ತುಂಡಾಗಿರುವ ಟ್ಯಾಪ್ ತೆಗೆಯಲುಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್

@@NEWS_SUBHEADLINE_BLOCK@@

Udyam Prakashan Kannad    23-Apr-2020
Total Views |
 
ಇಂದು ಪ್ರತಿಯೊಬ್ಬ ಉದ್ಯಮಿಗೆ ತಮ್ಮಲ್ಲಿ ಮೆಟಲ್ ಆರ್ಕ್ಡಿಸ್ ಇಂಟಿಗ್ರೇಟರ್ ಅಥವಾ ಸ್ಪಾರ್ಕ್ ಇಂಟಿಗ್ರೇಟರ್ ಮಶಿನ್ ಇರಬೇಕೆಂದು ಅನಿಸುತ್ತದೆ. ಅದಕ್ಕೆ ಅನೇಕ ಕಾರಣಗಳೂ ಇವೆ.
 

1 2_2  H x W: 0 
 
ಈ ಮಶಿನ್ ನ ಪ್ರಾರಂಭವು ಹೇಗಾಯಿತು, ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಆವಶ್ಯಕವಾಗಿದೆ. ಕಾರಣ 1966 ರಲ್ಲಿ ಒಬ್ಬ ಸ್ಕ್ರೇಪ್ ಡೀಲರ್ ಕಡೆಗೆ ಒಂದು ಮಶಿನ್ ಬಂದಿತ್ತು. ಅದು ಯಾವುದೇಕೆಲಸವಿಲ್ಲದೇಹಾಗೆಯೇಬಿದ್ದಿತ್ತು. ಈ ಮಶಿನ್ ನ ಅವಸ್ಥೆ ಏನಿದೆ ಎಂಬುದು ಯಾರಿಗೂತಿಳಿದಿರಲಿಲ್ಲ. ಅಲ್ಲದೇ ಈ ಮಶಿನ್ ನ ಉಪಯೋಗ ಏನು ಎಂಬುದೂತಿಳಿದಿರಲಿಲ್ಲ. ಈ ಮಶಿನ್ ನಲ್ಲಿ ನೋಡಿದಾಗ ಡ್ರಿಲ್ಲಿಂಗ್ ಮಶಿನ್ ನಂತೆಕಾಣುತ್ತಿತ್ತು. ಆದರೆಇದರಲ್ಲಿ ಸ್ಪಿಂಡಲ್ ಇರಲಿಲ್ಲ. ಆ ಮಶಿನ್ ನಲ್ಲಿ ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಕಾಣುತ್ತಿತ್ತು. ನಮ್ಮ ತಂದೆಯವರಿಗೆ ಇಲೆಕ್ಟ್ರಾನಿಕ್ಸ್ ಕುರಿತು ತಿಳಿವಳಿಕೆ ಇದೆ ಎಂದು ಅರಿತಿರುವರು ನಮ್ಮಲ್ಲಿ ಬಂದರು. ನಮ್ಮ ತಂದೆಯವರಿಗೂ ಮಶಿನ್ ಏನು, ಎಂಬುದು ಆಗ ತಿಳಿದಿರಲಿಲ್ಲ. ಆದರೆ ಅವರು ಈ ಮಶಿನ್ ನ ಕುರಿತು ವಿವರವಾಗಿ ಮತ್ತು ಸೂಕ್ಷ್ಮವಾಗಿ ಪರಿಶೀಲಿಸಿ 3 ರಿಂದ 4 ತಿಂಗಳ ಕಾಲಾವಧಿಯಲ್ಲಿ ಅದನ್ನು ಕಾರ್ಯಗತಗೊಳಿಸಿದರು. ಆದರೆ ಮಶಿನ್ ಯಾವ ಕೆಲಸಕ್ಕೋಸ್ಕರ ಉಪಯೋಗಿಸುವುದು ಎಂದು ತಿಳಿಯಲಿಲ್ಲ. ನಂತರ ಅವರು ಅಮೇರಿಕಾದಲ್ಲಿರುವ ತಮ್ಮ ಸ್ನೇಹಿತರಿಕೆ ಮಶಿನ್ ನ ಫೊಟೋ ಕಳುಹಿಸಿದರು. ಅವರಿಗೆ ಈ ಮಶಿನ್ ನ ಕುರಿತಾದ ಮಾಹಿತಿಯನ್ನು ಕೇಳಿದರು. ಅವರು ನೀಡಿರುವ ಮಾಹಿತಿಯ ಪ್ರಕಾರ ಈ ಮಶಿನ್ ನ ಹೆಸರು ಸ್ಪಾರ್ಕ್ ಎಕ್ಸ್ ಟ್ರ್ಯಾಕ್ಟಿಂಗ್ ಮಶಿನ್ ಎಂಬ ತಿಳಿಯಿತು. ನಮ್ಮ ತಂದೆಯವರ ಸ್ನೇಹಿತರು ಈ ಮಶಿನ್ ನ ಕುರಿತಾದ ಒಂದು ಲೇಖನವನ್ನೂ ಕಳುಹಿಸಿದರು. ಇದರಿಂದ ಈ ಮಶಿನ್ ಏನೇನು ಕೆಲಸ ನಿರ್ವಹಿಸಬಲ್ಲದು ಎಂಬ ವಿವರಗಳು ತಿಳಿದವು. ಅದಕ್ಕೆ ಅನುಸಾರವಾಗಿ ನಮ್ಮ ತಂದೆಯವರು ಸ್ವಂತ ಒಂದು ಹೊಸ ಮಶಿನ್ ತಯಾರಿಸಿದರು. ಈ ಮಶಿನ್ ಜನವರಿ 1968 ರಲ್ಲಿ ಕಾರ್ಯಗತವಾಯಿತು.
 
ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್
 
ಪ್ರಾರಂಭದಲ್ಲಿ ಈ ಮಶಿನ್ ನಾವು ನಮ್ಮ ಮನೆಯಲ್ಲಿಯೇ ಇಟ್ಟಿದ್ದೆವು. ಕಾರಣ ಆಗ ನಮ್ಮಲ್ಲಿ ವರ್ಕ್ ಶಾಪ್ ನ ವ್ಯವಸ್ಥೆಯು ಇರಲಿಲ್ಲ. ಈ ಮಶಿನ್ ನ ಜಾಬ್ ವರ್ಕ್ ಮಾಡಲು ಬಳಸಲು ಪ್ರಾರಂಭಿಸಿದೆವು. ಕಾರ್ಯವಸ್ತುಗಳಿಗೆ ಟ್ಯಾಪಿಂಗ್ ಮಾಡುವಾಗ ಟ್ಯಾಪ್ ನಡುವೆಯೇ ತುಂಡಾಗಿರುವುದರಿಂದ ಇಂತಹ ಕಾರ್ಯವಸ್ತುಗಳ ಸಾಲ್ವೆಜ್ ಮಾಡಲು ಈ ಮಶಿನ್ ಉಪಯೋಗಿಸಲು ಪ್ರಾರಂಭಿಸಿದೆವು. ಟ್ಯಾಪಿಂಗ್ ಮಾಡುವಾಗ ಅನೇಕ ಬಾರಿ ಟ್ಯಾಪ್ ಕಾರ್ಯವಸ್ತುಗಳಲ್ಲಿ ಸಿಲುಕುತ್ತದೆ ಮತ್ತು ಅದು ತುಂಡಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆ ಟ್ಯಾಪ್ ತೆಗೆಯಲು ಈ ಮಶಿನ್ ಬಳಸಲಾಯಿತು. ನಮಗೆ ಟಾಟಾ ಮೋಟರ್ಸ್, ಕಿರ್ಲೋಸ್ಕರ್ ಇಂತಹ ಕಂಪನಿಗಳು ಕಾರ್ಯವಸ್ತುಗಳನ್ನು ಕಳುಹಿಸಲಾರಂಭಿಸಿದರು.
 
ಈ ಮಧ್ಯೆ ಟಾಟಾ ಮೋಟರ್ಸ್ ಇಂತಹ ಒಂದು ಮಶಿನ್ ಅಮೇರಿಕಾದಿಂದ ತಂದಿದ್ದಾರೆ, ಎಂಬುದೂ ನಮಗೆ ತಿಳಿಯಿತು. ನಾವು ಸಂಪೂರ್ಣವಾಗಿ ನಮ್ಮ ದೇಶದಲ್ಲಿ ತಯಾರಿಸಿರುವ ಇಂತಹ ಮಶಿನ್ ನಾವೇ ತಯಾರಿಸಿದ್ದೇವೆ, ಎಂಬುದನ್ನು ಟಾಟಾ ಮೋಟರ್ಸ್ ಗೆ ತಿಳಿಸಿದೆವು. ತಾವು ತಮ್ಮ ಕಾರ್ಯವಸ್ತುಗಳನ್ನು ನಮ್ಮಲ್ಲಿಗೆ ಜಾಬ್ ವರ್ಕ್ ಗೋಸ್ಕರ ಕಳುಹಿಸಬಹುದು, ಒಂದು ವೇಳೆ ಈ ಮಶಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ, ಎಂಬುದು ನಿಮಗೆ ಮನವರಿಕೆಯಾದಲ್ಲಿ ತಾವು ಈ ಮಶಿನ್ ಖರೀದಿಸಬಹುದು, ಎಂದು ನಾವು ಅವರಿಗೆ ತಿಳಿಸಿದೆವು. ಟಾಟಾ ಮೋಟರ್ಸ್ ಇವರು ನಮ್ಮಿಂದ ಮೊದಲನೆಯದಾದ ಮಶಿನ್ ಖರೀದಿಸಿದರು. ಈ ರೀತಿಯಲ್ಲಿ 1969 ರಲ್ಲಿ ಎರಡು ಮಶಿನ್ ಗಳನ್ನು ಮಾರಾಟ ಮಾಡಿ ನಾವು ಶುಭಾರಂಭವನ್ನು ಮಾಡಿದೆವು. ಇದರಿಂದಾಗಿ ನಮಗೆ 1969 ರಲ್ಲಿ ಭಾರತ ಸರ್ಕಾರದ ವತಿಯಿಂದ ಇಂಪೋರ್ಟ್ ಸಬ್ ಸ್ಟಿಟ್ಯೂಶನ್ ಪುರಸ್ಕಾರದಿಂದ ಗೌರವಿಸಲಾಯಿತು. 1971 ರಲ್ಲಿ ನಮಗೆ ಇದೇ ಮಶಿನ್ ಗೋಸ್ಕರ ಪಾರಖೆ ಪುರಸ್ಕಾರವೂ ಲಭಿಸಿತು.
 

1 2_1  H x W: 0 

3_1  H x W: 0 x 
 
1971 ರಿಂದ 1983 ಈ ಕಾಲಾವಧಿಯಲ್ಲಿ ನಾವು 300 ಮಶಿನ್ ಗಳನ್ನು ಭಾರತಾದ್ಯಂತ ಮಾರಾಟ ಮಾಡಿದೆವು. 1983 ರಲ್ಲಿ ನಾವು ಇನ್ನಷ್ಟು ಬೇರೆ ವಿಧದ ಮಶಿನ್ ಗಳನ್ನು ತಯಾರಿಸಲು ಪ್ರಾರಂಭಿಸಿದೆವು. ಇದೇ ಅವಧಿಯಲ್ಲಿ ನಾವು ಈ ಮಶಿನ್ ಗಳನ್ನು ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಎಂದು ಹೆಸರಿಸಿದೆವು. ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಗಿರುವ ಸುಧಾರಣೆ ಮತ್ತು ಈ ವಿಧದ ಮಶಿನ್ ಗಳಿಗೆ ಇರುವ ಬೇಡಿಕೆಯನ್ನು ಗಮನಿಸಿ ನಾವು ಬಹು ದೊಡ್ಡ ಪ್ರಮಾಣದಲ್ಲಿ ಈ ಮಶಿನ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿದೆವು. ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳು ಮತ್ತು ಆವಶ್ಯಕತೆಗಳಿಗೆ ಅನುಸಾರವಾಗಿ ಮಶಿನ್ ಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿದೆವು. ಈ ಹಿಂದೆ ಕೇವಲ ತುಂಡಾಗಿರುವ ಟ್ಯಾಪ್ ಅಥವಾ ಡ್ರಿಲ್ ತೆಗೆಯುವುದು ಎಂಬುದನ್ನು ಅಪೇಕ್ಷಿಸುತ್ತಿದ್ದರು. ಆದರ ಇತ್ತಿಚೇಗೆ ಮಾತ್ರ ಬೃಹತ್ ಗಾತ್ರದ ಶಿಪ್ ಗಳಲ್ಲಿ ತುಕ್ಕು ಹಿಡಿದಿರುವ ಬೋಲ್ಟ್ ಗಳನ್ನು ತೆಗೆಯಲೂ ಇಂತಹ ಮಶಿನ್ ಗಳ ಬೇಡಿಕೆಯು ಬರಲಾರಂಭಿಸಿತು. ಇದರಿಂದಾಗಿ ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಅಂದರೆ ಸ್ಪಾಕ್ರೋನಿಕ್ಸ್ ಎಂಬ ಸಮೀಕರಣವೇ ಉಂಟಾಯಿತು. ಈ ರೀತಿಯಲ್ಲಿ ನಮ್ಮ ಬ್ರೆಂಡ್ ತಯಾರಾಯಿತು.
 
ಮಶಿನ್ ಹೇಗೆ ನಡೆಯುತ್ತದೆ
 
EDM ಟೆಕ್ನಾಲಾಜಿಯನ್ನು 1962-1965 ರ ಕಾಲಾವಧಿಯಲ್ಲಿ ರಶಿಯಾ ದೇಶದಲ್ಲಿ ಕಂಡುಹಿಡಿಯಲಾಯಿತು. ಈ ತತ್ವದ ಉಪಯೋಗವನ್ನು ಮಾಡಿ ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಮಶಿನ್ ನ ಉದಯವಾಯಿತು.
 
ತುಂಡಾಗಿರುವ ಟೂಲ್ ಗಳನ್ನು ತೆಗೆಯಲು ತುಂಡಾಗಿರುವ ಟ್ಯಾಪ್ ಮತ್ತು ಮಶಿನ್ ನಲ್ಲಿರುವ ಇಲೆಕ್ಟ್ರೋಡ್ ಇದರಲ್ಲಿ ಇಲೆಕ್ಟ್ರಿಕ್ ಸ್ಪಾರ್ಕ್ ತಯಾರಿಸಲಾಗುತ್ತದೆ ಮತ್ತು ಅದರ ಉಷ್ಣಾಂಶದಿಂದ ತುಂಡಾಗಿರುವ ಡ್ರಿಲ್ ಅಥವಾ ಟ್ಯಾಪ್ ನ ಸೂಕ್ಷ್ಮವಾದ ತುಂಡು ಮಾಡಲಾಗುತ್ತದೆ, ಅಂದರೆ ಹುಡಿ ಮಾಡಲಾಗುತ್ತದೆ. ಆದ್ದರಿಂದ ಈ ಮಶಿನ್ ಗೆ ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಎಂಬ ಹೆಸರನ್ನು ನೀಡಲಾಯಿತು.
 

4 5_2  H x W: 0 
 
ಈ ಮಶಿನ್ ಬಳಸಲು ತುಂಬಾ ಸುಲಭ ಮತ್ತು ಸುರಕ್ಷಿತವಾಗಿದೆ. ಯಾವ ಟ್ಯಾಪ್ ಗೋಸ್ಕರ ಯಾವ ಇಲೆಕ್ಟ್ರೋಡ್ ಬಳಸುವುದು ಎಂಬುದರ ಕುರಿತಾದ ಕೋಷ್ಟಕವನ್ನು ಮಶಿನ್ ನ ಮೇಲೆಯೇ ನೀಡಲಾಗಿದೆ. ಈ ಕೋಷ್ಟಕಕ್ಕೆ ಅನುಸಾರವಾಗಿ ಯೋಗ್ಯವಾದ ಇಲೆಕ್ಟ್ರೋಡ್ ಬಳಸಿದಲ್ಲಿ ಕೆಲಸವು ತುಂಬಾ ನಿರ್ದೋಷವಾಗಿ ಆಗುತ್ತದೆ. ಉದಾಹರಣೆ, M12 ಟ್ಯಾಪ್ ಗೋಸ್ಕರ 7 ಮಿ.ಮೀ.ನ ಇಲೆಕ್ಟ್ರೋಡ್, M10 ಟ್ಯಾಪ್ ಗೋಸ್ಕರ 6 ಮಿ.ಮೀ.ನ ಇಲೆಕ್ಟ್ರೋಡ್ ಬಳಸಬೇಕು. ಈ ಮಾಹಿತಿಯನ್ನು ಮಶಿನ್ ನ ಮೇಲೆ ನೀಡಲಾಗಿದೆ.
 
ಕಾರ್ಯವಸ್ತುವನ್ನು ಮಶಿನ್ ನ ಟೇಬಲ್ ನಲ್ಲಿ ಯೋಗ್ಯವಾಗಿ ಸ್ವಚ್ಛಗೊಳಿಸಿ ಇಡಲಾಗುತ್ತದೆ. ಯಾವ ರಂಧ್ರದಲ್ಲಿ ತುಂಡಾಗಿರುವ ಟ್ಯಾಪ್ ತೆಗೆಯಬೇಕೋ ಆ ರಂಧ್ರ ಮತ್ತು ಇಲೆಕ್ಟ್ರೋಡ್ ಸೆಟಿಂಗ್ ಮಾಡಿ ಸೆಂಟ್ರಿಕ್ ಮಾಡಲಾಗುತ್ತದೆ. ನಂತರ ಮಶಿನ್ ಆನ್ ಮಾಡಿ ಉಂಟಾಗುವ ಸ್ಪಾರ್ಕ್ ನಿಂದ ತುಂಡಾಗಿರುವ ಟ್ಯಾಪ್ ಸುಟ್ಟು ಇಲ್ಲದಂತೆ ಮಾಡಲಾಗುತ್ತದೆ.
 
ಈ ರೀತಿಯಲ್ಲಿ ಯಾವ ಮಶಿನ್ ಕೇವಲ ಜಿಜ್ಞಾಸೆಗೋಸ್ಕರ ಮತ್ತು ಯೋಗಾಯೋಗದಿಂದ ಸಂಶೋಧಿಸಲಾಯಿತೋ, ಅದೇ ಉದ್ಯಮವು ಇಂದು ಹೆಸರುವಾಸಿಯಾಯಿತು.
 
ಮಶಿನ್ ನ ವಿವಿಧ ಉಪಯೋಗಗಳು
 
ಈ ಮಶಿನ್ ಯಾವಾಗಲೂ ಉತ್ಪಾದನೆಯೊಂದಿಗೆ ಹೊಂದಾಣಿಸಲ್ಪಟ್ಟಿಲ್ಲ, ಆದರೆ ಇದರ ಬಳಕೆ ಮಾತ್ರ ತುಂಬಾ ಅದ್ವಿತೀಯವಾಗಿದೆ. ಯಾವುದೊಂದು ಕ್ರ್ಯಾಂಕ್ ಶಾಫ್ಟ್ ನಲ್ಲಿ ಡ್ರಿಲ್ ಅಥವಾ ಟ್ಯಾಪ್ ತುಂಡಾದಲ್ಲಿ ಮತ್ತು ನಾವು ಒಂದು ವೇಳೆ ಈ ಟೂಲ್ ಸರಿಯಾಗಿ ಹೊರಗೆ ತೆಗೆಯುವಲ್ಲಿ ಸಫಲರಾದಲ್ಲಿ ಆ ಕ್ರ್ಯಾಂಕ್ ಶಾಫ್ಟ್ ಉಳಿಸಬಲ್ಲೆವು. ಅಂದರೆ ಒಂದು ತುಂಡಾಗಿರುವ ಡ್ರಿಲ್ ನಿಂದಾಗಿ ವ್ಯರ್ಥವಾಗುವ ಸಾವಿರಾರು ರೂಪಾಯಿಗಳ ಕ್ರ್ಯಾಂಕ್ ಶಾಫ್ಟ್ ಗಳನ್ನು ಉಳಿಸಬಲ್ಲೆವು. ಇಂತಹ ಅತ್ಯುಪಯುಕ್ತವಾದ ಮಶಿನ್ ಗೋಸ್ಕರ ಹೂಡಿರುವ ಬಂಡವಾಳದ ಮರುಪಾವತಿಯೂ ತಕ್ಷಣ ಲಭಿಸುತ್ತದೆ.
 
ಅನೇಕ ಗ್ರಾಹಕರು ದೃಢ ಮತ್ತು ಹೆಚ್ಚು ದಪ್ಪವಿರುವ ಕಾರ್ಯವಸ್ತುಗಳಲ್ಲಿ ಸ್ಲಾಟ್ ಮಾಡಲೂ ಈ ಮಶಿನ್ ಗಳನ್ನು ಬಳಸುತ್ತಾರೆ. ಅಂದರೆ ಈ ಸ್ಲಾಟ್ ಗಳಿಗೆ ತುಂಬಾ ನಿಖರತೆಯ ಆವಶ್ಯಕತೆ ಇರುವುದಿಲ್ಲ. ಒಮ್ಮೆ BHEL ಕಂಪನಿಯ 10 ಮೀಟರ್ ಎತ್ತರದ ಬಾಯ್ ಲರ್ ನಲ್ಲಿ ಒಂದು ಫೈಲ್ ತುಂಡಾಗಿ ಸಿಲುಕಿತ್ತು. ಆಗ ನಮ್ಮ ಪೋರ್ಟೆಬಲ್ ಮಶಿನ್ ಕ್ರೇನ್ ನ ಸಹಾಯದಿಂದ ಬಾಯ್ ಲರ್ ನಲ್ಲಿ ಅದನ್ನು ಬಳಸಿ ಆ ಫೈಲ್ ಪುಡಿ ಮಾಡಿ ಹೊರಗೆ ತೆಗೆಯುವಲ್ಲಿ ಯಶಸ್ಸನ್ನು ಪಡೆದೆವು. ಈ ಮಶಿನ್ ಯಾವುದೇ ಕಾರ್ಯವಸ್ತುವಿನಲ್ಲಿ ಅಳವಡಿಸಿ ಕೆಲಸ ಮಾಡುವುದು ಸಾಧ್ಯವಾಗಿದೆ.
 
ಕಾರ್ಬೈಡ್ ಟ್ಯಾಪ್ ನ ಬಳಕೆಯ ಪ್ರಾರಂಭವಾದ ನಂತರ ಟ್ಯಾಪ್ ಗಳು ತುಂಡಾಗುವ ಪ್ರಮಾಣವು ಕಡಿಮೆಯಾಯಿತು. ಆದರೆ ಟ್ಯಾಪ್ ತುಂಡಾದಲ್ಲಿ ಅದನ್ನು ಯಾವಾಗಲೂ ಬಳಸುವ ರೀತಿಯಲ್ಲಿ ತೆಗೆಯುವುದು ಅಸಾಧ್ಯವಾಯಿತು. ಉದಾಹರಣೆ, ತುಂಡಾಗಿರುವ ಟ್ಯಾಪ್ ಗೆ ರಾಡ್ ವೆಲ್ಡ್ ಮಾಡಿ ಟ್ಯಾಪ್ ತೆಗೆಯುವುದು ಅಸಾಧ್ಯವಾಗಿತ್ತು. ಕಾರ್ಬೈಡ್ ಟ್ಯಾಪ್ ನ ಬಳಕೆಯು ಎಲ್ಲೆಲ್ಲಿ ಪ್ರಾರಂಭವಾಯಿತೋ, ಅಲ್ಲಲ್ಲಿ ಈ ಮಶಿನ್ ಗೆ ಯಾವುದೇ ರೀತಿಯ ಉಪಾಯವೇ ಇರಲಿಲ್ಲ. ಡ್ರಿಲ್ ಮತ್ತು ಟ್ಯಾಪ್ ಎಲ್ಲಿಯ ತನಕ ಬಳಸಲಾಗುತ್ತಿತ್ತೋ, ಆ ತನಕ ಮಶಿನ್ ನ ಬಳಕೆಯೂ ಅನಿವಾರ್ಯವಾಗಿತ್ತು.
 
ಕಲ್ಲುಗಳಲ್ಲಿ ರಂಧ್ರಗಳನ್ನು ಮಾಡಲು ಬಳಸಲಾಗುತ್ತಿರುವ ಟೂಲ್ ಗಳಲ್ಲಿ ಕಾರ್ಬೈಡ್ ಬಟನ್ ಗಳಿರುತ್ತವೆ ಮತ್ತು ಸ್ವಲ್ಪ ಸಮಯದ ನಂತರ ಅವುಗಳ ಸವೆತವಾಗುವುದರಿಂದ ಅವುಗಳನ್ನು ತೆಗೆದು ಹೊಸದಾಗಿ ಅಳವಡಿಸಬೇಕಾಗುತ್ತದೆ. ಈ ಬಟನ್ ಪ್ರೆಸ್ ಫಿಟ್ ಅಳವಡಿಸಿ ಬ್ರೆಝ್ ಮಾಡಲಾಗಿರುತ್ತದೆ. ಇದನ್ನು ತೆಗೆಯಲು ಈ ಮಶಿನ್ ಬಳಸಲಾಗುತ್ತದೆ. ಬೆಂಗಳೂರಿನಲ್ಲಿರುವ ಒಂದು ಕಂಪನಿಯು ಕೇವಲ ಇದೇ ಕೆಲಸಕ್ಕೋಸ್ಕರ ಮಶಿನ್ ಖರೀದಿಸಿದರು. ಅವರು ಜಾಬ್ ವರ್ಕ್ ಕೂಡಾ ಮಾಡುತ್ತಾರೆ. ಬೃಹತ್ ಗಾತ್ರದ ಮಶಿನ್ ಗಳನ್ನು ಹೋಲಿಸಿದಲ್ಲಿ ಚಿಕ್ಕ ಮಶಿನ್ ಗಳಿಗೆ ತುಂಡಾಗಿರುವ ಟೂಲ್ ತೆಗೆಯಲು ಹೆಚ್ಚು ಕಾಲಾವಧಿಯು ಬೇಕಾಗುತ್ತದೆ.
 
ಉಪಲಬ್ಧವಿರುವ ಪರ್ಯಾಯಗಳು
 
ಸದ್ಯಕ್ಕೆ ನಾವು ಸುಮಾರು 300 ರಿಂದ 350 ಅನೇಕ ವಿಧದ ಮಶಿನ್ ಗಳನ್ನು ತಯಾರಿಸುತ್ತಿದ್ದೇವೆ. ಅದರಲ್ಲಿ ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಮಶಿನ್ ನ ಪಾಲು 30 ರಿಂದ 40 ಗಳಷ್ಟಿದೆ. ಇದರ ಉತ್ಪಾದನೆಯ ಪ್ರಮಾಣವು ಕಡಿಮೆಯಾಗಿದೆ. ಅದಕ್ಕೆ ಈ ಕೆಳಗಿನ ಮೂರು ಕಾರಣಗಳಿವೆ.
1.ಒಂದೇ ಶಾಪ್ ನಲ್ಲಿ ಇದೊಂದೇ ಮಶಿನ್ ಸಾಕಾಗುತ್ತದೆ.
2.ಈ ಮಶಿನ್ ನ ಬಾಳಿಕೆಯು 30 ವರ್ಷಗಳಷ್ಟಿದೆ.
3.ಪೋರ್ಟೆಬಲ್ ಮಶಿನ್ ಹಲವೆಡೆ ಬಳಸಬಹುದು. ಇದರಿಂದಾಗಿ ಕಾರ್ಯವಸ್ತು ಮಶಿನ್ ನ ಹತ್ತಿರ ಒಯ್ಯುವ ಆವಶ್ಯಕತೆ ಇರುವುದಿಲ್ಲ.
 
ನಾವು ಮೂರು ವಿವಿಧ ಸಾಮರ್ಥ್ಯವಿರುವ ಮೆಟಲ್ ಆರ್ಕ್ ಡಿಸ್ ಇಂಟಿಗ್ರೇಟರ್ ಮಶಿನ್ ತಯಾರಿಸುತ್ತೇವೆ.
1.ಪವರ್ 03 KVA ಇಲೆಕ್ಟ್ರೋಡ್ ಚಟುವಟಿಕೆ 150 ಮಿ.ಮೀ.
2.ಪವರ್ 10 KVA ಇಲೆಕ್ಟ್ರೋಡ್ ಚಟುವಟಿಕೆ 200 ಮಿ.ಮೀ.
3.ಪವರ್ 20 KVA ಇಲೆಕ್ಟ್ರೋಡ್ ಚಟುವಟಿಕೆ 250 ಮಿ.ಮೀ.
 

4 5_1  H x W: 0 
 
ಈ ಮಶಿನ್ ನ ಬೆಲೆಯು ಸಾಮಾನ್ಯವಾಗಿ 4.5 ರಿಂದ 6.5 ಲಕ್ಷಗಳಷ್ಟಿದೆ. ಇದರಿಂದಾಗಿ ಸಣ್ಣ ಕೈಗಾರಿಕೋದ್ಯಮಿಗಳು ಈ ಮಶಿನ್ ಖರೀದಿಸುತ್ತಿರಲಿಲ್ಲ. ಆದರೆ ಈಗ ಅವರಿಗೆ ಈ ಮಶಿನ್ ಗಳ ಉಪಯುಕ್ತತೆಯ ಅರಿವಾಗಿದ್ದರಿಂದ ಅವರಿಂದಲೂ ಬೇಡಿಕೆಯು ಬರಲಾರಂಭಿಸಿತು. ಕಾರಣ ಅನೇಕರು ಈ ಮಶಿನ್ ಜಾಬ್ ವರ್ಕ್ ಮಾಡಲು ಬಳಸಲಾರಂಭಿಸಿದರು. ಉದಾಹರಣೆ, ಹಾರ್ಡ್ ಪ್ಲೇಟ್ ನಲ್ಲಿ ಹಾಗೆಯೇ ನೈಟ್ರೈಡಿಂಗ್ ನ ಕೋಟಿಂಗ್ ಮಾಡಿರುವ ಕಾರ್ಯವಸ್ತುವಿನಲ್ಲಿ ಸ್ಕ್ರೂಗೋಸ್ಕರ ರಂಧ್ರಗಳನ್ನು ಮಾಡುವುದು ಮತ್ತು ಅದರ ಕೌಂಟರ್ ಬೋರ್ ಮಾಡುವುದು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಕೇವಲ ಈ ಮಶಿನ್ ಒಂದು ಪರ್ಯಾಯವೆಂದು ಉಪಲಬ್ಧವಿದೆ.
 
ಈ ಕ್ಷೇತ್ರದಲ್ಲಿ 6 ಮಿ.ಮೀ.ನಿಂದ 12 ಮಿ.ಮೀ. ಈ ರೇಂಜ್ ನಲ್ಲಿ ಮಶಿನ್ ತಯಾರಿಸುವಂತಹ ಸುಮಾರು 10 ರಿಂದ 12 ಕಂಪನಿಗಳಿವೆ. ಆದರೆ 6 ಮಿ.ಮೀ. ನಿಂದ 40 ಮಿ.ಮೀ. ರೇಂಜ್ ನ ಮಶಿನ್ ಗೋಸ್ಕರ ಜಗತ್ತಿನಾದ್ಯಂತ ಒಂದೆರಡು ಕಂಪನಿಗಳಿವೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ನಮ್ಮೊಂದಿಗೆ ಸ್ಪರ್ಧಿಸುವವರು ತುಂಬಾ ಕಡಿಮೆ. ಆದರೂ ಕೂಡಾ ನಾವು ಗ್ರಾಹಕರಿಂದ ಬರುತ್ತಿರುವ ಬೇಡಿಕೆಗಳ ಕುರಿತು ವಿಚಾರ ಮಾಡುತ್ತೇವೆ ಮತ್ತು ಅದಕ್ಕೆ ತಕ್ಕಂತೆ ನಾವು ನಿರಂತರವಾಗಿ ಮಶಿನ್ ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿರುತ್ತೇವೆ.
 
ಉದಾಹರಣೆ
 
ಪುಣೆಯಲ್ಲಿರುವ ಅಲ್ಟ್ರಾ ಇಂಜಿನಿಯರ್ಸ್ ಈ ಕಂಪನಿಯಲ್ಲಿ ಮೆಟರ್ ಆರ್ಕ್ ಡಿಸ್ ಇಂಟಿಗ್ರೇಟರ್ ಈ ಮಶಿನ್ ಬಳಸಲಾಗುತ್ತಿದೆ. ಅಲ್ಟ್ರಾ ಕಂಪನಿಯ ಚಂದ್ರಕಾಂತ ಥೋರಾತ್ ಹೇಳುತ್ತಾರೆ, ಟ್ಯಾಪ್ ಕಾರ್ಯವಸ್ತುವಿನಲ್ಲಿ ತುಂಡಾಗುವಾಗ ಅದನ್ನು ಹೊರಗೆ ತೆಗೆಯಲು ಪ್ರಮುಖವಾಗಿ ಈ ಮಶಿನ್ ನ ಉಪಯೋಗವಾಗುತ್ತದೆ. ಈ ಮಶಿನ್ ನಿಂದಾಗಿ ಯಾವುದೇ ವಿಧದ ಕಾರ್ಯವಸ್ತು ಹಾಳಾಗದೇ ಟ್ಯಾಪ್ ತೆಗೆಯುವುದು ಸಹಜವಾಗಿ ಸಾಧ್ಯವಾಗುತ್ತದೆ. ಇದರೊಂದಿಗೆ ನಾವು ಒಂದು ಪೋರ್ಟೆಬಲ್ ಮಶಿನ್ ಕೂಡಾ ಖರೀದಿಸಿದ್ದೇವೆ. ನಮ್ಮ ಎಲ್ಲ ಪ್ಲಾಂಟ್ ಗಳಲ್ಲಿ ಎಲ್ಲ ಜಾಬ್ ಗಳಿಗೆ ಇವುಗಳಲ್ಲಿ ಒಂದು ಮಶಿನ್ ನಲ್ಲಿ ದುರಸ್ತಿ ಮಾಡಲಾಗುತ್ತದೆ.
 
ನಮ್ಮಲ್ಲಿರುವ ಕಾರ್ಯವಸ್ತುವಿನ ಬೆಲೆಯು ತುಂಬಾ ಹೆಚ್ಚಾಗಿರುವುದರಿಂದ ಒಂದು ಟ್ಯಾಪ್ ತುಂಡಾದಲ್ಲಿ ಕಾರ್ಯವಸ್ತು ಎಸೆಯುವುದು ಪೂರೈಸುವುದಿಲ್ಲ. ಹಾಗೆಯೇ ಹೊಸ ಕಾರ್ಯವಸ್ತುವನ್ನು ತಯಾರಿಸುವುದೂ ವೇಳೆಯ ದೃಷ್ಟಿಯಲ್ಲಿ ಸೂಕ್ತವಿಲ್ಲಿ. ಇದರಿಂದಾಗಿ ಕಾರ್ಯವಸ್ತುವಿನ ಯಾವುದೇ ವಿಧದ ನಷ್ಟವಾಗಬಾರದಂತೆ ಟ್ಯಾಪ್ ತೆಗೆಯುವುದಕ್ಕೆ ತುಂಬಾ ಮಹತ್ವವಿದೆ. ನಮ್ಮಲ್ಲಿ 1.5’’ (M40) ತನಕದ ಟ್ಯಾಪ್ ಗಳನ್ನು ತೆಗೆಯಲು ಈ ಮಶಿನ್ ಬಳಸಲಾಗುತ್ತದೆ. ಈ ಕೆಲಸವನ್ನು ಮಾಡುತ್ತಿರುವಾಗ ತುಂಡಾಗಿರುವ ಟ್ಯಾಪ್ ಮತ್ತು ಇಲೆಕ್ಟ್ರೋಡ್ ಸೆಂಟ್ರಿಕ್ ಆಗಿರುವುದು ಮಹತ್ವದ್ದಾಗಿದೆ.
 
ಕಾರ್ಯವಸ್ತುವಿನಲ್ಲಿ ಟ್ಯಾಪ್ ತುಂಡಾಗಿರುವ ರಂಧ್ರಗಳು ಓರೆಯಾಗಿದ್ದಲ್ಲಿ ಟಿಲ್ಟಿಂಗ್ ಹೆಡ್ ಬಳಸಿ ರಂಧ್ರ ಮತ್ತು ಇಲೆಕ್ಟ್ರೋಡ್ ಒಂದೇ ರೇಖೆಯಲ್ಲಿ ತರಲಾಗುತ್ತದೆ. ಟೇಬಲ್ ಅಲುಗಾಡಿಸಿಯೂ ಹೊಂದಾಣಿಕೆ ಮಾಡುವುದು ಸಾಧ್ಯವಿದೆ. ಆದರೆ ಆ ಸಮಯದಲ್ಲಿ ಪರಿಸ್ಥಿತಿಗೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ. ಕಾರ್ಯವಸ್ತುವಿನಲ್ಲಿ ಮೊದಲು ಮಾಡಿರುವ ಥ್ರೆಡ್ ಹಾಳಾಗುವುದಿಲ್ಲ, ಕಾರಣ ಬದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಟೀರಿಯಲ್ ಉಳಿಸಿ ಒಳಗಿನ ಟೂಲ್ ನ ಎಲ್ಲ ಮಟೀರಿಯಲ್ ಸುಟ್ಟು ತೆಗೆಯಲಾಗುತ್ತದೆ. ಪೊರ್ಟೆಬಲ್ ಮಶಿನ್ ದೊಡ್ಡ ಕಾರ್ಯವಸ್ತುಗಳ ಕೆಲಸ ಮಾಡಲು ಬಳಸಲಾಗುತ್ತದೆ. ಇದಕ್ಕೋಸ್ಕರ ಅದಕ್ಕೆ ಮ್ಯಾಗ್ನೆಟಿಕ್ ಬೇಸ್ ನೀಡಲಾಗಿದೆ ಮತ್ತು ಇದರಿಂದಾಗಿ ಮಶಿನ್ ಕಾರ್ಯವಸ್ತುವಿನಲ್ಲಿ ದೃಢವಾಗಿ ಅಳವಡಿಸಲ್ಪಡುತ್ತದೆ. ಸಾಮಾನ್ಯವಾಗಿ ವಾರಕ್ಕೆ ಒಂದರಿಂದ ಎರಡು ಕಾರ್ಯವಸ್ತುಗಳು ಈ ಕೆಲಸಕ್ಕೆ ಬರುತ್ತವೆ.

shailesh _1  H  
ಶೈಲೇಶ್ ಪಟವರ್ಧನ್
ನಿರ್ದೇಶಕರು,
ಸ್ಪಾರ್ಕೋನಿಕ್ಸ್ (ಇಂಡಿಯಾ) ಪ್ರೈ.ಲಿ. 
9822094669
 
ಶೈಲೇಶ್ ಪಟವರ್ಧನ್ ಇವರು ಸ್ಪಾಕ್ರೋನಿಕ್ಸ್ (ಇಂಡಿಯಾ) ಪ್ರೈ.ಲಿ. ಈ ಕಂಪನಿಯ ನಿರ್ದೇಶಕರಾಗಿದ್ದಾರೆ.
@@AUTHORINFO_V1@@