ಬೆಂಗಳೂರಿನಲ್ಲಿ 1998 ರಲ್ಲಿ ಪ್ರಾರಂಭವಾಗಿರುವ ಸುಹನರ್ ಕಂಪನಿಯು ಯಂತ್ರಣೆಯನ್ನು ಮಾಡುವ ಕಾರ್ಖಾನೆಗಳಿಗೆ, ಪವರ್ ಟೂಲ್ ಮತ್ತು ಟ್ರಾನ್ಸ್ಮಿಶನ್ ಯಂತ್ರಭಾಗಗಳ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಸಲ್ಯೂಶನ್ ಪ್ರೊವೈಡರ್ ಎಂಬುದಾಗಿ ಗುರುತಿಸಲಾಗುತ್ತದೆ. ಸುಹನೇರ್ ಇವರ ಯಂತ್ರಣೆಯ ವಿಭಾಗದಲ್ಲಿ ವಸ್ತುಗಳ ನಿರ್ಮಾಣ ಕ್ಷೇತ್ರದಲ್ಲಿ ಲಾಭಕಾರಿಯಾದ ಮತ್ತು ಕಡಿಮೆ ಖರ್ಚಿನಲ್ಲಿ ಉಪಾಯಗಳನ್ನು ನೀಡುತ್ತಿರುವುದರಿಂದ ಇಂದು ಡ್ರಿಲ್ಲಿಂಗ್, ಮಿಲ್ಲಿಂಗ್ ಮತ್ತು ಟ್ಯಾಪಿಂಗ್ ಪ್ರಕ್ರಿಯೆಗಳಲ್ಲಿರುವ ಸಮಸ್ಯೆಗಳಿಗೆ ಉಪಾಯವನ್ನು ನೀಡುವಂತಹ ಮೊತ್ತಮೊದಲ ಕಂಪನಿಯಾಗಿದೆ. ಹಾಗೆಯೇ ವಿವಿಧ ಯಂತ್ರಭಾಗಗಳಿಗೋಸ್ಕರ ತಯಾರಿಸಲಾಗುವಂತಹ ಸ್ಪೆಶಲ್ ಪರ್ಪಸ್ ಮಶಿನ್ ಗಳಿಗೋಸ್ಕರವೂ (ಎಸ್.ಪಿ.ಎಮ್.) ಉಪಯುಕ್ತ ಮತ್ತು ಪೂರಕವಾದ ಪ್ರಣಾಳಿಕೆಯನ್ನು ನೀಡುತ್ತಿದೆ.
ಡ್ರಿಲ್ಲಿಂಗ್, ಮಿಲ್ಲಿಂಗ್, ಟ್ಯಾಪಿಂಗ್ ಪ್ರಕ್ರಿಯೆಗಳಿಗೋಸ್ಕರ ಸುಹನರ್ ಕಂಪನಿಯು ವಿಸ್ತಾರವಾದ ಶ್ರೇಣಿಯಲ್ಲಿರುವ ಸ್ಪಿಂಡಲ್ ಗಳನ್ನು ಪೂರೈಸುತ್ತಿದೆ. ದೀರ್ಘಕಾಲ ಹಾಳಾಗದೇ ಇರುವ ರನ್ ಔಟ್, ವಿಶ್ವಾಸಪೂರ್ಣವಾದ, ಸ್ವಿಸ್ ಗುಣಮಟ್ಟದ ಕ್ರೋಮ್ ಪ್ಲೆಟೆಡ್ ಸ್ಪಿಂಡಲ್ ಆಟೊಮ್ಯಾಟಿಕ್, ಆಯಿಲ್ ಮತ್ತುಗ್ಯಾಸ್, ಇಲೆಕ್ಟ್ರಿಕಲ್, ಸ್ವಿಚ್ ಗಿಯರ್, ವಿಮಾನ ಉದ್ದಿಮೆ ಇತ್ಯಾದಿ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
ಉದಾಹರಣೆ
ಒಂದು ಯಂತ್ರಭಾಗದ ಉತ್ಪಾದನೆಯ ಪ್ರಕ್ರಿಯೆಗೆ ಎಸ್.ಪಿ.ಎಮ್. ತಯಾರಿಸುವಾಗ ಸುಹನರ್ ಸ್ಪಿಂಡಲ್ ಹೇಗೆ ಬಳಸಲಾಗುತ್ತದೆ, ಎಂಬುದರ ಕುರಿತಾದ ಉದಾಹರಣೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಪುಣೆಯ ಸಮೀಪವಿರುವ ಸಾಸ್ ವಡ್ ಎಂಬಲ್ಲಿರುವ ಆಕ್ಟೋಗಾನ್ ಮ್ಯಾನ್ಯುಫ್ಯಾಕ್ಚರಿಂಗ್ ಟೆಕ್ನಾಲಾಜಿ ಈ ಕಂಪನಿಯು ಕಳೆದ 12 ವರ್ಷಗಳಿಂದ ಉಚ್ಚಗುಣಮಟ್ಟದ, ಕಡಿಮೆ ಬೆಲೆಯ ಆಟೊಮೇಶನ್, ಎಸ್.ಪಿ.ಎಮ್., ಟೇಬಲ್ ಟಾಪ್ ಸಿ.ಎನ್.ಸಿ. ಮತ್ತುಮಿಲ್ಲಿಂಗ್ ಮಶಿನ್ ಗಳನ್ನು ತಯಾರಿಸುತ್ತಿದೆ. ಇದರೊಂದಿಗೆ ಸುಹನರ್ ಸ್ಪಿಂಡಲ್ ಬಳಸಿ ಡ್ರಿಲಿಂಗ್, ಟ್ಯಾಪಿಂಗ್, ಮಿಲ್ಲಿಂಗ್ ಈ ರೀತಿಯ ಕೆಲಸಗಳಲ್ಲಿ ವಾಹನ ಉದ್ಯಮದಲ್ಲಿರುವ ಓ.ಇ.ಎಮ್.ಗಳಿಗೋಸ್ಕರ (ವಿಶೇಷವಾಗಿ ಬಜಾಜ್ ಆಟೋ ಲಿ. ಮತ್ತು ಅವರ ಪೂರೈಕೆಗಾರರು) ಉಚ್ಚ ಗುಣಮಟ್ಟದ ಎಸ್.ಪಿ.ಎಮ್.ನ ತಯಾರಿಕೆಯನ್ನು ಮಾಡುವ ಕಂಪನಿಯೆಂದು ಗುರುತಿಸಲಾಗುತ್ತದೆ.
ಈ ಎರಡೂ ಕಂಪನಿಗಳೂ ಜಂಟಿಯಾಗಿ ತಮ್ಮ ಗ್ರಾಹಕರಿಗೋಸ್ಕರ ಮೈಕ್ರೋಡ್ರಿಲ್ಲಿಂಗ್ ಎಸ್.ಪಿ.ಎಮ್. (ಚಿತ್ರ ಕ್ರ. 1) ತಯಾರಿಸಲಾಗಿದೆ. ಬಾಟ್ಲಿಗಳನ್ನು ತಯಾರಿಸಲು ಬಳಸಲಾಗುತ್ತಿರುವ ಮೋಲ್ಡ್ ನಲ್ಲಿ ಸೂಕ್ಷ್ಮವಾದ ರಂಧ್ರಗಳನ್ನು ಮಾಡಲು ತಯಾರಿಸಿರುವ ಎಸ್.ಪಿ.ಎಮ್.ನಂತಹ ಉಪಾಯಗಳಿಂದ ಈ ಹಿಂದಿನ ಪ್ರಕ್ರಿಯೆಯಲ್ಲಿರುವ ತೊಂದರೆಗಳನ್ನು ದೂರ ಮಾಡಿ ಉತ್ಪಾದಕತೆಯಲ್ಲಿ ಅಭಿವೃದ್ಧಿಯನ್ನು ಮಾಡಲಾಯಿತು.
ಕೆಲಸದ ರೀತಿಯಲ್ಲಿರುವ ವೈಶಿಷ್ಟ್ಯಗಳು
• ಕಾಲ್ಪನಿಕವಾದ ಡಿಸೈನ್ ನಿಂದ ಮಶಿನ್ ಗ್ರಾಹಕರಲ್ಲಿ ತಲುಪಿ ಅದನ್ನು ಪ್ರಾರಂಭಿಸುವ ತನಕದ ಎಲ್ಲ ಕೆಲಸಗಳನ್ನು ಯೋಗ್ಯವಾದ ರೀತಿಯಲ್ಲಿ ಮಾಡಲಾಗುತ್ತವೆ (ಆಟೊ ಕ್ಯಾಡ್/ ಸ್ವಾಲಿಡ್ ವರ್ಕ್ ಬಳಸಿ)
• ಮಶಿನ್ ಆನ್ ಲೈನ್ ಡಿಲಿವರಿ
• ಮಶಿನ್ ಮತ್ತು ಬಳಸಿರುವ ಭಾಗಗಳಿಗೋಸ್ಕರ ಮಾರಾಟದ ನಂತರದ ಸೇವೆಯ ಸಹಾಯ (ಆಫ್ಟರ್ ಸೇಲ್ಸ್ ಪೋರ್ಟ್)
ಎಸ್.ಪಿ.ಎಮ್. ಬಳಸುವ ಮುಂಚೆ
• ಚಿತ್ರ ಕ್ರ. 2 ರಲ್ಲಿರುವ ಯಂತ್ರಭಾಗಗಳಲ್ಲಿ ತೋರಿಸಿದಂತೆ ನಮ್ಮ ಗ್ರಾಹಕರು ಪ್ರತಿಯೊಂದು ಮೋಲ್ಡ್ ನ ಸುತ್ತಮುತ್ತ 2, 3 ಮತ್ತು 4 ಮಿ.ಮೀ. ವ್ಯಾಸದ ಮತ್ತು 0.8, 1.0 ಮಿ.ಮೀ. ವ್ಯಾಸದ ಒಳಗಿನ, ಇಂತಹ ಒಟ್ಟು ಐವತ್ತು ರಂಧ್ರಗಳನ್ನು ಮಾಡಲು ±2’ ಇಂಡೆಕ್ಸಿಂಗ್ ನಿಖರತೆ ಇರುವ ಮ್ಯಾನ್ಯುವಲ್ ಇಂಡೆಕ್ಸಿಂಗ್ ಟೇಬಲ್ ನೊಂದಿಗೆ ಕೈಯಿಂದ ನಡೆಸಬಲ್ಲ ಟ್ರೆಡಿಶನಲ್ (ಸಾಂಪ್ರದಾಯಿಕವಾದ) ಡ್ರಿಲ್ಲಿಂಗ್ ಮಶಿನ್ ಬಳಸುತ್ತಿದ್ದರು. ಇದನ್ನು ಬಳಸುವಾಗ ಎರಡೂ ಬದಿಗಳಲ್ಲಿರುವ ರಂಧ್ರಗಳಿಗೆ ಮೊದಲಾಗಿ ಅವುಗಳ ಸ್ಥಾನವನ್ನು ನಿರ್ಧರಿಸಬೇಕಾಗುತ್ತಿತ್ತು. (ಮಾರ್ಕಿಂಗ್). ಇದರಿಂದಾಗಿ ಅದರ ಕೆಲಸಕ್ಕೆ ಕನಿಷ್ಠ 30 ನಿಮಿಷಗಳು ಅಥವಾ ಆಪರೇಟರ್ ನ ಕೌಶಲ್ಯಕ್ಕೆ ಅನುಸಾರವಾಗಿ ಅದಕ್ಕಿಂತಲೂ ಹೆಚ್ಚು ಸಮಯವು ತಗಲುತ್ತಿತ್ತು. ಒಂದೇ ಕಾರ್ಯವಸ್ತುವಿನಲ್ಲಿರುವ ರಂಧ್ರಗಳ ಸ್ಥಾನವನ್ನು ನಿರ್ಧರಿಸುವುದು ಮತ್ತು HSS ಡ್ರಿಲ್ ಬಳಸಿ ನಿಧಾನವಾಗಿ ಡ್ರಿಲ್ಲಿಂಗ್ ಮಾಡಲು ಸುಮಾರು 60 ನಿಮಿಷಗಳ ಕಾಲಾವಧಿಯಷ್ಟು ಸೈಕಲ್ ಟೈಮ್ ಬೇಕಾಗುತ್ತಿತ್ತು.
ಅಡಚಣೆಗಳು
•ಮೋಲ್ಡ್ ನಲ್ಲಿ ರಂಧ್ರಗಳನ್ನು ತಯಾರಿಸುವುದು ಒಂದು ಆಲಸ್ಯದಿಂದ ಕೂಡಿರುವ, ವೇಳೆಯನ್ನು ವ್ಯರ್ಥಮಾಡುವ ಮತ್ತು ಗ್ರಾಹಕರ ಉತ್ಪಾದನೆಯಲ್ಲಿ ತೊಂದರೆಗಳನ್ನು ಉಂಟು ಮಾಡುವ ಪ್ರಕ್ರಿಯೆಯಾಗಿತ್ತು, ಎಂಬುದು ಮೇಲಿನ ವಿವರಣೆಗಳನ್ನು ತಿಳಿದುಕೊಂಡಾಗ ಗಮನಕ್ಕೆ ಬರುತ್ತದೆ.
•ಕಾಲಮ್ ಡ್ರಿಲ್ಲಿಂಗ್ ಮಶಿನ್ ನಲ್ಲಿ ಸ್ಪಿಂಡಲ್ ನ ವೇಗವನ್ನು ಹೆಚ್ಚಿಸಲು ಅವಕಾಶವಿರುತ್ತದೆ.
•ಮೈಕ್ರೋಡ್ರಿಲ್ಲಿಂಗ್ ಇರುವುದರಿಂದ ಮತ್ತು ಫೀಡ್ ರೇಟ್ ಆಪರೇಟರ್ ನಲ್ಲಿ ಅವಲಂಬಿಸಿರುವುದರಿಂದ ಟೂಲ್ ಗಳು ತುಂಡಾಗುವಂತಹ ಸಮಸ್ಯೆಯೊಂದಿಗೆ ಈ ಪ್ರಕ್ರಿಯೆಯು ಸಮಯವನ್ನು ವ್ಯರ್ಥ ಮಾಡುವಂತಹ ಪ್ರಕ್ರಿಯೆಯಾಗಿತ್ತು. ಈ ಪ್ರಕ್ರಿಯೆಗಳಿಗೋಸ್ಕರ ಸ್ಟ್ಯಾಂಡರ್ಡ್ 5 ಅಕ್ಷೀಯ ಸಿ.ಎನ್.ಸಿ. ಮಶಿನ್ ಗಳನ್ನು ಬಳಸುವುದು ಗ್ರಾಹಕರಿಗೆ ಆರ್ಥಿಕ ದೃಷ್ಟಿಯಲ್ಲಿ ಸೂಕ್ತವಾಗಿರಲಿಲ್ಲ.
ಉಪಾಯಗಳು
ಒಂದು ಅಚ್ಚುಕಟ್ಟಾದ ಮತ್ತು ಲಾಭಕಾರಿಯಾದ 5 ಎಕ್ಸಿಸ್ ಸಿ.ಎನ್.ಸಿ., ಎಸ್.ಪಿ.ಎಮ್. ತಯಾರಿಸುವ ನಿರ್ಧಾರವನ್ನು ಮಾಡಲಾಯಿತು. ಮೈಕ್ರೋಡ್ರಿಲ್ಲಿಂಗ್ ನಲ್ಲಿ ಬಳಸಲಾಗುವ ಹೊಸದಾದ ಟೂಲ್ ಹೋಲ್ಡರ್ ಅದರಲ್ಲಿ ಸರಿಯಾಗಿ ಅಳವಡಿಸಲು ಇದರಲ್ಲಿರುವ ಸ್ಪಿಂಡಲ್ ನ ರನ್ ಔಟ್ ತುಂಬಾ ಕಡಿಮೆ ಇರುವುದು ಅತ್ಯಾವಶ್ಯಕವಾಗಿತ್ತು. ಇದರಿಂದಾಗಿ ನಾವು BEX 15/HSK 50 ಸ್ಪಿಂಡಲ್ (ಚಿತ್ರ ಕ್ರ. 5) ಬಳಸುವ ನಿರ್ಧಾರವನ್ನು ಕೈಗೊಂಡೆವು.
ಸ್ಪಿಂಡಲ್ BEX 15 ನ ವಿವರಗಳು
ಗರಿಷ್ಠ ಡ್ರಿಲ್ಲಿಂಗ್ ಸಾಮರ್ಥ್ಯ: ಸ್ಟೀಲ್ 600 N/ ಮಿ.ಮೀ.2 ನಲ್ಲಿ 15 ಮಿ.ಮೀ. ವ್ಯಾಸ
ಸ್ಪಿಂಡಲ್ ನ ವಿಧಗಳು : HSK 50
ಗರಿಷ್ಠ ಸ್ಪಿಂಡಲ್ ನ ವೇಗ : 23000 ಆರ್.ಪಿ.ಎಮ್.
ರನ್ ಔಟ್: 0.005 ಮಿ.ಮೀ.ಗಿಂತ ಕಡಿಮೆ
ಮೋಟರ್ ನ ರಕ್ಷಣೆ : IP 55
ಎಸ್.ಪಿ.ಎಮ್.ನ ವೈಶಿಷ್ಟ್ಯಗಳು
• X, Y, Z ಅಕ್ಷಗಳು ಅನುಕ್ರಮವಾಗಿ 300 ಮಿ.ಮೀ., 300 ಮಿ.ಮೀ., 200 ಮಿ.ಮೀ. ರೇಖೀಯ ಚಟುವಟಿಕೆಗಳು.
• ಹೈಡ್ರೋಗ್ರಿಪರ್ ಟೂಲ್ ಹೋಲ್ಡರ್ ಹೊಂದಿಸಿಕೊಳ್ಳುವ ಹೊಸ ಸ್ಪಿಂಡಲ್ ನ ಹೋಜ್ HSK 50
• ಚೇಂಜ್ ಓವರ್ ಪುಲಿ ಮತ್ತು ವಿ.ಎಫ್.ಡಿ. ಇರುವ 625 ರಿಂದ 23000 RPM ತನಕ ನಡೆಯುವಂತಹ ಸ್ಪಿಂಡಲ್.
• ಇಂಡೆಕ್ಸಿಂಗ್ ಟೇಬಲ್: ಯೂಕ್ಯಾಮ್ ಮೇಕ್ ನ ಸರ್ವೋ ಇಂಡೆಕ್ಸಿಂಗ್ ಟೇಬಲ್.
• ಕಂಟ್ರೋಲರ್: 5 ಎಕ್ಸಿಸ್ ಸಿ.ಎನ್.ಸಿ. ಸೀಮೆನ್ಸ್ 808D ಎಡ್ವಾನ್ಸ್.
• ಎಲ್ಲ ಪರಿಮಾಣಗಳಲ್ಲಿರುವ ಟಾಲರನ್ಸ್ ಮತ್ತು ಎಂಗಲ್ ಪಡೆಯಲು 5 ಸರ್ವೋ ಎಕ್ಸಿಸ್ ನ ಚಟುವಟಿಕೆ
• ಮೂರು ರೇಖೀಯ ಅಕ್ಷ X, Y ಮತ್ತು Z ಹಾಗೆಯೇ ತಿರುಗುವ ಎರಡು ಅಕ್ಷಗಳು A ಮತ್ತು B
• ರಂಧ್ರಗಳ ಸ್ವಯಂಚಾಲನೆಯ ಸ್ಥಾನದ ನಿರ್ಧಾರಕ್ಕೋಸ್ಕರ CAM ಇಂಟರ್ ಫೇಸಿಂಗ್.
• ಕಾರ್ಯವಸ್ತುವಿನ 50 ಮಿ.ಮೀ.ನಿಂದ 200 ಮಿ.ಮೀ. ತನಕದ ವ್ಯಾಸವನ್ನು ಹೊಂದಿಸಿಕೊಳ್ಳಬಲ್ಲ 3 ಜಾ ಚಕ್ ಗಳು.
• ಸರ್ವೋ Z ಎಕ್ಸಿಸ್ ಮೂಲಕ ಫೇಕ್ ರೀಡಿಂಗ್ ನ ಅವಕಾಶ.
ಈ ಮಶಿನ್ ನಲ್ಲಿ ಆಗುವ ಯಂತ್ರಣೆಯನ್ನು ವೀಕ್ಷಿಸಲು ಪಕ್ಕದಲ್ಲಿರುವ QR ಕೋಡನ್ನು
ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿರಿ.
ಎಸ್.ಪಿ.ಎಮ್. ಬಳಸಿದ ನಂತರಉಂಟಾದ ಲಾಭಗಳು
•5 ಎಕ್ಸಿಸ್ ಗಳಲ್ಲಿ ಡ್ರಿಲ್ಲಿಂಗ್ ಮತ್ತುCAM ಇಂಟರ್ ಫೇಸ್ ಗಳಿಂದಾಗಿ ಮಾರ್ಕಿಂಗ್ ಮತ್ತು ಇಂಡೆಕ್ಸಿಂಗ್ ಇವುಗಳಿಗಳಿಗೋಸ್ಕರ ಬೇಕಾಗುವ ಸಮಯದಲ್ಲಿ ಉಳಿತಾಯವಾಯಿತು.
•ಉಚ್ಚ ವೇಗದ (11000 ಆರ್.ಪಿ.ಎಮ್.ಗಿಂತ ಹೆಚ್ಚು) ಸ್ಪಿಂಡಲ್ ಇರುವುದರಿಂದ HSS ಡ್ರಿಲ್ ನ ಬದಲಾಗಿ ಕಾರ್ಬೈಡ್ ಡ್ರಿಲ್ ಬಳಸಲಾಯಿತು.
•ಸ್ವಯಂಚಾಲಿತ ಸ್ಥಾನದ ನಿರ್ಧಾರ, ಇಂಡೆಕ್ಸಿಂಗ್ ನ ಸೈಕಲ್, ಉಚ್ಚಮಟ್ಟದ ಯಂತ್ರಣೆಯ ವೇಗ ಮತ್ತು ಫೀಡ್ ರೇಟ್ ನಿಂದಾಗಿ ಸೈಕಲ್ ಟೈಮ್ ಕಡಿಮೆಯಾಗಿ 50 ರಂಧ್ರಗಳನ್ನು ತಯಾರಿಸುದು 60 ನಿಮಿಷಗಳಿಂದ ಕಡಿಮೆ ಆಗಿ 20 ನಿಮಿಷಗಳಷ್ಟುಆಗಿರುತ್ತದೆ.
ಅಂತಿಮ ಗುರಿಯನ್ನು ಸಾಧಿಸಲುಮಾಡಿರುವ ಪ್ರಯತ್ನ
4 ಪಾಯಿಂಟ್ ಕ್ಲ್ಯಾಂಪಿಂಗ್ ಪ್ರಣಾಳಿಕೆ ಇರುವ ಹೈಡ್ರೊಗ್ರಿಪರ್ HSK 50 ಮೂಲಕ 11000 ಆರ್.ಪಿ.ಎಮ್.ಗಿಂತ ಹೆಚ್ಚಿನ ವೇಗದಲ್ಲಿ ಕಾರ್ಬೈಡ್ ಡ್ರಿಲ್ ನಲ್ಲಿ ಸ್ವಯಂಚಾಲಿತವಾಗಿ ಸ್ವಿಚ್ ಆಗುತ್ತದೆ. ಆದರೆ ಕೋನದಲ್ಲಿ ಮಾಡಲಾಗುವ 0.8 ಮಿ.ಮೀ., 1 ಮಿ.ಮೀ. ವ್ಯಾಸದ ರಂಧ್ರಗಳ ಕುರಿತು ಸ್ವಲ್ಪ ಪ್ರಮಾಣದಲ್ಲಿ ಡ್ರಿಲ್ ಗಳು ತುಂಡಾಗುವ ಸಾಧ್ಯತೆ ಇತ್ತು, ಆದ್ದರಿಂದ ಟೂಲ್ ಪೂರೈಕೆಗಾರರೊಂದಿಗೆ ಡ್ರಿಲ್ ಡಿಸೈನ್ ಗಳಲ್ಲಿ ಕೆಲಸ ಮಾಡಲಾಯಿತು. ದೃಢವಾದ ಟೂಲ್ ಗಳನ್ನು ಬಳಸಿ ಈ ಯಂತ್ರಣೆಯ ವೇಗದೊಂದಿಗೆ ಮತ್ತು ಫೀಡ್ ರೇಟ್ ನಲ್ಲಿ ಡ್ರಿಲ್ ತುಂಡಾಗಲಾರದಂತಹ, ಟೂಲ್ ಗಳನ್ನು ಬಳಸುವುದನ್ನು ನಿರ್ಧರಿಸಲಾಯಿತು.
ಲಾಭಗಳು
•ಅಚ್ಚುಕಟ್ಟಾದ ಮಶಿನ್
•ಮಾರುಕಟ್ಟೆಯಲ್ಲಿ ಉಪಲಬ್ಧವಿರುವ ಸ್ಟ್ಯಾಂಡರ್ಡ್ 5 ಎಕ್ಸಿಸ್ ಸಿ.ಎನ್.ಸಿ. ಮಶಿನ್ ನ ಹೋಲಿಕೆಯಲ್ಲಿ ಈ ಮಶಿನ್ ನ ಬೆಲೆಯು ಮೂರು ಪಟ್ಟು (1/3) ಕಡಿಮೆಯಾಗಿದೆ.
•ಸ್ಪಿಂಡಲ್ ಆರ್.ಪಿ.ಎಮ್.ನ ಎಲ್ಲಕ್ಕಿಂತಲೂ ವಿಸ್ತಾರವಾದ ಶ್ರೇಣಿ (ರೇಂಜ್).
•ಉಚ್ಚಮಟ್ಟದ ನಿಖರತೆ ಮತ್ತು ರಿಪಿಟ್ಯಾಬಿಲಿಟಿಯ ಸಾಮರ್ಥ್ಯ.
•ನಿರ್ವಹಣೆಯ ಅಗತ್ಯವಿಲ್ಲದಿರುವ ಸ್ಪಿಂಡಲ್.
ಸಾಗರ್ ದವಂಡೆ
ಉಪ ವ್ಯವಸ್ಥಾಪಕರು, ಸೇಲ್ಸ್ ವಿಭಾಗ,
ಸುಹನರ್ ಇಂಡಿಯಾ ಪ್ರೈ.ಲಿ.
9766322063
ಸಾಗರ್ ದವಂಡೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಸುಹನರ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಉಪ ವ್ಯವಸ್ಥಾಪಕರಾಗಿದ್ದಾರೆ.