ಭಾರತದಲ್ಲಿ ಅತ್ಯಾಧುನಿಕವಾದ ಮತ್ತು ಉನ್ನತ ಗುಣಮಟ್ಟದ ಲೇಥ್ ಮಶಿನ್‌ಗಳನ್ನು ತಯಾರಿಸಲು, ದಕ್ಷಿಣ ಭಾರತದ ಉದ್ಯಮಿಗಳಾದ ಜಿ. ಡಿ. ಗೋಪಾಲ್ ಇವರು ಜರ್ಮನಿಯ Weiler Werkzeugmaschinen ಎಂಬ ಕಂಪನಿಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪಾಲುಗಾರಿಕೆಯನ್ನು ಮಾಡಿ ವಾಯ್ಲರ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು.
ಕಂಪನಿಯು ಕ್ಯಾಪ್ಸ್ಟನ್ ಲೇಥ್ ಮತ್ತು ಸಾಂಪ್ರದಾಯಿಕವಾದ ಲೇಥ್‌ನ ನಿರ್ಮಾಣವನ್ನು ಪ್ರಾರಂಭಿಸಿತು. ಮುಂದಿನ ವರ್ಷಗಳಲ್ಲಿ ಕಂಪನಿಯು ಉತ್ಪಾದನೆಯನ್ನು ಮಾಡುವಾಗ ಗಡಿಯಾರಗಳಿಗೆ ಬೇಕಾಗಿರುವ ಕೇಸ್‌ಗಳ ಯಂತ್ರಣೆಗೋಸ್ಕರ ಆಟೊಮೇಟ್ ಮತ್ತು ಸ್ಪೇಶಲ್ ಪರ್ಪಸ್ ಮಶಿನ್ (ಎಸ್.ಪಿ.ಎಮ್.) ಹಾಗೆಯೇ ಹೈಡ್ರಾಲಿಕ್ ಕ್ಲಾಪಿಂಗ್ ಲೇಥ್ ಮಶಿನ್ ಕೂಡಾ ಬಳಸಲು ಪ್ರಾರಂಭಿಸಿತು.
1986 ರಲ್ಲಿ ಜಿ.ಡಿ. ವಾಯ್‌ಲರ್ ಇವರು ಅವರ ಮೊತ್ತಮೊದಲ ಸಿ.ಎನ್.ಸಿ. ಲೇಥ್‌ನ ನಿರ್ಮಾಣವನ್ನು ಮಾಡಿದರು. ಸಿ.ಎನ್.ಸಿ. ಮಶಿನ್ ಟೂಲ್‌ನ ನಿರ್ಮಾಣದ ಕೆಲಸದಲ್ಲಿ ಭಾರತದ ಮಶಿನ್ ಟೂಲ್‌ಗಳ ಔದ್ಯೋಗಿಕ ಕ್ಷೇತ್ರದಲ್ಲಿ ವಾಯ್‌ಲರ್ ಇವರ ಹೆಸರನ್ನು ಆದ್ಯಪ್ರವರ್ತಕರೆಂದು ಗುರುತಿಸಲಾಗಿದೆ. 1994 ರಿಂದ ಜಿ. ಡಿ. ವಾಯ್‌ಲರ್ ಯುರೋಪ್‌ನಲ್ಲಿ ಲೇಥ್‌ಗಳನ್ನು ರಫ್ತು (ಎಕ್ಸಪೋರ್ಟ್) ಮಾಡುತ್ತಿದ್ದಾರೆ.
ಝೀರೋ ಪಾಯಿಂಟ್ ಕ್ಲಾಂಪಿಂಗ್ ಪ್ರಣಾಳಿಕೆಯನ್ನು ಬಳಸುವ ಕ್ರಾಂತಿಕಾರಿಯಾದ ಹೊಸ ಕಲ್ಪನೆಯಲ್ಲಿ ಆಧರಿಸಿರುವ ವರ್ಸಾಟರ್ನ್ ಸ್ಲಾಂಟ್ ಬೆಡ್ ಟರ್ನಿಂಗ್ ಮಶಿನ್ ತಯಾರಿಸಲಾಗುತ್ತಿದ್ದು ಭಾರತದಲ್ಲಿ ಈ ಕಲ್ಪನೆಯು ಮೊತ್ತಮೊದಲಾಗಿಯೇ ಉಪಯೋಗಿಸಲಾಗುತ್ತಿದೆ.
ಝೀರೋ ಪಾಯಿಂಟ್ ಕ್ಲಾಂಪಿಂಗ್ ಪ್ರಣಾಳಿಕೆ
ಇದೊಂದು ಕುಂದುಕೊರತೆಗಳಿಲ್ಲದ ಅಥವಾ ದೋಷಗಳನ್ನು ಉಂಟುಮಾಡದೇ ಇರುವ ವ್ಯವಸ್ಥೆಯಾಗಿದೆ. ತಮ್ಮ ಉತ್ಪಾದನೆಯಲ್ಲಿ ಫಿಕ್ಸ್ಚರ್ ಮತ್ತು ಕಾರ್ಯವಸ್ತುಗಳ ಬದಲಾವಣೆಗಳನ್ನು ಮಾಡುವಲ್ಲಿ ಬೇಕಾಗುವ ತುಂಬಾ ಕಡಿಮೆ ಸಮಯದ ಅಗತ್ಯವಿರುತ್ತದೆ, ಈ ಕಡಿಮೆ ಸಮಯದಲ್ಲಿಯೇ ಬದಲಾವಣೆಗಳನ್ನು ಮಾಡುವ ವ್ಯವಸ್ಥೆಯೇ ಇದೊಂದಾಗಿದೆ. ಇದರಿಂದಾಗಿ ಮಶಿನ್‌ನ ಸೆಟ್ ಅಪ್‌ಗೆ ತಗಲುವ ವೇಳೆಯಲ್ಲಿ ಮತ್ತು ಹಣದಲ್ಲಿಯೂ ಉಳಿತಾಯವು ಆಗುತ್ತದೆ. ಇದರಲ್ಲಿ ಕ್ಲಾಂಪಿಂಗ್ (ಮಲ್ಟಿಪಲ್ ಬಾಲ್ ಕ್ಲಾಂಪಿಂಗ್) ಈ ಸಂಪೂರ್ಣವಾದ ಯಾಂತ್ರಿಕ ಮತ್ತು ದೃಢವಾದ ಡಿಸೈನ್ ಇರುವ ಪ್ರಣಾಳಿಕೆಯಾಗಿದೆ. ಡಿಕ್ಲಾಂಪಿಂಗ್ ಗೋಸ್ಕರ ಹೈಡ್ರಾಲಿಕ್ ಅಥವಾ ನ್ಯುಮಾಟಿಕ್‌ನಂತಹ ಹೊರ ಫೀಡ್‌ನ ಅಗತ್ಯವೂ ಇರುತ್ತದೆ. ಕಾರ್ಯವಸ್ತುವನ್ನು ಹಿಡಿದಿಡಲು 105 kN ಒತ್ತಡವು ಉಪಲಬ್ಧವಿರುತ್ತದೆ.
ಕ್ಲಾಂಪಿಂಗ್
ಹೊರಗಿನ ಒತ್ತಡವನ್ನು ನಿಲ್ಲಿಸದಾಗ ಪಿಸ್ಟನ್‌ನ ಕೆಳಗಿರುವ ಸ್ಪ್ರಿಂಗ್ ಮುಂಚಿನ ಸ್ಥಿತಿಗೆ ಬರುತ್ತವೆ ಮತ್ತು ಪಿಸ್ಟನ್ ಮೇಲೆ ತಳ್ಳಲ್ಪಡುತ್ತದೆ. ಇದರಿಂದಾಗಿ ಬಾಲ್ ಒಳಗೆ ತಳ್ಳಲ್ಪಡುತ್ತದೆ ಮತ್ತು ಕ್ಲಾಂಪಿಂಗ್ ಮಾಡಲಾಗುತ್ತದೆ.
ಡಿಕ್ಲಾಂಪಿಂಗ್
ಹೊರಗಿನಿಂದ ನೀಡಿರುವ ಆಯಿಲ್/ ಗಾಳಿಯ ಒತ್ತಡದಿಂದ ಪಿಸ್ಟನ್, ಸ್ಪ್ರಿಂಗ್‌ನ ದಿಕ್ಕಿನ ಕೆಳಗೆ ಒತ್ತಲ್ಪಡುವಾಗ ಕ್ಲಾಂಪಿಂಗ್‌ನ ಬಾಲ್ ಹೊರಗೆ ತಳ್ಳಲ್ಪಡುತ್ತವೆ. ಈ ಸ್ಥಿತಿಯಲ್ಲಿ ಫಿಕ್ಸ್ಚರ್ ಅಥವಾ ಕಾರ್ಯವಸ್ತುಗೆ ಜೋಡಿಸಲಾಗಿರುವ ನಿಪ್ಪಲ್ ಹೊರಗೆ ಬರುವ ಸಾಧ್ಯತೆಯೂ ಇರುತ್ತದೆ ಮತ್ತು ಕಾರ್ಯವಸ್ತುವಿನ ಡಿಕ್ಲಾಂಪಿಂಗ್ ಆಗುತ್ತದೆ.
ಲಾಭಗಳು
• ಯಾಂತ್ರಿಕತೆಯ ಕ್ಲಾಂಪಿಂಗ್
• ಹೈಡ್ರಾಲಿಕ್ ರೀತಿಯಲ್ಲಿ ರಿಲೀಜ್ ಮಾಡುವುದು.
• ತುಂಬಾ ಹೆಚ್ಚಾಗಿರುವ ಸ್ಥಾನದ ನಿರ್ಧಾರ. ಬಗ್ಗಿಸುವುದು ಅಥವಾ ಎತ್ತುವ ಆವಶ್ಯಕತೆ ಇಲ್ಲ. (ಒತ್ತಡವನ್ನು ಅವಶ್ಯಕವಾದ ಪ್ರಮಾಣದಲ್ಲಿ ಬಳಸಬಹುದು)
• ನಿಯಂತ್ರಿಸಿರುವ ರೀತಿಯಲ್ಲಿ ಎತ್ತುವುದು ಮತ್ತು ಎತ್ತುವ ಪ್ರಕ್ರಿಯೆಯಲ್ಲಿ ವಿಜುವಲೈಜೇಶನ್
• ಗೋಲಾಕಾರದ ರಂಧ್ರದಲ್ಲಿ ಚಿಪ್ ಒಳ ಸೇರುವುದಿಲ್ಲ.
• ರಂಧ್ರದ ತ್ರಿಜ್ಯವನ್ನು ನಿಖರವಾಗಿ ಅಳವಡಿಸಿದ್ದರಿಂದ ಮೊದಲ ಸ್ಥಾನದ ನಿರ್ಧಾರವು ಸೂಕ್ತವಾಗಿ ಆಗುತ್ತದೆ.
• ನಿರ್ದೋಷವಾದ ಸಂಪರ್ಕ
• ಹೋಲ್ಡಿಂಗ್ ಸ್ಟ್ರೆಂಥ್ : 25,000 N (ಗರಿಷ್ಟ)
• ರಿಪಿಟ್ಯಾಬಿಲಿಟಿ : 5 ಮೈಕ್ರಾನ್‌ಗಿಂತ ಕಡಿಮೆ. ಬದಲಾವಣೆ ಆಗುವಾಗ ಅದೇ ಪ್ಯಾಲೇಟ್ ಅದೇ ಇಂಟರ್‌ಫೇಸ್‌ನಲ್ಲಿ ಇಡಲಾಗುತ್ತದೆ.
• ಪ್ರಣಾಳಿಕೆಯ ನಿಖರತೆ : ಪ್ಯಾಲೇಟ್ ತುಂಬಾ ಸಲ ಬದಲಾಯಿಸುವಾಗ 10 ಮೈಕ್ರಾನ್‌ಗಿಂತ ಕಡಿಮೆ ವ್ಯತ್ಯಾಸದ ನಿಖರತೆಯು ಲಭಿಸುತ್ತದೆ.
ವರ್ಸಾಟರ್ನ್ ಮಶಿನ್
ವರ್ಸಾಟರ್ನ್ ಇದು ಮೂಲತಃ ಎರಡು ಬೇರೆ ಬೇರೆ X ಸ್ಟ್ರೋಕ್ ಇರುವ ಸಿ.ಎನ್.ಸಿ. ಮಶಿನ್. ಈ ಮಶಿನ್‌ನ ವೈಶಿಷ್ಟ್ಯವೆಂದರೆ ದೀರ್ಘವಾದ ಸ್ಟ್ರೋಕ್‌ನ ವಿಧದ ಮಶಿನ್‌ನಲ್ಲಿ (X:300 ಮಿ.ಮೀ.) ತುಂಬಾ ದೊಡ್ಡ ವ್ಯಾಸವಿರುವ, ಅಂದರೆ 180 ಮಿ.ಮೀ.ತನಕದ ಕಾರ್ಯವಸ್ತುವನ್ನು ಅಳವಡಿಸಬಹುದಾಗಿದೆ. 4 ಒಂದೇ ರೇಖೆಯಲ್ಲಿರುವ ಟೂಲ್‌ಗಳಿಂದಾಗಿ ಉತ್ಪಾದನೆಯ ಸಾಮರ್ಥ್ಯವು ಲಭಿಸುತ್ತದೆ. ಇನ್ನೊಂದು ಉಪಾಯವೆಂದರೆ ಒಂದು ರೇಖೆಯಲ್ಲಿರುವ ಟೂಲಿಂಗ್ ಮತ್ತು ಟರೆಟ್ ಇವುಗಳ ಕಾಂಬಿನೇಶನ್ ಈ ಸ್ವರೂಪದಲ್ಲಿಯೂ ಈ ಮಶಿನ್ ಉಪಲಬ್ಧವಿದೆ. ಇದರಲ್ಲಿ ಗ್ರಾಹಕರು 8 ಕ್ಕಿಂತ ಹೆಚ್ಚು ಟೂಲ್‌ಗಳನ್ನು ಬಳಸಬಲ್ಲರು, ಇದೇ ಇದರ ವೈಶಿಷ್ಟ್ಯವಾಗಿದೆ. ಈ ಮಶಿನ್ ಇಂದಿಗೂ ಉಪಲಬ್ಧವಿದ್ದು ಇದರಲ್ಲಿ ಸ್ಟಾರ್ಕ್‌ನ ಝೀರೋ ಪಾಯಿಂಟ್ ಕ್ಲಾಂಪಿಂಗ್ ಪ್ರಣಾಳಿಕೆಯೊಂದಿಗೆ ಬದಲಾಯಿಸಬಲ್ಲ ಸ್ಲಾಟ್ ಟೇಬಲ್‌ಗಳಿರುತ್ತವೆ. ಈ ಟೇಬಲ್‌ಗಳಲ್ಲಿ ವಿವಿಧ ಯಂತ್ರೋಪಕರಣಗಳಿಗೋಸ್ಕರ ವಿವಿಧ ಒಂದೇ ರೇಖೆಯಲ್ಲಿರುವ ಟೂಲ್ ಬ್ಲಾಕ್ ಅಳವಡಿಸಬಹುದು. ಈ ಬ್ಲಾಕ್ ಕೇವಲ ಕೆಲವೇ ನಿಮಿಷಗಳಲ್ಲಿ ಬದಲಾಯಿಸಬಹುದು.
ಜಿ. ಡಿ. ವಾಯಲರ್‌ನ ತಂತ್ರಜ್ಞರು ಮಾಡಿರುವ ವೈಶಿಷ್ಟ್ಯತೆಯಿಂದ ಮತ್ತು ಸಂಶೋಧನೆಗಳಿಂದ ಒಂದೇ ರೇಖೆಯ ಟೂಲ್‌ನ ಹೆಚ್ಚಿನ ಉತ್ಪಾದನೆಯ ಸಾಮರ್ಥ್ಯ ಮತ್ತು ವಿವಿಧ ಯಂತ್ರೋಪಕರಣಗಳಿಗೋಸ್ಕರ ಬೇಕಾಗಿರುವ ಹೊಂದಾಣಿಕೆಯೂ ಈ ಮಶಿನ್‌ನಲ್ಲಿದೆ. ಮಧ್ಯಮ ಗಾತ್ರದ ಬ್ಯಾಚ್‌ಗೋಸ್ಕರ ಬೇಕಾಗಿರುವ ಟೂಲ್‌ನ ಬದಲಾವಣೆಗಳು ಈ ಮಶಿನ್‌ನಲ್ಲಿ ತುಂಬಾ ಕಡಿಮೆ ಸಮಯದಲ್ಲಾಗುತ್ತದೆ. ಇದರಿಂದಾಗಿ ಈ ರೀತಿಯ ಬ್ಯಾಚ್‌ಗೋಸ್ಕರ ಈ ಮಶಿನ್ ತುಂಬಾ ಉಪಯುಕ್ತವಾಗಿದೆ. ಹೊಸ ಮಶಿನ್‌ನಲ್ಲಿ ಚೇಂಜ್ ಓವರ್ ಟೈಮ್ ಈ ಕೇವಲ 30 ಸೆಕಂಡುಗಳದ್ದಾಗಿದ್ದು ಸಾಂಪ್ರದಾಯಿಕ ಮಶಿನ್‌ನಲ್ಲಿ ಇದೇ ಪ್ರಕ್ರಿಯೆ ಎಷ್ಟು ಸಮಯದಲ್ಲಿ ಪೂರ್ಣಗೊಳಿಸುವುದು, ಇದೆಲ್ಲವೂ ಆಪರೇಟರ್‌ನ ಕುಶಲತೆಗೆ ಅವಲಂಬಿಸಿರುತ್ತದೆ. ಕೋಷ್ಟಕ ಕ್ರ. 1 ರಲ್ಲಿ ತೋರಿಸಿದಂತೆ ಮೊದಲ ಮೂರು ಪರೀಕ್ಷೆಗಳಿಗೆ ಸ್ಲಾಟ್ ಲೀನಿಯರ್ ಬೇಸ್ ಬದಲಾಯಿಸಲು 2 ನಿಮಿಷಕ್ಕಿಂತ ಕಡಿಮೆ ಸಮಯವು ಬೇಕಾಯಿತು.
X ಮತ್ತು Y ಈ ಎರಡೂ ಅಕ್ಷಗಳಲ್ಲಿ LM ರೋಲರ್ ಗೈಡ್‌ವೆ ಇರುವುದರಿಂದ ದೃಢತೆಯು ಉಂಟಾಗುತ್ತದೆ ಮತ್ತು ಸ್ಟೀಲ್, ಎರಕ ಹಾಕಿರುವ ಕಬ್ಬಿಣ ಮತ್ತು ಅಲ್ಯುಮಿನಿಯಮ್ ಇಂತಹ ವಿವಿಧ ಮಟೀರಿಯಲ್‌ನ ಯಂತ್ರಣೆಯನ್ನು ಮಾಡಲು ಈ ಮಶಿನ್ ತುಂಬಾ ಉಪಯುಕ್ತವಾಗಿದೆ. ಮಶಿನ್‌ಗೆ ತುಂಬಾ ನಿಖರತೆಯನ್ನು ನೀಡುವ ಜಿ. ಡಿ. ವಾಯ್‌ಲರ್‌ನ ಹಾಲ್‌ಮಾರ್ಕ್ ಇರುವ ಸ್ಪಿಂಡಲ್ ಅಳವಡಿಸಲಾಗಿದೆ, ಎಂಬುದನ್ನು ಇಲ್ಲಿ ಹೇಳುವ ಅಗತ್ಯವೇ ಇರುವುದಿಲ್ಲ. ಈ ಮಶಿನ್ ತುಂಬಾ ವಿವಿಧ ಪ್ರಕಾರದ ಸ್ಪಿಂಡಲ್ (A2-4, A2-5, A2-5LB, A2-6) ಮತ್ತು ನಿಯಂತ್ರಕಗಳ (ಫಾನುಕ್, ಸಿಮೆನ್ಸ್, ಮಿತ್ಸುಬಿಶಿ) ಪರ್ಯಾಯಗಳೊಂದಿಗೆ ಉಪಲಬ್ಧವಿವೆ. ಡೈ ಬಳಸಿ ಮಾಡಿರುವ ಹಾರ್ಡ್ ಟರ್ನಿಂಗ್, ಹಾರ್ಡ್ ಮಶಿನಿಂಗ್, ಥ್ರೆಡ್ ಕಟಿಂಗ್ ಮತ್ತು ಭಾರವಾದ ಲೋಹಗಳನ್ನು ತೆಗೆಯುವ ಸಾಮರ್ಥ್ಯದ ಪರೀಕ್ಷೆಯ ಡೆಮೋ ಇಂಪ್ಟೆಕ್ಸ್ 2019 ರಲ್ಲಿ ವೀಕ್ಷಿಸಿ ಗ್ರಾಹಕರು ಸ್ವಯಂಸ್ಫೂರ್ತಿಯಿಂದ ಸ್ಪಂದಿಸಿದರು. ಇದರಿಂದಾಗಿ ಈ ಮಶಿನ್‌ನ ಸಾಮರ್ಥ್ಯ, ಹಾಗೆಯೇ ತಮ್ಮ ವರ್ಸಾಟರ್ನ್ ಈ ಹೆಸರನ್ನು ಸಾರ್ಥಕವಾಗಿ ಮಾಡುತ್ತಾ ವಿವಿಧ ಅಪ್ಲಿಕೇಶನ್‌ಗಳಲ್ಲಿ ಬಳಸಲು ಇದರಲ್ಲಿರುವ ಸರ್ವಾಂಗೀಣವಾದ ಸಹಾಯವು ಲಭಿಸಿತು.
< div="" style="float: left; margin: -25px 20px 20px 0px;">

ಕೆ. ಗಣಪತಿ ಸುಬ್ರಹ್ಮಣ್ಯಮ್
ಅಧ್ಯಕ್ಷರು, ಮಾರ್ಕೆಟಿಂಗ್ ಮತ್ತು ಸೇಲ್ಸ್, ಜಿಡಿ ವೈಲರ್ ಪ್ರೈ.ಲಿ.
9360305303
ಕೆ. ಗಣಪತಿ ಸುಬ್ರಹ್ಮಣ್ಯಮ್ ಇವರು ‘ಜಿ. ಡಿ. ವಾಯ್‌ಲರ್ ಪ್ರೈ.ಲಿ.’ ಈ ಕಂಪನಿಯಲ್ಲಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ಈ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.