ಗ್ರಾಹಕರು ಗ್ರೈಂಡಿಂಗ್ ವೀಲ್ ಗಳ ಕುರಿತು ಆಗಾಗ ವಿಚಾರಿಸುತ್ತಿರುತ್ತಾರೆ. ಅವರು ವಿಚಾರಣೆ ಮಾಡುವಾಗ ಅವರಿಗೆ ಅಪೇಕ್ಷಿತ ಪ್ರಕ್ರಿಯೆ, ಮಟೀರಿಯಲ್ ಗಳ ವಿವರಗಳು, ಹಾಗೆಯೇ ಮಶಿನ್ ನಲ್ಲಿರುವ ಬದಲಾವಣೆಗಳು ಇತ್ಯಾದಿ ಅಂಶಗಳ ಕುರಿತು ವಿವರಗಳನ್ನು ತಿಳಿದುಕೊಳ್ಳುವ ಆಪೇಕ್ಷೆ ಇರುತ್ತದೆ.
ಇಂತಹ ಮಾಹಿತಿ ಹಾಗೆಯೇ ಗ್ರಾಹಕರು ಯಾವ ಯಂತ್ರಭಾಗಗಳನ್ನು ಉತ್ಪಾದಿಸಲಿದ್ದಾರೆಯೋ, ಅಂತಹ ಯಂತ್ರಭಾಗಗಳ ಅಪೇಕ್ಷಿಸಿರುವ ವಿವರಗಳನ್ನು ಕೂಡಾ ಸೂಕ್ತ ಮತ್ತು ಸ್ಪಷ್ಟವಾಗಿ ತಿಳಿಸುವುದೂ ಅತ್ಯಾವಶ್ಯಕವಾಗಿದೆ.
ಯಾವುದೇ ಉತ್ಪಾದನೆಯ ಡಿಸೈನ್ ಮಾಡುವಾಗ ಅದು ಪೂರ್ತಿಯಾಗಲು ಬೇಕಾಗಿರುವ ಎಲ್ಲ ಮಾಹಿತಿಯನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ. ಇದರ ಅರಿವು ತಮಗೆಲ್ಲರಿಗೂ ಇದೆ. ಗ್ರಾಹಕರು ಅವರ ಎಲ್ಲ ಬೇಡಿಕೆ ಮತ್ತು ಆಪೇಕ್ಷೆಗಳನ್ನು ಸ್ವಷ್ಟವಾಗಿ ಮಂಡಿಸಬೇಕು. ಈ ರೀತಿಯ ಇಚ್ಛೆಯು ಟೂಲ್ ಉತ್ಪಾದಕರಿಂದ ವ್ಯಕ್ತಪಡಿಸಲಾಗುತ್ತದೆ. ಟೂಲ್ ಗಳ ಉತ್ಪಾದನೆ ಮಾಡುವ ಕೆಲಸವು ಕೇವಲ ಉತ್ಪಾದಕರಿಗೆ ಸೀಮಿತವಾಗಿರದೇ, ಅದು ಉತ್ಪಾದಕರು ಮತ್ತು ಗ್ರಾಹಕರು ಇವರಿಬ್ಬರ ಒಪ್ಪಿಗೆಯಿಂದಲೇ ಮಾಡುವುದು ಅಗತ್ಯವಾಗಿದೆ.
ಅನೇಕ ಬಾರಿ ಯಾವುದೇ ಒಬ್ಬ ಗ್ರಾಹಕನು ಉತ್ಪಾದಕನಿಗೆ ಟೂಲ್ ತಯಾರಿಸಲು ಬೇಡಿಕೆಯನ್ನು ನೀಡಿರುತ್ತಾನೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಟೂಲ್ ಉತ್ಪಾದಿಸಲು ಉತ್ಪಾದಕರು ಅದರ ಕುರಿತು ಅಭ್ಯಾಸ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಉತ್ಪಾದಕರು ಗ್ರಾಹಕರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಟೂಲ್ ಗಳ ಉತ್ಪಾದನೆಯನ್ನು ಮಾಡುವ ಮೊದಲು ಗ್ರಾಹಕರ ಕೆಲಸದ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲಾಗುತ್ತದೆ. ಆ ಮಾಹಿತಿಗೆ ಅನುಸಾರವಾಗಿ ಯಾವ ಟೂಲ್ ಗಳನ್ನು ಬಳಸಬೇಕು, ಎಂಬುದರ ಬಗ್ಗೆ ಉತ್ಪಾದಕರಿಂದ ಶಿಫಾರಸು ಮಾಡಲಾಗುತ್ತದೆ. ಅದಕ್ಕೆ ಅನುಸಾರವಾಗಿ ಡಿಸೈನ್ ಮಾಡಲಾಗುತ್ತದೆ. ಆದರೆ ಗ್ರಾಹಕರು ಕೇಳಿರುವ ಎಲ್ಲ ಪ್ರಶ್ನೆಗ ಳಿಗೆ ಗ್ರಾಹಕರು ಸಮರ್ಪಕವಾದ ಉತ್ತರವನ್ನು ನೀಡದಿದ್ದಲ್ಲಿ ಟೂಲ್ ಗಳ ಉತ್ಪಾದನೆಯಲ್ಲಿ ಬಿಕ್ಕಟ್ಟುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅಪೇಕ್ಷಿಸಿರುವ ಕೆಲಸವನ್ನು ಮಾಡುವ ಮತ್ತು ಸುರಕ್ಷೆಯ ನಿಟ್ಟಿನಲ್ಲಿ ಯೋಗ್ಯವಾದ ಟೂಲ್ ಗಳ ಆಯ್ಕೆಯನ್ನು ಮಾಡಲು ಆತ್ಯಾವಶ್ಯಕವಿರುವ ಎಲ್ಲ ಮಾಹಿತಿಯನ್ನು ಗ್ರಾಹಕರಿಂದ ಪಡೆಯುವುದೂ ತುಂಬಾ ಆವಶ್ಯಕವಾಗಿರುತ್ತದೆ.
ಈ ಲೇಖನದಲ್ಲಿ ನಾವು ಗ್ರೈಂಡಿಂಗ್ ವೀಲ್ ನ ಆಯ್ಕೆಯ ಕುರಿತು ಶಿಫಾರಸು ಮಾಡುವಾಗ ಯಾವ ರೀತಿಯ ಮುತುವರ್ಜಿಯನ್ನು ವಹಿಸಬೇಕು, ಎಂಬುದರ ಕುರಿತು ತಿಳಿದುಕೊಳ್ಳಲಿದ್ದೇವೆ.
ಗ್ರೈಂಡಿಂಗ್ ವೀಲ್ ನ ಆಯ್ಕೆಯನ್ನು ಸಂಪೂರ್ಣ ಉತ್ಪಾದನೆಯ ಪ್ರಕ್ರಿಯೆ ಅಂದರೆ ಗ್ರೈಂಡಿಂಗ್ ಪ್ರಣಾಳಿಕೆಯ ಒಂದು ಭಾಗವೇ ಎಂಬುದಾಗಿ ನಾವು ತಿಳಿಯುತ್ತೇವೆ. ಗ್ರೈಂಡಿಂಗ್ ವೀಲ್ ನ ಡಿಸೈನ್ ಮಾಡುವ ಮುನ್ನ ಹಲವಾರು ಘಟಕಗಳ ಕುರಿತು ವಿಚಾರ ಮಾಡುವುದು ತುಂಬಾ ಮಹತ್ವದ್ದಾಗಿದೆ. ಈ ಘಟಕಗಳನ್ನು ಸಹಜವಾಗಿ ಗಮನದಲ್ಲಿಡಲು ನಾವು 3MTDC ಈ ಶಬ್ದವನ್ನು ತಯಾರಿಸಿದೆವು. ಈ ಶಬ್ದಗಳ ವಿವರಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ. ಕೋಷ್ಟಕ ಕ್ರ. 1 ರಲ್ಲಿರುವ ಎಲ್ಲ ಘಟಕಗಳ ಕುರಿತು ವಿಚಾರ ಮಾಡಿ ಗ್ರೈಂಡಿಂಗ್ ವೀಲ್ ನ ಆಯ್ಕೆಯನ್ನು ಸೂಚಿಸಬಹುದು.
ವೀಲ್ ನ ವಿವರಗಳನ್ನು ನಿರ್ಧರಿಸುವ ಘಟಕಗಳನ್ನು ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿವೆ. ಹಾಗೆಯೇ ಕೆಲಸಕ್ಕೆ ಸಂಬಂಧಪಟ್ಟ ವಿವಿಧ ಅಂಶಗಳಿಂದ ಘಟಕಗಳಲ್ಲಾಗುವ ಪರಿಣಾಮಗಳ ಕುರಿತು ಕೋಷ್ಟಕ ಕ್ರ. 3 ರಲ್ಲಿ ವಿವರಿಸಲಾಗಿದೆ.
ಕಡಿಮೆ ವಿವರಗಳ ಪರಿಣಾಮಗಳು
1. ಮಟೀರಿಯಲ್ ನ ಕಠಿಣತೆ ಕಡಿಮೆ ತಿಳಿಸುವುದು : ವೀಲ್ ನ ಕಡಿಮೆ ಕಠಿಣತೆ ಇರುವ (ಹಾರ್ಡ್) (28-34 HRC) ಮಟೀರಿಯಲ್ ಗ್ರೈಂಡ್ ಮಾಡಲು ಡಿಸೈನ್ ತಯಾರಿಸಿದ್ದಲ್ಲಿ ಮತ್ತು ಮಟೀರಿಯಲ್ ನ ಕಠಿಣತೆಯು ಪ್ರತ್ಯಕ್ಷವಾಗಿ 60 HRC ಗಿಂತ ಹೆಚ್ಚು ಇದ್ದಲ್ಲಿ ವೀಲ್ ಕೆಲಸ ನಿರ್ವಹಿಸುವುದಿಲ್ಲ.
2. ಮಿಶ್ರ ಕಠಿಣತೆ ಇರುವ ಮಟೀರಿಯಲ್ : ಒಂದು ವೇಳೆ ಮಟೀರಿಯಲ್ ಮೃದುವಾಗಿದ್ದಲ್ಲಿ (ಸಾಫ್ಟ್ ) ಮತ್ತು ಕಠಿಣವಾದ ಸರ್ಫೇಸ್ ನ ಮಿಶ್ರಣವೂ ಇದ್ದಲ್ಲಿ ಲೇಯರ್ಡ್ ಇರುವ ವೀಲ್ ಡಿಸೈನ್ ಮಾಡಬಲ್ಲೆವು. ಅಥವಾ ಕಠಿಣವಾಗಿರುವ ಭಾಗಕ್ಕೆ ವೀಲ್ ನ ಡಿಸೈನ್ ತಯಾರಿಸಲಾಗುತ್ತದೆ.
3. ವೀಲ್ ನ ವೇಗ : ಗ್ರಾಹಕರು ಮಶಿನ್ ನಲ್ಲಿ ವೀಲ್ ನ ವೇಗವನ್ನು 60 ಮೀಟರ್/ಸೆಕಂಡುಗಳಷ್ಟು ಬಳಸಿ, ವೀಲ್ ಉತ್ಪಾದಕರಿಗೆ 45 ಮೀಟರ್/ ಸೆಕಂಡುಗಳಷ್ಟು ತಿಳಿಸಿದಲ್ಲಿ ವೀಲ್ ತುಂಡಾಗಿ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ.
4. ಕಾರ್ಯವಸ್ತುವಿನಲ್ಲಿರುವ ಪ್ರೊಫೈಲ್ ಗೆ ಕನಿಷ್ಠ ತ್ರಿಜ್ಯವನ್ನು ಗ್ರಾಹಕರು ಸ್ಪಷ್ಟವಾಗಿ ಹೇಳದಿದ್ದಲ್ಲಿ ಉತ್ಪಾದಕರು ಗ್ರಾಹಕರಿಗೆ ಬೇಕಾಗಿರುವ ಒರಟುತನವನ್ನು (ರಫ್ ನೆಸ್), ವೇಗ ಮತ್ತು ಇನ್ನಿತರ ಅಂಶಗಳನ್ನು ಆಧರಿಸಿ ವೀಲ್ ನ ಡಿಸೈನ್ ತಯಾರಿಸಬಲ್ಲೆವು. ಈ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಆಯ್ಕೆ ಮಾಡಿರುವ ವೀಲ್ ನ ಗ್ರೀಟ್ ನ ಆಕಾರದಿಂದಾಗಿ ಅಪೇಕ್ಷಿಸಿರುವ ತ್ರಿಜ್ಯ ಮಾಡುವುದು ಅಸಾಧ್ಯ.
ಮಶಿನ್ ಆನ್ ಮಾಡುವಾಗ ವಹಿಸಬೇಕಾದ ಮುತುವರ್ಜಿ
1. ಮಶಿನ್ ಆನ್ ಮಾಡಿರಿ ಮತ್ತು ವೀಲ್ 2-3 ನಿಮಿಷಗಳ ತಿರುಗಲಿ. ವೀಲ್ ನ ವೇಗ ಅದರಲ್ಲಿ ಬರೆದಿರುವ ವೇಗಕ್ಕಿಂತ ಹೆಚ್ಚು ಇರಬಾರದು.
2. ಟಚ್ ಪಾಯಿಂಟ್ ಪಡೆಯಿರಿ ಮತ್ತು ವೀಲ್ ಟ್ರೂ ಮಾಡಿ ವೀಲ್ ನ ರನ್ ಔಟ್ ತೆಗೆಯಿರಿ, ಆಗ ವೀಲ್ ನ ಅಕ್ಷವು ಮಶಿನ್ ನ ಅಕ್ಷದೊಂದಿಗೆ ಕಾಂನ್ಸೆಂಟ್ರಿಕ್ ಆಗುತ್ತದೆ.
3. ಟ್ರೂಯಿಂಗ್ ಮಾಡುವಾಗ ಮತ್ತು ಗ್ರೈಂಡಿಂಗ್ ಮಾಡುವಾಗ ಸುರಕ್ಷೆಯ ದೃಷ್ಟಿಯಲ್ಲಿ, ಡ್ರೆಸರ್ ಹಾಗೆಯೇ ವೀಲ್ ಮತ್ತು ಕಾರ್ಯವಸ್ತು ಇವೆರಡರಲ್ಲಿ ಯೋಗ್ಯವಾದ ದೂರವನ್ನು ಇಡುವುದು ಅತ್ಯಾವಶ್ಯಕವಾಗಿದೆ.
4. ವೀಲ್ ಗೆ ಬೇಕಾಗಿರುವಂತೆ ಪ್ರೊಫೈಲ್ ನೀಡಿರಿ ಮತ್ತು ಗ್ರೈಂಡಿಂಗ್ ಪ್ರಾರಂಭಿಸಿರಿ.
5. ಕೆಲಸ ಮಾಡುತ್ತಿರುವಾಗ ಅಥವಾ ಯಾವಾಗಲೂ ವೀಲ್ ತಿರುಗುತ್ತಿರುವಾಗ ಸೇಫ್ಟೀ ಗಾರ್ಡ್ ತೆರೆಯದಿರಿ.
6. ಯಾವಾಗಲೂ ತರಬೇತಿ ಪಡೆದಿರುವ ಆಪರೇಟರ್ ನ ಸಹಾಯದಿಂದಲೇ ವೀಲ್ ಅಳವಡಿಸಿರಿ.
ಕೋಷ್ಟಕ ಕ್ರ. 4 ರಲ್ಲಿ ತೋರಿಸಿದಂತೆ ತಪಾಸಣೆಯನ್ನು ಮಾಡಬೇಕು.
<="" div="" style="float: left; margin: -25px 20px 20px 0px;">
ಪ್ರಕಾಶ್ ಪಾಟೀಲ್
ಹಿರಿಯ ವ್ಯವಸ್ಥಾಪಕರು ಸೆಂಟ್-ಗೋಬೇನ್ ಅಬ್ರೆಸಿವ್ಜ್ ಗ್ರೈಂಡ್ ವೆಲ್ ನಾರ್ಟನ್ ಲಿ. ಇಂಡಿಯಾ
9850677375
ಪ್ರಕಾಶ್ ಪಾಟೀಲ್ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರು. ಕ್ವಾಲಿಟಿಯಂತಹ ಅನೇಕ ವಿಭಾಗಗಳಲ್ಲಿ 20 ವರ್ಷಗಳಿಗಿಂತ ಹೆಚ್ಚು ಕಾಲಾವಧಿಯಲ್ಲಿ ಸೇವೆಸಲ್ಲಿಸಿರುವ ಅನುಭವವು ಅವರಿಗಿದೆ. ಈಗ ಪಾಟೀಲ್ ಇವರು ಸೆಂಟ್-ಗೋಬೇನ್ ಅಬ್ರೆಸಿವ್ಜ್ ಗ್ರೈಂಡ್ ವೆಲ್ ನಾರ್ಟನ್ ಲಿ. ಇಂಡಿಯಾ ಕಂಪನಿಯಲ್ಲಿ ಅಪ್ಲಿಕೇಶನ್ ವಿಭಾಗದಲ್ಲಿ ವರಿಷ್ಠ ವ್ಯವಸ್ಥಾಪಕರಾಗಿದ್ದಾರೆ.
="">