ಸಮಯವನ್ನು ಉಳಿಸುವ ಕಡಿಮೆ ಖರ್ಚಿನ ‘ಜಾ’

@@NEWS_SUBHEADLINE_BLOCK@@

Udyam Prakashan Kannad    30-Apr-2020
Total Views |
ಕಾರ್ಯವಸ್ತುಗಳನ್ನು ತಪ್ಪಾಗಿ ಹಿಡಿಯುವ ಪದ್ಧತಿಯಿಂದಾಗಿ ಚಕ್ ನ ಗುಣಮಟ್ಟ ಮತ್ತು ಕಾರ್ಯಕ್ಷಮತೆಯು ಬೃಹತ್ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ. ಹಾಗೆಯೇ ಕೆಲಸಗಾರರಿಗೆ ತೊಂದರೆಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದಾಗಿ ಉಚ್ಚ ಗುಣಮಟ್ಟದ ಚಕ್ ಗಳನ್ನು ಉತ್ಪಾದನೆಯಲ್ಲಿ ಬಳಸುವುದು ತುಂಬಾ ಮಹತ್ವದ್ದಾಗಿದೆ. ಇಂದು ಉದ್ಯಮಗಳ ವಿಶ್ವದಲ್ಲಿ ಹೆಚ್ಚಾಗಿ ಟರ್ನಿಂಗ್ ಪ್ರಕ್ರಿಯೆಯಲ್ಲಿ 3 ಜಾ ಪವರ್ ಚಕ್ ಗಳನ್ನು ಬಳಸುವಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಹಲವಾರು ಆಪರೇಶನ್ ಗಳಲ್ಲಿ ವಿಶೇಷವಾಗಿ ಯಾವುದೇ ಜಾಬ್ ಗೋಸ್ಕರ ವಿಶೇಷವಾದ ಜಾ ತಯಾರಿಸಬೇಕಾಗುತ್ತದೆ. ಸೀಲಂಟ್ ಕಂಪನಿಯು ಇದಕ್ಕೋಸ್ಕರ ನೂತನವಾದ ಪದ್ಧತಿಯನ್ನು ಹುಡುಕಿದ್ದಾರೆ. ಇದರ ಕುರಿತಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
 

1_1  H x W: 0 x 
 
ಸೀಲಂಟ್ ಕಂಪನಿಯು ಕಳೆದ 31 ವರ್ಷಗಳಿಂದ ಕ್ವಿಕ್ರಿಲೀಜ್ ಕಪಲಿಂಗ್ ತಯಾರಿಸುತ್ತಿದ್ದಾರೆ. ಕಪಲಿಂಗ್ ನಲ್ಲಿ ಅನೇಕ ಮಾಡೆಲ್ ಗಳಿವೆ. (ಚಿತ್ರ ಕ್ರ. 1) ಪ್ರತಿಯೊಂದು ಮಾಡೆಲ್ ನಲ್ಲಿ 3 ರಿಂದ 6 ಬಿಡಿಭಾಗಗಳು ಇರುತ್ತವೆ. ಈ ಎಲ್ಲ ಬಿಡಿ ಭಾಗಗಳನ್ನು ಪ್ರಮುಖವಾಗಿ ಸಿ.ಎನ್.ಸಿ. ಲೇಥ್ ನಲ್ಲಿ ತಯಾರಿಸಲಾಗುತ್ತದೆ.
 
ಕ್ವಿಕ್ರಿಲೀಜ್ ಕಪಲಿಂಗ್ ಚಕ್ ನಲ್ಲಿ ಹಿಡಿಯಲು ಸಾಫ್ಟ್ ಜಾ ಬಳಸಲಾಗುತ್ತದೆ. ಪ್ರತಿಯೊಂದು ಯಂತ್ರಭಾಗಗಳಿಗೆ 3 ಜಾಗಳ ಸ್ವತಂತ್ರವಾದ ಸೆಟ್ ಬೇಕಾಗುತ್ತದೆ. ಮತ್ತೆ ಮತ್ತೆ ಬಳಸಲು ಅದನ್ನು ಸಂಗ್ರಹಿಸಿ ಇಟ್ಟಲ್ಲಿ ನೂರಾರು ಸೆಟ್ ಗಳನ್ನು ಕಾಪಾಡಬೇಕಾಗುತ್ತದೆ. ಇದಕ್ಕೆ ತುಂಬಾ ಖರ್ಚು ತಗಲುತ್ತದೆ. ಇದಕ್ಕೋಸ್ಕರ ಜಾಗವು ತುಂಬಾ ಬೇಕಾಗುತ್ತದೆ. ಹೊಸ ಜಾ ಸೆಟ್ ಮಾಡಿದ ನಂತರ ಹೊಸ ಕಟ್ ಮಾಡಬೇಕಾಗುತ್ತದೆ. ಇದಕ್ಕೋಸ್ಕರವೂ ತುಂಬಾ ಸಮಯವೂ ವ್ಯರ್ಥವಾಗುತ್ತದೆ.
 
ಈ ಕೆಲಸಗಳನ್ನು ಸರಳೀಕರಿಸಲು ಮತ್ತು ಸಮಯವನ್ನು ಉಳಿಸಲು ತಕ್ಷಣ ಬದಲಾಯಿಸುವಂತಹ ಕಡಿಮೆ ಖರ್ಚಿನ ಟಿಪ್ ಜಾಗಳ ನಿರ್ಮಿತಿಯನ್ನು ಮಾಡಲಾಯಿತು. ಇದಕ್ಕೋಸ್ಕರ ಭಾರತ ಸರ್ಕಾರದ ಪೆಟಂಟ್ ಕೂಡಾ ಲಭಿಸಿತು. ಚಕ್ನಲ್ಲಿ ಬಳಸಲಾಗುವಂತಹ ಹಾರ್ಡ್ ಜಾಗಳ ಡಿಸೈನ್ ಬದಲಾಯಿಸಿ ಅದರ ತುದಿಯಲ್ಲಿ ಚಿಕ್ಕ ಚಿಪ್ ಜಾ ಅಳವಡಿಸುವ ವ್ಯವಸ್ಥೆಯನ್ನು ಮಾಡಲಾಯಿತು. (ಚಿತ್ರ ಕ್ರ. 2)
 
ಹಾರ್ಡ್ ಜಾ ಚಕ್ ನಲ್ಲಿ ಅಳವಡಿಸಿದ ನಂತರ ಅದನ್ನು ಅಲುಗಾಡಿಸದೇ ಅದರಲ್ಲಿ ಅಳವಡಿಸಿರುವ ಚಿಕ್ಕ ಜಾ ತೆಗೆಯುವ ಮತ್ತು ಅಳವಡಿಸುವಂತಹ ರಚನೆಯನ್ನು ಮಾಡಲಾಗಿದೆ. ತೆಗೆದಿರುವ ಚಿಕ್ಕ ಜಾ ಮತ್ತೆ ಅಳವಡಿಸುವಾಗ ನಿಖರವಾಗಿ ಹಿಂದಿನ ಜಾಗದಲ್ಲಿಯೇ ಬರಲು ಟೇಪರ್ಡ್ ಟ್ರೆಪೆಜೈಡಲ್ ಜಾಯಿಂಟ್ ಬಳಸಲಾಗುತ್ತದೆ. ಡ್ರಿಲ್ಲಿಂಗ್ ಮಶಿನ್ ನಲ್ಲಿ ಡ್ರಿಲ್ ಹೇಗೆ ಒತ್ತಿ ದೃಢವಾಗಿ ಅಳವಡಿಸಲ್ಪಡುತ್ತದೆಯೋ, ಹಾಗೆಯೇ ಟ್ರೂ ತಿರುಗುತ್ತದೆ, ಹಾಗೆಯೇ ಟಿಪ್ ತೆಗೆದು ನಂತರ ಮತ್ತೆ ಅಳವಡಿಸಿದಲ್ಲಿ 0.5 ಮಿ.ಮೀ.ನಲ್ಲಿ ಟ್ರೂ ಅಳವಡಿಸಲ್ಪಡುತ್ತದೆ. ಒಂದು ವೇಳೆ ಜಾ ದೃಢವಾಗಿ ಅಳವಡಿಸಲ್ಪಟ್ಟರೂ ಕೂಡಾ, ಬೋರಿಂಗ್ ಮಾಡುವಾಗ ಉಂಟಾಗುವ ಅಪ್ಪಳಿಸುವಿಕೆಯಿಂದಾಗಿ ಅದು ಸಡಿಲವಾಗಬಾರದು, ಎಂಬುದಕ್ಕೋಸ್ಕರ ಒಂದು ಸ್ಕ್ರೂನ ರಚನೆಯನ್ನು ಮಾಡಲಾಗಿದೆ. ದೃಢವಾಗಿ ಅಳವಡಿಸಲ್ಪಟ್ಟ ಟಿಪ್ ಕೇವಲ ಕೈಯಿಂದಲೇ ತೆಗೆಯುವುದು ಅಸಾಧ್ಯ. ಎಂಟು ತಿಂಗಳ ಕಾಲಾವಧಿಯಲ್ಲಿ ಮಾಡಲಾಗಿರುವ ವಿವಿಧ ಪ್ರಯೋಗಗಳಿಂದ ಕೊನೆಯಲ್ಲಿ ತಕ್ಷಣ ಬದಲಾಯಿಸಬಹುದಾದ ಜಾಗಳನ್ನು (ಕ್ವಿಕ್ ಚೇಂಜ್ ಟಿಪ್ ಜಾಜ್) ತಯಾರಿಸಲಾಯಿತು.
 
 
2_1  H x W: 0 x

3_1  H x W: 0 x 
 
ಈ ಟಿಪ್ ಗಳನ್ನು ಸಾಫ್ಟ್ EN8, ಟಫನ್ಡ್ ಮತ್ತು ಹಾರ್ಡನೆಬಲ್ ಇಂತಹ ಮೂರು ವಿಧಗಳಲ್ಲಿ ತಯಾರಿಸುತ್ತೇವೆ. ಒಂದೇ ಜಾ ಸಾಫ್ಟ್ ಟಿಪ್ಸ್ ಅಳವಡಿಸಿದ ನಂತರ ಸಾಫ್ಟ್ ಜಾ ಎಂದೂ, ಹಾರ್ಡನೆಬಲ್ ಟಿಪ್ ಅಳವಡಿಸಿದ ನಂತರ ಹಾರ್ಡ್ ಜಾ ಎಂದೂ ಬಳಸಲಾಗುತ್ತದೆ. EN8 ಟಫನ್ಡ್ ಟಿಪ್ ಬಳಸಿದ್ದರಿಂದ ಬೋರಿಂಗ್ ಮಾಡುವ ಆವಶ್ಯಕತೆಯು ತುಂಬಾ ಕಡಿಮೆ ಪ್ರಮಾಣದಲ್ಲಿದ್ದು, ಸಮಯದ ಉಳಿತಾಯವನ್ನೂ ಮಾಡಬಹುದು.
 

5_1  H x W: 0 x 
 
ಮೂರು ಟಿಪ್ ಗಳ ಸೆಟ್ ಅಳವಡಿಸಲು ನಾವು ರಟ್ಟಿನ ಸಣ್ಣ ಪೆಟ್ಟಿಗೆಗಳನ್ನು ಕೊಡುತ್ತೇವೆ. ಈ ಪೆಟ್ಟಿಗೆಗಳ ಗಾತ್ರವು ಒಂದು ಜಾಗಿಂತಲೂ ಚಿಕ್ಕದಿರುತ್ತದೆ. ಹಾಗೆಯೇ ಈ ಪೆಟ್ಟಿಗೆಯಲ್ಲಿ ಕಾರ್ಯವಸ್ತುವಿನ ಹೆಸರು ಅದರ ಬೋರ್ ಸೈಜ್ ಮತ್ತು ಮಶಿನ್ ಇತ್ಯಾದಿಗಳನ್ನು ಬರೆಯುವ ವ್ಯವಸ್ಥೆಯು (ಚಿತ್ರ ಕ್ರ. 4) ಇರುವುದರಿಂದ ಯೋಗ್ಯವಾದ ಜಾ ಸೆಟ್ ಗಳನ್ನು ಹುಡುಕುವಲ್ಲಿ ಸಮಯದ ಉಳಿತಾಯವೂ ಆಗುತ್ತದೆ.
 

4_1  H x W: 0 x 
 
ಲಾಭಗಳು
• ಈ ಉತ್ಪಾದನೆಯಿಂದಾಗಿ ಸೆಟಿಂಗ್ ನ ಸಮಯವು ಅರ್ಧಗಂಟೆಯಷ್ಟು ಕಡಿಮೆಯಾಯಿತು.
• ಪ್ರತಿದಿನ ಸೆಟಿಂಗ್ ಬದಲಾಯಿಸುವುದಾದಲ್ಲಿ ಒಂದು ವರ್ಷದಲ್ಲಿ 30 ಸಾವಿರ ರೂಪಾಯಿಗಳನ್ನು ಸೆಟಿಂಗ್ ನ ಸಮಯದಲ್ಲಿಯೇ ಉಳಿಸಬಹುದು. ಇದರ ಕಾರಣವೆಂದರೆ ಸಂಪೂರ್ಣ ಜಾ ಸೆಟ್ ಬದಲಾಯಿಸುವುದಕ್ಕಿಂತ ಟಿಪ್ ಬದಲಾಸುವಲ್ಲಿ ತಗಲುವ ಸಮಯವು ತುಂಬಾ ಕಡಿಮೆ ಇರುತ್ತದೆ.
•135, 165 ಮತ್ತು 200 ಮಿ.ಮೀ. ಈ ಗಾತ್ರದ ಚಕ್ ಗಳಿಗೋಸ್ಕರ ಒಂದೇ ಟಿಪ್ ಬಳಸುವಂತಹ ವ್ಯವಸ್ಥೆಯನ್ನು ಮಾಡಲಾಯಿತು.
•ಈ ಜಾಗಳಿಂದ ಷಟ್ಕೋನದ ಕಾರ್ಯವಸ್ತುಗಳನ್ನು (ಜಾಬ್ ಗಳನ್ನು) ಹಿಡಿಯುವುದೂ ಸಾಧ್ಯವಿದೆ. ಇದರಿಂದಾಗಿ ಪ್ರೀ-ಮಶಿನಿಂಗ್ ನ ಆವಶ್ಯಕತೆಯೂ ಇಲ್ಲದಂತಾಗುತ್ತದೆ.
 
 
6_1  H x W: 0 x
 
ವಿವಿಧ ಕಂಪನಿಗಳ ಚಕ್ ಗಳನ್ನು ಬಳಸಲಾಗುತ್ತಿದ್ದಲ್ಲಿ, ಬೇರೆ ಬೇರೆ ಜಾಗಳನ್ನು ಇಡಬೇಕಾಗುತ್ತದೆ. ಇದರಿಂದಾಗಿ ಜಾಗಳ ಸಂಖ್ಯೆಯು ಹೆಚ್ಚಾಗುತ್ತದೆ. ಆದ್ದರಿಂದ ಚಕ್ ಗಳಿಗೆ ಅನುಸಾರವಾಗಿ ಬೇಸ್ ಜಾ ಬದಲಾಯಿಸಲಾಗುತ್ತದೆ. ಎಲ್ಲ ಜಾಗಳಲ್ಲಿ ಟಿಪ್ಸ್ ಗಳು ಮಾತ್ರ ಯಾವುದೇ ವಿಧದ ಚಕ್ ಗಳಿಗೆ ಅಳವಡಿಸಲ್ಪಡುವಂತಹದ್ದಾಗಿರುತ್ತವೆ.
ಟಿಪ್ ನ ಬೆಲೆಯು ಜಾಗಳ ಬೆಲೆಗಿಂತ 40% ಇರುತ್ತದೆ. ಇದರ ಹೊರತಾಗಿ ಅನೇಕ ಮಶಿನ್ ಗಳಲ್ಲಿ ಅದೇ ಟಿಪ್ ಬಳಸಲ್ಪಡುತ್ತಿರುವುದರಿಂದ ಜಾನಲ್ಲಿ ಮಾಡಲಾಗುವ ಬಂಡವಾಳವೂ 90% ಕಡಿಮೆಯಾಗುತ್ತದೆ. ಕಾರ್ಯವಸ್ತುವಿನ ಕೆಲವು ವಿಶಿಷ್ಟವಾದ ಕೆಲಸಗಳನ್ನು ಬೇರೆ ಬೇರೆ ಮಶಿನ್ ಗಳಲ್ಲಿ ಮಾಡಲು ಒಂದು ಲಕ್ಷ ರೂಪಾಯಿಗಳ ಜಾಗಳು ಬೇಕಾದಲ್ಲಿ, ಅದೇ ಕೆಲಸ ಮಾಡಲು ಬೇಕಾಗುವ ಟಿಪ್ ಗಳ ಬೆಲೆಯು ಕೇವಲ 10 ಸಾವಿರಗಳಷ್ಟು ಇರಬಹುದು.
ಈ ಉತ್ಪಾದನೆಗಳಿಗೋಸ್ಕರ ಸೀಲಂಟ್ ಕಂಪನಿಗೆ ಔದ್ಯೋಗಿಕ ಗುಣಮಟ್ಟಕ್ಕೋಸ್ಕರ ನೀಡಲಾಗುವ ಜಿ. ಎಸ್. ಪಾರಖೆ ಬಹುಮಾನವು ಲಭಿಸಿದೆ.
 
 
 

shashank_1  H x 
ಶಶಾಂಕ ಗದ್ರೆ
ನಿರ್ದೇಶಕರು
ಸೀಲಂಟ್ ಎಂಟರ್ ಪ್ರೈಸೆಸ್ 
9881129109
ಶಶಾಂಕ ಗದ್ರೆ ಇವರು ಸೀಲಂಟ್ ಎಂಟರ್ ಪ್ರೈಸೆಸ್ ಈ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಕಂಪನಿಯು ಕಳೆದ 31 ವರ್ಷಗಳಿಂದ QRC ಕ್ಷೇತ್ರದಲ್ಲಿ ಹೊಸ ಹೊಸ ಉತ್ಪಾದನೆಗಳನ್ನು ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿದ್ದಾರೆ.
 
 
@@AUTHORINFO_V1@@