ಗ್ರಾಹಕರ ಆವಶ್ಯಕತೆಗೆ ಅನುಸಾರವಾಗಿ ಅನೇಕ ಸಲ ಉದ್ಯಮಗಳಲ್ಲಿ ಪೂರೈಕೆಯನ್ನು ಮಾಡುವ ಸಮಯವು (ಲೀಡ್ ಟೈಮ್) ತುಂಬಾ ಕಡಿಮೆ ಇರಬೇಕು ಎಂಬ ಬೇಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಇದಕ್ಕೆ ಗಿಯರ್ ಉತ್ಪಾದನೆಯ ಕ್ಷೇತ್ರವೂ ಅಪವಾದವಲ್ಲ. ಗಿಯರ್ ನ ಉತ್ಪಾದನೆಯು ಹೆಚ್ಚಾಗಿ ಪಾರಂಪರಿಕ ರೀತಿಯಲ್ಲಿ ಮಾಡಲಾಗುತ್ತದೆ ಮತ್ತು ಅದರಲ್ಲಿ ಹಾಬಿಂಗ್, ಶೇಪಿಂಗ್ ಇಂತಹ ಮುಡಿಪಾಗಿಟ್ಟ (ಡೆಡಿಕೇಟೆಡ್) ಗಿಯರ್ ಕಟಿಂಗ್ ಪ್ರಕ್ರಿಯೆಯು ಸೇರಿದೆ. ಈ ಪ್ರಕ್ರಿಯೆಗಳಲ್ಲಿ ವಿಭಿನ್ನ ಗಿಯರ್ ಪ್ರೊಫೈಲ್, ಆಕಾರ ಇತ್ಯಾದಿಗಳಿಗೆ ಮುಡಿಪಾದ ಗಿಯರ್ ಕಟಿಂಗ್ ಮಶಿನ್ ಮತ್ತು ವಿಶೇಷವಾಗಿ ಡಿಸೈನ್ ಮಾಡಿರುವ ಟೂಲ್ ಗಳನ್ನು ಬಳಸಲಾಗುತ್ತದೆ. ಪ್ರಕ್ರಿಯೆಯ ಸ್ಪರೂಪ ಮತ್ತು ಪ್ರಕ್ರಿಯೆ ಮಿತಿಗಳಿಂದಾಗಿ ಅದರಲ್ಲಿ ಹೆಚ್ಚೆನೂ ಫ್ಲೆಕ್ಸಿಬಿಲಿಟಿ ಇರುವುದಿಲ್ಲ. ಇದರಿಂದಾಗಿ ಗಿಯರ್ ತಯಾರಿಸಲು ಬೇಕಾಗುವ ಸಮಯವನ್ನು ಕಡಿಮೆ ಮಾಡಲು ಏನೂ ಅವಕಾಶವಿರುವುದಿಲ್ಲ. ವಿವಿಧ ಗಿಯರ್ ಪ್ರೊಫೈಲ್ ಗೋಸ್ಕರ ಸಮಾನವಾದ ಟೂಲ್ ಗಳನ್ನು ಬಳಸಿ ಬಹು ಅಕ್ಷೀಯ ಮಶಿನ್ ನಲ್ಲಿ ಗಿಯರ್ ತಯಾರಿಸುವುದು ಇತ್ತೀಚಿನ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇತ್ತೀಚಿನ ತಂತ್ರಜ್ಞಾನವು ತುಂಬಾ ಅಭಿವೃದ್ಧಿಗೊಂಡಿದ್ದು ಇದರಿಂದಾಗಿ ಹೆಚ್ಚು ಫ್ಲೆಕ್ಸಿಬಿಲಿಟಿ ಲಭಿಸುತ್ತದೆ. ಅಲ್ಲದೇ ಲೀಡ್ ಟೈಮ್ ಕೂಡಾ ಕಡಿಮೆಯಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಟೂಲ್ ನ ಒಂದು ಸೆಟ್ ಮತ್ತು ಸಿ.ಎನ್.ಸಿ. ಮಶಿನ್ ನ ಒಂದಕ್ಕಿಂತ ಹೆಚ್ಚು ಅಕ್ಷಗಳ ಚಟುವಟಿಕೆಗಳ ಸಾಮರ್ಥ್ಯವನ್ನು ಬಳಸಿ ವಿಭಿನ್ನ ಗಿಯರ್ ಪ್ರೊಫೈಲ್ ತಯಾರಿಸಲಾಗುತ್ತದೆ. ಉದಾಹರಣೆ ಸ್ಪರ್ ಗಿಯರ್ ತಯಾರಿಸಲು ಒಂದೇ ಸಲ 4 ಅಕ್ಷಗಳಲ್ಲಿ ಚಟುವಟಿಕೆ ಆಗಬಹುದಾದಂತಹ ಮಶಿನ್ ಆವಶ್ಯಕತೆ ಇದೆ. ಹೆಲಿಕಲ್ ಮತ್ತು ಬೆವೆಲ್ ಗಿಯರ್ ಗೋಸ್ಕರ ಒಂದೇ ಬಾರಿ 5 ಅಕ್ಷಗಳ ಚಟುವಟಿಕೆಗಳನ್ನು ಮಾಡಬಲ್ಲ ಮಶಿನ್ ಗಳ ಆವಶ್ಯಕತೆ ಇರುತ್ತದೆ. ಇದರಿಂದಾಗಿ ಗಿಯರ್ ಕಟಿಂಗ್ ಗೋಸ್ಕರ ಮೇಲಿನ ಸಾಮರ್ಥ್ಯ ಇರುವ ಸಾಮಾನ್ಯವಾದ 4-5 ಅಕ್ಷಗಳಿರುವ, ವಿ.ಎಮ್.ಸಿ. ಅಥವಾ ಎಚ್.ಎಮ್.ಸಿ. ಅಥವಾ ಟರ್ನಿಂಗ್ ಸೆಂಟರ್ ಬಳಸಬಹುದು. ಕಡಿಮೆ ವೇಳೆಯಲ್ಲಿ ಕೆಲಸ ಪೂರ್ಣವಾಗಲು ಮಹತ್ವದ್ದಾಗಿರುವಲ್ಲಿ ಚಿಕ್ಕ ಮತ್ತು ಮಧ್ಯಮ ಆಕಾರದ ಬೆಚ್ ಗೋಸ್ಕರ ಇದರ ಫ್ಲೇಕ್ಸಿಬಿಲಿಟಿ ಲಾಭಕಾರಿಯಾಗುತ್ತದೆ. ಗಿಯರ್ ನ ಯಂತ್ರಣೆ ಒಂದೇ ಸೆಟಪ್ ನಲ್ಲಿ ಮಾಡಬಹುದಾಗಿದೆ, ಆದರೆ ಗಿಯರ್ ನ ಹಲ್ಲುಗಳ ಆಕಾರವು ಪಾರಂಪರಿಕ ಪ್ರಕ್ರಿಯೆಯಲ್ಲಿ ಮಾಡುವಂತೆ ಡೆಡಿಕೆಟೆಡ್ ಟೂಲ್ ಗಳ ಮೂಲಕ ಮಾಡದೇ NC ಪ್ರೊಗ್ರಾಮ್ ಮೂಲಕ ತಯಾರಿಸಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ NC ಪ್ರೊಗ್ರಾಮ್ ತಯಾರಿಸಲು ಯುಕ್ಲಿಡ್ ಗಿಯರ್ ಕ್ಯಾಮ್ ಕ್ಯಾಡ್ ಅಥವಾ ಕ್ಯಾಮ್ ಸಾಫ್ಟ್ ವೇರ್ ಮಹತ್ವದ್ದಾಗಿರುತ್ತದೆ. ಇದರಿಂದಾಗಿ ಮಲ್ಟಿಟಾಸ್ಕ್ ಮತ್ತು ಪಾರಂಪರಿಕ ಸಿ.ಎನ್.ಸಿ. ಮಶಿನ್ ನಲ್ಲಿ ಗಿಯರ್ ಯಂತ್ರಣೆಯನ್ನು ಮಾಡುವುದು ಸುಲಭವಾಗಿದೆ. ಯುಕ್ಲಿಡ್ ಗಿಯರ್ ಕ್ಯಾಮ್ ಸಾಫ್ಟ್ ವೇರ್ ಇದ್ದಲ್ಲಿ ಟೂಲ್ ಗಳ ಸ್ಟ್ಯಾಂಡರ್ಡ್ ಸೆಟ್ ಗಳನ್ನು ಉಪಯೋಗಿಸಿ ಮೇಲಿನಂತೆ ಸಾಮಾನ್ಯವಾದ ಮಶಿನ್ ಗಳಲ್ಲಿಯೂ ಈ ಕೆಳಗಿನಂತೆ ಗಿಯರ್ ನ ಯಂತ್ರಣೆಯನ್ನು ಸಹಜವಾಗಿ ಮಾಡಬಹುದಾಗಿದೆ.
•ಹೊರ (ಎಕ್ಸ್ ಟರ್ನಲ್) ಸ್ಪರ್ ಮತ್ತು ಹೆಲಿಕಲ್ ಗಿಯರ್.
•ಡಬಲ್ ಹೆಲಿಕಲ್ ಗಿಯರ್ ಮತ್ತು ಹೆರಿಂಗ್ ಬೋನ್ ಗಿಯರ್.
•ಸ್ಟ್ರೇಟ್ ಮತ್ತು ಸ್ಪೈರಲ್ ಬೆವೆಲ್ ಗಿಯರ್.
•ಎಲ್ಲ ವಿಧದ ಗಿಯರ್ ಮತ್ತು ಗಿಯರ್ ಸೆಗ್ ಮೆಂಟ್ ನ ಪ್ರೊಫೈಲ್ ನಲ್ಲಿ ಸುಧಾರಣೆಗಳನ್ನು ಮಾಡುವುದು.
•ಇಂಟರ್ನಲ್ ಗಿಯರ್
ಗಿಯರ್ ಗಳ ನಿರ್ಮಾಣದ ಪ್ರಕ್ರಿಯೆ
ಗಿಯರ್ ನಿರ್ಮಾಣದ ಪ್ರಕ್ರಿಯೆಯು ಸಂಕ್ಷಿಪ್ತವಾಗಿ ಈ ಮುಂದಿನಂತಿರುತ್ತದೆ. ಯಂತ್ರಚಿತ್ರ (ಮಶಿನ್ ಡಿಸೈನ್) → ಗಿಯರ್ ನ ವಿವರಗಳು → ಪ್ರಕ್ರಿಯೆ ಮತ್ತು ಟೂಲ್ ಗಳ ಆಯ್ಕೆ → NC ಪ್ರೊಗ್ರಾಮ್ → ಯಂತ್ರಣೆ → ತಪಾಸಣೆ → ಯಂತ್ರಚಿತ್ರ (ಮಶಿನ್ ಡಿಸೈನ್).
ಬಳಕೆಗಾರರಿಗೆ ಅನುಕೂಲವಾಗುವಂತಹ ಯುಕ್ಲಿಡ್ ಗಿಯರ್ ಕ್ಯಾಮ್ ಸಾಫ್ಟೆ ವೇರ್ ಬಳಸುವುದರಿಂದ ಈ ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿ ಮಾಡಬಹುದಾಗಿದೆ.
•ಪ್ರೊಫೈಲ್ ನಿರ್ಧರಿಸಲು ಯಂತ್ರಚಿತ್ರಗಳಿಂದ ಗಿಯರ್ ನ ಡಾಟಾ, ಅಂದರೆ ಹಲ್ಲುಗಳ ಸಂಖ್ಯೆ, ಮಾಡ್ಯುಲ್ ಅಥವಾ DP, ಪ್ರೆಶರ್ ಎಂಗಲ್, ಅಗಲ ಇತ್ಯಾದಿಗಳ ವಿವರಗಳನ್ನು ಸೇರಿಸಬೇಕಾಗುತ್ತದೆ.
•ಯಂತ್ರಣೆಯ ಸ್ಟ್ರೆಟಿಜಿ ಮತ್ತು ಟೂಲಿಂಗ್ ನ ಆಯ್ಕೆಯು ಹಲ್ಲುಗಳ ದೂರ ಮತ್ತು ನಿಖರತೆಯಲ್ಲಿ ಅವಲಂಬಿಸಿರುತ್ತದೆ. ಹಲ್ಲುಗಳಲ್ಲಿರುವ ದೂರ ರಫ್ ಮಿಲ್ಲಿಂಗ್ ಮಾಡುವುದು, ಇನ್ವೋಲ್ಯೂಟ್ ನ ಫ್ಲಂಕ್ಸ್ ಫಿನಿಶ್ ಮಾಡುವುದು ಮತ್ತು ಹಲ್ಲುಗಳ ಮೂಲ ಕ್ಷೇತ್ರದ ಯಂತ್ರಣೆ, ಹಲ್ಲುಗಳ ಚ್ಯಾಂಫರ್ ಅಥವಾ ಉರುಟುತನ
•(ಚಿತ್ರ ಕ್ರ. 2) ಇಂತಹ ಪ್ರಕ್ರಿಯೆಗಳಿರುತ್ತದೆ.
•ಟೂಲ್ ಲೈಬ್ರೆರಿ ಮತ್ತು ಗಿಯರ್ ಕ್ಯಾಮ್ ಸಾಫ್ಟ್ ವೇರ್ ನಲ್ಲಿ ಇರುವ ಪರ್ಯಾಯಗಳಿಂದ ಟೂಲ್ ಆಯ್ಕೆ ಮಾಡಿ ಅದು ಗಿಯರ್ ನಲ್ಲಿ ಹೇಗೆ ಎಪ್ರೋಚ್ ಆಗಬಲ್ಲವು, ಎಂಬುದರ ಕುರಿತಾದ ಅಂಶಗಳನ್ನು ತಮ್ಮಲ್ಲಿರುವ
•(ಚಿತ್ರ ಕ್ರ. 3) ಮಶಿನ್ ಗೆ ಅನುಸಾರವಾಗಿ ಆಯ್ಕೆ ಮಾಡಬೇಕು.
•ಗಿಯರ್ ಕ್ಯಾಮ್ ಸಾಫ್ಟ್ ವೇರ್ ನಿಂದ ಯಾವ ಮಶಿನ್ ನಲ್ಲಿ ಗಿಯರ್ ನ ಮುಂದಿನ ಪ್ರಕ್ರಿಯೆಯನ್ನು ಮಾಡುವುದಿದೆಯೋ, ಆ ಮಶಿನ್ ಆಯ್ಕೆ ಮಾಡಿ NC ಪ್ರೊಗ್ರಾಮ್ ತಯಾರಿಸುವುದು ಮತ್ತು ಮಶಿನ್ ನೆಡೆಗೆ ಕಳುಹಿಸುವುದು.
ಮಿಲ್ಲಿಂಗ್ ಪ್ರಕ್ರಿಯೆಯ ಉದಾಹರಣೆ
ಉಚ್ಚಗುಣಮಟ್ಟದ ನಿಖರತೆಯು ಆವಶ್ಯಕವಾಗಿರುವುದರಿಂದ ಗಿಯರ್ ವೀಲ್ ನ ತಯಾರಿಕೆಯು ತುಂಬಾ ಸಾಹಸದಿಂದ ಕೂಡಿರುವ ಪ್ರಕ್ರಿಯೆಯಾಗಿರುತ್ತದೆ. ಆದರೆ ಯುಕ್ಲಿಡ್ ಗಿಯರ್ ಕ್ಯಾಮ್ ಸಾಫ್ಟ್ ವೇರ್ ನ ಸಹಾಯದಿಂದ ವಿವರಗಳನ್ನು ಸೇರಿಸುವುದು ಸುಲಭವಾಗಿರುತ್ತದೆ. ಹಾಗೆಯೇ DIN, AGAM, ISO ಅಥವಾ ಕಸ್ಟಮೈಜ್ಡ್ ಇಂತಹ ವಿಭಿನ್ನ ಸ್ಟ್ಯಾಂಡರ್ಡ್ ಗಳಿರುವ ಗಿಯರ್ ತಯಾರಿಸುವಾಗ ನಿಖರವಾದ ಮತ್ತು ವಿಶ್ವಾಸಾರ್ಹವಾದ ತಯಾರಿಕೆಯೊಂದಿಗೆ ಯೋಜನೆಯಲ್ಲಿ ಯಾವುದೇ ಹಂತವನ್ನು ಸೇವ್ ಮಾಡುವುದು ಸಾಧ್ಯ.
ಯುಕ್ಲಿಡ್ ಗಿಯರ್ ಕ್ಯಾಮ್ ನ ವೈಶಿಷ್ಟ್ಯಗಳು
• ಯುಕ್ಲಿಡ್ ಗಿಯರ್ ಕ್ಯಾಮ್ ಯಾವುದೇ ಕ್ಲಾಸಿಕ್ ಕ್ಯಾಡ್ ಅಥವಾ ಕ್ಯಾಮ್ ಪ್ರಣಾಳಿಕೆಯಂತೆಯೇ ಕೆಲಸ ನಿರ್ವಹಿಸುತ್ತದೆ. ಅದರ ಕ್ಯಾಡ್ ನ ಭಾಗದಲ್ಲಿ ಗಿಯರ್ ಪ್ರೊಫೈಲ್ ನ ಎಲ್ಲ ವಿಧಗಳೊಂದಿಗೆ ಜಾಮೆಟ್ರಿ ಮತ್ತು ಬದಲಾವಣೆಗಳನ್ನು ಸೇರಿಸಿ ಮಾಡಲಾಗುತ್ತವೆ ಅಥವಾ ಬದಲಾಯಿಸಲ್ಪಡುತ್ತವೆ. ಹಾಗೆಯೇ ಮೊದಲೇ ಮಾಡಿರುವ ನೊಂದಾಣಿಕೆಗಳೊಂದಿಗೆ ಸರಿಗೂಡಿಸಿ ಗಿಯರ್ ಟೂಥ್ ಪ್ರೊಫೈಲ್ (ಚಿತ್ರ ಕ್ರ. 4) ತಯಾರಿಸಬಹುದಾಗಿದೆ. ಕ್ಯಾಮ್ ಭಾಗದಲ್ಲಿ ಈ ಪ್ರೊಫೈಲ್ ನ ವಿಸ್ತಾರವಾದ ಟೂಲ್ ನ ಪಾಥ್ ನಿರ್ಧರಿಸಲಾಗುತ್ತದೆ. ಇದರಿಂದಾಗಿ ಬಳಕೆಗಾರರು ನಿಶ್ಚಿಂತರಾಗಿರುತ್ತಾರೆ. ಸಾಮಾನ್ಯವಾಗಿ ಪರಸ್ಪರವಾಗಿ ಜೋಡಿಸಲ್ಪಡುವ ಗಿಯರ್ ಮೂಲಕ ಜಾಮೆಟ್ರಿಯನ್ನು ನಿರ್ಧರಿಸಲಾಗುತ್ತದೆ.
• ಹಲ್ಲುಗಳ ಫ್ಲ್ಯಾಂಕ್, ಹೆಡ್ ಮತ್ತು ಬೇಸ್ ಇವುಗಳಿಗೆ ಮಿಲ್ಲಿಂಗ್ ಮಾಡುವುದಾದಲ್ಲಿ ಹಲ್ಲುಗಳಲ್ಲಿರುವ ದೂರದ ಜಾಮೆಟ್ರಿಕಲ್ ಮಾಪನಗಳನ್ನು ಸಾಫ್ಟ್ ವೇರ್ ನಲ್ಲಿ ಸೇರಿಸಲಾಗಿರುತ್ತವೆ. ಹಾಗೆಯೇ ಅದನ್ನು ಹಲ್ಲುಗಳ ರೋಲಿಂಗ್ ನ ಸಿಮ್ಯುಲೇಶನ್ ಮೂಲಕ ಪರಿಶೀಲಿಸಿ ನೋಡಲಾಗುತ್ತದೆ. ಫ್ಲಂಕ್ ನಲ್ಲಿ ದುರಸ್ತಿಗಳನ್ನು ಮಾಡಿ ಗಿಯರ್ ನ ಕೆಲಸವನ್ನು ಬೇಕಾಗಿರುವ ಅಪ್ಲಿಕೇಶನ್ ಗೋಸ್ಕರ ಆಪ್ಟಿಮೈಜ್ ಮಾಡಬಹುದು. ನಿರ್ದೋಷವಾದ ವಿಮರ್ಶೆಗಳು ಸಿಮ್ಯಲೇಶನ್ ಗೆ ಆಧರಿಸಿರುವುದರಿಂದ ಅದನ್ನು ಉತ್ಪಾದನೆಗೋಸ್ಕರ ಬಳಸಲಾಗುತ್ತದೆ.
• ಯುಕ್ಲಿಡ್ ಗಿಯರ್ ಕ್ಯಾಮ್ ಸಾಫ್ಟ್ ವೇರ್, ಸಂಬಂಧಪಟ್ಟ ಯೋಜನೆಯ ಫೈಲ್ ನಲ್ಲಿ ಇನ್ ಪುಟ್ ಗಿಯರ್ ನ ವಿವರಗಳು, ಪರೀಕ್ಷೆಯ ಪ್ಯಾರಾಮೀಟರ್, ಪ್ರೊಟೋಕಾಲ್, ಪ್ರಕ್ರಿಯೆ, NC ಪ್ರೊಗ್ರಾಮ್ ಇಂತಹ ಎಲ್ಲ ಸಂಬಂಧಪಟ್ಟ ಮಾಹಿತಿಯನ್ನು ಒಂದುಗೂಡಿಸಲಾಗುತ್ತದೆ.
• ಹಲ್ಲುಗಳ ದೂರದಲ್ಲಿರುವ ಜಾಗದಲ್ಲಿ ರಫಿಂಗ್ ಮತ್ತು ಫಿನಿಶಿಂಗ್ ಮಾಡಲು ಗ್ರೂವ್ ಮಿಲ್ಲಿಂಗ್ ಕಟರ್, ಎಂಡ್ ಮಿಲ್, ಸಾಲಿಡ್ ಬಾಲ್ ನೋಸ್ ಎಂಡ್ ಮಿಲ್ ಇಂತಹ ಅನೇಕ ಸ್ಟ್ಯಾಂಡರ್ಡ್ ಟೂಲ್ ಗಳನ್ನು ಬಳಸುವುದು ಸಾಧ್ಯ. ಟೂಲ್ ಹೋಲ್ಡರ್ ನೊಂದಿಗೆ ಎಲ್ಲ ಟೂಲಿಂಗ್ ಮಾಹಿತಿಯನ್ನು ಟೂಲ್ ಲೈಬ್ರೆರಿಯಲ್ಲಿ ಸಂಗ್ರಹಿಸಲಾಗುತ್ತದೆ. ಟೂಲ್ ನ ಆಯ್ಕೆಯು ಪ್ರಮುಖವಾಗಿ ಹಲ್ಲುಗಳಲ್ಲಿರುವ ದೂರದ ಆಕಾರಕ್ಕೆ (ಗ್ಯಾಪ್ ಸೈಜ್) ಆಧರಿಸಿರುತ್ತದೆ. ಚಿಕ್ಕ ಮೊಡ್ಯುಲ್ ಗಿಯರ್, ಚಿಕ್ಕ ಗ್ಯಾಪ್ ಇರುವ ಡಬಲ್ ಹೆಲಿಕಲ್ ಗಿಯರ್, ಹೆರಿಂಗ್ ಬೋನ್ ಗಿಯರ್ ನ ನಿರ್ಮಾಣವು ಎಂಡ್ ಮಿಲ್ ಮೂಲಕ ಮಾಡಬಹುದಾಗಿದೆ. ಮಿಲ್ಲಿಂಗ್ ಆಪರೇಶನ್ ನಲ್ಲಿ ಟೂಲ್ ನ ಸವೆತವು ಎಷ್ಟು ಆಗುತ್ತದೆ, ಎಂಬುದರ ಕುರಿತು ಮುತುವರ್ಜಿಯನ್ನು ವಹಿಸಿವುದೂ ಅತ್ಯಾವಶ್ಯಕವಾಗಿದೆ. ಈ ಹಿಂದೆ ಹೇಳಿದಂತೆ ಪ್ರೊಫೈಲ್ ನ ತಯಾರಿಕೆಯನ್ನು ಟೂಲ್ ಫಾರ್ಮ್ ನ ಮೂಲಕ ಮಾಡದೇ NC ಪ್ರೊಗ್ರಾಮ್ ನಲ್ಲಿಯೇ ಮಾಡಲಾಗುತ್ತದೆ. ಆಪ್ಟಿಮೈಜ್ಡ್ ಕಟಿಂಗ್ ರೂಟ್, ಪ್ಯಾರಾಮೀಟರ್ ಮತ್ತು ಟೂಲ್ ಗಳ ಒಂದೇ ರೀತಿಯಲ್ಲಿರುವ ಸವೆತವನ್ನು ಸೂಕ್ತವಾದ ಪ್ರೊಫೈಲ್ ಗುಣಮಟ್ಟವನ್ನು ನಿರ್ಧರಿಸುತ್ತದೆ.
• ಪ್ರತಿಯೊಂದು ಹಂತದಲ್ಲಿ ಪ್ರಕ್ರಿಯೆಯ ಸಿಮ್ಯುಲೇಶನ್ ಪರಿಶೀಲಿಸಬಹುದು. ಇದರಿಂದಾಗಿ ಬರೇ ಮೊದಲ ಯಂತ್ರಭಾಗದಲ್ಲಿಯೂ ನಿರ್ದೋಷವಾಗಿ ತಯಾರಾಗಬಹುದು ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆಗಳ ಹೊರತಾಗಿ ಪ್ರಕ್ರಿಯೆಯು ಸುರಕ್ಷಿತವಾಗಿರಬಹುದು, ಎಂಬ ಅಂಶವು ದೃಢವಾಗುತ್ತದೆ.
• ಗಿಯರ್ ನಿರ್ಧರಿಸುವುದು.
• ಪ್ರತಿಯೊಂದು ಟೂಲ್ ಮೂಲಕ ವೈಯಕ್ತಿಕವಾಗಿ ಯಂತ್ರಣೆ
• ಪೂರ್ಣವಾದ ಪ್ರಕ್ರಿಯೆ
• 3D ಮಾಡೆಲ್ ನೊಂದಿಗೆ ಸಂಪೂರ್ಣ ಮಶಿನ್
• ಟಾಲರನ್ಸ್ ನಲ್ಲಿಯೇ ಪಾಸ್ ನ ಸಂಖ್ಯೆಯನ್ನು ಆದಷ್ಟು ಕಡಿಮೆ ಇಡಲು ಮಿಲ್ಲಿಂಗ್ ಟೂಲ್ ರೂಟ್ ಆಪ್ಟಿಮೈಜ್ ಮಾಡುತ್ತದೆ. ಆದರೆ ಕಟಿಂಗ್ ಮತ್ತು ಕೆಲಸವ ವಿವರಗಳನ್ನು ಒಂದುಗೂಡಿಸಿ (ಇಂಟಿಗ್ರೇಟೆಡ್) ಟೂಲ್ ಡಾಟಾ ಬೇಸ್ ನಿಂದ ಹಸ್ತಾಂತರಿಸಲಾಗುತ್ತದೆ. ಇದನ್ನು ಆವಶ್ಯಕತೆಗೆ ಅನುಸಾರವಾಗಿ ಮತ್ತು ಅನುಭವದಿಂದಲೇ ಅಳವಡಿಸಬಹುದಾಗಿದೆ. ಟೂಲ್ ರೂಟ್ ನ ಲೆಕ್ಕಾಚಾರವನ್ನು ಸೇರಿಸಿರುವ ಗಿಯರ್ ಪ್ಯಾರಾಮೀಟರ್ ನ ಆಧಾರವನ್ನಿಟ್ಟುಕೊಂಡು ನಿರ್ದೋಷವಾಗಿ ಮಾಡಲಾಗುತ್ತದೆ. ರೀತಿ, ಪ್ಯಾರಾಮೀಟರ್ ಮತ್ತು ಟಾಲರನ್ಸ್ ನ ಆಯ್ಕೆ ಇವೆಲ್ಲವೂ ನಿರ್ದೋಷತ್ವವನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ ವೈಯಕ್ತಿಕವಾದ ಹಲ್ಲುಗಳಲ್ಲಿರುವ ದೂರಕ್ಕೆ ಪ್ರಕ್ರಿಯೆ ಮಾಡಲು ಅನೇಕ ನೀತಿಗಳು ಉಪಲಬ್ಧವಿದ್ದು ಆವಶ್ಯಕತೆಗೆ ಅನುಸಾರವಾಗಿ ಅವುಗಳ ಆಯ್ಕೆಯನ್ನು ಮಾಡಬಹುದು. ಸಿಮ್ಯುಲೇಶನ್ ನಿಂದಾಗಿ ಪ್ರಕ್ರಿಯೆ ಆಪ್ಟಿಮೈಜ್ ಮಾಡುವಲ್ಲಿ ಸಹಾಯವಾಗುತ್ತದೆ, ಹಾಗೆಯೇ ಪ್ರತಿಯೊಂದು ಹಂತದಲ್ಲಿ ಯಂತ್ರಣೆಗೆ ಎಷ್ಟು ಸಮಯವು ಬೇಕಾಗುತ್ತದೆ, ಎಂಬುದೂ ತಿಳಿಯುತ್ತದೆ.
ಲಾಭ ಮತ್ತು ಉಪಯೋಗ
• ಫ್ಲೆಕ್ಸಿಬಿಲಿಟಿ ಮತ್ತು ಲಾಭಕಾರಿಯಾದ ಟೂಲಿಂಗ್ : ಇದರಲ್ಲಿ ಸಾಮಾನ್ಯವಾಗಿ 4-5 ಅಕ್ಷಗಳಿರುವ ಮಶಿನ್ ಬಳಸುವುದು ಸಾಧ್ಯ. ಇದರಿಂದಾಗಿ ಕಡಿಮೆ ಉತ್ಪಾದನೆಗೆ ಮೀಸಲಾಗಿರುವ (ಡೆಡಿಕೇಟೆಡ್) ಮಶಿನ್ ನ ಆವಶ್ಯಕತೆ ಇರುವುದಿಲ್ಲ. ಪ್ರತಿಯೊಂದು ಕಾರ್ಯವಸ್ತುವಿಗೆ ಡೆಡಿಕೇಟೆಡ್ ಟೂಲ್ ಬಳಸದೇ, ಅನೇಕ ಪ್ರೊಫೈಲ್ ಇರುವ ವಿವಿಧ ಗಿಯರ್ ಗಳಿಗೆ ಟೂಲ್ ಗಳ ಒಂದೇ ಸೆಟ್ ಬಳಸಬಹುದಾಗಿದೆ. ಇದರಿಂದಾಗಿ ಟೂಲ್ ನ ಒಟ್ಟು ಆವಶ್ಯಕತೆಯು ಕಡಿಮೆಯಾಗುತ್ತದೆ.
• ಹೊಸದಾದ ಗಿಯರ್ ನ ಭರದಿಂದ ಆಗುತ್ತಿರುವ ಅಭಿವೃದ್ಧಿ :
ಹೊಸ ಗಿಯರ್ ನ ವಿವರಗಳಿಗೆ ಅನುಸಾರವಾಗಿ ಕನಿಷ್ಠ ಸಮಯದಲ್ಲಿ ಹೊಸ ಗಿಯರ್ ಅಭಿವೃದ್ಧಿ ಪಡಿಸಬಹುದಾಗಿದೆ.
• ಡೀಬರಿಂಗ್, ಚ್ಯಾಂಫರಿಂಗ್ ಇತ್ಯಾದಿಗಳಲ್ಲಿ ಸಮಾನತೆಯು ಇರುವುದರಿಂದ ಮುಂದಿನ ಮ್ಯಾನ್ಯುವಲ್ ಆಪರೇಶನ್ ಮಾಡುವುದನ್ನು ತಡೆಯಬಹುದು.
• NC ಪ್ರೊಗ್ರಾಮ್ ಮೂಲಕ DIN 6 ತನಕದ ಉಚ್ಚಗುಣಮಟ್ಟದ ಪ್ರೊಫೈಲ್ ಗಿಯರ್ ತಯಾರಿಸಬಹುದಾಗಿದೆ. ಒಂದೇ ಸೆಟಪ್ ನಲ್ಲಿ ಸಂಪೂರ್ಣ ಯಂತ್ರಣೆಯಾಗುತ್ತಿರುವುದರಿಂದ ಒಟ್ಟಾರೆ ಗಿಯರ್ ಗಳ ಗುಣಮಟ್ಟವು ಒಳ್ಳೆಯದಾಗಿರುತ್ತದೆ.
• ಚಿಕ್ಕ ಬೇಚ್ ಗೋಸ್ಕರ ಯೋಗ್ಯ. ಹಲ್ಲುಗಳ ಸಂಖ್ಯೆಯು ಕಡಿಮೆ, ಪಿನಿಯನ್ ಇರುವ ಗಿಯರ್ ನ ಮಧ್ಯಮ ಆಕಾರದ ಬೇಚ್ ಗೋಸ್ಕರ ಪ್ರಭಾವಶಾಲಿ. ಹಾಗೆಯೇ ಹೆಚ್ಚು ವೈವಿಧ್ಯತೆ ಇರುವ ಚಿಕ್ಕ ಬೇಚ್ ಗೋಸ್ಕರ ಪ್ರಭಾವಶಾಲಿ.
• ಪ್ರೊಟೋಟೈಪ್ ಗಿಯರ್ ಮತ್ತು ಹೊಸ ಉತ್ಪಾದನೆಗಳ ಅಭಿವೃದ್ಧಿಗಾಗಿ ಉಪಯುಕ್ತ.
ಉದಾಹರಣೆ
ಯುಕ್ಲಿಡ್ ಗಿಯರ್ ಕ್ಯಾಮ್ ಬಳಸಿ ಯಂತ್ರಣೆಯನ್ನು ಮಾಡಿರುವ ಹೆಲಿಕಲ್ ಗಿಯರ್ ನ ಉದಾಹರಣೆಯನ್ನು ಕೋಷ್ಟಕ ಕ್ರಮಾಂಕ 1 ರಲ್ಲಿ ನೀಡಲಾಗಿದೆ. ಯುಕ್ಲಿಡ್ ಗಿಯರ್ ಕ್ಯಾಮ್ ಬಳಸಿ ಲಭಿಸುವ ಗುಣಮಟ್ಟದ ವಿವರಗಳನ್ನು ಕೋಷ್ಟಕ ಕ್ರ. 2 ಮತ್ತು 3 ರಲ್ಲಿ ನೀಡಲಾಗಿದೆ.
9371027357
ಬಿಪಿನ್ ಪಾಟಸ್ ಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಇವರಿಗೆ ಮೆಟಲ್ ವರ್ಕಿಂಗ್ ಕ್ಷೇತ್ರದಲ್ಲಿ ಸುಮಾರು 32 ವರ್ಷಗಳು ಕೆಲಸ ನಿರ್ವಹಿಸಿರುವ ಅನುಭವವಿದೆ.