ವೆಲ್ಡಿಂಗ್ ಎಂಬುದು ಎರಡು ಭಾಗಗಳನ್ನು ಜೋಡಿಸುವಂತಹ ಮೂಲಭೂತವಾದ ಕೆಲಸದ ರೀತಿಯಾಗಿದೆ. ಇದನ್ನು ಜಗತ್ತಿನಾದ್ಯಂತ ಎಲ್ಲೆಡೆಯಲ್ಲಿಯೂ ಯಾವುದೇ ಕೈಗಾರಿಕೋದ್ಯಮಗಳಲ್ಲಿ ಬಳಸಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಜೋಡಣೆಗೋಸ್ಕರ ಬೇಕಾಗುವಂತಹ ಖರ್ಚು ತುಂಬಾ ಕಡಿಮೆ ಇರುತ್ತದೆ, ಇದೇ ಇದರ ಬಳಕೆಯ ಕಾರಣವಾಗಿದೆ. ವೆಲ್ಡಿಂಗ್ ಕೆಲಸದ ರೀತಿಯಲ್ಲಿ ತಯಾರಿಸಿರುವ ಭಾಗಗಳ (ಪಾರ್ಟ್ಸ್) ಶಕ್ತಿಯು (ಸ್ಟ್ರೆಂಥ್) ಅದರಲ್ಲಿರುವ ಜಾಯಿಂಟ್ಸ್ಗಳ ಶಕ್ತಿಗೆ ಅವಲಂಬಿಸಿರುತ್ತದೆ. ಇಂತಹ ಜೋಡಣೆಗಳ ಶಕ್ತಿಯು ಎರಡು ಭಾಗಗಳನ್ನು ಜೋಡಿಸಲ್ಪಟ್ಟಿರುವ ಆ ಭಾಗಗಳಿಗೆ ಬಳಸಿರುವ ಲೋಹಗಳ ಗುಣಧರ್ಮ ಮತ್ತು ವೆಲ್ಡಿಂಗ್ ಮಾಡುತ್ತಿರುವಾಗ ಅಳವಡಿಸಿರುವ ಪ್ರೊಸೆಸ್ ಪ್ಯಾರಾಮೀಟರ್ಗಳಲ್ಲಿ ಅವಲಂಬಿಸಿರುತ್ತದೆ.
ಕಾಲದ ಪ್ರವಾಹದಲ್ಲಿ ಉತ್ಪಾದನೆಗಳ ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿರುವಾಗ ಪ್ರತಿಯೊಂದು ಕಡೆಯಲ್ಲಿ ಭಾಗಗಳ ಕೆಲಸಕ್ಕೆ ಅನುಸಾರವಾಗಿ ಅದರ ಆಕಾರ, ರಚನೆ, ಹೊಂದಾಣಿಕೆ ಮತ್ತು ಮೈಕ್ರೋಸ್ಟ್ರಕ್ಚರ್ನ ಬೇಡಿಕೆಗಳೂ ಹೆಚ್ಚಾದವು. ಉದಾಹರಣೆ,
1.ಬೇರೆಬೇರೆ ಲೋಹಗಳ ಜೋಡಣೆಗಳಿರುವುದು. (ಕಬ್ಬಿಣ- ತಾಮ್ರ, ಕಬ್ಬಿಣ- ಹಿತ್ತಾಳೆ, ತಾಮ್ರ- ಅಲ್ಯುಮಿನಿಯಮ್ ಇತ್ಯಾದಿ)
2.ಜೋಡಣೆಯು ಒಟ್ಟಾಗಿರುವುದು ಮತ್ತು ಒಂದೇ ರೀತಿಯಲ್ಲಿರುವುದು.
3.ಜೋಡಣೆಯ ಶಕ್ತಿಯ ಸ್ತರ.
4.ಪೊರೋಸಿಟಿ ಇಲ್ಲದಿರುವುದು.
5.ಜೋಡಣೆಯಲ್ಲಿ ಕ್ರ್ಯಾಕ್ ಇಲ್ಲದಿರುವುದು.
ಒಟ್ಟಾರೆ ಎಲ್ಲಿ ಕಾರ್ಯವಸ್ತುವಿಗೆ ಅಥವಾ ಯಂತ್ರೋಪಕರಣಗಳಿಗೆ ಅಥವಾ ಮಶಿನ್ನ ಸ್ಟ್ಯಾಟಿಕ್ಗೆ ಒತ್ತಡವು ಉಂಟಾಗುತ್ತದೆಯೋ, ಅಲ್ಲಿ ಫ್ಯುಜನ್ ವೆಲ್ಡಿಂಗ್ ನಿಂದ ಜೋಡಿಸಿರುವ ಭಾಗವು ಸಾಕಷ್ಟು ಪ್ರಮಾಣದಲ್ಲಿ ಸೂಚಿಸಲಾಗಿದೆ ಮತ್ತು ಬಳಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅನಪೇಕ್ಷಿತ ಕಾರಣದಿಂದಾಗಿ ಜೋಡಣೆಯು ತುಂಡಾಗಿ ಯಾವುದೇ ಒಂದು ಭಾಗವು ನಿಷ್ಪ್ರಯೋಜಕವಾದರೂ ಕೂಡಾ, ಅದರಿಂದ ಉಂಟಾಗುವ ನಷ್ಟದ ತೀವ್ರತೆ ಹೆಚ್ಚೇನು ಇರುವುದಿಲ್ಲ. ಆದರೆ ಎಲ್ಲಿ ಕಾರ್ಯವಸ್ತುವಿಗೆ ಅಥವಾ ಮಶಿನ್ಗೆ ಡೈನಾಮಿಕ್ ಅಥವಾ ಟಾರ್ಶನಲ್ ಒತ್ತಡವು ಬರುತ್ತದೆಯೋ, ಅಲ್ಲಿ ಫ್ಯುಜನ್ ವೆಲ್ಡಿಂಗ್ ನಿಂದ ಜೋಡಿಸಿರುವ ಭಾಗವು ನಿಷ್ಕ್ರೀಯವಾಗುವ ಸಾಧ್ಯತೆಯು ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಭಾಗಗಳು ತುಂಡಾಗಿ ಅಪಘಾತಗಳಾದಲ್ಲಿ ಅದರಿಂದಾಗುವ ನಷ್ಟವು ತುಂಬಾ ಬೃಹತ್ ಪ್ರಮಾಣದಲ್ಲಿರುತ್ತದೆ. ಅದಕ್ಕೋಸ್ಕರ ತುಂಬಾ ಹೆಚ್ಚು ಮೌಲ್ಯವನ್ನು ಸಲ್ಲಿಸಬೇಕಾಗುತ್ತದೆ. ಈ ಮಿತಿಯಿಂದಾಗಿ ಮೂಡಿಬಂದಿರುವ ಸವಾಲುಗಳಿರುವ ಪರಿಸ್ಥಿತಿಯಿಂದಲೇ ಫ್ರಿಕ್ಷನ್ ವೆಲ್ಡಿಂಗ್ ನ ಉದಯವಾಯಿತು.
ಫ್ರಿಕ್ಷನ್ ವೆಲ್ಡಿಂಗ್ ನ ಕಲ್ಪನೆಯು ಉದಯದ ಕಥೆಯೂ ತುಂಬಾ ಅಚ್ಚರಿಯನ್ನುಂಟು ಮಾಡುವಂತಹದ್ದಾಗಿದೆ. ಸುಮಾರು 125 ವರ್ಷಗಳ ಹಿಂದೆ ಒಂದು ಕಾರಖಾನೆಯಲ್ಲಿ ಲೇಥ್ ಮಶಿನ್ನಲ್ಲಿ ಕೆಲಸ ಮಾಡುತ್ತಿರುವಾಗ ಸ್ಪಿಂಡಲ್ ತಿರುಗುತ್ತಿರುವಾಗ ಟರ್ನಿಂಗ್ ಟೂಲ್ನ ಮುಂಭಾಗದ ತುದಿಯು ತುಂಡಾಯಿತು. ಕಾರ್ಯವಸ್ತುವು ತಿರುಗುತ್ತಿತ್ತು, ಆದರೆ ಪ್ರತ್ಯಕ್ಷವಾಗಿ ಕಟಿಂಗ್ನ ಕ್ರಿಯೆಯು ಆಗುತ್ತಿರಲಿಲ್ಲ. ಸ್ವಾಭಾವಿಕವಾಗಿಯೇ ಅದರೊಂದಿಗೆ ಸಂಪರ್ಕಕ್ಕೆ ಬಂದಿರುವ ಕಾರ್ಯವಸ್ತು ಮತ್ತು ಟೂಲ್ ಇವೆರಡರ ಸರ್ಫೇಸ್ನಲ್ಲಿ ಜೋರಾಗಿ ಘರ್ಷಣೆಯು ಪ್ರಾರಂಭವಾಗಿ ಕಿಡಿಗಳು ಉಂಟಾಗುವ ಪರಿಸ್ಥಿತಿಯು ಉದ್ಭವಿಸಿತು. ಈ ಪರಿಸ್ಥಿತಿಯು ಅಲ್ಲಿದ್ದ ಆಪರೇಟರ್ನ ಗಮನಕ್ಕೆ ಬಂದ ತಕ್ಷಣ ಅವನು ಸ್ಪಿಂಡಲ್ ನಿಲ್ಲಿಸಿ ಕೆಲಸವನ್ನೂ ನಿಲ್ಲಿಸಿದನು. ಖಚಿತವಾಗಿ ಏನಾಗಿದೆ, ಎಂದು ನೋಡುವಷ್ಟರಲ್ಲಿಯೇ ಸ್ವಲ್ಪ ಸಮಯವು ಕಳೆಯಿತು. ಇದರ ನಡುವಿನ ಕಾಲಾವಧಿಯಲ್ಲಿ ಕಾರ್ಯವಸ್ತು ಸ್ವಲ್ಪ ತಂಪಾಯಿತು. ಕಾರ್ಯವಸ್ತುವನ್ನು ತೆಗೆಯಲು ಟೂಲ್ಪೋಸ್ಟ್ ಹಿಂದೆ ಸರಿಸುವಾಗ ಟೂಲ್ ಕಾರ್ಯವಸ್ತುವಿಗೆ ದೃಢವಾಗಿ ಅಂಟಿಕೊಂಡಿರುವುದು ಗಮನಕ್ಕೆ ಬಂತು. ಈ ಘಟನೆಯೇ ಮುಂದೆ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗಿ ಅದು ಫ್ರಿಕ್ಷನ್ ವೆಲ್ಡಿಂಗ್ ಎಂಬ ಹೆಸರಿನಲ್ಲಿ ಪ್ರಚಲಿತವಾಯಿತು.
ಫ್ರಿಕ್ಷನ್ ವೆಲ್ಡಿಂಗ್ ನಲ್ಲಿ ಎರಡು ಭಾಗಗಳನ್ನು ಜೋಡಿಸಲು ಎಷ್ಟು ಉಷ್ಣಾಂಶದ ಅಗತ್ಯವಿದೆಯೋ, ಅದು ಹೆಸರಿಗೆ ತಕ್ಕಂತೆ ಘರ್ಷಣೆಯಿಂದ (ಫ್ರಿಕ್ಷನ್ನಿಂದ) ತಯಾರಿಸಲಾಗುತ್ತದೆ. ಈ ಉಷ್ಣಾಂಶದ ಹಂತವು ಎರಡು ಲೋಹಗಳ ಸಂಪರ್ಕಕ್ಕೆ ಬಂದಿರುವ ಭಾಗವು ಮೇಣದಂತೆ ಮೆತ್ತಗೆ (ಪ್ರತ್ಯಕ್ಷವಾಗಿ ಕರಗುವ ಮುಂಚಿನ ಸ್ಥಿತಿ) ಆಗುವಷ್ಟು ಹೆಚ್ಚಾಗುತ್ತದೆ. ಆದೇ ಸಮಯದಲ್ಲಿ ಅದರಲ್ಲಿ ನಿರ್ದಿಷ್ಟವಾದ ಒತ್ತಡವನ್ನು ನೀಡಿದಲ್ಲಿ ನಂತರ ಆ ಭಾಗವು ತಂಪಾದ ನಂತರ ಒಟ್ಟಾಗುತ್ತದೆ.
ಇಂತಹ ಕೆಲಸದ ರೀತಿಯಲ್ಲಿ ಒಂದು ಮಹತ್ವದ ಲಾಭವೆಂದರೆ, ಘರ್ಷಣೆಯಿಂದಾಗಿ ಉಂಟಾದ ಉಷ್ಣತೆಯೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲ ಸರ್ಫೇಸ್ನಲ್ಲಿಯೂ ಒಂದೇ ರೀತಿಯಲ್ಲಿ ಹರಡುತ್ತದೆ ಮತ್ತು ಅದರ ಸ್ತರವೂ ಒಂದೇ ರೀತಿಯಲ್ಲಿರುತ್ತದೆ. ಈ ಉಷ್ಣತೆಯಿಂದಲೇ ಲೋಹಗಳ ಸಂಪರ್ಕ ಪಡೆದಿರುವ ಸರ್ಫೇಸ್ ಮೆತ್ತಗೆ ಆಗಿ ಒಂದೇ ತುಂಡಾಗಿ ಜೋಡಿಸಲ್ಪಡುತ್ತದೆ. ಈ ಜೋಡಣೆಯು ಮೇಲಿಂದ ಮೇಲೆ (ಪೆರಿಫೇರಲ್ ಅಥವಾ ಸುಪರ್ಫಿಶಿಯಲ್) ಆಗಿರದೇ ಇಷ್ಟರ ತನಕ ಒಟ್ಟಾಗಿರುತ್ತದೆ. ಇಲ್ಲಿ ತುಂಬಿಸುವಂತಹ ಲೋಹಗಳ (ಫಿಲರ್ ಮಟೀರಿಯಲ್) ಅಗತ್ಯವಿರುತ್ತದೆ.
ಫ್ರಿಕ್ಷನ್ ವೆಲ್ಡಿಂಗ್ ನ ವಿಧಗಳು
ಫ್ರಿಕ್ಷನ್ ವೆಲ್ಡಿಂಗ್ ನಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಈ ಎರಡೂ ವಿಧಗಳಲ್ಲಿ ರೋಟರಿ ಫಿಕ್ಷನ್ ವೆಲ್ಡಿಂಗ್ ಈ ಕೆಲಸ ರೀತಿಯು ಹೆಚ್ಚು ಪ್ರಚಾರದಲ್ಲಿದೆ. ಈ ಕೆಲಸದ ರೀತಿಯ ಕ್ರಮ ಪ್ರಕಾರವಾಗಿ ಮೂರು ಹಂತಗಳನ್ನು ಚಿತ್ರಗಳ ರೂಪದಲ್ಲಿ ಈ ಮುಂದೆ ತೋರಿಸಲಾಗಿದೆ.
ಮೊದಲ ಹಂತ
ತಿರುಗುವ ಭಾಗ ಎಡ ಬದಿಯಲ್ಲಿರುವ ಸ್ಪಿಂಡಲ್ ಮೇಲಿರುವ ಚಕ್ ನಲ್ಲಿ ಹಿಡಿದಿಟ್ಟು ಸ್ಥಿರವಾದ ಭಾಗವನ್ನು ಬಲಬದಿಯಲ್ಲಿರುವ ಹೋಲ್ಡರ್ಸ್ ನಲ್ಲಿ ಹಿಡಿದು ಒಂದಕ್ಕೊದರ ಸಂಬಂಧವನ್ನು ಉಂಟು ಮಾಡಲಾಗುತ್ತದೆ.
ಎರಡನೇ ಹಂತ
ಸ್ಪಿಂಡಲ್ ನಲ್ಲಿರುವ ಚಕ್ ನಲ್ಲಿ ಹಿಡಿದಿಟ್ಟಿರುವ ಭಾಗಕ್ಕೆ ಗೋಲಾಕಾರವಾಗಿ ತಿರುಗಿಸಿ ನಿರ್ಧರಿಸಿರುವ ವೇಗದ ಮಟ್ಟಕ್ಕೆ ತರಲಾಗುತ್ತದೆ ಮತ್ತು ಸ್ಥಿರವಾದ ಭಾಗದಲ್ಲಿ ನಿರ್ಧರಿಸಿರುವ ಎಕ್ಸಿಸ್ ಒತ್ತಡವನ್ನು ನೀಡಲಾಗುತ್ತದೆ.
ಮೂರನೇ ಹಂತ
ಗೋಲಾಕಾರವಾಗಿ ತಿರುಗುವ ವೇಗವನ್ನು ನಂತರ ನಿಲ್ಲಿಸಿ, ಒಂದೇ ಜೋಡಣೆಯು ತಯಾರಾಗುವ ತನಕ ಎಕ್ಸಿಸ್ ಒತ್ತಡವನ್ನು ಸ್ವಲ್ಪ ಸಮಯಕ್ಕೋಸ್ಕರ ಹೆಚ್ಚಿಸಲಾಗುತ್ತದೆ.
ಈ ಕೆಲಸದ ರೀತಿಯಲ್ಲಿ ಜೋಡಣೆಯ ಗುಣಮಟ್ಟವು ತುಂಬಾ ಪ್ಯಾರಾಮೀಟರ್ಗಳಿಗೆ ಅವಲಂಬಿಸಿರುತ್ತದೆ. ಜೋಡಿಸಲಾಗುವಂತಹ ಲೋಹಗಳ ಮಟೀರಿಯಲ್, ಅದರ ಮೈಕ್ರೋಸ್ಟ್ರಕ್ಚರ್, ಅವುಗಳ ಆಕಾರ, ಭೂಮಿತಿ ಮತ್ತು ಕಾರ್ಯವಸ್ತುಗಳಿಗೆ ಘರ್ಷಿಸಲ್ಪಡುವ ಸರ್ಫೇಸ್ನ ಸ್ಥಿತಿ ಇಂತಹ ಮೂಲಭೂತವಾದ ಅಂಶಗಳ ಕುರಿತು ಮೊದಲಾಗಿ ವಿಚಾರ ಮಾಡಲಾಗುತ್ತದೆ ಮತ್ತು ಬೇಕಾಗಿರುವ ಗುಣಮಟ್ಟದ ಜೋಡಣೆಯನ್ನು ಪಡೆಯಲು ಮಶಿನ್ನಲ್ಲಿ ಈ ಕೆಳಗಿನ ಪ್ಯಾರಾಮೀಟರ್ಗಳನ್ನು ನಿಯಂತ್ರಿಸಿ ನಿರ್ಧರಿಸಲಾಗುತ್ತದೆ.
• ಸ್ಪಿಂಡಲ್ ನ ವೇಗ
• ಲಿನಿಯರ್ ಫೀಡ್
• ಫ್ರಿಕ್ಷನ್ ಪ್ರೆಶರ್
• ಫ್ರಿಕ್ಷನ್ ಟೈಮ್
• ಬ್ರೇಕಿಂಗ್ ಟೈಮ್
• ಅಪ್ಸೆಟ್ ಡಿಲೇ ಟೈಮ್
• ಅಪ್ಸೆಟ್ ಟೈಮ್
ಇಂತಹ ಕೆಲಸದ ರೀತಿಯಲ್ಲಿ ತಯಾರಾಗುವಂತಹ ಜೋಡಣೆಗಳ ಗುಣಮಟ್ಟದ ತಪಾಸಣೆಯನ್ನು ಮಾಡುವಾಗ ಅನೇಕ ಸಲ ಪ್ರಾರಂಭಕ್ಕೆ ಖಾತರಿಯಾಗುವ ತನಕ ಅದರಲ್ಲಿ ತುಂಡಾಗುವ ತನಕ ಒತ್ತಡವನ್ನು ನೀಡಿ
ತಪಾಸಣೆಯನ್ನು ಮಾಡಲಾಗುತ್ತದೆ. ಇಂತಹ ತಪಾಸಣೆಯಲ್ಲಿ ಜೋಡಣೆಯು ತುಂಡಾಗುವ ಬದಲಾಗಿ ಮೂಲ ಭಾಗವು ತುಂಡಾಗುವಷ್ಟು ಜೋಡಣೆಯು ದೃಢವಾಗುತ್ತದೆ, ಎಂಬುದು ಯಾವಾಗಲೂ ಗಮನಕ್ಕೆ ಬಂತು. (ಚಿತ್ರ ಕ್ರ. 1 ಮತ್ತು ಚಿತ್ರ ಕ್ರ. 2 ನೋಡಿರಿ.)
ಈ ರೀತಿಯಲ್ಲಿ ವಿವಿಧ ಗುಣಧರ್ಮಗಳ ಲೋಹಗಳು ಸರಿಯಾಗಿ ಜೋಡಿಸಲ್ಪಡುತ್ತವೆ, ಆದರೆ ವಿವಿಧ ಆಕಾರದ ಭಾಗಗಳೂ ಜೋಡಿಸಲ್ಪಡುತ್ತವೆ. (ಚಿತ್ರ ಕ್ರ. 3, 4, 5, 6, 7, 8 ನೋಡಿರಿ)
ಮೇಲೆ ತೋರಿಸಿರುವ ಕಾರ್ಯವಸ್ತುಗಳು ಒಂದು ವೇಳೆ ನಿಯಮಿತ ಆಕಾರದ್ದಾಗಿದ್ದರೂ ಅನಿಯಮಿತ ಆಕಾರದ ಹಾಗೆಯೇ ಎರಡು ಬೇರೆಬೇರೆ ಲೋಹಗಳ ಕಾರ್ಯವಸ್ತುಗಳೂ ಈ ಕೆಲಸದ ರೀತಿಯಲ್ಲಿ ತುಂಬಾ ಬರವಸೆಯಿಂದ ಜೋಡಿಸುವುದು ಸಾಧ್ಯವಿದೆ.
ಫ್ರಿಕ್ಷನ್ ವೆಲ್ಡಿಂಗ್ ಈ ಕೆಲಸದ ರೀತಿಯಲ್ಲಿ ಇನ್ನಿತರ ವೆಲ್ಡಿಂಗ್ ನ ಕೆಲಸದ ರೀತಿಗಿಂತ ಎಷ್ಟೋ ಪಟ್ಟು ಸೂಕ್ತವಾಗಿರುತ್ತವೆ. ಆದ್ದರಿಂದ ಇಂದಿನ ದಿನಗಳಲ್ಲಿ ನ್ಯು ಪ್ರಾಡಕ್ಟ್ ಡೆವ್ಲಪ್ಮೆಂಟ್ ಮಾಡುವಾಗ ಎಲ್ಲಿ ಉನ್ನತ ಗುಣಮಟ್ಟದ ಮತ್ತು ಭರವಸೆಯ ವೆಲ್ಡಿಂಗ್ ಜೋಡಿಸಬೇಕಾಗುತ್ತದೆಯೋ ಅಲ್ಲಿ ಈ ರೀತಿಯನ್ನು ಬಳಸಲಾಗುತ್ತದೆ.
ಫ್ರಿಕ್ಷನ್ ವೆಲ್ಡಿಂಗ್ ನ ಮುಖ್ಯ ಲಾಭಗಳು
1.ಇದು ಒಂದು ಜೋಡಣೆಯನ್ನು ನೀಡುವುದಕ್ಕಿಂತ ಜೋಡಣೆಯನ್ನು ಮಾಡುವಂತಹ ಕೆಲಸದ ರೀತಿಯಾಗಿದೆ. ಇದರಲ್ಲಿ ಫಿಲರ್ ಮಟೀರಿಯಲ್ ಉಪಯೋಗಿಸುವ ಅಗತ್ಯವಿಲ್ಲ.
2.ಈ ಕೆಲಸದ ರೀತಿಯು ಸಂಪೂರ್ಣವಾಗಿ ಮಶಿನ್ ನಿಂದ ನಿಯಂತ್ರಿಸಲ್ಪಟ್ಟಿದ್ದರಿಂದ ಇದರಲ್ಲಿ ಕೆಲಸಗಾರರ ಕೌಶಲ್ಯ ಅಥವಾ ಅದರ ಕುರಿತಾದ ದೃಷ್ಟಿಕೋನವೂ ಈ ಉತ್ಪಾದನೆಯ ಗುಣಮಟ್ಟಕ್ಕೆ ಅವಲಂಬಿಸಿರುವುದಿಲ್ಲ.
3.ಹೆಚ್ಚು ಉತ್ಪಾದನೆಗಳನ್ನು ಮಾಡಲಾಗುವಲ್ಲಿ ಯಾಂತ್ರಿಕೀಕರಣ ಮಾಡುವುದು ಇದು ಈ ಕೆಲಸದ ರೀತಿಯಿಂದಾಗಿ ಸುಲಭವಾಗುತ್ತದೆ.
4.ಕ್ಲಿಷ್ಟವಾದ ಫೋರ್ಜಿಂಗ್ನ ಕಾರ್ಯವಸ್ತುವನ್ನು ಈ ರೀತಿಯ ಪದ್ಧತಿಯ ಸಹಾಯದಿಂದ ಸುಲಭ ಮತ್ತು ಅಚ್ಚುಕಟ್ಟಾಗಿ ಆಗುತ್ತವೆ ಮತ್ತು ಫ್ಲೇಶ್ ಅಥವಾ ಫ್ಲಕ್ಸ್ ನ ರೂಪದಲ್ಲಾಗುವ ಲೋಹಗಳ ಅನಾವಶ್ಯಕವಾದ ನಷ್ಟವು ತಡೆಯಲ್ಪಡುತ್ತದೆ.
5.ಇಂತಹ ಕೆಲಸದ ರೀತಿಗೆ ಯಾವುದೇ ರೀತಿಯಲ್ಲಿ ಅತಿರಿಕ್ತವಾದ ವಿದ್ಯುತ್ ಪ್ರವಾಹವು ಬೇಕಾಗುವುದಿಲ್ಲ. ಇದರಿಂದಾಗಿ ಕಡಿಮೆ ಬಲದಿಂದ ಕೆಲಸವನ್ನು ಮಾಡುವುದು ಸಾಧ್ಯವಾಗಿದೆ. ಇದರ ಹೊರತಾಗಿ ಮುಗಿಯುವ ಅಥವಾ ಹೆಚ್ಚಾಗಿ ಬಳಸಲಾಗುವ (ಕಂಜ್ಯುಮೇಬಲ್) ಮಟೀರಿಯಲ್ ಕೂಡಾ ಬೇಕಾಗುವುದಿಲ್ಲ. ಇದರಿಂದಾಗಿ ಇದು ಲಾಭವನ್ನುಂಟು ಮಾಡುತ್ತದೆ.
6.ಕೆಲಸಗಾರರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವಂತಹ ಯಾವುದೇ ಹೊಗೆ, ಗಾಳಿ ಇತ್ಯಾದಿ ನಿರ್ಮಾಣವಾಗುವುದಿಲ್ಲ. ವೆಲ್ಡಿಂಗ್ ನ ಸ್ಪೆಟರ್ಸ್ ಹಾರುವುದಿಲ್ಲ. ಇದರಿಂದಾಗಿ ಅಪಘಾತಗಳಾಗುವ ಸಾಧ್ಯತೆಯೂ ಇರುವುದಿಲ್ಲ. ಪರಿಸರದ ದೃಷ್ಟಿಯಲ್ಲಿ ಇದು ತುಂಬಾ ಸ್ವಚ್ಫವಾದ ಕೆಲಸದ ರೀತಿಯಾಗಿದೆ.
7.ವಿವಿಧ ಗುಣಧರ್ಮಗಳಿರುವ ಲೋಹಗಳನ್ನು ಜೋಡಿಸುವುದೂ ಸಾಧ್ಯವಾಗಿದೆ. ಉದಾಹರಣೆ, ಅಲ್ಯುಮಿನಿಯಮ್- ತಾಮ್ರ, ಅಲ್ಯುಮಿನಿಯಮ್- ಕಬ್ಬಿಣ. ಇಂತಹ ಕೆಲಸದ ರೀತಿಯು ಸುಮಾರು 2 ರಿಂದ 100 ಪಟ್ಟು ವೇಗವಾಗಿರುತ್ತದೆ.
8.ಈ ಕೆಲಸದ ರೀತಿಯಲ್ಲಿ ಸ್ವಾಲಿಡಿಫಿಕೇಶನ್ ದೋಷಗಳು ಕಂಡುಬರುವುದಿಲ್ಲ. ಉದಾಹರಣೆ, ಪೋರೋಸಿಟಿ, ಬ್ಲೋ ಹೋಲ್ಸ್. ತಯಾರಾಗುವಂತಹ ಜೋಡಣೆಗಳು ಇನ್ನಿತರ ವೆಲ್ಡಿಂಗ್ ನ ಕೆಲಸದ ರೀತಿಗಿಂತ ತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಯಲ್ಲಿ ತುಂಬಾ ಸುಲಭ ಮತ್ತು ಲಾಭದಾಯಕವಾಗಿರುತ್ತವೆ.
ಫ್ರಿಕ್ಷನ್ ವೆಲ್ಡಿಂಗ್ ಕೆಲಸದ ರೀತಿಯಲ್ಲಿರುವ ಹಲವಾರು ಮಿತಿಗಳು
1.ಫ್ರಿಕ್ಷನ್ ವೆಲ್ಡಿಂಗ್ ಗೋಸ್ಕರ ಬೇಕಾಗುವ ಮಶಿನ್ ಗಳು ಹೋಲಿಕೆಯಲ್ಲಿ ದುಬಾರಿಯಾಗಿರುತ್ತವೆ. ಇದರಿಂದಾಗಿ ಪ್ರಾರಂಭದ ಬಂಡವಾಳದ ಮೊತ್ತವು ಹೆಚ್ಚಾಗುತ್ತದೆ.
2.ಮಶಿನ್ನ ಅಪೇಕ್ಷಿತವಾದ ರಚನೆ ಮತ್ತು ಸ್ಪೆಸಿಫಿಕೇಶನ್ ಜೋಡಿಸಲ್ಪಡುವ ಭಾಗಗಳ ಆಕಾರಕ್ಕೆ, ಗುಣಧರ್ಮ ಮತ್ತು ತಯಾರಾಗುವ ಮಶಿನ್ಗಳ ಗುಣಮಟ್ಟಕ್ಕೆ ಅವಲಂಬಿಸಿರುವುದರಿಂದ ಮಶಿನ್ ಗಳ ಬಳಕೆಯಲ್ಲಿ ಮಿತಿಗಳಿರುತ್ತದೆ.
3.ಈ ಕ್ಷೇತ್ರದಲ್ಲಿ ತಜ್ಞರ ಮತ್ತು ನಿಷ್ಣಾತರ ಸಂಖ್ಯೆಯು ತುಂಬಾ ಕಡಿಮೆ ಇದೆ.
4.ಈ ಕೆಲಸದ ರೀತಿಯಲ್ಲಿ ಒಂದಾದರೂ ಭಾಗವು ತಿರುಗುವ ದೃಷ್ಟಿಯಲ್ಲಿ ಸಿಮೆಟ್ರಿಕ್ ಇರಬೇಕಾಗುತ್ತದೆ. ಇದರ ಹೊರತಾಗಿ ಒಂದಾದರೂ ಲೋಹದ ಮಟೀರಿಯಲ್ ಡಕ್ಟೈಲ್ ಇರಬೇಕಾಗುತ್ತದೆ.
5.ಭಾಗಗಳ ಕೇವಲ ಕ್ರಾಸ್ ಸೆಕ್ಷನ್ ಎರಿಯಾದಲ್ಲಿಯೇ ಜೋಡಣೆಯನ್ನು ಮಾಡಬೇಕಾಗುತ್ತದೆ. ಜೋಡಿಸುವ ಸರ್ಫೇಸ್ ಇದು ಸಮತಟ್ಟಾಗಿ ಇರಬೇಕಾಗುತ್ತದೆ.
ಫ್ರಿಕ್ಷನ್ ವೆಲ್ಡಿಂಗ್ ಈ ತಂತ್ರಜ್ಞಾನದ ಉದಯವು 19 ಶತಮಾನದ ಉತ್ತರಾರ್ಧದಲ್ಲಿ ಅಂದರೆ ಸುಮಾರು 1890 ರ ಅಂದಾಜಿಗೆ ಅಮೇರಿಕಾದಲ್ಲಿ ಆಯಿತು. ಅದರ ನಂತರ 1920 ರಿಂದ 1945 ನ ಅಂದಾಜಿಗೆ ಯುರೋಪ್ನಲ್ಲಿ ಮತ್ತು ನಂತರ 1956 ರ ಅಂದಾಜಿಗೆ ರಶಿಯಾದಲ್ಲಿ ಇದರ ಕುರಿತು ಸಂಶೋಧನೆಯನ್ನು ಮಾಡಲಾಗಿ ಅದರ ಪ್ರಚಾರವು ಬಹುದೊಡ್ಡ ಪ್ರಮಾಣದಲ್ಲಾಯಿತು.
ನಾನು ಸ್ವತಃ ತುಂಬಾ ಭಾಗ್ಯವಂತನೆಂದು ತಿಳಿಯುತ್ತೇನೆ. ಕಾರಣ ನನ್ನ ಉದ್ಯೋಗದ ಪ್ರಾರಂಭದಲ್ಲಿ ನನಗೆ ಒಂದು ಸವಾಲುಗಳಿರುವ ಅವಕಾಶವು ಸಿಕ್ಕಿತು. ಒಂದೇ ಕಂಪನಿಯಲ್ಲಿ ಫ್ರಿಕ್ಷನ್ ವೆಲ್ಡಿಂಗ್ ನ ಒಂದು ಹಳೆಯ ಯಂತ್ರವು ಕೆಲಸ ನಿರ್ವಹಿಸದೇ ಇರುವ ಸ್ಥಿತಿಯಲ್ಲಿ ಕಂಡುಬಂತು. ಇದನ್ನು ಮತ್ತೆ ಪ್ರಾರಂಭಿಸುವ ಅಗತ್ಯವಿತ್ತು. ಇದಕ್ಕೆ ಸಂಬಂಧಪಟ್ಟ ತಂತ್ರಜ್ಞಾನವನ್ನು ಆಮದು ಮಾಡಿ ಅದಕ್ಕೆ ಅನುಸಾರವಾಗಿ ಪ್ರಯೋಗಗಳನ್ನು ಮಾಡಿ ಮಶಿನ್ ಪ್ರಾರಂಭಿಸುವ ಪ್ರಯತ್ನವನ್ನು ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅಪಾಯವನ್ನುಂಟು ಮಾಡುವಂತಹದ್ದು ಎಂದು ಅನಿಸಿತು. ಈ ಯಂತ್ರವನ್ನು ಸಮಾಧಾನಕಾರಕವಾಗಿ ಪ್ರಾರಂಭಿಸುವಲ್ಲಿ ನಾವು ಯಶಸ್ಸನ್ನು ಪಡೆದೆವು. ಈ ಕಾಲಾವಧಿಯಲ್ಲಿ ನಾನು ಮಾಡಿರುವ ಪ್ರಯೋಗಗಳು, ನನ್ನೊಂದಿಗೆ ಸಂಪರ್ಕದಲ್ಲಿ ಬಂದಿರುವ ಅನುಭವಿ ವ್ಯಕ್ತಿಗಳು ಮತ್ತು ನನಗೆ ಅವರಿಂದ ಲಭಿಸಿರುವ ಜ್ಞಾನ ಇವೆಲ್ಲಾ ಕಾರಣಗಳಿಂದ ನಾನು ಈ ಕ್ಷೇತ್ರದಲ್ಲಿ ಪ್ರವೇಶಿಸಿ ಫ್ರಿಕ್ಷನ್ ವೆಲ್ಡಿಂಗ್ ಟೆಕ್ನಾಲಾಜಿ ಲಿ. ಎಂಬ ಕಾರಖಾನೆಯನ್ನು ಪುಣೆಯಲ್ಲಿ ಪ್ರಾರಂಭಿಸಿದೆ. ನಮ್ಮ ಕಾರಖಾನೆಯು ಭಾರತದಲ್ಲಿ ಈ ತಂತ್ರಜ್ಞಾನದಿಂದಾಗಿ ಮುಂಚೂಣಿಯಲ್ಲಿದೆ ಎಂಬುದನ್ನು ನಾವು ತುಂಬು ಅಭಿಮಾನದಿಂದ ಹೇಳ ಬಯಸುತ್ತೇನೆ.
ಯತೀನ್ ತಾಂಬೆ
ಸಂಸ್ಥಾಪಕರು
ಫ್ರಿಕ್ಷನ್ ವೆಲ್ಡಿಂಗ್ ಟೆಕ್ನಾಲಾಜಿ ಲಿ. (FWT)
020 25293123
ಯತೀನ್ ತಾಂಬೆ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಫ್ರಿಕ್ಷನ್ ವೆಲ್ಡಿಂಗ್ ಕ್ಷೇತ್ರದಲ್ಲಿ ಇವರಿಗೆ 20 ವರ್ಷಕ್ಕಿಂತ ಕಾಲಾವಧಿಯಲ್ಲಿ ಕಾರ್ಯನಿರತರಾಗಿದ್ದಾರೆ.