ಗ್ರೈಂಡಿಂಗ್ ಗೋಸ್ಕರ ಮಾಪನವೆಂಬ ಜಗತ್ತು

@@NEWS_SUBHEADLINE_BLOCK@@

Udyam Prakashan Kannad    22-Jun-2020
Total Views |
 
ಇಂದಿನ ಕಾಲದಲ್ಲಿರುವ ಸ್ಪರ್ಧೆಯಲ್ಲಿ ತಳವೂರಿ ನಿಲ್ಲಲು ಉತ್ಪಾದನೆಗಳ ಅನರ್ಹತೆಯ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಪ್ರಕ್ರಿಯೆಯ ಆಪ್ಟಿಮೈಜೇಶನ್ ಮಾಡುವಂತಹ ಉಪಾಯಗಳೆಡೆಗೆ ಗಮನ ಹರಿಸುವುದು ಅತ್ಯಾವಶ್ಯಕವಾಗಿದೆ. ಅನೇಕ ರೀತಿಯಲ್ಲಿ ಕಾರ್ಯ ಸಾಮರ್ಥ್ಯ ಹೆಚ್ಚಿಸುವುದೇ, ಲಾಭವನ್ನು ಹೆಚ್ಚಿಸುವ ಪ್ರಮುಖವಾದ ದಾರಿಯಾಗಿದೆ. 

2_2  H x W: 0 x 
 
ಕಾರ್ಖಾನೆಯಲ್ಲಿ ಮಾಡಲಾಗುವ ಗ್ರೈಂಡಿಂಗ್ ಪ್ರಕ್ರಿಯೆಯ ನಿರೀಕ್ಷಣೆಯನ್ನು ತಕ್ಷಣ ಮಾಡಿದಲ್ಲಿ (ರಿಯಲ್ ಟೈಮ್ ಮಾನಿಟರಿಂಗ್) ಅದು ಯಾವುದೇ ಕಾರ್ಖಾನೆಗಳಿಗೂ ಎಲ್ಲಕ್ಕಿಂತಲೂ ಹೆಚ್ಚು ಆದರ್ಶ ಪರಿಸ್ಥಿತಿಯಾಗಬಹುದು. ಕಾರಣ ತಕ್ಷಣ ಮಾಡಿರುವ ಮಾಪನಗಳಿಂದಾಗಿ ಲಭಿಸುವ ಪರಿಮಾಣಗಳಿಗೆ ಗ್ರೈಂಡಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸಬಹುದು ಮತ್ತು ಆಪ್ಟಿಮೈಸೇಶನ್ ಮಾಡಬಹುದು.
 
ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುವ ಉಚ್ಚ ಗುಣಮಟ್ಟದ ಯಂತ್ರಭಾಗಗಳ ಉತ್ಪಾದನೆಯಲ್ಲಿ ತಕ್ಷಣ ಪರಿಶೀಲನೆಯನ್ನು ಮಾಡಿದ್ದರಿಂದ ನಿಯಂತ್ರಣೆಯನ್ನು ಸುಧಾರಿಸಿ ಈ ಮುಂದಿನ ಅಂಶಗಳು ಸಾಧ್ಯವಾಗುತ್ತವೆ.
• ಯಂತ್ರಭಾಗಗಳ ಆಕಾರದಲ್ಲಿರುವ ನಿಯಂತ್ರಣೆ : ರಿಜೆಕ್ಟ್ ತುಂಬಾ ಕಡಿಮೆಯಾಯಿತು ಅಥವಾ ಇಲ್ಲದಂತಾಯಿತು.
• ಪ್ರಕ್ರಿಯೆಯ ನಿಯಂತ್ರಣೆ : ಸ್ಟೇಬಲ್ ಗ್ರೈಂಡಿಂಗ್ ಪ್ರಕ್ರಿಯೆ ಮತ್ತು ಮಶಿನ್ ನ ಚಟುವಟಿಕೆಯಲ್ಲಿ ಸುಧಾರಣೆ.
• ವೀಲ್ ನ ಸವೆತದ ಪರಿಶೀಲನೆ : ಮಶಿನ್ ನ ಕಾರ್ಯ ಸಾಮರ್ಥ್ಯ ಮತ್ತು ಸ್ಪಿಂಡಲ್ ನ ಬಾಳಿಕೆಯಲ್ಲಿ ಹೆಚ್ಚಳ.
• ಯಂತ್ರಭಾಗಗಳ ಆಕಾರದಲ್ಲಿ ಸುಧಾರಣೆ : ಗುಣಮಟ್ಟದಲ್ಲಿ ಸುಧಾರಣೆ.
• ಸೈಕಲ್ ಟೈಮ್ ನಲ್ಲಿ ಇಳಿತ : ಉತ್ಪಾದಕತೆಯಲ್ಲಿ ಹೆಚ್ಚಳ.
 
ರಿಯಲ್ ಟೈಮ್ ಗೇಜಿಂಗ್ ಪ್ರಣಾಳಿಕೆಯಿಂದ ಈ ಮುಂದಿನ ಅಂಶಗಳು ಸಾಧ್ಯ.
• ಯಂತ್ರಣೆಯ ಸೈಕಲ್ ನ (ಮಶಿನಿಂಗ್ ಸೈಕಲ್) ನಿರೀಕ್ಷಣೆಯನ್ನು ನಿರಂತರವಾಗಿ ಮಾಡಿದ್ದರಿಂದ ಮಶಿನ್ ನ ಉತ್ಪಾದಕತೆಯಲ್ಲಿ ಹೆಚ್ಚಳ.
• ಮಾನವ ರಹಿತ ಮತ್ತು ಸ್ಥಿರವಾದ (ಸ್ಟೇಬಲ್) ಗ್ರೈಂಡಿಂಗ್ ಪ್ರಕ್ರಿಯೆಯ ಗುಣಮಟ್ಟದಲ್ಲಿ ಸುಧಾರಣೆ.
• ವೀಲ್ ನ ಬಾಳಿಕೆಯಲ್ಲಿ ಹೆಚ್ಚಳ. (ರಿಮೂವಲ್ ಸ್ಪೀಡ್ ಚೆಕಿಂಗ್) ಮಟೀರಿಯಲ್ ತೆಗೆಯುವ ವೇಗ ಪರಿಶೀಲಿಸಿದ್ದರಿಂದ ವೀಲ್ ನ ಫೀಡ್ ರೇಟ್ ಮತ್ತು ವೇಗವನ್ನು ನಿಯಂತ್ರಿಸುವುದು ಸಾಧ್ಯ.
• ಮಟೀರಿಯಲ್ ತೆಗೆಯುವ ಪ್ರಕ್ರಿಯೆ ಹೆಚ್ಚು ಅಚ್ಚುಕಟ್ಟಾಗಿ ಮಾಡಿದ್ದರಿಂದ ಅಪ್ಪಳಿಸುವುದನ್ನು ತಡೆಯಲಾಯಿತು.

2_1  H x W: 0 x 
 
ಮಾಪನಗಳು
ಪ್ರಕ್ರಿಯೆಯಲ್ಲಿ ಬಳಸಲಾಗುವ ಗೇಜ್ ಗಳಿಂದಾಗಿ (ಇನ್ ಪ್ರೊಸೆಸ್ ಗೇಜ್) ತಕ್ಷಣ ಮಾಹಿತಿಯು ಲಭಿಸುತ್ತದೆ. ಗ್ರೈಂಡಿಂಗ್ ಆಗುತ್ತಿರುವಾಗ ಕಾರ್ಯವಸ್ತುವಿನಲ್ಲಿರುವ ಮಾಹಿತಿಯನ್ನು ನೇರವಾಗಿ ಮಾಪನದ ಮೂಲಕ ಪಡೆಯಲಾಗುತ್ತದೆ. ಇದರಿಂದಾಗಿ ಆಪರೇಟರ್ ಕೆಲಸ ಮಾಡುತ್ತಿರುವ ಕಾರ್ಯವಸ್ತುವಿನಲ್ಲಿ ನಿಖರವಾದ ಯಾವ ಪ್ರಕ್ರಿಯೆಯಾಗುತ್ತಿದೆ, ಎಂಬುದನ್ನು ಕೂಡಲೇ ನೋಡಬಲ್ಲೆವು. ಅಲ್ಲದೇ ಮಶಿನ್ ಸೈಕಲ್ ನಲ್ಲಿ ಬೇಕಾಗಿರುವ ಹೊಂದಾಣಿಕೆಯನ್ನೂ ಮಾಡಬಲ್ಲೆವು. ಉಚ್ಚಗುಣಮಟ್ಟದ ಯಂತ್ರಭಾಗಗಳನ್ನು ತಯಾರಿಸಲು ಮಾಪನದ ಮೌಲ್ಯ, ಬದಲಾವಣೆಗಳನ್ನು ಮಾಡುವ ಮೌಲ್ಯ ಮತ್ತು ಪ್ರಕ್ರಿಯೆಯ ಸ್ಥಿರತೆ ಈ ರೀತಿಯ ಮಾಹಿತಿಯನ್ನು ಬಳಸಿ ಆವಶ್ಯಕವಿರುವ ನಿರ್ಧಾರವನ್ನು ಮಾಡಲಾಗುತ್ತದೆ.

4_2  H x W: 0 x 
 
ಗ್ರೈಂಡಿಂಗ್ ಸೈಕಲ್ ನಲ್ಲಿ ಮಾಡಿರುವ ಮಾಪನಗಳ ಮೌಲ್ಯಗಳ ಮೂಲಕ ಮಶಿನ್ ಆಪರೇಟರ್ ಗೆ ಯಾವಾಗ ಯಾವ ಕೆಲಸ ಮಾಡಬೇಕು, ಎಂಬ ಸೂಚನೆಗಳು ಸಿಗುತ್ತವೆ. ಉದಾಹರಣೆ, ಫೀಡ್ ರೇಟ್ ನಲ್ಲಾದ ಬದಲಾವಣೆಗಳು, ಯಾವಾಗ ಒಂದೇ ಸ್ಥಾನದಲ್ಲಿ ನಿಲ್ಲುವುದು, ಅಪೇಕ್ಷಿತವಿರುವ ಗಾತ್ರ ಪಡೆದನಂತರ ಪ್ರಕ್ರಿಯೆಯನ್ನು ಮುಗಿಸುವುದು, ಬದಲಾವಣೆಯು ಯಾವ ಮೌಲ್ಯದಲ್ಲಿ ಆಗುತ್ತದೆ, ಎಂಬುದರ ಕುರಿತು ಮಾಪನ ಮಾಡಿದ್ದರಿಂದ ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ನಿಖರವಾಗಿ ಯಾವ ಪ್ರಕ್ರಿಯೆಯಾಗುತ್ತದೆ, ಈ ಕುರಿತು ಮಹತ್ವದ ಸಂಜ್ಞೆಗಳು ಲಭಿಸುತ್ತವೆ.

4_1  H x W: 0 x 
 
ಗ್ರೈಂಡಿಂಗ್ ವೀಲ್ ನ ಫೀಡ್ ರೇಟ್ ಬದಲಾದಂತೆ ಕಾರ್ಯವಸ್ತುವಿನ ಆಕಾರವೂ ಬದಲಾಗಬೇಕು. ಯಂತ್ರಭಾಗಗಳ ಅಂತಿಮ ಆಕಾರವು ತಯಾರಾಗುತ್ತಿದ್ದಂತೆ ಮಾಪನದ ಬದಲಾವಣೆಯೂ ಕನಿಷ್ಠ ಪ್ರಮಾಣದಲ್ಲಾಗಿ ಫೀಡ್ ರೇಟ್ ನ ಬದಲಾವಣೆಯೊಂದಿಗೆ ಹೊಂದಿಕೊಳ್ಳಬೇಕು. ಬಹುತಾಂಶ ಮಾಪನಗಳ ಸ್ವಯಂಚಾಲಿತ ಸೈಕಲ್ ಸರಾಸರಿ ರಫ್ ಸ್ಟಾಕ್ ಮತ್ತು ವೀಲ್ ನ ಸ್ಥಿತಿ ಈ ಎರಡು ಅಂಶಗಳಿಗೆ ಅನುಸಾರವಾಗಿ ನಿರ್ಧರಿಸಲಾಗುತ್ತವೆ. ಬದಲಾವಣೆಯ ಮೌಲ್ಯದ ಮಾನಿಟರಿಂಗ್ (ನಿರೀಕ್ಷಣೆ) ಮಾಡಿ ಅನುಕೂಲವಾಗಿರುವ ಪರಿಸ್ಥಿತಿಯ ಲಾಭವನ್ನು ಪಡೆಯುವುದು, ವಿರುದ್ಧ ಪರಿಸ್ಥಿತಿಯ ಲಾಭವನ್ನು ಪಡೆಯುವುದು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಾಗುವ ನಷ್ಟವನ್ನು ತಡೆಯುವುದು, ಇದಕ್ಕೋಸ್ಕರ ಸೈಕಲ್ ಅಪ್ ಡೇಟ್ ಮಾಡಬಹುದಾಗಿದೆ. ಒಂದು ವೇಳೆ ಈ ಮಾಪನಗಳು ಅಪೇಕ್ಷೆಗಿಂತ ಕಡಿಮೆ ಮೌಲ್ಯದಲ್ಲಿ ಆಗುತ್ತಿದ್ದಲ್ಲಿ, ಸೈಕಲ್ ನ ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ. ಪಾರಂಪರಿಕವಾದ ವೀಲ್ ನಲ್ಲಿ ವೀಲ್ ನ ಡ್ರೆಸಿಂಗ್ ಮಾಡುವುದು ಅಥವಾ ಪೀಡ್ ರೇಟ್ ಕಡಿಮೆ ಮಾಡಿ ಟೂಲಿಂಗ್ ಅಥವಾ ಯಂತ್ರಭಾಗಗಳ ಸಂಭಾವ್ಯ ನಷ್ಟವನ್ನು ತಡೆಯುವುದು, ಈ ವಿಧದ ಹೊಂದಾಣಿಕೆಗಳನ್ನು ಮಾಡಬಹುದಾಗಿದೆ. ಇದರಿಂದಾಗಿ ಒಳ್ಳೆಯ ಉತ್ಪಾದನೆಯು ಲಭಿಸುತ್ತದೆ.

6_1  H x W: 0 x 
 
ಮಶಿನ್ ಸೈಕಲ್ ನ ಪ್ರಾರಂಭದಲ್ಲಿ ಪಡೆದಿರುವ ಮಾಪನಗಳ ಮೌಲ್ಯಗಳ ಉಪಯೋಗವನ್ನು ಮಾಡಿ ಗ್ರೈಂಡಿಂಗ್ ಪ್ರಕ್ರಿಯೆ ಪ್ರಾರಂಭಿಸುವ ಯಂತ್ರಭಾಗಗಳ ಸರ್ಫೇಸ್ ಹುಡುಕುವುದು ಸಾಧ್ಯ. ಈ ಸರ್ಫೇಸ್ ಗಳ ನಿರ್ಧರಿತ ಸ್ಥಾನದ ಮಾಹಿತಿ ಇರುವಾಗ ಅಲ್ಲಿಯ ತನಕ ಗ್ರೈಂಡಿಂಗ್ ವೀಲ್ ಸರಿಯುವಷ್ಟು ಸಮಯವು ವ್ಯರ್ಥವಾಗುವುದಿಲ್ಲ. ಗುಣಮಟ್ಟದಿಂದ ಕೂಡಿರುವ ಯಂತ್ರಭಾಗಗಳ ನಿರ್ಮಿತಿಗೋಸ್ಕರ ಆವಶ್ಯಕವಿರುವ ಸೂಕ್ತ ಮಿತಿಯಲ್ಲಿ ಕಚ್ಚಾ ವಸ್ತುಗಳ ಸ್ಟಾಕ್ ಇದೆಯೇ, ಇಲ್ಲವೇ ಎಂಬುದನ್ನು ನಿರ್ಧರಿಸಲೂ ಪ್ರಾರಂಭದಲ್ಲಿರುವ ಮಾಪನದ ಮೌಲ್ಯಗಳನ್ನು ಉಪಯೋಗಿಸಲಾಗುತ್ತದೆ.

6_2  H x W: 0 x 
 
ಸ್ಟಾಕ್ ಅಗತ್ಯಕ್ಕಿಂತ ಹೆಚ್ಚು ಇದ್ದರೆ ವೀಲ್ ನ ಸವೆತವು ಅಪೇಕ್ಷೆಗಿಂತ ಹೆಚ್ಚು ಆಗಬಲ್ಲದು. ಒಂದು ವೇಳೆ ಸ್ಟಾಕ್ ತುಂಬಾ ಕಡಿಮೆ ಇದ್ದರೂ ಯಂತ್ರಣೆಯಲ್ಲಿಯೇ ಯಂತ್ರಭಾಗಗಳು ವ್ಯರ್ಥವಾಗುವುದೂ ಸಾಧ್ಯ. ಸೈಕಲ್ ಗೆ ಪ್ರಾರಂಭದಲ್ಲಿಯೇ ರನ್ ಔಟ್ ಎಣಿಸಿದಲ್ಲಿ ಈ ಯಂತ್ರಭಾಗಗಳು ಕೊನೆಯಲ್ಲಿ ಸರಿಯಾದ ಮಾಪನದಲ್ಲಿ ತಯಾರಾಗಬಲ್ಲವೇ ಇಲ್ಲವೇ ಎಂಬುದನ್ನೂ ನಿರ್ಧರಿಸಬಹುದು.
 
ಯೋಗ್ಯ ರೀತಿಯಲ್ಲಿ ಯಂತ್ರಭಾಗಗಳ ನಿರ್ಮಿತಿಯಾಗಬೇಕು ಎಂಬುದಕ್ಕಾಗಿ ಗ್ರೈಂಡಿಂಗ್ ಸೈಕಲ್ ನ ಮೊದಲು ಅಥವಾ ನಂತರ ಒಂದೇ ಗೇಜ್ ನ ಮೂಲಕ ಯಂತ್ರಭಾಗಗಳ ಮಾಪನವನ್ನು ಮಾಡಲಾಗುತ್ತದೆ. ಪ್ರಕ್ರಿಯೆಯ ಮೊದಲು ಬಳಸಿರುವ ಹೊರ ಗೇಜ್ ಮಶಿನ್ ನ ಕಂಟ್ರೋಲ್ ಯುನಿಟ್ ಗೆ ಕಾರ್ಯವಸ್ತುವಿನಿಂದ ಎಷ್ಟು ಸ್ಟಾಕ್ ಹೊರಗೆ ತೆಗೆಯಬೇಕು, ಎಂಬುದನ್ನೂ ತಿಳಿಸಬಲ್ಲದು. ಅಸೆಂಬ್ಲಿಯ ಕೆಲಸದಲ್ಲಿ ತುಂಬಾ ನಿಖರವಾದ ಫಿಟ್ ನ ಆವಶ್ಯಕತೆ ಇರುವಲ್ಲಿ ಪರಸ್ಪರ ಜೋಡಿಸಲ್ಪಡುವ ಎರಡು ಭಾಗಗಳ ಸುಯೋಗ್ಯವಾದ ಗ್ರೈಂಡಿಂಗ್ ಮಾಡಲು ಗೇಜ್ ನೊಂದಿಗೆ ಪ್ರಕ್ರಿಯೆಯ ಸಂಪೂರ್ಣವಾದ ತಪಾಸಣೆಯನ್ನು ಮಾಡಲಾಗುತ್ತದೆ. ಪ್ರಕ್ರಿಯೆ ನಿಯಂತ್ರಣದಲ್ಲಿ ಇದೆ ಮತ್ತು ಯೋಗ್ಯ ರೀತಿಯಲ್ಲಿ ನಡೆಯುತ್ತಿದೆ, ಇದರ ಕುರಿತು ಪರಿಶೀಲನೆಯನ್ನು ಪ್ರಕ್ರಿಯೆಯ ನಂತರದ ಗೇಜ್ ಮಾಡುತ್ತದೆ. ಪ್ರಕ್ರಿಯೆಯ ನಂತರದ ಗೇಜ್, ಕಾರ್ಯವಸ್ತುವಿನ ಆಕಾರ ಮತ್ತು ಜಾಮೆಟ್ರಿ ಇವುಗಳ ತಪಾಸಣೆಯನ್ನು ಮಾಡುತ್ತದೆ. ಪ್ರಕ್ರಿಯೆಯಲ್ಲಿ ಹಲವಾರು ರೀತಿಯ ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿದ್ದಲ್ಲಿ ಅದನ್ನೂ ಪರಿಗಣಿಸಲಾಗುತ್ತದೆ.

8_1  H x W: 0 x 
 
ಕಾರ್ಖಾನೆಯಲ್ಲಿ ಬಳಸಲಾಗುವ ಗೇಜ್ ನ ಸಂಖ್ಯೆ ಕಡಿಮೆ ಮಾಡುವಲ್ಲಿ ಅನೇಕ ಅಪ್ಲಿಕೇಶನ್ ಗಳನ್ನು ಬಳಸಲು ಮಾರ್ಪಾಸ್ ಈ ಕಂಪನಿಯ ಉತ್ಪಾದನೆಗಳು ಅತ್ಯುಪಯುಕ್ತವಾಗಿವೆ. ವಿವಿಧ ಅಪ್ಲಿಕೇಶನ್ ಗಳಿಗೋಸ್ಕರ ಒಂದೇ ಮಾಪನದ ಸಾಧನವನ್ನು ಉಪಯೋಗಿಸಲಾಗುತ್ತದೆ. ಉದಾಹರಣೆ, ಸಮತಟ್ಟಾದ ಅಥವಾ ತುಂಡಾಗಿರುವ ಸರ್ಫೇಸ್ ಗಳಲ್ಲಿ ಹೊರ ಅಥವಾ ಒಳ ವ್ಯಾಸದ ನಿಯಂತ್ರಣೆ, ಡಬಲ್ ಡಿಸ್ಕ್ ಅಥವಾ ಟ್ರೆವರ್ಸ್ ಗ್ರೈಂಡರ್ ಇವುಗಳಲ್ಲಿ ಯಂತ್ರಣೆಯನ್ನು ಮಾಡಿರುವ ಪ್ಲೇಟ್ ನ ದಪ್ಪವನ್ನು ಪರಿಶೀಲಿಸುವುದು ಇತ್ಯಾದಿ. ಇದರಿಂದಾಗಿ ಬಿಡಿ ಭಾಗಗಳ ಆವಶ್ಯಕತೆಯೂ ಕಡಿಮೆಯಾಗುತ್ತದೆ ಮತ್ತು ಇದರ ಪರಿಣಾಮದಿಂದಾಗಿ ಹೂಡಿರುವ ಬಂಡವಾಳಕ್ಕೆ ಮರುಪಾವತಿಯು ಬೇಗ ಸಿಗುತ್ತದೆ. ಇಂತಹ ಅನೇಕ ರೀತಿಯ ಕೆಲಸವನ್ನು ಮಾಡುವ (ಮಲ್ಟಿಫಂಕ್ಷನ್) ಮಾಡೆಲ್ ನೊಂದಿಗೆ ವಿಶಿಷ್ಟ ರೀತಿಯ ಯಂತ್ರಣೆಯ ಕೆಲಸಕ್ಕೆ ಮೀಸಲಾಗಿರುವ ಗ್ರೈಂಡರ್ ಗೋಸ್ಕರ ವಿಶಿಷ್ಟ ಗೇಜ್ ಕೂಡಾ ಡಿಸೈನ್ ಮಾಡಲಾಗುತ್ತದೆ.
 
ಮಶಿನ್ ಆಪರೇಟರ್ ಗೆ ಗ್ರಾಫಿಕ್ ಸ್ಕ್ರೀನ್ ನಲ್ಲಿ ಪ್ರಕ್ರಿಯೆಯ ಮಾಹಿತಿಯನ್ನು ಪೂರೈಸಲಾಗುತ್ತದೆ, ಅದರ ಎರ್ಗೋನಾಮಿಕ್ಸ್ ಗಮನದಲ್ಲಿ ಇಟ್ಟುಕೊಂಡು ಮಾಪನದ ಇಲೆಕ್ಟ್ರಾನಿಕ್ ಯುನಿಟ್ ಡಿಸೈನ್ ಮಾಡಲಾಗಿವೆ. ಮಾಪನದ ಪ್ರಣಾಳಿಕೆಯ ಮೂಲಕ ಯಂತ್ರಣೆಯ ಸೈಕಲ್ ನ ವ್ಯವಸ್ಥೆಯ ನಿಯಂತ್ರಣೆ, ಮಶಿನ್ ಕಂಟ್ರೋಲರ್ ಕಡೆಗೆ ಕಳುಹಿಸಲಾಗುತ್ತದೆ. ಪ್ರತಿಯೊಂದು ಕೆಲಸದ ವಿವರಗಳನ್ನು ರಿಯಲ್ ಟೈಮ್ ನಲ್ಲಿ ತೋರಿಸಲಾಗುತ್ತದೆ. ಇದರಿಂದಾಗಿ ಮಾನವ ರಹಿತ ಯಂತ್ರಣೆಯಲ್ಲಿ ನಿರ್ದೋಷವಾದ ಸ್ವಯಂಚಾಲಿತ ಪ್ರಕ್ರಿಯೆಯಾಗುತ್ತದೆ. ಆದರೆ ಅಂಕೆ-ಸಂಖ್ಯೆಗಳ ಪ್ರಕ್ರಿಯೆಯ ಕುರಿತು ಆಪರೇಟರ್ ಗೆ ಹಸ್ತಕ್ಷೇಪ ಮಾಡಲು ಯಾವಾಗಲೂ ಸಾಕಷ್ಟು ಅವಕಾಶವಿರುತ್ತದೆ.
 
ಆಪರೇಟರ್ ಮತ್ತು ಮಶಿನ್ ಇವರಲ್ಲಿ ಪರಸ್ಪರ ಸಂಭಾಷಣೆಗೋಸ್ಕರ (HMI) ಉಪಲಬ್ಧವಿರುವ ಅನೇಕ ಡಿಸ್ ಪ್ಲೇಗಳ ಪರ್ಯಾಯವನ್ನು ನಾವು ಗ್ರಾಹಕರಿಗೆ ಪೂರೈಸುತ್ತೇವೆ. ಈ ಡಿಸ್ಪ್ಲೆಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.
• ಯಂತ್ರಣೆಯ ಸೈಕಲ್ ನ ರಿಯಲ್ ಟೈಮ್ ಪ್ರೊಗ್ರಾಮಿಂಗ್ : ವೀಲ್ ಫೀಡ್ ರೇಟ್ ನ ಬದಲಾವಣೆಯನ್ನು ಆಪ್ಟಿಮೈಸ್ ಮಾಡುವುದು, ಮೈಕ್ರೋ ಫಿನಿಶಿಂಗ್, ಸ್ಪಾರ್ಕ್ ಔಟ್, ಯಂತ್ರಣೆಯ ಕೊನೆಯ ಪರಿಮಾಣಗಳು ಮತ್ತು ಕಾರ್ಯವಸ್ತು ಇಲ್ಲದಿದ್ದಲ್ಲಿ ವೀಲ್ ನ ಅಥವಾ ಮಶಿನ್ ನ ಅಪ್ಪಳಿಸುವಿಕೆಯನ್ನು ತಡೆಯಲು ಅಥವಾ ತೆಗೆದು ಹಾಕುವಂತಹ ಮಟೀರಿಯಲ್ ಹೆಚ್ಚಿದ್ದಲ್ಲಿ ಅದನ್ನು ತಿಳಿಸಲು ಅಲಾರ್ಮ್, ಈ ಅಂಶಗಳನ್ನು ಪ್ರೊಗ್ರಾಮ್ ನಿಂದ ಮಾಡುವ ನಿಯಂತ್ರಕವನ್ನು (ಕಂಟ್ರೋಲರ್) ಆಪರೇಟರ್ ಗೆ ನೀಡಲಾಗಿರುತ್ತದೆ.
• ಯಂತ್ರಣೆಯಲ್ಲಿ ಕಾರ್ಯವಸ್ತುವಿನ ಪರಿಮಾಣಗಳ ರಿಯಲ್ ಟೈಮ್ ವಿಜ್ಯುವಲೈಸೇಶನ್ : ವೀಲ್ ನ ಫೀಡ್ ರೇಟ್ ನ ಮಾಹಿತಿಗೆ ಮಾಪನ ಮಾಡಿರುವ ಮೌಲ್ಯಗಳೊಂದಿಗೆ ಹೊಂದಿಸಲಾಗಿರುತ್ತದೆ. ಒಂದು ಪರ್ಯಾಯವೆಂದು, ವೀಲ್ ಹೊರಗೆ ತೆಗೆಯುವಾಗ ಇರುವ ಮೌಲ್ಯ ಮತ್ತು ಸಮಯ ಹಾಗೆಯೇ ಯಂತ್ರಣೆಯಲ್ಲಿ ವ್ಯಾಸದಲ್ಲಿರುವ ಜಾಮೆಟ್ರಿಕ್ ಕೊರತೆಗಳೊಂದಿಗೆಯೂ ಮಾಹಿತಿಯನ್ನು ಸೇರಿಸಲಾಗಿರುತ್ತದೆ.
• ಅಂಕೆ-ಸಂಖ್ಯೆಗಳ ನಿಯಂತ್ರಣೆ ಇರುವಂತಹ ಪ್ರಕ್ರಿಯೆಗಳಲ್ಲಿ, ಆಪರೇಟರ್ ಜೊತೆಗೆ ಮಶಿನ್ ಮತ್ತು ಪ್ರಕ್ರಿಯೆಯ ಸಾಮರ್ಥ್ಯದ ಅಂಕೆಗಳ ಗುಣಾಕಾರಕ್ಕೋಸ್ಕರ ಎಲ್ಲಕ್ಕಿಂತಲೂ ಸೂಕ್ತವಾಗಿ ಪ್ರಚಲಿತವಿರುವ ವ್ಯವಸ್ಥೆಯು ಉಪಲಬ್ಧವಿರಬಹುದು. ಹುಡುಕಿರುವ ಮೌಲ್ಯಗಳನ್ನು ಆಧರಿಸಿ ಪ್ರಣಾಳಿಕೆಯ ಪ್ರಕ್ರಿಯೆಯ ವ್ಯಾಪ್ತಿಯನ್ನು (ಸ್ಪ್ರೆಡ್) ನೀಡುತ್ತದೆ ಮತ್ತು ಈ ಹಿಂದೆಯೇ ನಿರ್ಧರಿಸಿರುವ ನಿಯಂತ್ರಣೆಯ ಮಿತಿಯನ್ನು ದಾಟಿದಲ್ಲಿ ಸ್ವಯಂಚಾಲಿತ ಮೋಡ್ ನಲ್ಲಿ ಟೂಲ್ ನ ಸುಧಾರಿಸಿರುವ ಮೌಲ್ಯದ ಮಾಪನವನ್ನು ಮಾಡುತ್ತದೆ ಮತ್ತು ಕಳುಹಿಸುತ್ತದೆ.
 
ಗ್ರೈಂಡಿಂಗ್ ವೀಲ್ ನ ಸಮತೋಲನೆ (ಬ್ಯಾಲೆನ್ಸ್)
ಗ್ರೈಂಡಿಂಗ್ ವೀಲ್ ಏಕೆ ಸಮತೋಲವಾಗಿರಬೇಕು? ನಿರಂತರವಾಗಿ ಉಚ್ಚ ಗುಣಮಟ್ಟದ ಯಂತ್ರಭಾಗಗಳನ್ನು ತಯಾರಿಸಲು ಮತ್ತು ಗ್ರೈಂಡಿಂಗ್ ವೀಲ್ ಮತ್ತು ಗ್ರೈಂಡಿಂಗ್ ಸ್ಪಿಂಡಲ್ ನ ಆಯುಷ್ಯವನ್ನು ಹೆಚ್ಚುಸಲು ಆಪ್ಟಿಮೈಸ್ಡ್ ಸಮತೋಲವಿರುವ ಗ್ರೈಂಡಿಂಗ್ ವೀಲ್ ಮತ್ತು ಡ್ರೈವ್ ಘಟಕಗಳು (ಎಲಿಮೆಂಟ್) ಆವಶ್ಯಕವಾಗಿರುತ್ತದೆ. ಇದರಿಂದಾಗಿ ಸೆಟಪ್ ಗೋಸ್ಕರ ಬೇಕಾಗುವ ಸಮಯವೂ ಕಡಿಮೆಯಾಗುತ್ತದೆ.

8_2  H x W: 0 x 
 
ಅಸಮತೋಲನೆಯು ಯಾಕೆ ಉಂಟಾಗುತ್ತದೆ?
ಒಂದು ಉರುಟಾಗಿ ತಿರುಗುವ ಅಕ್ಷಕ್ಕೆ ಜೋಡಿಸಿರುವ ಪ್ರತಿಯೊಂದು ಕಾರ್ಯವಸ್ತುವಿನಲ್ಲಿರುವ ಸಮತೋಲಿತ ಕಂಪನಗಳು ಓಸಿಲೇಶನ್ ಮತ್ತು ಶಬ್ದದ ರೂಪದಲ್ಲಿ ವ್ಯಕ್ತವಾಗುತ್ತವೆ. ಉರುಟಾಗಿ ತಿರುಗುವ ವಸ್ತುಗಳಲ್ಲಿ ಮಟೀರಿಯಲ್ ನ ಪೂರೈಕೆಯು ಒಂದೇ ರೀತಿಯಲ್ಲಿ ಆಗದೇ ಇದ್ದಲ್ಲಿ, ಅಸಮತೋಲನೆ ಉಂಟಾಗುತ್ತದೆ. ವಿಶೇಷವಾಗಿ ಹೆಚ್ಚು ವೇಗವಿರುವಾಗ ಕಂಪನಗಳಲ್ಲಿ ಹೆಚ್ಚಳ ಆಗುತ್ತದೆ. ಈ ಅಸಮತೋಲಿತ ಸ್ಟ್ಯಾಟಿಕ್ ಅಥವಾ ಡೈನಾಮಿಕ್ ಇವೆರಡರಲ್ಲಿ ಯಾವುದಾದರೂ ಒಂದು ಅಥವಾ ಎರಡೂ ವಿಧಗಳಿರುವುದು ಸಾಧ್ಯ.

10_2  H x W: 0  
 
ಮಾರ್ಪಾಸ್ ಬ್ಯಾಲೆನ್ಸರ್ ಇದು ಗ್ರೈಂಡಿಂಗ್ ಮಶಿನ್ ಗೋಸ್ಕರದ ಒಂದು ಇಲೆಕ್ಟ್ರೋಮೆಕ್ಯಾನಿಕಲ್ ಗ್ರೈಂಡಿಂಗ್ ವೀಲ್ ಸಂತುಲಿತವಾದ ಪ್ರಣಾಳಿಕೆಯಾಗಿದೆ. ಈ ಪ್ರಣಾಳಿಕೆಯ ಸೂಕ್ತವಾದ ಬಳಕೆಯಿಂದಾಗಿ ಕಾರ್ಯವಸ್ತುವಿನ ಸರ್ಫೇಸ್ ಗುಣಮಟ್ಟವು ಗಮನಾರ್ಹವಾಗಿ ಸುಧಾರಿಸುತ್ತದೆ. ಮಶಿನ್ ನ ಬಾಳಿಕೆಯಲ್ಲಿ ಮತ್ತು ಉತ್ಪಾದಕತೆಯಲ್ಲಿಯೂ ಹೆಚ್ಚಳವಾಗುತ್ತದೆ.
 
ಗ್ರೈಂಡಿಂಗ್ ವೀಲ್ ಸಾಂಪ್ರದಾಯಿಕ ಮಿಶ್ರಣದಿಂದ ತಯಾರಿಸಿದ್ದರೆ ಅಥವಾ ಕ್ಯುಬಿಕ್ ಬೋರಾನ್ ನೈಟ್ರೈಡ್ (CBN) ಅಥವಾ ಡೈಮಂಡ್ ನದ್ದಾಗಿರಲು ವೀಲ್ ನ ಹೊರಭಾಗದಲ್ಲಿ ಫ್ಲಂಜ್ ನಲ್ಲಿ ಹಿಂದೆ-ಮುಂದೆ ಅಲುಗಾಡಿಸಬಹುದಾದಂತಹ (FT ಬ್ಯಾಲೆನ್ಸರ್) ಅಥವಾ ಸ್ಪಿಂಡಲ್ ನಲ್ಲಿ ಇನ್ಸರ್ಟ್ ಮಾಡಿರುವ (ST ಬ್ಯಾಲೆನ್ಸರ್) ಯೋಗ್ಯವಾದ ಭಾರವನ್ನು ನೀಡಿದ್ದರಿಂದ ಈ ಪ್ರಣಾಳಿಕೆಯಲ್ಲಿ ಹೊಸ ಗ್ರೈಂಡಿಂಗ್ ವೀಲ್ ನ್ನು ಕೈಯಿಂದ ಮೊದಲೇ ಸಮತೋಲನೆ ಮಾಡುವ ಆವಶ್ಯಕತೆಯೇ ಇರುವುದಿಲ್ಲ. ಅಲ್ಲದೇ ಗ್ರೈಂಡಿಂಗ್ ವೀಲ್ ನ ಕೊನೆಯ ತನಕ ಆಪ್ಟಿಮೈಜೆಶನ್ ಮೂಮೆಂಟ್ ಗಳ ಗುಣಧರ್ಮಗಳು ಉಳಿಯುತ್ತವೆ. ಸಮತೋಲವಾದ ಪ್ರಣಾಳಿಕೆಯ ಅನೇಕ ಪರ್ಯಾಯಗಳಿಂದ ಒಂದೇ ಪ್ರಣಾಳಿಕೆಯನ್ನು ಬಳಸಿ ಹೊರ ಭಾಗದ ಗ್ರೈಂಡಿಂಗ್, ಸೆಂಟರ್ ರಹಿತವಾದ ಗ್ರೈಂಡಿಂಗ್, ಟೇಬಲ್ ಗ್ರೈಂಡಿಂಗ್, ಫ್ಲೆಕ್ಸಿಬಲ್ ಮತ್ತು ವಿಶೇಷವಾದ ಗ್ರೈಂಡಿಂಗ್ ಗಳಿಗೋಸ್ಕರ ಬಳಸಲಾಗುವ ಬಹುತಾಂಶ ಗ್ರೈಂಡಿಂಗ್ ಮಶಿನ್ ಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಬಹುದು

10_1  H x W: 0  
 
ಲಾಭಗಳು
ಸಮತೋಲನೆಯನ್ನು ನಿರಂತರವಾಗಿ ನಿಯಂತ್ರಿಸಿದ್ದರಿಂದ ಮತ್ತು ಸಮತೋಲನೆ ಹಾಗೆಯೇ ಮತ್ತೆ ಸಮತೋಲನೆ ಮಾಡುತ್ತಿರುವುದರಿಂದ ಈ ಕೆಳಗಿನ ಲಾಭಗಳಾಗುತ್ತದೆ.
• ಯಂತ್ರಭಾಗದ ಅಪೇಕ್ಷಿಸಿರುವ ಸರ್ಫೇಸ್ ಲಭಿಸುತ್ತದೆ. (ಚ್ಯಾಟರ್ ಮಾರ್ಕ್ ಮತ್ತು ಗುಣಮಟ್ಟ ಸಮಾನವಾಗಿ ಇರದಿರುವ)
• ಸ್ಪಿಂಡಲ್ ಬೋರಿಂಗ್ ನ ಸವೆತವು ಕಡಿಮೆಯಾಗುತ್ತದೆ.
• ಮಟೀರಿಯಲ್ ನಲ್ಲಿರುವ ಫಟಿಗ್ ಕಡಿಮೆಯಾಗುತ್ತದೆ ಮತ್ತು ಮಹತ್ವಪೂರ್ಣವಾದ ಯಂತ್ರಭಾಗಗಳು ಹಾಳಾಗುವ ಪ್ರಮಾಣವು ಕಡಿಮೆಯಾಗುತ್ತದೆ.
• ಮಶಿನ್ ಮತ್ತು ಸ್ಪಿಂಡಲ್ ಇದರಲ್ಲಿರುವ ಉತ್ಪಾದನೆ ರಹಿತವಾದ ಸಮಯವೂ ಕಡಿಮೆಯಾಗುತ್ತದೆ.
• ಗ್ರೈಂಡಿಂಗ್ ವೀಲ್ ನ ಸವೆತವೂ ಕಡಿಮೆಯಾಗುತ್ತದೆ.
• ಮಶಿನ್ ಮತ್ತು ಬಳಕೆಗಾರರಿಗೆ ಹೆಚ್ಚು ಗುಣಮಟ್ಟದ ಸುರಕ್ಷಿತತೆಯು ಲಭಿಸುತ್ತದೆ.
• ವೀಲ್ ನ ಹೊರ ಭಾಗದ ಸುತ್ತಿನ ವೇಗವು ಹೆಚ್ಚಾಗುತ್ತದೆ.
• ಮಶಿನ್ ಆಫ್ ಆಗಿರುವ ಸಮಯವೂ ಕಡಿಮೆಯಾಗುತ್ತದೆ.
• ಸ್ವಯಂಚಾಲಿತ ಸಮತೋಲನೆಯಿಂದಾಗಿ ಸ್ಪಿಂಡಲ್ ನಲ್ಲಿರುವ ಒತ್ತಡವು ಕಡಿಮೆ ಆಗಿರುವುದರಿಂದ ಮಶಿನ್ ನ ದುರಸ್ತಿಗೆ ಜಾಸ್ತಿ ಖರ್ಚು ಮಾಡುವ ಅಗತ್ಯವಿಲ್ಲ.
 
ಎಕಾಸ್ಟಿಕ್ ಎಮಿಶನ್ ಮಾನಿಟರ್
ಗ್ರೈಂಡಿಂಗ್ ಮಶಿನ್ ಗೋಸ್ಕರ ನಿರಂತರವಾದ ನಿಯಂತ್ರಣೆ, ಏರ್ ಗ್ಯಾಪ್ ನ ತಪಾಸಣೆ, ಡ್ರೆಸಿಂಗ್, ಗ್ರೈಂಡಿಂಗ್ ವೀಲ್ ಮತ್ತು ಯಂತ್ರಭಾಗಗಳ ಅಪ್ಪಳಿಸುವಿಕೆಯನ್ನು ತಡೆಯುವುದು, ಇಂತಹ ಅನೇಕ ವಿಧದ ಬೇಡಿಕೆಗಳನ್ನು ಪೂರ್ತಿಗೊಳಿಸುವಲ್ಲಿ ಸಕ್ರಿಯವಾದ ಎಕಾಸ್ಟಿಕ್ ಸೆನ್ಸರ್ ಗಳ ಪೂರೈಕೆಯನ್ನು ನಾವು ಮಾಡುತ್ತೇವೆ. ಈ ಸೆನ್ಸರ್ ಗಳು ಅಲ್ಟ್ರಾಸಾನಿಕ್ ತಂತ್ರಜ್ಞಾನದೊಂದಿಗೆ ಆಧರಿಸಿದ್ದು ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ಹೊರ ಚಿಮ್ಮುವ ಶಬ್ದಗಳ (ಎಕಾಸ್ಟಿಕ್) ಮಾಪನವನ್ನು ಮಾಡಬಹುದಾಗಿದೆ.

12_2  H x W: 0  
 
ಈ ಎಕಾಸ್ಟಿಕ್ ಎಮಿಶನ್ ನ ಸೆನ್ಸರ್ ಅಂದರೆ ಮಶಿನ್ ನ ರಚನೆಯಲ್ಲಿ ಸಂಗ್ರಹಿಸಲ್ಪಟ್ಟಿರುವ ಮತ್ತು ಮುಕ್ತವಾಗಬಲ್ಲ ಎನರ್ಜಿಯಿಂದಾಗಿ ಉಂಟಾಗುವ ಹೈ ಫ್ರಿಕ್ವೆನ್ಸಿಯ ಧ್ವನಿ ಅಲೆಗಳಿರುತ್ತವೆ. ಈ ಅಲೆಗಳನ್ನು ನಿಯಂತ್ರಿಸುವುದು ಮತ್ತು ಮೂಲ ರೆಫರನ್ಸ್ ನೊಂದಿಗೆ ಅವುಗಳನ್ನು ಹೋಲಿಸುವುದು, ಇದರಿಂದ ಪರಿಸ್ಥಿತಿಗೆ ಅನುಸಾರವಾಗಿ ಆಗುವ ಬದಲಾವಣೆಗಳ ತಪಾಸಣೆ ಮತ್ತು ಮಶಿನ್ ನಲ್ಲಿ ಸುಧಾರಣೆಗಳನ್ನು ಮಾಡಬಹುದಾಗಿದೆ.
ಎಕಾಸ್ಟಿಕ್ ಎಮಿಶನ್ ನಲ್ಲಾದ ಬದಲಾವಣೆಗಳಿಂದ ಕಟಿಂಗ್ ಪೋರ್ಸ್ ನಲ್ಲಿ ಆಗುವ ಬದಲಾವಣೆಗಳನ್ನು ತೋರಿಸಬಹುದಾಗಿದೆ. ಅನುಕೂಲವಾಗಿರುವ ಸೈಕಲ್ ಗಳಿಂದ ಇದರಲ್ಲಿ ಸುಧಾರಣೆಗಳನ್ನು ಮಾಡುವುದು ಸಾಧ್ಯ. ಗ್ರೈಂಡಿಂಗ್ ಮಶಿನ್ ಗೋಸ್ಕರ ಯಂತ್ರಣೆಯಾಗುವಲ್ಲಿ ಮತ್ತು ಎಕಾಸ್ಟಿಕ್ ಸಿಗ್ನಲ್ ಎಲ್ಲಕ್ಕಿಂತಲೂ ಒಳ್ಳೆಯದಾಗಿರುತ್ತದೆ. ಅದರ ಸಾಧ್ಯವಾದಷ್ಟು ಹತ್ತಿರ ಇಡುವುದು ಸಾಧ್ಯ. ಈ ರೀತಿಯ ಸುಲಭವಾಗಿರುವ ಎಕಾಸ್ಟಿಕ್ ಸೆನ್ಸರ್ ಪೂರೈಸುವುದು ಸಾಧ್ಯ.

12_1  H x W: 0  
 
ಲಾಭಗಳು
• ಪ್ರಕ್ರಿಯೆಯ ಕಾಲಾವಧಿ ಕಡಿಮೆ
• ಹೆಚ್ಚು ಸುರಕ್ಷಿತ ಮಶಿನ್
• ವೀಲ್ ನ ಬಾಳಿಕೆ ಹೆಚ್ಚು
• ನಿರ್ವಹಣೆಯ ಖರ್ಚು ಕಡಿಮೆ
 
ಕೇಸ್ ಸ್ಟಡಿ
ಪುಣೆಯಲ್ಲಿ ಉತ್ಪಾದನೆಯನ್ನು ಮಾಡುವ ಒಂದು ದೊಡ್ಡ ಕಂಪನಿ ಕಳೆದ ಅನೇಕ ವರ್ಷಗಳಿಂದ ಮಾರ್ಪಾಸ್ ಕಂಪನಿಯ ಗೇಜ್ ಗಳನ್ನು ಬಳಸುತ್ತಿದೆ. ಈ ಗೇಜ್ ಗಳನ್ನು ಡಿಜಿಟಲ್ ಮತ್ತು ಸ್ವಯಂಚಾಲಿತವಾಗಿ ಇರುವುದರಿಂದ ಬಳಸಲು ಸುಲಭವಾಗಿದೆ, ಎಂಬುದಾಗಿ ನಿರ್ವಹಣಾ ವಿಭಾಗದ ವ್ಯವಸ್ಥಾಪಕರು ವ್ಯಕ್ತಪಡಿಸಿದರು. ಗ್ರೈಂಡಿಂಗ್ ಮಾಡುವಾಗ ಕಾರ್ಯವಸ್ತುವಿನ ಅಪೇಕ್ಷಿತ ನಿಖರತೆ, ಅದರೊಂದಿಗೆ ಮಶಿನ್ ಮತ್ತು ವೀಲ್ ನ ಆಪ್ಟಿಮೈಜ್ಡ್ ಬಳಕೆ ಮಾಡುವಲ್ಲಿ ಮೂರು ಪ್ರಮುಖ ಅಂಶಗಳಲ್ಲಿ ತುಂಬಾ ಹೆಚ್ಚು ನಿಯಂತ್ರಣೆಯನ್ನು ಅವಲಂಬಿಸಬೇಕಾಗುತ್ತದೆ.
1. ಕಾರ್ಯವಸ್ತುವಿನ ಅಂತಿಮ ಮಾಪನ
2. ಗ್ರೈಂಡಿಂಗ್ ವೀಲ್ ನ ಸಮತೋಲನೆ
3. ಉತ್ಪಾದಕತೆ
 
ಮಾರ್ಪಾಸ್ ನ P7ME ಈ ಮಾಪನಗಳ ಉಪಕರಣೆಗಳ ಮೂಲಕ ಈ ಪ್ರಮುಖ ಮೂರು ಅಂಶಗಳನ್ನು ನಿಯಂತ್ರಿಸಬಹುದಾಗಿದೆ. ಆದರೆ ಇದಕ್ಕೋಸ್ಕರ ವಿವಿಧ ಸೆನ್ಸರ್ ಬಳಸಬೇಕಾಗುತ್ತವೆ. ಈ ಉಪಕರಣೆ ಮಶಿನ್ ನ ನಿಯಂತ್ರಣೆಯ ಪ್ರಣಾಳಿಕೆಯೊಂದಿಗೆ ಜೋಡಿಸಿದ್ದರಿಂದ ಉಪಕರಣಗಳನ್ನು ಖರೀದಿಸಿರುವ ನೊಂದಾಣಿಕೆಯ ಪ್ರಕಾರ ಮಶಿನ್ ಗಳ ಪ್ರಕ್ರಿಯೆಯಲ್ಲಿ ಆವಶ್ಯಕವಾದ ಬದಲಾವಣೆಗಳನ್ನು ಮಾಡಲಾಗುತ್ತದೆ.

14_2  H x W: 0  
 
• ಆನ್ ಲೈನ್ ಗೇಜಿಂಗ್ ನಿಂದ ಕಾರ್ಯವಸ್ತುವಿನ ಆಕಾರ ನಿಯಂತ್ರಿಸಬಹುದಾಗಿದೆ. ಇದರಲ್ಲಿ ಕಾರ್ಯವಸ್ತುವಿನ ಆಕಾರವು ಪೂರ್ತಿಯಾದ ನಂತರ ಮತ್ತು ಮಾಪನವು ನಿರ್ದೋಷವಾಗಿ ಲಭಿಸಿದ ನಂತರ ವೀಲ್ ಹಿಂದೆ ಸರಿಸಲಾಗುತ್ತದೆ. ಕಾರ್ಯವಸ್ತುವಿನ ಮಾಪನವು ಸಾಮಾನ್ಯವಾಗಿ 0 ರಿಂದ 8 ಮೈಕ್ರಾನ್ ತನಕ ನಿಯಂತ್ರಿಸಲಾಗುತ್ತದೆ.
• ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ವೀಲ್ ನ ಬ್ಯಾಲೆನ್ಸ್ ಮಾಡುವುದು ಮಹತ್ವದ ಅಂಶವಾಗಿದೆ. ಒಂದು ವೇಳೆ ಗ್ರೈಂಡಿಂಗ್ ವೀಲ್ ನ ಬ್ಯಾಲೆನ್ಸ್ ಸರಿಯಾಗದಿದ್ದಲ್ಲಿ ಅದರ ಮಾಪನವನ್ನು ಮಾಡಿ ಬ್ಯಾಲೆನ್ಸಿಂಗ್ ಮಾಡುವ ಕಮಾಂಡ್ ನೀಡಲಾಗುತ್ತದೆ. ಅದು ಬ್ಯಾಲೆನ್ಸಿಂಗ್ ಮಾಡಿದ ನಂತರ ಆನ್ ಲೈನ್ ಡೇಟಾದಲ್ಲಿ ಅದು ಎಷ್ಟು ಪ್ರಮಾಣದಲ್ಲಿ ಬ್ಯಾಲೆನ್ಸಿಂಗ್ ಆಗುತ್ತದೆ ಮತ್ತು ಎಷ್ಟು ಬ್ಯಾಲೆನ್ಸಿಂಗ್ ಆಗಿದೆ ಎಂಬುದು ತಿಳಿಯುತ್ತದೆ. ಅದರ ನಂತರ ಮತ್ತೆ ಮಶಿನ್ ಆನ್ ಆಗುತ್ತದೆ. ಇದರಿಂದಾಗಿ ತಯಾರಾಗುವ ಕಾರ್ಯವಸ್ತುವಿನ ಸರ್ಫೇಸ್ ಫಿನಿಶ್ ಉಚ್ಚಮಟ್ಟದಲ್ಲಿ ಲಭಿಸುತ್ತದೆ. ವೀಲ್ ಒಂದು ವೇಳೆ ಡೈನ್ಯಾಮಿಕ್ ಸಮತೋಲಿತವಾಗಿದ್ದಲ್ಲಿ ಕಂಪನಗಳು ಕಡಿಮೆಯಾಗುತ್ತವೆ.
• ಮೂರನೇ ಅಂಶವೆಂದರೆ, ಎಕಾಸ್ಟಿಕ್ ಎಮಿಶನ್. ಗ್ರೈಂಡಿಂಗ್ ಪ್ರಕ್ರಿಯೆ ಆಗುತ್ತಿರುವಾಗ ವೀಲ್ ಹಾಗೆಯೇ ಕೂಲಂಟ್ ಸೋರುವ ಮತ್ತು ಗಾಳಿಯ ಶಬ್ದವೂ ಬರುತ್ತಿರುತ್ತದೆ. ಈ ಎಲ್ಲವೂ ಅಲ್ಟ್ರಾಸೌಂಡ್ ಧ್ವನಿಯ ಲಹರಿಗಳು ಆಗಿರುವುದರಿಂದ ತಮಗೆ ಕೇಳಬರುವುದು ಅಸಾಧ್ಯ. ಆದರೆ ಉಪಕರಣೆಗಳಲ್ಲಿರುವ ಸೆನ್ಸರ್ ಇಂತಹ ಶಬ್ದಗಳನ್ನು (ಲಹರಿ) ನೊಂದಾಯಿಸಲಾಗುತ್ತದೆ. ಪ್ರಾರಂಭದಲ್ಲಿ ವೀಲ್ ಮತ್ತು ಕಾರ್ಯವಸ್ತುವಿನಲ್ಲಿರುವ ದೂರ ಹೆಚ್ಚು ಇರುವುದರಿಂದ ಈ ಶಬ್ದವು ತುಂಬಾ ಕಡಿಮೆ ಇರುತ್ತದೆ. ಆದರೆ ವೀಲ್ ಮತ್ತು ಕಾರ್ಯವಸ್ತುವಿನಲ್ಲಿ ದೂರವು ಕಡಿಮೆ ಆಗುವಾಗ ಶಬ್ದವು ಹೆಚ್ಚಾಗುತ್ತದೆ. ವೀಲ್ ಕಾರ್ಯವಸ್ತುವಿಗೆ ಸ್ಪರ್ಶಿಸುವಾಗ ಪಾಯಿಂಟ್ ನಲ್ಲಿ ಅಕಸ್ಮಾತ್ತಾಗಿ ಶಬ್ದವು ಹೆಚ್ಚಾಗುತ್ತದೆ. ಇದರಿಂದಾಗಿ ವೀಲ್ ಕಾರ್ಯವಸ್ತುಗೆ ಸ್ಪರ್ಶಿಸುವ ಪಾಯಿಂಟ್ ಮತ್ತು ದೂರ ಇವೆರಡರ ನೊಂದಾಣಿಕೆಯನ್ನು ಮಾಡಲು ಎಕಾಸ್ಟಿಕ್ ಎಮಿಶನ್ ಈ ಯುನಿಟ್ ತುಂಬಾ ಮಹತ್ವದ್ದಾಗಿದೆ. ಒಂದು ವೇಳೆ ಟಚ್ ಪಾಯಿಂಟ್ (ಸ್ಪರ್ಶ ಬಿಂದು) ಎಲ್ಲಿದೆ, ಎಂಬುದು ತಿಳಿಯದೇ ಇದ್ದಲ್ಲಿ ವೀಲ್ ಮತ್ತು ಕಾರ್ಯವಸ್ತುವಿನಲ್ಲಿ ಸುರಕ್ಷಿತವಾದ ದೂರವನ್ನು ಇಟ್ಟು ಫೀಡ್ ರೇಟ್ ಕಡಿಮೆ ಮಾಡಲಾಗುತ್ತದೆ. ಆದರೆ ಆ ಪಾಯಿಂಟ್ ತಿಳಿದ ನಂತರ ಸ್ಪರ್ಶ (ಟಚ್) ಆಗುವ ತನಕ ವೀಲ್ ಹೆಚ್ಚು ಫೀಡ್ ರೇಟ್ ನಲ್ಲಿ ನಡೆಸಲಾಗುತ್ತದೆ. ಸ್ಪರ್ಶ ಬಿಂದು (ಟಚ್ ಪಾಯಿಂಟ್) ಬಂದಾಗ ಅದರ ವೇಗವು ಕಡಿಮೆಯಾಗುತ್ತದೆ. ಇದರಿಂದಾಗಿ ಸೈಕಲ್ ಟೈಮ್ ಕಡಿಮೆಯಾಗಿ ಉತ್ಪಾದಕತೆಯು ವೃದ್ದಿಸುತ್ತದೆ.

14_1  H x W: 0  
 
ಲಾಭಗಳು
1. ಸೈಕಲ್ ಟೈಮ್ ಕಡಿಮೆಯಾಗಿದ್ದರಿಂದ ಉತ್ಪಾದನೆಯ ಸಾಮರ್ಥ್ಯವು ಶೇಕಡಾ 10 ರಷ್ಟು ಹೆಚ್ಚಾಯಿತು.
2. ನಿಖರತೆ 0.1 ಮೈಕ್ರಾನ್ ನಷ್ಟು ಲಭಿಸುತ್ತದೆ.
3. ಆನ್ ಲೈನ್ ಗೇಜಿಂಗ್ ನಿಂದಾಗಿ ಕಾರ್ಯವಸ್ತುವಿನ ಅಪೇಕ್ಷಿಸಿರುವ ಮಾಪನ ಹೆಚ್ಚು ನಿಖರವಾಗಿ ನಿಯಂತ್ರಿಸಲಾಯಿತು.
 
 
 
<="" div="" style="float: left; margin: -25px 20px 20px 0px;">
joshi_1  H x W: 
ಶ್ರೀಧರ ಜೋಶಿ
ಶಾಖಾ ವ್ಯವಸ್ಥಾಪಕರು,
ಮಾರ್ಪಾಸ್ ಇಂಡಿಯಾ ಪ್ರೈ.ಲಿ. 
9921912025
 
ಶ್ರೀಧರ ಜೋಶಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಮಾರ್ಪಾಸ್ ಇಂಡಿಯಾ ಪ್ರೈ.ಲಿ. ಎಂಬ ಕಂಪನಿಯಲ್ಲಿ ಪಶ್ಚಿಮ ವಿಭಾಗದ ಶಾಖಾ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರು 24 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
 
 
@@AUTHORINFO_V1@@