‘ಟಂಗಾಲಯ್’ ಕಂಪನಿಯು ಯಂತ್ರಣೆಗೆ ಉಪಯುಕ್ತವಾಗಿರುವ ಮತ್ತು ವೈವಿಧ್ಯಗಳಿರುವ ಟೂಲ್‌ಗಳನ್ನು ತಯಾರಿಸುವಲ್ಲಿ ಅಗ್ರಣಿಯಾಗಿದ್ದಾರೆ. ಗ್ರಾಹಕರಿಗೆ ಅನುಕೂಲವಾಗಿರುವ ನೀತಿಗಳಿಂದಾಗಿ ನಮ್ಮಲ್ಲಿ ವಿವಿಧ ಪ್ರಕ್ರಿಯೆಗಳಲ್ಲಿ ಎದುರಿಸಬೇಕಾಗುವಂತಹ ಅಡಚಣೆಗಳನ್ನು ಸಂಶೋಧಿಸಿ ಅದಕ್ಕೋಸ್ಕರ ವಿಶೇಷವಾದ ಟೂಲ್‌ಗಳನ್ನು ತಯಾರಿಸುವ ಕೆಲಸವು ನಿರಂತರವಾಗಿ ನಡೆಯುತ್ತಿದೆ. ಕೊಲ್ಹಾಪುರದ ಒಂದು ಉದ್ಯಮದ ಸಮೂಹವು ನಮಲ್ಲಿ ಮಿಲ್ಲಿಂಗ್ ಕಟರ್ ಕುರಿತು ವಿಚಾರಿಸಿತು. ಸಿಲಿಂಡರ್
ಬ್ಲಾಕ್‌ನ ಬೇರಿಂಗ್ ಕ್ಯಾಪ್ ಫೇಸ್ ಮತ್ತು ಪ್ಯಾಾನ್ ಫೇಸ್‌ನಲ್ಲಿ (ಚಿತ್ರ ಕ್ರ. 1) ಮಿಲ್ಲಿಂಗ್ ಮಾಡುವಾಗ ಅವರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು. ಇದರಲ್ಲಿ ಫಿನಿಶ್ ಯೋಗ್ಯವಾಗಿ ಲಭಿಸುತ್ತಿರಲಿಲ್ಲ. ಟೂಲ್‌ನ ಬಾಳಿಕೆಯು ಕಡಿಮೆ ಆಗುತ್ತಿತ್ತು ಮತ್ತು ಒಟ್ಟಾರೆ ಖರ್ಚು ಕೂಡಾ ಕಡಿಮೆ ಮಾಡಬೇಕು ಎಂದು ಅವರಿಗೆ ಅನಿಸುತ್ತಿತ್ತು.
ಮಿಲ್ಲಿಂಗ್ ಮಾಡುವಾಗ ವಿಶೇಷವಾಗಿ ರಫಿಂಗ್ ಆಪರೇಶನ್‌ನಲ್ಲಿ ಸುಧಾರಣೆಯನ್ನು ಮಾಡಲು ‘ಟಂಗಾಲಯ್’ ಇವರು ಹೊಸದಾದ 880 ಮಿಲ್ಲಿಂಗ್ ಕಟರ್ (ಚಿತ್ರ ಕ್ರ. 2) ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯವಾಗಿ ಕಟರ್‌ಗಿಂತ ಇದರ ಸೈಡ್ ಕ್ಲಿಯರನ್‌ಸ್ ಹೆಚ್ಚಾಗಿದ್ದರಿಂದ ಕಾರ್ಯವಸ್ತುವಿನ ಸೈಡ್ ವಾಲ್, ಫಿಕ್ಸ್ಚರ್ ಅಥವಾ ಕ್ಲ್ಯಾoಪಿಂಗ್ ಯಂತ್ರಣೆಯಲ್ಲಿ ಈ ಕಟರ್ (ಚಿತ್ರ ಕ್ರ. 3) ಅಪ್ಪಳಿಸುವುದಿಲ್ಲ.
ಈ ಕಟರ್‌ನಲ್ಲಿ 8 ಬದಿಗಳನ್ನು ಬಳಸಬಹುದಾದಂತಹ ಇನ್ಸರ್ಟ್‌ಗಳನ್ನು ಅಳವಡಿಸಲಾಗಿದೆ. ಟೂಲ್‌ಗಳ ಬಳಕೆಯ ಯೋಜನೆಯನ್ನು ಮಾಡಿ ಮತ್ತು ಟೂಲ್‌ನ ಸವೆತವು ಹೇಗಾಗುತ್ತದೆ, ಇದಕ್ಕೆ ಗಮನ ಹರಿಸಿ ನಿಗದಿತ ಕಾಲಾವಧಿಯಲ್ಲಿ ಇನ್ಸರ್ಟ್ ತಿರುಗಿಸಬಹುದು ಅಥವಾ ಬದಲಾಯಿಸಬಹುದು. ಇದರಿಂದಾಗಿ ಇನ್ಸರ್ಟ್‌ನ ಬಳಕೆಯು ಸಂಪೂರ್ಣವಾಗಿ ಆಗುತ್ತದೆ ಮತ್ತು ಟೂಲ್‌ಗಳ ಖರ್ಚು ಕೂಡಾ ಕಡಿಮೆ ಆಗುತ್ತದೆ.
ಯಂತ್ರಭಾಗಗಳ ಸರ್ಫೇಸ್‌ನ ಬದಿಗಳಿಗೆ ಮಿಲ್ಲಿಂಗ್ ಮಾಡುವಾಗ ಯೋಗ್ಯವಾದ ಇನ್ಸರ್ಟ್ ಬಳಸಿ ಕೊನೆಯ ತನಕ ಮಿಲ್ಲಿಂಗ್ ಮಾಡಬಹುದಾಗಿದೆ. ಇದಕ್ಕೋಸ್ಕರ ವಿವಿಧ ಇನ್ಸರ್ಟ್‌ಗಳು ಉಪಲಬ್ಧವಿವೆ. 0.8 ಮಿ.ಮೀ. ತ್ರಿಜ್ಯವಿರುವ ಇನ್ಸರ್ಟ್‌ನ ಬದಿಗೆ 1.3 ಮಿ.ಮೀ.ತನಕ ದೂರವನ್ನು ಕಾಪಾಡಿ ರಫ್ ಮಿಲಿಂಗ್ ಮಾಡಬಹುದಾಗಿದೆ.
ಕಟರ್‌ನಲ್ಲಿ ಇನ್ಸರ್ಟ್ ಯೋಗ್ಯ ರೀತಿಯಲ್ಲಿ ದೃಢವಾಗಿ ಅಳವಡಿಸಲು ನಿರ್ದೋಷವಾದ ಯಂತ್ರಣೆಯನ್ನು ಮಾಡಿ ಸೀಟ್‌ಗೆ ಮೂರು ಬದಿಗಳಲ್ಲಿ ಸಪೋರ್ಟ್ ಇದೆ ಮತ್ತು ಅದು M4 ಸ್ಕ್ರೂನಿಂದ ಗಟ್ಟಿಯಾಗಿ ಹಿಡಿಯಬಹುದಾಗಿದೆ. ಯಂತ್ರಣೆಗೋಸ್ಕರ ಹೆಚ್ಚು ಒಳ್ಳೆಯ ಸರ್ಫೇಸ್ ಫಿನಿಶ್ ಬೇಕಾದಲ್ಲಿ ವೈಪರ್ ಇನ್ಸರ್ಟ್‌ನ ವ್ಯವಸ್ಥೆಯೂ ಇದೆ.
ಇನ್ಸರ್ಟ್‌ನ ವಿಶಿಷ್ಟವಾದ ಪೊಸಿಶನ್‌ನಿಂದಾಗಿ ಹೆಚ್ಚು ದೊಡ್ಡ ರೇಕ್ ಅ್ಯಂಗಲ್ ಲಭಿಸುತ್ತದೆ, ಇದರಿಂದಾಗಿ ಯಂತ್ರಣೆಯನ್ನು ಮಾಡುವಾಗ ಟೂಲ್‌ನಲ್ಲಿ ಉಂಟಾಗುವ ಒತ್ತಡವು ಕಡಿಮೆಯಾಗುತ್ತದೆ ಮತ್ತು ಪ್ರವೇಶಕ್ಕಿರುವ ದೊಡ್ಡ ಕೋನದಿಂದಾಗಿ ಯಂತ್ರಭಾಗವು ಮೇಲೆ ಎತ್ತಲ್ಪಡುವುದಿಲ್ಲ, ಹಾಗೆಯೇ ಯಂತ್ರಣೆಯು ಸಹಜವಾಗಿ ಆಗುತ್ತದೆ.
ಇನ್ಸರ್ಟ್‌ನ ಕಟಿಂಗ್ ಎಡ್‌ಜ್ ಒಳಭಾಗದಲ್ಲಿ ವಕ್ರವಾಗಿ ತಯಾರಿಸಿದ್ದರಿಂದ ಚಿಪ್ ಸಹಜವಾಗಿ ಹೊರಗೆ ಬರುತ್ತದೆ ಮತ್ತು ಸೆಮಿಫಿನಿಶ್ ಮತ್ತು ಫಿನಿಶ್ ಎಂಬ ಎರಡು ಕಟ್‌ಗಳನ್ನು ಮಾಡುವ ಅಗತ್ಯವೇ ಇರುವುದಿಲ್ಲ.
ಕಾಸ್ಟ್ ಆಯರ್ನ್, ಸ್ಟೀಲ್ ಮತ್ತು ಸ್ಟೆನ್‌ಲೆಸ್ ಸ್ಟೀಲ್ ಇಂತಹ ವಿವಿಧ ಯಂತ್ರಭಾಗಗಳ ಮಿಲ್ಲಿಂಗ್ ಸಹಜವಾಗಿ ಮಾಡಲು ನಾಲ್ಕು ವಿವಿಧ ಗ್ರೇಡ್‌ನ ಇನ್ಸರ್ಟ್ ಬಳಸಲಾಗುತ್ತವೆ. ಈ ಇನ್ಸರ್ಟ್‌ನಲ್ಲಿ ನಮ್ಮ ವಿಶಿಷ್ಟವಾದ ‘ಪ್ರೀಮಿಯಮ್ ಟೇಕ್’ ಹೊದಿಕೆ ಇದೆ. ಇದರಿಂದಾಗಿ ಯಂತ್ರಣೆಯ ಟೆನ್ಸೈಲ್ ಸ್ಟ್ರೇಸ್ ನಿಯಂತ್ರಿಸಲ್ಪಡುತ್ತದೆ ಮತ್ತು ಇನ್ಸರ್ಟ್‌ನ ಸೂಕ್ಷ್ಮವಾದ ತುಂಡುಗಳು ಬೀಳುವುದು,
ಎಡ್ಜ್‌ಗಳಲ್ಲಿ ಮಟೀರಿಯಲ್ ಒಟ್ಟಾಾಗುವುದು, ಬಿರುಕುಗಳಾಗುವುದು ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಟೂಲ್‌ನ ಬಾಳಿಕೆಯು ಸುಮಾರು 30% ಹೆಚ್ಚುತ್ತದೆ.
ಲೇಖನದ ಪ್ರಾರಂಭದಲ್ಲಿ ತಿಳಿಸಿದಂತೆ ಉದ್ಯಮ ಸಮೂಹಕ್ಕೆ ನಾವು ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಿದೆವು. ಬ್ಲಾಕ್‌ನ ಬದಿಯು ಸ್ವಲ್ಪ ತೆಳ್ಳಗೆ ಇರುವುದರಿಂದ ತುಂಬಾ ದೃಢವಾದ ಫಿಕ್ಸ್ಚರ್ ಹಚ್ಚುವುದು ಸಾಧ್ಯವಿಲ್ಲ, ಈ ಪರಿಸ್ಥಿತಿಯಲ್ಲಿ ನಮ್ಮ ಹೊಸ 880 (ಚಿತ್ರ ಕ್ರ. 4) ಮಿಲ್ಲಿಂಗ್ ಕಟರ್ ಸೂಕ್ತವಾಗಿ ಕೆಲಸವನ್ನು ನಿರ್ವಹಿಸಬಲ್ಲದು.
ಮಿಲ್ಲಿಂಗ್ ಮಾಡುವಾಗ ಸಾಮಾನ್ಯವಾದ ಶೋಲ್ಡರ್ ಮಿಲ್ ಕಟರ್ ಬಳಸಿದಲ್ಲಿ ಎಡ್‌ಜ್‌ಗಳಲ್ಲಿ ತುಂಡುಗಳು ಉಂಟಾಗುತ್ತಿದ್ದವು. ಹೊಸ 88 ಡಿಗ್ರಿ ಮಿಲ್ಲಿಂಗ್ ಕಟರ್ ಬಳಸಿದ್ದರಿಂದ ಒಂದೇ ಟೂಲ್ ಮೂಲಕ 30 ಭಾಗಗಳ ಬದಲಾಗಿ 80 ಭಾಗಗಳ ಯಂತ್ರಣೆಯಾಗಲಾರಂಭಿಸಿದವು.
ಮಿಲ್ಲಿಂಗ್ ಕಟರ್ ಮತ್ತು ಇನ್ಸರ್ಟ್‌ನ ವಿವಿಧ ಪ್ರಕಾರಗಳು ಉಪಲಬ್ಧವಿವೆ. ಇದರ ಕುರಿತಾದ ಮಾಹಿತಿಯನ್ನು ನಮ್ಮ ಕ್ಯಾಟಲಾಗ್‌ನಲ್ಲಿ ನೀಡಲಾಗಿದೆ. ಯಂತ್ರಣೆಗೋಸ್ಕರ ಕೆಲವು ಮಾರ್ಗದರ್ಶಕ ಅಂಶಗಳನ್ನು ನೀಡಲಾಗಿದೆ. ಹಾಗೆಯೇ ಫೇಸ್ ಮಿಲ್ಲಿಂಗ್ ಮಾಡುವಾಗ ಬದಿಯಲ್ಲಿ ಕೆಲವು ಎಡ್‌ಜ್‌ಗಳು ಉಳಿಯಬಾರದು, ಎಂಬುದಕ್ಕೋಸ್ಕರ ಟೂಲ್ ಆಫ್‌ಸೆಟ್ ಮತ್ತು ಇನ್ಸರ್ಟ್‌ನ ಆಯ್ಕೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ವಿಮರ್ಶೆಯನ್ನು ಇದರಲ್ಲಿ ಮಾಡಲಾಗಿದೆ.
ಜಯ್ ಶಾಹ
ವ್ಯವಸ್ಥಾಪಕ ನಿರ್ದೇಶಕರು, ಟಂಗಾಲಯ್ ಇಂಡಿಯಾ ಪ್ರೈ.ಲಿ.
9960102221
ಜಯ್ ಶಾಹ ಇವರು ಟಂಗಾಲಯ್ ಇಂಡಿಯಾ ಪ್ರೈ.ಲಿ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ.