ಸರಳ ರೇಖೆಯಲ್ಲಿರುವ ರೆಸಿಪ್ರೊಕೆಟಿಂಗ್ ಚಲನೆಯು ವರ್ತುಲಾಕಾರದಲ್ಲಿ ರೂಪಾಂತರಿಸಲ್ಪಡುವ ಕ್ರ್ಯಾಂಕ್ ಶಾಫ್ಟ್, ಇಂಜಿನ್ ನಲ್ಲಿರುವ ಒಂದು ಪ್ರಮುಖವಾದ ಭಾಗವಾಗಿದೆ. ಇದರಿಂದಾಗಿ ವಾಹನಗಳಿಗೆ ವೇಗವು ಲಭಿಸುತ್ತದೆ. ಕ್ರ್ಯಾಂಕ್ ಶಾಫ್ಟ್ ನ ನಿರ್ಮಿತಿಯನ್ನು ಮಾಡುವುದು ಹಾಗೆ ನೋಡಿದರೆ ಕ್ಲಿಷ್ಟವಾದ ಕೆಲಸವಾಗಿದೆ. ಆದರೆ ವಾಹನಗಳ ಉದ್ಯಮದಲ್ಲಿ ಇದರ ಆವಶ್ಯಕತೆಯು ಬೃಹತ್ ಪ್ರಮಾಣದಲ್ಲಿದೆ. ಇದರಿಂದಾಗಿ ಕ್ರ್ಯಾಂಕ್ ಶಾಫ್ಟ್ ನ ಉತ್ಪಾದನೆಯನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಬರುತ್ತಿರುವ ಹೊಸ ತಂತ್ರಜ್ಞಾನವನ್ನು ಎಲ್ಲರೂ ಸ್ವಾಗತಿಸುತ್ತಾರೆ. ಕಟಿಂಗ್ ಟೂಲ್ ಗಳಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಡ್ ವಿಕ್ ಕೊರೋಮಂಟ್ ಈ ಕಂಪನಿಯು ವಾಹನ ಉದ್ಯಮಕ್ಕೆ ಬೇಕಾಗುವ ಯಂತ್ರಭಾಗಗಳ (ಪಾರ್ಟ್ಸ್) ಯಂತ್ರಣೆಗೆ (ಮಶಿನಿಂಗ್) ಯಾವಾಗಲೂ ಅಮೂಲ್ಯವಾದ ಯೋಗದಾನವನ್ನು ನೀಡುತ್ತಿದ್ದಾರೆ. ಕಡಿಮೆ ವ್ಯಾಸ ಮತ್ತು ಹೆಚ್ಚು ಉದ್ದ, ಹಾಗೆಯೇ ಓರೆಯಾಗಿರುವುದರಿಂದ ಕ್ರ್ಯಾಂಕ್ ಶಾಫ್ಟ್ ಗೆ ಆಯಿಲ್ ಹೋಲ್ ಮಾಡುವುದು ಕಷ್ಟಕರವಾದ ಕೆಲಸವಾಗಿರುತ್ತದೆ. ಆದರೆ ಸ್ಯಾಂಡ್ ವಿಕ್ ಇವರು ಈ ಸಮಸ್ಯೆಗೆ ಒಂದು ಪ್ರಭಾವಶಾಲಿಯಾದ ಉಪಾಯವನ್ನು ಹುಡುಕಿದ್ದಾರೆ. ಇದರಿಂದಾಗಿ ಉತ್ಪಾದಕತೆಯಲ್ಲಿ ಹೆಚ್ಚಳ ಆಗುವುದರೊಂದಿಗೆ ಟೂಲ್ ಗಳ ಬಾಳಿಕೆಯೂ ವೃದ್ಧಿಸುತ್ತದೆ.
ಕ್ರ್ಯಾಂಕ್ ಶಾಫ್ಟ್ ನ ಮಟೀರಿಯಲ್ ಹೆಚ್ಚಾಗಿ ಕಾಸ್ಟ್ ಆಯರ್ನ್ (ISO K) ಅಥವಾ ಸ್ಟೀಲಿನದ್ದಾಗಿದ್ದು (ISO P) ಅದು ಕಾಸ್ಟಿಂಗ್, ಫೋರ್ಜಿಂಗ್ ಬಿಲೆಟ್ಸ್ ಈ ರೀತಿಯಲ್ಲಿ ತಯಾರಿಸಲಾಗುತ್ತವೆ. ಕಾಸ್ಟ್ ಆಯರ್ನ್ ಪ್ರಮುಖವಾಗಿ ನೋಡ್ಯುಲರ್ ಗ್ರಾಫೈಟ್ ನಿಂದ ಕೂಡಿರುತ್ತವೆ. (CGG 60, CGG 70 ಮತ್ತು CGG 80) ಆದರೆ ಫೋರ್ಜ್ಡ್ ಸ್ಟೀಲ್ 42CrMo4 ಮತ್ತು C-38 ಈ ವಿಧದಲ್ಲಿ ಇರುತ್ತವೆ. ಕ್ರ್ಯಾಂಕ್ ಶಾಫ್ಟ್ ಕಾಸ್ಟ್ ಆಯರ್ನ್ ಅಥವಾ ಸ್ಟೀಲ್ ನಿಂದ ಮಾಡಬೇಕೇ ಎಂಬುದು ಅದರ ತಾಕತ್ತು, ತೂಕ ಮತ್ತು ಬೆಲೆ ಇವೆಲ್ಲವುಗಳ ವಿಚಾರ ಮಾಡಿ ನಿರ್ಧರಿಸಲಾಗುತ್ತದೆ. ಇತ್ತೀಚೆಗೆ ಇದರ ಪ್ರಮಾಣವು ಸಾಮಾನ್ಯವಾಗಿ 50:50 ಇದೆ.
ಸಮಸ್ಯೆಗಳು
ಎರಡೂ ಬದಿಗಳಲ್ಲಿ ಬೇರಿಂಗ್ ಗೆ ಆಯಿಲ್ ಪೂರೈಸಲು ಕ್ರ್ಯಾಂಕ್ ಶಾಫ್ಟ್ ಗೆ ಸಾಮಾನ್ಯವಾಗಿ ನಾಲ್ಕು ಓರೆಯಾದ ರಂಧ್ರಗಳನ್ನು ಮಾಡಲಾಗಿರುತ್ತದೆ. (ಈ ಸಂಖ್ಯೆಯು ಸಿಲಿಂಡರ್ ನ ಅಂಕೆಗಳಿಗೆ ಅನುಸಾರವಾಗಿ ಬದಲಾಗುತ್ತದೆ.) ಪ್ರತಿಯೊಂದು ರಂಧ್ರವು ಸಾಧಾರಣವಾಗಿ 27 ಡಿಗ್ರಿಯಿಂದ 29 ಡಿಗ್ರಿ ಅಂಶದ ಕೋನದಲ್ಲಿರುತ್ತದೆ ಮತ್ತು ಶಾಫ್ಟ್ ನ ಆಕಾರಕ್ಕೆ ಅನುಗುಣವಾಗಿ ಅದರ ವ್ಯಾಸವು 5 ರಿಂದ 8 ಮಿ.ಮೀ.ನಷ್ಟು ಇರುತ್ತದೆ. ಆದರೆ ಆಳವು ಸುಮಾರು 90 ಮಿ.ಮೀ. ಇರುತ್ತದೆ. ಈ ರಂಧ್ರಗಳು ಒಂದಕ್ಕೊಂದು ಜೋಡಿಸಲ್ಪಟ್ಟ ಎರಡು ಜರ್ನಲ್ ಮತ್ತು ಕೌಂಟರ್ ವೇಟ್ ನೊಳಗಿಂದ ಆರುಪಾರಾಗಿರುತ್ತವೆ. ಅನೇಕ ಸಲ ಈ ಓರೆಯಾಗಿರುವ ರಂಧ್ರಗಳು ಮತ್ತು ಹಲವಾರು ನೇರವಾದ ರಂಧ್ರಗಳು ಒಂದಕ್ಕೊಂದು ಛೇದಿಸಲ್ಪಡುತ್ತವೆ. ರಂಧ್ರಗಳ ವ್ಯಾಸ ಮತ್ತು ಉದ್ದ ಇವುಗಳ ಗುಣಾಕಾರವು ಹೆಚ್ಚು ಇರುವುದರಿಂದ, ಅಂದರೆ ತುಂಡುಗಳ ಆಳವು ವ್ಯಾಸದ ಸುಮಾರು 25 ಪಟ್ಟು ಇರುವುದರಿಂದ ಈ ಪ್ರಕ್ರಿಯೆಯು ಕ್ರ್ಯಾಂಕ್ ಶಾಫ್ಟ್ ನ ಪ್ರೊಡಕ್ಷನ್ ಲೈನ್ ನಲ್ಲಿಯೇ, ಆದರೆ ಡೀಪ್ ಹೋಲ್ ಡ್ರಿಲ್ಲಿಂಗ್ ಮಾಡುವ ಸ್ಪೆಶಲ್ ಮಶಿನ್ ನ ಮೂಲಕ ಮಾಡಲಾಗುತ್ತದೆ.
ಈ ರೀತಿಯಲ್ಲಿ ಕ್ರ್ಯಾಂಕ್ ಶಾಫ್ಟ್ ನಲ್ಲಿ ಆಯಿಲ್ ರಂಧ್ರಗಳ ಡ್ರಿಲ್ಲಿಂಗ್ ಮಾಡುವುದು ನಿಜವಾಗಿಯೂ ಬಹು ದೊಡ್ಡ ಸಮಸ್ಯೆಯಾಗಿತ್ತು. ಇದರಲ್ಲಿ ಒಂದಾದರೆ ಕೋನದಲ್ಲಿ ಡ್ರಿಲ್ ನಡೆಸುವುದು, ಕಡಿಮೆ ವ್ಯಾಸ ಮತ್ತು ಹೆಚ್ಚು ಉದ್ದ, ಈ ಕಾರಣದಿಂದ ಯಂತ್ರಣೆಯಿಂದಾಗಿ ತಯಾರಾಗುವ ಚಿಪ್ ಬರಿದಾಗಿಸುವುದು, ಕೆಲವೊಮ್ಮೆ ಡ್ರಿಲ್ ಇನ್ನೊಂದು ರಂಧ್ರದಲ್ಲಿ ತೆರೆಯುವುದು, ಡ್ರಿಲ್ ತುಂಡಾಗುವುದು, ಇದರಿಂದಾಗಿ ಡ್ರಿಲ್ ನಿಂದ ಲಭಿಸಬೇಕಾದ ಅಪೇಕ್ಷಿತ ಬಾಳಿಕೆಯನ್ನು ಪಡೆಯುವಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದವು. ಅದರಲ್ಲಿಯೂ ಕಾರಖಾನೆಗಳಲ್ಲಿರುವ ಮಿನಿಮಮ್ ಕ್ವಾಂಟಿಟಿ ಲ್ಯುಬ್ರಿಕೇಶನ್ ಕ್ಕೆ (MQL) ಒತ್ತು ನೀಡುವುದನ್ನು ಪ್ರಾರಂಭಿಸಿದ್ದರಿಂದ ಕನಿಷ್ಠ ಆಯಿಲ್ ಬಳಸಿ ಕೂಲಂಟ್ ನ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
ಉಪಾಯಗಳು
ಮೇಲಿನ ಸಮಸ್ಯೆಗಳಿಂದಾಗಿ ಆಳದಲ್ಲಿ ರಂಧ್ರಗಳನ್ನು ಮಾಡಬಹುದಾದ, ಪುನರಾವೃತ್ತಿಯಾಗುವಂತಹ ಮತ್ತು ಸುರಕ್ಷಿತವಾದ ಪ್ರಕ್ರಿಯೆಯನ್ನು ಮುಗಿಸುವಂತಹ ಟೂಲ್ ನ ಆವಶ್ಯಕತೆ ಇತ್ತು. ಅದಕ್ಕೆ ಅನುಸಾರವಾಗಿ ಸ್ಯಾಂಡ್ ವಿಕ್ ಕೊರೋಮಂಟ್ ಇವರು ಸವಾಲನ್ನು ಸ್ವೀಕರಿಸಿ CoroDrill 865 ಇಂತಹ ವಿಶಿಷ್ಟವಾದ ಡ್ರಿಲ್ ಕಿಟ್ ಓರೆಯಾಗಿರುವ ಆಯಿಲ್ ರಂಧ್ರಗಳಿಗೋಸ್ಕರ ಅಭಿವೃದ್ಧಿ ಪಡಿಸಿದರು. ಅಭಿವೃದ್ಧಿ ಮಾಡಿರುವ ಡ್ರಿಲ್ ಬಿಟ್ ನ ವೈಶಿಷ್ಟ್ಯವೆಂದರೆ ಡ್ರಿಲ್ ನ ವರ್ತುಲಾಕಾರದ ಫ್ಲ್ಯೂಟ್ ನ ಹೊಸದಾದ ಪ್ರೊಫೈಲ್. ಈ ಡ್ರಿಲ್ ನ ವಿಶಿಷ್ಟ ಡಿಸೈನ್ ನಿಂದಾಗಿ ಅದು ಶಕ್ತಿಶಾಲಿಯಾಗಿ ಇರುವುದರೊಂದಿಗೆ ಚಿಪ್ ತಯಾರಾಗುವ ಪ್ರಕ್ರಿಯೆಯನ್ನು ಸುಧಾರಿಸಲ್ಪಡುತ್ತದೆ. ಈ ಫ್ಲ್ಯೂಟ್ ನ ಸರ್ಫೇಸ್ ನುಣುಪಾಗಿ ಇರುವುದರಿಂದ ಚಿಪ್ ಹೊರಗೆ ಬರುವುದು ಸುಲಭವಾಗುತ್ತದೆ. ಥ್ರಸ್ಟ್ ಗೆ ಬಲವು ಕಡಿಮೆ ಸಾಕಾಗುತ್ತದೆ. ರಂಧ್ರದ ಎಡ್ಜ್ ಗಳಲ್ಲಿ ನಿರಂತರತೆಯೂ ಸಿಗುತ್ತದೆ. ಡ್ರಿಲ್ ನ ತುದಿ ಮತ್ತು ಎಡ್ಜ್ ಇವೆರಡಕ್ಕೆ ಬಳಸಿರುವ ವಿಶಿಷ್ಟ ಜಾಮೆಟ್ರಿಯಿಂದಾಗಿ ಗರಿಷ್ಠ ಫೀಡ್ ರೇಟ್ ನಲ್ಲಿಯೇ ಯಂತ್ರಣೆಯನ್ನು ಮಾಡಬಹುದಾಗಿದೆ. ISO-K ಅಥವಾ ISO-P ವಿಧದ ಕ್ರ್ಯಾಂಕ್ ಶಾಫ್ಟ್ ಗೆ ಅನೇಕ ರೀತಿಯಲ್ಲಿ ಮುತುವರ್ಜಿಯನ್ನು ವಹಿಸಲು ಇದರಲ್ಲಿ ಸೂಕ್ತವಾದ ಬದಲಾವಣೆಗಳನ್ನೂ ಮಾಡಲಾಗಿದೆ.
ಪರಿಣಾಮಗಳು
ನಮ್ಮ ಒಬ್ಬ ಗ್ರಾಹಕರಲ್ಲಿ 5 ಮಿ.ಮೀ.ನ ಡ್ರಿಲ್ ಬಿಟ್ ಬಳಸಿ ಒಂದು ಪರೀಕ್ಷೆಯನ್ನು ಮಾಡಲಾಯಿತು. ಇದರಲ್ಲಿ GGG 80 ಕ್ರ್ಯಾಂಕ್ ಶಾಫ್ಟ್ ನಲ್ಲಿ ಓರೆಯಾದ ರಂಧ್ರಗಳನ್ನು ಮಾಡಲಾಯಿತು. ಯಂತ್ರಣೆಯ ವೇಗ 50 ಮೀ./ನಿಮಿಷ ಮತ್ತು ಫೀಡ್ ರೇಟ್ 0.28 ಮಿ.ಮೀ./ಸುತ್ತುಗಳು ಮತ್ತು ಕೂಲಂಟ್ 17 ರಿಂದ 19 ಬಾರ್ ಪ್ರೇಶರ್ ನಲ್ಲಿ 19 ಮಿಲಿ/ಗಂಟೆ ಫ್ಲೋ ರೇಟ್, ಹೀಗೆ ಪ್ರೊಸೆಸ್ ಸೆಟ್ ಮಾಡಿದ ನಂತರ ಉತ್ಪಾದನೆಯಲ್ಲಿ 108% ಹೆಚ್ಚಳವಾಯಿತು ಮತ್ತು ಡ್ರಿಲ್ ನ ಬಾಳಿಕೆಯೂ 140% ಜಾಸ್ತಿಯಾಯಿತು. ಇದರ ಹೊರತಾಗಿ ಹೊಸ ದೃಢವಾದ CoroDrill 865 ಇದರ ಸವೆತದ ಕುರಿತಾದ ಅಂದಾಜನ್ನು ಮೊದಲೇ ಮಾಡುವುದು ಸಾಧ್ಯವಾದ್ದರಿಂದ ಸೂಕ್ತ ಸಮಯದಲ್ಲಿಯೇ ರೀಕಂಡಿಶನಿಂಗ್ ಮಾಡುವುದು ಸಾಧ್ಯವಾಯಿತು. ಇದರಿಂದಾಗಿ ಮತ್ತೆ ಹೊಸ ಟೂಲ್ ನಂತಹ ಉತ್ಪಾದನೆಯನ್ನು ಪಡೆಯುವುದು ಸಾಧ್ಯವಾಯಿತು. ಹೆಚ್ಚು ಸಂಖ್ಯೆಯಲ್ಲಿ ಕ್ರ್ಯಾಂಕ್ ಶಾಫ್ಟ್ ಗಳನ್ನು ತಯಾರಿಸುವ ಸಾಮರ್ಥ್ಯವಿರುವ ಉತ್ಪಾದಕರಿಗೆ ಈ ಹೊಸ ತಂತ್ರಜ್ಞಾನಯನ್ನು ಬಳಸುವುದು ಲಾಭಕಾರಿಯಾಯಿತು.
ಯಶಸ್ಸಿನಲ್ಲಿ ಅಡಗಿರುವ ಗುಟ್ಟು (ರಹಸ್ಯ)
ಅಭಿವೃದ್ಧಿ ಮಾಡಲಾಗಿರುವ ಟೂಲ್ ಗಳ ಡಿಸೈನ್ ನೊಂದಿಗೆ ಓರೆಯಾಗಿರುವ ಡ್ರಿಲ್ಲಿಂಗ್ ನ ಯಂತ್ರಣೆಯ ಧೋರಣೆಗಳ (ಸ್ಟ್ರೆಟಿಜಿ) ಕುರಿತು ವಿಚಾರ ಮಾಡುವುದೂ ಮಹತ್ವದ್ದಾಗಿತ್ತು. ಉದಾಹರಣೆ, ಪ್ರಾರಂಭದಲ್ಲಿ ಪ್ರಮುಖ ಡ್ರಿಲ್ ಬಳಸುವ ಮುಂಚೆ ಪೈಲಟ್ ಡ್ರಿಲ್ ಬಳಸುವುದು ಹೆಚ್ಚು ಅಗತ್ಯದ್ದಾಗಿತ್ತು. ಇದರಿಂದಾಗಿ ಡ್ರಿಲ್ ನಿರ್ದೋಷವಾಗಿ ಮತ್ತು ಅಪೇಕ್ಷಿಸಿರುವ ಜಾಗದಲ್ಲಿಯೇ ಇತ್ತು. ಪೈಲಟ್ ಡ್ರಿಲ್ ಗೆ ಟಾಲರನ್ಸ್ P7 ಮತ್ತು ಅದರ ಪಾಯಿಂಟ್ ನ ಕೋನವು 150 ಡಿಗ್ರಿ ಮತ್ತು CoroDrill 865 ಗೆ M7 ಟಾಲರನ್ಸ್ ಮತ್ತು 130 ಡಿಗ್ರಿ ಕೋನವಿದೆ. ಪೈಲಟ್ ಡ್ರಿಲ್ ನಿಂದ ಮಾಡಿರುವ ರಂಧ್ರಗಳಲ್ಲಿ ಯಾವಾಗ ಪ್ರಮುಖವಾದ ಡ್ರಿಲ್ ನಡೆಸಲಾಗುತ್ತದೆಯೋ, ಆಗ ಸ್ಪಿಂಡಲ್ ನ ಸಂಪೂರ್ಣವಾದ ವೇಗ ಮತ್ತು ಫೀಡ್ ರೇಟ್ ಬಳಸಬಹುದಾಗುತ್ತದೆ. ಎರಡನೇ ರಂಧ್ರವು ಇದರಲ್ಲಿ ಒಡೆಯುತ್ತಿದ್ದಲ್ಲಿ ಅಥವಾ ಡ್ರಿಲ್ಲಿಂಗ್ ಮುಗಿಯುತ್ತಿದ್ದಲ್ಲಿ, ಆಗ ಆ ಬಿಂದುವಿನಿಂದ ಸಾಮಾವ್ಯವಾಗಿ ಒಂದು ಮಿ.ಮೀ. ಮುಂಚಿನ ತನಕ ಸಂಪೂರ್ಣ ಸಾಮರ್ಥ್ಯದಿಂದ ಡ್ರಿಲ್ ಮಾಡಬೇಕು ಮತ್ತು ನಂತರ ಮುಂಚಿನ ಫೀಡ್ ರೇಟ್ ನ ಒಂದು ದಶಮಾಂಶದಷ್ಟು ಫೀಡ್ ರೇಟ್ ಇಡಬೇಕು. ಡ್ರಿಲ್ ನಿರಂತರವಾಗಿ ಒಂದು ದಿಕ್ಕಿನಲ್ಲಿಯೇ ಮಾಡುತ್ತಿರಬೇಕು, ಪ್ಯಾಕಿಂಗ್ ಮಾಡಬಾರದು. ಡ್ರಿಲ್ ನ ಹೊರಭಾಗದ ಮೂಲೆಗಳು ಓರೆಯಾಗಿರುವ ಸರ್ಫೇಸ್ ನ ಹೊರಗೆ ಬರುವಾಗ ಡ್ರಿಲ್ 50 ಆರ್.ಪಿ.ಎಮ್. ವೇಗ ಮತ್ತು 600 ಮಿ.ಮೀ./ನಿಮಿಷದಷ್ಟು ಫೀಡ್ ರೇಟ್ ವೇಗದಿಂದ ಹೊರಗೆ ತೆಗೆಯಬೇಕು.
ವೇಗ ಮತ್ತು ಫೀಡ್ ರೇಟ್
5 ಮಿ.ಮೀ. ವ್ಯಾಸದ ಓರೆಯಾದ ರಂಧ್ರಗಳನ್ನು ಮಾಡುವುದಾದಲ್ಲಿ ISO K ಮಟೀರಿಯಲ್ ಗೋಸ್ಕರ ಯಂತ್ರಣೆಯ ವೇಗ 50 ಮೀ./ನಿಮಿಷ ಮತ್ತು ಫೀಡ್ ರೇಟ್ 0.28 ಮೀ./ಸುತ್ತು ಅಳವಡಿಸುವುದು ಸೂಕ್ತವಾಗಬಹುದು. ಅದೇ ISO P ಗೋಸ್ಕರ ಬಳಸುವ ರೀತಿಯಂತೆ ಫೀಡ್ ರೇಟ್ ಮಾತ್ರ 0.2 ಮಿ.ಮೀ./ಸುತ್ತುಗಳಷ್ಟು ಅಳವಡಿಸಬೇಕು. ಓರೆಯಾಗಿರುವ ರಂಧ್ರಗಳಿಗೆ ಮಶಿನ್ ನ ಸೆಟಪ್ ಮತ್ತು ಟೂಲ್ ಗಳ ಹಿಡಿತವೂ ಮಹತ್ವದ್ದಾಗಿದೆ. ಟೂಲ್ ರನ್ ಔಟ್ 30 ಮೈಕ್ರಾನ್ ಗಳಿಗಿಂತ ಕಡಿಮೆ ಇರಬೇಕು ಮತ್ತು ಉಚ್ಚಮಟ್ಟದ ಟೂಲ್ ಹೋಲ್ಡರ್ ಅಥವಾ ಶ್ರಿಂಕ್ ಫಿಟ್ ಈ ವಿಧದ ಟೂಲ್ ಹೋಲ್ಡರ್ ಬಳಸಬೇಕು.
MQL ನ ಕುರಿತಾದ ವಿಚಾರ
ಉಚ್ಚಮಟ್ಟದ ಪರಿಣಾಮವನ್ನು ಪಡೆಯಲು ಕೂಲಂಟ್ ನ ಪ್ರವಾಹ ಮತ್ತು ಒತ್ತಡ ಇವೆರಡರ ಯೋಜನೆಯನ್ನು ಮಾಡುವುದು ತುಂಬಾ ಮಹತ್ವದ್ದಾಗಿದೆ. CoroDrill 865 ಇದರೊಂದಿಗೆ ಅದರ MQL ಗೋಸ್ಕರ ಸೂಕ್ತವಾದ ಶ್ಯಾಂಕ್ ಇದೆ, ಆದರೆ ಯೋಗ್ಯವಾದ MQL ಪ್ರಣಾಳಿಕೆಯನ್ನು ಆಯ್ಕೆ ಮಾಡುವುದೂ ಮಹತ್ವದ್ದಾಗಿದೆ. ಗಾಳಿ ಮತ್ತು ಆಯಿಲ್ ಇವೆರಡರ ಮಿಶ್ರಣವನ್ನು ಮಶಿನ್ ನ ಹಿಂಭಾಗದಲ್ಲಿ ಮಾಡಲಾಗುತ್ತದೆ. ಅದನ್ನು ಸ್ಪಿಂಡಲ್ ನಲ್ಲಿರುವ ಕೂಲಂಟ್ ನ ಕೊಳವೆ, ಟೂಲ್ ತನಕ ತಲುಪಿಸುತ್ತದೆ. ಇದು ಸಿಂಗಲ್ ಚ್ಯಾನೆಲ್ ಸಿಸ್ಟಮ್ ಎನ್ನಬಹುದು. ಇಲ್ಲಿ ಪ್ರಚಲಿತವಿರುವ ಟೂಲ್ ಹೋಲ್ಡರ್ ಬಳಸಲಾಗುತ್ತವೆ, ಆದರೆ ಕೂಲಂಟ್ ಸ್ಪಿಂಡಲ್ ನಲ್ಲಿ ಒಟ್ಟಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದಾಗಿ ಕೂಲಂಟ್ ನ ಮಟ್ಟವು ಅಕಸ್ಮಾತ್ತಾಗಿ ಹೆಚ್ಚಾಗಬಹುದು. ಇದಕ್ಕೆ ವಿರುದ್ಧವಾಗಿ ಡಬಲ್ ಚ್ಯಾನೆಲ್ ರೀತಿಯಲ್ಲಿ ಗಾಳಿ ಮತ್ತು ಆಯಿಲ್ ಸ್ಪಿಂಡಲ್ ನಲ್ಲಿ ಅಥವಾ ಸ್ಪಿಂಡಲ್ ನ ತುದಿಯಲ್ಲಿ ಒಟ್ಟಾಗುತ್ತದೆ. ಇದರಿಂದಾಗಿ ಗಾಳಿಯ ಒತ್ತಡ ಹೆಚ್ಚು ಲಭಿಸುತ್ತದೆ ಮತ್ತು ಕೂಲಂಟ್ ನ ಕಣಗಳ ಆಕಾರವು ಒಂದೇ ರೀತಿಯಲ್ಲಿ ಉಂಟಾಗಿ ಡೀಪ್ ಹೋಲ್ ಡ್ರಿಲ್ಲಿಂಗ್ ನಂತಹ ಕೆಲಸದಲ್ಲಿ ಚಿಪ್ ಹೊರಗೆ ಬರುವುದು ಸುಲಭವಾಗಲು ಸಹಾಯವಾಗುತ್ತದೆ.
CoroDrill 865 ಬಳಸುವುದರಿಂದ ಯಂತ್ರಣೆಯ ಸಾಮರ್ಥ್ಯ ಸಾಕಷ್ಟು ಪ್ರಮಾಣದಲ್ಲಿ ಬಳಸಬಹುದು ಮತ್ತು L/D 25 ರಷ್ಟು ಗುಣಾಕಾರವಿರುವ ಓರೆಯಾಗಿರುವ ರಂಧ್ರಗಳ ಡ್ರಿಲ್ಲಿಂಗ್ ಹೆಚ್ಚು ನಿಖರವಾಗಿ, ವಿಶ್ವಾಸಾರ್ಹತೆಯಿಂದ ಆಗುವುದರೊಂದಿಗೆ ಚಿಪ್ ಹೊರಗೆ ತೆಗೆಯುವ ಪ್ರಕ್ರಿಯೆಯೂ ಸುಲಭವಾಗುತ್ತದೆ.
< div="" style="float: left; margin: -25px 20px 20px 0px;">
ಶರದ್ ಕುಲಕರ್ಣಿ
ಉಪಾಧ್ಯಕ್ಷರು, ಸೆಂಡ್ ವಿಕ್ ಕೊರೋಮಂಟ್ (ದಕ್ಷಿಣ ಪೂರ್ವ ಏಶಿಯಾ)
8408880434
ಶರದ್ ಕುಲಕರ್ಣಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಇವರಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸುದೀರ್ಘ ಅನುಭವವಿದೆ.