ಲೇಥ್ ಮೇಲಿರುವ ಆವರ್ತನೆಗಳು

@@NEWS_SUBHEADLINE_BLOCK@@

Udyam Prakashan Kannad    28-Mar-2020   
Total Views |
 
 
ಸಿಲಿಂಡ್ರಿಕಲ್ ಆಕಾರದ ಕಾರ್ಯವಸ್ತುವಿನಲ್ಲಿ ರಫ್ ಟರ್ನಿಂಗ್ ಅಥವಾ ರಫ್ ಬೋರಿಂಗ್ ಮಾಡಿ ಮಟೀರಿಯಲ್ ತೆಗೆಯುವುದು ಸಿ.ಎನ್.ಸಿ. ಲೇಥ್‌ನಲ್ಲಿ ಗರಿಷ್ಟ ಪ್ರಮಾಣದಲ್ಲಿ ಮಾಡಲಾಗುವಂತಹ ಕೆಲಸವಾಗಿದೆ. ಇಂತಹ ಬೇಡವಾದ ಮಟೀರಿಯಲ್ ಮ್ಯಾನ್ಯುವಲಿ ತೆಗೆಯುವುದು ತುಂಬಾ ಕಠಿಣವಾಗುತ್ತದೆ. ಕಾರಣ ಪ್ರತಿಯೊಂದು ಸ್ಟೆಪ್‌ಗೆ ಕೊ-ಆರ್ಡಿನೆಟ್ ತೆಗೆಯುವುದು ಮತ್ತು ಬ್ಲಾಕ್ ತಯಾರಿಸುವುದು ಇದರಲ್ಲಿ ವೇಳೆಯು ವ್ಯರ್ಥವಾಗುತ್ತದೆ. ಇದರೊಂದಿಗೆ ತೊಡಕುಗಳಿರುವ ಕಾರ್ಯವಸ್ತುಗಳಿದ್ದಲ್ಲಿ ಸಮಯ ಮತ್ತು ನಿಖರತೆ ಈ ಎರಡೂ ಅಂಶಗಳು ಸವಾಲುಗಳನ್ನುಂಟು ಮಾಡುತ್ತವೆ.
 
 
1_1  H x W: 0 x
 

2_1  H x W: 0 x 
 
ಕೆಲವು ಪ್ರೊಗ್ರಾಮರ್ ಈ ರೀತಿಯಲ್ಲಿ ಸಮಯವು ವ್ಯರ್ಥವಾಗಬಾರದು ಎಂಬುಕ್ಕೋಸ್ಕರ ಮತ್ತು ತೊಂದರೆಯು ಕಡಿಮೆ ಆಗಬೇಕು, ಎಂಬ ವಿಚಾರದಿಂದ ಯಂತ್ರಣೆಯ ವೇಗವನ್ನು ಹಾಗೆಯೇ ಇಟ್ಟು ಕಾರ್ಯವಸ್ತುವಿನ ಅಂಕುಡೊಂಕಾದ ಸರ್ಫೇಸ್ ಗಳಲ್ಲಿ ಅಪೇಕ್ಷಿಸಿರುವ ಫಿನಿಶ್ ತಯಾರಿಸುವುದನ್ನು ತೀರ್ಮಾನಿಸುತ್ತಾರೆ. ಕಟಿಂಗ್ ಟೂಲ್ ಅಕಸ್ಮಾತ್ತಾಗಿ ಹಾಳಾಗುತ್ತದೆ. ಟೂಲ್ ಬೇಗನೆ ಹಾಳಾಗಿದ್ದರಿಂದ ಸೂಕ್ತವಾದ ಸರ್ಫೇಸ್ ಫಿನಿಶ್ ಲಭಿಸುವುದಿಲ್ಲ. ಇದಕ್ಕೆ ಪರಿಹಾರವೆಂದು ಸಿ.ಎನ್.ಸಿ. ಕಂಟ್ರೋಲ್ ಉತ್ಪಾದಕರು ಕಂಟ್ರೋಲ್‌ನಲ್ಲಿ ಒಂದು ವಿಶೇಷವಾದ ಯಂತ್ರಣೆಯನ್ನು ನೀಡುತ್ತಾರೆ. ಇದರ ಉಪಯೋಗವನ್ನು ರಫ್ ಮಟೀರಿಯಲ್ ತೆಗೆಯುವಲ್ಲಿ ಸುಲಭವಾಗುತ್ತದೆ. ಈ ರೀತಿಗೆ ಫಿಕ್ಸ್ಡ್ ಸೈಕಲ್ ಅಥವಾ ರಫಿಂಗ್ ಸೈಕಲ್ ಎಂದೂ ಹೇಳಲಾಗುತ್ತದೆ. ರಫಿಂಗ್ ಸೈಕಲ್‌ಗೆ ಸಿಂಪಲ್ ಸೈಕಲ್ ಎಂದೂ ಹೇಳಲಾಗುತ್ತದೆ.
 
ಹೆಚ್ಚಾಗಿ ಎಲ್ಲ ಸಿ.ಎನ್.ಸಿ. ಕಂಟ್ರೋಲ್‌ನಲ್ಲಿ ಈ ಸೈಕಲ್‌ಗಳು ಉಪಲಬ್ಧವಿರುತ್ತವೆ. ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿಯಿಂದಾಗಿ ಕಂಟ್ರೋಲ್ ತಯಾರಿಸುವ ಕಂಪನಿಗಳು ಕಟಿಂಗ್ ಸೈಕಲ್ ಕೂಡಾ ಅಭಿವೃದ್ಧಿ ಮಾಡಿದ್ದಾರೆ. ‘ಫಾನುಕ್’ ಈ ಕಂಪನಿಯು ಈ ವಿಧದ ಸುಧಾರಣೆಗಳನ್ನು ಮಾಡಿ ಮಲ್ಟಿಪಲ್ ರಿಪಿಟೆಟಿವ್ ಸೈಕಲ್ ಉಪಲಬ್ಧ ಮಾಡಿದ್ದಾರೆ. ಸಿಂಪಲ್ ಸೈಕಲ್ ಹೋಲಿಸಿದಲ್ಲಿ ಇದರಲ್ಲಿ ಹೆಚ್ಚು ಫ್ಲೆಕ್ಸಿಬಿಲಿಟಿ ಇರುತ್ತದೆ. ಈಗ ಈ ಸೈಕಲ್ ನೋಡೋಣ.
 

3_1  H x W: 0 x 
 
G90 : ಸ್ಟ್ರೇಟ್ ಕಟಿಂಗ್ ಸೈಕಲ್
ಮಹತ್ವದ ಸೂಚನೆಗಳು : ಟರ್ನಿಂಗ್‌ನಲ್ಲಿ G90 ಅಂದರೆ ಸ್ಟ್ರೇಟ್ ಕಟಿಂಗ್ ಸೈಕಲ್, ಆದರೆ ಮಿಲ್ಲಿಂಗ್‌ನಲ್ಲಿ G90 ಅಂದರೆ ಎಬ್ಸೋಲ್ಯುಟ್ ಮೋಡ್. ಮಿಲ್ಲಿಂಗ್‌ಗೋಸ್ಕರ G90 ಎಬ್ಸೋಲ್ಯುಟ್ ಮೋಡ್ ಟರ್ನಿಂಗ್‌ಗೋಸ್ಕರ X ಮತ್ತು Z ಎಬ್ಸೋಲ್ಯುಟ್ ಮೋಡ್.
 
ಸೈಕಲ್ ಫಾರ್ಮೇಟ್ 1
G90 X (U)...Z(W)...F
X - ಕಟ್ ಮಾಡುವ ವ್ಯಾಸ
Z - Z ಪೊಸಿಶನ್ ಕಟ್ ಎಂಡ್ ಪಾಯಿಂಟ್
F - ಕಟಿಂಗ್ ಫೀಡ್‌ರೇಟ್ (ಇಂಚು/ರಿವೋ ಅಥವಾ ಮಿ.ಮೀ./ರಿವೋ)
 
ಸೈಕಲ್ ಫಾರ್ಮೇಟ್ 2
ಎರಡನೇ ಫಾರ್ಮೇಟ್‌ನಲ್ಲಿ I ಅಥವಾ R ಪ್ಯಾರಾಮೀಟರ್ ಹೆಚ್ಚುತ್ತವೆ. ಟೇಪರ್ ಕಟಿಂಗ್ ಮೋಶನ್‌ಗೋಸ್ಕರ ಉಪಯುಕ್ತ.
 

4_1  H x W: 0 x 
 

5_1  H x W: 0 x 
 
ಫಾರ್ಮೇಟ್ 2 ರಲ್ಲಿ ಎರಡು ಆವೃತ್ತಿಗಳಿವೆ.
G90 X (U)...Z(W)...I...F
G90 X (U)...Z(W)...R...F
X - ಕಟ್ ಮಾಡುವ ವ್ಯಾಸ
Z - Z ಪೋಸಿಶನ್ ಕಟ್ ಎಂಡ್ ಪಾಯಿಂಟ್
I(R) - ಟೇಪರ್‌ನ ದಿಕ್ಕು ಮತ್ತು ದೂರ (ಸ್ಟ್ರೇಟ್ ಕಟಿಂಗ್‌ಗೋಸ್ಕರ I=0, R=0)
F - ಕಟಿಂಗ್ ಫೀಡ್ ರೇಟ್ ಇಂಚು/ರಿವೋ ಅಥವಾ ಮಿ.ಮೀ./ರಿವೋ
G90 ರದ್ದುಗೊಳಿಸಲು G00, G01, G02, G03 ಇವುಗಳ ಪೈಕಿ ಯಾವುದೇ ಒಂದು ಮೋಶನ್ ಮಾಡಲಾಗುತ್ತದೆ. ಸಾಮಾನ್ಯವಾಗಿ G00 ಬಳಸಲಾಗುತ್ತದೆ. ಉದಾಹರಣೆ, G90 X (U)... Z (W)...I...F...G00
....
....
G00
ಈಗ ಉದಾಹರಣೆಯನ್ನು ನೋಡೋಣ
 
ಉದಾಹರಣೆ 1 : ಸ್ಟ್ರೇಟ್ ಟರ್ನಿಂಗ್
 
ಚಿತ್ರ ಕ್ರ. 3 ರಲ್ಲಿ 4.125’’ ವ್ಯಾಸದ ಟರ್ನಿಂಗ್ ಮಾಡಿ 2.22’’ ತಯಾರಿಸಬೇಕಾಗಿದೆ. ಇದರ ಉದ್ದ 2.56’’ ಇದೆ. ಈ ಚಿತ್ರದಲ್ಲಿ ಚ್ಯಾಂಪರ್, ರೇಡಿಯಸ್, ಟೇಪರ್ ಏನೂ ಇಲ್ಲ. ಅಂದರೆ ಸ್ಟ್ರೇಟ್ ಟರ್ನಿಂಗ್ ಮಾಡುವುದಿದೆ. ಈ ಜಾಗದಲ್ಲಿ G90 ಬಳಸುವುದು ತುಂಬಾ ಉಪಯುಕ್ತವಾಗಿದೆ.
G90 ಈ ರಫಿಂಗ್ ಸೈಕಲ್ ಆಗಿರುವುದರಿಂದ ಪ್ರತಿಯೊಂದು ಕಟ್‌ನ ಆಳವನ್ನು ಮೊದಲಾಗಿ ಆಯ್ಕೆ ಮಾಡಬೇಕು. ಅದರ ನಂತರ ಎಷ್ಟು ಸ್ಟಾಕ್ ತೆಗೆಯುವುದು ಉಳಿದಿದೆಯೋ ಅದನ್ನು ತೆಗೆಯಬೇಕು. ಪ್ರತ್ಯಕ್ಷವಾಗಿ ಸ್ಟಾಕ್ ಪ್ರತಿಯೊಂದು ಬದಿಯ ತ್ರಿಜ್ಯದ ರೂಪದಲ್ಲಿ X ಅಕ್ಷದಲ್ಲಿ ತೆಗೆಯಬೇಕಾಗುತ್ತದೆ.
(ಉಪಲಬ್ಧವಿರುವ ವ್ಯಾಸ: ಅಪೇಕ್ಷಿಸಿರುವ ವ್ಯಾಸ)/2
(4.125 - 2.22)/ 2 = 0.9525
0.030'' ಸ್ಟಾಕ್ ಪ್ರತಿಯೊಂದು ಬದಿಗೆ ಇಡಬೇಕಾಗುತ್ತದೆ. ಆದ್ದರಿಂದ ಒಟ್ಟು ತೆಗೆಯಬೇಕಾಗಿರುವ ಮಟೀರಿಯಲ್ 0.9225’’ ಆಗುತ್ತದೆ.
ಇದರ ನಂತರ ಒಟ್ಟು ಅಳದ ಎಷ್ಟು ಹಂತಗಳನ್ನು ಮಾಡಬೇಕೋ (ಡೆಪ್ಥ್ ಕಟ್ ಸೆಗ್‌ಮೆಂಟ್) ಇದರ ಆಯ್ಕೆಯನ್ನು ಮಾಡಬೇಕಾಗುತ್ತದೆ.
5 ಸಮಾನ ಕಟ್‌ಗಳಿಗೋಸ್ಕರ ತುಂಡುಗಳ ಆಳ 0.1845
6 ಸಮಾನ ಕಟ್‌ಗಳಿಗೋಸ್ಕರ ತುಂಡುಗಳ ಆಳ 0.1538
6 ಸಮಾನ ಕಟ್ ಆಯ್ಕೆ ಮಾಡುವುದಾದಲ್ಲಿ ಪ್ರತಿಯೊಂದು ಬದಿಗೆ 0.03’’ ಅಂದರೆ, ವ್ಯಾಸದಲ್ಲಿ 0.06’’ ಆದ್ದರಿಂದ ಮೊದಲ ವ್ಯಾಸ X 3.8175’’ ಆಗಬಹುದು. ಅದರೊಂದಿಗೆ 0.005 ಸ್ಟಾಕ್ ಅಲೌನ್ಸ್ ಫೇಸ್‌ನಲ್ಲಿ ಇರುತ್ತದೆ, ಆದ್ದರಿಂದ Z ಅಕ್ಷ ಎಂಡ್ ಆಫ್ ಕಟ್ Z-2.555 ಆಗುತ್ತದೆ.
ಪ್ರತ್ಯಕ್ಷವಾಗಿ ಕ್ಲಿಯರನ್ಸ್ ವ್ಯಾಸದಲ್ಲಿ ಮತ್ತು ಕಾರ್ಯವಸ್ತುವಿನ ಎದುರು 0.100’’ ಇರಬಹುದು.
 
ಪ್ರೊಗ್ರಾಮ್
03300 (G90 ಸ್ಟ್ರೇಟ್ ಟರ್ನಿಂಗ್ ಸೈಕಲ್ ಎಬ್ಸೋಲ್ಯುಟ್)
N1 G20
N2 T0100M41
N3 G96 S450 M03
N4 G00 X 4.325 Z 0.1 T 0101M08
N5 G90 X 3.8175 Z - 2.555 F 0.01.........................ಪಾಸ್ 1
N6 X 3.51...............................................................ಪಾಸ್ 2
N7 X 3.2025...........................................................ಪಾಸ್ 3
N8 X 2.895.............................................................ಪಾಸ್ 4
N9 X 2.5875...........................................................ಪಾಸ್ 5
N10 X 2.28.............................................................ಪಾಸ್ 6
N11 G00 X 10.0 Z 2.0 TO100 M09 
N12 M01.........................................................ರಫಿಂಗ್ ಎಂಡ್
ಇದೇ ಪ್ರೊಗ್ರಾಮ್ ಇನ್‌ಕ್ರಿಮೆಂಟಲ್‌ನಲ್ಲಿಯೂ ಮಾಡಬಹುದಾಗಿದೆ.
 
03301 (G90 ಸ್ಟ್ರೇಟ ಟರ್ನಿಂಗ್ ಸೈಕಲ್: ಇನ್‌ಕ್ರಿಮೆಂಟಲ್)
N1 G20
N2 T0100M41
N3 G96 S450 M03
N4 G00 X 4.325 Z 0.1 T0101 M08 ........................ಪ್ರಾರಂಭ
N5 G90 U - 0.5075 W - 2.655 F 0.01.......................ಪಾಸ್ 1
N6 U - 0.3075 .........................................................ಪಾಸ್ 2
N7 U - 0.3075 .........................................................ಪಾಸ್ 3
N8 U - 0.3075 .........................................................ಪಾಸ್ 4
N9 U - 0.3075 .........................................................ಪಾಸ್ 5
N10 U - 0.3075 .......................................................ಪಾಸ್ 6
N11 G00 X 10.0 Z 2.0 T0100 M09
N12 M01.........................................................ರಫಿಂಗ್ ಎಂಡ್
 
ಉದಾಹರಣೆ 2 : ಟೇಪರ್ ಕಟಿಂಗ್
ಚಿತ್ರ ಕ್ರ. 4 ರಲ್ಲಿ ಟೇಪರ್ ಇರುವ ಕಾರ್ಯವಸ್ತುವಾಗಿದೆ. ಈ ಟೇಪರ್ G90 ಬಳಸಿ ಸುಲಭವಾಗಿ ಕಟ್ ಮಾಡಬಹುದಾಗಿದೆ. ಟೇಪರ್ ಕಟ್ ಮಾಡುತ್ತಿರುವಾಗ I ಪ್ಯಾರಾಮೀಟರ್ ಪ್ರತಿಯೊಂದು ಬದಿಗೆ ಇರುವ ಟೇಪರ್ ಮಾಪನ ಮತ್ತು ಟೇಪರ್ ದಿಕ್ಕು ನೀಡುತ್ತದೆ. ಈ ಮಾಪನಕ್ಕೆ ಸೈಂಡ್ ರೇಡಿಯಸ್ ವ್ಯಾಲ್ಯೂ ಎಂದು ಹೇಳುತ್ತಾರೆ. ಈ ವ್ಯಾಲ್ಯೂ X ಅಕ್ಷದೊಂದಿಗೆ ಸಂಬಂಧಪಟ್ಟದಾದ್ದರಿಂದ ಅದು I ವ್ಯಾಲ್ಯೂ ಆಗುತ್ತದೆ. ಸ್ಟ್ರೇಟ್ ಕಟಿಂಗ್‌ಗೆ ಈ I ವ್ಯಾಲ್ಯೂ ಸೊನ್ನೆ ಇರುತ್ತದೆ.
 
ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ 'I' ಮೌಲ್ಯದ ಲೆಕ್ಕಾಚಾರವು ಪ್ರತಿಯೊಂದು ಬದಿಯಲ್ಲಿ ಮಾಡಬೇಕಾಗುತ್ತದೆ. ಆವಶ್ಯಕವಿರುವ ದಿಕ್ಕನ್ನು ನೀಡಬೇಕಾಗುತ್ತದೆ
G90 ಬಳಸಿ ಟೇಪರ್ ಟರ್ನಿಂಗ್ ಮಾಡುತ್ತಿರುವಾಗ ಕೆಳಗಿನ ಎರಡು ಸರಳವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
 

6_1  H x W: 0 x 
 
· ಒಂದು ವೇಳೆ ಮೊದಲ ಟೂಲ್ ಮೋಶನ್ X ದಿಕ್ಕಿನಲ್ಲಿ ನಿಗೆಟಿವ್ ಇದ್ದಲ್ಲಿ I ನಿಗೆಟಿವ್ ಪಡೆಯಬೇಕು.
· ಇದಕ್ಕೆ ವಿರುದ್ಧವಾಗಿ ಒಂದುವೇಳೆ ಮೊದಲ ಟೂಲ್ ಮೋಶನ್ X ದಿಕ್ಕಿನಲ್ಲಿ ಪಾಸಿಟಿವ್ ಇದ್ದಲ್ಲಿ I ಪಾಸಿಟಿವ್ ಪಡೆಯಬೇಕು.
 
ಚುಟುಕಾಗಿ ಹೇಳುವುದಾದರೆ, ಸಿ.ಎನ್.ಸಿ. ಲೇಥ್‌ನಲ್ಲಿ ಹೊರ ಟೇಪರ್‌ಗೋಸ್ಕರ I ನಿಗೆಟಿವ್ ಇರಬಹುದು, ಆದರೆ ಒಳ ಟೇಪರ್‌ಗೋಸ್ಕರ I ಪಾಸಿಟಿವ್ ಇರಬಹುದು.
ಮೇಲಿನ ಉದಾಹರಣೆಯಲ್ಲಿ ಕ್ಲಿಯರನ್ಸ್ 0.100 ಮಿ.ಮೀ. ಟೇಪರ್‌ನ ಪ್ರತಿಯೊಂದು ಎಂಡ್‌ಗೆ ಪಡೆಯುವುದು, ಇದರಿಂದಾಗಿ ಅದರ ಉದ್ದ 2.5 ಮಿ.ಮೀ.ನಿಂದ 2.7 ಮಿ.ಮೀ. ಆಗುತ್ತದೆ.
I ನ ಕ್ಯಾಲ್ಕ್ಯುಲೇಶನ್ ಮಾಡಲು ಟೂಲ್ ಟ್ರಾವಲ್‌ನ ಪ್ರತ್ಯಕ್ಷವಾದ ಉದ್ದ ಮತ್ತು ಅದರೊಂದಿಗೆ ಟೇಪರ್ ಅ್ಯಂಗಲ್ ಬೇಕಾಗುತ್ತದೆ. I ಕ್ಯಾಲ್ಕ್ಯುಲೇಟ್ ಮಾಡಲು ಚಿತ್ರ ಕ್ರ. 6 ನೋಡಿರಿ.
ಇದೇ ಅ್ಯಂಗಲ್‌ನ ನಿಯಮವನ್ನು ಬಳಸಿ I ಯ ದೂರ ಕ್ಯಾಲ್ಕ್ಯುಲೇಟ್ ಮಾಡಬಹುದಾಗಿದೆ. ಒಂದು ವೇಳೆ ಎರಡು ತ್ರಿಕೋನಗಳಿಗೆ ಸಂಬಂಧಿಸಿದ ಬದಿಗಳು ಗುಣೋತ್ತರವಾಗಿದ್ದಲ್ಲಿ ಅದು ತ್ರಿಕೋನ ಸಿಮಿಲರ್ ತ್ರಿಕೋನವಾಗುತ್ತದೆ. I ಯ ವ್ಯಾಲ್ಯೂ ತೆಗೆಯಲು ಸಿಮಿಲರ್ ತ್ರಿಕೋನದ ರೀತಿ, ಅದೇ ರೀತಿಯಲ್ಲಿ ತ್ರಿಕೋನದ ಬಳಕೆ, ಇಂತಹ ಎರಡು ರೀತಿಗಳನ್ನು ಬಳಸಬಹುದಾಗಿದೆ.
 

7_1  H x W: 0 x 
 
ಮೊದಲ ರೀತಿ : ಸಿಮಿಲರ್ ತ್ರಿಕೋನ ರೀತಿ
1. ಮೊದಲು ತಿಳಿದಿರುವ ವ್ಯಾಸದಲ್ಲಿರುವ ವ್ಯತ್ಯಾಸವನ್ನು ಡ್ರಾಯಿಂಗ್‌ಗೆ ಅನುಸಾರವಾಗಿ ತೆಗೆಯಿರಿ.
i = 4 - 2.25 / 2 = 0.875 (ಚಿತ್ರ ಕ್ರ. 7)
2. ಆದ್ದರಿಂದ ಸಿಮಿಲರ್ ತ್ರಿಕೋನದ ಗುಣಾಕಾರ
I / 2.7 = i / 2.5 
i = 0.875 ಆದ್ದರಿಂದ 
I = (0.875 X 2.7)/2.5 
= 0.945
ಎರಡನೇ ರೀತಿ : ತ್ರಿಕೋನಮಿತಿಯ ರೀತಿ
ತ್ರಿಕೋನದಿಂದ
I = 2.7 X tan a
tan a = i/2.5
= 0.875/2.5
= 0.350
ಆದ್ದರಿಂದ I = 2.7X0.350
= 0.945
03302 (G90 ಟೇಪರ್ ಟರ್ನಿಂಗ್)
N1 G20
N2 T0100M41
N3 G96 S450 M03
N4 G00 X 4.2 Z 0.1 
T0101 M08...............................................................ಪ್ರಾರಂಭ
N5 G90 X 3.752 Z - 2.6 I - 0.945 F0.01...................ಪಾಸ್ 1
N6 X 3.374...............................................................ಪಾಸ್ 2
N7 X 2.996...............................................................ಪಾಸ್ 3 
N8 X 2.618...............................................................ಪಾಸ್ 4
N9 X 2.24.................................................................ಪಾಸ್ 5
N10 G00 X 10.0 Z 2.0 T0 100 M09..............ಕ್ಲಿಯರ್ ಪೊಸಿಶನ್
N11 M01.....................................................ಪ್ರೊಗ್ರಾಮ್ ಎಂಡ್
 

8_1  H x W: 0 x 
 
ಉದಾಹರಣೆ 3 : ಸ್ಟ್ರೇಟ್ ಮತ್ತು ಟೇಪರ್ ಕಟಿಂಗ್
 
ಚಿತ್ರ ಕ್ರ. 8 ರಲ್ಲಿ ಸ್ಟ್ರೇಟ್ ಮತ್ತು ಟೇಪರ್ ಎರಡೂ ಕಟ್‌ಗಳನ್ನು ಮಾಡಬೇಕಾಗಿದೆ. G90 ಇದನ್ನು ಬಳಸಿ ಈ ಕೆಲಸವನ್ನು ಸಹಜವಾಗಿ ಮಾಡಬಹುದಾಗಿದೆ.
ಈ ಹಿಂದಿನ ಉದಾಹರಣೆಯಂತೆ,
I = 2.75 - 1.75 / 2 
= 0.500
ಹೆಚ್ಚಿರುವ ಟೇಪರ್‌ನ ಉದ್ದಕ್ಕೋಸ್ಕರ 0.005 ಸ್ಟಾಕ್ ಶೋಲ್ಡರ್‌ನಲ್ಲಿ ಇಡಲಾಗಿದೆ.
2.5 - 0.005 + 0.100 = 2.595 (ಒಟ್ಟು ಟೇಪರ್ ಉದ್ದ)
I ಯ ಮಾಪನ
I / 2.595 = 0.500/2.5
I = (0.500 X 2.595) / 2.5
= 0.519 (-ve ದಿಕ್ಕಿನಲ್ಲಿ)
ರಫಿಂಗ್‌ಗೋಸ್ಕರ 0.030 ಸ್ಟಾಕ್ ಪ್ರತಿಯೊಂದು ಸೈಡ್‌ಗೆ X ಅಕ್ಷದಲ್ಲಿ ಇಡಲಾಗಿದೆ. ಆದ್ದರಿಂದ ವ್ಯಾಸದಲ್ಲಿ 0.060
ಚಿತ್ರ ಕ್ರ. 9 ರಲ್ಲಿ ನಾಲ್ಲು ಕಟ್ 0.161 ಸ್ಟ್ರೇಟ್ ರಫಿಂಗ್‌ಗೋಸ್ಕರ, ಮೂರು ಕಟ್ 0.173 ಟೇಪರ್ ಕಟಿಂಗ್‌ಗೋಸ್ಕರ.
 
ಪ್ರೊಗ್ರಾಮ್
 

8_1  H x W: 0 x 
 
03303
G90 ಟೇಪರ್ ಟರ್ನಿಂಗ್
N1 G20
N2 T0100M41
N3 G96 S450 M03
N4 G00 X 4.1 Z 0.1 T0101M08..............................ಪ್ರಾರಂಭ
N5 G90 X 3.778 Z - 2.495 F 0.1 ..............................ಪಾಸ್ 1
N6 X 3.456 .............................. ..............................ಪಾಸ್ 2
N7 X 3.134 .............................. ..............................ಪಾಸ್ 3
N8 X 2.812 .............................. ..............................ಪಾಸ್ 4
N9 G00 X 3.0 ಬದಲಾವಣೆ ಸ್ಟ್ರೇಪರ್‌ನಿಂದ ಟೇಪರ್
N10 G90 X 2.812 Z - Z 0.765 I -0.173...................ಪಾಸ್ 1
N11 Z - 1.63 I - 0.346 .........................................ಪಾಸ್ 2
N12 Z - 2.495 I - 0.519 ................... ...................ಫೈನಲ್ 3
N13 G00 X 10.0 Z 2.0 T0100 M03............ಕ್ಲಿಯರ್ ಪೋಸಿಶನ್
N14 M01 ..................................................ರಫಿಂಗ್ ಎಂಡ್ 
 

satish joshi_1   
ಸತೀಶ ಜೋಶಿ
ಸಿ.ಎನ್.ಸಿ. ಮಶಿನಿಂಗ್ ಸಲಹೆಗಾರರು 
8625975219
 
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ. ಇವರು ಅನೇಕ ಕಂಪನಿಗಳಲ್ಲಿ ಸಲಹೆಗಾರರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಲೇಥ್ ಮಶಿನ್ ಗಳ ಕುರಿತಾದ ಪುಸ್ತಕಗಳೂ ಪ್ರಕಟವಾಗಿವೆ.
 
 
@@AUTHORINFO_V1@@