ಲಘು ಉದ್ಯಮಿಗಳಿಗೆ ಕೇಂದ್ರ ಸರ್ಕಾರದ ಸಹಾಯ

@@NEWS_SUBHEADLINE_BLOCK@@

Udyam Prakashan Kannad    28-Jul-2020
Total Views |
 
 
ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ಯಮಗಳನ್ನು ಆಂಗ್ಲ ಭಾಷೆಯಲ್ಲಿ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್ ಪ್ರೈಸೆಸ್ (MSME) ಎಂದು ಹೇಳಲಾಗುತ್ತದೆ. ಈ ಎಲ್ಲ ಉದ್ಯಮಗಳು ಭಾರತದ ಆರ್ಥಿಕ ವ್ಯವಹಾರಗಳ ಬೆನ್ನೆಲುಬಾಗಿವೆ. ಸುಮಾರು ಆರು ಕೋಟಿಯಷ್ಟು ಬೃಹತ್ ಪ್ರಮಾಣದಲ್ಲಿರುವ ಕೈಗಾರಿಕೋದ್ಯಮಗಳಲ್ಲಿ 11 ಕೋಟಿಗಿಂತಲೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಲಭಿಸಿವೆ. ಹಾಗೆಯೇ ಒಟ್ಟು ದೇಶೀಯ ಉತ್ಪಾದನೆಯಲ್ಲಿಯೂ (GDP) ಇದರ ದೊಡ್ಡ ಪಾಲು ಇದೆ.

2_2  H x W: 0 x 
 
ಈ ಮಧ್ಯೆ ಲಾಕ್ ಡೌನ್ ನಿಂದಾಗಿ ಬಹುದೊಡ್ಡ ಹೊಡೆತವು ಕೈಗಾರಿಕೋದ್ಯಮಗಳಿಗೆ ಉಂಟಾಗಿದೆ. ಈ ಉದ್ಯಮಗಳ ಒಟ್ಟು ವ್ಯವಹಾರವೇ ಕಡಿಮೆ ಇರುವುದರಿಂದ ಅನೇಕರ ಎದುರು ತಮ್ಮ ಅಸ್ತಿತ್ವದ ಪ್ರಶ್ನೆಯೂ ಕಾಡುತ್ತಿದೆ. ಈ ಸಮಸ್ಯೆಯಿಂದ ಹೊರಗೆ ಬಂದು ವ್ಯವಹಾರಗಳಲ್ಲಿ ಸುಧಾರಣೆಯಾಗಲು ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತದ ಯೋಜನೆಯಲ್ಲಿ ಸಹಕರಿಸುತ್ತಿದೆ. ಇಂತಹ ಉದ್ಯಮಗಳಿಗೆ ಸುಮಾರು 4 ಲಕ್ಷ ಕೋಟಿ ರೂಪಾಯಿಗಳಷ್ಟು ವಿಶೇಷ ಪ್ಯಾಕೇಜ್ ಯೋಜನೆಯನ್ನು ಮೇ 2020 ರಲ್ಲಿ ಘೋಷಿಸಲಾಗಿದೆ.
 
ಪ್ಯಾಕೇಜ್ ನಲ್ಲಿರುವ ಮಹತ್ವದ ಅಂಶಗಳು

2_1  H x W: 0 x 
 
1. MSME ಯ ವ್ಯಾಖ್ಯೆಯಲ್ಲಿ ಬದಲಾವಣೆ : ಈ ವ್ಯಾಖ್ಯೆಯಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಉದ್ಯಮ ಮತ್ತು ಸೇವೆಯನ್ನು ನೀಡುವ ಕ್ಷೇತ್ರದಲ್ಲಿ ಒಂದೇ ರೀತಿಯ ಮಾನದಂಡಗಳನ್ನು ಇಡಲಾಗಿರುವುದೇ ಮೊದಲ ಬದಲಾವಣೆ. ಇನ್ನೊಂದು ಬದಲಾವಣೆ ಅಂದರೆ, ಬಂಡವಾಳದೊಂದಿಗೆ ಟರ್ನ್ ಓವರ್ ಒಟ್ಟು ಮಾಡಿ ಗರಿಷ್ಠ ಮಿತಿಯಲ್ಲಿ ಸೇರಿಸಲಾಗಿದೆ. ಹೊಸ ವ್ಯಾಖ್ಯೆಗೆ ಅನುಸಾರವಾಗಿ ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ಯಮಗಳಿಗೆ ಅನ್ವಯಿಸುವ ಮಾನದಂಡಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
 
ಈ ಹಿಂದಿನ ವ್ಯಾಖ್ಯೆಗೆ ಅನುಸಾರವಾಗಿ ಒಟ್ಟು MSME ಕ್ಷೇತ್ರದಲ್ಲಿ ಸೂಕ್ಷ್ಮ ಉದ್ಯಮಗಳ ಪಾಲು 90 ಶೇಕಡಾದಷ್ಟು ಇತ್ತು. ಆದರೆ ಈಗಿನ ಹೊಸ ವ್ಯಾಖ್ಯೆಯಂತೆ ಅನೇಕ ಲಘು ಉದ್ಯಮಗಳು ಸೂಕ್ಷ್ಮ ಉದ್ಯಮಗಳಲ್ಲಿ ಸೇರ್ಪಡಿಸಲ್ಪಟ್ಟಿವೆ. ಆದುದರಿಂದ ಅದರ ಪ್ರಮಾಣವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೊಸ ವ್ಯಾಖ್ಯೆಯಂತೆ ದೇಶದಲ್ಲಿರುವ ಹೆಚ್ಚಿನ ಕಂಪನಿಗಳು MSME ಯ ವರ್ಗದಲ್ಲಿ ಬರುತ್ತವೆ ಮತ್ತು ಅವರಿಗೆ ಈ ಕ್ಷೇತ್ರದಲ್ಲಿರುವ ಯೋಜನೆಗಳ ಲಾಭವನ್ನು ಪಡೆಯುವುದೂ ಸುಲಭವಾಗಲಿದೆ. ಇದರ ಅರ್ಥವೇ, ಸದ್ಯದ MSME ಉದ್ಯಮಗಳನ್ನು ಹೋಲಿಸಿದಲ್ಲಿ, ದೊಡ್ಡ ಮತ್ತು ಹೊಸದಾಗಿ ಸೇರ್ಪಡೆಯಾಗುವ ಉದ್ಯಮಗಳೊಂದಿಗೆ, ಈ ರೀತಿಯ ಯೋಜನೆಗಳ ಲಾಭಗಳನ್ನು ಪಡೆಯುವಲ್ಲಿ ಸ್ಪರ್ಧಿಸಬೇಕಾಗಬಹುದು.
 
2. ಉದ್ಯಮಿಗಳಿಗೆ ಮೂರು ಕೋಟಿಯಷ್ಟು ಅತಿರಿಕ್ತ ಅಡವು ರಹಿತ ಮತ್ತು ಅರ್ಜಿರಹಿತವಾದ ಸುಲಭ ಸಾಲದ ಯೋಜನೆ (ಇಮರ್ಜನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ECLGS)
MSME ಕ್ಷೇತ್ರಗಳು ಯಾವಾಗಲೂ ಎದುರಿಸುತ್ತಿರುವ ದೊಡ್ಡ ಪ್ರಶ್ನೆ ಅಂದರೆ, ಬಂಡವಾಳ ಮತ್ತು ವರ್ಕಿಂಗ್ ಕ್ಯಾಪಿಟಲ್ ನ ಕೊರತೆ. ಉದ್ಯಮಿಗಳು ಸಾಲ ಕೇಳಲು ಬ್ಯಾಂಕಿಗೆ ಭೇಟಿ ನೀಡುತ್ತಿದ್ದರು. ನಮಗೆ ಒಂದು ಕೋಟಿ ಸಾಲ ಬೇಕು, ಎಂಬುದಾಗಿ ಕೇಳಿದಾಗ ಬ್ಯಾಂಕ್ ಮ್ಯಾನೆಜರ್ ಹೇಳುತ್ತಾನೆ, ಒಂದು ಕೋಟಿ ಫಿಕ್ಸ ಡಿಪಾಸಿಟ್ ಇಡಿ. ತಕ್ಷಣ ಸಾಲ ಕೊಡುತ್ತೇನೆ. ಇದನ್ನು ಒಂದು ಹಾಸ್ಯವೆಂದು ಹೇಳಲಾಗುತ್ತಿತ್ತು. ಬ್ಯಾಂಕ್ ಗಳ ದೃಷ್ಟಿಯಲ್ಲಿ ಉದ್ಯಮಿಗಳು ನಗಣ್ಯರು, ಎಂಬುದಾಗಿತ್ತು. ಇದರಿಂದಾಗಿ ಬಂಡವಾಳದ ಕುರಿತಾಗಿ ಅನೇಕ ರೀತಿಯ ಅಡಚಣೆಗಳನ್ನು ಉದ್ಯಮಿಗಳಿಗೆ ಎದುರಿಸುವಂತಹ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಇದರಿಂದಾಗಿ ಹಲವಾರು ಉದ್ಯಮಿಗಳು ತಮ್ಮ ಉದ್ಯಮವನ್ನು ನಿಲ್ಲಿಸುವಂತಹ ಪರಿಸ್ಥಿತಿಯೂ ಉಂಟಾಗಿತ್ತು. ಲಾಕ್ ಡೌನ್ ನಂತರ ಈ ರೀತಿಯ ಉದ್ಯಮಿಗಳ ಎದುರು ಬಂಡವಾಳದ ಗಂಭೀರ ಪ್ರಶ್ನೆಯು ಕಾಡುತ್ತಿದೆ. ಇದಕ್ಕೋಸ್ಕರ ಸಹಾಯ ಮಾಡಲು ವಿಶೇಷ ಸಾಲದ ಯೋಜನೆಯನ್ನು MSME ಕ್ಷೇತ್ರಕ್ಕೋಸ್ಕರ ಘೋಷಿಸಲಾಗಿದೆ. ಈ ಯೋಜನೆಯಲ್ಲಿರುವ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
 
ಅ. ಸಾಲ ಯಾರಿಗೆ ಸಿಗಬಹುದು? :
ಸದ್ಯಕ್ಕೆ ಯಾವ ಉದ್ಯಮಿಗಳು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ 25 ಕೋಟಿ ರೂಪಾಯಿಗಳಷ್ಟು ಸಾಲವನ್ನು ಪಡೆದಿದ್ದಲ್ಲಿ ಮತ್ತು ಯಾರ ಟರ್ನ್ ಓವರ್ 100 ಕೋಟಿ ರೂಪಾಯಿಗಿಂತ ಹೆಚ್ಚು ಇಲ್ಲದಿದ್ದಲ್ಲಿ, ಅಲ್ಲದೇ ಯಾರು ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡುತ್ತಿದ್ದರೆ, ಹಾಗೆಯೇ GST ಯ ನೊಂದಾಣಿಕೆ ಮಾಡಿರುವವರು, ಇಂತಹ ಉದ್ಯಮಗಳಿಗೆ ಈ ಯೋಜನೆಯ ಲಾಭವು ಸಿಗಲಿದೆ. ಸದ್ಯಕ್ಕೆ ಯಾವ MSME ಗಳು ಸಾಲಗಾರರಾಗಿದ್ದಾರೋ, ಇಂತಹ MSME ಗಳಿಗೆ ಈ ಸಾಲದ ಸೌಲಭ್ಯವು ಸಿಗಲಾರದು. ಅರ್ಥಾತ್ ಇಂತಹ ಉದ್ಯಮಗಳು ನಿಯಮಿತವಾದ ಪ್ರೊಸೆಸ್ ನಲ್ಲಿಯೂ ಸಾಲಕ್ಕೋಸ್ಕರ ಅರ್ಜಿಯನ್ನು ಸಲ್ಲಿಸಬಹುದು.
 
ಆ. ಅರ್ಜಿ ರಹಿತ ಸಾಲ :
ಅರ್ಜಿ ರಹಿತ ಸಾಲವನ್ನು ಬ್ಯಾಂಕ್ ಪಾತ್ರ ಉದ್ಯಮಗಳಿಗೆ ಅರ್ಜಿಯನ್ನು ಸಲ್ಲಿಸದೇ ನೀಡುತ್ತದೆ. ಈ ಯೋಜನೆಯಲ್ಲಿ ಉದ್ಯಮದ 29.2.2020 ರಂದು ಎಷ್ಟು ಮೊತ್ತದ ಸಾಲವು ಬಾಕಿ ಇದೆಯೋ, ಆ ಮೊತ್ತದ 20 ಶೇಕಡಾ ಮಿತಿಯಷ್ಟು ಸಾಲವನ್ನು ನೀಡಲಾಗುತ್ತದೆ. ಒಂದು ವೇಳೆ ಇಂತಹ ಉದ್ಯಮಿಗಳಿಗೆ ಸಾಲದ ಆವಶ್ಯಕತೆ ಇಲ್ಲದಿದ್ದಲ್ಲಿ ಅದನ್ನು ತಿರಸ್ಕರಿಸಬಹುದು.
 
ಇ. ಮರುಪಾವತಿಯ ಹೇಗೆ?
ಹೊಸ ಯೋಜನೆಯಲ್ಲಿ ಸಾಲ ಪಡೆದಲ್ಲಿ ಅದನ್ನು ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಮರುಪಾವತಿಸಬೇಕು. ಮೊದಲನೇ ವರ್ಷದಲ್ಲಿ ಸಾಲದ ಮೂಲ ಮೊತ್ತವನ್ನು ಮರುಪಾವತಿಸುವ ಆವಶ್ಯಕತೆ ಇರುವುದಿಲ್ಲ. ನಂತರದ ಮೂರು ವರ್ಷಗಳ ಕಾಲಾವಧಿಯಲ್ಲಿ 36 ಸಮಾನವಾದ ಕಂತುಗಳಲ್ಲಿ ಈ ಸಾಲವನ್ನು ಮರುಪಾವತಿಸಬೇಕು. ಆದರೆ ಮೊದಲ ವರ್ಷದಲ್ಲಿ ಕೇವಲ ಸಾಲದ ಮೂಲ ಮೊತ್ತವನ್ನು ಮರುಪಾವತಿಸದಿದ್ದರೂ ಮೊದಲನೇ ವರ್ಷದ ಬಡ್ಡಿಯನ್ನು ಪಾವತಿಸಲೇಬೇಕು, ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು.
 
ಈ. ಬಡ್ಡಿಯ ದರ : ಈ ಯೋಜನೆಯಲ್ಲಿ ಪಡೆದ ಸಾಲಕ್ಕೆ ಗರಿಷ್ಠ 9.25 ಶೇಕಡಾ ಬಡ್ಡಿಯ ವಸೂಲಿ ಮಾಡಲಾಗಲಿದೆ. ಬ್ಯಾಂಕ್ ಗಳೊಂದಿಗೆ ಮುಂಚಿನಿಂದಲೇ ಇರುವ ನಂಟಿನ ಮತ್ತು ಸಹಯೋಗದ ಉಪಯೋಗವನ್ನು ಮಾಡಿ, ಉದ್ಯಮಿಗಳು ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿಯ ಸಾಲವನ್ನು ಮಂಜೂರು ಮಾಡಿಕೊಳ್ಳಬಲ್ಲರು.
ಉ. ಅಡಮಾನ ಅಥವಾ ಶ್ಯುರಿಟಿ (ಹೊಣೆಗಾರಿಕೆ) : ಈ ಯೋಜನೆಯಲ್ಲಿ ಪಡೆದಿರುವ ಸಾಲಗಳಿಗೆ ಕೇಂದ್ರ ಸರ್ಕಾರದಿಂದ 100 ಶೇಕಡಾ ಶ್ಯುರಿಟಿ ನೀಡಲಾಗಿದ್ದು, ಸಾಲಗಾರರಿಂದ ಯಾವುದೇ ಹೆಚ್ಚುವರಿ ಅಡಮಾನವನ್ನು ಅಥವಾ ಶ್ಯುರಿಟಿಯ ಶುಲ್ಕವನ್ನು ಬ್ಯಾಂಕ್ ಗಳಿಂದ ವಿಧಿಸಲಾಗುವುದಿಲ್ಲ.
 
ಊ. ಯೋಜನೆಯ ಕಾಲಾವಧಿ : ಈ ಯೋಜನೆಯು 23 ಮೇ 2020 ರಿಂದ 31 ಅಕ್ಟೋಬರ್ 2020 ಈ ಕಾಲಾವಧಿಯಲ್ಲಿ ಅಥವಾ ಅದಕ್ಕಿಂತ ಮುಂಚೆ ಮೂರು ಲಕ್ಷ ಕೋಟಿ ರೂಪಾಯಿಗಳ ಮಿತಿಯು ಮುಗಿಯುವ ತನಕ ನಡೆಯಲಿದೆ.
ಈ ಯೋಜನೆಯ ಪ್ರಾರಂಭವಾದ ನಂತರ ರಾಷ್ಟ್ರೀಕೃತ ಬ್ಯಾಂಕ್ ಗಳು ಈ ತನಕ ಅಂದಾಜು 17 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮಂಜೂರು ಮಾಡಿರುತ್ತಾರೆ. ಇದರಲ್ಲಿ 600 ಕೋಟಿ ರೂಪಾಯಿಗಳಷ್ಟು ಸಾಲವನ್ನು ವಿತರಿಸಲಾಗಿದೆ.
 
3. ಎರಡು ಸಾವಿರ ಕೋಟಿ ರೂಪಾಯಿಗಳ ವಿಶೇಷ NPA ನಿಧಿ : ಯಾವ MSME ಉದ್ಯಮಗಳು ಪಡೆದಿರುವ ಸಾಲದ ಕಂತುಗಳು ಬಾಕಿ ಇರುವುದರಿಂದ ಹೊಸದಾಗಿ ಸಾಲ ಸಿಗುವುದು ಅಸಾಧ್ಯವಾಗಿದ್ದಲ್ಲಿ, ಅದಕ್ಕೋಸ್ಕರ ಮೇಲೆ ತಿಳಿಸಿದಂತೆ ವಿಶೇಷ ನಿಧಿಯನ್ನು ಕೇಂದ್ರ ಸರ್ಕಾರದಿಂದ ಘೋಷಿಸಲಾಗಿದೆ. ಇದರಡಿಯಲ್ಲಿ ಇಂತಹ ಉದ್ಯಮಗಳಿಗೆ ಮಾಲಿಕರು ಹೂಡಿರುವ ಸದ್ಯದ ಬಂಡವಾಳದ 15 ಶೇಕಡಾದಷ್ಟು (ಗರಿಷ್ಠ ಮಿತಿ 75 ಲಕ್ಷ) ವಿಶೇಷ ಸಾಲದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ರೀತಿಯ ಸಾಲಗಳಿಗೆ ಕೇಂದ್ರ ಸರ್ಕಾರವು ಸಂಪೂರ್ಣವಾದ ಶ್ಯುರಿಟಿಯನ್ನು ಬ್ಯಾಂಕ್ ಗಳಿಗೆ ನೀಡಲಿದೆ.
 
4. 50 ಸಾವಿರ ಕೋಟಿ ವ್ಯವಹಾರದ MSME ಗಳಿಗೆ ಷೇರು ಬಂಡವಾಳದಲ್ಲಿ ಕೇಂದ್ರ ಸರ್ಕಾರದ ಬಂಡವಾಳದ ಯೋಜನೆ :
ಯಾವ MSME ಗಳು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ತಮ್ಮ ಷೇರುಗಳನ್ನು ನೊಂದಾಯಿಸುತ್ತಾರೋ, ಇಂತಹ ಷೇರುಗಳಲ್ಲಿ ಕಂಪನಿಯ ಷೇರು ಬಂಡವಾಳದ 15 ಶೇಕಡಾದಷ್ಟು ಬಂಡವಾಳವನ್ನು ಕೇಂದ್ರ ಸರ್ಕಾರವು ಮಾಡಲಿದೆ. ಇದರಿಂದಾಗಿ ಇಂತಹ ಉದ್ಯಮಗಳ ವಿಸ್ತರಣೆಯನ್ನು ಮಾಡುವಲ್ಲಿ ತುಂಬಾ ದೊಡ್ಡ ಪ್ರಮಾಣದ ಲಾಭವಾಗಲಿದೆ. ಇಂತಹ ಕಂಪನಿಗಳ ಷೇರುಗಳಿಗೆ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯು ಸಿಗುವಾಗ, ಕೇಂದ್ರ ಸರ್ಕಾರವು ಈ ರೀತಿಯ ಷೇರುಗಳ ಮಾರಾಟವನ್ನು ಮಾಡಿ ಅದರಿಂದ ಸಿಕ್ಕಿರುವ ಹಣದಿಂದ ಹೊಸ MSME ಷೇರುಗಳಲ್ಲಿ ಬಂಡವಾಳವನ್ನು ಹೂಡುವಂತಹ ಯೋಜನೆಯು ಇದಾಗಿದೆ. ಅಂದರೆ ಈ ನಿಧಿಯನ್ನು MSME ಗಳಿಗೋಸ್ಕರವೇ ಷೇರು ಬಂಡವಾಳದ ನಿಧಿಯೆಂದು ಶಾಶ್ವತವಾಗಿ ಉಪಯುಕ್ತವಾಗಲಿವೆ.
5. 200 ಕೋಟಿಯ ತನಕದ ಸರ್ಕಾರಿ ಖರೀದಿಯು ದೇಸೀ ಉದ್ಯಮಿಗಳಿಂದ :
ಹೊಸ ನೀತಿಯ ಪ್ರಕಾರ 200 ಕೋಟಿ ರೂಪಾಯಿಗಳ ತನಕದ ಸರ್ಕಾರಿ ಟೆಂಡರ್ ಗಳ ಮೂಲಕ ಆಗುತ್ತಿದ್ದ ಖರೀದಿಯನ್ನು ಗ್ಲೋಬಲ್ ಟೆಂಡರ್ ಎಂಬುದಾಗಿ ಘೋಷಿಸಲಾಗುವುದಿಲ್ಲ. ಇಂತಹ ಖರೀದಿಯನ್ನು ಕೇವಲ ದೇಸೀ ಉದ್ಯಮಿಗಳಿಂದಲೇ ಮಾಡಲಾಗಲಿದೆ. ಇದರಿಂದ ಸಹಜವಾಗಿಯೇ MSME ಕ್ಷೇತ್ರಕ್ಕೆ ವಿದೇಶದಿಂದ ಹೂಡಲಾಗುವ ಬಂಡವಾಳದೊಂದಿಗೆ ಸ್ಪರ್ಧಿಸುವ ಆವಶ್ಯಕತೆ ಇರುವುದಿಲ್ಲ ಮತ್ತು ವ್ಯವಸಾಯದ ವೃದ್ಧಿಯಲ್ಲಿಯೂ ಇದರಿಂದಾಗಿ ಸಹಾಯವಾಗಲಿದೆ.
6. MSME ಉದ್ಯಮಗಳ ಎಲ್ಲ ಸಾಲಗಳನ್ನು ಸರ್ಕಾರವು 45 ದಿನಗಳ ಕಾಲಾವಧಿಯಲ್ಲಿ ಸಲ್ಲಿಸಲಿವೆ :
ಈ ಉದ್ಯಮಗಳಿಗೆ ರನಿಂಗ್ ಕ್ಯಾಪಿಟಲ್ (ಕಾರ್ಯೋಪಯುಕ್ತ ಬಂಡವಾಳ) ಹೆಚ್ಟು ಲಭಿಸಲು ಮತ್ತು ತಕ್ಷಣ ಪಡೆಯಲು ಸರ್ಕಾರ ಮತ್ತು ಸರ್ಕಾರಿ ಉದ್ಯಮಗಳಿಂದ ಅವರಿಗೆ ಬರಬೇಕಾಗಿರುವ ಬಿಲ್ ಗಳ ಪೆಮೆಂಟ್ ಗಳನ್ನೂ ಪ್ರಾಧಾನ್ಯವಾಗಿ 45 ದಿನಗಳಲ್ಲಿಯೇ ಪಾವತಿಸುವುದನ್ನು ನಿರ್ಧರಿಸಲಾಗಿದೆ.
7. ಇ-ಮಾರ್ಕೇಟ್ ನ ಉಪಲಬ್ಧತೆ :
MSME ಉದ್ಯಮಗಳಿಗೆ ವಿಶೇಷವಾದ ಇ-ಮಾರ್ಕೆಟ್ ನ ಅವಕಾಶವನ್ನು ನಿರ್ಮಿಸಲಾಗಲಿದ್ದು, ಇದರ ಮೂಲಕ ಉದ್ಯಮಗಳಿಗೆ ಪ್ರದರ್ಶನಗಳು ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ಕಾರ್ಯಾಗಾರದ ಪರ್ಯಾಯವೂ ಉಪಲಬ್ಧವಾಗಲಿದೆ.
ಲಾಕ್ ಡೌನ್ ನಂತರ ಮತ್ತೆ ಉದ್ಯಮಗಳನ್ನು ಪ್ರಾರಂಭಿಸಿ ಅವುಗಳಲ್ಲಿ ಹೆಚ್ಚಳವನ್ನು ಮಾಡಲು MSME ಉದ್ಯಮಗಳಿಗೆ ಆರ್ಥಿಕ ವ್ಯವಸ್ಥಾಪನೆಯಲ್ಲಿ (ಫೈನಾನ್ಸ್ ಮ್ಯಾನೆಜ್ ಮೆಂಟ್) ವಿಶೇಷವಾದ ಪ್ಯಾಕೇಜ್ ನಿಂದ ಹೇಗೆ ಮತ್ತು ಯಾವ ರೀತಿಯ ಉಪಯೋಗವನ್ನು ಮಾಡಿಕೊಳ್ಳಬಹುದು, ಹಾಗೆಯೇ ಇನ್ನಿತರ ಯಾವ್ಯಾವ ಉಪಾಯಗಳನ್ನು ಮಾಡಬಹುದು, ಎಂಬುದರ ಕುರಿತು ಮುಂದಿನ ತಿಂಗಳ ಲೇಖನದಲ್ಲಿ ತಿಳಿದುಕೊಳ್ಳೋಣ.
 
 

mukunda_1  H x  
ಮುಕುಂದ ಅಭ್ಯಂಕರ್
ಚಾರ್ಟರ್ಡ್ ಅಕೌಂಟಂಟ್ 
9822475611
 
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳಿಗೋಸ್ಕರ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.
 
@@AUTHORINFO_V1@@