಸ್ ನಲ್ಲಿ ಬಳಸಲಾಗುವ ಬೇರಿಂಗ್ ನಲ್ಲಿ ಬರುವ ಅಕ್ಷೀಯ ಮತ್ತು ಆರೀಯ ಥ್ರಸ್ಟ್ ನಿರ್ಧರಿಸಬೇಕಾಗುತ್ತದೆ. ಹಾಗೆಯೇ ಬೇರಿಂಗ್ ತಯಾರಿಸುವವರ ಕೆಟೆಲಾಗ್ ನಲ್ಲಿ ನೀಡಿರುವ ಆಪ್ಟಿಮೈಜೆಶನ್ ನ ಮಿತಿಯಲ್ಲಿರುವುದು ಅತ್ಯಾವಶ್ಯಕವಾಗಿದೆ.

9_2  H x W: 0 x 
 
ಯಂತ್ರಣೆ/ಉತ್ಪಾದನೆಯ ವ್ಯವಹಾರ್ಯತೆ
ಒಟ್ಟಾರೆ ಡಿಸೈನ್ ಗೆ ಕೊನೆಯ ರೂಪವನ್ನು ನೀಡುವ ಮುಂಚೆ ವಿಚಾರಿಸಲಾಗುವ ಮಹತ್ವದ ಕ್ರೈಟೆರಿಯಾಗಳಲ್ಲಿ ಒಂದಾಗಿದೆ. ಡಿಸೈನ್ ಗೆ ಕೊನೆಯ ರೂಪವನ್ನು ನೀಡುವಾಗ ಯಂತ್ರಣೆ ಅಥವಾ ತಪಾಸಣೆಯ ಸಾಮರ್ಥ್ಯದ ಕುರಿತು ವಿಚಾರ ಮಾಡುವುದೂ ಅಗತ್ಯವಾಗಿದೆ. ಡಿಸೈನ್ ಮಾಡಿರುವ ಮಾಪನಗಳು ಪಡೆಯಲು ತಮ್ಮ ಮಶಿನ್ ಸಕ್ರಿಯವಾಗಿರಬೇಕು. ಇದರ ಹೊರತಾಗಿ ಬೇಕಾಗುವ ಕಟರ್ ಹೆಡ್ಸ್, ಇನ್ನಿತರ ಟೂಲಿಂಗ್ ಗಳಲ್ಲಿ ಡಿಸೈನ್ ನಲ್ಲಿ ನೀಡಿರುವ ಮೌಲ್ಯವನ್ನು ಅಳವಡಿಸುವಲ್ಲಿ ಅದು ಸಕ್ರಿಯವಾಗಿರುವುದು ಅತ್ಯಾವಶ್ಯಕವಾಗಿದೆ. ಒಂದು ವೇಳೆ ಈ ಮೌಲ್ಯಗಳ ತಮ್ಮಲ್ಲಿರುವ ಮಶಿನ್ ನ ಶ್ರೇಣಿಯಲ್ಲಿ ಇಲ್ಲದಿದ್ದಲ್ಲಿ ಸಂಪೂರ್ಣ ಕೆಲಸದ ರೀತಿಯ ಮೌಲ್ಯಮಾಪನವನ್ನು ಮತ್ತೆ ಮಾಡಿ ಜಾಮೆಟ್ರಿ, ಸಾಮರ್ಥ್ಯ ಮತ್ತು ಯಂತ್ರಣೆ ಅಥವಾ ಉತ್ಪಾದನೆಯ ಸೌಲಭ್ಯಗಳಲ್ಲಿ ನಮೂದಿಸಿರುವ ಎಲ್ಲ ಮಿತಿಗಳಲ್ಲಿರಬಹುದಾದಂತಹ ಡಿಸೈನ್ ಮಾಡಬೇಕಾಗುತ್ತದೆ. ಇದರಿಂದಾಗಿ ಪುನರಾವೃತ್ತಿಯ ರೀತಿಯಲ್ಲಿ (ಐಟರೇಶನ್) ಡಿಸೈನ್ ಗೆ ಕೊನೆಯ ರೂಪವನ್ನು ನೀಡಲಾಗುತ್ತದೆ. ಅನೇಕ ರೀತಿಯ ಕೆಲಸಗಳಲ್ಲಿ ಡಿಸೈನ್ ಕೊನೆಯ ಸ್ವರೂಪದಲ್ಲಿ ತಯಾರಿಸಲು ಈ ಪ್ರಕ್ರಿಯೆಯನ್ನು 50 ರಿಂದ 60 ಸಲ ಮಾಡಬೇಕಾಗುತ್ತದೆ.
 
ಸ್ಪೈರಲ್ ಆಕಾರ ಮತ್ತು ಹೈಪ್ಯೊಡ್
ಗಿಯರ್ ನ ಹೋಲಿಕೆ
ಈ ಹಿಂದೆ ಸ್ಪಷ್ಟ ಪಡಿಸಿದಂತೆ ಈ ಎರಡು ವಿಧಗಳಲ್ಲಿ ಗಿಯರ್ ಹಲ್ಲುಗಳ ಪ್ರೊಫೈಲ್ ಸ್ಪೈರಲ್ ಆಕಾರದಲ್ಲಿರುತ್ತದೆ. ಇದರ ಹೊರತಾಗಿ ಹೈಪ್ಯೊಡ್ ಗಿಯರ್ ನಲ್ಲಿ ಪಿನಿಯನ್ ಆಫ್ ಸೆಟ್ ಇರುತ್ತದೆ (ಪಿನಿಯನ್ ನ ಅಕ್ಷವು ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಸರಿದಿರುತ್ತದೆ). ಈ ಪಿನಿಯನ್ ಆಫ್ ಸೆಟ್ ಆಗಿರುತ್ತದೆ, ಅದ್ದರಿಂದ ಇದನ್ನು ಹೈಪ್ಯೊಡ್ ಗಿಯರ್ ಎಂದು ಹೇಳಲಾಗುತ್ತದೆ.

9_1  H x W: 0 x 
 
ಹೈಪ್ಯೊಡ್ ಆಫ್ ಸೆಟ್ ನಿಂದಾಗಿ ಪಿನಿಯನ್ ನ ವ್ಯಾಸ (ಪಿಚ್ ವ್ಯಾಸ) ಹೆಚ್ಚಾಗುತ್ತದೆ ಮತ್ತು ಪಿನಿಯನ್ ನ ಸಾಮರ್ಥ್ಯವೂ ಹೆಚ್ಚುತ್ತದೆ. ಇದೇ ಕಾರಣದಿಂದ ವಾಹನೋದ್ಯೋಗದಲ್ಲಿ ಹೆಚ್ಚಾಗಿ ಅಪ್ಲಿಕೇಶನ್ ನಲ್ಲಿರುವ ಹಿಂಭಾಗದ (ರಿಯರ್) ಎಕ್ಸಲ್ ಶಕ್ತಿಯ ಪ್ರಸರಣದಲ್ಲಿ ಹೈಪ್ಯೊಡ್ ಗಿಯರ್ ಬಳಸಲಾಗುತ್ತದೆ.
 
ಪಿನಿಯನ್ ಅಕ್ಷದಲ್ಲಿ ಬದಲಾವಣೆ ಆಗಿದ್ದರಿಂದ ಕ್ರೌನ್ ವೀಲ್ ನ ಸಂಪರ್ಕದಲ್ಲಿ ಬರುವ ಗಿಯರ್ ನ ಅಗಲವು ಹೆಚ್ಚುತ್ತದೆ. ಇದರಿಂದಾಗಿ ಸಂಪರ್ಕ ಕ್ಷೇತ್ರವು ಹೆಚ್ಚುತ್ತದೆ, ಭಾರ ಅಥವಾ ಟಾರ್ಕ್ ಸಾಗಿಸಲು ಉಚ್ಚ ಸಾಮರ್ಥ್ಯವು ಲಭಿಸುತ್ತದೆ ಮತ್ತು ಪಿನಿಯನ್ ಬೇರಿಂಗ್ ನಲ್ಲಿರುವ ಅಕ್ಷೀಯ ಮತ್ತು ಆರೀಯ ಬಲವು ಕಡಿಮೆಯಾಗುತ್ತದೆ. ಇದರಿಂದಾಗಿ ಪಿನಿಯನ್ ಬೇರಿಂಗ್ ನ ಬಾಳಿಕೆಯು ವೃದ್ಧಿಸುತ್ತದೆ. ಹಲ್ಲುಗಳ ಸಂಪರ್ಕ ಕ್ಷೇತ್ರದಲ್ಲಾಗುವ ಹೆಚ್ಚಳದಿಂದಾಗಿ ಸ್ಕೋರಿಂಗ್ ನ ಪ್ರಭಾವವು ಕಡಿಮೆಯಾಗುತ್ತದೆ ಮತ್ತು ಬಲ ಅಥವಾ ಟಾರ್ಕ್ ಪ್ರರಸಣವು ಹೆಚ್ಚು ಸುಲಭ ಮತ್ತು ಸಹಜವಾಗಿ ಆಗುತ್ತದೆ.
 
ಪಿನಿಯನ್ ಮತ್ತು ಕ್ರೌನ್ ವೀಲ್ ಗೋಸ್ಕರ ಯೋಗ್ಯವಾದ ಸಮತೋಲಿತ ಹಲ್ಲುಗಳ ಶಕ್ತಿಯು (ಟೂಥ್ ಸ್ಟ್ರೆಂಗ್ಥ್) ಲಭಿಸುತ್ತದೆ. ಸಾಮಾನ್ಯವಾದ ಪರಿಸ್ಥಿತಿಯಲ್ಲಿ (ಉದಾಹರಣೆ, ಸ್ಪೈರಲ್ ಆಕಾರದ ಗಿಯರ್) ಪಿನಿಯನ್ ನ ಸುತ್ತುವಿಕೆ ಯಾವಾಗಲೂ ಹೆಚ್ಚಾಗಿರುವುದರಿಂದ ಪಿನಿಯನ್ ಹಾಳಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ.
 
ಉತ್ಪಾದನೆಯ ಪ್ರಕ್ರಿಯೆಯ ಕ್ರಮಾನುಗತಿ
ಡಿಸೈನ್ ಗೆ ಅಂತಿಮ ರೂಪವನ್ನು ನೀಡಿದ ನಂತರ ಗಿಯರ್ ತಯಾರಿಕೆಯ ಕುರಿತು ಚರ್ಚಿಸೋಣ. ಪ್ರಕ್ರಿಯೆಯ ಕ್ರಮಾನುಗತಿಯು ಸಾಮಾನ್ಯವಾಗಿ ಈ ಮುಂದಿನಂತಿರುತ್ತದೆ.
 
1.ಲೋಹಗಳಿಗೆ ಶೇಪಿಂಗ್ (ಪೋರ್ಜಿಂಗ್ ಅಥವಾ ಕಾಸ್ಟಿಂಗ್ ಅಥವಾ ಬಾರ್ ಇನ್ ಪುಟ್)
2.ಪೂರ್ವ ಯಂತ್ರಣೆ : ಬೇರಿಂಗ್ ಸರ್ಫೇಸ್ ನಲ್ಲಿ ಗ್ರೈಂಡಿಂಗ್ ಗೋಸ್ಕರ ಸಾಕಷ್ಟು ಜಾಗವನ್ನಿಟ್ಟು ಗಿಯರ್ ಬ್ಲೇಂಕ್ ನ ಸಿ.ಎನ್.ಸಿ. ಯಂತ್ರಣೆ.
3.ಗಿಯರ್ ಕಟಿಂಗ್ : ಗ್ಲೀಸನ್ ಅಥವಾ ಆರ್ಲಿಕಾನ್
4.ಸಂಪರ್ಕ ಸ್ಥಿತಿ, ಬ್ಯಾಕ್ ಲ್ಯಾಶ್, ಅಡ್ಡಿ ಇತ್ಯಾದಿಗಳನ್ನು ಪರಿಶೀಲಿಸುವುದು.
5.ಸಾಫ್ಟ್ ಚೆಕ್ ನಲ್ಲಿ ಉಷ್ಣತೋಪಚಾರದಲ್ಲಿ ಉಂಟಾಗುವ ವಿಕಾರಗಳ ಕುರಿತು ವಿಚಾರ ಮಾಡಿ ಕಾಂಟ್ಯಾಕ್ಟ್ ಪ್ಯಾಟರ್ನ್ ಇಡಲಾಗುತ್ತದೆ.
6.ಸಾಫ್ಟ್ ಮಾಸ್ಟರ್ ಕ್ರೌನ್ ವೀಲ್ ಮತ್ತು ಮಾಸ್ಟರ್ ಪಿನಿಯನ್ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಮಾಸ್ಟರ್ ಗಿಯರ್ ಪ್ರತಿಯೊಂದು ಸೆಟಪ್ ಬದಲಾಯಿಸಿದನಂತರ ಅಥವಾ ಕಟರ್ ಬದಲಾಯಿಸಿದ ನಂತರ ಬಳಸಲಾಗುತ್ತವೆ. ಕಾಂಟ್ಯಾಕ್ಟ್ ಪ್ಯಾಟರ್ನ್ ಅಥವಾ ಪೋಸಿಶನ್ ಇದು ಮಾಸ್ಟರ್ ಜೋಡಿಯೊಂದಿಗೆ ನಿಖರವಾಗಿ ಸರಿಹೊಂದಿಸಬೇಕಾಗುತ್ತದೆ. ಉಷ್ಣತೋಪಚಾರದ ನಂತರ ಯಾಗ್ಯವಾದ ಕಾಂಟ್ಯಾಕ್ಟ್ ಪ್ಯಾಟರ್ನ್ ಅಥವಾ ಪೋಸಿಶನ್ ಕಾಪಾಡುವುದೇ ಇದರ ಲಾಭವಾಗಿದೆ.
 
ಉಷ್ಣತೋಪಚಾರ
ಉಷ್ಣತೋಪಚಾರದ ಕ್ರಮಾನುಗತಿಯನ್ನು ಈ ಮುಂದೆ ನೀಡಲಾಗಿದೆ.
1. ಕೇಸ್ ಕಾರ್ಬುರೈಸಿಂಗ್ (ಉಷ್ಣಾಂಶ @950˚ ಯಿಂದ 1100˚ C, ಸಮಯ 3 ರಿಂದ 4 ಗಂಟೆಗಳು).
2. ಸರ್ಫೇಸ್ ನಲ್ಲಿ ಕಾರ್ಬನ್ ನ ಪ್ರವೇಶ.
3. ನೆನೆಯುವ (ಸೋಕಿಂಗ್ ) ಕಾಲಾವಧಿ 1 ರಿಂದ 2 ಗಂಟೆಗಳು @ 800˚ C
4. ಕೇಸ್ ಹಾರ್ಡನಿಂಗ್ @ 850˚ C
5. ನೀರು ಎರಿಸುವುದು (ಟೆಂಪರಿಂಗ್). ಹಿಂಭಾಗದಲ್ಲಿರುವ ಫೇಸ್ ನ ಸಮತಟ್ಟನ್ನು ಕಾಪಾಡಲು ಕ್ರೌನ್ ವೀಲ್ ನ ಕ್ವೆನ್ಚಿಂಗ್ ಮಾಡುವಾಗ ಪ್ರೆಸ್ ಕ್ವೆಂಚಿಂಗ್ ಬಳಸಲಾಗುತ್ತದೆ.
6. ಫಿನಿಶ್ ಯಂತ್ರಣೆ (ಬೇರಿಂಗ್ ವ್ಯಾಸ ಗ್ರೈಂಡಿಂಗ್)
7. ಗಿಯರ್ ನ ಜೋಡಿಯ ಲ್ಯಾಪಿಂಗ್ ಮತ್ತು ಜೋಡಿ ತಯಾರಿಸುವುದು. 
ಗಿಯರ್ ಜೋಡಿ ಲ್ಯಾಪಿಂಗ್ : ಈ ಹಂತದಲ್ಲಿ ಕ್ರೌನ್ ವೀಲ್ ಮತ್ತು ಪಿನಿಯನ್ ಇವುಗಳ ಜೋಡಿಯನ್ನು ತಯಾರಿಸಲಾಗುತ್ತದೆ. ಲ್ಯಾಪಿಂಗ್ ನಲ್ಲಿ ಹಲ್ಲುಗಳ ಪ್ರೊಫೈಲ್ ಮತ್ತು ಆವಶ್ಯಕವಿರುವ ಕಾಂಟ್ಯಾಕ್ಟ್ ಏರಿಯಾ ಕೂಡಾ ನುಣುಪಾಗಿ ಮಾಡಲಾಗುತ್ತದೆ. ಇದರಿಂದಾಗಿ ಕ್ರೌನ್ ವೀಲ್ ಮತ್ತು ಪಿನಿಯನ್ ಮೌಂಟಿಂಗ್ ಗೋಸ್ಕರ ಯೋಗ್ಯವಾದ ಮೌಂಟಿಂಗ್ ನಿಯತಾಂಕಗಳೂ (ಪ್ಯಾರಾಮೀಟರ್) ಲಭಿಸುತ್ತವೆ.
8. ಮೌಂಟಿಂಗ್ ನಿಯತಾಂಕಗಳ (ಪ್ಯಾರಾಮೀಟರ್) ಸೆಟಿಂಗ್ ಮತ್ತು ಜೋಡಿಗಳಿಗೆ ಚಿಹ್ನೆಯನ್ನು ನೀಡಲು ಪರೀಕ್ಷೆ. (ಹಾರ್ಡ್ ಚೆಕ್).
 
ಜೋಡಿಗಳಿಗೆ ಚಿಹ್ನೆಯನ್ನು ನೀಡುವ ಹಂತದಲ್ಲಿ ಲ್ಯಾಪಿಂಗ್ ಮಾಡಿದ ನಂತರ ಜೋಡಿ ಒಟ್ಟು ಮಾಡಿರುವ ಕ್ರೌನ್ ವೀಲ್ ಮತ್ತು ಪಿನಿಯನ್ ಇವುಗಳಲ್ಲಿ ಬ್ಯಾಕ್ ಲ್ಯಾಶ್, ಸಂಪರ್ಕ, ಮೌಂಟಿಂಗ್ ನ ಆಯಾಮಗಳು ಇತ್ಯಾದಿ ಯೋಗ್ಯವಾಗಿ ಇರುವುದರ ಕುರಿತು ಖಾತರಿ ವಹಿಸಲಾಗುತ್ತದೆ. ಈ ಬಿಂದುವಿನಿಂದ ಅದು ಕೊನೆಯ ಫಿಟ್ ಮೆಂಟ್ ಆಗುವ ತನಕ ಈ ಜೋಡಿಯನ್ನು ಒಟ್ಟಾಗಿಯೇ ಇಡಲಾಗುತ್ತದೆ.
 
ಜೋಡಿಗಳಿಗೆ ಚಿಹ್ನೆಗಳನ್ನು ನೀಡುವಾಗ ಅವುಗಳಲ್ಲಿ ವೈಯಕ್ತಿಕವಾದ ಭಾಗ ಕ್ರಮಾಂಕ ಮತ್ತು ಗಿಯರ್ ಜೋಡಿಯ ಅಸೆಂಬ್ಲಿ ಮಾಡುವಾಗ ಕಾಪಾಡುವಂತಹ ಯೋಗ್ಯವಾದ ಮೌಂಟಿಂಗ್ ದೂರವನ್ನು ಬರೆದಿಡಲಾಗುತ್ತದೆ. ಗ್ಲೀಸನ್ ಅಥವಾ ಆರ್ಲಿಕಾನ್ ಕಟಿಂಗ್ ರೀತಿಯಲ್ಲಿ (ಚಿತ್ರ ಕ್ರ. 6) ಕಾಪಾಡಲಾಗುವ ಸಂಪರ್ಕದ ಕಾಂಟ್ಯಾಕ್ಟ್ ಪ್ಯಾಟರ್ನ್ ನ ವಿವರಗಳು ಈ ಮುಂದಿನಂತಿವೆ.
 
ಗ್ಲೀಸನ್ : ಪ್ರಾರಂಭದಲ್ಲಿ ಉಲ್ಲೇಖಿಸಿದಂತೆ ಇಲ್ಲಿ ಗಿಯರ್ ನ ಹಲ್ಲುಗಳ ಮುಂಭಾಗವು ಸ್ವಲ್ಪ ಇಳಿತವಿರುವ ಆಕಾರದಲ್ಲಿರುತ್ತದೆ. ಹೀಲ್ ಎಂಡ್ ನಲ್ಲಿ ಹಲ್ಲುಗಳ ಆಳ ಟೋ ಎಂಡ್ ನಲ್ಲಿರುವ ಹಲ್ಲುಗಳ ಆಳದ ಹೋಲಿಕೆಯಲ್ಲಿ ಹೆಚ್ಚು ಇರುತ್ತದೆ. ಹಾಗೆಯೇ ಗಿಯರ್ ನ ತುದಿಯ (ಟಿಪ್) ಅಗಲವೂ ಮುಂಭಾಗದಲ್ಲಿ ಇಳಿತವಿರುವುದಾಗಿರುತ್ತದೆ. ಹೀಲ್ ಎಂಡ್ ನಲ್ಲಿರುವ ಸಂಪರ್ಕ ಪಿಚ್ ರೇಖೆಯಲ್ಲಿ ಕೇಂದ್ರೀಕರಿಸಲ್ಪಟ್ಟಿರುತ್ತದೆ. ಪೂರ್ಣ ಭಾರವಿರುವ ಸ್ಥಿತಿಯಲ್ಲಿ ಅದು ಚುಕ್ಕೆಗಳಿರುವ ರೇಖೆಗಳಲ್ಲಿ ತೋರಿಸಿದಂತೆ ಟೋ ಎಂಡ್ ನ ದಿಕ್ಕಿನಲ್ಲಿ ಹರಡುತ್ತದೆ. ಈ ರೀತಿಯಲ್ಲಿ ಟಾರ್ಕ್ ನ ಪ್ರಸರಣದ ಸಂಪೂರ್ಣ ಭಾರವು ಈ ಯಂತ್ರಭಾಗಗಳ ಮೂಲಕ ಪಡೆಯಲಾಗುತ್ತದೆ.
 
ಆರ್ಲಿಕಾನ್ : ಈ ಪ್ರಣಾಳಿಕೆಯಲ್ಲಿ ಹೀಲ್ ಎಂಡ್ ಮತ್ತು ಟೋ ಎಂಡ್ ಎರಡೂ ಕಡೆಗಳಲ್ಲಿ ಹಲ್ಲುಗಳ ಆಳವು ಒಂದೇ ರೀತಿಯಲ್ಲಿರುತ್ತದೆ. ಗಿಯರ್ ನ ತುದಿಯ ಅಗಲವೂ ಒಂದೇ ರೀತಿಯಲ್ಲಿರುತ್ತದೆ. ಪಿಚ್ ರೇಖೆಯಲ್ಲಿ ಹಲ್ಲುಗಳ ಮಧ್ಯಭಾಗದಲ್ಲಿ ಸಂಪರ್ಕವು ಕೇಂದ್ರೀಕರಿಸಲ್ಪಡುತ್ತದೆ. ಸಂಪೂರ್ಣ ಭಾರವಿರುವ ಸ್ಥಿತಿಯಲ್ಲಿ ಆ ಬಿಂದು ರೇಖೆಗಳ ಮೂಲಕ ತೋರಿಸಿದಂತೆ ಟೋ ಎಂಡ್ ಮತ್ತು ಹೀಲ್ ಎಂಡ್ ಎರಡೂ ದಿಕ್ಕುಗಳಲ್ಲಿ ಹರಡುತ್ತದೆ. ಈ ರೀತಿಯಲ್ಲಿ ಟಾರ್ಕ್ ಪ್ರಸರಣದ ಎಲ್ಲ ಭಾರವು ಈ ಯಂತ್ರಭಾಗಗಳ ಮೂಲಕ ಪಡೆಯಲಾಗುತ್ತದೆ.

11_1  H x W: 0  
 
ಚಿಪ್ಪಣಿ : ಆಧುನಿಕ ಸಿ.ಎನ್.ಸಿ. ಮಶಿನ್ ನ ಬಳಕೆ ಸ್ಪೈರಲ್ ಆಕಾರ ಮತ್ತು ಹೈಪಾಯಿಡ್ ಗಿಯರ್ ನ ಪ್ರೊಫೈಲ್ ಗ್ರೈಂಡಿಂಗ್ ಕೂಡಾ ಮಾಡಬಹುದಾಗಿದೆ. ಗಿಯರ್ ಟೂಥ್ ಪ್ರೊಫೈಲ್ ಗ್ರೈಂಡಿಂಗ್ ನ ಕುರಿತಾದ ಪ್ರಕ್ರಿಯೆಯನ್ನು ಕೋಷ್ಟಕದಲ್ಲಿ ತೋರಿಸಿದಂತೆ 7 ಮತ್ತು 8 ಈ ಕ್ರಿಯೆಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದಾಗಿದೆ (ಕೋಷ್ಟಕ ಕ್ರ. 3) ಮತ್ತು ಈ ಭಾಗಗಳು ನೇರವಾಗಿ ಕೊನೆಯ ಅಸೆಂಬ್ಲಿಯಲ್ಲಿ ಸೇರಬಲ್ಲವು. ಆದರೂ ಕೂಡಾ ಗಿಯರ್ ಗ್ರೈಂಡಿಂಗ್ ಮಶಿನ್ ನ ಬೆಲೆಯು ಲ್ಯಾಪಿಂಗ್ ಅಥವಾ ಟೆಸ್ಟಿಂಗ್ ಮಶಿನ್ ಗಿಂತ 20 ರಿಂದ 25 ಪಟ್ಟು ಹೆಚ್ಚು ಇರುತ್ತದೆ. ಇದರಿಂದಾಗಿ ಮಶಿನ್ ನ ಬೆಲೆಯು ಹೆಚ್ಚು ಇರುವಾಗ ಒಟ್ಟಾರೆ ಉತ್ಪಾದನೆಯ ವ್ಯವಹಾರದಲ್ಲಿ ಯಾವ ಪರಿಣಾಮವನ್ನು ಬೀರುತ್ತದೆ, ಎಂಬುದನ್ನು ತಿಳಿದುಕೊಳ್ಳುವುದೂ ಅತ್ಯಾವಶ್ಯಕವಾಗಿದೆ.
 
ಗಿಯರ್ ಕಟಿಂಗ್ ರೀತಿ/ ಪ್ರಣಾಳಿಕೆ
ಗಿಯರ್ ಕಟಿಂಗ್ ಅನೇಕ ರೀತಿಯಲ್ಲಿ ಮಾಡಲಾಗುತ್ತದೆ. ಆ ರೀತಿಯ ಹೆಸರುಗಳು ಮಶಿನ್ ಟೂಲ್ ಉತ್ಪಾದಕರ ಹೆಸರಿನಿಂದಲೇ ನೀಡಲಾಗಿದೆ.
ವಾಹನ ಮತ್ತು ಮಶಿನ್ ಟೂಲ್ ಅಪ್ಲಿಕೇಶನ್ ನಲ್ಲಿ ಗ್ಲೀಸನ್ (ಅಮೇರಿಕನ್) ಮತ್ತು ಆರ್ಲಿಕಾನ್ (ಸ್ವಿಸ್) ರೀತಿ ಅಥವಾ ಪ್ರಣಾಳಿಕೆಯನ್ನು ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇತ್ತಿಚೇಗೆ ಆರ್ಲಿಕಾನ್ (ಸ್ವಿಸ್) ಮತ್ತು ಕ್ಲಿನ್ಗೆಲ್ನಬರ್ಗ್ (ಜರ್ಮನ್) ಈ ಎರಡು ಕಂಪನಿಗಳ ವಿಲೀಕರಣದಿಂದಾಗಿ ಆಗಿದ್ದು ಅದು ಫೇಸ್ ಮಿಲ್ಲಿಂಗ್ ಹಾಗೆಯೇ ಫೇಸ್ ಹಾಬಿಂಗ್ ಆಪರೇಶನ್ ಗೋಸ್ಕರ ಮಶಿನ್ ತಯಾರಿಸುತ್ತಿದ್ದಾರೆ.
ಚಿತ್ರ ಕ್ರ.7 ರಲ್ಲಿ ಫೇಸ್ ಮಿಲ್ಲಿಂಗ್ ಮತ್ತು ಫೇಸ್ ಹಾಬಿಂಗ್ ಪ್ರಣಾಳಿಕೆಯ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ.
 
ಗ್ಲಿಸನ್ (ಅಮೇರಿಕನ್ ತಂತ್ರಜ್ಞಾನ) :
ವೈಯಕ್ತಿಕ ಹಲ್ಲುಗಳ ಮಿಲ್ಲಿಂಗ್ ಮತ್ತು ಅದರ ನಂತರ ಇಂಡೆಕ್ಸಿಂಗ್ ಮಾಡಿ ಕಾರ್ಯವಸ್ತುವಿನಲ್ಲಿರುವ ಹಲ್ಲುಗಳ ಅಂಕೆಗಳನ್ನು ಪಡೆಯಲಾಗುತ್ತದೆ.
ಕ್ರೌನ್ ವೀಲ್ ನ ರಫಿಂಗ್ ಮತ್ತು ಫಿನಿಶಿಂಗ್ ಆಪರೇಶನ್ ಗೋಸ್ಕರ ವಿಶಿಷ್ಟ ಆಕಾರದ (ಫಾರ್ಮ್ಡ್) ಫೇಸ್ ಮಿಲ್ಲಿಂಗ್ ಕಟರ್ ಬಳಸಲಾಗುತ್ತದೆ. ಆದರೆ ಕ್ರೌನ್ ವೀಲ್ ನಲ್ಲಿ ಹಲ್ಲುಗಳ ಆವಶ್ಯಕವಿರುವ ಸಂಖ್ಯೆಯನ್ನು ಪಡೆಯಲು ಇಂಡೆಕ್ಸ್ ಪ್ಲೇಟ್ ಬಳಸಲಾಗುತ್ತದೆ.
 
ಈ ರೀತಿಯ ಬಳಕೆಯನ್ನು ಮಾಡಿರುವ ಗಿಯರ್ ನ ಗುಣಮಟ್ಟವು ಹಲ್ಲುಗಳ ಸರ್ಫೇಸ್ ಫಿನಿಶ್ ನ ಕುರಿತು ಸೂಕ್ತವಾಗಿರುತ್ತದೆ. (ಕಾರಣ ಅದಕ್ಕೆ ಎರಡು ಭಾಗಗಳಲ್ಲಿ ಯಂತ್ರಣೆಯನ್ನು ಮಾಡಲಾಗುತ್ತದೆ). ಯಂತ್ರಣೆಯ ಸೈಕಲ್ ಟೈಮ್ ನಲ್ಲಿಯೂ ಕೂಡಾ ಕಡಿಮೆ ಇರುತ್ತದೆ. ಆದರೂ ಕೂಡಾ ಇಂಡೆಕ್ಸಿಂಗ್ ನ ನಿಖರತೆ ಇಂಡೆಕ್ಸಿಂಗ್ ಪ್ಲೇಟ್ ನ ನಿರ್ದೋಷತೆಯಲ್ಲಿ ಅವಲಂಬಿಸಿರುತ್ತದೆ. ಇದರಿಂದಾಗಿ ಶಬ್ದದ ಮಟ್ಟವೂ ಹೆಚ್ಚು ಇರುತ್ತದೆ.
 
ಈ ಪ್ರಣಾಳಿಕೆಯಲ್ಲಿ ಕ್ರೌನ್ ವೀಲ್ ಮತ್ತು ಪಿನಿಯನ್ ಇವುಗಳ ಯಂತ್ರಣೆಗೆ ವಿಭಿನ್ನ ಮಶಿನ್ ಆವಶ್ಯಕವಿರುತ್ತದೆ. ಕಟಿಂಗ್ ಮಶಿನ್ ನ ಸಂಖ್ಯೆಯು ಹೆಚ್ಚು ಇರುವುದರಿಂದ (ಕನಿಷ್ಠ 3) ಕಾರ್ಯಾಗಾರದಲ್ಲಿ (ವರ್ಕ್ ಶಾಪ್) ಹೆಚ್ಚು ಜಾಗವು ಬೇಕಾಗುತ್ತದೆ. ಆದ್ದರಿಂದ ಕಾರ್ಯವಸ್ತುಗಳ ಸೀಮಿತ ಬ್ಯಾಚ್ ನ ವಿಧದ ಉತ್ಪಾದನೆಗೋಸ್ಕರ ಈ ಪ್ರಣಾಳಿಕೆಗೆ ಹೆಚ್ಚು ಮೆಚ್ಚುಗೆ ಇರುವುದಿಲ್ಲ.
 
ಆರ್ಲಿಕಾನ್? ಕ್ಲಿಂಗೆಲ್ನ್ ನ್ ಬರ್ಗ್ : (ಸ್ವಿಸ್/ ಜರ್ಮನ್)
ನಿರ್ಮಾಣದ ಈ ರೀತಿಯಲ್ಲಿ ಒಂದು ಸುತ್ತುವಿಕೆಯಲ್ಲಿ ಹಲ್ಲುಗಳ ಇಚ್ಛಿಸಿರುವ ಸಂಖ್ಯೆಯನ್ನು ತಯಾರಿಸಲು ಫೇಸ್ ಹಾಬ್ ಕಟರ್ ಬಳಸಲಾಗುತ್ತದೆ. (ಇಂಡೆಕ್ಸಿಂಗ್ ಅಂದರೆ ಹಾಬ್ ಮತ್ತು ಕಾರ್ಯವಸ್ತು ಇವುಗಳಲ್ಲಿ ಗಿಯರಿಂಗ್ ಸಿಂಕ್ರೊನೈಸೆಶನ್). ಹಾಬ್ ಕಟರ್ ನಿಧಾನವಾಗಿ ಹಲ್ಲುಗಳ ಆಪ್ಟಿಮೈಜ್ಡ್ ಆಳದ ತನಕ ಮುಂದೆ ಸರಿಯುತ್ತದೆ. ಸಂಪೂರ್ಣವಾದ ಅಳವು ಲಭಿಸಿದ ನಂತರ ಮಶಿನ್ ನ ಪ್ರೊಫೈಲ್ ನ ತಯಾರಿಕೆಯನ್ನು ಮಾಡಲಾಗುತ್ತದೆ. ಈ ಮಶಿನ್ ನ ಸ್ಪೈರಲ್ ಆಕಾರವನ್ನು ಗಿಯರ್ ಹಾಬಿಂಗ್ ಮಶಿನ್ ಎಂದು ಹೇಳಲಾಗುತ್ತದೆ.
 
ಈ ಪ್ರಣಾಳಿಕೆಯಲ್ಲಿ ಕ್ರೌನ್ ವೀಲ್ ಮತ್ತು ಪಿನಿಯನ್ ಈ ಎರಡು ಯಂತ್ರಣೆಗೆ ಒಂದೇ ಮಶಿನ್ ಬಳಸಬಹುದಾಗಿದೆ. ಆದುದರಿಂದ ಕಾರ್ಯಾಗಾರದಲ್ಲಿ (ವರ್ಕ್ ಶಾಪ್ ನಲ್ಲಿ) ಜಾಗವು ತುಂಬಾ ಕಡಿಮೆ ಬೇಕಾಗುತ್ತದೆ. ಕೇವಲ ಒಂದೇ ಮಶಿನ್ ಕ್ರೌನ್ ವೀಲ್ ಹಾಗೆಯೇ ಪಿನಿಯನ್ ನ ಯಂತ್ರಣೆಯನ್ನು ಮಾಡಬಹುದು, ಆದ್ದರಿಂದ ಚಿಕ್ಕ ಬ್ಯಾಚ್ ಗಳ ಉತ್ಪಾದನೆಗೋಸ್ಕರ ಈ ರೀತಿಯು ಹೆಚ್ಚು ಸುಲಭವಾಗಿದೆ.
 
ಈ ಎರಡು ವಿವಿಧ ಗಿಯರ್ ನಿರ್ಮಾಣದ ಪ್ರಣಾಳಿಕೆಯ ಕುರಿತು ಮಾಹಿತಿಯನ್ನು ತಿಳಿದುಕೊಂಡ ನಂತರ ಈಗ ಈ ಎರಡೂ ರೀತಿಯ ಗಿಯರ್ ಪ್ರೊಫೈಲ್ ಮತ್ತು ಇನ್ನಿತರ ಗಿಯರ್ ಪ್ಯಾರಾಮೀಟರ್ ಗಳ ಯಂತ್ರಣೆಯು ಹೇಗೆ ನಡೆಯುತ್ತದೆ, ಎಂಬುದರ ಕುರಿತು ತಿಳಿದುಕೊಳ್ಳೋಣ.

11_2  H x W: 0  
 
ಫೇಸ್ ಮಿಲ್ಲಿಂಗ್ :
ಗಿಯರ್ ನ ಹಲ್ಲುಗಳ ಆಕಾರವು ಟೇಪರ್ ನಂತೆ ಇರುತ್ತದೆ. ಹಲ್ಲುಗಳ ಆಳ ಒಳಗಿನ ತುದಿಯ ಹೋಲಿಕೆಯಲ್ಲಿ ಹೊರಗಿನ ತುದಿಯಲ್ಲಿ ಹೆಚ್ಚಾಗಿರುತ್ತದೆ. ಈ ಪ್ರಣಾಳಿಕೆಯಲ್ಲಿ (ಚಿತ್ರ ಕ್ರ. 8) ಗಿಯರ್ ಫೇಸ್ ಕೋನ, ಪಿಚ್ ಕೋನ ಮತ್ತು ರೂಟ್ ಕೋನ ಸಮಾನವಾಗಿ ಇರುವುದಿಲ್ಲ.
 
ಫೇಸ್ ಹಾಬಿಂಗ್ : 
ಈ ವಿಧದ ಸಿಸ್ಟಮ್ ನಲ್ಲಿ ಗಿಯರ್ ನ ಹಲ್ಲುಗಳ ಆಳವು ಒಂದೇ ರೀತಿಯಾಗಿರುತ್ತದೆ. ಗಿಯರ್ ನ ಒಳ ಮತ್ತು ಹೊರ ತುದಿಯಲ್ಲಿ ಹಲ್ಲುಗಳ ಆಳವು ಒಂದೇ ರೀತಿಯಾಗಿರುತ್ತದೆ. ಈ ಪ್ರಣಾಳಿಕೆಯಲ್ಲಿ (ಚಿತ್ರ ಕ್ರ. 9) ಗಿಯರ್ ಫೇಸ್ ಕೋನ, ಪಿಚ್ ಕೋನ ಮತ್ತು ರೂಟ್ ಕೋನ ಸಮಾನವಾಗಿರುತ್ತವೆ.
 
ಇತರ ಉತ್ಪಾದನೆಯ ಪ್ರಣಾಳಿಕೆ
ಗ್ಲೀಸನ್ ಮತ್ತು ಆರ್ಲಿಕಾನ್ ನ ಹೊರತಾಗಿ ಇನ್ನಿತರ ಉತ್ಪಾದನೆಯ ಪ್ರಣಾಳಿಕೆ ಕೂಡಾ ಈ ಕೆಳಗಿನಂತೆ ಇರುತ್ತವೆ.
• ಕ್ಲಿಂಗೆಲ್ನ್ ಬರ್ಗ್ (ಜರ್ಮನ್ ತಂತ್ರಜ್ಞಾನ) : ಟೇಪರ್ ಹಾಬ್ ಕಟರ್ ಬಳಸಿ ಕ್ರೌನ್ ವೀಲ್ ಗೆ ಮತ್ತು ಫೇಸ್ ಹಾಬ್ ಕಟರ್ ಬಳಸಿ ಪಿನಿಯನ್ ಗೆ ಹಲ್ಲುಗಳ ನಿರಂತರವಾದ ನಿರ್ಮಾಣ.
• ಮಾಡ್ಯುಲ್-ಹರ್ಥ್ (ಜರ್ಮನ್ ತಂತ್ರಜ್ಞಾನ) : ಫೇಸ್ ಮಿಲ್ಲಿಂಗ್ ಸಿಸ್ಟಮ್, ಅಮೇರಿಕನ್ ಗ್ಲೀಸನ್ ತಂತ್ರಜ್ಞಾನದ ನಕಲು.
• ಯುಟಾಕಾ (ಜಪಾನ್ ತಂತ್ರಜ್ಞಾನ) : ಫೇಸ್ ಮಿಲ್ಲಿಂಗ್ ಸಿಸ್ಟಮ್, ಅಮೇರಿಕನ್ ಗ್ಲೀಸನ್ ತಂತ್ರಜ್ಞಾನದ ನಕಲು.
• ಟಿಯಾನ್ ಜಿನ್ (ಚೀನಾ ತಂತ್ರಜ್ಞಾನ) : ಫೇಸ್ ಮಿಲ್ಲಿಂಗ್ ಮತ್ತು ಫೇಸ್ ಹಾಬಿಂಗ್, ಫೇಸ್ ಮಿಲ್ಲಿಂಗ್ ಗೆ ಅಮೇರಿಕನ್ ಗ್ಲೀಸನ್ ತಂತ್ರಜ್ಞಾನದ ನಕಲು ಮತ್ತು ಫೇಸ್ ಹಾಬಿಂಗ್ ಗೋಸ್ಕರ ಸ್ವಿಸ್ ತಂತ್ರಜ್ಞಾನದ ನಕಲು.
• ಗ್ಲೀಸನ್ (ರಶಿಯನ್ ಟೆಕ್ನಾಲಾಜಿ) : ಗ್ಲೀಸನ್ ನಂತಹ (ಅಮೇರಿಕನ್) ಫೇಸ್ ಮಿಲ್ಲಿಂಗ್ ಪ್ರಣಾಳಿಕೆಯಾಗಿದೆ, ಆದರೆ ಅದರಂತೆಯೇ ನಕಲು ಇಲ್ಲ.
 
ಸ್ಪೈರಲ್ ಆಕಾರದ ಮತ್ತು ಹೈಪ್ಯೊಡ್
ಗಿಯರ್ ನ ಅಪ್ಲಿಕೇಶನ್ ಮತ್ತು ಬಳಕೆ
ಈ ಗಿಯರ್ ವಿವಿಧ ವಾಹನಗಳು, ಮಶಿನ್ ಟೂಲ್, ಔದ್ಯೋಗಿಕ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಹೆವಿ ಕಮರ್ಶಿಯಲ್ ವಾಹನಗಳು, ಟ್ರ್ಯಾಕ್ಟರ್, ಕೃಷಿ ಸಲಕರಣೆಗಳು, ರೊಟಾವೇಟರ್ಸ್, ಮಶಿನ್ ಮತ್ತು ಮಶಿನ್ ಟೂಲ್, ಸಕ್ಕರೆ ಉದ್ಯಮ, ಸಿಮೆಂಟ್ ಉದ್ಯಮ, ರಕ್ಷಣಾ ಪಡೆಗಳಿಗೆ ಸಂಬಂಧಿಸಿರುವ ಉದ್ಯಮ, ವಿಮಾನ ಮತ್ತು ಶಕ್ತಿಯ ಪ್ರಸರಣವನ್ನು ಓರೆಯಾಗಿರುವ ಅಕ್ಷಗಳಲ್ಲಿ ಮಾಡಬೇಕಾಗುವಲ್ಲಿ ಇಂತಹ ಎಲ್ಲ ರೀತಿಯ ಇಂಜಿನಿಯರಿಂಗ್ ಅಪ್ಲಿಕೇಶನ್ಸ್ ಗಳಲ್ಲಿ ಬಳಸಲಾಗುತ್ತದೆ.
 
ನಮ್ಮ ಕುರಿತು ಸಂಕ್ಷಿಪ್ತ ಮಾಹಿತಿ
ಪಿರಂಗೂಟ್ ಔದ್ಯೋಗಿಕ ಕ್ಷೇತ್ರದಲ್ಲಿ ನಮ್ಮದೇ ಆದ ಸ್ಪೈರಲ್ ಮತ್ತು ಹೈಪ್ಯೊಡ್ ಗಿಯರ್ ತಯಾರಿಸುವ ಒಂದು ಯುನಿಟ್ ಇದೆ. ನಮ್ಮಲ್ಲಿ ಗಿಯರ್ ಡಿಸೈನ್ ಮತ್ತು ಉತ್ಪಾದನೆಯ ಎಲ್ಲ ಸೌಲಭ್ಯಗಳೂ ಉಪಲಬ್ಧವಿವೆ. ಈ ಕ್ಷೇತ್ರದಲ್ಲಿ ಅನುಭವವುಳ್ಳ ವ್ಯವಸಾಯವನ್ನು ಮಾಡುವವರ ತಂಡವು ನಮ್ಮಲ್ಲಿ ಕೆಲಸ ನಿರ್ವಹಿಸುತ್ತದೆ.
 
ನಮ್ಮ ಉತ್ಪಾದನೆಗಳು
ಇಂದಿನ ತನಕ ನಾವು ಹಲವಾರು ಮುಂದುವರಿದ ವಾಹನ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಲಕರಣೆಗಳನ್ನು ತಯಾರಿಸುವವರಿಗೆ ಸ್ಪೈರಲ್ ಆಕಾರದ ಮತ್ತು ಹೈಪ್ಯೊಡ್ ಗಿಯರ್ ನ ಪೂರೈಕೆಯನ್ನು ಮಾಡಿದ್ದೇವೆ. ಇದರ ಹೊರತಾಗಿ ನಾವು ಹಲವಾರು ರಕ್ಷಣಾ ಪಡೆಗಳ ಯೋಜನೆಗಳಿಗೋಸ್ಕರವೂ ಕೆಲಸ ಮಾಡುತ್ತಿದ್ದೇವೆ. ನಾವು ಈ ರೀತಿಯ ಗಿಯರ್ ಅವರ ಮೂಲ ಮಾದರಿಗೋಸ್ಕರ (ಪ್ರೊಟೋಟೈಪ್ ಮಾಡೆಲ್) ಪೂರೈಸಿದ್ದೇವೆ.
 
 

joshi_1  H x W: 
ವಿ.ಜಿ. ಜೋಶಿ
ನಿರ್ದೇಶಕರು,
ಸ್ಪೈರೋ ಗಿಯರ್, ಪುಣೆ 
9225521572
 
ವಿ. ಜಿ. ಜೋಶಿ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಇವರಿಗೆ ಗಿಯರ್ ಕ್ಷೇತ್ರದಲ್ಲಿ 30 ವರ್ಷಗಳಿಗಿಂತಲೂ ಹೆಚ್ಚು ಕೆಲಸ ನಿರ್ವಹಿಸಿರುವ ಅನುಭವವಿದೆ. ಇಂದಿಗೂ ಇವರು ಅನೇಕ ವಾಹನ ಮತ್ತು ಟ್ರೆಕ್ಟರ್ ಗಳಿಗೆ ಬೇಕಾಗಿರುವ ಗಿಯರ್ ಗಳನ್ನು ಪೂರೈಸುತ್ತಾರೆ.
 
 
@@AUTHORINFO_V1@@