ಸ್ಟಿಮ್ಯುಲಸ್ ’ನ ಅನ್ವಯಾರ್ಥ

@@NEWS_SUBHEADLINE_BLOCK@@

Udyam Prakashan Kannad    19-Jun-2020
Total Views |
 
ಕೊರೋನಾ ವಿಷಾಣು ವಿಶ್ವದಾದ್ಯಂತ ಪಸರಿಸಿದೆ. ಈ ವಿಷಾಣು ಭಾರತವನ್ನೂ ಬಿಟ್ಟಿಲ್ಲ. ಈ ಪರಿಸ್ಥಿತಿಯಿಂದ ಹೊರಬರಲು ಭಾರತ ಸರ್ಕಾರವು 24 ಮಾರ್ಚ್ 2020 ರಂದು ಲಾಕ್ ಡೌನ್ ಘೋಷಿಸಿತು. ಇದು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿಯೂ 31 ಮೇ, 2020 ರ ತನಕ ಮುಂದುವರಿಯಿತು. ಲಾಕ್ ಡೌನ್ ನ ಕಾಲಾವಧಿಯಲ್ಲಿ ಎಲ್ಲ ರೀತಿಯ ಉದ್ಯಮಗಳನ್ನು ನಿಲ್ಲಿಸಬೇಕಾಯಿತು.
 
ಈ ಪರಿಸ್ಥಿತಿಯಲ್ಲಿ ಸರ್ಕಾರವು ಲಘು, ಮಧ್ಯಮ ಉದ್ಯಮಗಳಿಗೆ ಪ್ಯಾಕೇಜ್ ನೀಡಿ ಆರ್ಥಿಕವಾಗಿ ಸಹಾಯ ಮಾಡಬೇಕು, ಎಂಬ ಆಪೇಕ್ಷೆಯನ್ನು ವ್ಯಕ್ತಪಡಿಸಲಾಯಿತು. ಅದಕ್ಕೆ ಅನುಸಾರವಾಗಿ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ಸ್ಟಿಮ್ಯುಲಸ್ ಈ ಶೀರ್ಷಿಕೆಯಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಯ ಯೋಜನೆಯನ್ನು ಘೋಷಿಸಿದರು. ಇದರೊಂದಿಗೆ ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ಯಮಗಳ ವ್ಯಾಖ್ಯೆಯನ್ನೂ ಬದಲಾಯಿಸಿದರು. ಈ ಘೋಷಣೆಗಳಲ್ಲಿ ಘೋಷಿಸಲಾದ ಕಾರ್ಮಿಕ ಕಾನೂನುಗಳ ಕುರಿತು ಪ್ರಸಾರ ಮಾಡಲಾದ ಮಾಹಿತಿ ಮತ್ತು ಅದರ ಉಪಯುಕ್ತತೆ, ಲಘು ಮತ್ತು ಮಧ್ಯಮ ಉದ್ಯಮಗಳಿಗೆ ಹೇಗೆ ಅನ್ವಯಿಸುತ್ತದೆ, ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ.
 
ಹಣಕಾಸು ಸಚಿವೆಯರು ಕಾರ್ಮಿಕರ ಕಾನೂನುಗಳ ಕುರಿತಾಗಿ ಘೋಷಿಸಿರುವ ವಿವರಗಳನ್ನು ತಿಳಿದುಕೊಳ್ಳೋಣ. ಸ್ಟಿಮ್ಯುಲಸ್ ನಲ್ಲಿ ಯೋಜನೆಗಳ ಕುರಿತಾದ ಯಾವುದೇ ಅಧಿಸೂಚನೆಯನ್ನು ಹೊರಡಿಸುವುದಿಲ್ಲವೋ, ಆ ತನಕ ಅದರ ವಿವರಗಳು ತಿಳಿಯಲಾರವು. ಅಲ್ಲದೇ ಆ ಯೋಜನೆಗಳು ಅನುಷ್ಠಾನಕ್ಕೆ ಬರಲಾರವು.
 
1. ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ ನೌಕರರ ಭವಿಷ್ಯ ನಿಧಿ ಯೋಜನೆಗೆ ನೀಡಿರುವ ನೆರವಿನ ಯೋಜನೆ
 
ಯೋಜನೆಯ ಕಾಲಾವಧಿ :
ಪ್ರಾರಂಭದಲ್ಲಿ ಈ ಯೋಜನೆಯನ್ನು ಮಾರ್ಚ್, ಎಪ್ರಿಲ್ ಮತ್ತು ಮೇ 2020 ಈ ಮೂರು ತಿಂಗಳ ವೇತನಕ್ಕೋಸ್ಕರ ಘೋಷಿಸಲಾಯಿತು. ಹಾಗೆಯೇ ಹಣಕಾಸು ಸಚಿವೆ ಘೋಷಿಸಿರುವ ಪ್ಯಾಕೇಜ್ ನಲ್ಲಿ ಈ ಯೋಜನೆಯನ್ನು ಇನ್ನೂ ಮೂರು ತಿಂಗಳು, ಅಂದರೆ ಜೂನ್, ಜುಲೈ ಮತ್ತು ಅಗಸ್ಟ್ 2020 ರ ವೇತನದ ಕಾಲಾವಧಿಗೂ ಅನ್ವಯಿಸುತ್ತದೆ.
ಲಾಭದ ಸ್ವರೂಪ : ಯೋಜನೆಯ ಕಾಲಾವಧಿಯಲ್ಲಿ ಪಾತ್ರ ಸಂಸ್ಥೆಗಳಲ್ಲಿರುವ ಪಾತ್ರ ಕೆಲಸಗಾರರಿಗೆ ನೌಕರರ ಭವಿಷ್ಯ ನಿಧಿಯ 12 ಶೇಕಡಾ ಮತ್ತು ಮಾಲಿಕರ 12 ಶೇಕಡಾ, ಹೀಗೆ 24 ಶೇಕಡಾ ಪಾಲು ಸರ್ಕಾರದ ವತಿಯಿಂದ ತುಂಬಲಾಗುತ್ತದೆ.
 
ಪಾತ್ರ ಸಂಸ್ಥೆಗಳು : ಭವಿಷ್ಯ ನಿಧಿ ಅನ್ವಯಿಸುವ ಸಂಸ್ಥೆಗಳಿಗೆ, 100 ಕ್ಕಿಂತ ಕಡಿಮೆ ಕೆಲಸಗಾರರು ಇರುವ ಸಂಸ್ಥೆಗಳಿಗೆ ಮತ್ತು 90 ಶೇಕಡಾ ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರ ಪ್ರತಿ ತಿಂಗಳ ಸಂಬಳವು ರೂಪಾಯಿ 15,000 ಕ್ಕಿಂತ ಕಡಿಮೆ ಇರುವಂತಹ ಸಂಸ್ಥೆಗಳು ಈ ಯೋಜನೆಗೆ ಪಾತ್ರರಾಗಿದ್ದು, ಅವರಿಗೆ ದರ ಲಾಭವು ಲಭಿಸಲಿದೆ. ಇದರಲ್ಲಿ ಪಾತ್ರತೆಯನ್ನು ನಿರ್ಧರಿಸುವಾಗ 15,000 ರೂಪಾಯಿಯಷ್ಟು ಒಟ್ಟು ಸಂಬಳವನ್ನು ಪರಿಗಣಿಸದೇ, ಭವಿಷ್ಯ ನಿಧಿಗೆ ಪಾತ್ರವಿರುವ ಸಂಬಳವನ್ನು ಪರಿಗಣಿಸಲಾಗಲಿದೆ. ಅಲ್ಲದೇ ಆಯಾ ಸಂಸ್ಥೆಗಳ ಫಾರ್ಮ್ 5A ಯ ನವೀಕರಣವಾಗಿರಬೇಕು.
 
ಪಾತ್ರ ಕೆಲಸಗಾರರು :
1. ಕೆಲಸಗಾರರ ಸಂಬಳ 15,000 ಸಾವಿರಕ್ಕಿಂತ ಕಡಿಮೆ ಇರಬೇಕು.
2. ಕೆಲಸಗಾರನು 29.2.2020 ರಂದು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರಬೇಕು ಮತ್ತು ಸಪ್ಟೆಂಬರ್ 2019 ರಿಂದ ಫೆಬ್ರವರಿ 2020 ಈ ಕಾಲಾವಧಿಯಲ್ಲಿ ಎಂದೂ ಅವನ ಯಾವುದೇ ಸಂಸ್ಥೆಯ ಮೂಲಕ ಭವಿಷ್ಯ ನಿಧಿಯಲ್ಲಿ ನೆರವನ್ನು ತುಂಬಿರಬೇಕು.
3. ಕೆಲಸಗಾರರ UAN ಅವರ ಆಧಾರ್ ಕಾರ್ಡ್ ನೊಂದಿಗೆ ವೆಲಿಡೇಟ್ ಮಾಡಿರಬೇಕು.
ಈ ಯೋಜನೆಯಲ್ಲಿ ಸಂಸ್ಥೆಯ ಪಾತ್ರತೆಯ ಶರತ್ತುಗಳಲ್ಲಿ 90 ಶೇಕಡಾ ಅಥವಾ ಹೆಚ್ಚು ಕೆಲಸಗಾರರ ಪ್ರತಿತಿಂಗಳ ಸಂಬಳವು ರೂಪಾಯಿ 15,000 ಕ್ಕಿಂತ ಕಡಿಮೆ ಇರಬೇಕು, ಎಂಬುದನ್ನು ಗಮನಿಸಿದಲ್ಲಿ ಪಾತ್ರರಾಗುವ ಸಂಸ್ಥೆಗಳ ಸಂಖ್ಯೆಯು ತುಂಬಾ ಕಡಿಮೆ ಇರಬಲ್ಲದು. ಅಂದರೆ 50 ಕೆಲಸಗಾರರು ಇರುವ ಸಂಸ್ಥೆಗಳಲ್ಲಿ 46 ಕೆಲಸಗಾರರು ರೂಪಾಯಿ 15,000 ಕ್ಕಿಂತ ಕಡಿಮೆ ಸಂಬಳ ಪಡೆಯುವವರಿದ್ದಲ್ಲಿ, ಅಂತಹ ಸಂಸ್ಥೆಗಳಿಗೆ ಇದರ ಲಾಭವು ಸಿಗಬಹುದು. ಈ ಯೋಜನೆಯಿಂದಾಗಿ ಹಲವಾರು ಸಂಸ್ಥೆಗಳಿಗೆ ಲಾಭವಾಗಬಹುದು.
 
2. ಭವಿಷ್ಯ ನಿಧಿ ಯೋಜನೆಯ ಬೆಲೆಯು ಮೂರು ತಿಂಗಳುಗಳಿಗೆ 12 ಶೇಕಡಾದಿಂದ 10 ಶೇಕಡಾ
ಯಾವುದೇ ಸಂಸ್ಥೆಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರು ಯಾವುದೇ ದಿನಗಳಲ್ಲಿ ಇದ್ದಲ್ಲಿ, ಇಂತಹ ಸಂಸ್ಥೆಗಳಿಗೆ ಭವಿಷ್ಯ ನಿಧಿ ಯೋಜನೆಯು ಕಾನೂನು ಅನ್ವಯಿಸುತ್ತದೆ. ಇಂತಹ ಸಂಸ್ಥೆಗಳು ಪ್ರತಿತಿಂಗಳು ಕೆಲಸಗಾರರ ಸಂಬಳದಿಂದ 12 ಶೇಕಡಾ ಮೊತ್ತವನ್ನು ತೆಗೆದು, ಅದಕ್ಕೆ ಸಂಸ್ಥೆಯ ಪರವಾಗಿ 12 ಶೇಕಡಾ ಮೊತ್ತವನ್ನು ಸೇರಿಸಿದಲ್ಲಿ, ಅದು 24 ಶೇಕಡಾ ಇಷ್ಟಾಗುತ್ತದೆ. ಈ 24 ಶೇಕಡಾ ಮೊತ್ತವನ್ನು ಭವಿಷ್ಯ ನಿಧಿ ಯೋಜನೆಯಲ್ಲಿ ತುಂಬಿಸಬೇಕಾಗುತ್ತದೆ.
 
ಕೇಂದ್ರ ಸರ್ಕಾರವು 18 ಮೇ 2020 ರ ಅಧಿಸೂಚನೆಯ ಪ್ರಕಾರ ಭವಿಷ್ಯ ನಿಧಿಯ ಯೋಜನೆ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಸುಧಾರಣೆಗಳಿಗೆ ಅನುಸಾರವಾಗಿ ಮೇ, ಜೂನ್ ಮತ್ತು ಜುಲೈ 2020 ಈ ಮೂರು ತಿಂಗಳ ಕಾಲಾವಧಿಯಲ್ಲಿ ಭವಿಷ್ಯ ನಿಧಿ ಯೋಜನೆಯ ಬೆಲೆಯು ಕೆಲಸಗಾರರು ಮತ್ತು ಸಂಸ್ಥೆಗಳಿಗೆ 12 ಶೇಕಡಾ ಬದಲಾಗಿ 10 ಶೇಕಡಾ ಅನ್ವಯಿಸುತ್ತದೆ. ಈ ಎಲ್ಲ ಸವಲತ್ತುಗಳು ಎಲ್ಲ ಸಂಸ್ಥೆಗಳಿಗೆ ಲಭಿಸಲಿವೆ.
 
ಈ ಯೋಜನೆಯಿಂದಾಗಿ ಸಂಬಳದ 2 ಶೇಕಡಾ ಮೊತ್ತವು ಕೆಲಸಗಾರರ ಕೈಸೇರಲಿದೆ. ಹಾಗೆಯೇ ಸಂಸ್ಥೆಗಳಿಗೂ ಅಷ್ಟೇ ಮೊತ್ತದ ಭಾರವು ಕಡಿಮೆಯಾಗಲಿದೆ. ಈ ಲಾಭವು ಎಲ್ಲರಿಗೂ ಲಭಿಸಿದೆ, ಇದೊಂದು ಸಂತಸವನ್ನುಂಟು ಮಾಡುವ ಅಂಶವಾಗಿದೆ. ಆದರೆ ಈ ಸವಲತ್ತು ತುಂಬಾ ಕಡಿಮೆ ಅನಿಸುತ್ತದೆ. ಹಾಗೆಯೇ ಈ ಸವಲತ್ತು ಕೇವಲ ಮೂರು ತಿಂಗಳಿಗೆ ಮಾತ್ರ.
 
ಹಾಗೆಯೇ ಮೇಲೆ ಉಲ್ಲೇಖಿಸಿರುವ ಲಾಭವು ಈಗ ಗಮನಕ್ಕೆ ಬರದಿದ್ದರೂ ಕೂಡಾ ಕೆಲಸಗಾರರ ಖಾತೆಯಲ್ಲಿ ಮೂರು ತಿಂಗಳಲ್ಲಿ ಶೇಕಡಾ 4 ರಷ್ಟು ಕಡಿಮೆ ಮೊತ್ತವು ಜಮಾ ಆಗಲಿದೆ. ಹಾಗೆಯೇ ಯಾವ ಸಂಬಳವು ಸಿ.ಟಿ.ಸಿ.ಯ ಸ್ಪರೂಪದಲ್ಲಿದೆಯೋ, ಅವರ ಕುರಿತು ನೋಡಿದಲ್ಲಿ ಸಂಸ್ಥೆಗಳ ಕಡಿಮೆಯಾಗಿರುವ ಪಾಲು ಕೂಡಾ ಕೆಲಸಗಾರರಿಗೆ ಸಿಗಬಹುದು. ಯಾರಿಗೆ ಪ್ರಧಾನ ಮಂತ್ರಿ ಬಡವರ ಕಲ್ಯಾಣ ಯೋಜನೆಯಲ್ಲಿ ಲಾಭವು ಸಿಗುತ್ತಿದೆಯೋ, ಅವರಿಗೆ 10 ಶೇಕಡಾ ಪಿ.ಎಫ್.ನ ಯೋಜನೆಯು ಅನ್ವಯಿಸುವುದಿಲ್ಲ.
 
3. ಕೆಲಸಗಾರರ ವಿಮೆ ಯೋಜನೆಯ ವಿಸ್ತಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಆತ್ಮನಿರ್ಭರ ಪೆಕೇಜ್ ನಲ್ಲಿ ಘೋಷಿಸಿರುವ ನೌಕರರ ವಿಮೆ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಲಾಗಲಿದೆ. ಯಾವ ಸಂಸ್ಥೆಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರ ನೇಮಕಾತಿಯನ್ನು ಮಾಡುತ್ತಾರೋ, ಅಂತಹ ಸಂಸ್ಥೆಗಳಿಗೆ ಇದರ ಲಾಭವು ಲಭಿಸಲಿದೆ. ಇದರ ಕುರಿತಾದ ಅಧಿಸೂಚನೆಯನ್ನು ಇನ್ನೂ ಪ್ರಕಟಿಸಲಾಗಿಲ್ಲ, ಆದ್ದರಿಂದ ಅಧಿಸೂಚನೆಯನ್ನು ನೋಡಿದ ನಂತರವೇ ಇದರ ಸ್ವರೂಪವು ತಿಳಿಯಬಹುದು.
 
ಸದ್ಯಕ್ಕೆ ಯಾವ ಕಾರ್ಖಾನೆಗಳಲ್ಲಿ ಯಾವುದೇ ರೀತಿಯ 10 ಕ್ಕಿಂತ ಹೆಚ್ಚು ಕೆಲಸಗಾರರು ಇರುತ್ತಾರೋ, ಅವರಿಗೆ ಅಥವಾ ಯಾವ ಸಂಸ್ಥೆಯಲ್ಲಿ 20 ಕ್ಕಿಂತ ಹೆಚ್ಚು ಕೆಲಸಗಾರರು 21,000 ರೂಪಾಯಿಗಳಿಗಿಂತ ಕಡಿಮೆ ಸಂಬಳವನ್ನು ಪಡೆಯುತ್ತಾರೋ, ಇಂತಹ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಎಲ್ಲೆಡೆ 10 ಕೆಲಸಗಾರರಿರುವ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯಸಿರುವುದರಿಂದ 10 ರಿಂದ 20 ಕೆಲಸಗಾರರಿರುವ ಚಿಕ್ಕ ಸಂಸ್ಥೆಗಳಿಗೆ ಸಂಬಂಧಪಟ್ಟ ಕಾನೂನುಗಳು ಅನ್ವಯಿಸುತ್ತದೆ. ಕೆಲಸಗಾರರಿಗೆ ಉಚ್ಚಮಟ್ಟದ ವೈದ್ಯಕೀಯ ಸೇವೆಗಳು ಲಭಿಸಿದಲ್ಲಿ ನೇರವಾಗಿ ಕೆಲಸಗಾರರಿಗೆ ಈ ಯೋಜನೆಯ ಲಾಭವಾಗಲಿದೆ. ಇಲ್ಲದಿದ್ದಲ್ಲಿ ಚಿಕ್ಕ ಸಂಸ್ಥೆಗಳ ಖರ್ಚು ಹೆಚ್ಚಿಸುವ ಹೊರತಾಗಿ, ಇದರಿಂದ ಯಾವುದೇ ಇನ್ನಿತರ ಲಾಭಗಳಾಗಲಾರವು. ಕ್ಲಿಷ್ಟವಾದ ಪ್ರಕ್ರಿಯೆಗಳನ್ನು ಮಾಡಲಾಗುವ ಕಾರ್ಖಾನೆಗಳಲ್ಲಿ 10 ಕ್ಕಿಂತ ಕಡಿಮೆ ಕೆಲಸಗಾರರಿದ್ದರೂ ಕೂಡಾ ಈ ಯೋಜನೆಯು ಅನ್ವಯಿಸುತ್ತದೆ.
 
ಸದ್ಯಕ್ಕೆ ಕೆಲವು ಜಿಲ್ಲೆಗಳಲ್ಲಿಯೇ ಈ ಯೋಜನೆಯು ಅನ್ವಯಿಸುತ್ತದೆ. ಈ ಯೋಜನೆಯಲ್ಲಿ ಆರೋಗ್ಯ ಸೇವೆ, ಅಪಘಾತ ವಿಮೆ ಈ ರೀತಿಯ ಲಾಭಗಳನ್ನು ನೀಡಲಾಗುತ್ತದೆ. ಡಾಕ್ಟರ್, ಇ.ಎಸ್.ಐ. ಮತ್ತು ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳ ಮೂಲಕವೇ ಇದರ ಲಾಭಗಳನ್ನು ನೀಡಲಾಗುತ್ತಿದೆ. ಸಂಪೂರ್ಣ ದೇಶದಲ್ಲಿ ಈ ಯೋಜನೆಯು ಅನ್ವಯಿಸಲು ಅನೇಕ ವ್ಯವಸ್ಥೆಗಳ ಜಾಲವನ್ನು ತಯಾರಿಸುವ ಅಗತ್ಯವಿದೆ.
 
ಕೇಂದ್ರ ಸರ್ಕಾರವು ಈ ಮುಂದಿನ ಯೋಜನೆಗಳನ್ನು ಘೋಷಿಸಿದೆ
1. ಪಾರಂಪಾರಿಕರಲ್ಲದ ಕೆಲಸಗಾರರಿಗೆ ಸಾಮಾಜಿಕ ಸುರಕ್ಷೆಯ ವ್ಯವಸ್ಥೆ.
2. ಕೆಲಸಗಾರರ ಕಡಿತದಿಂದಾಗಿ ನೌಕರಿ ಕಳೆದುಕೊಂಡ ಕೆಲಸಗಾರರಿಗೆ ರೀಸ್ಕಿಲಿಂಗ್ ಫಂಡ್.
3. ಮಹಿಳೆಯರಿಗೆ ಎಲ್ಲ ರೀತಿಯ ಉದ್ಯಮಗಳಲ್ಲಿ ಮತ್ತು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡಲು ಅನುಮತಿ.
4. ಅಸಂಘಟಿತ ಕೆಲಸಗಾರರಿಗೆ ಸಾಮಾಜಿಕ ಸುರಕ್ಷೆಯ ಫಂಡ್.
5. ಒಂದು ವರ್ಷ ಕೆಲಸ ಮಾಡಿರುವ ಕೆಲಸಗಾರರಿಗೆ ಗ್ರೆಚ್ಯುವಿಟಿ.
6. ಸಂಪೂರ್ಣ ದೇಶಕ್ಕೋಸ್ಕರ ಕನಿಷ್ಠ ವೇತನದಲ್ಲಿ ಫ್ಲೋರ್ ವೆಜೆಸ್
 
ಕೆಲವು ಆರ್ಥಿಕ ಸ್ಟಿಮ್ಯುಲೇಟರ್
ಕಾರ್ಮಿಕರ ಕಾನೂನಿನಲ್ಲಿ ಸವಲತ್ತುಗಳೊಂದಿಗೆ ದೇಶದಲ್ಲಿ ಉದ್ಯಮಗಳ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ಅಂಶಗಳನ್ನು ಹೇಳಿದ್ದಾರೆ. ಲಘು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ಮೊತ್ತದ ಸಾಲವನ್ನು ಉಪಲಬ್ಧ ಮಾಡಿಕೊಡಲಾಗುತ್ತದೆ. ಅಕ್ಟೋಬರ್ 2020 ತನಕ 45 ಲಕ್ಷ ಉದ್ಯಮಗಳಿಗೆ ಯಾವುದೇ ರೀತಿಯ ಅಡಮಾನದ (ಅಡವು- Surety) ಹೊರತಾಗಿ ಸಾಲ ನೀಡುವ ಯೋಜನೆಯನ್ನು ಸರ್ಕಾರವು ಹಮ್ಮಿ ಕೊಂಡಿದೆ. ಕಳೆದ ಎರಡು ತಿಂಗಳ ಕಾಲಾವಧಿಯಲ್ಲಿ ಪೂರೈಕೆಯ ಸರಪಳಿಯು ನಿಂತು ಹೋಗಿದೆ. ಕಾರ್ಮಿಕ ವರ್ಗವು ತಮ್ಮ ಸ್ವಂತ ಊರುಗಳಿಗೆ ಹಿಂತಿರುಗುತ್ತಿರುವುದರಿಂದ ಮುಂದಿನ ಹಲವಾರು ತಿಂಗಳುಗಳಲ್ಲಿ ಕಾರ್ಮಿಕರ ಕೊರತೆಯು ಕಂಡುಬರಲಿದೆ. ಸ್ಥಳೀಯರಿಗೆ ನೌಕರಿಯನ್ನು ನೀಡಿದರೂ ಕೂಡಾ ಅವರಿಗೆ ತರಬೇತಿಯನ್ನು ನೀಡುವಲ್ಲಿ ತುಂಬಾ ಸಮಯವು ತಗಲುವ ಸಾಧ್ಯತೆ ಇದೆ. ಈ ತನಕ ಆಗಿರುವ ನಷ್ಟ ಮತ್ತು ಮುಂದಿನ ಕಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದಾಗಿ ಉಂಟಾಗುವ ಆರ್ಥಿಕ ನಷ್ಟ, ಹೀಗೆ ಎರಡು ರೀತಿಯ ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೊಸ ಸಾಲದ ಯೋಜನೆಯಿಂದ ಸಹಾಯವಾಗಲಿದೆ.
 
90 ರ ದಶಕದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಮುಕ್ತವಾದ ನಂತರ ವಿದೇಶದ ಅನೇಕ ಕಂಪನಿಗಳು ಮಧ್ಯಮ ಸ್ಪರೂಪದ ಗುತ್ತಿಗೆಗಳನ್ನು (Contracts) ಪಡೆಯಲು ಪ್ರಾರಂಭಿಸಿದವು. ವಿದೇಶದ ಕಂಪನಿಗಳಿಂದ ಉಂಟಾಗಿರುವ ಸ್ಪರ್ಧೆಯಿಂದಾಗಿ ಭಾರತೀಯ ಉದ್ಯಮಿಗಳಿಗೆ ಇಂತಹ ಗುತ್ತಿಗೆಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಸಿಗಲಾರಂಭಿಸಿದವು. ಈಗ ಕೇಂದ್ರ ಸರ್ಕಾರದ ಹೊಸ ಕಾನೂನಿನ ಪ್ರಕಾರ 200 ಕೋಟಿಗಿಂತ ಕಡಿಮೆಯ ಗುತ್ತಿಗೆಗಳು ಭಾರತೀಯ ಕಂಪನಿಗಳಿಗೆ ಸಿಗಲಿವೆ. ಈ ಅಂಶವು ಭಾರತೀಯ ಕೈಗಾರಿಕೋದ್ಯಮಿಗಳಿಗೆ ಸುವರ್ಣಾವಕಾಶವನ್ನು ಒದಗಿಸಲಿದೆ.
 
ಮೇಲಿನ ಯೋಜನೆಯ ಕುರಿತು ಇನ್ನಷ್ಟು ವಿವರಗಳನ್ನು ಪ್ರಕಟಿಸಲಾಗಿಲ್ಲ. ಆದ್ದರಿಂದ ಇದರ ಕುರಿತು ಸ್ಪಷ್ಟತೆ ಇನ್ನೂ ಸಿಗುವುದು ಸದ್ಯಕ್ಕೆ ಅಸಾಧ್ಯ. ಈ ವಿವರಗಳನ್ನು ತಿಳಿದುಕೊಂಡ ನಂತರವೇ ಇದರ ಕುರಿತಾದ ಚರ್ಚೆಯನ್ನು ಮಾಡುವುದು ಸೂಕ್ತ. ಸಂಕ್ಷಿಪ್ತವಾಗಿ ಹೇಳುವುದಾದರೆ ಹಣಕಾಸು ಸಚಿವೆ ಘೋಷಿಸಿರುವ ಕಾರ್ಮಿಕರ ಕಾನೂನುಗಳ ಕುರಿತಾದ ಯೋಜನೆಗಳು ಮತ್ತು ಆರ್ಥಿಕ ಸವಲತ್ತುಗಳ ಲಾಭವು ಉದ್ದಿಮೆಗಳಿಗೆ ಸ್ವಲ್ಪ ಮಟ್ಟಿಗಾದರೂ ಸಿಗುವುದು ಖಂಡಿತ.
 
ನಿಸರ್ಗದ ನಿಯಮಗಳು ಮಾರುಕಟ್ಟೆಗೂ ಅನ್ವಯಿಸುತ್ತವೆ. ಎಲ್ಲಕ್ಕಿಂತಲೂ ಬಲಶಾಲಿ ಅಥವಾ ಎಲ್ಲರಿಗಿಂತಲೂ ಮಹಾಕಾಯ ಪ್ರಾಣಿಯೂ ಕೂಡಾ ಜಗತ್ತಿನಲ್ಲಿ ಉಳಿಯುವ ಕುರಿತು ನಿಸರ್ಗವು ಯಾವುದೇ ರೀತಿಯ ಖಾತರಿಯನ್ನು ಅಥವಾ ಜವಾಬ್ದಾರಿಯನ್ನು ವಹಿಸುವುದಿಲ್ಲ. ಆದರೆ ಎದುರಾಗಿರುವ ಪರಿಸ್ಥಿತಿಯೊಂದಿಗೆ ಹೊಂದಾಣಿಕೆಯನ್ನು ಮಾಡಿ ತಮ್ಮಲ್ಲಿಯೇ ಸೂಕ್ತ ಬದಲಾವಣೆಗಳನ್ನು ಮಾಡಿ ಎಲ್ಲ ಪ್ರಾಣಿಗಳು ತಮ್ಮ ಅಸ್ತಿತ್ವವನ್ನು ಕಾಪಾಡಿವೆ. ಉದ್ದಿಮೆಗಳಿಗೂ ಇದೇ ಉದಾಹರಣೆ ಅಥವಾ ತತ್ವವು ಕಟ್ಟುನಿಟ್ಟಾಗಿ ಅನ್ವಯಿಸುತ್ತದೆ. ಕಾರಣ, ಉದ್ಯಮಿಗಳು ಕೇವಲ ಒಂದೇ ಉತ್ಪಾದನೆಯನ್ನು ಮಾಡುತ್ತಾರೆ. ಆದರೆ ಸೇವೆಯನ್ನು ನೀಡುವಲ್ಲಿ ಅವರು ಸಿದ್ಧರಿರುವುದಿಲ್ಲ. ಆದರೆ ಪರಿಸ್ಥಿತಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡು ಅಥವಾ ಅದನ್ನು ಎದುರಿಸುವಲ್ಲಿ ತಮ್ಮ ಪ್ರಾಬಲ್ಯವನ್ನು ಆಗಾಗ ಸಾಬೀತು ಪಡಿಸುತ್ತಾ ಬಂದಿದ್ದಾರೆ. ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಹೋದ ನಂತರ ಆ ಬೂದಿಯಿಂದ ಮತ್ತೆ ಎದ್ದು ನಿಲ್ಲುವ ಸಾಮರ್ಥ್ಯವು ಕೇವಲ ಎರಡು ಪ್ರಭೇದಗಳಲ್ಲಿರುತ್ತದೆ. ಮೊದಲನೆಯದಾಗಿ ಫಿನಿಕ್ಸ್ ಪಕ್ಷಿ ಮತ್ತು ಮಾನವ. ಇದರಿಂದಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಸಮಾಜಕ್ಕೋಸ್ಕರ ಏನಾದರೂ ಮಾಡಿ ತೋರಿಸುವ ಸುಪರ್ಣಾವಕಾಶವನ್ನು ಯಾವುದೇ ಉದ್ಯಮಿಗಳು ಎಂದಿಗೂ ಬಿಡಲಾರರು.
 
 
<="" div="" style="float: left; margin: -25px 20px 20px 0px;">
mukkudn_1  H x  
ಮುಕುಂದ ಕುಲಕರ್ಣಿ
ಸಲಹೆಗಾರರು, ಕಾರ್ಮಿಕರ ಕಾನೂನು 
9422028709
 
ಮುಕುಂದ ಕುಲಕರ್ಣಿ ಇವರು ಕಾರ್ಮಿಕರ ಕಾನೂನುಗಳ ವಿಷಯದ ತಜ್ಞರಾಗಿದ್ದಾರೆ. ಕಳೆದ 30 ವರ್ಷಗಳಿಂದ ಹೆಚ್ಚು ವರ್ಷಗಳ ಕಾಲಾವಧಿಯಲ್ಲಿ ಅನೇಕ ಕಂಪನಿಗಳಲ್ಲಿ ಕಾನೂನು ವಿಷಯದಲ್ಲಿ ಸಲಹೆಗಾರರಾಗಿದ್ದಾರೆ.
 
@@AUTHORINFO_V1@@