ಕಾಂಬಿನೇಶನ್ ಬೋರಿಂಗ್ ಟೂಲ್

@@NEWS_SUBHEADLINE_BLOCK@@

Udyam Prakashan Kannad    25-Mar-2020
Total Views |
 
ಔರಂಗಾಬಾದ್ ಎಂಬಲ್ಲಿರುವ ನಮ್ಮ ಗೌರವ್ ಇಂಜಿನಿಯರ್ಸ್ ಕಂಪನಿಯು ಕಳೆದ 26 ವರ್ಷಗಳಿಂದ ಟೂಲಿಂಗ್ ಕ್ಷೇತ್ರದಲ್ಲಿ ನಿರಂತರವಾಗಿ ಗ್ರಾಹಕರಿಗೆ ಅವರ ಬೇಡಿಕೆಗೆ ಅನುಸಾರವಾಗಿ ಸೇವೆಯನ್ನು ನೀಡುತ್ತಿದ್ದಾರೆ. ಯಂತ್ರಭಾಗಗಳಲ್ಲಿ ರಂಧ್ರಗಳ ಬೋರಿಂಗ್ ಎಂಬ ಪ್ರಕ್ರಿಯೆಯಿಂದ ಫಿನಿಶ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಸುಲಭ ಮತ್ತು ಲಾಭಕಾರಿಯಾಗಿ ಮಾಡಲು ಉಪಲಬ್ಧವಿರುವ ಬೋರಿಂಗ್ ಪ್ರಕ್ರಿಯೆಯ ಕುರಿತು ಮೂಲಭೂತವಾದ ಮಾಹಿತಿಯನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ.
 

1_1  H x W: 0 x 
 

2_1  H x W: 0 x 
 
ಬೋರಿಂಗ್
 
ಬೋರಿಂಗ್ ನಲ್ಲಿ ಮೊದಲಾಗಿ ಸೆಮಿ ಫಿನಿಶಿಂಗ್ ಮಾಡಲಾಗುತ್ತದೆ ಮತ್ತು ಅದರ ನಂತರ ಫಿನಿಶಿಂಗ್ ಮಾಡಲಾಗುತ್ತದೆ. ಸಿ.ಎನ್.ಸಿ. ಟರ್ನಿಂಗ್ ನಲ್ಲಿ ಬೋರಿಂಗ್ ಮಾಡುವಾಗ ಸಾಮಾನ್ಯವಾದ ಬೋರಿಂಗ್ ಬಾರ್ ನಿಂದಲೇ ಬೋರಿಂಗ್ ಮಾಡಲಾಗುತ್ತದೆ. ಸಿ.ಎನ್.ಸಿ. ಟರ್ನಿಂಗ್ ಸೆಂಟರ್ ನಲ್ಲಿ ಸೆಮಿ ಫಿನಿಶಿಂಗ್ ಆಪರೇಶನ್ ಅಂದರೆ ನಿಜವಾದ ಒಳ ಟರ್ನಿಂಗ್ ಆಗಿರುವುದರಿಂದ ಬೇರೆಯೇ ವ್ಯಾಸಗಳಿಗೋಸ್ಕರ ಒಂದೇ ಬೋರಿಂಗ್ ಬಾರ್ (ಚಿತ್ರ ಕ್ರ. 1) ಬಳಸಲಾಗುತ್ತದೆ. ವಿವಿಧ ಆಕಾರದ ರಫ್ ಬೋರ್ ಗೋಸ್ಕರ ಒಂದು ಮತ್ತು ಸೆಮಿ ಫಿನಿಶ್ ಗೋಸ್ಕರವೂ ಅದೇ ಬೋರಿಂಗ್ ಬಾರ್ ಲೇಥ್ ನಲ್ಲಿ ಬಳಸುವುದು ಸಾಧ್ಯವಾಗಿದೆ. ಇದೇ ಕೆಲಸವನ್ನು ವಿ.ಎಮ್.ಸಿ., ಎಚ್.ಎಮ್.ಸಿ. ಅಥವಾ ಎಸ್.ಪಿ.ಎಮ್.ನಲ್ಲಿ ಮಾಡುವಾಗ ಸೆಮಿ ಫಿನಿಶಿಂಗ್ ಗೋಸ್ಕರ ಬೇರೆಯೇ ಬೋರಿಂಗ್ ಬಾರ್ ಇರುವುದು ಅತ್ಯಾವಶ್ಯಕವಾಗಿದೆ. ಸೆಮಿ ಫಿನಿಶಿಂಗ್ ಬೋರಿಂಗ್ ಬಾರ್ ನಲ್ಲಿಯೂ ಎರಡು ಡಿಸೈನ್ ಗಳಿವೆ. ಒಂದು ಫಿಕ್ಸ್ ಟೈಪ್ ಪಾಕೇಟ್ ಡಿಸೈನ್ ಮತ್ತು ಎರಡನೆಯದು ಕಾರ್ಟ್ರಿಜ್ ಟೈಪ್ (ಚಿತ್ರ ಕ್ರ. 2).
 
ಫಿಕ್ಸ್ ಟೈಪ್ ಪಾಕೇಟ್ ಡಿಸೈನ್ ಗೆ ಒಂದಾದರೆ ಸೈಡ್ ಲಾಕ್ ಹೋಲ್ಡರ್ ಅಥವಾ 7/24, BT40, BT50 ಟೇಪರ್ ಇರುತ್ತದೆ. ಇದರ ಹಿಂದೆ ಇರುವ ಪುಲ್ ಸ್ಟಡ್ ಮಶಿನ್ ನಲ್ಲಿ ಅಳವಡಿಸಲ್ಪಡುತ್ತದೆ. ಇದರಲ್ಲಿ 7/24 ಟೇಪರ್ ಬಳಸುವಾಗ ಒಂದು ವೇಳೆ ಇನ್ಸರ್ಟ್ ಹಾಳಾದಲ್ಲಿ ಸಂಪೂರ್ಣ ಟೂಲ್ ಎಸೆಯಬೇಕಾಗುತ್ತದೆ. ಇದರಿಂದಾಗಿ ಈ ಜಾಗದಲ್ಲಿ ಕಾರ್ಟ್ರಿಜ್ ಟೈಪ್ ಈ ಎರಡನೇ ವಿಧದ ಡಿಸೈನ್ ಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. 10 ಮಿ.ಮೀ.ನಿಂದ 25 ಮಿ.ಮೀ. ವ್ಯಾಸದ ತನಕ ಒಂದು (ಸಿಂಗಲ್) ಕಾರ್ಟ್ರಿಡ್ ಇದ್ದಲ್ಲಿ, 26 ಮಿ.ಮೀ. ವ್ಯಾಸದಲ್ಲಿ 2 ಕಾರ್ಟ್ರಿಜ್ ಅಳವಡಿಸಬಹುದಾಗಿದೆ. ಎರಡು ಕಾರ್ಟ್ರಿಜ್ ಅಳವಡಿಸಿದ್ದರಿಂದ ಫೀಡ್ ರೇಟ್ ಹೆಚ್ಚಾಗುತ್ತದೆ. ಹಾಗೆಯೇ ಯಂತ್ರಣೆಯ ವೇಗವೂ ಇಮ್ಮಡಿಯಾಗುತ್ತದೆ.
 
ಬೋರಿಂಗ್ ಟೂಲ್ ನ ಆಯ್ಕೆ
 
ಬೋರಿಂಗ್ ಮಾಡುವಾಗ ನೆಗೆಟಿವ್ ಹಾಗೆಯೇ ಪಾಸಿಟಿವ್ ಇನ್ಸರ್ಟ್ ಬಳಸಲಾಗುತ್ತದೆ. ನೆಗೆಟಿವ್ ರೇಕ್ ಗೋಸ್ಕರ ನ್ಯುಟ್ರಲ್ ಇನ್ಸರ್ಟ್ (CNMG, TNMG) ಬಳಸಲಾಗುತ್ತದೆ. ಬೋರಿಂಗ್ ಮಾಡುವಾಗ ಸಾಧ್ಯವಾದಷ್ಟು ಮಟ್ಟಿಗೆ ಪಾಸಿಟಿವ್ ಇನ್ಸರ್ಟ್ (CCMT, TCMT, TPMT) ಬಳಸಲು ಸೂಚಿಸಲಾಗುತ್ತದೆ. ಇದರಿಂದಾಗಿ ಬೋರಿಂಗ್ ಮಾಡಿರುವ ಸರ್ಫೇಸ್ ನಲ್ಲಿ ಉಚ್ಚ ಗುಣಮಟ್ಟದ ಫಿನಿಶ್ ಸಿಗುತ್ತದೆ. ಆದರೆ ಯಂತ್ರಣೆಯ ಖರ್ಚು ಕಡಿಮೆ ಮಾಡಲು ನ್ಯುಟ್ರಲ್ ಇನ್ಸರ್ಟ್ ಬಳಸಲಾಗುತ್ತದೆ. TNMG ಬಳಸಿದ್ದರಿಂದ ಎರಡೂ ಬದಿಗಳಲ್ಲಿ ಆರು ಮೂಲೆಗಳು ಸಿಗುತ್ತವೆ. ಇದಕ್ಕೆ ವಿರುದ್ಧವಾಗಿ TCMT ಇನ್ಸರ್ಟ್ ಬಳಸಿದಲ್ಲಿ ಕೇವಲ ಮೂರು ಮೂಲೆಗಳು ಸಿಗುತ್ತವೆ. ಇದರಿಂದಾಗಿ ಮಧ್ಯದ ಉಪಾಯವೆಂದು ಸೆಮಿಫಿನಿಶಿಂಗ್ ಗೋಸ್ಕರ ನಿಗೆಟಿವ್ ಮತ್ತು ಫಿನಿಶಿಂಗ್ ಗೆ ಪಾಸಿಟಿವ್ ಇನ್ಸರ್ಟ್ ಬಳಸುವುದರ ಕುರಿತು ಸೂಚಿಸಲಾಗುತ್ತದೆ.
 
ಬೋರಿಂಗ್ ಗೆ ಕನಿಷ್ಠ ಮಟೀರಿಯಲ್ ಇಡುವುದಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಬೋರಿಂಗ್ ಪ್ರಕ್ರಿಯೆಯಲ್ಲಿ ಫಿನಿಶಿಂಗ್ ಗೋಸ್ಕರ ತುಂಬಾ ಸಲ ಡೈಮಂಡ್ ಅಥವಾ CBN ಇನ್ಸರ್ಟ್ ಬಳಸಲಾಗುತ್ತದೆ. ಈ ಇನ್ಸರ್ಟ್ ದುಬಾರಿಯಾಗಿರುತ್ತದೆ. ಎಷ್ಟು ಹೆಚ್ಚು ಮಟೀರಿಯಲ್ ತೆಗೆಯಲಾಗುತ್ತದೆಯೋ, ಅಷ್ಟೇ ಇನ್ಸರ್ಟ್ ನ ಬಾಳಿಕೆಯು ಕಡಿಮೆ ಆಗುತ್ತದೆ. ಹಾಗೆಯೇ ಅದರ ಇಂಡೆಕ್ಸಿಂಗ್ ಸಂಖ್ಯೆಯೂ ಹೆಚ್ಚುತ್ತದೆ. ಇಂಡೆಕ್ಸಿಂಗ್ ಹೆಚ್ಚಿದ್ದರಿಂದ ಮತ್ತೆ ಸೆಟಿಂಗ್ ಮಾಡಬೇಕಾಗುತ್ತದೆ. ಈ ಎಲ್ಲವನ್ನು ತಡೆಯಲು ತುಂಬಾ ಸಲ ಕೇವಲ 0.1 ಮಿ.ಮೀ. ಮಟೀರಿಯಲ್ ಫಿನಿಶ್ ಬೋರಿಂಗ್ ಗೆ ಇಡಲಾಗುತ್ತದೆ. ಫಿನಿಶಿಂಗ್ ಗೆ ಎಷ್ಟು ಸ್ಟಾಕ್ ಇಡುವುದು ಕಾರ್ಬೈಡ್ ಅಥವಾ ಡೈಮಂಡ್ ಇನ್ಸರ್ಟ್ ನ ತ್ರಿಜ್ಯಕ್ಕೆ ಅವಲಂಬಿಸಿರುತ್ತದೆ. ಉದಾಹರಣೆ, 0.4 ಮಿ.ಮೀ. ತ್ರಿಜ್ಯದ ಇನ್ಸರ್ಟ್ ಇದ್ದಲ್ಲಿ 0.4 ಮಿ.ಮೀ.ನ ಕನಿಷ್ಠ ಅರ್ಧ ಅಂದರೆ 0.2 ಮಿ.ಮೀ. ತ್ರಿಜ್ಯದ ತುಂಡಿನ ಆಳ (ಡೆಪ್ಥ್ ಆಫ್ ಕಟ್) ಸಿಗಲೇಬೇಕು. ಒಂದು ವೇಳೆ ಫಿನಿಶಿಂಗ್ ಗೋಸ್ಕರ 50 ಮೈಕ್ರಾನ್ ಮಟೀರಿಯಲ್ ಇಟ್ಟಲ್ಲಿ ಕಟಿಂಗ್ ಎಡ್ಜ್ ಹೆಚ್ಚು ಶಾರ್ಪ್ ಇರುವುದೂ ಆವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ಕೇವಲ ರಬಿಂಗ್ ಆಗುತ್ತದೆ. ಅದಕ್ಕೋಸ್ಕರವೇ 50 ಮೈಕ್ರಾನ್ ನ ಟಾಲರನ್ಸ್ ಇಡುವುದಾದಲ್ಲಿ, 0.2 ಮಿ.ಮೀ. ತ್ರಿಜ್ಯ ಉಪಯೋಗಿಸುವುದೂ ಅತ್ಯಾವಶ್ಯಕವಾಗಿದೆ. ಇನ್ನೊಂದು ಅಂಶವೆಂದರೆ ಇದರಲ್ಲಿ ಒವ್ಯಾಲಿಟಿ ಉಂಟಾಗುವ ಸಾಧ್ಯಯೂ ಹೆಚ್ಚಾಗಿರುತ್ತದೆ. ಎಷ್ಟು ಹೆಚ್ಚು ಅಲೌನ್ಸ್ ಅಷ್ಟೇ ಒವ್ಯಾಲಿಟಿ ಕಡಿಮೆ ಇರುತ್ತದೆ.
 

3_1  H x W: 0 x 
 
ಕಾಂಬಿನೇಶನ್ ಬೋರ್
 
ಡಿಸೈನ್ ನಲ್ಲಿ ಯಾವಾಗ ಒಂದೇ ಅಕ್ಷದಲ್ಲಿ ಒಂದಕ್ಕಿಂತ ಹೆಚ್ಚು ವ್ಯಾಸಗಳ ಬೋರಿಂಗ್ ಮಾಡಬೇಕಾಗುತ್ತದೆ, ಆಗ ಅದಕ್ಕೆ ಬೇಕಾಗಿರುವ ಇನ್ಸರ್ಟ್ ಒಂದೇ ಬೋರಿಂಗ್ ಟೂಲ್ ನಲ್ಲಿ ಅಳವಡಿಸಿ ಕಾಂಬಿನೇಶನ್ ಬೋರಿಂಗ್ (ಚಿತ್ರ ಕ್ರ. 3) ಟೂಲ್ ತಯಾರಿಸಲಾಗುತ್ತದೆ. ಇಲ್ಲಿ ಚಾಂಪರಿಂಗ್ ನ ಕಾರ್ಟ್ರಿಜ್ ಕೂಡಾ ನೀಡಬಹುದಾಗಿದೆ. ಕಾಂಬಿನೇಶನ್ ಯಂತ್ರಣೆಗೋಸ್ಕರ ಮೊದಲಾಗಿ ಯಂತ್ರಭಾಗಗಳ ಡ್ರಾಯಿಂಗ್ ತಯಾರಿಸಿ ಅದರ ಮಾಡೆಲ್ ತಯಾರಿಸಲಾಗುತ್ತದೆ. ಇದರಿಂದ ಟೂಲ್ ನ ಮಾಡೆಲ್ ತಯಾರಿಸಲಾಗುತ್ತದೆ. ಇದರ ನಂತರ ಅದನ್ನು ಪರೀಕ್ಷಿಸಿದನಂತರ ಹೊಂದಾಣಿಕೆಯ ಅಂದಾಜು ಬರುತ್ತದೆ ಮತ್ತು ಯೋಗ್ಯವಾದ ಕಾಂಬಿನೇಶನ್ ಟೂಲ್ ತಯಾರಾಗುತ್ತದೆ.
 
ರಫ್ ಬೋರಿಂಗ್
 
ರಫ್ ಬೋರಿಂಗ್ ಎಲ್ಲಕ್ಕಿಂತಲೂ ಸುಲಭವಾದ ಆಪರೇಶನ್. ಇದರಲ್ಲಿ ಫಿನಿಶ್ ಅಥವಾ ಮಾಪನಗಳ ಟಾಲರನ್ಸ್ ನಲ್ಲಿ ಹೆಚ್ಚು ದೃಢವಾದ ಬಂಧನಗಳು ಇರುವುದಿಲ್ಲ. ಆದರೂ ಕೂಡಾ ಈ ಬೋರಿಂಗ್ ಗೆ ಟೂಲ್ ನ ಡೈನ್ಯಾಮಿಕ್ ಬ್ಯಾಲೆನ್ಸಿಂಗ್ ಮಾಡುವುದು ಲಾಭಕಾರಿಯಾಗಿದೆ. ಕಾರಣ ರಫ್ ಬೋರಿಂಗ್ ನ ಗುಣಮಟ್ಟದಲ್ಲಿ ಫಿನಿಶ್ ಬೋರ್ ನ ಗುಣಮಟ್ಟವು ಅವಲಂಬಿಸಿರುತ್ತದೆ. ಇನ್ನೊಂದು ಅಂಶವೆಂದರೆ ಬ್ಯಾಲೆನ್ಸಿಂಗ್ ಸರಿಯಾಗಿ ಆಗದಿದ್ದಲ್ಲಿ ಆಕಾರದ ನಿರಂತರತೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರ ಹೊರತಾಗಿ ಸ್ಪಿಂಡಲ್ ನ ಬಾಳಿಕೆಯ ಕುರಿತಾದ ಸಮಸ್ಯೆಗಳೂ ಉದ್ಭವಿಸುತ್ತವೆ.
 
ಸ್ಟೆಪ್ ಬೋರಿಂಗ್
 

4_1  H x W: 0 x 
 
ಒಂದೇ ಬಾರಿ ವಿವಿಧ ವ್ಯಾಸಗಳ ಬೋರಿಂಗ್ ಆಗುತ್ತಿರುತ್ತದೆ, ಆಗ ಎಷ್ಟು ಸ್ಟೆಪ್ ಒಂದೇ ಸಲ ಮಾಡಬಹುದು, ಎಂಬ ಪ್ರಶ್ನೆಯು ಸಹಜವಾಗಿ ಎದುರಾಗುತ್ತದೆ. ಉದಾಹರಣೆ, ಯಾವುದೊಂದು ಬೋರ್ ಗೆ 100, 70, 50 ಮತ್ತು 30 ಹೀಗೆ ನಾಲ್ಕು ವ್ಯಾಸಗಳು ಒಂದೇ ಅಕ್ಷದಲ್ಲಿರುತ್ತವೆ. ಅದಕ್ಕೆ ಚಾಂಪರ್ ಮತ್ತು ಈ ಎಲ್ಲದರ 10 ಮಿ.ಮೀ., 20 ಮಿ.ಮೀ., 7 ಮಿ.ಮೀ., 3 ಮಿ.ಮೀ. ಇಂತಹ ಉದ್ದವನ್ನಿಡುವ ಎಲ್ಲ ಯಂತ್ರಣೆಯನ್ನು ಮಾಡುವುದಾದಲ್ಲಿ (ಚಿತ್ರ ಕ್ರ. 4) ಒಂದೇ ಟೂಲ್ ನಲ್ಲಿ ಅಪೇಕ್ಷಿಸಿರುವ ಉದ್ದದ ದೂರದಿಂದ ಆಯಾ ವ್ಯಾಸಕ್ಕೆ ಸೂಕ್ತವಾದ ಸ್ಥಾನದಲ್ಲಿ ಇನ್ಸರ್ಟ್ ಅಳವಡಿಸಿ ಕಾಂಬಿನೇಶನ್ ಟೂಲ್ ಮಾಡುವುದು ಸಾಧ್ಯವಾಗಿದೆ. ಇದಕ್ಕೋಸ್ಕರ ಎಷ್ಟು ಇನ್ಸರ್ಟ್ ಅಳವಡಿಸಬೇಕೋ ಅಷ್ಟೇ ಕಾರ್ಟ್ರಿಜ್ ಅಳವಡಿಸಲು ಟೂಲ್ ನಲ್ಲಿ ಕಚ್ಚುಗಳನ್ನು ತಯಾರಿಸಬೇಕಾಗುತ್ತದೆ. ಉದಾಹರಣೆ, 50 ರ ವ್ಯಾಸದಲ್ಲಿ ಚಾಂಫರ್ ಒಂದು, ಬೋರ್ ಒಂದು, ಎರಡನೇ ವ್ಯಾಸದಲ್ಲಿ ಬೋರ್ ನ ಮತ್ತು ಚಾಂಫರ್ ಇಂತಹ ಕಾರ್ಟ್ರಿಜ್ ಒಂದು ಬಾಡಿಯಲ್ಲಿ ಅಳವಡಿಸಬೇಕಾಗುತ್ತದೆ. ಎಷ್ಟು ಕಾರ್ಟ್ರಿಜ್ ಅಳವಡಿಸಬಹುದೋ, ಅದು ವ್ಯಾಸಕ್ಕೆ ಅವಲಂಬಿಸಿರುತ್ತದೆ. ಕಾರಣ ಕಡಿಮೆ ವ್ಯಾಸಕ್ಕೋಸ್ಕರ ಹೆಚ್ಚು ಕಾರ್ಟ್ರಿಜ್ ಅಳವಡಿಸುವಾಗ ಅದು ಒಂದಕ್ಕೊಂದು ತಡೆಯೊಡ್ಡುವುದಿಲ್ಲವೇ, ಎಂಬುದರ ಕುರಿತು ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಎಲ್ಲ ವ್ಯಾಸಗಳಿಗೆ ಒಂದೇ ಸಲ ಯಂತ್ರಣೆಯನ್ನು ಮಾಡುವಾಗ ಕಟರ್ ಬಾಡಿಯ ಮಟೀರಿಯಲ್ ನಲ್ಲಿ ವ್ಯತ್ಯಾಸವನ್ನು ಮಾಡಬೇಕಾಗುವುದಿಲ್ಲ. ಪ್ರತಿಯೊಂದು ವ್ಯಾಸಕ್ಕೆ ಲಭಿಸುವ ಯಂತ್ರಣೆಯ ವೇಗವು ಬೇರೆಬೇರೆ ಇರುವುದರಿಂದ ಯಾವ ಸೆಂಟ್ರಲೈಜ್ಡ್ ವೇಗವನ್ನು ಬಳಸುವುದು ಎಂಬ ತೀರ್ಮಾನವನ್ನು ಟೂಲ್ ಬಳಸುವವನ ಹಿಡಿತದಲ್ಲಿರುತ್ತದೆ.
 

5_1  H x W: 0 x 
 
ಫಿನಿಶ್ ಬೋರಿಂಗ್
 
ಫಿನಿಶ್ ಬೋರಿಂಗ್ ನಲ್ಲಿ 3 ಮಿ.ಮೀ. ವ್ಯಾಸದ ಮುಂದೆ ಫೈನ್ ಬೋರಿಂಗ್ ಮಾಡುವುದು ಸಾಧ್ಯ. ಅದಕ್ಕೋಸ್ಕರ ಫೈನ್ ಬೋರಿಂಗ್ ಹೆಡ್ (ಚಿತ್ರ ಕ್ರ. 5) ಬಳಸಲಾಗುತ್ತದೆ. ಫೈನ್ ಬೋರಿಂಗ್ ಹೆಡ್ ನಲ್ಲಿ ಟೂಲ್ ಹೆಡ್ ಮತ್ತು 7/24 ನ ಅಡಾಪ್ಟರ್ ಇಂತಹ ರಚನೆಯು ಇರುತ್ತದೆ. ಹೆಡ್ ನಲ್ಲಿ ಚಿಕ್ಕ ಟೂಲ್ ಅಳಡಿಸಲಾಗಿರುತ್ತದೆ. ಇದರಲ್ಲಿ ಒಂದರಲ್ಲೊಂದು ಹೀಗೆ ಎರಡು ಸಿಲಿಂಡರ್ ಇರುತ್ತವೆ. ಬದಿಯಲ್ಲಿರುವ ಎಲನ್ ಸ್ಕ್ರೂಮೂಲಕ ಸಿಲಿಂಡರ್ ಮೇಲೆ ಕೆಳಗೆ ಆಗಬಲ್ಲದು. ಇದರಿಂದಾಗಿ ಟೂಲ್ ನ ಸೆಂಟರ್ ಲೈನ್ ಸರಿಯುತ್ತದೆ. ಸೆಂಟರ್ ಲೈನ್ ಸರಿದಲ್ಲಿ ವ್ಯಾಸವು ಹೆಚ್ಚು ಕಡಿಮೆ ಆಗಬಲ್ಲದು. ಒಂದು ಡಿವಿಜನ್ ತಿರುಗಿಸಿದಲ್ಲಿ ವ್ಯಾಸವು 2 ಮೈಕ್ರಾನ್ ನಿಂದ ಹೊಂದಾಣಿಸಲ್ಪಡುತ್ತದೆ.
 
ವಾಹನೋದ್ಯೋಗದಲ್ಲಿ ಅಥವಾ ಮಾಸ್ ಪ್ರಾಡಕ್ಷನ್ ನಲ್ಲಿ ಇನ್ಸರ್ಟ್ ಟೈಪ್ ಮೈಕ್ರೋ ಬೋರಿಂಗ್ ಯುನಿಟ್ (ಚಿತ್ರ ಕ್ರ. 5) ಅಥವಾ ಫೈನ್ ಬೋರಿಂಗ್ ಯುನಿಟ್ ಬಳಸಲಾಗುತ್ತದೆ. ಫೈನ್ ಬೋರಿಂಗ್ ಯುನಿಟ್ ನಲ್ಲಿ ಅಳವಡಿಸಲಾಗುತ್ತದೆ. ಇದರಲ್ಲಿ ಉದ್ದದ ಮತ್ತು ವ್ಯಾಸದ ಹೊಂದಾಣಿಕೆಗೋಸ್ಕರ ಅತಿರಿಕ್ತವಾದ ರಾಡ್ ಹಾಕಿ ಟೂಲ್ ನ ಹೊಂದಾಣಿಕೆಯನ್ನು ಮಾಡಬಹುದಾಗಿದೆ. ಯುನಿಟ್ ನಲ್ಲಿರುವ ಡಯಲ್ ಬಳಸಿ 2 ಮೈಕ್ರಾನ್ ರೆಡಿಯಲ್ ಸರಿಹೊಂದಾಣಿಕೆ ಸಿಗಬಹುದು, ಆದರೆ ಇದಕ್ಕೋಸ್ಕರ ಕನಿಷ್ಠ ವ್ಯಾಸ 19 ಮಿ.ಮೀ. ಇರುವುದು ಅತ್ಯಾವಶ್ಯಕವಾಗಿದೆ. ಮಾಸ್ ಪ್ರೊಡಕ್ಷನ್ ನ ಫೈನ್ ಬೋರಿಂಗ್ ಗೋಸ್ಕರ ಇದು ಎಲ್ಲಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುವ ಡಿಸೈನ್ ಆಗಿದೆ. ಇದರಲ್ಲಿ ತಮಗೆ ಬೇಕಾಗದಂತೆ ಅಂದರೆ +/-10 ಮೈಕ್ರಾನ್ ಫಿನಿಶ್ ಟಾಲರನ್ಸ್ ಲಭಿಸುತ್ತದೆ. ಫೈನ್ ಬೋರಿಂಗ್ ಗೆ 99.9% ಪಾಸಿಟಿವ್ ಇನ್ಸರ್ಟ್ ಬಳಸಬೇಕು. ಕಾರಣ ಯಾವುದೇ ಫೈನ್ ಬೋರಿಂಗ್ ಯುನಿಟ್ ನ್ಯುಟ್ರಲ್ ಇನ್ಸರ್ಟ್ ನಲ್ಲಿ ತಯಾರಿಸುವುದಿಲ್ಲ. ಪಾಸಿಟಿವ್ ಇನ್ಸರ್ಟ್ ಬಳಸಿದ್ದರಿಂದ ಚಾಟರ್, ಕಂಪನಗಳೂ ಕಡಿಮೆ ಆಗಬಲ್ಲವು. ಫಿನಿಶಿಂಗ್ ಹೆಚ್ಚು ಒಳ್ಳೆಯದಾಗಿ ಲಭಿಸುತ್ತವೆ. ಇದರಲ್ಲಿ ಕೂಲಂಟ್ ಬಳಸಲಾಗುತ್ತದೆ.
 
ಮೈಕ್ರೋ ಬೋರಿಂಗ್ ಬಾರ್ ಮತ್ತು ಫೈನ್ ಬೋರಿಂಗ್ ಬಾರ್ ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಇದಕ್ಕೆ ಯಾರೂ FBU ಅಂದರೆ ಫೈನ್ ಬೋರಿಂಗ್ ಯುನಿಟ್, ಆದರೆ ಅನೇಕರು ಇದನ್ನು MBU ಅಂದರೆ ಮೈಕ್ರೋ ಬೋರಿಂಗ್ ಯುನಿಟ್ ಎಂದೂ ಹೇಳುತ್ತಾರೆ. ಇದಕ್ಕೆ ಟೂಲ್ ಪ್ರೀಸೆಟರ್ ಇಲ್ಲದಿದ್ದರೂ ಇದರ ಸೆಟಿಂಗ್ ತುಂಬಾ ಸುಲಭವಾಗಿದೆ.
 

6_1  H x W: 0 x 
 
ಉದಾಹರಣೆ 1
 
ದ್ವಿಚಕ್ರ ವಾಹನಗಳ ಸೆಂಟರ್ ಬ್ಲಾಕ್ ಸಿಲಿಂಡರ್ ನ ಇನ್ ಲೆಟ್ ನ (ಚಿತ್ರ ಕ್ರ. 6) ಯಂತ್ರಣೆಯನ್ನು ಮಾಡುವಾಗ ಬೋರಿಂಗ್ ಮಾಡುವ ಆವಶ್ಯಕತೆ ಇತ್ತು. ಅದರ ಎಲ್ಲ ಮಾಪನಗಳ ಯಂತ್ರಣೆಯನ್ನು ಒಂದೇ ಸಲ ಮಾಡಲ್ಪಡುತ್ತದೆ. ಇದರಲ್ಲಿ ಸುಲಭತೆಯನ್ನು ತರಲು ನಾವು ಒಂದು ರಫಿಂಗ್ ಟೂಲ್ (ಚಿತ್ರ ಕ್ರ. 6) ತಯಾರಿಸಿ ನೀಡಿದೆವು. ಇದರಲ್ಲಿ 7 ಪಾಕೇಟ್ ಗಳಿದ್ದು ಎಲ್ಲದರ ಉದ್ದದಲ್ಲಿ 50 ರಿಂದ 20 ಮೈಕ್ರಾನ್ ಗಳಿಗಿಂತ ಕಡಿಮೆ ವ್ಯತ್ಯಾಸವು ಇದೆ. ಈ ಟೂಲ್ ತಯಾರಿಸಿದ ನಂತರ ಫಿನಿಶ್ ನ ಟೂಲ್ ನಡೆಯುತ್ತದೆ. ನಮ್ಮ ಗ್ರಾಹಕರಲ್ಲಿ ಎಲ್ಲಕ್ಕಿಂತಲೂ ಮುಂಚೆ ಒಂದು ಮಶಿನ್ ಇತ್ತು. ಅದರಲ್ಲಿ 19 ಮತ್ತು 27.4 ಈ ಎರಡು ಪಾಕೇಟ್ ಗಳಾಗುತ್ತಿದ್ದವು. ಇದರ ನಂತರ ಅದು 80 ನೇ ಸ್ಪಾಟ್ ಫೇಸ್ ಬೇರೆ ಮಾಡಲಾಯಿತು ಮತ್ತು 35, 41.4, 62 ಮತ್ತು 55 ವ್ಯಾಸಗಳನ್ನು ತಯಾರಿಸಲು ಬೇರೆಯೇ ಮಶಿನ್ ಬಳಸುತ್ತಿದ್ದೆವು. ಅಂದರೆ ಒಟ್ಟು 3 ಮಶಿನ್ ಬಳಸುವುದು. ಅದರ ನಂತರ ಕೊನೆಯದಾಗಿ 80 ರ ಕಟರ್ ನಿಂದ ಫೇಸಿಂಗ್ ಮಾಡುವುದು. ಇದರ ನಂತರ ಅವರು ಒಂದು ಎಸ್.ಪಿ.ಎಮ್. ತಯಾರಿಸಿದೆವು ಮತ್ತು ಇದರಲ್ಲಿ ಯಾವ ಕಾಂಬಿನೇಶನ್ ಮಾಡಬಹುದು ಎಂದು ನಮಲ್ಲಿ ವಿಚಾರಿಸಿದರು. ಆಗ ನಾವು ಅವರಿಗೆ ಕಾಂಬಿನೇಶನ್ ಟೂಲ್ (ಚಿತ್ರ ಕ್ರ. 7) ತಯಾರಿಸಿ ನೀಡಿದೆವು. ಅವರಲ್ಲಿರುವ ಮಶಿನ್ ನ ರಚನೆಯನ್ನು ಬದಲಾಯಿಸಿ ಒಂದೇ ಮಶಿನ್ ನಲ್ಲಿ ಎರಡು ಸ್ಪಿಂಡಲ್ ಹೆಡ್ ಅಳವಡಿಸಬಹುದಾದಂತಹ ನಾಲ್ಕು ಬೋರಿಂಗ್ ಬಾರ್ ಒಂದೇ ಸಲ ಕೆಲಸ ಮಾಡಬಲ್ಲವು, ಇಂತಹ ವ್ಯವಸ್ಥೆಯನ್ನು ಮಾಡಿದೆವು. ಇದರಿಂದಾಗಿ ಒಂದೇ ಮಶಿನ್ ನಲ್ಲಿ ಒಂದೇ ಸಲ 4 ಯಂತ್ರಭಾಗಗಳ ಬೋರಿಂಗ್ ಆಗಲಾರಂಭಿಸಿತು. ಅದರ ಪಕ್ಕದಲ್ಲಿಯೇ ಫಿನಿಶ್ ಬೋರಿಂಗ್ ನ ಮಶಿನ್ ಇಡಲಾಯಿತು. ಈ ಹಿಂದೆ ಅವರಲ್ಲಿ ಎರಡು ಮಶಿನ್ ಗಳಿದ್ದವು. ಇದರಲ್ಲಿ ಎರಡು ಬೋರಿಂಗ್ ಮತ್ತು 19 ಮಿ.ಮೀ.ನ ಸ್ಪೆಶಲ್ ರೀಮರ್ ಇತ್ತು. ನಾವು ಈ ಎಲ್ಲ ಕಾಂಬಿನೇಶನ್ ಮಾಡಿ ಒಂದೇ ಜಾಗದಲ್ಲಿ ತಂದುಕೊಟ್ಟೆವು. ಇದರಲ್ಲಿ ಯಂತ್ರಭಾಗಗಳ ಚಾಂಫರಿಂಗ್ ಮಾಡಲಾಗುತ್ತದೆ. ಇದಕ್ಕೋಸ್ಕರ ಬೇರೆಯೇ ಮಶಿನ್ ಇತ್ತು. ಈ ಕೆಲಸವನ್ನೂ ಕಾಂಬಿನೇಶನ್ ಟೂಲ್ ನಲ್ಲಿ ಮಾಡಿ ಅದನ್ನು ಒಟ್ಟು ಆರು ಮಶಿನ್ ಗಳ ಬದಲಾಗಿ ಕೇವಲ ಎರಡು ಮಶಿನ್ ಗಳಲ್ಲಿಯೇ ಕೆಲಸವು ಆಗಲಾರಂಭಿಸಿತು. ಈ ಎಲ್ಲವನ್ನು ಮಾಡಿದ ನಂತರ ಪ್ರತಿಯೊಂದು ಯಂತ್ರಭಾಗಗಳಲ್ಲಿ ಒಂದುವರೆ ಗಂಟೆಯ ಉಳಿತಾಯವು ಗ್ರಾಹಕರಿಗೆ ಕಂಡುಬಂತು. ಇದರಲ್ಲಿ ಸೆಟಿಂಗ್ ನ ವೇಳೆಯೂ ಕಡಿಮೆಯಾಯಿತು. ಟಾಪ್ ಕ್ಲಾಂಪಿಂಗ್ ಆಯಿತು, ಈಗ ಸ್ಕ್ರೂ ಕ್ಲಾಂಪಿಂಗ್ ಮಾಡಲಾಯಿತು.
 

7_1  H x W: 0 x 
 
ಉದಾಹರಣೆ 2
 

8_1  H x W: 0 x 
 
ನಮ್ಮಲ್ಲಿರುವ ಒಬ್ಬ ಗ್ರಾಹಕರಲ್ಲಿ ಪ್ಲೇನ್ ಬೋರಿಂಗ್ ಬಾರ್ ಬಳಸಿ ಎಸ್.ಪಿ.ಎಮ್.ನಲ್ಲಿ ಒಂದೇ ಕಾರ್ಯವಸ್ತುವಿನ ಯಂತ್ರಣೆಯಾಗುತ್ತಿತ್ತು. ರೆಗ್ಯುಲರ್ ಬೋರಿಂಗ್ ಬಾರ್ ನಲ್ಲಿ ರಫಿಂಗ್, ಸೆಮಿಫಿನಿಶ್ ಮತ್ತು ಚಾಂಫರ್ ಆಗುತ್ತಿತ್ತು. ನಾವು ಇದರಲ್ಲಿ ಒಂದು ಇನ್ಸರ್ಟ್ ಅಳವಡಿಸಿದೆವು, ಕಾರಣ ಅದಕ್ಕೆ ಬ್ಯಾಕ್ ಚಾಂಫರ್ ಗೋಸ್ಕರ ಒಂದೇ ಮಶಿನ್ ನಲ್ಲಿ ಮೂರು ಆಪರೇಶನ್ ಮಾಡಬೇಕಾಗುತ್ತಿತ್ತು. ಅವರಲ್ಲಿ 6 ಸೆಟಪ್ ಗಳಿದ್ದವು. ನಾವು ಮಾಡಿರುವ ಕಾಂಬಿನೇಶನ್ ಟೂಲ್ ನಲ್ಲಿ ಒಂದು ಬ್ಯಾಕ್ ಚಾಂಫರ್ ನ ಇನ್ಸರ್ಟ್ ಅಳವಡಿಸಿದೆವು. ಈ ಟೂಲ್ ನಿಂದಾಗಿ ಬೇರೆ ಚಾಂಫರಿಂಗ್ ನ ಕೆಲಸವು ನಿಂತು ಹೋಯಿತು. ಸೈಕಲ್ ಟೈಮ್ ನಲ್ಲಿ ಇನ್ನಿತರ ಬೋರಿಂಗ್ ನ ಕೆಲಸವಾಗುತ್ತಿತ್ತೋ ಅದೇ ಸೈಕಲ್ ಟೈಮ್ ನಲ್ಲಿ ಬೇಕ್ ಚಾಂಫರಿಂಗ್ ಕೂಡಾ ಆಗಲಾರಂಭಿಸಿತು. ಈ ಸುಧಾರಣೆಯನ್ನು ನೋಡಲು ಪಕ್ಕದಲ್ಲಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 

9_1  H x W: 0 x 
 
ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ ಟೂಲ್ ನಲ್ಲಿ ಬಳಸಲಾಗಿರುವ ಇನ್ಸರ್ಟ್ ನ ವಿವರಗಳನ್ನು ಈ ಮುಂದೆ ನೀಡಲಾಗಿದೆ.
1. ರಫಿಂಗ್ ಇನ್ಸರ್ಟ್
2. ಫಿನಿಶಿಂಗ್ ಇನ್ಸರ್ಟ್
3. ಸೆಮಿಫಿನಿಶಿಂಗ್ ಇನ್ಸರ್ಟ್
4. ಬ್ಯಾಕ್ ಚಾಂಫರಿಂಗ್ ಇನ್ಸರ್ಟ್
 
ಇದರಿಂದಾಗಿ ಈ ಕೆಲಸಕ್ಕೋಸ್ಕರ ಬೇಕಾಗುವ ಸೈಕಲ್ ಟೈಮ್ ಕಡಿಮೆಯಾಯಿತು, ಆದರೆ ಅದರೊಂದಿಗೆ ಮಾನವ ಸಂಪನ್ಮೂಲಗಳ ಉಪಯೋಗವೂ ಕಡಿಮೆಯಾದವು.
 
 

girish fadake_1 &nbs 
ಗಿರೀಶ್ ಫಡಕೆ
ನಿರ್ದೇಶಕರು, ಗೌರವ್ ಇಂಜಿನಿಯರ್ಸ್ 
9225641450
 
ಗಿರೀಶ್ ಫಡಕೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರು. 6 ವರ್ಷಗಳ ಕಾಲಾವಧಿಯಲ್ಲಿ ಟಾಟಾ ಮೋಟರ್ಸ್ ಕಂಪನಿಯಲ್ಲಿ ಸೇವೆ ಸಲ್ಲಿಸಿ ಕಳೆದ 26 ವರ್ಷಗಳಿಂದ ಔರಂಗಾಬಾದ್ ಎಂಬಲ್ಲಿ ಗೌರವ್ ಇಂಜಿನಿಯರ್ಸ್ ಕಂಪನಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
 
 
@@AUTHORINFO_V1@@