ಯುನಿವರ್ಸಲ್ ಮ್ಯಾನಿಫ್ಯಾಕ್ಚರಿಂಗ್ ಕಂಪನಿ, ಪುಣೆ (ಯುನಿಮ್ಯಾಕ್) ಇವರು ಹೆವಿ ಕೈಗಾರಿಕೋದ್ಯಮಗಳಿಗೆ ಬೇಕಾಗುವಂತಹ ಯಂತ್ರಭಾಗಗಳನ್ನು ತಯಾರಿಸುತ್ತಾರೆ. 1987 ರಲ್ಲಿ ಅಶೋಕ್ ಮುಂಗಳೆ ಇವರು ಸಕ್ಕರೆ ಮತ್ತು ಸಿಮೆಂಟ್ ಕಾರ್ಖಾನೆಗಳಿಗೆ ಬೇಕಾಗುವ ಯಂತ್ರಭಾಗಗಳನ್ನು ತಯಾರಿಸಲು ಜರ್ಮನಿಯಿಂದ ಬಳಸಿರುವ ಒಂದು ಮಶಿನ್ ಖರೀದಿಮಾಡಿ ‘ಯುನಿಮ್ಯಾಕ್’ ಕಂಪನಿಯನ್ನು ಪ್ರಾರಂಭಿಸಿದರು. ಅದರ ನಂತರ ಅವರು ಸಾಮಾನ್ಯವಾದ ಇಂಜಿನಿಯರಿಂಗ್ ಉದ್ಯಮಗಳಿಗೆ ಬೇಕಾಗುವ ಯಂತ್ರಭಾಗಗಳನ್ನು ತಯಾರಿಸುವಲ್ಲಿ ಗಮನ ಹರಿಸಿದರು. ಸದ್ಯಕ್ಕೆ ಈ ಕಂಪನಿಯಲ್ಲಿ ರೈಲ್ವೆ ಇಂಜಿನ್, ವಿದ್ಯುತ್ ಶಕ್ತಿಯನ್ನು ತಯಾರಿಸುವ ಯೋಜನೆಗಳು, ಸಿಮೆಂಟ್ ತಯಾರಿಸುವ ಕಾರ್ಖಾನೆಗಳು ಮತ್ತು ಇನ್ನಿತರ ಹೆವಿ ಕೆಲಸಗಳಿಗೆ ಬೇಕಾಗುವಂತಹ ಬೃಹತ್ ಗಾತ್ರದ ಯಂತ್ರಭಾಗಗಳನ್ನು (ಪ್ರಿಸಿಶನ್) ತಯಾರಿಸುತ್ತಾರೆ. ಕಂಪನಿಯಲ್ಲಿ ಸ್ವಂತದ್ದೇ ಆದ ಟೂಲ್ ರೂಮ್, ಹಾರಿಝಾಂಟಲ್ ಬೋರಿಂಗ್ ಮಶಿನ್, ಫ್ಲೋರ್ ಬೋರಿಂಗ್ ಮಶಿನ್, ಎಚ್.ಎಮ್.ಸಿ. ಮತ್ತು ವಿ.ಎಮ್.ಸಿ. ಮಶಿನ್ ಗಳಿವೆ. ಅದರಲ್ಲಿ ಒಂದು ವಿ.ಎಮ್.ಸಿ. ಮಶಿನ್ ನ ಟೇಬಲ್ ನ ಗಾತ್ರವು 4.5 ಮೀ. X 2.75 ಮೀ. ಇದೆ.
ದೊಡ್ಡ ಯಂತ್ರಭಾಗಗಳಲ್ಲಿಯೂ 15-20 ಮೈಕ್ರಾನ್ ನಷ್ಟು ನಿಖರತೆಯನ್ನು ಕಾಪಾಡುವುದು, ಉತ್ಕೃಷ್ಟವಾದ ಕೆಲಸಕ್ಕೋಸ್ಕರ ತುಂಬಾ ಆವಶ್ಯಕವಾಗಿದೆ. ಉತ್ಪಾದನೆಯ ಪ್ರಕ್ರಿಯೆಯಲ್ಲಿ ದೊಡ್ಡ ಯಂತ್ರಭಾಗಗಳ ತಪಾಸಣೆಯನ್ನು ಮಾಡುವುದು ‘ಯುನಿಮ್ಯಾಕ್’ ಎದುರಿದ್ದ ದೊಡ್ಡ ಸವಾಲಾಗಿತ್ತು. ಹಾಗೆಯೇ ಕೈಯಿಂದ ಮಾಡಿರುವ ಸೆಟಿಂಗ್ ನಲ್ಲಿ ದೋಷಗಳನ್ನು ತಡೆಯುವುದು, ನಿಖರತೆ ಮತ್ತು ಯಂತ್ರಭಾಗಗಳ ಅನುರೂಪತೆ ಹೆಚ್ಚಿಸುವುದು, ಅದರೊಂದಿಗೆ ಅನುತ್ಪಾದಕತೆಯ ಸಮಯವನ್ನು ಮತ್ತು ರಿಜೆಕ್ಷನ್ ಕಡಿಮೆ ಮಾಡುವುದು, ಇಂತಹ ಅಂಶಗಳನ್ನು ಸಾಧಿಸುವುದು ಮಹತ್ವದ್ದಾಗಿತ್ತು. ಇದಕ್ಕೋಸ್ಕರ ‘ಯುನಿಮ್ಯಾಕ್’ ಇವರು ‘ಪ್ರಿಮೋ’ ಪ್ರಣಾಳಿಕೆಯ ವಿಚಾರ ಮಾಡಿ 4 ತಿಂಗಳ ಕಾಲಾವಧಿಯಲ್ಲಿ ತಪಾಸಣೆಗೆ ಬೇಕಾಗುವಂತಹ ಸಮಯವನ್ನು 90 ಶೇಕಡಾದಷ್ಟು ಕಡಿಮೆ ಮಾಡಿ ಅದರಲ್ಲಿ ನಿರಂತರತೆಯನ್ನು ಕಾಪಾಡಿದರು. ಮಶಿನ್ ನಲ್ಲಿಯೇ ಸ್ವಯಂಚಾಲಿತವಾಗಿ ಯಂತ್ರಭಾಗಗಳ ಸೆಟಿಂಗ್, ಪರೀಕ್ಷೆ ಮತ್ತು ಟೂಲ್ ಸೆಟಿಂಗ್ ಮಾಡಲು ಈ ಪ್ರಣಾಳಿಕೆಯ ಡಿಸೈನ್ ಮಾಡಲಾಗಿದೆ.
‘ಕೆಲಸದ ಆವಶ್ಯಕತೆಗೆ ಅನುಸಾರವಾಗಿ ನಾವು ನಮ್ಮ ಮಶಿನ್ ನಲ್ಲಿ ‘ರೆನಿಶಾ’ ಇವರ ‘ಪ್ರಿಮೋ’ ಪ್ರಣಾಳಿಕೆಯನ್ನು ಅಳವಡಿಸಿದಾಗ ನಮ್ಮೆದುರಿಗಿದ್ದ ಸಮಸ್ಯೆಯು ಪರಿಹಾರವಾಯಿತು. ಮಶಿನ್ ನಲ್ಲಿರುವ ಪ್ರೋಬ್ ಬಳಸಲು ಸುಲಭವಾಗಿದೆ, ಅಲ್ಲದೇ ಇದರ ಹೊರತಾಗಿ ಅದರ ಕಾರ್ಯಸಾಮರ್ಥ್ಯವೂ ಉಚ್ಚಮಟ್ಟದ್ದಾಗಿದ್ದರಿಂದ ಮಶಿನ್ ನ ಉತ್ಪಾದಕತೆಯ ಸಮಯದಲ್ಲಿಯೂ ಹೆಚ್ಚಳವಾಯಿತು. ಸೈಕಲ್ ಟೈಮ್ ಕಡಿಮೆ ಮಾಡುವಲ್ಲಿ ಸಹಾಯವಾಯಿತು, ಎಂದು ‘ಯುನಿಮ್ಯಾಕ್’ ಕಂಪನಿಯ ನಿರ್ದೇಶಕರಾದ ಅಶೋಕ್ ಮುಂಗಳೆ ಇವರು ವಿವರಿಸಿದರು.
ಹೊಸತನದಿಂದ ಕೂಡಿರುವ ಪ್ರೋಬಿಂಗ್
‘ಪ್ರಿಮೊ’ ಪ್ರಣಾಳಿಕೆಯಲ್ಲಿ ಒಂದು ಪ್ರಿಮೊ ರೆಡಿಯೋ ಪಾರ್ಟ್ ಸೆಟರ್ ಮತ್ತು ಒಂದು ಪ್ರಿಮೋ ರೆಡಿಯೋ 3D ಟೂಲ್ ಸೆಟರ್ ಇರುತ್ತದೆ. ಇದರಿಂದಾಗಿ ಮಶಿನ್ ನಲ್ಲಿಯೇ ಸ್ವಯಂಚಾಲಿತವಾಗಿ ಕಾರ್ಯವಸ್ತುವಿನ ಸೆಟಿಂಗ್, ಪರೀಕ್ಷಣೆ ಮತ್ತು ಟೂಲ್ ಸೆಟಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಕೈಯಿಂದ ಸೆಟಿಂಗ್ ಮಾಡುವಾಗ ಉಂಟಾಗುವ ತಪ್ಪುಗಳನ್ನು ತಡೆಯಲಾಗುತ್ತದೆ. ನಿಖರತೆಯಲ್ಲಿ ಹೆಚ್ಚಳವಾಗುತ್ತದೆ ಮತ್ತು ಅಪೇಕ್ಷಿಸಿರುವ ಯಂತ್ರಭಾಗಗಳೂ ಸಿಗುತ್ತದೆ. ಇದರೊಂದಿಗೆ ಅನುತ್ಪಾದಕ ಸಮಯ ಮತ್ತು ರಿಜೆಕ್ಷನ್ ಪ್ರಮಾಣವೂ ಕಡಿಮೆಯಾಗುತ್ತದೆ. ಈ ಪ್ರೋಬ್ ಉಪಯೋಗಿಸಿ ಲಭಿಸುವ ನಿಖರತೆಯು ಮಶಿನಿನ ನಿಖರತೆಯಲ್ಲಿಯೂ ಅವಲಂಬಿಸಿರುತ್ತದೆ. ಮಶಿನಿನ ನಿಖರತೆಯ ಖಾತರಿಯನ್ನು ವಹಿಸಲು ವರ್ಷದಲ್ಲಿ ಒಂದು ಬಾರಿಯಾದರೂ ಲೇಸರ್ ತಂತ್ರಜ್ಞಾನದಿಂದ ಅದರ ತಪಾಸಣೆಯನ್ನು ಮಾಡುವುದು ಅನಿವಾರ್ಯವಾಗಿದೆ. ಮಶಿನಿನ ಸ್ಪಿಂಡಲ್ ಬಳಸಿ ಪ್ರೋಬ್ ತಪಾಸಣೆಯನ್ನು ಮಾಡುವುದರಿಂದ,
1. ಕ್ಲ್ಯಾಂಪಿಂಗ್ ಮಾಡಿ ಮಶಿನಿಂಗ್ ಆದ ನಂತರ ಕ್ಲ್ಯಾಂಪ್ ತೆರೆದು ಅಲ್ಲಿಯೇ ಪರಿಶೀಲಿಸಬಹುದಾಗಿದೆ.
2. ಯಾವುದೇ ಕಾರಣದಿಂದ ನಿರ್ಧರಿಸಿದ ಪ್ಯಾರಾಮೀಟರ್ ಬದಲಾಯಿಸಿ ಯಾರೂ ಯಂತ್ರಣೆಯನ್ನು ಮಾಡಿದಲ್ಲಿ ಅದರ ಪರಿಣಾಮವು ತಕ್ಷಣ ಕಂಡುಬರುತ್ತದೆ.
ಪರಿವರ್ತನೆಯನ್ನು ಮಾಡುವ ಸಾಮರ್ಥ್ಯ
ಯುನಿಮ್ಯಾಕ್ ಕಂಪನಿಯು ಅವರ ಗ್ರಾಹಕರಿಗೋಸ್ಕರ ರೈಲ್ವೆ ಇಂಜಿನಿನಲ್ಲಿ ಬಳಸಲಾಗುವಂತಹ ಟರ್ಬೋ ಚಾರ್ಜರ್ ಮತ್ತು ವಿಶಿಷ್ಟವಾದ ಕೆಲಸಗಳಿಗೋಸ್ಕರ ತಯಾರಿಸಲ್ಪಡುವ ಯಂತ್ರಭಾಗಗಳನ್ನು ತಯಾರಿಸುತ್ತದೆ. ಈ ಹಿಂದೆ ಒಂದು ಟರ್ಬೋ ಚಾರ್ಜರ್ ಹೌಸಿಂಗ್ ತಯಾರಿಸಲು 46 ಗಂಟೆಗಳು ಬೇಕಾಗುತ್ತಿದ್ದವು.
ಹಳೆಯ ರೀತಿ
ಈ ಪ್ರಕ್ರಿಯೆಯಲ್ಲಿ ಸೆಮಿಫಿನಿಶ್ ಮಾಡಿರುವ ಸ್ಥಿತಿಯಲ್ಲಿ ಈ ಯಂತ್ರಭಾಗಗಳನ್ನು (ಚಿತ್ರ ಕ್ರ. 2) ಪರೀಕ್ಷಣೆಯ ಕೊಠಡಿಯಲ್ಲಿ ಒಯ್ದು ಅದರ ಸಮತಟ್ಟು, ಚೌಕಟ್ಟು, ಸಮಾನಾಂತರತೆ ಮತ್ತು ಸ್ಥಾನಗಳ ಕುರಿತು ನಿಖರತೆ ಇತ್ಯಾದಿಗಳನ್ನು ಪರಿಶೀಲಿಸಬೇಕು. ಅದರ ನಂತರ ಅದಕ್ಕೆ ಮತ್ತೆ ಮಶಿನ್ ನಲ್ಲಿ ಎತ್ತಿಟ್ಟು ಅಲೈನ್ ಮಾಡಬೇಕಾಗುತ್ತಿತ್ತು. ಅದರ ನಂತರ ಮುಂದಿನ ಯಂತ್ರಣೆಯ ಕೆಲಸವನ್ನು ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ 3 ಗಂಟೆಗಳ ಕಾಲಾವಧಿಯು ಬೇಕಾಗುತ್ತಿತ್ತು. ಈ ಕ್ರಿಯೆಯನ್ನು 2 ಬಾರಿ ಮಾಡಬೇಕಾಗುತ್ತಿತ್ತು. ಮಶಿನ್ ನಲ್ಲಿ ಉತ್ಪಾದನೆಯ ಪ್ರತಿಯೊಂದು ಸೈಕಲ್ ಟೈಮ್ ನಲ್ಲಿ 6 ಗಂಟೆಗಳು ವ್ಯರ್ಥವಾಗುತ್ತಿದ್ದವು. ಈ ಸೆಟಿಂಗ್ ಪ್ರಕ್ರಿಯೆಯನ್ನು ಕೈಯಿಂದಲೇ ಮಾಡಲಾಗುತ್ತಿದ್ದರಿಂದ ಅದರಲ್ಲಿಯೂ 30 ನಿಮಿಷಗಳ ಬೇಕಾಗುತ್ತಿದ್ದವು. ಬೃಹತ್ ಯಂತ್ರಭಾಗಗಳನ್ನು ಮಶಿನಿನಲ್ಲಿ ತೆರೆದು, ನಂತರ ಮಾಡಿರುವ ಕೆಲಸವು ನಿರ್ದೋಷವಾಗಿದೆಯೇ, ಇದರ ಕುರಿತು ಖಾತರಿ ವಹಿಸಲು ಅಥವಾ ಮಶಿನಿನಲ್ಲಿ ಡಯಲ್ ಹಚ್ಚಿ ಎಲ್ಲೆಡೆಯಲ್ಲಿಯೂ ತಿರುಗಿಸಿ ನೋಡುವುದು, ಇದಕ್ಕೆ ಎಷ್ಟು ಸಮಯವು ಖರ್ಚಾಗುತ್ತಿತ್ತೋ, ಅದು ಬೇರೆಯೇ ಆಗಿತ್ತು.
ಸುಧಾರಿಸಿರುವ ರೀತಿ
ಪ್ರಿಮೋ ಪ್ರಣಾಳಿಕೆಯ ಮೂಲಕ ಮಶಿನಿನಲ್ಲಿ ಪರೀಕ್ಷಣೆಯು ಆಗುವುದರಿಂದ ಯಂತ್ರಭಾಗಗಳನ್ನು ಮಶಿನ್ ನಿಂದ ಆಗಾಗ ತೆಗೆಯುವುದು, ಇನ್ನೊಂದು ಕಡೆಗೆ ಒಯ್ಯುವುದು ಮತ್ತು ನಂತರ ಮತ್ತೆ ಅಳವಡಿಸಿ ಸೆಟ್ ಮಾಡುವುದು, ಇಂತಹ ಅಂಶಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಯುನಿಮ್ಯಾಕ್ ನಲ್ಲಿ ಈಗ ಹೊಸ ಪ್ರಕ್ರಿಯೆಗೆ ಕೇವಲ 30 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಈ ರೀತಿಯಲ್ಲಿ ಪರೀಕ್ಷಣೆಗೆ ಬೇಕಾಗುವ ಸಮಯದಲ್ಲಿ 90 ಶೇಕಡಾ ಉಳಿತಾಯವಾಗಿದೆ. ಒಟ್ಟಾರೆ ಸೈಕಲ್ ಟೈಮ್ 12 ಶೇಕಡಾ ಕಡಿಮೆಯಾಗಿದೆ ಮತ್ತು ಇದಕ್ಕೋಸ್ಕರ ಹೂಡಬೇಕಾಗಿರುವ ಬಂಡವಾಳದಿಂದ ಕೇವಲ 4 ತಿಂಗಳುಗಳಷ್ಟೇ ಮರುಪಾವತಿಯು ಲಭಿಸಿದೆ.
ಪ್ರಿಮೋ ಪ್ರಣಾಳಿಕೆ ಬಳಸಲು ತುಂಬಾ ಸುಲಭವಾಗಿದೆ. ಇದಕ್ಕೆ ನೇರವಾದ ಪುರಾವೆ ಎಂದರೆ ಯುನಿಮ್ಯಾಕ್ ನಲ್ಲಿ ಅದರ ನಿರ್ಮಾಣ ಮತ್ತು ಮೌಲ್ಯಮಾಪನ ಮಾಡುವುದು ಒಂದೇ ದಿನದಲ್ಲಿ ಪೂರ್ತಿಗೊಳಿಸಲಾಯಿತು. ಅದರ ಗೋ-ಪ್ರೋಬ್ ತರಬೇತಿಯ ಕಿಟ್ ಮತ್ತು ಖಿಸೆಯಲ್ಲಿ ಇಡಬಹುದಾದಂತಹ ಗಾತ್ರದ ಮಾರ್ಗದರ್ಶಿಕೆಯಿಂದಾಗಿ ಈ ಪ್ರಣಾಳಿಕೆಯನ್ನು ಕಲಿಯುವುದು ಮತ್ತು ಕಾರ್ಯಗತಗೊಳಿಸಲು ತುಂಬಾ ಸಮಯವು ಬೇಕಾಗುವುದಿಲ್ಲ. ಇದಕ್ಕೋಸ್ಕರ G-ಕೋಡ್ ಕುರಿತು ವಿವರವಾದ ಮಾಹಿತಿ ಇರುವುದು ಅಗತ್ಯವಿಲ್ಲ, ಇದೇ ಅದರಲ್ಲಿರುವ ಬಹು ದೊಡ್ಡ ಲಾಭವಾಗಿದೆ. ಸುಲಭವಾದ ಒಂದೇ ವಾಕ್ಯದ ಆಜ್ಞೆ (ಕಮಾಂಡ್) ಬಳಸಿ ಈ ಪ್ರಣಾಳಿಕೆಯನ್ನು ಬಳಸಬಹುದಾಗಿದೆ. ಇದರಿಂದಾಗಿ ತುಂಬಾ ದೀರ್ಘವಾದ ಕೋಡ್ ಗಳನ್ನು ಕಲಿಯಲು ವಿಶೇಷವಾದ ತರಬೇತಿಯನ್ನು ಪಡೆಯುವ ಆವಶ್ಯಕತೆಯೂ ಇರುವುದಿಲ್ಲ. ಯಂತ್ರಭಾಗಗಳ ನಿಖರತೆ ಇದು ಮಶಿನಿನ ನಿಖರತೆಯಲ್ಲಿಯೇ ಅವಲಂಬಿಸಿರುವುದನ್ನು ಇಲ್ಲಿ ಗಮನಿಸಬೇಕು. ಈ ಪ್ರೋಬ್ ಕುರಿತಾದ ಪ್ರತ್ಯಕ್ಷವಾದ ಬಳಕೆಯನ್ನು ವೀಕ್ಷಿಸಲು ಪಕ್ಕದಲ್ಲಿರುವ QR ಕೋಡ್ ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ. ಈ ಪ್ರಣಾಳಿಕೆಯನ್ನು ಕಾರ್ಯಗತಗೊಳಿಸಿದ ನಂತರ, ಮಾನವ ಸಂಪನ್ಮೂಲ, ಮಟೀರಿಯಲ್ ನಿರ್ವಹಣೆ ಮತ್ತು ವಿದ್ಯುತ್ ಶಕ್ತಿಯ ಬಳಕೆ ಇವೆಲ್ಲದರ ಖರ್ಚಿನಲ್ಲಿ ಉಳಿತಾಯವಾಯಿತು. ಇದರ ಹೊರತಾಗಿ ಹೆಚ್ಚಿನ ಬಂಡವಾಳವನ್ನು ಹೂಡುವ ಆವಶ್ಯಕತೆಯೂ ಎದುರಾಗಿಲ್ಲ. ಈ ಉದ್ದಿಮೆಯಲ್ಲಿ ಕೆಲಸಕ್ಕೋಸ್ಕರ ಪ್ರೋಬಿಂಗ್ ಬಳಸಿದ್ದರಿಂದ ಉಂಟಾಗುವ ಲಾಭಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿವೆ.
ಶ್ರೀಪಾದ ಶೌಚೆ
ಉದ್ಯೋಗ ವಿಕಾಸ ವ್ಯವಸ್ಥಾಪಕರು, ರೆನಿಶಾ
020-66746400/01
ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾದ ಶ್ರೀಪಾದ ಶೌಚೆ ಇವರು ರೆನಿಶಾ ಕಂಪನಿಯಲ್ಲಿ ವ್ಯವಸಾಯ ಅಭಿವೃದ್ಧಿ ವ್ಯವಸ್ಥಾಪಕರಾಗಿದ್ದಾರೆ. ಈ ಮುಂಚೆ ಅವರು ರೆನಿಶಾ ಕಂಪನಿಯಲ್ಲಿಯೇ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಅವರಿಗೆ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸುದೀರ್ಘವಾದ ಅನುಭವವಿದೆ.