ಲೋಹಕಾರ್ಯ ಡಿಸೆಂಬರ್ 2019 ರ ಸಂಚಿಕೆಯಲ್ಲಿ ಟಂಬಲ್ ಅಥವಾ ಟಂಬಲಿಂಗ್ ಟೈಪ್ ಜಿಗ್ಸ್ ಗಳ ಕುರಿತು ತಿಳಿದುಕೊಂಡೆವು. ಈ ಲೇಖನದಲ್ಲಿ ಪಾಟ್ಟೈಪ್ ಜಿಗ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ. ಫಿಕ್ಸ್ಚರ್ ನ ಗಾತ್ರವು ಒಂದು ಪಾಟ್ ನ ಆಕಾರದಂತೆ ಇರುವುದರಿಂದ ಅದಕ್ಕೆ ಪಾಟ್ಟೈಪ್ ಫಿಕ್ಸ್ಚರ್ ಅಥವಾ ಜಿಗ್ ಎಂದು ಹೇಳಲಾಗುತ್ತದೆ. ಚಿತ್ರಕ್ರ. 1 ರಲ್ಲಿ ತೋರಿಸಿರುವ ಕಾರ್ಯವಸ್ತುವಿಗೆ ಒಳಗಿನ ವ್ಯಾಸ ‘d’ ಮತ್ತು ಹೊರಗಿನ ವ್ಯಾಸ ‘D’ ಇವುಗಳು ಕಂಟ್ರೋಲ್ಡ್ ಮತ್ತು ಸಿಮೆಟ್ರಿಕ್ ಆಗಿರುತ್ತವೆ. ಈ ಜಿಗ್ ನ ಪ್ರಮುಖ ಭಾಗಗಳ ಕೆಲಸವು ಏನಿರುತ್ತದೆ ಎಂಬುದನ್ನು ತಿಳಿಯೋಣ.
1. ಫಿಕ್ಸ್ಚರ್ ಬಾಡಿ
ಚಿತ್ರ ಕ್ರ. 1 ರಲ್ಲಿ ಫಿಕ್ಸ್ಚರ್ ನ ಬಾಡಿಯು ಪಾಟ್ ನ ಗಾತ್ರದಂತೆ ಕಾಣುತ್ತದೆ. ಫಿಕ್ಸ್ಚರ್ ಬಾಡಿಯ ರೆಸ್ಟಿಂಗ್ ಸರ್ಫೇಸ್ ‘R’, ಕೆಳ ಭಾಗದ ಸರ್ಫೇಸ್ ಮತ್ತು ‘D’ ವ್ಯಾಸ ಇದು ಹಾರ್ಡ್ನ್ ಮತ್ತು ಗ್ರೈಂಡಿಂಗ್ ಮಾಡಲ್ಪಟ್ಟದ್ದಾಗಿವೆ. ಎರಡೂ ಸರ್ಫೇಸ್ ಗಳು ಒಂದಕ್ಕೊಂದಕ್ಕೆ ಸಮಾನಾಂತರವಾಗಿ ಗ್ರೈಂಡಿಂಗ್ ಮಾಡಲಾಗಿರುತ್ತವೆ. ಹಾಗೆಯೇ ‘D’ ವ್ಯಾಸವು ಹಾರಿಝಾಂಟಲ್ ಇರುವುದೂ ಆವಶ್ಯಕವಾಗಿದೆ. ‘D’ ಈ ವ್ಯಾಸದಲ್ಲಿ ಕಾರ್ಯವಸ್ತು ಲೊಕೇಟ್ ಮಾಡಲ್ಪಟ್ಟಿರುತ್ತದೆ ಮತ್ತು ಇದರ ಕಾರಣವು ತಿಳಿದಿರಬಹುದು, ಕಾರಣ ಅದರಲ್ಲಿರುವ ಮಾಡುತ್ತಿರುವ ರಂಧ್ರಗಳು ‘D’ ವ್ಯಾಸದೊಂದಿಗೆ ಸಿಮೆಟ್ರಿಕ್ ಆಗುವುದೂ ಅತ್ಯಾವಶ್ಯಕವಾಗಿದೆ. ಈ ಭಾಗದಲ್ಲಿ ರಂಧ್ರಗಳ ಕೆಳಗೆ 4 ಕಚ್ಚುಗಳನ್ನು ಮಾಡಲಾಗಿರುತ್ತದೆ. ಅವುಗಳ ಕೆಲಸವು ಈ ಕೆಳಗಿನಂತಿದೆ.
ಎ. ರಂಧ್ರಗಳಿಗೆ ಆರುಪಾರಾಗಿ ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ ಕಾರ್ಯವಸ್ತುವಿನ ಸರ್ಫೇಸ್ ನ ಸ್ವಲ್ಪಕೆಳಗೆ ಬರಬೇಕಾಗುತ್ತದೆ. ಕಚ್ಚಿನಿಂದಾಗಿ ಆರುಪಾರಾಗಿ ಕಚ್ಚುಗಳನ್ನು ಮಾಡುವುದು ಸಾಧ್ಯವಾಗುತ್ತದೆ.
ಬಿ. ರಂಧ್ರಗಳನ್ನು ಮಾಡುವಾಗ ತಯಾರಾಗುವ ಚಿಪ್ ಗಳು ಕೆಳಗೆ ಬೀಳುತ್ತವೆ.
ಸಿ. ಒಂದು ವೇಳೆ ಕಾರ್ಯವಸ್ತುವನ್ನು ತೆಗೆಯುವಾಗ ಸಿಲುಕಿದಲ್ಲಿ ಈ ಕಚ್ಚಿನಿಂದಾಗಿ ಅದನ್ನು ತೆಗೆಯುವುದು ಸುಲಭವಾಗಿದೆ.
ಡಿ. ಡ್ರಿಲ್ಲಿಂಗ್ ನಿಂದಾಗಿ ತಯಾರಾಗುವ ಬರ್ ಕಚ್ಚಿನಲ್ಲಿ ಹೊಂದಾಣಿಸಲಾಗುತ್ತದೆ.
2. ಜಿಗ್ ಪ್ಲೇಟ್
ಜಿಗ್ ಪ್ಲೇಟ್ ನ ವ್ಯಾಸವು ಕಾರ್ಯವಸ್ತುವಿನ ವ್ಯಾಸಕ್ಕಿಂತ ದೊಡ್ಡದಾಗಿ ಯಾಕೆ ಇಡಲಾಗುತ್ತದೆ, ಎಂಬ ಪ್ರಶ್ನೆಯು ಮೂಡಿಬರುತ್ತದೆ. ಇದರ ಕಾರಣವೆಂದರೆ ನಾವು ಜಿಗ್ ಪ್ಲೇಟನ್ನು ಮುಂಚೆ ತೆಗೆಯುತ್ತೇವೆ ಮತ್ತು ಅದರ ನಂತರ ಕಾರ್ಯವಸ್ತುವನ್ನು ತೆಗೆಯುತ್ತೇವೆ. ಜಿಗ್ ಪ್ಲೇಟ್ ನ ಗಾತ್ರವು ಕಾರ್ಯವಸ್ತುವಿನ ಗಾತ್ರಕ್ಕಿಂತ ದೊಡ್ಡದಾಗಿರುವುದರಿಂದ ಅದನ್ನು ಯೋಗ್ಯವಾಗಿ ಹಿಡಿಯಬಹುದು. ಒಂದು ವೇಳೆ ಕಾರ್ಯವಸ್ತುವಿನ ವ್ಯಾಸದ ಅಳತೆಯಷ್ಟೇ ಅಥವಾ ಚಿಕ್ಕದಾಗಿ ಅಳವಡಿಸಿದಲ್ಲಿ ಜಿಗ್ ಪ್ಲೇಟ್ ಹಿಡಿಯುವುದು ಅಸಾಧ್ಯ.
ಜಿಗ್ ಪ್ಲೇಟ್ ಕಾರ್ಯವಸ್ತುವಿನ ಒಳ ವ್ಯಾಸದಲ್ಲಿ (d) ಲೊಕೇಟ್ ಮಾಡಲಾಗಿರುತ್ತದೆ ಮತ್ತು ಕಾರ್ಯವಸ್ತು ಫಿಕ್ಸ್ಚರ್ ಬಾಡಿಯಲ್ಲಿ ‘D’ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿರುತ್ತದೆ. ಇದರಿಂದಾಗಿ ಜಿಗ್ ಪ್ಲೇಟ್, ಕಾರ್ಯವಸ್ತು ಮತ್ತು ಫಿಕ್ಸ್ಚರ್ ಬಾಡ್ ಸಿಮೆಟ್ರಿಕ್ ಆಗಿ ಅಳವಡಿಸಲ್ಪಟ್ಟಿರುತ್ತವೆ. ಇದರಿಂದಾಗಿ ಈ ಮೂರೂ ಭಾಗಗಳು ಯಾವಾಗಲೂ ಒಂದೇ ನಿರ್ದಿಷ್ಟ ಸಂದರ್ಭದೊಂದಿಗೆ ಅಳವಡಿಸಲ್ಪಡುತ್ತವೆ ಮತ್ತು ಇದು ಅತ್ಯಾವಶ್ಯಕವಾಗಿದೆ.
ಜಿಗ್ ಪ್ಲೇಟ್ ನಲ್ಲಿ 45 ಡಿಗ್ರಿಗಳಲ್ಲಿ ಒಂದೇ ಕಚ್ಚನ್ನು ನೀಡಲಾಗಿದೆ. ಈ ಕೋನವು 45 ಡಿಗ್ರಿಯಲ್ಲಿಯೇ ಇರಬೇಕು ಎಂಬುದೇನಿಲ್ಲ. ಈ ಕೋನ 15 ಡಿಗ್ರಿ, 30 ಡಿಗ್ರಿಯಲ್ಲಿ ಹೀಗೆ ಯಾವುದೇ ರೀತಿಯಲ್ಲಿ ಸುಲಭವಾಗುವಂತೆ ಅಳವಡಿಸಬೇಕು. ಇದರಿಂದಾಗಿ ಜಿಗ್ ಪ್ಲೇಟ್ ನ ಎಂಗಲ್ ಗಳ ಸಂದರ್ಭವನ್ನು ಯಾವಾಗಲೂ ಕಾಪಾಡಲಾಗುತ್ತದೆ. ಕಾರಣ ಈ ಕಚ್ಚು ಓರಿಯೆಂಟೇಶನ್ ಪಿನ್ ನಲ್ಲಿ ಅಳವಡಿಸಲ್ಪಡುತ್ತದೆ. ಇದರಿಂದಾಗಿ ಜಿಗ್ ಬುಶ್ ನಿಖರವಾಗಿ ಫಿಕ್ಸ್ಚರ್ ಬಾಡಿಯಲ್ಲಿರುವ ಕಚ್ಚಿನ ತನಕ ಬರುತ್ತದೆ ಮತ್ತು ರಂಧ್ರವನ್ನು ಆರುಪಾರಾಗಿ ಡ್ರಿಲ್ ಮಾಡುವಾಗ ಈ ಕಚ್ಚಿನಲ್ಲಿ ಪ್ರವೇಶಿಸುವುದರಿಂದ ಫಿಕ್ಸ್ಚರ್ ಬಾಡಿ ಹಾಳಾಗುವುದಿಲ್ಲ ಅಥವಾ ಡ್ರಿಲ್ ತುಂಡಾಗುವುದಿಲ್ಲ. ಒಂದು ವೇಳೆ ನಾವು ಕಚ್ಚಿನ ಬದಲಾಗಿ ಪಿನ್ ನ ಅಳತೆಯ ರಂಧ್ರವನ್ನು ಜಿಗ್ ಪ್ಲೇಟ್ ನಲ್ಲಿ ಮಾಡಿದರೂ ನಡೆಯುತ್ತದೆ, ಆದರೆ ಇದರಿಂದಾಗಿ ಜಿಗ್ ಪ್ಲೇಟ್ ಸುಲಭವಾಗಿ ತೆಗೆಯುವುದು ಮತ್ತು ಅಳವಡಿಸುವುದು ಅಸಾಧ್ಯವಾಗುತ್ತದೆ. ಈ ರೀತಿಯಲ್ಲಿ ತೆಗೆಯುವುದು ಮತ್ತು ಅಳವಡಿಸುವ ಪ್ರಕ್ರಿಯೆಯು ಸುಲಭವಾಗಿ ಮಾಡಲು ಒಂದು ವೇಳೆ ಜಿಗ್ ಪ್ಲೇಟ್ ನಲ್ಲಿರುವ ರಂಧ್ರವನ್ನು ದೊಡ್ಡದಾಗಿ ಮಾಡಿದಲ್ಲಿ ಜಿಗ್ ಬುಶ್ ಫಿಕ್ಸ್ಚರ್ ಬಾಡಿಯಲ್ಲಿರುವ ಕಚ್ಚಿನ ಕಡೆಗೆ ಬರುವುದಿಲ್ಲ ಮತ್ತು ಇದರಿಂದಾಗಿ ಫಿಕ್ಸ್ಚರ್ ಬಾಡಿಯಲ್ಲಿ ತಿಕ್ಕಲ್ಪಟ್ಟಿದ್ದರಿಂದ ಡ್ರಿಲ್ ತುಂಡಾಗುವ ಸಾಧ್ಯತೆಇರುತ್ತದೆ. ಈ ಜಿಗ್ ಪ್ಲೇಟ್ ಕೇಸ್ ಹಾರ್ಡ್ ಮಾಡಿ ಅಗತ್ಯವಿದ್ದಲ್ಲಿ ಗ್ರೈಂಡಿಂಗ್ ಮಾಡಲಾಗಿರುತ್ತದೆ.
3. ಓರಿಯೆಂಟೇಶನ್ ಪಿನ್
ಈ ಪಿನ್ ಫಿಕ್ಸ್ಚರ್ ಬಾಡಿಯಲ್ಲಿ ಪ್ರೆಸ್ ಫಿಟ್ (H7/m6) ಈ ರೀತಿಯಲ್ಲಿ ಅಳವಡಿಸಲ್ಪಟ್ಟಿರುತ್ತದೆ. ಈ ಪಿನ್ ನ ಕೆಲಸವು ಏನಿದೆ ಎಂಬುದನ್ನು ನಾವು ತಿಳಿದುಕೊಂಡೆವು. ಒಂದು ವೇಳೆ ಕಾರ್ಯವಸ್ತುವಿನಲ್ಲಿರುವ ರಂಧ್ರಗಳು ಆರುಪಾರಾಗಿ ಇಲ್ಲದಿದ್ದಲ್ಲಿ ಈ ಪಿನ್ ನ ಆವಶ್ಯಕತೆಯು ಇದೆಯೇ? ಎಂಬ ಪ್ರಶ್ನೆಯು ಮೂಡಿಬರುತ್ತದೆ. ಆದರೆ ಈ ಪ್ರಶ್ನೆಗೆ ಉತ್ತರವೇ ‘ಇಲ್ಲ’ ಎಂಬುದಾಗಿದೆ. ಕಾರಣ ರಂಧ್ರಗಳು ಆರುಪಾರಾಗಿ ಇಲ್ಲದಿರುವುದರಿಂದ ಡ್ರಿಲ್ ಫಿಕ್ಸ್ಚರ್ ಯ ಸಂಪರ್ಕವು ಬಾಡಿಯೊಂದಿಗೆ ಉಂಟಾಗುವುದಿಲ್ಲ. ಅದರಂತೆಯೇ ಫಿಕ್ಸ್ಚರ್ ಬಾಡಿಯಲ್ಲಿ 4 ಕಚ್ಚುಗಳನ್ನು ನೀಡುವ ಅಗತ್ಯವೂ ಇರುವುದಿಲ್ಲ. ಹಾಗೆಯೇ ಜಿಗ್ ಪ್ಲೇಟ್ ನಲ್ಲಿಯೂ ಕಚ್ಚುಗಳನ್ನು ನೀಡುವ ಆವಶ್ಯಕತೆ ಇರುವುದಿಲ್ಲ. ಜಿಗ್ ನ ಡಿಸೈನ್ ಮಾಡುವಾಗ ಎಷ್ಟು ಸೂಕ್ಷ್ಮವಾಗಿ ವಿಚಾರ ಮಾಡಬೇಕಾಗುತ್ತದೆ, ಎಂಬ ಅಂಶವು ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು.
4. ಸ್ವಿಂಗ್ ‘C’ ವಾಶರ್
ಸ್ವಿಂಗ್ ‘C’ ವಾಶರ್ ಮತ್ತು ಫಲ್ಕ್ರಮ್ ಪಿನ್ ಇವೆರಡರ ಅಸೆಂಬ್ಲಿಯನ್ನು ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ. ಸ್ವಿಂಗ್ ‘C’ ವಾಶರ್ ಮತ್ತು ಸಾಮಾನ್ಯವಾದ ‘C’ ವಾಶರ್ ಇವೆರಡರಲ್ಲಿ ಇರುವು ವ್ಯತ್ಯಾಸವೆಂದರೆ, ಸ್ವಿಂಗ್ ‘C’ ವಾಶರ್ ಶಾಶ್ವತವಾಗಿ ಫಿಕ್ಸ್ಚರ್ ನೊಂದಿಗೆ ಇರುತ್ತದೆ, ಕಳೆಯುವ ಸಾಧ್ಯತೆಯು ಇಲ್ಲದಂತಾಗುತ್ತದೆ. ಈ ಫಲ್ಕ್ರಮ್ ಪಿನ್ ನ ಸಹಾಯದಿಂದ ಫಿಕ್ಸ್ಚರ್ ನಲ್ಲಿ ಅಳವಡಿಸಲಾಗಿರುತ್ತದೆ. ಸಾಮಾನ್ಯವಾದ ‘C’ ವಾಶರ್ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಅದು ಕಳೆದು ಹೋಗಬಾರದು ಎಂದು ಅದನ್ನು ಸರಪಳಿಯಿಂದ ಕಟ್ಟಿ ಇಡಲಾಗುತ್ತದೆ. ಯಾವ ರೀತಿಯಲ್ಲಿ ನಾವು ನೀರು ಕುಡಿಯುವ ಗ್ಲಾಸ್ ಕೂಲರ್ ಗೆ ಸರವಳಿಯಿಂದ ಕಟ್ಟಿ ಇಡಲಾಗುತ್ತದೆಯೋ, ಅದು ನೋಡಲು ಸೂಕ್ತ ಅನಿಸುವುದಿಲ್ಲ. ಹಾಗೆಯೇ ಈ ಸರಪಳಿ ಕೆಲಸ ಮಾಡುತ್ತಿರುವಾಗ ನಡುವೆ ಬರುವ ಸಾಧ್ಯತೆ ಇರುತ್ತದೆ. ಆದುದರಿಂದ ಜಾಗವು ಉಪಲಬ್ಧವಿದ್ದಲ್ಲಿ ಯಾವಾಗಲೂ ಸ್ವಿಂಗ್ ‘C’ ವಾಶರ್ ಬಳಸುವುದು ಯೋಗ್ಯವಾಗಿರುತ್ತದೆ. ಇದರೊಂದಿಗೆ ವಾಶರ್ ಟಫ್ ನಿಂಗ್ ಮಾಡಿರುವುದರಿಂದ ಅದರ ಬಾಳಿಕೆಯೂ ಹೆಚ್ಚುತ್ತದೆ.
5. ಫಲ್ಕ್ರಮ್ ಪಿನ್
ಫಲ್ಕ್ರಮ್ ಪಿನ್ ಸ್ವಿಂಗ್ ‘C’ ವಾಶರ್ ನ್ನು ಫಿಕ್ಸ್ಚರ್ ನಲ್ಲಿ ಹಿಡಿದಿಡುತ್ತದೆ. ಸ್ವಿಂಗ್ ‘C’ ವಾಶರ್ ಪಿನ್ ನ ಸುತ್ತುಮುತ್ತು ಸಹಜವಾಗಿ ತಿರುಗುತ್ತದೆ. ವಾಶರ್ ನಲ್ಲಿರುವ ರಂಧ್ರಗಳು ಮತ್ತು ಪಿನ್ ನ ವ್ಯಾಸ ಇವೆರಡರಲ್ಲಿ ಕ್ಲಿಯರನ್ಸ್ ಫಿಟ್ ಇರುತ್ತದೆ. ಎರಡೂ ವಿಧಗಳಲ್ಲಿ ಫಲ್ಕ್ರಮ್ ಪಿನ್ ಚಿತ್ರ ಕ್ರ. 3 ಮತ್ತು 4 ರಲ್ಲಿ ತೋರಿಸಲಾಗಿದೆ. ಚಿತ್ರ ಕ್ರ. 4 ರಲ್ಲಿ ತೋರಿಸಿರುವ ಫಲ್ಕ್ರಮ್ ಪಿನ್ ಷಟ್ಕೋನದ ಎಲನ್ ‘ಕಿ’ ಯ ಹೊರತಾಗಿ ತೆಗೆಯುವುದು ಸಾಧ್ಯವಿಲ್ಲ ಮತ್ತು ಇದರಿಂದಾಗಿ ಅದು ಕಳೆದು ಹೋಗುವ ಸಾಧ್ಯತೆಯೂ ಇರುವುದಿಲ್ಲ. ಈ ಭಾಗವನ್ನು ಪ್ರಮಾಣೀಕರಿಸಲಾಗಿರುತ್ತದೆ. ಇದರಿಂದಾಗಿ ಸ್ಟೋರ್ ಗಳಲ್ಲಿ ಅಥವಾ ಮಾರುಕಟ್ಟೆಯಲ್ಲಿ ಸಹಜವಾಗಿ ಉಪಲಬ್ಧವಾಗುತ್ತದೆ. ಹಾಗೆಯೇ ಟಫ್ ನಿಂಗ್ ಮಾಡಿದ್ದರಿಂದ ಅದರ ಬಾಳಿಕೆಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಈ ಫಲ್ಕ್ರಮ್ ಪಿನ್ ನ ಕಚ್ಚುಗಳು ಕೊನೆಗೊಳ್ಳುತ್ತವೆಯೋ, ಅಲ್ಲಿ ತುಂಡಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
6. ಕ್ಲಾಂಪಿಂಗ್ ಬೋಲ್ಟ್
ಈ ಬೋಲ್ಟ್ ಟಫನ್ ಮಾಡಿರುವುದರಿಂದ ಅದರ ದೃಢತೆಯು ಹೆಚ್ಚಾಗುತ್ತದೆ, ಹಾಗೆಯೇ ನಟ್ ಆಗಾಗ ಬಿಗಿ ಮಾಡುವುದರಿಂದ ಇದರಲ್ಲಿ ಸವೆತವು ಉಂಟಾಗುವುದಿಲ್ಲ. ಇದರ ಪ್ರಮುಖವಾದ ಕೆಲಸವೇ, ಕಾರ್ಯವಸ್ತುವನ್ನು ಬಿಗಿಯಾಗಿ ಹಿಡಿದಿಡುವುದು. ಹೆಕ್ ಗನ್ ಹೆಡೆಡ್ (ಷಟ್ಕೋನದ) ನಟ್ ನ ಮತ್ತು ವಾಶರ್ ನ ಸಹಾಯದಿಂದ ಫಿಕ್ಸ್ಚರ್ ಬಾಡಿಯ ಕೆಳಭಾಗದಲ್ಲಿ ಬೋಲ್ಟ್ ಬಿಗಿಯಾಗಿ ಅಳವಡಿಸಲಾಗಿದೆ.
7. ಪಾಮ್ ಗ್ರಿಪ್
ನಟ್ ನ ಸಹಾಯದಿಂದ ಕಾರ್ಯವಸ್ತುವನ್ನು ಬಿಗಿಯಾಗಿ ಹಿಡಿದಿಡುವುದಕ್ಕಿಂತ ಪಾಮ್ ಗ್ರಿಪ್ ನ ಸಹಾಯದಿಂದ ಕೈಯಿಂದಲೇ ಕಾರ್ಯವಸ್ತುವನ್ನು ಬಿಗಿಯಾಗಿ ಹಿಡಿಯಲಾಗುತ್ತದೆ. ಪಾಮ್ ಗ್ರಿಪ್ ಬಳಸುವುದು ಹೆಚ್ಚು ಸುಲಭವಾಗುತ್ತದೆ. ಇದರ ಕಾರಣವೆಂದರೆ,
ಎ. ಸ್ಪೇನರ್ ಬಳಸುವ ಅಗತ್ಯವಿರುವುದಿಲ್ಲ.
ಬಿ. ಕಡಿಮೆ ವೇಳೆಯಲ್ಲಿ ಮತ್ತು ಕಡಿಮೆ ಶ್ರಮದಲ್ಲಿ ಕೆಲಸ ಮಾಡುವುದು ಸಾಧ್ಯ.
ಸಿ. ವಿಶಿಷ್ಟವಾದ ಆಕಾರದಿಂದಾಗಿ ಕೈಗೆ ಯೋಗ್ಯವಾದ ಹಿಡಿತವು ಲಭಿಸುತ್ತದೆ.
ಚಿತ್ರ ಕ್ರ. 5 ಎ, ಬಿ, ಸಿ. ಯಲ್ಲಿ ಪಾಮ್ ಗ್ರಿಪ್ ನ ವಿವಿಧ ಪ್ರಕಾರಗಳನ್ನು ತೋರಿಸಲಾಗಿದೆ. ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ ನಮ್ಮಲ್ಲಿರುವ ಜಿಗ್ ಗೆ ಪಾಮ್ ಗ್ರಿಪ್ ಬಳಸಲಾಗಿದೆ. ಇದರಲ್ಲಿ ಪ್ಲಾಸ್ಟಿಕ್, ಅಲ್ಯುಮಿನಿಯಮ್, ಕಾಸ್ಟ್ ಆಯರ್ನ್, ಸ್ಟೇನ್ ಲೆಸ್ ಸ್ಟೀಲ್ ಇಂತಹ ವಿವಿಧ ಮಟೀರಿಯಲ್ ಗಳನ್ನು ಬಳಸಲಾಗುತ್ತದೆ. ನಾವು ಬಳಸಿರುವ ಪ್ರಕಾರದಲ್ಲಿ ಕಬ್ಬಿಣದ ಥ್ರೆಡಿಂಗ್ ಇರುವ ಇನ್ಸರ್ಟ್ ಅಳವಡಿಸಲಾಗಿದೆ. ಇದರಿಂದಾಗಿ ಪಾಮ್ ಗ್ರಿಪ್ ನ ಸವೆತವು ಕಡಿಮೆಯಾಗುತ್ತದೆ. ಈ ಇನ್ಸರ್ಟ್ ಪ್ಲಾಸ್ಟಿಕ್ ಪಾಮ್ ಗ್ರಿಪ್ ನಲ್ಲಿ ಎರಕ ಹಾಕುವಾಗಲೇ ಮಾಡಲಾಗುತ್ತದೆ.
ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ, ಪಾಮ್ ಗ್ರಿಪ್ ನ ‘D1’ ಅಳತೆಯು ಕಾರ್ಯವಸ್ತುವಿನ ಒಳ ವ್ಯಾಸಕ್ಕಿಂತಲೂ ಚಿಕ್ಕದಾಗಿರಲೇಬೇಕು, ಇಲ್ಲದಿದ್ದಲ್ಲಿ ಕಾರ್ಯವಸ್ತುವನ್ನು ತೆಗೆಯಲು ಪಾಮ್ ಗ್ರಿಪ್ ತಿರುಗಿಸಿ ಸಂಪೂರ್ಣವಾಗಿ ಹೊರಗೆ ತೆಗೆಯಬೇಕಾಗುತ್ತದೆ. ಈ ಜಿಗ್ ನಲ್ಲಿರುವ ಪ್ರಮುಖ ಭಾಗಗಳ ವಿವರಗಳನ್ನು ನಾವು ತಿಳಿದುಕೊಂಡೆವು.
ಚಿತ್ರ ಕ್ರ. 6 ರಲ್ಲಿಯೂ ಪಾಮ್ ಟೈಪ್ ಫಿಕ್ಸ್ಚರ್ ಕಾಣುತ್ತಿದೆ. ಚಿತ್ರ ಕ್ರ. 1 ಮತ್ತು 6 ರಲ್ಲಿ ತೋರಿಸಿರುವ ಫಿಕ್ಸ್ಚರ್ ನಲ್ಲಿ ವ್ಯತ್ಯಾಸವಿದೆ. ‘B’ ವ್ಯಾಸವು ನಿಯಂತ್ರಿಸಲ್ಪಟ್ಟಿಲ್ಲ ಮತ್ತು ‘D’ ವ್ಯಾಸದೊಂದಿಗೆ ಸಿಮೆಟ್ರಿಕಲ್ ಕೂಡಾ ಇರುವುದಿಲ್ಲ. ಇದರಿಂದಾಗಿ ನಾವು ಜಿಗ್ ಪ್ಲೇಟ್ ‘B’ ವ್ಯಾಸದಲ್ಲಿ ಲೊಕೇಟ್ ಮಾಡುವುದು ಅಸಾಧ್ಯ, ಎಂಬುದನ್ನು ಹಿಂದಿನ ಜಿಗ್ ನಲ್ಲಿ ಮಾಡಿದ್ದೇವೆ.
2. ಲೊಕೇಟಿಂಗ್ ಬುಶ್
ಲೊಕೇಟಿಂಗ್ ಬುಶ್ ಇದು ಹಾರ್ಡ್ ಬುಶ್ ಆಗಿರುತ್ತದೆ. ಇದರಲ್ಲಿ ಕಾರ್ಯವಸ್ತು ‘D’ ವ್ಯಾಸದಲ್ಲಿ ಲೊಕೇಟ್ ಆಗುತ್ತದೆ. ಈ ಬುಶ್ ಫಿಕ್ಸ್ಚರ್ ಬಾಡಿಯಲ್ಲಿ ಪ್ರೆಸ್ ಫಿಟ್ ಅಳವಡಿಸಲಾಗಿರುತ್ತದೆ. ‘D’ ಮತ್ತು ‘d’ ವ್ಯಾಸಗಳೆರಡೂ ಸಿಮೆಟ್ರಿಕ್ ಆಗಿರುತ್ತವೆ.
2. ಲೊಕೇಟರ್ (ಕ್ಲಾಂಪಿಂಗ್ ಬೋಲ್ಟ್)
ಹಿಂದಿನ ಜಿಗ್ ನಲ್ಲಿ ಕೇವಲ ಕಾರ್ಯವಸ್ತುಗಳಿಗೆ ಕ್ಲ್ಯಾಂಪ್ ಮಾಡಲು ಇದನ್ನು ಬಳಸಲಾಗುತ್ತಿತ್ತು. ಆದರೆ ನಾವು ಇದನ್ನು ಕ್ಲ್ಯಾಂಪಿಂಗ್ ಬೋಲ್ಟ್ ಎಂಬು ಹೆಸರಿಸಿದೆವು. ಈಗ ಇದಕ್ಕೆ ನಾವು ಲೊಕೇಟರ್ ಎಂದು ಕರೆಯುತ್ತೇವೆ. ಕಾರಣ ಇದು ಸ್ವಂತವೇ ಫಿಕ್ಸ್ಚರ್ ಬಾಡಿಯಲ್ಲಿ ವ್ಯಾಸ ‘D’ ಯಲ್ಲಿ ಲೊಕೇಟ್ ಆಗಿರುತ್ತದೆ. ಹಾಗೆಯೇ ಜಿಗ್ ಪ್ಲೇಟ್ ಕೂಡಾ ‘d’ ವ್ಯಾಸದಲ್ಲಿಯೇ ಲೊಕೇಟ್ ಆಗುತ್ತದೆ. ಸಾದ್ಯವಾದಷ್ಟು ಫಿಕ್ಸ್ಚರ್ ನ ಭಾಗಗಳಿಗೆ ನಾವು ಅದು ಯಾವ ಕೆಲಸ ಮಾಡುತ್ತದೆಯೇ ಅದಕ್ಕೆ ಸಂಬಂಧಪಟ್ಟ ಹೆಸರನ್ನು ಕೊಡುತ್ತೇವೆ.
3. ಜಿಗ್ ಪ್ಲೇಟ್
ಈ ಜಿಗ್ ಪ್ಲೇಟ್ ಕೇಸ್ ಹಾರ್ಡ್ ಮಾಡಿ ಆವಶ್ಯಕವಿರುವಲ್ಲಿ ಗ್ರೈಂಡಿಂಗ್ ಮಾಡಲಾಗಿರುತ್ತದೆ. ಈ ಲೊಕೇಟರ್ ನ ‘d’ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಇದರಿಂದಾಗಿ ಕಾರ್ಯವಸ್ತುವಿನಲ್ಲಿ 4 ರಂಧ್ರಗಳು ‘D’ ವ್ಯಾಸದೊಂದಿಗೆ ಸಿಮೆಟ್ರಿಕಲ್ ತಯಾರಾಗುತ್ತವೆ, ಇವುಗಳು ಕಾರ್ಯವಸ್ತುವಿನ ಗುಣಮಟ್ಟಕ್ಕೆ ಅನುಸಾರವಾಗಿ ಆವಶ್ಯಕವಾಗಿರುತ್ತವೆ. ಕಾರ್ಯವಸ್ತುವಿನಲ್ಲಿರುವ ಸ್ವಲ್ಪ ವ್ಯತ್ಯಾಸದಿಂದಾಗಿ ಜಿಗ್ ನ ಡಿಸೈನ್ ನಲ್ಲಿ ಎಷ್ಟು ಮತ್ತು ಹೇಗೆ ವ್ಯತ್ಯಾಸಗಳು ಉಂಟಾಗುತ್ತವೆ, ಎಂಬುದು ಈಗ ಗಮನಕ್ಕೆ ಬರುತ್ತದೆ. ಅನುಭವದ ನಂತರವೇ ಇಂತಹ ಸೂಕ್ಷ್ಮ ವಿಷಯಗಳು ಗಮನಕ್ಕೆ ಬರಲಾರಂಭಿಸುತ್ತವೆ. ಮುಂದಿನ ಲೇಖನದಲ್ಲಿ ಇನ್ನೂ ಹಲವಾರು ವಿಧದ ಜಿಗ್ ಗಳ ಕುರಿತು ತಿಳಿದುಕೊಳ್ಳೋಣ.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು
ARAI SAE
9011018388
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.