ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ (AFFM-150D)

@@NEWS_SUBHEADLINE_BLOCK@@

Lohkarya - Udyam Prakashan    23-Nov-2020   
Total Views |
 7_1 H x W: 0 x
 
ತಂತ್ರಜ್ಞಾನದ ಅಭಿವೃದ್ಧಿ ಇದೇ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಾಜಿ ಸೆಂಟರ್ ನ (CMTI) ಇವರ ಸಾಮರ್ಥ್ಯವಾಗಿದೆ. ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದು, ಅದನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸುವುದು ಮತ್ತು ಭಾರತೀಯ ಉತ್ಪಾದನೆಯ ಕ್ಷೇತ್ರಕ್ಕೆ ಅದನ್ನು ಹಸ್ತಾಂತರಿಸುವುದು ಇದು CMTI ಯ ಪ್ರಮುಖ ಕೆಲಸವಾಗಿದೆ. ಕಳೆದ ಮೂರು ದಶಕಗಳಿಗಿಂತ ಹೆಚ್ಚು ಕಾಲಾವಧಿಯಲ್ಲಿ ಈ ಸಂಸ್ಥೆಯು ತರಬೇತಿಯ ಕ್ಷೇತ್ರದಲ್ಲಿಯೂ ಕಾರ್ಯನಿರತವಾಗಿದೆ. ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಹಭಾಗಿಗಳಿಗೋಸ್ಕರ ಈ ಸಂಸ್ಥೆಯ ಮೂಲಕ ತರಬೇತಿಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ.

1_1  H x W: 0 x 
 
CMTI ಇವರು ಅಭಿವೃದ್ಧಿ ಮಾಡಿರುವ AFFM-150D ಇದೊಂದು ಪಾರಂಪರಿಕವಲ್ಲದ ಸುಪರ್ ಫಿನಿಶಿಂಗ್ ತಂತ್ರಜ್ಞಾನವಾಗಿದೆ. ಈ ಮಶಿನ್ ಕ್ಲಿಷ್ಟ (ಕಾಂಪ್ಲೆಕ್ಸ್) ಹಾಗೆಯೇ, ಫಿನಿಶ್ ಮಾಡಲು ಕಠಿಣ ಮತ್ತು ತೊಡಕುಗಳು ಇರುವಂತಹ ಪ್ರಿಸಿಜನ್ ಯಂತ್ರಭಾಗಗಳ ಫಿನಿಶಿಂಗ್, ಡೀಬರಿಂಗ್ ಮತ್ತು ಪಾಲಿಶಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಬ್ರೆಸಿವ್ ನಿಂದ ಕೂಡಿರುವ ಸೆಮಿ ಸ್ವಾಲಿಡ್ ಮೀಡಿಯಾ ಕಾರ್ಯವಸ್ತುಗಳಲ್ಲಿರುವ ಒಂದೇ ದಾರಿಯಿಂದ ಹೊರಗೆ ತೆಗೆಯುವುದು/ ತಿರುಗಿಸುವುದು ಇಂತಹ ಪ್ರಕ್ರಿಯೆಗಳು ಇದರಲ್ಲಿವೆ. ಈ ಮಶಿನ್ ನಲ್ಲಿ ಕಾರ್ಯವಸ್ತು ಹಿಡಿಯುವ ಫಿಕ್ಸ್ಚರ್ ನ್ನು ಎರಡೂ ಎದುರುಬದುರಾಗಿ ನೆಟ್ಟಗೆ ನಿಂತಿರುವ ಸಿಲಿಂಡರ್ ನಲ್ಲಿ ಹೈಡ್ರಾಲಿಕ್ ಪ್ರಣಾಳಿಕೆಯ ಮೂಲಕ ಕ್ಲ್ಯಾಂಪ್ ಮಾಡಲಾಗುತ್ತದೆ. ಈ ಸಿಲಿಂಡರ್ ಅಬ್ರೆಸಿವ್ ಮಾಧ್ಯಮವನ್ನು ಕಾರ್ಯವಸ್ತುವಿನಿಂದ ಹಿಂದೆ ಮತ್ತು ಮುಂದೆ ತಿರುಗಿಸಲಾಗುತ್ತದೆ. ಹೈಡ್ರಾಲಿಕ್ ಎಕ್ಚುಯೇಟರ್ಸ್ ನಿಂದ ಅಬ್ರೆಸಿವ್ ಮಾಧ್ಯಮವನ್ನು ಕಾರ್ಯವಸ್ತುವಿನಿಂದ ತಿರುಗಿಸಲಾಗುತ್ತದೆ. ಒಂದೇ ಸೈಕಲ್ ನಲ್ಲಿ ಮಾಧ್ಯಮದ ಮೂಲಕ ಕೆಳಭಾಗದ ಸಿಲಿಂಡರ್ ನಿಂದ ಮೇಲ್ಭಾಗದಲ್ಲಿರುವ ಸಿಲಿಂಡರ್ ತನಕ ಮತ್ತು ಪುನಃ ಕೆಳಗಿನ ಸಿಲಿಂಡರ್ ನಲ್ಲಿ, ಈ ರೀತಿಯಲ್ಲಿ ತಿರುಗಿಸಲಾಗುತ್ತದೆ. ವಿಸ್ಕೋ-ಇಲಾಸ್ಟಿಕ್ (ಜಿಗುಟಾದ ಮತ್ತು ಬಾಗುವಂತಹ) ಅಬ್ರೆಸಿವ್ ಪಾಲಿಮರ್ ಮಾಧ್ಯಮದ ಪ್ರವಾಹದ ಮೂಲಕ ಯಂತ್ರಭಾಗಗಳ ಸರ್ಫೇಸ್ ನಲ್ಲಿ ಫಿನಿಶಿಂಗ್ ನ ಪ್ರಕ್ರಿಯೆಯನ್ನು (ಚಿತ್ರ ಕ್ರ. 1 ಮತ್ತು 2) ಹಂತಹಂತವಾಗಿ ಮಾಡಲಾಗುತ್ತದೆ.

3_1  H x W: 0 x 
 
ಎಲ್ಲಕ್ಕಿಂತಲೂ ಮೊದಲಾಗಿ ಫಿನಿಶ್ ಮಾಡಲಾಗಿರುವ ಯಂತ್ರಭಾಗಗಳ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಅದರಲ್ಲಿ ಯಂತ್ರಭಾಗಗಳ ಜಾಮೆಟ್ರಿ, ಡೈಮೆನ್ಶನ್, ಮಟೀರಿಯಲ್ ನ ಗುಣಧರ್ಮ, ಸರ್ಫೇಸ್ ನ ಮೊದಲ ಮತ್ತು ಅಂತಿಮ ಅಪೇಕ್ಷಿತ ಒರಟುತನ (ರಫ್ ನೆಸ್) ಈ ಅಂಶಗಳನ್ನು ತಿಳಿದುಕೊಳ್ಳಲಾಗುತ್ತದೆ. ಯಂತ್ರಭಾಗದ ಇಂತಹ ಪ್ರಾರಂಭದ ಅಭ್ಯಾಸಕ್ಕೆ ಆಧರಿಸಿ ಅದಕ್ಕೋಸ್ಕರ ಒಂದು ಫಿಕ್ಸ್ಚರ್ ಅಭಿವೃದ್ಧಿ ಪಡಿಸಲಾಗುತ್ತದೆ. ಅಲ್ಲದೇ AFFM ನ ಪ್ರಕ್ರಿಯೆಯ ಪ್ಯಾರಾಮೀಟರ್ ಗಳನ್ನು (ಕೋಷ್ಟಕ ಕ್ರ. 1) ಆಯ್ಕೆ ಮಾಡಲಾಗುತ್ತದೆ.

4_1  H x W: 0 x 
 
ಆವಶ್ಯಕವಾಗಿರುವ ಸರ್ಫೇಸ್ ಫಿನಿಶ್ ಪಡೆಯಲು ಪ್ರಕ್ರಿಯೆಗೆ ತಗಲುವ ಸಮಯ (AFFM ಸೈಕಲ್ ಟೈಮ್), ಯಂತ್ರಭಾಗಗಳ ಪ್ರಾರಂಭದ ಸರ್ಫೇಸ್ ರಫ್ ನೆಸ್ ಇದನ್ನು ಹೈಡ್ರಾಲಿಕ್ ಒತ್ತಡ, ಅಬ್ರೆಸಿವ್ ನ ವಿಧ, ಅಬ್ರೆಸಿವ್ ನ ಪ್ರಕಾರ, ಗ್ರಿಟ್ ನ ಗಾತ್ರ ಮತ್ತು ವಿಸ್ಕೋ-ಇಲಾಸ್ಟಿಕ್ ಪಾಲಿಮರ್ ಮಾಧ್ಯಮ ವಿಸ್ಕಾಸಿಟಿ ಇಂತಹ ಬದಲಾಯಿಸಬಲ್ಲ ಪ್ರಕ್ರಿಯೆಯ ಪ್ಯಾರಾಮೀಟರ್ ಗಳಲ್ಲಿ ಅವಲಂಬಿಸಿರುತ್ತದೆ.
ಉದಾಹರಣೆ
ಅಲ್ಯುಮಿನಿಯಮ್ ಪ್ರೊಪೆಲರ್ ನ ಸರ್ಫೇಸ್ ನ ಫಿನಿಶ್ ಸುಧಾರಿಸಲು ಅಬ್ರೆಸಿವ್ ಪ್ರವಾಹವು (ಫಿನಿಶಿಂಗ್)
ಉದ್ದೇಶಗಳು
  • ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ ನ ಮೂಲಕ (AFFM-150D) ಅಲ್ಯುಮಿನಿಯಮ್ ಪ್ರೊಪೆಲರ್ ನ ಸರ್ಫೇಸ್ ನಲ್ಲಿರುವ ರಫ್ ನೆಸ್ ಇಲ್ಲದಂತೆ ಮಾಡುವುದು.
  • ಅಲ್ಯುಮಿನಿಯಮ್ ಪ್ರೊಪೆಲರ್ ಗೋಸ್ಕರ ಹೊಲ್ಡಿಂಗ್ ಫಿಕ್ಸ್ಚರ್ ಅಭಿವೃದ್ಧಿ ಪಡಿಸುವುದು.
 
5_1  H x W: 0 x
ಪ್ರೊಪೆಲರ್ ಈ ಯಂತ್ರಭಾಗವು ಅಲ್ಯುಮಿನಿಯಮ್ ಮಿಶ್ರಲೋಹಗಳಿಂದ (A1 6061 T6) ಈ ಮಟೀರಿಯಲ್ ನಿಂದ ತಯಾರಿಸಲಾಗಿದೆ. ಅದರ ವ್ಯಾಸ 150 ಮಿ.ಮೀ., ಎತ್ತರ 75 ಮಿ.ಮೀ. ಮತ್ತು ಎಲೆಗಳ ದಪ್ಪ 3 ಮಿ.ಮೀ. ಇದ್ದು ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಅದರ 3 ಅಕ್ಷೀಯ ಮಿಲ್ಲಿಂಗ್ ಮಶಿನ್ ಮೂಲಕ ಯಂತ್ರಣೆಯನ್ನು ಮಾಡಲಾಯಿತು. ಎಲೆಗಳ ಸರ್ಫೇಸ್ ನಲ್ಲಿ ಪ್ರಾರಂಭದ ರಫ್ ನೆಸ್ (ಒರಟುತನ) ಸರಾಸರಿ ಮೌಲ್ಯ Ra 0.712µm ಇರುತ್ತದೆ.
ಪ್ರೊಪೆಲರ್ ಹಿಡಿಯಲು ಒಂದು ಅತ್ಯಾಧುನಿಕವಾದ ಫಿಕ್ಸ್ಟರ್ (ಚಿತ್ರ ಕ್ರ. 4) ಡಿಸೈನ್ ಮಾಡಲಾಗಿದೆ. MS ಮಟೀರಿಯಲ್ ಬಳಸಿ ಅದನ್ನು ತಯಾರಿಸಲಾಗಿದೆ. ಪ್ರೊಪೆಲರ್ ನ ಮೇಲ್ಭಾಗವನ್ನು ಮತ್ತು ಕೆಳಭಾಗವನ್ನು ಬೇಸ್ ಫಿಕ್ಸ್ಚರ್ ನಿಂದ ಹಿಡಿಯಲಾಗುತ್ತದೆ. ಪ್ರೊಪೆಲರ್ ನ ಎಲೆಗಳ ಸರ್ಫೇಸ್ ಅಬ್ರೆಸಿವ್ ಮಾಧ್ಯಮದ ಪ್ರವಾಹಕ್ಕೋಸ್ಕರ ಸಿದ್ಧವಾಗಿರುತ್ತದೆ. AFFM ಪ್ರಕ್ರಿಯೆಯಲ್ಲಿ ವಿಸ್ಕೋ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಮಾಧ್ಯಮದಲ್ಲಿರುವ ಸೋರುವಿಕೆಯನ್ನು ತಡೆಯಲು ಫಿಕ್ಸ್ಚರ್ ನ ಮೇಲ್ಭಾಗದ ಮತ್ತು ಕೆಳಭಾಗದ ಪ್ಲೇಟ್ ನಲ್ಲಿ 15 ಮಿ.ಮೀ.ನ ಟೆಫ್ಲಾನ್ ಸೀಲಿಂಗ್ ನೀಡಲಾಗಿದೆ.

6_1  H x W: 0 x
ಪ್ರಯೋಗದ ರೀತಿ
ಸಾಧ್ಯವಾದಷ್ಟು ಒಳ್ಳೆಯ ಫಿನಿಶ್ ಪಡೆಯಲು ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ ನ ಮೂಲಕ ಸರ್ಫೇಸ್ ನ ಒರಟುತನವನ್ನು ಕಡಿಮೆ ಮಾಡಲು ಪ್ರಯೋಗವನ್ನು ಮಾಡಲಾಯಿತು.
  • ಯಂತ್ರಭಾಗವನ್ನು ಫಿಕ್ಸ್ಚರ್ ನಲ್ಲಿ ಅಳವಡಿಸಿ AFFM-150D ಯಲ್ಲಿ ಹೈಡ್ರಾಲಿಕ್ ಕ್ಲ್ಯಾಂಪ್ ನಲ್ಲಿ (ಚಿತ್ರ ಕ್ರ. 5) ಹಿಡಿಯಲಾಗುತ್ತದೆ.
  • ಬ್ಲೇಡ್ ನ ಸರ್ಫೇಸ್ ನಲ್ಲಿರುವ ಯಾವುದೇ 5 ವಿವಿಧ ಬಿಂದುಗಳನ್ನು ಆಯ್ಕೆ ಮಾಡಿ ಸರ್ಫೇಸ್ ಒರಟುತನದ ಸರಾಸರಿ ಮೌಲ್ಯವನ್ನು ನೊಂದಾಯಿಸಲಾಗುತ್ತದೆ.
  • ಅಬ್ರೆಸಿವ್ ಮಾಧ್ಯಮದ ವಿಶಿಷ್ಟ ಜಾಳಿಯ ಆಕಾರಕ್ಕೆ ಅನುಸಾರವಾಗಿ ಸರ್ಫೇಸ್ ಒರಟುತನದಲ್ಲಿ ತುಂಬಾ ಸುಧಾರಣೆಯು ಕಂಡುಬರುತ್ತದೆ. (ಚಿತ್ರ ಕ್ರ. 6)

7_1  H x W: 0 x
ತೀರ್ಮಾನ
ಮೇಲಿನ ಮಾಹಿತಿಯಿಂದ (ಡೆಟಾ), ಅಬ್ರೆಸಿವ್ ಮಾಧ್ಯಮದಲ್ಲಿರುವ ಜಾಳಿಯ ಆಕಾರವು ಹೆಚ್ಚಾಗುತ್ತಿದ್ದಂತೆ ಒರಟುತನದ ಪ್ರೊಫೈಲ್ ನಲ್ಲಿರುವ ಉಬ್ಬು ಮತ್ತು ಕುಳಿಗಳ ಉದ್ದದಲ್ಲಿ ಇಳಿತವಾಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. 800 ಮೆಶ್ ಆಕಾರವನ್ನು ಬಳಸಿ AFFM ನಲ್ಲಿ ಬ್ಲೇಡ್ ನಲ್ಲಿರುವ ಸರ್ಫೇಸ್ ನ ಒರಟುತನದ ನೊಂದಾಣಿಕೆಯನ್ನು (ಕೋಷ್ಟಕ ಕ್ರ. 2) ಮಾಡಿರುವ ಗರಿಷ್ಠ (ಮ್ಯಾಕ್ಸಿಮಮ್) ಮೌಲ್ಯ Ra : 0.35µm, Rt : 3.11µm, 
Rz : 2.48µm ನಷ್ಟು ಹೆಚ್ಚಾಯಿತು.

8_1  H x W: 0 x 
 
 

9_1  H x W: 0 x 
ಮಶಿನ್ ನ ವೈಶಿಷ್ಟ್ಯಗಳು
AFFM-150D (ಚಿತ್ರ ಕ್ರ. 7) ಇದೊಂದು ಎರ್ಗೋನ್ಯಾಮಿಕ್ ಡಿಸೈನ್ ಇರುವ, ಬಳಕೆಗಾರರಿಗೆ ಅನುಕೂಲವಾಗಿರುವ, ಸುಲಭವಾಗಿ ನಿರ್ವಹಿಸಬಲ್ಲ, PLC ಗೆ ಆಧರಿಸಿರುವ HMI ನಿಯಂತ್ರಿಸಲ್ಪಟ್ಟಿರುವ ಪ್ರಣಾಳಿಕೆ ಇರುವ, ಮೈಕ್ರೋ/ ನ್ಯಾನೋ ಫಿನಿಶಿಂಗ್ ಗೋಸ್ಕರ ಆರ್ಥಿಕವಾಗಿ ಸೂಕ್ತವಾದ ಪರ್ಯಾಯವಾಗಿದೆ. ನ್ಯಾನೋ ಮೀಟರ್ ನಲ್ಲಿರುವ ನಿರ್ದೋಷತ್ವದ ಸರ್ಫೇಸ್ ನ ಒರಟುತನ ಮತ್ತು ಕ್ಲಿಷ್ಟ ಜಾಮೆಟ್ರಿ (ಒಳ ಮತ್ತು ಹೊರ) ಇರುವ ಯಂತ್ರಭಾಗಗಳನ್ನು ಫಿನಿಶ್ ಮಾಡಲು ಈ ಮಶಿನ್ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ತುಂಬಾ ಉಪಯುಕ್ತವಾಗಿದೆ. ಯಂತ್ರಭಾಗಗಳಲ್ಲಿ <50 nm Ra* ಈ ಶ್ರೇಣಿಯ ನ್ಯಾನೋ ಹಂತದ ಸರ್ಫೇಸ್ ಫಿನಿಶ್ ಲಭಿಸುತ್ತದೆ. ಈ ಮಶಿನ್ ವಿಸ್ತಾರವಾದ ಶ್ರೇಣಿಯಲ್ಲಿ ಫಿನಿಶಿಂಗ್ ನ ಕೆಲಸಕ್ಕೋಸ್ಕರ ಬಳಸಬಹುದಾಗಿದೆ. ಇದರಿಂದ ಒಂದೇ ರೀತಿಯ, ಪುನರಾವರ್ತಿಸಬಲ್ಲ ಮತ್ತು ವಿಶ್ವಸನೀಯ ಪರಿಣಾಮಗಳು ಸಿಗುತ್ತವೆ.

10_1  H x W: 0
 
ನಿರ್ಮಿತಿಯ ಹಿನ್ನೆಲೆಗೆ ಪ್ರೇರಣೆ

11_1  H x W: 0  
 

12_1  H x W: 0  
 
 
 
ಆಧುನಿಕ ಉತ್ಪಾದನೆಯ ಕ್ಷೇತ್ರದಲ್ಲಿ ಇಂದು ಬೃಹತ್ ಪ್ರಮಾಣದಲ್ಲಿ ಸ್ಪರ್ಧೆ ಇದೆ ಮತ್ತು ಈ ಉತ್ಪಾದನೆಗಳು ಇಂದಿಗೂ ಪ್ರಗತಿಪಥದಲ್ಲಿವೆ. ಹೆಚ್ಚು ಒಳ್ಳೆಯ ಸರ್ಫೇಸ್ ಫಿನಿಶ್ ನ ಬೇಡಿಕೆ ಪ್ರತಿದಿನವೂ ಹೆಚ್ಚುತ್ತಿದೆ. ತುಂಬಾ ಮಹತ್ವಪೂರ್ಣವಾದ ಇಂಜಿನಿಯರಿಂಗ್ ಯಂತ್ರಭಾಗಗಳ ಕಾರ್ಯಸಾಮರ್ಥ್ಯ ಮತ್ತು ಅವುಗಳ ಬಾಳಿಕೆ ಇದು ಸರ್ಫೇಸ್ ಫಿನಿಶ್ ನ ಗುಣಮಟ್ಟದಲ್ಲಿ ಅವಲಂಬಿಸಿ ಇರುತ್ತದೆ. ಕ್ಲಿಷ್ಟವಾದ ಆಕಾರ, ಒಳ ಮತ್ತು ಕಠಿಣವಾದ ದಾರಿ ಇರುವ ಯಂತ್ರಭಾಗಗಳಿಗೆ ಸರ್ಫೇಸ್ ಫಿನಿಶ್ ನಲ್ಲಿರುವ ಸುಧಾರಣೆಗಳು ಸವಾಲುಗಳು ಇರುವುದಾಗಿರುತ್ತದೆ.
ಸರ್ಫೇಸ್ ನ ಒರಟುತನವನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಸ್ವಯಂಚಾಲನೆಯಿಂದಾಗಿ ಪ್ರಭಾವಶಾಲಿಯಾದ ಫಿನಿಶಿಂಗ್ ನ ರೀತಿಯ ಪ್ರಮಾಣೀಕರಣವನ್ನು ಮಾಡಲಾಗುತ್ತದೆ. ಅಬ್ರೆಸಿವ್ ಫ್ಲೋ ಫಿನಿಶಿಂಗ್ ಇದು ಇದರಲ್ಲಿರುವ ಒಂದು ತಂತ್ರವಾಗಿದೆ. ದೇಶದಲ್ಲಿರುವ ಕಾರ್ಯತಂತ್ರವಿರುವ ಮತ್ತು ಕಾರ್ಯತಂತ್ರವಿಲ್ಲದ ಕ್ಷೇತ್ರಗಳಲ್ಲಿ ದುಬಾರಿಯಾದ ಮಶಿನ್ ಗಳಿಗೋಸ್ಕರ ಸ್ವದೇಶದಲ್ಲಿಯೇ ಪರ್ಯಾಯವನ್ನು ಅಭಿವೃದ್ಧಿ ಮಾಡುವಲ್ಲಿ AFFM-150D ಇದರ ಕಲ್ಪನೆ ಅಭಿವೃದ್ಧಿಯಿಂದಾಗಿ ಸಹಾಯವಾಗಿದೆ. ಏರೋಸ್ಪೇಸ್, ಅಣುಶಕ್ತಿ, ರಕ್ಷಣೆ, ಎಕ್ಸುಟ್ರುಶನ್ ಡೈಸ್ ಉದ್ಯಮ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಎಕ್ಸಟ್ರುಶನ್ ಡೈಸ್, ಮೋಲ್ಡ್ ಮತ್ತು ವೈದ್ಯಕೀಯ ಇಂಪ್ಲಾಂಟ್ ನಂತಹ ಭಾಗಗಳ ನಿರ್ಮಾಣದಲ್ಲಿ ಸುಪರ್ ಫಿನಿಶಿಂಗ್ ಮಾಡುವಲ್ಲಿ ತುಂಬಾ ಹೆಚ್ಚು ಬೇಡಿಕೆ ಇದೆ. ಭಾರತದಲ್ಲಿ ಇನ್ನಿತರ ಯಾವುದೇ ಮಶಿನ್ ಟೂಲ್ ಬಿಲ್ಡರ್ ಇಂತಹ ಮಶಿನ್ ತಯಾರಿಸುವುದಿಲ್ಲ ಮತ್ತು AFFM-150D ವ್ಯಾವಸಾಯಿಕ ಹಂತದಲ್ಲಿ ವಿಸ್ತಾರವಾದ ಶ್ರೇಣಿಯ ಸುಪರ್ ಫಿನಿಶಿಂಗ್ ನ ಕೆಲಸಕ್ಕೋಸ್ಕರ ಉಪಲಬ್ಧವಿದೆ.

13_1  H x W: 0
 
AFFM-150D ನ ಕುಶಲತೆಯ ಅಭಿವೃದ್ಧಿಯ ಕುರಿತು ವಿಸ್ತಾರವಾದ ಮಾಹಿತಿ
AFFM-150D ಬಳಸುವಲ್ಲಿ ಥರ್ಮಲ್ ಕಂಟ್ರೋಲಿಂಗ್ ಯುನಿಟ್ ಮತ್ತು ಮಾಧ್ಯಮ ಸ್ಟ್ರೋಕ್ ನ ಉದ್ದದ ಸರಿಹೊಂದಾಣಿಕೆ ತುಂಬಾ ಲಾಭಕಾರಿಯಾದ ವೈಶಿಷ್ಟ್ಯವಾಗಿದೆ. AFFM-150D ಮಶಿನ್ ನ ಮೌಲ್ಯವು ಜಾಗತಿಕ ಸ್ತರದಲ್ಲಿ ವ್ಯಾವಹಾರಿಕವಾದ ನಿಟ್ಟಿನಲ್ಲಿ ಉಪಲಬ್ಧವಿರುವ ಮಶಿನ್ ಗಳಿಗಿಂತ ಶೇಕಡಾ 50 ರಷ್ಟು ಕಡಿಮೆ ಇದೆ.
AFFM-150D ಮಶಿನ್ ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಮುಖ್ಯವಾದ ತಂತ್ರಜ್ಞಾನ
1. ಕ್ಲಿಷ್ಟ ಜಾಮೆಟ್ರಿಗೋಸ್ಕರ ಸೂಕ್ಷ್ಮ ಮತ್ತು ನ್ಯಾನೋ ಫಿನಿಶಿಂಗ್ : ಸರ್ಫೇಸ್ ಫಿನಿಶ್ ನಲ್ಲಿ ಸುಧಾರಣೆಗಳನ್ನು ಮಾಡಲು ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಾಡುವಾಗ ಫಿನಿಶ್ ಮಾಡಬೇಕಾಗಿರುವ ಯಂತ್ರಭಾಗಗಳ ಜಾಮೆಟ್ರಿ ಮತ್ತು ಸರ್ಫೇಸ್ ನ ಪ್ರಾರಂಭದ ಸ್ಥಿತಿಯನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಯಂತ್ರಭಾಗಗಳಿಗೆ ಒಂದು ಫಿಕ್ಸ್ಚರ್ ಅಭಿವೃದ್ಧಿ ಪಡಿಸಲಾಗುತ್ತದೆ ಮತ್ತು ಅದಕ್ಕೆ ಅನುಸಾರವಾಗಿ ಮಶಿನ್ ಪ್ಯಾರಾಮೀಟರ್ ಆಯ್ಕೆ ಮಾಡಲಾಗುತ್ತದೆ. ಅತ್ಯಾವಶ್ಯಕವಾದ ಸರ್ಫೇಸ್ ಒರಟುತನ (ಚಿತ್ರ ಕ್ರ. 8) ಲಭಿಸುವ ತನಕ AFFM ಸೈಕಲ್ ಗಳನ್ನು ಮಾಡುತ್ತಿರಲಾಗುತ್ತವೆ.

14_1  H x W: 0  

15_1  H x W: 0  
 
 
2. ಯಂತ್ರಭಾಗದ ಒಳ ವ್ಯಾಸದ (ID) ಮತ್ತು ಹೊರ ವ್ಯಾಸದ (OD) ಡೀಬರಿಂಗ್ (ಚಿತ್ರ ಕ್ರ. 9).
3. ಚೂಪಾಗಿರುವ ಬದಿಗಳಿಗೆ (ಎಡ್ಜ್) ಉರುಟುತನವನ್ನು ಮಾಡುವುದು (ರೆಡಿಯೈಸಿಂಗ್) (ಚಿತ್ರ ಕ್ರ. 10)
4. ದುರ್ಗಮವಾದ ಭಾಗಗಳು ಮತ್ತು ಕ್ಲಿಷ್ಟವಾಗಿರುವ ಒಳ ಮಾರ್ಗದ ಫಿನಿಶ್ ಮಾಡಲಾಗುತ್ತವೆ. (ಚಿತ್ರ ಕ್ರ. 11)
5. ಅಬ್ರೆಸಿವ್ ನಿಂದ ಕೂಡಿರುವ ಪಾಲಿಮರ್ ಮಾಧ್ಯಮದ ಉಷ್ಣಾಂಶವನ್ನು ನಿಯಂತ್ರಿಸುವುದು : ಅಬ್ರೆಸಿವ್ ಫ್ಲೋ ಫಿನಿಶಿಂಗ್ ಪ್ರಕ್ರಿಯೆಯಲ್ಲಿ ವಿಸ್ಕೋ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಮಾಧ್ಯಮದ ಪ್ರವಾಹ ಯಂತ್ರಭಾಗಗಳ ದಿಕ್ಕಿನಲ್ಲಿ ಒತ್ತಡವನ್ನು ನೀಡುತ್ತಾ ಮುಂದೆ ಸರಿಯುತ್ತದೆ. ವಿಸ್ಕೋ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಯಂತ್ರಭಾಗಗಳಲ್ಲಿ ತಿಕ್ಕಲ್ಪಡುವ ಕ್ರಿಯೆಯಿಂದಾಗಿ, ಪಾಲಿಮರ್ ಮಾಧ್ಯಮದ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತದೆ ಮತ್ತು ಇದರಿಂದಾಗಿ ಫಿನಿಶಿಂಗ್ ಅಕಾರ್ಯಕ್ಷಮತೆಯುಳ್ಳದ್ದಾಗುತ್ತದೆ. ಮಾಧ್ಯಮವು ಸಿಲಿಂಡರ್ ನ ಸುತ್ತಮುತ್ತ ನೀಡಿರುವ ಒಂದು ಥರ್ಮಲ್ ಜಾಕೇಟ್ ಮೂಲಕ ಫಿನಿಶಿಂಗ್ ಪ್ರಕ್ರಿಯೆಯಲ್ಲಿ ಪಾಲಿಮರ್ ಮಾಧ್ಯಮದ ಉಷ್ಣಾಂಶವು 22˚ ಸೆಂ.ಗಿಂತ ಕಡಿಮೆ ಅಳವಡಿಸಲಾಗುತ್ತದೆ.
6. ಒಂದಕ್ಕಿಂತ ಹೆಚ್ಚು ಯಂತ್ರಭಾಗಗಳ ಪ್ರಕ್ರಿಯೆ ಒಂದೇ ಬಾರಿ ಮಾಡುವುದು : ಪ್ರಾರಂಭದ ಹಂತದಲ್ಲಿ ಫಿಕ್ಸ್ಚರ್ ನ ಯೋಗ್ಯರೀತಿಯ ಡಿಸೈನ್ ಮೂಲಕ ಒಂದಕ್ಕಿಂತ ಹೆಚ್ಚು ಯಂತ್ರಭಾಗಗಳಿಗೆ (ಚಿತ್ರ ಕ್ರ. 12) ಒಂದೇ ವೇಳೆ ಪ್ರಕ್ರಿಯೆ ಮಾಡುವುದು ಸಾಧ್ಯ.
ಪ್ರಸ್ತುತ ಉಪಲಬ್ಧವಿರುವ ಸಮಾನವಾದ
ಮಶಿನ್ ಗಳಿಗಿಂತ ಹೆಚ್ಚು ಲಾಭಗಳು

16_1  H x W: 0  
  • ಈ ಮಶಿನ್ ನ ಸ್ಪೆಸಿಫಿಕೇಶನ್ ಮತ್ತು ಕೆಲಸ ಕಾರ್ಯಕ್ಷಮತೆ ಜಾಗತಿಕ ಸ್ತರದಲ್ಲಿರುವ ಮಶಿನ್ ಗಳಿಗೆ ಸರಿಸಮಾನ ಮತ್ತು ಜಾಗತಿಕ ನಿಯತಾಂಕಗಳ ಸ್ಪರ್ಧೆಯಲ್ಲಿವೆ. ಯಂತ್ರಭಾಗಗಳಲ್ಲಿ ಲಭಿಸುವ ಸರ್ಫೇಸ್ ನ ಒರಟುತನವು <50 nm Ra ಯ ಶ್ರೇಣಿಯಲ್ಲಿವೆ.
  • ಹೆಚ್ಚಿನ ಫಿನಿಶಿಂಗ್ ನ ಕೆಲಸಗಳಲ್ಲಿ ಮಾನವನ ಹಸ್ತಕ್ಷೇಪವು ಇದ್ದೇ ಇರುತ್ತದೆ. ಇದರಿಂದಾಗಿ ಅನಿಯಮಿತವಾದ ಸರ್ಫೇಸ್ ಫಿನಿಶ್ (ಒಂದೇ ಕ್ಷೇತ್ರಕ್ಕಿಂತ ಇನ್ನೊಂದು ಕ್ಷೇತ್ರದಲ್ಲಿರುವ ಸರ್ಫೇಸ್ ಫಿನಿಶ್ ನಲ್ಲಿ ವ್ಯತ್ಯಾಸ ಇರುತ್ತದೆ) ಸಿಗುತ್ತದೆ ಮತ್ತು ಫಿನಿಶಿಂಗ್ ಗೋಸ್ಕರ ಸಮಯವೂ ಹೆಚ್ಚು ಬೇಕಾಗುತ್ತದೆ. AFFM-150D ನಂತೆಯೇ ಸ್ವಯಂಚಾಲಿತ ಪ್ರಕ್ರಿಯೆ ಪರಿಣಾಮಕಾರಿ ಹಾಗೆಯೇ ಕೈಗೆಟಕುವ ದಾರಿಯಲ್ಲಿ ಒಂದೇ ರೀತಿಯ ಸರ್ಫೇಸ್ ಫಿನಿಶ್ ಮತ್ತು ಉಚ್ಚಮಟ್ಟದ ರಿಪಿಟ್ಯಾಬಿಲಿಟಿಯ ಸಾಮರ್ಥ್ಯವನ್ನು ನೀಡುತ್ತವೆ.
  • ಅತ್ಯಾಧುನಿಕ ಫಿಕ್ಸ್ಚರ್ ಡಿಸೈನ್ ನಿಂದಾಗಿ ಒಂದಕ್ಕಿಂತ ಹೆಚ್ಚು ಯಂತ್ರಭಾಗಗಳ ಫಿನಿಶಿಂಗ್ ಒಂದೇ ವೇಳೆಯಲ್ಲಿ ಮಾಡಬಹುದಾಗಿದೆ. ಇದರಿಂದಾಗಿ ಫಿನಿಶಿಂಗ್ ಗೆ ಬೇಕಾಗುವ ಸಮಯವೂ ಕಡಿಮೆಯಾಗುತ್ತದೆ.

17_1  H x W: 0
 
ತಾಂತ್ರಿಕ ಯಶಸ್ಸು
  • ಅಭಿವೃದ್ಧಿ ಪಡಿಸಿರುವ AFFM-150D ಮಶಿನ್, 200 ಮಿ.ಮೀ. ವ್ಯಾಸ ಮತ್ತು 300 ಮಿ.ಮೀ. ಎತ್ತರ ಇರುವ ಯಂತ್ರಭಾಗಗಳನ್ನು ಸರಿಹೊಂದಾಣಿಸಬಲ್ಲದು. 15 ರಿಂದ 100 ಬಾರ್ ಗಳ ಹಂತದಲ್ಲಿ ವೆರಿಯೇಬಲ್ ಹೈಡ್ರಾಲಿಕ್ ಒತ್ತಡ.
  • ಪಿಸ್ಟನ್ ನ ಚಟುವಟಿಕೆಗಳನ್ನು ಕಾರ್ಯಗತ ಮಾಡಲು ಸೀಲಿಂಗ್ ನ ವ್ಯವಸ್ಥೆ ಮತ್ತು 250 ಮಿ.ಮೀ. ಸ್ಟ್ರೋಕ್ ಉದ್ದ ಇರುವ ಹೈಡ್ರೋಲಿಕ್ ಪವರ್ ಪ್ಯಾಕ್ ಅಭಿವೃದ್ಧಿ ಪಡಿಸಲಾಗಿದೆ.
  • ವಿಸ್ಕೊ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಮಾಧ್ಯಮದ ಕೆಲಸವು ಹವಾಮಾನಕ್ಕೆ ಅವಲಂಬಿಸಿ ಇರುವುದರಿಂದ ಅಬ್ರೆಸಿವ್ ಫ್ಲೋ ಫಿನಿಶಿಂಗ್ ಪ್ರಕ್ರಿಯೆಯಲ್ಲಿ ಪಾಲಿಮರ್ ನ ಆಪ್ಟಿಮೈಸ್ಡ್ ರಿಯೋಲಾಜಿಕಲ್ ಗುಣಧರ್ಮಕ್ಕೋಸ್ಕರ ಅದರ ಉಷ್ಣಾಂಶ 22˚ ಸೆಂ. ಇಡಬೇಕಾಗುತ್ತದೆ. ಇದಕ್ಕೋಸ್ಕರ ಒಂದು ಉಷ್ಣಾಂಶವನ್ನು ನಿಯಂತ್ರಿಸುವ ಯುನಿಟ್ ಅಭಿವೃದ್ಧಿ ಮಾಡಲಾಗಿದೆ.
  • ಪಾಲಿಮರ್ ಮತ್ತು ಅಬ್ರೆಸಿವ್ ಕಣಗಳನ್ನು ಒಂದೇ ರೀತಿಯಲ್ಲಿ ವಿತರಿಸಲು ಅಭಿವೃದ್ಧಿ ಮಾಡಿರುವ ಎರಡು ರೋಲ್ ಗಳಿರುವ ಮಿಕ್ಸರ್ ಮಶಿನ್ ಬಳಸಿ ಸ್ವಯಂಚಾಲಿತವಾಗಿ ವಿಸ್ಕೊ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಮಾಧ್ಯಮದ ಮಿಶ್ರಣವನ್ನು ಮಾಡಲಾಗುತ್ತದೆ.
ಈ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಎಂಬುದನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 
 
ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ ನಲ್ಲಿ ಬಳಸಲಾಗುವ ವಿಸ್ಕೊ-ಇಲಾಸ್ಟಿಕ್ ಮಟೀರಿಯಲ್ ನ ವ್ಯಾವಹಾರಿಕ ಹೆಸರು ಸಿಲಿ ಪುಟ್ಟಿ ಎಂಬುದಾಗಿದೆ ಮತ್ತು ರಾಸಾಯನಿಕ ಹೆಸರು ಪಾಲಿಡೈಮಿಥಾಯಿಲ್ ಸೈಲೋಕ್ಸಾನ್ ಎಂಬುದಾಗಿದೆ. ಈ ಸಿಲಿ ಪುಟ್ಟಿಯು (ಚಿತ್ರ ಕ್ರ. 13) ಮಟೀರಿಯಲ್ ಅಬ್ರೆಸಿವ್ ನ ಸೂಕ್ಷ್ಮವಾದ ಕಣಗಳೊಂದಿಗೆ (ಉದಾಹರಣೆ, ಅಲ್ಯುಮಿನಾ ಅಥವಾ ಸಿಲಿಕಾನ್ ಕಾರ್ಬೈಡ್) ಬೆರೆಸಲಾಗುತ್ತದೆ ಮತ್ತು ಈ ಮಿಶ್ರಣವು ಎಲ್ಲ ಸರ್ಫೇಸ್ ಮತ್ತು ಎಡ್ಜ್ ಗಳಿಂದ ಹಾಗೆಯೇ ಯಂತ್ರಭಾಗಗಳಲ್ಲಿರುವ ಕ್ಲಿಷ್ಟವಾಗಿರುವ ಟೊಳ್ಳುತನದಲ್ಲಿ ತಿರುಗಿಸಲಾಗುತ್ತದೆ. ಸಿಲಿ ಪುಟ್ಟಿ ಮಟೀರಿಯಲ್ ವಿಸ್ಕೋ-ಇಲಾಸ್ಟಿಕ್ ಆಗಿರುವುದರಿಂದ ಅದರಲ್ಲಿ ತೀಕ್ಷ್ಣವಾದ ಅಬ್ರೆಸಿವ್ ಕಣಗಳು ಪ್ರವಾಹದೊಂದಿಗೆ ಸಹಜವಾಗಿ ನಿಲ್ಲಬಲ್ಲವು.

18_1  H x W: 0
 
ಪಾಲಿಮರ್ ಮತ್ತು ಅಬ್ರೆಸಿವ್ ಇವುಗಳ ಪ್ರಮಾಣ
AFFM-150D ಗೋಸ್ಕರ, ವಿಸ್ಕೋ-ಇಲಾಸ್ಟಿಕ್ ಪಾಲಿಮರ್ (ಸಿಲಿ ಪುಟ್ಟಿ) ಮತ್ತು ಸಿಲಿಕಾನ್ ಕಾರ್ಬೈಡ್ ಅಬ್ರೆಸಿವ್ ನ ತೂಕದ ಪ್ರಮಾಣದಲ್ಲಿ 1:1 (ಉದಾಹರಣೆ, 7 ಕಿ.ಗ್ರಾಂ. ಸಿಲಿ ಪುಟ್ಟಿ + 7 ಕಿ.ಗ್ರಾ. ಅಬ್ರೆಸಿವ್) ಈ ರೀತಿಯಲ್ಲಿ ಬೆರೆಸಲಾಗುತ್ತದೆ. ಇದಕ್ಕೋಸ್ಕರ ಚಿತ್ರ ಕ್ರ. 15 ರಲ್ಲಿ ತೋರಿಸಲಾಗಿರುವ ಮಶಿನ್ ಬಳಸಲಾಗುತ್ತದೆ. ಈ ಮಶಿನ್ ನಲ್ಲಿರುವ ರೋಲರ್ ನ ರಚನೆಯನ್ನು ಚಿತ್ರ ಕ್ರ. 14 ರಲ್ಲಿ ತೋರಿಸಿದಂತೆ ಎರಡು ರೋಲರ್ ಗಳಲ್ಲಿರುವ ಸಂದುಗಳಲ್ಲಿ ಸಿಲಿ ಪುಟ್ಟಿ ಮತ್ತು ಅಬ್ರೆಸಿವ್ ಕಣಗಳನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. AFFM-150D ಗೋಸ್ಕರ ಸಿಲಿಕಾನ್ ಕಾರ್ಬೈಡ್ ಅಬ್ರೆಸಿವ್ ಬಳಸಲಾಗುತ್ತದೆ.
ಅನೇಕ ರೀತಿಯ ಕಾರ್ಯವಸ್ತುಗಳಿಗೋಸ್ಕರ ಪಾಲಿಮರ್ ಮಾಧ್ಯಮದ (ಸಿಲಿ ಪುಟ್ಟಿ) ವಿವಿಧ ಅಂದರೆ ಕಡಿಮೆ, ಮಧ್ಯಮ ಮತ್ತು ಉಚ್ಚ ವಿಸ್ಕಾಸಿಟಿ ಇರುವ ಸೆಟ್ ಆವಶ್ಯಕವಾಗಿರುತ್ತವೆ. ಉದಾಹರಣೆ, ಕಡಿಮೆ (5000 Pa-s ಗಿಂತ ಕಡಿಮೆ), ಮಧ್ಯಮ (5000-30000 Pa-s) ಮತ್ತು ಉಚ್ಚಮಟ್ಟದ ವಿಸ್ಕಾಸಿಟಿ (30000 Pa-s ಗಿಂತ ಕಡಿಮೆ).

20_1  H x W: 0
 
 
21_1  H x W: 0
 
 
ಉದಾಹರಣೆ
1. ಕಡಿಮೆ ವ್ಯಾಸದ (5 ಮಿ.ಮೀ.ಗಿಂತ ಕಡಿಮೆ) ಟೊಳ್ಳಾದ ದಾರಿ ಇರುವ ಯಂತ್ರಭಾಗಗಳ ಫಿನಿಶಿಂಗ್ ಅಥವಾ ಡಿಬರಿಂಗ್ ಮಾಡಲು ಅಥವಾ ಮೂಲೆಗೆ ಉರುಟುತನವನ್ನು ನೀಡಲು ಕಡಿಮೆ ವಿಸ್ಕಾಸಿಟಿ ಇರುವ ಮಾಧ್ಯಮವನ್ನು ಬಳಸಲಾಗುತ್ತದೆ.
2. ಅಲ್ಯುಮಿನಿಯಮ್ ಪ್ರೊಪೆಲರ್ ನ (ಸಂದರ್ಭ : ಉದಾಹರಣೆ 1) ಫಿನಿಶಿಂಗ್ ಅಥವಾ ಡಿಬರಿಂಗ್ ಮಾಡಲು ಅಥವಾ ಮೂಲೆಗೆ ಉರುಟುತನವನ್ನು ನೀಡಲು ಮಧ್ಯಮ ವಿಸ್ಕಾಸಿಟಿ ಇರುವ ಮಾಧ್ಯಮವನ್ನು ಬಳಸಲಾಗುತ್ತದೆ.
3. ಯಾವ ಮಟೀರಿಯಲ್ ಗಳ ಕಠಿಣತೆಯು 45 HRC ಗಿಂತ ಹೆಚ್ಚು ಇದ್ದಲ್ಲಿ ಆ ಮಟೀರಿಯಲ್ ನ ಫಿನಿಶಿಂಗ್ ಅಥವಾ ಡಿಬರಿಂಗ್ ಮಾಡಲು ಅಥವಾ ಮೂಲೆಗಳಿಗೆ ಉರುಟುತನವನ್ನು ನೀಡಲು ಉಚ್ಚಮಟ್ಟದ ವಿಸ್ಕಾಸಿಟಿ ಇರುವ ಮಾಧ್ಯಮವನ್ನು ಬಳಸಲಾಗುತ್ತದೆ.
ವಿಸ್ಕೋ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ನ ಪುನರ್ಬಳಕೆಯನ್ನು ಮಾಡಲಾಗುವುದಿಲ್ಲ. ವಿಸ್ಕೋ-ಇಲಾಸ್ಟಿಕ್ ಅಬ್ರೆಸಿವ್ ಪಾಲಿಮರ್ ಒಂದು ವಿಶಿಷ್ಟ ಸಮಯದ ತನಕ ಬಳಸಿದ ನಂತರ ಅಬ್ರೆಸಿವ್ ಕಣಗಳು ಮೊಂಡಾಗುತ್ತವೆ ಮತ್ತು ಸಿಲಿ ಪುಟ್ಟಿ ಮಟೀರಿಯಲ್ ಕೂಡಾ ಅದರ ವಿಸ್ಕೋ-ಇಲಾಸ್ಟಿಕ್ ಗುಣಧರ್ಮವನ್ನು ಕಳೆದುಕೊಳ್ಳುತ್ತದೆ.

ಇನ್ನಿತರ ಲಾಭಗಳು
  • ಕಡಿಮೆ ಸೈಕಲ್ ಟೈಮ್ ನಲ್ಲಿ ಆವಶ್ಯಕವಿರುವ ಸರ್ಫೇಸ್ ಫಿನಿಶ್ ಪಡೆಯಲು ಪ್ರಕ್ರಿಯೆಯ ಪ್ಯಾರಾಮೀಟರ್ ಆಪ್ಟಿಮೈಜೆಶನ್.
  • AFFM-150D ಬಳಸಿ 55 HRC ತನಕ ಕಠಿಣತೆ ಇರುವ ಅನೇಕ ವಿಧದ ಮಟೀರಿಯಲ್ ನಿಂದ ತಯಾರಿಸಲಾಗಿರುವ ಯಂತ್ರಭಾಗಗಳ ನ್ಯಾನೋಮೆಟ್ರಿಕ್ ಫಿನಿಶಿಂಗ್.
  • 1 ಮಿ.ಮೀ. ದಪ್ಪವಿರುವ ಮತ್ತು ಕಠಿಣವಾಗಿರುವ ದಾರಿ/ ಕ್ಷೇತ್ರದಲ್ಲಿಯೂ ಡಿಬರಿಂಗ್ ಸಾಧ್ಯ.
  • ತೀಕ್ಷ್ಣ ಎಡ್ಜ್ ಗಳಿಗೆ ಗರಿಷ್ಠ 0.65 ಮಿ.ಮೀ.ತನಕದ ಉರುಟುತನವನ್ನು ಮಾಡುವುದೂ ಸಾಧ್ಯ.
  • ಸ್ಟೆನ್ ಲೆಸ್ ಸ್ಟೀಲ್ ಮಟೀರಿಯಲ್ ಗೋಸ್ಕರ ಲಭಿಸಿರುವ ಸರ್ವೋತ್ತಮವಾದ ಸರ್ಫೇಸ್ ಒರಟುತನ <50µm Ra.
  • ಉತ್ಪಾದನೆಯ ಕ್ಷೇತ್ರದಲ್ಲಿ ಮಹತ್ವಪೂರ್ಣವಾದ ಕೆಲಸಗಳಿಗೋಸ್ಕರ ಬಳಸಲಾಗುವ ವಿವಿಧ ಸವಾಲುಗಳುಳ್ಳ ಯಂತ್ರಭಾಗಗಳ ಫಿನಿಶಿಂಗ್ ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ ನಲ್ಲಿ ಮಾಡಿ ತೋರಿಸಲಾಗಿದೆ.
ಡಿಬರಿಂಗ್ ಮತ್ತು ರೆಡಿಯಸಿಂಗ್ ಪ್ರಕ್ರಿಯೆಯು ಹೇಗೆ ಆಗುತ್ತದೆ, ಎಂಬುದನ್ನು ನೋಡಲು ಪಕ್ಕದಲ್ಲಿ ನೀಡಿರುವ ಎರಡು QR ಕೋಡ್ ಗಳನ್ನು ತಮ್ಮ ಮೊಬೈಲ್ ನಿಂದ್ ಸ್ಕ್ಯಾನ್ ಮಾಡಿರಿ.
AFFM-150D ಬಳಸಿ 150 ಕ್ಕಿಂತ ಹೆಚ್ಚು ಯಂತ್ರಭಾಗಗಳ ಫಿನಿಶಿಂಗ್ ಯಶಸ್ವಿಯಾಗಿ ಮಾಡಲಾಗಿದೆ. ಈ ಹಿಂದೆ ಅನೇಕ ಮಹತ್ವಪೂರ್ಣವಾದ ಯಂತ್ರಭಾಗಗಳಿಗೆ ಫಿನಿಶಿಂಗ್ ಬಳಸಲು ಹೆಚ್ಚಿನ ಗ್ರಾಹಕರಲ್ಲಿ ಒಂದಾದರೆ ಮ್ಯಾನ್ಯುವಲ್ ಪಾಲಿಶಿಂಗ್ ಅಥವಾ ಪಾರಂಪರಿಕವಾದ ಫಿನಿಶಿಂಗ್ ಪ್ರಕ್ರಿಯೆ ಬಳಸಲಾಗುತ್ತಿತ್ತು. ಅಬ್ರೆಸಿವ್ ಫ್ಲೋ ಫಿನಿಶಿಂಗ್ ಮಶಿನ್ ಮ್ಯಾನ್ಯುವಲ್ ಫಿನಿಶಿಂಗ್ ಗೆ ಒಂದು ಸೂಕ್ತವಾದ ಪರ್ಯಾಯವಾಗಿದೆ. ಮಹತ್ವದ ಯಂತ್ರಭಾಗಗಳಿಗೆ ನ್ಯಾನೋಮೆಟ್ರಿಕ್ ಸರ್ಫೇಸ್ ಫಿನಿಶ್ ಮಾಡುವಾಗ ಇಂತಹ ಸ್ವಯಂಚಾಲಿತ ಫಿನಿಶಿಂಗ್ ತಂತ್ರವನ್ನು ಬಳಸಿದಲ್ಲಿ ಹೆಚ್ಚು ಕಾರ್ಯಸಾಮರ್ಥ್ಯ ಮತ್ತು ಉತ್ಪಾದಕತೆಯು ಲಭಿಸುತ್ತದೆ.
(ಈ ಲೇಖನದಲ್ಲಿ SMPM, CMTI ಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶಾಸ್ತ್ರಜ್ಞರಾದ ಮಂಜುನಾಥ ಎಮ್.ಎ. ಇವರು ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ).
 
 
 
 
@@AUTHORINFO_V1@@