ಎಪ್ರಿಲ್ 2020 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ನಾವು ಪಾಟ್ ಟೈಪ್ ಜಿಗ್ ಕುರಿತು ತಿಳಿದುಕೊಂಡೆವು.ಈ ಲೇಖನದಲ್ಲಿ ನಾವು ಒಂದು ಬದಿಯಿಂದ ಇನ್ನೊಂದು ಬದಿಯಲ್ಲಿ ತಿರುಗಿಸಲಾಗುವ ಅಂದರೆ ಟರ್ನ್ ಓವರ್ ಫಿಕ್ಸ್ಚರ್ ಕುರಿತು ತಿಳಿದುಕೊಳ್ಳೋಣ.
ಒಂದುವೇಳೆ ಕಾರ್ಯವಸ್ತುವಿನಲ್ಲಿ 4 ಮಿ.ಮೀ. ಮತ್ತು 6 ಮಿ.ಮೀ. ವ್ಯಾಸದ ಎರಡು ರಂಧ್ರಗಳನ್ನು X ಮತ್ತು Y ಎಂಬ ಎರಡು ದಿಕ್ಕುಗಳಲ್ಲಿ ಮಾಡುವುದಾದಲ್ಲಿ ಕಾರ್ಯವಸ್ತುವಿನ D ವ್ಯಾಸ H7 ಟಾಲರನ್ಸ್ ನಲ್ಲಿ ನಿಯಂತ್ರಿಸಲಾಗಿರುತ್ತದೆ. ಇದರಿಂದಾಗಿ ಇದೇ ವ್ಯಾಸದಲ್ಲಿ ಕಾರ್ಯವಸ್ತುವನ್ನು ಲೊಕೇಟ್ ಮಾಡಲಾಗಿರುತ್ತದೆ. ಕಾರ್ಯವಸ್ತುವಿನ ಆಕಾರ ಚಿಕ್ಕದಾಗಿರುವುದರಿಂದ ಇದು ಫಿಕ್ಸ್ಚರ್ ಗಿಂತಲೂ ಚಿಕ್ಕದಾಗಿರುತ್ತದೆ. ಹಾಗೆಯೇ ದೊಡ್ಡ ರಂಧ್ರದ ವ್ಯಾಸವು 6 ಮಿ.ಮೀ. ಇರುವುದರಿಂದ ಈ ಜಿಗ್ ಕೈಯಿಂದ ಹಿಡಿದು ಯಂತ್ರಣೆಯನ್ನು ಮಾಡುವುದು ಸಾಧ್ಯವಿದೆ. ಇದರಿಂದಾಗಿ ಜಿಗ್ ಕ್ಲಾಂಪಿಂಗ್ ನ ಆವಶ್ಯಕತೆಯೂ ಇರುವುದಿಲ್ಲ.
ಚಿತ್ರ ಕ್ರ. 1 ರಲ್ಲಿ ಟರ್ನ್ ಓವರ್ ಫಿಕ್ಸ್ಚರ್ ತೋರಿಸಲಾಗಿದೆ. ಅದರಲ್ಲಿ ಅನೇಕ ಭಾಗಗಳ ಕೆಲಸ ಮತ್ತು ಅದರ ಆವಶ್ಯಕತೆ ಏನಿದೆ, ಎಂಬುದನ್ನು ನಾವು ತಿಳಿದುಕೊಳ್ಳೋಣ. ಡಿಸೈನ್ ಮಾಡುವಾಗ ಯಾವುದೇ ಭಾಗ ಅಥವಾ ರೇಖೆ ಅನಾವಶ್ಯಕವಾಗಿರುವುದಿಲ್ಲ ಅಥವಾ ಅನಾವಶ್ಯಕವಾಗಿರಬಾರದು.
1. ಲೊಕೇಟರ್
ಚಿತ್ರ ಕ್ರ. 1 ರಲ್ಲಿ ಲೊಕೇಟರ್ ಕಾಣುತ್ತಿದ್ದು ಈ ಲೊಕೇಟರ್ ಮತ್ತು ಕಾರ್ಯವಸ್ತುವಿನ ಫಿಟ್ H7/g6 ಇದೆ. ಇದಕ್ಕೆ ಗೈಡ್ ಫಿಟ್ ಎಂದು ಹೇಳಲಾಗುತ್ತದೆ. ಈ ಲೊಕೇಟರ್, ಕೇಸ್ ಹಾರ್ಡ್ ಮತ್ತು ಗ್ರೈಂಡಿಂಗ್ ಮಾಡಲ್ಪಟ್ಟಿರುತ್ತದೆ. ಇದರ ಹಾರ್ಡ್ ನೆಸ್ ಸಾಮಾನ್ಯವಾಗಿ 60± 2HRC ಅಳವಡಿಸಬೇಕಾಗುತ್ತದೆ. ಇದಕ್ಕೋಸ್ಕರ ಕೇಸ್ ಹಾರ್ಡ್ ಆಗುವ ಮಟೀರಿಯಲ್ (20MnCr5 ಅಥವಾ 16MnCr5) ಬಳಸಬೇಕು. ಈ ಕೇಸ್ ಹಾರ್ಡ್ ಯಾಕೆ ಅಳವಡಿಸಿರಬಹುದು. ಒಂದು ವೇಳೆ ಇದನ್ನು ಸಂಪೂರ್ಣವಾಗಿ ಹಾರ್ಡ್ ಮಾಡಿದಲ್ಲಿ,
1. ಎರಡೂ ಬದಿಗಳಲ್ಲಿರುವ ಥ್ರೆಡ್ ಗಳು ಹಾರ್ಡ್ ಆಗುತ್ತವೆ. ಇದರಿಂದಾಗಿ ಕಚ್ಚುಗಳು ಕ್ರ್ಯಾಕ್ ಆಗುವ ಸಾಧ್ಯತೆ ಇರುತ್ತದೆ. (ರಂಧ್ರಗಳು, ಬಿರುಕುಗಳು). ಇಂತಹ ರಂಧ್ರಗಳು, ಬಿರುಕುಗಳು ಉಂಟಾದಲ್ಲಿ ಅದು ಗಮನಕ್ಕೆ ಬರುವುದೂ ಅಸಾಧ್ಯ. ಆದ್ದರಿಂದ ಥ್ರೆಡಿಂಗ್ ಇರುವ ಭಾಗಗಳನ್ನು ಹಾರ್ಡ್ ಮಾಡಿದಲ್ಲಿ ಕೇಸ್ ಹಾರ್ಡ್ ಅಥವಾ ಫ್ಲೇಮ್ ಹಾರ್ಡ್ ಮಾಡಬೇಕು. ಫ್ಲೇಮ್ ಹಾರ್ಡ್ ಮಾಡುವಾಗ ಯಾವ ಭಾಗದಲ್ಲಿ ಹಾರ್ಡನಿಂಗ್ ಬೇಕೋ, ಅಷ್ಟೇ ಭಾಗವನ್ನು ಹಾರ್ಡ್ ಮಾಡಬೇಕು. ಕಚ್ಚುಗಳಿರುವ ಭಾಗಗಳನ್ನು ಫ್ಲೇಮ್ ಹಾರ್ಡ್ ಮಾಡದೇ ಅದನ್ನು ಸಾಫ್ಟ್ ಇಡಬೇಕು.
2. ಹಾರ್ಡ್ ಕಚ್ಚುಗಳಿಂದಾಗಿ ಕ್ಲಾಂಪಿಂಗ್ ನಟ್ ನ ಸವೆತವು ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಇದರಿಂದಾಗಿ ಕಚ್ಚುಗಳನ್ನು ಮೃದುವಾಗಿ ಇಡಲಾಗುತ್ತದೆ. ಕಚ್ಚುಗಳನ್ನು ಮಾಡುವ ಸಂದರ್ಭದಲ್ಲಿ ಆ ಭಾಗದ ಕೇಸ್ ಹಾರ್ಡ್ ಮಾಡಬೇಕು, ಎಂಬ ಥಂಬ್ ರೂಲ್ ಇದೆ. ಕಾರ್ಯವಸ್ತು D ವ್ಯಾಸದಲ್ಲಿ ಅಳವಡಿಸಿದ್ದರಿಂದ ಲೊಕೇಟರ್ ನ ವ್ಯಾಸ ನಿಯಂತ್ರಿಸಲ್ಪಡುತ್ತದೆ (g6). ಇದರಿಂದಾಗಿ 4 ಮತ್ತು 6 ಮಿ.ಮೀ. ವ್ಯಾಸದ ರಂಧ್ರಗಳು D ವ್ಯಾಸದೊಂದಿಗೆ (ಚಿತ್ರ ಕ್ರ. 2) ಸೆಂಟ್ರಿಕ್ ಆಗುತ್ತವೆ. ಇದರೊಂದಿಗೆ ಕಾರ್ಯವಸ್ತುವಿನ ಸರ್ಫೇಸ್ ಲೊಕೇಟರ್ ನ X1 ಸರ್ಫೇಸ್ ನಲ್ಲಿ ಒರಗಿಸಿ ಕ್ಲ್ಯಾಂಪ್ ಮಾಡಿರುವುದರಿಂದ 40.00 ± 0.05 ಮಿ.ಮೀ.ನಷ್ಟು ಮಾಪನವು ನಿರ್ದೋಷವಾಗಿ ಸಿಗುತ್ತದೆ. ವ್ಯಾಸ d1 ಮತ್ತು D ಇವೆರಡೂ ಸೆಂಟ್ರಿಕ್ ಮತ್ತು ಸಮತಲ X ಗೆ ಹಾರಿಝಾಂಟಲ್ ಇರುತ್ತವೆ.
2. C ವಾಶರ್
C ವಾಶರ್ ನ ಕೆಲಸವನ್ನು ನಾವು ಈ ಹಿಂದಿನ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಇದರ ದೊಡ್ಡ ವ್ಯಾಸ, ಫಿಕ್ಸ್ಚರ್ ಅಥವಾ ಜಿಗ್ ಬಾಡಿಯ ಒಳಗಿನ ವ್ಯಾಸಕ್ಕಿಂತ ಚಿಕ್ಕದಾಗಿರುವುದು ಅತ್ಯಾವಶ್ಯಕವಾಗಿದೆ. ನಟ್ ಸ್ವಲ್ಪವಾದರೂ ಸಡಿಲ ಮಾಡಿದಲ್ಲಿ ವಾಶರ್ ಹೊರಗೆ ಬರುತ್ತವೆ ಮತ್ತು ಕಾರ್ಯವಸ್ತುವನ್ನು ಸಹಜವಾಗಿ ತೆಗೆಯುವುದು ಸಾಧ್ಯವಾಗಿದೆ.
3. ಹೆಕ್ಸ್ ನಟ್
ಈ ಜಾಗದಲ್ಲಿ ಹೆಕ್ಸ್ ನಟ್ ಅಥವಾ ಪಾಮ್ ಗ್ರಿಪ್ ಬಳಸಬಲ್ಲೆವು. ನಟ್ ನಿಂದಾಗಿ ಕಾರ್ಯವಸ್ತುವನ್ನು ದೃಢವಾಗಿ ಹಿಡಿಯಲಾಗುತ್ತದೆ. ಆದರೆ ಕಾರ್ಯವಸ್ತುವಿನಲ್ಲಿ ರಂಧ್ರಗಳ ವ್ಯಾಸ 4 ಮತ್ತು 6 ಮಿ.ಮೀ. ಇರುವುದರಿಂದ ಪಾಮ್ ಗ್ರಿಪ್ ಬಳಸಿದಲ್ಲಿ ಹೆಚ್ಚು ಯೋಗ್ಯವಾಗುತ್ತದೆ. ಕಾರಣ ರಂಧ್ರಗಳನ್ನು ಮಾಡುವಾಗ ಕಡಿಮೆ ಶಕ್ತಿಯು ಬೇಕಾಗುತ್ತದೆ, ಇದರಿಂದಾಗಿ ಸ್ಪೇನರ್ ಬಳಸುವುದನ್ನು ತಡೆಯಬಹುದು.
4. ಓರಿಯೆಂಟೇಶನ್ ಪಿನ್
ಸ್ಪೆಶಲ್ ಬುಶ್ ಒಂದು ನಿಗದಿಸಿರುವ ದಿಕ್ಕಿನಲ್ಲಿ ಅಳವಡಿಸಲ್ಪಡಬೇಕು, ಎಂಬುದಕ್ಕೆ ಈ ಪಿನ್ ನೀಡಲಾಗಿದ್ದು ಅದು ಜಿಗ್ ನ ಬಾಡಿಯಲ್ಲಿ ಒತ್ತಿ (ಪ್ರೆಸ್ ಫಿಟ್) ಅಳವಡಿಸಲಾಗಿರುತ್ತದೆ. ಇದೇ ರೀತಿಯಲ್ಲಿ ಪಿನ್ ನ ವ್ಯಾಸದಲ್ಲಿ f7 ಟಾಲರನ್ಸ್ ಇಡಲಾಗಿರುತ್ತದೆ. ಇನ್ನು ಮುಂದೆ ಈ ಟಾಲರನ್ಸ್ f7 ಯಾಕೆ? ಎಂಬುದೂ ನಿಮ್ಮ ಗಮನಕ್ಕೆ ಬರಬಹುದು. ಈ ಜಾಗದಲ್ಲಿ ಸ್ಟಾಂಡರ್ಡ್ ಡಾವೆಲ್ ಬಳಸಬಲ್ಲೆವು.
5. ಸ್ಪೆಶಲ್ ಬುಶ್
ಕಾರ್ಯವಸ್ತುವಿನಲ್ಲಿ 4 ರಿಂದ 6 ಮಿ.ಮೀ. ವ್ಯಾಸದ ರಂಧ್ರಗಳು ತುಂಬಾ ಸಮೀಪ ಇರುವುದರಿಂದ ಎರಡು ಬೇರೆ ಬೇರೆ ಬುಶ್ ಗಳನ್ನು ಅಳವಡಿಸುವುದು ಅಸಾಧ್ಯವೇ ಸರಿ. ಆದ್ದರಿಂದ ಒಂದೇ ಬುಶ್ ನಲ್ಲಿ ಎರಡೂ ರಂಧ್ರಗಳನ್ನು ಮಾಡಲಾಗುತ್ತವೆ. ಈ ಸ್ಪೆಶಲ್ ಬುಶ್ (ಚಿತ್ರ ಕ್ರ. 3) ಜಿಗ್ ನಲ್ಲಿ ಅಳವಡಿಸಿದ ನಂತರ ಎರಡು ರಂಧ್ರಗಳನ್ನು ಲೊಕೇಟರ್ ನ ಅಕ್ಷಕ್ಕೆ ಸಮಾನಾಂತರವಾಗಿ ಅಳವಡಿಸಲು ಬುಶ್ ಗೆ ಕಾಲರ್ ನಲ್ಲಿ ಸ್ಲಾಟ್ ನೀಡಲಾಗಿದೆ.
ಈ ಬುಶ್ ಹಾರ್ಡ್ ಮತ್ತು ಗ್ರೈಂಡಿಂಗ್ ಮಾಡಲ್ಪಟ್ಟಿರುತ್ತದೆ. ಸ್ಕ್ರೂನ ಸಹಾಯದಿಂದ ಬುಶ್ ಜಿಗ್ ಬಾಡಿಯಲ್ಲಿ ಅಳವಡಿಸಿದ್ದು, ಎರಡು ರಂಧ್ರಗಳಲ್ಲಿ ಯಾವುದೇ ಒಂದು ರಂಧ್ರವು ಹಾಳಾದಲ್ಲಿ ಬುಶ್ ಬದಲಾಯಿಸಬೇಕಾಗುತ್ತದೆ. ಈ ರೀತಿಯಲ್ಲಿ ಆಗಾಗ ಬುಶ್ ಬದಲಾಯಿಸಿ, ಜಿಗ್ ಬಾಡಿಯಲ್ಲಿರುವ ಬುಶ್ ಗೋಸ್ಕರ ಮಾಡಿರುವ ರಂಧ್ರಗಳು ಹಾಳಾಗಬಾರದು, ಎಂಬುದಕ್ಕೆ ಲೈನರ್ ಬಳಸಲಾಗುತ್ತದೆ. ಬುಶ್ ನಲ್ಲಿರುವ 4 ಮತ್ತು 6 ಮಿ.ಮೀ. ವ್ಯಾಸದ ಟಾಲರನ್ಸ್ G7 ಇರುತ್ತದೆ.
6. ಸ್ಕ್ರೂ
ಸ್ಪೆಶಲ್ ಬುಶ್ ಜಿಗ್ ಬಾಡಿಯಲ್ಲಿ ಅಳವಡಿಸಲು ಸ್ಕ್ರೂ ಬಳಸಲಾಗಿದ್ದು, ಈ ಬುಶ್ ಹಾಳಾದಲ್ಲಿ ಬದಲಾಯಿಸಬೇಕು, ಎಂಬುದಕ್ಕೆ ಲೈನರ್ ನಲ್ಲಿ ಸ್ಲೈಡ್ ಫಿಟ್ (H7/g6) ಅಳವಡಿಸಲಾಗುತ್ತದೆ.
7. ಫಿಕ್ಸ್ಟರ್ ಬಾಡಿ
ಈ ಭಾಗವು ಜಿಗ್ ನಲ್ಲಿ ತುಂಬಾ ಮಹತ್ವದ ಭಾಗವಾಗಿದೆ. ಇದನ್ನು ಕೂಡಾ ಕೇಸ್ ಹಾರ್ಡ್ ಆಗುವಂತಹ ಮಟೀರಿಯಲ್ (20MnCr5 ಅಥವಾ 16MnCr5) ಬಳಸಿ ತಯಾರಿಸಲಾಗಿದ್ದು ಇದರ ಕಾರಣಗಳನ್ನು ಈ ಮುಂದೆ ನೀಡಲಾಗಿದೆ.
ಎ. ಸರ್ಫೇಸ್ B1, B2, A1, A2 ಹಾರ್ಡನಿಂಗ್ ಮಾಡಿ ನಂತರ ಗ್ರೈಂಡಿಂಗ್ ಮಾಡಲಾಗಿವೆ.
ಬಿ. ವ್ಯಾಸ d1 ಮತ್ತು ಲೈನರ್ ಗೋಸ್ಕರ ಮಾಡಿರುವ ರಂಧ್ರಗಳು ಒಂದು ವೇಳೆ ಹಾರ್ಡನಿಂಗ್ ನ ಮೊದಲೇ ಮಾಡಿದಲ್ಲಿ ಅದು ಉಷ್ಣತೆಯ ಪ್ರಕ್ರಿಯೆಯ ನಂತರ ಅಂಕುಡೊಂಕಾಗುತ್ತವೆ.
ಸಿ. ಜಿಗ್ ಬಾಡಿಯಲ್ಲಿ ಸ್ಕ್ರೂಗೋಸ್ಕರ ಮತ್ತು ಓರಿಯೆಂಟೇಶನ್ ಪಿನ್ ಗೋಸ್ಕರ ಮಾಡಿರುವ ರಂಧ್ರಗಳನ್ನು ಹಾರ್ಡನಿಂಗ್ ಮತ್ತು ಗ್ರೈಂಡಿಂಗ್ ಮಾಡಿದ ನಂತರವೇ ಮಾಡಬೇಕು. ಇದರಿಂದಾಗಿ ಈ ಭಾಗಗಳು ಸಾಫ್ಟ್ ಇಡಬೇಕಾಗುತ್ತವೆ. ಇದರಲ್ಲಿ ಓರಿಯೆಂಟೇಶನ್ ಪಿನ್ ಗೋಸ್ಕರ ಮಾಡಿರುವ ರಂಧ್ರಗಳು ಹೆಚ್ಚು ನಿರ್ದೋಷವಾಗಿರುತ್ತವೆ.
X ದಿಕ್ಕಿನಲ್ಲಿ ಲೈನರ್ ಅಳವಡಿಸಲು ಇರುವ ರಂಧ್ರಗಳು Z1 ಸಮತಲದೊಂದಿಗೆ ಸೆಂಟ್ರಿಕ್ ಇರುವುದು ಅತ್ಯಾವಶ್ಯಕವಾಗಿದೆ. ಕಾರಣ X ದಿಕ್ಕಿನಲ್ಲಿ ಡ್ರಿಲ್ಲಿಂಗ್ ಮಾಡುವಾಗ ಕಾರ್ಯವಸ್ತುವನ್ನು A ಸಮತಲದಲ್ಲಿ ಒರಗಿಸಿ ಯಂತ್ರಣೆಯನ್ನು ಮಾಡುತ್ತೇವೆ. ಇದರಿಂದಾಗಿ 4 ಮತ್ತು 6 ಮಿ.ಮೀ.ನ ರಂಧ್ರಗಳನ್ನು X1 ಸಮತಲದೊಂದಿಗೆ ಸಮಾನಾಂತರವಾಗಿ ಲಭಿಸುತ್ತವೆ. ಒಂದುವೇಳೆ ರಂಧ್ರಗಳು ಓರೆಯಾಗಿದ್ದಲ್ಲಿ ಯಂತ್ರಣೆಯನ್ನು ಮಾಡುವಾಗ ಡ್ರಿಲ್ ತುಂಡಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ Y ದಿಕ್ಕಿನಿಂದ ಲೈನರ್ ಅಳವಡಿಸಲು ಇರುವ ರಂಧ್ರಗಳು A2 ಸಮತಲದೊಂದಿಗೆ ಸೆಂಟ್ರಿಕ್ ಆಗಿರುವುದು ಅತ್ಯಾವಶ್ಯಕವಾಗಿದೆ. d1 ವ್ಯಾಸ X2 ಸಮತಲದೊಂದಿಗೆ ಸೆಂಟ್ರಿಕ್ ಮಾಡಬೇಕು. ಇದರಿಂದಾಗಿ D ವ್ಯಾಸವೂ X2 ಸಮತಲದೊಂದಿಗೆ ಸೆಂಟ್ರಿಕ್ ಆಗಬಹುದು. ಕಾರಣ d1 ವ್ಯಾಸ ಮತ್ತು D ವ್ಯಾಸ ಇವೆರಡೂ ಸೆಂಟ್ರಿಕ್ ಆಗಿವೆ.
ಜಿಗ್ ಬಾಡಿಯಲ್ಲಿ ಓರಿಯೆಂಟೇಶನ್ ಪಿನ್ ಪ್ರೆಸ್ ಫಿಟ್ ಮಾಡಲು ರಂಧ್ರಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ವೇಳೆ ಪಿನ್ ತುಂಡಾದಲ್ಲಿ ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವಾದಷ್ಟು ಮಟ್ಟಿಗೆ ಈ ರಂಧ್ರಗಳನ್ನು ಆರುಪಾರಾಗಿ ನೀಡಲಾಗಿದೆ. ಜಿಗ್ ಬಾಡಿಯಲ್ಲಿ ಹೊರಗಿನ ಎಲ್ಲ ಮೂಲೆಗಳಲ್ಲಿ ಉರುಟಾದ ಆಕಾರವನ್ನು ನೀಡಲಾಗಿದೆ. ಕಾರಣ ಚೂಪಾಗಿರುವ ಮೂಲೆಗಳಿದ್ದಲ್ಲಿ ಕೆಲಸಗಾರರ ಕೈಗೆ ಗಾಯಗಳಾಗುವ ಸಾಧ್ಯತೆ ಇದೆ. ಜಿಗ್ ಅಥವಾ ಫಿಕ್ಸ್ಚರ್ ಇದರ ಡಿಸೈನ್ ಮಾಡುವಾಗಲೂ ಸುರಕ್ಷೆಯ ಕುರಿತಾದ ಮುತುವರ್ಜಿಯನ್ನು ಹೇಗೆ ವಹಿಸಬೇಕು, ಎಂಬ ಅಂಶವು ಗಮನಕ್ಕೆ ಬರುತ್ತದೆ ಮತ್ತು ಇದು ತುಂಬಾ ಮಹತ್ವದ್ದಾಗಿದೆ.
8. ವಾಶರ್, ಹೆಕ್ಸ್ ಲಾಕ್ ನಟ್
ಲೊಕೇಟರ್ ಜಿಗ್ ಬಾಡಿಯಲ್ಲಿ ಅಳವಡಿಸಲು ವಾಶರ್ ಮತ್ತು ಹೆಕ್ಸ್ ಲಾಕ್ ನಟ್ ಬಳಸಲಾಗಿದೆ. ಲೊಕೇಟರ್ ಕಾಲರ್ ಕ್ಯಾಪ್ ಸ್ಕ್ರೂ ಗಳ ಸಹಾಯದಿಂದಲೂ ಅಳವಡಿಸಬಹುದು. ಆದರೆ ಹೀಗೆ ಮಾಡಿದಲ್ಲಿ ಲೊಕೇಟರ್ ಮತ್ತು ಜಿಗ್ ನ ಗಾತ್ರವು ದೊಡ್ಡದಾಗಬಹುದು. ಹಾಗೆಯೇ ಬುಶ್ ಮತ್ತು ಕಾರ್ಯವಸ್ತುವಿನಲ್ಲಿರುವ ದೂರವು (L) ಹೆಚ್ಚಾಗಬಹುದು. 4 ಮಿ.ಮೀ.ನ ಡ್ರಿಲ್ ಇದು ದೂರ ಹೆಚ್ಚಾಗಿದ್ದರಿಂದ ಅಂಕುಡೊಂಕಾಗಿ ತುಂಡಾಗುವ ಸಾಧ್ಯತೆ ಇರುತ್ತದೆ. ಕಾರಣ ಕಾರ್ಯವಸ್ತುವಿನ ಉರುಟಾದಭಾಗದಲ್ಲಿ ಡ್ರಿಲ್ಲಿಂಗ್ ಮಾಡುತ್ತಿರುತ್ತೇವೆ.
9. ಲೈನರ್
ಇದು ಹೆಡ್ ಲೆಸ್ ವಿಧದ ಲೈನರ್ ಆಗಿದ್ದು ಸಂಪೂರ್ಣವಾಗಿ ಹಾರ್ಡ್ ಮಾಡಲಾಗಿರುತ್ತದೆ. ಈ ಲೈನರ್ ಜಿಗ್ ಬಾಡಿಯಲ್ಲಿ ಪ್ರೆಸ್ ಫಿಟ್ ಅಳವಡಿಸಲಾಗಿರುತ್ತದೆ. ಈ ಕಾರ್ಯವಸ್ತುವಿನಲ್ಲಿ 4 ರಿಂದ 6 ಮಿ.ಮೀ. ರಂಧ್ರಗಳು ಕೇವಲ X ಮತ್ತು Y ದಿಕ್ಕಿನಲ್ಲಿವೆ. ಒಂದು ವೇಳೆ ಈ ರಂಧ್ರಗಳು 6 ದಿಕ್ಕುಗಳಲ್ಲಿದ್ದಲ್ಲಿ ಆರು ಕೋನಗಳಿರುವ ಜಿಗ್ ಬಾಡಿಯನ್ನು ಬಳಸಬಹುದಾಗಿದೆ. ಜಿಗ್ ಬಾಡಿ ಎಲ್ಲ ಆರು ಸರ್ಫೇಸ್ ಗಳಲ್ಲಿ ಒರಗಿಸಬೇಕಾಗುವುದಿಲ್ಲ, ಆದ್ದರಿಂದ ಎಲ್ಲ ಬುಶ್ ಗಳ ಮೇಲ್ಭಾಗದ ಸರ್ಫೇಸ್ ಜಿಗ್ ಬಾಡಿಯ ಸರ್ಫೇಸ್ ನ ಒಳಗಿರಬೇಕು. ಮುಂದಿನ ಲೇಖನದಲ್ಲಿ ಇನ್ನು ಹಲವಾರು ವಿಧದ ಡ್ರಿಲ್ಲಿಂಗ್ ಫಿಕ್ಸ್ಚರ್ ಗಳು ಅಥವಾ ಜಿಗ್ ಗಳ ಕುರಿತು ತಿಳಿದುಕೊಳ್ಳಲಿದ್ದೇವೆ.
<="" div="" style="float: left; margin: -25px 20px 20px 0px;">
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,
ARAI SAE
9011018388
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.
="">