ಸಿ.ಎನ್.ಸಿ. ಲೇಥ್ ಗಳ ಕೆಲಸಕ್ಕೋಸ್ಕರ ಅತ್ಯಂತ ಪ್ರಗತಿಪರ ಮತ್ತು ಎಲ್ಲ ಸೌಲಭ್ಯಗಳಿಂದ ಕೂಡಿರುವ ಸೈಕಲ್ ಗಳು ಉಪಲಬ್ಧವಿವೆ. ಇದರಿಂದ ಕೇವಲ ಸ್ಟ್ರೇಟ್ ಅಥವಾ ಟೇಪರ್ಡ್ ಕಟರ್ ಗಳೇ ಆಗುವುದಿಲ್ಲ, ಅಲ್ಲದೇ ರೇಡಿಯಸ್, ಚ್ಯಾಂಫರ್, ಗ್ರೂವ್, ಅಂಡರ್ ಕಟ್ ಈ ರೀತಿಯ ಎಲ್ಲ ಕೆಲಸಗಳನ್ನು ಸಹಜವಾಗಿ ಮಾಡಬಹುದಾಗಿದೆ. ಇದನ್ನು ಕೌಂಟರಿಂಗ್ ಗೋಸ್ಕರವೂ ಬಳಸಬಹುದು. ಟೂಲ್ ನೋಸ್ ರೇಡಿಯಸ್ ಆಫ್ ಸೆಟ್ಕೂಡಾ ಅಗತ್ಯವಿದ್ದಲ್ಲಿ ಬಳಸಬಹುದು.
ಮಲ್ಟಿಪಲ್ ರಿಪಿಟೇಟಿವ್ ಸೈಕಲ್ ಗೆ ಕಂಪ್ಯೂಟರ್ ಮೆಮರಿಯು ಬೇಕಾಗುತ್ತದೆ. ಇದರಿಂದಾಗಿ ಹಳೆಯ ಸಿ.ಎನ್.ಸಿ. ಮಶಿನ್ ನಲ್ಲಿ ಈ ಸೈಕಲ್ ಗಳನ್ನು ಬಳಸುವುದು ಸಾಧ್ಯವಿಲ್ಲ. ಸದ್ಯಕ್ಕೆ ಪ್ರಗತಿಪರ ಸಿ.ಎನ್.ಸಿ. ಕಂಟ್ರೋಲ್ ಈ ಕೆಳಗಿನ ಕ್ರಿಯೆಯನ್ನು ತುಂಬಾ ವೇಗದಿಂದ ಮತ್ತು ನಿರ್ದೋಷವಾಗಿ ಮಾಡುತ್ತದೆ.
•ಓದುವುದು
•ಹುಡುಕುವುದು
•ಪ್ರೊಸೆಸ್ ಮಾಡುವುದು
•ಇವೆಲ್ಯುವೇಟ್ ಮಾಡುವುದು
•ಫಾರ್ವರ್ಡ್ ಮತ್ತು ಬ್ಯಾಕ್ವರ್ಡ್ ಎರಡೂ ದಿಕ್ಕುಗಳಲ್ಲಿ ಕೆಲಸ ಮಾಡುವುದು ಸಾಧ್ಯ.
•ಗಣಿತದ ಅಂಕೆ-ಸಂಖ್ಯೆಗಳು, ಗಣಿತದ ಕಮಾಂಡ್ ಗಳನ್ನು ಉಚ್ಚಮಟ್ಟದಲ್ಲಿ ಪ್ರೊಸೆಸಿಂಗ್ ಮಾಡುವುದು ಸಾಧ್ಯವಿದೆ.
ಈ ಎಲ್ಲ ಪ್ರಕ್ರಿಯೆಗಳಿಂದಾಗಿ ಪ್ರೊಗ್ರಾಮ್ ಮಾಡುವುದು ತುಂಬಾ ಸುಲಭವಾಗುತ್ತದೆ.
ವಿವರಗಳು-ಟರ್ನಿಂಗ್ ಗ್ರೂಪ್ ನಲ್ಲಿ ಒಟ್ಟು ಏಳು ಮಲ್ಟಿಪಲ್ ರಿಪಿಟೇಟಿವ್ ಸೈಕಲ್ ಗಳು ಉಪಲಬ್ಧವಿವೆ.
ಪ್ರೊಫೈಲ್ ಕಟಿಂಗ್ ಸೈಕಲ್ : ಫಿನಿಶಿಂಗ್
ಮೇಲಿನ G73 ಮತ್ತು G76 ಸೈಕಲ್ ನಾವು ಈ ಹಿಂದೆಯೇ ತಿಳಿದುಕೊಂಡಿದ್ದೇವೆ.
ಸೈಕಲ್ ಫಾರ್ಮೆಟಿಂಗ್
ಮಲ್ಟಿಪಲ್ ರಿಪಿಟೆಟಿವ್ ಸೈಕಲ್ ಪ್ರೋಗ್ರಾಮಿಂಗ್ ಮಾಡಲು ಫಾನುಕ್ ಕಂಟ್ರೋಲ್ ಮಾಡೆಲ್ ನ ಎರಡು ವಿಧಗಳಿವೆ.
1. ಫಾನುಕ್ಸಿಸ್ಟಮ್ 0T, 16T, 18T, 20T, 21T (ಲೋವರ್ ಲೆವಲ್)
2. ಫಾನುಕ್ಸಿಸ್ಟಮ್ 10T, 11T, 15T (ಹೈಯರ್ ಲೆವಲ್)
G71 – ಸ್ಟಾಕ್ರಿಮೂವಲ್ ಟರ್ನಿಂಗ್ ಗೋಸ್ಕರ
•ಸಾಮಾನ್ಯವಾದ ರಫಿಂಗ್ ಸೈಕಲ್
•ಹಾರಿಝಾಂಟಲ್ ಕಟಿಂಗ್ ಮಾಡಿ ಸ್ಟಾಕ್ ತೆಗೆಯಲಾಗುತ್ತದೆ. (Z ಅಕ್ಷ)
•ಸ್ವಾಲಿಡ್ ಸಿಲಿಂಡರ್ ನಿಂದ.
•ಈ ಸೈಕಲ್ ಗಳು ಎರಡು ಫಾರ್ಮೇಟ್ ನಲ್ಲಿರುತ್ತವೆ.
1.ಸಿಂಗಲ್ ಬ್ಲಾಕ್ ಫಾರ್ಮೇಟ್
2.ಡಬಲ್ ಬ್ಲಾಕ್ ಫಾರ್ಮೇಟ್
G71 (ಸಿಂಗಲ್ ಬ್ಲಾಕ್)
10T/11T/15T ಸೈಕಲ್ ಫಾರ್ಮೆಟ್ ಗೋಸ್ಕರ
G71 P…Q…I..K..U..W..D..F..S
P: ಫಿನಿಶಿಂಗ್ ಪ್ರೊಫೈಲ್ ನ ಮೊದಲ ಬ್ಲಾಕ್ನ ನಂಬರ್
Q: ಫಿನಿಶಿಂಗ್ ಪ್ರೊಪೈಲ್ ನ ಕೊನೆಯ ಬ್ಲಾಕ್ನ ನಂಬರ್
I: ದಿಕ್ಕು ಮತ್ತು ದೂರ ರಫ್ ಫಿನಿಶಿಂಗ್ X ಅಕ್ಷ ಪ್ರತಿಯೊಂದು ಬದಿಯಲ್ಲಿ
K: ದಿಕ್ಕು ಮತ್ತು ದೂರ ರಫ್ ಫಿನಿಶಿಂಗ್ Z ಅಕ್ಷ
U: X ಅಕ್ಷ ವ್ಯಾಸದ ಫಿನಿಶಿಂಗ್ ಗೋಸ್ಕರದ ಸ್ಟಾಕ್ ಅಮೌಂಟ್
W: Z ಅಕ್ಷದ ಫಿನಿಶಿಂಗ್ ಗೋಸ್ಕರ ಉಳಿದಿರುವ ಸ್ಟಾಕ್
D: ರಫಿಂಗ್ ಕಟ್ ಡೆಪ್ಥ್
F: ಕಟಿಂಗ್ ಫೀಡ್ ರೇಟ್- ಇಂಚು/ರಿವೊ ಅಥವಾ ಮಿ.ಮೀ./ರಿವೊ. (P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಮಾಡುವ ವ್ಯವಸ್ಥೆ)
S: ಸ್ಪಿಂಡಲ್ ಸ್ಪೀಡ್- ಫೂಟ್/ನಿಮಿಷ ಅಥವಾ ಮೀಟರ್/ನಿಮಿಷ- (P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಮಾಡುವ ವ್ಯವಸ್ಥೆ)
G71 (ಡಬಲ್ ಬ್ಲಾಕ್)
0T/16T/18T/20T/21T ಸೈಕಲ್ ಫಾರ್ಮೆಟ್ ಗೋಸ್ಕರ
G71 U…R
G71 P…Q…U…W…F…S…
U: ರಫಿಂಗ್ ಕಟ್ನ ಡೆಪ್ಥ್
R: ಪ್ರತಿಯೊಂದು ಕಟ್ ಗೆ ಮತ್ತೆ ಹಿಂದೆ ಹೋಗುವ ವೆಲ್ಯೂ
ಎರಡನೇ ಬ್ಲಾಕ್
P: ಫಿನಿಶಿಂಗ್ ಪ್ರೊಫೈಲ್ ನ ಮೊದಲ ಬ್ಲಾಕ್ ನಂಬರ್
Q: ಫಿನಿಶಿಂಗ್ ಪ್ರೊಫೈಲ್ ನ ಕೊನೆಯ ಬ್ಲಾಕ್ ನಂಬರ್
U: X ಅಕ್ಷದ ವ್ಯಾಸಕ್ಕೆ ಫಿನಿಶಿಂಗ್ ಮಾಡಲು ಸ್ಟಾಕ್ ಅಮೌಂಟ್
W: Z ಅಕ್ಷದಲ್ಲಿ ಫಿನಿಶಿಂಗ್ ಗೋಸ್ಕರ ಉಳಿದಿರುವ ಸ್ಟಾಕ್
F: ಕಟಿಂಗ್ ಫೀಡ್ ರೇಟ್- ಇಂಚು/ರಿವೋ, ಮಿ.ಮೀ./ರಿವೋ. (P ಮತ್ತು Q ನಲ್ಲಿ ಓವರ್ ರೈಡ್ ನ ವ್ಯವಸ್ಥೆ)
S: ಸ್ಪಿಂಡಲ್ ಸ್ಪೀಡ್- ಫೀಟ್/ನಿಮಿಷ, ಮೀ/ನಿಮಿಷ (P ಮತ್ತು Q ನಲ್ಲಿ ಓವರ್ ರೈಡ್ ನ ವ್ಯವಸ್ಥೆ)
ಮೊದಲ ಬ್ಲಾಕ್ ನಲ್ಲಿ U ಅಂದರೆ ತುಂಡಿನ ಆಳವಾಗಿದೆ, ಆದರೆ ಎರಡನೇ ಬ್ಲಾಕ್ ನಲ್ಲಿ U ವ್ಯಾಸದಲ್ಲಿ ಉಳಿದಿರುವ ಸ್ಟಾಕ್ ಇದೆ.
G71 ರಫಿಂಗ್ ಸೈಕಲ್ ಉದಾಹರಣೆ 1
ಪ್ರೊಗ್ರಾಮ್
ರಫಿಂಗ್ ಸೈಕಲ್ (ಔಟ್ ಸೈಡ್ ರಫಿಂಗ್)
N2 G96 V200 T 202 M4
G00 X 124 Z 2 M8
G71 P50 Q60 I 0.5K 0.1 D4 F 0.4
G26 M9
ಫಿನಿಶ್ ಟರ್ನಿಂಗ್ (ಕಟರ್ ರೆಡಿಯಸ್ ಕಾಂಪೆನ್ಶೇಷನ್ ನೊಂದಿಗೆ)
G96 V250T303M4
G46
G0 X 40 Z1 M8
G01 X50 Z - 8A15 F 0.2
G01 160
G02 X 80 Z- 42 R 18
G01 Z - 62
G01 X 125 D0.5
G01 W - 6.5
G40
G28 M9
ಉದಾಹರಣೆ 2
ಕೌಂಟರ್ ರಪಿಂಗ್ ಮತ್ತು ಫಿನಿಶ್ ಟರ್ನಿಂಗ್ ಕಟರ್ ರೇಡಿಯಸ್ ಕಾಂಪೆನ್ಶೇಶನ್ ನೊಂದಿಗೆ
ಬಳಸುವ ಟೂಲ್
T3 - ರಫಿಂಗ್ ಫೀಡ್ 0.3 ಮಿ.ಮೀ./ರಿವೋ ಕಟಿಂಗ್ ಡೆಪ್ಥ್ 3.5 ಮಿ.ಮೀ.
T4 - ಫಿನಿಶ್ ಟರ್ನಿಂಗ್ ಫೀಡ್ 0.2 ಮಿ.ಮೀ./ರಿವೊ.
G96 V 180 T0303 M4
G0 X 120 Z2 M8
G58
G71 P50 Q60 I0.05 K0.1 D3.5 F0.3
G26 M09
ಫಿನಿಶ್ ಟರ್ನಿಂಗ್
G96 V220T0404 M4
G46
G0 X 12 Z1 M8
G01 X 14 Z0 F 0.2
G01 X 48 140 R5
G01 Z - 46
G01 A90
G01 X 80 Z - 49 A-15
G01 Z - 68
G01 X 121 D4.5
G01 W - 5.5
G40
G26 M09
ಉದಾಹರಣೆ 3
ಮೇಲಿನ ಉದಾಹರಣೆಯಲ್ಲಿರುವ ಕಾರ್ಯವಸ್ತುವಿಗೆ ಹೊರಗಿನ ಕಟಿಂಗ್ ಗೋಸ್ಕರ 80° ಯ ಸ್ಟ್ಯಾಂಡರ್ಡ್ ಟೂಲ್ ಬಳಸಬಹುದು. ಫೇಸ್ ನಲ್ಲಿರುವ ಕಟ್ ಮತ್ತು ಹೊರಗಿನ ಭಾಗಗಳ ರಫಿಂಗ್ ಇದೇ ಟೂಲ್ ನಿಂದ ಮಾಡಬಹುದಾಗಿದೆ.
ಪ್ರೊಗ್ರಾಮ್
0300 - G71 (ರಫಿಂಗ್ ಸೈಕಲ್)
(ಔಟ್ ಸೈಡ್ ರಪಿಂಗ್)
N1 G20
N2 T0100M41 (ಓ.ಡಿ. ರಫಿಂಗ್ ಟೂಲ್ + ಗಿಯರ್)
N3 G96 S500 M03 ರಫ್ ಟರ್ನಿಂಗ್ ಗೋಸ್ಕರ ಸ್ಪೀಡ್
N4 G00 G41 X 3.2 Z0 T0101 M08 (ಫೇಸ್ ನ ಪ್ರಾರಂಭ)
N5 G01 X 0.36 (ಫೇಸ್ ವ್ಯಾಸದ ಎಂಡ್)
N6 G00 Z 0.1 (ಕ್ಲಿಯರ್ ಫೇಸ್)
N7 G42 X 3.1 N8 G71 P9Q17 U0.06 W0.004 D1250 F0.014
N9 G00 X 1.7 (ಕೌಂಟರ್ ನ ಪ್ರಾರಂಭ)
N10 G01 X 2.0 Z - 0.05 F 0.005
N11 Z - 0.4 F 0.01
N12 X 2.25
N13 X 2.5 Z - 0.6
N14 Z - 0.875 R 0.125
N15 X 2.9
N16 G01 X 3.05 Z - 0.95
N17 U 0.2 F0.2
N18 G00 G40 X 5.0 Z 6.0 T0100
N19 M01
(ಈ ಪಾಯಿಂಟ್ ಗೆ ಹೊರಗಿರ ರಫಿಂಗ್ ಮುಗಿದಿದೆ)
ಒಳಭಾಗದ ರಫಿಂಗ್ ಗೋಸ್ಕರ ಟೂಲ್ ನಂ. 3 ಬಳಸಲಿದ್ದೇವೆ. (T03)
N20 T0300 (ಐ.ಡಿ. ರಫಿಂಗ್ ಟೂಲ್)
N21 G96 S 500 M03
N22 G00 G41X 0.5 Z0.1 T0303 M08
N23 G71 P24 Q 31 U - 0.06 W 0.004 D1000 F0.012
N24 G00 X 1.55
N25 G01 X1.25 Z- 0.05 F0.004
N26 Z- 0.55R - 0.1 F0.008
N27 X 0.875 K - 0.05
N28 Z- 0.75
N29 X 0.625Z - 1.25
N30 Z - 1.55
N31 U - 0.2 F 0.02
N32 G00 G40 X 5.0 Z2.0 T0300
N33 M01
ಈ ಎರಡು ಪ್ರೊಗ್ರಾಮ್ ಗಳ ನಂತರ ಕಾರ್ಯವಸ್ತುವಿನ ಪೂರ್ಣವಾದ ರಪಿಂಗ್ ಮಾಡಲಾಗಿದೆ. ಇದರ ನಂತರ G70 ಫಿನಿಶಿಂಗ್ ಸೈಕಲ್ ಬಳಸಿ ಕಾರ್ಯವಸ್ತುವನ್ನು ಪೂರ್ತಿ ಮಾಡಬಹುದು.
G72 ಫೇಸಿಂಗ್ ಸ್ಟಾಕ್ ರಿಮೂವಲ್
G72 ಈ ಸೈಕಲ್ ತುಂಬಾ ಅಂಶಗಳಲ್ಲಿ G71 ನಂತೆಯೇ ಕೆಲಸ ನಿರ್ವಹಿಸುತ್ತವೆ. ಮುಖ್ಯವಾದ ವ್ಯತ್ಯಾಸವೆಂದರೆ ಸ್ಟಾಕ್ ಹಾರಿಝಾಂಟಲ್ ಕಟಿಂಗ್ ನಿಂದ (ಫೇಸಿಂಗ್) ತೆಗೆಯಲಾಗುತ್ತದೆ. ಸ್ವಾಲಿಡ್ ಸಿಲಿಂಡರ್ ನ ರಫಿಂಗ್ ಮಾಡಲು ಇದರ ಉಪಯೋಗವಾಗುತ್ತದೆ. ಇದರಲ್ಲಿ ಚಿಕ್ಕ ಚಿಕ್ಕ ವರ್ಟಿಕಲ್ ಕಟ್ ಗಳನ್ನು ಮಾಡಲಾಗುತ್ತದೆ. ಕಂಟ್ರೋಲ್ ಸಿಸ್ಟಮ್ ಗಳಂತೆಯೇ ಈ ಸೈಕಲ್ ಗಳ ಫಾರ್ಮೆಟ್ ಎರಡು ವಿಧದದಲ್ಲಿರುತ್ತವೆ.
1. ಸಿಂಗಲ್ ಬ್ಲಾಕ್ ಫಾರ್ಮೆಟ್
2. ಡಬಲ್ ಬ್ಲಾಕ್ ಫಾರ್ಮೆಟ್
G72 ಸಿಂಗಲ್ ಬ್ಲಾಕ್ ಫಾರ್ಮೆಟ್
ಪಾನುಕ್ ಸಿಸ್ಟಮ್ 10T/11T/15T ಗೋಸ್ಕರ
G72 P…Q…I…K…U…W…D…F…S… ಇದರಲ್ಲಿ
P: ಫಿನಿಶಿಂಗ್ ಪ್ರೊಫೈಲ್ ಮೊದಲ ಬ್ಲಾಕ್ ನಂಬರ್
Q: ಫಿನಿಶಿಂಗ್ ಪ್ರೊಫೈಲ್ ಕೊನೆಯ ಬ್ಲಾಕ್ ನಂಬರ್
I: X ಅಕ್ಷದಲ್ಲಿ ರಫ್ ಸೆಮಿಫಿನಿಶಿಂಗ್ ನ ದೂರ ಮತ್ತು ದಿಕ್ಕು
K: Z ಅಕ್ಷದಲ್ಲಿ ಸೆಮಿಫಿನಿಶಿಂಗ್ ನ ದೂರ ಮತ್ತು ದಿಕ್ಕು
U: X ಅಕ್ಷದ ವ್ಯಾಸದಲ್ಲಿ ಫಿನಿಶಿಂಗ್ ಗೋಸ್ಕರ ತೆಗೆಯುವ ಸ್ಟಾಕ್
W: Z ಅಕ್ಷದಲ್ಲಿ ಫಿನಿಶಿಂಗ್ ಗೋಸ್ಕರ ಉಳಿದಿರುವ ಸ್ಟಾಕ್
D: ರಫಿಂಗ್ ತುಂಡಿನ ಆಳ
F: ಕಟಿಂಗ್ ಫೀಡ್ ರೇಟ್– ಇಂಚು/ನಿಮಿಷ, ಮಿ.ಮೀ./ರಿವೊ. (P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಸಾಧ್ಯವಿದೆ)
S: ಸ್ಪಿಂಡಲ್ ಸ್ಪೀಡ್ – ಅಡಿ/ನಿಮಿಷ ಅಥವಾ ಮೀಟರ್/ ನಿಮಿಷ (P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಸಾಧ್ಯವಿದೆ)
I ಮತ್ತು K ಪ್ಯಾರಾಮೀಟರ್ ಎಲ್ಲ ಮಶಿನ್ ಗಳಲ್ಲಿ ಉಪಲಬ್ಧವಿರುವುದಿಲ್ಲ.
ಡಬಲ್ ಬ್ಲಾಕ್
G72 ಸೈಕಲ್ ಫಾರ್ಮೆಟ್
0T/16T/18T/20T/21T
ಎರಡನೇಬ್ಲಾಕ್
P: ಫಿನಿಶಿಂಗ್ ಪ್ರೊಫೈಲ್ ಮೊದಲ ಬ್ಲಾಕ್ ನ ನಂಬರ್
Q: ಫಿನಿಶಿಂಗ್ ಪ್ರೊಫೈಲ್ ಕೊನೆಯ ಬ್ಲಾಕ್ ನ ನಂಬರ್
U: X ಅಕ್ಷದ ವ್ಯಾಸದಲ್ಲಿ ಫಿನಿಶಿಂಗ್ ಗೋಸ್ಕರ ತೆಗೆಯುವ ಸ್ಟಾಕ್
W: Z ಅಕ್ಷದಲ್ಲಿ ಫಿನಿಶಿಂಗ್ ಗೋಸ್ಕರ ಉಳಿದಿರುವ ಸ್ಟಾಕ್
F: ಕಟಿಂಗ್ ಫೀಡ್ ರೇಟ್– ಇಂಚು/ನಿಮಿಷ, ಮಿ.ಮೀ./ರಿವೊ.
(P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಸಾಧ್ಯವಿದೆ.)
S: ಸ್ಪಿಂಡಲ್ ಸ್ಪೀಡ್ – ಅಡಿ/ನಿಮಿಷ ಅಥವಾ ಮೀಟರ್/ ನಿಮಿಷ
(P ಮತ್ತು Q ಬ್ಲಾಕ್ ನಲ್ಲಿ ಓವರ್ ರೈಡ್ ಸಾಧ್ಯವಿದೆ)
ಮುಖ್ಯವಾದ ಸೂಚನೆಗಳು : G71 ನಲ್ಲಿ (ಎರಡು ಬ್ಲಾಕ್ ಫರ್ಮೆಟ್) ಎರಡೂ ವೇಳೆಯಲ್ಲಿ U ಬಂದಿರುತ್ತದೆ G72 ಡಬಲ್ ಬ್ಲಾಕ್ ಫಾರ್ಮೆಟ್ ನಲ್ಲಿ ಎರಡೂ ಬಾರಿ W ಬಂದಿರುತ್ತದೆ. ಮೊದಲನೇ ಬ್ಲಾಕ್ ನಲ್ಲಿ ಇರುವ W ತುಂಡಿನ ಆಳವನ್ನು ತಿಳಿಸುತ್ತದೆ. ಹಾಗೆಯೇ ಎರಡನೇ ಬ್ಲಾಕ್ ನಲ್ಲಿರುವ W ಫೇಸ್ ನಲ್ಲಿ ಉಳಿದಿರುವ ಸ್ಟಾಕ್ ತೋರಿಸುತ್ತದೆ.
ಉದಾಹರಣೆ G72
03301 72 ಕೇವಲ ರಫಿಂಗ್
N1 G20
N2 T0100 M41
N3 G96 S500 M03...................
ಓಡಿ ಫೇಸಿಂಗ್ ಟೂಲ್, ಬೋರ್
N4 G00 G41 X6.25 Z0.3 T0101 M08 ಪ್ರಾರಂಭ
N5 G72 P6 Q 12 U0.06 W0.03 D1250 F0.014
N6 G00 Z - 0.875
N7 G01 X 6.05 F0.02
N8 X 5.9 Z - 0.8 F 0.008
N9 X 2.5
N10 X 1.5 Z0
N11 X 0.55
N12 W 0.1 F0.01
N13 G00 G40 X8.0 Z 3.0 T0100
N14 M01
G72 ಕಲ್ಪನೆ
G70 ಕೌಂಟರ್ ಫಿನಿಶಿಂಗ್ ಸೈಕಲ್ ಇದು ಕೌಂಟರಿಂಗ್ ಸೈಕಲ್ ನಲ್ಲಿರುವ ಕೊನೆಯ ಸೈಕಲ್ ಆಗಿರುತ್ತದೆ. ನಾವು ಈ ಹಿಂದೆ ನೋಡಿರುವ G71, G72, G73 ಈ ಯಾವುದೇ ರೀತಿಯ ಸೈಕಲ್ ಬಳಸಿದ ನಂತರ G70 ಫಿನಿಶಿಂಗ್ ಸೈಕಲ್ ಬಳಸಲಾಗುತ್ತದೆ. ಈ ಸೈಕಲ್ ಕೇವಲ ಫಿನಿಶಿಂಗ್ ಕಟ್ ಗೋಸ್ಕರ ಬಳಸಲಾಗುತ್ತದೆ.
G70 ಸೈಕಲ್ ಫಾರ್ಮೆಟ್ ಕಂಟೂರ್ ಫಿನಿಶಿಂಗ್ ಸೈಕಲ್
ಈ ಸೈಕಲ್ ಗೋಸ್ಕರದ ಫಾರ್ಮೆಟ್ಎಲ್ಲಕಂಟ್ರೋಲ್ ಗೋಸ್ಕರ ಒಂದೇ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.
G70 P…Q…F…S…
P: ಫಿನಿಶಿಂಗ್ ಪ್ರೊಫೈಲ್ ನ ಮೊದಲ ಬ್ಲಾಕ್ ನ ನಂಬರ್
Q: ಫಿನಿಶಿಂಗ್ ಪ್ರೊಫೈಲ್ ನ ಕೊನೆಯ ಬ್ಲಾಕ್ ನ ನಂಬರ್
F: ಕಟಿಂಗ್ ಫೀಡ್ ರೇಟ್ ಇಂಚು/ರಿವೋ ಅಥವಾ ಮಿ.ಮೀ./ರಿವೋ.
S: ಸ್ಪಿಂಡಲ್ ಸ್ಪೀಡ್ ಅಡಿ/ನಿಮಿಷ ಅಥವಾ ಮೀಟರ್/ನಿಮಿಷ
ಉಪಯುಕ್ತವಾದ ಸೂಚನೆಗಳು : ಸುರಕ್ಷಿತತೆಯ ದೃಷ್ಟಿಯಲ್ಲಿ ಯಾವ ಬಿಂದುವು ಪ್ರಾರಂಭದಿಂದಲೂ ಬಿಂದು ಎಂದು ರಫಿಂಗ್ ಗೆ ಬಳಸಲಾಗುತ್ತಿತ್ತೋ ಅದೇ ಪಾಯಿಂಟ್ G70 ಗೆ ಬಳಸಲಾಗುತ್ತದೆ.
ಉದಾಹರಣೆ : ಹಿಂದಿನ ಪ್ರೊಗ್ರಾಮ್
ಮುಂದುವರಿಯುತ್ತದೆ (ಓ. ಡಿ. ಫಿನಿಶಿಂಗ್)
N15 T0500M42
N16 G96 S530 M03 ಓ.ಡಿ. ಫಿನಿಶಿಂಗ್ ಟೂಲ್ ಗಿಯರ್
N17 G42 X 3.1 Z 0.1 T0505M08 ಫಿನಿಶಿಂಗ್ ಟರ್ನಿಂಗ್ ಸ್ಪೀಡ್
N18 G70 P9Q 17 ಪ್ರಾರಂಭ
N19 G00 G40 K5.0 Z 6.0 T0.500
N20 M01
ಮುಂದುವರಿಯುತ್ತದೆ (ಐ.ಡಿ. ಫಿನಿಶಿಂಗ್)
N21 T0700
N22 G96 S600 M03 ಐ.ಡಿ. ಫಿನಿಶಿಂಗ್ ಟೂಲ್
N23 G00 G41 X 0.5 Z0.1 ರಫ್ ಬೋರಿಂಗ್ ಗೋಸ್ಕರ ಸ್ಪೀಡ್
T0707M08 ಪ್ರಾರಂಭದ ಪೊಸಿಶನ್
N24 G70 P24 Q31
N25 G00 G40 X5.0 Z2.0 T0700 ಫಿನಿಶಿಂಗ್ ಸೈಕಲ್
N26 M30 ಫಿನಿಶಿಂಗ್ ಸೈಕಲ್ ಐ.ಡಿ.
% ಪ್ರೊಗ್ರಾಮ್ ಎಂಡ್
G70 ಸೈಕಲ್ ನಲ್ಲಿ ಫೀಡ್ ರೇಟ್ ಪ್ರೋಗ್ರಾಮ್ ಮಾಡಬೇಕಾಗುವುದಿಲ್ಲ. ಕಾರಣ P ಮತ್ತು Q ನಲ್ಲಿ ಫೀಡ್ ರೇಟ್ ಬಂದಿರುವುದಿಲ್ಲ. ಇದರಿಂದಾಗಿ ಪ್ರೊಗ್ರಾಮ್ ನಲ್ಲಿರುವ ಫೀಡ್ ರೇಟ್ ತಿರಸ್ಕರಿಸಲಾಗುತ್ತದೆ. 3301 ಮೇಲಿನ ಪ್ರೊಗ್ರಾಮ್, G72 ಇದರಲ್ಲಿ ಬಳಸಲಾಗಿದೆ. ಅದರಲ್ಲಿ ಫಿನಿಶಿಂಗ್ ಕಟ್ ಗೋಸ್ಕರ ಹೊರಗಿನ ಟೂಲ್ G70 ಯ ಜೊತೆಗೆ ಬಳಸಿ, ಅದನ್ನು ಉಪಯೋಗಿಸಬಹುದು.
ಪ್ರೊಗ್ರಾಮ್ 3301
ಮುಂದುವರಿಯುತ್ತದೆ
N15 T500 M42 ಓ.ಡಿ. ಫೇಸಿಂಗ್ ಟೂಲ್ + ಗಿಯರ್
N16 G96 S500 M03
N17 G00 G41 X 6.25 Z0.3 ಪ್ರಾರಂಭದ ಪೊಸಿಶನ್
N18 G70 P6 Q12 ಫಿನಿಶಿಂಗ್ ಸೈಕಲ್
N19 G00 G40 X 8.0 Z3.0 T0500
N20 M30
%
G70 ಸೈಕಲ್ ಬಳಸುವಲ್ಲಿ ಮೂಲಭೂತ ನಿಯಮಗಳು
1. ಸ್ಟಾಕ್ ರಿಮೂವಲ್ ಸೈಕಲ್ ನ ಮೊದಲು ಟೂಲ್ ನೋಸ್ ರೇಡಿಯಸ್ ಆಫ್ ಸೆಟ್ ಪ್ರಾರಂಭಿಸಿರಿ.
2. ಸ್ಟಾಕ್ ರಿಮೂವಲ್ ಸೈಕಲ್ ಮುಗಿದ ನಂತರ ಟೂಲ್ ನೋಸ್ ರೇಡಿಯಸಲ್ ಆಫ್ ಸೆಟ್ ರದ್ದುಗೊಳಿಸಿರಿ.
3. ಸ್ಟಾರ್ಟ್ ಪಾಯಿಂಟ್ ಕಡೆಗೆ ಹಿಂತಿರುಗುವ ವೇಗ ತನ್ನಷ್ಟಕ್ಕೆ ಆಗುತ್ತದೆ. ಪ್ರೊಗ್ರಾಮ್ ಮಾಡುವ ಅಗತ್ಯವಿರುವುದಿಲ್ಲ.
4. P ಬ್ಲಾಕ್ (G71 ನಲ್ಲಿರುವ) Z ಅಕ್ಷದ ವ್ಯಾಲ್ಯೂ ಅಳವಡಿಸಬೇಡಿರಿ.
5. U ಸ್ಚಾಕ್ ಅಲೌನ್ಸ್ ವ್ಯಾಸದಲ್ಲಿ ಪ್ರೊಗ್ರಾಮ್ ಮಾಡಲ್ಪಟ್ಟಿರುತ್ತದೆ. ಇದರ ಚಿಹ್ನೆಯಿಂದ (+/-) ಯಾವ ಬದಿಯಲ್ಲಿ ಸ್ಟಾಕ್ ನ ಕೆಲಸ ಮಾಡಬೇಕು, ಎಂಬುದು ತಿಳಿಯುತ್ತದೆ.
6. ಫಿನಿಶ್ಡ್ ಕೌಂಟರ್ ನಲ್ಲಿ ಪ್ರೊಗ್ರಾಮ್ ಮಾಡಿರುವ ಫೀಡ್ ರೇಟ್ ನ ಕುರಿತು ಗಮನ ಹರಿಸಲಾಗುವುದಿಲ್ಲ.
7. D ಅಕ್ಷರಕ್ಕೆ ಡೆಸಿಮಲ್ ಪಾಯಿಂಟ್ ನ ಬಳಕೆಯನ್ನು ಮಾಡಬೇಡಿರಿ. ಅದಕ್ಕೆ ಬದಲಾಗಿ ಲೀಡಿಂಗ್ ಝೀರೋ ಸಪ್ರೇಶನ್ ಫಾರ್ಮೆಟ್ ಬಳಸಿರಿ. (ಉದಾಹರಣೆ, D0750 ಅಧವಾ D750 ಅಂದರೆ 0.0750 ನಷ್ಟುಆಳ).
ಸತೀಶ್ ಜೋಶಿ
ಲೇಖಕರು ಮತ್ತು ಸಲಹೆಗಾರರು
8625975219
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.