ಯಾವುದೇ ರಂಧ್ರಗಳ ಡ್ರಿಲ್ಲಿಂಗ್ ಮಾಡುವಾಗ ಅದರ ಉದ್ದ ಅಥವಾ ವ್ಯಾಸ (L/D) ಇದರ ಗುಣಾಕಾರವು 5 ಕ್ಕಿಂತ ಹೆಚ್ಚು ಇದ್ದಲ್ಲಿ ಅದರ ಡ್ರಿಲ್ಲಿಂಗ್ ನಿರಂತರವಾಗಿ ಮಾಡದೇ, ಅದನ್ನು ಹಂತ ಹಂತವಾಗಿ (ಪೆಕ್) ಮಾಡಲಾಗುತ್ತದೆ. ಇದರಿಂದಾಗಿ ಬರ್ ತೆಗೆಯುವುದು ಸುಲಭವಾಗುತ್ತದೆ. ಈ ಪ್ರಕ್ರಿಯೆಗೆ ಬಳಸಲಾಗುವ ಪ್ರೊಗ್ರಾಮ್ ನ ವಿವರಗಳನ್ನು ಈ ಮುಂದೆ ನೀಡಲಾಗಿದೆ.
G74 ಪೇಕ್ ಡ್ರಿಲ್ಲಿಂಗ್ ಸೈಕಲ್
G74 ಈ ಸೈಕಲ್ ಫಿನಿಶಿಂಗ್ ಇಲ್ಲದಿರುವ ಕಾರ್ಯವಸ್ತುಗಳಿಗೆ ಮತ್ತು Z ಅಕ್ಷಕ್ಕೆ ಬಳಸಲಾಗುತ್ತದೆ. ಹಾಗೆಯೇ ಮಶಿನಿಂಗ್ ಸೆಂಟರ್ ನಲ್ಲಿ ಬಳಸಲಾಗುವ G73 ರಂತೆಯೇ ಈ ಸೈಕಲ್ ಇರುತ್ತದೆ. ಲೇಥ್ ನ ಕೆಲಸಕ್ಕೋಸ್ಕರ ಈ ಸೈಕಲ್ ಉಪಯುಕ್ತವಾಗಿದ್ದು ಅದು ಇಂಟರಪ್ಟೆಡ್ ಕಟ್, ಟರ್ನಿಂಗ್, ಬೋರಿಂಗ್ ಡೀಪ್ ಫೇಸ್ ಗ್ರೂವಿಂಗ್, ಪಾರ್ಟ್ ಆಫ್ ಮಶಿನಿಂಗ್ ಮತ್ತು ಅದರಂತಿರುವ ಇನ್ನಿತರ ಅಪ್ಲಿಕೇಶನ್ ಗೋಸ್ಕರ ಸಹಜವಾಗಿ ಬಳಸಬಹುದಾಗಿದೆ.
G74 ಸೈಕಲ್ ಫಾರ್ಮೆಟ್ ಫಾನುಕ್ 10T/11T/15T
G74 X (U)... Z (W)... I... K... D... F... S...
X (U) : ತುಂಡು ಮಾಡುವಂತಹ ಗ್ರೂವ್ ನ ವ್ಯಾಸದ ಕೊನೆಯ ಮೌಲ್ಯ (ವ್ಯಾಲ್ಯೂ)
Z (W) : ರಂಧ್ರದ ಆಳ/ ಕೊನೆಯ ಪೆಕ್ ನ Z ಪೊಸಿಶನ್
I : ಪ್ರತಿಯೊಂದು ತುಂಡಿನ ಆಳ (+/- 0)
K : ಪ್ರತಿಯೊಂದು ತುಂಡಿನ ದೂರ (+/- 0)
D : ತುಂಡಿನ ಕೊನೆಯಲ್ಲಿ ಇಟ್ಟಿರುವ ರಿಲೀಫ್ ನ ಮೌಲ್ಯ (ಫೇಸ್ ಗ್ರೂವಿಂಗ್ ಗೋಸ್ಕರ ಸೊನ್ನೆ)
F : ಗ್ರೂವ್ ಕಟಿಂಗ್ ಫೀಡ್ ರೇಟ್ (ಇಂಚು/ಸುತ್ತು, ಮಿ.ಮೀ./ಸುತ್ತು)
S : ಸ್ಪಿಂಡಲ್ ವೇಗ (ಅಡಿ/ನಿಮಿಷ ಅಥವಾ ಮೀಟರ್/ನಿಮಿಷ)
G74 ಸೈಕಲ್ ಫಾರ್ಮೆಟ್ ಫಾನುಕ್ 0T/16T/18T/20T/21T
ಎರಡು ಬ್ಲಾಕ್ ಪ್ರೊಗ್ರಾಮಿಂಗ್ ಫಾರ್ಮೆಟ್
G74 R…
G74 X (U)... Z (W)... P... Q... R... F... S...
R : ಪ್ರತಿಯೊಂದು ತುಂಡಿನ ಕ್ಲಿಯರನ್ಸ್
X (U) : ಗ್ರೂವ್ ವ್ಯಾಸ ಕೊನೆಯ ತುಂಡು
Z (W) : ರಂಧ್ರದ ಆಳ/ಕೊನೆಯ ಪೆಕ್ ನ Z ಪೋಜಿಶನ್
P : ಪ್ರತಿಯೊಂದು ತುಂಡಿನ ಆಳ
Q : ಪ್ರತಿಯೊಂದು ಪೆಕ್ ನ ದೂರ
R : ತುಂಡಿನ ಕೊನೆಯಲ್ಲಿ ಇಟ್ಟಿರುವ ರಿಲೀಫ್ ನ ಮೌಲ್ಯ (ಫೇಸ್ ಗ್ರೂವಿಂಗ್ ಗೋಸ್ಕರ ಸೊನ್ನೆ)
F : ಗ್ರೂವ್ ಕಟಿಂಗ್ ಫೀಡ್ ರೇಟ್ (ಇಂಚು/ಸುತ್ತು, ಮಿ.ಮೀ./ಸುತ್ತು
S : ಸ್ಪಿಂಡಲ್ ವೇಗ (ಅಡಿ/ನಿಮಿಷ ಅಥವಾ ಮೀಟರ್/ನಿಮಿಷ)
ಮೇಲಿನ ಫಾರ್ಮೆಟ್ ನಿಂದ ಒಂದು ವೇಳೆ X (U) ಮತ್ತು I (ಅಥವಾ P) ಬೇರ್ಪಡಿಸಿದಲ್ಲಿ, ಕೇವಲ Z ಅಕ್ಷದಲ್ಲಿ ಯಂತ್ರಣೆ (ಫ್ಯಾಕ್ ಡ್ರಿಲ್ಲಿಂಗ್) ಆಗಬದುದು. ಪೆಕ್ ಡ್ರಿಲ್ಲಿಂಗ್ ನಲ್ಲಿ Z, K ಮತ್ತು F ನ ಮೌಲ್ಯದ ಪ್ರೊಗ್ರಾಮ್ ಮಾಡಲಾಗುತ್ತದೆ. (ಚಿತ್ರ ಕ್ರ. 1)
G74 ಸ್ಕಿಮ್ಯಾಟಿಕ್ ಫಾರ್ಮೆಟ್
ಪ್ರೊಗ್ರಾಮ್ 03500 G74 ........................ಪೆಕ್ ಡ್ರಿಲ್ಲಿಂಗ್ ಸೈಕಲ್
N1 G20
N2 T0200
N3 G97 S1200 M03 .......................................................ವೇಗ
N4 G00 X 0 Z 0.2 T0202 M08 ................................ಪ್ರಾರಂಭ
N5 G74 Z-3.0 K0.5 F0.012 ...............................ಪೆಕ್ ಡ್ರಿಲ್ಲಿಂಗ್
N6 G00 X 6.0 Z2.0 T0200 .........................ಕ್ಲಿ ಯರ್ ಪೊಸಿಶನ್
N7 M30 ........................................................ಪ್ರೊಗ್ರಾಮ್ಎಂಡ್
%
ಒಟ್ಟು ಡ್ರಿಲ್ಲಿಂಗ್ (Z) 3 ಇಂಚು ಆಗಬಹುದು. ಪ್ರತಿಯೊಂದು ಆಳದಲ್ಲಿ (K) 0.5 ಇಂಚು ಪ್ರತಿಯೊಂದು ಬಾರಿ ಹೆಚ್ಚಳ ಆಗಬಹುದು. ಪ್ರಾರಂಭಿಸುವ ಮುಂಚೆ ಪಾಯಿಂಟ್ ನಿಂದ ಮೊದಲ ಪೆಕ್ ನ ಆಳವನ್ನು ತೆಗೆಯಲಾಗುತ್ತದೆ.
G 75 ಗ್ರೂವ್ ಕಟಿಂಗ್ ಸೈಕಲ್
• G75 ಸೈಕಲ್ X ಅಕ್ಷದಲ್ಲಿ ಕೆಲಸ ಮಾಡುತ್ತದೆ.
• ರಫ್, ನಿರ್ದೋಷಗಳಿಲ್ಲದಿರುವ ಕೆಲಸದಲ್ಲಿ ಉಪಯುಕ್ತ.
• G74 ಯೋಗ್ಯ ರೀತಿಯಲ್ಲಿ ಬಳಸಿದರೆ ತುಂಡಾಗಿರುವ ಕಟ್ ಅಥವಾ ಚಿಪ್ ಬ್ರೇಕಿಂಗ್ ಗೋಸ್ಕರ ಉಪಯೋಗವಾಗಬಹುದು.
G74 ನಲ್ಲಿ Z ಅಕ್ಷವು ಇತ್ತು, G75 ನಲ್ಲಿ X ಅಕ್ಷವು ಇರುತ್ತದೆ.
G75 ಸೈಕಲ್ ಫಾರ್ಮೆಟ್ ಫಾನುಕ್ 10T/11T/15T
ಸಿಂಗಲ್ ಬ್ಲಾಕ್
G75 X (U)... Z (W)... I... K... D... F... S...
X (U) : ತುಂಡು ಮಾಡಲಾಗುವ ಗ್ರೂವ್ ನ ಕೊನೆಯ ವ್ಯಾಸ
Z (W) : ಕೊನೆಯ ಗ್ರೂವ್ ನ Z ಪೋಜಿಶನ್
(ಅನೇಕ ಗ್ರೂವ್ ಗಳಿದ್ದಲ್ಲಿ ಅನ್ವಯಿಸುತ್ತದೆ)
I : ಪ್ರತಿಯೊಂದು ತುಂಡಿನ ಆಳ
K : ಗ್ರೂವ್ ನಲ್ಲಿರುವ ದೂರ
D : ತುಂಡಿನ ಕೊನೆಯಲ್ಲಿ ಇಟ್ಟಿರುವ ರಿಲೀಫ್ ನ ಮೌಲ್ಯ
F : ಗ್ರೂವ್ ಕಟಿಂಗ್ ಫೀಡ್ ರೇಟ್ (ಇಂಚು/ಸುತ್ತು, ಮೀಟರ್/ ನಿಮಿಷ)
S : ಸ್ಪಿಂಡಲ್ ವೇಗ(ಅಡಿ/ನಿಮಿಷ, ಮೀಟರ್/ನಿಮಿಷ)
G75 ಸೈಕಲ್ ಫಾರ್ಮೆಟ್ ಫಾನುಕ್ 0T/ 16T/ 18T/ 20T/
ಎರಡು ಬ್ಲಾಕ್ ಫಾರ್ಮೆಟ್
G75 R
G75 X (U)... Z (W)... P... Q... R... F... S...
ಮೊದಲ ಬ್ಲಾಕ್
R : ಪ್ರತಿಯೊಂದು ತುಂಡಿಗೋಸ್ಕರ ಕ್ಲಿಯರನ್ಸ್
ಎರಡನೇ ಬ್ಲಾಕ್
X (U) : ಗ್ರೂವ್ ತುಂಡು ಮಾಡುವ ಕೊನೆಯ ವ್ಯಾಸ
Z (W) : ಕೊನೆಯ ಗ್ರೂವ್ ನ Z ಪೊಸಿಶನ್
P : ಪ್ರತಿಯೊಂದು ತುಂಡಿನ ಆಳ
Q : ಗ್ರೂವ್ ನಲ್ಲಿರುವ ದೂರ
R : ತುಂಡಿನ ಕೊನೆಯಲ್ಲಿ ಇಟ್ಟಿರುವ ರಿಲೀಫ್ ನ ಮೌಲ್ಯ
(ಫೇಸ್ ಗ್ರೂವಿಂಗ್ ಗೆ R = 0)
F : ಗ್ರೂವ್ ಕಟಿಂಗ್ ಫೀಡ್ ರೇಟ್ (ಇಂಚು/ಸುತ್ತು, ಮಿ.ಮೀ./ ನಿಮಿಷ)
S : ಸ್ಪಿಂಡಲ್ ವೇಗ (ಅಡಿ/ನಿಮಿಷ ಅಥವಾಮೀಟರ್/ನಿಮಿಷ)
G74 ಮತ್ತು G75 ಸೈಕಲ್ ಬಳಸಲು ಮೂಲಭೂತವಾದ ನಿಯಮಗಳು
1. ಎರಡೂ ಸೈಕಲ್ ನಲ್ಲಿ X ಮತ್ತು Z ನ ಮೌಲ್ಯ ಎಬ್ ಸ್ಲ್ಯೂಟ್ ಅಥವಾ ಇನ್ಕ್ರಿಮೆಂಟಲ್ ಮೋಡ್ ನಲ್ಲಿ ಪ್ರೊಗ್ರಾಮ್ ಮಾಡಬಹುದು.
2. ಎರಡೂ ಸೈಕಲ್ ನಲ್ಲಿ ಸ್ವಯಂಚಾಲಿತ ರಿಲೀಫ್ ಇರುತ್ತದೆ.
3. ತುಂಡಿನ ಕೊನೆಯಲ್ಲಿ ರಿಲೀಫ್ ಮೌಲ್ಯ ಬೇರ್ಪಡಿಸುವುದು ಸಾಧ್ಯ.
4. ರಿಟರ್ನ್ ಮೌಲ್ಯವು ಕೇವಲ ಎರಡು ಬ್ಲಾಕ್ ಪದ್ಧತಿಯಲ್ಲಿ ಪ್ರೊಗ್ರಾಮ್ ಮಾಡಬಹುದಾಗಿದೆ. ಅಥವಾ ಕಂಟ್ರೋಲ್ ಸಿಸ್ಟಮ್ ನಲ್ಲಿ ಇಂಟರ್ನಲ್ ಪ್ಯಾರಾಮೀಟರ್ ನಿಂದಲೂ ಸೆಟ್ ಮಾಡಬಹುದಾಗಿದೆ.
5. ಒಂದು ವೇಳೆ ಬ್ಲಾಕ್ ನ ರೀತಿಯಲ್ಲಿ ರಿಟರ್ನ್ ಮೌಲ್ಯ ಪ್ರೊಗ್ರಾಮ್ ಮಾಡಿದಲ್ಲಿ ಮತ್ತು ಅದರೊಂದಿಗೆ ರಿಲೀಫ್ ಮೌಲ್ಯವೂ ಪ್ರೊಗ್ರಾಮ್ ಮಾಡಿದಲ್ಲಿ X ನ ಇರುವಿಕೆ ಅದರ ಅರ್ಥವನ್ನು ನಿರ್ಧರಿಸುತ್ತದೆ. ಒಂದು ವೇಳೆ X ಪ್ರೊಗ್ರಾಮ್ ಮಾಡಿದಲ್ಲಿ R ಇದರ ಅರ್ಥ ರಿಲೀಫ್ ಮೌಲ್ಯವಾಗುತ್ತದೆ.
G75 ಉದಾಹರಣೆ ಸಿಂಗಲ್ ಗ್ರೂವ್
ಪ್ರೊಗ್ರಾಮ್ 03005 G75 ಸಿಂಗಲ್ ಗ್ರೂವ್ (ಚಿತ್ರ ಕ್ರ. 2)
G20
.....
N43 G50 S 1250 T0300M42
N44 G96 S 375 M03
N45 G00 X 1.05 Z-0.175 T0303 M08
N46 G75 X 0.5 I 0.055 F0.004
N47 G00 X 6.0 Z2.0 T0300 M09
N48 M30
%
I ನ ಮೌಲ್ಯ ತೆಗೆಯುವ ಗಣಿತ
ಟೂಲ್ ಟ್ರೆವಲ್ Ø1.050 ರಿಂದ Ø1.500ಅಂದರೆ 0.275 ಪ್ರತಿ ಬದಿ. (1.05 – 0.5)/ 2=0.275.
ಅಂದರೆ ಐದು ಗ್ರೂವಿಂಗ್ ಪೆಕ್ ಇರುತ್ತವೆ. 0.055 ಪ್ರತಿ ಪೆಕ್.
(0.275/5 = 0.055)
G75 ಬಳಸಿ ಮಲ್ಟಿಪಲ್ ಗ್ರೂವ್
ಪ್ರೊಗ್ರಾಮ್ (ಮಲ್ಟಿಪಲ್ ಗ್ರೂವ್)
G20
…..
N12 G50 S1000 T0300M42
N13 G96 S375 M03
N14 G00 X 1.05 Z - 0.175 T0303 M08
N15 G75 X 0.5 Z - 0.675 I 0.055 K 0.125 F 0.004
N16 G00 X 6.0 Z 2.0 T0300 M09
N17 M30
%
ಪ್ರಮುಖವಾದ ಅಂಶಗಳು
1. ಗ್ರೂವ್ ನಲ್ಲಿರುವ ದೂರ ಸಮಾನವಾಗಿರಬೇಕು.
2. ಗ್ರೂವ್ ನಲ್ಲಿರುವ ದೂರ K ರಿಂದ ತೋರಿಸುತ್ತಾರೆ.
3. K ಒಂದು ವೇಳೆ ಇನ್ಸರ್ಟ್ ನ ಅಗಲಕ್ಕಿಂತ ಹೆಚ್ಚು ಇದ್ದಲ್ಲಿ, ಎಷ್ಟೋ ಸ್ವತಂತ್ರವಾದ ಗ್ರೂವ್ ಗಳು ತುಂಡು ಮಾಡಲ್ಪಡಬಹುದು.
4. ಒಂದು ವೇಳೆ K ಇನ್ಸರ್ಟ್ ಅಗಲದಷ್ಟೇ ಅಥವಾ ಕಡಿಮೆ ಇದ್ದಲ್ಲಿ ಒಂದೇ ಅಗಲದ ಗ್ರೂವ್ ತುಂಡು
ಮಾಡಲಾಗುತ್ತದೆ.
< div="" style="float: left; margin: -25px 20px 20px 0px;">
ಸತೀಶ ಜೋಶಿ
ಲೇಖಕರು ಮತ್ತು ಸಲಹೆಗಾರರು
8625975219
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.