ಅನಿಯಮಿತ ಗಾತ್ರದ ಕಾರ್ಯವಸ್ತುಗಳನ್ನು ಹಿಡಿಯಲು ಫಿಕ್ಸ್ಚರ್ಸ್

@@NEWS_SUBHEADLINE_BLOCK@@

Udyam Prakashan Kannad    23-Apr-2020
Total Views |

1_1  H x W: 0 x
 
ಯಾವುದೇ ಲೇಥ್ ಮಶಿನಿನಲ್ಲಿ ಯಂತ್ರಣೆಯನ್ನು (ಮಶಿನಿಂಗ್) ಮಾಡುವಂತಹ ಕಾರ್ಯವಸ್ತು ಸಾಮಾನ್ಯವಾಗಿ ಸಿಲಿಂಡ್ರಿಕಲ್ ಆಕಾರದ್ದೇ ಇರುತ್ತದೆ. ಈ ಗಾತ್ರದ ಕಾರ್ಯವಸ್ತುಗಳನ್ನು ಹಿಡಿಯಲು 3 ಜಾ ಇರುವ ಸಿಮೆಟ್ರಿಕಲ್ ಚಕ್ಇದು ಯೋಗ್ಯವಾದ ಪರ್ಯಾಯವಾಗಿದೆ. ಆದರೆ ಯಾವುದೇ ಕಾರ್ಯವಸ್ತುವಿನ ಗಾತ್ರವು ಉರುಟು ಅಥವಾ ಒಂದೇರೀತಿಯಲ್ಲಿ ಇರದಿದ್ದಲ್ಲಿ ಆ ಕಾರ್ಯವಸ್ತುವನ್ನು ಹೆಚ್ಚುಸಹಜವಾಗಿ ಮತ್ತುನಿರ್ದೋಷವಾಗಿ ಹಿಡಿಯಲು ಫಿಕ್ಸ್ಚರ್ ಬಳಸುವುದಾದರೆಅದರ ವಿನ್ಯಾಸವನ್ನು (ಡಿಸೈನ್) ನಿರ್ಧರಿಸುವಾಗ ಇಂಜಿನಿಯರ್ ಎದುರು ನಿಜವಾದ ಸವಾಲು ಇರುತ್ತದೆ. ದೇಶದ ಮಾರುಕಟ್ಟೆಯಲ್ಲಿ ಸಿ.ಎನ್.ಸಿ. ಲೇಥ್ ನ ಬಳಕೆಯು ಹೆಚ್ಚಾಯಿತು. ಆಗ ಈ ರೀತಿಯ ಅನಿಯಮಿತವಾದ ಕಾರ್ಯವಸ್ತುಗಳನ್ನು ಹಿಡಿಯಲು ತಾಂತ್ರಿಕದೃಷ್ಟಿಯಿಂದ ಪರಿಪೂರ್ಣವಾದಂತಹ ಫಿಕ್ಸ್ಚರ್ ಉತ್ಪಾದನೆಯನ್ನು ಮಾಡಿ ಪೂರೈಸುವಂತಹ ಉದ್ಯಮಿಗಳ ಸಂಖ್ಯೆಕಡಿಮೆಯಾಯಿತು. ಇದೇಸಮಯದಲ್ಲಿ ಮಾರುಕಟ್ಟೆಯಲ್ಲಿರುವ ಈ ಸವಾಲನ್ನು ನಿರ್ದೋಷವಾಗಿ ಎದುರಿಸಿ ಓಂಕಾರ್ ಇಂಜಿನಿಯರಿಂಗ್ ಈ ಉದ್ಯಮಿಗಳು ಪುಣೆಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿದರು ಮತ್ತುಮುಂದಿನ ಕಾಲಾವಧಿಯಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿದರು.
 
ಪ್ರಾರಂಭದಲ್ಲಿ ಕೈಯಿಂದ ದೃಢಪಡಿಸುವಂತಹ ಚಕ್ ಗಳೊಂದಿಗೆ ಹೈಡ್ರಾಲಿಕ್ ಪವರ್ ಚಕ್ ಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ಪ್ರಾರಂಭಿಸಿದರು. ಆದರೆ ಗ್ರಾಹಕರು ಇದರಿಂದ ಸಂತೃಪ್ತರಾಗಲಿಲ್ಲ. ಅವರಿಗೆ ಅನಿಯಮಿತವಾದ ಅಥವಾ ಅಂಕುಡೊಂಕಾಗಿರುವ ಗಾತ್ರದ ಕಾರ್ಯವಸ್ತುಗಳ (ನಾನ್ ಸಿಮೆಟ್ರಿಕಲ್) ಯಂತ್ರಣೆಯನ್ನು ಲೇಥ್ ಮಶಿನ್ ನಲ್ಲಿ ಮಾಡಲು ವೈಶಿಷ್ಟ್ಯಪೂರ್ಣವಾದ ಚಕ್ ಗಳು ಬೇಕಾಗಿದ್ದವು. ನಾವು ಈ ರೀತಿಯ ಸವಾಲುಗಳನ್ನು ಸ್ವೀಕರಿಸಿ ಕೇವಲ ಈ ರೀತಿಯ ಚಕ್ ಗಳ ಡಿಸೈನ್ ಮಾಡಿ ನಿಲ್ಲದೇ ಅವುಗಳನ್ನು ತಯಾರಿಸಿ, ಗ್ರಾಹಕರೆಡೆಗೆ ಹೋಗಿ ಯಶಸ್ವಿಯಾದೆವು. ಇದರಿಂದಾಗಿ ಗ್ರಾಹಕರ ಕೆಲಸವು ತುಂಬಾ ಸುಲಭ ಮತ್ತು ಲಾಭಕಾರಿಯಾಯಿತು. ಇದರಿಂದಾಗಿ ನಾವು ಈ ಸವಾಲುಗಳಿಗೆ ಕಡಿಮೆ ವೇಳೆಯಲ್ಲಿ ಮತ್ತು ಸೂಕ್ತವಾದ ಪರಿಹಾರವನ್ನು ನೀಡುವವರೆಂದು ತಿಳಿಯಲಾಯಿತು.
 
ಉದ್ಯಮದ ವ್ಯಾಪ್ತಿಯು ಹೆಚ್ಚುತ್ತಿದ್ದಂತೆ ಸಿ.ಎನ್.ಸಿ. ಲೇಥ್ ನಲ್ಲಿರುವ ಚಕ್ಸ್ ಮತ್ತು ಅದರ ಬಿಡಿಭಾಗಗಳೊಂದಿಗೆ ಹೈಡ್ರಾಲಿಕ್ ಸಿಲಿಂಡರ್ಸ್, ಹೈಡ್ರಾಲಿಕ್ ಪವರ್ ಪ್ಯಾಕ್ಸ್, ಎಚ್.ಎಮ್.ಸಿ. ಮಶಿನ್ ಗೆ ಬೇಕಾಗುವಂತಹ ಪಿಕ್ಸ್ಚರ್ ಗಳನ್ನು ಯಶಸ್ವಿಯಾಗಿ ಪೂರೈಸಿ ಈ ಕ್ಷೇತ್ರದಲ್ಲಿಯೂ ನಮ್ಮ ಸ್ಥಾನವನ್ನು ದೃಢಪಡಿಸಿದೆವು.
ಯಾವುದೇ ಶಾಸ್ತ್ರೋಕ್ತವಾದ ಫಿಕ್ಸ್ಚರ್ಸ್ ನ ರಚನೆಯು 3-2-1 ಈ ಸೂತ್ರಕ್ಕೆ ಅವಲಂಬಿಸಿರುತ್ತದೆ. ಈ ಸೂತ್ರವು ಯಾವ ಫಿಕ್ಸ್ಚರ್ ನಲ್ಲಿ ಸೂಕ್ಷ್ಮವಾಗಿ ಬಳಸಲಾಗುತ್ತದೆಯೋ, ಈ ಕಾರ್ಯಪದ್ಧತಿಯಿಂದ ಹೊರಗೆ ಬರುತ್ತಿರುವ ಕಾರ್ಯವಸ್ತುವಿನ (ಜಾಬ್ ಕ್ವಾಲಿಟಿ) ಗುಣಮಟ್ಟದಲ್ಲಿ ಗರಿಷ್ಠ ಪ್ರಮಾಣದ ನಿರಂತರತೆಯು ಲಭಿಸುತ್ತದೆ.
 
ವಿವಿಧ ಟರ್ನಿಂಗ್ ಫಿಕ್ಸ್ಚರ್ ಗಳು
 

2 3_2  H x W: 0 

2 3_1  H x W: 0 
 
1. 450 ಎಲ್ಬೋ ಗಳ ಯಂತ್ರಣೆಗೋಸ್ಕರ ಸಿ.ಎನ್.ಸಿ. ಮೇಲಿರುವ ಚಕ್
 
ಚಿತ್ರಕ್ರ. 1 ರಲ್ಲಿ ತೋರಿಸಿದಂತೆ ಕಾರ್ಯವಸ್ತು ಲೇಥ್ ಮಶಿನ್ ನಲ್ಲಿರುವ 3 ಅಥವಾ 4 ಜಾಗಳಿರುವ ಚಕ್ ನಲ್ಲಿ ಹಿಡಿದು ಅಕ್ಷದ ಕಾನ್ಸೆಂಟ್ರಿಕ್ ಒರಗಿಸುವುದು ಸಾಧ್ಯವಿರಲಿಲ್ಲ. ಇದರಿಂದಾಗಿ ಮುಂದಿನ ಎಲ್ಲ ಕಾರ್ಯಪದ್ಧತಿಗಳು ತುಂಬಾ ಕ್ಲಿಷ್ಟವಾಗಿ ಹೆಚ್ಚು ಖರ್ಚು ಆಗುವಂತಹದ್ದಾಗಿದ್ದವು. ಈ ಕಾರ್ಯವಸ್ತುಗಳ ಎರಡೂ ಅಕ್ಷಗಳಲ್ಲಿ ಯಂತ್ರಣೆಯ ಕೆಲಸವನ್ನು ಮಾಡಲು ಫಿಕ್ಸ್ಚರ್ ತಯಾರಿಸುವಾಗ ಯಾವ ಸವಾಲುಗಳನ್ನು ಎದುರಿಸಬೇಕಾಯಿತು, ಎಂಬುದನ್ನು ಈ ಕೆಳಗಿನ ಅಂಶಗಳಿಂದ ತಿಳಿಯೋಣ.
• ಕಾರ್ಯವಸ್ತು ಮಶಿನ್ ನಲ್ಲಿ ಅಳವಡಿಸುವಾಗ ಅಥವಾ ಬಿಡಿಸುವಾಗ ಕೆಲಸಗಾರರಿಗೆ ತುಂಬಾ ಸುಲಭ ಮತ್ತು ಅಚ್ಚುಕಟ್ಟಾದ ವ್ಯವಸ್ಥೆ ಇರಬೇಕು.
• ಕಾರ್ಯವಸ್ತು ಕನಿಷ್ಠ ಸಮಯ ಮತ್ತು ಶ್ರಮದಿಂದಾಗಿ ನಿರಂತರವಾಗಿ ಯೋಗ್ಯ ಜಾಗದಲ್ಲಿ ಸ್ಥಿರವಾಗುವುದು.
• ಕಾರ್ಯವಸ್ತುವಿನ ಎರಡು ಅಕ್ಷಗಳಲ್ಲಿರುವ ಒಂದಕ್ಕೊಂದಕ್ಕೆ ಸಂಬಂಧಪಟ್ಟ ಮಾಪನಗಳು ನಿರಂತರವಾಗಿ ಅಪೇಕ್ಷಿಸಿರುವ ಟಾಲರನ್ಸ್ ನಲ್ಲಿ ಪಡೆಯುವುದು.
• ಯಂತ್ರಣೆಯಿಂದಾಗಿ ಉಂಟಾಗುವ ಫೋರ್ಸ್ ನಿಂದ ಉಂಟಾಗುವ ಪ್ರತಿಕ್ರಿಯೆಗಳನ್ನು ಸಹಿಸುವ ಸಾಮರ್ಥ್ಯವಿರುವುದು.
 

4 5_2  H x W: 0 
 
ನಮ್ಮ ಡಿಸೈನ್ ವಿಭಾಗದವರು ಒಂದು ಸುಲಭ, ಅಚ್ಚುಕಟ್ಟಾದ ಮತ್ತು ಹೊಸದಾದ ಕಲ್ಪನೆಗಳನ್ನು ಪ್ರಸ್ತುತ ಪಡಿಸಿದರು. 4 ಜಾಗಳಿರುವ ಚಕ್ ನ ಪ್ರತಿಯೊಂದು ಬೇರೆಯೇ ವಿಧದ ಡಿಸೈನ್ ಮಾಡಿ ಪ್ರತಿಯೊಂದರ ಕಾರಣಗಳನ್ನು ನಿರ್ಧರಿಸಲಾಯಿತು. ಉದಾಹರಣೆ, ಎದುರುಬದುರಾಗಿರುವ ಜಾಗಳ ಜೋಡಿಯಲ್ಲಿರುವ ಒಂದೇ ಕಾರ್ಯವಸ್ತು ಒರಗಿರುವ ಸರ್ಫೇಸ್ ಗೆ 450 ಕೋನವನ್ನು ನೀಡಿ ಇನ್ನೊಂದಕ್ಕೆ ‘ವಿ’ ಆಕಾರವನ್ನು ನೀಡಲಾಯಿತು. ಎರಡನೇ ಜೋಡಿ ಹಲವಾರು ಬದಲಾವಣೆಗಳನ್ನು ಮಾಡದೇ (ಚಿತ್ರ ಕ್ರ. 2) ಹಾಗೆಯೇ ಇಡಲಾಯಿತು. ಅದಕ್ಕೆ ಅನುಸಾರವಾಗಿ ಅವರ ಟೂಲ್ ರೂಮ್ ನಲ್ಲಿ ಇವೆಲ್ಲವನ್ನೂ ಸೂಕ್ಷ್ಮವಾಗಿ ತಯಾರಿಸಿದೆವು. ಉತ್ಪಾದನೆಯ ನಂತರ ಅದರ ಪ್ರಯೋಗ ಯಶಸ್ವಿಗೊಳಿಸಿ ಅದನ್ನು ಗ್ರಾಹಕರಿಗೆ ನೀಡಲಾಯಿತು.
 
2. ಸ್ಟಿಯರಿಂಗ್ ಹೌಸಿಂಗ್ ನ ಯಂತ್ರಣೆಯ ಫಿಕ್ಸ್ಚರ್
 
ಒಂದು ಹೆಸರಾಂತ ಕಂಪನಿಯ ಪೂರೈಕೆದಾರರಿಗೆ ಸ್ಟಿಯರಿಂಗ್ ಹೌಸಿಂಗ್ ತಯಾರಿಸಿ ಕೊಡುವ ಆರ್ಡರ್ ಸಿಕ್ಕಿತ್ತು. ಈ ಹೌಸಿಂಗ್ ನ ರಚನೆಯಿಂದಾಗಿ ಅದನ್ನು ಸಹಜವಾಗಿ ಹಿಡಿದಿಡುವುದು ಕಠಿಣ ಮತ್ತು ಅಸಾಧ್ಯವಾಗಿತ್ತು. ಅದೇ ಸಮಯದಲ್ಲಿ ಆ ಪೂರೈಕೆದಾರರು ವಿದೇಶದಲ್ಲಿ (UK) ಒಂದು ವಿಶೇಷವಾದ ಮಶಿನ್ ನ ಸ್ಪಿಂಡಲ್ ಅಳವಡಿಸಿರುವ ಫಿಕ್ಸ್ಟರ್ ನ ನೋಡಿದ್ದರು. ಆ ಕಾಲದಲ್ಲಿ ಅವರು ಮಶಿನ್ ಒಂದು ವೇಳೆ ಆಮದು ಮಾಡುವ ವಿಚಾರವನ್ನು ಮಾಡಿದರೂ ಕೂಡಾ ಅದರ ಬೆಲೆ ಒಂದು ಮುಕ್ಕಾಲು ಕೋಟಿ ರೂಪಾಯಿಗಳಷ್ಟಿತ್ತು. ಈ ಪರಿಸ್ಥಿತಿಯಲ್ಲಿ ಅವರಿಗೆ ಈ ಆರ್ಡರ್ ಲಾಭವನ್ನುಂಟು ಮಾಡುವಂತಹದ್ದಾಗಿರಲಿಲ್ಲ. ತಮ್ಮ ಪರಿಚಯದವರಿಂದ ಅವರು ನಮಗೆ ಈ ಹೌಸಿಂಗ್ ಗೆ ಬೇಕಾಗುವ ಫಿಕ್ಸ್ಚರ್ ಡಿಸೈನ್ ಮಾಡಿಕೊಡುವಂತೆ ವಿಚಾರಿಸಿದರು.
 

4 5_1  H x W: 0 
 
3-2-1 ಈ ಸೂತ್ರದ ಪ್ರಕಾರ ಸೂಕ್ಷ್ಮವಾಗಿ ಬಳಸುತ್ತಾ ಫಿಕ್ಸ್ಚರ್ ತುಂಬಾ (ಚಿತ್ರ ಕ್ರ. 3) ಸ್ವಲ್ಪ ಸಮಯದಲ್ಲಿಯೇ ಕೇವಲ 85 ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಿ ತಯಾರಿಸಿದೆವು. ನಂತರ ಅದನ್ನು ಪೂರೈಕೆದಾರರ ಕಂಪನಿಯಲ್ಲಿರುವ ಮಶಿನ್ ನಲ್ಲಿಯೇ ಯಶಸ್ವಿಯಾಗಿ ತಯಾರಿಸಿ ಕೊಟ್ಟೆವು.
ಆ ಪೂರೈಕೆದಾರರಿಗೆ ವಿವಿಧ ಕಡೆಗಳಲ್ಲಿ ಬಳಸಬಹುದಾದ ಅನೇಕ ವಿಧದ ಹೌಸಿಂಗ್ ಗಳು ಆಗಾಗ ಬೇಕಾಗುತ್ತಿದ್ದವು. ಸಹಜವಾಗಿಯೇ ಅದಕ್ಕೆ ಬೇಕಾಗುವಂತಹ ವಿವಿಧ ಫಿಕ್ಸ್ಚರ್ ಗಳು ಕೂಡಾ ಆಗಾಗ ಬೇಕಾಗುತ್ತಿದ್ದವು. ಈ ಅವಕಾಶವನ್ನು ಗಮನಿಸಿ ನಾವು ಪ್ರಾರಂಭದಲ್ಲಿ ತಯಾರಿಸಿರುವ ಹೌಸಿಂಗ್ ನ ಫಿಕ್ಸ್ಚರ್ ಗಳ ಡಿಸೈನ್ ನಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿ ಅದರ ಬೆಲೆಯನ್ನು ನಿಯಂತ್ರಿಸಿಬಹುದಾದ ಧೋರಣೆಯನ್ನು ಕಾರ್ಯಗತಗೊಳಿಸಿದೆವು. ಇದರ ಪರಿಣಾಮದಿಂದಾಗಿ ಸುಮಾರು 8-9 ವರ್ಷಗಳ ನಂತರವೂ ಇಂತಹ ಫಿಕ್ಸ್ಚರ್ ಗಳು ಸಾಮಾನ್ಯವಾಗಿ ಪ್ರಾರಂಭದ ಬೆಲೆಯಲ್ಲಿಯೇ ಪೂರೈಸುತ್ತಿದ್ದೆವು.
 
3. ಸ್ಟೆಟರ್ ಹೌಸಿಂಗ್ ನ ಯಂತ್ರಣೆಯ ಫಿಕ್ಸ್ಚರ್
 

6_1  H x W: 0 x 
 
ನಮ್ಮ ಒಬ್ಬ ಗ್ರಾಹಕರು ಅವರ ಸ್ಟೆಟರ್ ಹೌಸಿಂಗ್ ಗೋಸ್ಕರ ತುಂಬಾ ಅತ್ಯುಚ್ಚಮಟ್ಟದ ಫಿಕ್ಸ್ಚರ್ ತಯಾರಿಸಲು ಒತ್ತಾಯ ಮಾಡಿದರು. ಈ ಹೌಸಿಂಗ್ ತುಂಬಾ ಸೂಕ್ಷ್ಮವಾಗಿತ್ತು. ಆದ್ದರಿಂದ ಅದಕ್ಕೆ ಎಲ್ಲ ಬದಿಗಳಲ್ಲಿಯೂ ಮಶಿನಿಂಗ್ ಮಾಡಬೇಕಾಗಿರಲಿಲ್ಲ. ಆದರೆ ಮಶಿನಿಂಗ್ ಮಾಡದಿರುವ ಭಾಗದೊಂದಿಗೆ ಮಶಿನಿಂಗ್ ಮಾಡುವಂತಹ ಭಾಗಗಳಲ್ಲಿ ಪರಸ್ಪರ ಸಂಬಂಧವು ತುಂಬಾ ಹೆಚ್ಚಾಗಿರುತ್ತದೆ. ಹಾಗೆಯೇ ಅದರ ಅಕ್ಷೀಯ ಮಾಪನದಲ್ಲಿಯೂ ತುಂಬಾ ನಿಯಂತ್ರಣೆಯ ಅಗತ್ಯವಿತ್ತು. ಈ ಎಲ್ಲ ಬೇಡಿಕೆಗಳನ್ನು ಪೂರ್ತಿಮಾಡುವ ಕುರಿತು ವಿಚಾರ ಮಾಡಿದ ನಂತರ ಹೋನಿಂಗ್ ಆಪರೇಶನ್ ನ ಕ್ವಿಲ್ ಗೆ ಹೇಗೆ ಎಕ್ಸ್ ಪಾಂಡಿಂಗ್ ಮ್ಯಾಂಡ್ರಿಲ್ ನ ರಚನೆಯು ಇರುತ್ತದೆಯೋ, ನಾವು ಒಂದು ರೀತಿಯ ಫಿಕ್ಸ್ಚರ್ (ಚಿತ್ರ ಕ್ರ. 4) ತಯಾರಿಸಿದೆವು, ಇದರಿಂದ ಅದರ ರಚನೆಯ ಹೋನಿಂಗ್ ಆಪರೇಶನ್ ಮಾಡಬಲ್ಲ ಕ್ವಿಲ್ ನಲ್ಲಾಗುವ ಎಕ್ಸ್ಪಾಂಡಿಂಗ್ ಮ್ಯಾಂಡ್ರೆಲ್ ನ ರಚನೆಯಂತೆ ಇರುತ್ತದೆ. ಈ ಫಿಕ್ಸ್ಚರ್ ನ ಪರೀಕ್ಷೆಯನ್ನು ಮಾಡುವ ಮೊದಲನೆಯ ಪ್ರಯತ್ನದಲ್ಲಿಯೇ ಗುಣಮಟ್ಟದ ಸ್ತರವು ಅಪೇಕ್ಷಿಸಿರುವ ಹಂತದಲ್ಲಿತ್ತು. ಅಲ್ಲದೇ ಇದು ಬಳಸಲು ತುಂಬಾ ಸುಲಭವಾಗಿತ್ತು. ಕೆಲಸಗಾರರಿಗೆ ಇದರಿಂದ ಯಾವುದೇ ರೀತಿಯ ಅಡಚಣೆಯೂ ಉಂಟಾಗಲಿಲ್ಲ. ನಂತರ ಇದೇ ರೀತಿಯ ಕಠಿಣ ಅಥವಾ ಸವಾಲುಗಳಿರುವಂತಹ ಫಿಕ್ಸ್ಚರ್ ಗಳ ಪೂರೈಕೆದಾರರು ಎಂದರೆ ಓಂಕಾರ್ ಇಂಜಿನಿಯರಿಂಗ್ ಎಂಬ ವಿಚಾರವು ಎಲ್ಲರಲ್ಲಿಯೂ ತಮ್ಮ ಸ್ಥಾನವನ್ನು ದೃಢಪಡಿಸಿತು.
 
ಫಿಕ್ಸ್ಚರ್ ಯಶಸ್ವಿಯಾದ ನಂತರ ಇದು ತುಂಬಾ ಪ್ರಸಿದ್ಧವಾಯಿತು. ವಿದೇಶದಲ್ಲಿ ಜನ್ ಸೆಟ್ ತಯಾರಿಸುವಂತಹ ಪಾಲುದಾರರು ಅಥವಾ ಗ್ರಾಹಕರು ನಮ್ಮಲ್ಲಿ ಭೇಟಿನೀಡಿದಾಗ ಫಿಕ್ಸ್ಚರ್ ಗಳ ಕುರಿತು ಪ್ರಶಂಸಿಸುತ್ತಿದ್ದರು. ಅಲ್ಲದೇ ಅದರ ಫೊಟೋಗಳನ್ನೂ ಕೂಡಾ ತೆಗೆದು ತಮ್ಮಲ್ಲಿ ಸಂಗ್ರಹಿಸುತ್ತಿದ್ದರು. ಇದರಿಂದಾಗಿ ಈ ತಂತ್ರಜ್ಞಾನ ಮತ್ತು
ಉತ್ಪಾದನೆಯು ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯಿತು.
 
 

ajay_1  H x W:  
ಅಜಯ್ ಪುರೋಹಿತ್
ನಿರ್ದೇಶಕರು, ಓಂಕಾರ್ ಇಂಜಿನಿಯರಿಂಗ್ 
9822431267
 
ಅಜಯ್ ಪುರೋಹಿತ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಇವರು 20 ವರ್ಷಗಳ ದೀರ್ಘಾವಧಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 2004 ರಲ್ಲಿ ಓಂಕಾರ್ ಇಂಜಿನಿಯರಿಂಗ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಫಿಕ್ಸ್ಚರ್ ಗಳನ್ನು ತಯಾರಿಸುವ ಕಂಪನಿ ಎಂದು ಈ ಕಂಪನಿಯನ್ನು ಗುರುತಿಸಲಾಗುತ್ತದೆ.
 
 
@@AUTHORINFO_V1@@