ಶಾಪ್‌ಫ್ಲೋರ್ ಮೆಟ್ರಾಲಾಜಿ : ನಿಯಂತ್ರಣೆ ಮತ್ತು ಉಪಾಯ

@@NEWS_SUBHEADLINE_BLOCK@@

Udyam Prakashan Kannad    26-Feb-2020   
Total Views |
 
 
 
ಮಿಲ್ಲಿಂಗ್ ಮತ್ತು ಮಶಿನಿಂಗ್ ಸೆಂಟರ್
ಮಶಿನಿಂಗ್ ಸೆಂಟರ್ ಮತ್ತು ಮಿಲ್ಲಿಂಗ್ ಮಶಿನ್‌ನಲ್ಲಿ ಕೆಲಸ ಮಾಡುವಾಗ ಯೋಗ್ಯವಾದ ಸಲಕರಣೆಗಳನ್ನು ಬಳಸಿ ಈ ಕೆಳಗಿನ ಕೆಲಸಗಳ ತಪಾಸಣೆಯನ್ನು ಮಾಡಬಹುದಾಗಿದೆ.
• ಮಶಿನಿಂಗ್ ಸೆಂಟರ್‌ನಲ್ಲಿ ಯಂತ್ರಭಾಗಗಳ ಪರಿಮಾಣಗಳು ಮತ್ತು ಸ್ಥಾನದ ತಪಾಸಣೆ
• ನಿರ್ದೋಷವಾದ ತಪಾಸಣೆಗೋಸ್ಕರ ಡೈಮಂಡ್ ಲೈನ್
• ಮಶಿನಿಂಗ್ ಸೆಂಟರ್‌ನಲ್ಲಿ ಟೂಲ್ ಸೆಟಿಂಗ್ ಮತ್ತು ಭೌತಿಕ (ಫಿಸಿಕಲ್) ತಪಾಸಣೆ
• ಮಶಿನಿಂಗ್ ಸೆಂಟರ್‌ನಲ್ಲಿ ಟೂಲ್‌ಗಳು ತುಂಡಾಗುವುದು
• ಮಶಿನ್ ರಕ್ಷಿಸುವುದು
• ಟೂಲ್ ಮತ್ತು ಪ್ರಕ್ರಿಯೆಯನ್ನು ನಿಯಂತ್ರಿಸುವುದು
• ಮಶಿನ್ ನಿಯಂತ್ರಿಸುವುದು
 
ಮಶಿನಿಂಗ್ ಸೆಂಟರ್‌ನಲ್ಲಿ ಯಂತ್ರಭಾಗಗಳ ಪರಿಮಾಣಗಳು ಮತ್ತು ಸ್ಥಾನದ ತಪಾಸಣೆ
 

1_1  H x W: 0 x 
 
ಮಿಲ್ಲಿಂಗ್ ಮಶಿನ್ ಮತ್ತು ಮಶಿನಿಂಗ್ ಸೆಂಟರ್ ಬಳಸಿ ಮಾಡಲಾಗಿರುವ ಯಂತ್ರಣೆಯಲ್ಲಿ ತಪ್ಪುುಗಳಿಂದಾಗಿ ತಿರಸ್ಕರಿಸಲ್ಪಡುವ (ಸ್ಕ್ರೇಪ್) ಯಂತ್ರಭಾಗಗಳ ತಯಾರಿಕೆ ಇದೊಂದು ಉತ್ಪಾದನೆಯ ಕ್ಷೇತ್ರದಲ್ಲಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ತಡೆಯಲು ಒಂದು ದಾರಿ, ಇದೆ ಎಂದರೆ ಕಾರ್ಯವಸ್ತು ಮಶಿನ್‌ನ ಟೇಬಲ್ ಮೇಲೆ ಹೇಗಿಡಬೇಕು, ಎಂಬುದನ್ನು ತಿಳಿದುಕೊಳ್ಳುವುದು (ಮಶಿನ್‌ನ ಅಕ್ಷಗಳ ಸಂದರ್ಭದಲ್ಲಿ ನಿಜವಾದ ಸ್ಥಾನ) ಮತ್ತು ಯಂತ್ರಣೆಯ ಪ್ರಕ್ರಿಯೆಯ ನಂತರ ಕಾರ್ಯವಸ್ತುಗಳ ಮಾಪನ ಅಥವಾ ತಪಾಸಣೆಯನ್ನು ತಕ್ಷಣ ಮಾಡುವುದು. ಈ ವಿಧದ ತಪಾಸಣೆಯನ್ನು ಮಾಡಲು, ಮಶಿನ್‌ಗೆ ಪಾರ್ಟ್ ಪ್ರೊಬಿಂಗ್‌ ಮೂಲಕ (ಟಚ್ ಪ್ರೋಬ್ + ಬೋರ್ ಗೇಜ್) ಸುಸಜ್ಜಿತವಾಗಿ ಮಾಡುವುದು ತುಂಬಾ ಅಗತ್ಯವಾಗಿದೆ.
 
ಮಶಿನಿಂಗ್ ಸೆಂಟರ್‌ನಲ್ಲಿ ಪರಿಮಾಣಗಳ ಮಾಪನವನ್ನು ಮಾಡುವುದು ತುಂಬಾ ಸುಲಭ, ಶೀಘ್ರ ಮತ್ತು ನಿರ್ದೋಷತೆಯು ಎಂದಿಗೂ ಇರಲಿಲ್ಲ. ಮಾರ್ಪಾನ್‌ನ WRG ಬೋರ್ ಗೇಜ್ ಸಾಮಾನ್ಯ ಟೂಲ್‌ನಂತೆ ಬಳಸಲಾಗುತ್ತದೆ ಮತ್ತು ಯಂತ್ರಣೆಯನ್ನು ಮಾಡಿರುವ ಭಾಗಗಳ ಡೈಮೆನ್ಷನಲ್ ನಿಯಂತ್ರಣೆಯನ್ನು ಮಾಡಲು ಟೂಲ್, ಮ್ಯಾಗೆಝಿನ್‌ನಿಂದ ಮಶಿನ್‌ನ ಸ್ಪಿಂಡಲ್‌ನಲ್ಲಿ ಲೋಡ್ ಮಾಡಲಾಯಿತು. ಅದರ ದೃಢತೆ ಮತ್ತು ಮಾಪನದಲ್ಲಿರುವ ನಿಖರತೆ ಬೃಹತ್ ಪ್ರಮಾಣದ ಉತ್ಪಾದನೆಗೋಸ್ಕರ (ಮಾಸ್ ಪ್ರಾಡಕ್ಷನ್) ಪರಿಪೂರ್ಣ ಮತ್ತು ಉಪಯುಕ್ತವಾಗಿರುತ್ತದೆ. ಕೊನೆಯಲ್ಲಿ ಬಳಕೆದಾರರಿಗೆ ಬೇಕಾಗುವ ಮಾಪನದ ಆವಶ್ಯಕತೆಗೆ ಅನುಸಾರವಾಗಿ ಅದರಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡುವುದು ಸಾಧ್ಯವಾಗಿದೆ. ಮಿಲ್ಲಿಂಗ್ ಮಶಿನ್ ಅಥವಾ ಮಶಿನಿಂಗ್ ಸೆಂಟರ್‌ನಲ್ಲಿ ಯಾವ ಪರಿಸ್ಥಿತಿಯಲ್ಲಿ ಯಂತ್ರಣೆ (ಕಟಿಂಗ್) ಆಗುತ್ತದೆಯೋ, ಅದೇ ಪರಿಸ್ಥಿತಿಯಲ್ಲಿ ಮಾಡಲಾಗುವಂತಹ ಮಾಪನದ ಕೆಲಸಗಳನ್ನು ಪಾರ್ಟ್ ಪ್ರೋಬಿಂಗ್ ಮೂಲಕ ಮಾಡಲಾಗುತ್ತವೆ. ಈ ರೀತಿಯಲ್ಲಿ 
ಆಪರೇಟರ್‌ಗೆ ಸಿ.ಎಮ್.ಎಮ್. ಮೂಲಕ ವೇಗವಾಗಿ ಮತ್ತು ಅರ್ಥಪೂರ್ಣವಾದ ರೀತಿಯಲ್ಲಿ ಮಾಹಿತಿಯು ಲಭಿಸುತ್ತದೆ.
 

2_1  H x W: 0 x 
 
ಸಿ.ಎಮ್.ಎಮ್.ನಲ್ಲಿ ತುಂಬಾ ಸೂಕ್ಷ್ಮವಾಗಿ ಮಾಪನವನ್ನು ಮಾಡಲಾಗುತ್ತದೆ, ಇದು ಖಂಡಿತ. ಆದರೆ ಮಶಿನ್‌ನ ಒಳಭಾಗದಲ್ಲಿ ಯಂತ್ರಭಾಗವು ಹೇಗೆ ಹಿಡಿದಿಡಲಾಗಿದೆ, ಎಂಬುದರೊಂದಿಗೆ ಅದರ ಯಾವುದೇ ಸಂಬಂಧವಿರುವುದಿಲ್ಲ. ಇದರ ಹೊರತಾಗಿ ಪರಿಸರದ ವಿಭಿನ್ನ ಪರಿಸ್ಥಿತಿಯಲ್ಲಿಯೂ ಕೂಡಾ ಯಂತ್ರಣೆಯ ಪ್ಯಾರಾಮೀಟರ್ ಪರಿಣಾಮವನ್ನು ಬೀರಬಲ್ಲದು.
 
ಪಾರ್ಟ್ ಪ್ರೊಬಿಂಗ್ ಅಪ್ಲಿಕೇಶನ್ ಕಾರ್ಯವಸ್ತುವಿನ ಸೆಟಪ್ ಮತ್ತು ಯಂತ್ರಭಾಗಗಳ ತಪಾಸಣೆ, ಎಂಬ ಎರಡು ವಿಧದ ತಪಾಸಣೆಗಳನ್ನು ಮಾಡುತ್ತದೆ. ಕಚ್ಚಾ ವಸ್ತುಗಳ ತುಂಡುಗಳ ಜಾಗ, ಅದರ ಪ್ರಾರಂಭ ಮತ್ತು ಓರಿಯೆಂಟೇಶನ್ ಏನಿದೆ, ಎಂಬಿತ್ಯಾಾದಿಗಳನ್ನು ಯಂತ್ರಣೆಯ ಪ್ರಕ್ರಿಯೆ ಪ್ರಾರಂಭಿಸುವ ಮುಂಚೆ ತಿಳಿದುಕೊಳ್ಳುವುದೂ ಅಗತ್ಯವಾಗಿದೆ. ಇದರ ಕುರಿತಾದ ಮಾಹಿತಿ ಇಲ್ಲದಿರುವುದು ಅಥವಾ ತಪ್ಪಾದ ಮಾಹಿತಿಯನ್ನು ತಿಳಿದುಕೊಂಡಿದ್ದಲ್ಲಿ ಯಂತ್ರಭಾಗಗಳ ಟಾಲರನ್‌ಸ್‌‌ನ ಹೊರಗೆ ಯಂತ್ರಣೆಯಾಗುವ ಅಪಾಯವು ಉದ್ಭವಿಸುತ್ತದೆ. ಇದರ ಹೊರತಾಗಿ ಕಾರ್ಯವಸ್ತುವಿನ ಸೆಟಪ್ ತಿಳಿದುಕೊಂಡಿದ್ದರಿಂದ ತಿರಸ್ಕರಿಸಲ್ಪಟ್ಟ ಯಂತ್ರಭಾಗಗಳಲ್ಲಿ ಗಮನಾರ್ಹ ಇಳಿತವಾಗುತ್ತದೆ.
 
ಮಶಿನಿಂಗ್ ಸೆಂಟರ್‌ನಲ್ಲಿಯೇ ಯಂತ್ರಭಾಗಗಳ ತಪಾಸಣೆ ಮಾಡುವುದು, ಎಂದರೆ ಯಂತ್ರಣೆಯಾದ ನಂತರ ತಕ್ಷಣ ಮಾಡಲಾಗುವ ಡೈಮೆನ್ಷನಲ್ ತಪಾಸಣೆಯಾಗಿರುತ್ತದೆ. ಮೇಲೆ ತಿಳಿಸಿದ ಎರಡು ತಪಾಸಣೆಗಳನ್ನು ಮಾಡಿದ್ದರಿಂದ ಬಳಕೆಗಾರರಿಗೆ ಈ ಮುಂದಿನ ಅಂಶಗಳು ತಿಳಿಯುತ್ತವೆ.
 
• ಭಾಗಗಳು (ಪಾರ್ಟ್) ಟಾಲರನ್ಸ್‌‌ನಲ್ಲಿವೆ ಮತ್ತು ಮುಂದಿನ ಪ್ರಕ್ರಿಯೆಯ ಕಡೆಗೆ ಮುಂದುವರಿಯಬಹುದು.
 

3_1  H x W: 0 x 
 
• ಯಂತ್ರಭಾಗಗಳ ಪರಿಮಾಣಗಳು ಯಂತ್ರಚಿತ್ರದಲ್ಲಿ ನೀಡಿರುವ ಪರಿಮಾಣಗಳಿಗಿಂತ ಬೇರೆಯಾಗಿವೆ, ಆದ್ದರಿಂದ ಅದಕ್ಕೋಸ್ಕರ ಅದರಲ್ಲಿ ಯಂತ್ರಣೆಯನ್ನು ಮಾಡುವ ಆವಶ್ಯಕತೆ ಇದೆ.
• ಯಂತ್ರಭಾಗಗಳನ್ನು ಯೋಗ್ಯವಾಗಿ ತಯಾರಿಸಲಾಗಿಲ್ಲ ಮತ್ತು ಟಾಲರನ್ಸ್‌‌ನ ಹೊರಗಿದೆ.
ಯಾವುದೇ ಹಾಳಾಗಿರುವ ಯಂತ್ರಭಾಗವನ್ನು ತಕ್ಷಣ ತೆಗೆದು, ಅದಕ್ಕೆ ಮಾಡಲಾಗುವ ಮುಂದಿನ ಪ್ರಕ್ರಿಯೆಯನ್ನು ತಡೆಯಬಹುದು.
 
ಲಾಭಗಳು
 

4_1  H x W: 0 x 
 
• ಮಶಿನ್‌ನಲ್ಲಿಯೇ ಕಾರ್ಯವಸ್ತುವಿನ ಮಾಪನವನ್ನು ಮಾಡಲಾಗುತ್ತದೆ.
• ಕೆಲಸ ಮತ್ತು ತಪಾಸಣೆಗೋಸ್ಕರ ತಗಲುವ ಸಮಯ ಕಡಿಮೆಯಾಗುತ್ತದೆ.
• ಉತ್ಪಾದನೆಯ ಸಾಮರ್ಥ್ಯದಲ್ಲಿ ಹೆಚ್ಚಳವಾಗುತ್ತದೆ.
• ಯಂತ್ರಭಾಗದ ಸ್ಥಾನದ ರಿಯಲ್ ಟೈಮ್ ನಿರ್ಧರಿಸಲ್ಪಡುತ್ತದೆ.
• ತ್ಯಾಜ್ಯ ವಸ್ತುಗಳ (ಸ್ಕ್ರ್ಯೊಪ್) ತಯಾರಿಕೆಯೂ ಕಡಿಮೆಯಾಗುತ್ತದೆ.
 
ವಿಧಗಳು
 
ಪ್ರತಿಯೊಂದು ಮಿಲ್ಲಿಂಗ್ ಮಶಿನ್ ಮತ್ತು ಮಶಿನಿಂಗ್ ಸೆಂಟರ್‌ಗೆ ಪಾರ್ಟ್ ಪ್ರೋಬಿಂಗ್ ಅಪ್ಲಿಕೇಶನ್‌ನ ಪರಿಪೂರ್ಣವಾದ ಉಪಾಯಗಳು ಉಪಲಬ್ಧ ಮಾಡಿ ವಿಭಿನ್ನ ಗಾತ್ರದ ಯಂತ್ರಭಾಗಗಳ ಮಾಪನವನ್ನು ಮಾಡಬಹುದಾಗಿದೆ.
• ಆಪ್ಟಿಕಲ್ ಟ್ರಾನ್ಸ್‌‌ಮಿಶನ್ ಟಚ್ ಪ್ರೋಬ್ : ಚಿಕ್ಕ ಮತ್ತು ಮಧ್ಯಮ ಪರಿಮಾಣಗಳ ಮಶಿನ್‌ಗೋಸ್ಕರ ಯೋಗ್ಯವಾಗಿದೆ.
 

5_1  H x W: 0 x 
 
• ರೆಡಿಯೋ ಟ್ರಾನ್ಸ್‌‌ಮಿಶನ್ ಟಚ್ ಪ್ರೋಬ್ : ಮಿಲ್ಲಿಂಗ್ ಮಶಿನ್ ಮತ್ತು ಮಶಿನಿಂಗ್ ಸೆಂಟರ್‌ಗೋಸ್ಕರ ಪ್ರೋಬ್, ದೊಡ್ಡ ಭಾಗಗಳ ಯಂತ್ರಣೆಯನ್ನು ಮಾಡುವಾಗ ಬಳಸಲು ಯೋಗ್ಯ.
• ವಾಯರ್‌ಲೆಸ್ ಬೋರ್‌ಗೇಜ್
•ಸ್ಕ್ಯಾನಿಂಗ್ ಪ್ರೋಬ್
 
ಈಗಷ್ಟೇ ಯಂತ್ರಣೆಯನ್ನು ಮಾಡಿರುವ ಮಶಿನ್‌ನ ಪ್ರೊಫೈಲ್‌ನ ನಿರ್ದೋಷವನ್ನು ದೃಢೀಕರಿಸಲು ಮತ್ತು ಸರ್ಫೇಸ್‌ನಲ್ಲಿರುವ ದೋಷಗಳನ್ನು ನೇರವಾಗಿ ಮಶಿನ್‌ನಲ್ಲಿಯೇ ಗುರುತಿಸಲು ಉಪಯುಕ್ತ. ಇದರ ಹೊರತಾಗಿ ಮಾರ್ಪಾಸ್ ಪ್ರತಿಯೊಂದು ಪಾರ್ಟ್ ಪ್ರೋಬಿಂಗ್ ಅಪ್ಲಿಕೇಶನ್‌ಗೋಸ್ಕರ ಡೆಡಿಕೇಟೇಡ್ ಮಾಪನದ ಸಾಫ್ಟ್‌‌ವೇರ್ ಅಭಿವೃದ್ಧಿಪಡಿಸಿದೆ.
 
ಉಚ್ಚಮಟ್ಟದ ನಿಖರತೆಯ
ತಪಾಸಣೆಗೋಸ್ಕರ ಡೈಮಂಡ್ ಲೈನ್
 
ಈ ತನಕ ಮಶಿನ್‌ಗೋಸ್ಕರ ಮಾಪನದ ಚಟುವಟಿಕೆಯಲ್ಲಿ ಉತ್ಕೃಷ್ಟ ಮಟ್ಟದ ನಿರ್ದೋಷವಾದ ಪ್ರೋಬಿಂಗ್‌ಗೆ ಉಪಾಯಗಳನ್ನು ಮಾರ್ಪಾಸ್ ಪೂರೈಸುತ್ತಿದೆ. ನಿರಂತರವಾಗಿ ಏನಾದರೂ ಹೊಸ ಹೊಸದಾದ ಅಭಿವೃದ್ಧಿಯನ್ನು ಮಾಡುತ್ತಿರುವುದು ಮತ್ತು ಬಳಕೆಗಾರರ ಬೇಡಿಕೆಗಳನ್ನು ಪೂರ್ತಿಗೊಳಿಸುವುದು, ಇದೇ ಮಾರ್ಪಾಸ್‌ನ ವ್ಯಾಾಪಾರದ ದೃಷ್ಟಿಕೋನವಾಗಿದೆ. ಇದರ ಪರಿಣಾಮವೆಂದರೆ ಮಾರ್ಪಾಸ್ ಇವರು ಇತ್ತಿಚೇಗೆ ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಿರುವ ಹೈ ಪ್ರಿಸಿಶನ್ ಪ್ರೋಬಿಂಗ್ ಎಂಬ ಉಚ್ಚಮಟ್ಟದ ನಿಖರತೆಯ ಉತ್ಪಾದನೆಗಳ ಸರಣಿಯೇ ಸರಿ. ಹೈ ಪ್ರಿಸಿಶನ್ ಪ್ರೋಬಿಂಗ್ ಮೂಲಕ ಗ್ರಾಾಹಕರಿಗೆ ಟೂಲ್, ಪ್ರೀಸೆಟಿಂಗ್, ಪರಿಶೀಲನೆ, ಕಾರ್ಯವಸ್ತುಗಳ ಸೆಟಪ್ ಮತ್ತು ಯಂತ್ರಭಾಗಗಳ ತಪಾಸಣೆಯಂತಹ ನಿರ್ದೋಷವಾದ ವ್ಯವಸ್ಥೆಯು ಲಭ್ಯವಾಗಿದೆ.
 
ಸ್ಪಿಂಡಲ್ ಪ್ರೋಬ್
 

6_1  H x W: 0 x 
 
ಪಿರೆಇಲೆಕ್ಟ್ರಿಕ್ ತಂತ್ರಜ್ಞಾನವನ್ನು ಬಳಸಿ ಹೈ ಪ್ರಿಸಿಶನ್ ಸ್ಪಿಂಡಲ್ ಪ್ರೋಬ್ ಸ್ವಯಂಚಾಲಿತವಾಗಿ ಮಶಿನ್‌ನ ಅಕ್ಷದ ಸ್ಥಾನವನ್ನು ಹುಡುಕುತ್ತದೆ. ಯಾವುದೇ ಗಾತ್ರದ ಮಶಿನಿಂಗ್ ಸೆಂಟರ್ ಅಥವಾ ಮಿಲ್ಲಿಂಗ್ ಮಶಿನ್‌ನಲ್ಲಿ ಯಂತ್ರಭಾಗಗಳನ್ನು ನಿಯಂತ್ರಿಸುವುದು ಮತ್ತು ಪೊಸಿಶನ್ ನಿರ್ಧರಿಸುವುದಕ್ಕೋಸ್ಕರ ಉಚ್ಚಮಟ್ಟದ ಮಾಪನದ ಚಟುವಟಿಕೆಯ ಖಾತರಿಯನ್ನು ನೀಡುತ್ತವೆ. ಇದರ ಹೊರತಾಗಿ ಪರಿಮಾಣಗಳು, ಡಿಸೈನ್ ಮತ್ತು ಟ್ರಾನ್‌ಸ್‌‌ಮಿಶನ್ ಮೋಡ್‌ನಲ್ಲಿ ವೈವಿಧ್ಯತೆಗಳಿರುವ (ಹಾರ್ಡ್ ವಾಯರ್ಡ್, ಆಪ್ಲಿಕಲ್ ಮತ್ತು ರೆಡಿಯೋ) ಅನೇಕ ಮಾಡೆಲ್‌ಗಳು ಉಪಲಬ್ಧವಿವೆ.
 
ಟೂಲ್ ಸೆಟರ್
 
ವಿಷುವಲ್ ಟೂಲ್ ಸೆಟರ್ (VTS) ಇದು ಮಾಪನ ಮಾಡಲು ಕ್ಯಾಮೆರಾ ಬಳಸಲಾಗುವಂತಹ ಟೂಲ್ ಸೆಟರ್ ಆಗಿದೆ. VTS ಮೂಲಕ ಸರ್ಫೇಸ್‌ನ ಸಮಗ್ರತೆಯ ತಪಾಸಣೆ ಮಾಡಲಾಗುತ್ತದೆ. ಈ ವೈಶಿಷ್ಟ್ಯಗಳಿಂದಾಗಿ ಅದಕ್ಕೆ ಟೂಲ್‌ನಲ್ಲಿರುವ ಚಿಕ್ಕ-ಪುಟ್ಟ ದೋಷಗಳನ್ನು ಸ್ಕ್ಯಾಾನ್ ಮಾಡುವ, ಮುಂಭಾಗದ ತುದಿಯಿಂದ ಹಿಂಭಾಗದ ಭಾಗದ ತನಕ ಸಂಪೂರ್ಣವಾಗಿ ಟೂಲ್ ತಪಾಸಣೆ ಮಾಡುವ, ಒಂದು ವಿಷುವಲ್ ಟೂಲ್ ಎಂದು ಹೇಳಬಹುದಾಗಿದೆ. ಕಾರ್ಯವಸ್ತು ಮತ್ತು ಸಂಪೂರ್ಣ ಉತ್ಪಾದನೆಯ ಗುಣಮಟ್ಟಕ್ಕೋಸ್ಕರ ಸಿ.ಎನ್.ಸಿ. ಮಶಿನ್‌ನಲ್ಲಿರುವ ಟೂಲ್‌ನ ಪ್ರೊಫೈಲ್‌ನ ತಪಾಸಣೆಯನ್ನು ಮಾಡುವುದೂ ತುಂಬಾ ಮಹತ್ವದ್ದಾಗಿದೆ.
 
ಸರೆಂಡರ್ಡ್ ಸಿ.ಎನ್.ಸಿ. ಮಾಪನದ ರೊಟೇಶನ್‌ನ ಮೂಲಕ ನಿಜವಾದ ವ್ಯಾಸವನ್ನು ಪರಿಶೀಲಿಸಲಾಗುತ್ತದೆ. ಇನ್ನಿತರ ಯಾವುದೇ ಸ್ಪರ್ಶರಹಿತವಾದ (ನಾನ್ ಕಾಂಟ್ಯಾಕ್ಟ್‌) ಟೂಲ್ ಸೆಟರ್‌ಗಿಂತ ಇದು ತುಂಬಾ ವೇಗವಾಗಿರುತ್ತದೆ. ಸ್ಪಿಂಡಲ್ ಇಂಡೆಕ್ಸಿಂಗ್ ಬಳಸಿ ಎಲ್ಲ
ಕಟರ್‌ಗಳಿಗೋಸ್ಕರ ಪ್ರತಿಯೊಂದು ಕಟರ್‌ನ ಕೋನದ ಸ್ಥಾನದಲ್ಲಿ ಉದ್ದ, ವ್ಯಾಸ ಮತ್ತು
ಎಡ್ಜ್‌‌ನ ಸಮಗ್ರತೆಯನ್ನು ಪರಿಶೀಲಿಸಬಹುದು.
 
ಲಾಭಗಳು
 

7_1  H x W: 0 x 
 
• ಉತ್ಪಾದನೆಯ ಗುಣಮಟ್ಟದಲ್ಲಿ ಸುಧಾರಣೆ
• ಉತ್ಪಾದನೆಯ ಸಾಮರ್ಥ್ಯದಲ್ಲಿ ಹೆಚ್ಚಳ
• ಉಚ್ಚಮಟ್ಟದ ನಿಖರತೆಯಿಂದಾಗಿ ಮಟೀರಿಯಲ್‌ನ ರಿಜೆಕ್ಷನ್‌ನಲ್ಲಿ ಇಳಿತ.
• ಜಟಿಲವಾದ ಮತ್ತು ತುಂಬಾ ಸೂಕ್ಷ್ಮವಾದ ಕೆಲಸವನ್ನು ಮಾಡಿರುವ ಸರ್ಫೇಸ್ ಕೂಡಾ ನಂಬಲಾಗದಂತಹ ಮಾಪನದ ಚಟುವಟಿಕೆಯನ್ನು ಮಾಡುತ್ತದೆ
• ಸೈಕಲ್ ಟೈಮ್‌ನಲ್ಲಿ ಇನ್ನಷ್ಟು ಕಡಿತವನ್ನು ಮಾಡಲು ಹೆಚ್ಚು ವೇಗದ ತಪಾಸಣೆ
• ಪ್ರತಿಯೊಂದು ಮಶಿನ್‌ನ ಪ್ರಕಾರ ಮತ್ತು ಅಪ್ಲಿಕೇಶನ್‌ಗೋಸ್ಕರ ಉಪಾಯಗಳ ವಿಸ್ತಾರವಾದ ಶ್ರೇಣಿ
 
ವಿಧಗಳು
 
• T25P ಇದೊಂದು ಕೇಬಲ್ ವಾಯರ್ಡ್ ಪ್ರೋಬ್ ಆಗಿದೆ. ಇದರಿಂದಾಗಿ ಅಚ್ಚುಕಟ್ಟಾದ ಪರಿಮಾಣಗಳು ಲಭಿಸುತ್ತವೆ ಮತ್ತು ಗ್ರೈಂಡರ್ ಮತ್ತು ಶಾರ್ಪ್‌ನರ್‌ನಲ್ಲಿ ಬಳಸಲು ಇದು ಒಂದು ನಿರ್ದೋಷವಾದ ಪರ್ಯಾಯವಾಗಿದೆ.
• VOP40P ಇದೊಂದು ಆಪ್ಟಿಕಲ್ ಟ್ರಾನ್ಸ್‌‌ಮಿಶನ್ ಇರುವ ಕಾಂಪ್ಯಾಕ್ಟ್‌ ಪ್ರೋಬ್ ಆಗಿರುತ್ತದೆ. ಇದು ಉಚ್ಚಮಟ್ಟದ ನಿರ್ದೋಷತೆಯ ಚಿಕ್ಕ ಮತ್ತು ಮಧ್ಯಮ ಆಕಾರದ ಮಶಿನಿಂಗ್ ಸೆಂಟರ್ ಅಥವಾ ಮಿಲ್ಲಿಂಗ್ ಮಶಿನ್‌ಗೋಸ್ಕರ ಆದರ್ಶಪ್ರಾಯವಾಗಿದೆ.
• WRP45P ಮತ್ತು WRP60P ಇದು ರೆಡಿಯೋ ಟ್ರಾನ್‌ಸ್‌‌ಮಿಶನ್ ಪ್ರೋಬ್ ಆಗಿದೆ. ಮಾಡ್ಯುಲರ್ ಡಿಸೈನ್‌ಗೆ ಆಧರಿಸಿರುವ, ಉಚ್ಚಮಟ್ಟದ ನಿಖರತೆಯ ಮಿಲ್ಲಿಂಗ್ ಮಶಿನ್ ಮತ್ತು 5 ಅಕ್ಷಗಳಿರುವ ಮಶಿನಿಂಗ್ ಸೆಂಟರ್‌ಗೋಸ್ಕರ ಆದರ್ಶಪ್ರಾಯವಾಗಿದೆ. ರೆಡಿಯೋ ಟ್ರಾನ್ಸ್‌‌ಮಿಶನ್ ಆಗಿರುವುದರಿಂದ ದೊಡ್ಡ ಗಾತ್ರದ ಮಶಿನ್‌ಗಳಿಗೆ ಅದು ಅತ್ಯಂತ ಯೋಗ್ಯವಾಗಿರುತ್ತವೆ. ಒಂದು ಮೀಟರ್‌ತನಕದ ಪ್ರೋಬ್ ಎಕ್‌ಸ್‌‌ಟೆನ್ಷನ್ ಬಳಸಿ ಅದನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ (ಕಸ್ಟಮೈಸ್ಡ್‌) ಮಾಡುವುದೂ ಸಾಧ್ಯವಾಗಿದೆ.
 
VTS ಶ್ರೇಣಿ
 

8_1  H x W: 0 x 
 
ಇದರಲ್ಲಿ ವಿವಿಧ ಮಾಡೆಲ್‌ಗಳಿದ್ದು ಟೂಲ್‌ನ ವ್ಯಾಸವು ವಿಸ್ತಾರವಾದ ವ್ಯಾಪ್ತಿಯಲ್ಲಿ ಉಪಲಬ್ಧವಿದೆ.
• VTS SF45, VTS SF45 ಕಾಂಪ್ಯಾಕ್‌ಟ್‌ ಮತ್ತು VTS SF85 (ಸ್ಮಾಲ್ ಫೀಲ್ಡ್‌ ಮಾಡೆಲ್) 0.0001 ಮಿ.ಮೀ. ರೆಸೆಲ್ಯೂಶನ್‌ನೊಂದಿಗೆ ಕನಿಷ್ಠ 0.01 ಮಿ.ಮೀ. ಮತ್ತು ಗರಿಷ್ಠ 80 ಮಿ.ಮೀ.ತನಕದ ಟೂಲ್‌ನ ಮಾಪನವನ್ನು ಮಾಡಲು ಸಮರ್ಥವಾಗಿದೆ.
• VTS WF45 ಮತ್ತು VTS WF85 ರಲ್ಲಿ (ವೈಡ್ ಫೀಲ್‌ಡ್‌ ಮಾಡೆಲ್) 0.04 ಮಿ.ಮೀ.ನಿಂದ 3 ಮಿ.ಮೀ. ವ್ಯಾಸದ (ಡಬಲ್ ಎಡ್ಜ್‌) ಮತ್ತು 80 ಮಿ.ಮೀ.ತನಕ (ಸಿಂಗಲ್ ಎಡ್‌ಜ್‌) ವಿಸ್ತೃತವಾದ ರೇಂಜ್‌ನಲ್ಲಿ ಮಾಪನವನ್ನು ಮಾಡುವ ಸಾಮರ್ಥ್ಯವಿದೆ.
 
ಮಶಿನಿಂಗ್ ಸೆಂಟರ್‌ನಲ್ಲಿ ಟೂಲ್ ಸೆಟಿಂಗ್ ಮತ್ತು ಫಿಸಿಕಲ್ ಟೆಸ್ಟಿಂಗ್
 
ಮಿಲ್ಲಿಂಗ್ ಮಶಿನ್ ಮತ್ತು ಮಶಿನಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುವವರಿಗೆ ತುಂಡಾಗಿರುವ ಅಥವಾ ಸವೆದ ಟೂಲ್ ಅಥವಾ ಯೋಗ್ಯ ರೀತಿಯಲ್ಲಿ ಮಾಪನ ಮಾಡದಿರುವ ಟೂಲ್ ಬಳಸಿ ತಯಾರಿಸಲಾಗುವ ಯಂತ್ರಭಾಗಗಳಲ್ಲಿ ವ್ಯರ್ಥವಾಗುವ ಸಮಸ್ಯೆಯು ತಿಳಿದಿರುತ್ತದೆ. ಕೊನೆಯದಾದ ಬಳಕೆಗಾರರು ಅಥವಾ ಆಪರೇಟರ್‌ಗೆ ಕೆಲಸ ಮಾಡುತ್ತಿರುವಾಗ ಯೋಗ್ಯವಾದ ಉತ್ಪಾದನೆಯ ತಯಾರಿಕೆಗೋಸ್ಕರ ಮೂಲಭೂತವಾದ ಮಾಹಿತಿಯನ್ನು ನೀಡುವಂತಹ ಸೂಕ್ತ ಉಪಕರಣೆಗಳು ಲಭ್ಯವಿರುವುದಿಲ್ಲ. ಯಂತ್ರಣೆಯ ಪ್ರಕ್ರಿಯೆಗೆ ಮುಂಚೆ ಅಥವಾ ಯಂತ್ರಣೆಯನ್ನು ಮಾಡುತ್ತಿರುವಾಗ ಮತ್ತು ನಂತರ ಆಟೋ ಟೂಲ್ ಸೆಟಿಂಗ್ ಮಾಡುವುದರಿಂದ ಕಟರ್ ಮತ್ತು ಡ್ರಿಲ್ ಇವೆರಡರ ಉದ್ದ ಹಾಗೆಯೇ ವ್ಯಾಸದ ನಿರ್ದೋಷವಾದ ಮೌಲ್ಯವನ್ನು ಸ್ವಯಂಚಾಲಿತವಾಗಿ ಪಡೆಯಬಹುದು. ಟೂಲ್ ಸೆಟರ್ ಮಶಿನ್‌ನ ಕಾರ್ಯಕ್ಷೇತ್ರದಲ್ಲಿ ನಿಜವಾದ ಯಂತ್ರಣೆಯ ಪರಿಸ್ಥಿತಿಯಲ್ಲಿ ಟೂಲ್‌ನ ಮಾಪನವನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಮಾಡಿರುವ ಟೂಲ್‌ನ ತಪಾಸಣೆಯು ಮಶಿನ್‌ನ ಹೊರಗಿನ ಪ್ರೀಸೆಟಿಂಗ್‌ಗಿಂತ ಹೆಚ್ಚು ಅರ್ಥಪೂರ್ಣವಾಗಿ ಮತ್ತು ವೇಗವಾಗಿ ಆಗುತ್ತದೆ. ಟೂಲ್ ಸೆಟರ್ ಪ್ರೀಸೆಟಿಂಗ್ ಮತ್ತು ಟೂಲ್ ವೆಲಿಡೇಶನ್ ಇವೆರಡು ಮೂಲಭೂತವಾದ ಮಾಪನದ ಹಂತಗಳು ಅರ್ಹವಾಗಿವೆ.
 

9_1  H x W: 0 x 
 
ಯಂತ್ರಣೆಯ ಪ್ರಕ್ರಿಯೆ ಪ್ರಾರಂಭಿಸುವ ಮುಂಚೆ ಮಶಿನ್‌ನಲ್ಲಿ ಟೂಲ್‌ನ ಮಾಪನವನ್ನು ಮಾಡಲಾಗುತ್ತದೆ. ಇದು ಪ್ರೀಸೆಟಿಂಗ್‌ನ ಹಂತದ ಪ್ರಮುಖ ಲಾಭವಾಗಿದೆ. ಇದರಿಂದಾಗಿ ಅಕ್ಷಗಳ ಚಟುವಟಿಗಳಿಂದ ನಿಜವಾದ ಪರಿಮಾಣಗಳು ಲಭಿಸುತ್ತವೆ. (ಟೂಲ್‌ನ ಪರಿಮಾಣಗಳ ಪುಸ್ತಕದಲ್ಲಿರುವ ಲೆಕ್ಕಾಾಚಾರದಿಂದ ಲಭಿಸುವುದಲ್ಲ). ಇದರೊಂದಿಗೆ ಸ್ಪಿಂಡಲ್‌ನಲ್ಲಿ ಟೂಲ್ ಕ್ಲ್ಯಾoಪಿಂಗ್ ತಪ್ಪಾಗಿ ಮಾಡಿದ್ದರಿಂದ ಉಂಟಾಗುವ ರನ್‌ಔಟ್‌ನಂತಹ ದೋಷಗಳು ಗಮನಕ್ಕೆ ಬರುತ್ತವೆ ಮತ್ತು ಅವುಗಳಿಗೆ ಪರಿಹಾರವನ್ನು ಮಾಡುವುದು ಸಾಧ್ಯವಾಗುತ್ತದೆ.
 
ಕಟಿಂಗ್ ಗುಣಮಟ್ಟವನ್ನು ನಿಯಂತ್ರಿಸಲು ಟೂಲ್‌ನ ಪರಿಶೀಲನೆಯ ಮೂಲಕ ಕಟರ್ ಮತ್ತು ಡ್ರಿಲ್‌ನ ಸವೆತ ಅಥವಾ ವಿವಿಧ ಪ್ರಕ್ರಿಯೆಗಳಲ್ಲಾಾಗಿರುವ ನಷ್ಟವನ್ನು ವೀಕ್ಷಿಸುವುದು ಸಾಧ್ಯವಾಗುತ್ತದೆ. ಇದರ ಹೊರತಾಗಿ ಟೂಲ್‌ನ ಉದ್ದದಲ್ಲಿ ಪ್ರಭಾವ ಬೀರುವಂತಹ ಉಷ್ಣಾoಶದ ಬದಲಾವಣೆಗಳಿಗೆ ಪರಿಹಾರವನ್ನೂ ಮಾಡಬಹುದಾಗಿದೆ.
 
ಲಾಭಗಳು
• ಉತ್ಪಾದನೆಯ ಗುಣಮಟ್ಟದಲ್ಲಿ ಹೆಚ್ಚಳವಾಗುತ್ತದೆ
• ಉತ್ಪಾದನೆಯ ಗುಣಮಟ್ಟದ ಸ್ಥಿರವಾದ ಸ್ತರವನ್ನು ಕಾಪಾಡುವುದು ಸಾಧ್ಯವಾಗುತ್ತದೆ
• ಹೊರ ಅಥವಾ ವ್ಯಕ್ತಿಯಿಂದ ಮಾಡಲಾಗುವ ಟೂಲ್ ತಪಾಸಣೆಯನ್ನು ಹೋಲಿಸಿದಲ್ಲಿ ಸಮಯದಲ್ಲಿಯೂ ಉಳಿತಾಯವಾಗುತ್ತದೆ
• ಮಶಿನ್‌ನ ಉತ್ಪಾದಕತೆಯಲ್ಲಿ ಹೆಚ್ಚಳವಾಗುತ್ತದೆ
• ನೇರವಾಗಿ ಕೆಲಸದಲ್ಲಿಯೇ ಮಾಡಲಾಗುವುದರಿಂದ ಹೆಚ್ಚು ನಿರ್ದೋಷವಾದ ಮಾಪನಗಳು ಲಭಿಸುತ್ತವೆ
• ಕೆಲಸದ ಎರಡು ಹಂತಗಳ ನಡುವೆ ಟೂಲ್‌ನ ತಪಾಸಣೆ ಮಾಡುವ ಸಾಧ್ಯತೆ ಇರುತ್ತದೆ
• ಮಾಪನ ಮಾಡಿರುವ ಮೌಲ್ಯಗಳನ್ನು ಸ್ವಯಂಚಾಲಿತವಾಗಿ ಒಟ್ಟು ಮಾಡಲಾಗುತ್ತದೆ ಮತ್ತು ಟೂಲ್ ಟೇಬಲ್ ಅಪ್‌ಡೇಟ್ ಆಗುತ್ತದೆ
• ಆಪರೇಟರ್‌ನ ಕೆಲಸವು ಸುಲಭವಾಗುತ್ತದೆ
• ಸಿ.ಎನ್.ಸಿ.ಯಲ್ಲಿ ಮಾಪನದ ಮೌಲ್ಯಗಳನ್ನು ಕೈಯಿಂದ ಸೇರಿಸುವಾಗ ಉಂಟಾಗುವ ಮಾನವನ ತಪ್ಪುುಗಳನ್ನು ತಡೆಯಲಾಗುತ್ತವೆ
 
ವಿಧಗಳು
 

10_1  H x W: 0  
 
ಕೆಲಸ ಮಾಡುತ್ತಿರುವಾಗ ಉದ್ಭವಿಸುವ ಯಾವುದೇ ಪರಿಸ್ಥಿತಿಯಲ್ಲಿ ಉಪಯುಕ್ತವಾಗಿರುವ ವಿವಿಧ ಟೂಲ್ ಸೆಟರ್‌ಗಳನ್ನು ಮಾರ್ಪಾಸ್ ಇವರು ಪ್ರಸ್ತುತ ಪಡಿಸಿದ್ದಾರೆ.
ಕಾಂಟ್ಯಾಕ್ಟ್‌ ಟೂಲ್ ಸೆಟಿಂಗ್
ಎರಡು ವಾಯರ್‌ಲೆಸ್ ಮತ್ತು ವಾಯರ್ಡ್ ಅಪ್ಲಿಕೇಶನ್‌ನಲ್ಲಿ ಕನಿಷ್ಠ 1 ಮಿ.ಮೀ. ವ್ಯಾಸದ ಸ್ಥಿರತೆ ಅಥವಾ ತಿರುಗುವಂತಹ ಟೂಲ್‌ನ ಮಾಪನವನ್ನು ಮಾಡಬಹುದಾಗಿದೆ. ಪ್ರೀಸೆಟಿಂಗ್ ಮಾಡಿ ವ್ಯಾಸ ಮತ್ತು ಉದ್ದ ಇವುಗಳ ಮೌಲ್ಯವನ್ನು ಪಡೆಯಬಹುದು ಮತ್ತು ಟೂಲ್‌ನ ದೃಢತೆಯನ್ನು ಪರಿಶೀಲಿಸಬಹುದು.
 
ನಾನ್ ಕಾಂಟ್ಯಾಕ್ಟ್‌ ಟೂಲ್ ಸೆಟಿಂಗ್
1 ಮಿ.ಮೀ.ಗಿಂತ ಕಡಿಮೆ ಇರುವ ಟೂಲ್‌ನ ಮಾಪನ ಅಥವಾ ಹೆಚ್ಚು ಜಟಿಲವಾದ ಮಾಪನವನ್ನು ಮಾಡಲು ಉಪಯುಕ್ತವಾಗಿದೆ. (ಉದಾಹರಣೆ, ರನ್‌ಔಟ್, ಕಟರ್ ಪ್ರೊಫೈಲ್‌ನ ದೃಢತೆಯ ತಪಾಸಣೆ).
 
ವಿಜನ್ ಟೂಲ್ ಸೆಟಿಂಗ್
ಮೈಕ್ರೋಟೂಲ್‌ಗೋಸ್ಕರ ಮತ್ತು ಅತ್ಯುಚ್ಚ ಮಟ್ಟದ ಮೆಟ್ರಾಲಾಜಿಕಲ್ ಚಟುವಟಿಕೆಯ ಅಗತ್ಯವಿರುವ ಅಪ್ಲಿಕೇಶನ್‌ಗೋಸ್ಕರ ಆದರ್ಶಪ್ರಾಯವಾಗಿದೆ. (2 ಮೈಕ್ರಾನ್‌ಗಿಂತ ಕಡಿಮೆ ಮಾಪನದ ನಿಖರತೆ).
 

11_1  H x W: 0  
 
ಮಶಿನಿಂಗ್ ಸೆಂಟರ್‌ನಲ್ಲಿ
ಟೂಲ್‌ಗಳು ತುಂಡಾಗುವುದು
 
ಯಂತ್ರಣೆಯನ್ನು ಮಾಡುತ್ತಿರುವಾಗ ಟೂಲ್‌ಗಳು ತುಂಡಾಗುವಂತಹ ಘಟನೆಗಳು ಗಮನಕ್ಕೆ ಬಂದಲ್ಲಿ ಉತ್ಪಾದನೆಯಲ್ಲಿ ವಿನಾಶಕಾರಿಯಾದ ಪರಿಣಾಮಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಟೂಲ್ ಹಾಳಾದ ಸಮಯದಿಂದ ಅದರಿಂದ ತುಂಡು ಮಾಡಿರುವ ಪ್ರತಿಯೊಂದು ಯಂತ್ರಭಾಗಗಳೂ ದೋಷದಿಂದ ಕೂಡಿರಬಹುದು. ಮಾನವರಹಿತ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಈ ಅಂಶವು ಹೆಚ್ಚು ಗಂಭೀರವಾಗಿರುತ್ತದೆ. ಕಾರಣ ಅಲ್ಲಿ ಆಪರೇಟರ್‌ಗೆ ಇಂತಹ ಸಮಸ್ಯೆಗಳು ಗಮನಕ್ಕೆ ಬರುವಲ್ಲಿ ತುಂಬಾ ಸಮಯ ಬೇಕಾಗುತ್ತದೆ. ಹಾಗೆಯೇ ಬೋರಿಂಗ್‌ನಂತಹ ಪ್ರಕ್ರಿಯೆಯಲ್ಲಿ ಟೂಲ್ ತುಂಡಾದ ನಂತರ ಆ ಕಾರ್ಯವಸ್ತುವಿನಲ್ಲಿ ನಂತರ ಬಳಸಲಾಗುವ ಟೂಲ್‌ನಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಕಾರಣ ಅವುಗಳಿಗೆ ಅಪೇಕ್ಷೆಗಿಂತ ಮತ್ತು ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಮಟೀರಿಯಲ್ ಹೊರಗೆ ತೆಗೆಯಬೇಕಾಗುತ್ತದೆ.
 
ಈ ರೀತಿಯ ಅಪವ್ಯಯ ಮತ್ತು ಖರ್ಚು ತಡೆಯಲು ಯಂತ್ರಣೆಯ ಪ್ರಕ್ರಿಯೆಯ ನಂತರ ತುಂಡಾಗುವುದನ್ನು ಗುರುತಿಸಲು ಸಮರ್ಥವಾದ ಪ್ರಭಾವಶಾಲಿಯಾದ ಟೂಲ್ ಇಂಟಿಗ್ರಿಟಿ ಚೆಕ್ ಸಿಸ್ಟಮ್ ಬಳಸಿ ಮಶಿನ್ ಸಜ್ಜಾಾಗಿರಿಸುವುದು ಅನಿವಾರ್ಯವಾಗಿದೆ.
 

12_1  H x W: 0  
 
ತುಂಡಾಗಿರುವ ಟೂಲ್‌ಗಳನ್ನು ಹುಡುಕಲು ಮತ್ತು ಸಮಗ್ರತೆಯ ತಪಾಸಣೆಗೋಸ್ಕರ ನಾವು ಬೇರೆಬೇರೆ ಪರ್ಯಾಯಗಳನ್ನು ಉಪಲಬ್ಧ ಮಾಡಿಕೊಡುತ್ತೇವೆ. ಇಂತಹ ಪ್ರಣಾಳಿಕೆಗಳು ಇನ್‌ಸ್ಟಾಲ್ ಮತ್ತು ಸೆಟ್ ಮಾಡಲು ಸುಲಭವಾಗಿರುತ್ತವೆ ಮತ್ತು ತುಂಬಾ ವೇಗವಾಗಿ ಸಾಫ್ಟ್‌‌ವೇರ್ ಸೈಕಲ್‌ನೊಂದಿಗೆ ಕೆಲಸವನ್ನು ನಿರ್ವಹಿಸುತ್ತವೆ. ಈ ರೀತಿಯಲ್ಲಿ ತಮ್ಮ ಕೆಲಸದ ಗುಣಮಟ್ಟದ ಖಾತರಿಯು ಲಭಿಸುತ್ತದೆ ಮತ್ತು ಅದೇ ವೇಳೆಯಲ್ಲಿ ಸೈಕಲ್ ಟೈಮ್ ಕೂಡಾ ಆಪ್ಟಿಮೈಸ್ ಮಾಡಲಾಗುತ್ತದೆ.
 
ತುಂಡಾಗಿರುವ ಟೂಲ್‌ಗಳನ್ನು ಹುಡುಕಲು ಬಳಸಲಾಗುವ ಮಾರ್ಪಾಸ್‌ನ ಉಪಕರಣೆಗಳು ಪ್ರಾರಂಭಕ್ಕೆ ಸಂದರ್ಭವೆಂದು ಟೂಲ್
 
ಟೇಬಲ್‌ನಲ್ಲಿರುವ ಪರಿಮಾಣಗಳನ್ನು ಪಡೆಯಲಾಗುತ್ತದೆ ಮತ್ತು ನಂತರ ಅವುಗಳನ್ನು ಆಪರೇಟರ್‌ನ ಮೂಲಕ ಗರಿಷ್ಠ ಎಕ್ಸೆಪ್ಟಬಲ್ ಕಟಿಂಗ್ ಟಾಲರನ್‌ಸ್‌‌ನ ವ್ಯಾಖ್ಯೆಯು (ಕನಿಷ್ಠ ಮೌಲ್ಯ 0.1 ಮಿ.ಮೀ.) ಆವಶ್ಯಕವಿರುತ್ತದೆ. ಯಂತ್ರಣೆಯ ನಂತರ ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ ಟಾಲರನ್ಸ್‌‌ಗಿಂತ ಹೆಚ್ಚು ಒಡೆಯುವಿಕೆಯು ಕಂಡುಬಂದಲ್ಲಿ ಹಾಳಾಗಿರುವ ಟೂಲ್‌ಗಳನ್ನು ಬದಲಾಯಿಸಲು ಒಂದು ಅಪಾಯದ ಸೂಚನೆ (ಅಲಾರ್ಮ್) ನೀಡಲಾಗುತ್ತವೆ, ಇದರಿಂದಾಗಿ ಉತ್ಪಾದನೆಯಲ್ಲಿರುವ ಸಮಸ್ಯೆಗಳು ಇಲ್ಲದಂತಾಗುತ್ತವೆ.
 

13_1  H x W: 0  
 
ಲಾಭಗಳು
 
• ಉತ್ಪಾದನೆಯ ಗುಣಮಟ್ಟದಲ್ಲಿ ಹೆಚ್ಚಳವಾಗುತ್ತದೆ.
• ಮಶಿನ್‌ನ ಉತ್ಪಾದಕತೆಯಲ್ಲಿ ವೃದ್ಧಿಯಾಗುತ್ತದೆ.
• ವಿಶೇಷವಾಗಿ ಮಾನವನ ಹಸ್ತಕ್ಷೇಪರಹಿತವಾದ ತಯಾರಿಕೆಯಿಂದಾಗಿ ಬಿಸುಟ ವಸ್ತುಗಳು (ಸ್ಕ್ರ್ಯೊಾಪ್) ಪ್ರಮಾಣ ಕಡಿಮೆಯಾಗುತ್ತದೆ.
• ಕೆಲಸದ ಎರಡು ಹಂತಗಳ ನಡುವೆ ಟೂಲ್ ಪರಿಶೀಲಿಸುವ ಸಾಧ್ಯತೆ ಇರುತ್ತದೆ.
• ಟೂಲ್‌ನ ಸಮಗ್ರತೆಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ.
• ಶೀಘ್ರವಾದ ತಪಾಸಣೆಯು ಸಾಧ್ಯವಾಗಿದೆ.
• ಆಪರೇಟರ್‌ನ ಕೆಲಸದಲ್ಲಿ ಸುಲಭತೆಯುಂಟಾಗುತ್ತದೆ.
 
ವಿಧಗಳು
 
ತುಂಡಾಗಿರುವ ಟೂಲ್‌ಗಳನ್ನು ಹುಡುಕಲು ವಿವಿಧ ಪ್ರಣಾಳಿಕೆಗಳು ಉಪಲಬ್ಧವಿವೆ.
• ಕಾಂಟ್ಯಾಕ್ಟ್‌ ಟೂಲ್ ಸೆಟರ್, ತುಂಬಾ ದೊಡ್ಡ ಗಾತ್ರದ ಟೂಲ್‌ಗೋಸ್ಕರ ಆದರ್ಶಪ್ರಾಯವಾಗಿದೆ. (ಕನಿಷ್ಠ ವ್ಯಾಸ 1 ಮಿ.ಮೀ.)
• ಹಾರ್ಡ್ ವಾಯರ್ಡ್ ಮತ್ತು ವಾಯರ್‌ಲೆಸ್ ಟ್ರಾನ್‌ಸ್‌‌ಮಿಶಿನ್ (ರೆಡಿಯೋ ಮತ್ತು ಆಪ್ಟಿಕಲ್) ಎರಡು ವಿಧಗಳಲ್ಲಿ ಲಭ್ಯ.
• ಟೂಲ್ ಬ್ರೆಕೇಜ್ ಡಿಟೆಕ್ಟರ್ (TBD), ಅಕ್ಷೀಯ ಸಮಗ್ರತೆಯನ್ನು ಪರಿಶೀಲಿಸಲು ಸರೆಂಡರ್ಡ್ ಟೂಲ್‌ಗೋಸ್ಕರ (ಉದಾಹರಣೆ, ಡ್ರಿಲ್ ಮತ್ತು ಟ್ಯಾಾಪಿಂಗ್ ಟೂಲ್) ಒಂದು ಸೆಕಂಡಿಗಿಂತ ಕಡಿಮೆ ಸಮಯದಲ್ಲಿ 0.15 ಮಿ.ಮೀ. ತನಕ ಚಿಕ್ಕ ಟೂಲ್‌ನಲ್ಲಾದ ತುಂಡುಗಳನ್ನು ಗುರುತಿಸಲು ಅದು ಯೋಗ್ಯವಾಗಿದೆ.
• ಮಿಡಾ ಲೇಸರ್, ನಾನ್ ಕಾಂಟ್ಯಾಕ್ಟ್‌ ಪ್ರಣಾಳಿಕೆಯ ಮೂಲಕ ಸಮಗ್ರತೆಯನ್ನು ಪರಿಶೀಲಿಸುವ ಹೊರತಾಗಿ ವಿಭಿನ್ನವಾದ ಮಾಪನಗಳು ಮತ್ತು ಕಟರ್ ಪ್ರೊಫೈಲ್ ಸ್ಕ್ಯಾನಿಂಗ್ ಮಾಡಬಹುದಾಗಿದೆ.
• ವಿಷನ್ ಟೂಲ್ ಸೆಟಿಂಗ್ : ಮೈಕ್ರೋಟೂಲ್‌ಗೋಸ್ಕರ ಮತ್ತು ಅತ್ಯುಚ್ಚ ಗುಣಮಟ್ಟದ ಮೆಟ್ರಾಲಾಜಿಕಲ್ ಚಟುವಟಿಗೆ ಅಗತ್ಯವಿರುವ ಅಪ್ಲಿಕೇಶನ್‌ನಲ್ಲಿ (2 ಮೈಕ್ರಾನ್‌ಗಿಂತ ಕಡಿಮೆ ಮಾಪನದಲ್ಲಿ ನಿಖರತೆ) ಆದರ್ಶಪ್ರಾಯವಾಗಿದೆ.
 
ಮಶಿನ್‌ನ ರಕ್ಷಣೆ
 
ಪ್ರಕ್ರಿಯೆಯಲ್ಲಿರುವ ಇನ್ನಿತರ ಎಲ್ಲ ಅಡೆತಡೆಗಳ ಹೊರತಾಗಿ, ಅಲುಗಾಡುವ ಅಕ್ಷ ಮತ್ತು ಫಿಕ್ಸ್ಚರ್, ಟೇಬಲ್ ಅಥವಾ ಕಾರ್ಯವಸ್ತು ಇಂತಹ ಘಟಕಗಳಲ್ಲಿರುವ ಘರ್ಷಣೆ, ದೀರ್ಘವಾದ ಮಶಿನ್ ಡೌನ್ ಟೈಮ್ ಮತ್ತು ದೊಡ್ಡದಾದ ದುರಸ್ತಿಯ ಖರ್ಚು ಇದಕ್ಕೆ ಕಾರಣವಾಗಿರುತ್ತದೆ. ಘರ್ಷಣೆಯಾದ ನಂತರ ಉಂಟಾಗುವ ನಷ್ಟವನ್ನು ಕಡಿಮೆ ಮಾಡುವುದು ತುಂಬಾ ಮಹತ್ವದ್ದಾಾಗಿದೆ. ಅದಕ್ಕೆ ಈ ಪ್ರಣಾಳಿಕೆಗೋಸ್ಕರ ಪ್ರಕ್ರಿಯೆಯ ವೇಳೆ (ರಿಅ್ಯಕ್ಷನ್ ಟೈಮ್) ಅತ್ಯಂತ ಪ್ರಮುಖವಾಗಿದೆ. ಸ್ಪಿಂಡಲ್ ಅಥವಾ ಮಶಿನ್‌ನ ಇನ್ನಿತರ ಭಾಗಗಳ ನಷ್ಟವನ್ನು ತಡೆಯಲು ಎನ್.ಸಿ. ಮತ್ತು ಮಶಿನ್‌ನ ತನ್ನದೇ ಆದ ಓವರ್‌ಲೋಡ್ ಹುಡುಕುವ ವ್ಯವಸ್ಥೆ ಸಾಕಷ್ಟು ವೇಗವಾಗಿರುವುದಿಲ್ಲ. ಮಶಿನ್‌ನ ಸೆಟಪ್ ಅಥವಾ ಆಪರೇಶನ್‌ನ ದೋಷಗಳಿಂದಾಗಿ ಘರ್ಷಣೆ ಆಗುವುದು ಇದೊಂದು ಅಪರಿಹಾರ್ಯವಾದ ಪರಿಣಾಮವಾಗಿದೆ. ARTIS ನಿಯಂತ್ರಣೆಯುಳ್ಳ ಪ್ರಣಾಳಿಕೆಯು ಎಲ್ಲಕ್ಕಿಂತಲೂ ಮೊದಲು ಚಲಿಸುವ ಶಕ್ತಿಯನ್ನು ತಡೆಯಲು ಪ್ರಾರಂಭಿಸುತ್ತವೆ ಮತ್ತು ಈ ರೀತಿಯ ನಷ್ಟವನ್ನು ಕನಿಷ್ಠ ಮಟ್ಟದಲ್ಲಿಡುತ್ತಾರೆ.
ಈ ಅಚ್ಚುಕಟ್ಟಾದ ಪ್ರಣಾಳಿಕೆಯಲ್ಲಿ ಇಲೆಕ್ಟ್ರಾನಿಕ್ ಮಾಡ್ಯುಲ್, ಸೆನ್ಸರ್ ಮತ್ತು
 
ಕಾನ್‌ಫಿಗರೇಶನ್, ವಿಷುವಲೈಜೆಶನ್ ಮತ್ತು ಡಾಟಾ ಮ್ಯಾನೆಜ್‌ಮೆಂಟ್‌ಗೋಸ್ಕರ ಒಂದು ಸಾಫ್ಟ್‌‌ವೇರ್ ಪ್ಯಾಕೇಜ್ ಇರುತ್ತದೆ. ಹೊಸದಾದ ಅಥವಾ ಸದ್ಯದ ಮಶಿನ್ ಮತ್ತು ಪ್ರಣಾಳಿಕೆಯಲ್ಲಿ ಇಂಟಿಗ್ರೇಶನ್ ಸುಲಭವಾಗಿರುತ್ತದೆ. ಕಂಟ್ರೋಲ್ ಕ್ಯಾಾಬಿನೆಟ್ ಅಥವಾ ಪೀಲ್‌ಡ್‌ ಹೌಸಿಂಗ್‌ನಲ್ಲಿ ಈ ಮೊಡ್ಯುಲ್ DIN ರೇಲ್‌ನಲ್ಲಿ ಇಡಲಾಗುತ್ತದೆ.
ಪಿರೊ ಇಲೆಕ್ಟ್ರಿಕ್ ಸ್ಟ್ರೇನ್ ಸೆನ್ಸರ್ ಅಥವಾ ಅಕ್ಸಿಲರೋಮೀಟರ್ ಡಿವೈಸ್‌ನ ರಚನೆಯಲ್ಲಿ ಅಥವಾ ಡ್ರೈವ್‌ನಲ್ಲಿ ಯೋಗ್ಯವಾದ ಜಾಗದಲ್ಲಿ ಅಳವಡಿಸಲಾಗುತ್ತದೆ. ಮಶಿನ್
 
ಕಂಟ್ರೋಲ್‌ನೊಂದಿಗೆ IO ಕನೆಕ್ಷನ್‌ಮೂಲಕ ಜೋಡಿಸಲಾಗುತ್ತದೆ. ಆದ್ದರಿಂದ ಯಾವುದೇ ಕಂಟ್ರೋಲ್ ಇದ್ದರೂ ಕೂಡಾ ಈ ಸೆನ್ಸರ್ ಬಳಸುವಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ಎಕ್ಸೆಸ್ ಮತ್ತು ಡಾಟಾ ವಿಷುವಲೈಜೆಶನ್ ಔದ್ಯೋಗಿಕ ಪೀಸೀ ಅಥವಾ ಮಶಿನ್ ಕಂಟ್ರೋಲ್ ಪ್ಯಾನೆಲ್‌ನಂತಹ ಒಂದು ವಿಂಡೊಸ್‌ಗೆ ಸಂಬಂಧಪಟ್ಟ ಪ್ರಣಾಳಿಕೆಯಿಂದ ಇಥರ್‌ನೆಟ್ ಕನೆಕ್ಷನ್ ಮೂಲಕ ಮಾಡಲಾಗುತ್ತದೆ, ಆದರೆ ಸೀಮೆನ್‌ಸ್‌ ಟಿಸಿಯೂ (ಲಿನಕ್‌ಸ್‌) ಕಂಟ್ರೋಲ್‌ನಿಂದ ನೇರವಾಗಿ ಮಾಡುವುದು ಸಾಧ್ಯವಾಗಿದೆ.
 
ಲಾಭಗಳು
 
• ಆರ್ಟಿಸ್ ಮಶಿನ್ ರಕ್ಷಿಸುವ ಪ್ರಣಾಳಿಕೆ (GEMCMS02) ಓವರ್‌ಲೋಡ್, ಘರ್ಷಣೆ ಮತ್ತು ಸ್ವಯಂಚಾಲಿತ ಮತ್ತು ಮ್ಯಾನ್ಯುವಲ್ ಆಪರೇಶನ್‌ನಲ್ಲಿ ಸಂಭವಿಸುವ ಅಪಘಾತಗಳನ್ನು ಸೂಕ್ತವಾಗಿ ಕಡಿಮೆ ವೇಗದಿಂದ ಹೆಚ್ಚು ವೇಗವಿರುವ ಅಕ್ಷದ ವೇಗದ ತನಕವೂ ಹುಡುಕುತ್ತದೆ.
• ಪ್ರಕ್ರಿಯೆಯ ವೇಗ 1 ಮಿಲಿ ಸೆಕಂಡುಗಳಿಗಿಂತ ಕಡಿಮೆ ಇರುತ್ತದೆ.
• ಮಶಿನ್ ಆನ್ ಇರುವಾಗ ಈ ಪ್ರಣಾಳಿಕೆಯು ನಿರಂತರವಾಗಿ ನಡೆಯುತ್ತದೆ ಮತ್ತು ರೆಕಾರ್ಡರ್‌ನಲ್ಲಿ ಎಲ್ಲ ವಿವರಗಳನ್ನು ಒಟ್ಟು ಮಾಡುತ್ತದೆ.
• ಪೋರ್ಸ್ ಸೆನ್ಸರ್ ಮಶಿನ್‌ನ ರಚನೆಯಲ್ಲಿರುವ ಸರ್ಫೇಸ್‌ನ ಬದಲಾವಣೆಗಳ ಮಾಪನವನ್ನು ಮಾಡಲಾಗುತ್ತದೆ.
 
ಟೂಲ್ ಮತ್ತು ಪ್ರಕ್ರಿಯೆಯ ನಿಯಂತ್ರಣೆ
 
ARTIS ಟೂಲ್ ಮತ್ತು ನಿಯಂತ್ರಿಸುವ ಪ್ರಣಾಳಿಕೆಯಲ್ಲಿ ಸಂಪೂರ್ಣವಾದ ಯಂತ್ರಣೆಯ ಪ್ರಕ್ರಿಯೆಯಲ್ಲಿ ಟೂಲ್‌ಗಳ ಸ್ಥಿತಿಯ ಹಿನ್ನೆಲೆಯನ್ನು ನೋಡಲಾಗುತ್ತದೆ. ಈ ಪ್ರಣಾಳಿಕೆಗೆ ವೈಯಕ್ತಿಕವಾದ ಅಡ್ಜೆಸ್ಟೇಬಲ್ ಸಿಗ್ನಲ್‌ನ ಮಿತಿಯನ್ನು ನೀಡಿ ಕಟಿಂಗ್ ಎಡ್ಜ್‌‌ನ ಸವೆತ ಮತ್ತು ಟೂಲ್‌ಗಳು ತುಂಡಾಗುವಂತಹ ಅಂಶಗಳನ್ನು ಹುಡುಕಲಾಗುತ್ತದೆ.
 
ಲಾಭಗಳು
 
• ಟೂಲ್, ಕಾರ್ಯವಸ್ತು ಮತ್ತು ಮಶಿನ್‌ಗೋಸ್ಕರ ಯಂತ್ರಣೆಯಲ್ಲಿ ಶಾಶ್ವತವಾದ ರಕ್ಷಣೆ
• ದೀರ್ಘ ಕಾಲಾವಧಿಯ ಟೂಲ್‌ನ ಬಾಳಿಕೆ
• ವಿಭಿನ್ನ ಟೂಲ್‌ಗೋಸ್ಕರ ಪ್ಯಾರಾಮೀಟರ್ ಅಥವಾ ಸ್ವಯಂಚಾಲಿತ ಸೆಟಿಂಗ್ ಸಾಧ್ಯವಾಗಿದೆ
 
ಮಶಿನ್‌ನ ನಿಯಂತ್ರಿಸುವುದು
 
ಇತ್ತಿಚೇಗೆ ಕೆಲಸ ಮಾಡುತ್ತಿರುವಾಗ ಸ್ಪಿಂಡಲ್‌ನ ವೇಗವು ತುಂಬಾ ಹೆಚ್ಚಾಗಿರುತ್ತದೆ. ಯಂತ್ರಣೆಯ ಪ್ರಕ್ರಿಯೆಯು ತುಂಬಾ ಸಲ ಬೃಹತ್ ಪ್ರಮಾಣದಲ್ಲಿ ಕಂಪನಗಳನ್ನು ಉಂಟು ಮಾಡುತ್ತದೆ. ಇದರಿಂದಾಗಿ ಉತ್ಪಾದನೆಗಳ ಗುಣಮಟ್ಟವು ಹಾಳಾಗುತ್ತದೆ, ಹಾಗೆಯೇ ಸ್ಟಿಂಡಲ್ ಮತ್ತು ಅಕ್ಷದ ಬೇರಿಂಗ್‌ನಲ್ಲಿ ನಷ್ಟವುಂಟಾಗುತ್ತದೆ.
 
ಮಶಿನ್ ಮತ್ತು ಸ್ಪಿಂಡಲ್‌ನ ಕಂಪನಗಳನ್ನು ನಿಯಂತ್ರಿಸಲು, ಖರ್ಚು ಕಡಿಮೆ ಮಾಡಲು ಮತ್ತು ಗುಣಮಟ್ಟದಲ್ಲಿ ಸುಧಾರಣೆಯನ್ನು ಮಾಡಲು ಬೇರಿಂಗ್‌ನಲ್ಲಾಗುವ ನಷ್ಟವನ್ನು ತಕ್ಷಣ ಹುಡುಕುವುದು ಅತ್ಯಾವಶ್ಯಕವಾಗಿದೆ. ಸೆನ್ಸರ್ ಸಿಗ್ನಲ್‌ನ (ಕಂಪನ, ಉಷ್ಣಾoಶ ಮತ್ತು ಗುರುತ್ವಾಕರ್ಷಣೆ) ನಿರ್ದೋಷವಾದ ಮೌಲ್ಯಮಾಪನ ಮಾಡಿ ಇದನ್ನು ಸಾಧ್ಯಪಡಿಸಬಹುದು. ಅಲಾರ್ಮ್‌ನ ಮಿತಿಯನ್ನು ಸ್ವತಂತ್ರವಾಗಿ ಸೆಟ್ ಮಾಡಬಹುದು ಮತ್ತು ಮಾಪನ ಮಾಡಿರುವ ಮೌಲ್ಯವು ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಆದರೂ, ತಕ್ಷಣವೇ ಸೂಕ್ತವಾದ ಪ್ರತಿಕಾರವನ್ನು ನೀಡಬಹುದು.
 
ARTIS ನಿಯಂತ್ರಣೆಯ ಪ್ರಣಾಳಿಕೆ, ಟೂಲ್ ಬದಲಾಯಿಸಿದ ನಂತರ ಮತ್ತು ಯಂತ್ರಣೆಯ ಪ್ರಕ್ರಿಯೆಯಲ್ಲಿ ಮೊದಲಾಗಿ ಪ್ರಾರಂಭದ ಹಂತದಲ್ಲಿಯೇ ಮಶಿನ್‌ನ ಸ್ಥಿತಿಯಲ್ಲಿ ಅಡಚಣೆಗಳನ್ನು ತೋರಿಸುತ್ತದೆ. ಟೂಲ್ ಬದಲಾಯಿಸುತ್ತಿರುವಾಗ ಯಾವುದೇ ಒಂದು ಚಿಪ್ ಟೂಲ್ ಹೋಲ್ಡರ್ ಮತ್ತು ಪ್ರಮುಖವಾದ ಸ್ಪಿಂಡಲ್ ಇವೆರಡರ ನಡುವೆ ಇರುವ ಜಾಗದಲ್ಲಿ ಪ್ರವೇಶಿಸಬಲ್ಲದು. ಒಂದು ವೇಳೆ ಈ ಪರಿಸ್ಥಿತಿಯು ಉದ್ಭವಿಸಿದಲ್ಲಿ ಅನೇಕ ಬಾರಿ ಯಂತ್ರಣೆ ಮಾಡಬೇಕಾದ ಕಾರ್ಯವಸ್ತುವಿನ ಗುಣಮಟ್ಟದಲ್ಲಿ ಪರಿಣಾಮವನ್ನುಂಟು ಮಾಡುತ್ತದೆ. ತುಂಬಾ ಸಲ ಚಿಪ್ ಒಳಗೆ ಸಿಲುಕಿದ ಪರಿಣಾಮದಿಂದಾಗಿ ಸಂಪೂರ್ಣ ಯಂತ್ರಣೆಯ ಕೊನೆಗೆ, ಕಾರ್ಯವಸ್ತುವಿನ ತಪಾಸಣೆಯನ್ನು ಮಾಡುವಾಗಲೇ ಗಮನಿಸಲ್ಪಡುತ್ತದೆ. ARTIS ಮಶಿನ್ ನಿಯಂತ್ರಿಸುವ ಪ್ರಣಾಳಿಕೆಯ ಮೂಲಕ ತಕ್ಷಣವೇ ಹುಡುಕುವುದು, ಅಂದರೆ ಅದರ ನಂತರದ ಎಲ್ಲ ಅನಾವಶ್ಯಕವಾದ ಕಿರಿಕಿರಿಯನ್ನು ತಡೆಯುವುದು ಮತ್ತು ಹೆಚ್ಚು ಸಮಯದ ಉಳಿತಾಯ ಮಾಡುವುದು.
 
ಕೇಸ್ ಸ್ಟಡಿ
 
ಮಹಾರಾಷ್ಟ್ರದ, ಪುಣೆಯಲ್ಲಿರುವ ಭೋಸರಿ ಎಂಬಲ್ಲಿರುವ ಮಾಧವ್ ಟೂಲ್ಸ್‌ ಎಂಬ ಕಂಪನಿಯಲ್ಲಿ ಮಿಲ್ಲಿಂಗ್ ಪ್ರಕ್ರಿಯೆಗೋಸ್ಕರ ಮಾರ್ಪಾಸ್ ಕಂಪನಿಯ ಟೂಲ್ ಪ್ರೋಬ್ ಮತ್ತು ಜಾಬ್ ಪ್ರೋಬ್ ಬಳಸಲಾಗುತ್ತದೆ. ಈ ಕಂಪನಿಯಲ್ಲಿ ಪ್ರಮುಖವಾಗಿ ಕಟಿಂಗ್ ಟೂಲ್‌ನ ಕೆಲಸಗಳನ್ನು ಮಾಡಲಾಗುತ್ತದೆ. ಕಟರ್ ಬಾಡಿ, ಪಿ.ಸಿ.ಡಿ., ಬ್ರೆಸ್ ಕಟರ್ ತಯಾರಿಸುತ್ತಿರುವ ಕುರಿತಾದ ಮಾಹಿತಿಯನ್ನು ಕಂಪನಿಯ ನಿರ್ದೇಶಕರಾದ ಶ್ರೀ. ಜಯಂತ ಪಾಟೀಲ್ ಇವರು ನೀಡಿದರು. ಇನ್ಸರ್ಟ್‌ನ ಪಾಕೆಟಿಂಗ್‌ಗೋಸ್ಕರ ನಾವು ಮುಖ್ಯವಾಗಿ ಟೂಲ್ ಪ್ರೋಬ್ ಮತ್ತು ಜಾಬ್ ಪ್ರೋಬ್ ಬಳಸುತ್ತೇವೆ. ಪಾಕೇಟಿಂಗ್ ಮಾಡುತ್ತಿರುವಾಗ ಎಲ್ಲಕ್ಕಿಂತಲೂ ಮೊದಲಾಗಿ ಜಾಬ್ ಪ್ರೋಬ್‌ನಿಂದ ಕಾರ್ಯವಸ್ತುವಿನ ಆಫ್‌ಸೆಟ್ ಮಾಡಲಾಗುತ್ತದೆ. ಅದರ ನಂತರ ಕ್ಯಾಡ್- ಕ್ಯಾಮ್‌ನಿಂದ ಔಟ್‌ಪುಟ್ ಪಡೆದು ಪ್ರೊಗ್ರಾಮ್ ವಿ.ಎಮ್.ಸಿ.ಯಲ್ಲಿ ನಡೆಸಲಾಗುತ್ತದೆ. ಜಾಬ್ ಪ್ರೋಬ್‌ನ ಸಹಾಯದಿಂದ ಕಾರ್ಯವಸ್ತುವಿನ ಲಂಬ ಕೋನದಲ್ಲಿ ಆಗುವ ಪಾಕೇಟ್‌ನ (ರೈಟ್ ಅ್ಯಂಗಲ್ ಪಾಕೇಟ್), ಇನ್ಸರ್ಟ್ ಅ್ಯಂಗಲ್‌ನಲ್ಲಿಯೇ ಪ್ಯಾಕೇಟ್ ತಯಾರಿಸಲಾಗಿದೆಯೇ ಇಲ್ಲವೇ, ಅದರ ಆಳ ಇತ್ಯಾಾದಿ ಅಂಶಗಳನ್ನು ಯಂತ್ರಣೆಯಾದ ನಂತರ ಪರಿಶೀಲಿಸಲಾಗುತ್ತದೆ. ಟೂಲ್ ಪ್ರೋಬ್‌ನಲ್ಲಿ ಯಂತ್ರಣೆಯ ಪ್ರಕ್ರಿಯೆಯ ಮೊದಲು ಟೂಲ್‌ನ Z ಅಕ್ಷ, ವ್ಯಾಸ, ಟೂಲ್‌ನ ಹೊರ ವ್ಯಾಸವನ್ನು ಪರಿಶೀಲಿಸಲಾಗುತ್ತದೆ. ಮಾರ್ಪಾಸ್‌ನ ಪ್ರಣಾಳಿಕೆಯ ಮೂಲಕ
 
ಟೂಲ್‌ನ ವ್ಯಾಸದ ತಪಾಸಣೆಯನ್ನು ನಿರ್ದೋಷವಾಗಿ ಮಾಡಲಾಗುತ್ತದೆ. ಇದರಲ್ಲಿ ವರ್ಕ್ ಆಫ್‌ಸೆಟ್ ಕೂಡಾ ಉತ್ತಮವಾಗಿ ಪಡೆಯಲಾಗುತ್ತದೆ. ಇದರ ಹೊರತಾಗಿ ಈ ಸಲಕರಣೆಗಳ ರಿಪಿಟ್ಯಾಬಿಲಿಟಿ ತುಂಬಾ ಒಳ್ಳೆಯದಾಗಿರುತ್ತದೆ. ಕಳೆದ ಆರು ತಿಂಗಳಿಂದ ನಾವು ಮಾರ್ಪಾಸ್ ಕಂಪನಿಯ ಪ್ರೋಬ್ ಬಳಸುತ್ತಿದ್ದೇವೆ. ಹಳೆಯ ಪದ್ಧತಿಯಲ್ಲಿ ನಾವು ವರ್ಕ್ ಆಫ್‌ಸೆಟ್ ಮತ್ತು ಟೂಲ್ ಆಫ್‌ಸೆಟ್ ಮ್ಯಾನ್ಯುವಲಿ ಪಡೆಯುತ್ತಿದ್ದೆವು. ಇದರಿಂದಾಗಿ ಸೈಕಲ್ ಟೈಮ್ ಹೆಚ್ಚು ತಗಲುತ್ತಿತ್ತು. ಆದರೆ ಹೊಸ ಪ್ರೋಬ್‌ನಿಂದಾಗಿ ವರ್ಕ್ ಆಫ್‌ಸೆಟ್ ಮತ್ತು ಟೂಲ್ ಆಫ್‌ಸೆಟ್ ಪಡೆಯಲು ಕೇವಲ ಎರಡು ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ,’’ ಎಂಬ ಮಾಹಿತಿಯನ್ನು ನೀಡಿದರು.
 
 
 

shridhar_1  H x 
ಶ್ರೀಧರ ಜೋಶಿ
ಶಾಖಾ ವ್ಯವಸ್ಥಾಪಕರು,
ಮಾರ್ಪಾಸ್ ಇಂಡಿಯಾ ಪ್ರೈ. ಲಿ. 
9921912025
 
ಶ್ರೀಧರ ಜೋಶಿ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಮಾರ್ಪಾಸ್ ಇಂಡಿಯಾ ಪ್ರೈ. ಲಿ. ಈ ಕಂಪನಿಯಲ್ಲಿ ಪಶ್ಚಿಮ ವಿಭಾಗದ ಶಾಖಾ ವ್ಯವಸ್ಥಾಪಕರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರು 24 ವರ್ಷಗಳಷ್ಟು ದೀರ್ಘ ಕಾಲಾವಧಿಯ ಅನುಭವಿಯಾಗಿದ್ದಾರೆ.
 
 
@@AUTHORINFO_V1@@