ವೇದ ಇಂಡಸ್ಟ್ರೀಸ್ ಎಂಬ ನಮ್ಮ ಕಾರ್ಖಾನೆಯಲ್ಲಿ ನಾವು ವಿವಿಧ ಯಂತ್ರಭಾಗಗಳನ್ನು ಮಾಡುತ್ತಿದ್ದೇವೆ. ಎಲ್ಲ ಯಂತ್ರಭಾಗಗಳ ಕಾಸ್ಟಿಂಗ್ ನಮ್ಮ ಫೌಂಡ್ರಿಯಲ್ಲಿಯೇ ತಯಾರಾಗುತ್ತವೆ. ಅದಕ್ಕೋಸ್ಕರ ಎಲ್ಲ ರೀತಿಯ ಸೌಲಭ್ಯಗಳಿಂದ ಕೂಡಿರುವ ಸೆಟಪ್ ನಮ್ಮಲ್ಲಿದೆ. ಕೆಲಸದ ಒತ್ತಡ ಹೆಚ್ಚಾದಾಗ ಯಂತ್ರಭಾಗಗಳ ಕೆಲವಾರು ಯಂತ್ರಣೆಯನ್ನು ಇನ್ನಿತರ ಫೌಂಡ್ರಿಗಳಿಂದ ಮಾಡಿಸಿಕೊಳ್ಳುವ ಪರಿಸ್ಥಿತಿಯೂ ಉಂಟಾಗುತ್ತದೆ. ಹೊರಗಿನಿಂದ ಯಂತ್ರಣೆಯನ್ನು ಮಾಡಿಕೊಂಡಿದ್ದರಿಂದ ತುಂಬಾ ಸಲ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಒಂದೊಂದು ಸಲ ಯಂತ್ರಭಾಗಗಳು ಸೂಕ್ತವಾದ ವೇಳೆಯಲ್ಲಿ ಸಿಗುತ್ತಿರಲ್ಲಿಲ್ಲ. ಕೆಲವೊಮ್ಮೆ ಗುಣಮಟ್ಟದ ಕುರಿತಾದ ತಕರಾರು ಗ್ರಾಹಕರಿಂದ ಬರುತ್ತಿರುವುದೂ ನಮ್ಮ ಗಮನಕ್ಕೆ ಬಂತು. ಇದರಿಂದಾಗಿ ನಾವು ಕಾರ್ಖಾನೆಯ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆವು. ಸದ್ಯಕ್ಕೆ ದಾತೆ ಗ್ರೂಪ್ ಪ್ರಮುಖವಾದ ಕಂಪನಿಯಲ್ಲಿ ವೇದ ಇಂಡಸ್ಟ್ರೀಸ್, ರಾಜರಾಜೇಶ್ವರಿ ಫೌಂಡರ್ಸ್ ಮತ್ತು ಊರ್ಜಾ ಇಂಡಸ್ಟ್ರೀಸ್ ಇಂತಹ 3 ಕಂಪನಿಗಳಲ್ಲಿ ನಮ್ಮ ಕೆಲಸದ ಒತ್ತಡಕ್ಕೆ ಅನುಸಾರವಾಗಿ ವಿಭಜನೆಯನ್ನು ಮಾಡಿರುತ್ತೇವೆ. ಕೆಲಸದ ಯೋಗ್ಯವಾದ ವಿಭಜನೆಯನ್ನು ಮಾಡಿದ್ದರಿಂದ ಕೆಲಸದಲ್ಲಿ ಶಿಸ್ತು ಉಂಟಾಯಿತು, ಅಲ್ಲದೇ ನಿಪುಣರಾದ ಕೆಲಸಗಾರರೂ ಉಪಲಬ್ಧವಾದರಿಂದ ಉತ್ಪಾದನೆಯಲ್ಲಿ ಉಚ್ಚಮಟ್ಟ ಪರಿಣಾಮಗಳೂ ಕಂಡುಬಂದವು.
ಸದ್ಯಕ್ಕೆ ವೇದ ಇಂಡಸ್ಟ್ರೀಸ್‌ನಲ್ಲಿ ಗಿಯರ್ ಟ್ರೇನ್ ಹೌಸಿಂಗ್ ಯಂತ್ರಭಾಗಗಳ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಈ ಯಂತ್ರಭಾಗಗಳು 600 ಮಿ.ಮೀ. ಉದ್ದ ಮತ್ತು 450 ಮಿ.ಮೀ. ಅಗಲವಿದ್ದು, ಅದರಲ್ಲಿ ಒಂದು ಆಯಿಲ್ ಗ್ಯಾಲರಿ ಇದೆ. ಈ ಯಂತ್ರಭಾಗಗಳಲ್ಲಿ ಮೊದಲ ಮತ್ತು ಎರಡನೇಯದಾದ ಎರಡು ಸೆಟಪ್‌ಗಳು ಎರಡು ಬದಿಗಳಲ್ಲಿ ಅಂದಾಜು 5400 ಮಿ.ಮೀ.ನಷ್ಟು ಮಿಲ್ಲಿಂಗ್ ಮಾಡಬೇಕಾಗಿದೆ.
ಪ್ರಕ್ರಿಯೆ
ಈ ಯಂತ್ರಭಾಗಗಳ ಕಾಸ್ಟಿಂಗ್ ನಮ್ಮ ಕಂಪನಿಯಲ್ಲಿಯೇ ಮಾಡಲಾಯಿತು. ಈ ಯಂತ್ರಭಾಗಗಳಲ್ಲಿ ಸಾಮಾನ್ಯವಾಗಿ OP 10 ಕ್ಕೆ 3.5 ಮಿ.ಮೀ. ಮಟೀರಿಯಲ್ ತೆಗೆಯಬೇಕಾಗುತ್ತದೆ. (ಸ್ಟಾಕ್ ರಿಮೂವಲ್). ಈ ಯಂತ್ರಭಾಗಗಳಿಗೆ ಮಿಲ್ಲಿಂಗ್ ಪ್ರಕ್ರಿಯೆಯನ್ನು ನಾವು ವಿ.ಎಮ್.ಸಿ.ಯಲ್ಲಿ 2 ಪ್ಯಾಲೇಟ್ ಬಳಸಿ ಮಾಡುತ್ತೇವೆ.
ಸಮಸ್ಯೆ 1
ಪ್ರಾರಂಭದಲ್ಲಿ ಈ ಯಂತ್ರಣೆಯನ್ನು ಮಾಡುವಾಗ ಅಪೇಕ್ಷಿಸಿರುವ ಫ್ಲ್ಯಾಟ್‌ನೆಸ್ (ಸಮತಟ್ಟು) ಲಭಿಸುತ್ತಿರಲಿಲ್ಲ. ಯಂತ್ರಭಾಗಗಳ ಕ್ಲ್ಯಾOಪಿಂಗ್ ಮಾಡುತ್ತಿರುವಾಗ ಸಮಸ್ಯೆಗಳು ಉಂಟಾಗುತ್ತಿದ್ದವು. ಕ್ಲ್ಯಾOಪಿಂಗ್‌ನ ಒತ್ತಡವು ಹೆಚ್ಚು ಇರುವುದು ಗಮನಕ್ಕೆ ಬಂದ ನಂತರ ಅದನ್ನು ಕಡಿಮೆ ಮಾಡಿ ಪ್ಲ್ಯಾಟ್‌ನೆಸ್ ಲಭಿಸುತ್ತದೆ, ಎಂಬುದನ್ನು ದೃಢೀಕರಿಸಿದೆವು. ಇದರಿಂದಾಗಿ ಯಂತ್ರಭಾಗಗಳು ಬಗ್ಗುವ ಸಮಸ್ಯೆಯು ದೂರವಾಯಿತು.
ಸಮಸ್ಯೆ 2
ಪ್ರಾರಂಭದಲ್ಲಿ ಪ್ರಕ್ರಿಯೆಯನ್ನು ನಿರ್ಧರಿಸುವಾಗ ಕೇನಾಮೆಟಲ್‌ನ 80 ಮಿ.ಮೀ. ವ್ಯಾಸದ ಕಟರ್ ಪಡೆಯಲಾಯಿತು. ಅದರಲ್ಲಿ ಕಾರ್ಬೈಡ್‌ನ ಇನ್ಸರ್ಟ್ ಬಳಸುತ್ತಿದ್ದೆವು. ಈ ಕಟರ್‌ನಲ್ಲಿ 7 ಇನ್ಸರ್ಚ್‌ಗಳು ಅಳವಡಿಸಲ್ಪಟ್ಟಿರುತ್ತವೆ. ಅದರ ಬೆಲೆ ಪ್ರತಿಯೊಂದು ಇನ್ಸರ್ಟ್‌ಗೆ 750 ರೂಪಾಯಿಗಳಷ್ಟಿತ್ತು. ಈ ಯಂತ್ರಭಾಗಗಳಲ್ಲಿ ಒಟ್ಟು ಯಂತ್ರಣೆಯ ಕ್ಷೇತ್ರವು ಹೆಚ್ಚು ಇದ್ದಿದ್ದರಿಂದ 4 ರಿಂದ 5 ಯಂತ್ರಭಾಗಗಳ ಯಂತ್ರಣೆಯಾದ ನಂತರ ಕೆಲವೊಮ್ಮೆ ಇನ್ಸರ್ಟ್‌ಗಳು ತುಂಡಾಗುತ್ತಿದ್ದವು, ಅಲ್ಲದೇ ಹಲವಾರು ಸಲ ಚಿಪ್ ಆಫ್ ಆಗುತ್ತಿತ್ತು. ಇನ್ಸರ್ಟ್‌ಗೋಸ್ಕರ ನೀಡಿರುವ ಬೆಲೆ ಮತ್ತು ಪ್ರತಿಯೊಂದು ಯಂತ್ರಭಾಗಳಿಗೆ ತಗಲುವ ಖರ್ಚು (CPC) ಇವೆರಡರಲ್ಲಿ ಯಾವುದೇ ರೀತಿಯ ಹೊಂದಾಣಿಕೆಯು ಕಂಡುಬರುತ್ತಿರಲಿಲ್ಲ. ಟೂಲಿಂಗ್‌ನ ಖರ್ಚು ತುಂಬಾ ಹೆಚ್ಚಿತ್ತು.
ಪ್ರತಿ ತಿಂಗಳು 2000 ಯಂತ್ರಭಾಗಗಳ ಉತ್ಪಾದನೆಯನ್ನು ಮಾಡುವ ಗುರಿಯನ್ನು ನಾವು ನಿರ್ಧರಿಸಿದ್ದೆವು. ಆದರೆ ನಮಗೆ ಈ ಗುರಿಯನ್ನು ಸಾಧಿಸುವುದು ಸಾಧ್ಯವಿರಲಿಲ್ಲ. ಪ್ರತಿದಿನ 30, ಪ್ರತಿತಿಂಗಳು ಸುಮಾರು 900 ಯಂತ್ರಭಾಗಗಳಷ್ಟು ಸಂಖ್ಯೆಯ ತನಕ ತಲುಪುವುದೂ ನಮಗೆ ಸಾಧ್ಯವಾಯಿತು. ನಮ್ಮಲ್ಲಿರುವ ಎಚ್.ಎಮ್.ಸಿ.ಯ ಸಾಮರ್ಥ್ಯವು ಸಾಕಷ್ಟಿತ್ತು. ಆದರೆ 2000 ಈ ಸಂಖ್ಯೆಯ ಕಡೆಗೆ ತಲುಪುವುದು ನಮಗೆ ಸಾಧ್ಯವೇ ಇರಲಿಲ್ಲ.
ಎರಡು ಬದಿಗಳಲ್ಲಿ ರಫಿಂಗ್‌ಗೋಸ್ಕರ 10 ನಿಮಿಷಗಳ ಸಮಯವು ಬೇಕಾಗುತ್ತಿತ್ತು. ನಿರ್ಧರಿಸಿದ ಮಿತಿಗಿಂತ ಯಾವುದೇ ಯಂತ್ರಭಾಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದಲ್ಲಿ ಇನ್ಸರ್ಟ್ ತುಂಡಾಗುತ್ತಿತ್ತು. ಇನ್ಸರ್ಟ್ ತುಂಡಾಗಿದ್ದರಿಂದ ಯಂತ್ರಭಾಗಗಳ ಸರ್ಫೇಸ್ ಹಾಳಾಗಿ ಯಂತ್ರಭಾಗಗಳು ರಿಜೆಕ್‌ಟ್ ಆಗುತ್ತಿದ್ದವು. ಇದೇ ಪರಿಸ್ಥಿತಿಯಲ್ಲಿ ನಾವು ಕೆಲವು ದಿನಗಳನ್ನು ಕಳೆದೆವು. ಆದರೆ ಇನ್ಸರ್ಟ್‌ಗೆ ಯಾವುದಾದರೂ ಪರ್ಯಾಯವನ್ನು ಹುಡುಕಲೇ ಬೇಕು, ಎಂಬುದರ ಕುರಿತು ವಿಚಾರವನ್ನು ಮಾಡಲಾರಂಭಿಸಿದೆವು, ಇದರ ಕುರಿತು ನಮ್ಮೆಲ್ಲರ ವಿಚಾರವು ಒಂದೇ ರೀತಿಯಾಗಿ ಕಂಡುಬಂತು.
ಉಪಾಯಗಳು
ನಾವು ಟೂಲ್ ಉತ್ಪಾದಕರಿಗೆ ನಮ್ಮ ಸಮಸ್ಯೆಗಳೊಂದಿಗೆ ಅಪೇಕ್ಷಿಸಿರುವ ಸೈಕಲ್ ಟೈಮ್ ಕೂಡಾ ಅವರಿಗೆ ತಿಳಿಸಿದೆವು. ಸಂಶೋಧನೆಯ ನಂತರ ಸಿರ್ಯಾಮಿಕ್ ಇನ್ಸರ್ಟ್ ಎಂಬ ಒಳ್ಳೆಯ ಪರ್ಯಾಯವು ನಮಗೆ ಉಪಲಬ್ಧವಾಯಿತು. ಇದಕ್ಕೋಸ್ಕರ ನಾವು ಸಿರ್ಯಾಮಿಕ್ ಈ ಕಲ್ಪನೆಯನ್ನು ಅರಿತುಕೊಂಡೆವು. ಇದಕ್ಕೋಸ್ಕರ ಯಾವ ರೀತಿಯನ್ನು ಬಳಸಬೇಕು, ವೆಟ್ ಅಥವಾ ಡ್ರೈ ಮಿಲ್ಲಿಂಗ್ ಮಾಡುವುದು, ಅದರ ಬೆಲೆಯು ಎಷ್ಟಿರಬಹುದು, CPC ಏನಿರಬಹುದು, ಎಂಬಿತ್ಯಾದಿಗಳ ಕುರಿತು ಯಾವುದೇ ರೀತಿಯ ಅಂದಾಜು ಇರಲಿಲ್ಲ. ಸಿರಾಮಿಕ್ ಇನ್ಸರ್ಟ್ ಟಫ್ ಗ್ರೇಡ್‌ನಲ್ಲಿರುತ್ತವೆ. ಅದರ ಯಂತ್ರಣೆಯ ವೇಗವು (Vc) 700 ಮೀ./ ನಿಮಿಷಕ್ಕಿಂತ ಹೆಚ್ಚಿರುತ್ತದೆ, ಎಂಬ ಮಾಹಿತಿಯು ಸಿಕ್ಕಿದ ನಂತರ ನಾವು ಟೂಲ್ ಉತ್ಪಾದಕರಿಂದ ಅದರ ಕುರಿತಾದ ಪ್ರಪೋಸಲ್ ಪಡೆದೆವು. ಅದರ ನಂತರ ನಾವು ಅವರನ್ನು ಪರೀಕ್ಷಿಸಲು (ಟೆಸ್ಟಿಂಗ್) ಕರೆದೆವು. ಪರೀಕ್ಷೆಯನ್ನು ಮಾಡುತ್ತಿರುವಾಗ ಅವರು 3500ಆರ್.ಪಿ.ಎಮ್. ಮತ್ತು 3200 ಫೀಡ್ ಇರಿಸಲು ಹೇಳಿದರು. ಆಗ ನಮಗೆ ಆಶ್ಚರ್ಯವಾಯಿತು, ಇದರ ಕಾರಣ, ನಮ್ಮ ಪ್ರಸ್ತುತ ವೇಗವು 1116 ಆರ್.ಪಿ.ಎಮ್. ಇತ್ತು. ಯಂತ್ರಭಾಗಗಳು ಹಾರುತ್ತವೆಯೋ, ಅಥವಾ ಕಟರ್ ಹಾರುತ್ತದೆಯೋ ಎಂಬ ಭಯವಾಯಿತು. ಆದರೆ 100 N/m ಒತ್ತಡವಿರುವ ಫಿಕ್ಸ್ಚರ್ ಹಚ್ಚಿ ಯಂತ್ರಭಾಗಗಳ ಯಂತ್ರಣೆಯು ಸಹಜವಾಗಿ ಮತ್ತು ಸುಲಭವಾಗಿ ಆಯಿತು. ಒಂದುವರೆ ನಿಮಿಷದಲ್ಲಿ ಮಿಲ್ಲಿಂಗ್ ಪೂರ್ಣವಾಯಿತು. ಇದರಲ್ಲಿ ಸುಮಾರು 8.5 ನಿಮಿಷಗಳ ಉಳಿತಾಯವಾಯಿತು.
ಲಾಭಗಳು
• ಡ್ರೈ ಯಂತ್ರಣೆಯಾಗುವುದರಿಂದ
ಕೂಲಂಟ್‌ನ ಖರ್ಚು ಇಲ್ಲದಂತಾಯಿತು, ಕಾರಣ ಯಂತ್ರಣೆಯಾದ ನಂತರ ಕೇವಲ ಕಟರ್ ಮತ್ತು ಕಾರ್ಯವಸ್ತು ತಂಪಾಗಿಸಲು ಕೂಲಂಟ್ ಬಿಡಲಾಯಿತು.
• ಫಿನಿಶಿಂಗ್‌ಗೋಸ್ಕರ ಹಳೆಯ ಕಾರ್ಬೈಡ್ ಇನ್ಸರ್ಟ್ ಇಂದಿಗೂ ಬಳಸಲಾಗುತ್ತಿದೆ. ಮೊದಲನೆಯ ರೀತಿಯಲ್ಲಿ ಕಾರ್ಬೈಡ್ ಇನ್ಸರ್ಟ್ ಮೊದಲು ರಫಿಂಗ್‌ಗೋಸ್ಕರ ಬಳಸಲಾಗುತ್ತಿತ್ತು ಮತ್ತು ಅದರ ನಂತರ ಫಿನಿಶಿಂಗ್‌ಗೆ ಬಳಸುತ್ತಿದ್ದೆವು. ಹೊಸ ರೀತಿಯಲ್ಲಿ ಫಿನಿಶಿಂಗ್‌ಗೋಸ್ಕರ ಕಾರ್ಬೈಡ್ ಇನ್ಸರ್ಟ್ ಮತ್ತು ರಫಿಂಗ್‌ಗೋಸ್ಕರ ಸಿರಾಮಿಕ್ ಇನ್ಸರ್ಟ್ ಬಳಸುತ್ತಿದ್ದೇವೆ. ಇದರಿಂದಾಗಿ ಇನ್ಸರ್ಟ್‌ನ ಆಯುಷ್ಯವು ಹೆಚ್ಚಾಯಿತು.
• ಹೊಸ ರೀತಿಯಲ್ಲಿ ಅಪೇಕ್ಷಿಸಿರುವ ಫಿನಿಶ್ ಲಭಿಸಲಾರಂಭಿಸಿತು. ಮುಂದಿನ ಕೆಲವಾರು ದಿನಗಳಲ್ಲಿ CBN ಪರೀಕ್ಷೆಯೂ ನಡೆಯಲಿದೆ. ಅದರಲ್ಲಿ ಯಶಸ್ಸು ಲಭಿಸಿದಲ್ಲಿ ವೇಳೆಯಲ್ಲಿ ಇನ್ನಷ್ಟು ಉಳಿತಾಯವು ಆಗಬಹುದು, ಎಂಬ ವಿಶ್ವಾಸವು ನಮಗಿದೆ.
ಮಹೇಶ ದಾತೆ
ನಿರ್ದೇಶಕರು, ದಾತೆ ಗ್ರೂಪ್
9822091106
ಮಹೇಶ ದಾತೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದು, ‘ದಾತೆ ಗ್ರೂಪ್’ನ ನಿರ್ದೇಶಕರಾಗಿದ್ದಾರೆ. ಮಹಾರಾಷ್ಟ್ರದ ಇಚಲಕರಂಜಿ ಎಂಬಲ್ಲಿ ವಿವಿಧ ಔದ್ಯೋಗಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಫೌಂಡ್ರಿ ಮತ್ತು ಯಂತ್ರಣೆಯ ಕ್ಷೇತ್ರದಲ್ಲಿ ಅವರಿಗೆ 18 ವರ್ಷಗಳ ಅನುಭವವಿದೆ.