ಒಬ್ಬ ಉದ್ಯಮಿ 12 ಮಿ.ಮೀ.ನಷ್ಟು ದಪ್ಪವಿರುವ ಲೋಹದ ತಗಡನ್ನು ಕತ್ತರಿಸಬಲ್ಲ ಒಂದು ಹಳೆಯ ಶಿಯರಿಂಗ್ ಮಶಿನ್ (ಚಿತ್ರ ಕ್ರ. 1) ಖರೀದಿಸಿದರು. ಮಶಿನ್ ಕಾರ್ಖಾನೆಯಲ್ಲಿ ಅಳವಡಿಸಿದನಂತರ ಮಶಿನ್‌ನಿಂದ ಉತ್ಪಾಾದನೆಯನ್ನು ಪ್ರಾಾರಂಭಿಸಲಾಯಿತು. ಆದರೆ ಉತ್ಪಾದನೆಯ ಗುಣಮಟ್ಟವು ಸಮಾಧಾನಕಾರಿಯಾಗಿ ಇರಲಿಲ್ಲ, ಹಾಗೆಯೇ ಈ ಮಶಿನ್‌ನಲ್ಲಿ ಈ ಕೆಳಗಿನ ಸಮಸ್ಯೆಗಳು ಗಮನಕ್ಕೆ ಬಂದವು.
1. ಮಶಿನ್‌ನಲ್ಲಿ ಕಂಪನಗಳುಂಟಾಗುತ್ತಿದ್ದವು.
2. ಡ್ರೈವ್ ಮೋಟರ್ ಆಗಾಗ ಸುಡುತ್ತಿತ್ತು.
3. ಕ್ಲಚ್ ಮತ್ತು ಡ್ರಿವನ್ ಶಾಫ್ಟ್ ಇದರಲ್ಲಿರುವ ಕಪಲಿಂಗ್ ಬೋಲ್ಟ್ ಶಿಯರಿಂಗ್ ಆಗಿ ಮುರಿಯುತ್ತಿದ್ದವು.
4. ಮುರಿದ ತಗಡಿನ ಎಡ್ಜ್‌ಗಳ ಗುಣಮಟ್ಟವು ಸಮಾಧಾನಕಾರಿಯಾಗಿ ಇರಲಿಲ್ಲ.
ನಿರ್ವಹಣೆಯನ್ನು ಮಾಡುತ್ತಿರುವ ವ್ಯಕ್ತಿಯು ಕಪಲಿಂಗ್ ಬೋಲ್ಟ್ ನಿರಂತರವಾಗಿ ಬದಲಾಯಿಸುವುದು ಬೇಡ, ಎಂದು ಕಪಲಿಂಗ್ ವೆಲ್ಡ್ ಮಾಡಿದರು. ಇದರಿಂದಾಗಿ ಇನ್ನಷ್ಟು ಸಮಸ್ಯೆಗಳು ಉದ್ಭವಿಸಿದವು. ಫ್ಲೈ ವೀಲ್ ಶಾಫ್ಟ್ ಶಿಯರ್ ಮುರಿಯಲಾರಂಭಿಸಿತು. ನಿರ್ವಹಣೆಯನ್ನು ಮಾಡುವ ಅನುಭವವುಳ್ಳ ಇಂಜಿನಿಯರ್ ಇದರ ಕಡೆಗೆ ಗಮನ ಹರಿಸಿದಾಗ, ಮೊದಲ ನೋಟದಲ್ಲಿ ಎಲ್ಲ ಸಮಸ್ಯೆಗಳು ಒಂದೇ ದೋಷದಿಂದ ಕಂಡುಬರುತ್ತಿವೆ, ಇದರಲ್ಲಿ ಅನೇಕ ದೋಷಗಳಿವೆಯೇ ಎಂಬುದನ್ನು ಹುಡುಕುವುದನ್ನು ನಿರ್ಧರಿಸಿದೆವು.
1. ಕತ್ತರಿಸಿರುವ ಎಡ್ಜ್‌ಗಳ ಗುಣಮಟ್ಟದ ಸಮಸ್ಯೆಗಳು
ಅನುಭವವುಳ್ಳ ನಿರ್ವಹಣಾ ಇಂಜಿನಿಯರ್ ಮೊದಲಾಗಿ ಕತ್ತರಿಸಿರುವ ಎಡ್ಜ್‌ಗಳ ಸಮಸ್ಯೆಗಳ ಕುರಿತು ವಿಶ್ಲೇಷಣೆಯನ್ನು ಮಾಡಲು ಪ್ರಾರಂಭಿಸಿದರು. ಕತ್ತರಿಸಲು ಬಳಸಲಾಗುವ ಜಾಗಳಲ್ಲಿರುವ (ಹಲ್ಲುಗಳಲ್ಲಿರುವ) ದೂರವನ್ನು ತಗಡಿನ ದಪ್ಪಕ್ಕೆ ಅನುಸಾರವಾಗಿ ಬದಲಾಯಿಸಲಾಗುತ್ತದೆ. ಇಂತಹ ವಿಶೇಷವಾದ ಮಶಿನ್‌ನಲ್ಲಿ ಯಾಂತ್ರಿಕವಾದ ಲಿವರ್ ಬಳಸಿ ಗ್ಯಾಸ್ ಸೆಟಿಂಗ್ ಮಾಡಲಾಗುತ್ತದೆ. ಲಿವರ್‌ನ ಹಿಂಭಾಗದಲ್ಲಿ ಒಂದು ತಟ್ಟೆಯನ್ನು ಅಳವಡಿಯಲಾಗಿರುತ್ತದೆ. ಈ ತಟ್ಟೆ ಹಲ್ಲುಗಳಲ್ಲಿರುವ ಗ್ಯಾಪ್ ಮಿ.ಮೀ.ಗಳಲ್ಲಿ ತೋರಿಸುತ್ತದೆ. ಅಗತ್ಯವಾಗಿರುವ ಗ್ಯಾಪ್ ಸೆಟ್ ಮಾಡಲು ಆಪರೇಟರ್‌ಗೆ ಲಿವರ್‌ನ ತೋರುವಂತಹ ಮುಳ್ಳನ್ನು ತಟ್ಟೆಯಲ್ಲಿ ಯೋಗ್ಯವಾದ ಸಂಖ್ಯೆಯ ಎದುರು ಅಳವಡಿಸಬೇಕಾಗುತ್ತದೆ. ತಗಡಿನ ದಪ್ಪಕ್ಕೆ ಅನುಸಾರವಾಗಿ ಈ ದೂರವನ್ನು 0.03 ಮಿ.ಮೀ.ನಿಂದ 0.1 ಮಿ.ಮೀ.ನಷ್ಟು ಬದಲಾಯಿಸಲ್ಪಡುತ್ತದೆ. ಈ ಗ್ಯಾಪ್ ಪರಿಶೀಲಿಸಲು ವಿಶೇಷವಾದ ಪದ್ಧತಿಯನ್ನು ಈ ಮುಂದೆ ನೀಡಲಾಗಿದೆ.
· ಬೇಕಾಗಿರುವ ರೀಡಿಂಗ್‌ನಲ್ಲಿ ಅಡ್ಜೆಸ್ಟ್‌ಮೆಂಟ್ ತೋರಿಸುವ ಮುಳ್ಳನ್ನು ಅಳವಡಿಸಬೇಕು. ಉದಾಹರಣೆ, 0.06 ಮಿ.ಮೀ. (4 ಮಿ.ಮೀ.ನ ಮೈಲ್ಡ್ ಸ್ಟೀಲ್ (MS) ತಗಡನ್ನು ಕತ್ತರಿಸಲು)
· ಬೀಮ್ ಕೆಳಗೆ ತರಬೇಕು.
· ಕತ್ತರಿಸುವ ಹಲ್ಲು ಯಾವಾಗಲೂ ಚಿಕ್ಕ ಮತ್ತು ಓರೆಯಾಗಿರುವ ಕೋನದಲ್ಲಿ ಅಳವಡಿಸಲಾಗುತ್ತದೆ. ಇದರಿಂದಾಗಿ ಕತ್ತರಿಯಂತೆ ಪರಿಣಾಮವು ಲಭಿಸುತ್ತದೆ. ಯಾವ ಬಿಂದುವಿನಲ್ಲಿ ಮೇಲ್ಭಾಗದಲ್ಲಿರುವ ಹಲ್ಲು ಕೆಳಗಿನ ಹಲ್ಲುಗಳ ಹತ್ತಿರ ಬರುತ್ತದೆಯೋ, ಅಲ್ಲಿ ಫಿಲರ್ ಗೇಜ್‌ನಿಂದ ಗ್ಯಾಪ್ ಪರಿಶೀಲಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ 0.06 ಮಿ.ಮೀ. ದೂರವನ್ನು ಸೆಟ್ ಮಾಡಲು, 0.07 ಮಿ.ಮೀ. ಫಿಲರ್ ಗೇಜ್ ಅಳವಡಿಸದೇ 0.05 ಮಿ.ಮೀ. ಫಿಲರ್ ಗೇಜ್ ಅಳವಡಿಸಲ್ಪಡಬೇಕು.
· ನಂತರ ಬೀಮ್ ನಿಧಾನವಾಗಿ ಕೆಳಗೆ ತರಬೇಕು ಮತ್ತು ವಿವಿಧ ಬಿಂದುಗಳ ಜಾಗದಲ್ಲಿ ಗ್ಯಾಪ್ ಪರಿಶೀಲಿಸಬೇಕು.
ಈ ಪರಿಸ್ಥಿತಿಯಲ್ಲಿ ಮೇಲೆ ತಿಳಿಸಿದ ಪದ್ಧತಿಯಂತೆ ಗ್ಯಾಪ್‌ನ ಮಾಪನ ಮಾಡಿದಾಗ ತಗಡಿನಲ್ಲಿರುವ ಗುರುತಿಗೆ ಅನುಸಾರವಾಗಿ ಲಿವರ್‌ನ ಸ್ಥಿತಿ ಮತ್ತು ಪ್ರತ್ಯಕ್ಷವಾದ ಗ್ಯಾಪ್‌ನ ಮಾಪನದ ಹೊಂದಾಣಿಕೆಯು ಆಗುವುದಿಲ್ಲ, ಎಂಬುದು ಗಮನಕ್ಕೆ ಬಂತು. ಲಿವರ್ ಮತ್ತು ಗ್ಯಾಪ್ ಸೆಟ್ ಮಾಡುವ ರೀತಿಯಲ್ಲಿ ಟ್ರಾನ್ಸ್‌ಮಿಶನ್‌ನ ಘಟಕಗಳನ್ನು ಹೆಚ್ಚಾಗಿ ಪರಿಶೀಲಿಸಿದಾಗ, ಕೆಲಸವನ್ನು ನಿರ್ವಹಿಸುವ ಲಿವರ್ ಶಾಫ್ಟ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಾರುತ್ತಿರುವುದು ಗಮನಕ್ಕೆ ಬಂತು. ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಬದಲಾವಣೆಗಳನ್ನು ಮಾಡಿದ ನಂತರ ಈ ಸಮಸ್ಯೆಯ ಪರಿಹಾರವಾಯಿತು.
2. ಕಂಪನಗಳು, ಕಪಲಿಂಗ್ ಬೋಲ್ಟ್‌ನ ಶಿಯರಿಂಗ್ ಮತ್ತು ಮೋಟರ್ ಸುಟ್ಟು ಹೋಗುವುದು
ಮೇಲಿನ ಎಲ್ಲ ಸಮಸ್ಯೆಗಳ ಮೂಲ ಕಾರಣ ಒಂದೇ ಇರುವುದು ನಮ್ಮ ಗಮನಕ್ಕೆ ಬಂತು. ಕಟಿಂಗ್‌ನ ಗುಣಮಟ್ಟದ ಸಮಸ್ಯೆಗಳನ್ನು ಪರಿಹರಿಸಿದನಂತರ ಅನುಭವಿಗಳಾದ ಇಂಜಿನಿಯರ್ ಕಂಪನದ ಸಮಸ್ಯೆಯ ಕಡೆಗೆ ಗಮನವನ್ನು ಹರಿಸಿದರು. ಮೋಟರ್‌ನ ವೇಗ ತುಂಬಾ ಹೆಚ್ಚಾಗಿತ್ತು, ಆದ್ದರಿಂದ ಮಶಿನ್‌ನ ಮ್ಯಾನ್ಯುವಲ್‌ನಲ್ಲಿ ಮೋಟರ್‌ನ ಕುರಿತಾದ ವಿವರಗಳನ್ನು ಓದಿ ನೋಡಬೇಕು, ಎಂಬ ವಿಷಯವು ನಿರೀಕ್ಷಣೆಯ ನಂತರ ಗಮನಕ್ಕೆ ಬಂತು. ಆದರೆ ಮ್ಯಾನ್ಯುವಲ್ ಮಶಿನ್‌ನೊಂದಿಗೆ ಸಿಕ್ಕಿರಲಿಲ್ಲ. ಮಶಿನ್‌ನ ಉತ್ಪಾದಕರನ್ನು ಸಂಪರ್ಕಿಸಿದಾಗ ಮ್ಯಾನ್ಯುವಲ್ ಲಭ್ಯವಾಯಿತು. ಆ ಮ್ಯಾನ್ಯುವಲ್‌ನಲ್ಲಿ ನೀಡಿರುವ ವಿವರಗಳಂತೆ ಮಶಿನ್‌ನಲ್ಲಿ 15HP 960 ಆರ್.ಪಿ.ಎಮ್. ಡ್ರೈವ್ ಮೋಟರ್ ಇರುವುದು ಗಮನಕ್ಕೆ ಬಂತು. ಆದರೆ ಪ್ರತ್ಯಕ್ಷವಾಗಿ ಮಶಿನ್‌ನಲ್ಲಿ 15HP 1460 ಆರ್.ಪಿ.ಎಮ್. ಡ್ರೈವ್‌ನ ಮೋಟರ್ ಇತ್ತು. ಈ ಮಶಿನ್‌ನನ್ನು ಖರೀದಿಸಿದ ಕಂಪನಿಯನ್ನು ಸಂಪರ್ಕಿಸಲಾಯಿತು. ಪ್ರತಿ ನಿಮಿಷದ ಸ್ಟ್ರೋಕ್ ಹೆಚ್ಚಿಸಲು ಅವರು ಈ ಹಿಂದಿನ ಮಶಿನ್‌ನ ಬದಲಿಗೆ ಹೆಚ್ಚು ಆರ್.ಪಿ.ಎಮ್. ಇರುವ ಇನ್ನೊಂದು ಮಶಿನ್ ಅಳವಡಿಸಿದ್ದರೆಂದು ತನಿಖೆ ಮಾಡಿದಾಗ ತಿಳಿದುಬಂತು. ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕೇವಲ ಆರ್.ಪಿ.ಎಮ್. ಹೆಚ್ಚಿಸಿದರೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಹೆಚ್ಚು ವೇಗವನ್ನು ಪಡೆಯಲು ಮಶಿನ್‌ನ ರಚನೆ ಮತ್ತು ಇನ್ನಿತರ ಘಟಕಗಳೂ ಸಾಕಷ್ಟು ದೃಢವಾಗಿರುವ ಡಿಸೈನ್ ತಯಾರಿಸಬೇಕಾಗುತ್ತದೆ. ಇದರಿಂದಾಗಿ ಸೂಕ್ತವಾಗಿರುವ ಮಶಿನ್ ಅಳವಡಿಸುವುದನ್ನು ನಿರ್ಧರಿಸಲಾಯಿತು.
ಮೋಟರ್ ಆಗಾಗ ಸುಟ್ಟು ಹೋಗುವ ಸಮಸ್ಯೆಯ ಕುರಿತು ಇನ್ನಷ್ಟು ಆಳವಾಗಿ ಅಭ್ಯಾಸ ಮಾಡಲಾಯಿತು. ಸಾಮಾನ್ಯವಾಗಿ 3 ಫೇಸ್ ಇಂಡಕ್ಷನ್ ಮೋಟರ್ ವೈಂಡಿಂಗ್ ಸುಡುವ ಕಾರಣಗಳು ಈ ಮುಂದಿನಂತಿವೆ.
· ಹೆಚ್ಚು ಲೋಡಿಂಗ್
· ಹೆಚ್ಚು ಅಥವಾ ಕಡಿಮೆ ವೋಲ್ಟೇಜ್
· ಸಿಂಗಲ್ ಫೇಸಿಂಗ್
· ಸವೆದಿರುವ ಬೇರಿಂಗ್ ಅಥವಾ ಬೇರಿಂಗ್ ಹೌಸಿಂಗ್‌ನಿಂದಾಗಿ ರೋಟರ್ ಸ್ಟೆಟರ್‌ಗೆ ಉಜ್ಜುವುದು.
ಈ ಉದಾಹರಣೆಯಲ್ಲಿ ಕೇಸ್‌ನಲ್ಲಿ ಓವರ್ ಕರಂಟ್ ರಿಲೆಯನ್ನು ಪರಿಶೀಲಿಸಿ ಅದು ಸರಿಯಾಗಿರುವುದನ್ನು ದೃಢೀಕರಿಸಲಾಯಿತು. ಈ ರಿಲೆ ರೇಟೇಡ್ ಕರಂಟ್‌ನೊಂದಿಗೆ ಸೆಟ್ ಮಾಡಲಾಗಿತ್ತು. ಮೋಟರ್ ಸಂಪೂರ್ಣವಾದ ಲೋಡ್ ಕರಂಟ್ (15HP ಮೋಟರ್‌ಗೋಸ್ಕರ 21A) ಪಡೆಯುತ್ತಿತ್ತು. ಇದಕ್ಕಿಂತ ಹೆಚ್ಚು ಕರಂಟ್ ಪಡೆಯದಿರುವುದರಿಂದ ರಿಲೆ ಟ್ರಿಪ್ ಆಗುತ್ತಿರಲಿಲ್ಲ. ಮೋಟರ್ ಸುಡುತ್ತಿರುವಾಗ ಸಿಂಗಲ್ ಫೇಜಿಂಗ್ ಇರಲಿಲ್ಲ ಎಂಬುದು ಗಮನಕ್ಕೆ ಬಂತು. ಮೋಟರ್ ಟರ್ಮಿನಲ್ ಬಾಕ್ಸ್‌ನ ತನಕ ಮೂರು ಫೇಸ್‌ಗಳು ಸರಿಯಾಗಿದ್ದವು. ಬೇರಿಂಗ್ ಕೂಡಾ ಸರಿಯಾಗಿತ್ತು ಮತ್ತು ಮೋಟರ್ ಕವರ್‌ನಲ್ಲಿ ಬೇರಿಂಗ್ ಹೌಸಿಂಗ್ ಕೂಡಾ ಸವೆದಿರುವುದು ಕಂಡುಬಂತು. ಈ ಪರಿಶೀಲನೆಯಲ್ಲಿ ವೋಲ್ಟೇಜ್ ಈ ಅಂಶದ ಪರಿಶೀಲನೆಯಾಗಿರಲಿಲ್ಲ. ಮೋಟರ್‌ನ ಹೆಸರಿನ ಪಟ್ಟಿಯಲ್ಲಿ ರೇಟೇಡ್ ವೋಲ್ಟೇಜ್ ಪರಿಶೀಲಿಸಲಾಯಿತು, ಆಗ ಮಶಿನ್‌ನ ನಿರ್ಮಾಣವು ಭಾರತದಲ್ಲಿ ಆಗಿದ್ದರೂ ಕೂಡಾ ಅದಕ್ಕೋಸ್ಕರ ಬೇಕಾಗುವಂತಹ ಮೋಟರ್ ವಿದೇಶದಿಂದ ಆಮದು ಮಾಡಲಾಗಿತ್ತು, ಎಂಬ ಅಂಶವು ಗಮನಕ್ಕೆ ಬಂತು.

ಇಂತಹ ಆಮದು ಮಾಡಿರುವ ಮೋಟರ್‌ನ ವೊಲ್ಟೇಜ್ ಡಬಲ್ ಆಗಿತ್ತು. ಯಾವ ದೇಶಗಳಲ್ಲಿ ವಿದ್ಯುತ್ ಪ್ರವಾಹವು 3ph 220V ಇರುತ್ತದೆಯೋ, (ಉದಾಹರಣೆ, ಅಮೇರಿಕಾ) ಆ ದೇಶಗಳಲ್ಲಿ ಇಂತಹ ಮೋಟರ್‌ಗಳನ್ನು ಬಳಸಲಾಗುತ್ತದೆ ಅಥವಾ ಯಾವ ದೇಶಗಳಲ್ಲಿ ವಿದ್ಯುತ್ ಪ್ರವಾಹ 3ph 430V (ಉದಾಹರಣೆ, ಭಾರತ) ಇರುವುದೋ, ಅಲ್ಲಿಯೂ ಇಂತಹ ಮೋಟರ್‌ಗಳನ್ನೇ ಬಳಸಲಾಗುತ್ತದೆ. 3ph 220V ವಿದ್ಯುತ್ ಪೂರೈಕೆಗೆ ವೈಂಡಿಂಗ್ ಡೆಲ್ಟಾದಲ್ಲಿ (ಚಿತ್ರ ಕ್ರ. 3ಎ ಮತ್ತು 3ಬಿ) ಜೋಡಿಸುವುದೂ ಅತ್ಯಾವಶ್ಯಕವಾಗಿರುತ್ತದೆ, ಆದರೆ 3ph 430V ಗೋಸ್ಕರ ಅದು ಸ್ಟಾರ್‌ನಲ್ಲಿ ಜೋಡಿಸಬೇಕಾಗುತ್ತದೆ. ಇದರ ವಿವರಗಳನ್ನು ಓದುಗರಿಗೋಸ್ಕರ 3 ಫೇಸ್, 230 ವೋಲ್ಟ್ ಮತ್ತು 3 ಫೇಸ್ 430 ವೋಲ್ಟ್‌ನ ಮೋಟರ್‌ನ ಹೋಲಿಕೆಯನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ. 220 ವೋಲ್ಟ್ ರೇಟಿಂಗ್‌ನ ಮೋಟರ್ 430 ವೋಲ್ಟ್ ಇರುವ ಸಪ್ಲೈಯಲ್ಲಿ (ಡೇಲ್ಟಾದಲ್ಲಿ) ಜೋಡಿಸಿದಲ್ಲಿ ಹೆಚ್ಚು ಕರಂಟ್ ಎಳೆಯಲಾಗುತ್ತದೆ, ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ವಿಶ್ಲೇಷಣೆಯನ್ನು ಮಾಡುವಾಗ ಮಶಿನ್‌ನಲ್ಲಿ ವೈಂಡಿಂಗ್ ಡೆಲ್ಟಾದಲ್ಲಿ ಜೋಡಿಸಿರುವುದು ಕಂಡುಬಂತು. ಈ ರೀತಿಯ ತಪ್ಪಾದ ಜೋಡಣೆಯಿಂದಾಗಿ ವೈಂಡಿಂಗ್‌ನ ಟರ್ನ್‌ನ ವೋಲ್ಟೇಜ್ ತುಂಬಾ ಜಾಸ್ತಿ ಇತ್ತು ಮತ್ತು ಇದರ ಪರಿಣಾಮದಿಂದಾಗಿ ವೈಂಡಿಂಗ್ ವಾಯರ್‌ನ ಇನ್ಯಾಮಲ್ ಇನ್ಸುಲೇಶನ್ ಹಾಳಾಗಿ ಅದು ಶಾರ್ಟ್ ಆಗುತ್ತಿತ್ತು. ಇದರ ಮಧ್ಯೆ 3ph 430V ರೇಟಿಂಗ್ ಇರುವ ಮತ್ತು 960 ಆರ್.ಪಿ.ಎಮ್. ಇರುವ ಮೂಲ ಮೋಟರ್ ಯಾರಿಂದ ಖರೀದಿಸಿದ್ದೆವೋ, ಅವರಿಂದಲೇ ಹೊಸ ಮೋಟರ್ ಖರೀದಿಸಲಾಯಿತು. ಆ ಮೋಟರ್ ಅಳವಡಿಸಿದನಂತರ ಎಲ್ಲ ಸಮಸ್ಯೆಗಳೂ ಪರಿಹರಿಸಲ್ಪಟ್ಟವು.
ಅನಿಲ್ ಗುಪ್ತೆ
ತಾಂತ್ರಿಕ ಸಲಹೆಗಾರರು
9767890284
ಅನಿಲ ಗುಪ್ತೆ ಇವರು ಇಲೆಕ್ಟ್ರಿಕಲ್ ಇಂಜಿನಿಯರ್ ಪದವೀಧರರಾಗಿದ್ದಾಾರೆ. ಇವರಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 53 ವರ್ಷಗಳಷ್ಟು ಸುದೀರ್ಘ ಕಾಲಾವಧಿಯ ಅನುಭವವಿದೆ. ಟಾಟಾ ಮೋಟರ್ಸ್ ಈ ಕಂಪನಿಯಲ್ಲಿ ಮೆಂಟೆನನ್ಸ್ ಮತ್ತು ಪ್ರೊಜೆಕ್ಟ್ಸ್‌ಗೆ ಸಂಬಂಧಪಟ್ಟ ಪ್ಲಾಂಟ್‌ನಲ್ಲಿ ಇಂಜಿನಿಯರಿಂಗ್‌ನ ಕೆಲಸದ ಅನುಭವವಿದ್ದು ಸದ್ಯಕ್ಕೆ ತಾಂತ್ರಿಕ ಸಲಹೆಗಾರರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ.