ಇಂಡಸ್ಟ್ರಿ 4.0 ರ ಯುಗದಲ್ಲಿ ಗೇಜಿಂಗ್

@@NEWS_SUBHEADLINE_BLOCK@@

Lohkarya - Udyam Prakashan    10-Dec-2020   
Total Views |
ಪ್ರಸ್ತುತ ಕೈಗಾರಿಕೋದ್ಯಮಗಳಲ್ಲಿ ಇಂಡಸ್ಟ್ರಿ 4.0 ಎಂದು ಪ್ರಖ್ಯಾತವಾಗಿರುವ ಶಬ್ದವನ್ನು ಎಲ್ಲರೂ ತಿಳಿದಿದ್ದೇವೆ. ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಇದರ ಕುರಿತು ಅರಿವೂ ಇದೆ. ಮುಂಬರುವ ದಿನಗಳಲ್ಲಿ ತುಂಬಾ ಕಡೆಯಲ್ಲಿ ವಿಶೇಷವಾಗಿ ಓ.ಇ.ಎಮ್. ಮತ್ತು ಟಿಯರ್ 1 ಸ್ತರದ ಕಂಪನಿಗಳಲ್ಲಿ ಇದನ್ನು ನಿರಂತರವಾಗಿ ಬಳಸುವುದನ್ನು ನೋಡಬಹುದು.
ಇಂಡಸ್ಟ್ರಿ 4.0

1_1  H x W: 0 x 
ಇಂಡಸ್ಟ್ರಿ 4.0 ಇದು ಉತ್ಪಾದನೆಯ ಕ್ಷೇತ್ರದಲ್ಲಿ ಸ್ವಯಂಚಾಲನೆ ಮತ್ತು ತಂತ್ರಜ್ಞಾನದ ಮಾಹಿತಿಗೆ (ಡಾಟಾ) ನೀಡಿರುವ ಒಂದು ವರದಾನವಾಗಿದೆ. ಇದರಲ್ಲಿ ಸೈಬರ್ ಫಿಸಿಕಲ್ ಸಿಸ್ಟಮ್, ಇಂಟರ್ ನೆಟ್ ಆಫ್ ಥಿಂಗ್ಸ್ (IoT), ಕ್ಲೌಡ್ ಮತ್ತು ಕಾಗ್ನಿಟಿವ್ ಕಂಪ್ಯೂಟಿಂಗ್ ಇವುಗಳೂ ಸೇರಿವೆ. ಸಾಮಾನ್ಯವಾಗಿ ಇಂಡಸ್ಟ್ರಿ 4.0 ಇದನ್ನು ನಾಲ್ಕನೇ ಔದ್ಯೋಗಿಕ ಕ್ರಾಂತಿ ಎಂದು ಉಲ್ಲೇಖಿಸಲಾಗುತ್ತಿದೆ. ಇಂಡಸ್ಟ್ರಿ 4.0 ಕಾರ್ಯಗತ ಮಾಡಿದ್ದರಿಂದ ನಮ್ಮ ಕಾರ್ಖಾನೆಗಳು ಅತ್ಯಾಧುನಿಕವಾಗುವ ಅಪೇಕ್ಷೆ ಇರುತ್ತದೆ. ಇಂಡಸ್ಟ್ರಿ 4.0 ಇದರ ಮೂಲಭೂತ ತತ್ವಗಳೆಂದರೆ ಮಶಿನ್, ಕಾರ್ಯವಸ್ತು ಮತ್ತು ಯಂತ್ರಣೆ (ಸಿಸ್ಟಮ್) ಈ ಮೂರು ಘಟಕಗಳನ್ನು ಒಂದಕ್ಕೊಂದು ಜೋಡಿಸಿ ಉತ್ಪಾದನೆಯಲ್ಲಿ ಇಂತಹ ಅತ್ಯುತ್ತಮವಾದ ಶ್ರೇಣಿಯನ್ನು ತಯಾರಿಸುವುದು, ಇದರಿಂದಾಗಿ ಈ ಮೂರು ಘಟಕಗಳನ್ನು ಸ್ವತಂತ್ರವಾಗಿ ಒಂದರೊಂದರಲ್ಲಿ ನಿಯಂತ್ರಿಸಬಲ್ಲವು.
 
ಉತ್ಪಾದನೆಯ ಕ್ಷೇತ್ರದಲ್ಲಿ ಮೂಂಚೂಣಿಯಲ್ಲಿರುವ ಕಂಪನಿಗಳಲ್ಲಿ ಇದನ್ನು ಈ ಮುಂಚೆಯೇ ಕಾರ್ಯಗತಗೊಳಿಸಲಾಗಿದೆ. ಈ ಕಂಪನಿಗಳಲ್ಲಿ ಮೊತ್ತಮೊದಲಾಗಿ ಮಶಿನ್ ಗಳ ಇಂಟಿಗ್ರೇಶನ್ ಮತ್ತು ಉತ್ಪಾದನೆಯೊಂದಿಗೆ ಸಂಬಂಧಪಟ್ಟ ಇನ್ನಿತರ ಕೆಲಸಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು ಗಮನಕ್ಕೆ ಬರುತ್ತಿದೆ. ಇದು ಸೂಕ್ತವಾದ ಅಂಶವೂ ಆಗಿದೆ. ಹಲವಾರು ಕಂಪನಿಗಳಲ್ಲಿ ಗೇಜಿಂಗ್ ಅಂದರೆ ಮಾಪನಗಳ ಕ್ಷೇತ್ರದಲ್ಲಿಯೂ ಇಂಡಸ್ಟ್ರಿ 4.0 ಇದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿಲಾಗಿದೆ. ಈ ಲೇಖನದಲ್ಲಿ ನಾವು ಇಂಡಸ್ಟ್ರಿ 4.0 ಕುರಿತಾದ ಚರ್ಚೆಯನ್ನು ಕೇವಲ ಗೇಜಿಂಗ್ ಕ್ಷೇತ್ರಕ್ಕೆ ಮೀಸಲಾಗಿರಿಸಿಲಿದ್ದೇವೆ. ಗೇಜಿಂಗ್ ಕ್ಷೇತ್ರದಲ್ಲಿ ಇಂತಹ ಬದಲಾವಣೆಗಳನ್ನು ಮಾಡಲು ಪ್ರಮುಖವಾದ ಅಂಶವೆಂದರೆ ಅನೇಕ ಹಂತಗಳಲ್ಲಿ ತಾಂತ್ರಿಕ ಮಟ್ಟವನ್ನು ಅಭಿವೃದ್ಧಿ ಮಾಡುವ ಆವಶ್ಯಕತೆ, ಎಂದು ಹೇಳಬಹುದು.
 
  • ಗೇಜಿಂಗ್ ನ ಡಿಜಿಟಲೈಸೇಶನ್ ಇದು ಇದರ ಮೊತ್ತಮೊದಲ ಹೆಜ್ಜೆಯಾಗಿದೆ. ಮಾಪನದ ರೀತಿಯಲ್ಲಿ ಯಾಂತ್ರಿಕ ಡಯಲ್ ಬಳಸಲಾಗುತ್ತದೆ. ಅವುಗಳನ್ನು ಡಿಜಿಟಲ್ ಸ್ವರೂಪದಲ್ಲಿ ಬದಲಾಯಿಸುವುದು ಅತ್ಯಾವಶ್ಯಕವಾಗಿದೆ.
  • ಸಾಧ್ಯವಿರುವಲ್ಲಿ ಅತ್ಯಾವಶ್ಯಕವಾದ ಪ್ಯಾರಾಮೀಟರ್ ಗಳಿಗೋಸ್ಕರ ಗೇಜಿಂಗ್ ಯಂತ್ರಣೆ ಮತ್ತು ಮಶಿನ್ ಇವುಗಳನ್ನು ಒಂದಕ್ಕೊಂದನ್ನು ಜೋಡಿಸುವುದು ಆವಶ್ಯಕವಾದಿದೆ.
  • ಗೇಜಿಂಗ್ ನಲ್ಲಿ ಲಭಿಸುವ ಮಾಪನಗಳನ್ನು (ರೀಡಿಂಗ್) ಸರ್ವರ್ ಗೆ ಅಥವಾ ಕ್ಲೌಡ್ ನಲ್ಲಿ ಸೇರಿಸುವುದು.
  • ಮುಂದಿನ ಕೆಲವು ಸೈಕಲ್ ಗಳಲ್ಲಿ ಸಂಭವಿಸಬಹುದಾದ ತಪ್ಪುಗಳ ಅಥವಾ ದೋಷಗಳ ಅಂದಾಜನ್ನು ಮುಂಚೆಯೇ ಮಾಡುವ ಕುರಿತು ಗೇಜಿಂಗ್ ಯಂತ್ರಣೆಯನ್ನು ಅತ್ಯಾಧುನಿಕವಾಗಿ ತಯಾರಿಸುವುದು, ಇದರಿಂದಾಗಿ ಕ್ಲೌಡ್ ಅಥವಾ ಫೋನ್ ಮೂಲಕ ಸಂಬಂಧಪಟ್ಟ ಜವಾಬ್ದಾರಿಯುಳ್ಳ ವ್ಯಕ್ತಿಗಳಿಗೆ ಯೋಗ್ಯವಾದ ಸಂದೇಶವನ್ನು ನೀಡಲಾಗುತ್ತದೆ.
 
3_1  H x W: 0 x
  • ಅತ್ಯಾವಶ್ಯಕವಾಗಿರುವ ಪ್ಯಾರಾಮೀಟರ್ ಗಳ ಮಾಪನಗಳ ಸಂದರ್ಭದಲ್ಲಿ ಯಂತ್ರಭಾಗಗಳ ಹಿನ್ನೆಲೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತಹ (ಟ್ರೆಸೆಬಿಲಿಟಿ) ಅಂಶಗಳನ್ನು ನೊಂದಾಯಿಸುವುದು. ಇದನ್ನು ಕೇವಲ ಮೆಟ್ರಾಲಾಜಿಗೋಸ್ಕರ ಸೀಮಿತವಾಗಿಡದೇ ಅದರ ವ್ಯಾಪ್ತಿಯನ್ನು ಲೋಹಶಾಸ್ತ್ರ (ಮೆಟಲರ್ಜಿ) ಮತ್ತು ಇನ್ನಿತರ ಗುಣಧರ್ಮಗಳೊಂದಿಗೆ ಸಂಬಂಧಪಟ್ಟ ನೊಂದಾಣಿಕೆಗಳ ತನಕ ಹೆಚ್ಚಿಸುವ ಅಗತ್ಯವಿದೆ.
  • ಎಲ್ಲ ಗೇಜಿಂಗ್ ಯಂತ್ರಣೆಯ ಇನ್-ಪುಟ್ ಒಂದೇ ಜಾಗದಲ್ಲಿ ಮಾಡಲು ಒಂದು ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಬೇಕು. ಉದಾಹರಣೆ, ಆನ್ ಲೈನ್ ಸಿ.ಎಮ್.ಎಮ್. (ಕೋಆರ್ಡಿನೇಟ್ ಮೆಜರಿಂಗ್ ಮಶಿನ್) ಅಥವಾ ಶಾಪ್ ಫ್ಲೋರ್ ನಲ್ಲಿ ಪ್ರಮುಖವಾಗಿ ಪ್ರಕ್ರಿಯೆಯನ್ನು ಪರಿಶೀಲಿಸಲು ಬಳಸಲಾಗುವ ಯಾವುದೇ ಡಿಜಿಟಲ್ ಸಾಮಗ್ರಿಗಳು.
ಕಠಿಣ ವೇರ್ ಮತ್ತು ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆದಂತೆ, ಈ ಸುಧಾರಣೆಗಳು ಬಳಕೆಗಾರರಿಗೆ ಹೆಚ್ಚು ಸುಲಭ ಮತ್ತು ಲಾಭಕಾರಿಯಾಗಬಲ್ಲವು.
ನಮ್ಮ ಹಲವಾರು ಗ್ರಾಹಕರು ಅವರದೇ ಆದ ರೀತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಇದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಯಾವ ಕ್ಷೇತ್ರದಲ್ಲಿ ಇದನ್ನು ಕಾರ್ಯಗತಗೊಳಿಸಲಾಯಿತೋ, ಆ ಕ್ಷೇತ್ರವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
1. ಸಿ.ಎನ್.ಸಿ. ಮಶಿನ್ ಡಿಜಿಟಲ್

4_1  H x W: 0 x 
ಗೇಜಿಂಗ್ ಗೆ ಜೋಡಿಸುವುದು : ಗೇಜಿಂಗ್ ಯಂತ್ರಣೆಯನ್ನು ಒಂದಕ್ಕೊಂದಕ್ಕೆ ಜೋಡಿಸುವ ರೀತಿಗಳು ಅನೇಕ. ಆದರೆ ಕೈಗಾರಿಕೋದ್ಯಮಗಳಲ್ಲಿ ಪ್ರಚಲಿತವಿರುವ ಎರದು ರೀತಿಗಳನ್ನು ಈ ಮುಂದೆ ನೀಡಲಾಗಿದೆ. ಎರಡೂ ರೀತಿಗಳಲ್ಲಿ ರೀಡಿಂಗ್ ಸ್ವತಂತ್ರವಾಗಿ ಸರ್ವರ್ ನಲ್ಲಿ ಅಳವಡಿಸುವುದು ಮತ್ತು ಡಾಟಾ ಕಾಪಾಡುವುದು ಸಾಧ್ಯವಾಗಿದೆ.
ಎ. ಯಂತ್ರಭಾಗಗಳು ರಿಜೆಕ್ಟ್ ಆಗುವಾಗ ಮಶಿನ್ ಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಮಶಿನ್ ನಿಲ್ಲಿಸಲಾಗುತ್ತದೆ. ಇದು ಮೂಲಭೂತವಾದ ಪ್ರಕ್ರಿಯೆಯಾಗಿದ್ದರೂ ಕೂಡಾ ಇದರಿಂದಾಗಿ ದೋಷದಿಂದ ಕೂಡಿರುವ ಯಂತ್ರಭಾಗಗಳು ತಯಾರಾಗುವುದನ್ನು ತಡೆಯಬಹುದು. ಆಪರೇಟರ್ ಅಥವಾ ಸೂಪರ್ ವೈಸರ್ ರೀಡಿಂಗ್ ಗೆ ಅವಲಂಬಿಸಿ ಸುಧಾರಣೆಯ ಕೆಲಸವನ್ನು ನಿರ್ವಹಿಸುತ್ತಾನೆ ಮತ್ತು ಮಶಿನ್ ಮತ್ತೆ ಪ್ರಾರಂಭಿಸುತ್ತಾನೆ.
 
ಬಿ. ಪ್ರಗತಿಪರ ಕೆಲಸದ ರೀತಿಯಲ್ಲಿ ಯಂತ್ರಭಾಗಗಳ ರೀಡಿಂಗ್ ಮಶಿನ್ ನ ಕಂಟ್ರೋಲರ್ ಕಡೆಗೆ ಕಳುಹಿಸಲಾಗುತ್ತದೆ. ಮುಂದಿನ ಯಂತ್ರಭಾಗಗಳ ರೀಡಿಂಗ್ ಈ ತನಕ ಉತ್ಪಾದನೆಯ ರೀಡಿಂಗ್ ನ ಸರಾಸರಿಯಷ್ಟು (ಮೀನ್) ಮಾಡಲು ಟೂಲ್ ಆಫ್ ಸೆಟ್ ಸ್ವಯಂಚಾಲಿತವಾಗಿ ಹೊಂದಾಣಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಪ್ರತಿಯೊಂದು ಯಂತ್ರಭಾಗಗಳಿಗೋಸ್ಕರ ಅಥವಾ ಪ್ರಕ್ರಿಯೆಯ ನಿಯಂತ್ರಣೆಯಲ್ಲಿ ನಿಗದಿಸಿದಂತೆ ಪ್ರತಿ ಐದರಲ್ಲಿ ಒಂದರಂತೆ ಮಾಡಬಹುದಾಗಿದೆ. ಈ ರೀತಿ ಮಾಡುವಲ್ಲಿ ಮಶಿನ್ ಯಾಂತ್ರಿಕವಾಗಿ (ಸ್ಲೈಡ್ ಅಥವಾ ಟೂಲ್ ಇತ್ಯಾದಿ) ಉಚ್ಚಮಟ್ಟದಲ್ಲಿರುವುದು ಅತ್ಯಾವಶ್ಯಕವಾಗಿದೆ.
 
2. ಎಲ್ಲ ಗೇಜಿಂಗ್ ಯಂತ್ರಣೆಗೋಸ್ಕರ ಸೆಂಟ್ರಲೈಜ್ಡ್ ಸಾಫ್ಟ್ ವೇರ್ : ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಸಾಮಗ್ರಿಗಳಲ್ಲಿ ರೀಡಿಂಗ್ ಹೊರಗೆ ಕಳುಹಿಸುವ ಸಾಮರ್ಥ್ಯವು ಇರುತ್ತದೆ. ಇದರಿಂದಾಗಿ ಗ್ರಾಹಕರು ಅವರ ಸರ್ವರ್ ಗೆ ಕಳುಹಿಸುತ್ತಾರೆ. ನಿರ್ಧರಿಸಿರುವ ಸಮಯದ ನಂತರ, ಅಂದರೆ ಉದಾಹರಣೆ, ಪ್ರತಿಯೊಂದು ಗಂಟೆ ಅಥವಾ ಪ್ರತಿ ಶಿಫ್ಟ್ ಅಥವಾ ಪ್ರತಿಯೊಂದು ಜಾಬ್ ಇತ್ಯಾದಿಗಳು ಮುಗಿದ ನಂತರ ಗೇಜ್ ನಿಂದ ಲಭಿಸಿರುವ ಮಾಪನಗಳು ಸರ್ವರ್ ನೆಡೆಗೆ ಕಳುಹಿಸಲಾಗುತ್ತದೆ. ಸಾಫ್ಟ್ ವೇರ್ ಹೇಗಿದೆಯೋ, ಅದಕ್ಕೆ ಅನುಸಾರವಾಗಿ ಈ ಮಾಪನಗಳನ್ನು ವರ್ಕ್ ಗ್ರೂಪ್ ಗೆ ಸಂಬಂಧಪಟ್ಟ ಸದಸ್ಯರ ಮೂಲಕ ನೊಂದಾಯಿಸಲಾಗುತ್ತದೆ. ಈ ಪ್ಯಾರಾಮೀಟರ್ ಗಳಿಗೋಸ್ಕರ ಆ ಪ್ರಕ್ರಿಯೆಯ ಸ್ಟ್ಯಾಟಿಸ್ಟಿಕಲ್ ಪ್ರೊಸೆಸ್ ಕಂಟ್ರೋಲ್ ನ (ಎಸ್.ಪಿ.ಸಿ.) ವೈಶಿಷ್ಟ್ಯಗಳ ತಪಾಸಣೆಯನ್ನೂ ಮಾಡುವುದೂ ಸಾಧ್ಯ.
ಒಂದೇ ಬಾರಿ ಅನೇಕ ಗೇಜ್ ಗಳಿಗೋಸ್ಕರ ಇದನ್ನು ಆನ್ ಲೈನ್ ಕಾರ್ಯಗತಗೊಳಿಸುವುದೂ ಸಾಧ್ಯ. ಇದಕ್ಕೋಸ್ಕರ ಮಲ್ಟಿ ಗೇಜಿಂಗ್, ಡಿಜಿಟಲ್ ಕಂಪಾರೇಟರ್ (ಹೋಲಿಕೆಯ ಯಂತ್ರ), ಸಿ.ಎಮ್.ಎಮ್. ಇತ್ಯಾದಿಗಳನ್ನು ಒಂದೇ ಸರ್ವರ್ ನ ಮೂಲಕ ಜೋಡಿಸಲಾಗುತ್ತದೆ ಮತ್ತು ಎಲ್ಲ ರಿಯಲ್ ಟೈಮ್ ಡಾಟಾ ಒಂದು ಸ್ವತಂತ್ರವಾದ ಸರ್ವರ್ ನಿಂದ ನೋಡಬಹುದಾಗಿದೆ ಮತ್ತು ಶೇಖರಿಸುವುದೂ ಸಾಧ್ಯ. ಈ ಹಿಂದೆ ಉತ್ಪಾದನೆಯ ಕ್ಷೇತ್ರದಲ್ಲಿ ಯಾವುದೇ ಕಾರ್ಯವಸ್ತು ತಯಾರಾದಲ್ಲಿ ಅದರ ಮಾಪನಗಳನ್ನು ಪಡೆದು ಆವುಗಳು ನಿರ್ದೋಷವಾಗಿವೆಯೇ ಇಲ್ಲವೇ ಎಂಬುದು ತಿಳಿಯುವ ತನಕ ತುಂಬಾ ಸಮಯವು ವ್ಯರ್ಥವಾಗುತ್ತಿತ್ತು. ಆ ತನಕ ಉತ್ಪಾದನೆಯನ್ನು ನಿಲ್ಲಿಸಬೇಕಾಗುತ್ತಿತ್ತು ಅಥವಾ ಉತ್ಪಾದನೆಯು ನಡೆಯುತ್ತಿದ್ದಲ್ಲಿ ಅದು ದೋಷಗಳಿಂದ ಕೂಡಿರುವ ಸಾಧ್ಯತೆಯೂ ಇತ್ತು. ಇದಕ್ಕೋಸ್ಕರ ಮಾಪನಗಳನ್ನು ಮಾಡುವ ಪ್ರಕ್ರಿಯೆಯು ಹೆಚ್ಚು ವೇಗವಾಗಿ ಮಾಡುವ ಪ್ರಯತ್ನವನ್ನು ಮಾಡಲಾಯಿತು ಮತ್ತು ಈಗ ಉತ್ಪಾದನೆ ಆಗುತ್ತಿರುವಾಗ ಅದನ್ನು ಅದೇ ಜಾಗದಲ್ಲಿ ತಪಾಸಣೆ ಮಾಡುವ ಹಂತದ ತನಕ ತಲುಪಲಾಯಿತು. ಇದನ್ನು ರಿಯಲ್ ಟೈಮ್ ಡಾಟಾ ಎಂಬುದಾಗಿ ಹೇಳಬಹುದು. ಸರ್ವರ್ ನಲ್ಲಿ ಡಾಟಾ ನಿಯಮಿತವಾಗಿ ಶೇಖರಿಸಿದ ನಂತರ ಯೋಗ್ಯವಾದ ಸಾಫ್ಟ್ ವೇರ್ ಮೂಲಕ ಅದರಿಂದ ಮುಂದಿನ ವ್ಯಾಲ್ಯೂ ಎಡೆಡ್ ಕೆಲಸಗಳನ್ನು ಮಾಡುವುದೂ ಸಾಧ್ಯವಾಗುತ್ತದೆ. ಉದಾಹರಣೆ, ಗಂಭೀರವಾದ ತಪ್ಪುಗಳು ಅಥವಾ ಉತ್ಪಾದನೆಯಲ್ಲಿಸುವ ಸವಾಲುಗಳು ಅಥವಾ ಇನ್ನಿತರ ತಪ್ಪುಗಳು, ವ್ಯತ್ಯಾಸ ಇತ್ಯಾದಿ ಅಂಶಗಳನ್ನು ತಂಡದಲ್ಲಿ ಕೆಲಸ ಮಾಡುತ್ತಿರುವ ಸಂಬಂಧಪಟ್ಟ ಸದಸ್ಯರಿಗೆ ಅವರ ಮೊಬೈಲ್ ನಲ್ಲಿ ತಿಳಿಸುವುದು ಸಾಧ್ಯ.
 
3. ಮಲ್ಟಿಪಲ್ ಗೇಜಿಂಗ್ ಉಪಾಯ : ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ನಮ್ಮಲ್ಲಿ ಗೇಜಿಂಗ್ ಗೆ ತುಂಬಾ ಕಡಿಮೆ ಸಮಯದಲ್ಲಿ ಅನೇಕ ಪ್ಯಾರಾಮೀಟರ್ ಗಳ ಮಾಪನ ಮಾಡುವ ಉಪಾಯವೂ ಇರಬಹುದು. ಇಂತಹ ಗೇಜ್ ಕಂಪ್ಯೂಟರ್ ನ ಪ್ರಣಾಳಿಕೆಯಲ್ಲಿ ಆಧರಿಸಿರುವುದರಿಂದ ಸರ್ವರ್ ಗೆ ಜೋಡಿಸಲಾಗುತ್ತವೆ. ಈ ಉಪಾಯಗಳನ್ನು ಇನ್ನಿತರ ಹಲವಾರು ಪರ್ಯಾಯಗಳೊಂದಿಗೆ ಬಳಸಿ ಈ ಮುಂದಿನಂತೆ ಲಾಭಗಳನ್ನು ಪಡೆಯಬಹುದು.
ಎ. ಅದನ್ನು ಒಂದು ಬಾರ್ ಕೋಡ್ ಸ್ಕ್ಯಾನರ್ ಗೆ ಜೋಡಿಸಲಾಗುತ್ತದೆ. ಇದರಿಂದಾಗಿ ಎಲ್ಲ ಯಂತ್ರಭಾಗಗಳ ಮಾಪನವನ್ನು ಅದರಲ್ಲಿ ಅಳವಡಿಸಿರುವ ಬಾರ್ ಕೋಡ್ ಗಳಿಗೆ ಅನುಸಾರವಾಗಿ ಶೇಖರಿಸಲ್ಪಡುತ್ತವೆ.
ಬಿ. ನಿಗದಿಸಿರುವ ಪ್ಯಾರಾಮೀಟರ್ ಗಳ ಮಾಪನವನ್ನು ಮಾಡಿದ ನಂತರ ಅದರ ಮಾಪನವು ಯೋಗ್ಯ ಮಿತಿಯಲ್ಲಿ ಇದ್ದಲ್ಲಿ, ಕಾರ್ಯವಸ್ತುವಿನಲ್ಲಿ ಲೇಸರ್ ಮೂಲಕ ಅಥವಾ ಇನ್ನಿತರ ಯಾವುದೇ ಮಾರ್ಕಿಂಗ್ ಮಶಿನ್ ಮೂಲಕ ‘ಪರೀಕ್ಷಣೆಯಲ್ಲಿ ತಪಾಸಣೆ ಮಾಡಲಾಗಿದೆ ಮತ್ತು ಸ್ವೀಕರಿಸಲಾಗಿದೆ’ ಎಂಬುದನ್ನು ತೋರಿಸುವ ಗುರುತನ್ನು ಮಾಡುವುದು ಸಾಧ್ಯ. ಇಂಟರ್ ಲಿಂಕಿಂಗ್ ಮೂಲಕ ಕೇವಲ ‘ಓಕೆ’ ಯಂತ್ರಭಾಗಗಳಲ್ಲಿಯೇ ಗುರುತಿಸಲ್ಪಡುತ್ತದೆ.
ಸಿ. ಈ ಯಂತ್ರಣೆಯು ಲೀಕೆಜ್ ತಪಾಸಣೆ ಅಥವಾ ಅದಕ್ಕೆ ಸಮಾನವಾದ ಡಿಜಿಟಲ್ ಮಾಪನಗಳ ಸಾಮಗ್ರಿಗಳಿಗೆ ಜೋಡಿಸುವುದೂ ಸಾಧ್ಯ. ಇದರಿಂದಾಗಿ ಸೂಕ್ತವಾಗಿ ಯಂತ್ರಭಾಗಗಳ ಮುನ್ನಚ್ಚೆರಿಕೆಯನ್ನು ವಹಿಸುವುದೂ ಸಾಧ್ಯ.
ಡಿ.ಅದರ ನಂತರ ಯಂತ್ರಭಾಗಗಳ ಎಲ್ಲ ಪರೀಕ್ಷೆಗಳ ಫಲಿತಾಂಶವನ್ನು ಪರಿಶೀಲಿಸಿದಲ್ಲಿ ಒಂದು ವೇಳೆ ಅದು ಯೋಗ್ಯವಾಗಿದ್ದಲ್ಲಿ ಮಾತ್ರ ಅವುಗಳನ್ನು ಪ್ಯಾಕ್ ಮಾಡಬಲ್ಲೆವು. ಒಮ್ಮೆ ನಮ್ಮಲ್ಲಿ ಡಾಟಾ ಇದ್ದಲ್ಲಿ ಅದನ್ನು ಅನೇಕ ರೀತಿಯಲ್ಲಿ ಬಳಸಿ ನಾವು ನಮ್ಮ ಉತ್ಪಾದನೆಗಳ ವ್ಯವಸ್ಥೆಯನ್ನು ಹೆಚ್ಚು ನಿರ್ದೋಷವಾಗಿ ಮಾಡಬಲ್ಲೆವು.
ಅತ್ಯಾಧುನಿಕ ಕಾರ್ಖಾನೆಗಳಲ್ಲಿ ಅನೇಕ ರೀತಿಯ ಕೆಲಸಗಳು, ಪ್ರಕ್ರಿಯೆಗಳು ಇರುತ್ತವೆ. ಎಲ್ಲ ಡಾಟಾ ಡಿಜಿಟಲೈಸೇಶನ್ ಮಾಡುವುದು, ಇದರ ಮೊದಲ ಹೆಜ್ಜೆ. ಅದರ ನಂತರ ಕೆಲಸ ನಡೆಯುತ್ತಿರುವಾಗ ಪರಿಶೀಲಿಸಿ ನಿರ್ಧರಿಸಿರುವ ವೇಳಾಪಟ್ಟಿಯಂತೆ ಅದು ನಡೆಯುತ್ತಿದೆಯೇ, ಅದರಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದೇ, ಇವುಗಳ ಕುರಿತು ತಿಳಿದು ಕೊಳ್ಳುವಲ್ಲಿ ಮಾನವನ ವ್ಯವಸ್ಥಾಪನೆಗೆ ಸಹಾಯ ಮಾಡುವುದು ಇದೇ ಇಂಡಸ್ಟ್ರಿ 4.0 ಇದನ್ನು ಕಾರ್ಯಗತಗೊಳಿಸುವಲ್ಲಿ ಇರುವ ಮಹತ್ತರವಾದ ಹಂತಗಳು.
ಮಾಪನದ ಶಾಸ್ತ್ರದ ಗೇಜಿಂಗ್ ವ್ಯವಸ್ಥೆಯನ್ನು ತಮ್ಮಲ್ಲಿರುವ ವ್ಯವಸ್ಥೆಯೊಂದಿಗೆ ಹೊಂದಾಣಿಸುವಲ್ಲಿ ಅನೇಕ ಲಾಭಗಳು ಉಂಟಾಗುತ್ತವೆ.
 
1. ಮಾಪನದ ಯಂತ್ರಣೆ ಮತ್ತು ಮಶಿನ್ ಇವುಗಳನ್ನು ಸರಿಹೊಂದಾಣಿಸಿದ್ದರಿಂದ ಉತ್ಪಾದನೆಯಲ್ಲಿರುವ ವ್ಯತ್ಯಾಸವು ಆಪ್ಟಿಮೈಸ್ಡ್ ಮಿತಿಯಲ್ಲಿ ಇಡಲು ಅದರಲ್ಲಿರುವ ಸ್ವಾತಂತ್ರ್ಯವನ್ನುಹೊಂದಾಣಿಸಲಾಗುತ್ತದೆ. ತುಂಬಾ ಸುಲಭವಾಗಿ ಹೇಳುವುದಾದರೆ ವ್ಯಾಸದಂತಹ ಯಾವುದೇ ಒಂದು ಮಾಪನ 10 +/- 0.001 ಮಿ.ಮೀ. ಬೇಕಾಗಿದ್ದಲ್ಲಿ, ನಿರಂತರವಾಗಿ ಮಾಪನ ಮಾಡುವುದರಿಂದ ಅದರಲ್ಲಿ ಸ್ವಲ್ಪ ಹೆಚ್ಚಳವಾದರೂ ಕೂಡಾ ಮಶಿನ್ ನಲ್ಲಿ ಬೇಕಾಗಿರುವ ಬದಲಾವಣೆಯನ್ನು (ಉದಾಹರಣೆ, ಟೂಲ್ ಸ್ವಲ್ಪ ಒಳಗೆ ಸರಿಯುವುದು) ಯಂತ್ರಣೆಯ ಮೂಲಕ ನಡೆಯುತ್ತಿರುವ ಮಶಿನ್ ನಲ್ಲಿಯೇ ತನ್ನಷ್ಟಕ್ಕೆ ಮಾಡಲಾಗುತ್ತದೆ. ಅಥವಾ ಮಾಪನವು ಸ್ವಲ್ಪ ಕಡಿಮೆಯಾದರೂ ಕೂಡಾ ಅದಕ್ಕೆ ವಿರುದ್ಧವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದರಿಂದಾಗಿ ಮಾನವನಿಂದಾಗುವ ತಪ್ಪುಗಳನ್ನು ತಡೆಯುವುದೂ ಸಾಧ್ಯ, ಅಲ್ಲದೇ ಉತ್ಪಾದನೆಯ ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಹಲವಾರು ಅಂಶಗಳ ಕುರಿತು ಆಪರೇಟರ್ ನ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ತಡೆಯಬಹುದು. ಇದರಿಂದಾಗಿ ಉತ್ಪಾದನೆಯ ಗುಣಮಟ್ಟ ಮತ್ತು ಪ್ರಕ್ರಿಯೆಯಲ್ಲಿರುವ ವಿಶ್ವಾಸಾರ್ಹತೆ ಇವೆರಡೂ ಹೆಚ್ಚಾಗುತ್ತವೆ. ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಸ್ವಯಂಚಾಲಿತ ಪರೀಕ್ಷೆಯು ಫ್ಲೆಕ್ಸಿಬಲ್ ಮತ್ತು ಸಂಬಂಧಪಟ್ಟ, ಸೂಕ್ತವಾದ ಉಪಾಯವಾಗಿದೆ.
2. ಹೆಚ್ಚಾಗುತ್ತಿರುವ ಸ್ವಯಂಚಾಲನೆ ಮತ್ತು ರೊಬೋಟಿಕ್ಸ್ ಇವುಗಳಿಂದಾಗಿ ಒಳ ಭಾಗದ ಮಾಪನದ ವ್ಯವಸ್ಥೆ ಮತ್ತು ಸ್ವಯಂಚಾಲಿತ ವ್ಯವಸ್ಥೆ ಇವುಗಳನ್ನು ಒಂದುಗೂಡಿಸಬಹುದು. ಇದರಿಂದಾಗಿ ಉತ್ಪಾದನೆಯ ಸೈಕಲ್ ಟೈಮ್ ಕಡಿಮೆಯಾಗಬಲ್ಲದು ಮತ್ತು ಅದರ ಶಾಪ್ ಫ್ಲೋರ್ ನ ಕಾರ್ಯಸಾಮರ್ಥ್ಯದಲ್ಲಿ ನೇರವಾದ ಪರಿಣಾಮ ಬೀರುತ್ತದೆ.
 
3. ರಿಯಲ್ ಟೈಮ್ ನಲ್ಲಿ ಪ್ರಕ್ರಿಯೆಯ ನಿರಂತರವಾದ ನಿಯಂತ್ರಣೆಯನ್ನು ಮಾಡುವ ಸಾಮರ್ಥ್ಯ ಮತ್ತು ಅವುಗಳ ವಿಶ್ಲೇಷಣೆ ಇವುಗಳನ್ನು ಹೊಂದಾಣಿಸಿದ್ದರಿಂದ ಉತ್ಪಾದಕತೆಯಲ್ಲಿ ಹೆಚ್ಚಳ, ಉಚ್ಚ ಗುಣಮಟ್ಟದ ನಿಖರತೆ ಮತ್ತು ಡೇವಿಯೇಶನ್ ನ ಪ್ರಮಾಣವನ್ನು ತುಂಬಾ ಕಡಿಮೆ ಮಾಡುವುದೂ ಸಾಧ್ಯ.
4. ಈ ಶಾಪ್ ಫ್ಲೋರ್ ವ್ಯವಸ್ಥೆಯ ವಿಶಿಷ್ಟವಾದ ಹಂತದಲ್ಲಿ ಅವುಗಳ ಹೊಂದಾಣಿಕೆಯನ್ನು ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಗಳ ಕಂಪ್ಯೂಟರ್ ನಲ್ಲಿರುವ ವಿಶಿಷ್ಟವಾದ ಇ.ಆರ್.ಪಿ.ಯ ವ್ಯವಸ್ಥೆಯೊಂದಿಗೆ ಮಾಡುವುದೂ ಸಾಧ್ಯವಾಗಿದೆ. ಹಾಗೆ ಮಾಡಿದ್ದರಿಂದ ಯೋಜನೆ ಮತ್ತು ಪ್ರತ್ಯಕ್ಷ ಉತ್ಪಾದನೆಯಲ್ಲಿ ಹೆಚ್ಚು ಸಾಮರಸ್ಯವನ್ನು ಉಂಟುಮಾಡುವುದೂ ಸಾಧ್ಯವಾಗಬಹುದು.
ಮೇಲಿನ ಎಲ್ಲ ಬೇಡಿಕೆಗಳನ್ನು ಪೂರ್ತಿಗೊಳಿಸಲು ಮಾಪನ ಶಾಸ್ತ್ರ ಅಥವಾ ಗೇಜಿಂಗ್ ಕ್ಷೇತ್ರವು ದೊಡ್ಡ ಪಾತ್ರವನ್ನು ನಿಭಾಯಿಸಬಲ್ಲದು. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಯೋಗ್ಯವಾದ ಉತ್ಪಾದನೆಗಳನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ಈ ಕ್ಷೇತ್ರದಲ್ಲಿ ಅನೇಕ ವಿದೇಶದ ಮತ್ತು ಹಲವಾರು ಮುಂಚೂಣಿಯಲ್ಲಿರುವ ಸ್ಥಳೀಯ ಉತ್ಪಾದಕರು ಪ್ರಾರಂಭಿಸಿದ್ದಾರೆ. ಇದನ್ನು ಹೇಗೆ ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸುವುದು ಮತ್ತು ಅದರಿಂದ ಯಾವ ರೀತಿಯ ಲಾಭಗಳು ಲಭಿಸಬಲ್ಲವು, ಎಂಬುದರ ಕುರಿತು ತಿಳಿದುಕೊಳ್ಳುವುದೂ ಒಂದು ಖುಷಿಯನ್ನುಂಟು ಮಾಡುವ ಅಂಶವಾಗಬಲ್ಲದು.
 
@@AUTHORINFO_V1@@