ವರ್ಟಿಕಲ್ ಮಿಲ್ಲಿಂಗ್ ಮಶಿನ್‌ನಲ್ಲಿ ಸಮಸ್ಯೆ

@@NEWS_SUBHEADLINE_BLOCK@@

Udyam Prakashan Kannad    25-Feb-2020
Total Views |
ಒಂದು ಕಂಪನಿಯು 12 ವರ್ಷಗಳ ಹಿಂದೆ ಸಿಂಗಲ್ ಕಾಲಮ್ ಸಿ.ಎನ್.ಸಿ. ವರ್ಟಿಕಲ್ ಮಿಲ್ಲಿಂಗ್ ಮಶಿನ್ (ಚಿತ್ರ ಕ್ರ. 1) ಅಳವಡಿಸಿದ್ದರು. ಇದು ಸರಿಯಾಗಿ ನಡೆಯುತ್ತಿತ್ತು ಮತ್ತು ಅದರಲ್ಲಿ ಉಚ್ಚ ಗುಣಮಟ್ಟದ ಉತ್ಪಾದನೆಯೂ ಆಗುತ್ತಿತ್ತು. ಈ ಮಶಿನ್‌ನಲ್ಲಿ ಕ್ಯಾರೇಜ್‌ನ ಮೇಲ್ಭಾಗದಲ್ಲಿ ಚಟುವಟಿಕೆಗಳು ಸರಿಯಾಗಿ ಆಗದೇ ಇರುವ ಪರಿಸ್ಥಿತಿಯಾಯಿತು. ಡ್ರೈವ್ ಮೋಟರ್‌ನಲ್ಲಿ ಹೆಚ್ಚು ಲೋಡ್ ಉಂಟಾಗಿ ಅದು ಟ್ರಿಪ್ ಆಗುತ್ತಿತ್ತು.
 

1_1  H x W: 0 x 
 
ನವಂಬರ್ 2019 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ನೀಡಿರುವ ಸೂಚನೆಗಳಂತೆ ನಿರ್ವಹಣೆಯನ್ನು ಮಾಡುವ ವಿಭಾಗದ ಕೆಲಸಗಾರರು ಮಶಿನ್‌ನ ತಪಾಸಣೆಯನ್ನು ಮಾಡಿದರು. ಅವರು ಪಾವರ್ ಸಪ್ಲೈ ಕಾರ್ಡ್, ಡ್ರೈವ್, ಸರ್ವೋ ಮೋಟರ್, ಲಿನಿಯರ್ ಸ್ಕೇಲ್, ಟ್ಯಾಕೋ ಈ ಭಾಗಗಳ ತಪಾಸಣೆಯನ್ನು ಮಾಡಿದರು. ಆದರೆ ಯಾಂತ್ರಿಕ ಭಾಗಗಳ ಪೈಕಿ ಲುಬ್ರಿಕಂಟ್‌ನ ವ್ಯವಸ್ಥೆ, ವೇಜ್, ಬಾಲ್ ಸ್ಕ್ರೂ, ಬಾಲ್ ನಟ್ ಮತ್ತು ಅವುಗಳ ಜೋಡಣೆಯ ತಪಾಸಣೆಯನ್ನೂ ಮಾಡಿದರು. ಅದರಲ್ಲಿ ಅವರಿಗೆ ಯಾವುದೇ ತೊಂದರೆಯು ಕಂಡು ಬರಲಿಲ್ಲ. ಆದರೆ ವರ್ಟಿಕಲ್ ಸ್ಲೈಡ್‌ನಲ್ಲಿ ಹಲವಾರು ಸ್ಕ್ರ್ಯೊಚ್‌ಗಳು ಗಮನಕ್ಕೆ ಬಂದವು. ಹಾಗೆಯೇ ಸ್ಲೈಡ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸವೆತವಾಗಿರುವುದೂ ಕಂಡುಬಂತು. ಈ ಮಶಿನ್ 12 ವರ್ಷಗಳು ಬಳಸಿದ್ದರಿಂದ ನಿರ್ವಹಿಸುವ ಕೆಲಸಗಾರರು ಮಶಿನ್‌ನ ರಿಕಂಡಿಶನಿಂಗ್ ತಕ್ಷಣವೇ ಮಾಡಬೇಕು ಎಂದು ಸೂಚಿಸಿದರು ಮತ್ತು ಅವರು ಆಡಳಿತ ಮಂಡಳಿಗೆ ತಿಳಿಸಿದರು.
 
ವ್ಯವಸ್ಥಾಪಕರು ವರ್ಟಿಕಲ್ ಸ್ಲೈಡ್‌ನ ಗ್ರೈಂಡಿಂಗ್, ಸ್ಕ್ರೇಪಿಂಗ್, ಕ್ಯಾರೇಜ್ ಸ್ಲೈಡ್‌ನೊಂದಿಗೆ ಅದನ್ನು ಮ್ಯಾಚಿಂಗ್ ಮಾಡಿ (ರನಿಂಗ್ ಫಿಟ್ ಟಾಲರನ್‌ಸ್‌‌ನಲ್ಲಿ) ಮತ್ತು ಬಾಲ್ ಸ್ಕ್ರೂ, ಬಾಲ್ ನಟ್ ಬದಲಾಯಿಸುವುದು ಇಂತಹ ಕೆಲಸಗಳಿಗೆ ಮಂಜೂರಾತಿಯನ್ನು ನೀಡಿದರು. ರಿಕಂಡಿಶನಿಂಗ್ ಮಾಡುವ ಕಂಪನಿಯು ಈ ಕೆಲಸಕ್ಕೋಸ್ಕರ ಹತ್ತು ಲಕ್ಷ ರೂಪಾಯಿಗಳಷ್ಟು ಖರ್ಚು ಇರುವ ಕುರಿತು ತಿಳಿಸಿದರು. ಅಲ್ಲದೇ ಈ ಕೆಲಸ ಪೂರ್ತಿಗೊಳಿಸಲು ಆರು ವಾರಗಳಷ್ಟು ಕಾಲಾವಧಿಯು ಬೇಕು ಎಂದೂ ತಿಳಿಸಿದರು. ಇದರಿಂದಾಗಿ ಆಡಳಿತ ಮಂಡಳಿಯು ಈ ಕ್ಷೇತ್ರದಲ್ಲಿ ಅನುಭವವಿರುವ ಸಲಹೆಗಾರರ ಅಭಿಪ್ರಾಯವನ್ನು ಕೇಳಿದರು.
 
ಸಲಹೆಗಾರರು ಮಶಿನ್‌ನ ಪರಿಶೀಲನೆಯನ್ನು ಮಾಡಿದರು. ನಿರ್ವಹಣೆ ಮಾಡುತ್ತಿರುವ ಕೆಲಸಗಾರರೊಂದಿಗೆ ಚರ್ಚೆಯನ್ನೂ ಮಾಡಿದರು. ಕೆಲಸಗಾರರು ಮಶಿನ್ ಹಾಳಾಗಿರುವುದರ ಕುರಿತಾದ ಕಾರಣಗಳನ್ನು ಹುಡುಕಲು ಮಾಡಿರುವ ಪ್ರಯತ್ನಗಳ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದರೆ ಅದೇ ವೇಳೆಯಲ್ಲಿ ಅವರು ವರ್ಟಿಕಲ್ ಕ್ಯಾರೇಜ್‌ನ ಕೌಂಟರ್ ಬ್ಯಾಲೆನ್‌ಸ್‌‌ನಲ್ಲಿ ಭಾರದ ವ್ಯವಸ್ಥೆಯ ಪರಿಶೀಲನೆಯನ್ನು ಮಾಡಿಲ್ಲ, ಎಂಬುದು ಗಮನಕ್ಕೆ ಬಂತು. ವರ್ಟಿಕಲ್ ಮೋಟರ್‌ನಲ್ಲಿರುವ ಭಾರವನ್ನು ಕಡಿಮೆ ಮಾಡಲು ಕೌಂಟರ್‌ಗೆ ಬ್ಯಾಲೆನ್‌ಸ್‌ ನೀಡಲು ಅನೇಕ ರೀತಿಗಳನ್ನು ಬಳಸಲಾಗಿರುತ್ತದೆ.
• ಕಬ್ಬಿಣದ ಭಾರ
• ಹೈಡ್ರಾಲಿಕ್ ಪಿಸ್ಟನ್ ಸಿಲಿಂಡರ್
• ನ್ಯುಮ್ಯಾಟಿಕ್ ಪಿಸ್ಟನ್ ಸಿಲಿಂಡರ್
 
ಈ ಮಶಿನ್‌ನಲ್ಲಿ ವರ್ಟಿಕಲ್ ಕ್ಯಾರೇಜ್‌ಗೆ ಒಂದು ಸರಪಳಿಯಿಂದ ಜೋಡಿಸಲಾಗಿತ್ತು. ಅದು ಒಂದು ಸ್ಪ್ರಾಕೇಟ್‌ನಿಂದ ಹೋಗುತ್ತಿತ್ತು ಮತ್ತು ಅದರ ಎರಡನೇ ಬದಿಯಲ್ಲಿ ಒಂದು ಭಾರವನ್ನು ಜೋಡಿಸಲಾಗಿತ್ತು. ಅದು ಕಾಲಮ್‌ನ ಟೊಳ್ಳಾದ ಭಾಗದಲ್ಲಿ ಮೇಲೆ ಕೆಳಗೆ ಆಗುತ್ತಿತ್ತು. (ಚಿತ್ರ ಕ್ರ. 2) ಅವರಿಗೆ ಕೌಂಟರ್ ಬ್ಯಾಲೆನ್‌ಸ್‌‌ನ ಸರಪಳಿಯು ಯಾವತ್ತೂ ಸಡಿಲವಾಗಿರುವುದು ಕಂಡುಬಂದಿಲ್ಲ ಅಥವಾ ಕಾಲಮ್‌ನ ಮೇಲ್ಭಾಗದಲ್ಲಿ ಅಳವಡಿಸಿರುವ ಸ್ಪ್ರಾಕೇಟ್‌ನಿಂದ ಶಬ್ದವು ಕೇಳಬರುತ್ತಿತ್ತು, ಎಂದು ಸಲಹೆಗಾರನಿಗೆ ಮೆಂಟೆನನ್‌ಸ್‌ ಇಂಜಿನಿಯರ್ ಹೇಳಿದರು. ಇದರಿಂದಾಗಿ ಕೌಂಟರ್ ಬ್ಯಾಲೆನ್ಸ್‌‌ನ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲದಿರಬಹುದು ಎಂಬುದಾಗಿ ಅವರ ಅನಿಸಿಕೆ ಇತ್ತು. ಆದರೂ ಕೂಡಾ ಸಲಹೆಗಾರನು ಸ್ಪ್ರಾಕೇಟ್ ಬೇರಿಂಗ್ ಮತ್ತು ಸಂಪೂರ್ಣವಾದ ಸರಪಳಿಯ ತಪಾಸಣೆಯನ್ನು ಮಾಡುವುದನ್ನು ನಿರ್ಧರಿಸಿದರು. ಅದಕ್ಕೋಸ್ಕರ ಕ್ಯಾರೇಜ್‌ಗೆ ಆಧಾರವನ್ನು ನೀಡಿ ಸರಪಳಿಯನ್ನು ಬಿಡಿಸಿ ಆ ಕಾಲಮ್‌ನಿಂದ ಸರಪಳಿಯೊಂದಿಗೆ ಭಾರವನ್ನು ಹೊರಗೆ ತೆಗೆಯಲು ಹೇಳಲಾಯಿತು.
 
ಕೌಂಟರ್ ಬ್ಯಾಲೆನ್‌ಸ್‌ ಭಾರ ಕ್ರೇನ್‌ನ ಸಹಾಯದಿಂದ ಹೊರಗೆ ತೆಗೆಯಲಾಯಿತು. ಭಾರ ಮತ್ತು ಸರಪಳಿ ಇವೆರಡನ್ನೂ ಜೋಡಿಸುವ ಪಿನ್‌ನಲ್ಲಿರುವ ಸರ್‌ಕ್ಲಿಪ್ ತುಂಡಾಗಿದ್ದರಿಂದ ಈ ಪಿನ್ ಹೊರಗೆ ಬಂದಿರುವುದು ಕಂಡುಬಂತು. ಈ ಪಿನ್ ಕಾಲಮ್‌ನ ಒಳಭಾಗಕ್ಕೆ ತಿಕ್ಕುತ್ತಿತ್ತು ಮತ್ತು ಭಾರವು ಮೇಲೆ ಕೆಳಗೆ ಆಗುವಂತಹ ಚಟುವಟಿಕೆಗಳಿಗೆ ಅಡಚಣೆಯನ್ನುಂಟು ಮಾಡುತ್ತಿತ್ತು. ಇದರಿಂದಾಗಿ ಕ್ಯಾರೇಜ್‌ನ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿತ್ತು.
 

2_1  H x W: 0 x 
 
ಹೊಸ ಪಿನ್ ತಯಾರಿಸಲಾಯಿತು ಮತ್ತು ಸರಕ್ಲಿಪ್‌ಗೋಸ್ಕರ ಯೋಗ್ಯವಾದ ಆಳದ ಕಚ್ಚು ಆ ಪಿನ್‌ನಲ್ಲಿಯೇ ತಯಾರಿಸಲಾಯಿತು. ಆ ಪಿನ್‌ನಲ್ಲಿರುವ ಕಚ್ಚಿನಲ್ಲಿ ಸರಕ್ಲಿಪ್ ಅಳವಡಿಸಿ ಎಲ್ಲ ರೀತಿಯ ಯಂತ್ರಣೆಯನ್ನು ಮತ್ತೆ ಜೋಡಿಸಲಾಯಿತು. ಮಶಿನ್ ಮತ್ತೆ ಆನ್ ಮಾಡಲಾಯಿತು, ಆಗ ಸುಲಭವಾಗಿ ನಡೆಯಲು ಪ್ರಾಾರಂಭಿಸಿತು. ರಿಕಂಡಿಶನಿಂಗ್‌ನ ಯಾವುದೇ ಆವಶ್ಯಕತೆ ಉಂಟಾಗಲಿಲ್ಲ.
 
 
 

anil gupta_1  H 
ಅನಿಲ್ ಗುಪ್ತೆ
ತಾಂತ್ರಿಕ ಸಲಹೆಗಾರರು 
9767890284
 
ಅನಿಲ್ ಗುಪ್ತೆ ಇವರು ಇಲೆಕ್ಟ್ರಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಇವರಿಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 53 ವರ್ಷಗಳಷ್ಟು ಸುದೀರ್ಘ ಕಾಲಾವಧಿಯ ಅನುಭವವಿದೆ. ಟಾಟಾ ಮೋಟರ್ಸ್ ಈ ಕಂಪನಿಯಲ್ಲಿ ಮೆಂಟೆನನ್‌ಸ್‌ ಮತ್ತು ಪ್ರೊಜೆಕ್‌ಟ್ಸ್‌‌ಗೆ ಸಂಬಂಧಪಟ್ಟ ಪ್ಲಾOಟ್‌ನಲ್ಲಿ ಇಂಜಿನಿಯರಿಂಗ್‌ನ ಕೆಲಸದ ಅನುಭವವಿದ್ದು ಸದ್ಯಕ್ಕೆ ತಾಂತ್ರಿಕ ಸಲಹೆಗಾರರೆಂದು ಸೇವೆಯನ್ನು ಸಲ್ಲಿಸುತ್ತಿದ್ದಾರೆ.
 
 
@@AUTHORINFO_V1@@