ಉದ್ಯಮ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಅನೇಕ ರೀತಿಯ ಸಕಾರಾತ್ಮಕವಾದ ಬದಲಾವಣೆಗಳು ಕಂಡುಬಂದಿವೆ. ಆಕ್ಟೋಬರ್ ತಿಂಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಜಿ.ಎಸ್.ಟಿ. ಮೊತ್ತಮೊದಲಾಗಿಯೇ ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿದೆ. ಕಳೆದ ವರ್ಷ ಇದೇ ಕಾಲಾವಧಿಯಲ್ಲಿ ಆಗಿರುವ ಸಂಗ್ರಹವನ್ನು ಹೋಲಿಸಿದಲ್ಲಿ ಈ ವರ್ಷದ ಸಂಗ್ರಹ ಶೇಕಡಾ ಹತ್ತರಷ್ಟು ಹೆಚ್ಚಾಗಿದೆ. ಉತ್ಪಾದನೆಯ ಕ್ಷೇತ್ರದ ಅಂಕೆ-ಸಂಖ್ಯೆಗಳೂ ಈ ಬದಲಾವಣೆಯನ್ನುದೃಢೀಕರಿಸುತ್ತವೆ. ಕಾರ್ಖಾನೆಗಳಲ್ಲಾಗಿರುವ ಟರ್ನ್ಓವರ್ ನ ಮಾಪನವನ್ನು ‘ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೆಸಿಂಗ್ ಮ್ಯಾನೆಜರ್ ಇಂಡೆಕ್ಸ್’ಗೆ ಆಧರಿಸಿ ಮಾಡಲಾಗುತ್ತದೆ. ಆಕ್ಟೋಬರ್ ತಿಂಗಳಲ್ಲಿ ಈ ಇಂಡೆಕ್ಸಿಂಗ್ ನ ನಿರ್ದೇಶಾಂಕವು 58.9 ಇತ್ತು. ಕಳೆದ ದಶಕದಲ್ಲಿ ಇದು ಗರಿಷ್ಠವಾಗಿದೆ. ಇನ್ನೊಂದು ಮಹತ್ವದ ಅಂಶವೆಂದರೆ ಕಳೆದ ಜುಲೈ ತಿಂಗಳಲ್ಲಿ ಪ್ರಾರಂಭಗೊಂಡ ‘ಉದ್ಯಮಗಳ ನೊಂದಾಣಿಕೆ’ ಎಂಬ ಹೊಸ ಆನ್ ಲೈನ್ ಪ್ರಣಾಳಿಕೆಯಲ್ಲಿ 11 ಲಕ್ಷಕ್ಕಿಂತಲೂ ಹೆಚ್ಚು ಹೊಸ MSME ಉದ್ಯಮಗಳ ನೊಂದಾಣಿಕೆಯು ಆಗಿದ್ದು, ಅದರಲ್ಲಿ ಉತ್ಪಾದನಾಕ್ಷೇತ್ರದಲ್ಲಿ 3.72 ಲಕ್ಷ ಉದ್ಯಮಗಳು ನೊಂದಾಯಿಸಲ್ಪಟ್ಟಿವೆ.
ಹೊಸ ಉದ್ಯಮಗಳು ಪ್ರಾರಂಭವಾಗುವಾಗ ಮಾರುಕಟ್ಟೆಯ ಕುರಿತಾದ ಅಂದಾಜು ಮತ್ತು ಭವಿಷ್ಯತ್ಕಾಲದಲ್ಲಿ ಲಭಿಸಬಲ್ಲ ಅವಕಾಶಗಳ ಕುರಿತು ವಿಚಾರ ಮಾಡಿ ಅದರಲ್ಲಿ ಹೊಸ ತಂತ್ರಜ್ಞಾನವನ್ನು ಸೇರ್ಪಡಿಸುವುದನ್ನು ಅಪೇಕ್ಷಿಸಲಾಗಿದೆ. ಮುಂದಿನ ಆರ್ಥಿಕ ಹೆಚ್ಚಳವು ಸಂಪೂರ್ಣವಾದ ಉಚ್ಚ ತಂತ್ರಜ್ಞಾನಕ್ಕೆ ಆಧರಿಸಿದ್ದು ಭವಿಷ್ಯವನ್ನು ಉಜ್ವಲಗೊಳಿಸಬಲ್ಲದ್ದಾಗಿದೆ. ಅದರಲ್ಲಿಯೇ ‘ಝೀರೋ ಡಿಫೆಕ್ಟ್ ಝೀರೋ ಇಫೆಕ್ಟ್’ ಎಂಬುದು ಬರೇ ಆಪೇಕ್ಷೆಯಾಗಿರದೇ ಅನಿವಾರ್ಯತೆಯಾಗಿದೆ. ಗುಣಮಟ್ಟದಿಂದ ಕೂಡಿರುವ ಉತ್ಪಾದನೆಗೋಸ್ಕರ ತಮ್ಮ ಕೆಲಸದ ರೀತಿಯಲ್ಲಿ ಹಲವಾರು ಪಾರಂಪರಿಕವಾದ ಅಂಶಗಳನ್ನು ಬದಲಾಯಿಸಿ ತಮ್ಮ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಉದಾಹರಣೆ, ‘ಪ್ರೆಡಿಕ್ಟೇಬಲ್ ಬಿಹೆವಿಯರ್’ ಅಂದರೆ ಅಂದಾಜಿನಲ್ಲಿ ಮಾಡಲಾಗುವ ನಡವಳಿಕೆ. ಈ ಸಂಸ್ಕೃತಿಯು ತಮ್ಮಉದ್ಯಮದಲ್ಲಿ ಇಂದಿಗೂ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತಿದೆ. ಜಪಾನ್ ಮತ್ತು ಜರ್ಮನಿಯ ಕಾರ್ಯಸಂಸ್ಕೃತಿಯನ್ನು ಅನೇಕ ಹಂತಗಳಲ್ಲಿ, ವಿಶೇಷವಾಗಿ ಕೈಗಾರಿಕೋದ್ಯಮಗಳಲ್ಲಿ ಆಗಾಗ ಉಲ್ಲೇಖಿಸಲಾಗುತ್ತದೆ. ಕಾರಣ ಯಾವುದೇ ಒಂದು ಅಂಶವು ನಿರ್ಧರಿಸಿರುವ ಸಮಯದಲ್ಲಿ ಆಗುತ್ತದೆ ಮತ್ತು ಅದು ಆಗಲೇ ಬೇಕು, ಎಂಬ ಮಾನಸಿಕತೆಯು ಶೇಕಡಾ 100 ರಷ್ಟು ಜನರ ವ್ಯವಹಾರದಲ್ಲಿ ಆಳವಾಗಿ ಅಡಗಿದೆ.
ಇನ್ನೊಂದು ತುಂಬಾ ಮಹತ್ವದ ಅಂಶವೆಂದರೆ, ಭಾರತೀಯರಾದ ನಾವು ಮಾಹಿತಿಯ ಸಂಗ್ರಹ ಮತ್ತು ಅದನ್ನು ಕಾಪಾಡಿಕೊಂಡು ಬರುವಲ್ಲಿ ತುಂಬಾ ಹಿಮ್ಮೆಟ್ಟಿದ್ದೇವೆ. ಯಾವುದೇ ಉತ್ಪಾದನೆಯನ್ನು ತಯಾರಿಸಿದ ನಂತರ ಅದರ ಕುರಿತಾದ ಎಲ್ಲ ಮಾಹಿತಿ ಇರುವ ದಾಖಲೆಗಳನ್ನು ಸೂಕ್ತವಾದ ರೀತಿಯಲ್ಲಿ ಕಾಪಾಡದೇ ಇರುವುದರಿಂದ ಆ ಸಂದರ್ಭದಲ್ಲಿರುವ ಮಾಹಿತಿ ಮುಂದಿನ ಪೀಳಿಗೆಗೆ ಹೇಗಿದೆಯೋ ಹಾಗೆ ಹಸ್ತಾಂತರಿಸಲ್ಪಡುವುದಿಲ್ಲ. ಜಪಾನ್ ಮತ್ತು ಜರ್ಮನಿ ಇಂತಹ ದೇಶಗಳಲ್ಲಿ ಅವರು ಮಾಡಿರುವ ಪ್ರಯೋಗ, ತಯಾರಿಸಿರುವ ಉತ್ಪಾದನೆಗಳು, ಅದರಲ್ಲಿ ಲಭಿಸಿದ ಸೋಲು- ಗೆಲುವು ಇತ್ಯಾದಿ ಎಲ್ಲ ಅಂಶಗಳನ್ನು ಆಯಾಯಾ ಸಮಯದಲ್ಲಿ ಮತ್ತು ವಿಸ್ತಾರವಾಗಿ ಬರೆಯಲಾಗಿದ್ದು, ಅಥವಾ ಇನ್ನಿತರರಿಗೆ ಹೇಳಲಾಗಿದೆ. ಆದ್ದರಿಂದ ಉತ್ಪಾದನೆಗಳನ್ನು ಮಾಡಿದವರು ಬದಲಾಯಿಸಲ್ಪಟ್ಟರೂ ಕೂಡಾ ಉತ್ಪಾದನೆಗಳಲ್ಲಿ ಯಾವುದೇ ರೀತಿಯ ಪರಿಣಾಮಗಳು ಉಂಟಾಗುವುದಿಲ್ಲ. ಕಾರ್ಯಸಂಸ್ಕೃತಿಯಲ್ಲಿ ಈ ರೀತಿಯ ಹಲವಾರು ಮಹತ್ವದ ಬದಲಾವಣೆಗಳನ್ನು ನಮ್ಮಲ್ಲಿಯೂ ಅಪೇಕ್ಷಿಸಲಾಗಿದೆ.
‘ಲೋಹಕಾರ್ಯ’ದ ಈ ತಿಂಗಳ ಸಂಚಿಕೆಯಲ್ಲಿ ಮಾಪನ ಮತ್ತು ಗೇಜಿಂಗ್ ಕುರಿತಾದ ಲೇಖನಗಳನ್ನು ಪ್ರಕಟಿಸಲಾಗಿದೆ. ಮೇಲೆ ಉಲ್ಲೇಖಿಸಿದಂತೆ ‘ಝೀರೋ ಡಿಫೆಕ್ಟ್ ಝೀರೋ ಇಫೆಕ್ಟ್’ನ ಆವಶ್ಯಕತೆಯನ್ನು ವ್ಯಕ್ತ ಪಡಿಸಲಾಗುತ್ತಿರುವುದರಿಂದ ಉತ್ಪಾದನೆಯ ಗುಣಮಟ್ಟವನ್ನು ವೃದ್ಧಿಸಲು, ಅದರ ತಪಾಸಣೆಯನ್ನು ಮಾಡುವ ಉಪಕರಣಗಳು ಆತ್ಯಾಧುನಿಕ ತಂತ್ರಜ್ಞಾನಕ್ಕೆ ಅಧರಿಸಿ ಇರಬೇಕು. ಡಿಜಿಟಲ್ ಉಪಕರಣಗಳಿಂದ ಲಭಿಸಿರುವ ಮಾಹಿತಿ ಸೂಕ್ತ ಮತ್ತು ಯೋಗ್ಯ ರೀತಿಯಲ್ಲಿ ಬಳಸಿದಲ್ಲಿ, ಅದರಿಂದ ಉಂಟಾಗುವ ಲಾಭಗಳು ಉಚ್ಚಮಟ್ಟದ್ದಾಗಿರುತ್ತವೆ. ಗುಣಮಟ್ಟದ ದೃಷ್ಟಿಕೋನದಲ್ಲಿ ಮಾಪನ ಕ್ಷೇತ್ರದಲ್ಲಿ ಹೊಸ ಉತ್ಪಾದನೆಗಳ, ಹೊಸ ತಂತ್ರಗಳ ಕುರಿತು ಈ ಸಂಚಿಕೆಯಿಂದ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ. ಹೊಸ ಉತ್ಪಾದನೆಗಳು ಈ ಅಂಕಣದಲ್ಲಿ ಮಾರ್ಪಾಸ್ ಕಂಪನಿಯು ಪ್ರಸ್ತುತ ಪಡಿಸಿದ IWAVE2 ಈ ಯಾಂತ್ರಿಕ ಬೋರ್ ಗೇಜ್ ಕುರಿತು ಉದಾಹರಣೆಗಳೊಂದಿಗೆ ಮಾಹಿತಿಯನ್ನು ನೀಡಲಾಗಿದೆ. ಯಂತ್ರಭಾಗಗಳ ಶೇಕಡಾ 100 ರಷ್ಟು ತಪಾಸಣೆಯ ಬದಲಾಗಿ ಮಾದರಿ ತಪಾಸಣೆಯನ್ನು ಮಾಡುವುದು ಪೂರಕವಾಗುವ ವಿಚಾರದಿಂದ ಅಭಿವೃದ್ಧಿ ಪಡಿಸಿರುವ ಟ್ರೈಮಾಸ್ ಇವರ ಏರ್ ಇಲೆಕ್ಟ್ರಾನಿಕ್ ಗೇಜಿಂಗ್ ಮತ್ತು ಆನ್ ಲೈನ್ SPC ರೀತಿಯ ಕುರಿತು ಉದಾಹರಣೆಯೊಂದಿಗೆ ಆಳವಾದ ವಿಚಾರವನ್ನು ತಿಳಿಸುವ ಲೇಖನವು ತಮಗೆಲ್ಲರಿಗೂ ಉಪಯುಕ್ತವಾಗಲಿದೆ. ಸಿ.ಎಮ್.ಎಮ್. ತಪಾಸಣೆಯ ಯಂತ್ರದ ವಿವರವನ್ನು ವಿಸ್ತಾರವಾಗಿ ತಿಳಿಸುವ ‘ಮಾಪನ’ ಈ ಅಂಕಣದಲ್ಲಿ ‘ಎಕ್ಯುರೇಟ್’ ಇವರ ಆ ಮಶಿನ್ ಭಾರತದಲ್ಲಿ ಅಭಿವೃದ್ಧಿ ಪಡಿಸುವಾಗ ಪಟ್ಟಿರುವ ಶ್ರಮದ ಮತ್ತು ಅದರ ಹಿನ್ನೆಲೆಯನ್ನು ತಮ್ಮ ತನಕ ಈ ಲೇಖನದಲ್ಲಿ ತಲುಪಿಸಲಾಗಿದೆ. ಇಂಡಸ್ಟ್ರಿ 4.0 ಈ ಹೊಸ ತಂತ್ರಜ್ಞಾನ ಮತ್ತು ಗೇಜಿಂಗ್ ಕ್ಷೇತ್ರದಲ್ಲಿ ಇದರ ಪ್ರಭಾವಶಾಲಿಯಾದ ಬಳಕೆಯನ್ನು ಮಾಡುವ ಕುರಿತಾದ ಲೇಖನವು ಖಂಡಿತವಾಗಿ ತಮಗೆಲ್ಲರಿಗೂ ಉಪಯುಕ್ತವಾಗಲಿದೆ. QVI ಕಂಪನಿಯು ಅಭಿವೃದ್ಧಿ ಪಡಿಸಿರುವ LFOV ತಂತ್ರಕ್ಕೆ ಆಧರಿಸಿರುವ ಮಶಿನ್ ಗಳ ಕುರಿತಾದ ಲೇಖನವು ಸ್ವಯಂಚಾಲನೆಯ ಅಂಕಣದಲ್ಲಿ ಸೇರ್ಪಡಿಸಲಾಗಿದೆ. ‘ಯಾಂತ್ರಿಕ ವಿಚಾರ ಸಂಕೀರಣ’ ಎಂಬ ವೆಬಿನಾರ್ ನ ಎರಡನೇ ಪ್ರಸ್ತುತಿಯಲ್ಲಿ ಚರ್ಚಿಸಲಾದ ‘ಸ್ಪಿಂಡಲ್ ಯಾಕೆ ಹಾಳಾಗುತ್ತವೆ’ ಎಂಬ ಹಿನ್ನೆಲೆಯ ವಿಚಾರವನ್ನು ‘ಲೋಹಕಾರ್ಯ‘ದ ಓದುಗರಿಗೆ ನೀಡಲಾಗಿದೆ. ಇದರ ಹೊರತಾಗಿ ಹಣಕಾಸಿನ ಯೋಜನೆ, ಜಿಗ್ಸ್ ಎಂಡ್ ಫಿಕ್ಸ್ಚರ್, ಸಿ.ಎನ್.ಸಿ. ಪ್ರೊಗ್ರಾಮಿಂಗ್, ಟೂಲಿಂಗ್ ನಲ್ಲಿರುವ ಸುಧಾರಣೆ ಇಂತಹ ಪ್ರತಿತಿಂಗಳ ಲೇಖಮಾಲೆಗಳು ತಮ್ಮ ದೈನಂದಿನ ಕೆಲಸದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ, ಎಂಬ ವಿಶ್ವಾಸವು ನಮಗಿದೆ.
‘ಲೋಹಕಾರ್ಯ’ದ ಎಲ್ಲ ಓದುಗರು, ಲೇಖಕರು ಮತ್ತು ಜಾಹಿರಾತುದಾರರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು!
ದೀಪಕ ದೇವಧರ