ಈ ಲೇಖನದಲ್ಲಿ ಫಾನುಕ್ ಸಿ.ಎನ್.ಸಿ. ಬಳಸಿ ಸೈಕಲ್ ಟೈಮ್‌ನ ಆಪ್ಟಿಮೈಸೇಶನ್ ಮಾಡಲು ಮಶಿನಿಂಗ್ ಸೆಂಟರ್‌ನಲ್ಲಿ ಉಪಲಬ್ಧವಿರುವ ಕೆಲವು ಪ್ರಗತಿಪರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ.
ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಯಂತ್ರಣೆಯ ತಂತ್ರಜ್ಞಾನದ ವಿಕಾಸವು ಕೈಗಾರಿಕೋದ್ಯಮಗಳಲ್ಲಿ ತುಂಬಾ ಮಹತ್ವದ ಅಂಶವಾಗಿದೆ. ಮಿಲ್ಲಿಂಗ್ ಇದೊಂದು ತುಂಬಾ ಕಾರ್ಯಕ್ಷಮತೆಯುಳ್ಳ ಮತ್ತು ಉಚ್ಚಮಟ್ಟದ ಉತ್ಪಾದನೆಯ ಪ್ರಕ್ರಿಯೆಯಾಗಿದೆ. ಸಂಪ್ರದಾಯದ ಪ್ರಕಾರ ಮಿಲ್ಲಿಂಗ್‌ನ ಯಂತ್ರಣೆಯ ಪ್ರಕ್ರಿಯೆಯ ಪ್ಯಾರಾಮೀಟರ್‌ಗಳನ್ನು ಚುನಾಯಿಸಲು ಟೂಲಿಂಗ್ ಮತ್ತು ಮಶಿನ್‌ಗಳ ಸ್ಪೆಸಿಫಿಕೇಶನ್, ಆಪರೇಟರ್‌ನ ಅನುಭವ ಇಂತಹ ಅನೇಕ ಘಟಕಗಳ ಆಧಾರವನ್ನು ಪಡೆಯಲಾಗುತ್ತದೆ ಮತ್ತು ಅವುಗಳ ಹೊಂದಾಣಿಕೆಯನ್ನು ಮಾಡುವಾಗ ಕೆಲವು ಅಂಶಗಳನ್ನು ಕಾಪಾಡಬೇಕಾಗುತ್ತದೆ.
ತ್ರಿಜ್ಯದ ದಿಕ್ಕಿನಲ್ಲಿ ತುಂಡುಗಳ ಆಳದಲ್ಲಿ ಬದಲಾವಣೆಯಾದಲ್ಲಿ ಮತ್ತು ಚಿಪ್‌ನ ದಪ್ಪವನ್ನು ಬದಲಾಯಿಸಿದ್ದರಿಂದ ಮಿಲ್ಲಿಂಗ್‌ನಲ್ಲಿ ತಯಾರಾಗುವಂತಹ ಬಲವು ಗಮನಾರ್ಹವಾಗಿ ವೃದ್ಧಿಸುತ್ತದೆ. ಈ ಪರಿಸ್ಥಿತಿಯಲ್ಲಿ ಅನುಭವವನ್ನು ಗಮನಿಸಿ ಸಾಂಪ್ರದಾಯಿಕ ಪದ್ಧತಿಯು ಮಶಿನ್‌ನಲ್ಲಿ ಚ್ಯಾಟರಿಂಗ್‌ನಿಂದಾಗಿ ಉಂಟಾಗುವ ಕಂಪನಗಳು ಮತ್ತು ತುಂಡು-ತುಂಡುಗಳಾಗುವುದನ್ನು ತಡೆಯುಲಾರೆವು. ಇನ್ನೊoದೆಡೆ ಫೀಡ್ ರೇಟ್ ಒಂದೇ ರೀತಿಯಲ್ಲಿ ಅಳವಡಿಸಿದ್ದರಿಂದ ಯಂತ್ರಣೆಗೆ ತಗಲುವ ಸಮಯವು ಹೆಚ್ಚುತ್ತದೆ ಮತ್ತು ಅದರಿಂದಾಗಿ ಉತ್ಪಾದಕತೆಯೂ ಕಡಿಮೆ ಆಗುತ್ತದೆ. ಸಂಭಾವ್ಯ ಯಂತ್ರಣೆಯ ಸಾಮರ್ಥ್ಯವನ್ನು ವೃದ್ಧಿಸಲು ಫೀಡ್ ರೇಟ್ ಸರಿಹೊಂದಿಸುವುದು ಒಂದು ಪರಿಣಾಮಕಾರಿಯಾದ ಉಪಾಯವಾಗಿದೆ.
ಈ ಲೇಖನದಲ್ಲಿ ನಾವು ಯಂತ್ರಣೆಯ ಪ್ರಕ್ರಿಯೆಗೋಸ್ಕರ ಬಳಸಲಾಗುವಂತಹ ಎಡಾಪ್ಟಿವ್ ಕಂಟ್ರೋಲ್ ಕುರಿತು ಚರ್ಚಿಸಲಿದ್ದೇವೆ. ರಫಿಂಗ್ ಆಪರೇಶನ್‌ನಲ್ಲಿ ಫೀಡ್ ರೇಟ್ ಆಯಾ ಸಮಯದಲ್ಲಿ (ರಿಯಲ್ ಟೈಮ್) ಸರಿಹೊಂದಿಸಿ ಉತ್ಪಾದನೆಯ ಮೌಲ್ಯ ಅಥವಾ ಯಂತ್ರಭಾಗಗಳ ಗುಣಮಟ್ಟವನ್ನು ಸುಧಾರಿಸುವುದು, ಇದೇ ಎಡಾಪ್ಟಿವ್ ಕಂಟ್ರೋಲ್‌ನ ಕೆಲಸವಾಗಿದೆ. ಸಾಂಪ್ರದಾಯಿಯವಾದ ಸಿ.ಎನ್.ಸಿ. ಪ್ರಣಾಳಿಕೆಯಲ್ಲಿ ಯಂತ್ರಣೆಯಲ್ಲಿರುವ ವೆರಿಯೇಬಲ್, ಪ್ರೊಗ್ರಾಮರ್‌ನ ಮೂಲಕ ನಿರ್ಧರಿಸಲಾಗುತ್ತವೆ ಮತ್ತು ಅದರ ಮೌಲ್ಯವನ್ನು ಈ ಪ್ರೊಗ್ರಾಮರ್‌ನ ಅನುಭವಕ್ಕೆ ಮತ್ತು ಪ್ರಕ್ರಿಯೆಯ ತಿಳುವಳಿಕೆಗೆ ಅವಲಂಬಿಸಿರುತ್ತವೆ.
ಇದಕ್ಕೆ ವಿರುದ್ಧವಾಗಿ ಎಡಾಪ್ಟಿವ್ ಕಂಟ್ರೋಲ್‌ನ ಪ್ರಣಾಳಿಕೆಯಲ್ಲಿ ಇನ್ನಿತರ ಪ್ರಕ್ರಿಯೆಗಳ ವೆರಿಯೇಬಲ್ ಮಾಪನಗಳನ್ನು ಆಧರಿಸಿ ರಿಯಲ್ ಟೈಮ್‌ನಲ್ಲಿ ವೆರಿಯೇಬಲ್‌ಗಳನ್ನು ಹೊಂದಾಣಿಸುತ್ತದೆ. ಆದ್ದರಿಂದಲೇ ಎಡಾಪ್ಟಿವ್ ಕಂಟ್ರೋಲ್ ಪದ್ಥತಿಯನ್ನು ಬಳಸಿ ಸಂಪೂರ್ಣ ಯಂತ್ರಣೆಯ ಪ್ರಣಾಳಿಕೆಯಲ್ಲಿ ಸುಧಾರಣೆಯನ್ನು ಪಡೆಯುವುದು ಸಹಜಸಾಧ್ಯವಾಗಿದೆ.
ಫಾನುಕ ಸ್ಮಾರ್ಟ್ ಎಡಾಪ್ಟಿವ್ ಕಂಟ್ರೋಲ್
ಈ ಫಂಕ್ಷನ್ ಸ್ಪಿಂಡಲ್‌ನಲ್ಲಿರುವ ಲೋಡ್ ಮತ್ತು ಉಷ್ಣಾOಶಕ್ಕೆ ಅನುಸಾರವಾಗಿ ರಫಿಂಗ್‌ನಲ್ಲಿ ಫೀಡ್ ರೇಟ್ ಸರಿಹೊಂದಿಸಿ ಸೈಕಲ್ ಟೈಮ್ ಕಡಿಮೆ ಮಾಡುವುದು ಮತ್ತು ಹೆಚ್ಚು ಉಷ್ಣತೆ (ಓವರ್‌ಹೀಟ್) ತಡೆಯುವುದು, ಇದರಲ್ಲಿ ಯೋಗ್ಯರೀತಿಯಲ್ಲಿ ಸಂತುಲತೆಯನ್ನು ಸಾಧಿಸುತ್ತದೆ. ಪ್ರಕ್ರಿಯೆಗೋಸ್ಕರ ಅಪೇಕ್ಷಿಸಿರುವ ಸ್ಪಿಂಡಲ್‌ನ ಲೋಡ್‌ನಿರ್ಧರಿಸಿ ಸ್ಪಿಂಡಲ್‌ನ ಲೋಡ್ ಕಡಿಮೆ ಇದ್ದಲ್ಲಿ ಫೀಡ್ ರೇಟ್ ಹೆಚ್ಚಿಸಿ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಸ್ಪಿಂಡಲ್‌ನ ಲೋಡ್ ಹೆಚ್ಚು ಇದ್ದಲ್ಲಿ ಫೀಡ್ ರೇಟ್ ಕಡಿಮೆ ಮಾಡಲಾಗುತ್ತದೆ, ಇದರಿಂದಾಗಿ ಟೂಲ್‌ನಲ್ಲಿ ಭಾರವೂ ಕಡಿಮೆಯಾಗುತ್ತದೆ. ಇದರ ಹೊರತಾಗಿ ಸ್ಪಿಂಡಲ್‌ನ ಉಷ್ಣಾOಶವು ಹೆಚ್ಚು ಇದ್ದಲ್ಲಿ ಫೀಡ್ ರೇಟ್ ತನ್ನಷ್ಟಕ್ಕೆ ಕಡಿಮೆ ಮಾಡಲಾಗುತ್ತದೆ ಮತ್ತು ಹವಾಮಾನದ ಉಷ್ಣತೆಯ ಹೆಚ್ಚಳವನ್ನು ನಿಲ್ಲಿಸಲಾಗುತ್ತದೆ.
ಫೀಡ್ ರೇಟ್‌ನ ಮೌಲ್ಯದ ಆಪ್ಟಿಮೈಸೇಶನ್ ಮಾಡಲುಮುಂದಿನ ಎರಡು ವಿಧಗಳ ನಿಯಂತ್ರಣೆಯು ಲಭ್ಯವಿದೆ.
1. ಕಾನ್‌ಸ್ಟಂಟ್ ಸ್ಪಿಂಡಲ್ ಲೋಡ್ ಕಂಟ್ರೋಲ್
2. ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್ (ಅತಿಯಾದ ಉಷ್ಣಾOಶವನ್ನು ತಡೆಯುವ ನಿಯಂತ್ರಣೆ) (ಪದ್ಧತಿ A, ಪದ್ಧತಿ B)
1. ಕಾನ್‌ಸ್ಟಂಟ್ ಸ್ಪಿಂಡಲ್ ಲೋಡ್ ಕಂಟ್ರೋಲ್
ಕಾನ್‌ಸ್ಟಂಟ್ ಸ್ಪಿಂಡಲ್ ಲೋಡ್ ಕಂಟ್ರೋಲ್ ಮೂಲಕ ಸ್ಪಿಂಡಲ್‌ನ
ಲೋಡ್‌ಗೆ ಅನುಸಾರವಾಗಿ ಅಕ್ಷೀಯ ಫೀಡ್ ರೇಟ್ ಸರಿಹೊಂದಿಸಲಾಗುತ್ತದೆ. ಇದರಿಂದಾಗಿ ಸ್ಪಿಂಡಲ್‌ನ ಭಾರವು ನಿರ್ಧರಿಸಿದ (ಎಮಿಂಗ್) ಭಾರದ ಸಮೀಪದಲ್ಲಿ ಕಾಪಾಡಲಾಗುತ್ತದೆ. ಈ ಫಂಕ್ಷನ್ ಸ್ಪಿಂಡಲ್‌ನ ಲೋಡ್‌ಗೆ ಅನುಸಾರವಾಗಿ ಅಕ್ಷೀಯ ಫೀಡ್ ರೇಟ್‌ನ ಓವರ್‌ರೈಡ್ ಬದಲಾವಣೆ ಆಗುವ ಸಾಧ್ಯತೆಯು ಇರುತ್ತದೆ. ಈ ಫಂಕ್ಷನ್‌ನ ಮೂಲಕ ಸ್ಪಿಂಡಲ್‌ನ ಲೋಡ್ ಕಡಿಮೆ ಇದ್ದಲ್ಲಿ ಓವರ್‌ರೈಡ್ ಹೆಚ್ಚಿಸಿ ಸೈಕಲ್ ಟೈಮ್ ಕಡಿಮೆ ಮಾಡುವುದು ಸಾಧ್ಯವಾಗಿದೆ ಮತ್ತು ಸ್ಪಿಂಡಲ್‌ನ ಲೋಡ್ ಹೆಚ್ಚು ಇರುವಾಗ ಓವರ್‌ರೈಡ್ ಕಡಿಮೆ ಮಾಡಿ ಟೂಲ್‌ನ ಹಾಳಾಗುವಿಕೆಯನ್ನು ತಡೆಯಬಹುದು.
ಕೆಲಸ
ಸ್ಪಿಂಡಲ್‌ನ ಲೋಡ್ ‘ನಿರ್ಧರಿಸಿದ ಸ್ಪಿಂಡಲ್‌ನ ಲೋಡ್’ಗೆ ಸರಿಹೊಂದಿಸಿ ಈ ಫಂಕ್ಷನ್‌ನಲ್ಲಿ ಅಕ್ಷೀಯ ಫೀಡ್ ರೇಟ್ ಪಡೆಯಬಹುದು. ಸ್ಪಿಂಡಲ್‌ನ ಲೋಡ್ ‘ಫಲಿತಾಂಶದ ಸ್ಪಿಂಡಲ್‌ನ ಲೋಡ್’ಗಿಂತ ಹೆಚ್ಚಾಾದಲ್ಲಿ ನಿಯಂತ್ರಣೆಯು ಪ್ರಾರಂಭಿಸಲ್ಪಡುತ್ತದೆ ಮತ್ತು ಲೋಡ್ ಕಡಿಮೆ ಆದಲ್ಲಿ ನಿಯಂತ್ರಣೆಯು ನಿಲ್ಲುತ್ತದೆ. ‘ನಿರ್ಧರಿಸಿರುವ ಸ್ಪಿಂಡಲ್‌ನ ಲೋಡ್’ ಮತ್ತು ‘ಫಲಿತಾಂಶದ ಸ್ಪಿಂಡಲ್‌ನ ಲೋಡ್’ ಈ ಎರಡು ಪ್ಯಾರಾಮೀಟರ್‌ಗಳನ್ನು ಸೆಟ್ ಮಾಡುವುದು ಸಾಧ್ಯವಿದೆ.
2. ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್
ಸ್ಪಿಂಡಲ್‌ನ ಉಷ್ಣಾಾಂಶವು ನಿಗದಿಸಿದ ಮಿತಿಗಿಂತ ಹೆಚ್ಚು ಬಿಸಿಯಾಗುವ (ಓವರ್‌ಹೀಟ್) ಮಟ್ಟದ ಹತ್ತಿರ ತಲುಪುತ್ತದೆ, ಆಗ ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್ ಅಕ್ಷೀಯ ಫೀಡ್ ರೇಟ್ ಕಡಿಮೆ ಮಾಡಿ ಸ್ಪಿಂಡಲ್ ಓವರ್‌ಹೀಟ್ ಕಡಿಮೆ ಮಾಡುತ್ತದೆ. ಈ ಫಂಕ್ಷನ್ ಉಚ್ಚಮಟ್ಟದ ಸ್ಪಿಂಡಲ್‌ನ ಭಾರದ ಯಂತ್ರಣೆಯಲ್ಲಿ ಸ್ಪಿಂಡಲ್ ಓವರ್‌ಹೀಟ್ ಕಡಿಮೆ ಮಾಡಲು ಬಳಸಲಾಗುತ್ತದೆ. ಈ ಮುಂದಿನ ಸ್ಪಿಂಡಲ್‌ನ ವಿವರಗಳ ಮೂಲಕ ಈ ಫಂಕ್ಷನ್‌ನ ಅಕ್ಷೀಯ ಫೀಡ್ ರೇಟ್‌ನಲ್ಲಿ ಬದಲಾವಣೆಯಾಗುತ್ತದೆ.
• ಸ್ಪಿಂಡಲ್‌ನ ಭಾರ
• ಉಳಿದಿರುವ ಕಾಲಾವಧಿ (ಸ್ಪಿಂಡಲ್‌ನ ಭಾರ ಮೀಟರ್ ಮೂಲಕ)
• ಸ್ಪಿಂಡಲ್‌ನ ಉಷ್ಣಾಾಂಶ
ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್‌ನಲ್ಲಿ A ಮತ್ತು B ಎಂಬ ಎರಡು ವಿಧಗಳಿವೆ.
ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್‌ನ ವಿಧ A
ಈ ಫಂಕ್ಷನ್ ಕಂಟೀನ್ಯುವಸ್ ರೇಟೆಡ್ ಪಾವರ್ ಅಕ್ಷೀಯ ಫೀಡ್
ರೇಟ್‌ನ ಓವರ್‌ರೈಡ್ ಸರಿಹೊಂದಿಸಿ ಸ್ಪಿಂಡಲ್‌ನ ಮೋಟರ್‌ನಲ್ಲಿ ಓವರ್‌ಹೀಟ್‌ನ ಸ್ಥಿತಿಯನ್ನು ಪಡೆಯುವುದು ಅಸಾಧ್ಯ, ಈ ರೀತಿಯಲ್ಲಿ ಸ್ಪಿಂಡಲ್‌ನ ಭಾರವನ್ನು ಹಿಡಿತಲ್ಲಿರಿಸುವ ಪ್ರಯತ್ನ ಮಾಡುತ್ತವೆ.
ಕೆಲಸ
ಸ್ಪಿಂಡಲ್‌ನ ಭಾರದ ‘ಓವರ್‌ಹೀಟ್ ಅವೈಡನ್‌ಸ್ ಕಂಟ್ರೋಲ್‌ನ ನಿರ್ಧರಿಸಿದ ಸ್ಪಿಂಡಲ್‌ನ ಲೋಡ್’ನ ಹತ್ತಿರ ಇರುವ ರೀತಿಯಲ್ಲಿ, ಈ ಪಂಕ್ಷನ್ ಅಕ್ಷೀಯ ಫೀಡ್ ರೇಟ್‌ನ್ನು ನಿಯಂತ್ರಿಸಬಲ್ಲದು. ಸ್ಪಿಂಡಲ್‌ನ ಉಷ್ಣಾOಶವು ‘ಕಂಟ್ರೋಲ್ ಸ್ಟಾರ್ಟ್’ನ ಉಷ್ಣಾOಶಕ್ಕಿಂತ ಹೆಚ್ಚಾದಲ್ಲಿ ನಿಯಂತ್ರಣೆಯ ಆರಂಭವಾಗುತ್ತದೆ. ಕಂಟ್ರೋಲ್ ಪ್ರಾರಂಭಿಸುವ ಪ್ಯಾರಾಮೀಟರ್‌ಗಳನ್ನು ಸೆಟ್ ಮಾಡಬಹುದು. ಉಷ್ಣಾOಶವು ‘ಕಂಟ್ರೋಲ್ ಎಂಡ್’ ಉಷ್ಣಾOಶಕ್ಕಿಂತ ಕಡಿಮೆಯಾದಲ್ಲಿ ನಿಯಂತ್ರಣೆಯು ನಿಲ್ಲುತ್ತದೆ.
ಓವರ್ ಹೀಟ್ ಅವೈಡನ್‌ಸ್ ಕಂಟ್ರೋಲ್‌ನ ವಿಧ B (ಸ್ಥಿರ ಕಾಲಾವಧಿಯ ನಿಯಂತ್ರಣೆ)
ಈ ಫಂಕ್ಷನ್ ಅಕ್ಷೀಯ ಫೀಡ್ ರೇಟ್‌ನ ಓವರ್‌ರೈಡ್‌ಗೋಸ್ಕರ ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಉಪಯೋಗಿಸುತ್ತದೆ. ಸ್ಪಿಂಡಲ್ ಕಂಟಿನ್ಯುವಸ್ ರೆನ್‌ನ ಮೇಲ್ಭಾಗದಲ್ಲಿ ಯಂತ್ರಣೆಯನ್ನು ಮಾಡುತ್ತಿರುವಾಗ ಸ್ಮಾರ್ಟ್ ಸ್ಪಿಂಡಲ್ ಲೋಡ್ ಮೀಟರ್‌ನಲ್ಲಿ ಉಳಿದ ಸಮಯವನ್ನು ತೋರಿಸಲಾಗುತ್ತದೆ. ಪ್ರೀಸೆಟ್ ಲೋಡ್ ಕಂಡಿಶನ್ ಹೋಲಿಸಿದಾಗ ಉಳಿದಿರುವ ಕಾಲಾವಧಿಯು ಕಡಿಮೆ ಇದ್ದಲ್ಲಿ ಫೀಡ್‌ರೇಟ್ ಕಡಿಮೆ ಮಾಡಬಹುದು ಮತ್ತು ಉಳಿದ ಕಾಲಾವಧಿಯು ಹೆಚ್ಚು ಇದ್ದಲ್ಲಿ ಫೀಡ್‌ರೇಟ್ ಹೆಚ್ಚಿಸಲಾಗುವುದು. ಇದರಿಂದಾಗಿ ಸ್ಪಿಂಡಲ್‌ನ ಚಟುವಟಿಕೆಯ ಮಿತಿಯಲ್ಲಿಯೇ ಉಪಲಬ್ಧವಿರುವ ಸಾಮರ್ಥ್ಯವನ್ನು ಸ್ಥಿರವಾಗಿರಿಸಬಹುದು.
ಕೆಲಸ
ಉಳಿದಿರುವ ಕಾಲಾವಧಿಯು ನಿರ್ದಿಷ್ಟವಾದ ಮಿತಿಗಿಂತ ಕಡಿಮೆ ಇದ್ದಲ್ಲಿ (ಥ್ರೆಶ್‌ಹೋಲ್ಡ್- ಈ ಪ್ಯಾರಾಮೀಟರ್ ಸೆಟ್ ಮಾಡಬಹುದಾಗಿದೆ) ಓವರ್‌ರೈಡ್ ಕಡಿಮೆ ಮಾಡಲು ಅದನ್ನು ನಿಯಂತ್ರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಉಳಿದಿರುವ ಕಾಲಾವಧಿಯು ನಿರ್ದಿಷ್ಟವಾದ ಮಿತಿಗಿಂತ ಹೆಚ್ಚು ಇದ್ದಲ್ಲಿ ಓವರ್‌ರೈಡ್ ಹೆಚ್ಚಿಸಲು ಅದನ್ನು ನಿಯಂತ್ರಿಸಲಾಗುತ್ತದೆ.
ತೀರ್ಮಾನ
ಬೇರೆಬೇರೆ ಬಳಕೆಗಾರರಲ್ಲಿ ಮಾಡಿರುವ ಪರಿಶೀಲನೆಯ ಪರಿಣಾಮಗಳಿಂದ, ಈ ಫಂಕ್ಷನ್ ಬಳಸಿ ಕೇವಲ ಫೀಡ್ ರೇಟ್‌ನ ಆಪ್ಟಿಮೈಸೇಶನ್ ಮಾಡಿದ್ದರಿಂದ ಯಂತ್ರಣೆಗೆ ಬೇಕಾಗುವ ಕಾಲಾವಧಿಯು ಸುಮಾರು 5% ಕಡಿಮೆ ಮಾಡಬಹುದು, ಎಂಬುದು ಗಮನಕ್ಕೆ ಬಂತು. ಮೇಲೆ ತಿಳಿಸಿದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವ ತಂತ್ರಗಳನ್ನು (ಕಂಡಿಶನ್ ಮಾನಿಟರಿಂಗ್ ಟೆಕ್ನಿಕ್) ಬಳಸಿ ಸೈಕಲ್ ಟೈಮ್ ಆಪ್ಟಿಮೈಸೇಶನ್ ಮಾಡಬಹುದು ಮತ್ತು ಟೂಲ್‌ಗಳ ಬಾಳಿಕೆಯನ್ನು ಕಡಿಮೆ ಮಾಡುವಂತಹ ಓವರ್‌ಲೋಡ್ ಮತ್ತು ಕಂಪನಗಳಂತಹ ಅನಾವಶ್ಯಕವಾದ ಪರಿಸ್ಥಿತಿಯನ್ನು ತಡೆಯಬಹುದು.
ಇದರಿಂದಾಗಿ ಸದ್ಯಕ್ಕಿರುವ ಮಶಿನ್‌ನ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಕಾರ್ಖಾನೆಯಲ್ಲಿ ಉತ್ಪಾದನೆಯ ಸಾಮರ್ಥ್ಯವೂ ಹೆಚ್ಚುತ್ತದೆ. ಯಂತ್ರಣೆ ಮಾಡಿರುವ ಉತ್ಪಾದನೆಗಳ ಗುಣಮಟ್ಟವನ್ನು ನಿರ್ಧರಿಸಲು ಯಂತ್ರಣೆಯ ಮೌಲ್ಯವನ್ನು ಕಡಿಮೆ ಮಾಡಲು ಮತ್ತು ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು, ರಿಯಲ್ ಟೈಮ್‌ನಲ್ಲಿ ಯಂತ್ರಣೆಯ ಪ್ಯಾರಾಮೀಟರ್‌ಗಳನ್ನು ಸರಿಹೊಂದಿಸುವುದೂ ಅತ್ಯಾವಶ್ಯಕವಾಗಿರುತ್ತದೆ. ಇದನ್ನು ಕಾರ್ಯಗತಗೊಳಿಸಲು ಫಾನುಕ್ ಸ್ಮಾರ್ಟ್ ಎಡಾಪ್ಟಿವ್ ಕಂಟ್ರೋಲ್ ಎಂಬ ವಿಶ್ವಾಸಪೂರ್ಣವಾದ ಪರ್ಯಾಯವೂ ಇದೆ.
ಶ್ರೀಜಿತ್ ನಾಯರ್
ವ್ಯವಸ್ಥಾಪಕರು, ಫ್ಯಾಕ್ಟರಿ ಆಟೊಮೇಶನ್ ವಿಭಾಗ, ಫಾನುಕ್ ಇಂಡಿಯಾ ಪ್ರೈ.ಲಿ.
8600143594
ಶ್ರೀಜಿತ್ ಬಿ. ನಾಯರ್ ಇವರು ಇಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಶನ್‌ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಅವರಿಗೆ ಫ್ಯಾಕ್ಟರಿ ಆಟೊಮೇಶನ್‌ನಲ್ಲಿ ಸುಮಾರು 10 ವರ್ಷಗಳ ಅನುಭವವಿದೆ. ಸದ್ಯಕ್ಕೆ ಅವರು ಫಾನುಕ್ ಇಂಡಿಯಾ ಪ್ರೈ.ಲಿ.ನಲ್ಲಿ ಫ್ಯಾಕ್ಟರಿ ಆಟೊಮೇಶನ್ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರತರಾಗಿದ್ದಾರೆ.