ಗಿಯರ್ ಕಟಿಂಗ್ ಪ್ರಕ್ರಿಯೆ

@@NEWS_SUBHEADLINE_BLOCK@@

Udyam Prakashan Kannad    29-Jul-2020   
Total Views |
 
 
ಪವರ್ ಟ್ರಾನ್ಸ್ ಮಿಶನ್ ನ ಅವಿಭಾಜ್ಯ ಅಂಗ ಮತ್ತು ಮಶಿನ್ ಟೂಲ್ ನಲ್ಲಿ ಅಂಗೀಕೃತ ಭಾಗವೆಂದು ಗಿಯರ್ ನ್ನು ತಿಳಿಯಲಾಗಿದೆ. ಗಿಯರ್ ನ ಪೆರಿಫೇರಿಯಲ್ಲಿ ಹಲ್ಲುಗಳಿರುತ್ತವೆ. ಮೂಲ ಸ್ಥಾನದಿಂದ ಇನ್ನೊಂದೆಡೆಗೆ ಬಲವನ್ನು ಕಳುಹಿಸಲು ಗಿಯರ್ ಬಳಸಲಾಗುತ್ತದೆ. ಬಲವನ್ನು ಕಳಿಹಿಸುವುದರೊಂದಿಗೆ ಎರಡು ಶಾಫ್ಟ್ ಗಳಲ್ಲಿರುವ ವೆಲಾಸಿಟೀಯ ಅನುಪಾತವನ್ನೂ ಕಾಪಾಡಲಾಗುತ್ತದೆ. ಗಿಯರ್ ಬಳಸಿ ವೇಗ ಮತ್ತು ಟಾರ್ಕ್ ಒಂದೇ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸಬಹುದಾಗಿದೆ.

2_2  H x W: 0 x

2_1  H x W: 0 x 
 
ಡ್ರೈವ್ ಶಾಫ್ಟ್ ನಲ್ಲಿ ಅಳವಡಿಸಿರುವ ಗಿಯರ್ ಗೆ ಡ್ರೈವ್ ಗಿಯರ್ ಎಂದು ಹೇಳುತ್ತಾರೆ. ಆದರೆ ಡ್ರಿವನ್ ಶಾಫ್ಟ್ ನಲ್ಲಿ ಅಳವಡಿಸಿರುವ ಇನ್ನೊಂದು ಗಿಯರ್ ಗೆ ಡ್ರಿವನ್ ಗಿಯರ್ ಎಂದು ಹೇಳುತ್ತಾರೆ. ಡ್ರೈವ್ ಗಿಯರ್ ಮತ್ತು ಡ್ರಿವನ್ ಗಿಯರ್ ಇವೆರಡೂ ಒಂದು ಜೋಡಿಯಾಗಿರುತ್ತದೆ (ಚಿತ್ರ ಕ್ರ. 1). ಈ ಗಿಯರ್ ಸಮಾನವಾಗಿರುವ ನಿಯತಾಂಕಗಳಲ್ಲಿ (ಪ್ಯಾರಾಮೀಟರ್) ಒಂದೇ ರೀತಿಯಲ್ಲಿರುತ್ತವೆ. ಆದರೆ ವ್ಯಾಸ ಮತ್ತು ಹಲ್ಲುಗಳ ಸಂಖ್ಯೆ ಇವೆರಡರಲ್ಲಿಯೂ ವ್ಯತ್ಯಾಸವಿರುತ್ತದೆ. ಇದರ ಪ್ಯಾರಾಮೀಟರ್ ಗಳನ್ನು (ನಿಯತಾಂಕ) ಈ ಕೆಳಗೆ ನೀಡಲಾಗಿದೆ.
 
1. ಗಿಯರಿಂಗ್ ವಿಧಗಳು (ಸಮಾನಾಂತರ ಅಕ್ಷ, ಲಂಬಕೋನದಲ್ಲಿರುವ ಅಕ್ಷ, ಪ್ಲೆನೆಟರಿ ಗಿಯರ್)
2. ಗಿಯರ್ ನ ಅನುಪಾತ (ರೆಶೋ).
3. ಮೊಡ್ಯುಲ್
4. ಸೆಂಟರ್ ಡಿಸ್ಟನ್ಸ್
5. ಹೆಲಿಕ್ಸ್ ಎಂಗಲ್
ಯಾವುದೇ ಎರಡು ಗಿಯರ್ ಗಳ ಜೋಡಿಗಳನ್ನು ನಿರ್ಮಿಸಲು ಆವಶ್ಯಕವಿರುವ ಪರಿಸ್ಥಿತಿ ಅಂದರೆ ಎರಡೂ ಸುತ್ತಳಲೆಯ ವೇಗವು ಒಂದೇ ರೀತಿ ಇರಬೇಕು.
 
ಒಂದು ವೇಳೆ Dd : ಡ್ರಿವನ್ ಗಿಯರ್ ವ್ಯಾಸ
Dr : ಡ್ರೈವ್ ಗಿಯರ್ ವ್ಯಾಸ
Nd : ಡ್ರಿವನ್ ಗಿಯರ್ ಆರ್.ಪಿ.ಎಮ್.
Nr : ಡ್ರೈವ್ ಗಿಯರ್ ಆರ್.ಪಿ.ಎಮ್.
ಆದರೆ,
ಸುತ್ತಳತೆಯ ವೇಗ ಡ್ರೈವ್ ಗಿಯರ್ = ಸುತ್ತಳತೆಯ ವೇಗ ಡ್ರಿವನ್ ಗಿಯರ್
π x Dr x Nr = π x Dd x Nd
Nd/Nr = Dr/ Dd = ವೇಗ (ವೇಲಾಸಿಟಿ) ಅನುಪಾತ

5_2  H x W: 0 x 
 
ಗಿಯರ್ ನಲ್ಲಿ ಬಳಸಲಾಗುವ ಟರ್ಮಿನಾಲಾಜಿ
ಗಿಯರ್ ತಯಾರಿಸುವ ರೀತಿ ತಿಳಿದುಕೊಳ್ಳಲು ಗಿಯರ್ ನಲ್ಲಿರುವ ಟರ್ಮಿನಾಲಾಜಿ (ಚಿತ್ರ ಕ್ರ. 2) ತಿಳಿದುಕೊಳ್ಳುವುದು ಆವಶ್ಯಕವಾಗಿದೆ.
 
1.ಗಿಯರ್ ಬ್ಲಾಂಕ್ : ನಿರ್ದೋಷವಾದ ಆಕಾರ ಮತ್ತು ಬೇಕಾಗಿರುವ ಆಕಾರದಲ್ಲಿ ಕತ್ತರಿಸಿರುವ ಲೋಹಗಳ ತುಂಡನ್ನು ಗಿಯರ್ ತಯಾರಿಸಲು ಬಳಸಲಾಗುತ್ತದೆ.
2.ಅಡೆಂಡಮ್ ಸರ್ಕಲ್ : ಗಿಯರ್ ನಲ್ಲಿರುವ ಹಲ್ಲುಗಳಿಂದ ಮತ್ತು ಗಿಯರ್ ನ ಗರಿಷ್ಠ ಪ್ರಮಾಣದ ವ್ಯಾಸವನ್ನು ನಿರ್ದೇಶಿಸುವ ಕಾಲ್ಪನಿಕವಾದ ವರ್ತುಲ. ಗರಿಷ್ಠ ವ್ಯಾಸ = ಗಿಯರ್ ಬ್ಲೇಂಕ್ ವ್ಯಾಸ
3.ಅಡೆಂಡಮ್ : ಅಡೆಂಡಮ್ ಸರ್ಕಲ್ ಮತ್ತು ಪಿಚ್ ಸರ್ಕಲ್ ನಲ್ಲಿರುವ ತ್ರಿಜ್ಯಾತ್ಮಕವಾದ ದೂರ.
4.ಪಿಚ್ ಸರ್ಕಲ್ : ಗಿಯರ್ ನ ಹಲ್ಲುಗಳ ಜೋಡಿ, ಎರಡು ಹಲ್ಲುಗಳಲ್ಲಿರುವ ದೂರದಷ್ಟು ಇರುವ ಕಾಲ್ಪನಿಕ ವರ್ತುಲ.
5.ಡಿಡೆಂಡಮ್ : ಗಿಯರ್ ನ ಪಿಚ್ ಸರ್ಕಲ್ ಮತ್ತು ರೂಟ್ ಸರ್ಕಲ್ ನಲ್ಲಿರುವ ತ್ರಿಜ್ಯಾತ್ಮಕವಾದ ದೂರ
6.ರೂಟ್ ಸರ್ಕಲ್ : ಗಿಯರ್ ನ ಎಲ್ಲ ಹಲ್ಲುಗಳ ಬುಡದಿಂದ ಹೋಗುವ ಕಾಲ್ಪನಿಕ ವರ್ತುಲ.
7.ಟೂಥ್ ಕ್ಲಿಯರನ್ಸ್ : ಒಂದೇ ಗಿಯರ್ ಹಲ್ಲುಗಳ ತುದಿಯಿಂದ ಇನ್ನೊಂದು ಮೆಟಿಂಗ್ ಗಿಯರ್ ಹಲ್ಲುಗಳ ಬುಡದ ತನಕ ಇರುವ ದೂರ.
8.ಪ್ರೆಶರ್ ಎಂಗಲ್ : ಲೈನ್ ಆಫ್ ಎಕ್ಷನ್ ನಿಂದ ಪಿಚ್ ಸರ್ಕಲ್ ಗೆ ಸಮಾನವಾದ ಟೆಂಜೆಂಟ್ ಲೈನ್ ನೊಂದಿಗೆ ಮಾಡಿರುವ ಕೋನ.
9.ಫೇಸ್ : ಹಲ್ಲುಗಳ ಮೇಲ್ಭಾಗದ ಪಿಚ್ ಸರ್ಕಲ್ ಇವುಗಳಲ್ಲಿರುವ ಹಲ್ಲುಗಳ ಭಾಗ.
10.ಫ್ಲಂಕ್ : ಪಿಚ್ ಸರ್ಕಲ್ ಮತ್ತು ರೂಟ್ ಸರ್ಕಲ್ ನಲ್ಲಿರುವ ಗಿಯರ್ ನ ಹಲ್ಲುಗಳ ಭಾಗ.
11.ಗಿಯರ್ ನ ಹಲ್ಲುಗಳ ದಪ್ಪ : ಇದಕ್ಕೆ ಗಿಯರ್ ನ ಹಲ್ಲುಗಳ ಕೊರೋಡಲ್ ದಪ್ಪ ಎಂದು ಹೇಳುತ್ತಾರೆ. ಪಿಚ್ ಸರ್ಕಲ್ ನಲ್ಲಿ ಅಳೆಯಲಾಗುವ ಎರಡು ಹಲ್ಲುಗಳ ಅಗಲ. ಪಿಚ್ ಸರ್ಕಲ್ ನಲ್ಲಿ ಹಲ್ಲುಗಳ ಅಗಲ ಒಂದರ ಹಿಂದೊಂದು ಬರುವ ಹಲ್ಲುಗಳ ದೂರದಷ್ಟು ಇರುತ್ತದೆ.
12.ಬ್ಯಾಕ್ ಲ್ಯಾಶ್ : ಪ್ರತ್ಯಕ್ಷ ಹಲ್ಲುಗಳ ದಪ್ಪ ಮತ್ತು ಯಾವ ಸ್ಥಾನದಲ್ಲಿ ಹಲ್ಲುಗಳು ಇನ್ನೊಂದು ಗಿಯರ್ ನಲ್ಲಿ ಸಿಲುಕುತ್ತವೆಯೋ (ಮೆಶ್) ಆ ಸ್ಥಾನದಲ್ಲಿ ಜಾಗದ ಅಗಲ ಇದರಲ್ಲಿರುವ ವ್ಯತ್ಯಾಸ.
13.ವರ್ತುಲಾಕಾರದ ಪಿಚ್ : ಪಿಚ್ ಸರ್ಕಲ್ ನಲ್ಲಿ ಒಂದರ ಹಿಂದೆ ಇನ್ನೊಂದು ಬರುವ ಹಲ್ಲುಗಳ ದೂರ.
14.ವ್ಯಾಸದ ಪಿಚ್ : ವ್ಯಾಸದ ಪಿಚ್ (p) = N/d
N : ಹಲ್ಲುಗಳ ಸಂಖ್ಯೆ
d : ಪಿಚ್ ಸರ್ಕಲ್ ನ ವ್ಯಾಸ
15. ಮೊಡ್ಯುಲ್ (m) : ವ್ಯಾಸ ಪಿಚ್ ನ ವಿರುದ್ಧ ಮೊಡ್ಯುಲ್ ಇರುತ್ತದೆ.
m = d/N
d : ಪಿಚ್ ಸರ್ಕಲ್ ನ ವ್ಯಾಸ
N : ಹಲ್ಲುಗಳ ಸಂಖ್ಯೆ
ಗಿಯರ್ ಉತ್ಪಾದನೆಯ ರೀತಿ
ಸಾಮಾನ್ಯವಾಗಿ ಗಿಯರ್ ಉತ್ಪಾದನೆಗೆ ಕೆಳಗೆ ನೀಡಿರುವ ಮೂರು ರೀತಿಗಳನ್ನು ಬಳಸಲಾಗುತ್ತದೆ.
1. ಕಾಸ್ಟಿಂಗ್
2. ಪ್ಲಾಸ್ಟಿಕ್ ಮೋಲ್ಡಿಂಗ್
3. ಯಂತ್ರಣೆ (ಮಶಿನಿಂಗ್)

5_1  H x W: 0 x 
 
1. ಕಾಸ್ಟಿಂಗ್
ಈ ರೀತಿಯಲ್ಲಿ ಮರಳಿನ ಮೋಲ್ಡ್ ಅಥವಾ ಶಾಶ್ವತವಾದ (ಪರ್ಮನಂಟ್) ಮೋಲ್ಡ್ ತಯಾರಿಸಲಾಗುತ್ತದೆ. ಅದರಲ್ಲಿರುವ ಮೊಡಲ್ ಪೊಳ್ಳಿನಲ್ಲಿ ಕುದಿಯುತ್ತಿರುವ ಲೋಹಗಳ ರಸವನ್ನು ಹೊಯ್ಯಲಾಗುತ್ತದೆ. ಈ ಮೋಲ್ಡ್ ತಮಗೆ ಬೇಕಾಗಿರುವ ಗಿಯರ್ ನ ಮಾಪನದಂತೆ ಇರುತ್ತದೆ. ಈ ರೀತಿಯಲ್ಲಿ ಕಾಸ್ಟ್ ಆಯರ್ನ್ ಗಿಯರ್ ಹೆಚ್ಚು ಒಳ್ಳೆಯದಾಗಿ ಮಾಡಲಾಗುತ್ತದೆ. ಇವುಗಳನ್ನು ಕಾಸ್ಟೆಡ್ ಗಿಯರ್ ಎಂದು ಹೇಳುತ್ತಾರೆ. ಈ ಗಿಯರ್ ನ ಹಲ್ಲುಗಳ ಸರ್ಫೇಸ್ ಒರಟಾಗಿ ಇರುತ್ತದೆ. ಇದರಲ್ಲಿ ಶಕ್ತಿಯು ಕಡಿಮೆ ಇರುತ್ತದೆ. ಹಾಗೆಯೇ ಇದು ನಿರ್ದೋಷವಾಗಿ ಇರುವುದಿಲ್ಲ. ಆದರೆ ಇದರ ಉತ್ಪಾದನೆಯ ಖರ್ಚು ತುಂಬಾ ಕಡಿಮೆ ಇರುತ್ತದೆ. ಎಲ್ಲಿ ಬೆಲೆ ಮತ್ತು ಶಕ್ತಿಯನ್ನು ಸಾಗಿಸುವ ಅಂಶಗಳು ನಿರ್ದೋಷ ಮತ್ತು ಶಬ್ದದ ಮಿತಿಗಿಂತ (ನಾಯಿಸ್ ಲೆವಲ್) ಮಹತ್ವದ್ದಾಗಿರುತ್ತದೆಯೋ, ಅಲ್ಲಿ ದೊಡ್ಡ ಆಕಾರದ ಗಿಯರ್ ಕಾಸ್ಟಿಂಗ್ ರೀತಿಯಿಂದ ತಯಾರಿಸಲಾಗುತ್ತದೆ. ಉದಾಹರಣೆ, ಕಬ್ಬಿನ ರಸವನ್ನು ತೆಗೆಯುವ ಚರಕ. (ಚಿತ್ರ ಕ್ರ. 3).

7_2  H x W: 0 x 
 
2. ಪ್ಲಾಸ್ಟಿಕ್ ಮೋಲ್ಡಿಂಗ್
ಈ ರೀತಿಯಲ್ಲಿ ಇಂಜೆಕ್ಷನ್ ಮೋಲ್ಡಿಂಗ್ ಅಥವಾ ಕಾಂಪ್ರೆಶನ್ ಮೋಲ್ಡಿಂಗ್ ಬಳಸಿ ಪ್ಲಾಸ್ಟಿಕ್ ಗಿಯರ್ ತಯಾರಿಸಲಾಗುತ್ತದೆ. ಈ ಗಿಯರ್ ನ ಶಕ್ತಿಯು ಕಡಿಮೆ ಇರುವುದರಿಂದ ಹಗುರವಾದ ಕೆಲಸಗಳಿಗೋಸ್ಕರ ಬಳಸಲಾಗುತ್ತದೆ. ಇದರಿಂದಾಗಿ ಶಕ್ತಿಯ ಸಾಗಾಟಕ್ಕೆ ಇದನ್ನು ಬಳಸಲಾಗುತ್ತದೆ. ಉದಾಹರಣೆ, ಸ್ಪೀಡೋಮೀಟರ್ ಗಿಯರ್ (ಚಿತ್ರ ಕ್ರ. 4) ಮಹತ್ವದ್ದಾಗಿದೆ. ಇದರಲ್ಲಿ ವೇಗದ ಅನುಪಾತವನ್ನು ನಿರ್ದೋಷವಾಗಿ ಪಡೆಯಬಹುದು.
ಪ್ಲಾಸ್ಟಿಕ್ ಮೋಲ್ಡಿಂಗ್ ನ ಬಳಕೆಯನ್ನು ಲೋಹಗಳಿಂದ ಗಿಯರ್ ತಯಾರಿಸಲೂ ಮಾಡಲಾಗುತ್ತದೆ. ಈ ರೀತಿಯಲ್ಲಿ ಲೋಹಗಳ ಕಾರ್ಯವಸ್ತು ಮೊದಲು ಬಿಸಿ ಮಾಡಿ ಪ್ಲಾಸ್ಟಿಕ್ ನ ರೂಪಕ್ಕೆ ತರಲಾಗುತ್ತದೆ. ಪ್ಲಾಸ್ಟಿಕ್ ನ ರೂಪ ಅಂದರೆ ಮೃದು (ಸಾಫ್ಟ್). ಅದರ ನಂತರ ತಮಗೆ ಬೇಕಾಗಿರುವ ಆಕಾರದಲ್ಲಿ ಮೆಕ್ಯಾನಿಕಲ್ ಟೂ, ಡೈ, ಪ್ರೆಶರ್ ಇವುಗಳ ಸಹಾಯದಿಂದ ಮೋಲ್ಡ್ ಗಳನ್ನು ತಯಾರಿಸಲಾಗುತ್ತದೆ. ಈ ರೀತಿಯನ್ನು ಹೆಚ್ಚು ಪ್ರಮಾಣದಲ್ಲಿ ಹಗುರವಾದ ಕೆಲಸಗಳಿಗೋಸ್ಕರ ಚಿಕ್ಕ ಗಿಯರ್ ಗಳನ್ನು ತಯಾರಿಸಲು ಮಾಡಲಾಗುತ್ತದೆ. ಪ್ಲಾಸ್ಟಿಕ್ ಮೋಲ್ಡಿಂಗ್ ನ ರೀತಿಯಲ್ಲಿ ಗಿಯರ್ ತಯಾರಿಸಲು ಕಚ್ಚಾ ಮಟೀರಿಯಲ್ ಎಂದು ನಾನ್ ಫೇರಸ್ ಮೆಟಲ್ ಬಳಸಲಾಗುತ್ತದೆ.
 
3. ಯಂತ್ರಣೆ
ಈ ರೀತಿಯು ಜನರಿಂದ ಮೆಚ್ಚುಗೆಯನ್ನು ಪಡೆದಿದೆ. ಅದುದರಿಂದ ಇದನ್ನು ಎಲ್ಲೆಡೆಯಲ್ಲಿಯೂ ಗಿಯರ್ ಉತ್ಪಾದನೆಗೋಸ್ಕರ ಬಳಸಲಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಆಕಾರ ಮತ್ತು ಮಾಪನಗಳ ಗಿಯರ್ ಬ್ಲಾಂಕ್ ಮೊದಲು ತಯಾರಿಸಲಾಗುತ್ತದೆ. ಅದರಿಂದ ಸಾಮಾನ್ಯವಾಗಿ ಸಮೀಪದ ಆಕಾರದ ಗಿಯರ್ ಬ್ಲಾಂಕ್ ಕತ್ತರಿಸಲಾಗುತ್ತದೆ. ಆದರೆ ಹಲವಾರು ಸಲ ಮೆಟಲ್ ಕಾಸ್ಟಿಂಗ್ ಮಾಡಿಯೂ ಗಿಯರ್ ಬ್ಲಾಂಕ್ ತಯಾರಿಸಲಾಗುತ್ತದೆ. ಒಂದೊಂದು ಹಲ್ಲು ಕತ್ತರಿಸಿ ಗಿಯರ್ ತಯಾರಿಸಲಾಗುತ್ತದೆ. ಇದಕ್ಕೋಸ್ಕರ ಸಿ.ಎನ್.ಸಿ., ಗಿಯರ್ ಹಾಬರ್ ಬಳಸಲಾಗುತ್ತದೆ. ನಿರ್ದೋಷತೆ, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ, ತಮಗೆ ಬೇಕಾಗಿರುವ ಆಕಾರ ಮತ್ತು ಇನ್ನಿತರ ಮಾಪನಗಳು ಸಿ.ಎನ್.ಸಿ.ಯಲ್ಲಿ ಸಹಜವಾಗಿ ಪಡೆಯಬಹುದು.
 
ಗಿಯರ್ ಶೇಪಿಂಗ್
ಗಿಯರ್ ಶೇಪಿಂಗ್ ಇದೊಂದು ಗಿಯರ್ ತಯಾರಿಸಲು ಬಳಸಲಾಗುವ ರೀತಿಯಾಗಿದೆ. ಈ ರೀತಿಯಲ್ಲಿ ಗಿಯರ್ ನ ಹಲ್ಲುಗಳು ಮಲ್ಟಿಪಾಯಿಂಟ್ ಯಂತ್ರಣೆ (ಕಟಿಂಗ್) ಟೂಲ್ ಬಳಸಿ ನಿರ್ದೋಷವಾದ ಮಾಪನಗಳು ಮತ್ತು ಆಕಾರಕ್ಕೆ ಅನುಸಾರವಾಗಿ ಕತ್ತರಿಸಲಾಗುತ್ತದೆ. ಶೇಪಿಂಗ್ ಪ್ರೊಸೆಸ್ ನ ವಿಧಗಳನ್ನು ಈ ಕೆಳಗೆ ನೀಡಲಾಗಿದೆ.
1. ಗಿಯರ್ ಕಟಿಂಗ್ ಗಿಯರ್ ಶೇಪರ್ ಬಳಸಿ.
2. ರೇಕ್ ಪ್ಲಾನಿಂಗ್ ಪ್ರೊಸೆಸ್
3. ಹಾಬಿಂಗ್ ಪ್ರೊಸೆಸ್

7_1  H x W: 0 x 

9_2  H x W: 0 x 
 
ಗಿಯರ್ ಕಟಿಂಗ್ : ಗಿಯರ್ ಶೇಪರ್ ಬಳಸಿ
ಈ ರೀತಿಯಲ್ಲಿ ಟೂಲ್ ಫೇಸ್ ನಲ್ಲಿ ಮತ್ತು ಸೈಡ್ ನಲ್ಲಿ ಕ್ಲಿಯರನ್ಸ್ ಇದ್ದು ಮಧ್ಯದಲ್ಲಿ ರಂಧ್ರವಿರುವ ಪಿನಿಯನ್ ಆಕಾರದ ಕಟರ್ (ಚಿತ್ರ ಕ್ರ. 5 ಮತ್ತು 6) ಇರುತ್ತದೆ. ಅದರಲ್ಲಿ ಸ್ಟಬ್ ಆರ್ಬರ್ ಅಥವಾ ಮಶಿನ್ ನ ಸ್ಪಿಂಡಲ್ ಜೋಡಿಸಬಹುದಾಗಿದೆ. ಕಟರ್ ನ ಅಕ್ಷವು ವರ್ಟಿಕಲ್ ಪೊಸಿಶನ್ ನಲ್ಲಿ ಅಳವಡಿಸಿ ಮೌಂಟ್ ಮಾಡಲಾಗುತ್ತದೆ. ವರ್ಟಿಕಲ್ ಇರುವ ಅಕ್ಷದಲ್ಲಿ ಕಟರ್ ಮೇಲೆ ಕೆಳಗೆ ಆಗಬಲ್ಲದು. ಅದರ ಚಟುವಟಿಯನ್ನು ಮುಂಚೆಯೇ ನಿರ್ಧರಿಸಬಹುದು. ಕಟರ್ ಮತ್ತು ಗಿಯರ್ ಬ್ಲಾಂಕ್ ತುಂಬಾ ಕಡಿಮೆ ಆರ್.ಪಿ.ಎಮ್.ನಲ್ಲಿ ಅದರ ಅಕ್ಷದ ಸುತ್ತುಮುತ್ತು ತಿರುಗುತ್ತವೆ. ಕಟರ್ ಮತ್ತು ಗಿಯರ್ ಬ್ಲಾಂಕ್ ನ ಆರ್.ಪಿ.ಎಮ್. ನಿರ್ಧರಿಸಲಾಗುತ್ತವೆ. ಇದರಿಂದಾಗಿ ಒಂದರ ಹಿಂದೆ ಇನ್ನೊಂದು ಎಲ್ಲ ಹಲ್ಲುಗಳ ಯಂತ್ರಣೆಯಾಗಬಲ್ಲದು. ತಂಪಾಗಲು ಆವಶ್ಯಕವಿರುವ ಸಮಯವೂ ಸಿಗುತ್ತದೆ. ಇದರ ಪರಿಣಾಮದಿಂದಾಗಿ ಟೂಲ್ ನ ಬಾಳಿಕೆಯು ಹೆಚ್ಚುತ್ತದೆ. ಈ ಪ್ರೊಸೆಸ್ ನಿಂದಾಗಿ ಕಡಿಮೆ ಸೈಕಲ್ ಟೈಮ್ ನಲ್ಲಿ ಆಗುವ ಉತ್ಪಾದನೆ ಮತ್ತು ಮಾಪನದಲ್ಲಾಗುವ ನಗಣ್ಯವಾದ ವ್ಯತ್ಯಾಸ ಈ ಲಾಭಗಳಾಗುತ್ತವೆ.
 
ಯಂತ್ರಣೆ ವೇಗ :
ಶೇಪರ್ ಕಟರ್ ವರ್ಟಿಕಲ್ ಅಕ್ಷದಲ್ಲಿ ಮೇಲೆ ಕೆಳಗೆ ಆಗುತ್ತದೆ. ಕೆಳಗೆ ಬರುವಾಗ ಯಂತ್ರಣೆಯು ಆಗುತ್ತದೆ. ಇದಕ್ಕೆ ಕಟಿಂಗ್ ಸ್ಟ್ರೋಕ್ ಎಂದು ಹೇಳುತ್ತಾರೆ ಮತ್ತು ಯಾವ ವೇಗದಿಂದ ಕಟರ್ ಕೆಳಗೆ ಬರುತ್ತದೆಯೋ, ಅದನ್ನು ಯಂತ್ರಣೆಯ ವೇಗ ಎಂದು ಹೇಳುತ್ತಾರೆ. ಕಟರ್ ಸ್ಟ್ರೋಕ್ ಪೂರ್ತಿಯಾದ ನಂತರ ಕಟರ್ ಮೇಲ್ಭಾಗಕ್ಕೆ ತಲುಪುತ್ತದೆ. ಅದನ್ನು ರಿಟರ್ನ್ ಸ್ಟ್ರೋಕ್ ಎಂದು ಹೇಳುತ್ತಾರೆ. ರಿಟರ್ನ್ ಸ್ಟ್ರೋಕ್ ಗೆ ಯಂತ್ರಣೆಯನ್ನು ಮಾಡುವುದು ಸಾಧ್ಯವಿಲ್ಲ. ಕಟಿಂಗ್ ಸ್ಟ್ರೋಕ್ ಯಾವುದೇ ಮೌಲ್ಯವನ್ನು ಸರಿಹೊಂದಿಸಬಹುದಾಗಿದೆ.
 
ಇಂಡೆಕ್ಸಿಂಗ್ ಮೋಶನ್ :
ಇಂಡೆಕ್ಸಿಂಗ್ ಮೋಶನ್ ಅಂದರೆ ಗಿಯರ್ ಶೇಪಿಂಗ್ ಆಪರೇಶನ್ ನಲ್ಲಿರುವ ಫೀಡ್ ಮೋಶನ್ ಆಗಿರುತ್ತದೆ. ಗಿಯರ್ ಕಟರ್ ಮತ್ತು ಕಾರ್ಯವಸ್ತುವನ್ನು ನಿಧಾನವಾಗಿ ತಿರುಗಿಸುವ (ಸ್ಲೋ ರೊಟೇಶನ್) ಆಪರೇಶನ್ ಉರುಟಾದ ಫೀಡ್ ರೇಟ್ ನೀಡುತ್ತವೆ. ಈ ಎರಡೂ ಆರ್.ಪಿ.ಎಮ್. ಗಿಯರ್ ಚೇಂಜ್ ಮೆಕ್ಯಾನಿಸಮ್ ನಿಂದ ಸರಿಹೊಂದಿಸಲಾಗುತ್ತದೆ. ಈ ಸರಿಹೊಂದಾಣಿಕೆಯನ್ನು ಕಟರ್ ರೊಟೇಶನ್ ನ ಒಂದು ಸುತ್ತು = n/ N ಗಿಯರ್ ಬ್ಲಾಂಕ್ ನ ರೀತಿಯಲ್ಲಿ ಮಾಡಲಾಗುತ್ತದೆ.
n : ಕಟರ್ ನಲ್ಲಿರುವ ಹಲ್ಲುಗಳ ಸಂಖ್ಯೆ
N : ಬ್ಲಾಂಕ್ ನಲ್ಲಿ ಕತ್ತರಿಸಲ್ಪಡುವ ಹಲ್ಲುಗಳ ಸಂಖ್ಯೆ.
ತುಂಡಿನ ಆಳ :
ಉರುಟಾದ ಫೀಡ್ ರೇಟ್ ಮತ್ತು ಮೇಲೆ ಕೆಳಗೆ ಆಗುವ ಚಟುವಟಿಕೆ (ರೆಸಿಪ್ರೊಕೇಟಿಂಗ್ ಮೋಶನ್) ಗಿಯರ್ ಬ್ಲಾಂಕ್ ನ ಸುತ್ತಳತೆಯಲ್ಲಿರುವ ಹಲ್ಲುಗಳ ಸಂಖ್ಯೆ, ಬೇಕಾಗಿರುವ ಆಳವು ಸಿಗುವ ತನಕ ನಡೆಯುತ್ತಿರುತ್ತದೆ.
ಗಿಯರ್ ಶೇಪಿಂಗ್ ನ ಲಾಭಗಳು
1. ಕಡಿಮೆ ಸೈಕಲ್ ಟೈಮ್
2. ಮಧ್ಯಮ ಮತ್ತು ದೊಡ್ಡ, ಹೆಚ್ಚು ಸಂಖ್ಯೆ ಇರುವ ಗಿಯರ್ ಗಳಿಗೋಸ್ಕರ ಉಪಯುಕ್ತ.
3. ವರ್ಮ್ ಮತ್ತು ವರ್ಮ್ ವೀಲ್ ಬಿಟ್ಟು ಇನ್ನಿತರ ಎಲ್ಲ ಗಿಯರ್ ಗೋಸ್ಕರ ಉಪಯುಕ್ತ.
4. ನಿರ್ದೋಷವಾದ, ರಿಪಿಟ್ಯಾಬಿಲಿಟಿ ಉಚ್ಚಮಟ್ಟದಲ್ಲಿ ಲಭಿಸುತ್ತದೆ.
ಮಿತಿಗಳು
1. ವರ್ಮ್ ಮತ್ತು ವರ್ಮ್ ವೀಲ್ ತಯಾರಾಗುವುದಿಲ್ಲ.
2. ಹೆಲಿಕಲ್ ಗಿಯರ್ ತಯಾರಿಸುವಾಗ ಅಡಚಣೆಗಳು ಉಂಟಾಗುತ್ತವೆ.

9_1  H x W: 0 x 
 
ಗಿಯರ್ ಶೇಪಿಂಗ್ : ರೇಕ್ ಆಕಾರದ ಕಟರ್ ಬಳಸಿ
ಈ ಪ್ರಕ್ರಿಯೆಯಲ್ಲಿ ರೇಕ್ ಆಕಾರದ ಕಟರ್ ಬಳಸಿ ಗಿಯರ್ ಕತ್ತರಿಸಲಾಗುತ್ತದೆ. ಇದರಲ್ಲಿ ರೇಕ್ ಟೈಪ್ ಕಟರ್, ವರ್ಟಿಕಲ್ ಲೈನ್ ನಲ್ಲಿ ಕಡಿಮೆ ವೇಗದಿಂದ ತಿರುಗುವ ಗಿಯರ್ ಬ್ಲಾಂಕ್ ನಲ್ಲಿ ಹಿಂದೆ-ಮುಂದೆ ಸರಿದು (ಚಿತ್ರ ಕ್ರ. 7) ಗಿಯರ್ ಕಟಿಂಗ್ ಮಾಡಲಾಗುತ್ತದೆ. ಯಂತ್ರಣೆಯನ್ನು ಕೇವಲ ಕೆಳಗೆ ಬರುವ ಸ್ಟ್ರೋಕ್ ನಲ್ಲಿ ಮಾಡಲಾಗುತ್ತದೆ. ಮೇಲ್ಭಾಗದಲ್ಲಿ ಸ್ಟ್ರೋಕ್ ರಿಟರ್ನ್ ಪ್ರವಾಸವನ್ನು ಮಾಡುತ್ತದೆ.
 
ರೇಕ್ ಪ್ಲೇನಿಂಗ್ ಪ್ರೊಸೆಸ್ :
ಈ ಪ್ರೊಸೆಸ್ ರೇಕ್ ಟೈಪ್ ಕಟರ್ ಬಳಸಿ ಸ್ಪರ್ ಮತ್ತು ಹೆಲಿಕಲ್ ಗಿಯರ್ ಹಲ್ಲುಗಳನ್ನು ಕತ್ತರಿಸಲಾಗುತ್ತದೆ. ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ ಹಲ್ಲುಗಳ ಕಟರ್ (ಟೀಥ್ ಕಟರ್) ನಿಧಾನವಾಗಿ ಮಟೀರಿಯಲ್ ತೆಗೆದು ಹಲ್ಲುಗಳನ್ನು ತಯಾರಿಸುತ್ತದೆ. ಈ ಸಂಪೂರ್ಣ ಆಪರೇಶನ್ ನಲ್ಲಿ ಇನ್ನಷ್ಟು ಹಂತಗಳು ಒಳಗೊಂಡಿವೆ. ಇದರಲ್ಲಿ ಗಿಯರ್ ಬ್ಲಾಂಕ್ ನಲ್ಲಿ ಕಟರ್ ಫೀಡ್ ಮಾಡುವುದು, ಬ್ಲಾಂಕ್ ಆಗಾಗ ತಿರುಗಿಸುವುದು ಮತ್ತು ತಿರುಗುತ್ತಿರುವ ರೋಲಿಂಗ್ ಬ್ಲಾಂಕ್ ನೊಂದಿಗೆ ಕಟರ್ ರೇಕ್ ಶಾಶ್ವತವಾಗಿ ಸಿಲುಕುವುದು, ಇಂತಹ ಹಂತಗಳು ಒಳಗೊಂಡಿವೆ. ಪ್ರತಿಯೊಂದು ಬಾರಿ ಕಟರ್ ರೇಕ್ ಸಿಲುಕಿದ ನಂತರ ಗಿಯರ್ ಬ್ಲಾಂಕ್, ಗಿಯರ್ ಹಲ್ಲುಗಳ ಒಂದೇ ಪಿಚ್ ನಷ್ಟು ದೂರದಲ್ಲಿ ತಿರುಗುತ್ತದೆ. ಪ್ರತಿಯೊಂದು ಕಟಿಂಗ್ ನಂತರ ರೇಕ್ ಹೊರಗೆ ತೆಗೆಯಲಾಗುತ್ತದೆ ಮತ್ತು ಗಿಯರ್ ಬ್ಲಾಂಕ್ ನ ರೊಟೇಶನ್ ನೊಂದಿಗೆ ಸಿಲುಕಿಸಲಾಗುತ್ತದೆ.

11_1  H x W: 0  
 
ಗಿಯರ್ ಹಾಬಿಂಗ್ ಪ್ರೊಸೆಸ್
ಈ ಗಿಯರ್ ಯಂತ್ರಣೆಯು ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ. ‌‍ಇದರಲ್ಲಿ ಗಿಯರ್ ಬ್ಲಾಂಕ್ ರೊಟೇಟಿಂಗ್ ಕಟರ್ ನಲ್ಲಿ ತಿರುಗಿಸಲಾಗುತ್ತದೆ. ಈ ರೊಟೇಟಿಂಗ್ ಕಟರ್ ಗೆ ಹಾಬ್ ಎಂದು ಕರೆಯುತ್ತಾರೆ. ಅನೇಕ ಬಿಂದು (ಪಾಯಿಂಟ್) ಇರುವ ಕಟಿಂಗ್ ಟೂಲ್ (ಗಿಯರ್ ಹಾಬ್) ಬಳಸಿ ಗಿಯರ್ ಹಾಬಿಂಗ್ ಮಾಡಲಾಗುತ್ತದೆ.
 
ಈ ಆಪರೇಶನ್ ನಲ್ಲಿ ಹಾಬ್ ಯೋಗ್ಯ ಆರ್.ಪಿ.ಎಮ್.ನಲ್ಲಿ ತಿರುಗುತ್ತಿರುವಾಗ ಗಿಯರ್ ಬ್ಲಾಂಕ್ ಫೀಡ್ ಮಾಡಲಾಗುತ್ತದೆ. ಗಿಯರ್ ಬ್ಲಾಂಕ್ ಕೂಡ್ ತಿರುಗುವಂತೆ ಅಳವಡಿಸಲಾಗುತ್ತದೆ. ಗಿಯರ್ ಬ್ಲಾಂಕ್ ಮತ್ತು ಗಿಯರ್ ಹಾಬ್ ಇವುಗಳ ವೇಗವನ್ನು ಗಿಯರ್ ಹಾಬ್ ನ ಒಂದು ಸುತ್ತಿನ ನಂತರ ಗಿಯರ್ ಬ್ಲಾಂಕ್ ಹಲ್ಲುಗಳ ಪಿಚ್ ನಷ್ಟು ದೂರದಲ್ಲಿ ತಿರುಗುವಂತೆ ಸರಿಹೊಂದಿಸಲಾಗಿರುತ್ತದೆ. ಚಿತ್ರ ಕ್ರ. 9 ರಲ್ಲಿ ಗಿಯರ್ ಹಾಬಿಂಗ್ ನ ಪ್ರಕ್ರಿಯೆಯನ್ನು ತೋರಿಸಲಾಗಿದೆ.

11_2  H x W: 0  
 
ಗಿಯರ್ ಹಾಬಿಂಗ್ ನ ಬಳಕೆಯನ್ನು ವಿವಿಧ ಗಿಯರ್ ಯಂತ್ರಣೆಗಳಿಗೋಸ್ಕರ ಮಾಡಲಾಗುತ್ತದೆ. ಇದರಲ್ಲಿ ಸ್ಪರ್ ಗಿಯರ್, ಹೆಲಿಕಲ್, ಹಿಯರಿಂಗ್ ಬೋನ್ ಸ್ಪೈನ್ ಮತ್ತು ಗಿಯರ್ ಸ್ಪ್ರಾಕೆಟ್ ಇತ್ಯಾದಿಗಳಿವೆ.
ಗಿಯರ್ ಹಾಬಿಂಗ್ ಮಾಡುತ್ತಿರುವಾಗ ಈ ಮುಂದಿನ ಮಹತ್ವದ ಮೂರು ಅಂಶಗಳನ್ನು ನಿಯಂತ್ರಿಸಬೇಕಾಗುತ್ತದೆ.
1. ಇಂಡೆಕ್ಸಿಂಗ್ ಚಟುವಟಿಕೆ (ಮೂಮೆಂಟ್)
2. ಫೀಡ್ ರೇಟ್
3. ಗಿಯರ್ ಬ್ಲಾಂಕ್ ಮತ್ತು ಗಿಯರ್ ಹಾಬಿಂಗ್ ಟೂಲ್ ನಲ್ಲಿರುವ ಕೋನ (ಎಂಗಲ್)
 
ಗಿಯರ್ ಮಿಲ್ಲಿಂಗ್
ಗಿಯರ್ ಮಿಲ್ಲಿಂಗ್ ಪ್ರಕ್ರಿಯೆಯನ್ನು ಮಾಡಿ ಗಿಯರ್ ಕಟಿಂಗ್ ಮಾಡಲಾಗುತ್ತದೆ. ಗಿಯರ್ ಮಿಲ್ಲಿಂಗ್ ಬಳಸಿ ಎಲ್ಲ ರೀತಿಯ ಗಿಯರ್ ತಯಾರಿಸಬಹುದಾಗಿದೆ. ಮಿಲ್ಲಿಂಗ್ ಕಟರ್ ನ ಆಯ್ಕೆ ಗಿಯರ್ ಟೈಪ್ ಮತ್ತು ಮೊಡ್ಯುಲ್ ನಿಂದ ಮಾಡಲಾಗುತ್ತದೆ. ಗಿಯರ್ ಮಿಲ್ಲಿಂಗ್ ಇದು ಒಂದು ರೀತಿಯ ನಿಧಾನವಾಗಿ ಗಿಯರ್ ತಯಾರಿಸುವ ಪ್ರಕ್ರಿಯೆಯಾಗಿದೆ. ಈ ರೀತಿಯಲ್ಲಿ ಒಂದರ ನಂತರ ಇನ್ನೊಂದು ಈ ರೀತಿಯಲ್ಲಿ ಹಲ್ಲುಗಳನ್ನು ಕತ್ತರಿಸಲಾಗುತ್ತದೆ. ಚಿಕ್ಕ ಬ್ಯಾಚ್ ಸೈಜ್ ಗೋಸ್ಕರ ಇದು ಯೋಗ್ಯವಾದ ರೀತಿಯಾಗಿದೆ. ಈ ರೀತಿಯಲ್ಲಿ ಸಾಮಾನ್ಯವಾದ ಮಿಲ್ಲಿಂಗ್ ಮಶಿನ್ ನಲ್ಲಿ ಗಿಯರ್ ತಯಾರಿಸಬಹುದಾಗಿದೆ.

13_2  H x W: 0  
 
ಗಿಯರ್ ಫಿನಿಶಿಂಗ್
ಮೇಲೆ ಉಲ್ಲೇಖಿಸಿದ ಯಾವುದೇ ರೀತಿಯಲ್ಲಿ ತಯಾರಾಗುವ ಗಿಯರ್ ನಿರ್ದೋಷವಾಗಿರುತ್ತದೆ. ಹಾಗೆಯೇ ಗಿಯರ್ ನ ಹಲ್ಲುಗಳ ಸರ್ಫೇಸ್ ನುಣುಪಾಗಿ ಇರುವುದಿಲ್ಲ. ಮಾಪನದಲ್ಲಿ ದೋಷ ಮತ್ತು ಒರಟುತನವಿರುವ ಸರ್ಫೇಸ್ ನಿಂದಾಗಿ ಗಿಯರ್ ಕೆಲಸ ನಿರ್ವಹಿಸುತ್ತಿರುವಾಗ ಶಬ್ದವು ಉಂಟಾಗುತ್ತದೆ. ಹೆಚ್ಚು ಸವೆತವೂ ಆಗುತ್ತದೆ. ಎರಡೂ ಹೊಂದಾಣಿಕೆಯಾಗುವಂತಹ ಗಿಯರ್ ನಲ್ಲಿ ಪ್ಲೇ (ಗ್ಯಾಪ್) ಮತ್ತು ಬ್ಯಾಕ್ ಲ್ಯಾಶ್ ತಯಾರಾಗುತ್ತದೆ. ಈ ಎಲ್ಲದರ ಪರಿಣಾಮವೆಂದರೆ, ಕಳುಹಿಸುವ ಶಕ್ತಿಯು ವ್ಯರ್ಥವಾಗುತ್ತದೆ ಮತ್ತು ವೇಗದ ಅನುಪಾತವೂ ತಪ್ಪುತ್ತದೆ. ಇದನ್ನು ಅಯೋಗ್ಯವಾದ ಶಕ್ತಿಯ ಪ್ರಸರಣ ಎಂದು ಹೇಳುತ್ತಾರೆ. ಇವೆಲ್ಲವನ್ನು ತಡೆಯುವುದಾದರೆ ತಯಾರಾಗಿರುವ ಗಿಯರ್ ನ ಸರ್ಫೇಸ್ ನಲ್ಲಿ ಫಿನಿಶಿಂಗ್ ಮಾಡುವುದು ಅನಿವಾರ್ಯವಾಗುತ್ತದೆ. ಅನೇಕ ಸಲ ಗಿಯರ್ ತಯಾರಾದ ನಂತರ ಹಾರ್ಡನಿಂಗ್ ನಲ್ಲಿ ಕೆಲವು ಭಾಗಗಳು ಅಂಕುಡೊಂಕಾಗುತ್ತವೆ. ಇದರಿಂದಾಗಿ ಎಲ್ಲ ಫಿನಿಶಿಂಗ್ ಕೊನೆಯಲ್ಲಿ ಮಾಡುವುದೇ ಸೂಕ್ತ. ಸಾಮಾನ್ಯವಾಗ ಈ ಕೆಳಗಿನ ಪದ್ಧತಿಯನ್ನು ಬಳಸಿ ಗಿಯರ್ ನ ಫಿನಿಶಿಂಗ್ ಮಾಡಲಾಗುತ್ತದೆ.
1. ಗಿಯರ್ ಶೇವಿಂಗ್
2. ಗಿಯರ್ ನ ಹಲ್ಲುಗಳ ರೋಲ್ ಫಿನಿಶಿಂಗ್
3. ಗಿಯರ್ ಬರ್ನಿಶಿಂಗ್

13_1  H x W: 0  
 
1. ಗಿಯರ್ ಶೇವಿಂಗ್
ಇದರಲ್ಲಿ ಗಿಯರ್ ಶೇವಿಂಗ್ ಟೂಲ್ ಗಿಯರ್ ನೊಂದಿಗೆ ತಡೆದು ತುಂಬಾ ವೇಗದಿಂದ ತಿರುಗಿಸಲಾಗುತ್ತದೆ. ಗಿಯರ್ ಶೇವಿಂಗ್ ಟೂಲ್ ರೇಕ್ ಅಥವಾ ಪಿನಿಯಲ್ ಟೈಪ್ ಇದ್ದು ಅದರ ಹಲ್ಲುಗಳನ್ನು ಹಾರ್ಡನಿಂಗ್ ಮಾಡಲಾಗಿರುತ್ತದೆ. ಇದರಲ್ಲಿ ಸರೇಶನ್ ಗಳಿರುತ್ತವೆ. ಈ ಸರೇಶನ್ ಯಂತ್ರಣೆ ಕಟಿಂಗ್ ಎಡ್ಜ್ ಗಳೆಂದು ಕೆಲಸ ನಿರ್ವಹಿಸುತ್ತದೆ. ಈ ಎಡ್ಜ್ ಗಳು ಗಿಯರ್ ನ ಸ್ಕ್ರೇಪಿಂಗ್ ಆಪರೇಶನ್ ಮಾಡುತ್ತವೆ. ಎರಡೂ ಗಿಯರ್ ಸಿಲುಕಿರುತ್ತವೆ ಮತ್ತು ಅದರಲ್ಲಿ ಒತ್ತಡ (ಪ್ರೆಶರ್) ಕೂಡಾ ಇರುತ್ತದೆ.

15_2  H x W: 0  

15_1  H x W: 0  
 
2. ರೋಲ್ ಫಿನಿಶಿಂಗ್ (ಗಿಯರ್ ಟೂಥ್)
ಈ ಪದ್ಧತಿಯಲ್ಲಿ ಯಾವ ಗಿಯರ್ ನ ಫಿನಿಶಿಂಗ್ ಮಾಡಬೇಕೋ, ಆ ಗಿಯರ್ ನ ಹಲ್ಲುಗಳ ನಿರ್ದೋಷವಾಗಿರುವ ಪ್ರೊಫೈಲ್ ಎರಡು ಹಾರ್ಡನಿಂಗ್ ಮಾಡಿರುವ ರೋಲಿಂಗ್ ಡೈಜ್ ಗಳಲ್ಲಿ ಗಿಯರ್ (ಚಿತ್ರ ಕ್ರ. 12) ಹಿಡಿಯಲಾಗುತ್ತದೆ. ಈ ಮೂರನ್ನೂ ಅವುಗಳ ಅಕ್ಷದ ಸುತ್ತಮುತ್ತ ತಿರುಗಿಸಲಾಗುತ್ತದೆ. ಎರಡೂ ರೋಲಿಂಗ್ ಡೈಜ್ ನಲ್ಲಿ ಫಿನಿಶ್ ಮಾಡುವಂತಹ ಗಿಯರ್ ಒತ್ತಡ ನೀಡಿಯೇ ಹಿಡಿಯಲಾಗುತ್ತದೆ. ಡೈಯ ಮಟೀರಿಯಲ್ ತುಂಬಾ ಹಾರ್ಡ್ ಇರುತ್ತದೆ. ಗಿಯರ್ ಮಟೀರಿಯಲ್ ನ ಹಾರ್ಡ್ ನೆಸ್ ಕಡಿಮೆ ಇರುವುದರಿಂದ ಗಿಯರ್ ನ ಸರ್ಫೇಸ್ ನಲ್ಲಿ ಪ್ಲಾಸ್ಟಿಕ್ ಡೀಫಾರ್ಮೇಶನ್ ನಿಂದಾಗಿ ಹೈಪಾಯಿಂಟ್ಸ್ ಹೊರಟು ಹೋಗಿ ನುಣುಪಾದ ಸರ್ಫೇಸ್ ತಯಾರಾಗುತ್ತದೆ. ಪ್ಲಾಸ್ಟಿಕ್ ಡೀಫಾರ್ಮೇಶನ್ ನಿಂದಾಗಿ ಗಿಯರ್ ನ ಹಲ್ಲುಗಳ ಬಲವು ಹೆಚ್ಚುತ್ತದೆ.

joshi_1  H x W: 
 
3. ಗಿಯರ್ ಬರ್ನಿಶಿಂಗ್
ಈ ಪದ್ಧತಿಯಲ್ಲಿ ಯಾವ ಗಿಯರ್ ಫಿನಿಶ್ ಮಾಡುವುದಿದೆಯೋ, ಅದು ವರ್ಟಿಕಲಿ ಮೇಲೆ ಕೆಳಗೆ ಸರಿಯುವ ಶಾಫ್ಟ್ ನ ಸಹಾಯದಿಂದ ಹಿಡಿದು ಮೂರು ಸಲ ಹಾರ್ಡನಿಂಗ್ ಮಾಡಿರುವ ಬರ್ನಿಶಿಂಗ್ ಗಿಯರ್ ನಲ್ಲಿ (ಚಿತ್ರ ಕ್ರ. 13) ತಡೆಯಲಾಗುತ್ತದೆ. ಗಿಯರ್ ನಲ್ಲಿರುವ ಒರಟುತನವು ಪ್ಲಾಸ್ಟಿಕ್ ನಲ ಡೀಫಾರ್ಮೇಶನ್ ನಿಂದಾಗಿ ಹೊರಟು ಹೋಗಿ ಗಿಯರ್ ನ ಸರ್ಫೇಸ್ ನುಣುಪಾಗುತ್ತದೆ.
 
ಗಿಯರ್ ಗ್ರೈಂಡಿಂಗ್
ಈ ಪದ್ಧತಿಯಲ್ಲಿ ವಿಶಿಷ್ಟ ಆಕಾರದ ಎಬ್ರೆಸಿವ್ ಗ್ರೈಂಡಿಂಗ್ ವೀಲ್ ಬಳಸಲಾಗುತ್ತದೆ. ಫಿನಿಶ್ ಮಾಡಬೇಕಾಗಿರುವ ಗಿಯರ್, ಗ್ರೈಂಡಿಂಗ್ ವೀಲ್ ನ ಹಿಂದೆ – ಮುಂದೆ (ಚಿತ್ರ ಕ್ರ. 14) ಮಾಡಲಾಗುತ್ತದೆ. ಗಿಯರ್ ನ ಪ್ರತಿಯೊಂದು ಹಲ್ಲುಗಳ ಗ್ರೈಂಡಿಂಗ್ ಮಾಡಲಾಗುತ್ತದೆ. ಇದರಿಂದ ಗಿಯರ್ ನುಣುಪಾಗುತ್ತದೆ. 
 
ಗಿಯರ್ ಲ್ಯಾಪಿಂಗ್
ಲ್ಯಾಪಿಂಗ್ ಪ್ರೊಸೆಸ್ ಮೊದಲು ತಯಾರಿಸಿರುವ ಹಲ್ಲುಗಳ ಸರ್ಫೇಸ್ ನ ಫಿನಿಶ್ ಹೆಚ್ಚಿಸಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ಯಾಪ್ ಮಾಡುವುವಂತಹ ಗಿಯರ್, ಕಾಸ್ಟ್ ಆಯರ್ನ್ ನ ಹಲ್ಲುಗಳಿರುವ ಲ್ಯಾಪ್ ನಲ್ಲಿ ಸಿಲುಕಿಸಿ ತಿರುಗಿಸಲಾಗುತ್ತದೆ. ಹಲ್ಲುಗಳ ಎಬ್ರೆಸಿವ್ ಪೇಸ್ಟ್ ಬಿಡಲಾಗುತ್ತದೆ. ಈ ಪೇಸ್ಟ್ ಆಯಿಲ್ ನಲ್ಲಿ ಒಟ್ಟು ಮಾಡಿ ಹಲ್ಲುಗಳಿಂದ ಹರಿಸಲಾಗುತ್ತದೆ. ಗಿಯರ್ ಅಥವಾ ಲ್ಯಾಪಿಂಗ್ ಟೂಲ್ ಎರಡಲ್ಲಿ ಒಂದೇ ಅಕ್ಷದಲ್ಲಿ ಹಿಂದೆ ಮುಂದೆ ಮಾಡಲಾಗುತ್ತದೆ. ಉದಾಹರಣೆ, ಗಿಯರ್ ಲ್ಯಾಪಿಂಗ್ ನ ಉಪಯೋಗವನ್ನು ಹಾರ್ಡನಿಂಗ್ ಮಾಡಿರುವ ಗಿಯರ್ ನ ಸೆಟ್ ಗಳಿಗೆ ಹೆಚ್ಚಾಗಿ ಮಾಡಲಾಗುತ್ತದೆ. ಸಮತಟ್ಟಾದ ಡಿಸ್ಕ್ ನಂತಹ ಭಾಗಗಳಿಗೆ ಎಲ್ಲಿ ಮಾಪನಗಳು ನಿರ್ದೋಷವಾಗಿ ಬೇಕಾಗುತ್ತವೆಯೋ, ಅದರ ಜೊತೆಗೆ ಉಚ್ಚಮಟ್ಟ ಸರ್ಫೇಸ್ ಫಿನಿಶ್ ಬೇಕಾಗುತ್ತದೆಯೋ ಮತ್ತು ಎರಡೂ ಸರ್ಫೇಸ್ ಗಳು ಒಂದರಲ್ಲೊಂದು ದೃಢವಾಗಿ ಅಳವಡಿಸಲಾಗುತ್ತವೆಯೋ, ಇಂತಹ ಸ್ಥಳದಲ್ಲಿ ಲ್ಯಾಪಿಂಗ್ ತುಂಬಾ ಉಪಯುಕ್ತವಾಗಿದೆ.
 
ಗಿಯರ್ ಹೋನಿಂಗ್
ತಯಾರಿಸಿರುವ ಗಿಯರ್ ಹಲ್ಲುಗಳ ಸುಪರ್ ಫಿನಿಶಿಂಗ್ ಮಾಡಲು ಈ ರೀತಿಯನ್ನು ಬಳಸಲಾಗುತ್ತದೆ. ಗಿಯರ್ ಟೂಥ್ ಪ್ರೊಫೈಲ್ ನಲ್ಲಿ ಹೋನ್ ತಿಕ್ಕಲ್ಪಡುತ್ತವೆ. ಈ ರೀತಿಯನ್ನು ಇತ್ತಿಚೇಗೆ ಹೆಚ್ಚೇನು ಉಪಯೋಗಿಸಲಾಗುವುದಿಲ್ಲ. ಎಲ್ಲಿ ಭಾಗಗಳಿಗೆ ತುಂಬಾ ನಿರ್ದೋಷವಾದ ಒಳ ವ್ಯಾಸದ ಅಗತ್ಯವಿರುತ್ತದೆಯೋ, ಅಲ್ಲಿ ಹೋನಿಂಗ್ ತುಂಬಾ ಉಪಯುಕ್ತವಾಗಿರುತ್ತದೆ.
 
 

joshi_2  H x W: 
ಸತೀಶ ಜೋಶಿ
ಲೇಖಕರು ಮತ್ತು ಸಲಹೆಗಾರರು 
8625975219
 
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
 
 
@@AUTHORINFO_V1@@