ಉತ್ಪಾದನೆಯ ಜಗತ್ತಿನಲ್ಲಿ ಸದ್ಯಕ್ಕೆ ನಿರಂತರವಾಗಿ ಹೆಚ್ಚೆಚ್ಚು ಕಾರ್ಯಕ್ಷಮತೆಗೋಸ್ಕರ ಪ್ರಯತ್ನವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಹಿಂದೆ ಎಂದಿಗೂ ಇರದಿದ್ದಷ್ಟು ಇಂದು ಮಾರುಕಟ್ಟೆಯು ಸ್ಪರ್ಧೆಯಿಂದ ಕೂಡಿರುವುದು ಮತ್ತು ಸಮಯದ ಮೌಲ್ಯವನ್ನು ಅರಿಯುವಂತಹದ್ದಾಗಿದೆ. ಕೆಲಸ ಮಾಡುವಾಗ (ವರ್ಕ್ ಫ್ಲೋ) ಮಾಡಿರುವ ಸಣ್ಣ-ಪುಟ್ಟ ಸುಧಾರಣೆಗಳಿಂದಾಗಿ ಮಧ್ಯಮ ಮತ್ತು ದೀರ್ಘಕಾಲದಲ್ಲಿ ದೊಡ್ಡ ಲಾಭವಾಗುವುದು ಕಂಡುಬರುತ್ತದೆ. ಇಂತಹ ಸುಧಾರಣೆಗಳ ಒಟ್ಟು ಲಾಭವೆಂದರೆ ಗ್ರಾಹಕರೊಂದಿಗಿರುವ ಸಂಬಂಧಗಳನ್ನು ಕಾಪಾಡುವುದು. ತಂತ್ರಜ್ಞಾನವನ್ನು ಸಂಶೋಧಿಸಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಉತ್ಪಾದನೆಯ ಶ್ರೇಣಿಗಳ ಅಭಿವೃದ್ಧಿಯನ್ನು ಮಾಡಿ ಇಂತಹ ಕಠಿಣವಾದ ಸವಾಲುಗಳನ್ನು ಎದುರಿಸಬಹುದು. ಉತ್ಪಾದನೆಯ ಕ್ಷೇತ್ರದಲ್ಲಿ ವೇಗಕ್ಕೆ ಚಾಲನೆಯ ಸ್ವರೂಪವು ಉಂಟಾಗುತ್ತಿರುವುದು ಸದ್ಯದ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಅದಕ್ಕೋಸ್ಕರ ನಾವು ನಿರಂತರವಾಗಿ ಸಂಶೋಧನೆಯನ್ನು ಮಾಡಿ, ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಿ, ಅಭಿವೃದ್ಧಿಗೊಳಿಸಿದ ಮಶಿನ್‌ಗಳ ನಿರ್ಮಾಣವನ್ನು ಮಾಡುತ್ತಿರುತ್ತೇವೆ.
ಹೆಚ್ಚು ವೇಗದ ಯಂತ್ರಣೆಯ ಪ್ರಕ್ರಿಯೆಗೋಸ್ಕರ ಮಶಿನ್‌ನಲ್ಲಿ ಸಂಪೂರ್ಣವಾಗಿ ಹೊಸ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇರುತ್ತದೆ. ಹೆಚ್ಚು ಉತ್ಪಾದನೆಗೋಸ್ಕರ ವಿವಿಧ ಪ್ರಕಾರದ ಉದ್ಯಮಗಳಿಗೆ ಉಪಯೋಗವಾಗುವಂತಹ ಮಶಿನ್ ಅಭಿವೃದ್ಧಿ ಮಾಡುವ ಬಹು ದೊಡ್ಡ ಬೇಡಿಕೆಯು ಮಾರುಕಟ್ಟೆಯಿಂದ ಬರುತ್ತಿದೆ. ಈ ಬೇಡಿಕೆಗಳಿಂದಾಗಿಯೇ ಯಂತ್ರಣೆಯಲ್ಲಿ ಹೆಚ್ಚು ವೇಗದ ಅಗತ್ಯವು ಉಂಟಾಯಿತು. ಉತ್ಪಾದಕರು ಜಗತ್ತಿನೆಲ್ಲೆಡೆ ಇರುವ ಈ ರೀತಿಯ ವಿಷಯಗಳ ಕುರಿತು ವಿಚಾರ ಮಾಡುವಾಗ ಹೆಚ್ಚು ವಿಶ್ವಾಸ ಮತ್ತು ವೇಗವಾಗಿ ಕೆಲಸ ಮಾಡುವ ಸವಾಲುಗಳನ್ನು ಪೂರ್ತಿ ಮಾಡಲು ‘ಜ್ಯೋತಿ ಸಿ.ಎನ್.ಸಿ.’ ಎಂಬ ನಮ್ಮ ಕಂಪನಿಯು ‘ಟೆಕಯನ್’ ಎಂಬ ಹೆಸರಿನ ಡ್ರಿಲ್ ಟ್ಯಾಪ್ ಸೆಂಟರ್ ಅಭಿವೃದ್ಧಿ ಮಾಡಿದ್ದಾರೆ.
ನಿರ್ಮಿತಿಯ ಹಿಂದಿರುವ ಪ್ರೇರಣೆ
‘ಟೆಕಯನ್’ ಈ ಶಬ್ದವು ಗ್ರೀಕ್ ಭಾಷೆಯಲ್ಲಿರುವ ಶಬ್ದ. ‘ಟಾಕೀಸ್’ (ταχύς) ಈ ಶಬ್ದದಿಂದ ತಯಾರಾಗಿದೆ. ‘ಸ್ವಿಫ್ಟ್’ ಇದು ಇದರ ಅರ್ಥವಾಗಿದೆ. ‘ಟೇಕಯನ್’ ಇದು ಸಿದ್ಧಾಂತದ ದೃಷ್ಟಿಯಲ್ಲಿ ಮಂಡಿಸಿರುವ ವಿಷಯದಲ್ಲಿ ಪ್ರಕಾಶಕ್ಕಿಂತ ಹೆಚ್ಚು ವೇಗವಾಗಿ ಪ್ರವಾಸ ಮಾಡುವಂತಹ ಕಣಗಳ ವಿಚಾರವನ್ನು ಮಾಡಲಾಗಿದೆ. ಈ ಕಲ್ಪನೆಯನ್ನು ಪ್ರಪ್ರಥಮವಾಗಿ ಓ.ಎಮ್.ಪಿ. ಬಿಲಾನಿಉಕ್, ಭಾರತೀಯ ಶಾಸ್ತ್ರಜ್ಞರಾದ ವಿ. ಕೆ. ದೇಶಪಾಂಡೆ ಮತ್ತು ಇ.ಸಿ.ಜಿ. ಸುದರ್ಶನ್ ಇವರು 1962 ರಲ್ಲಿ ಪ್ರಸ್ತುತ ಪಡಿಸಿದ್ದರು. ‘ಟೇಕಯನ್’ ಕಣಗಳ ಸಂಶೋಧನೆಯಲ್ಲಿ ಭಾರತೀಯ ಶಾಸ್ತ್ರಜ್ಞರ ಸಮರ್ಪಣೆಯ ನೆನಪಿಗಾಗಿ ಈ ಮಶಿನ್‌ಗೆ ನಾವು ‘ಟೇಕಯನ್’ ಎಂಬ ಹೆಸರನ್ನು ನೀಡಿದೆವು. ಲೋಡಿಂಗ್- ಅನ್‌ಲೋಡಿಂಗ್‌ನಲ್ಲಿ ತುಂಬಾ ಕಡಿಮೆ ಸಮಯವನ್ನು ಖರ್ಚು ಮಾಡಿ ಉತ್ತಮ ರೀತಿಯ ಸೈಕಲ್ ಟೈಮ್ ಪಡೆಯಲು ಈ ಮಶಿನ್‌ನ ನಿರ್ಮಾಣವನ್ನು ಮಾಡಿದೆವು ಮತ್ತು ವೇಗದ ಸಂಕೇತವೆಂದು ‘ಟೆಕಯನ್’ ಎಂಬ ಹೆಸರನ್ನು ನೀಡಿದೆವು.
ನಿರ್ಮಾಣದಲ್ಲಿರುವ ಸವಾಲುಗಳು
ಜಾಗತಿಕ ಹಂತದಲ್ಲಿರುವ ಮಶಿನ್‌ಗಳೊಂದಿಗೆ ವೇಗದ ಕುರಿತಾಗಿ ಸ್ಪರ್ಧಿಸುವಂತಹ ಭಾರತೀಯ ಮಶಿನ್ ತಯಾರಿಸಿ ದೇಶದ ಮಶಿನ್ ಉತ್ಪಾದನೆಯ ಸಾಮರ್ಥ್ಯವನ್ನು ತೋರಿಸುವ ಗುರಿಯನ್ನು ಕಣ್ಣೆದುರಿಗೆ ಇಟ್ಟುಕೊಂಡು ಈ ಮಶಿನ್‌ನ ಅಭಿವೃದ್ಧಿಯನ್ನು ಮಾಡುವ ಸವಾಲನ್ನು ನಾವು ಎದುರಿಸಿದೆವು. ಮಶಿನ್‌ನ ಪ್ರತಿಯೊಂದು ವೈಶಿಷ್ಟ್ಯವು ಹೆಚ್ಚು ವೇಗಕ್ಕೋಸ್ಕರ ಪೂರಕವಾಗಬೇಕು ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ಮಶಿನ್ ಅಭಿವೃದ್ಧಿ ಮಾಡುವುದೇ ನಮಗಿದ್ದ ಪ್ರಮುಖವಾದ ಸವಾಲಾಗಿತ್ತು. ಹೊಂದಾಣಿಕೆಯ (ಮ್ಯಾಚಿಂಗ್) ಪ್ರಕ್ರಿಯೆಯನ್ನು ವೇಗವಾಗಿ ಮಾಡುತ್ತಿರುವಾಗ ಹೆಚ್ಚು ರ್ಯಾಪಿಡ್ ಎಂಬ ಒಂದು ಮಹತ್ವದ ಘಟಕವು ಪ್ರಭಾವಶಾಲಿಯಾಗುತ್ತದೆ. ಅದನ್ನು ಸಾಧಿಸುವುದು ಕೂಡಾ ಒಂದು ಸವಾಲೇ ಸರಿ. ಎರಡನೆಯ ಸವಾಲೆಂದರೆ ಹೆಚ್ಚು ವೇಗದಿಂದ ಮಶಿನ್ ನಡೆಸುವಾಗ ಅದರ ಡೈನಾಮಿಕ್ಸ್ ಅಸ್ತಿತ್ವದಲ್ಲಿ ಇಡುವಂತಹ, ಇಂತಹ ಮಶಿನ್‌ನ ರಚನೆಯನ್ನು ತಯಾರಿಸುವುದು. ಅದೇ ವೇಳೆಯಲ್ಲಿ ಎಲ್ಲ ಅಗತ್ಯವಿರುವ ಇನ್ನಿತರ ವಿಷಯಗಳನ್ನು ತುಂಬಾ ಕಡಿಮೆ ಜಾಗದಲ್ಲಿ ಅಳವಡಿಸಿ, ಕೆಲಸಕ್ಕೋಸ್ಕರ ಸಾಕಷ್ಟು ಹೆಚ್ಚು ಜಾಗವು ಉಪಲಬ್ಧವಾಗಬೇಕು, ಇಂತಹ ರಚನೆಯ ಡಿಝೈನ್ ಮಾಡುವುದು ಸೂಕ್ತವಾಗಿದೆ. ಟೂಲ್ ಬದಲಾವಣೆಯ ಪ್ರಕ್ರಿಯೆಯನ್ನು ವೇಗವಾಗಿ ಮಾಡುವುದು ಕೂಡಾ ಇದರಲ್ಲಿರುವ ತುಂಬಾ ಮಹತ್ವದ್ದಾದ ಘಟಕವಾಗಿತ್ತು. ಹಾಗೆಯೇ ಯಂತ್ರಣೆಯ ಪ್ರಕ್ರಿಯೆಯು ತುಂಬಾ ಕ್ಷಿಪ್ರವಾಗಿ ಆಗಿ ಉಳಿದ ಬರಿದಾದ ವೇಳೆಯನ್ನು ಕಡಿಮೆ ಮಾಡಲು ಸ್ವಯಂಚಾಲಿತ ಪಾಲೇಟ್ ಚೇಂಜರ್ ಸೇರಿಸುವುದು ಕೂಡಾ ನಮಗೆ ಸವಾಲನ್ನು ಉಂಟುಮಾಡುವ ವಿಷಯವೇ ಆಗಿತ್ತು. ಕಾರ್ಯವಸ್ತು ಮತ್ತು ಟೂಲ್‌ನ ಬದಲಾವಣೆಯನ್ನು ಕಡಿಮೆ ಸಮಯದಲ್ಲಿ ಮಾಡಿದ್ದರಿಂದ, ಮಶಿನ್‌ನ ಯಂತ್ರಣೆಯು ಪ್ರತ್ಯಕ್ಷವಾಗಿ ಆಗದೇ ಇರುವ ವೇಳೆಯನ್ನು ಕಡಿಮೆ ಮಾಡಲು ತುಂಬಾ ಸಹಾಯವಾಗುತ್ತಿತ್ತು. ಇಂತಹ ಅವಶ್ಯಕತೆಗಳನ್ನು ಪೂರ್ತಿ ಮಾಡುವುದೇ ಈ ‘ಟೇಕಯನ್’ನ ಅಭಿವೃದ್ಧಿಯಲ್ಲಿದ್ದ ಸವಾಲುಗಳಾಗಿದ್ದವು.
ಉತ್ಪಾದನೆಯ (ಪ್ರಾಡಕ್ಟ್) ವೈಶಿಷ್ಟ್ಯಗಳು
‘ಟೇಕಯನ್’ ಈ ಮಶಿನ್ ಟೂಲ್‌ನ ವಿಶೇಷವಾದ ಆವೃತ್ತಿ ಇರುವುದರಿಂದ ಉದ್ಯಮಗಳ ಬೇಡಿಕೆಯನ್ನು ಪೂರೈಸಲು ಇದು ಒಂದು ಸಂಪೂರ್ಣವಾದ ಪ್ಯಾಕೇಜ್ ಆಗಿರುತ್ತದೆ. ಈ ಮಶಿನ್‌ನಲ್ಲಿ ವಾಹನೋದ್ಯೋಗ ಕ್ಷೇತ್ರ, ದೂರಸಂಪರ್ಕ ಕ್ಷೇತ್ರ, ಸರ್ಜಿಕಲ್ ಸಾಮಗ್ರಿಗಳ ಉತ್ಪಾದನೆ, ಇಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಕ್ಷೇತ್ರ ಇಂತಹ ಕ್ಷೇತ್ರಗಳಲ್ಲಿ ಉಪಯೋಗಿಸಲಾಗುವ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವ ಸಾಮರ್ಥ್ಯವು ಇದೆ. ಹೆಚ್ಚೆಚ್ಚು ಉತ್ಪಾದಕತೆಯ ನಿಟ್ಟಿನಲ್ಲಿ ಈ ಮಶಿನ್ ಅನೇಕ ಉದ್ಯಮಗಳಿಗೆ ಸಕಾರಾತ್ಮಕವಾದ ಪರಿಣಾಮವನ್ನು ಉಂಟುಮಾಡುತ್ತದೆ.
ಯೋಗ್ಯವಾದ ಮತ್ತು ಒಳ್ಳೆಯ ಸೈಕಲ್ ಟೈಮ್ ಪಡೆಯುವುದೇ ಈ ‘ಟೇಕಯನ್’ನ ಮಹತ್ವದ ಉದ್ದೇಶವಾಗಿದೆ. ಹಾಗೆಯೇ ನಿರ್ದೋಷವಾದ ಮತ್ತು ನಿರಂತರತೆಯನ್ನು ಪಡೆಯಲು ಪಾಲೇಟ್ ಚೇಂಜರ್, ಉನ್ನತ ವೇಗ ಇರುವ ಟೂಲ್ ಚೇಂಜರ್ ಮತ್ತು ಉನ್ನತ ಡೈನ್ಯಾಮಿಕ್ ರ್ಯಾಪಿಡ್ ಇದು ಈ ಮಶಿನ್ ಮಹತ್ವದ ವೈಶಿಷ್ಟ್ಯಗಳಾಗಿವೆ.
‘ಟೇಕಯನ್’ನ ಲಾಭಗಳು
‘ಟೇಕಯನ್’ ಮಶಿನ್ ಉಚ್ಚ ವೇಗದ ಪ್ರಾತಿನಿಧ್ಯವನ್ನು ಮಾಡುತ್ತಿರುವುದರಿಂದ ಮಶಿನ್ ತಯಾರಿಸುವಾಗ ಎಲ್ಲ 3 ಅಕ್ಷಗಳಲ್ಲಿ 60 ಮೀ./ನಿಮಿಷ ಇಷ್ಟು ಉಚ್ಚ ರ್ಯಾಪಿಡ್ ಟ್ರಾವರ್ಸ್ ಸಿಗುವುದು ಮತ್ತು 15 ಮೀ./ಸೆಕಂಡು ಉಚ್ಚ ಎಕ್ಸಿಲರೇಶನ್ ಪಡೆಯುವುದು, ಇದಕ್ಕೆ ಹೆಚ್ಚು ಗಮನ ನೀಡಲಾಗಿದೆ. ಇದರಿಂದಾಗಿ ಈ ಮಶಿನ್‌ಗಳನ್ನು ಟೂಲ್‌ಗಳ ‘ಫಾಸ್ಟ್ ಡ್ರಿಲ್ ಟ್ಯಾಪ್ ಸೆಗ್‌ಮೆಂಟ್’ನಲ್ಲಿ ಸೇರಿಸಲಾಗಿದೆ.
‘ಟೇಕಯನ್’ನ ರಚನೆಯಲ್ಲಿ ಎಲ್ಲ ಗತಿಶೀಲತೆ ಇರುವ, ಅಲುಗಾಡುವ ವಸ್ತುಮಾನಗಳನ್ನು ಕಾಲಮ್‌ನಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಯಂತ್ರಣೆಯಲ್ಲಿ ಹೆಚ್ಚು ನಿಖರತೆಯು ಲಭಿಸುತ್ತದೆ. ‘ಟೇಕಯನ್’ಗೆ ಬೇಕಾಗುವ ಫುಟ್ ಪ್ರಿಂಟ್ ತುಂಬಾ ಕಡಿಮೆ ಇದ್ದರೂ ಕೂಡಾ ಉಚ್ಚ ರ್ಯಾಪಿಡ್ ಟ್ರಾವರ್ಸ್‌ಗಳನ್ನು ಹೊರಲು ಅದರ ರಚನೆಯು ತುಂಬಾ ದೃಢವಾಗಿದೆ. ರಚನಾತ್ಮಕವಾದ ಡಿಸೈನ್‌ಗೋಸ್ಕರ ವಹಿಸಿರುವ ವಿಶೇಷವಾದ ಮುತುವರ್ಜಿಯಿಂದಾಗಿ ಚಿಪ್‌ಗಳನ್ನು ಪ್ರಭಾವಶಾಲಿಯಾಗಿ ಹೊರಗೆ ತೆಗೆಯಲಾಗುತ್ತವೆ. ಸಮತೋಲಿತವಾದ ರಚನೆಯಿಂದಾಗಿ ಮಶಿನ್‌ನಲ್ಲಿ ಕಂಪನಗಳು ಉಂಟಾಗುವುದಿಲ್ಲ. ಈ ಮಶಿನ್‌ಗೆ ಬೇಕಾಗುವ ಜಾಗವು ತುಂಬಾ ಕಡಿಮೆ ಆಗಿದ್ದರೂ ಕೂಡಾ ಬೃಹದಾಕಾರದ ಯಂತ್ರಭಾಗಗಳನ್ನು ಅಳವಡಿಸಲು ಅದರ ಚಟುವಟಿಕೆಯ ಜಾಗ (ವರ್ಕ್ ಎನ್ವಲಪ್) ಹೆಚ್ಚು ದೊಡ್ಡದಾಗಿದೆ. ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವಾಗ ಹೆಚ್ಚು ಉತ್ಪಾದಕತೆಗೋಸ್ಕರ ಕಾರ್ಯವಸ್ತುವನ್ನು ಹಿಡಿಯಲು ಅನೇಕ ಸಾಮಗ್ರಿಗಳು ಮತ್ತು ಫಿಕ್ಸ್ಚರ್‌ಗಳನ್ನು ಈ ಮಶಿನ್‌ನಲ್ಲಿ ಸಹಜವಾಗಿ ಅಳವಡಿಸಬಹುದು. ವಿಶೇಷವಾದ ಡಿಸೈನ್ ಮಾಡಿರುವ ಸ್ವಯಂಚಾಲಿತ ಟೂಲ್ ಚೆಂಜರ್ (ATC), ಕ್ಷಿಪ್ರ ಸ್ವಯಂಚಾಲಿತ ಪಾಲೇಟ್ ಚೆಂಜರ್ (APC), ಮಶಿನ್‌ಗೆ ಬೇಕಾಗುವ ಕಡಿಮೆ ಜಾಗ, ನೇರವಾಗಿ ಕಪಲ್ ಮಾಡಿರುವ ಸ್ಪಿಂಡಲ್, ಎರ್ಗೋನ್ಯಾಮಿಕ್ ಮತ್ತು TPM ಪೂರಕವಾದ ಡಿಸೈನ್ ಹಾಗೆಯೇ ಉಚ್ಚ ಒತ್ತಡ ಇರುವ ಶವರ್ ಕೂಲಂಟ್ ಪ್ರಣಾಳಿಕೆ ಇದು ‘ಟೆಕಯನ್’ ಸರಣಿಯ ಆಕರ್ಷಕವಾದ ವೈಶಿಷ್ಟ್ಯವಾಗಿದೆ. ವಿವಿಧ ಆಕಾರದ ಕಾರ್ಯವಸ್ತುಗಳಿಗೋಸ್ಕರ ಮತ್ತು ಎಪ್ಲಿಕೇಶನ್‌ಗೋಸ್ಕರ ಈ ಸರಣಿಯಲ್ಲಿ ‘ಟೇಕಯನ್-4’, ‘ಟೇಕಯನ್-5’ ಮತ್ತು ‘ಟೇಕಯನ್-7’ ಈ ವಿಧಗಳು ಉಪಲಬ್ಧವಿವೆ.
ಮೇಲೆ ತಿಳಿಸಿರುವ ‘ಟೇಕಯನ್’ನ ವೈಶಿಷ್ಟ್ಯಗಳ ಹೊರತಾಗಿ ಈ ಶ್ರೇಣಿಯಲ್ಲಿರುವ ಇನ್ನಿತರ ಮಶಿನ್‌ಗಳಿಗಿಂತ ‘ಟೇಕಯನ್’ನ ವಿವಿಧತೆ ಅಂದರೆ, ಅದು ಹೆಚ್ಚು ದೊಡ್ಡ ಕೆಲಸದ ಜಾಗ (ವರ್ಕ್ ಎನ್‌ವಲಪ್) ಪೂರೈಸುತ್ತಿರುವುದರಿಂದ ಅದರಲ್ಲಿ ದೊಡ್ಡ ಆಕಾರದ ಯಂತ್ರಭಾಗಳ ಯಂತ್ರಣೆಯಾಗುತ್ತದೆ. 450 ಮಿ.ಮೀ. ಸ್ಟ್ರೋಕ್ ಪೂರೈಸುವಂತಹ Z ಅಕ್ಷದ ಡಿಸೈನ್ ಮಾಡಲಾಯಿತು. ಇದರಿಂದಾಗಿ ಯಾವಾಗ ಹೆಚ್ಚು ಅಳದ ತನಕ ಪ್ರಕ್ರಿಯೆಯನ್ನು ಮಾಡಬೇಕೋ, ಆಗ ಅದಕ್ಕೋಸ್ಕರ ಉಪಯುಕ್ತವಾದ ಹೆಚ್ಚು ದೊಡ್ಡದಾದ ಟೂಲ್ ಆಯ್ಕೆ ಮಾಡಲು ಸಹಾಯವಾಗುತ್ತದೆ. ಎರಡೂ ಬದಿಗಳಲ್ಲಿ 300 ಕಿಲೋಗಳಷ್ಟು ತೂಕದ ಕಾರ್ಯವಸ್ತುವನ್ನು ಬದಲಾಯಿಸುವ ಸಾಮರ್ಥ್ಯ ಇದ್ದು ಈ ವ್ಯವಸ್ಥೆಯನ್ನು ಹೈಡ್ರಾಲಿಕ್ ಅಥವಾ ನ್ಯುಮ್ಯಾಟಿಕ್‌ನ ಮೂಲದ ಹೊರತಾಗಿಯೇ ನಡೆಸಬಹುದು. ಮಶಿನ್‌ನ ಜಾಗದಿಂದ ಸಮರ್ಥವಾದ ರೀತಿಯಲ್ಲಿ ತುಂಡುಗಳನ್ನು ತೆಗೆದು ಹಾಕಲು ‘ಗಂಗಾ ಕೂಲಂಟ್’ ಎಂಬ ಶವರ್ ಕೂಲಂಟ್ ಪ್ರಣಾಳಿಕೆಯ ಡಿಸೈನ್ ‘ಜ್ಯೋತಿ’ ಇವರು ವಿಶೇಷವಾಗಿ ಮಾಡಿದ್ದಾರೆ.
ಉಪಯೋಗಿಸುವವರಿಗೆ (ಗ್ರಾಹಕರಿಗೆ) ಹೆಚ್ಚು ಕೆಲಸ ಮಾಡುವ ಮತ್ತು ಹೆಚ್ಚು ಲಾಭವನ್ನು ನೀಡುವ ‘ಟೇಕಯನ್’ ಇದು ನಮ್ಮ ದೇಶವನ್ನು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಣಕಾಸು ವ್ಯವಸ್ಥೆಗೆ ಕೊಡುಗೆಯನ್ನು ನೀಡಲು ತಯಾರಿಸಿರುವ ಭಾರತೀಯ ಉತ್ತರವಾಗಿದೆ.
ಅಂಬರೀಷ ನಸೀತ
ಸಹಾಯಕ ವ್ಯವಸ್ಥಾಪಕರು (ಟೆಕ್ನಿಕಲ್ ಸಪೋರ್ಟ್),
ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ.
9879571116
ಅಂಬರೀಶ್ ನಸೀತ್ ಇವರು ‘ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ.’ ಈ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ (ಟೆಕ್ನಿಕಲ್ ಸಪೋರ್ಟ್) ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಸ್.ಆರ್.ಇ.ಝೆಡ್. ಇಂಜಿನಿಯರಿಂಗ್ ವಿಶ್ವವಿದ್ಯಾಲಯ (ರಾಜ್‌ಕೋಟ್) ಎಂಬಲ್ಲಿ ಕಳೆದ 5 ವರ್ಷಗಳಿಂದ ಕಲಿಸುತ್ತಿದ್ದು ‘ಮ್ಯಾನ್ಯಿಫ್ಯಾಕ್ಚರಿಂಗ್ ಪ್ರೊಸೆಸ್-II’ ಈ ಪುಸ್ತಕವನ್ನು ಆಂಗ್ಲಭಾಷೆಯಲ್ಲಿ ಬರೆದಿರುತ್ತಾರೆ.