ವಿದ್ಯುತ್ತಿನ ಶಾಶ್ವತವಾದ ಮ್ಯಾಗ್ನೆಟಿಕ್ ಚಕ್

@@NEWS_SUBHEADLINE_BLOCK@@

Lohkarya - Udyam Prakashan    24-Nov-2020   
Total Views |
ಕಳೆದ ಹಲವಾರು ವರ್ಷಗಳ ಕಾಲಾವಧಿಯಲ್ಲಿ ಯಂತ್ರಣೆ ಮಾಡುತ್ತಿರುವಾಗ ವರ್ಕ್ ಹೋಲ್ಡಿಂಗ್ ಕ್ಷೇತ್ರದಲ್ಲಿ ಮೆಕ್ಯಾನಿಕಲ್ ಫಿಕ್ಸ್ಚರಿಂಗ್ ಮತ್ತು ವೈಸ್ ಇವುಗಳಿಗೆ ಪರ್ಯಾಯವೆಂದು ಆಯಸ್ಕಾಂತಕ್ಕೆ ಒಳ್ಳೆಯ ಪ್ರತಿಕ್ರಿಯೆಯು ಲಭಿಸುತ್ತಿದೆ. ಸರ್ಫೇಸ್ ಗ್ರೈಂಡಿಂಗ್ ಮಾಡುವ ಕೆಲಸದಲ್ಲಿ ಅಯಸ್ಕಾಂತವನ್ನು ಮುಂಚಿನಿಂದಲೂ ಬಳಸಲಾಗುತ್ತಿವೆ. ಸೆಟಪ್ ನ ಸಮಯವನ್ನು ಕಡಿಮೆ ಮಾಡುವುದು, ಕಾರ್ಯವಸ್ತುವಿನ ಐದೂ ಬದಿಗಳಿಗೆ ಸಂಪರ್ಕವನ್ನು ಉಪಲಬ್ಧ ಮಾಡುವುದು, ಕಾರ್ಯವಸ್ತುವನ್ನು ಹಿಡಿಯುವ ಕೆಲಸವನ್ನು ಸುಲಭ ಮಾಡುವುದು, ನಿಖರತೆ ಮತ್ತು ಕಾರ್ಯವಸ್ತುವನ್ನು ತಿರಸ್ಕರಿಸುವ ಪ್ರಮಾಣವನ್ನು ಕಡಿಮೆ ಮಾಡುವುದು, ಇದಕ್ಕೋಸ್ಕರ ಅಯಸ್ಕಾಂತವು ತುಂಬಾ ಉಪಯುಕ್ತವಾಗಿದೆ. ಈ ವಿಚಾರದಿಂದಲೇ ವಿದ್ಯುತ್ತಿನ ಶಾಶ್ವತವಾದ ಮ್ಯಾಗ್ನೆಟಿಕ್ ಚಕ್ ತಯಾರಿಸುವುದನ್ನು ನಾವು ನಿರ್ಧರಿಸಿದೆವು.
ಚಕ್ ಅಭಿವೃದ್ಧಿ ಪಡಿಸುವಾಗ ಎದುರಿಸಬೇಕಾದ ಸಮಸ್ಯೆಗಳು
ಔದ್ಯೋಗಿಕ ಅಯಸ್ಕಾಂತದ ತಂತ್ರಜ್ಞಾನದಲ್ಲಿ ಇಟಲಿಯು ಮುಂಚೂಣಿಯಲ್ಲಿತ್ತು. 1999 ರಲ್ಲಿ ವಿದ್ಯುತ್ತಿನ ಶಾಶ್ವತವಾದ ಮ್ಯಾಗ್ನೆಟಿಕ್ ಚಕ್ ಹೇಗೆ ಕೆಲಸ ಮಾಡುತ್ತದೆ, ಇದರ ಕುರಿತಾದ ಅಂದಾಜು ನಮಗಿತ್ತು ಮತ್ತು ಭಾರತದಲ್ಲಿ ಇಂತಹ ಯಾವುದೇ ರೀತಿಯ ತಂತ್ರಜ್ಞಾನವು ಉಪಲಬ್ಧವಿರಲಿಲ್ಲ. ಆಗ ನಮ್ಮ ಟೆಕ್ನಿಕಲ್ ಡೈರೆಕ್ಟರ್ ಉತ್ತಮ್ ಸಾರಡಾ ಮತ್ತು ಅವರ ಒಬ್ಬ ಸ್ನೇಹಿತರು ಅವರಲ್ಲಿರುವ ಸಾಹಿತ್ಯವನ್ನು ಓದಿ ಕೇವಲ 48 ಗಂಟೆಗಳಲ್ಲಿ ವಿದ್ಯುತ್ತಿನ ಶಾಶ್ವತವಾದ ಮ್ಯಾಗ್ನೆಟಿಕ್ ಚಕ್ ಕುರಿತಾದ ತಂತ್ರಜ್ಞಾನವನ್ನು ಅರಿತುಕೊಂಡರು. ಇದರ ಕುರಿತಾದ ಪ್ರಯೋಗಗಳನ್ನು ಮಾಡಲು ಪ್ರಕ್ರಿಯೆಯನ್ನು ಬರೆದಿಟ್ಟರು. ಸ್ವಲ್ಪ ಸಮಯದ ನಂತರ ನೇರವಾಗಿ ಪ್ರಯೋಗವನ್ನು ಮಾಡಿ ವಿದ್ಯುತ್ತಿನ ಶಾಶ್ವತವಾದ ಅಯಸ್ಕಾಂತವನ್ನು (ಮ್ಯಾಗ್ನೆಟ್) ತಯಾರಿಸುವಲ್ಲಿ ಯಶಸ್ಸನ್ನು ಪಡೆದರು. ಭಾರತದಲ್ಲಿ ಇಲೆಕ್ಟ್ರೋ ಪರ್ಮನಂಟ್ ಮ್ಯಾಗ್ನೆಟಿಕ್ (EPM) ತಂತ್ರಜ್ಞಾನವನ್ನು ಭಾರತಕ್ಕೆ ತರುವಲ್ಲಿ ಈ ಯುವಕರಿಗೆ ಸಾಧ್ಯವಾಯಿತು. ಈ ಎರಡೂ ಯುವಕರೂ IIT ಇಂಜಿನಿಯರ್ ಪದವೀಧರರಾಗಿದ್ದಾರೆ.

2_1  H x W: 0 x
 
ಮ್ಯಾಗ್ನೆಟಿಕ್ ಚಕ್ ನ ತಂತ್ರಜ್ಞಾನ
ಮ್ಯಾಗ್ನೆಟಿಕ್ ಬಲದಿಂದ ಕಾರ್ಯವಸ್ತುವನ್ನು ಹಿಡಿಯುವ ಉಪಕರಣಗಳ ಶ್ರೇಣಿಯಲ್ಲಿ ವಿದ್ಯುತ್ತಿನ ಶಾಶ್ವತವಾದ ಮ್ಯಾಗ್ನೆಟಿಕ್ ಚಕ್ ಇದು ಎಲ್ಲಕ್ಕಿಂತಲೂ ಅಭಿವೃದ್ದಿಗೊಂಡ ಮತ್ತು ಅತ್ಯಾಧುನಿಕವಾದದ್ದು ಎಂದು ತಿಳಿಯಲಾಗಿದೆ. ನಾವು ನಮ್ಮ 'ಮೆಗ್ನಾಸ್ಲಾಟ್' ಉತ್ಪಾದನೆಯ ಪೆಟಂಟ್ ಕೂಡಾ ಪಡೆದಿರುತ್ತೇವೆ. ಇದರ ಮೇಲ್ಭಾಗವನ್ನು ಸಂಪೂರ್ಣವಾಗಿ ಸ್ಟೀಲ್ ನಿಂದಲೇ ತಯಾರಿಸಲಾಗಿದೆ. ಇದರಿಂದಾಗಿ ಅದಕ್ಕೆ ಇಂದಿನ ತನಕ ತಯಾರಿಸಿರುವ ಮ್ಯಾಗ್ನೆಟಿಕ್ ಚಕ್ ಗಳಲ್ಲಿ ಎಲ್ಲಕ್ಕಿಂತಲೂ ದೃಢವಾದ ಚಕ್ ಎಂದು ಹೇಳಿದರೂ ತಪ್ಪಾಗಲಾರದು. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಮ್ಯಾಗ್ನೆಟ್ ನ ಕೆಂಪು ಮತ್ತು ನೀಲಿ ಬಣ್ಣದ ಎರಡು ಸೆಟ್ ಗಳು ಅದರಲ್ಲಿ ಒಂದು ಕಾಯಿಲ್ ಇರುತ್ತದೆ. ಕೆಳಗಿರುವ ನೀಲಿ ಬಣ್ಣದ ಮ್ಯಾಗ್ನೆಟ್ ಸ್ಥಿರವಾಗಿರುತ್ತದೆ. ಮೇಲ್ಭಾಗದ ಕೆಂಪು ಬಣ್ಣದ ಮ್ಯಾಗ್ನೆಟ್ ನ ಪೊಲ್ಯಾರಿಟಿಯಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕಾಯಿಲ್ ನಿಂದ 2-3 ಸೆಕಂಡುಗಳಿಗೋಸ್ಕರ ವಿದ್ಯುತ್ ಪ್ರವಾಹ ಬಿಟ್ಟಾಗ ಚಕ್ ನ ಸರ್ಫೇಸ್ ನಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ತಯಾರಾಗುತ್ತದೆ. ವಿರುದ್ಧ ವಿದ್ಯುತ್ ಪ್ರವಾಹ ಬಿಡುವಷ್ಟರ ತನಕ ಇದೇ ಸ್ಥಿತಿಯು ಇರುತ್ತದೆ. ಎರಡನೇ ಬಾರಿ ವಿದ್ಯುತ್ ಪ್ರವಾಹ ಹಾಯಿಸಿದಾಗ ಮೇಲ್ಭಾಗದಲ್ಲಿರುವ ಕೆಂಪು ಬಣ್ಣದ ಮ್ಯಾಗ್ನೆಟಿಕ್ ಪೋಲ್ಯಾರಿಟಿಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಅದರ ಪರಿಣಾಮದಿಂದಾಗಿ ಡಿಮ್ಯಾಗ್ನೆಟೈಜೆಶನ್ ಆಗುತ್ತದೆ. ವಿದ್ಯುತ್ ಪ್ರವಾಹವು ನಿಂತಲ್ಲಿ ಕಾರ್ಯವಸ್ತು ಚಕ್ ನಿಂದ ಬೇರ್ಪಡಿಸಲ್ಪಡುವುದಿಲ್ಲ. ತಯಾರಾಗುವ ಮ್ಯಾಗ್ನೆಟಿಕ್ ಕ್ಷೇತ್ರ 2 ಟೆಸಲಾ ಅಥವಾ 16 ಕಿ.ಗ್ರಾಂ./ಸೆಂ.ಮೀ.2 ಇಷ್ಟು ಇರುತ್ತದೆ. ಇದು ಯಾವುದೇ ರೀತಿಯ ಮ್ಯಾಗ್ನೆಟಿಕ್ ಚಕ್ ಗೋಸ್ಕರ ಉಚ್ಚಮಟ್ಟದ್ದಾಗಿದೆ. ವಿಸ್ತೀರ್ಣವು ಎಷ್ಟು ಹೆಚ್ಚು ಉಪಲಬ್ಧವಾಗುತ್ತದೆಯೋ, ಅಷ್ಟೇ ಹೆಚ್ಚು ಮ್ಯಾಗ್ನೆಟಿಕ್ ಶಕ್ತಿಯು ತಯಾರಾಗುತ್ತದೆ. ಪರಿಣಾಮಕಾರಿಯಾದ ಮ್ಯಾಗ್ನೆಟಿಕ್ ಪುಲ್ ನ ನಿರ್ಮಿತಿಗೋಸ್ಕರ ಕನಿಷ್ಠ 8 ಪೋಲ್ ಇಡಬೇಕಾಗುತ್ತವೆ, ಎಂಬುದನ್ನು ನಾವು ಸೂಚಿಸುತ್ತೇವೆ.
ಮ್ಯಾಗ್ನೆಟಿಕ್ ಚಕ್ ಗಳ ವೈಶಿಷ್ಟ್ಯಗಳು

3_1  H x W: 0 x 
ಮಶಿನ್ ನ ಬೆಡ್ ನಲ್ಲಿ ಕಬ್ಬಿಣದ ಕಾರ್ಯವಸ್ತುವನ್ನು ಹಿಡಿದಿಡಲು ಮ್ಯಾಗ್ನೆಟಿಕ್ ಚಕ್ ಬಳಕೆಯು ತುಂಬಾ ಸುಲಭವಾದ ದಾರಿಯಾಗಿದೆ. ಇದರಿಂದಾಗಿ ಸೆಟಪ್ ಬದಲಾಯಿಸಲು ಫ್ಲೆಕ್ಸಿಬಿಲಿಟಿಯೊಂದಿಗೆ ಪ್ರೋಗ್ರಾಮರ್ ಗೆ ಟೂಲ್ ಪಾಥ್ ಪ್ರೋಗ್ರಾಮ್ ಸಹಜವಾಗಿ ಮಾಡಬಹುದಾಗಿದೆ. ಕಾರ್ಖಾನೆಯಲ್ಲಿ ಯಾವಾಗಲೂ ಉಪಲಬ್ಧವಿರುವ ಟೂಲ್ ಗಳನ್ನು ಬಳಸಲು ಈ ಚಕ್ ಸಹಕರಿಸುತ್ತದೆ. ಕಾರಣ ಟೂಲ್ ಫಿಕ್ಸ್ಚರ್ ನಲ್ಲಿ ಎಲ್ಲಿಯೂ ಸಿಲುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮ್ಯಾಗ್ನೆಟಿಕ್ ಚಕ್ ವೆಲ್ಡಿಂಗ್ ಮಾಡಿರುವ ಫಿಕ್ಸ್ಚರ್ ನಷ್ಟೇ ದೃಢವಾಗಿರುವುದರಿಂದ ಈ ರೀತಿಯು ನಮ್ಮಲ್ಲಿ ಉಪಲಬ್ಧವಿರುವ ಎಲ್ಲಕ್ಕಿಂತಲೂ ಹೆಚ್ಚು ದೃಢವಾದ ಕ್ಲ್ಯಾಂಪಿಂಗ್ ರೀತಿಯಲ್ಲೊಂದಾಗಿದೆ.
ಮ್ಯಾಗ್ನೆಟಿಕ್ ಚಕ್ ನ ಲಾಭಗಳು
ಮೆಗ್ನಾಸ್ಲಾಟ್ ನಲ್ಲಿರುವ ಪೆಟಂಟ್ ತಂತ್ರಜ್ಞಾನದಿಂದಾಗಿ T ಸ್ಲಾಟ್ ಚಕ್ ಬಳಸಿ ಲೋಹಗಳ ಹೊರತಾಗಿ ಕ್ಲ್ಯಾಂಪಿಂಗ್ ಮಾಡುವುದು ಸಾಧ್ಯವಾಗುತ್ತದೆ. ಮೇಲ್ಭಾಗವು ಸಂಪೂರ್ಣವಾಗಿ ಸ್ಟೀಲ್ ನಿಂದಲೇ ತಯಾರಿಸಿರುವ ಇದೊಂದು ವಿಶಿಷ್ಟವಾದ ಚಕ್ ಆಗಿರುತ್ತದೆ. ಸಾಂಪ್ರದಾಯಿಕವಾದ ಮ್ಯಾಗ್ನೆಟಿಕ್ ಚಕ್ ನಿಂದ ಸ್ಟೀಲ್ ಮತ್ತು ಎಪಾಕ್ಸೀ ಇವೆರಡನ್ನೂ ಸ್ಯಾಂಡಿವಿಚ್ ಎಂಬ ರೀತಿಯಲ್ಲಿ ರಚಿಸಲಾಗುತ್ತದೆ. ಚಕ್ ನ ಮೇಲ್ಭಾಗವು ಸ್ಟೀಲಿದ್ದು ಮತ್ತು ದೃಢವಾಗಿರುವುದರಿಂದ ಕೂಲಂಟ್ ಮ್ಯಾಗ್ನೆಟಿಕ್ ಚಕ್ ನಲ್ಲಿ ಪ್ರವೇಶಿಸುವುದಿಲ್ಲ. ಆದ್ದರಿಂದ ಚಕ್ ನ ಬಾಳಿಕೆಯು ಹೆಚ್ಚಾಗಲು ಸಹಾಯವಾಗುತ್ತದೆ. ಯಂತ್ರಣೆಯ ನಂತರ ಚಿಪ್ ತೆಗೆಯುವುದು ಈ ಚಕ್ ನಲ್ಲಿ ಸುಲಭವಾಗಿದೆ.
ಉದಾಹರಣೆ
ಡಿ.ಜಿ. ಸೆಟ್ ನಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಪಶ್ಚಿಮ ಮಹಾರಾಷ್ಟ್ರದ ಒಂದು ಕಂಪನಿಯ ಯಂತ್ರಣೆಯ ಶಾಪ್ ನಲ್ಲಿ ಕನೆಕ್ಟಿಂಗ್ ರಾಡ್ ನ ಯಂತ್ರಣೆಯನ್ನು ಮಾಡಲು ಮೆಗ್ನಾಸ್ಲಾಟ್ ಸಫಲವಾಗಿ ಬಳಸಲಾಗಿದೆ.
ಕನೆಕ್ಟಿಂಗ್ ರಾಡ್ ಕ್ಲ್ಯಾಂಪ್ ಮಾಡಲು ಸಾಮಾನ್ಯವಾದ ರೀತಿಯೆಂದರೆ ದೊಡ್ಡ ಮತ್ತು ಚಿಕ್ಕ ತುದಿಗೋಸ್ಕರ ಇಂಟರ್ನಲ್ ಎಕ್ಸ್ ಪಾಂಡಿಂಗ್ ಚಕ್ ಬಳಸಿ ಅದರಲ್ಲಿ ಯಂತ್ರಭಾಗಗಳನ್ನು ಹಿಡಿದಿಡುವುದು. ಈ ಇಂಟರ್ನಲ್ ಎಕ್ಸ್ ಪಾಂಡಿಂಗ್ ಚಕ್ ಕಾರ್ಯವಸ್ತುವಿಗೆ ಅಡ್ಡಕ್ಕೆ ಅಲುಗಾಡಲು ಬಿಡುವುದಿಲ್ಲ. (ಚಿತ್ರ ಕ್ರ. 2) ಆದರೆ ಯಂತ್ರಣೆಯ ಪ್ರಕ್ರಿಯೆಯಲ್ಲಿ ಕಾರ್ಯವಸ್ತು ಎತ್ತಲ್ಪಡುವ ಸಾಧ್ಯತೆ ಇರುತ್ತದೆ. ಈ ನೇರವಾದ ದಿಕ್ಕಿನಲ್ಲಾಗುವ ಚಟುವಟಿಕೆಗಳನ್ನು ನಿಲ್ಲಿಸಲು ಒಂದು ಹೈಡ್ರಾಲಿಕ್ ಕ್ಲ್ಯಾಂಪ್ ಕೂಡಾ ಯಂತ್ರಭಾಗಗಳ ಯಂತ್ರಣೆಯಾಗದೇ ಇರುವ ಭಾಗಗಳಲ್ಲಿ ಬಳಸಲಾಗುತ್ತದೆ. ಈ ಕ್ಲ್ಯಾಂಪ್ ಗಳಿಂದಾಗಿ ಯಂತ್ರಭಾಗಗಳು ಬಗ್ಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮದಿಂದಾಗಿ ಯಂತ್ರಭಾಗಗಳು ರಿಜೆಕ್ಟ್ ಮಾಡಲಾಗುತ್ತವೆ ಮತ್ತು ದೊಡ್ಡ ನಷ್ಟ ಉಂಟಾಗುತ್ತದೆ. ಆದರೆ ಮೆಗ್ನಾಸ್ಲಾಟ್ ಬಳಸುವಾಗ ಯಂತ್ರಭಾಗಗಳಲ್ಲಿ ಕೇವಲ ಅಡ್ಡಕ್ಕಿರುವ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ. ಕಾರಣ ಮೆಗ್ನಾಸ್ಲಾಟ್ ನೇರವಾದ ಚಟುವಟಿಕೆಗಳನ್ನು ಆಗಲು ಬಿಡುವುದಿಲ್ಲ. (ಚಿತ್ರ ಕ್ರ. 2) ಇದರಿಂದಾಗಿ ಕಟಿಂಗ್ ಫೀಡ್ 560 ಮಿ.ಮೀ./ನಿಮಿಷಗಳಿಂದ 750 ಮಿ.ಮೀ./ನಿಮಿಷಗಳಷ್ಟು ಹೆಚ್ಚಿಸಬಹುದಾಗಿದೆ. (1250 ಮಿ.ಮೀ./ನಿಮಿಷಗಳಷ್ಟು ವೇಗವನ್ನು ಬಳಸಿಯೂ ನೋಡಲಾಗಿದೆ.) ಇದರಿಂದಾಗಿ ನಮ್ಮ ಗ್ರಾಹಕರಿಗೆ 20 ಶೇಕಡಾ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸುವುದು ಸಾಧ್ಯವಾಯಿತು ಮತ್ತು ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ ಯಂತ್ರಭಾಗಗಳನ್ನು ತಿರಸ್ಕರಿಸುವ ಪ್ರಮಾಣವು 0 ಶೇಕಡಾಕ್ಕೆ ಇಳಿಯಿತು.
ಮುಂದೇನು?

3_1  H x W: 0 x 
ನಮ್ಮ ಕಂಪನಿಯಲ್ಲಿರುವ ಕೆಲಸಗಾರರ ಕೌಶಲ್ಯ ಮತ್ತು ಬುದ್ಧಿವಂತಿಕೆ ಇವೆರಡರ ಕೂಡುವಿಕೆಯಿಂದಾಗಿ ನಾವು ಈ ಮ್ಯಾಗ್ನೆಟ್ ಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಕಾರ್ಯವಸ್ತುವಿನಲ್ಲಿ ಪ್ರಕ್ರಿಯೆ, ನಿರೀಕ್ಷಣೆ ಮತ್ತು ಎಕ್ಸೆಸಿಬಿಲಿಟಿ ಇವೆಲ್ಲದಕ್ಕೋಸ್ಕರ ಅದು ತುಂಬಾ ಉಪಯುಕ್ತವಾಗುತ್ತದೆ. ಕಾರ್ಯವಸ್ತುಗಳ ಕ್ಲ್ಯಾಂಪಿಂಗ್ ಮಾಡುವುದು ತುಂಬಾ ಸುಲಭವಾಗಬೇಕು, ಎಂಬುದಕ್ಕೋಸ್ಕರ ನಮ್ಮ ಕಂಪನಿಯ ತಂಡವು ಅಹೋರಾತ್ರಿ ಕೆಲಸ ಮಾಡುತ್ತಾರೆ. ಇದರ ಹೊರತಾಗಿ ಇಂಜೆಕ್ಷನ್ ಮೋಲ್ಡಿಂಗ್ ಮಶಿನ್ ನಲ್ಲಿ ಮೋಲ್ಡ್ ಕ್ಲ್ಯಾಂಪ್ ತಯಾರಿಸಲು ಬಳಸಲಾಗುವ ನಮ್ಮ ಇ. ಪಿ. ಪ್ರೆಸ್ ಮ್ಯಾಗ್ನೆಟಿಕ್ ಚಕ್ ಗ್ರಾಹಕರಲ್ಲಿ ಸೆಟ್ ಅಪ್ ಸಮಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ, ಡೈ ಯ ನಿರ್ವಹಣೆಯನ್ನೂ ಕಡಿಮೆ ಮಾಡುತ್ತದೆ, ಮಶಿನ್ ಪ್ಲೇಟ್ ನಿಂದ ಡೈ ಜಾರುವುದಿಲ್ಲ ಮತ್ತು ಉತ್ಪಾದನೆಯು ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತದೆ.
 
@@AUTHORINFO_V1@@