ವಿಜನ್ ಮೆಟ್ರಾಲಾಜಿಯ ಬಹುಮುಖತ್ವ (ವರ್ಸಟಾಲಿಟಿ)

@@NEWS_SUBHEADLINE_BLOCK@@

Lohkarya - Udyam Prakashan    29-Dec-2020   
Total Views |

1_1  H x W: 0 x
1970 ರ ಉತ್ತರಾರ್ಧದ ತನಕ, ಕಂಟೂರ್ ಪ್ರೊಜೆಕ್ಟರ್ ಅಥವಾ ಆಪ್ಟಿಕಲ್ ಕಂಪ್ಯಾರೇಟರ್ ಇದು ಸ್ವಯಂಚಾಲಿತ 2D ಪರೀಕ್ಷಣಾ ಪ್ರಣಾಳಿಕೆಯ ಪ್ರಮುಖ ಆಧಾರವಾಗಿತ್ತು. ಆಗಿನಿಂದ ಕಂಪ್ಯಾರೇಟರ್ ತಂತ್ರಜ್ಞಾನದಲ್ಲಿ ತುಂಬಾ ಪ್ರಗತಿಯಾಗಿದೆ. ಈಗ ಸ್ಪರ್ಶರಹಿತ (ನಾನ್ ಕಾಂಟ್ಯಾಕ್ಟ್) ನಿರೀಕ್ಷಣೆ ಮತ್ತು ಮಾಪನದ ಕೆಲಸದ ಕುರಿತಾದ ವಿಡಿಯೋಗಳಿಗೆ ಆಧರಿಸಿರುವ ಇಲೆಕ್ಟ್ರಾನಿಕ್ ಚಿತ್ರಗಳ ವಿಶ್ಲೇಷಣೆಯ ತಂತ್ರವು ಮುಂಚೂಣಿಯಲ್ಲಿ ತಲುಪಿದೆ.
ಆಪ್ಟಿಕ್ಸ್, ಕ್ಯಾಮೆರಾ, ಇಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ಇವೆಲ್ಲದರ ಕುರಿತು ಆಗಿರುವ ಪ್ರಗತಿಯಿಂದಾಗಿ ಕೆಲಸದ ಪ್ರಸ್ತುತಿ, ವೇಗ ಮತ್ತು ಬಹುಮುಖತ್ವ ಇವುಗಳ ಕುರಿತು ವಿಡಿಯೋ ಮೆಟ್ರಾಲಾಜಿ ಪ್ರಣಾಳಿಕೆಯು ತುಂಬಾ ಮುಂದೆ ಸರಿದಿದೆ. ಅವುಗಳಲ್ಲಿ ನೂರಾರು ಅಥವಾ ಸಾವಿರಾರು ನಿರ್ದೋಷವಾದ ಮಾಪನದ ಬಿಂದುಗಳನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುವ ಮತ್ತು ವಿಶ್ಲೇಷಣೆಯನ್ನು ಮಾಡುವ ಸಾಮರ್ಥ್ಯವಿರುತ್ತದೆ. ಇದರಿಂದಾಗಿ ವಿಡಿಯೋಗಳಿಗೆ ಆಧರಿಸಿರುವ, ಸ್ಪರ್ಶರಹಿತವಾದ ಮೆಟ್ರಾಲಾಜಿ ಪ್ರಣಾಳಿಕೆಯನ್ನು ಖರೀದಿಸುವಾಗ ಹೂಡಿರುವ ಬಂಡವಾಳದಿಂದ ಸಿಗುವ ರಿಟರ್ನ್ಸ್ ಗಳ ಕುರಿತು (ROI) ನಿರ್ಧಾರವನ್ನು ಮಾಡುವುದು ಸಹಜ ಸಾಧ್ಯವಾಗಿದೆ.
ವಿಜನ್ ಬಹುಮುಖತ್ವ
ಸ್ವಯಂಚಾಲಿತ ವಿಡಿಯೋ ಮಾಪನದ ಪ್ರಣಾಳಿಕೆಯು ಒಂದು ಯೋಗ್ಯರೀತಿಯ ಬಂಡವಾಳವಾಗಬಲ್ಲದು. ಈ ಕೆಳಗಿನ ಮೂರು ಅಂಶಗಳಿಂದ ಇದನ್ನು ತಿಳಿದುಕೊಳ್ಳಬಹುದು.
1. ಮಾಪನವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ. ಆಪರೇಟರ್ ಬದಲಾಯಿಸಿದ್ದರಿಂದ ಅವರವರ ಅಂದಾಜಿಗೆ ಅನುಸಾರವಾಗಿ ಉಂಟಾಗುವ ವ್ಯತ್ಯಾಸವು ಇಲ್ಲದಂತಾಗುತ್ತದೆ.
2. ಸಾಂಪ್ರದಾಯಿಕ, ಮ್ಯಾನ್ಯುವಲ್ ರೀತಿಗಳ ಹೋಲಿಕೆಯಲ್ಲಿ ತುಂಬಾ ಉಚ್ಚಮಟ್ಟದ ನಿಖರತೆ ಮತ್ತು ರಿಪಿಟ್ಯಾಬಿಲಿಟಿಯ ಸಾಮರ್ಥ್ಯವು ಲಭಿಸುತ್ತದೆ.
3. ಎಲ್ಲಕ್ಕಿಂತಲೂ ಸುಧಾರಿತ ವಿಡಿಯೋ ಮಾಪನದ ಮಶಿನ್ ನಲ್ಲಿ (VMM) ಟೆಕ್ ಟೈಲ್ ಪ್ರೋಬ್ ಮತ್ತು ಲೇಸರ್ ಇವುಗಳಂತಹ ಹೆಚ್ಚುವರಿ ಪ್ರೊಸೆಸರ್ ಸಂಯೋಜಿಸಲಾಗಿರುತ್ತವೆ. (ಇಂಟಿಗ್ರೇಟ್). ಇದರಿಂದಾಗಿ ಕೇವಲ ಆಪ್ಟಿಕಲ್ ಸೆನ್ಸರ್ ಮೂಲಕ ಮಾಪನ ಮಾಡಲಾರದ ವೈಶಿಷ್ಟ್ಯಗಳ ಮಾಪನವನ್ನೂ ಮಾಡಬಹುದಾಗಿದೆ.
ಹೆಚ್ಚುವರಿ ಸೆನ್ಸರ್ ಬಳಸುವ ಸಾಮರ್ಥ್ಯದಿಂದಾಗಿ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ವಿಡಿಯೋ ಮಾಪನ ಮಶಿನ್ ಗಳನ್ನು ಹೋಲಿಸಿದಲ್ಲಿ ಆಪ್ಟಿಕಲ್ ಗೇಜಿಂಗ್ ಪ್ರಾಡಕ್ಟ್ (OGP) SmartScope® ಪ್ರಣಾಳಿಕೆಗಳಿಗೆ ಹೆಚ್ಚು ಉಪಯುಕ್ತವಾಗಿರುತ್ತವೆ.
 
3_1  H x W: 0 x
ಚಿತ್ರ ಕ್ರ. 1 ರಲ್ಲಿ ತೋರಿಸಿರುವ ಕಾಲ್ಪನಿಕ ಚಿತ್ರದಲ್ಲಿ ಮಲ್ಟಿಸೆನ್ಸರ್ ಪ್ರಣಾಳಿಕೆಯು ಹೇಗೆ ಕೆಲಸವನ್ನು ನಿರ್ವಹಿಸುತ್ತದೆ, ಎಂಬುದರ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದು. ಕ್ಯಾಮೆರಾದಲ್ಲಿ ಕಾಣುವ ಎಲ್ಲ ವೈಶಿಷ್ಟ್ಯಗಳ ಮಾಪನವನ್ನು ಅದರಿಂದ ಮಾಡುವುದು ಸಾಧ್ಯ. ಉದಾಹರಣೆ, ಅದಕ್ಕೆ ವ್ಯಾಸ B ಮತ್ತು C ಕಾಣಬಲ್ಲವು. ಇದರಿಂದಾಗಿ ಅದು ಮಾಪನವನ್ನು ಮಾಡಬಲ್ಲದು. ಅದಕ್ಕೆ ಮೇಲ್ಭಾಗದಲ್ಲಿರುವ ಸರ್ಫೇಸ್ A ಕಾಣುತ್ತದೆ. ಇದರಿಂದಾಗಿ ಅದು ಆ ಪ್ಲೇನ್ ನಲ್ಲಿ ಇರುವ ದೂರವನ್ನು ಪರಿಶೀಲಿಸಬಲ್ಲದು. ಆದರೆ ಕ್ಯಾಮೆರಾ ವ್ಯಾಸ D ಮತ್ತು ಕೆಳಗಿನ ಸರ್ಫೇಸ್ E ನೋಡಲಾರದು. ಇದರಿಂದಾಗಿ ಕ್ಯಾಮೆರಾ ವ್ಯಾಸ D ಯ ಮಾಪನವನ್ನು ಮಾಡಲು ಒಂದು ಟಚ್ ಪ್ರೋಬ್ ಬಳಸಲಾಗುತ್ತದೆ. ಅದೇ ರೀತಿಯಲ್ಲಿ ಮೇಲ್ಭಾಗದ A ಸರ್ಫೇಸ್ ನ ಸಂದರ್ಭದಲ್ಲಿ ಕೆಳಗಿನ E ಸರ್ಫೇಸ್ ನ ಎತ್ತರದ ಮಾಪನವನ್ನು ಕೂಡಾ ಪ್ರೋಬ್ ನ ಸಹಾಯದಿಂದ ಮಾಡಬಹುದು. ಹಾಗೆಯೇ ಟಚ್ ಪ್ರೋಬ್ ನ ಸಹಾಯದಿಂದ ಬದಿಯಲ್ಲಿರುವ ಕಚ್ಚು (ಸೈಡ್ ಗ್ರೂವ್), ಕಟ್ಸ್ ಇಂತಹ ಘಟಕಗಳ ಮಾಪನವನ್ನೂ ಮಾಡುವುದು ಸಾಧ್ಯ.
 
4_1  H x W: 0 x
ಕಂಟೂರ್ ಸರ್ಫೇಸ್ ಹಾಗೆಯೇ ಸರ್ಫೇಸ್ ಆಳ ಅಥವಾ Z ಅಕ್ಷದ ದಪ್ಪವನ್ನು ಅಳೆಯಲು ಲೇಸರ್ ಬಳಸಲಾಗುತ್ತದೆ. (ಉದಾಹರಣೆ, ಯಾವುದೇ ನಾಣ್ಯದ ದಪ್ಪ). ಪ್ರೋಬ್ ಮೂಲಕ ಮಾಪನ ಮಾಡಲು ಕಠಿಣವಾದ ವಿಚಿತ್ರ ಗಾತ್ರದ ಸರ್ಫೇಸ್ ಸ್ಕ್ಯಾನ್ ಮಾಡಲು ಲೇಸರ್ ತುಂಬಾ ಪ್ರಭಾವಶಾಲಿಯಾಗಿರುತ್ತದೆ. ಟಚ್ ಪ್ರೋಬ್ ಸ್ಕ್ಯಾನಿಂಗ್ ನ ಹೋಲಿಕೆಯಲ್ಲಿ ಲೇಸರ್ ಸ್ಕ್ಯಾನಿಂಗ್ ತುಂಬಾ ವೇಗವುಳ್ಳದ್ದಾಗಿದೆ.
 
ಹಲವಾರು ವಿಡಿಯೋ ಮಾಪನವನ್ನು ಮಾಡುವ ಮಶಿನ್ ಗಳು ಅನೇಕ ಯಂತ್ರಭಾಗಗಳ ಪ್ರಕ್ರಿಯೆಯಲ್ಲಿ ತಪಾಸಣೆಗೋಸ್ಕರ ತುಂಬಾ ಉಪಯುಕ್ತವಾಗಬಲ್ಲವು. ಅದಕ್ಕಾಗಿ ಮಲ್ಟಿ ಸೆನ್ಸರ್ ಪ್ರಣಾಳಿಕೆಯು ವಿಡಿಯೋ ಡಾಟಾಗೋಸ್ಕರ, ಲೇಸರ್ ಮತ್ತು ಟೆಕ್ಸ್ ಟೈಲ್ ಪ್ರೋಬ್ ನಲ್ಲಿರುವ ವಿವರಗಳೊಂದಿಗೆ ಹೊಂದಾಣಿಸಲಾಗುತ್ತದೆ ಮತ್ತು ಒಂದಕ್ಕಿಂತ ಹೆಚ್ಚು ವಿವಿಧ ಮಾಪನವನ್ನು ಮಾಡುವ ಮಶಿನ್ ಗಳ ಸಾಮರ್ಥ್ಯವನ್ನು ನೀಡುತ್ತವೆ. VMM ನ ಕೆಲಸವನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
ಪ್ರಣಾಳಿಕೆಯ ವೈಶಿಷ್ಟ್ಯಗಳು
ಇದರ ಹೊರತಾಗಿ ಹೆಚ್ಚುವರಿ ವ್ಯವಸ್ಥೆಯಿಂದಾಗಿ ಉತ್ಪಾದಿಸಿರುವ ಮೊತ್ತ ಮೊದಲ ವಸ್ತುವಿನ ಸಂಪೂರ್ಣ ತಪಾಸಣೆಯನ್ನು ಮಾಡುವ ಸಾಮರ್ಥ್ಯವು ಲಭಿಸುತ್ತದೆ. ಇದರಲ್ಲಿ ವಿವಿಧ ಉಪಕರಣಗಳು ಅಥವಾ ಸಾಮಗ್ರಿಗಳನ್ನು ಬಳಸಿ ಯಂತ್ರಭಾಗಗಳ ಮಾಪನವನ್ನು ಮಾಡಿದ್ದರಿಂದ ಯಾವುದೇ ರೀತಿಯ ಅನಿಶ್ಚಿತತೆಯು ಇರುವುದಿಲ್ಲ.
ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಒಂದು ವಿಶೇಷ ಅಲ್ಟ್ರಾಲೈಟ್ ಪ್ರೋಬ್ (ಇದನ್ನು ಫೆದರ್ ಪ್ರೋಬ್ ಎಂದು ಕರೆಯುತ್ತಾರೆ. ಇದು OGP ಯ ಉತ್ಪಾದನೆಯಾಗಿದೆ) ಬಳಸಲಾಗುತ್ತದೆ. ಇದರ ವ್ಯಾಸ ತುಂಬಾ ಚಿಕ್ಕದಾಗಿರುತ್ತದೆ. (0.125 ಮಿ.ಮೀ.). ಪಾರಂಪರಿಕ ಟಚ್ ಪ್ರೋಬ್ ಬಳಸಿದಲ್ಲಿ ಡಿಸ್ಟಾರ್ಶನ್ ಆಗುವಂತಹ ಯಂತ್ರಭಾಗಕ್ಕೆ ಈ ಪ್ರೋಬ್ ನ ಚಿಕ್ಕ ಗಾತ್ರದ ಮತ್ತು ಒಳ್ಳೆಯ ಸಂವೇದನೆ ಇರುವ ಸೆನ್ಸರ್ ಹೆಚ್ಚು ಸೂಕ್ತವಾಗಿದೆ. ಯಾವ ಚಿಕ್ಕ ರಂಧ್ರಗಳನ್ನು ಕ್ಯಾಮೆರಾದಿಂದ ನೋಡಲಾರೆವೋ, ಅಂತಹ ತುಂಬಾ ಸೂಕ್ಷ್ಮ ಯಂತ್ರಭಾಗಗಳು ಅಥವಾ ವೈಶಿಷ್ಟ್ಯಗಳಿಂದ ಕೂಡಿರುವ ಮಾಪನದಲ್ಲಿ ಇವುಗಳನ್ನು ಬಳಸಲಾಗುತ್ತದೆ.
ಕ್ಯಾಮೆರಾ
ಉಚ್ಚಮಟ್ಟದ ರಿಸೋಲ್ಯುಶನ್ ಮೆಟ್ರಾಲಾಜಿ ಕ್ಯಾಮೆರಾ ಯಾವುದೇ ವಿಡಿಯೋ ಮಾಪನದ ಪ್ರಣಾಳಿಕೆಯ ಹೃದಯವಾಗಿದೆ. ಅದು ಒಂದು ಅಥವಾ ಅನೇಕ ರೀತಿಯ ಸೆನ್ಸರ್ ಗಳಿರುವ ಪ್ರಣಾಳಿಕೆಯಾಗಿದ್ದರೂ ಕೂಡಾ ಯಂತ್ರಭಾಗಗಳ ವೈಶಿಷ್ಟ್ಯಗಳ ವಿಸ್ತಾರವಾದ ಶ್ರೇಣಿಯಿಂದ ಕೂಡಿದ, ವೇಗದಿಂದ ಮತ್ತು ಸ್ಪರ್ಶರಹಿತ ಮಾಪನವನ್ನು ಮಾಡಲು ವಿಡಿಯೋಗಳನ್ನು ಬಳಸಲಾಗುತ್ತದೆ. ಇಮೆಜಿಂಗ್ ಆಪ್ಟಿಕ್ಸ್ ಮತ್ತು ಕ್ಯಾಮೆರಾ ಮೂಲಕ ಯಾವ ವೈಶಿಷ್ಟ್ಯಗಳನ್ನು ವೀಕ್ಷಿಸಲಾಗುತ್ತದೆಯೋ, ಅವೆಲ್ಲವುಗಳ ಮಾಪನ ಮಾಡುವುದು ಸಾಧ್ಯ. ಕ್ಯಾಮೆರಾ ಅದಕ್ಕೆ ನೀಡಿರುವ ಚಿತ್ರಗಳ ನಿರ್ದೋಷವಾದ ಮಾಪನವನ್ನು ಮಾಡಬಲ್ಲದು, ಎಂಬುದನ್ನು ಗಮನದಲ್ಲಿಡಬೇಕು. ಯಂತ್ರಭಾಗಗಳ ನೈಜ ಮತ್ತು ನಿರ್ದೋಷವಾದ ಮಾಪನಕ್ಕೋಸ್ಕರ ಮ್ಯಾಗ್ನಿಫೈಡ್ ಮತ್ತು ಯಾವುದೇ ಡಿಸ್ಟಾರ್ಶನ್ ಇಲ್ಲದಿರುವ ಚಿತ್ರಗಳ ಇಮೆಜಿಂಗ್ ಆಪ್ಟಿಕ್ಸ್ ನಿಂದ ತಯಾರಿಸಬೇಕು. ಈ ರೀತಿಯಲ್ಲಿ ಇಮೆಜಿಂಗ್ ಆಪ್ಟಿಕ್ಸ್ ಬೆಳಕಿನ ವ್ಯವಸ್ಥೆ (ಇಲ್ಯುಮಿನೇಶನ್) ಮತ್ತು ಕ್ಯಾಮೆರಾದ ಸಂಯೋಜನೆ, ಬೇಕಾಗಿರುವ ನಿಖರತೆಯನ್ನು ಗಳಿಸುವ ಪ್ರಣಾಳಿಕೆಯಲ್ಲಿ ಡಿಸೈನ್ ಮತ್ತು ಇಂಟಿಗ್ರೇಟ್ ಮಾಡುವುದೂ ಆವಶ್ಯಕವಾಗಿರುತ್ತದೆ.
ಸೆನ್ಸರ್
ಯಾವುದೇ ವೈಶಿಷ್ಟ್ಯಗಳ ಮಾಪನವನ್ನು ಮಾಡಲು ಯಾವುದೇ ರೀತಿಯ ಉಚ್ಚಗುಣಮಟ್ಟದ ಸೆನ್ಸರ್ ಗಳಿದ್ದಲ್ಲಿ ಅದು ಆ ವೈಶಿಷ್ಟ್ಯಗಳ ಸ್ಥಾನ ಮತ್ತು ಜಾಮೆಟ್ರಿ ಇವುಗಳಲ್ಲಿ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಆಪ್ಟಿಕಲ್ ಅಕ್ಷಗಳ ವರ್ಟಿಕಲ್ ನಲ್ಲಿರುವ ವೈಶಿಷ್ಟ್ಯಗಳನ್ನು ವಿಡಿಯೋ ಬಳಸಿ ನೋಡುವುದು ಸಾಧ್ಯ ಅಥವಾ ಮಾಪನ ಮಾಡುವುದೂ ಸಾಧ್ಯ. ಓರೆಯಾಗಿರುವ ಸರ್ಫೇಸ್ ನಲ್ಲಿರುವ ಬಿಂದು ಅಥವಾ ಎಲ್ಲ ವೈಶಿಷ್ಟ್ಯಗಳ ಮಾಪನವನ್ನು ವಿಡಿಯೋ ಸೆನ್ಸರ್ ಗಳ ಮೂಲಕ ಮಾಡಬಹುದು. ಆದರೆ ಅವುಗಳ ಮಾಪನವನ್ನು ಲೇಸರ್ ನಂತಹ ಸ್ಕ್ಯಾನಿಂಗ್ ಸೆನ್ಸರ್ ಗಳನ್ನು ಬಳಸಿ ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಮಾಡಬಹುದು.
ಲೇಸರ್ ಮತ್ತು ಪ್ರೋಬ್

6_1  H x W: 0 x 
ಇಂಟಿಗ್ರೇಟೆಡ್ ಲೇಸರ್ ಪ್ರೋಬ್, ತೊಡಕುಗಳಿಂದ ಕೂಡಿರುವ ಆಕಾರ, ಕಂಟೂರ್ ಮತ್ತು ಪ್ರೊಫೈಲ್ ಇವುಗಳ ಸ್ಪಷ್ಟವಾದ ಚಿತ್ರಣವನ್ನು ಮಾಡಲು ಬೃಹತ್ ಪ್ರಮಾಣದಲ್ಲಿ ಡಾಟಾ ಪಾಯಿಂಟ್ ಗಳನ್ನು ಒಟ್ಟುಗೂಡಿಸಬಹುದು. ಲೇಸರ್ ಪ್ರೋಬ್ (ಚಿತ್ರ ಕ್ರ. 3) ಬಳಸಿ ಪಾರದರ್ಶಕ ಅಥವಾ ಸೆಮಿ ಪಾರದರ್ಶಕವಾದ ಸರ್ಫೇಸ್ ಮತ್ತು ಆಳವಾದ, ಕಡಿಮೆ ಅಗಲ ಇರುವ ಕಚ್ಚುಗಳ ಅಥವಾ ಚಿಕ್ಕ ಬ್ಲೈಂಡ್ ರಂಧ್ರಗಳಂತಹ ಕಠಿಣ ಜಾಮೆಟ್ರಿ ಇರುವ ವೈಶಿಷ್ಟ್ಯಗಳ ಮಾಪನವನ್ನು ಯೋಗ್ಯವಾಗಿ ಮಾಡಬಲ್ಲದು.
ವರ್ಟಿಕಲ್ ಸರ್ಫೇಸ್, ಬ್ಲೈಂಡ್ ರಂಧ್ರಗಳು ಮತ್ತು ಪೊಳ್ಳು ಈ ವಿಧದ ವೈಶಿಷ್ಟ್ಯಗಳ ಸಹಜವಾದ ತಪಾಸಣೆಯನ್ನು ಆಪ್ಟಿಕ್ಸ್ ಅಥವಾ ಲೇಸರ್ ಬಳಸಿ ಮಾಡುವುದು ಅಸಾಧ್ಯ. ಈ ಪರಿಸ್ಥಿತಿಯಲ್ಲಿ ಒಂದು ಟಚ್ ಪ್ರೋಬ್ ಅಥವಾ ಸ್ಕ್ಯಾನಿಂಗ್ ತಪಾಸಣೆಯ ರೀತಿಯನ್ನು ಬಳಸಿ ಕಂಟೂರ್, ವರ್ಟಿಕಲ್ ಸರ್ಫೇಸ್, ಬೋರ್, ಟೋಳ್ಳು ಮತ್ತು ಅಂಡರ್ ಹ್ಯಾಂಗ್ಸ್ ಇವುಗಳ ಮಾಪನವನ್ನು ಮಾಡಬಹುದು. ಈ ಮಾಪನಗಳು ಮತ್ತು ವಿಡಿಯೋ ಅಥವಾ ಲೇಸರ್ ಮಾಪನಗಳ ಪರಿಣಾಮವನ್ನು ಒಂದು ಸ್ವಯಂಚಾಲಿತ ರೀತಿಯಲ್ಲಿ ಒಟ್ಟು ಮಾಡಬಹುದು.

7_1  H x W: 0 x 
 
ಸ್ಪರ್ಶ ರಹಿತ (ವಿಡಿಯೋ ಮತ್ತು ಲೇಸರ್) ಮತ್ತು ಸ್ಪರ್ಶ ಸಹಿತ (ಟಚ್ ಪ್ರೋಬ್) ತಂತ್ರಜ್ಞಾನ ಬಳಸಿ ಒಂದೇ ಮಾಪನದ ಮಶಿನ್ ನಲ್ಲಿ ಅಸಂಖ್ಯ ಯಂತ್ರಭಾಗಗಳು ಮತ್ತು ವೈಶಿಷ್ಟ್ಯಗಳ ಮಾಪನವನ್ನು ಮಾಡುವುದೂ ಸಾಧ್ಯ. ಅನೇಕ ರೀತಿಯ ಮಶಿನ್ ಗಳನ್ನು ಉಪಯೋಗಿಸುವುದಕ್ಕಿಂತ ಒಂದೇ ಮಲ್ಟೀಸೆನ್ಸರ್ ಮೆಟ್ರಾಲಾಜಿ ಮಶಿನ್ ಬಳಸಿದಲ್ಲಿ ಅದಕ್ಕೆ ತಗಲುವ ಖರ್ಚು ತುಂಬಾ ಕಡಿಮೆ ಮತ್ತು ಅದಕ್ಕೆ ಜಾಗವೂ ತುಂಬಾ ಕಡಿಮೆ ಸಾಕಾಗುತ್ತದೆ. ಇದರ ಹೊರತಾಗಿ ಕೆಲಸಗಾರರಿಗೆ ನೀಡಲಾಗುವ ತರಬೇತಿಯ ಖರ್ಚು ಕೂಡಾ ಕಡಿಮೆಯಾಗುತ್ತದೆ. ಕಾರಣ ಆಪರೇಟರ್ ರಿಗೆ ಅನೇಕ ಮಶಿನ್ ಗಳ ಹೊರತಾಗಿ ಕೇವಲ ಒಂದೇ ಮಶಿನ್ ನ ಮಾಪನದ ಯಂತ್ರಣೆಯಲ್ಲಿ ತಮ್ಮ ಪ್ರಭುತ್ವವನ್ನು ಪ್ರಸ್ಥಾಪಿಸಬೇಕಾಗುತ್ತದೆ. ಪ್ರಾರಂಭದಿಂದಲೇ ಒಂದಕ್ಕಿಂತ ಹೆಚ್ಚು ಸೆನ್ಸರ್ ಗಳ ಕುರಿತು ವಿಚಾರ ಮಾಡಿ ಪ್ರಣಾಳಿಕೆ ಮತ್ತು ಸಾಫ್ಟ್ ವೇರ್ ಡಿಸೈನ್ ಮಾಡಬೇಕು. ಆವಶ್ಯಕತೆಗೆ ತಕ್ಕಂತೆ ಕ್ರಮಕ್ರಮವಾಗಿ ಒಂದೊಂದು ಸೆನ್ಸರ್ ಹೆಚ್ಚಿಸುತ್ತಾ ಹೋದಲ್ಲಿ ತಯಾರಿಸಿರುವ ಪ್ರಣಾಳಿಕೆಗಿಂತ ಖಂಡಿತವಾಗಿಯೂ ಹೆಚ್ಚು ಕಾರ್ಯಕ್ಷಮತೆ ಲಭಿಸುತ್ತದೆ. 
ವಿಸ್ತಾರವಾದ ದೃಷ್ಟಿಕೋನ ಇರುವ ಪ್ರಣಾಳಿಕೆ
ಸೂಕ್ಷ್ಮದರ್ಶಕದ ಮೂಲಕ ಮಾಪನವನ್ನು ಮಾಡುವಾಗ ಅತ್ಯಂತ ಕಡಿಮೆ ಕ್ಷೇತ್ರದ ದೃಶ್ಯ (ವ್ಯೂ) ಮತ್ತು ಗರಿಷ್ಠ ಪ್ರಮಾಣದಲ್ಲಿ ಆಳವಿಲ್ಲದ ಫೋಕಸ್ ಲಭಿಸುತ್ತದೆ. ಹೊಸ ಶ್ರೇಣಿಯ ಬೆಂಚ್ ಟಾಪ್ ವಿಡಿಯೋ ಮೆಟ್ರಾಲಾಜಿ ಮಶಿನ್ ನಲ್ಲಿ ವಿಶಾಲವಾದ ದೃಶ್ಯ ಕ್ಷೇತ್ರ (ಲಾರ್ಜ್ ಫೀಲ್ಡ್ ಆಫ್ ವ್ಯೂ LFOV) ಲಭಿಸುತ್ತದೆ. 100 ಮಿ.ಮೀ.ತನಕದ ಕ್ಷೇತದ ದೃಶ್ಯವು ಸಿಗುವುದರಿಂದ ಈ ಮಶಿನ್ ಗಳು ಚಿಕ್ಕ ಯಂತ್ರಭಾಗಗಳ 2D ಮಾಪನಕ್ಕೋಸ್ಕರ ಆದರ್ಶಪ್ರಾಯವಾಗಿವೆ. ವಿಶಾಲ ಕ್ಷೇತ್ರವು ಕಂಡುಬರುವುದರಿಂದ ಒಂದೇ ವಿಡಿಯೋ ಸ್ನ್ಯಾಪ್ ಶಾಟ್ ನಲ್ಲಿ ಸಂಪೂರ್ಣ ಯಂತ್ರಭಾಗವನ್ನು ನೋಡುವುದು ಮತ್ತು ಅಳೆಯುವುದೂ ಸಾಧ್ಯ. ವಿವಿಧ ಕೋನಗಳಿಂದ, ಒಂದಕ್ಕಿಂತ ಹೆಚ್ಚು, ಒಂದರ ನಂತರ ಇನ್ನೊಂದು ಸ್ನ್ಯಾಪ್ ಶಾಟ್ ಪಡೆಯುವುದಕ್ಕಿಂತ ಇದು ತುಂಬಾ ಸುಲಭವಾಗಿದೆ.
ಇನ್ನಿತರ ಮಾಪನ ಪದ್ಧತಿಗಳನ್ನು ಹೋಲಿಸಿದಲ್ಲಿ (ಉದಾಹರಣೆ, ಟಚ್ ಪ್ರೋಬ್) LFOV ಪ್ರಣಾಳಿಕೆಯು ನಿಮಿಷಗಳ ಹೊರತಾಗಿ ಸೆಕಂಡುಗಳಲ್ಲಿ ಮಾಪನವನ್ನು ಪೂರ್ತಿಗೊಳಿಸುತ್ತದೆ. ಅದನ್ನು ಬಳಸಿದಾಗ ಒಮ್ಮೆಯೇ ಅನೇಕ ಸೂಕ್ಷ್ಮ ಯಂತ್ರಭಾಗಗಳ ಮಾಪನವನ್ನು ಮಾಡುವುದು ಸಾಧ್ಯ.
ಕೆಲಮೊಮ್ಮೆ ಯಾವುದೊಂದು ಯಂತ್ರಭಾಗವನ್ನು ಸಾಫ್ಟ್ ವೇರ್ ಮೂಲಕ ಸ್ವಯಂಚಾಲಿತವಾಗಿ ಡಿಸೈನ್ ಮಾಡಲಾಗುತ್ತದೆ. ಇದರಿಂದಾಗಿ ದುಬಾರಿಯಾಗಿರುವ ಫಿಕ್ಚ್ಸರ್ ಗಳಿಗೆ ಮಾಡಲಾಗುವ ಖರ್ಚು ಕಡಿಮೆಯಾಗುತ್ತದೆ. ಅಲ್ಲದೇ ಉತ್ಪಾದನೆಯ ತಪಾಸಣೆಯನ್ನು ವೇಗವಾಗಿ, ನಿಖರವಾದ ಮಾಪನದ ಮೂಲಕ ಮಾಡಿದಲ್ಲಿ ಉಚ್ಚಮಟ್ಟದ ಪರಿಣಾಮಗಳು ಲಭ್ಯವಾಗುತ್ತವೆ.
ಸಾಫ್ಟ್ ವೇರ್

8_1  H x W: 0 x 
ಉಚ್ಚಗುಣಮಟ್ಟದ ಕಾರ್ಯಸಾಮರ್ಥ್ಯವಿರುವ ವಿಡಿಯೋ ಮಾಪನದ ಪ್ರಣಾಳಿಕೆಯನ್ನು 3D CAD ಮಾಡೆಲ್ ನೊಂದಿಗೆ ಸರಿಹೊಂದಾಣಿಸಿರುವ ಸಾಫ್ಟ್ ವೇರ್ ಮೂಲಕ ನಡೆಸಲಾಗುತ್ತದೆ. ಅತ್ಯಾಧುನಿಕ ರೀತಿಯ ಆಪ್ಟಿಕ್ಸ್ ಮೂಲಕ, ಯಂತ್ರಭಾಗಗಳ ಸೂಕ್ಷ್ಮ, ತೊಡಕುಗಳಿರುವ ವೈಶಿಷ್ಟ್ಯಗಳನ್ನು ಉಚ್ಚಮಟ್ಟದ ನಿಖರವಾದ ಮಾಪನ ಮತ್ತು ಆಯಾಮಗಳ ವಿಶ್ಲೇಷಣೆಯನ್ನು ಈ ಸಾಫ್ಟ್ ವೇರ್ ನೀಡುತ್ತದೆ. ಇಂತಹ ಅಭಿವೃದ್ಧಿಯನ್ನು ಮಾಡಿರುವ ಮೆಟ್ರಾಲಾಜಿ ಸಾಧನಗಳು ವಿಜನ್ ಗೆ ಆಧರಿಸಿರುವ ಪ್ರಣಾಳಿಕೆಯ ಉತ್ಪಾದನೆಯಿಂದಾಗುವ ಎಲ್ಲ ರೀತಿಯ ಲಾಭಗಳನ್ನು, ಉಚ್ಚಮಟ್ಟದ ಮೌಲ್ಯವನ್ನು ಹೊಂದಿರುವ ಸೂಕ್ಷ್ಮ ಯಂತ್ರಭಾಗಗಳಷ್ಟು ಪ್ರಮಾಣದಲ್ಲಿ ನೀಡುತ್ತವೆ.
 
ಸ್ವಯಂಚಾಲಿತ ವಿಡಿಯೋ ಮಾಪನದ ಪ್ರಣಾಳಿಕೆಯಲ್ಲಿ ಯಂತ್ರಭಾಗಗಳ ಚಿತ್ರವನ್ನು ಆಪ್ಟಿಕಲ್ ನಿಂದ ದೊಡ್ಡದಾಗಿ ತಯಾರಿಸುತ್ತಾರೆ. ಹೆಚ್ಚು ರಿಸೋಲ್ಯುಶನ್ ವಿಡಿಯೋ ಕ್ಯಾಮೆರಾ ಬಳಸಿ ಚಿತ್ರಗಳನ್ನು ಸೆರೆ ಹಿಡಿಯುತ್ತವೆ, ಬದಿಗಳು ಮತ್ತು ವೈಶಿಷ್ಟ್ಯಗಳ ಲೊಕೇಶನ್ ನ ಮಾಪನ ಮಾಡಲು ಅಭಿವೃದ್ಧಿ ಪಡಿಸಿರುವ ಎಡ್ಜ್ ಡಿಟೆಕ್ಷನ್ ಸಾಫ್ಟ್ ವೇರ್ ಅಲ್ಗೋರಿದಮ್ ಬಳಸುತ್ತಾರೆ.
ಈ ಸಾಫ್ಟ್ ವೇರ್ ನಿಂದ ನಡೆಸಲಾಗುವ ಪ್ರಕ್ರಿಯೆಯ ವೇಗ ಮತ್ತು ನಿಖರತೆ ಇದರಿಂದಾಗಿ ಮಾಪನ, ಉತ್ಪಾದನೆಯ ಸ್ಥಿತಿಯು ತುಂಬಾ ಅನುಕೂಲಕರವಾಗುತ್ತದೆ.
 
ಚಿತ್ರ ಕ್ರ. 4 ರಲ್ಲಿ ತೋರಿಸಿರುವ ಚಿತ್ರಗಳಲ್ಲಿ ಹೊಸ ಹೊಸ ರೀತಿಯ ಶಕ್ತಿಶಾಲಿಯಾದ ಎಡ್ಜ್ ಡಿಟೆಕ್ಷನ್ ಟೂಲ್ ನಿಂದಾಗಿ ಸಾಫ್ಟ್ ವೇರ್ ಕಡಿಮೆ ಕಾಲಾವಧಿಯಲ್ಲಿ ಹೇಗೆ ಎಡ್ಜ್ ಗಳನ್ನು ಹುಡುಕುತ್ತದೆ ಎಂಬುದನ್ನು ತೋರಿಸಲಾಗಿದೆ. ಅದರಂತೆ ಮಾಪನವನ್ನು ಮಾಡುವ ಎಲ್ಲ ವೈಶಿಷ್ಟ್ಯಗಳನ್ನು ಕೂಡಾ ಅದು ತಕ್ಷಣ ಹುಡುಕುತ್ತದೆ. ಉದಾಹರಣೆ, ಮಾಪನ ಮಾಡುವಂತಹ ಎಲ್ಲ ರಂಧ್ರಗಳನ್ನು ತಕ್ಷಣವೇ ತೋರಿಸಲಾಗುತ್ತದೆ. ಮಾಪನದ ನಂತರ ಅವುಗಳ ಚಿತ್ರದಲ್ಲಿ ತೋರಿಸಿದಂತೆ ಮಾಪನದ ಮೌಲ್ಯಗಳನ್ನು ತಕ್ಷಣವೇ ಸ್ಕ್ರೀನ್ ನಲ್ಲಿ ತೋರಿಸುತ್ತದೆ.
ಟೆಲಿಸೆಂಟ್ರಿಕ್ ಲೆನ್ಸ್
ಹಲವಾರು ವಿಡಿಯೋ ಮೆಟ್ರಾಲಾಜಿ ಪ್ರಣಾಳಿಕೆಗಳಲ್ಲಿ ಅಭಿವೃದ್ಧಿ ಪಡಿಸಿರುವ ಟೆಲಿಸೆಂಟ್ರಿಕ್ ಆಪ್ಟಿಕ್ಸ್ ನೀಡಲಾಗಿರುತ್ತವೆ. ಟೆಲಿ ಸೆಂಟ್ರಿಸಿಟಿ (ಚಿತ್ರ ಕ್ರ. 5) ಒಂದು ಆಪ್ಟಿಕಲ್ ಗುಣವಿಶೇಷವಾಗಿದೆ. ಇದರಿಂದಾಗಿ ಆಪ್ಟಿಕಲ್ ಪ್ರಣಾಳಿಕೆಯ ಕ್ಷೇತ್ರದಲ್ಲಿ ಯಾವುದೇ ಆಳವಿರುವ ಯಾವುದೊಂದು ವಸ್ತುವಿನ ಚಿತ್ರದ ಆಕಾರವು ಸ್ಥಿರವಾಗಿರುತ್ತದೆ. ಪೂರ್ಣವಾದ ಟೆಲಿಸೆಂಟ್ರಿಕ್ ಆಪ್ಟಿಕಲ್ ಪ್ರಣಾಳಿಕೆಯಲ್ಲಿ ಚಿತ್ರವು ಎಷ್ಟು ಚಿಕ್ಕದು ಅಥವಾ ದೊಡ್ಡದಾಗಿ ಮಾಡಿದರೂ ಕೂಡಾ ಅದರ ಆಕಾರವು ಯೋಗ್ಯವಾಗಿಯೇ ಉಳಿಯುತ್ತದೆ. ಟೆಲಿಸೆಂಟ್ರಿಕ್ ಇಲ್ಲದಿರುವ ಆಪ್ಟಿಕ್ಸ್ ಬಳಸಿದ್ದರಿಂದ ಡಿಸ್ಟಾರ್ಶನ್ ಆಗುವ ಚಿತ್ರಗಳ ಸ್ಪರೂಪವು 3D ಆಕಾರದ ಪ್ರಿಝಮ್ಯಾಟಿಕ್ ಭಾಗಗಳಿಗೆ ಟೆಲಿಸೆಂಟ್ರಿಕ್ ಆಪ್ಟಿಕ್ಸ್ ಆದರ್ಶಪ್ರಾಯವಾಗಿದೆ. ಟೆಲಿಸೆಂಟ್ರಿಕ್ ಲೆನ್ಸ್ ನ ಕೆಲಸವನ್ನು ವೀಕ್ಷಿಸಲು ಪಕ್ಕದಲ್ಲಿರುವ QR ಕೋಡನ್ನು ಮೊಬೈಲ್ ನಿಂದ್ ಸ್ಕ್ಯಾನ್ ಮಾಡಿರಿ.
 
 
ಉಚ್ಚಮಟ್ಟದ ಕಾರ್ಯಕ್ಷಮತೆಯುಳ್ಳ ಆಪ್ಟಿಕಲ್ ಪ್ರಣಾಳಿಕೆಯನ್ನು ಬಳಸಿದಾಗ ಸಂಪೂರ್ಣ ಫೀಲ್ಡ್ ಆಫ್ ವ್ಯೂ ನಲ್ಲಿ ಯಾವುದೇ ವಕ್ರತೆ ಇಲ್ಲದೇ ಅಥವಾ ಡಿಸ್ಟಾರ್ಶನ್ ಇಲ್ಲದೇ ಒಂದು ಸಮತಟ್ಟಾದ ಚಿತ್ರವು ಲಭಿಸುತ್ತದೆ. ಇದರಿಂದಾಗಿ ಯಂತ್ರಭಾಗಗಳ ದೃಶ್ಯ ಕ್ಷೇತ್ರದಲ್ಲಿ ಎಲ್ಲಿಯೂ ಇದನ್ನು ಇಡಬಹುದು ಮತ್ತು ಅದರ ಮಾಪನವನ್ನು ನಿರ್ದೋಷವಾಗಿ ಮಾಡಬಹುದು.
 
10_1  H x W: 0
 
ಡಿಸ್ಟಾರ್ಶನ್ ಇಲ್ಲದಿರುವ ಆಪ್ಟಿಕ್ಸ್ ಇದು ವಿಶೇಷವಾಗಿ LFOV ಪ್ರಣಾಲಿಕೆಗೋಸ್ಕರ (ಚಿತ್ರ ಕ್ರ. 6) ಮಹತ್ವದ್ದಾಗಿರುತ್ತದೆ. ಕಾರಣ ಇದರಲ್ಲಿ ಕೇವಲ ಅದರ ಮಧ್ಯಭಾಗದಲ್ಲಿ ಮಾತ್ರವಲ್ಲದೇ, ಸಂಪೂರ್ಣ ದೃಶ್ಯ ಕ್ಷೇತ್ರದಲ್ಲಿ ಆಕಾರದ ಮಾಪನವನ್ನು ಮಾಡುವಂತಹ ಗುರಿ ಇರುತ್ತದೆ.
ಇನ್ನಿತರ ವಿಧದ ವಿಡಿಯೋ ಮೆಟ್ರಾಲಾಜಿ ಪ್ರಣಾಳಿಕೆಯಲ್ಲಿ ಸ್ಥಿರವಾದ ಲೆನ್ಸ್ ಆಪ್ಟಿಕ್ಸ್, ಒಳಭಾಗದ ಕ್ಯಾಲಿಬ್ರೇಶನ್ ನೊಂದಿಗೆ ಝೂಮ್ ಆಪ್ಟಿಕ್ಸ್ ಅಥವಾ ಡ್ಯುಯೆಲ್ ಮ್ಯಾಗ್ನಿಫಿಕೇಶನ್ ಫಿಕ್ಸ್ಡ್ ಲೆನ್ಸ್ ಇವುಗಳನ್ನು ಬಳಸಲಾಗುತ್ತದೆ. ಪ್ರಣಾಳಿಕೆಯಲ್ಲಿ ಆಪ್ಟಿಕ್ಸ್ ನ ಆಯ್ಕೆ ಮಾಡುವಾಗ ಯಂತ್ರಭಾಗಗಳ ವೈಶಿಷ್ಟ್ಯಗಳ ಆಕಾರ ಮತ್ತು ಥ್ರೂಪುಟ್ ಇವುಗಳ ಬೇಡಿಕೆ ಇವುಗಳ ಆಪ್ಟಿಕಲ್ ವೈಶಿಷ್ಟ್ಯಗಳೊಂದಿಗೆ ಹೊಂದಾಣಿಕೆಯನ್ನು ಮಾಡುವ ವಿಚಾರವನ್ನು ಮಾಡಿ ಉತ್ಕೃಷ್ಟ ಕಾರ್ಯಸಾಮರ್ಥ್ಯವನ್ನು ಪಡೆಯಬಹುದಾಗಿದೆ.
ವ್ಯಾವಹಾರಿಕತೆ

11_1  H x W: 0  
ವಿಜನ್ ಮೆಟ್ರಾಲಾಜಿ ಕ್ಷೇತ್ರದಲ್ಲಿ ಸದ್ಯಕ್ಕೆ ಅನೇಕ ಉತ್ಪಾದಕರು ಮತ್ತು ಮಾಡೆಲ್ ಗಳೂ ಉಪಲಬ್ಧವಿವೆ. ಅವುಗಳ ಚಟುವಟಿಕೆ ಮತ್ತು ಬೆಲೆ ಇವುಗಳಲ್ಲಿ ತುಂಬಾ ವ್ಯತ್ಯಾಸವಿದೆ. ಇದರಿಂದಾಗಿ ಸೂಕ್ತವಾದ ಆಯ್ಕೆಯನ್ನು ಮಾಡುವಾಗ ಮಾಪನ ಮಾಡುವ ಮಶಿನ್ ನ ಸಾಮರ್ಥ್ಯ, ಅದರಿಂದ ಅಪೇಕ್ಷಿಸಿರುವ ಉದ್ದೇಶದೊಂದಿಗೆ ಸರಿಹೊಂದುತ್ತದೆಯೇ, ಇಲ್ಲವೇ ಎಂಬುದನ್ನು ನೋಡಬೇಕು. ಒಂದು ವೇಳೆ ಚಿಕ್ಕ ಯಂತ್ರಭಾಗಗಳಿಗೋಸ್ಕರ ಉಚ್ಚಮಟ್ಟದ ಥ್ರೂಪುಟ್ ಇರುವ ಮಾಪನವನ್ನು ಮಾಡುವುದಾದಲ್ಲಿ, LFOV ವಿಡಿಯೋ ಮಾಪನದ ಮಶಿನ್ (ಚಿತ್ರ ಕ್ರ. 7) ಈ ಪ್ರಕ್ರಿಯೆಯಲ್ಲಿ ಉತ್ಪಾದನೆಯ ತಪಾಸಣೆಯ ಮಶಿನ್ ಎಂಬುದಾಗಿ ತುಂಬಾ ಉಪಯುಕ್ತವಾಗಿದೆ. ಸೂಕ್ಷ್ಮವಾದ ವೈಶಿಷ್ಟ್ಯಗಳಿರುವ ಯಂತ್ರಭಾಗಗಳಲ್ಲಿ ಅಭಿವೃದ್ಧಿ ಪಡಿಸಿರುವ ವಿಡಿಯೋ ಮೆಟ್ರಾಲಾಜಿ ಪ್ರಣಾಳಿಕೆಯ ಆಯ್ಕೆಯು ಶ್ರೇಷ್ಠವಾಗಿದೆ. ಅನೇಕ ವಿಧಗಳ ಮತ್ತು ಆಕಾರಗಳ ವೈಶಿಷ್ಟ್ಯಗಳಿರುವ ಜಟಿಲವಾದ ಭಾಗಗಳಿಗೆ ವಿಡಿಯೋ, ಟಚ್ ಪ್ರೋಬ್, ಲೇಸರ್ ಮತ್ತು ಮೈಕ್ರೋ ಪ್ರೋಬ್ ನಂತಹ ಅನೇಕ ಸೆನ್ಸರ್ ಗಳಿರುವ ಸಂಪೂರ್ಣ ಸ್ವಯಂಚಾಲಿತ ತಪಾಸಣೆಯು ಆದರ್ಶಪ್ರಾಯವಾಗಿದೆ.
 
ಇದರ ಹೊರತಾಗಿ ಅನೇಕ ವಿಡಿಯೋ ಮೆಟ್ರಾಲಾಜಿ ಮಶಿನ್ ಅಂಕಿಅಂಶಗಳ ಪ್ರಕ್ರಿಯೆಯ ನಿಯಂತ್ರಣೆ (SPC), ವರದಿ ನೀಡುವುದು ಅಥವಾ ವಿಶ್ಲೇಷಣೆಯನ್ನು ಮಾಡುವುದು ಇಂತಹ ಸಂಯೋಜಿತ (ಇಂಟಿಗ್ರೇಟೆಡ್) ಕೆಲಸಗಳನ್ನು ನೀಡಬಲ್ಲವು. ಇದರಿಂದಾಗಿ ಹೆಚ್ಚುವರಿ ಲಾಭಕಾರಿಯಾದ ಕೆಲಸಗಳನ್ನು ಮಾಡುವುದು ಸಾಧ್ಯ ಮತ್ತು ಬಂಡವಾಳದ ಹೂಡುವಿಕೆಯೂ ಯೋಗ್ಯ ರೀತಿಯಲ್ಲಿ ವೃದ್ಧಿಸುತ್ತದೆ.
ಉತ್ಪಾದನೆಯ ಜಗತ್ತಿನಲ್ಲಿ ವೇಗ ಮತ್ತು ನಿಖರತೆ ಇವೆರಡೂ ಪ್ರಾಥಮಿಕತೆಯನ್ನು ಹೊಂದಿವೆ. ವಿಡಿಯೋ ತಂತ್ರಜ್ಞಾನವು ಇವೆರಡನ್ನೂ ನೀಡುತ್ತದೆ. ಗುಣಮಟ್ಟ ಮತ್ತು ಉತ್ಪಾದನೆಯ ಖರ್ಚು ಇವೆರಡರ ಕುರಿತು ಕ್ಷಿಪ್ರವಾಗಿ ಲಾಭವನ್ನು ನೀಡಲು ಬಹುಮುಖತ್ವವುಳ್ಳ ಮೆಟ್ರಾಲಾಜಿಯ ಉಪಾಯಗಳಾಗಿವೆ.
@@AUTHORINFO_V1@@