ಕಾರ್ಯವಸ್ತುವಿಗೆ ಕೊನೆಯಲ್ಲಿ ಬೇಕಾಗುವ ಮಾಪನ ಮತ್ತು ಫಿನಿಶ್ ಪಡೆಯಲು ಅನೇಕ ವಿಧದ ವಿಶೇಷವಾದ ಯಂತ್ರಣೆಯ ಪ್ರಕ್ರಿಯೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಲೇಖನದಲ್ಲಿ ಇವುಗಳಲ್ಲಿ ಒಂದಾಗಿರುವ ಲ್ಯಾಪಿಂಗ್ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳೋಣ. ಲ್ಯಾಪಿಂಗ್ ಮತ್ತು ಪಾಲಿಶಿಂಗ್ ಪ್ರಕ್ರಿಯೆಯು ವಿವಿಧ ಪ್ರಕಾರದ ಮಟೀರಿಯಲ್ ಮತ್ತು ಅಪ್ಲಿಕೇಶನ್‌ಗೋಸ್ಕರ ಬಳಸಲಾಗುತ್ತದೆ. ಇದರಲ್ಲಿ ವಿವಿಧ ಲೋಹಗಳು, ಗಾಜು, ಆಪ್ಟಿಕ್ಸ್ ಮತ್ತು ಸಿರಾಮಿಕ್ ಒಳಗೊಂಡಿರುತ್ತವೆ.
ನಾವು ಈ ಹಿಂದೆ ನೋಡಿರುವ ಫ್ಯಾಮಿಂಗ್ ಪ್ರಕ್ರಿಯೆಯಲ್ಲಿ ಎಬ್ರೆಸೀವ್ ಕಣಗಳಿರುವ ಸ್ಲರೀ ಪ್ಲೇಟ್‌ನಲ್ಲಿ ಎಂಬೆಡ್ ಆಗದೇ ಮುಕ್ತವಾಗಿ ಹರಿಯಲು ಬಿಡಲಾಗುತ್ತದೆ. ಆದರೆ ಲ್ಯಾಪಿಂಗ್‌ನಲ್ಲಿ ಹಲವಾರು ಎಬ್ರೆಸೀವ್ ಕಣಗಳು ಪ್ಲೇಟ್‌ನ ಸರ್ಫೇಸ್‌ನಲ್ಲಿ ಎಂಬೆಡ್ ಆಗುತ್ತವೆ ಮತ್ತು ಉಳಿದಿರುವ ಕಣಗಳು ಮುಕ್ತವಾಗಿ ಹರಿಯುತ್ತವೆ. ಎರಡೂ ವಿಧದ ಕಣಗಳು ಕಟಿಂಗ್ ಟೂಲ್ ಎಂದು ಕೆಲಸ ಮಾಡುತ್ತವೆ. ಲ್ಯಾಪಿಂಗ್ ಪ್ರಕ್ರಿಯೆಯಲ್ಲಿ ಫ್ಯಾಮಿಂಗ್‌ನ ಹೋಲಿಕೆಯಲ್ಲಿ ಅತಿರಿಕ್ತವಾದ ಮಟೀರಿಯಲ್‌ನ ಸ್ಟಾಕ್ ತೆಗೆಯುವ ವೇಗವು ತುಂಬಾ ಕಡಿಮೆ ಇರುತ್ತದೆ ಮತ್ತು ಸರ್ಫೇಸ್‌ನ ಫಿನಿಶ್ ಮೌಲ್ಯದಲ್ಲಿ ವಿಶೇಷವಾಗಿ Rz ನಲ್ಲಿ ನಿರ್ದೋಷವಾಗಿ ನಿಯಂತ್ರಣವಿರುತ್ತದೆ.
ಲ್ಯಾಪಿಂಗ್‌ನಲ್ಲಿ, ಕಾಸ್ಟ್ ಆಯರ್ನ್‌ನ ಒಂದು ಪ್ಲೇಟ್ (ಅಂದಾಜು 200-220 BHN ಕಠಿಣತೆಯಿಂದ ಕೂಡಿರುವ) ಬಳಸಲಾಗುತ್ತದೆ. ಇದರಲ್ಲಿ ಎಬ್ರೆಸಿವ್ ನ ಕಣಗಳು ಇಂಪ್ರಿಗ್ನೇಟ್ ಮತ್ತು ಆ ಪ್ಲೇಟ್ ಲ್ಯಾಪಿಂಗ್ ಟೂಲ್ ಎಂದು ಬಳಸಬಹುದಾಗಿದೆ. ಲ್ಯಾಪಿಂಗ್ ತಂತ್ರದಲ್ಲಿ ನಿಖರತೆ ಮತ್ತು ನಿಯಂತ್ರಿಸಲ್ಪಟ್ಟ ಸ್ವರೂಪದಲ್ಲಿ ಮಟೀರಿಯಲ್ ತೆಗೆಯಲಾಗುತ್ತಿರುವುದರಿಂದ ಅದು ಲಾಭದಾಯಕವಾಗುತ್ತದೆ. ಫ್ಯಾಮಿಂಗ್‌ನಂತೆಯೇ ಲ್ಯಾಪಿಂಗ್‌ನಲ್ಲಿಯೂ ಕಾರ್ಯವಸ್ತು ಕ್ಯಾರಿಯರ್ ಪಾಕೇಟ್‌ನಲ್ಲಿ ಇಟ್ಟಿದ್ದರಿಂದ ಅವುಗಳಲ್ಲಿ ಒತ್ತಡದ ನಿರ್ಮಾಣವಾಗುವುದಿಲ್ಲ.
ಒಂದು ಬದಿಯ ಲ್ಯಾಪಿಂಗ್ (SSM)
ಕಾರ್ಯವಸ್ತುವಿನ ಯಾವ ಸರ್ಫೇಸ್‌ಗೆ ಲ್ಯಾಪಿಂಗ್ ಮಾಡಬೇಕೋ, ಆ ಸರ್ಫೇಸ್‌ನ ಲ್ಯಾಪಿಂಗ್ ಪ್ಲೇಟ್‌ಗೆ ಎದುರಾಗುವಂತಹ ಪ್ಲೇಟ್‌ನಲ್ಲಿ ಇರುವ ಕ್ಯಾರಿಯರ್ ರಿಂಗ್‌ನಲ್ಲಿ ಕಾರ್ಯವಸ್ತುವನ್ನು ಇಡಲಾಗುತ್ತದೆ. ಈ ಕ್ಯಾರಿಯರ್ ರಿಂಗ್, ಕಾರ್ಯವಸ್ತುವಿಗೆ ಅನುರೂಪವಾಗಿ ತಯಾರಿಸಲಾಗಿರುತ್ತವೆ.
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಕಾರ್ಯವಸ್ತು ಎಲ್ಲಿಯೂ ದೃಢವಾಗಿ ಹಿಡಿಯದೇ ಲ್ಯಾಪಿಂಗ್ ಪ್ಲೇಟ್‌ನ ಸರ್ಫೇಸ್ ನಲ್ಲಿ ಘರ್ಷಣೆಯಾಗಲು ಅದರ ಮೇಲ್ಭಾಗದಲ್ಲಿರುವ ಒತ್ತಡವನ್ನು ನೀಡಲಾಗುತ್ತದೆ. ಇದಕ್ಕೋಸ್ಕರ ಡೆಡ್ ವ್ಯೇಟ್ ಅಥವಾ ನ್ಯುಮಾಟಿಕ್ ಸಿಲಿಂಡರ್ ಬಳಸಲಾಗುತ್ತದೆ. ಕಾರ್ಯವಸ್ತುಗಳ ದಪ್ಪ/ ಎತ್ತರದಲ್ಲಿ ವ್ಯತ್ಯಾಸ ಇರುವುದರಿಂದ ಒತ್ತಡವನ್ನು ನೀಡುವ ಪ್ಲೇಟ್ ಮತ್ತು ಕಾರ್ಯವಸ್ತು ಇದರಲ್ಲಿ ಕುಶನಿಂಗ್ ಮಾಡಲು ಬೇರೆ ಪ್ಯಾಡ್ ನೀಡಲಾಗುತ್ತದೆ. ಅದರಲ್ಲಿ ಭಾರ ಅಥವಾ ಒತ್ತಡ ಕೊಡಲಾಗುತ್ತದೆ. ಈ ಭಾರ ಅಥವಾ ಒತ್ತಡವನ್ನು ಕೊಡುವಾಗ ಕಾರ್ಯವಸ್ತುವಿನ ವಿರ್ಸೀರ್ಣ ಮತ್ತು ಒಟ್ಟು ಉಪಲಬ್ಧವಿರುವ ವಿಸ್ತೀರ್ಣ ಇದರ ಗುಣಾಕಾರವನ್ನು ಮಾಡಿ ಅದಕ್ಕೆ ತಕ್ಕಂತೆ ಭಾರ ಅಥವಾ ಒತ್ತಡದ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಹಲವಾರು ಕಾರ್ಯವಸ್ತುಗಳನ್ನು ಮಶಿನ್‌ನಲ್ಲಿ ಲೋಡ್ ಮಾಡುವಾಗ ಅವುಗಳಿಗೆ ಕ್ಯಾರಿಯರ್‌ನ ಅಗತ್ಯವಿರುತ್ತದೆ. ಆದರೆ ಅವುಗಳಿಗೆ ಕ್ಯಾರಿಯರ್‌ನ ಆವಶ್ಯಕತೆ ಇರುವುದಿಲ್ಲ. ಕಾರ್ಯವಸ್ತುವಿನ ರಚನೆ (ಕಾನ್ಫಿಗರೇಶನ್), ಅದರ ಅಪೇಕ್ಷಿಸಿರುವ ಸರ್ಫೇಸ್ ಫಿನಿಶ್ ಇದರಿಂದ ಕ್ಯಾರಿಯರ್‌ನ ಅಗತ್ಯವಿದೆಯೇ ಇಲ್ಲವೇ ಇದನ್ನು ನಿರ್ಧರಿಸಲಾಗುತ್ತದೆ. ಮಶಿನ್ ಅನ್ ಆದನಂತರ ಎಬ್ರೆಸೀವ್ ಕಣಗಳು ಮತ್ತು ನೀರು ಅಥವಾ ಆಯಿಲ್ ಇದರ ಸ್ಲರಿ ಮೊದಲಾಗಿ ಹೊರಗೆ ಬಂದು ಅದು ಪ್ಲೇಟ್‌ನಲ್ಲಿ ಪಸರಿಸಲು ಪ್ರಾರಂಭವಾಗುತ್ತದೆ. ಇದಕ್ಕೋಸ್ಕರ ವಿಶಿಷ್ಟವಾದ ಸಮಯವನ್ನು ನಿರ್ಧರಿಸಲಾಗಿರುತ್ತದೆ. ಈ ಸಮಯವು ಮುಗಿದ ನಂತರ ಪ್ಲೇಟ್ ತಿರುಗಲು ಆರಂಭವಾಗುತ್ತದೆ. ದೊಡ್ಡ ಮಶಿನ್‌ನಲ್ಲಿ ಸ್ಲರಿ ಒಟ್ಟಾಗಲು ಒಂದು ಸ್ಟರರ್ ಮೋಟರ್ ಮತ್ತು ಪಂಪ್ ಇರುತ್ತದೆ. ಚಿಕ್ಕ ಮಶಿನ್‌ನಲ್ಲಿ ಸ್ಲರಿಗೋಸ್ಕರ ಸ್ಟರರ್ ಮೋಟರ್ ಇರುತ್ತದೆ. ನಾಲ್ಕು ರಿಂಗ್ಸ್ ಗಳ ಜೋಡಿಸುವಿಕೆಯಲ್ಲಿ ಲ್ಯಾಪಿಂಗ್ ಆಗುತ್ತಿರುವಾಗ ಲ್ಯಾಪಿಂಗ್ ಪ್ಲೇಟ್, ಫಾರ್ವರ್ಡ್ ಮತ್ತು ರಿವ್ಹರ್ಸ್ ಇಂತಹ ಎರಡೂ ದಿಕ್ಕುಗಳಲ್ಲಿ ತಿರುಗಿಸಲ್ಪಡುತ್ತದೆ. ಇದಕ್ಕೋಸ್ಕರ ವಿಶಿಷ್ಟ ಸಮಯವನ್ನು ನಿಗದಿಸಿ ಫಾರ್ವರ್ಡ್ ಮತ್ತು ರಿವ್ಹರ್ಸ್ ಈ ಎರಡು ಚಟುವಟಿಕೆಗಳನ್ನು ಮಾಡಲಾಗುತ್ತವೆ.
ಮೂರು ರಿಂಗ್‌ಗಳ ರಚನೆ (ಕಾನ್ಫಿಗರೇಶನ್) ಇರುವ ಮಶಿನ್‌ನಲ್ಲಿ ಪ್ಲೇಟ್‌ನ ಸಮತಲಕ್ಕೆ ಆಧರಿಸಿ ಹೊರ ವ್ಯಾಸ ಅಥವಾ ಒಳ ವ್ಯಾಸದಲ್ಲಿ ಓವರ್‌ಹ್ಯಾಂಗ್ ಸಿಗಬಹುದು, ಈ ರೀತಿಯಲ್ಲಿ ಈ ರಿಂಗ್ ಅಳವಡಿಸಲಾಗುತ್ತವೆ. ಉದಾಹರಣೆ, ಒಂದುವೇಳೆ ಲ್ಯಾಪ್ ಪ್ಲೇಟ್ 800 ಮಿ.ಮೀ.ನಷ್ಟು ಇದ್ದಲ್ಲಿ ಮತ್ತು ಅದರ ಸಮತಲವು 100 ಮೈಕ್ರಾನ್ ಇದ್ದಲ್ಲಿ ಕಾರ್ಯವಸ್ತುವಿನ 50 ಮಿ.ಮೀ. ವ್ಯಾಸಕ್ಕೋಸ್ಕರ, 0.39 ಮೈಕ್ರಾನ್‌ನಲ್ಲಿ ಲ್ಯಾಪಿಂಗ್ ಮಾಡಿದ ನಂತರ ಕಾರ್ಯವಸ್ತುವಿನ ಸಮತಲದ ನಿರೀಕ್ಷೆಯನ್ನು ನಾವು ಮಾಡಬಹುದು. ಆದರೂ ಕೂಡಾ ಕಾರ್ಯವಸ್ತು 100 ಮಿ.ಮೀ.ನಷ್ಟು ಇದ್ದಲ್ಲಿ ಕಾರ್ಯವಸ್ತುವಿನ ಸಮತಲವು 1.56 ಮೈಕ್ರಾನ್‌ನಲ್ಲಿ ಇಡುವಂತಹ ಅಪೇಕ್ಷೆಯನ್ನು ನಾವು ಮಾಡುತ್ತೇವೆ.
ಎರಡೂ ಬದಿಗಳ ಲ್ಯಾಪಿಂಗ್ ಮಾಡುವ (DSM) ಮಶಿನ್‌ನ ವಿವರಗಳು
4 ವೇ ಡಬಲ್ ಸೈಡ್ ಲ್ಯಾಪಿಂಗ್ ಮಶಿನ್‌ನ ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿರುವ ವಿಶಿಷ್ಟವಾದ ಹೆಸರುಗಳ ರೀತಿಯಂತೆ ವರ್ಣನೆಯನ್ನು ಮಾಡಲಾಗುತ್ತದೆ.
ಈ ಮಶಿನ್‌ನಲ್ಲಿ ಲ್ಯಾಪಿಂಗ್ ಪ್ಲೇಟ್, ಕ್ಯಾರಿಯರ್ ಪ್ಲೇಟ್, ರಿಂಗ್ ಇವುಗಳ ಒಂದೇ ಸರಳ ರೇಖೆಯ ಖಾತರಿಯನ್ನು ಮಾಡಲು ಒಂದು ಮಧ್ಯ ರೇಖೆಯಿಂದ ಡ್ರೈವ್ಹ್ ಮಾಡಿರುವ ಡ್ರೈವಿಂಗ್ ಅಸೆಂಬ್ಲಿ ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ. ಚಿತ್ರ ಕ್ರ. 3 ರಲ್ಲಿ ಎರಡೂ ಬದಿಗಳ ಲ್ಯಾಪಿಂಗ್ ಮಾಡುವಂತಹ ಮಶಿನ್‌ನಲ್ಲಿರುವ ಪ್ರಕ್ರಿಯೆಯ ಕಾಲ್ಪನಿಕ ಚಿತ್ರವನ್ನು ತೋರಿಸಲಾಗಿದೆ.
ಗಾಳಿಯ ಒತ್ತಡ ಮತ್ತು ಸಮಯ ಇವೆರಡರ ಯೋಜನೆ
ಪ್ರಕ್ರಿಯೆಯು ನಡೆಯುತ್ತಿರುವಾಗ ಲ್ಯಾಪಿಂಗ್ ಪ್ಲೇಟ್‌ನಲ್ಲಿರುವ ಗಾಳಿಯ ಒತ್ತಡ ಮತ್ತು ಪ್ರತ್ಯಕ್ಷವಾದ ಕೆಲಸದ ಸಮಯ ಇವೆರಡರ ಯೋಜನೆಯನ್ನು ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಮೂರು ಹಂತಗಳಲ್ಲಾಗುವ ಯೋಜನೆಯನ್ನು ಸಂಬಂಧಪಟ್ಟಿರುವ ಟೈಮರ್ ಮೂಲಕ ಮಾಡಿ ಪ್ರಕ್ರಿಯೆಯ ಸೆಟಪ್ ಮಾಡಲಾಗುತ್ತದೆ. ಬರುವಂತಹ ಕಾರ್ಯವಸ್ತುಗಳ ದಪ್ಪದಲ್ಲಿರುವ ವ್ಯತ್ಯಾಸವನ್ನು ತೆಗೆಯಲು ಪ್ರಾರಂಭದಲ್ಲಿ P1 ಒತ್ತಡ ಕಡಿಮೆ ಇಡಲಾಗುತ್ತದೆ. ಅಪೇಕ್ಷಿಸಿರುವ ಸ್ಟಾಕ್ ತೆಗೆಯಲು P2 ಒತ್ತಡ ಸೆಟ್ ಮಾಡಿ ಸ್ಪಾರ್ಕ್ ಅಪ್ ಸೈಕಲ್‌ಗೋಸ್ಕರ P3 ಒತ್ತಡ (ಚಿತ್ರ ಕ್ರ. 4) ಸೆಟ್ ಮಾಡಲಾಗುತ್ತದೆ. ಇದಕ್ಕೋಸ್ಕರ ಅವಶ್ಯಕವಾಗಿರುವ ಸಮಯ T1, T2 ಮತ್ತು T3 ಈ ಟೈಮರ್ ಮುಖಾಂತರ ಸೆಟ್ ಮಾಡಲಾಗುತ್ತದೆ.
ಕಾರ್ಯವಸ್ತುವಿನ ಸಮತಲ ಮತ್ತು ಸಮಾನಾಂತರತೆ ಈ ಎರಡೂ ವಿಷಯಗಳೂ ಲ್ಯಾಪ್ ಪ್ಲೇಟ್‌ನ ಚಿತ್ರದಲ್ಲಿರುತ್ತವೆ. ಕಾರ್ಯವಸ್ತುಗಳ ಸರ್ಫೇಸ್ ಸಮತಟ್ಟಾಗಿ ಮಾಡಲು ಪ್ಲೇಟ್‌ನ ಸಮತಟ್ಟನ್ನು ಸರಿಯಾಗಿ ಇಡುವುದು ಎಲ್ಲಕ್ಕಿಂತಲೂ ಮಹತ್ವದ್ದಾಗಿರುತ್ತದೆ. ಪ್ಲೇಟ್‌ನ ಸಮತಲದ ಕಂಡಿಶನಿಂಗ್ ಮಾಡಲು ಅನೇಕ ಪದ್ಧತಿಗಳಿವೆ. DSM ನಲ್ಲಿ ಪಾರ್ವರ್ಡ್ ಅಥವಾ ರಿವರ್ಸ್ ಯಂತ್ರಣೆಯನ್ನು ಬಳಸಿ ಪ್ಲೇಟ್‌ನ ಕಂಡಿಶನಿಂಗ್ ಮಾಡಬಹುದಾಗಿದೆ.
ಆಟೋಮೋಟಿವ್ ಪವರ್ ಸ್ಟಿಯರಿಂಗ್ ಅಸೆಂಬ್ಲಿಯಲ್ಲಿ ಬಳಸಲಾಗುವ ಸ್ಟೆಟರ್‌ನ ಉದಾಹರಣೆಯನ್ನು ನೋಡೋಣ. ಪಾವರ್ ಸ್ಟಿಯರಿಂಗ್ ಅಸೆಂಬ್ಲಿಯಲ್ಲಿರುವ ಸ್ಟೆಟರ್ ಮತ್ತು ರೋಟರ್‌ನ ಜೋಡಿಯು ಪಾವರ್ ಸ್ಟಿಯರಿಂಗ್‌ನ ಸಹಜ ಮತ್ತು ಸುಲಭವಾದ ಬಳಕೆಗೆ ಪರಿಣಾಮಕಾರಿಯಾಗಿರುತ್ತದೆ. ಇದರಿಂದಾಗಿ ಅದರ ಸಮತಲವು ಸರ್ಫೇಸ್‌ನ ಫಿನಿಶ್, ಸಮಾನಾಂತರತೆ ಮತ್ತು ದಪ್ಪದ ಟಾಲರನ್ಸ್ ಇಂತಹ ಎಲ್ಲ ಮಹತ್ವದ ಪ್ಯಾರಾಮೀಟರ್‌ಗಳಲ್ಲಿ ನಿಯಂತ್ರಣೆಯನ್ನು ಇಡಬೇಕಾಗುತ್ತದೆ, ಇದರಿಂದಾಗಿ ಆ ಭಾಗಗಳು ಇನ್ನಿತರ ಭಾಗಗಳೊಂದಿಗೆ ಸಹಜವಾಗಿ ಅದಲುಬದಲು ಮಾಡುವುದು ಎಂಬುದರ ಕುರಿತಾದ ಖಾತರಿಯನ್ನು ಮಾಡಬಹುದಾಗಿದೆ.
ಇಲ್ಲಿ ಗಮನಿಸಲಾಗಿರುವ ಕಾರ್ಯವಸ್ತುವಿನ ಮಟೀರಿಯಲ್ 20MnCr5 ಆಗಿದೆ. ಈ ಕಾರ್ಯವಸ್ತುವಿನ ಆಕಾರ Ø82 ಮಿ.ಮೀ. X 13 ಮಿ.ಮೀ.ನಷ್ಟು (ದಪ್ಪ) ಇರುತ್ತದೆ. ಎಲ್ಲ ಕಾರ್ಯವಸ್ತುಗಳ ಮಾಪನಗಳು ವಿಶಿಷ್ಟವಾದ ಟಾಲರನ್ಸ್ ಗಿಂತ ಕಡಿಮೆ ಇರುವುದೂ ಅಗತ್ಯವಾಗಿದೆ. ಹಾಗೇಯೇ ಎಲ್ಲ ಭಾಗಗಳನ್ನು ಅದಲುಬದಲು ಮಾಡುವಂತಿರುವುದು ಅಗತ್ಯವಾಗಿದೆ. ಲ್ಯಾಪಿಂಗ್‌ಗೆ ಬರುವ ಕಾರ್ಯವಸ್ತುವಿನ ದಪ್ಪವು 13.4 ಮಿ.ಮೀ. ±0.02 ಮಿ.ಮೀ. ಇರುತ್ತದೆ. ಅದನ್ನು 13.39 ± 0.005 ರಷ್ಟು ಕಡಿಮೆ ಮಾಡಬೇಕಾಗುತ್ತದೆ. ಲ್ಯಾಪಿಂಗ್‌ನ ಮುಂಚೆ ಕಾರ್ಯವಸ್ತುವಿನ ಸರ್ಫೇಸ್ ಗ್ರೈಂಡಿಂಗ್‌ನಲ್ಲಿ ಪ್ರೀ ಗ್ರೈಂಡಿಂಗ್ ಮಾಡಲಾಗುತ್ತದೆ. ಈ ಹಿಂದೆ ಮಾಡಲಾಗಿರುವ ಪ್ರಕ್ರಿಯೆಯಲ್ಲಿ ಸರ್ಫೇಸ್ ಗೆ 0.8 ಮೈಕ್ರಾನ್ Ra ತನಕದ ಫಿನಿಶ್ ಲಭಿಸುತ್ತದೆ. ಅದನ್ನು 0.2 ಮೈಕ್ರಾನ್ Ra ತನಕ ಸುಧಾರಿಸುವ ಆವಶ್ಯಕತೆ ಇರುತ್ತದೆ. ಪ್ರತಿಯೊಂದು 7 ಗಂಟೆಗಳ ಶಿಫ್ಟ್ ನಲ್ಲಿ 600 ಕಾರ್ಯವಸ್ತುಗಳ ಲ್ಯಾಪಿಂಗ್ ಮಾಡುವ ಉದ್ದೇಶವು ಇರುತ್ತದೆ. ಎರಡೂ ಬದಿಗಳಲ್ಲಿ ಲ್ಯಾಪಿಂಗ್‌ಗೋಸ್ಕರ ಇರುವ ಕಾರ್ಯವಸ್ತುಗಳ ಸಮಾನಾಂತರತೆಯು 10 ಮೈಕ್ರಾನ್‌ನತಕ ಇರುತ್ತದೆ ಮತ್ತು ಅದು 2 ಮೈಕ್ರಾನ್‌ತನಕ ಸುಧಾರಿಸುವುದನ್ನು ಅಪೇಕ್ಷಿಸಲಾಗುತ್ತದೆ. ಇಲ್ಲಿ ಬಳಸಲಾಗಿರುವ ಮಶಿನ್, ಸ್ಪೀಡ್‌ಫ್ಯಾಮ್ ಡಬಲ್ ಸೈಡೆಡ್ ಲ್ಯಾಪಿಂಗ್ ಮಶಿನ್ ಮಾಡೆಲ್ 9B-5L ಇರುತ್ತದೆ. (ಚಿತ್ರ ಕ್ರ. 5).
ಮಶಿನ್‌ನ ಆಯ್ಕೆ
ಸೂಕ್ತವಾಗಿರುವ ಆಕಾರದ ಮಶಿನ್ ಆಯ್ಕೆ ಮಾಡುವಲ್ಲಿ ಪ್ರಭಾವವನ್ನು ಬೀರುವ ಘಟಕಗಳನ್ನು ನೋಡುವಾಗ ನಾವು ಸ್ಟೇಟರ್‌ನ ಉದಾಹರಣೆಯ ಸಂದರ್ಭವನ್ನು ಪಡೆಯೋಣ.
1. ಅವಶ್ಯಕವಾಗಿರುವ ಉತ್ಪಾದನೆ/ ಗಂಟೆ: 256 ಕಾರ್ಯವಸ್ತು
2. ಕಾರಖಾನೆಯ ಕೆಲಸದ ಸಾಮರ್ಥ್ಯಃ 85%
3. ತೆಗೆದು ಹಾಕುವಂತಹ ಮಟೀರಿಯಲ್ಃ 10 ಮೈಕ್ರಾನ್
4. ಲ್ಯಾಪಿಂಗ್‌ನಂತರ ಅಗತ್ಯವಿರುವ ಸರ್ಫೇಸ್ ಫಿನಿಶ್ಃ 0.8Ra ಇದರಿಂದಾಗಿ SFBLAP 08 ಆಯ್ಕೆ ಮಾಡಲಾಯಿತು.
5. ಸಮತಲದ ಟಾಲರನ್ಸ್: 3 ಮೈಕ್ರಾನ್‌ಗಿಂತ ಕಡಿಮೆ
6. ಸಮಾನಾಂತರದ ಟಾಲರನ್ಸ್: 2 ಮೈಕ್ರಾನ್‌ಗಿಂತ ಕಡಿಮೆ
7. Cpk ಕನಿಷ್ಟ 1.66
ಪ್ರಕ್ರಿಯೆಯ ಇನ್ನಿತರ ಘಟಕಗಳ ಆಯ್ಕೆಯಲ್ಲಿ ಪ್ರಭಾವವನ್ನು ಬೀರುವ ಘಟಕಗಳು
1. ಎಬ್ರೆಸೀವ್‌ನ ಆಯ್ಕೆ
ಹೆಚ್ಚು ಕಾಲ ಶಾರ್ಪ್‌ನೆಸ್‌ನ ಬಾಳಿಕೆ ಇರುವ ಕಟಿಂಗ್ ಎಡ್ಜ್ ಪಡೆಯಲು ಲ್ಯಾಪಿಂಗ್‌ನಲ್ಲಿ ಬಳಸಲಾಗುವ ಪ್ರಸಿದ್ಧವಾದ ಎಬ್ರೆಸೀವ್ ಕಣಗಳ ಗಾತ್ರವು ಸೂಕ್ಷ್ಮವಾದ ತುಂಡುಗಳಂತಿರುತ್ತವೆ.
ಸಾಮಾನ್ಯವಾಗಿ ಬಳಸಲಾಗುವ ಎಬ್ರೆಸೀವ್
• ಬೋರಾನ್ ಕಾರ್ಬೈಡ್ (B4C) : ಇದರಿಂದ (ಚಿತ್ರ ಕ್ರ. 6) ತುಂಬಾ ವೇಗವಾಗಿ ಮಟೀರಿಯಲ್ ಹೊರಬರುತ್ತದೆ. ಆದರೆ ಒಮ್ಮೊಮ್ಮೆ ಸರ್ಫೇಸ್‌ನ ಫಿನಿಶ್‌ನ ಮೌಲ್ಯದಲ್ಲಿ Rz ನ ಮತ್ತು ಅದರಿಂದ Rc ಯ ಸಂದರ್ಭದಲ್ಲಿ ಹೊಂದಾಣಿಕೆಯನ್ನು ಮಾಡಬೇಕಾಗುತ್ತದೆ.
• ಸಿಲಿಕಾನ್ ಕಾರ್ಬೈಡ್ (SiC) : ಇದರಿಂದಾಗಿ ಮಧ್ಯಮ ವೇಗದಲ್ಲಿ ಮಟೀರಿಯಲ್ ಹೊರಬರುತ್ತದೆ. ಆದರೆ Rz ನ ಮತ್ತು ಇದರಿಂದಾಗಿ Ra ಇದರ ಸಂಬಂಧಪಟ್ಟ ಸರ್ಫೇಸ್‌ನಲ್ಲಿ ಫಿನಿಶ್‌ನ ಮೌಲ್ಯಕ್ಕೆ ಹೆಚ್ಚು ನಿಯಂತ್ರಣೆಯು ಲಭಿಸುತ್ತದೆ. SiC ಕಪ್ಪು ಸಿಲಿಕಾನ್ ಅಥವಾ ಹಸಿರು ಸಿಲಿಕಾನ್ ಈ ವಿಧದಲ್ಲಿ ಉಪಲಬ್ಧವಿರುತ್ತವೆ.
• ಅಲ್ಯುಮಿನಿಯಮ್ ಆಕ್ಸೈಡ್ (AI2O3) : ಇದರಿಂದ ಮಟೀರಿಯಲ್ ತೆಗೆಯುವ ವೇಗವು ಹೊಲಿಕೆಯಲ್ಲಿ ಕಡಿಮೆ ಲಭಿಸುತ್ತದೆ. ಆದರೆ Rz ನ ಮತ್ತು ಇದರಿಂದಾಗಿ Ra ಯ ಸಂದರ್ಭದಲ್ಲಿ ಸರ್ಫೇಸ್‌ನ ಫಿನಿಶ್ ಮೌಲ್ಯಗಳು ಹೆಚ್ಚು ಒಳ್ಳೆಯದಾಗಿರುತ್ತವೆ.
ಯಾವುದೇ ಪರಿಸ್ಥಿತಿಯಲ್ಲಿ ನಿರಂತರವಾಗಿ ಒಳ್ಳೆಯ ಪರಿಣಾಮಗಳನ್ನು ಪಡೆಯಲು ಪ್ರತಿಯೊಂದು ಚಾರ್ಜ್‌ನಲ್ಲಿ ಅಬ್ರೇಸಿವ್ ಕಣಗಳ ಆಕಾರ, ಎಬ್ರೆಸೀವ್ ನ ವಿಶಿಷ್ಟವಾದ ಮೂಲಭೂತ ಆಕಾರದ ಸಂದರ್ಭದಲ್ಲಿ, ನಿಯಂತ್ರಿಸುವುದೂ ಅಗತ್ಯವಾಗಿದೆ. ಒಂದು ಮೈಕ್ರಾನ್‌ಗಿಂತ ಕಡಿಮೆ ಆಕಾರದಿಂದ ಅದು 60 ರಂದ 80 ಮೈಕ್ರಾನ್‌ನ ಮಟ್ಟದ ತನಕ ಎಬ್ರೆಸೀವ್ ನ ವಿವಿಧ ಮೂಲಭೂತ ಆಕಾರಗಳಿರುತ್ತವೆ. ಲ್ಯಾಪಿಂಗ್‌ನಂತರ ಅಗತ್ಯವಿರುವ ಸರ್ಫೇಸ್ ಫಿನಿಶ್‌ನ ಮೌಲ್ಯದಲ್ಲಿ ಎಬ್ರೆಸೀವ್‌ನ ಯೋಗ್ಯ ವಿಧದ ಮತ್ತು ಆಕಾರದ ಆಯ್ಕೆಯು ಅವಲಂಬಿಸಿರುತ್ತದೆ. ಸ್ಟೆಟರ್ ಈ ಭಾಗಕ್ಕೋಸ್ಕರ ಬಳಸಲಾಗಿರುವ ಎಬ್ರೆಸೀವ್ ಹಸಿರು ಬಣ್ಣದ್ದಾಗಿರುತ್ತದೆ.
2. ವೆಹಿಕಲ್ ಆಯ್ಕೆ
ಸಂಪೂರ್ಣ ಪ್ರಕ್ರಿಯೆಯಲ್ಲಿ ಎಬ್ರೆಸೀವ್ ಅದರ ವೆಹಿಕಲ್‌ನೊಂದಿಗೆ ಸೇರಿರುವುದನ್ನು ಖಚಿತ ಪಡಿಸಿ ವೆಹಿಕಲ್‌ನ ಸಸ್ಪೆನ್ಶನ್ ನಂತಹ ಗುಣಧರ್ಮವು ಅತ್ಯುತ್ತಮವಾಗಿರುವುದೂ ಅಗತ್ಯವಾಗಿದೆ. ಇದರೊಂದಿಗೆ ಅದರಲ್ಲಿ ಮಿಶ್ರಣವಾಗಿರುವ ಎಬ್ರೆಸೀವ್ ಕಣಗಳ ಸವೆತವಾಗಿದ್ದರಿಂದ ಕಟಿಂಗ್‌ನ ಕೆಲಸವು ನಿಂತನಂತರ ಈ ಕಣಗಳು ವೆಹಿಕಲ್‌ನಿಂದ ವಿಂಗಡಿಸಿ ರೀಕ್ಲೇಮ್ ಮಾಡಲ್ಪಡಬೇಕು. ವೆಹಿಕಲ್ ರೀಕ್ಲೇಮ್ ಮಾಡಿರುವುದರಿಂದ ಪ್ರತಿಯೊಂದು ವಸ್ತುವಿನ ಲ್ಯಾಪಿಂಗ್‌ನ ಖರ್ಚಿನಲ್ಲಿ ತುಂಬಾ ವ್ಯತ್ಯಾಸವು ಉಂಟಾಗುತ್ತದೆ. ಪ್ರಕ್ರಿಯೆಯಲ್ಲಿ ವೆಹಿಕಲ್‌ನೊಂದಿಗೆ ಸಂಬಂಧ ಉಂಟಾಗುವ ಕಾರ್ಯವಸ್ತುವಿಗೆ ತುಕ್ಕು ಹಿಡಿಯಬಾರದು ಎಂದು ನೀರನ್ನು ಬಳಸಿರುವ ವೆಹಿಕಲ್‌ನಲ್ಲಿ ಯೋಗ್ಯವಾದ ಘಟಕಗಳು ಇರುವುದೂ ಅವಶ್ಯಕವಾಗಿದೆ. ಸ್ಟೆಟರ್‌ಗೋಸ್ಕರ ಆಯಿಲ್‌ಗೆ ಸರಿಹೊಂದುವ ವೆಹಿಕಲ್ ಬಳಸಲಾಗಿದೆ.
3. ಸ್ಲರಿ ತಯಾರಿಸುವುದು
ಎರಡು ರೊಟೇಶನ್‌ಗಳ ನಡುವೆ ಅಥವಾ ಕೆಲಸದ ಮಟ್ಟವನ್ನು ಬದಲಾಯಿಸುವಾಗ ಮಶಿನ್‌ನ ಬಳಕೆಯು ಆಗುವುದಿಲ್ಲ, ಅಗ ಸ್ಲರಿಯ ಮಿಶ್ರಣವನ್ನು ಮಿಕ್ಸ್ ಆಗುತ್ತಿರಲು ಸ್ಟರರ್ ಮೋಟರ್ ಮತ್ತು ಅಸೆಂಬ್ಲಿ ಇರುವ ಯೋಗ್ಯವಾದ ಸ್ಲರಿ ಪಂಪ್ (ಚಿತ್ರ ಕ್ರ. 7) ಬಳಸುವುದೂ ಮಹತ್ವದ್ದಾಗಿದೆ.
ಇದರ ಹೊರತಾಗಿ, ವಿಶೇಷವಾಗಿ ನೀರು ಇರುವ ವೆಹಿಕಲ್ ಉಪಯೋಗಿಸುವಾಗ ನೀರಿನ ಸಂಪರ್ಕದಲ್ಲಿ ಬರುವ ಪಂಪ್‌ನ ಭಾಗಗಳ ಯೋಗ್ಯವಾದ ರಕ್ಷಣೆಯ ಖಾತರಿ ಇರುವ ಯೋಗ್ಯವಾದ ಸ್ಲರಿ ಪಂಪ್ ಆಯ್ಕೆ ಮಾಡುವುದೂ ಮಹತ್ವದ್ದಾಗಿದೆ. ಸ್ಲರಿಯಲ್ಲಿರುವ ಎಬ್ರೆಸೀವ್‌ನ ಪ್ರಮಾಣದ ಯೋಗ್ಯವಾದ ಆಯ್ಕೆ ಮಾಡುವುದೂ ತುಂಬಾ ಅವಶ್ಯಕವಾಗಿದೆ. ಹಾಗೆಯೇ ಕೆಲಸದ ಸಾಮರ್ಥ್ಯ ಮತ್ತು ಲಾಭ ಈ ಎರಡೂ ವಿಷಯಗಳನ್ನು ಸಾಧಿಸಲು ಸ್ಲರಿ ಮತ್ತು ಮಿಶ್ರಣಗಳ ಯೋಗ್ಯವಾದ ಅಂಕೆ-ಸಂಖ್ಯೆಗಳನ್ನು ಕಾಪಾಡುವಲ್ಲಿ ಗಮನ ಹರಿಸುವುದೂ ಅಗತ್ಯವಾಗಿದೆ.
DSM ನಲ್ಲಿ ಒಂದು ಸಲ ಪಡೆದಿರುವ ಸ್ಲರಿ ನಿರ್ದಿಷ್ಟ ಸಂಖ್ಯೆಯ ಕಾರ್ಯವಸ್ತುವಿನ ತನಕ ಬಳಸಲಾಗುತ್ತದೆ. ಅದರ ನಂತರ ಸಾಮರ್ಥ್ಯವಿರುವ ಯಂತ್ರಣೆಯ ಖಾತರಿಯನ್ನು ಮಾಡಲು ಹಳೆ ಸ್ಲರಿಯನ್ನು ತೆಗೆದು ಹೊಸ ಸ್ಲರಿಯನ್ನು ಸೇರಿಸಬೇಕಾಗುತ್ತದೆ. ಬಳಸಿರುವ ಸ್ಲರಿಯಿಂದ ಮತ್ತೆ ಉಪಯೋಗಿಸಲು ಯೋಗ್ಯವಾಗಿರುವ ಆಯಿಲ್‌ನ ರೀಕ್ಲೇಮ್ ಮಾಡಲು, ಸ್ಲರಿ ಆಯಿಲ್ ರೀಕ್ಲೇಮ್ ಪ್ರಣಾಳಿಕೆಯಲ್ಲಿ ಸೇರಿಸಬೇಕಾಗುತ್ತದೆ.
4. ಕ್ಯಾರಿಯರ್‌ನ ಆಯ್ಕೆ
ಒಂದು ವೇಳೆ ಯಾವುದೇ ಕಾರ್ಯವಸ್ತುವನ್ನು ರಿಟೆನಿಂಗ್‌ನಲ್ಲಿ ಇಡುವುದು ಸಾಧ್ಯವಿಲ್ಲದಿದ್ದಲ್ಲಿ, ಅನೇಕ ಕಾರ್ಯವಸ್ತುಗಳನ್ನು ಕ್ಯಾರಿಯರ್‌ನಲ್ಲಿ ತಯಾರಿಸಿರುವ ಪ್ಯಾಕೇಟ್‌ನಲ್ಲಿ ಇಡುವುದೂ ತುಂಬಾ ಅವಶ್ಯಕವಾಗಿದೆ. ಲ್ಯಾಪಿಂಗ್‌ನ ಪ್ರಕ್ರಿಯೆಯಲ್ಲಿ ಲ್ಯಾಪಿಂಗ್ ಪ್ಲೇಟ್‌ನ ಸವೆತವು ಒಂದೇ ರೀತಿಯಲ್ಲಿ ಆಗುತ್ತಿರುವುದನ್ನು ಖಚಿತ ಪಡಿಸಲು ಕ್ಯಾರಿಯರ್‌ನ ವಿಶಿಷ್ಟ ವಿಧದಲ್ಲಿ ಡಿಸೈನ್ ಮಾಡಬೇಕಾಗುತ್ತದೆ. ಕೇಸ್ ಸ್ಟಡಿಯಲ್ಲಿರುವ ಸ್ಟೆಟರ್‌ಗೋಸ್ಕರ ಎಸಳುಗಳ ಆಕಾರದಂತೆ ಪಾಕೇಟ್ ಇರುವ ಕ್ಯಾರಿಯರ್ ಬಳಸಲಾಗುತ್ತದೆ.
5. ಇತರ ಮಶಿನ್ ಟೆಸ್ಟಿಂಗ್ ಪ್ಯಾರಾಮೀಟರ್‌ನ ಆಯ್ಕೆ
ಇತರ ಅನೇಕ ಪ್ಯಾರಾಮೀಟರ್, ಉದಾಹರಣೆ, ಪ್ಲೇಟ್‌ನ ಆರ್.ಪಿ.ಎಮ್., ರಿಟೇನಿಂಗ್ ರಿಂಗ್ ತಿರುಗುವಂತಹ ದಿಕ್ಕು, ಗಾಳಿಯ ಒತ್ತಡದ ಆಯ್ಕೆ (ಪ್ರಾರಂಭದಲ್ಲಿ ಕಡಿಮೆ ಮತ್ತು ನಂತರ ಸ್ವಲ್ಪ ಹೆಚ್ಚು ಒತ್ತಡ), ಒತ್ತಡಕ್ಕೆ ಅನುಸಾರವಾಗಿ ಯೋಗ್ಯ ಟೈಮ್ ಸೆಟಿಂಗ್‌ನ ಆಯ್ಕೆ ಇತ್ಯಾದಿ ಸೆಟ್ ಮಾಡಬೇಕಾಗುತ್ತದೆ.
DSM ನಲ್ಲಿ ಲ್ಯಾಪಿಂಗ್ ಆದನಂತರ ಕಾರ್ಯವಸ್ತುಗಳ ಸಮತಲ ಮತ್ತು ಸರ್ಫೇಸ್ ಫಿನಿಶ್‌ನ ಮಾಪನವನ್ನು ಮಾಡಲಾಗುತ್ತದೆ. ಈ ಮಶಿನ್ 100 ಮಿ.ಮೀ. ಕ್ಯಾರಿಯರ್ ವ್ಯಾಸದಿಂದ 450 ಮಿ.ಮೀ. ಕ್ಯಾರಿಯರ್ ವ್ಯಾಸದ ತನಕ ಉಪಲಬ್ಧವಿರುತ್ತವೆ.
< div="" style="float: left; margin: -25px 20px 20px 0px;">
ಪ್ರಫುಲ್ ಗೊವಂಡೆ
ವ್ಯವಸ್ಥಾಪಕ ನಿರ್ದೇಶಕರು, ಸ್ಪೀಡ್‌ಕ್ಯಾಮ್ (ಇಂಡಿಯಾ) ಪ್ರೈ.ಲಿ.
09833581046
ಪ್ರಫುಲ್ ಗೋವಂಡೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಇವರು ‘ಸ್ಪೀಡ್‌ಫ್ಯಾಮ್’ ಕಂಪನಿಯಿಂದ ಫ್ಲೇಟ್ ಸರ್ಫೇಸ್ ಸುಪರ್ ಫಿನಿಶಿಂಗ್‌ಗೋಸ್ಕರ ಆಮದು ಮಾಡಲಾಗುವ ಮಶಿನ್, ಕಂಜ್ಯುಮೇಬಲ್ ಮತ್ತು ಮಾಪನಗಳ ಉಪಕರಣಗಳಿಗೆ ಯೋಗ್ಯವಾದ ಸ್ವದೇಶದ ಪರ್ಯಾಯವನ್ನು ಗ್ರಾಹಕರಿಗೆ ಉಪಲಬ್ಧ ಮಾಡಿರುತ್ತಾರೆ.