ಡ್ರಿಲ್ ನಲ್ಲಿರುವ ಜಾಮೇಟ್ರಿಯ ಸುಧಾರಣೆಗಳು

@@NEWS_SUBHEADLINE_BLOCK@@

Udyam Prakashan Kannad    30-Apr-2020   
Total Views |
 
ಯಂತ್ರಣೆಯ ಉದ್ಯಮದಲ್ಲಿ ಡ್ರಿಲ್ಲಿಂಗ್ ಇದು ಎಲ್ಲಕ್ಕಿಂತಲೂ ಹೆಚ್ಚು ಬಳಸಲಾಗುವ ಯಂತ್ರಣೆಯ ವಿಧವಾಗಿದೆ. ಒಂದೇ ವಾಹನದಲ್ಲಿ ಸಾಮಾನ್ಯವಾಗಿ 5000 ರಂಧ್ರಗಳಿಂತಿರುವ ಆಕಾರಗಳಿರುತ್ತವೆ. ಈ ಎಲ್ಲ ರಂಧ್ರಗಳನ್ನು ಡ್ರಿಲ್ಲಿಂಗ್ ನಿಂದಲೇ ಮಾಡಲಾರದಿದ್ದರೂ ಅದರಲ್ಲಿ ಸುಮಾರು 40% ರಂಧ್ರಗಳನ್ನು ಡ್ರಿಲ್ಲಿಂಗ್ ಮಾಡಿಯೇ ತಯಾರಿಸಲಾಗಿರುತ್ತವೆ.
ಡ್ರಿಲ್ಲಿಂಗ್ ಇದನ್ನು ಯಂತ್ರಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದರೂ ಕೂಡಾ ಈ ಯಂತ್ರಣೆಯನ್ನು ರಂಧ್ರಗಳ ಒಳಗೆ ಮಾಡಲಾಗುವುದರಿಂದ ಟೂಲ್ ನ ಕಟಿಂಗ್ ಎಡ್ಜ್ ನಲ್ಲಿ ಏನೇನು ಕೆಲಸ ನಡೆಯುತ್ತದೆ ಎಂಬುದು ಆಪರೇಟರ್ ಗೆ ಕಾಣುವುದಿಲ್ಲ. ಇದರಿಂದಾಗಿ ಡ್ರಿಲ್ಲಿಂಗ್ ಇದು ಹೆಚ್ಚು ಮುತುವರ್ಜಿ ವಹಿಸಿ ಮಾಡಬೇಕಾಗಿರುವ ಯಂತ್ರಣೆಯಾಗಿದೆ. ಲೇಥ್, ಮಿಲ್ಲಿಂಗ್ ಮಶಿನ್ ಅಥವಾ ಡ್ರಿಲ್ಲಿಂಗ್ ಮಶಿನ್ ಇಂತಹ ಯಾವುದೇ ಮಶಿನ್ ನಲ್ಲಿ ಈ ಕೆಲಸವನ್ನು ಮಾಡುವುದು ಸಾಧ್ಯವಾಗಿದೆ.
ಡ್ರಿಲ್ ನ ತುದಿಯಲ್ಲಿ ಕಟಿಂಗ್ ಎಡ್ಜ್ ಇರುತ್ತದೆ. ಆದರೆ ಯಂತ್ರಣೆಯನ್ನು ಮಾಡುವಾಗ ಉಂಟಾಗುವ ಚಿಪ್ ಒಯ್ಯಲು ಉದ್ದಕ್ಕೆ ಫ್ಲ್ಯೂಟ್ ಗಳಿರುತ್ತವೆ. ಅನೇಕ ಯಂತ್ರಣೆಯ ಪ್ರಕಾರಗಳು, ಮಟೀರಿಯಲ್ ಮತ್ತು ಅಪ್ಲಿಕೇಶನ್ ನಂತೆಯೇ ಡ್ರಿಲ್ ನ ಪ್ರಕಾರದಲ್ಲಿ ಬದಲಾವಣೆಗಳಾಗುತ್ತಿರುತ್ತವೆ.
 
ರಂಧ್ರಗಳ ವಿಧಗಳು
ಕೋಷ್ಟಕ ಕ್ರ. 1 ರಲ್ಲಿ ತೋರಿಸಿದಂತೆ ಯಾವಾಗಲೂ ಮಾಡಬೇಕಾಗಿರುವ ರಂಧ್ರಗಳ ಜಾಮೆಟ್ರಿಗೆ ಬೇರೆಬೇರೆ ವಿಧಗಳನ್ನು ತೋರಿಸಲಾಗಿದೆ. ಈ ರಂಧ್ರಗಳ ಯಂತ್ರಣೆಯು ಲಾಭಕಾರಿಯಾಗಲು ಮತ್ತು ಕಡಿಮೆ ಖರ್ಚಿನಲ್ಲಿ ಮಾಡಲು ಯಾವ ವಿಧದ ಯಂತ್ರಣೆಯ ರೀತಿಯನ್ನು ಬಳಸಬೇಕಾಗುತ್ತದೆ, ಎಂಬ ಅಂಶವನ್ನು ತಿಳಿದುಕೊಳ್ಳುವುದು ತುಂಬಾ ಮಹತ್ವದ್ದಾಗಿರುತ್ತದೆ ಮತ್ತು ಆ ಪ್ರಕ್ರಿಯೆಗೆ ಯೋಗ್ಯವಾದ ಟೂಲ್ ಗಳ ಆಯ್ಕೆಯನ್ನು ಮಾಡುವುದೂ ಅತ್ಯಾವಶ್ಯಕವಾಗಿದೆ.
 

1_1  H x W: 0 x 
 
ಡ್ರಿಲ್ ನ ವಿಧಗಳು
ವಿವಿಧ ವ್ಯಾಸಗಳಿಗೆ ಬೇರೆಬೇರೆ ರೀತಿಯ ಡ್ರಿಲ್ ಗಳನ್ನು ಬಳಸಲಾಗುತ್ತದೆ. ಡ್ರಿಲ್ ಗೆ ಅದರ ಮಟೀರಿಯಲ್ ಗೆ ಅನುಸಾರವಾಗಿ ಪ್ರಮುಖವಾದ ಮೂರು ವಿಧಗಳಿವೆ. ಹೈ ಸ್ಪೀಡ್ ಡ್ರಿಲ್, ಸ್ವಾಲಿಡ್ ಕಾರ್ಬೈಡ್ ಡ್ರಿಲ್ ಮತ್ತು ಇಂಡೆಕ್ಸೆಬಲ್ ಡ್ರಿಲ್. ಇತ್ತಿಚೇಗೆ ಮಾರುಕಟ್ಟೆಯಲ್ಲಿರುವ ಹೆಚ್ಚಿನ ಸಂಖ್ಯೆಯಲ್ಲಿರುವ ಡ್ರಿಲ್ ಗಳಿಗೆ ಫಿಸಿಕಲಿ ವೆಪರ್ ಡಿಪಾಸಿಶನ್ (ಪಿ.ವಿ.ಡಿ.) ವಿಧದ ಲೇಪನ (ಕೋಟಿಂಗ್) ಮಾಡಲಾಗಿರುತ್ತದೆ. ಪಿ.ವಿ.ಡಿ. ಲೇಪನದಿಂದಾಗಿ ಡ್ರಿಲ್ ಮತ್ತು ಕಾರ್ಯವಸ್ತುವಿನಲ್ಲಿ ಘರ್ಷಣೆಯಿಂದಾಗಿ ತಯಾರಾಗುವ ಉಷ್ಣಾಂಶದಿಂದ ಉಂಟಾಗುವ ವೆಲ್ಡಿಂಗ್ ತಡೆಯಲಾಗುತ್ತದೆ ಮತ್ತು ಒಟ್ಟಾರೆ ಟೂಲ್ ನ ಸವೆತವು ಪ್ರತೀಕಾರ ಶಕ್ತಿಯನ್ನು ಸುಧಾರಿಸುತ್ತದೆ.
 
ಡ್ರಿಲ್ ನ ವಿಭಜನೆ
ಡ್ರಿಲ್ ಗಳನ್ನು ಆರು ವಿಧದಲ್ಲಿ ವಿಭಜನೆ ಮಾಡಲಾಗುತ್ತದೆ. ಡ್ರಿಲ್ ನ ಜಾಮೆಟ್ರಿಒಂದೇರೀತಿಇದ್ದರೂಕೂಡಾ ಬೇರೆಬೇರೆದೃಷ್ಟಿಯಲ್ಲಿ ಪರಿಶೀಲಿಸಿದಾಗ ಅದರ ವಿಭಜನೆಯು ವಿವಿಧ ರೀತಿಯಲ್ಲಾಗುತ್ತದೆ.
 

2_1  H x W: 0 x 
 
• ರಚನೆ: ಸ್ವಾಲಿಡ್ ಕಾರ್ಬೈಡ್, ಬ್ರೆಜ್ಡ್ ಮತ್ತು ಇಂಡೆಕ್ಸೆಬಲ್. ಡ್ರಿಲ್ಲಿಂಗ್ ನ ಪ್ರಕ್ರಿಯೆ ನಿರ್ಧರಿಸುವಾಗ ಡ್ರಿಲ್ ನ ಯಾವ ರಚನೆಯನ್ನು ಬಳಸಲಾಗುತ್ತದೆ, ಎಂಬುದಕ್ಕೆ ತುಂಬಾ ಮಹತ್ವವಿರುತ್ತದೆ. ರಂಧ್ರಗಳ ನಿಖರತೆ ಮತ್ತು ಪ್ರತಿಯೊಂದು ರಂಧ್ರಕ್ಕೆ ತಗಲುವ ಖರ್ಚುಇಂತಹ ಅಂಶಗಳು ಡ್ರಿಲ್ ನ ರಚನೆಯೊಂದಿಗೆ ಸಂಬಂಧಪಟ್ಟಿರುತ್ತವೆ. ಎಚ್.ಎಸ್.ಎಸ್. ಮತ್ತು ಸ್ವಾಲಿಡ್ ಕಾರ್ಬೈಡ್ ಡ್ರಿಲ್ ಲೇಪನದೊಂದಿಗೆ (ವಿಥ್ ಕೋಟಿಂಗ್) ಅಥವಾ ಲೇಪನದ ಹೊರತಾಗಿ (ವಿದೌಟ್ ಕೋಟಿಂಗ್) ಉಪಲಬ್ಧವಿರುತ್ತವೆ. (ಚಿತ್ರ ಕ್ರ. 1).
• ಉದ್ದ/ ವ್ಯಾಸದ ಗುಣಾಕಾರ: ಸ್ಟಬ್ (L/D=2 ರಿಂದ 3), ಯಾವಾಗಲೂ (L/D= 4 ರಿಂದ 5), ಉದ್ದದ ಡ್ರಿಲ್ (L/D = 5 ಕ್ಕಿಂತ ಹೆಚ್ಚು), ತುಂಬಾ ಉದ್ದದ ಡ್ರಿಲ್ (L/D = 10 ಕ್ಕಿಂತ ಜಾಸ್ತಿ). ಡ್ರಿಲ್ ನ ಎಲ್ಲ ಕೆಟ್ಯಾಲ್ಯಾಗ್ ನಲ್ಲಿ ಆಯಾ ಡ್ರಿಲ್ ಗೆ ಅನುರೂಪವಾದ L/D ಗುಣಾಕಾರದ ಸಂಖ್ಯೆಯನ್ನು ನೀಡಲಾಗಿರುತ್ತದೆ. ಇದರೊಂದಿಗೆ ಎಷ್ಟುಆಳದ ತನಕ ಈ ಡ್ರಿಲ್ ಬಳಸಬೇಕು, ಎಂಬುದನ್ನೂತಿಳಿಸಲಾಗಿದೆ. ಯಾವಾಗಲೂ ಕಡಿಮೆ ಉದ್ದದ ಡ್ರಿಲ್ ಬಳಸಬೇಕು, ಕಾರಣ ಡ್ರಿಲ್ ನ ಉದ್ದ ಹೆಚ್ಚಿದ ನಂತರ ಅದರ ದೃಢತೆಯಲ್ಲಿ (ರಿಜಿಡಿಟಿ) ಪರಿಣಾಮವಾಗಿ ರಂಧ್ರಗಳ ನಿಖರತೆಯಲ್ಲಿ ಮತ್ತು ಅದರೊಂದಿಗೆ ಯಂತ್ರಣೆಯ ಕಾರ್ಯಸಾಮರ್ಥ್ಯದಲ್ಲಿ ಪರಿಣಾಮವುಂಟಾಗುತ್ತದೆ. (ಚಿತ್ರ ಕ್ರ. 2)
 
 
3 4 _2  H x W:
3 4 _1  H x W:  
 
• ಶ್ಯಾಂಕ್ ನ ವಿಧಗಳು (ಚಿತ್ರ ಕ್ರ. 4)
• ಡ್ರಿಲ್ ಹೆಲಿಕ್ಸ್ ಕೋನದ ವಿಧಗಳು (ಚಿತ್ರ ಕ್ರ. 5)
 

5 6_2  H x W: 0 

5 6_1  H x W: 0 
 
ಡ್ರಿಲ್ಲಿಂಗ್ ಫೋರ್ಸ್:
ಡ್ರಿಲ್ ಬಳಸಿ ರಂಧ್ರಗಳ ಯಂತ್ರಣೆಯನ್ನು ಮಾಡುತ್ತಿರುವಾಗ ಕಟಿಂಗ್ ಫೋರ್ಸ್ ತಯಾರಾಗುತ್ತದೆ. ಡ್ರಿಲ್ ನಲ್ಲಿ ಕೆಲಸ ನಿರ್ವಹಿಸುವ ಫೋರ್ಸ್ ಚಿತ್ರ ಕ್ರ. 6 ರಲ್ಲಿ ತೋರಿಸಲಾಗಿದೆ.
 

7 8_2  H x W: 0 
 
1. ಟಾರ್ಕ್: ಡ್ರಿಲ್ ತಿರುಗುವ ವಿರುದ್ಧ ದಿಕ್ಕಿನಲ್ಲಿ ಟಾರ್ಕ್ ನ ಶಕ್ತಿಯು ಕೆಲಸ ಮಾಡುತ್ತದೆ.
2. ಥ್ರಸ್ಟ್: ಥ್ರಸ್ಟ್ಇದು ಡ್ರಿಲ್ ಮುಂದೆ ಸರಿಯುವ ವಿರುದ್ಧ ದಿಕ್ಕಿನಲ್ಲಿರುತ್ತದೆ.
ಉಚ್ಚ ಕಾರ್ಯಸಾಮರ್ಥ್ಯವಿರುವ ಡ್ರಿಲ್ಲಿಂಗ್ ಅಥವಾ ದೊಡ್ಡ ವ್ಯಾಸದ ಡ್ರಿಲ್ಲಿಂಗ್ ಮಶಿನಿಂಗ್ ಸೆಂಟರ್ ನಲ್ಲಿ ಮಾಡಬೇಕಾಗುತ್ತದೆ. ಆಗ ಮಶಿನ್ ನ ಸ್ಪಿಂಡಲ್ ಮೋಟರ್ ನ ರೇಟಿಂಗ್ ಪರಿಶೀಲಿಸಿ ನೋಡುವುದೂ ಅತ್ಯಾವಶ್ಯಕವಾಗಿದೆ. ಒಂದು ವೇಳೆ ಕಡಿಮೆ ಶಕ್ತಿಯ ಮಶಿನಿಂಗ್ ಸೆಂಟರ್ ನಲ್ಲಿ ಕೆಲಸ ಪ್ರಾರಂಭಿಸಿದಲ್ಲಿ ಯಂತ್ರಣೆಯಾಗುವುದಿಲ್ಲ ಮತ್ತು ಡ್ರಿಲ್ ತುಂಡಾಗುವ ಸಾಧ್ಯತೆ ಇರುತ್ತದೆ.
ಟಾರ್ಕ್ ಮತ್ತು ಥ್ರಸ್ಟ್, ಡ್ರಿಲ್ ನ ವ್ಯಾಸ ಮತ್ತು ಫೀಡ್ ರೇಟ್ ಗೆ ಅನುಸಾರವಾಗಿ ಬದಲಾಗುತ್ತವೆ. ಉದಾಹರಣೆ, 10 ಮಿ.ಮೀ. ವ್ಯಾಸದ ಡ್ರಿಲ್ ಮತ್ತು ಅದರ ಫೀಡ್ ರೇಟ್ 0.3 ಮಿ.ಮೀ./ ಸುತ್ತು ಇದ್ದಲ್ಲಿ ಟಾರ್ಕ್ 15 Nm ಇರಬಹುದು ಮತ್ತು ಥ್ರಸ್ಟ್ 2500 N (250 ಕಿ.ಗ್ರಾಂ.) ಇರಬಹುದು. ಇದರೊಂದಿಗೆ ಟಾರ್ಕ್ ಮತ್ತು ಥ್ರಸ್ಟ್ ನಲ್ಲಿ ಸ್ಪಿಂಡಲ್ ನ ವೇಗದ ಬದಲಾವಣೆಯ (ಆರ್.ಪಿ.ಎಮ್) ಪರಿಣಾವು ಉಂಟಾಗುವುದಿಲ್ಲ.
ಅನೇಕ ಉದ್ಯಮಗಳಲ್ಲಿ ಬಳಸಲಾಗುವ ಡ್ರಿಲ್ ಯಾವಾಗಲೂ ಉಪಯೋಗಿಸುವ ವಿವಿಧ ಮಟೀರಿಯಲ್ ಗಳ ಯಂತ್ರಣೆಯನ್ನು ಮಾಡಲಾಗುವುದರಿಂದ ಅದು ಉಚ್ಚ ಯಂತ್ರಣೆಯ ಪ್ಯಾರಾಮೀಟರ್ ಗಳಲ್ಲಿ ಕೆಲಸ ಮಾಡಲು ಯೋಗ್ಯ ಮತ್ತು ಹೆಚ್ಚು ಬಾಳಿಕೆ ಇರುವುದು ಅತ್ಯಾವಶ್ಯಕವಾಗಿದೆ. ಮಿತ್ಸುಬಿಶಿ ಇವರು ಉಪಲಬ್ಧಮಾಡಿರುವ ಹೊಸ MVS ಡ್ರಿಲ್ ಈ ಬೇಡಿಕೆಗಳನ್ನು ಗಮನಿಸಿ ತಯಾರಿಸಲಾಗಿದೆ. MVS ಶ್ರೇಣಿಯಲ್ಲಿರುವ ಡ್ರಿಲ್ ಗಳು ಪ್ರಮುಖವಾಗಿ L/D ಗುಣಾಕಾರ 1.5 ರಿಂದ 40 ಇರುವ ಎಲ್ಲ ಲೋಹಗಳ ಯಂತ್ರಣೆಗೆ ಉಪಯುಕ್ತವಾಗಿದೆ. ಇದರ ಕೆಲವು ವೈಶಿಷ್ಟ್ಯಗಳ ಉದಾಹರಣೆಗಳನ್ನು ಈ ಮುಂದೆ ನೀಡಲಾಗಿದೆ.
 

7 8_1  H x W: 0 
 
MVE/MVS ಶ್ರೇಣಿಯ ವೈಶಿಷ್ಟ್ಯಗಳು
• ಹೊಸ ಸ್ವಾಲಿಡ್ ಕಾರ್ಬೈಡ್ ಡ್ರಿಲ್
ಹೊಸ TRI ಕೂಲಿಂಗ್ ತಂತ್ರಜ್ಞಾನ ಮತ್ತುಪಿ.ವಿ.ಡಿ. ಲೇಪನದಿಂದಾಗಿ ವಿವಿಧ ರೀತಿಯ ಬೇಡಿಕೆಗಳಿಗೋಸ್ಕರ ಟೂಲ್ ಗಳ ಬಾಳಿಕೆಯು ಹೆಚ್ಚಾಗುತ್ತದೆ.
 
ಕಟಿಂಗ್ ಎಡ್ಜ್ ಗಳ ಜಾಮೆಟ್ರಿಯಲ್ಲಿರುವ ವೈಶಿಷ್ಟ್ಯಗಳು
ಮಿತ್ಸುಬಿಶಿ ಮತ್ತು ಇನ್ನಿತರ ಸಾಂಪ್ರದಾಯಿಕ ಟೂಲ್ ಗಳಲ್ಲಿರುವ ಹೋಲಿಕೆಯನ್ನು ತೋರಿಸುವ ಉದಾಹರಣೆಗಳು.
 
ಉದಾಹರಣೆ 1
ವಾಹನ ಉದ್ಯಮಕ್ಕೋಸ್ಕರ ತಯಾರಿಸಲಾಗುವ ಕ್ರ್ಯಾಂಕ್ ಶಾಫ್ಟ್ನಲ್ಲಿರುವ ಡೀಪ್ ಹೋಲ್ ಡ್ರಿಲಿಂಗ್ ಪ್ರಕ್ರಿಯೆಯ ಉದಾಹರಣೆಯನ್ನು ಈ ಮುಂದೆ ನೀಡಲಾಗಿದೆ.
 
9 10_1  H x W:

9 10_2  H x W:  
 
ಕ್ರ್ಯಾಂಕ್ ಶಾಫ್ಟ್ ನ ಮಟೀರಿಯಲ್ ಫೋರ್ಜ್ಡ್ ಸ್ಟೀಲ್ ಆಗಿದ್ದು ಅದರ ಹಾರ್ಡ್ನೆಸ್ 28 ರಿಂದ 30 HRC ಇರುತ್ತದೆ. ಹೆಚ್ಚಾಗಿ ಉತ್ಪಾದಿಸಲ್ಪಡುವ ಈ ಯಂತ್ರಭಾಗಗಳ ಯಂತ್ರಣೆಯ ಪ್ರಕ್ರಿಯೆಯಲ್ಲಿ ಸೈಕಲ್ ಟೈಮ್ ಕಡಿಮೆ ಮಾಡುವುದು ಮತ್ತು ಪ್ರತಿ ಯಂತ್ರಭಾಗಗಳ ಖರ್ಚು ಕಡಿಮೆ ಮಾಡುವುದು, ಇಂತಹ ಎರಡು ಬೇಡಿಕೆಗಳಿರುತ್ತವೆ. ಪ್ರಕ್ರಿಯೆಯ ಕುರಿತಾದ ಸಂಪೂರ್ಣ ಅಭ್ಯಾಸವನ್ನು ಮಾಡಿ ನಾವು ಅವರಿಗೆ MVS0700/ X20S070DP2010 ಈ ಡ್ರಿಲ್ ಸೂಚಿಸಲಾಯಿತು. ಈ ಡ್ರಿಲ್ ಬಳಸಿ ತಯಾರಿಸಿರುವ ಪ್ರಕ್ರಿಯೆಯನ್ನು ಹಳೆಯ ಪ್ರಕ್ರಿಯೆಯೊಂದಿಗೆ ಮಾಡಿರುವ ಹೋಲಿಕೆಯನ್ನು ಕೋಷ್ಟಕ 1 ರಲ್ಲಿ ತೋರಿಸಲಾಗಿದೆ.
 

nitin_2  H x W: 
 
ಉದಾಹರಣೆ 2
(MVS ವ್ಯಾಸವು 1 ರಿಂದ 2.9 ಮಿ.ಮೀ.) ಹೆಚ್ಚುಬಾಳಿಕೆಇರುವ ಡೀಪ್ ಹೋಲ್ ಡ್ರಿಲ್ಲಿಂಗ್ ಪ್ರಕ್ರಿಯೆಗೆ ಉಪಯುಕ್ತವಾದ ಡ್ರಿಲ್.
 

nitin_3  H x W: 
 
ಉದಾಹರಣೆ 3
ಕಡಿಮೆ ಸವೆತ, DP1020 ನಲ್ಲಿ ಉಚ್ಚಮಟ್ಟದ ಸವೆತ ಪ್ರತಿರೋಧಕ ಗುಣ ಇರುವುದರಿಂದ ರಿಗ್ರೈಂಡಿಂಗ್ ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯಬೇಕಾಗುತ್ತದೆ.
 
 
nitin_1  H x W:
ನಿತೀನ್ ಕ್ಷೀರಸಾಗರ್
ತಂಡ ನಾಯಕರು, ತಾಂತ್ರಿಕ ಸಹಾಯ ವಿಭಾಗ
MMC ಹಾರ್ಡ್ ಮೆಟಲ್ ಇಂಡಿಯಾ ಪ್ರೈ.ಲಿ. 
9371276736
ನಿತೀನ್ ಕ್ಷೀರಸಾಗರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. MMC ಹಾರ್ಡ್ ಮೆಟಲ್ ಇಂಡಿಯಾ ಪ್ರೈ.ಲಿ. ಎಂಬ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ತಂಡದ ಮುಖಂಡರಾಗಿದ್ದಾರೆ. ಅವರಿಗೆ ಕಟಿಂಗ್ ಟೂಲ್ ಗಳ ಸೇಲ್ಸ್ ಮತ್ತು ಅಪ್ಲಿಕೇಶನ್ ಕ್ಷೇತ್ರದಲ್ಲಿ 15 ವರ್ಷಗಳ ದೀರ್ಘ ಅನುಭವವಿದೆ.
 
 
@@AUTHORINFO_V1@@