ಸಾರ್ಕ್ ಇರೋಶನ್ ಎಂದರೆ ಇಲೆಕ್ಟ್ರಿಕ್ ಡಿಸ್ಚಾರ್ಜ್ ಮಶಿನಿಂಗ್ ಮೂಲಕ (ಇ.ಡಿ.ಎಮ್.) ತಯಾರಿಸಲಾಗುವ ಮೋಲ್ಡ್ ಮತ್ತು ಡೈ. ಹಾಗೆಯೇ ಕ್ಲಿಷ್ಟ ಯಂತ್ರಣೆಯಿರುವ ಯಂತ್ರಭಾಗಳಲ್ಲಿ ತುಂಬಾ ಉಚ್ಚಮಟ್ಟದ ನಿಖರತೆ, ಈ ಮಶಿನ್ ಬಳಸುವ ರೀತಿಯಲ್ಲಿ ಕಳೆದ ಕೆಲವು ದಶಕಗಳಲ್ಲಿ ಉಂಟಾಗಿರುವ ಕ್ರಾಂತಿಕಾರಿಯಾದ ಬದಲಾವಣೆಗಳನ್ನು ತಿಳಿಸುತ್ತವೆ. ಸ್ಪಾರ್ಕ್ ಇರೋಶನ್ ಅಸ್ತಿತ್ವಕ್ಕೆ ಬರುವ ಮುಂಚೆ ಹಾರ್ಡ್ ಸ್ಟೀಲ್ ಮತ್ತು ಕಾರ್ಬೈಡ್ ಇವುಗಳಿಂದ ತಯಾರಿಸಿರುವ ಯಂತ್ರಭಾಗಗಳ ಯಂತ್ರಣೆಯಲ್ಲಿ ಉಚ್ಚಮಟ್ಟದ ನಿಖರತೆ ಮತ್ತು ಫಿನಿಶ್ ಪಡೆಯುವುದು ಮತ್ತು ಅದೂ ಕೂಡಾ ಆಪರೇಟರ್ ನ ತುಂಬಾ ಕಡಿಮೆಯಾದ ಹಸ್ತಕ್ಷೇಪದೊಂದಿಗೆ, ಇದೆಲ್ಲಾ ಎಲ್ಲರಿಗೂ ಸ್ವಪ್ನದಂತೆ ಅನಿಸುತ್ತಿತ್ತು. ಇ.ಡಿ.ಎಮ್. ತಂತ್ರಜ್ಞಾನವನ್ನು ಬಳಸುವಾಗ ಬೇಕಾಗಿರುವ ಪರಿಣಾಮಗಳನ್ನು ಪಡೆಯಲು ಯಂತ್ರಣೆಯ ಪ್ಯಾರಾಮೀಟರ್ ಯೋಗ್ಯವಾಗಿ ಸೆಟ್ ಮಾಡಬೇಕಾಗುತ್ತವೆ. ಸದ್ಯಕ್ಕೆ ಯಂತ್ರಣೆಯ ಕ್ಷೇತ್ರದಲ್ಲಿ ಈ ಮುಂದಿನಂತೆ ನಾಲ್ಕು ವಿವಿಧ ಮಶಿನ್ ಗಳು ಉಪಲಬ್ಧವಿವೆ.
1. ಆರ್.ಎ.ಎಮ್. ವಿಧದ ಇ.ಡಿ.ಎಮ್.
2. ಸಿ.ಎನ್.ಸಿ. ಇ.ಡಿ.ಎಮ್.
3. ಸಿ.ಎನ್.ಸಿ. ವಾಯರ್ ಇ.ಡಿ.ಎಮ್.
4. ಸೂಕ್ಷ್ಮ ರಂಧ್ರ (ಸ್ಮಾಲ್ ಹೋಲ್) ಡ್ರಿಲ್ ಇ.ಡಿ.ಎಮ್.
ಮೇಲೆ ತಿಳಿಸಿರುವ ನಾಲ್ಕೂ ಮಶಿನ್ ಗಳಲ್ಲಿ ಮೂಲಭೂತ ಇ.ಡಿ.ಎಮ್. ತಂತ್ರಜ್ಞಾನವು ಸಮಾನವಾಗಿದೆ. ಆದರೆ ಪ್ರತಿಯೊಂದು ಮಶಿನ್ ನ ರಚನೆ, ಮೂಲಭೂತ ಘಟಕಗಳು, ಇಲೆಕ್ಟ್ರೋಡ್ ನ ವಿಧಗಳು ಮತ್ತು ಅಪ್ಲಿಕೇಶನ್ ಇವೆಲ್ಲದರಲ್ಲಿಯೂ ವ್ಯತ್ಯಾಸಗಳಿವೆ. ಇಲ್ಲಿ ನಾವು 4 ಅಕ್ಷೀಯ ವಾಯರ್ ಕಟ್ ಇಲೆಕ್ಟ್ರಿಕ್ ಡಿಸ್ಚಾರ್ಜ್ ಮಶಿನ್ ಕುರಿತು (ಡಬ್ಲ್ಯೂ.ಇ.ಡಿ.ಎಮ್.) ತಿಳಿದುಕೊಳ್ಳೋಣ.
4 ಅಕ್ಷೀಯ ವಾಯರ್ ಕಟ್ ಇಲೆಕ್ಟ್ರಿಕ್ ಡಿಸ್ಚಾರ್ಜ್ ಮಶಿನ್ ನ ರಚನೆ
ಇಲೆಕ್ಟ್ರಾನಿಕಾ ಹೈಟೆಕ್ ಮಶಿನ್ ಟೂಲ್ಸ್ ಇವರು ಡಬ್ಲ್ಯೂ.ಇ.ಡಿ.ಎಮ್.ನ ಅತ್ಯಾಧುನಿಕವಾದ ತಂತ್ರಜ್ಞಾನವುಳ್ಳ ಎರಡೂ ಮಾಡೆಲ್ ಗಳನ್ನು ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅದರ ಹೆಸರೇ ಜಾಬ್ ಮಾಸ್ಟರ್ ಮತ್ತು ಟೂಲ್ ಮಾಸ್ಟರ್.
ಜಾಬ್ ಮಾಸ್ಟರ್ :
ಈ ಮಶಿನ್ ನ ರಚನೆಯು ಅಚ್ಚುಕಟ್ಟಾಗಿದ್ದು ಜಾಬ್ ಮಾಸ್ಟರ್ ಪ್ರಮುಖವಾಗಿ ಎರಡು ವಿಧದಲ್ಲಿ ಉಪಲಬ್ಧವಿವೆ. (ಚಿತ್ರ ಕ್ರ. 1) ಒಂದು ವಿಧದಲ್ಲಿ 160 ಮಿ.ಮೀ.2/ ನಿಮಿಷ ಯಂತ್ರಣೆಯ ವೇಗವಿದೆ. ಇನ್ನೊಂದು ವಿಧವು 200 ಮಿ.ಮೀ.2/ ನಿಮಿಷ ಯಂತ್ರಣೆಯ ವೇಗವನ್ನು ಹೊಂದಿದೆ.
ಟೂಲ್ ಮಾಸ್ಟರ್ :
ಟೂಲ್ ಮಾಸ್ಟರ್ ಮಾಡೆಲ್ ನಲ್ಲಿರುವ ದೃಢವಾದ T ಬೇಸ್ ರಚನೆಯೊಂದಿಗೆ ಅಲುಗಾಡುವ ಕಾಲಮ್ ನ ಅಡಿಯಲ್ಲಿ ಡಿಸೈನ್ ನಿಂದಾಗಿ ಹೆಚ್ಚು ಸ್ಥಿರತೆ, ನಿಖರತೆ ಮತ್ತು ದೊಡ್ಡ ಕಾರ್ಯವಸ್ತುಗಳನ್ನು ಲೋಡ್ ಮಾಡುವ ಸಾಮರ್ಥ್ಯವು ಲಭಿಸುತ್ತದೆ. ಉಚ್ಚ ಮಟ್ಟದ ನಿಖರತೆಯನ್ನು ಪಡೆಯಲು ಇಲೆಕ್ಟ್ರಾನಿಕಾ ಹೈಟೆಕ್ ಎಲ್ಲ ಅಕ್ಷಗಳಿಗೆ ಜಪಾನ್ ಮೇಕ್ ನ ಡೈರೆಕ್ಟ್ ಕಪಲ್ಡ್ ಏ.ಸಿ. ಸರ್ವೋ ಮೋಟರ್ ಕೊಡುತ್ತದೆ. ಗ್ರಾಹಕರ ಆವಶ್ಯಕತೆಗೆ ಅನುಸಾರವಾಗಿ ಎರಡು ಮಾಡೆಲ್ ಗಳು ಉಪಲಬ್ಧವಿವೆ. ಒಂದರಲ್ಲಿ ಏ.ಸಿ. ಸರ್ವೋ ಮೋಟರ್ ಜೊತೆಗೆ ಬಾಲ್ ಸ್ಕ್ರೂ ಇದೆ. ಇನ್ನೊಂದರಲ್ಲಿ ಲೀನಿಯರ್ ಮೋಟರ್ ಇದೆ. ಟೂಲ್ ಮಾಸ್ಟರ್ ಮಾಡೆಲ್ ನ ಹೆಚ್ಚಿನ ಲಾಭವೆಂದರೆ ಗ್ರೆನೈಟ್ ನ ಐಸೊಲೇಶನ್ ಮತ್ತು ಹಾರ್ಡನಿಂಗ್ ಮಾಡಿರುವ ವರ್ಕ್ ಟೇಬಲ್. ಸದ್ಯಕ್ಕೆ ಟೂಲ್ ಮಾಸ್ಟರ್ ನ 4, 5, 6 (ಫ್ಲಶ್ ಮತ್ತು ಸಬ್ ಮರ್ಜ್ಡ್) ಹೀಗೆ 6 ಮಾಡೆಲ್ ಗಳಿವೆ. 4, 5, 6 ಈ ಅಂಕೆಗಳು ಅಕ್ಷೀಯ ಸ್ಟ್ರೋಕ್ ಗಳನ್ನು ತೋರಿಸುತ್ತವೆ. ಉದಾಹರಣೆ, ಟೂಲ್ ಮಾಸ್ಟರ್ 4F ಇದು ಫ್ಲಶ್ ವಿಧದ ಮಶಿನ್ ಆಗಿರುತ್ತದೆ. ಟೂಲ್ ಮಾಸ್ಟರ್ 4F, 5F, 6F ಇವುಗಳ X-Y ಅಕ್ಷಗಳಲ್ಲಿರುವ ಚಟುವಟಿಕೆಗಳನ್ನು ಕೋಷ್ಟಕ ಕ್ರ. 1 ರಲ್ಲಿ ತೋರಿಸಲಾಗಿದೆ.
ಫ್ಲಶ್ ಈ ವಿಧದಲ್ಲಿ ಮಶಿನ್ ನಲ್ಲಿ ಪ್ರಕ್ರಿಯೆಯಾಗುತ್ತಿರುವಾಗ ಆ ಜಾಗದಲ್ಲಿ ಒಂದು ನೀರಿನ ಸ್ತಂಭವು ತಯಾರಾಗುತ್ತವೆ. ಸಬ್ ಮರ್ಜ್ಡ್ ಈ ವಿಧದಲ್ಲಿ ನೀರಿನ ಸ್ತಂಭ ಇದ್ದೇ ಇರುತ್ತದೆ, ಅಲ್ಲದೇ ನೀರಿನಿಂದ ತುಂಬಿರುವ ಟ್ಯಾಂಕ್ ಕೂಡಾ ಇರುತ್ತದೆ. ಆದ್ದರಿಂದ ಸಂಪೂರ್ಣವಾದ ಪ್ರಕ್ರಿಯೆಯು ನೀರಿನ ಕೆಳಗೆ ಬರುತ್ತದೆ, ಇದರಿಂದಾಗಿ ಅನೇಕ ಲಾಭಗಳುಂಟಾಗುತ್ತವೆ.
ನಿಖರತೆಯನ್ನು ಕಾಪಾಡಲು ಉಷ್ಣಾಂಶದ ನಿಯಂತ್ರಣೆ. (ಡಬ್ಲ್ಯೂ.ಇ.ಡಿ.ಎಮ್.) ಪ್ರಕ್ರಿಯೆಯಲ್ಲಿ ಎಲ್ಲಿ ಸ್ಪಾರ್ಕ್ ಬೀಳುತ್ತದೆಯೋ, ಆ ಜಾಗದ ಉಷ್ಣಾಂಶವು 10000 ಸೆಂಟಿಗ್ರೇಡ್ ಗಿಂತ ಹೆಚ್ಚಾಗುತ್ತದೆ).
ಮಶಿನ್ ನ ಬಾಡಿಯ ಉಷ್ಣಾಂಶ ಮತ್ತು ನೀರಿನ ಉಷ್ಣಾಂಶ ಇವೆರಡರಲ್ಲಿ 100 ಸೆಂಟಿಗ್ರೇಡ್ ಗಿಂತ ಹೆಚ್ಚು ವ್ಯತ್ಯಾಸ ಇಲ್ಲದಿರುವುದರಿಂದ ಮಶಿನ್ ನ ಘಟಕಗಳ ಪ್ರಸರಣವು ನಿಯಂತ್ರಿಸಲ್ಪಟ್ಟು ಯಂತ್ರಭಾಗಗಳ ನಿಖರತೆಯು ಯಂತ್ರಣೆಯಲ್ಲಿ ನಿಲ್ಲುತ್ತದೆ.
ಇನ್ನೊಂದು ತುಂಬಾ ಮಹತ್ವದ ವೈಶಿಷ್ಟ್ಯವೆಂದರೆ ನೀರಿನ ನಿರಂತರವಾದ ಪ್ರವಾಹ. ಪ್ರಕ್ರಿಯೆಯಲ್ಲಿ ಉಂಟಾಗುವ ಕಲ್ಮಶವನ್ನು ಹೊರಗೆ ತೆಗೆಯುವುದು ತುಂಬಾ ಆವಶ್ಯಕವಾಗಿರುತ್ತದೆ. ಅದಕ್ಕೋಸ್ಕರ ಅಸ್ವಚ್ಛವಾದ ನೀರನ್ನು ಬೇರ್ಪಡಿಸಿ ಫಿಲ್ಟರ್ ಮಾಡುವ ಮತ್ತು ನಂತರ ಅದನ್ನು ತಂಪು ಮಾಡಿ ಮತ್ತೆ ಬಳಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಈ ಮಶಿನ್ ನಲ್ಲಿ ಲೀನಿಯರ್ ಮೋಟರ್ ನ ಪರ್ಯಾಯವೂ ಉಪಲಬ್ಧವಿದೆ. ಭಾರತದಲ್ಲಿ ಲೀನಿಯರ್ ಮೋಟರ್ ಡಬ್ಲ್ಯೂ.ಇ.ಡಿ.ಎಮ್. ಮಶಿನ್ ನ ತಯಾರಿಕೆಯನ್ನು ಮಾಡುವಲ್ಲಿ ಇಲೆಕ್ಟ್ರಾನಿಕಾ ಹೈಟೆಕ್ ಕಂಪನಿಯು ಭಾರತದಲ್ಲಿ ಮೊತ್ತಮೊದಲ ಉತ್ಪಾದಕರಾಗಿದ್ದಾರೆ. ಎಕ್ಯುಟೆಕ್ಸ್ ನ ಸಹಕಾರದಿಂದ ಬಳಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಲಾಭವು ನಮಗೆ ಲಭಿಸುತ್ತಿದೆ.
ಡಬ್ಲ್ಯೂ.ಇ.ಡಿ.ಎಮ್. ಮಶಿನ್ ನ ನಿಯಂತ್ರಣೆಯ ವ್ಯವಸ್ಥೆಯಲ್ಲಿ (ಕಂಟ್ರೋಲ್ ಸಿಸ್ಟಮ್) ಮಾನವ ಮತ್ತು ಮಶಿನ್ ಇವೆರಡರ ಪರಸ್ಪರ ಒಟ್ಟಾಗುವಿಕೆಯಿಂದ (ಮ್ಯಾನ್-ಮಶಿನ್ ಇಂಟರ್ ಫೇಸ್) ಹಾಗೆಯೇ ಇನ್ ಪುಟ್- ಔಟ್ ಪುಟ್ ನ ನಿರ್ವಹಣೆ, ಮಾನವನ ಇಂಟರ್ ಫೇಸ್, ಅವುಗಳನ್ನು ನಿಯಂತ್ರಿಸುವ ಸಾಫ್ಟ್ ವೇರ್ ಮುಂತಾದವುಗಳನ್ನು ಮತ್ತೆ ಹೊಸದಾಗಿ ಡಿಸೈನ್ ಮಾಡಲಾಯಿತು. ಈ ಹಿಂದೆ ವಿಡೋಸ್ 7 ಪ್ರಣಾಳಿಕೆಯನ್ನು ಬಳಸಲಾಗುತ್ತಿತ್ತು, ಆದರೆ ಇತ್ತಿಚೇಗೆ ವಿಂಡೋಸ್ 10 ನಲ್ಲಿಯೂ ಕಾರ್ಯಗತವಾಗುತ್ತದೆ. ಪವರ್ ಪೀಮ್ಯಾಕ್ ಕ್ಲಿಪರ್ ಇದು ಆರು ಅಕ್ಷೀಯ ಮೋಶನ್ ಕಂಟ್ರೋಲರ್ ಮಶಿನ್ ನ ಐದು ಅಕ್ಷಗಳಿಗೆ ಡ್ರೈವ್ ನೀಡುತ್ತದೆ. ಆವಶ್ಯಕವಿರುವ ಆ ಪ್ರಕ್ರಿಯೆ ಪ್ಯಾರಾಮೀಟರ್ ಗಳೊಂದಿಗೆ ಇನ್ನಿತರ ಎಲ್ಲ ಇನ್ ಪುಟ್ ಅಥವಾ ಔಟ್ ಪುಟ್, ಅತ್ಯಾಧುನಿಕ ಹಾರ್ಡ್ ವೇರ್ ಮೂಲಕ ನಿಯಂತ್ರಿಸಲ್ಪಡುತ್ತವೆ. ಮಶಿನ್ ನೊಂದಿಗೆ ನೀಡಲಾಗಿರುವ ಆಪರೇಟಿಂಗ್ ಸ್ಕ್ರೀನ್ (ಚಿತ್ರ ಕ್ರ. 2) ಬಳಕೆಗಾರರಿಗೆ ಸುಲಭವಾಗಿದೆ. ಅದರಲ್ಲಿ ರನ್, ಮ್ಯಾನ್ಯುವಲ್, ಸೆಟಪ್, ಮತ್ತು ಎಡಿಟ್ ಇಂತಹ ನಾಲ್ಕು ಪ್ರಮುಖವಾದ ಮೋಡ್ ಗಳಿರುತ್ತವೆ. ಗ್ರಾಫಿಕಲ್ ಇಂಟರ್ ಫೇಸ್ ಆಗಿರುವುದರಿಂದ ಬಳಕೆಗಾರರಿಗೆ ಮಶಿನ್ ನಲ್ಲಿ ಯಂತ್ರಣೆಯಾಗುವ ಕಾರ್ಯವಸ್ತುಗಳ ಪ್ರೊಫೈಲ್ ನ ಥ್ರೀಡಿಯ ನೋಟವನ್ನು ತೋರಿಸುತ್ತದೆ. ನಿಯಂತ್ರಕದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವಿರುವ ಫೀಚರ್ ಮತ್ತು ಫಂಕ್ಷನ್ ಗಳನ್ನು ಈ ಮುಂದೆ ನೀಡಲಾಗಿದೆ.
• ಪ್ರೀ ಜಾಗ್
• ಪ್ರೀ ಸ್ಪಾರ್ಕ್
• ಆಟೋ ಪಾವರ್ ರಿಕವರಿ
• ಕಾರ್ನರ್ ಕಂಟ್ರೋಲ್ ಸ್ಟೇಟಿಜಿ
• ಮಿಟ್ ಸ್ಟಾರ್ಟ್
• 16 ಸ್ಟೆಪ್ ಪ್ರೊಗ್ರಾಮೆಬಲ್ ಫ್ಲಶಿಂಗ್
• ಕಾಂಪ್ಲೆಕ್ಸ್ ಪ್ರೊಗ್ರಾಮಿಂಗ್ ಮಶಿನಿಂಗ್
• ಮಿನರಲ್ ಬೆಡ್ ಫಿಲ್ಟ್ರೇಶನ್ ಸಿಸ್ಟಮ್ : ಇದರಿಂದಾಗಿ ಕಂಜ್ಯೂಮೇಬಲ್ ನ ಖರ್ಚು ಕಡಿಮೆಯಾಗುವಲ್ಲಿ ಸಹಕರಿಸುತ್ತದೆ.
• ಸೂಕ್ಷ್ಮ ನಿಯಂತ್ರಕಗಳ ಬಳಕೆ : ಇದರಿಂದಾಗಿ ಪಿ.ಸಿ.ಬಿ.ಯ ಸಂಖ್ಯೆಯನ್ನು10 ರಷ್ಟು ಕಡಿಮೆ ಮಾಡಲಾಯಿತು ಮತ್ತು ಇದರಿಂದಾಗಿ ವಿಶ್ವಾಸಾರ್ಹತೆಯಲ್ಲಿ (ರಿಲಾಯಬಿಲಿಟಿ) ಹೆಚ್ಚಳವಾಯಿತು.
• 1GHz ನಿರಂತರತೆ ಇರುವ ನಿಯಂತ್ರಕಗಳು: ನಿಯಂತ್ರಕದ ಕೆಲಸ ವೇಗ, ಪ್ರಕ್ರಿಯೆಗೆ ಬೇಕಾಗುವ ಸಮಯ, ಒಳ ಲೆಕ್ಕಾಚಾರ ಇತ್ಯಾದಿಗಳ ಲಾಭವಾಗುತ್ತದೆ.
ಮಶಿನ್ ಟೂಲ್
ಈ ಮಶಿನ್ ನಲ್ಲಿ ಟೂಲ್ ನಲ್ಲಿ ಒಂದು ಪ್ರಮುಖವಾದ ವರ್ಕ್ ಟೇಬಲ್ (X-Y), ಒಂದು ಸಹಾಯದ ಟೇಬಲ್ (U-V) ಮತ್ತು ಒಂದು ವಾಯರ್ ಯಂತ್ರಗಳ ಸೇರ್ಪಡೆಯಾಗಿರುತ್ತದೆ. ಕಾರ್ಯವಸ್ತುವನ್ನು ಮೇನ್ ಟೇಬಲ್ ನಲ್ಲಿ ಇಟ್ಟು ಯೋಗ್ಯವಾದ ರೀತಿಯಲ್ಲಿ ಹಿಡಿದಿಡಲಾಗುತ್ತದೆ. ಮೇನ್ ಟೇಬಲ್ X ಮತ್ತು Y ಅಕ್ಷಗಳಲ್ಲಿ ಮತ್ತು ಸಹಾಯಕವಾದ ಟೇಬಲ್ U-V, ಏ.ಸಿ. ಸರ್ವೋ ಮೋಟರ್ ನ ಸಹಾಯದಿಂದ 0.5 ಮೈಕ್ರಾನ್ ಗಳ ಹಂತದಲ್ಲಿ ಚಟುವಟಿಕೆಯನ್ನು ಮಾಡಬಲ್ಲದು. U ಮತ್ತು V ಅಕ್ಷವು ಅನುಕ್ರಮವಾಗಿ X ಮತ್ತು Y ಅಕ್ಷಗಳಿಗೆ ಸಮಾನಾಂತರವಾಗಿರುತ್ತವೆ.
ಈ ರಚನೆಯಲ್ಲಿ ಒಂದು ವಾಯರ್ ನ ಸುರುಳಿಯಿಂದ ಒಂದು ವಾಯರ್ ನಿರಂತರವಾಗಿ ನೀಡಲಾಗುತ್ತದೆ. ಈ ವಾಯರ್ ಕಾರ್ಯವಸ್ತುವಿಗೆ ಆರುಪಾರಾಗಿ ಹೋಗುತ್ತದೆ ಮತ್ತು ಕೊನೆಯಲ್ಲಿ ಬಳಸಿರುವ ವಾಯರ್ ನ ಡಬ್ಬಿಯಲ್ಲಿ ಒಟ್ಟು ಮಾಡಲಾಗುತ್ತದೆ. ಈ ವಾಯರ್ ನ ಮಾರ್ಗದಲ್ಲಿ ಕಾರ್ಯವಸ್ತುವಿನ ಎರಡೂ ಬದಿಗಳಲ್ಲಿರುವ (ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ) ವಾಯರ್ ಗೈಡ್ ನ (ಚಿತ್ರ ಕ್ರ. 3) ಜೋಡಿಯ ಸಹಾಯದಿಂದ ಅದರಲ್ಲಿ ಒತ್ತಡವನ್ನು ತಯಾರಿಸಲಾಗುತ್ತದೆ. ಕೆಳಗಿನ ಬದಿಯ ವಾಯರ್ ಗೈಡ್ X-Y ದಿಕ್ಕಿನಲ್ಲಿ ಒಂದು ಆರ್ಮ್ ನೊಂದಿಗೆ ಹಿಂದು-ಮುಂದು ಸರಿಯುತ್ತದೆ. ಆದರೆ ಮೇಲ್ಭಾಗದಲ್ಲಿರುವ ವಾಯರ್ ಗೈಡ್ U-V ದಿಕ್ಕಿನಲ್ಲಿ ಟೇಬಲ್ ನೊಂದಿಗೆ ಹಿಂದು-ಮುಂದಾಗುತ್ತದೆ. ಮೇಲ್ಭಾಗದಲ್ಲಿರುವ ವಾಯರ್ ಗೈಡ್ ಗೆ ಕೆಳಭಾಗದಲ್ಲಿರುವ ವಾಯರ್ ಗೈಡ್ ನ ಸಂದರ್ಭದಲ್ಲಿ U-V ಅಕ್ಷದಲ್ಲಿ ಅಡ್ಡಕ್ಕೆ (ಹಾರಿಝಾಂಟಲ್) ಹಿಂದು-ಮುಂದಾಗಿ ಅಲುಗಾಡಿಸಲಾಗುತ್ತದೆ. ನೆಟ್ಟಗಿರುವ (ವರ್ಟಿಕಲ್) ಆರ್ಮ್ ನಲ್ಲಿ ಟ್ರಾವರ್ಸ್ ಮಾಡಿ ಅದನ್ನು Z ಅಕ್ಷದಲ್ಲಿಯೂ ಬೇಕಾದಂತೆ ಟ್ರಾವರ್ಸ್ ಮಾಡಬಹುದು.
ವಾಯರ್ ಕಟ್ ನಲ್ಲಿ ಪ್ರಮುಖವಾಗಿ ಕೆಳಭಾಗದ (ಬಾಟಮ್) ಪ್ಲೇನ್ ಮತ್ತು ಮೇಲ್ಭಾಗದ (ಟಾಪ್) ಪ್ಲೇನ್ ಎಂದು ಎರಡು ಪ್ಲೇನ್ ಗಳಿರುತ್ತವೆ. ಕೆಲಸ ಮಾಡಬೇಕಾದ ಕಾರ್ಯವಸ್ತುವಿನಲ್ಲಿ ಆ ಕಾರ್ಯವಸ್ತುವನ್ನು ಕೆಳಭಾಗದ ಪ್ಲೇನ್ ಮತ್ತು ಮೇಲ್ಭಾಗದ ಪ್ಲೇನ್ ಎಂಬುದಾಗಿ ವಿಭಾಗಿಸಲಾಗುತ್ತದೆ. ಒಂದು ವೇಳೆ ಚೌಕಟ್ಟನ್ನು ಕತ್ತರಿಸುವುದಾದಲ್ಲಿ ಕೇವಲ ಒಂದೇ ಪ್ಲೇನ್ ನಲ್ಲಿ X-Y ಅಕ್ಷವನ್ನು ಅಲುಗಾಡಿಸಿದಲ್ಲಿ, ಚೌಕಟ್ಟಿನ ದಾರಿಯು ತಯಾರಾಗುತ್ತದೆ. ಇದರಲ್ಲಿ U-V ಪ್ಲೇನ್ ಗೆ ಒಂದೇ ಜಾಗದಲ್ಲಿ ಸ್ಥಿರವಾಗಿರುತ್ತದೆ. ಮಶಿನ್ ನಲ್ಲಿ ವಾಯರ್ ನೆಟ್ಟಗಿದ್ದು ಅದು X-Y ಪ್ಲೇನ್ ನ ಮುಂಭಾಗದಲ್ಲಿರುತ್ತದೆ. X-Y ಇದರ U-V ಯು ಚಟುವಟಿಕೆಯು ಬೇರೆಯೇ ಇರುತ್ತದೆ. ಈ ಮಶಿನ್ ನಲ್ಲಿ U-V ಪ್ಲೇನ್ ಅಳವಡಿಸಿದ ನಂತರ ವಾಯರ್ ನ ಕೋನವು ಬದಲಾಯಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ವಾಯರ್ ಓರೆಯಾಗಿ ಟೇಪರ್ ಕಟಿಂಗ್ ಮಾಡಬಹುದಾಗಿದೆ. ತುಂಬಾ ಸಲ ವಾಯರ್ ಕಟ್ ಮಶಿನ್ ಬಳಸಿ ಸ್ಟ್ಯಾಂಪಿಂಗ್ ಟೂಲ್ ತಯಾರಿಸುವಾಗ ಅವುಗಳಿಗೆ ರಿಲೀಫ್ ನೀಡಬೇಕಾಗುತ್ತದೆ. ಈ ರಿಲೀಫ್ ಗೆ ಇಂತಹ ವೈಶಿಷ್ಟ್ಯಗಳು ತುಂಬಾ ಉಪಯುಕ್ತವಾಗಿವೆ. ಅನೇಕ ಬಾರಿ ಟೇಪರ್ ನೀಡುವಾಗ ಬೇಸಿಕ್ ಕೇವಿಟಿ 10 ಮಿ.ಮೀ.ನಷ್ಟು ಇರುತ್ತದೆ ಮತ್ತು ಕೆಳಭಾಗದ ಡೈ ಪ್ಲೇಟ್ ನ ಮುಂದೆ ಇನ್ನಷ್ಟು 10 ಮಿ.ಮೀ.ನ ಟೇಪರ್ ತುಂಬಾ ಸಲ ರಿಲೀಫ್ ಎಂದು ಬಳಸಲಾಗುತ್ತದೆ. ಹಳೆಯ ವಾಯರ್ ಕಟ್ ನಲ್ಲಿ ಕೇವಲ ಟೇಪರ್ ಮಾಡುವ ಸಾಮರ್ಥ್ಯ ಇತ್ತು, ಅದರೆ ಸದ್ಯದ ವಾಯರ್ ಕಟ್ ನಲ್ಲಿ ಕ್ಲಿಷ್ಟಕರವಾದ ಪ್ರೊಫೈಲ್ ಕೂಡಾ ಮಾಡಬಹುದಾಗಿದೆ. ಟಾಪ್ ಪ್ರೊಫೈಲ್ ಮತ್ತು ಬಾಟಮ್ ಪ್ರೊಫೈಲ್ ಈ ಎರಡೂ ವಿವಿಧ ಪ್ರೊಫೈಲ್ ಗಳಾಗಿರುತ್ತವೆ. ಉದಾಹರಣೆ, ಕೆಳಗೆ ಚೌಕಟ್ಟು ಮತ್ತು ಮೇಲ್ಭಾಗದಲ್ಲಿ ಉರುಟಾಗಿದ್ದಲ್ಲಿ, ಆ ಟೇಪರ್ ಪ್ರೊಫೈಲ್ ನಲ್ಲಿ ಅಳವಡಿಸಲ್ಪಡುವುದಿಲ್ಲ. ಇದಕ್ಕೋಸ್ಕರ U-V ಪ್ಲೇನ್ ಬಳಸುತ್ತಾರೆ.
ಲೀನಿಯರ್ ಮೋಟರ್
ಸ್ಟ್ಯಾಂಡರ್ಡ್ ಮಶಿನ್ ಟೂಲ್ ನಲ್ಲಿ ಒಂದು ರೇಖೆಯಲ್ಲಿರುವ ಚಟುವಟಿಕೆಗಳಿಗೆ ಗೈಡ್ ವೇಸ್ ಮಾಡಿ ಕೊಡಲಾಗಿರುತ್ತದೆ ಮತ್ತು ಬಾಲ್ ಸ್ಕ್ರೂ ಅದರ ಚಟುವಟಿಕೆಯನ್ನು ಉಂಟುಮಾಡುತ್ತದೆ. ಬಾಲ್ ಸ್ಕ್ರೂ ನಡೆಯಸಲು ಒಂದು ಮೋಟರ್ ಮತ್ತು ಕಪಲಿಂಗ್ ಅಥವಾ ಬೆಲ್ಟ್ ಇಂತಹ ರಚನೆಯು ಇರುತ್ತದೆ. ಆದರೆ ಲೀನಿಯರ್ ಮೋಟರ್ ನಲ್ಲಿ (ಚಿತ್ರ ಕ್ರ. 4) ಬಾಲ್ ಸ್ಕ್ರೂ ಇರುವುದಿಲ್ಲ ಮತ್ತು ಕಪಲಿಂಗ್ ಕೂಡಾ ಇರುತ್ತದೆ. ಲೀನಿಯರ್ ಮೋಟರ್ ಯಾವುದರಲ್ಲಿ ನಡೆಯುತ್ತದೆಯೋ, ಅದು ಅಯಸ್ಕಾಂತೀಯ (ಮ್ಯಾಗ್ನೆಟಿಕ್) ವ್ಯವಸ್ಥೆಯಾಗಿರುತ್ತದೆ. ಮೋಟರ್ ನಲ್ಲಿ ಯಾವುದೇ ರೀತಿಯ ಘರ್ಷಣೆಯು ಇರುವುದಿಲ್ಲ. ಲೀನಿಯರ್ ಗೈಡ್ ವೇಯಲ್ಲಿಯೇ ಸ್ವಲ್ಪ ಪ್ರಮಾಣದಲ್ಲಿ ಘರ್ಷಣೆಯು ಇರುತ್ತದೆ. ಲೀನಿಯರ್ ಮೋಟರ್ ಇರುವ ವ್ಯವಸ್ಥೆಯಲ್ಲಿ ಬೆಲ್ಟ್ ಕಪಲಿಂಗ್ ಅಥವಾ ಬಾಲ್ ಸ್ಕ್ರೂ, ಬಾಲ್ ನಟ್ ಇವುಗಳಾವುವೂ ಇರುವುದಿಲ್ಲ.
ಯಂತ್ರಣೆಯ ಪ್ರೊಗ್ರಾಮಿಂಗ್
ಯಂತ್ರಣೆಯಾಗುತ್ತಿದ್ದಂತೆ ಮಟೀರಿಯಲ್ ಹೊರಗೆ ತೆಗೆಯಲಾಗುತ್ತದೆ. ಹಾಗೆಯೇ ಇಲೆಕ್ಟ್ರೋಡ್, ನಿಯಂತ್ರಕಗಳಲ್ಲಿ ಒಟ್ಟಾಗಿರುವ ಒಂದು ಮುಂಚೆಯೇ ನಿಗದಿಸಿರುವ ದಾರಿಯಲ್ಲಿ ಪ್ರವಾಸ ಮಾಡುತ್ತದೆ. ನಿಯಂತ್ರಕಕ್ಕೆ ಈ ದಾರಿಯ ಸೂಚನೆ (ಪಾಥ್ ಪ್ರೊಗ್ರಾಮ್), ಯಂತ್ರಭಾಗಗಳ ಪ್ರೊಗ್ರಾಮಿಂಗ್ ಪ್ರಣಾಳಿಕೆಯ ಇಥರ್ ನೆಟ್ ಪೋರ್ಟ್ ಅಥವಾ ಯುಎಸ್ ಬಿ ಡ್ರೈವ್ ನಿಂದ ಅಥವಾ ನೇರವಾಗಿ ಕಂಟ್ರೋಲರ್ ಕೀಬೋರ್ಡ್ ನಿಂದ ನೀಡಬಹುದಾಗಿದೆ.
X-Y ಟೇಬಲ್ ಒಂದು ಪೂರ್ವ ನಿಯೋಜಿತ ದಾರಿಯಲ್ಲಿ ಚಟುವಟಿಕೆಗಳನ್ನು ಮಾಡುತ್ತದೆ ಮತ್ತು U-V ಟೇಬಲ್ ಸ್ಥಿರವಾಗಿ ಇಡಲಾಗುತ್ತದೆ. ಆಗ ಪೂರ್ವ ನಿಯೋಜಿತ ಮಾದರಿಗೆ ಅನುಸಾರವಾಗಿ ನೇರವಾಗಿ ತುಂಡು ಮಾಡಲಾಗುತ್ತದೆ. ಓರೆಯಾದ ದಿಕ್ಕಿನಲ್ಲಿ ಯಂತ್ರಣೆ ಮಾಡುವುದಾದಲ್ಲಿ ವಾಯರ್ ಇಲೆಕ್ಟ್ರೋಡ್ ಓರೆ ಮಾಡಬೇಕಾಗುತ್ತದೆ. ಮೇಲ್ಭಾಗದ ವಾಯರ್ ಗೈಡ್ ಗೆ (U-V ಅಕ್ಷದ ದಿಕ್ಕಿನಲ್ಲಿ) ಕೆಳಭಾಗದ ವಾಯರ್ ಗೈಡ್ ನಲ್ಲಿ ಸ್ಥಿರಪಡಿಸಿದ್ದರಿಂದ ಈ ಪರಿಣಾಮವನ್ನು ಸಾಧಿಸಲಾಗುತ್ತದೆ. X-Y ಟೇಬಲ್ ಮತ್ತು U-V ಟೇಬಲ್ ಈ ಇವೆರಡರ ನಿಯಂತ್ರಕಗಳಲ್ಲಿ ಒಟ್ಟಾಗಿರುವ ಪೂರ್ವನಿಯೋಜಿತ ದಾರಿಯಲ್ಲಿ ಒಂದೇ ಬಾರಿ ನಿಯಂತ್ರಣೆಯ ಚಟುವಟಿಕೆಗಳನ್ನು ಮಾಡಿ ಬೇಕಾಗಿರುವ ಓರೆಯಾದ ಕೋನವನ್ನು ಪಡೆಯಬಹುದಾಗಿದೆ. ನಿಯಂತ್ರಕಕ್ಕೆ X-Y ಟೇಬಲ್ ಮತ್ತು U-V ಟೇಬಲ್ ಇವೆರಡರ ದಾರಿಯ ಮಾಹಿತಿಯನ್ನು ರೇಖೆ ಮತ್ತು ಉರುಟಾಗಿರುವ ಘಟಕಗಳ ಸಹಾಯದಿಂದ NC ಪ್ರೊಗ್ರಾಮ್ ಮೂಲಕ ನೀಡಲಾಗುತ್ತದೆ.
ಪ್ರೊಫೈಲ್ ನ ಜಾಮೆಟ್ರಿ ಮತ್ತು ವಾಯರ್
ಇಲೆಕ್ಟ್ರೋಡ್ ಟೂಲ್ ನ ಪ್ರೊಫೈಲ್ ನಲ್ಲಿರುವ ಚಟುವಟಿಯನ್ನು ನಿಯಂತ್ರಕದಲ್ಲಿ ಜೋಪಾನವಾಗಿ ಇಡಲಾಗುತ್ತದೆ. ಸಂಪೂರ್ಣವಾಗಿ ಮೆನ್ಯು ಮೂಲಕ ಚಲಿಸಲ್ಪಡುವ ಸಾಫ್ಟ್ ವೇರ್ ಬಳಸಿ ಬಿಂದುರೇಖೆ ಮತ್ತು ಉರುಟು ಇಂತಹ ವಿವಿಧ ಜಾಮೆಟ್ರಿಕಲ್ ವ್ಯಾಖ್ಯೆಗಳ ಪರಿಭಾಷೆಯಲ್ಲಿ ವಾಯರ್ ಟೂಲ್ ನ ದಾರಿಯ ಘಟಕಗಳ ಗ್ರಾಫಿಕಲ್ ಡಿಸ್ಪ್ಲೇ ಸ್ಕ್ರೀನ್ ನಲ್ಲಿ ನಿರ್ಧರಿಸಲಾಗುತ್ತದೆ. ಸಂಪೂರ್ಣ ದಾರಿಗೆ ಅಥವಾ ದಾರಿಯ ಪ್ರತಿಯೊಂದು ಘಟಕಕ್ಕೋಸ್ಕರ ಸ್ವತಂತ್ರವಾಗಿ ವಾಯರ್ ಕಾಂಪೆನ್ಷೇಶನ್ (ಹೊಂದಾಣಿಕೆಯ ವಾಯರ್ ನ ವ್ಯಾಸ ಮತ್ತು ಯಂತ್ರಣೆಯಲ್ಲಿರು ಓವರ್ ಕಟ್ ಗೆ) ಮತ್ತು ಟೇಪರ್ ಕೋನವನ್ನು ನಿರ್ಧರಿಸಬಹುದು. ಕಂಪ್ಯೂಟರ್ ನಲ್ಲಿ ಪ್ರೊಫೈಲ್ ಅಳವಡಿಸಿದನಂತರ ದಾರಿಯೊಂದಿಗೆ ಸಂಬಂಧಪಟ್ಟ ಎಲ್ಲ ಅಂಕೆಗಳ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಪ್ರೊಫೈಲ್ ಗ್ರಾಫಿಕಲ್ ಡಿಸ್ಪ್ಲೇ ಸ್ಕ್ರೀನ್ ನಲ್ಲಿ ಹೊಂದಾಣಿಸಿ ನೋಡಲಾಗುತ್ತದೆ ಮತ್ತು ಆಗತ್ಯವಿದ್ದಲ್ಲಿ ಸುಧಾರಣೆಯನ್ನೂ ಮಾಡಬಹುದಾಗಿದೆ.
ಇದರಲ್ಲಿ ಸಾಫ್ಟ್ ವೇರ್ ಕೂಡಾ ಪ್ರಮುಖವಾದ ಭಾಗವಾಗಿದೆ. ಇದರಿಂದಾಗಿ ಅನೇಕ ಹೊಸ ವೈಶಿಷ್ಟ್ಯಗಳನ್ನು ಇದರಲ್ಲಿ ಅಭಿವೃದ್ಧಿ ಮಾಡುವುದು ಸಾಧ್ಯವಾಯಿತು. ಉದಾಹರಣೆ, ಎಡಾಪ್ಟೀವ್ಹ್ ಕಂಟ್ರೋಲ್, ಪ್ರಕ್ರಿಯೆಯಲ್ಲಿರುವ ಪ್ಯಾರಾಮೀಟರ್ ಗಳಲ್ಲಿ ಪ್ರಕ್ರಿಯೆಯು ತುಂಬಾ ಮಹತ್ವದ್ದಾಗಿದ್ದು ಅದನ್ನು ಮಾಡುತ್ತಿರುವಾಗ ಅದರಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಅವುಗಳನ್ನು ತಿಳಿದುಕೊಂಡು ಮುಂದಿನ ಸ್ಟ್ರೆಟಿಜಿಯನ್ನು ನಿರ್ಧರಿಸಬಹುದು. ಇದರಿಂದಾಗಿ ಪ್ರಕ್ರಿಯೆಯು ವೇಗವಾಗಿ ಆಗಿ ನಿಖರತೆಯು ಹೆಚ್ಚುತ್ತದೆ. ಅಲ್ಲದೇ ಇದರ ಕುರಿತು ಗಮನ ಹರಿಸಿ ಸಾಫ್ಟ್ ವೇರ್ ಟೂಲ್ ಮತ್ತು ಸಾಫ್ಟ್ ವೇರ್ ಅಭಿವೃದ್ಧಿ ಮಾಡಲಾಯಿತು. ಇದರಿಂದಾಗಿ ಪ್ರಕ್ರಿಯೆಯು ಒಂದು ವೇಳೆ ಸರಿಯಾಗಿ ಆಗದಿದ್ದಲ್ಲಿ ಅದಕ್ಕೆ ಅನುಸಾರವಾಗಿ ಪ್ಯಾರಾಮೀಟರ್ ಗಳಲ್ಲಿ ಹಲವಾರು ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಮಾಡುವುದೂ ಸಾಧ್ಯವಾಗಿದೆ. ಈ ತನಕ ಈ ಅಂಶಗಳನ್ನು ಆಪರೇಟರ್ ತನ್ನ ಅನುಭವಕ್ಕೆ ಅನುಸಾರವಾಗಿಯೇ ಮಾಡುತ್ತಿದ್ದನು. ಹಲವಾರು ಸಲ ಕಾರ್ಯವಸ್ತುವನ್ನು ತುಂಡು ಮಾಡುವಾಗ ಫ್ಲಶಿಂಗ್ ನಲ್ಲಿ ಅಡಚಣೆಯು ಉಂಟಾಗುತ್ತದೆ. ಈ ಪರಿಸ್ಥಿತಿಯಲ್ಲಿ ವೇಗವನ್ನು ಕಡಿಮೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವಾಯರ್ ತುಂಡಾಗುತ್ತದೆ. ಇದರಿಂದಾಗಿ ಸಮಯವು ವ್ಯರ್ಥವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಒಂದು ವೇಳೆ ಕಾರ್ಯವಸ್ತು 50 ಮಿ.ಮೀ.ನಷ್ಟು ಇದ್ದಲ್ಲಿ ಮತ್ತು ವಾಯರ್ ಗೈಡ್ 70 ಮಿ.ಮೀ.ನಷ್ಟು ಅಳವಡಿಸಿದಲ್ಲಿ ಇದರ ಅರ್ಥ, ಫ್ಲಶಿಂಗ್ ನ ಸ್ಥಿತಿಯು ಒಳ್ಳೆಯದಾಗಿಲ್ಲ. ಈ ರೀತಿಯ ಅಡಚಣೆಗಳನ್ನು ಗಮನಿಸಿ ಸಾಫ್ಟ್ ವೇರ್ ನಲ್ಲಿಯೇ ಸೆಟಿಂಗ್ ಮಾಡಿರುವುದರಿಂದ ಆಪರೇಟರ್ ನ ಕೌಶಲ್ಯಕ್ಕೆ ಅವಲಂಬಿಸದೇ ಕೆಲಸವನ್ನು ಮಾಡುತ್ತಿರಬೇಕು ಮತ್ತು ಗ್ರಾಹಕರ ಸಮಯವನ್ನು ಮತ್ತು ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಮಾಡಬೇಕು.
ಪ್ರಿಸಿಶನ್ ಕಟ್
ಪ್ರಿಸಿಶನ್ ಕಟ್ ಎಂಬ ಒಂದು ಪರ್ಯಾಯವನ್ನು ನಾವು ಸಾಫ್ಟ್ ವೇರ್ ನಲ್ಲಿ ಹೊಂದಾಣಿಸಿದ್ದೇವೆ. ವಾಯರ್ ಕಟ್ ನ ಮೂಲೆಗಳಲ್ಲಿ ಯಾವಾಗಲೂ ಇರೋಶನ್ ಹೆಚ್ಚಾಗಿ ಮೂಲೆಗಳು ಸುಡಲ್ಪಡುತ್ತವೆ. ಕಾರಣ ಸ್ಪಾರ್ಕಿಂಗ್ ಇರುವುದರಿಂದ ಮತ್ತು ವಾಯರ್ ಫ್ಲೆಕ್ಸಿಬಲ್ ಇರುವುದರಿಂದ ಅದು ಮೂಲೆಗಳನ್ನು ಸುಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಪ್ರೊಫೈಲ್ ನಲ್ಲಿ ಮೊದಲು ಮೂಲೆಗಳನ್ನು ಹುಡುಕುವುದು ಮತ್ತು ಹಲವಾರು ಒಳ ವ್ಯವಸ್ಥೆಯನ್ನು ಮಾಡಿ ಮೂಲೆಗಳನ್ನು ಶಾರ್ಪ್ ಹೇಗೆ ಮಾಡಬಹುದು ಎಂಬ ವಿಚಾರವನ್ನು ಮಾಡಲಾಗುತ್ತದೆ.
ವಾಯರ್ ಕಟ್ ನಲ್ಲಿರುವ ಎರಡನೇ ಸಮಸ್ಯೆ ಅಂದರೆ ವಾಯರ್ ಮೇಲಿಂದ ಕೆಳಗೆ ಸರಿಯುವಾಗ ಸ್ಪಾರ್ಕಿಂಗ್ ಪ್ರಕ್ರಿಯೆ ಆಗುತ್ತಿರುವುದರಿಂದ ಮೊದಲಾಗಿ ಎಲ್ಲಿ ಕಿಡಿಯು ಬೀಳುತ್ತದೆಯೋ, ಅಲ್ಲಿ ಮೇಲ್ಭಾಗದ ವಾಯರ್ ಇರೋಡ್ ಆಗುತ್ತದೆ. ಆ ವಾಯರ್ ಇರೋಡ್ ಆಗಿದ್ದರಿಂದ ಮೇಲ್ಭಾಗದ ವಾಯರ್ ಕೆಳಗೆ ತಲುಪುವಾಗ ವಾಯರ್ ನ ವ್ಯಾಸವು ಕಡಿಮೆ ಇರುತ್ತದೆ. ಇದರಿಂದಾಗಿ ಕಾರ್ಯವಸ್ತುವು ಟೇಪರ್ ನಲ್ಲಿ ರೂಪಾಂತರಿಸಲ್ಪಡುತ್ತದೆ. ಈ ಅಂಶವು ಮುಂಚೆಯೇ ಗೊತ್ತಿದ್ದರಿಂದ ಅದನ್ನು ಹೊಂದಾಣಿಕೆ ಮಾಡಲು ವಾಯರ್ ಓರೆ ಮಾಡಿದಲ್ಲಿ ಮುಂದಿನ ಕೆಲಸವು ಸರಿಯಾಗಿ ನಡೆಯುತ್ತದೆ. ಆದರೆ ಈ ವಾಯರ್ ಎಷ್ಟು ಓರೆ ಮಾಡುವುದು ಎಂಬುದು ಪ್ರತಿಯೊಂದು ವಾಯರ್ ನ ದಪ್ಪಕ್ಕೆ ಅನುಸಾರವಾಗಿ, ಅದರ ಗುಣಾಕಾರವು ಬೇರೆ ಬೇರೆ ಇರುತ್ತದೆ. ಇದಕ್ಕೋಸ್ಕರ ಸಾಫ್ಟ್ ವೇರ್ ನ ಸಹಾಯದಿಂದ ಅದರಲ್ಲಿ ಅಭಿವೃದ್ಧಿಯನ್ನು ಮಾಡುಲಾಗುತ್ತದೆ. ಇದರಿಂದಾಗಿ ಆಪರೇಟರ್ ನ ಕೌಶಲ್ಯದ ಅವಲಂಬಿತ್ವವು ಕಡಿಮೆ ಆಗುತ್ತದೆ.
ಉದಾಹರಣೆ
2006 ರಲ್ಲಿ ಸಿ.ಎನ್.ಸಿ. ವಾಯರ್ ಕಟ್ ನ ವ್ಯವಸಾಯದ ಪ್ರಾರಂಭವಾದಾಗ ಸ್ಪ್ರಿಂಟ್ ಕಟ್ ಮಶಿನ್ ಗಳನ್ನು ಬಳಸುತ್ತಿದ್ದೆವು. ಆದರೆ ಪ್ರತಿದಿನವೂ ವ್ಯವಸಾಯದಲ್ಲಿ ಹೆಚ್ಚಾಗುತ್ತಿರುವ ಸ್ಪರ್ಧೆ ಮತ್ತು ತಂತ್ರಜ್ಞಾನದಲ್ಲಾಗುವ ಬದಲಾವಣೆಗಳಿಂದಾಗಿ ಸ್ಪ್ರಿಂಟ್ ಕಟ್ ಮಶಿನ್ ಗಳಿಗೆ ಮಿತಿಗಳಿದ್ದವು. ಇದರೊಂದಿಗೆ ಅಪೇಕ್ಷಿಸಿರುವ ನಿಖರತೆಯು ಲಭಿಸುತ್ತಿರಲಿಲ್ಲ. ಕ್ಲಿಷ್ಟ ಗಾತ್ರದ ಯಂತ್ರಭಾಗಗಳನ್ನು ತಯಾರಿಸುವಾಗ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತಿತ್ತು ಮತ್ತು ಯಂತ್ರಭಾಗಗಳ ಗಾತ್ರದಲ್ಲಿಯೂ ಮಿತಿಗಳಿದ್ದವು. ಇದರಿಂದಾಗಿ ನಾವು ಇಲೆಕ್ಟ್ರಾನಿಕಾ ಇವರ ಜಾಬ್ ಮಾಸ್ಟರ್ ಮಶಿನ್ ಖರೀದಿಸಿದೆವು. ಈ ಮಶಿನ್ ನಾವು ಕಳೆದ ಒಂದುವರೆ ವರ್ಷದಿಂದ ಬಳಸುತ್ತಿದ್ದೇವೆ. ಪ್ರಾರಂಭದಲ್ಲಿ 2-3 ತಿಂಗಳ ಕಾಲಾವಧಿಯಲ್ಲಿ ನಮಗೆ ಮಶಿನ್ ಗಳ ಕುರಿತು ಹಲವಾರು ಅಡಚಣೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಇಲೆಕ್ಟ್ರಾನಿಕಾ ಹೈಟೆಕ್ ನ ತಾಂತ್ರಿಕ ತಂಡವು ಆಗಾಗ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಿದರು. ಈ ರೀತಿಯಲ್ಲಿ ಕಳೆದ ವರ್ಷದಿಂದ ಮಶಿನ್ ಯಾವುದೇ ಅಡಚಣೆ ಇಲ್ಲದೇ ಸರಿಯಾಗಿ ನಡೆಯುತ್ತಿದೆ. ಇತ್ತಿಚೇಗೆ ಜಾಬ್ ಮಾಸ್ಟರ್ ನಲ್ಲಿ ಮಾಡಲಾಗುವಂತಹ ಯಂತ್ರಭಾಗಗಳ ನಿಖರತೆಯು ತುಂಬಾ ಇದ್ದರಿಂದ ಯಾವ ಗ್ರಾಹಕರು ಅದರ ಕುರಿತು ತಕರಾರು ಮಾಡಿಲ್ಲ. ಹಾಗೆಯೇ ಈ ಮಶಿನ್ ನಿರ್ವಹಿಸುವುದೂ ಸುಲಭವಾಗಿದೆ. ಯಂತ್ರಭಾಗಗಳ ಗಾತ್ರಕ್ಕೆ ಮಿತಿಯೂ ಇರುವುದಿಲ್ಲ. ಇದರಿಂದಾಗಿ ಜಾಬ್ ಮಾಸ್ಟರ್ ನಮಗೆ ತುಂಬಾ ಉಪಯುಕ್ತವಾಗಿದೆ, ಎಂಬುದಾಗಿ ಪುಣೆಯಲ್ಲಿರುವ ದುರ್ಗಾ ಇಂಡಸ್ಟ್ರೀಜ್ ಎಂಡ್ ಕಂಪನಿಯ ನಿರ್ದೇಶಕರಾದ ರವೀಂದ್ರ ವಸುಲೆ ಹೇಳಿದರು.
‘‘ನಮ್ಮ ಕಂಪನಿಯು ಪ್ಯಾಕೇಜಿಂಗ್ ಮಶಿನಿಂಗ್ ನ ಅನೇಕ ವಿಧದ 85,000 ಯಂತ್ರಭಾಗಗಳನ್ನು ತಯಾರಿಸುತ್ತಿದೆ. ಈ ಎಲ್ಲ ಯಂತ್ರಭಾಗಗಳನ್ನು ಏಶಿಯಾ ಮತ್ತು ಇನ್ನಿತರ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 3 ಮೈಕ್ರಾನ್ ನಷ್ಟು ನಿಖರತೆ ಇರುವ ಕ್ಲಿಷ್ಟ ಯಂತ್ರಭಾಗಗಳ ನಿರ್ಮಾಣ ಮತ್ತು ಯಂತ್ರಣೆಯನ್ನು ನಾವೇ ಮಾಡುತ್ತೇವೆ.
(ಚಿತ್ರ ಕ್ರ. 5) ಈ ಎಲ್ಲ ಯಂತ್ರಭಾಗಗಳ ಪ್ರೊಗ್ರಾಮ್ ಗಳನ್ನು ಮಶಿನ್ ಗಳ ನಿಯಂತ್ರಕಗಳಲ್ಲಿ ಕಾಪಾಡಿರುವುದರಿಂದ ಯಾವುದೇ ಯಂತ್ರಭಾಗಗಳನ್ನು ಪ್ರಾರಂಭಿಸುವಾಗ ಸೆಟಿಂಗ್ ಗೆ ಕಡಿಮೆ ಸಮಯವು ಬೇಕಾಗುತ್ತದೆ ಮತ್ತು ಯಂತ್ರಭಾಗಗಳ ಗುಣಮಟ್ಟವೂ ಒಂದೇ ರೀತಿಯಲ್ಲಿರುತ್ತದೆ. ನಾವು ಪೂರೈಸುತ್ತಿರುವ ಯಂತ್ರಭಾಗಗಳ ನಿಖರತೆಯ ಕುರಿತು ನಮ್ಮ ಗ್ರಾಹಕರಿಗೆ ಸಮಾಧಾನವಿದೆ, ಆದ್ದರಿಂದ ನಮಗೆ ಉತ್ಪಾದನೆಯ ಕುರಿತು ಯಾವುದೇ ರೀತಿಯಲ್ಲಿ ಜಾಹಿರಾತುಗಳನ್ನು ಮಾಡುವ ಅಗತ್ಯವಿರುವುದಿಲ್ಲ. ನಮ್ಮ ಗ್ರಾಹಕರೇ ನಮ್ಮ ಉತ್ಪಾದನೆಯ ಜಾಹಿರಾತು ಮಾಡುತ್ತಿರುತ್ತಾರೆ.’’
<="" div="" style="float: left; margin: -25px 20px 20px 0px;">

ನರೇಂದ್ರ ಲಾಗೂ
ವರಿಷ್ಠ ವ್ಯವಸ್ಥಾಪಕರು, ಇಲೆಕ್ಟ್ರಾನಿಕಾ ಹೈಟೆಕ್
8380023222
ನರೇಂದ್ರ ಲಾಗೂ ಇವರು ವಿಜ್ಞಾನ ಶಾಖೆಯಲ್ಲಿ ಪದವೀಧರರಾಗಿದ್ದಾರೆ. ಅಪ್ಲೈಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಅವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಕಳೆದ 30 ವರ್ಷಗಳಿಂದ ಇ.ಡಿ.ಎಮ್.ಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 27 ವರ್ಷಗಳ ಕಾಲಾವಧಿಯಲ್ಲಿ ಅವರು ಇಲೆಕ್ಟ್ರಾನಿಕಾ ಎಂಬ ಕಂಪನಿಯಲ್ಲಿ ಕಾರ್ಯನಿರತರಾಗಿದ್ದು ಅವರು ISO, SIX SIGMA ಇಂತಹ ಅನೇಕ ಸುಧಾರಣೆಗಳೊಂದಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ತಂಡದ ಪ್ರಮುಖರಾಗಿ
ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
="">