ಸ್ಕ್ವೇರ್ ಮಿಲ್ಲಿಂಗ್

@@NEWS_SUBHEADLINE_BLOCK@@

Udyam Prakashan Kannad    25-Feb-2020
Total Views |
 
 
ಆಟೊಮೊಟಿವ್, ಹೈಡ್ರಾಲಿಕ್, ಆಯಿಲ್, ಗ್ಯಾಸ್ ಮತ್ತು ಮಶಿನ್ ಟೂಲ್‌ಗಳ ಕೈಗಾರಿಕೋದ್ಯಮದಲ್ಲಿ ಸಾಮಗ್ರಿಗಳ ಉತ್ಪಾದಕರು (ಓರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನ್ಯುಫ್ಯಾಕ್ಚರರ್, ಓ.ಇ.ಎಮ್.) ಅವರಲ್ಲಿರುವ ಯಂತ್ರೋಪಕರಣಗಳ ಯಂತ್ರಣೆಯ ಕೆಲಸವನ್ನು ಹೊರಗಿನ ಪೂರೈಕೆದಾರರಿಂದ ಅಥವಾ ಮಾರಾಟಗಾರರಿಂದ ನೇರವಾಗಿ ತಯಾರಿಸಿಕೊಳ್ಳುವುದನ್ನು ಈ ಹಿಂದೆಯೇ ಪ್ರಾರಂಭಿಸಿದ್ದಾರೆ. ಮೂಲ ಉಪಕರಣೆಗಳ ಉತ್ಪಾದಕರು ಪೂರೈಕೆದಾರರ ಆವಶ್ಯಕತೆಗೆ ತಕ್ಕಂತೆ ಕಚ್ಚಾ ವಸ್ತುಗಳಿಂದ ಯಂತ್ರೋಪಕರಣಗಳನ್ನು ತಯಾರಿಸಿ ಅವುಗಳನ್ನು ಸಿದ್ಧಪಡಿಸುವ ತನಕದ ಎಲ್ಲಾ ರೀತಿಯ ಉತ್ಪಾದನೆಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ಯಂತ್ರೋಪಕರಣಗಳ ಎಲ್ಲ ಪ್ಯಾರಾಮೀಟರ್‌ಗಳನ್ನು ಪೂರ್ತಿಗೊಳಿಸುವುದು ಬಹು ದೊಡ್ಡ ಸವಾಲಾಗಿದೆ. ಅಲ್ಲದೇ ಈ ಉತ್ಪಾದನೆಗಳ ಪ್ರಮಾಣವು ಬೃಹತ್ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಈಗ ಆ ಪೂರೈಕೆದಾರರಿಗೆ ಮಶಿನ್, ಟೂಲಿಂಗ್, ಕೆಲಸಗಾರರು ಮತ್ತು ಇನ್ನಿತರ ಸೇವೆಗಳು, ಸೌಲಭ್ಯಗಳಿಗೆ ಬಂಡವಾಳವನ್ನು ಹೂಡಬೇಕಾಗುತ್ತದೆ. ಇದರ ಜೊತೆಗೆ ಬಂಡವಾಳದ ಮರು ಪಾವತಿ, ಖರ್ಚನ್ನು ಕಡಿಮೆ ಮಾಡುವುದು, ಉತ್ಪಾದಕತೆಯಲ್ಲಿ ಹೆಚ್ಚಳ, ಪ್ರಕ್ರಿಯೆಗೆ ಬೇಕಾಗುವಂತಹ ಸಮಯವನ್ನು ಹೇಗೆ ಕಡಿಮೆ ಮಾಡುವುದು ಮತ್ತು ಯಂತ್ರೋಪಕರಣಗಳ ಗುಣಮಟ್ಟವನ್ನು ಹೇಗೆ ಪಡೆಯುವುದು ಎಂಬಿತ್ಯಾದಿ ಸವಾಲುಗಳು ಒಂದರ ಹಿಂದೆ ಒಂದು ಎದುರಾಗುತ್ತವೆ.
 

1_1  H x W: 0 x 
 
ನಮ್ಮ ಗ್ರಾಹಕರೊಬ್ಬರು ಟ್ರ್ಯಾಕ್ಟರ್, ಆಯಿಲ್ ಮತ್ತು ಗ್ಯಾಸ್, ಆಟೊಮೋಟಿವ್ ಮತ್ತು ಅರ್ಥ್ ಮೂವಿಂಗ್‌ನಂತಹ ಬೃಹತ್ ಉಪಕರಣೆಗಳ ಯಂತ್ರಭಾಗಗಳನ್ನು ತಯಾರಿಸುತ್ತಾರೆ. ಕಚ್ಚಾ ವಸ್ತುಗಳ ಫೋರ್ಜಿಂಗ್‌ನಿಂದ ತಯಾರಿಸಿರುವ ಯಂತ್ರೋಪಕರಣಗಳ ತನಕ ಎಲ್ಲವನ್ನೂ ತಯಾರಿಸುವುದು ಅವರದ್ದೇ ಆದ ಜವಾಬ್ದಾರಿಯಾಗಿದೆ. ಅದಕ್ಕೋಸ್ಕರ ಅವರು 42CrMo4, 16MnCr5, ಅಲಾಯ್ ಸ್ಟೀಲ್, ಸ್ಟೇನ್‌ಲೆಸ್ ಸ್ಟೀಲ್‌ನಂತಹ (ಹೈಡ್ರಾಲಿಕ್ ಫಿಟಿಂಗ್‌ಗೋಸ್ಕರ) ಮಟೀರಿಯಲ್‌ಗಳನ್ನು ಬಳಸುತ್ತಾರೆ. ಅವರ ಉತ್ಪಾದನೆಗಳಲ್ಲಿ ಟ್ರ್ಯಾಕ್ಟರ್‌ನ ಸಬ್ ಅಸೆಂಬ್ಲಿಯಲ್ಲಿ 
 
ಟ್ರಾನ್‌ಸ್‌‌ಮಿಶನ್‌ನ ಕೆಲಸದಲ್ಲಿ ಬಳಸಲಾಗುವಂತಹ ಶಾಫ್ಟ್‌ ಒಂದು ಯಂತ್ರಭಾಗವಾಗಿದೆ. ಗ್ರಾಹಕರಿಂದ ಈ 
ಶಾಫ್ಟ್‌‌ಗೆ ತುಂಬಾ ಬೇಡಿಕೆ ಇತ್ತು ಮತ್ತು ಈಗ ಅದು ಹೆಚ್ಚಾಗಿ ಪ್ರತಿತಿಂಗಳಿಗೆ ಹತ್ತು ಪಟ್ಟು ಜಾಸ್ತಿಯಾಗಿದೆ. ಅವರ ಕಾರ್ಖಾನೆಯಲ್ಲಿ ಸದ್ಯದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ ಸಾಕಷ್ಟು ಉತ್ಪಾದನೆ ಮಾಡುವುದು ಅವರಿಗೆ ಸಾಧ್ಯವಿರಲಿಲ್ಲ. 
 

2_1  H x W: 0 x 
 
ಟೂಲ್‌ನ ಖರ್ಚುನ್ನು ಹೆಚ್ಚಿಸದೇ ಯಂತ್ರಣೆಗೆ ಬೇಕಾಗುವ ಸಮಯವನ್ನು ಕಡಿಮೆ ಮಾಡಿ ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಮಾಡುವ ಸವಾಲನ್ನು ಅವರು ನಮ್ಮ ಮುಂದಿಟ್ಟರು. ನಾವು ಅವರ ಉತ್ಪಾದನೆಯ ಪ್ರಕ್ರಿಯೆ ಸಂಪೂರ್ಣವಾದ ವಿವರಗಳನ್ನು ಪಡೆದೆವು. ನಾವು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆವು.
 
ಹಳೆಯ ಪ್ರಕ್ರಿಯೆ ಮತ್ತು ಕೆಲಸ ನಡೆಯುತ್ತಿದ್ದ ಪ್ರಕಾರದಲ್ಲಿ ಮತ್ತು ಶಾಫ್ಟ್‌‌ನಲ್ಲಿ ಟರ್ನಿಂಗ್, ಮಿಲ್ಲಿಂಗ್, ಹೀಟ್ ಟ್ರೀಟ್‌ಮೆಂಟ್, ಗ್ರೈಂಡಿಂಗ್, ಡಿಬರಿಂಗ್, ಕ್ಲೀನಿಂಗ್, ಮಾರ್ಕಿಂಗ್ ಮತ್ತು ಪ್ಯಾಕಿಂಗ್‌ನಂತಹ ಕೆಲಸಗಳು ನಡೆಯುತ್ತಿದ್ದವು. ಒಂದು ವೇಳೆ ಟೂಲಿಂಗ್ ಮತ್ತು ಯಂತ್ರಣೆಗೆ ಯೋಗ್ಯವಾದ ಪ್ಯಾರಾಮೀಟರ್ ಆಯ್ಕೆ ಮಾಡಿದಲ್ಲಿ ಮಿಲ್ಲಿಂಗ್ ಪ್ರಕ್ರಿಯೆಯಲ್ಲಿ ಖರ್ಚು ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತುಂಬಾ ಅವಕಾಶಗಳಿವೆ, ಎಂಬ ವಿಷಯವು ನಮ್ಮ ಗಮನಕ್ಕೆ ಬಂತು. ಸದ್ಯದ ಮಿಲ್ಲಿಂಗ್ ಪ್ರಕ್ರಿಯೆಯಲ್ಲಿ 4 ಮೂಲೆಗಳಿರುವ ಮಿಲ್ಲಿಂಗ್ ಇನ್ಸರ್ಟ್ ಬಳಸಲಾಗುತ್ತಿತ್ತು ಮತ್ತು ಪಾಸೆಸ್‌ಗಳ ಸಂಖ್ಯೆಯು ಹೆಚ್ಚಿತ್ತು. ಕೋಷ್ಟಕ ಕ್ರ. 1 ರಲ್ಲಿ ಹಳೆಯ ಪ್ರಕ್ರಿಯೆಯ ವಿವರಗಳನ್ನು ನೀಡಲಾಗಿದೆ. ಸದ್ಯದ ಉತ್ಪಾದನೆಯು 1500 ಇದ್ದು, ಅದನ್ನು ಹೆಚ್ಚಿಸಿ 4000 ತನಕ ಒಯ್ಯುವಂತಹ ಸವಾಲು ನಮ್ಮೆದುರಲ್ಲಿತ್ತು.
 
ನಾವು ಸೂಚಿಸಿರುವ ಉಪಾಯಗಳಲ್ಲಿ 8 ಮೂಲೆಗಳಿರುವ ಬೃಹದಾಕಾರದ ಮತ್ತು ಹೆಚ್ಚು ಆಳವಿರುವ ತುಂಡನ್ನು ಪಡೆಯುವಂತಹ ಸಾಮರ್ಥ್ಯವಿರುವ ಇನ್ಸರ್ಟ್ ಒಳಗೊಂಡಿತ್ತು. ಪಾಸ್‌ಗಳ ಸಂಖ್ಯೆಯು 5 ರಿಂದ 2 ರಷ್ಟು ಕಡಿಮೆ ಮಾಡುವ ಯೋಜನೆಯನ್ನೂ ನಾವು ಮಾಡಿದ್ದೆವು. ಅವರ ಮಶಿನ್‌ನ ಸಾಮರ್ಥ್ಯವು ತುಂಬಾ ಒಳ್ಳೆಯದಾಗಿತ್ತು ಮತ್ತು ಹೆಚ್ಚು ಆಳವಿರುವ ತುಂಡುಗಳನ್ನು ಮಾಡುತ್ತಿರುವಾಗ ಹೆಚ್ಚಾಗಿರುವ ಭಾರವನ್ನು ಸಹಿಸಲು ಸಾಮರ್ಥ್ಯವುಳ್ಳದ್ದಾಗಿದ್ದವು. ನಮ್ಮ ಇನ್ಸರ್ಟ್‌ನ ಕಟಿಂಗ್ ಎಡ್‌ಜ್‌‌ನಲ್ಲಿರುವ ದೊಡ್ಡ ಸುರುಳಿಯಾಕಾರದ (ಹೆಲಿಕಲ್ ರೇಕ್) ಅಸಾಧಾರಣವಾಗಿರುವ ರಚನೆಯಿಂದಾಗಿ ಕಟಿಂಗ್ ಶಕ್ತಿಯು (ಕಟಿಂಗ್ ಫೋರ್ಸ್) ಕಡಿಮೆಯಾಗುತ್ತದೆ. ಯಂತ್ರಣೆಗೆ ಬೇಕಾಗುವಂತಹ ಸಮಯವು ಹೆಚ್ಚು ಇತ್ತು, ಪಾಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದರಿಂದ ಆ ಸಮಯವನ್ನು (ಸೈಕಲ್ ಟೈಮ್) ಕಡಿಮೆ ಮಾಡುವುದೂ ಸಾಧ್ಯವಾಯಿತು.
 

3_1  H x W: 0 x 
 
ಸದ್ಯಕ್ಕಿರುವ ಸಮಸ್ಯೆಗಳು
• ಯಂತ್ರಣೆಯ ಕಾಲಾವಧಿ ಹೆಚ್ಚು (6 ನಿಮಿಷ 45 ಸೆಕಂಡುಗಳು)
• ಕಡಿಮೆ ಉತ್ಪಾದಕತೆ (1500/ ಪ್ರತಿ ತಿಂಗಳು)
• ಟೂಲ್‌ಗಳ ಆಯುಷ್ಯವು ಕಡಿಮೆ
(ಇನ್ಸರ್ಟ್‌ನ ಚಿಪಿಂಗ್)
• ಪ್ರತಿಯೊಂದು ಯಂತ್ರಭಾಗಗಳ ಖರ್ಚು ಕಡಿಮೆ
• ಸರ್ಫೇಸ್ ಫಿನಿಶ್ ಲಭಿಸುತ್ತಿರಲಿಲ್ಲ.
(3.2Ra)
 
ಹೊಸ ರೀತಿಯಲ್ಲಿ ನಾವು 8 ಮೂಲೆಗಳಿರುವ ಚೌಕಟ್ಟಾದ ಇನ್ಸರ್ಟ್ ಬಳಸುವುದನ್ನು ನಿರ್ಧರಿಸಿದೆವು. ಹೆಚ್ಚು ಆಳದ ತುಂಡನ್ನು ಪಡೆಯಲು ಈ ಇನ್ಸರ್ಟ್‌ನ ಸಾಮರ್ಥ್ಯವಿದೆ. ಈ ಇನ್ಸರ್ಟ್‌ನ ಕಟಿಂಗ್ ಎಡ್ಜ್‌‌ನಲ್ಲಿ ದೊಡ್ಡ ಸುರುಳಿಯಾಕಾರ ಇರುವುದರಿಂದ ಹೆಚ್ಚು ಆಳದಲ್ಲಿ ತುಂಡುಗಳನ್ನು ಮಾಡುತ್ತಿರುವಾಗ ಕಟಿಂಗ್ ಶಕ್ತಿಯು ಕಡಿಮೆ ಆಗುತ್ತದೆ. ಈ ಇನ್ಸರ್ಟ್ ಬಳಸಿ ಆವಶ್ಯಕತೆಗೆ ತಕ್ಕಂತೆ ಸರ್ಫೇಸ್ ಫಿನಿಶ್‌ಕೂಡಾ ಲಭಿಸುತ್ತದೆ. ನಾವು ಹೆಚ್ಚು ಆಳವಿರುವ ತುಂಡುಗಳನ್ನು ಮಾಡಿ ಪಾಸ್‌ಗಳ ಸಂಖ್ಯೆಯನ್ನು 5 ರಿಂದ 2 ರಷ್ಟು ಕಡಿಮೆ ಮಾಡಿದೆವು, ಅಲ್ಲದೇ ಫಿನಿಶ್ ಮಾಡುವಾಗ ಕಾಂಪೋನಂಟ್‌ನಲ್ಲಿ ಬೇಕಾಗುವ ಫಿನಿಶ್‌ಗೆ ಅದೇ ಸರ್ಫೇಸ್ ಸಾಧಿಸಿದೆವು.
ಟೂಲ್‌ಗಳ ವಿವರಗಳು ಮತ್ತು ವೈಶಿಷ್ಟ್ಯಗಳನ್ನು ಈ ಮುಂದೆ ನೀಡಲಾಗಿದೆ.
 
SNGU 120508 ಇನ್ಸರ್ಟ್‌ನವೈಶಿಷ್ಟ್ಯಗಳು ಮತ್ತು ಲಾಭ
 

4_1  H x W: 0 x 
 
1. 8 ಕಟಿಂಗ್ ಎಡ್ಜ್‌
2. ದೃಢವಾದ ಅ್ಯಂಗ್ಯುಲರ್ ಕ್ಲಾOಪಿಂಗ್
3. ಕಟಿಂಗ್ ಎಡ್ಜ್‌‌ನಲ್ಲಿ ದೊಡ್ಡ ಸುರುಳಿಯಾಗಿರುವ ಕೋನ (ಹೆಲಿಕ್‌ಸ್‌ ಅ್ಯಂಗಲ್) ಮತ್ತು ನ್ಯೂಟ್ರಲ್ ಇನ್ಸರ್ಟ್
4. ಕಟಿಂಗ್ ಶಕ್ತಿಯನ್ನು ಸಹಿಸಲು ದೃಢವಾದ ಕಟಿಂಗ್ ಎಡ್‌ಜ್‌
ಹೊಸ ರೀತಿಯನ್ನು ಪ್ರಾರಂಭಿಸಿದ ನಂತರ ಉಂಟಾಗಿರುವ ಲಾಭಗಳನ್ನು ಈ ಮುಂದೆ ನೀಡಲಾಗಿದೆ.
1. ಉತ್ಪಾದಕತೆಯು 160% ಹೆಚ್ಚಾಯಿತು.
2. ಪ್ರತಿಯೊಂದು ಯಂತ್ರಭಾಗದ ಖರ್ಚು 52% ದಷ್ಟು ಕಡಿಮೆಯಾಯಿತು.
3. ಟೂಲ್‌ಗಳ ಆಯುಷ್ಯ 120% ಹೆಚ್ಚಾಯಿತು.
4. ಸೈಕಲ್ ಟೈಮ್ 4 ನಿಮಿಷಗಳಷ್ಟು ಕಡಿಮೆಯಾಯಿತು.
5. 4 ಮೂಲೆಗಳ ಇನ್ಸರ್ಟ್‌ಗಳ ಬದಲಾಗಿ 8 ಮೂಲೆಗಳಿರುವ ಇನ್ಸರ್ಟ್‌ಗಳ ಲಾಭವಾಯಿತು.
6. ಒಂದೇ ಮಶಿನ್‌ನಲ್ಲಿ ಒಂದು ತಿಂಗಳಲ್ಲಿ ಸಹಜವಾಗಿ 4000 ಶಾಫ್ಟ್‌‌ಗಳ ಉತ್ಪಾದನೆಯು ಸಿಗಲಾರಂಭಿಸಿತು.
 
 

vijendra_1  H x 
ವಿಜೇಂದ್ರ ಪುರೋಹಿತ
ವ್ಯವಸ್ಥಾಪಕರು (ತಾಂತ್ರಿಕ ಸಹಾಯ), ಡ್ಯುರಾಕಾರ್ಬ್ ಇಂಡಿಯಾ 
9579352519
 
1995 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾದ ನಂತರ ವಿ. ವಿ. ಪುರೋಹಿತ್ ಇವರು ಆಪರೇಶನ್ ಮ್ಯಾನೆಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವೀಧರರಾದರು. ಅವರಿಗೆ ಮಶಿನ್ ಟೂಲ್, ಕಟಿಂಗ್ ಟೂಲ್ ಡಿಝೈನ್‌ನಲ್ಲಿ ಅಂದಾಜು 20 ವರ್ಷಗಳ ಅನುಭವವಿದೆ. ಈಗ ಶ್ರೀ. ಪುರೋಹಿತ ಅವರು ‘ಡ್ಯುರಾಕಾರ್ಬ್ ಇಂಡಿಯಾ’ ಈ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದಾರೆ.
 
 
@@AUTHORINFO_V1@@