ದೀರ್ಘಬಾಳಿಕೆಯನ್ನು ನೀಡುವ ಇನ್ಸರ್ಟ್

@@NEWS_SUBHEADLINE_BLOCK@@

Udyam Prakashan Kannad    23-Apr-2020   
Total Views |
 
ಹೊಸ ಉತ್ಪಾದನೆ ಅಥವಾ ಹೊಸ ಕಲ್ಪನೆಗಳು ಮಾರುಕಟ್ಟೆಯಲ್ಲಿ ಆ ಉತ್ಪಾದನೆಯ ಆವಶ್ಯಕತೆ, ಗ್ರಾಹಕರ ಬೇಡಿಕೆಮತ್ತುಉತ್ಪಾದಕರ ಸಾಮರ್ಥ್ಯಇವೆಲ್ಲದರ ಬದಲಾವಣೆಗಳಿಂದಾಗಿ ಉಂಟಾಗುತ್ತವೆ. ಮಾರುಕಟ್ಟೆಯಲ್ಲಿ ಬಂದಿರುವ ಯಾವುದೇಹೊಸ ಉತ್ಪಾದನೆಯಿಂದಾಗಿ ಅದರೊಂದಿಗಿರುವ ಅಥವಾ ಪೂರಕವಾಗಿರುವ ಇನ್ನಿತರ ಉತ್ಪಾದನೆಗಳ ಆವಶ್ಯಕತೆಯು ಉದ್ಭವಿಸುತ್ತದೆ.
 
ನಿರ್ಮಾಣದಲ್ಲಿರುವ ಪ್ರೇರಣೆ
 
ಬಹುತೇಕ ಸಿ.ಎನ್.ಸಿ. ಮಶಿನ್ ಗಳಲ್ಲಿ 7 ಕಿಲೋವ್ಯಾಟ್ ನಿಂದ 12 ಕಿಲೋವ್ಯಾಟ್ಇಂತಹ ಕಡಿಮೆಯಿಂದ ಮಧ್ಯಮ ವಿದ್ಯುತ್ ಶಕ್ತಿಯ ಸ್ಪಿಂಡಲ್ ಮೋಟರ್ ಗಳನ್ನು ಬಳಸಲಾಗುತ್ತದೆ, ಎಂಬುದು ನಾವು ಮಾರುಕಟ್ಟೆಯಲ್ಲಿ ಮಾಡಿರುವ ಸರ್ವೆಯಿಂದ (ಪರಿವೀಕ್ಷಣೆ) ನಮ್ಮ ಗಮನಕ್ಕೆ ಬಂತು. ನಮ್ಮಲ್ಲಿರುವ ಬಹುತೇಕ ಟೂಲ್ ಸೆಮಿಫಿನಿಶ್ ನಿಂದ ರಫ್ ಮಿಲ್ಲಿಂಗ್ ಕೆಲಸಗಳಿಗೋಸ್ಕರ ಬಳಸಲಾಗುತ್ತದೆ. ತುಂಬಾ ಸಲ ಮಿಲ್ಲಿಂಗ್ ಮಶಿನ್ ನಲ್ಲಿ ಎರಡು ಬದಿಗಳು ಮತ್ತು ಅನೇಕ ಮೂಲೆಗಳು ಇರುವ ಇನ್ಸರ್ಟ್ ಬಳಸಲಾಗುತ್ತಿದ್ದು, ಮಧ್ಯಮದಿಂದ ಹೆಚ್ಚಿನ ವಿದ್ಯುತ್ ಶಕ್ತಿಯ ಮಶಿನ್ ಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ. ಇದಕ್ಕೆ ಅನುಸಾರವಾಗಿ ನಾವು ಕಡಿಮೆಯಿಂದ ಮಧ್ಯಮ ವಿದ್ಯುತ್ ಶಕ್ತಿಯ ಮಶಿನ್ ಗಳಿಗೋಸ್ಕರ ಎರಡು ಬದಿ ಮತ್ತು ಅನೇಕ ಮೂಲೆಗಳಿರುವ ಇನ್ಸರ್ಟ್ ತಯಾರಿಸುವುದನ್ನು ನಿರ್ಧರಿಸಿದೆವು.
 
ಯಂತ್ರಣೆಯ (ಮಶಿನಿಂಗ್) ಭಾರ (ಲೋಡ್) ಕಡಿಮೆ ಮಾಡಲು ಇನ್ಸರ್ಟ್ ನಲ್ಲಿ ಉಚ್ಚಮಟ್ಟದ ರೇಕ್ ಕೋನವಿರುವ ಜ್ಯಾಮಿತಿಯು ಆವಶ್ಯಕವಾಗುತ್ತಾ ಆ ಮಶಿನ್ ನಲ್ಲಿ ಬಳಸಲು ಎಂಡ್ ಮಿಲ್ಲಿಂಗ್ ಮತ್ತು ಫೇಸ್ ಮಿಲ್ಲಿಂಗ್ ಟೂಲ್ ನಲ್ಲಿ ಇಂತಹ ವ್ಯವಸ್ಥೆಯನ್ನು ಮಾಡುವುದು ಆವಶ್ಯಕವಾಗಿತ್ತು.
 
ನಿರ್ಮಾಣದಲ್ಲಿರುವ ಸವಾಲುಗಳು
 

1_1  H x W: 0 x 
 
ತುಂಡಿನ ಆಳ, ಸ್ಟ್ರಾಂಗ್ +ve ಜ್ಯಾಮಿತಿ, ಫಿನಿಶಿಂಗ್ ಎಡ್ಜ್ (ವಾಯಪರ್ ಎಡ್ಜ್ ) ಮತ್ತು ಇನ್ಸರ್ಟ್ ನ ಕ್ಲ್ಯಾಂಪಿಂಗ್ ಈ ಪ್ಯಾರಾಮೀಟರ್ ಗಳ ಕುರಿತು ವಿಚಾರ ಮಾಡಿದಾಗ ಎರಡು ಬದಿಗಳಿರುವ -ve ಕೋನಗಳ ಮತ್ತು ಚೂಪಾಗಿರುವ ಜ್ಯಾಮಿತಿಯ ಇನ್ಸರ್ಟ್ ಗಳನ್ನು ಅಭಿವೃದ್ಧಿ ಪಡಿಸುವಾಗ ನಮಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆ ಸವಾಲುಗಳು ಈ ಮುಂದಿನಂತಿವೆ.
 
1. ಕಡಿಮೆ ಶಕ್ತಿಯ ಮಶಿನ್ ನಲ್ಲಿ 1.5 ಮಿ.ಮೀ.ನಿಂದ 2.5 ಮಿ.ಮೀ. ಈ ಮಿತಿಯಿರುವ ಆಳವಾದ ತುಂಡುಗಳನ್ನು ಮಾಡಬಹುದು. ನಾವು 43 ಅಂಶಗಳ ಅಪ್ರೋಚ್ (ಪ್ರವೇಶ) ಕೋನದಲ್ಲಿ 2 ಮಿ.ಮೀ. ತುಂಡಿನ ಆಳವನ್ನಿಡುವ ಸವಾಲನ್ನು ಸ್ವೀಕರಿಸಿದೆವು. ಸಾಂಪ್ರದಾಯಿಕವಾಗಿ ಮಿಲ್ಲಿಂಗ್ ಮಶಿನ್ ಮತ್ತು ಸಿ.ಎನ್.ಸಿ. ಮಶಿನ್ ಈ ಎರಡೂ ಮಶಿನ್ ಗಳಲ್ಲಿ 32 ಅಂಶಗಳ ಅಪ್ರೋಚ್ ಕೋನವನ್ನಿಟ್ಟು ಕೆಲಸ ಮಾಡುವ ಅನುಭವವು ನಮಗಿತ್ತು. ಆದರೆ 2 ಮಿ.ಮೀ.ಗಿಂತ ಹೆಚ್ಚು ಆಳವಿರುವ ತುಂಡುಗಳನ್ನು ಮಾಡುವುದು ಕಠಿಣವಾಗಿತ್ತು. ಕಾರಣ ಯೋಗ್ಯವಾದ ಸರ್ಫೇಸ್ ಫಿನಿಶ್ ಪಡೆಯಲು ಫಿನಿಶಿಂಗ್ ಎಡ್ಜ್ ನ ಆವಶ್ಯಕತೆಯೂ ಇತ್ತು.
 

2_1  H x W: 0 x 
 
2. ಇನ್ನೊಂದು ಮಹತ್ವದ ಅಂಶವೆಂದರೆ, ಫಿನಿಶಿಂಗ್ ಎಡ್ಜ್ ಯೋಗ್ಯವಾದ ಸರ್ಫೇಸ್ ಫಿನಿಶ್ ಪಡೆಯಲು ಮತ್ತು ಹೆಚ್ಚುಫೀಡ್ ರೇಟ್ ಮಶಿನ್ ನಡೆಸಲು ಆ ಅಗಲವಿರುವುದು ಅಗತ್ಯವಾಗಿದೆ. ಆದರೆ ಫಿನಿಶಿಂಗ್ ಎಡ್ಜ್ ಹೆಚ್ಚು ಅಗಲ ಮಾಡುವುದು ನಮಗೆ ಸಾಧ್ಯವಾಗಿಲ್ಲ. ಕಾರಣ ಅದರ ಪರಿಣಾಮ ಇನ್ನಿತರ ಕಟಿಂಗ್ ಎಡ್ಜ್ ಗಳ ಉದ್ದದಲ್ಲಿ ಉಂಟಾಗುತ್ತಿತ್ತು ಮತ್ತು ತುಂಡಿನ ಆಳವು ಕಡಿಮೆ ಆಗುತ್ತಿತ್ತು. ಇದರಿಂದಾಗಿ ಫಿನಿಶಿಂಗ್ ಎಡ್ಜ್ ಗೋಸ್ಕರ 0.8 ಮಿ.ಮೀ. ಗರಿಷ್ಠ ಮೌಲ್ಯವನ್ನು ನಿರ್ಧರಿಸಿದೆವು. ಇದರಿಂದಾಗಿ ನಮಗೆ ಗರಿಷ್ಠ ಪ್ರಮಾಣದಲ್ಲಿ ಅಂದರೆ 2 ಮಿ.ಮೀ.ನಷ್ಟು ತುಂಡಿನ ಆಳವು ಲಭಿಸುತ್ತಿತ್ತು.
 

3_1  H x W: 0 x 
 
3. ನಾವು ಯಾವ ಮಾರುಕಟ್ಟೆಗೆ ಇನ್ಸರ್ಟ್ ಗಳನ್ನು ಪೂರೈಸಲಿದ್ದೆವೆಯೋ, ಅಲ್ಲಿ ಕೆಲಸಕ್ಕೆ ಅನುಗುಣವಾಗಿ ಇನ್ಸರ್ಟ್ ನ ಜ್ಯಾಮಿತಿಯನ್ನು (ಜಾಮೆಟ್ರಿ) ನಿರ್ಧರಿಸಲಾಗಿತ್ತು. ಇತ್ತಿಚೇಗೆ ಬಹುತೇಕ ಯಂತ್ರಭಾಗಗಳು ಕಾಸ್ಟಿಂಗ್ ಅಥವಾ ಫೋರ್ಜಿಂಗ್ ಯಂತ್ರಣೆಯಿಂದಲೇ ತಯಾರಿಸಲಾಗುತ್ತವೆ. ಇಂತಹ ಯಂತ್ರಭಾಗಗಳಲ್ಲಿ ಯಂತ್ರಣೆಯ ಮೂಲಕ ಹೊರಗೆ ತೆಗೆಯಲು ಗರಿಷ್ಠ 2 ರಿಂದ 3 ಮಿ.ಮೀ. ಮಶಿನಿಂಗ್ ಸ್ಟಾಕ್ ಗಳನ್ನು ಉಳಿಸಿಡುತ್ತೇವೆ. ಇಂತಹ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ ಕಟಿಂಗ್ ಎಡ್ಜ್ ಉಳಿಯುವುದೂ ಮಹತ್ವದ್ದಾಗಿದೆ. ಕಾಸ್ಟ್ ಆಯರ್ನ್, ಎಸ್ ಜಿ ಆಯರ್ನ್, ಫೋರ್ಜ್ ಸ್ಟೀಲ್ ಇಂತಹ ಲೋಹಗಳಿಂದ ತಯಾರಿಸಿರುವ ಯಂತ್ರಭಾಗಗಳ ಯಂತ್ರಣೆಯನ್ನು ಪರಿಣಾಮಕಾರಿಯಾಗಿ ಮಾಡಲು +ve ರೇಕ್ ಕೋನವಿರುವ ಜ್ಯಾಮಿತಿ ಅಗತ್ಯವಾಗಿದೆ. (ಕಾರಣ ನಾವು ಆ ಇನ್ಸರ್ಟ್ ಗಳ ಬಳಕೆಯನ್ನು ಕಡಿಮೆಯಿಂದ ಮಧ್ಯಮ ಶಕ್ತಿಯ ಮಶಿನ್ ನಲ್ಲಿ ಮಾಡಲಿದ್ದೇವೆ.)
4. ಎಲ್ಲಕ್ಕಿಂತಲೂ ಹೆಚ್ಚು ಆಳದ ತುಂಡನ್ನು ಮಾಡುವಾಗ ಉಂಟಾಗುವ ಕಟಿಂಗ್ ಫೋರ್ಸ್ ಸಹಿಸುವಷ್ಟುಇನ್ಸರ್ಟ್ ನ ಕ್ಲ್ಯಾಂಪಿಂಗ್ ದೃಢವಾಗಿರುವುದು ಆವಶ್ಯಕವಾಗಿದೆ. ವೇಡ್ಜ್ ಕ್ಲ್ಯಾಂಪ್ ಬಳಸಿ ಗಟ್ಟಿಯಾಗಿ ಅಳವಡಿಸಿರುವ ಟೂಲ್ ಗಳನ್ನು ನಾವು ನೋಡಿದೆವು ಮತ್ತು ಈ ವಿಧದ ಡಿಸೈನ್ ನಲ್ಲಿ ಬಿಡಿ ಭಾಗಗಳು ಬೇಕಾಗುತ್ತವೆ, ಎಂಬ ಅನುಭವವು ನಮಗಿತ್ತು. ನಾವು ಮಾಡಿರುವ ಇನ್ಸರ್ಟ್ ಕ್ಲ್ಯಾಂಪಿಂಗ್ ನ ಡಿಸೈನ್ ನಲ್ಲಿ ಸ್ಕ್ರೂ ಬಳಸಬೇಕಾಗುತ್ತದೆ ಮತ್ತು ಇದರಲ್ಲಿ ಬಿಡಿ ಭಾಗಗಳನ್ನು ಬಳಸುವ ಅವಕಾಶವೇ ಬರುವುದಿಲ್ಲ. ಮಶಿನ್ ಆಪರೇಟರ್ ಸಹಜವಾಗಿ ಕ್ಲ್ಯಾಂಪಿಂಗ್ ಮಾಡಬಲ್ಲನು. ಕಟರ್ ನ ಬಾಡಿಯಲ್ಲಿ ಕ್ಲ್ಯಾಂಪಿಂಗ್ ಗೋಸ್ಕರ ವಿಶಿಷ್ಟವಾದ ಕೋನದಲ್ಲಿ ಒಂದು ರಂಧ್ರವನ್ನು ನೀಡಲಾಗಿದೆ. (ಚಿತ್ರ ಕ್ರ. 1) ಅದರಲ್ಲಿ ಸ್ಕ್ರೂಅಳವಡಿಸಿದ ನಂತರ ಇನ್ಸರ್ಟ್ ನ ಕ್ಲ್ಯಾಂಪಿಂಗ್ ದೃಢವಾಗುತ್ತದೆ. ಕ್ಲ್ಯಾಂಪಿಂಗ್ ಮಾಡುವಾಗ ಸ್ಕ್ರೂಇನ್ಸರ್ಟ್ ಗೆ ಪಾಕೇಟ್ ಗೆ ತಗಲುವ ಬಿಂದುವನ್ನು ಎಳೆಯುತ್ತದೆ. ಎಂದಿನಂತೆ ರಂಧ್ರಗಳನ್ನು ಮಾಡುವಾಗ ಎಳೆಯುವ ಕ್ರಿಯೆಯು ಸರಿಯಾಗಿ ಆಗುತ್ತಿರಲಿಲ್ಲ. ಹಾಗೆಯೇ ಅದರಿಂದ ಕೇವಲ ಎಕ್ಸಿಸ್ ನ ದಿಕ್ಕಿನಲ್ಲಿ ಕ್ಲ್ಯಾಂಪಿಂಗ್ ಆಗುತ್ತಿತ್ತು. ಇದಕ್ಕಾಗಿ ನಾವು ಕಟರ್ ನಲ್ಲಿರುವ ರಂಧ್ರವನ್ನು ದೊಡ್ಡ ಗಾತ್ರದಲ್ಲಿ ಮತ್ತುಒಂದು ವಿಶಿಷ್ಟವಾದ ಕೋನದಲ್ಲಿ ತಯಾರಿಸಿದೆವು. ಇದರಿಂದಾಗಿ ಈಗ ಪಾಕೇಟ್ ನ ಎಡ್ಜ್ ನ ದಿಕ್ಕಿಗೆ ಸ್ಕ್ರೂಗಳ ಹೆಡ್ ಇನ್ಸರ್ಟ್ ನ್ನು ಎಳೆಯುತ್ತದೆ. ಇನ್ಸರ್ಟ್ ನ ರಂಧ್ರದ ಡಿಸೈನ್ ಬದಲಾಯಿಸಿ ಅದನ್ನು ದೊಡ್ಡದಾಗಿ ಮಾಡಿದಾಗ ಪಾಕೇಟ್ ನ ಎಡ್ಜ್ ನಲ್ಲಿ ಎಕ್ಸಿಯಲ್ ಮತ್ತು ರೇಡಿಯಲ್ ಈ ಎರಡೂ ದಿಕ್ಕುಗಳಲ್ಲಿರುವ ಶಕ್ತಿಯ ಮೂಲಕ ಉಚ್ಚ ಸಾಮರ್ಥ್ಯದಿಂದ ಇನ್ಸರ್ಟ್ ಕ್ಲ್ಯಾಂಪ್ ಮಾಡುವುದು ಸಾಧ್ಯವಾಯಿತು. ಇನ್ಸರ್ಟ್ ONMU 050505 ನ ಚಿಕ್ಕ ಆಕಾರದಿಂದಾಗಿ ಒಂದು ಕಟರ್ ನಲ್ಲಿರುವ ಪಾಕೇಟ್ ಗಳ ಸಂಖ್ಯೆಯು ಹೆಚ್ಚಾಯಿತು ಮತ್ತು ಹೆಚ್ಚು ಫೀಡ್ ರೇಟ್ ನ ಮಿಲ್ಲಿಂಗ್ ನಲ್ಲಿ ಅದನ್ನು ಬಳಸಲಾರಂಭಿಸಲಾಯಿತು.
 

4_1  H x W: 0 x 
 
5. ಕಟರ್ ನಲ್ಲಿ ಪಾಕೇಟ್ ಗಳ ಸಂಖ್ಯೆಯನ್ನು ಸ್ಟ್ಯಾಂಡರ್ಡ್ ಮಾಡಲಾಯಿತು. ಚಿಕ್ಕವ್ಯಾಸದ 16 ಕಟಿಂಗ್ ಎಡ್ಜ್ ಗಳ ಇನ್ಸರ್ಟ್ ಇರುವ ಕಟರ್ ನ ಸಮಸ್ಯೆ ಮತ್ತು ಚಿಕ್ಕ ಮಶಿನ್, ಹಾಗೆಯೇ ದುರ್ಬಲವಾದ ಸೆಟರ್ ನಲ್ಲಿರುವ ಕೆಲಸ. 25, 32 ಮತ್ತು 40 ಮಿ.ಮೀ. ವ್ಯಾಸದಲ್ಲಿ, ಕೋಷ್ಟಕ ಕ್ರ. 1 ರಲ್ಲಿ ತೋರಿಸಿದಂತೆ ಎಂಡ್ ಮಿಲ್ ಗೋಸ್ಕರ ಪರೀಕ್ಷಿಸಲಾಯಿತು. 40 ಮಿ.ಮೀ. ನಿಂದ 125 ಮಿ.ಮೀ. ವ್ಯಾಸದಲ್ಲಿ ಫೇಸ್ ಮಿಲ್ ಗೋಸ್ಕರ ಪರೀಕ್ಷಿಸಲಾಯಿತು.
 

5_1  H x W: 0 x 
 
ಉತ್ಪಾದನೆಯ (ಪ್ರಾಡಕ್ಟ್ ) ವೈಶಿಷ್ಟ್ಯಗಳು
•16 ಕಟಿಂಗ್ ಎಡ್ಜ್ ಗಳಿಂದಾಗಿ ಈ ವಿಧದ ಇನ್ನಿತರ ಇನ್ಸರ್ಟ್ ಗಳ ಹೋಲಿಕೆಯಲ್ಲಿ ಸರ್ವಾಧಿಕವಾಗಿ ಲಾಭಕಾರಿಯಾಗಿರುತ್ತವೆ. ಇತ್ತೀಚೆಗೆ ಉಪಲಬ್ಧವಿರುವ ಇನ್ನಿತರ ಇನ್ಸರ್ಟ್ 2, 4, 6, 8 ಬದಿಗಳನ್ನು ಹೊಂದಿರುತ್ತವೆ.
•43° ಅಪ್ರೋಚ್ ಕೋನದಿಂದಾಗಿ ಎಕ್ಸಿಸ್ ಮತ್ತು ರೆಡಿಯಲ್ ಕಟಿಂಗ್ ಶಕ್ತಿಯು ಸಂತುಲಿತವಾಗುತ್ತವೆ. (ಚಿತ್ರ ಕ್ರ. 2)
•ಇನ್ಸರ್ಟ್ ನ ಮೂಲೆಗಳ ತ್ರಿಜ್ಯವು 0.5 ಮಿ.ಮೀ. ಇರುವುದರಿಂದ ಭಾರವು ಕಡಿಮೆ ಆಗಲು ಸಹಾಯವಾಗುತ್ತದೆ.
•ಪಾಕೇಟ್ ಗಳಲ್ಲಿ ಸ್ಕ್ರೂಗಳಿಗೆ ನೀಡಿರುವ ಕೋನೀಯ ರಂಧ್ರಗಳ ಡಿಸೈನ್ ನಿಂದಾಗಿ ದೃಢವಾದ ಕ್ಲಾಂಪಿಂಗ್ ಆಗುತ್ತದೆ.
•+ve ಹೆಲಿಕಲ್ ಕಟಿಂಗ್ ಎಡ್ಜ್ ನಿಂದಾಗಿ ಯಂತ್ರಣೆಯ ಪ್ರಕ್ರಿಯೆಯು ಸುಲಭವಾಗುತ್ತದೆ.
•ವಾಯಪರ್ ಎಡ್ಜ್ ನಿಂದಾಗಿ ಸರ್ಫೇಸ್ ಫಿನಿಶ್ ಒಳ್ಳೆಯದಾಗಿಯೇ ಲಭಿಸುತ್ತದೆ.
•ಮಧ್ಯಮ ರೀತಿಯ ರಫಿಂಗ್ ಗೋಸ್ಕರ ಜ್ಯಾಮಿತಿಯಲ್ಲಿ ಉಪಲಬ್ಧವಿದೆ.
•ಕಡಿಮೆಯಿಂದ ಮಧ್ಯಮ ಸ್ಪಿಂಡಲ್ ಶಕ್ತಿಯ ಮಶಿನ್ ಗೋಸ್ಕರ ಸುಲಭವಾಗಿದೆ.
•ಕಾಸ್ಟ್ ಆಯರ್ನ್, ಸ್ಟೀಲ್, ಎಸ್ ಎಸ್ ಇವುಗಳಲ್ಲಿ ಫೇಸ್ ಮಿಲ್ಲಿಂಗ್ ಗೋಸ್ಕರ ಉತ್ತಮ ಕೆಲಸಕ್ಕೋಸ್ಕರ ಯೋಗ್ಯವಾಗಿದೆ.
•ಈ ಇನ್ಸರ್ಟ್ ಕಾಸ್ಟ್ ಆಯರ್ನ್, ಸ್ಟೀಲ್, ಎಸ್ .ಎಸ್. ಮತ್ತು ಉಷ್ಣತೆಯ ಪ್ರತಿರೋಧಕವಾದ ಮಿಶ್ರಲೋಹಗಳಿಗೋಸ್ಕರ ಉಪಯುಕ್ತವಾಗಿರುವ ವ್ಯಾಪಕವಾದ ಶ್ರೇಣಿಯಲ್ಲಿ ಉಪಲಬ್ಧವಿದೆ.
 
ONMU 050505 ಇನ್ಸರ್ಟ್ ಗಳ ಲಾಭಗಳು
1. ಇನ್ಸರ್ಟ್ ಗೆ ಅತಿರಿಕ್ತವಾದ +ve ರೇಕ್ ಇರುತ್ತದೆ.
2. ಮುಖ್ಯವಾಗಿ ಕಾಸ್ಟ್ ಆಯರ್ನ್ ಅಥವಾ ಎಸ್ .ಜಿ. ಆಯರ್ನ್ ಯಂತ್ರಭಾಗಗಳ ಉಚ್ಚ ಫೀಡ್ ರೇಟ್ ನೊಂದಿಗೆ ಯಂತ್ರಣೆಗೋಸ್ಕರ ಸೂಕ್ಷ್ಮವಾದ ಪಿಚ್ ನ ಕಟರ್ ಉಪಲಬ್ಧ.
3. ಮೂಲೆಗಳ ತ್ರಿಜ್ಯವು ಕಡಿಮೆ ಇರುವುದರಿಂದ ಸ್ಟೆನ್ ಲೆಸ್ ಸ್ಟೀಲ್ ನಲ್ಲಿ ಬಳಸಲಾಗುತ್ತದೆ, ಹಾಗೆಯೇ ಹೆಚ್ಚುವರಿ ಮಟೀರಿಯಲ್ ತೆಗೆಯಲೂ ಉಪಯುಕ್ತವಾಗಿದೆ.
4. ಚಿಕ್ಕ ಮಶಿನ್ ನಲ್ಲಿ +ve ಜ್ಯಾಮಿತಿಯಿಂದಾಗಿ +ve ಇನ್ಸರ್ಟ್ ಗಿಂತಲೂ ಉತ್ತಮವಾಗಿ ನಡೆಯುತ್ತದೆ.
5. ಇನ್ಸರ್ಟ್ ನ್ಯುಟ್ರಲ್ ಇರುವುದರಿಂದ ಬಲ ಮತ್ತು ಎಡ ಕೈಗಳಿರುವಂತಹ ಎರಡೂ ಕಟರ್ ಗಳಲ್ಲಿ ಬಳಸುವುದು ಸಾಧ್ಯವಾಗಿದೆ. ಸಾಮಾನ್ಯವಾಗಿ ಫೇಸಿಂಗ್ ಮತ್ತುಸೆಂಟರಿಂಗ್ ಮಶಿನ್ ನಲ್ಲಿ ಬಳಸಲಾಗುತ್ತದೆ.
 
ಕೇಸ್ ಸ್ಟಡಿ
ನಮ್ಮ ಒಬ್ಬ ಗ್ರಾಹಕರು ಸಾಮಾನ್ಯವಾದ ಇಂಜಿನಿಯರಿಂಗ್ ಮತ್ತು ಆಟೊಮೊಬೈಲ್ ಉದ್ಯಮಕ್ಕೋಸ್ಕರ ಚಿಕ್ಕಬ್ಲಾಕ್, ಚೌಕೋನದ ಪ್ಲೇಟ್, ಬ್ರಾಕೇಟ್ ಇಂತಹ ವಿವಿಧ ಯಂತ್ರಭಾಗಗಳನ್ನು ತಯಾರಿಸುತ್ತಾರೆ. ಈ ಯಂತ್ರಭಾಗಗಳನ್ನು ಫೋರ್ಜ್ ಸ್ಟೀಲ್ ನಿಂದ ತಯಾರಿಸಲಾಗುತ್ತವೆ. ಅವರಲ್ಲಿರುವ ಬಹುಶಃ ಎಲ್ಲ ಮಿಲ್ಲಿಂಗ್ ಮಶಿನ್ ಗಳ ಸಾಮರ್ಥ್ಯವು ತುಂಬಾ ಕಡಿಮೆ ಇದೆ. (5.5 ರಿಂದ 9 ಕಿಲೋವ್ಯಾಟ್). ಯಂತ್ರಭಾಗಗಳ ಗಾತ್ರಚಿಕ್ಕದಾಗಿದ್ದು, ಗರಿಷ್ಠ 1 ರಿಂದ 3 ಮಿ.ಮೀ. ಮಟೀರಿಯಲ್ ಹೊರಗೆ ತೆಗೆಯಬೇಕಾಗುತ್ತದೆ.
 
ಈ ಗ್ರಾಹಕರು ಪ್ರಾರಂಭದಿಂದಲೂ ಐ.ಓ.ಎಸ್. ಇನ್ಸರ್ಟ್ ಗಳನ್ನು (TPKN, SPKN) ಬಳಸುತ್ತಿದ್ದರು. ಅವರಲ್ಲಿರುವ ಕೆಲಸದ ರೀತಿಯನ್ನು ನೋಡಿ ನಾವು ನಮ್ಮ ಹೊಸ ಉತ್ಪಾದನೆಗಳನ್ನು ONMU 050505 ಅದರ ವೈಶಿಷ್ಟ್ಯಗಳೊಂದಿಗೆ ಮತ್ತು ಲಾಭಗಳೊಂದಿಗೆ ಅವರಿಗೆ ಮನವರಿಕೆ ಮಾಡಿಕೊಟ್ಟೆವು. ಈ ಇನ್ಸರ್ಟ್ ಬಳಸಿದನಂತರ ಉಂಟಾಗಿರುವ ಲಾಭಗಳನ್ನು ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ. ಹೊಸ ಇನ್ಸರ್ಟ್ ಬಳಸಿ ಕೇವಲ ಸಿ.ಎನ್.ಸಿ. ಅಲ್ಲದೇ, ಸಾಂಪ್ರದಾಯಿಕವಾದ ಮಿಲ್ಲಿಂಗ್ ಮಶಿನ್ ನಲ್ಲಿಯೂ ಕೆಲಸ ಮಾಡಬಹುದಾಗಿದೆ.
 
ನಮ್ಮ ಚಿಕ್ಕ ಮತ್ತು ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನೇಕ ಮೂಲೆಗಳಿರುವ ಇನ್ಸರ್ಟ್ ಗಳನ್ನು ಬಳಸುವುದು ಸುಲಭವಾಗುತ್ತದೆ. ಸದ್ಯದ ಟೂಲಿಂಗ್ ನಲ್ಲಿ ಪ್ರತಿಯೊಂದು ಪಾಕೇಟ್ ಗೋಸ್ಕರ ಮೂರು ಬಿಡಿ ಭಾಗಗಳನ್ನು ಬಳಸಬೇಕಾಗುತ್ತಿತ್ತು. ಅದನ್ನು ಹೋಲಿಸಿದಾಗ ಹೊಸ ಉತ್ಪಾದನೆಯಲ್ಲಿ ತುಂಬಾ ಕಡಿಮೆ ಬಿಡಿ ಭಾಗಗಳ (ಕೇವಲ ಒಂದು ದೊಡ್ಡ M4 ಸ್ಕ್ರೂ) ಆವಶ್ಯಕವಾಗಿತ್ತು. ಕ್ಲ್ಯಾಂಪಿಂಗ್ ನ ದೃಢತೆ ಈ ಮೊದಲಿಗಿಂತ ತುಂಬಾ ಒಳ್ಳೆಯದಾಗಿತ್ತು. ಒಂದೇ ಸ್ಕ್ರೂನ ಮೂಲಕ ಇನ್ಸರ್ಟ್ ನ ಕೋನೀಯ ಕ್ಲ್ಯಾಂಪಿಂಗ್ ಮಾಡುವುದು ಆಪರೇಟರ್ ಗೆ ತುಂಬಾ ಸುಲಭವಾಗಿತ್ತು ಮತ್ತು ಸಮಯವನ್ನು ಉಳಿಸುತ್ತಿತ್ತು. ಹಾಗೆಯೇ ಚಿಪ್ ಸಿಕ್ಕಿಕೊಳ್ಳುವುದೂ ಕಡಿಮೆಯಾಯಿತು.
 
ಮುಂದೆ ಏನು?
 
0.5 ಮಿ.ಮೀ. ಮೂಲೆಯ ತ್ರಿಜ್ಯವಿರುವ ನಮ್ಮ ಇನ್ಸರ್ಟ್ ನಾವು ಚಿಕ್ಕ ಮಶಿನ್, ಸಾಂಪ್ರದಾಯಿಕ ಮತ್ತು ದೊಡ್ಡ ಮಶಿನಲ್ಲಿಯೂ ಅಳವಡಿಸಿ ಪರಿಶೀಲಿಸಲಾಯಿತು. ನಮ್ಮ ಒಬ್ಬ ಗ್ರಾಹಕರ ಬೇಡಿಕೆಯಂತೆ ನಾವು 0.8 ಮಿ.ಮೀ. ತ್ರಿಜ್ಯದ ಇನ್ಸರ್ಟ್ ತಯಾರಿಸಲಾಯಿತು. ಅದೇ ಇನ್ಸರ್ಟ್ ನ್ನು ಕಟರ್ ನಲ್ಲಿಯೂ ಸಹ ಉಪಯೋಗಿಸಬಹುದು. ಇದೇ ಇದರ ವೈಶಿಷ್ಟ್ಯವಾಗಿದೆ. ಇದರ ಹೊರತಾಗಿ ನಾವು ಮೃದುವಾದ ಯಂತ್ರಭಾಗ ಅಥವಾ ಕಬ್ಬಿಣಕ್ಕಿಂತ ಇನ್ನಿತರ ಲೋಹಗಳ ಯಂತ್ರಣೆಯನ್ನು ಮಾಡಲು ಹೊಸ ಜ್ಯಾಮಿತಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.
 
 

vijendra _1  H  
ವಿಜೇಂದ್ರ ಪುರೋಹಿತ
ವ್ಯವಸ್ಥಾಪಕರು (ತಾಂತ್ರಿಕ ಸಹಾಯ)
ಡ್ಯುರಾಕಾರ್ಬ್ ಇಂಡಿಯಾ 
9579352519
1995 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾದ ನಂತರ ವಿ. ವಿ. ಪುರೋಹಿತ್ ಇವರು ಆಪರೇಶನ್ ಮ್ಯಾನೆಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವೀಧರರಾದರು. ಅವರಿಗೆ ಮಶಿನ್ ಟೂಲ್, ಕಟಿಂಗ್ ಟೂಲ್ ಡಿಸೈನ್ ನಲ್ಲಿ ಅಂದಾಜು 24 ವರ್ಷಗಳ ಅನುಭವವಿದೆ. ಈಗ ಶ್ರೀ. ಪುರೋಹಿತ ಅವರು ಡ್ಯುರಾಕಾರ್ಬ್ ಇಂಡಿಯಾ ಈ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾರೆ.
 
 
@@AUTHORINFO_V1@@