BS-6 : ಸವಾಲು ಮತ್ತು ಅವಕಾಶ

@@NEWS_SUBHEADLINE_BLOCK@@

Udyam Prakashan Kannad    22-Jun-2020
Total Views |


ಭಾರತ ದೇಶವು ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ವಾಹನಗಳನ್ನು ಬಳಸುವಲ್ಲಿಯೂ ನಮ್ಮ ದೇಶವು ತುಂಬಾ ಪ್ರಗತಿಯನ್ನು ಸಾಧಿಸಿದೆ. ಈ ಎರಡೂ ಅಂಶಗಳಿಂದಾಗಿ ಪರಿಸರದ ಸಮತೋಲನೆಯನ್ನು ಕಾಪಾಡುವುದೂ ನಮ್ಮೆದುರಿಗಿರುವ ಬಹು ದೊಡ್ಡ ಸವಾಲಾಗಿದೆ. ಅಲ್ಲದೇ ಇದೊಂದು ಜವಾಬ್ದಾರಿಯೂ ಆಗಿದೆ. ಹೊಸ ಹಣಕಾಸು ವರ್ಷದಲ್ಲಿ BS-6 ಎಮಿಶನ್ ಸ್ಟ್ಯಾಂಡರ್ಡ್ ಗಳು ವಾಹನೋದ್ಯಮಕ್ಕೆ ಸಂಬಂಧಪಟ್ಟ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿರುವ ಅಂಶವಾಗಿದೆ. ಇದರ ಕುರಿತಾದ ಕನಿಷ್ಠ ಪ್ರಾಥಮಿಕ ರೂಪದ ತಿಳುವಳಿಕೆಯು ಉದ್ಯಮವಿಶ್ವದಲ್ಲಿರುವ ಎಲ್ಲಿರಿಗೂ ತಿಳಿದಿರುವುದು ಅತ್ಯಾವಶ್ಯಕವಾಗಿದೆ. ಈ ವಿಷಯದಲ್ಲಿ ಹಲವಾರು ಅಂಶಗಳ ಕುರಿತು ವಿಚಾರ ಮಾಡೋಣ.

3_3  H x W: 0 x 
 
1. ವಿವಿಧ ವರದಿಗಳಿಗೆ ಅನುಸಾರವಾಗಿ ಜಗತ್ತಿನೆಲ್ಲೆಡೆ ಎಲ್ಲಕ್ಕಿಂತಲೂ ಹೆಚ್ಚು ಪರಿಸರ ಮಾಲಿನ್ಯ ಇರುವಂತಹ ಪಟ್ಟಣಗಳು ಭಾರತದಲ್ಲಿವೆ.
2. ಘೋಷಿಸಲಾಗಿರುವ ಅಂಕೆ-ಸಂಖ್ಯೆಗಳಿಗೆ ಅನುಸಾರವಾಗಿ, ದೆಹಲಿಯಲ್ಲಿರುವ ಪರಿಸರ ಮಾಲಿನ್ಯವು ಮತ್ತು ಅದರ ಘಟಕಗಳು ಚಿಂತೆಯನ್ನು ಮೂಡಿಸುತ್ತಿವೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಸಿರುವ ಅಂಕೆ-ಸಂಖ್ಯೆಗಳಿಗಿಂತ ಅನೇಕ ಪಟ್ಟುಗಳು ಹೆಚ್ಚು ಇರುತ್ತದೆ.
3. 2018 ರ ಒಂದು ನಿರೀಕ್ಷಣೆಯ ವರದಿಯ ಪ್ರಕಾರ, ಹೊರಗಿನ ಪರಿಸರ ಮಾಲಿನ್ಯದಿಂದಾಗಿ ಉದ್ಭವಿಸುವ ರೋಗಗಳಿಂದಾಗಿ 2017 ಈ ಒಂದೇ ವರ್ಷದಲ್ಲಿ ಭಾರತದಲ್ಲಿ 6,70,000 ಜನರು ಮೃತಪಟ್ಟಿದ್ದಾರೆ. ತಂಬಾಕು ಮತ್ತು ಅದಕ್ಕೆ ಸಮಾನವಾಗಿರುವ ಪದಾರ್ಥಗಳ ಸೇವನೆಯಿಂದ ಮೃತ ಪಡುವವರ ಸಂಖ್ಯೆಯು ಪರಿಸರ ಮಾಲಿನ್ಯದಿಂದ ಮೃತ ಪಡುವವರ ಸಂಖ್ಯೆಗಿಂತ ಸ್ವಲ್ಪವೇ ಕಡಿಮೆ ಇದೆ. ಈ ಅಂಕೆ-ಸಂಖ್ಯೆಗಳು ತುಂಬಾ ಹತ್ತಿರವಿವೆ.
4. ಮೇಲಿನ ನಿರೀಕ್ಷಣೆಯಂತೆ, ಪರಿಸರ ಮಾಲಿನ್ಯದ ಸಮಸ್ಯೆಯಿಂದಾಗಿ ಭಾರತೀಯ ಸರಾಸರಿ ಆಯುಷ್ಯ 1.7 ವರ್ಷಗಳಷ್ಟು ಕಡಿಮೆ ಆಗಿದೆ.
5. ಪರಿಸರ ಮಾಲಿನ್ಯದ ಕುರಿತು ರೋಗ ಮತ್ತು ಅದರ ಪರಿಣಾಮಗಳಿಂದಾಗಿ ಪ್ರತಿ ವರ್ಷವೂ ಸಂಪೂರ್ಣ ದೇಶದಲ್ಲಿ ಒಟ್ಟು ದೇಸಿ ಉತ್ಪಾದನೆಯ (ಜಿ.ಡಿ.ಪಿ.) ಮೂರು ಶೇಕಡಾದಷ್ಟು ಖರ್ಚು ಆಗುತ್ತದೆ.
6. ಹವಾಮಾನದ ಮಾಲಿನ್ಯಕ್ಕೆ ಅನೇಕ ಘಟಕಗಳು ಕಾರಣೀಭೂತವಾಗಿವೆ. ಅದರಲ್ಲಿ ಒಂದು ಘಟಕವೆಂದರೆ ವಾಹನಗಳಿಂದ ಉಂಟಾಗುವ ಹವಾಮಾನ ಮಾಲಿನ್ಯ.
 
ಮಾಲಿನ್ಯದ ಕುರಿತು ಗಂಭೀರವಾಗಿ ವಿಚಾರ ಮಾಡುವುದು ತುಂಬಾ ಮಹತ್ವದ್ದಾಗಿದೆ. ಇದನ್ನು ತಿಳಿದುಕೊಂಡರೂ ಸಾಕು. ಎಲ್ಲ ರೀತಿಯ ಇಂಜಿನ್ ಗಳಿಂದಾಗಿ ಉಂಟಾಗುವ ಹವಾಮಾನದ ಮಾಲಿನ್ಯವನ್ನು ನಿಯಂತ್ರಿಸಲು ಭಾರತವು 2000 ಇಸವಿಯಿಂದಲೇ ಯುರೋಪಿಯನ್ ಸಮೂಹಗಳ ರೀತಿಯಲ್ಲಿಯೇ ಸ್ವಂತದ್ದೇ ಆದ ಮಾಲಿನ್ಯಕ್ಕೆ ಸಂಬಂಧಪಟ್ಟ ಪ್ರಮಾಣಿತಗಳನ್ನು (ಸ್ಟ್ಯಾಂಡರ್ಡ್) ತಯಾರಿಸಿದೆ. ಈ ಪ್ರಮಾಣಿತಗಳ ಮೂಲಕ (ಸ್ಟ್ಯಾಂಡರ್ಡ್) ಕೈಗಾರಿಕೋದ್ಯಮದ ವಿಶ್ವದಲ್ಲಿ ಅನೇಕ ಹಂತಗಳಲ್ಲಿ ಉತ್ಪಾದನೆಗಳು ಅಭಿವೃದ್ಧಿಯಾಗಬೇಕು, ಎಂಬ ಪ್ರಯತ್ನಗಳನ್ನು ಮಾಡಲಾಗಿದೆ.

3_2  H x W: 0 x 
 
ಇದೇ ಕಾರಣಕ್ಕೋಸ್ಕರ 2002 ರಲ್ಲಿ ನೇಮಕಾತಿ ಮಾಡಿರುವ ಮಾಶೇಲಕರ್ ಸಮಿತಿಯು ಆಳವಾದ ಚಿಂತನೆಯನ್ನು ಮಾಡಿ ದೇಶಕ್ಕೋಸ್ಕರ ಕೆಲವು ಮಾಗ್ರಸೂಚಿ ತತ್ವಗಳನ್ನು ಸೂಚಿಸಿದರು ಮತ್ತು ಭವಿಷ್ಯತ್ಕಾಲಕ್ಕೋಸ್ಕರ ಒಂದು ಯೋಗ್ಯವಾದ ರೂಪರೇಖೆಯನ್ನು ತಯಾರಿಸಿದರು. ಇದಕ್ಕೆ ಅನುಸಾರವಾಗಿ ದೇಶದಲ್ಲಿ ವಿವಿಧ ಹಂತಗಳಲ್ಲಿ ಎಮಿಶನ್ಸ್ ಗೆ (ಹೊರಸೂಸುವಿಕೆಗೆ) ಪ್ರಮಾಣೀಕರವನ್ನು ಅಭಿವೃದ್ಧಿ ಪಡಿಸಿದರು.
 
2003 ರಲ್ಲಿ ನ್ಯಾಶನಲ್ ವೆಹಿಕಲ್ ಫ್ಯುಯೆಲ್ ಪಾಲಿಸಿಯನ್ನು (ರಾಷ್ಟ್ರೀಯ ವಾಹನ ಇಂಧನ ನೀತಿ) ಪ್ರಕಟಿಸಲಾಯಿತು. ಇದರಲ್ಲಿ ವಾಹನಗಳ ಇಂಧನವು ಹೇಗೆ ಇರಬೇಕು, ಹಳೆಯ ವಾಹನಗಳಿಂದಾಗಿ ಉಂಟಾಗುವ ಪರಿಸರ ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಬೇಕು, ಆರೋಗ್ಯದ ಕುರಿತಾದ ಮುತುವರ್ಜಿ, ಮಾಲಿನ್ಯದ ನಿಯಂತ್ರಣೆಯ ಅಭ್ಯಾಸ ಮತ್ತು ಅಭಿವೃದ್ಧಿ ಇಂತಹ ಅನೇಕ ನಿರ್ದೇಶನ ತತ್ವಗಳನ್ನು ಜಾರಿಗೊಳಿಸಲಾಯಿತು. ಮುಂದಿನ ಕಾಲಾವಧಿಯಲ್ಲಿ ದೇಶದಲ್ಲಾದ ರಾಜಕೀಯ ಮುಖಂಡತ್ವ, ಪರಿಶೀಲನೆಗಳನ್ನು ಮಾಡುವ ಅನೇಕ ಸಂಸ್ಥೆಗಳು, ಕೈಗಾರಿಕೋದ್ಯಮಗಳು, ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವ ಅನೇಕ ಸಂಸ್ಥೆಗಳು, ಸಾಮಾನ್ಯ ನಾಗರಿಕರು ಮುಂತಾದವರ ಸಕ್ರಿಯ ಸಹಭಾಗಿತ್ವದಿಂದ ನಮ್ಮ ದೇಶದಲ್ಲಿ ನಾವು ಅನೇಕ ಮಹತ್ವದ ಹಂತಗಳನ್ನು ದಾಟಿ ಮುಂದುವರಿದಿದ್ದೇವೆ.
 
ಆದರೂ ಕೂಡಾ ಈ ಸುಧಾರಣೆಗಳ ವೇಗ ಮತ್ತು ಮಾಲಿನ್ಯದಲ್ಲಾಗುವ ಹೆಚ್ಚಳದ ವೇಗ ಇದರ ಪ್ರಮಾಣವು ಮಾತ್ರ ಮುಂದುವರಿಯುತ್ತಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪರಿಸ್ಥಿತಿಯು ಚಿಂತೆಯನ್ನುಂಟು ಮಾಡುತ್ತಿತ್ತು. ಇದರಿಂದಾಗಿ ಪರಿಸ್ಥಿತಿಯನ್ನು ಗಾಂಭೀರ್ಯವನ್ನು ಗಮನಿಸಿ ವಿಚಾರ ಮಾಡಿ BS4 ನಂತರ BS5 ಎಂಬ ಮಾಲಿನ್ಯದ ಕುರಿತಾದ ಪ್ರಮಾಣಿತಗಳನ್ನು (ಸ್ಟ್ಯಾಂಡರ್ಡ್ಸ್) ಅನುಷ್ಠಾನಗೊಳಿಸುವ ಬದಲಾಗಿ BS6 ಈ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಮಾಣಿತಗಳನ್ನು ಜಾರಿಗೊಳಿಸುವ ಮಹತ್ವದ ತೀರ್ಮಾನವನ್ನು ಮಾಡಲಾಯಿತು. ಮುಂದಿನ ನಾಲ್ಕು ವರ್ಷಗಳಲ್ಲಿ ಅದಕ್ಕೆ ಅನುಸಾರವಾಗಿ ವಾಹನಗಳು ಮತ್ತು ಇಂಧನ ನಿರ್ಮಿತಿಯಲ್ಲಿರುವ ಸವಾಲುಗಳು ಎಲ್ಲ ಕೈಗಾರಿಕೋದ್ಯಮಿಗಳಿಗೆ ಎದುರಿಸುವ ಪರಿಸ್ಥಿತಿಯು ಉಂಟಾಯಿತು. ಅವುಗಳನ್ನು ಅನುಷ್ಠಾನಕ್ಕೆ ತಂದಿರುವುದು ಈಗ ಗಮನಕ್ಕೆ ಬರುತ್ತಿದೆ. ಇದಕ್ಕೆ ಸೂಕ್ತವಾದ ಉದಾಹರಣೆಯನ್ನು ಡಿಸೆಲ್ ವಾಹನಗಳ ಕುರಿತಾದ ಕೆಲವು ಸ್ಟ್ಯಾಂಡರ್ಡ್ ಗಳ ಮೂಲಕ (ಪ್ರಮಾಣಿತ) ನಾವು ಗಮನಿಸಬಹುದು.

3_1  H x W: 0 x 
 
ಮಾಲಿನ್ಯದ ನಿಯಂತ್ರಣೆಯ ಅನುಷ್ಠಾನಕ್ಕೆ ಇಂಧನದ ಗುಣಮಟ್ಟದಲ್ಲಿಯೂ ಆಗಾಗ ಸೂಕ್ತವಾದ ಬದಲಾವಣೆಗಳನ್ನು ಮಾಡಲಾಯಿತು. 15 ನವಂಬರ್ 2017 ರಂದು ಪೆಟ್ರೋಲಿಯಮ್ ಸಚಿವಾಲಯವು ಸಾರ್ವಜನಿಕ ತೈಲ ಪೂರೈಕೆಯನ್ನು ಮಾಡುವ ಕಂಪನಿಗಳೊಂದಿಗೆ ವಿಚಾರ ವಿಮರ್ಶೆಯನ್ನು ಮಾಡಿ ದೆಹಲಿ ವಿಭಾಗಗೋಸ್ಕರ ಎಪ್ರಿಲ್ 2018 ರಿಂದ ಅಲ್ಲದೇ ದೇಶದಾದ್ಯಂತ ಎಪ್ರಿಲ್ 2020 ನಿಂದ BS6 ಗ್ರೇಡ್ ನ ಇಂಧನವನ್ನು ಪೂರೈಸುವ ತಯಾರಿಕೆಯನ್ನು ಮಾಡಲಾಯಿತು. (BS6 ಗ್ರೇಡ್ ನ ಡಿಸೆಲ್ ನಲ್ಲಿ ಸಲ್ಫರ್ ನ ಪ್ರಮಾಣವು BS4 ಡಿಸೆಲ್ ಗಿಂತ 80 ಶೇಕಡಾ ಕಡಿಮೆ ಇರುತ್ತದೆ. BS4 ನಲ್ಲಿ 50 mg/kg, BS6 ನಲ್ಲಿ 10mg/kg)
 
ಈ ರೀತಿಯ ಗಮನಾರ್ಹ ಸುಧಾರಣೆಗಳನ್ನು ಸಂಪೂರ್ಣ ದೇಶದಲ್ಲಿರುವ ಎಲ್ಲ ರೀತಿಯ ವಾಹನಗಳಲ್ಲಿ ಮಾಡುವುದು ತುಂಬಾ ಕ್ಲಿಷ್ಟವಾದ ಕೆಲಸವಾಗಿದೆ. ಅದರ ವ್ಯಾಪ್ತಿಯೂ ತುಂಬಾ ದೊಡ್ಡದಾಗಿದೆ. BS4 ಅನುಷ್ಠಾನಕ್ಕೆ ಬರುವ ತನಕ ಅನೇಕ ಬದಲಾವಣೆಗಳು ಇಂಜಿನ್ ಗೆ ಸಂಬಂಧಪಟ್ಟದ್ದಾಗಿದ್ದವು. ಇದರಲ್ಲಿ ಕಾಮನ್ ರೇಲ್ ಫ್ಯುಯೆಲ್ ಇಂಜೆಕ್ಷನ್ ಪ್ರಣಾಳಿಕೆ, ಟರ್ಬೋಚಾರ್ಜಿಂಗ್ (TC), ಆಫ್ಟರ್ ಕೂಲಿಂಗ್, ಎಕ್ಸಾಸ್ಟ್ ಗ್ಯಾಸ್ ರೀಸರ್ಕ್ಯುಲೇಶನ್ (EGR) ಇಂತಹ ಅನೇಕ ವಿಧದ ಸುಧಾರಣೆಗಳು ಒಳಗೊಂಡಿವೆ. ಆದರೆ BS6 ಪ್ರಣಾಳಿಕೆಯಲ್ಲಿ ವಾಹನಗಳಿಂದ ಹೊರಗೆ ಬರುವ ಗಾಳಿಯ ಗುಣಮಟ್ಟದಲ್ಲಿ ಕಠಿಣವಾಗಿರುವ ಮಿತಿಗಳಿವೆ. BS6 ರಲ್ಲಿ ಹೊರ ಬರುವ ಗಾಳಿಯಲ್ಲಿರುವ ಪಾರ್ಟಿಕ್ಯುಲೇಟ್ ಮೇಟರ್ ಮತ್ತು ನೈಟ್ರೋಜನ್ ಆಕ್ಸೈಡ್ ಇಂತಹ ಹಾನಿಕಾರಕವಾದ ಘಟಕಗಳ ಮಿತಿಯು ಸುಮಾರು 90 ಶೇಕಡಾದಷ್ಟು ಕಡಿಮೆಯಾಗಿದೆ. ಇದು ಕೋಷ್ಟಕ ಕ್ರ. 1 ರಿಂದ ಗಮನಕ್ಕೆ ಬರುತ್ತದೆ.
 
ಇದರೊಂದಿಗೆ ಈಗ ಪರೀಕ್ಷಣಾ ಕೇಂದ್ರಗಳಲ್ಲಿ ಪರೀಕ್ಷಣೆಯ ಹೊರತಾಗಿ ವಾಹನಗಳನ್ನು ನೇರವಾಗಿ ರಸ್ತೆಗಳಲ್ಲಿ ಓಡಿಸುವಾಗ ಅದರ ಮಾಲಿನ್ಯದ ಪರೀಕ್ಷಣೆಯನ್ನು ಮಾಡುವುದು ಕಡ್ಡಾಯವಾಗಿದೆ. ಈ ರೀತಿಯ ಉಚ್ಚಮಟ್ಟದ ಮಾಲಿನ್ಯದ ಮಿತಿಯನ್ನು ಸಾಧಿಸಲು ಅಂದರೆ ಇಂಜಿನ್ ನಿಂದ ಹೊಗೆಯು ಹೊರಗೆ ಬರುವ ಮುಂಚೆಯೇ ಅದರ ಪ್ರಕ್ರಿಯೆ ಮಾಡುವುದೂ ಅತ್ಯಾವಶ್ಯಕವಾಗಿದೆ. ಇದಕ್ಕೆ ಆಫ್ಟರ್ ಟ್ರೀಟ್ ಮೆಂಟ್ ಎಂದು ಹೇಳಲಾಗುತ್ತದೆ. ಇದೊಂದು ತುಂಬಾ ಮಹತ್ವದ ಅಂಶವಾಗಿದೆ. ವಿಶೇಷವಾಗಿ ಡಿಸೆಲ್ ಇಂಜಿನ್ ಗೆ ಬೇಕಾಗಿರುವ ಆಫ್ಟರ್ ಟ್ರೀಟ್ ಮೆಂಟ್ ನ ಜಟಿಲತೆಯು ಸ್ವಲ್ಪ ಹೆಚ್ಚಾಗಿರುವುದರಿಂದ, ಡಿಸೆಲ್ ಇಂಜಿನ್ ಗೆ ಸಂಬಂಧಪಟ್ಟ ಎರಡು ಮಹತ್ವದ ಪ್ರಣಾಳಿಕೆಗಳ ಪರಿಚಯವನ್ನು ಮಾಡಿಕೊಳ್ಳೋಣ.
 
1. ಡಿಸೆಲ್ ಪಾರ್ಟಿಕ್ಯುಲೇಟ್ ಫಿಲ್ಟರ್ (ಡಿ.ಪಿ.ಎಫ್.)
ಡಿಸೆಲ್ ಇಂಜಿನ್ ನಿಂದ ಹೊರಗೆ ಬರುವ ಹೊಗೆಯಲ್ಲಿರುವ ಮಸಿಯನ್ನು ಕಡಿಮೆ ಮಾಡಲು ಡಿಸೆಲ್ ಪಾರ್ಟಿಕ್ಯುಲೇಟ್ ಫಿಲ್ಟರ್ (ಡಿ.ಪಿ.ಎಫ್.) ಅಳವಡಿಸುವುದು ಅನಿವಾರ್ಯವಾಗಿದೆ.
 
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಹೊರಗೆ ಬರುವ ಹೊಗೆಯನ್ನು ಫಿಲ್ಟರ್ ಮಾಡಲು (ಸೋಸಲು) ಬಳಸಿರುವ ಡಿ.ಪಿ.ಎಫ್. ಸಿರ್ಯಾಮಿಕ್ ಮಟೀರಿಯಲ್ ನಿಂದ ತಯಾರಿಸಲಾಗಿದೆ. ಇದರಿಂದಾಗಿ ಹೊಗೆಯಲ್ಲಿರುವ ಕಾರ್ಬನ್ ನ ಸೂಕ್ಷ್ಮವಾದ ಕಣಗಳು ಫಿಲ್ಟರ್ ನಲ್ಲಿ ಸಿಲುಕುತ್ತವೆ. ಸಿಲುಕಿರುವ ಮಸಿಯಿಂದಾಗಿ ಹೊರಬರುವ ಒತ್ತಡವು (ಬ್ಯಾಕ್ ಪ್ರೆಶರ್) ಇಂಜಿನ್ ನಲ್ಲಿ ಉಂಟಾಗಬಾರದು, ಎಂಬುದಕ್ಕಾಗಿ ಡಿ.ಪಿ.ಎಫ್.ನಲ್ಲಿ ಸಿಲುಕಿರುವ ಮಸಿಯನ್ನು ನಿಗದಿಸಿರುವ ಕಾಲಾವಧಿಯಲ್ಲಿ ತೆಗೆಯಬೇಕಾಗುತ್ತದೆ. ವಾಹನಗಳು ಸುಮಾರು 50 ನಿಮಿಷಗಳ ಕಾಲಾವಧಿಯಲ್ಲಿ ಯೋಗ್ಯವಾದ ವೇಗದಲ್ಲಿಯೇ ಚಲಿಸುತ್ತಿದ್ದಲ್ಲಿ, ಈ ಕ್ರಿಯೆಯು ಸ್ವಯಂಚಾಲಿತವಾಗಿ ಪೂರ್ಣಗೊಳ್ಳುತ್ತದೆ. ಆದರೆ ಇದು ಯಾವಾಗಲೂ ಆಗಬಹುದು ಎಂದು ಹೇಳಲಾಗುವುದಿಲ್ಲ. ಇದಕ್ಕೋಸ್ಕರ ವಾಹನವು ಆನ್ ಇರುವಾಗ ಇಂಜಿನ್ ಕಂಟ್ರೋಲರ್ ನಿಂದ ಹೆಚ್ಚು ಪ್ರಮಾಣದಲ್ಲಿ ಡಿಸೆಲ್ ಪೂರೈಸಲಾಗುತ್ತದೆ ಮತ್ತು ಅದರಿಂದಾಗಿ ಹೊರಬರುವ ಹೊಗೆಯ ಉಷ್ಣತೆಯೂ ಹೆಚ್ಚುತ್ತದೆ. ಡಿ.ಪಿ.ಎಫ್.ನಲ್ಲಿ ಸಿಲುಕಿರುವ ಮಸಿಯು ಸುಟ್ಟು ಮತ್ತೆ ಕಾರ್ಬನ್ ಡೈಯಾಕ್ಸೈಡ್ ಗೆ ರೂಪಾಂತರಿಸಲ್ಪಟ್ಟು ಅದು ಹೊರಗೆ ತಳ್ಳಲ್ಪಡುತ್ತದೆ.
 
2. ಸಿಲೆಕ್ಟಿವ್ ಕ್ಯಾಟ್ಯಾಲಿಟಿಕ್ ರಿಡಕ್ಷನ್ (ಎಸ್.ಸಿ.ಆರ್.)
ಎಸ್.ಸಿ.ಆರ್. ಇದೊಂದು ರಾಸಾಯನಿಕ ಪ್ರಕ್ರಿಯೆಯಾಗಿದೆ. ಹೊರಗೆ ಬರುವ ಹೊಗೆಯನ್ನು ನೈಟ್ರೋಜನ್ ಆಕ್ಸೈಡ್ ಎಂಬ ಮಾರಕವಾಗಿರುವ ಗಾಳಿಯ ಸಮೂಹದ ನೈಟ್ರೋಜನ್ ಗೆ ರೂಪಾಂತರಿಸಲು ಎಸ್.ಸಿ.ಆರ್.ನಲ್ಲಿ ಯುರಿಯಾ ಸಲ್ಯೂಶನ್ ಬಳಸಲಾಗುತ್ತದೆ. ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಯುರಿಯಾದಲ್ಲಿರುವ ಅಮೋನಿಯಾದೊಂದಿಗೆ ಇರುವ ರಾಸಾಯನಿಕ ಕ್ರಿಯೆಯಿಂದಾಗಿ ನೈಟ್ರೋಜನ್ ಆಕ್ಸೈಡ್ ನ ರಿಡಕ್ಷನ್ ಆಗಿ ನೈಟ್ರೋಜನ್ ಗಾಳಿ ಹೊರಗೆ ತಳ್ಳಲ್ಪಡುತ್ತದೆ. ಈ ಪ್ರಕ್ರಿಯೆಯ ವೈಶಿಷ್ಟ್ಯವೆಂದರೆ ಇದರಿಂದಾಗಿ ವಾಹನಗಳಿಂದ ಹೊರಬಂದಿರುವ ಹೊಗೆಯಿಂದ 90-95 ಶೇಕಡಾದಷ್ಟು ನೈಟ್ರೋಜನ್ ಆಕ್ಸೈಡ್ ಇಲ್ಲದಂತಾಗುತ್ತದೆ. ವಾಹನೋದ್ಯಮದಲ್ಲಿ ಒಂದು ವೇಳೆ ಈ ಪ್ರಣಾಳಿಕೆಯನ್ನು ಕಳೆದ ಅನೇಕ ವರ್ಷಗಳ ಕಾಲಾವಧಿಯಲ್ಲಿ ಬಳಸುತ್ತಿದ್ದರೂ ಕೂಡಾ ಅದನ್ನು ಥರ್ಮಲ್ ಪವರ್ ಪ್ಲಾಂಟ್ ನಲ್ಲಿ 1970 ರಿಂದಲೇ ಬಳಸಲಾಗುತ್ತಿದೆ. ಅಮೋನಿಯಾ ಎಸ್.ಸಿ.ಆರ್. ಸಿಸ್ಟಮ್ ನ ಅಮೆರಿಕನ್ ಪೆಟಂಟ್ ಸುಮಾರು 60 ವರ್ಷಗಳ ಹಿಂದೆಯೇ ಅಂದರೆ 1957 ರಲ್ಲಿ ಅಮೇರಿಕಾದ ಎಂಜಲ್ ಹರ್ಡ್ ಕಾರ್ಪೊರೇಶನ್ ಈ ಕಂಪನಿಯು ಪಡೆದಿದೆ.

nagesh_1  H x W 
 
BS6 ಈ ಪ್ರಣಾಳಿಕೆಯಲ್ಲಿ ಇಂಜಿನ್ ಮತ್ತು ಆಫ್ಟರ್ ಟ್ರೀಟ್ ಮೆಂಟ್ ನಲ್ಲಿ ಯಾವ ರೀತಿಯ ಸಂಶೋಧನೆ ಮತ್ತು ಅಭಿವೃದ್ಧಿಯು ನಡೆಯುತ್ತಿದೆ, ಎಂಬುದರ ಕುರಿತಾದ ಅರಿವು ಉಂಟಾಗಲು ಈ ಎರಡು ಪ್ರಕ್ರಿಯೆಗಳನ್ನು ನಾವು ಸಂಕ್ಷಿಪ್ತವಾಗಿ ತಿಳಿದುಕೊಂಡೆವು. ಈ ಎಲ್ಲ ಯಂತ್ರಣೆಯ ನಿಯಂತ್ರಣೆಯಾಗುತ್ತದೆ ಮತ್ತು ಇಲೆಕ್ಟ್ರಾನಿಕ್ ಕಂಟ್ರೋಲರ್ ನಲ್ಲಾಗುತ್ತದೆ. ಈ ರೀತಿಯ ಸುಧಾರಿಸಿರುವ ಪದ್ಧತಿಯನ್ನು ಅನುಷ್ಠಾನಕ್ಕೆ ತಂದಿದ್ದರಿಂದ ವಾಹನಗಳ ಬೆಲೆ ಹೆಚ್ಚಾಗುವುದು ಅನಿವಾರ್ಯ. ಪ್ರಾರಂಭದ ಕೆಲವಾರು ದಿನಗಳ ನಂತರ ಹೊಸ ಪ್ರಣಾಳಿಕೆಯಲ್ಲಿರುವ ಭಾಗಗಳ ಬೆಲೆಯನ್ನು ನಿಯಂತ್ರಿಸುವುದು ಕಂಪನಿಗಳಿಗೆ ಸಾಧ್ಯವಾಗಬಹುದು ಮತ್ತು ಅದರ ಲಾಭವು ಗ್ರಾಹಕರಿಗೆ ನೀಡಿದಲ್ಲಿ ಉತ್ಪಾದನೆಯಲ್ಲಿಯೂ ಹೆಚ್ಚಳವನ್ನು ಮಾಡಬಹುದು. ನಿಜವಾಗಿ ನೋಡಿದರೆ BS6 ನಿಂದ ದೊಡ್ಡ ಪ್ರಮಾಣದಲ್ಲಿ ಅವಕಾಶಗಳು ಲಭಿಸಿವೆ, ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಮೇಲೆ ಉಲ್ಲೇಖಿಸಿದಂತೆ ಇಂಜಿನ್ ನ ಯಂತ್ರಭಾಗಗಳಿಗೆ BS6 ನಲ್ಲಿ ಹೆಚ್ಚೇನು ಬದಲಾವಣೆಗಳು ಆಗುವುದಿಲ್ಲ. ಸಾಮಾನ್ಯವಾಗಿ ಬಹುತಾಂಶ ಅಭಿವೃದ್ಧಿಯು ಇಂಜಿನ್ ನಿಂದ ಹೊರಗೆ ಬರುವ ಹೊಗೆಯ ಆಫ್ಟರ್ ಟ್ರೀಟ್ ಮೆಂಟ್ (ಚಿತ್ರ ಕ್ರ. 3) ಸ್ಪರೂಪದ್ದೇ ಆಗಿದೆ.
 
ಈ ಆಫ್ಟರ್ ಟ್ರೀಟ್ ಮೆಂಟ್ ಸಿಸ್ಟಮ್ ಉತ್ಪಾದನೆಯಲ್ಲಿ ಸಬ್ ಸ್ಟ್ರೇಟ್ ಉತ್ಪಾದನೆ, ನೋಬಲ್ ಮೆಟಲ್ ಕೋಟಿಂಗ್ ಮತ್ತು ಕ್ಯಾನಿಂಗ್ ಎಂಬ ಹಂತಗಳಿರುತ್ತವೆ. ಈ ಎಲ್ಲ ಕ್ಷೇತ್ರಗಳಲ್ಲಿ ಉತ್ಪಾದನೆಗೆ ಸಂಬಂಧಪಟ್ಟ ಪೂರೈಕೆಯ ಸರಪಳಿಯಲ್ಲಿ (ಸಪ್ಲೈ ಚೇನ್) ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ಸಿಸ್ಟಮ್ ಕಡಿಮೆ ಬೆಲೆಯಲ್ಲಿ ಉಪಲಬ್ಧ ಮಾಡಿಕೊಡುವ ಸಂಶೋಧನೆಯಲ್ಲಿ ಅವಕಾಶಗಳೂ ಉಪಲಬ್ಧವಾಗುತ್ತಿವೆ. 2020 ರಲ್ಲಿ BS6 ಪ್ರಮಾಣಿತ ವಾಹನಗಳ ಬೇಡಿಕೆಯು ನಮ್ಮ ದೇಶದಲ್ಲಿ ಹೆಚ್ಚಾದರೂ ಕೂಡಾ ಇನ್ನಿತರ ದೇಶಗಳಲ್ಲಿಯೂ ನಮ್ಮ ಇಂತಹ ವಾಹನಗಳಿಗೆ ಮಾರುಕಟ್ಟೆಯು ಲಭ್ಯವಾಗುತ್ತಿದೆ. ಇದರಿಂದಾಗಿ ನಮ್ಮ ದೇಶದ ರಫ್ತು ವ್ಯವಸಾಯದಲ್ಲಿ ಸಕಾರಾತ್ಮಕವಾದ ಪರಿಣಾಮಗಳು ಉಂಟಾಗಬಹುದು.
 
ಈ BS6 ಎಮಿಶನ್ ನ ಪ್ರಮಾಣಿತಗಳಿಂದಾಗಿ (ಸ್ಟ್ಯಾಂಡರ್ಡ್) ತಯಾರಾಗಿ, ಸದ್ಯದಲ್ಲಿ ಸಹಜವಾಗಿ ಗಮನಕ್ಕೆ ಬರುವಂತಹ ಸವಾಲುಗಳು ಈ ಕೆಳಗಿನಂತಿವೆ.
• ಹೊಸ ರೀತಿಯ ಇಂಧನದ ನಿರಂತರವಾದ ಪೂರೈಕೆ.
• ಹೊಸ ಯಂತ್ರಭಾಗಗಳು ಮತ್ತು ಪೂರೈಕೆಯ ಸರಪಳಿಯು (ಸಪ್ಲೈ ಚೈನ್) ಅಭಿವೃದ್ಧಿ.
• ಪ್ರತ್ಯಕ್ಷವಾದ ಉತ್ಪಾದನೆ, ಗುಣಮಟ್ಟದ ನಿಯಂತ್ರಣೆ, ಪರೀಕ್ಷಣೆಯ ರೀತಿ.
• ವಾಹನಗಳಲ್ಲಿ ಇಲೆಕ್ಟ್ರಾನಿಕ್ ಕಂಟ್ರೋಲ್ ನಲ್ಲಿ ಅಭಿವೃದ್ಧಿ, ಉತ್ಪಾದನೆ.
• ಹೊಸ ವಾಹನಗಳ ಡ್ರೈವರ್ ಗೆ ತರಬೇತಿ (ಹೊಸ ಇಲೆಕ್ಟ್ರಾನಿಕ್ ಕಂಟ್ರೋಲ್, DPF ಕೆಲಸ ಮಾಡುತ್ತಿರುವಾಗ ಬದಲಾವಣೆಗಳು ಇತ್ಯಾದಿ.)
• ಮಾರಾಟದ ನಂತರದ ಸೇವೆ (ಆಫ್ಟರ್ ಸೇಲ್ಸ್ ಸರ್ವಿಸ್) ಈ ರೀತಿಯ ಮೇಲೆ ಉಲ್ಲೇಖಿಸಿರುವ ಉತ್ಪಾದನೆಗಳು ಮತ್ತು ಸೇವೆಯನ್ನು ಪೂರೈಸುತ್ತಿರುವ ಉದ್ಯಮಗಳ ಉದ್ಯಮ ಸಾಮರ್ಥ್ಯ ಹೆಚ್ಚಿಸುವುದು ಅನಿವಾರ್ಯವಾಗಿದೆ.
• BS6 ಈ ಪ್ರಣಾಳಿಕೆಯಿಂದಾಗಿ ಹೊಸ ವರ್ಷದಲ್ಲಿ ಅನೇಕ ಹೊಸ ಶೋರೂಮ್ಸ್ ಗಳು ಪ್ರಾರಂಭಿಸಲಾಗಲಿವೆ, ಇದು ಮಾತ್ರ ನಿಜ.
 
 
<="" div="" style="float: left; margin: -25px 20px 20px 0px;">
nagesh_2  H x W 
ಡಾ. ನಾಗೇಶ್ ವಾಳಕೆ
ಉಪ ನಿರ್ದೇಶಕರು, ಎ.ಆರ್.ಎ.ಐ. 
9689889167
 
ಡಾ. ನಾಗೇಶ್ ವಾಳಕೆ ಇವರು ಕಂಬಶನ್ ಮಾಡೆಲಿಂಗ್ ವಿಷಯದಲ್ಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಪುಣೆಯಿಂದ ಪಿಎಚ್.ಡಿ. ಪಡೆದಿದ್ದಾರೆ. ಅವರಿಗೆ ARAI ಯಲ್ಲಿ ವಾಹನ ಉದ್ಯಮ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್. ಎಂಡ್ ಡಿ.) ವಿಭಾಗದಲ್ಲಿ 30 ವರ್ಷ ಕಾಲಾವಧಿಯಲ್ಲಿ ಸೇವೆಯನ್ನು ಸಲ್ಲಿಸಿರುವ ಅನುಭವವಿದೆ.
 
 
@@AUTHORINFO_V1@@