ಕ್ರೀಪ್-ಫೀಡ್ ಇದು ಮೂಲತಃ ಗ್ರೈಂಡಿಂಗ್ ವೀಲ್ ನ ಮೊದಲನೇ ಪಾಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯುವ ಮತ್ತು ನಂತರ ಎರಡನೇ ಪಾಸ್ ನಲ್ಲಿ ಸರ್ಫೇಸ್ ಗೆ ನಿರ್ಧಾರಿತ ಟಾಲರನ್ಸ್ ಮತ್ತು ಫಿನಿಶ್ ಪಡೆಯುವ ಪ್ರಕ್ರಿಯೆಯಾಗಿದೆ. ಇನ್ನಿತರ ಗ್ರೈಂಡಿಂಗ್ ಪ್ರಕ್ರಿಯೆಗಳನ್ನು ಹೋಲಿಸಿದಲ್ಲಿ, ಕ್ರೀಕ್-ಫೀಡ್ ಗ್ರೈಂಡಿಂಗ್ ನಲ್ಲಿ (CFG) ಕಡಿಮೆ ಸೈಕಲ್ ಟೈಮ್, ಲೋಹಗಳನ್ನು ತೆಗೆಯುವ ಹೆಚ್ಚು ರೇಟ್ (ಮೆಟಲ್ ರಿಮೂವಲ್ ರೇಟ್- MRR), ಉತ್ತಮವಾದ ಕೋನಾತ್ಮಕವಾದ ನಿಖರತೆಯೂ ಲಭಿಸುತ್ತದೆ ಮತ್ತು ಕಡಿಮೆ ಬರ್ ಉತ್ಪತ್ತಿಯಾಗುತ್ತದೆ. ಬೃಹತ್ ಕ್ಷೇತ್ರಗಳಲ್ಲಿ ಗ್ರೈಂಡಿಂಗ್ ವೀಲ್ ಹೋಲಿಸಿದರೆ ಮತ್ತು ಕಾರ್ಯವಸ್ತುವಿನೊಂದಿಗೆ ನಿಖರವಾದ ಸಂಪರ್ಕ ಇರುವುದರಿಂದ ಕಡಿಮೆ ಬರ್ ಉತ್ಪತ್ತಿಯಾಗುತ್ತದೆ.
ಪಾರಂಪರಿಕವಾದ ಗ್ರೈಂಡಿಂಗ್ ನ ಹೋಲಿಕೆಯಲ್ಲಿ ಕ್ರೀಪ್-ಫೀಡ್ ನಲ್ಲಿ ತುಂಡುಗಳ ಆಳವು ಹೆಚ್ಚಾಗಿರುತ್ತದೆ. ಟ್ರೇವರ್ಸ್ ರೇಟ್ ಕಡಿಮೆ ಇರುತ್ತದೆ. ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿರುವ ಪ್ರಮುಖವಾದ ವೈಶಿಷ್ಟ್ಯವೆಂದರೆ ಸಾಮಾನ್ಯವಾದ ಗ್ರೈಂಡಿಂಗ್ ಗಿಂತ ಹೆಚ್ಚಾಗಿರುವ ತುಂಡುಗಳ ಆಳ. ಯಾವುದೇ ಗ್ರೈಂಡಿಂಗ್ ನ ಕೆಲಸವು ಕ್ರೀಪ್-ಫೀಡ್ ಗೋಸ್ಕರ ವರ್ಗೀಕರಣವನ್ನು ಮಾಡಲು ಸಾಮಾನ್ಯವಾಗಿ 1 ಮಿ.ಮೀ. ಆಳಕ್ಕಿಂತ ಹೆಚ್ಚು ಗ್ರೈಂಡಿಂಗ್ ತುಂಡು (ಚಿತ್ರ ಕ್ರ. 1) ಅತ್ಯಾವಶ್ಯಕವಾಗಿರುತ್ತದೆ.
ತುಂಡುಗಳ ದಿಕ್ಕು
ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿರುವ ಒಂದು ಮಹತ್ವದ ಘಟಗವೆಂದರೆ ತುಂಡಿನ ದಿಕ್ಕು. (ಚಿತ್ರ ಕ್ರ. 2) ಸಾಮಾನ್ಯವಾಗಿ ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿ ಡೌನ್ ಕಟಿಂಗ್ ಹೆಚ್ಚು ಬಳಸಲಾಗುತ್ತದೆ.
• ಮಟೀರಿಯಲ್ ಹೆಚ್ಚು ಪ್ರಮಾಣದಲ್ಲಿ ತೆಗೆಯುವಲ್ಲಿ ಕೂಲಂಟ್ ಬಳಸುವುದು ಎಲ್ಲಕ್ಕಿಂತಲೂ ಪ್ರಭಾವಶಾಲಿಯಾಗಿರುತ್ತದೆ.
• ಗರಿಷ್ಠ ಪ್ರಮಾಣದಲ್ಲಿ ಚಿಪ್ ನ ದಪ್ಪವನ್ನು ತಕ್ಷಣ ಪಡೆಯಬಹುದಾಗಿದೆ.
• ಸಂಪರ್ಕದ ಉದ್ದದಲ್ಲಿ ಚಿಪ್ ನ ದಪ್ಪವು ಒಂದೇ ರೀತಿಯಲ್ಲಿ ಕಾಪಾಡಲಾಗುತ್ತದೆ.
• ಕೂಲಂಟ್ ನೋಜಲ್ ವೀಲ್ ನ ದಿಕ್ಕಿಗೆ ಅನುಸಾರವಾಗಿ ಅಳವಡಿಸಲ್ಪಡುತ್ತವೆ.
ಸಾಲಿಡ್ ಕಾರ್ಬೈಡ್ ನ ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿರುವ
ಗ್ರೈಂಡಿಂಗ್ ವೀಲ್
ಅತ್ಯಾಧುನಿಕ SC ಟೂಲ್ 5 ಮತ್ತು 6 ಅಕ್ಷಗಳ ಸಿ.ಎನ್.ಸಿ. ಗ್ರೈಂಡಿಂಗ್ ಮಶಿನ್ ನಲ್ಲಿ ತಯಾರಿಸಲಾಗುತ್ತವೆ. ಉದಾಹರಣೆ, ANCA (ಆಸ್ಟ್ರೆಲಿಯನ್) ಮತ್ತು WALTER (ಜರ್ಮನ್) ಇಂತಹ ಮಶಿನ್ ಗಳಲ್ಲಿ ಟಿಪಿಕಲ್ ಸೆಟಪ್ ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಇರುತ್ತದೆ.
ಟೂಲ್ ಗಳ ನಿರ್ಮಾಣದಲ್ಲಿ ಉದ್ಭವಿಸುವ ಉಚ್ಚ ಕ್ರೀಪ್-ಫೀಡ್ ಗ್ರೈಂಡಿಂಗ್ ಫೋರ್ಸ್ ನೊಂದಿಗೆ ಉಳಿದುಕೊಳ್ಳು ಯೋಗ್ಯ, ಕಾಂನ್ಸೆಂಟ್ರಿಕ್ ಮತ್ತು ಸಾಕಷ್ಟು ಪ್ರಮಾಣದಲ್ಲಿ ದೃಢವಾದ ಹಿಡಿಕೆಯನ್ನು ಪಡೆಯಲು, ಇಂತಹ ಮಶಿನ್ ಗಳಲ್ಲಿ ಗ್ರೈಂಡ್ ಮಾಡಿರುವ SC ರಾಡ್ ಹೇಗೆ ಹಿಡಿಯಬೇಕು, ಎಂಬಿತ್ಯಾದಿಗಳ ಕುರಿತು ವಿಚಾರ ಮಾಡುವುದೂ ಮಹತ್ವದ್ದಾಗಿದೆ. ಈ ರೀತಿಯ ಮಶಿನ್ ಗಳಲ್ಲಿ SC ರಾಡ್ ಹಿಡಿಯಲು ಬಳಸಲಾಗುವಂತಹ ಒಂದು ವಿಶಿಷ್ಟವಾದ ಸೆಟಪ್ ಚಿತ್ರ ಕ್ರ. 4 ರಲ್ಲಿ ತೋರಿಸಲಾಗಿದೆ.
ನಮ್ಮೊಬ್ಬ ಗ್ರಾಹಕರು ಇಟಿಪಿ ಟ್ರಾನ್ಸ್ ಮಿಶನ್ ಎಬಿ ಸ್ವೀಡನ್ ಈ ರೀತಿಯ ಅಪ್ಲಿಕೇಶನ್ ಗಳಿಗೆ ವಿಶೇಷವಾದ ಡಿಸೈನ್ ಮಾಡಿರುವ ವಿಶೇಷವಾದ ಹೈಡ್ರೋಗ್ರಿಪ್ ತಯಾರಿಸುತ್ತಾರೆ. ಗ್ರಾಹಕರೊಬ್ಬರಲ್ಲಿ ಸಾಮಾನ್ಯವಾದ ಹೈಡ್ರೋಲಿಕ್ ಚಕ್ ಬಳಸಿ ಟೂಲ್ ಗ್ರೈಂಡಿಂಗ್ ಮಾಡಲಾಗುತ್ತಿತ್ತು. ಅದರ ಬದಲಾಗಿ ಹೈಡ್ರೋಗ್ರಿಪ್ ಗ್ರೈಂಡಿಂಗ್ ಹೋಲ್ಡರ್ (ಚಿತ್ರ ಕ್ರ. 5) ಬಳಸಿದ್ದರಿಂದ ಆಗಿರುವ ಲಾಭಗಳ ವಿವರಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಪರಿಣಾಮಗಳು
• ಟೂಲ್ ಹೋಲ್ಡರ್ ಬದಲಾಯಿಸಿದ್ದರಿಂದ ಉತ್ಪಾದಕತೆಯು ಹೆಚ್ಚಾಯಿತು.
• ಸಾಮಾನ್ಯವಾದ ಹೈಡ್ರಾಲಿಕ್ ಚಕ್ ಬಳಸುವಾಗ TIR ನಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಆರು ತಿಂಗಳ ನಂತರ ಇದನ್ನು ಬಳಸುವುದು ಅಸಾಧ್ಯವಾಗಿತ್ತು. ಆಗ ETP ಹೈಡ್ರೋಗ್ರಿಪ್ ಗ್ರೈಂಡಿಂಗ್ ಹೋಲ್ಡರ್ ಬಳಸಲು ಪ್ರಾರಂಭಿಸಲಾಯಿತು. 12 ತಿಂಗಳಿಗಿಂತ ಹೆಚ್ಚು ಕಾಲಾವಧಿಯಲ್ಲಿ ಬಳಸಿದ ನಂತರ 3-4 ಮೈಕ್ರಾನ್ ಗಳಷ್ಟು ಸ್ಥಿರವಾದ ಮತ್ತು ನಿರಂತರವಾದ TIR ಲಭಿಸುತ್ತದೆ.
ಕ್ರೀಪ್-ಫೀಡ್ ಗ್ರೈಂಡಿಂಗ್ ಕಟ್ ನಲ್ಲಿರುವ ಫೋರ್ಸ್ ಒಂದು ರೀತಿಯಲ್ಲಿ ಕಡಿಮೆ ಮತ್ತು ಇನ್ನೊಂದು ರೀತಿಯಲ್ಲಿ ಹೆಚ್ಚಾಗಿರುತ್ತದೆ. ಪಾರಂಪರಿಕವಾದ ಗ್ರೈಂಡಿಂಗ್ ನ ಹೋಲಿಕೆಯಲ್ಲಿ ಗ್ರೈಂಡಿಂಗ್ ವೀಲ್ ನಲ್ಲಿರುವ ಪ್ರತಿಯೊಂದು ಕಣಗಳಲ್ಲಿರುವ ಫೋರ್ಸ್ ಕಡಿಮೆ ಇದ್ದರೂ ಮಶಿನ್ ನಲ್ಲಿ ಕಾರ್ಯಗತವಾಗುವ ಒಟ್ಟು ಫೋರ್ಸ್ ಹೆಚ್ಚು ಇರುವ ಸಾಧ್ಯತೆ ಇರುತ್ತದೆ.
SC ಟೂಲ್ ಗಳ ದೊಡ್ಡ ಸಂಪರ್ಕ ಕ್ಷೇತ್ರದಿಂದಾಗಿ ಮತ್ತು ಅದರಲ್ಲಿರುವ ಒತ್ತಡವು ಕಡಿಮೆ ಮಾಡುವ ಆವಶ್ಯಕತೆ ಇರುವುದರಿಂದ ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿ ವೀಲ್ ತುಂಬಾ ಮೃದುವಾಗಿರುವುದು ಅತ್ಯಾವಶ್ಯಕವಾಗಿದೆ. ಕೂಲಂಟ್ ಒಳಭಾಗಕ್ಕೆ ಹೋಗಲು ಮತ್ತು ಚಿಪ್ ಹೊರಗೆ ಬರಲು ವೀಲ್ ನ ರಚನೆಯು ಟೊಳ್ಳಾಗಿ ಮತ್ತು ಉಟ್ಟಮಟ್ಟದ ಪೊರೋಸಿಟಿಯಿಂದ ಕೂಡಿರಬೇಕು. (ಚಿತ್ರ ಕ್ರ. 6) ಆದರೂ ಕೂಡಾ ವೀಲ್ ತಯಾರಿಸುವಾಗ ನೈಸರ್ಗಿಕವಾದ ಪೊರೋಸಿಟಿಯ ಹಂತದಲ್ಲಿ ಮಿತಿಗಳಿರುತ್ತವೆ. ಪೊರೋಸಿಟಿಯ ಹಂತವನ್ನು ಹೆಚ್ಚಿಸಲು ಮತ್ತು ವೀಲ್ ನ ಮೇಟ್ರಿಕ್ಸ್ ನಲ್ಲಿ ರಂಧ್ರಗಳ ಸಪ್ಲೈ ಹೆಚ್ಚಿಸಲು ಪೋರ್ ಇಂಡ್ಯುಸರ್ ಸೇರಿಸಲಾಗುತ್ತವೆ. ಇದರಿಂದಾಗಿ ಚಿಪ್ ಹೊರಗೆ ತೆಗೆಯುವ ಕೆಲಸವು ಆಪ್ಟಿಮೈಜ್ಡ್ ಆಗುತ್ತದೆ.
SC ಟೂಲ್ ಗಳ ಕ್ರೀಪ್-ಫೀಡ್ ಗ್ರೈಂಡಿಂಗ್ ಗೋಸ್ಕರ ಬಳಸಲಾಗಿರುವ ಡೈಮಂಡ್ ವೀಲ್ ಕೂಲಂಟ್ ನಲ್ಲಿ ಸಹಜವಾಗಿ ಪ್ರವೇಶಿಸಬೇಕು ಎಂಬ ಉದ್ದೇಶದಿಂದ ಆ ವೀಲ್ ಗಳಲ್ಲಿರುವ ಡೈಮಂಡ್ ನ ಕಣಗಳ ದೂರವನ್ನು ಹೆಚ್ಚು ಪ್ರಮಾಣದಲ್ಲಿ ಅಳವಡಿಸಿ ಸೂಕ್ಷ್ಮವಾದ ಪೊರೋಸಿಟಿಯನ್ನು ತಯಾರಿಸಲಾಗುತ್ತದೆ. ಮೆಟಲ್ ಅಥವಾ ರೆಜಿನ್ ಬಾಂಡ್ ಮೂಲಕ ವೀಲ್ ಮೇಟ್ರಿಕ್ಸ್ ನಲ್ಲಿ 46% ತನಕ ಪೊರೋಸಿಟಿಯನ್ನು ಪಡೆಯಲಾಗುತ್ತದೆ.
ಯಂತ್ರಣೆ ಮಾಡಲು ಕಠಿಣವಾದ ಮಿಶ್ರ ಲೋಹಗಳ ಮತ್ತು SC ಟೂಲ್ ಗಳ ನಿರ್ಮಿತಿಯಲ್ಲಿ ಸಾಮಾನ್ಯವಾಗಿ ಕ್ರೀಪ್-ಫೀಡ್ ಗ್ರೈಂಡಿಂಗ್ ಬಳಸಲಾಗುತ್ತದೆ. ಹಾರ್ಡ್ ಕಾರ್ಬೈಡ್ ರಾಡ್ SC ಟೂಲ್ ಗಳ ಯಂತ್ರಣೆಗೋಸ್ಕರ ಬಳಸಲಾಗುವ ಕಚ್ಚಾ ವಸ್ತುಗಳು ಯಾವಾಗಲೂ ಹಾರ್ಡ್ ಮಾಡಿರುವ ಸ್ಥಿತಿಯಲ್ಲಿಯೇ ಉಪಲಬ್ಧವಿರುತ್ತದೆ. ಇದರಿಂದಾಗಿ ಮೃದುವಾದ ಸ್ಥಿತಿಯಲ್ಲಿ ಮಿಲಿಂಗ್ ಮಾಡಿದ ನಂತರ ಹೀಟಿಂಗ್ ಪ್ರೊಸೆಸ್ ಗಳ ಮೂಲಕ ಹಾರ್ಡ್ ಮಾಡಿ ಅಂದರ ನಂತರ ಸಾಂಪ್ರದಾಯಿಕ ರೀತಿಯಲ್ಲಿ ಗ್ರೈಂಡಿಂಗ್ ಮಾಡುವುದು ಸಾಧ್ಯವಿರುವುದಿಲ್ಲ.
ಅತ್ಯಾಧುನಿಕವಾದ SC ಟೂಲ್ ಗಳ ನಿರ್ಮಾಣಕ್ಕೋಸ್ಕರ ಕ್ರೀಪ್-ಫೀಡ್ ಗ್ರೈಂಡಿಂಗ್ ಮಾಡಬಲ್ಲ ಮಶಿನ್ ನಲ್ಲಿ ಬಂಡವಾಳ ಹೂಡುವುದು, ಹಾಗೆಯೇ SC ಟೂಲ್ ಗಳಿಗೆ ಹಾರ್ಡ್ ಫಾರ್ಮ್ ಗ್ರೈಂಡಿಂಗ್ ಮಾಡಲು ಸಿ.ಎನ್.ಸಿ. ನಿಯಂತ್ರಿಸಿರುವ 5 ಅಕ್ಷಗಳಿರುವುದು ಅತ್ಯಾವಶ್ಯಕವಾಗಿದೆ.
ಕಾರ್ಬೈಡ್ ರಾಡ್ ನ ಸಾಂಪ್ರದಾಯಿಕ ಗ್ರೈಂಡಿಂಗ್ ಮಾಡುವಾಗ ಹೆಚ್ಚು ಸಮಯವು ಬೇಕಾಗುತ್ತದೆ. ಅಲ್ಲದೇ ಗ್ರೈಂಡಿಂಗ್ ಮಾಡುವಾಗ ರಾಡ್ ಮತ್ತು ಡೈಮಂಡ್ ವೀಲ್ ಇವುಗಳಲ್ಲಿ ಉಚ್ಚಮಟ್ಟದ ಸಂಪರ್ಕ ಸಮಯದಿಂದಾಗಿ ತುಂಬಾ ಹೆಚ್ಚು ಉಷ್ಣತೆಯು ತಯಾರಾಗುತ್ತದೆ. ಗ್ರೈಂಡಿಂಗ್ ಮಾಡುವಾಗ ಕೂಲಂಟ್ ಬಳಸಿದಲ್ಲಿ ರಾಡ್ ನಲ್ಲಿ ಸೂಕ್ಷ್ಮವಾದ ಕ್ರೇಕ್ ಗಳು ಉಂಟಾಗುತ್ತವೆ. SC ಟೂಲ್ ಗ್ರೈಂಡಿಂಗ್ ಮಾಡುವ ಸಾಂಪ್ರದಾಯಿಕ ಪ್ರಕ್ರಿಯೆಯು ಹೆಚ್ಚು ಸಮಯವನ್ನು ಖರ್ಚು ಮಾಡುತ್ತದೆ, ಅಲ್ಲದೇ ಪ್ರಕ್ರಿಯೆಯಲ್ಲಿ ಕಾಣದೇ ಇರುವ ಸೂಕ್ಷ್ಮ ಕ್ರೇಕ್ ಗಳಿಂದಾಗಿ ಗುಣಮಟ್ಟವೂ ಕಡಿಮೆ ಇರುತ್ತದೆ.
ರಫಿಂಗ್ ಆಪರೇಶನ್ (D46) ಮತ್ತು ಫಿನಿಶಿಂಗ್ (D80 ರಿಂದ D100) ಇದಕ್ಕೋಸ್ಕರ ವೀಲ್ ಗಳ ಆಯ್ಕೆ ಮಾಡುವಲ್ಲಿ ಗ್ರೀಟ್ ಸೈಜ್ ನ ಪಾಲು ತುಂಬಾ ಮಹತ್ವದ್ದಾಗಿದೆ. ಗ್ರೀಟ್ ಸೈಜ್ ನ ಆಯ್ಕೆ ಸರ್ಫೇಸ್ ಫಿನಿಶ್ ಗಿಂತ ವೀಲ್ ನಲ್ಲಿ ಆವಶ್ಯಕವಿರುವ ಕನಿಷ್ಠ ಫಾರ್ಮ್ ನ ತ್ರಿಜ್ಯದೊಂದಿಗೆ ಅವಲಂಬಿಸಿರುತ್ತದೆ. ಉದಾಹರಣೆ, ವೀಲ್ ನಲ್ಲಿ 2R ತ್ರಿಜ್ಯದ ರಫಿಂಗ್ ಮಾಡಲು ವೀಲ್ ನ D46 ಗ್ರಿಟ್ ಸೈಜ್ ಅಗತ್ಯವಾಗಿರುತ್ತದೆ ಮತ್ತು ಟೂಲ್ ನ ಫಿನಿಶಿಂಗ್ ಮಾಡಲು ಚಿಕ್ಕ ತ್ರಿಜ್ಯ ಆವಶ್ಯಕವಾಗಿರುತ್ತದೆ. ಆದುದರಿಂದ D80 ರಿಂದ D100 ನ ಗ್ರೀಟ್ ಸೈಜ್ ಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.
SC ಟೂಲ್ ಗೆ ಬಳಸಲಾಗಿರುವ ಡೈಮಂಡ್ ವೀಲ್ ಒಂದು ಸಲ ಬಳಸುವಲ್ಲಿ ‘ಪ್ಲೇಟೆಡ್’ ಮಾಡಲಾಗಿರುವುದಿಲ್ಲ. ಆದರೆ ಸೂಕ್ಷ್ಮವಾದ ಪೊರೋಸಿಟಿಯನ್ನು ತಯಾರಿಸುವಾಗ ಅದರಲ್ಲಿ ಮಧ್ಯಭಾಗದಿಂದ ಹೊರಗಿನ ತನಕ ವಿಸ್ತಾರವಾಗಿ ಡೈಮೆಂಡ್ ನ ಕಣಗಳು ಹರಡಿರುವ 8-10 ಮಿ.ಮೀ.ನ ಸ್ತರವು ಇರುತ್ತದೆ.
ಟೂಲ್ ತಯಾರಿಸಲು ಸಾಲಿಡ್ ಕಾರ್ಬೈಡ್ ರಾಡ್ ನಲ್ಲಿರುವ ಕ್ರೀಪ್-ಫೀಡ್ ಗ್ರೈಂಡಿಂಗ್ ಮೊದಲು ಪ್ರೆಸಿಂಗ್, ನಂತರ ಸಿಂಟರಿಂಗ್ ಮಾಡುವ ಪವಡರ್ ಗಳನ್ನು ಮೆಟಲರ್ಜಿಯ ತಂತ್ರದಲ್ಲಿ ತಯಾರಿಸಿರುವ ಕಾರ್ಬೈಡ್ ರಾಡ್ ನ ರಚನೆಯನ್ನು ತಿಳಿದುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ಇದರ ಕುರಿತಾದ ಒಂದು ಮೈಕ್ರೋ ಸ್ಟಕ್ಚರ್ ಚಿತ್ರ ಕ್ರ. 7 ರಲ್ಲಿ ತೋರಿಸಲಾಗಿದೆ.
ಕಾರ್ಬೈಡ್ ರಾಡ್ ವಿವಿಧ ಗ್ರೇಡ್ ಗಳಲ್ಲಿ ತಯಾರಿಸಲಾಗುತ್ತದೆ. ಪ್ರತಿಯೊಂದು ಗ್ರೇಡ್ ನಲ್ಲಿ ವಿವಿಧ ಆಕಾರದ ಕಣಗಳು ಕೋರ್ಸ್ ಅಥವಾ ಫೈನ್ ಗ್ರೇನ್ ಮೇಟ್ರಿಕ್ಸ್ ನಲ್ಲಿ ಇಡಲಾಗಿರುತ್ತವೆ. (ಚಿತ್ರ ಕ್ರ. 7). ಒಂದು ಬೈಂಡರ್ ಮೂಲಕ (ಸಾಮಾನ್ಯವಾಗ ಕೋಬಾಲ್ಟ್) ಒಟ್ಟಾಗಿ ಕಟ್ಟಿಡಲಾಗುತ್ತವೆ. ಮೆಟ್ರಿಕ್ಸ್ ನಲ್ಲಿ ಕೋಬಾಲ್ಟ್ ನ (Co) ಸರಾಸರಿ, ಟಂಗ್ ಸ್ಟನ್ ಕಾರ್ಬೈಡ್ (Wc) ಗ್ರೇನ್ ನ ಮೈಕ್ರಾನ್ ನ ಸೈಜ್ ಮತ್ತು ಮೆಟ್ರಿಕ್ ನ ಕೋರ್ಸ್ ಅಥವಾ ಫೈನ್ ಗುಣಧರ್ಮದಲ್ಲಿ ಕಾರ್ಬೈಡ್ ರಾಡ್ ನ ಟಫ್ ನೆಸ್ ಅಥವಾ ಸವೆತದ ಪ್ರತಿರೋಧವು ಅವಲಂಬಿಸಿರುತ್ತದೆ. ಮೆಟ್ರಿಕ್ಸ್ ನಲ್ಲಿ ಎಷ್ಟು ಹೆಚ್ಚು ಕೋರ್ಸ್, ಗ್ರೇನ್ ಸೈಜ್ ಇರುತ್ತದೆಯೋ, ಅಷ್ಟೇ ದೊಡ್ಡ ಮತ್ತು ಬೈಂಡರ್ ನ ಸರಾಸರಿಯೂ ಹೆಚ್ಚು. ಅಷ್ಟೇ ಗ್ರೈಂಡಿಂಗ್ ವೀಲ್ ಗ್ರೇಡ್ ಮೃದುವಾಗಿ ತಯಾರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಅಂದರೆ ಗ್ರೇನ್ ಸೈಜ್ ಎಷ್ಟು ಹೆಚ್ಚು ಸೂಕ್ಷ್ಮ ಮತ್ತು ಬೈಂಡರ್ ಎಷ್ಟು ಕಡಿಮೆಯೋ, ಅಷ್ಟೇ ಗ್ರೇಡ್ ಹಾರ್ಡ್ ಆಗುತ್ತದೆ. ಕಾರಣ CFG ಯಲ್ಲಿ ತುಂಡುಗಳ ಆಳ ಹೆಚ್ಚಾಗಿರುವುದರಿಂದ ಗ್ರೈಂಡಿಂಗ್ ಮಾಡಿರುವ ಸರ್ಫೇಸ್ ನಿಕೃಷ್ಟ ಗುಣಮಟ್ಟದ್ದಾಗಿರುವ ಸಾಧ್ಯತೆ ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿರುವ ಪ್ರಮುಖವಾದ ಸಮಸ್ಯೆಯಾಗಿದೆ.
ನಿಕೃಷ್ಟ ಗುಣಮಟ್ಟದ ಸರ್ಫೇಸ್ ನ ಮೇಲ್ಭಾಗದಲ್ಲಿರುವ ಸ್ತರದ ಕೆಳಗೆ 10-15 ಮೈಕ್ರಾನ್ ನ ಆಳದ ತನಕ ಚಿತ್ರ ಕ್ರ. 8 ಮತ್ತು 9 ತೋರಿಸಿದಂತೆ ಮೈಕ್ರೋಸ್ಟಕ್ಚರ್ ತಯಾರಾಗುತ್ತದೆ.
ಕೋಬಾಲ್ಟ್ ಲೀಚಿಂಗ್ ಎಂದರೆ ಸಿಮೆಂಟೆಡ್ ಕಾರ್ಬೈಡ್ ಸರ್ಫೇಸ್ ನ ಹತ್ತಿರ ಇರುವ ಕೋಬಾಲ್ಟ್ ಬೈಂಡರ್ ನ ಸ್ತರವು ಹೊರಟು ಹೋಗುವುದು ಅಥವಾ ಅದರ ರೂಪಾಂತರವಾಗುವುದು. ಇದರಿಂದಾಗಿ ಟಂಗ್ ಸ್ಟನ್ ಕಾರ್ಬೈಡ್ ಗ್ರೇನ್ ತೆರೆಯುತ್ತವೆ. ಮೆಟ್ರಿಕ್ಸ್ ನಲ್ಲಿರುವ ಯಾವುದೇ ಬೈಂಡರ್ ಮೂಲಕ ಹಿಡಿಯಲಾಗುವುದಿಲ್ಲ. (ಚಿತ್ರ ಕ್ರ. 10 ನೋಡಿ)
ಕೊಬಾಲ್ಟ್ ಬೈಂಡರ್ ಹೊರಟು ಹೊಗಿದ್ದರಿಂದ ಕಣ್ಣುಗಳಿಗೆ ಅಥವಾ ಸಾಮಾನ್ಯ ಸೂಕ್ಷ್ಮದರ್ಶಕದಿಂದ ಕಾಣದೇ ಇರುವುದರಿಂದ ಅದು ಗಮನಕ್ಕೆ ಬರುವುದಿಲ್ಲ. ಈ ಸ್ಥಿತಿಯಲ್ಲಿ ಬಹುತಾಂಶ SC ಟೂಲ್ ಗಳಿಗೆ ಪಿವಿಡಿಯ ಲೇಪನವಿರುತ್ತದೆ. ಪಿವಿಡಿ ಕೋಟಿಂಗ್ (ಹಳದಿ ಬಣ್ಣ) ಮಾಡಿದ ನಂತರ ಈ ಕೋಬಾಲ್ಟ್ ಲೀಚ್ ಆಗಿರುವ ಟೂಲ್ ಗಳ ಸ್ಥಿತಿಯು ಏನಾಗುತ್ತದೆ ಎಂಬುದನ್ನು ಚಿತ್ರ ಕ್ರ. 10 ರಲ್ಲಿ ತೋರಿಸಲಾಗಿದೆ.
ಮೈಕ್ರೋ-ಫೈನ್, ಅಲ್ಟ್ರಾಫೈನ್ ಗ್ರೇನ್ (<1µ) ಕಾರ್ಬೈಡ್ ರಾಡ್ ನ CFG ಯ ಕುರಿತು ಹೆಚ್ಚು ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಅದರಲ್ಲಿರುವ ಸವೆತದ ಪ್ರತಿಕಾರ ಶಕ್ತಿಯಿಂದಾಗಿ ಬಹಳಷ್ಟು ಸಲ ಯಂತ್ರಣೆಯ ಕೆಲಸಗಳಲ್ಲಿ ಅವರಿಗೆ ಕೋರ್ಸ್ ಗ್ರೇನ್ ಕಾರ್ಬೈಡ್ ರಾಡ್ ಗಿಂತ (1-3µ) ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಕಾರಣ ಕೋಬಾಲ್ಟ್ ಲೀಚ್ ನ ಸ್ತರಕ್ಕೆ ಅಲ್ಟ್ರಾಫೈನ್ ಗ್ರೇನ್ ಸೈಜ್ ನ ರಾಡ್ ನಂತಹ ಆಕಾರವು ಇರುವುದು ಸಾಧ್ಯ. ಕೋರ್ಸ್ ಗ್ರೇನ್ ನ ರಾಡ್ ಗಿಂತ ಅದರ ಫ್ಲೇಕಿಂಗ್ (ಚಿತ್ರ ಕ್ರ. 11) ಹೆಚ್ಚು ಸಹಜವಾಗಿ ಆಗುತ್ತದೆ. ದೊಡ್ಡ ಗ್ರೇನ್ ಸೈಜ್ ನಿಂದಾಗಿ ಕೋರ್ಸ್ ಗ್ರೇನ್ ಕೋಬಾಲ್ಟ್ ಬೈಂಡರ್ ನಲ್ಲಿ ಆಳವಾಗಿ ಎಂಬೆಡ್ ಆಗಬಹುದಾಗಿವೆ.
CFG ಬಳಸಿ ಕಾರ್ಬೈಡ್ ರಾಡ್ ನ ಗ್ರೈಂಡಿಂಗ್ ಮಾಡುವುದು ತುಂಬಾ ಕಠಿಣವಾಗಿದೆ ಮತ್ತು SC ರಾಡ್ ನಲ್ಲಿಯೂ ಯಾವುದೇ ತೊಂದರೆ ಇಲ್ಲದೇ CFG ಹೇಗೆ ಅಳವಡಿಸಬಹುದು, ಎಂಬುದನ್ನು ಗಮನಿಸುವುದೂ ಅತ್ಯಾವಶ್ಯಕವಾಗಿದೆ, ಎಂಬುದು ಸ್ಪಷ್ಟವಾಯಿತು.
CFG ಯಲ್ಲಿ ಕೋಬಾಲ್ಟ್ ಲೀಚಿಂಗ್ ನಲ್ಲಿ ಪರಿಣಾಮವನ್ನು ಬೀರುವ ಘಟಕಗಳು
1. SC ಟೂಲ್ ನ ಸರ್ಫೇಸ್ ನಲ್ಲಿ ಕೋಬಾಲ್ಟ್ ಬೈಂಡರ್ ನ ಪ್ರಮಾಣವನ್ನು ಶುಚಿತ್ವದ ಪ್ರಕ್ರಿಯೆಯಿಂದ ಕಡಿಮೆ ಮಾಡುವುದು ಸಾಧ್ಯ. ಇದಕ್ಕೆ ಕಾರಣವೆಂದರೆ, ನೀರು ಹಾಗೆಯೇ ಎಸಿಡ್ ಮತ್ತು ಕ್ಷಾರದಿಂದ ಕೂಡಿರುವ ಡಿಟರ್ಜಂಟ್ ಗಳೊಂದಿಗೆ ಆಗುವ ರಾಸಾಯನಿಕ ಪ್ರಕ್ರಿಯೆ.
2. ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ಕೂಲಂಟ್ ಮೂಲಕ SC ರಾಡ್ ನಲ್ಲಾಗುವ ರಾಸಾಯನಿಕ ಪ್ರಕ್ರಿಯೆಯ ಪರಿಣಾಮವು ಕೋಬಾಲ್ಟ್ ಬೈಂಡರ್ ನಲ್ಲಾಗುತ್ತದೆ. ಒಂದು ವೇಳೆ ಗ್ರೈಂಡಿಂಗ್ ವೀಲ್ ಬಳಸದಿದ್ದಲ್ಲಿ, ಗ್ರೈಂಡಿಂಗ್ ಒತ್ತಡ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ ಮತ್ತು ಅದರಿಂದಾಗಿ ಉಷ್ಣಾಂಶವು 5 ರಿಂದ 10 ಡಿಗ್ರಿಗಳಷ್ಟು ಹೆಚ್ಚಿಸುವ ಉಚ್ಚಮಟ್ಟದ ಔಷ್ಣಿಕ ಭಾರವು ತಯಾರಾಗುತ್ತದೆ. ಕೋಬಾಲ್ಟ್ ಬೈಂಡರ್ ನಲ್ಲಿ ಇದರ ಪ್ರಭಾವವು ಬೀರುತ್ತದೆ. ಅದು ಕೂಲಂಟ್ ನಲ್ಲಿ ಹೆಚ್ಚು Wc ಗ್ರೇನ್ಸ್ ಗಳನ್ನು ಬಿಡುತ್ತದೆ. ಇದರಿಂದಾಗಿ ಕೂಲಂಟ್ ನ CFG ಯಲ್ಲಿ ಡೈಮಂಡ್ ವೀಲ್ ಪರಿಣಾಮಕಾರಿಯಾಗಿ ತಂಪಾಗಿರಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದರಿಂದಾಗಿ ಗ್ರೈಂಡಿಂಗ್ ಮಾಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ.
3. ಡೈಮಂಡ್ ವೀಲ್ ನ ಆಯ್ಕೆಯು ಕಾರ್ಯಸಾಮರ್ಥ್ಯವಿರುವ CFG ಯಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಲೇಖನದಲ್ಲಿ ಈ ಹಿಂದೆ ಉಲ್ಲೇಖಿಸಿದಂತೆ, ವೀಲ್ ನ ರಚನೆಯು ಟೊಳ್ಳಾಗಿರಬೇಕು. ಕೂಲಂಟ್ ಒಳಗೆ ಹೋಗಲು ಮತ್ತು ಚಿಪ್ ಹೊರಗೆ ತೆಗೆಯಲು ಅದರ ಪೊರೋಸಿಟಿ ಉಟ್ಟಗುಣಮಟ್ಟದ್ದಾಗಿರಬೇಕು. ಕಾರ್ಬೈಡ್ ನ ಶ್ರೇಣಿಗೆ ಅನುಸಾರವಾಗಿ (ಮೆತ್ತಗೆ ಅಥವಾ ಕಠಿಣ) ಡೈಮಂಡ್ ವೀಲ್ ಗ್ರೀಡ್ ಸೈಜ್ (D54 ಅಥವಾ D64) ಆಯ್ಕೆ ಮಾಡಲ್ಪಡುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಒತ್ತಡ ಮತ್ತು ಉಷ್ಣಾಂಶವು ಕಡಿಮೆಯಾಗುತ್ತದೆ. ಆದ್ದರಿಂದ ಇದರಲ್ಲಿ ಕೋಬಾಲ್ಟ್ ಲೀಚಿಂಗ್ ನ ಸಾಧ್ಯತೆಯು ಕಡಿಮೆಯಾಗುತ್ತದೆ.
SC ಟೂಲ್ ಗಳ CFG ಗೋಸ್ಕರ ಬಳಸಲಾಗುವ ಡೈಮಂಡ್ ವೀಲ್ ಸಾಮಾನ್ಯವಾಗಿ ಪ್ರೊಫೈಲ್ ವೀಲ್ ಗಳಾಗಿರುತ್ತವೆ. 5 ಅಕ್ಷೀಯ ಸಿ.ಎನ್.ಸಿ. ಮಶಿನ್ ನಲ್ಲಿ ಈ ವೀಲ್ ಗಳನ್ನು ಪ್ರೊಫೈಲ್ ಡ್ರೆಸಿಂಗ್ ಮಾಡುವುದು ಅಷ್ಟೇನು ಸುಲಭ ಅಥವಾ ಲಾಭಕಾರಿಯಾಗಿರುವುದಿಲ್ಲ. ಆದ್ದರಿಂದ ಬಹುತಾಂಶ ಟೂಲ್ ಉತ್ಪಾದಕರಲ್ಲಿ ವಿಭಿನ್ನವಾದ ಸಿ.ಎನ್.ಸಿ.ಯ ಡ್ರೆಸಿಂಗ್ ನ ವ್ಯವಸ್ಥೆಯು ಇರುತ್ತದೆ. ಇದರಿಂದಾಗಿ ವೀಲ್ ನಲ್ಲಿ ಪ್ರೊಫೈಲ್ ನಲ್ಲಿ ಡ್ರೆಸಿಂಗ್ ಆಗಬಲ್ಲದು. ತುಂಬಾ ಕಡೆಗಳಲ್ಲಿ ಸಾಮಾನ್ಯವಾಗಿ ವೀಲ್ ಪೇಕ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಒಂದು ವೀಲ್-ಸ್ಪಿಂಡಲ್ ಅಸೆಂಬ್ಲಿ ಇರುತ್ತದೆ. ಇದು ಗ್ರೈಂಡಿಂಗ್ ಮಶಿನ್ ನಲ್ಲಿ ಹಿಡಿಯಲು ಇರುವ ಇಂಟರ್ ಫೇಸ್ ನೊಂದಿಗೆ ಸಮಾನವಾದ ಇಂಟರ್ ಫೇಸ್ ಇರುವ ಡ್ರೆಸಿಂಗ್ ವ್ಯವಸ್ಥೆಯಂತೆ ಇರುತ್ತದೆ. ಈ ರೀತಿ ವ್ಯವಸ್ಥೆ ಇರುವುದರಿಂದ ನಿರ್ದೋಷತ್ವ ಮತ್ತು ಸಂದರ್ಭವನ್ನು ಸೂಕ್ತವಾಗಿ ಕಾಪಾಡಲಾಗುತ್ತದೆ.
ಕೋಬಾಲ್ಟ್ ಲೀಚಿಂಗ್ ತಡೆಯಲು ಅನೇಕ ವಿಧದ ದಾರಿಗಳಿವೆ. ಟೂಲ್ ನ ಸರ್ಫೇಸ್ ನಲ್ಲಿ ಕೋಬಾಲ್ಟ್ ಕಡಿಮೆಯಾಗಿರುವ ಸ್ತರವನ್ನು ತೆಗೆಯಲು ಒಂದು ಚಿಕ್ಕ ಸಾಂಪ್ರದಾಯಿಕವಾದ ಫಿನಿಶಿಂಗ್ ಗ್ರೈಂಡ್ ಕಟ್ ಮಾಡಬೇಕಾಗುತ್ತದೆ. ಇದು ತುಂಬಾ ಸುಲಭವಾದ ದಾರಿಯಾಗಿದೆ. ತಯಾರಾಗಿರುವ ಟೂಲ್ ಗಳಿಗೆ ಲೇಪನ ಮಾಡಲು ಕಳುಹಿಸುವ ಮುಂಚೆ ಸಂಪೂರ್ಣವಾಗಿ ಶುಚಿಯಾಗಿರಿಸಬೇಕು ಮತ್ತು ಅವುಗಳನ್ನು ಸರಿಯಾಗಿ ಡ್ರೈ (ಕೋಬಾಲ್ಟ್ ಲೀಚಿಂಗ್ ರಹಿತವಾಗಿರಿಸುವುದು) ಮಾಡುವುದು ಅತ್ಯಾವಶ್ಯಕವಾಗಿದೆ.
4. ಕೂಲಂಟ್ ನ ಮಹತ್ವ : ವೀಲ್ ನ ಸಂಪರ್ಕದಲ್ಲಿರುವ ದೀರ್ಘ ಸುತ್ತಿನಿಂದಾಗಿ (ಚಿತ್ರ ಕ್ರ. 12) ಪ್ರಕ್ರಿಯೆಯಲ್ಲಿ ಹೆಚ್ಚು ಉಷ್ಣಾಂಶವು ತಯಾರಾಗುತ್ತದೆ. ಕ್ರೀಪ್-ಫೀಡ್ ಗ್ರೈಂಡಿಂಗ್ ಪ್ರಭಾವಶಾಲಿಯಾಗಿ ಮಾಡುವಲ್ಲಿ ಕೂಲಂಟ್ ಇದು ಹೆಚ್ಚು ಮಹತ್ವದ್ದಾಗಿದೆ. ಇನ್ನಿತರ ಮಶಿನಿಂಗ್ ಪ್ರಕ್ರಿಯೆಗಳಲ್ಲಿ ನೋಜಲ್ ಮೂಲಕ ಕೂಲಂಟ್ ನ ಸಿಂಪಡಿಸುವಿಕೆಯನ್ನು ತುಂಡಿನೆಡೆಗೆ ಮಾಡುವುದು ಸೂಕ್ತವಾಗಿದೆ. ಆದರೆ ಕ್ರೀಪ್-ಡೀಪ್ ನಲ್ಲಿ ಕೂಲಂಟ್ ನ ಬಳಕೆಯನ್ನು ಹೆಚ್ಚು ಪ್ರಭಾವಶಾಲಿಯಾಗಿ ಮಾಡುವುದು ಅತ್ಯಾವಶ್ಯಕವಾಗಿದೆ. SC ಟೂಲ್ ಗಳ ಕ್ರೀಪ್-ಫೀಡ್ ಗ್ರೈಂಡಿಂಗ್ ನಲ್ಲಿ ಸಾಮಾನ್ಯವಾಗಿ ನೀರು ಸೇರಿಸದೇ ಇರುವ ಆಯಿಲ್ ಕೂಲಂಟ್ ಗಳಿರುತ್ತವೆ.
CFG ಯಲ್ಲಿ ಕೂಲಂಟ್ ನ ಬಳಕೆಯು
ಈ ಕೆಳಗಿನಂತಿದೆ.
• ಕೂಲಂಟ್ ನ ವಿತರಣೆಯ ವೇಗವು ವೀಲ್ ನ ಸರ್ಫೇಸ್ ನಲ್ಲಿರುವ ವೇಗದೊಂದಿಗೆ ಹೊಂದಿಕೊಳ್ಳಬೇಕು. ಕೂಲಂಟ್ ನ ಪ್ರವಾಹದ ವೇಗ ಮತ್ತು ವೀಲ್ ನ ಯಾವುದೇ ಬಿಂದುವಿನ ತಿರುಗುವ ವೇಗದೊಂದಿಗೆ ಹೊಂದಾಣಿಸಿಕೊಂಡಿದ್ದರಿಂದ ವೀಲ್ ನಲ್ಲಿ ಹೆಚ್ಚು ಕೂಲಂಟ್ ಬೀಳುತ್ತದೆ. ಈ ಪ್ರಕ್ರಿಯೆಯು ಅದರ ವೇಗವನ್ನು ಅನುಸರಿಸುತ್ತದೆ.
• ಗ್ರೈಂಡಿಂಗ್ ವೀಲ್ ನ ಪ್ರೊಫೈಲ್ ನೊಂದಿಗೆ ಹೊಂದಾಣಿಕೆಯಾಗುವ ಪ್ರೊಫೈಲ್ ನಲ್ಲಿ ಕೂಲಂಟ್ ಡಿಲಿವರ್ ನೋಜಲ್ ಅಳವಡಿಸಲಾಗಿರುತ್ತದೆ.
ಉದಾಹರಣೆ 1
SC ಟೂಲ್ ನಲ್ಲಿರುವ ಫ್ಲ್ಯೂಟ್ ತಯಾರಿಸಲು ಡೈಮಂಡ್ ವೀಲ್ ನ ಬಳಕೆ (ಸಂದರ್ಭ – ಹೆಸರಾಂತ SC ಟೂಲ್ ಉತ್ಪಾದಕರು)
ಫ್ಲ್ಯೂಟಿಂಗ್ ಮಾಡಲು ಡೈಮಂಡ್ ವೀಲ್ ನಲ್ಲಿ (D54) 0.2 ಮಿ.ಮೀ. ಆಳವಿರುವ ತುಂಡು ತಯಾರಿಸಿ ಪ್ರೊಫೈಲ್ ಗೆ ಡ್ರೆಸ್ ಮಾಡುವುದು ಆವಶ್ಯಕವಾಗಿದೆ. ಇಂತಹ ವೀಲ್ ಗಳಿಂದ 60-80 SC ಟೂಲ್ ಗಳ (ಫ್ಲ್ಯೂಟ್ ನ ಉದ್ದ 5.5 ಮೀಟರ್) ಗ್ರೈಂಡಿಂಗ್ ಮಾಡುತ್ತದೆ. ಇದರ ನಂತರ ಪ್ರೊಫೈಲ್ ವೀಲ್ ಸಿ.ಎನ್.ಸಿ. ಪ್ರೊಫೈಲ್ ಡ್ರೆಸರ್ ನಲ್ಲಿ 0.2 ಮಿ.ಮೀ. ಆಳವಿರುವ ತುಂಡು ಮಾಡಿ ಮತ್ತೆ ಡ್ರೆಸ್ ಮಾಡಲಾಗುತ್ತದೆ. ಈ ರೀತಿಯಲ್ಲಿ ಕನಿಷ್ಠ 25-30 ಸಲ ವೀಲ್ ಡ್ರೆಸಿಂಗ್ ಮಾಡಬಹುದಾಗಿದೆ. ಈ ರೀತಿಯಲ್ಲಿ ಒಂದು ವೀಲ್ ಸುಮಾರು 100-125 ಮೀಟರ್ ಫ್ಲ್ಯೂಟ್ ಗ್ರೈಂಡಿಂಗ್ ಬಾಳಿಕೆಯನ್ನು ನೀಡುತ್ತದೆ.
ಡೈಮಂಡ್ ವೀಲ್ ನ ಆಯುಷ್ಯವು ಸಾಮಾನ್ಯವಾಗಿ G ಗುಣಾಕಾರದ ಮೂಲಕ ಗುರುತಿಸಲಾಗುತ್ತದೆ. G ಗುಣಾಕಾರವು ಗ್ರೈಂಡಿಂಗ್ ನ ಚಟುವಟಿಕೆಯ ಸ್ಟ್ಯಾಂಡರ್ಡ್ ಆಗಿರುತ್ತದೆ. ಹೊರಗೆ ತೆಗೆದಿರುವ ಕಾರ್ಬೈಡ್ ನ ಗಾತ್ರವನ್ನು ಗುಣಿಸಿ ಈ ಆಪರೇಶನ್ ನಲ್ಲಿ ಗ್ರೈಂಡಿಂಗ್ ವೀಲ್ ನ ಸವೆತವಾಗಿರುವ ಭಾಗದ ಗಾತ್ರ, ಎಂಬುದಾಗಿ ವ್ಯಾಖ್ಯೆಯನ್ನು ಮಾಡಲಾಗುತ್ತದೆ.
ಉದಾಹರಣೆ 2
ಕ್ರೀಪ್-ಫೀಡ್ ಗ್ರೈಂಡಿಂಗ್ ನ ಉದಾಹರಣೆ
(ಸಂದರ್ಭ- ಹೆಸರಾಂತ SC ಟೂಲ್ ಉತ್ಪಾದಕರು)
SC ಡ್ರಿಲ್ ನ ಫ್ಲ್ಯೂಟ್ ನ ಯಂತ್ರಣೆಯಲ್ಲಿ ಒಂದು ಕ್ಲಿಷ್ಟಕರವಾದ ಫ್ಲ್ಯೂಟ್ ಪ್ರೊಫೈಲ್ ಇದ್ದು, ಬೃಹತ್ ಪ್ರಮಾಣದಲ್ಲಿ ಮಟೀರಿಯಲ್ ಹೊರ ತೆಗೆಯುವ ಆವಶ್ಯಕತೆ ಇರುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಗ್ರೈಂಡಿಂಗ್ ಮಾಡಿದಲ್ಲಿ 3 ಮಿ.ಮೀ. ಆಳದ ತನಕ ತಲುಪಲು 0.1 ಮಿ.ಮೀ.ನಷ್ಟು ಅನೇಕ ಗ್ರೈಂಡಿಂಗ್ ಪಾಸ್ ಗಳನ್ನು (25-30) ಮಾಡಬೇಕಾಗುತ್ತದೆ. ಕ್ರೀಪ್-ಫೀಡ್ ಗ್ರೈಂಡಿಂಗ್ ನ ಪ್ರಕ್ರಿಯೆಯನ್ನು ಬಳಸಿ 40-60 ಮಿ.ಮೀ./ನಿಮಿಷ ಯಂತ್ರಣೆಯ ವೇಗದಿಂದ ಮತ್ತು 20-22 ಮೀ./ಸೆಕಂಡು Vc ಯಲ್ಲಿ ಅದು ಕೇವಲ ಒಂದೇ ಪಾಸ್ ನಲ್ಲಿ ಅಥವಾ ಗರಿಷ್ಠ ಎರಡು ಪಾಸ್ ಗಳಲ್ಲಿ 3 ಮಿ.ಮೀ. ಆಳದಷ್ಟು ತಲುಪುತ್ತದೆ.
<="" div="" style="float: left; margin: -25px 20px 20px 0px;">
9359104060
ರವಿ ನಾಯಕ್ ಇವರಿಗೆ ಟೂಲಿಂಗ್ ಕ್ಷೇತ್ರದಲ್ಲಿ 40 ವರ್ಷಗಳಿಗಿಂತ ಹೆಚ್ಚು ಅನುಭವವಿದೆ. ಅವರು ಟೂಲಿಂಗ್ ಮತ್ತು ಮಶಿನಿಂಗ್ ಆಪರೇಶನ್ ಈ ವಿಷಯದಲ್ಲಿ ಸಲಹೆಗಾರರಾಗಿದ್ದಾರೆ.
="">