ಒಂದೇ ಸೆಟಪ್ ನಲ್ಲಿ ಟರ್ನಿಂಗ್, ಮಿಲ್ಲಿಂಗ್ ಮತ್ತು ಗ್ರೈಂಡಿಂಗ್

@@NEWS_SUBHEADLINE_BLOCK@@

Udyam Prakashan Kannad    22-Jun-2020
Total Views |
 
 
ಹೆವಿ ಉದ್ಯಮಗಳು ಮತ್ತು ವಾಹನ ಉದ್ಯಮಗಳಲ್ಲಿ ನಿರಂತರವಾಗಿ ಯಂತ್ರಭಾಗಗಳ ಸುಧಾರಣೆಯು ಆಗುತ್ತಿರುತ್ತದೆ. ಕನಿಷ್ಠ ಸಮಯದಲ್ಲಿ ಗರಿಷ್ಠ ಉತ್ಪಾದನೆ ಇದು ಇಂದಿನ ಕಾಲದ ಆವಶ್ಯಕತೆಯಾಗಿದೆ. ಈ ಸ್ಪರ್ಧೆಯಿಂದಾಗಿ ವಿವಿಧ ಮತ್ತು ಹೊಸ ಹೊಸ ಕ್ಲಿಷ್ಟ ಆಕಾರದ ಯಂತ್ರಭಾಗಗಳನ್ನು ತಯಾರಿಸುವಂತಹ ಸವಾಲುಗಳನ್ನು ಯಾವಾಗಲೂ ಎದುರಿಸಬೇಕಾಗುತ್ತದೆ. 5 ಎಕ್ಸಿಸ್ ಗಳಿಗೆ ಯಂತ್ರಣೆಯನ್ನು ಮಾಡುವಂತಹ ಪ್ರಕ್ರಿಯೆಯು ಅತ್ಯಾವಶ್ಯಕವಾಗಿದೆ.

2_2  H x W: 0 x 
 
1870 ರಿಂದ ಮಶಿನ್ ಟೂಲ್ ವ್ಯವಸಾಯದಲ್ಲಿರುವ ಗಿಲ್ಡಾಮೈಸ್ಟರ್ ಗ್ರೂಪ್ 1950 ರಲ್ಲಿ ಪಬ್ಲಿಕ್ ಎಂಟರ್ ಪ್ರೈಜ್ ಎಂಬುದಾಗಿ ರೂಪಾಂತರಿಸಲ್ಪಟ್ಟಿತು. 1985 ರಲ್ಲಿ 5 ಎಕ್ಸಿಸ್ ಗಳಲ್ಲಿ ಯಂತ್ರಣೆಯನ್ನು ಮಾಡುವಂತಹ ಮೊತ್ತಮೊದಲ ಎನ್.ಸಿ. ಮಶಿನ್ ಈ ಕಂಪನಿಯಿಂದ ತಯಾರಿಸಲಾಯಿತು. 1993 ರಲ್ಲಿ ಡೆಕೆಲ್ ಮತ್ತು ಮಾಹೋ ಈ ಎರಡು ಕಂಪನಿಗಳು ಗಿಲ್ಡಾಮೈಸ್ಟರ್ ಗ್ರೂಪ್ ನಲ್ಲಿ ವಿಲೀನ ಮಾಡಿ ಡಿ ಎಮ್ ಜಿ ಗ್ರೂಪ್ ನ ಉದಯವಾಯಿತು. ನಂತರ 2009 ರಲ್ಲಿ ಆದ ಜಾಗತೀಕರಣವನ್ನು ಗಮನಿಸಿ ಅವರು ಮೋರಿ ಸೈಕೀ ಗ್ರೂಪ್ ನೊಂದಿಗೆ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಒಟ್ಟಾಗಿ ಕೆಲಸ ಮಾಡಿದರು. ಎರಡೂ ಗ್ರೂಪ್ ಗಳಲ್ಲಿದ್ದ ಎಲ್ಲ ರೀತಿ ಸಂಪನ್ಮೂಲಗಳನ್ನು ಒಂದುಗೂಡಿಸಿ ಮುಂದೆ ಕೆಲಸ ಮಾಡುವುದನ್ನು ನಿರ್ಧರಿಸಲಾಯಿತು. 2013 ರಲ್ಲಿ ಡಿ.ಎಮ್.ಜಿ. ಮೋರಿ ಎಂಬ ಒಂದೇ ಬ್ರೇಂಡ್ ನ ಉತ್ಪಾದನೆಯನ್ನು ಮಾಡಲಾಗುತ್ತದೆ. ಜಗತ್ತಿನಾದ್ಯಂತ ಡಿ.ಎಮ್.ಜಿ.ಮೋರಿ ಇವರ 14 ಉತ್ಪಾದನೆಯ ಕೇಂದ್ರಗಳಿದ್ದು 157 ಸೇಲ್ಸ್ ನಂತರದ ಸೇವೆಯನ್ನು ನೀಡುವ ಕೇಂದ್ರಗಳಿವೆ. 5 ಎಕ್ಸಿಸ್ ಗಳಲ್ಲಿ ಯಂತ್ರಣೆ, ಯಂತ್ರಣೆಯ ನಿಖರತೆ, ಮಶಿನ್ ನ ದೃಢತೆ ಮತ್ತು ಉಚ್ಚಮಟ್ಟದ ರಚನೆ ಇದಕ್ಕೋಸ್ಕರ ಡಿ.ಎಮ್.ಜಿ. ಮೋರಿ ಇವರ ಮಶಿನ್ ಹೆಸರುವಾಸಿಯಾಗಿದೆ.

2_1  H x W: 0 x 
 
ಭಾರೀ ಯಂತ್ರಭಾಗಗಳ ಯಂತ್ರಣೆಯನ್ನು ಹೆಚ್ಚು ನಿಖರವಾಗಿ ಮಾಡಲು ಮಶಿನ್ ನ ದೃಢತೆ ಮತ್ತು ದೀರ್ಘಕಾಲದ ಉಸ್ತುವಾರಿಯೂ ಇರಬೇಕಾಗುತ್ತದೆ. ಇದಕ್ಕೋಸ್ಕರ ಡಿ.ಎಮ್.ಜಿ. ಮೋರಿ ಇವರು 17 ವರ್ಷಗಳ ಹಿಂದೆ ಡ್ಯುಯೋಬ್ಲಾಕ್ (duoBLOCK®) ಸಿರೀಸ್ ಮಶಿನ್ ಅಭಿವೃದ್ಧಿ ಪಡಿಸಿದರು. ಈ ಹಿಂದೆ ಒಂದೇ ಸಮತಟ್ಟಾದ ಬೆಡ್ ನಲ್ಲಿ ಸ್ಪಿಂಡಲ್, ಯಂತ್ರಭಾಗಗಳು ಮತ್ತು ಟೂಲ್ ಗಳ ಕಾಲಮ್ ಅಳವಡಿಸಲಾಗಿರುತ್ತಿತ್ತು. ಕಾಲಾಂತರದಲ್ಲಿ ಟೂಲ್ ಕಾಲಮ್ ನ ಅಡಿಪಾಯದ ಎತ್ತರವನ್ನು ಹೆಚ್ಚಿಸಲಾಯಿತು. ಈಗ ಅದನ್ನು ಇನ್ನಷ್ಟು ಹೆಚ್ಚು ಅಗಲ ಮತ್ತು ಸಂಪೂರ್ಣವಾಗಿ ಲಂಬಕೋನದ ಆಕಾರದಲ್ಲಿ ಮಾಡಲಾಗಿದೆ. ಇದನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ. 
 
ಈ ವ್ಯವಸ್ಥೆಯಿಂದಾಗುವ ಲಾಭವೆಂದರೆ, ಸಂಪೂರ್ಣ ಮಶಿನ್ ಸ್ಥಿರವಾಗಿರುವ ಸಮೂಹವು ಇಮ್ಮಡಿಯಾದಲ್ಲಿ ಟೂಲ್ ಪೋಸ್ಟ್ ನ ಡೈನ್ಯಾಮಿಕ್ ಮಾಸ್ ಅರ್ಧಕ್ಕಿಂತಲೂ ಕಡಿಮೆಯಾಯಿತು. ಇದರಿಂದಾಗಿ ಯಂತ್ರಣೆಗೆ ಬಲವು ಕಡಿಮೆ ಬೇಕಾಗುತ್ತದೆ. ಸಂಪೂರ್ಣ ಯಂತ್ರಣೆಯ ಉದ್ದ ಅಥವಾ ಅಗಲದಲ್ಲಿ ಹೆಚ್ಚು ಸ್ಥಿರತೆ ಉಂಟಾಯಿತು. ಹಾಗೆಯೇ ಯಂತ್ರಣೆಯಲ್ಲಿ ಉಂಟಾಗುವ ಉಷ್ಣತೆಯು ವಿಶೇಷ ತಂತ್ರಜ್ಞಾನದಿಂದ ನಿಯಮಿತವಾಗಿ ಮಾಡಿದ್ದರಿಂದ ದೀರ್ಘಕಾಲಾವಧಿಯ ತನಕ ನಿಖರತೆಯು ಹೆಚ್ಚಾಯಿತು.
 
4_2  H x W: 0 x
 
ಡ್ಯುಯೋಬ್ಲಾಕ್ ಸಿರೀಸ್ ನ ಅನೇಕ ಗಾತ್ರದ ಮಶಿನ್ ನ ವೈಶಿಷ್ಟ್ಯಗಳು
• X ಅಕ್ಷ 800 ಮಿ.ಮೀ. ನಿಂದ 1600 ಮಿ.ಮೀ., Y ಅಕ್ಷವು 1600 ಮಿ.ಮೀ. ಮತ್ತು Z ಅಕ್ಷವು 1000 ಮಿ.ಮೀ.ನಷ್ಟು ಗಾತ್ರದ ಯಂತ್ರಭಾಗಗಳಿಗೆ 5 ಅಕ್ಷಗಳಲ್ಲಿ ಯಂತ್ರಣೆಯನ್ನು ಮಾಡುವುದು ಸಾಧ್ಯ.
• 4500 ಕಿಲೋ ತನಕದ ಭಾರವಿರುವ ಯಂತ್ರಭಾಗಗಳಿಗೆ ಸಹಜವಾಗಿ ಯಂತ್ರಣೆಯನ್ನು ಮಾಡಬಹುದಾಗಿದೆ.
• ಮಿಲ್ಲಿಂಗ್ ಹೆಡ್ B ಅಕ್ಷದಲ್ಲಿ -30 ರಿಂದ +180 ಅಂಶಗಳ ತನಕ ತಿರುಗುತ್ತದೆ.
• ಒಳಭಾಗದಲ್ಲಿ ಕೂಲಿಂಗ್ ಮಾಡಿರುವ ಬಾಲ್ ಸ್ಕ್ರೂ
• ಹೆಚ್ಚು ಅಗಲವಿರುವ ಲಿನಿಯರ್ ಗೈಡ್ ವೆ.
• B ಮತ್ತು C ಅಕ್ಷದಲ್ಲಿ ಯಂತ್ರಣೆಗೋಸ್ಕರ ದೊಡ್ಡ ಬೋರಿಂಗ್ ನಲ್ಲಿ ಸ್ಥಿರತೆ.
• 8000 ರಿಂದ 30000 ಆರ್.ಪಿ.ಎಮ್.ತನಕ ವೇಗವಿರುವ ಮುಖ್ಯವಾದ ಸ್ಪಿಂಡಲ್ ಉಪಲಬ್ಧ.
• ಕೆಲವು ವಿಶಿಷ್ಟ ಯಂತ್ರಣೆಯ ಕೆಲಸಕ್ಕೋಸ್ಕರ ಹೆಚ್ಚು ಬಲವಿರುವ ಮುಖ್ಯ ಸ್ಪಿಂಡಲ್, 52 kW ಬಲ ಮತ್ತು 1800 Nm ಟಾರ್ಕ್ ಈ ರಚನೆಯಲ್ಲಿ ಉಪಲಬ್ಧವಿದೆ.
• ಹೊಸ ಉರುಟಾಗಿರುವ ಟೂಲ್ ಮೆಗೆಜಿನ್ ನಲ್ಲಿ (ಚಿತ್ರ ಕ್ರ. 2) ಕಡಿಮೆ ಜಾಗದಲ್ಲಿ 453 ಟೂಲ್ ಗಳನ್ನು ಇಡಲು ವ್ಯವಸ್ಥೆ. ಹೊಸ ಟೂಲ್ 5.6 ಸೆಕಂಡುಗಳಲ್ಲಿ ತರಲಾಗುತ್ತದೆ, 0.5 ಸೆಕಂಡುಗಳಲ್ಲಿ ಬದಲಾಯಿಸಲಾಗುತ್ತದೆ.
• ತುಂಬಾ ವಿಶೇಷವಾದ ತಂತ್ರಜ್ಞಾನವನ್ನು ಬದಲಾಯಿಸಿದ್ದರಿಂದ ಆಯುಷ್ಯವಿಡಿ 30% ಶಕ್ತಿಯ ಉಳಿತಾಯ.
• ಇನೋವೆಟಿವ್ ಮಿಲ್ಲಿಂಗ್ ಹೆಡ್ ಎ ಅಕ್ಷದಲ್ಲಿ (ಚಿತ್ರ ಕ್ರ. 3) +35˚ ಯಿಂದ =125˚ ನಷ್ಟು ವಿಸ್ತಾರವಾದ ಸುತ್ತಿನಲ್ಲಿ ತಿರುಗಬಲ್ಲದು.
• ಯಂತ್ರಭಾಗಗಳನ್ನು ಬದಲಾಯಿಸುವಾಗ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡಲು ಪೇಲೆಟ್ ಚೇಂಜರ್ ನ ವ್ಯವಸ್ಥೆ.
ಈ ರೀತಿಯ ಮಹತ್ವದ ಪ್ರಕ್ರಿಯೆಗಳಿಂದಾಗಿ ಡ್ಯುಓಬ್ಲಾಕ್ ಸಿರೀಜ್ ನ ಅನೇಕ ಆಕಾರದ ಮಶಿನ್ ಗಳ ಬೇಡಿಕೆಯು ವಿಮಾನ ಉದ್ಯಮ, ಡೈ ಮೋಲ್ಡಿಂಗ್, ವಾಹನೋದ್ಯಮ, ಅನೇಕ ಎನರ್ಜಿ ಸಿಸ್ಟಮ್ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. ಈ ಮಶಿನ್ ಗಳಲ್ಲಿ ಸಹಜವಾಗಿ ಯಂತ್ರಣೆ ಮಾಡಿರುವ ಹಲವಾರು ತುಂಬಾ ಕ್ಲಿಷ್ಟಕರವಾದ ಯಂತ್ರಭಾಗಗಳನ್ನು ಚಿತ್ರ ಕ್ರ. 4 ರಲ್ಲಿ ತೋರಿಸಲಾಗಿದೆ.

4_1  H x W: 0 x 
 
ಡ್ಯುಓಬ್ಲಾಕ್ ಸಿರೀಜ್ ನ ಮಿಲ್ ಟರ್ನ್
5 ಅಕ್ಷೀಯ ಮಶಿನ್
ಕನಿಷ್ಠ ಸೆಟಪ್ ಬಳಸಿ ಯಂತ್ರಣೆಯಲ್ಲಿ ಪರಿವರ್ತನೆಯನ್ನು ಹೆಚ್ಚಿಸಲು ಅಂದಾಜು 20 ವರ್ಷಗಳ ಹಿಂದೆ ಮಿಲ್ ಟರ್ನ್ 5 ಅಕ್ಷೀಯ ಮಶಿನ್ ಅಭಿವೃದ್ಧಿಪಡಿಸಲಾಗಿದೆ. ಇತರ ಹೊಸ ಪ್ರಣಾಳಿಕೆಯು ಈಗ ಡ್ಯುಓಬ್ಲಾಕ್ FD ಸಿರೀಜ್ ನಲ್ಲಿ ತಯಾರಿಸಲಾಗಿದೆ. ಈ ಯಂತ್ರಣೆಯಲ್ಲಿ ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ ಒಂದು ತಿರುಗುವ ಟೇಬಲ್ (ಟರ್ನಿಂಗ್ ಟೇಬಲ್) ಸೇರಿಸಲಾಗಿದೆ. ಈ ಟೇಬಲ್ ಗೆ ಡೈರೆಕ್ಟ್ ಡ್ರೈವ್ ನೀಡಲಾಗಿದೆ.

6_2  H x W: 0 x 
 
ಈ ಯಂತ್ರಣೆಯ ಪ್ರಮುಖ ಲಾಭಗಳು
• ಎಲ್ಲ ಯಂತ್ರಣೆಯೂ ಒಂದೇ ಸೆಟಪ್ ನಲ್ಲಿ ಆಗುವುದರಿಂದ ಉಚ್ಚ ಗುಣಮಟ್ಟದ ಉತ್ಪಾದಕತೆ.
• 8280 Nm ಟಾರ್ಕ್ ತಯಾರಿಸಬಲ್ಲ ದೃಢವಾದ ಟರ್ನಿಂಗ್ ಟೇಬಲ್.
• 1600 ಮಿ.ಮೀ. ತನಕದ ಗಾತ್ರ ಮತ್ತು 3500 ಕಿ.ಗ್ರಾಂ. ತೂಕದ ಯಂತ್ರಭಾಗಗಳಿಗೆ ಸಹಜವಾಗಿ ಯಂತ್ರಣೆಯನ್ನು ಮಾಡುವುದು ಸಾಧ್ಯ.
• ಯಂತ್ರಭಾಗಗಳ ನಿರ್ದೋಷವಾದ ಯಂತ್ರಣೆಯನ್ನು ಮಾಡಲು ವಿಶೇಷವಾದ ‘ಸ್ಟ್ಯಾಂಡರ್ಡ್ ಸೈಕಲ್’ ಅಭಿವೃದ್ಧಿ ಮಾಡಲಾಗಿದೆ. ಇದರಿಂದಾಗಿ ಟರ್ನಿಂಗ್, ಹೆಚ್ಚುವರಿ ಮಟೀರಿಯಲ್ ತೆಗೆಯುವುದು, ವಿಶೇಷ ವಿಧದ ಕಚ್ಚುಗಳನ್ನು ತಯಾರಿಸುವುದು, ನಿರ್ದೋಷವಾಗಿ ಕಚ್ಚುಗಳನ್ನು ತಯಾರಿಸುವುದು, B ಅಕ್ಷದಲ್ಲಿ ಯಂತ್ರಣೆಯನ್ನು ಮಾಡುವುದು, ಈ ರೀತಿಯ ವಿವಿಧ ಕೆಲಸಗಳನ್ನು ಮಾಡಲಾಗುತ್ತದೆ.
• ಯಂತ್ರಭಾಗಗಳಿಗೆ ಬ್ಯಾಲೆನ್ಸಿಂಗ್ ಕಾಪಾಡಲು ವಿಶೇಷವಾಗಿ ಸೈಕಲ್ ಅಭಿವೃದ್ಧಿ ಮಾಡಲಾಗಿದೆ.

6_1  H x W: 0 x 
 
ಚಿತ್ರ ಕ್ರ. 6 ರಲ್ಲಿ ತೋರಿಸಿದಂತೆ ಯಂತ್ರಭಾಗಗಳನ್ನು ಯಾವಾಗಲೂ ಮಶಿನ್ ನಲ್ಲಿ ಮಾಡುವುದಾದಲ್ಲಿ ಅನೇಕ ಸೆಟಪ್ ಗಳನ್ನು ಬದಲಾಯಿಸಬೇಕಾಗುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಮೂರರಿಂದ ನಾಲ್ಕು ಮಶಿನ್ ಮತ್ತು ಹತ್ತು-ಹನ್ನೆರಡು ಪ್ರೊಸೆಸ್ ಸೆಟಪ್ ಬಳಸಿ, ಈ ರೀತಿಯ ಕ್ಲಿಷ್ಟ ಯಂತ್ರಭಾಗಗಳನ್ನು ತಯಾರಿಸುವಾಗ ಉತ್ಪಾದಕತೆ ಮತ್ತು ಗುಣಮಟ್ಟ ಇವೆರಡರಲ್ಲಿ ಅಡಚಣೆಗಳು ಉಂಟಾಗುತ್ತವೆ. ಇದರ ಹೊರತಾಗಿ ಮಶಿನ್, ಜಾಗ, ಮಾನವ ಸಂಪನ್ಮೂಲಗಳು ಮತ್ತು ಇನ್ನಿತರ ಸಂಪನ್ಮೂಲಗಳು ಹೆಚ್ಚು ಬೇಕಾಗುತ್ತವೆ. ಡ್ಯುಓಬ್ಲಾಕ್ ಸಿರೀಸ್ ಮಶಿನ್ ನಿಂದಾಗಿ ಈ ರೀತಿಯ ಯಂತ್ರಣೆ ಒಂದೇ ಮಶಿನ್ ನಲ್ಲಿ, ನಾಲ್ಕು ಅಥವಾ ಕಡಿಮೆ ಹಂತಗಳಲ್ಲಿ ಮಾಡಬಹುದಾಗಿದೆ ಮತ್ತು ಉತ್ಪಾದಕತೆಯೂ ಶೇಕಡಾ 300 ರಷ್ಟು ಹೆಚ್ಚಾಗುತ್ತದೆ. ತುಂಬಾ ಕ್ಲಿಷ್ಟವಾಗಿರುವ ಯಂತ್ರಭಾಗಗಳ ಸಂಪೂರ್ಣ ಯಂತ್ರಣೆಯನ್ನು ಒಂದೇ ಮಶಿನ್ ನಲ್ಲಿ ಮತ್ತು ಒಂದೇ ಸೆಟಪ್ ನಲ್ಲಿ ಸಹಜವಾಗಿ ಮಾಡುವುದೂ ಸಾಧ್ಯವಾಗಿದೆ.
ಇತ್ತೀಚೆಗೆ ಈ ಸಿರೀಜ್ ನಲ್ಲಿ ಕ್ಲಿಷ್ಟವಾಗಿರುವ ಯಂತ್ರಭಾಗಗಳ ಗ್ರೈಂಡಿಂಗ್ ಮಾಡುವ ಪರ್ಯಾಯವನ್ನು ಅಭಿವೃದ್ಧಿ ಮಾಡಲಾಗಿವೆ. ಆದರೆ ಅವುಗಳು ಕೇವಲ ಹೊಸ ಮಶಿನ್ ನಲ್ಲಿ ಉಪಲಬ್ಧವಾಗಲಿವೆ.
 
ಗ್ರೈಂಡಿಂಗ್ ಸೈಕಲ್
ಡ್ಯುಓಬ್ಲಾಕ್ FD ಸಿರೀಸ್ ನಲ್ಲಿ ಯಂತ್ರಣೆಯನ್ನು ಮಾಡುವಾಗ, ಆವಶ್ಯಕತೆಗೆ ಅನುಸಾರವಾಗಿ ಯಂತ್ರಭಾಗಗಳಲ್ಲಿ ಗ್ರೈಂಡಿಂಗ್ ಮಾಡಬೇಕು, ಎಂಬುದಕ್ಕೋಸ್ಕರ ವಿಶೇಷ ಸೈಕಲ್ ಅಭಿವೃದ್ಧಿಪಡಿಸಲಾಯಿತು.

8_1  H x W: 0 x 
 
• ಒಂದೇ ಸೆಟಪ್ ನಲ್ಲಿ ಮಿಲ್ಲಿಂಗ್, ಟರ್ನಿಂಗ್ ಮತ್ತು ಗ್ರೈಂಡಿಂಗ್ (ಚಿತ್ರ ಕ್ರ. 7) ಸಹಜವಾಗಿ ಮಾಡುವುದು ಸಾಧ್ಯವಾಗಿರುವುದರಿಂದ ಹೆಚ್ಚುವರಿ ಮಾನವ ಸಂಪನ್ಮೂಲಗಳು ಮತ್ತು ಇನ್ನಿತರ ಸಂಪನ್ಮೂಲಗಳ ಬಳಕೆಯು ಕಡಿಮೆಯಾಗುತ್ತದೆ.
• ಆಪರೇಟರ್ ಗೆ ಸಹಜವಾಗಿ ಬಳಸಬಹುದಾದಂತಹ ಕಂಟ್ರೋಲ್ ಮತ್ತು ಪ್ರೊಗ್ರಾಮ್ ತಯಾರಿಸಲಾಗಿದೆ.
• ಇದರಲ್ಲಿ ಒಳ (ಇಂಟರ್ನಲ್) ಮತ್ತು ಹೊರ (ಎಕ್ಸಟರ್ನಲ್) ಎಂಬ ಎರಡು ರೀತಿಯ ಗ್ರೈಂಡಿಂಗ್ ಮಾಡಬಹುದಾಗಿದೆ. ಗ್ರೈಂಡಿಂಗ್ ವೀಲ್ ನ ಡ್ರೆಸಿಂಗ್ ಇತ್ಯಾದಿ ಅಂಶಗಳನ್ನು ನಿರ್ವಹಿಸಬಹುದಾಗಿದೆ.
• ಸ್ಪಿಂಡಲ್ ಲೋಡ್ ನಿಂದ ಗ್ರೈಂಡಿಂಗ್ ವೀಲ್ ಯಂತ್ರಭಾಗಗಳನ್ನು ಸ್ಪರ್ಶಿಸಿದೆಯೇ, ಎಂಬುದನ್ನು ಪರಿಶೀಲಿಸಲಾಗುತ್ತದೆ.
• ಕಠಿಣವಾಗಿರುವ ಲೋಹಗಳ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡುವಾಗ ಗ್ರೈಂಡಿಂಗ್ ಸೈಕಲ್ ಬಳಸುವುದು ಸಾಧ್ಯವಿರುವುದರಿಂದ ಟೂಲ್ ನ ಖರ್ಚಿನಲ್ಲಿ ಉಳಿತಾಯವಾಗುತ್ತದೆ.
• ಲಂಬ ಗೋಲಾಕಾರವಾಗಿರುವ ಯಂತ್ರಭಾಗಗಳ ನಿರ್ಮಿತಿಯಲ್ಲಿ ಅದರ ಕಾಂನ್ಸೆಂಟ್ರಿಸಿಟಿ ಕಾಪಾಡುವುದು ಸಹಜ ಸಾಧ್ಯ.
• ಕೊರಂಡಮ್ ಮತ್ತು CBN ವೀಲ್ ಗೋಸ್ಕರ ರೋಟರಿ ಡ್ರೆಸಿಂಗ್ ಯುನಿಟ್.
• ಸಮತಟ್ಟಾದ ಗ್ರೈಂಡಿಂಗ್ ಗೋಸ್ಕರ ಸಂಭಾಷಣೆಯನ್ನು ಮಾಡಬಲ್ಲ ಸಾಫ್ಟ್ ವೇರ್.
 
ಸಾಧಿಸಬಹುದಾದಂತಹ ಟಾಲರನ್ಸ್
• ಯಂತ್ರಭಾಗಗಳಲ್ಲಿ ನಿರ್ದೋಷವಾದ ಗಾತ್ರ ಮತ್ತು 0.04 ಮೈಕ್ರಾನ್ ನಷ್ಟು ಸರ್ಫೇಸ್ ಫಿನಿಶ್ ತಯಾರಿಸಬಹುದು.
• 5 ಮೈಕ್ರಾನ್ ತನಕದ ಗೋಲಾಕಾರತ್ವ.

8_2  H x W: 0 x 
 
ಮಶಿನ್ ನ ವೈಶಿಷ್ಟ್ಯಗಳು
1. ಕಾರ್ಯವಸ್ತುವಿನಲ್ಲಾಗುವ ಟೂಲ್ ನ ಪ್ರವಾಸದ ಪ್ರಕ್ರಿಯೆಯು ಹೆಚ್ಚು ವಿಶ್ವಾಸಾರ್ಹವಾಗಲು ಮೋಟರ್ ಸ್ಪಿಂಡಲ್ ಗೆ ಜೋಡಿಸಿರುವ ಎಕಾಸ್ಟಿಕ್ ಎಮಿಶನ್ ಸೆನ್ಸರ್.
2. ಡ್ರೆಸಿಂಗ್ ಪ್ರಕ್ರಿಯೆಯು ಇನ್ನಷ್ಟು ವಿಶ್ವಾಸಾರ್ಹವಾಗಲು ಡ್ರೆಸಿಂಗ್ ಯುನಿಟ್ ನೊಂದಿಗೆ ಜೋಡಿಸಿರುವ ಎಕಾಸ್ಟಿಕ್ ಎಮಿಶನ್ ಸೆನ್ಸರ್.
3. 1300 ಲೀಟರ್ ಸಾಮರ್ಥ್ಯವಿರುವ ಮತ್ತು 10 ಮೈಕ್ರಾನ್ ತನಕದ ಫಿಲ್ಟರೇಶನ್ ಸಾಮರ್ಥ್ಯವಿರುವ ಕೂಲಂಟ್ ಯುನಿಟ್.

10_2  H x W: 0  
 
ಸೆಲೋಸ್ (CELOS®) ಕಂಟ್ರೋಲ್ ಯುನಿಟ್
ಎಲ್ಲ ಸಿ.ಎನ್.ಸಿ. ಮಶಿನ್ ಗಳಲ್ಲಿ ಕಂಟ್ರೋಲ್ ಯುನಿಟ್ ಇದು ತುಂಬಾ ಮಹತ್ವದ ಭಾಗವಾಗಿರುತ್ತದೆ. ಸಂಪೂರ್ಣ ಕೈಗಾರಿಕೋದ್ಯಮಗಳಲ್ಲಿ ಮಶಿನ್ ಟೂಲ್ ಗಳ ಇತಿಹಾಸದಲ್ಲಿ ಮೊದಲಾಗಿಯೇ ಹೊಸ ರೀತಿಯ ಎಪ್ಲಿಕೇಶನ್ ಗೆ ಆಧರಿಸಿರುವ ಮಲ್ಟಿ ಟಚ್ ಯುನಿಟ್ (ಚಿತ್ರ ಕ್ರ. 8) ಅಭಿವೃದ್ಧಿ ಮಾಡಲಾಗಿದೆ. ಇದರ ಬಳಕೆಯನ್ನು ಕೆಲಸಗಾರರಿಗೆ ಸುಲಭವಾಗಿ ಮಾಡುವುದು ಸಾಧ್ಯವಾಗಬೇಕು ಎಂಬುದಕ್ಕೋಸ್ಕರ ಸ್ಮಾರ್ಟ್ ಫೋನ್ ನಂತಹ ಪ್ರೊಗ್ರಾಮ್ ಗಳನ್ನು ಬಳಸಲಾಗಿದೆ. ಇದರ ಕೆಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
 
• ಮಶಿನ್ ಗೆ ಬೇಕಾಗುವ ಮಾಹಿತಿಯನ್ನು ಕಂಪನಿಯ ಸಿಸ್ಟಮ್ ನಿಂದ ಪಡೆಯಬಹುದಾಗಿದೆ.
• ಇನ್ನಿತರ ಕಡೆಗಳಲ್ಲಿರುವ ಪ್ರೊಗ್ರಾಮ್, ವೆಬ್ ನಲ್ಲಿರುವ ಪ್ರೊಗ್ರಾಮ್ ಇತ್ಯಾದಿಗಳ ಕುರಿತು ವಿಚಾರ ಮಾಡಿ ಬಳಸಬಹುದಾಗಿದೆ.
• ನಿಯಮಿತವಾಗಿ ಮತ್ತು ಸ್ವಯಂಚಾಲಿತ ರೀತಿಯಲ್ಲಿ ಮಾಡಿರುವ ಕೆಲಸದ ವರದಿಯನ್ನು ನೀಡಲಾಗುತ್ತದೆ.
• ಯಾವುದೇ ಆರ್ಡರ್ ನ ಎಲ್ಲ ನಿಯಂತ್ರಣೆ, ಬರೆಯುವಿಕೆ ಮತ್ತು ಪೂರ್ತಿಯಾಗಿರುವ ಕೆಲಸಗಳ ವಿಜ್ಯುವಲೈಜೇಶನ್ ಈ ಯಂತ್ರಣೆಯ ಮೂಲಕ ಮಾಡಲಾಗುತ್ತದೆ.
• ಮಶಿನ್ ಆಪರೇಟರ್ ಗೆ ಬೇಕಾಗುವ ಎಲ್ಲ ಮಾಹಿತಿಯ ವರ್ಗೀಕರಣವನ್ನು ಮಾಡಿ ಆಪರೇಟರ್ ಗೆ ತಕ್ಷಣ ತಿಳಿಯಬಹುದಾದಂತಹ ಮಂಡನೆಯನ್ನು ಅನೇಕ ರೀತಿಯಲ್ಲಿ ಮಾಡುವುದು ಸಾಧ್ಯ.
• ಡಿಜಿಟಲ್ ಉತ್ಪಾದನೆಗಳು ಮತ್ತು ಕಾಗದ ರಹಿತವಾದ ವ್ಯವಸ್ಥೆ.
• ಯಂತ್ರಣೆಯ ಕುರಿತಾದ ಪರಿಪೂರ್ಣವಾದ ಮಾಹಿತಿಯನ್ನು ಒಟ್ಟು ಮಾಡಿ ಮತ್ತು ವಿಶ್ಲೇಷಣೆಯನ್ನು ಮಾಡಿ, ಅದರ ಬಳಕೆಯನ್ನು ನಂತರ ಮಾಡುವುದು ಸಾಧ್ಯವಾಗಬೇಕು, ಅದಕ್ಕೋಸ್ಕರ 16 ಅನೇಕ ರೀತಿಯ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
• ಇಂಡಸ್ಟ್ರೀ 4.0 ನ ಸವಾಲುಗಳನ್ನು ಎದುರಿಸಲು ಈ ಮಾರ್ಗಸೂಚಿಗಳು ಸಿದ್ಧವಾಗಿವೆ.
 
ತಾಂತ್ರಿಕ ಸೈಕಲ್ (ಟೆಕ್ನಾಲಾಜಿ ಸೈಕಲ್)
ಸಿ.ಎನ್.ಸಿ. ಮಶಿನ್ ಬಳಸುವಾಗ, ಪ್ರತಿಯೊಂದು ಯಂತ್ರಭಾಗಗಳ ಕೆಲವು ಯಂತ್ರಣೆಗೋಸ್ಕರ ಅನೇಕ ಪ್ರೊಗ್ರಾಮ್ ಗಳನ್ನು ಬರೆಯಬೇಕಾಗುತ್ತದೆ. ಈ ಪ್ರೊಗ್ರಾಮ್ ಗಳು ತುಂಬಾ ದೀರ್ಘವಾಗಿರುತ್ತವೆ ಮತ್ತು ಅದರಲ್ಲಿ ಹಲವಾರು ತಾಂತ್ರಿಕ ತಪ್ಪುಗಳೂ ಇರುವ ಸಾಧ್ಯತೆ ಇರುತ್ತದೆ. ಈ ರೀತಿಯಲ್ಲಿ ಪುನರಾವರ್ತನೆಯಾಗುವಂತಹ ಕೆಲಸಗಳಿಗೋಸ್ಕರ ನಾವು ಹಲವಾರು ‘ತಾಂತ್ರಿಕ ಸೈಕಲ್’ ಅಭಿವೃದ್ಧಿ ಮಾಡಿದ್ದೇವೆ ಮತ್ತು ಅವುಗಳನ್ನು ನಮ್ಮ ಮಶಿನ್ ನಲ್ಲಿರುವ ಡೇಟಾದಲ್ಲಿ ಸೇರಿಸಲಾಗಿದೆ. ಈ ರೀತಿಯಲ್ಲಿ ತಯಾರಾಗಿರುವ ಸೈಕಲ್ ಬಳಸಿದಲ್ಲಿ ತಮ್ಮ ಪ್ರೊಗ್ರಾಮಿಂಗ್ ನಲ್ಲಾಗುವ ದೋಷಗಳು ಇಲ್ಲದಂತಾಗುತ್ತವೆ. ಇದರಿಂದಾಗಿ ಉತ್ಪಾದನೆಯೂ ಹೆಚ್ಚುತ್ತದೆ. ಮಶಿನ್ ನ ಬಳಕೆ ಮತ್ತು ಉತ್ಪಾದನೆಯ ಸಾಮರ್ಥ್ಯದ ಪ್ರಮಾಣವೂ ವೃದ್ಧಿಸುತ್ತದೆ. ಅಪಘಾತಗಳ ಪ್ರಮಾಣವು ಕಡಿಮೆಯಾಗುತ್ತದೆ. ಪ್ರತಿಯೊಂದೆಡೆ ಉಟ್ಟ ಶಿಕ್ಷಣವನ್ನು ಪಡೆದಿರುವ ಕೆಲಸಗಾರರು ಲಭ್ಯವಿರುವುದು ಅಸಾಧ್ಯ. ಈ ಪರಿಸ್ಥಿತಿಯಲ್ಲಿ ಈ ತಾಂತ್ರಿಕ ಸೈಕಲ್ ಗಳ ಉಪಯೋಗವು ಯೋಗ್ಯವಾದ ರೀತಿಯಲ್ಲಾಗುತ್ತದೆ. ಈ ರೀತಿಯ ಕೆಲವು ತಾಂತ್ರಿಕ ಸೈಕಲ್ ಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.

10_1  H x W: 0  
 
1. ಮಶಿನ್ ಪ್ರೊಟೆಕ್ಷನ್ ಕಂಟ್ರೋಲ್ (MPC 2.0)
ಯಂತ್ರಣೆಯಾಗುತ್ತಿರುವಾಗ ಹಲವಾರು ಕಾರಣಗಳಿಂದಾಗಿ ಟೂಲ್ ನಲ್ಲಿ ಲೋಡ್ ಉಂಟಾಗಿ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ನಾವು ಒಂದು ಪ್ರೊಟೆಕ್ಷನ್ ಕಂಟ್ರೋಲ್ ಯಂತ್ರಣೆಯನ್ನು (ಚಿತ್ರ ಕ್ರ. 9) ತಯಾರಿಸಲಾಗುದೆ. ಯಂತ್ರಣೆಯಾಗುತ್ತಿರುವಾಗ ಸಂಪೂರ್ಣ ಯಂತ್ರಣೆಯಲ್ಲಿ ಉಂಟಾಗುವ ಕಂಪನಗಳು, ಸ್ಪಿಂಡಲ್ ಬೇರಿಂಗ್ ಮತ್ತು ಟೂಲ್ ನಲ್ಲಿರುವ ಟಾರ್ಕ್ ಇತ್ಯಾದಿಗಳನ್ನು ಮಾನಿಟರ್ ಮಾಡಲಾಗುತ್ತದೆ. ಇದರಲ್ಲಿ ಹಲವಾರು ಪ್ಯಾರಾಮೀಟರ್ ಗಳು ಮಿತಿಗಿಂತ ಹೆಚ್ಚಾಗುತ್ತಿದ್ದಲ್ಲಿ ಯಂತ್ರಣೆಯು ಆಫ್ ಆಗುತ್ತದೆ ಮತ್ತು ಆಪರೇಟರ್ ಗೆ ಮುಂದಿನ ಮಾರ್ಗದರ್ಶನಕ್ಕೋಸ್ಕರ ಸೂಚನೆಗಳು ಲಭಿಸುತ್ತವೆ.
 
2. 3-D ಕ್ವಿಕ್ ಸೆಟ್
5 ಎಕ್ಸಿಸ್ ಗಳಲ್ಲಿ ಯಂತ್ರಣೆಯನ್ನು ಮಾಡುವಾಗ ಹಲವಾರು ಕಾರಣಗಳಿಂದಾಗಿ ಮಶಿನ್ ನ ಸಂಪೂರ್ಣ ಅಲೈನ್ ಮೆಂಟ್ ಪರಿಶೀಲಿಸುವ ಆವಶ್ಯಕತೆ ಇದ್ದಲ್ಲಿ ಅದಕ್ಕೋಸ್ಕರ ಜಾಸ್ತಿ ಸಮಯವು ವ್ಯರ್ಥವಾಗುತ್ತದೆ. ಸಿ.ಎಮ್.ಎಮ್. ತಪಾಸಣೆಯ ಮಶಿನ್ ನಲ್ಲಿ ಯಾವ ರೀತಿಯಲ್ಲಿ ಮಾಸ್ಟರ್ ಬಾಲ್ ಬಳಸಿ ಅಲೈನ್ ಮೆಂಟ್ ಪರಿಶಿಲೀಸಲಾಗುತ್ತದೆಯೋ, ಅದೇ ರೀತಿಯಲ್ಲಿ ಈ ಮಶಿನ್ ನಲ್ಲಿಯೂ ನಾವು ಮಾಸ್ಟರ್ ಬಾಲ್ ಬಳಸಿ ಕಿನೆಮ್ಯಾಟಿಕ್ ಅಲೈನ್ ಮೆಂಟ್ ತಪಾಸಣೆ (ಚಿತ್ರ ಕ್ರ. 10) ಮಾಡುವ ವ್ಯವಸ್ಥೆಯನ್ನು ನೀಡಲಾಗಿದೆ. ಇದರಿಂದಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಸ್ಪಿಂಡಲ್, ಟೂಲ್, ಟೇಬಲ್ ಸೆಂಟರ್ ಇತ್ಯಾದಿಗಳ ಅಲೈನ್ ಮೆಂಟ್ ಯೋಗ್ಯವಾಗಿದೆಯೇ, ಎಂಬುದರ ಕುರಿತು ಖಾತರಿ ಮಾಡಬಹುದು. ಆಪರೇಟರ್ ಗೆ ಸಹಜವಾಗಿ ಕೆಲಸ ಮಾಡುವುದಕ್ಕೋಸ್ಕರ, ಸೂಕ್ತ ರೀತಿಯ ಪ್ರೊಗ್ರಾಮಿಂಗ್ ಇದರಲ್ಲಿ ಮಾಡಲಾಗಿದೆ. ಮಶಿನ್ ನ ದೀರ್ಘಕಾಲಾವಧಿಯ ಬಳಕೆಯ ಖಾತರಿಗೋಸ್ಕರ ಇದು ಅತ್ಯಾವಶ್ಯಕವಾಗಿದೆ. 

12_2  H x W: 0  
 
3. ಎಪ್ಲಿಕೇಶನ್ ಟ್ಯೂನಿಂಗ್ ಸೈಕಲ್ (ಎ.ಟಿ.ಸಿ.)
ಒಂದೇ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ ಆಪರೇಟರ್ ಗೆ ಅನೇಕ ಹಂತಗಳಲ್ಲಿ ವಿವಿಧ ಸೆಟಿಂಗ್ ಮಾಡಬೇಕಾಗುತ್ತದೆ. ಪ್ರಾರಂಭದಲ್ಲಿ ರಫ್ ಕಟಿಂಗ್ ಮಾಡುವಾಗ ವೇಗವು ತುಂಬಾ ಮಹತ್ವದ್ದಾಗಿದೆ. ಸೆಮಿಫಿನಿಶ್ ಮಾಡುವಾಗ ನಿಖರತೆಯು ತುಂಬಾ ಮಹತ್ವದ್ದಾಗಿದೆ. ಫಿನಿಶ್ ಯಂತ್ರಣೆಯನ್ನು ಮಾಡುವಾಗ ಸರ್ಫೇಸ್ ಫಿನಿಶ್ ಮಹತ್ವದ್ದಾಗಿದೆ. ಈ ಮೂರೂ ಹಂತಗಳಲ್ಲಿ ಸಹಜವಾಗಿ ಯಂತ್ರಣೆಯನ್ನು ಮಾಡಲು ನಾವು ಹಲವಾರು ಪ್ರೊಗ್ರಾಮ್ (ಚಿತ್ರ ಕ್ರ. 11) ಸೇರ್ಪಡಿಸಿದ್ದೇವೆ. ಇದರಿಂದಾಗಿ ಒಂದೇ ಬಟನ್ ನಿಂದ ಆಪರೇಟರ್ ಗೆ ಫೀಡ್/ಸ್ಪೀಡ್ ಇತ್ಯಾದಿ ಅಂಶಗಳನ್ನು ಬದಲಾಯಿಸಿ ಸಿಗುತ್ತದೆ. ಮಶಿನ್ ನ ಡೈನ್ಯಾಮಿಕ್ಸ್ ನಿಯಂತ್ರಿಸಲಾಗುತ್ತದೆ. ಯಂತ್ರಭಾಗಗಳ ಭಾರ, ಮಶಿನ್ ನ ಶಕ್ತಿ ಇತ್ಯಾದಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕನಿಷ್ಠ ಸಮಯದಲ್ಲಿ ಮತ್ತು ಯೋಗ್ಯವಾದ ರೀತಿಯಲ್ಲಿ ಯಂತ್ರಣೆಯು ಸಹಜವಾಗಿ ಆಗುತ್ತದೆ.

12_1  H x W: 0  
 
4. ಮಲ್ಟೀಟೂಲ್ ಸೈಕಲ್
ಒಂದೇ ಬಾರಿ ಅನೇಕ ವಿಧದ ಯಂತ್ರಣೆಯನ್ನು ಮಾಡುವಾಗ ಕೆಲವೊಮ್ಮೆ ಟೂಲ್ ಚೇಂಜರ್ ನ ವ್ಯಾಪ್ತಿಯು ಕಡಿಮೆಯಾಗುತ್ತದೆ ಅಥವಾ ಯಂತ್ರಣೆಯ ಒಟ್ಟು ಸಮಯವು ಕಡಿಮೆ ಮಾಡುವ ಆವಶ್ಯಕತೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ಮಲ್ಟೀಟೂಲ್ ಸೈಕಲ್ ಬಳಸಬಹುದಾಗಿದೆ. ಚಿತ್ರ ಕ್ರ. 12 ರಲ್ಲಿ ತೋರಿಸಿದಂತೆ ಒಂದೇ ಟೂಲ್ ಹೋಲ್ಡರ್ ನಲ್ಲಿ ನಾಲ್ಕು ವಿಧದ ಕಟಿಂಗ್ ಟೂಲ್ ಅಳವಡಿಸಬಹುದಾಗಿದೆ. ಉದಾಹರಣೆ, ರಫ್ ಮತ್ತು ಫಿನಿಶ್, ಗ್ರೂವ್, ಥ್ರೆಡ್ ಇತ್ಯಾದಿ. ಇದನ್ನು ಬಳಸುವಾಗ ಟೂಲ್ ಟೇಬಲ್ ನಲ್ಲಿ ನಾವು ಪ್ರತಿಯೊಂದು ಟೂಲ್ ನ ಕಟಿಂಗ್ ಎಡ್ಜ್ ಗಳ ಮಾಹಿತಿಯನ್ನು ಒಟ್ಟುಗೂಡಿಸಿದಲ್ಲಿ ಯಂತ್ರಣೆಯನ್ನು ಮಾಡುವಾಗ ಟೂಲ್ ಚೇಂಜರ್ ನ ಜಾಗ ಮತ್ತು ಟೂಲ್ ಬದಲಾಯಿಸುವ ಸಮಯ ಇತ್ಯಾದಿಗಳ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

14_2  H x W: 0  
 
5. ಗಿಯರ್ ಸ್ಕೈವಿಂಗ್ ಸೈಕಲ್ 2.0
ಡ್ಯುಓಬ್ಲಾಕ್ ಸಿರೀಸ್ ಮಿಲ್ ಟರ್ನ್ ಮಶಿನ್ ನಲ್ಲಿ ಗಿಯರ್ ಸ್ಕೈವಿಂಗ್ ಸೈಕಲ್ 2.0 (ಚಿತ್ರ ಕ್ರ. 13) ಬಳಸಿ ಸರಳವಾದ ಮತ್ತು ಹೆಲಿಕಲ್ ಗಿಯರ್ ನ ಹೊರ ಮತ್ತು ಒಳ ಯಂತ್ರಣೆ, ಸ್ಪ್ಲೈನ್ ಯಂತ್ರಣೆ ಇತ್ಯಾದಿಗಳನ್ನು ಮಾಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಮೇನ್ ಸ್ಪಿಂಡಲ್ ನಲ್ಲಿ ಒಂದೇ ಸ್ಪೆಶಲ್ ಕಟರ್ ಅಳವಡಿಸಲಾಗುತ್ತದೆ. ಮೇನ್ ಸ್ಪಿಂಡಲ್ ಮತ್ತು ಯಂತ್ರಭಾಗಗಳನ್ನು ಅಳವಡಿಸಿರುವ ಟರ್ನಿಂಗ್ ಟೇಬಲ್ ವಿರುದ್ಧ ದಿಕ್ಕಿಗೆ ತಿರುಗಿಸಲಾಗುತ್ತದೆ. ಅದರ ನಿಯಂತ್ರಣೆ ಮತ್ತು ಟೂಲ್ ಗಳ ಪ್ರವಾಸ ಈ ಗಿಯರ್ ಸ್ಕೈವಿಂಗ್ ಸೈಕಲ್ ನಿಂದ ನಿಯಮಿತವಾಗಿ ಮಾಡಲಾಗುತ್ತದೆ. ಯಾವಾಗಲೂ ಮಾಡಲಾಗುವ ಶೇಪಿಂಗ್ ಪ್ರಕ್ರಿಯೆಯ ಹತ್ತು ಪಟ್ಟು ಹೆಚ್ಚು ವೇಗದಿಂದ ಗಿಯರ್ ಯಂತ್ರಣೆಯನ್ನು ಮಾಡಲಾಗುತ್ತದೆ. ಡ್ಯುಓಬ್ಲಾಕ್ ಸಿರೀಸ್ ನ ಮಿಲ್ ಟರ್ನ್ ಮಶಿನ್ ಭಾರತದಲ್ಲಿರುವ ಅನೇಕ ಪ್ರಮುಖ ಉದ್ಯಮಗಳಲ್ಲಿ ಕಾರ್ಯನಿರತವಾಗಿದೆ. ಪುಣೆಯಲ್ಲಿರುವ ಕೆ.ಎಸ್.ಬಿ. ಎಂಬ ಕಂಪನಿಯಲ್ಲಿ ಬೃಹದಾಕಾರದ ಪಂಪ್ ಹೌಸಿಂಗ್, ಅಲ್ಫಾ ಲೇವರ್ ಕಂಪನಿಯಲ್ಲಿ ಡೇರಿಗೆ ಬೇಕಾಗುವ ಯಂತ್ರಭಾಗಗಳು, ಜಿ.ಇ. ಯಲ್ಲಿ ಆಯಿಲ್ ಮತ್ತು ಗ್ಯಾಸ್ ಉತ್ಪಾದನೆಗಳು, ಹಾಗೆಯೇ ಇಂಟರ್ ನ್ಯಾಶನಲ್ ಏರೋಸ್ಪೇಸ್ ಲಿ., ಬೆಂಗಳೂರು ಈ ಕಂಪನಿಗಳಲ್ಲಿಯೂ ವಿಮಾನಕ್ಕೆ ಬೇಕಾಗುವ ವಿಶೇಷವಾದ ಬಿಡಿ ಭಾಗಗಳನ್ನು ತಯಾರಿಸುವಲ್ಲಿ ಈ ಮಶಿನ್ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತಿದೆ.

14_1  H x W: 0  
 
 
 
<="" div="" style="float: left; margin: -25px 20px 20px 0px;">
sunil_1  H x W: 
ಸುನೀಲ್ ಗಾಡಗೀಳ್ 
ವ್ಯವಸ್ಥಾಪಕರು, ಟೆಕ್ನಿಕಲ್ ಸಪೋರ್ಟ್
ಡಿಎಮ್ ಜಿ ಮೋರಿ ಇಂಡಿಯಾ 
9730301506
 
ಸುನೀಲ್ ಗಾಡಗೀಳ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಅವರು ಡಿಎಮ್ ಜಿ ಮೋರಿ ಇಂಡಿಯಾ ಈ ಕಂಪನಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ವ್ಯವಸ್ಥಾಪಕರಾಗಿದ್ದಾರೆ. ಸೇಲ್ಸ್ ವಿಭಾಗದಲ್ಲಿ ಮಶಿನ್ ಗಳ ಆಯ್ಕೆ, ಟೂಲ್ಡ್ ಅಪ್ ಪ್ರಪೊಜಲ್ಸ್, ಮಶಿನ್ ಅಪ್ಲಿಕೇಶನ್ ಟ್ರೇನಿಂಗ್ ಗೋಸ್ಕರ ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದಾರೆ. 
 
@@AUTHORINFO_V1@@