ಮಿಲ್ಲಿಂಗ್ ನಲ್ಲಿರುವ ಉರುಟಾದ ಇಂಟರ್ ಪೊಲೇಶನ್-2

@@NEWS_SUBHEADLINE_BLOCK@@

Lohkarya - Udyam Prakashan    12-Dec-2020   
Total Views |

‘ಲೋಹಕಾರ್ಯ’ ನವಂಬರ್ 2020 ರ ಸಂಚಿಕೆಯಲ್ಲಿ ನಾವು ಸಿ.ಎನ್.ಸಿ. ಪ್ರೊಗ್ರಾಮಿಂಗ್ ನಲ್ಲಿ ಟೂಲ್ ಗೆ ಕಾಂಟೂರ್ ನೊಂದಿಗೆ ಸಂಬಂಧಪಟ್ಟ ಲೀನಿಯರ್ ಇಂಟರ್ ಪೊಲೇಶನ್ ಮತ್ತು ಸರ್ಕ್ಯುಲರ್ ಇಂಟರ್ ಪೊಲೇಶನ್ ಈ ಎರಡು ಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಬಾಸ್ ಮಿಲ್ಲಿಂಗ್ ಕುರಿತು ತಿಳಿದುಕೊಳ್ಳಲಿದ್ದೇವೆ.

ಬಾಸ್ ಮಿಲ್ಲಿಂಗ್ (ಚಿತ್ರ ಕ್ರ. 9)

1_1  H x W: 0 x 
ಸಂಪೂರ್ಣವಾಗಿ ವರ್ತುಲದ ಹೊರ ಭಾಗದಲ್ಲಿ ಮಾಡಲಾಗುವ ಮಿಲ್ಲಿಂಗ್ ನಲ್ಲಿ ಬಾಸ್ ಅಥವಾ ಸ್ಪಿಗಾಟ್ ಮಿಲ್ಲಿಂಗ್ ಎಂಬ ಪಾರಿಭಾಷಿಕವಾದ ಶಬ್ದವನ್ನು ಬಳಸಲಾಗುತ್ತದೆ. ಇದಕ್ಕೆ ವಿರುದ್ಧವಾದ ವಿಧ ಎಂದರೆ ಉರುಟಾದ ಗ್ರೂವ್ ನ ಪೂರ್ಣವಾದ ವರ್ತುಲಾಕಾರದ ಒಳಭಾಗದಲ್ಲಿ ಮಾಡಲಾಗುವ ಮಿಲ್ಲಿಂಗ್. 0.375’’ ಆಳದಲ್ಲಿ ಪ್ರೊಗ್ರಾಮ್ ಮಾಡುವಾಗ 0.75’’ ನ ವ್ಯಾಸವಿರುವ ಎಂಡ್ ಮಿಲ್ ಕಟರ್ ಬಳಸಲಾಗುತ್ತದೆ. ಈ ಕೆಲಸಕ್ಕೋಸ್ಕರ ಬಳಸಲಾಗುವ ಪ್ರೊಗ್ರಾಮ್ ಈ ಮುಂದೆ ನೀಡಲಾಗಿದೆ.

02930
(0.75'' ವ್ಯಾಸದ ಎಂಡ್ ಮಿಲ್ ಕಟರ್)
N1 G20
N2 G17 G40 G80
N3 G90 G54 G00 X -1.0 Y1.5 S750 M03
N4 G43 Z0.1 H01
N5 G01 Z-0.375 F40.0 M08
N6 G41 Y0.906 D01 F20.0
N7 Y0 F14.0
N8 G02 J-0.906
N9 G01 X 1.0 F20.0 M09
N10 G40 Y1.5 F40.0 M05
N11 G91 G28 X0 Y0 Z2.0
N12 M30
%

ಬಾಸ್ ಮಿಲ್ಲಿಂಗ್ ನ ಉದಾಹರಣೆ (ಚಿತ್ರ ಕ್ರ. 10)

2_1  H x W: 0 x 
ಕಡಿಮೆ ಅಗಲ ಇರುವ ವರ್ತುಲಗಳ ಯಂತ್ರಣೆ : ಕಡಿಮೆ ಅಗಲ ಇರುವ ವರ್ತುಲಗಳ ಯಂತ್ರಣೆಯನ್ನು ಮಾಡುವುದು ತುಂಬಾ ಕಠಿಣವಾದ ಕೆಲಸವಾಗಿದೆ. ವರ್ತುಲಾಕಾರದ ಗ್ರೂವ್ ಅಥವಾ ಕೌಂಟರ್ ಬೋರ್ ಇಂತಹವುಗಳು ಅದರ ಉದಾಹರಣೆಗಳಾಗಿವೆ.

ಉದಾಹರಣೆ
0.250’’ ಆಳದಲ್ಲಿ Ø 1.25’’ ನ ವರ್ತುಲಾಕಾರದ ಟೊಳ್ಳು ಭಾಗದ ಯಂತ್ರಣೆಯನ್ನು ಮಾಡಬೇಕಾಗಿದೆ. ಎಂಟ್ರಿ ಮಾಡುವ ಬಿಂದು ಮಹತ್ವದ್ದಾಗಿಲ್ಲವೋ, ಅಲ್ಲಿ ಪ್ರಾರಂಭಿಸುವುದಾದರೆ ಸಾಮಾನ್ಯವಾದ ರೇಖೀಯ ಚಟುವಟಿಕೆಗಳನ್ನು ಬಳಸಲಾಗುತ್ತದೆ. ಯಂತ್ರಣೆಗೋಸ್ಕರ ಸೆಂಟರ್ ಕಟಿಂಗ್ ಎಂಡ್ ಮಿಲ್ ಬಳಸಲಾಗುತ್ತದೆ. (ಚಿತ್ರ ಕ್ರ. 11)

4_1  H x W: 0 x 
03500
(0.ವ್ಯಾಸದ ಸೆಂಟರ್ ಎಂಡ್ ಮಿಲ್)
G1 G20
N2 G17 G40 G80
N3 G90 G54 G00 X0 Y0 S900 M03
N4 G43 Z0.1 H01
N5 G01 Z-0.25 F10.0 M08
N6 G41 Y0.625 D01 F12.0
N7 G03 J-0.625
ಮೇಲಿನ ಪ್ರೊಗ್ರಾಮ್ ನಲ್ಲಿ ಆವರಣದ ಪ್ರಾರಂಭ ಬಿಂದು ಮತ್ತು ಅಂತಿಮ ಬಿಂದು ಎರಡೂ ಗಡಿಯಾರದಲ್ಲಿ 12 ಗಂಟೆಯ ಸ್ಥಿತಿಯಂತೆ ಪ್ರೊಗ್ರಾಮ್ ಮಾಡುವಾಗ 90˚ ಯಲ್ಲಿ ತೋರಿಸಲಾಗುತ್ತದೆ. ಆವರಣದ ಮಧ್ಯದಿಂದ ಆಗುವಂತಹ ಚಟುವಟಿಕೆಗಳಲ್ಲಿ ಕಟರ್ ನ ತ್ರಿಜ್ಯದಷ್ಟು ಆಫ್ ಸೆಟ್ ನ ಪ್ರಾರಂಭವಾಗುತ್ತದೆ.
ಒಳಭಾಗದಲ್ಲಿರುವ ವರ್ತುಲದ ಯಂತ್ರಣೆ – ವರ್ತುಲಾಕಾರದ ಪ್ರವೇಶ (ಚಿತ್ರ ಕ್ರ. 12) : ಸರ್ಫೇಸ್ ಫಿನಿಶ್ ಸುಧಾರಿಸಲು ವರ್ತುಲಾಕಾರದ ಚಟುವಟಿಕೆಗಳ ಪ್ರಾರಂಭ ಬಿಂದುವಿನ ತನಕ ಒಂದೇ ಆವರಣದ ಆಕಾರದ ಮಾರ್ಗದಲ್ಲಿ ತಲುಪುವುದು ಸಾಧ್ಯ. ಯಾವಾಗಲೂ ಪ್ರಾರಂಭನ್ನು ಮಧ್ಯದಿಂದಲೇ ಮಾಡಬೇಕಾಗುತ್ತದೆ. ಮೊದಲಾಗಿ 45˚ ಯಲ್ಲಿ ರೇಖೀಯ ಚಟುವಟಿಕೆಗಳನ್ನು ಮಾಡಿ ಕಟರ್ ನ ತ್ರಿಜ್ಯದ ಆಫ್ ಸೆಟ್ ನೀಡಲಾಗುತ್ತದೆ ಮತ್ತು ನಂತರ ಒಂದೇ ವರ್ತುಲದಲ್ಲಿ ಸರಿಹೊಂದಿಸುವ ಆವರಣದಿಂದ ಪ್ರಾರಂಭಿಸಲಾಗುತ್ತದೆ.
03501

5_1  H x W: 0 x 
(0.5 ವ್ಯಾಸದ ಸೆಂಟರ್ ಎಂಡ್ ಮಿಲ್)
N1 G20
N2 G17 G40 G80
N3 G90 G54 G00 X0 Y0 S900 M03
N4 G43 Z0.1 H01
N5 G01 Z-0.25 F10.0 M08
N6 G41 X0.3125 Y0 0.3125 D01 F12.0
N7 G03 X0 Y0.625 R0.3125
N8 J-0.625
N9 X-0.3125 Y0.3125 R0.3125
N10 G01 G40 X0 Y0 F20.0 M09
N11 G91 G28 X0 Y0 Z2.0 M05
N12 M30
%
ವರ್ತುಲಗಳನ್ನು ಕತ್ತರಿಸುವ ಸೈಕಲ್
ತುಂಬಾ ಮಶಿನ್ ಗಳ ನಿಯಂತ್ರಕಗಳಲ್ಲಿ (ಕಂಟ್ರೋಲರ್) ವರ್ತುಲಾಕಾರವನ್ನು ಕತ್ತರಿಸಲು ಸಂಜ್ಞೆಗಳನ್ನು (ಕಮಾಂಡ್ ಗಳನ್ನು) ಅಳವಡಿಸಲಾಗಿರುತ್ತದೆ. ಈ ವ್ಯವಸ್ಥೆಯು ಮಿತ್ಸುಬಿಶಿ ಮತ್ತು ಯಾಸ್ ನ್ಯಾಕ್ ನಲ್ಲಿರುತ್ತದೆ. ಆದರೆ ಫಾನುಕದಲ್ಲಿ ಇರುವುದಿಲ್ಲ. ಇದರಲ್ಲಿ ಸಂಪೂರ್ಣ ವರ್ತುಲವನ್ನು ಕತ್ತರಿಸಲು ವಿಶೇಷವಾದ ಪ್ರಾರಂಭದ ಸಂಜ್ಞೆ, ಮಾದರಿಗೋಸ್ಕರ G12 ಮತ್ತು G13 ಅಳವಡಿಸಲಾಗಿರುತ್ತವೆ. ಪ್ರೊಗ್ರಾಮಿಂಗ್ ಗೋಸ್ಕರ ಇದು ತುಂಬಾ ಉಪಯುಕ್ತವಾದ ವ್ಯವಸ್ಥೆಯಾಗಿದೆ. ಆದರೆ ಹಲವಾರು ವರ್ಷಗಳಿಂದ ಫಾನುಕ ಇವರು ಅದನ್ನು ನೀಡುವುದನ್ನು ನಿಲ್ಲಿಸಿದ್ದಾರೆ.
G02 ಮತ್ತು G12 ಹಾಗೆಯೇ G03 ಮತ್ತು G13 ಇವುಗಳಲ್ಲಿ ಒಂದು ತರ್ಕಶುದ್ಧವಾದ ಸಂಬಂಧವಿರುತ್ತದೆ.
G12 ಸಂಪೂರ್ಣ ವರ್ತುಲಾಕಾರವನ್ನು ಕತ್ತರಿಸುವ ಸೈಕಲ್ CW
G13 ಪೂರ್ಣ ವರ್ತುಲ ತುಂಡು ಮಾಡುವ ಸೈಕಲ್ CCW (ಚಿತ್ರ ಕ್ರ. 13)

6_1  H x W: 0 x 
ಪ್ರೊಗ್ರಾಮ್ ಫಾರ್ಮಾಟ್
G12 I.... D... F CW
G13 I.... D... F CCW
I : ಪೂರ್ತಿಯಾಗಿರುವ ವರ್ತುಲದ ತ್ರಿಜ್ಯ, ಅದಕ್ಕೆ ಒಂದೇ ಚಿಹ್ನೆಯೊಂದಿಗೆ ಹೆಚ್ಚುವರಿ ಮೌಲ್ಯದಲ್ಲಿ ಪ್ರೊಗ್ರಾಮ್ ಮಾಡಲಾಗಿರುತ್ತದೆ.
D : ಕಟರ್ ನ ತ್ರಿಜ್ಯದ ಆಫ್ ಸೆಟ್ ಗೋಸ್ಕರ ಕಂಟ್ರೋಲ್ ರಜಿಸ್ಟರ್ ಕ್ರಮಾಂಕ.
F : ಫೀಡ್ ರೇಟ್
ಧನ (ಪಾಸಿಟಿವ್) ಚಿಹ್ನೆ :
ಯಂತ್ರಣೆಯ ಪ್ರಾರಂಭ ಬಿಂದು 0° ಇರಬಹುದು.
ಋಣ (ನಿಗೆಟಿವ್) ಚಿಹ್ನೆ :
ಯಂತ್ರಣೆಯ ಪ್ರಾರಂಭ ಬಿಂದು 180° ಇರಬಹುದು.
ಇನ್ನಿತರ ಶರತ್ತುಗಳು
1. ಕಟಿಂಗ್ ಟೂಲ್ ನ ಕೆಲಸದ ಪ್ರಾರಂಭವನ್ನು ಯಾವಾಗಲೂ ಉರುಟಾದ ಗ್ರೂವ್ ನ ಮಧ್ಯ ಭಾಗದಿಂದಲೇ ಮಾಡಬೇಕು.
2. ಯಂತ್ರಣೆಯ ಪ್ಲೇನ್ ಯಾವಾಗಲೂ XY ಪ್ಲೇನ್ ಎಂಬುದಾಗಿ ಸೆಟ್ ಮಾಡಬೇಕು.
3. ಆವರಣದ ಪ್ರಾರಂಭ ಬಿಂದುವನ್ನು ಸಾಮಾನ್ಯವಾಗಿ ಸರಿಹೊಂದಿಸಲಾಗಿರುತ್ತದೆ. ಅದು 0 ಅಥವಾ 180 ಅಂಶಗಳಷ್ಟು ಅಳವಡಿಸಬೇಕು. (Y ಅಕ್ಷದಿಂದ ಪ್ರಾರಂಭಿಸುವುದು ಸಾಧ್ಯವಿಲ್ಲ).
4. ಕಟರ್ ನ ತ್ರಿಜ್ಯದಲ್ಲಿ ಅಳವಡಿಸಿರುವ ಆಫ್ ಸೆಟ್ ಬಲ ಬದಿಗೆ G12, ಎಡ ಬದಿಗೆ G13.
5. G12 ಮತ್ತು G13 ಬಳಸುತ್ತಿರುವಾಗ G41 ಮತ್ತು G42 ಈ ಸಂಜ್ಞೆಗಳನ್ನು ಬಳಸಬಾರದು.
ಉದಾಹರಣೆ :
G12/G13 ಸೈಕಲ್ ಬಳಸಿ ಸಂಪೂರ್ಣ ವೃತ್ತದ ಯಂತ್ರಣೆ.

ಪ್ರೊಗ್ರಾಮ್
03502 (0.5 ವ್ಯಾಸದ ಸೆಂಟರ್ ಕಟಿಂಗ್ ಎಂಡ್ ಮಿಲ್)
N1 G20
N2 G17 G40 G80
N3 G90 G54 G00 X0 Y05900 M03
N4 G43 Z0.1 H01
N5 G01 Z-0.25 F10.0 M08
N6 G13 I0.625 D01 F12.0 M09
N7 G91 G28 X0 Y0 Z2.0 M05
N M30
%
@@AUTHORINFO_V1@@