ಲೋಹಕಾರ್ಯ ಮಾಸ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾಗಿರುವ ಲೇಖನಗಳಲ್ಲಿ ನಾವು ಕಾರ್ಯವಾಹಿ ಬಂಡವಾಳದ ಮಹತ್ವ ಮತ್ತು ಅದರ ನಿರ್ವಹಣೆಯ ಕುರಿತು ತಿಳಿದುಕೊಂಡೆವು. ಆರ್ಥಿಕ ಯೋಜನೆ, ಬ್ಯಾಲೆನ್ಸ್ ಶೀಟ್, ಟ್ಯಾಕ್ಸ್ ರಿಟರ್ನ್ ಅಕೌಂಟ್ಸ್ ಇಂತಹ ಶಬ್ದಗಳನ್ನು ಚರ್ಚಿಸುವಾಗ ಅನೇಕ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಅವುಗಳ ಕಡೆಗೆ ಗಮನಿಸುವುದಿಲ್ಲ. ಅಲ್ಲದೇ ನಮ್ಮ ಸಿ.ಎ. ಇದನ್ನೆಲ್ಲಾ ನೋಡಿಕೊಳ್ಳುತ್ತಾರೆ, ಎಂದು ಹೇಳಿ ತಮ್ಮ ಜವಾಬ್ದಾರಿಯ ಕಡೆಗೆ ಗಮನ ಹರಿಸದೇ ಅದರಿಂದ ಮುಕ್ತರಾಗುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ರೀತಿಯ ನಡವಳಿಕೆಯು ಸೂಕ್ತವಲ್ಲ. ಇದರ ಕಾರಣವೆಂದರೆ ಅನೇಕ ಬಾರಿ ಸಲಹೆಗಾರರ ಸಂಬಂಧವು ಕೇವಲ ಉದ್ಯಮಿಗಳ ಟೇಕ್ಸ್ ರಿಟರ್ನ್ ತುಂಬಿಸುವಾಗ ಮತ್ತು ಅದನ್ನು ಪೂರ್ತಿಗೊಳಿಸುವುದಕ್ಕೆ ಸೀಮಿತವಾಗಿರುತ್ತದೆ. ಉದ್ಯಮಿಗಳ ವ್ಯವಹಾರದಲ್ಲಾಗುವ ಪ್ರತಿದಿನದ ಹಣಕಾಸಿನ ಚಟುವಟಿಕೆಗಳ ಮತ್ತು ಅದಕ್ಕೆ ಅನುಗುಣವಾಗಿರುವ ಹಣಕಾಸಿನ ಪರಿಣಾಮಗಳ ಕುರಿತಾದ ವಿವರಗಳ ಅರಿವು ಸಲಹೆಗಾರರಿಗೆ ಇರುವುದಿಲ್ಲ. ಅದ್ದರಿಂದಲೇ ಅವರಿಂದ ಉದ್ಯಮಿಗಳಿಗೆ ಲಭಿಸುವ ಮಾರ್ಗದರ್ಶನವು ಅನೇಕ ಬಾರಿ ಸೀಮಿತದ್ದಾಗಿರುತ್ತದೆ. ಅಲ್ಲದೇ ಅದೂ ಕೂಡಾ ಮಾಡಬೇಕಾಗಿರುವ ಕೆಲಸದ ನಂತರ ನೀಡಲಾಗುತ್ತದೆ. ಇಂತಹ ಮಾರ್ಗದರ್ಶನದ ಉಪಯೋಗವು ಉದ್ಯಮಿಗಳಿಗೆ ರಿಯಲ್ ಟೈಮ್ ಬೆಸಿಸ್ ನಲ್ಲಿ ಹಣಕಾಸಿನ ಕುರಿತಾದ ಇತ್ಯರ್ಥವನ್ನು ಮಾಡುವಲ್ಲಿ ಆಗುವುದಿಲ್ಲ. ನದಿಯ ತೀರದಲ್ಲಿ ಕುಳಿತು ಈಜುವುದನ್ನು ಕಲಿಯುವುದು ಹೇಗೆ ಅಸಾಧ್ಯವೋ, ಹಾಗೆಯೇ ಯಾರಿಗೆ ಈಜುವುದಿದೆಯೋ, ಅವರು ಸ್ವಂತವೇ ತಮ್ಮ ಕೈ-ಕಾಲುಗಳನ್ನು ಬಡಿಯಬೇಕು. ಹೀಗೆ ಕೈ-ಕಾಲು ಬಡಿದಲ್ಲಿ ಮಾತ್ರ ಈಜುವುದನ್ನು ಕಲಿಯುವುದು ಸಾಧ್ಯ. ಅದೇ ರೀತಿಯಲ್ಲಿ ಪ್ರಾಥಮಿಕ ಸ್ವರೂಪದಲ್ಲಿಯಾದರೂ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುವಲ್ಲಿ ಉದ್ಯಮಿಗಳಿಗೆ ಹಣಕಾಸಿನ ಕುರಿತಾದ ಅರ್ಥಸಾಕ್ಷರತೆ ಇರುವುದೂ ಅತ್ಯಾವಶ್ಯಕವಾಗಿದೆ.
ಅದಕ್ಕೋಸ್ಕರವೇ ಲೆಕ್ಕಾಚಾರದ ಕುರಿತಾದ ಡ್ಯಾಶ್ ಬೊರ್ಡ್ ನ ಮೂಲಭೂತ ಮಾಹಿತಿಯನ್ನು ಪ್ರತಿಯೊಬ್ಬ ಉದ್ಯಮಿಯೂ ತಿಳಿದುಕೊಳ್ಳುವುದು ತುಂಬಾ ಅಗತ್ಯವಾದ ಅಂಶವಾಗಿದೆ. ಈ ರೀತಿಯ ಮಾಹಿತಿಯನ್ನು ಉಪಯೋಗಿಸಿ ರಿಯಲ್ ಟೈಮ್ ಬೆಸಿಸ್ ನಲ್ಲಿ ಉದ್ಯಮಕ್ಕೆ ಬೇಕಾಗಿರುವ ಹಣಕಾಸಿನ ನಿರ್ಧಾರವನ್ನು ಪಡೆಯಬಲ್ಲರು. ಅಲ್ಲದೇ ತಮ್ಮ ವ್ಯವಹಾರದ ವೃದ್ಧಿಯನ್ನು ಮಾಡಬಲ್ಲರು. ‘ಎ ಸ್ಟಿಚ್ ಇನ್ ಟೈಮ್ ಸೆವ್ಸ್ ನೈನ್’ ಎಂಬ ವಾಕ್ಯವು ಎಲ್ಲರಿಗೂ ತಿಳಿದಿದೆ.
ಕೆಲವು ತಪ್ಪು ತಿಳಿವಳಿಕೆಗಳು
ವಾಣಿಜ್ಯ ಶಾಖೆಗೆ (ಕಾಮರ್ಸ್) ಕುರಿತಾದ ಮಾಹಿತಿಯು ಅನೇಕ ಉದ್ಯಮಿಗಳಿಗೆ ಇರುವುದಿಲ್ಲ. ತಾವು ನಾನ್ ಫೈನಾನ್ಸ್ ವ್ಯಕ್ತಿಗಳು ಎಂಬುದಾಗಿ ಅವರಿಗೆ ಅನಿಸುತ್ತಿರುತ್ತದೆ. ನಿಜವಾಗಿ ಉದ್ಯಮಿಗಳು ಯಾವುದೇ ಶಾಖೆ ಅಥವಾ ಯಾವುದೇ ಬ್ಯಾಕ್ ಗ್ರೌಂಡ್ ಹೊಂದಿರಲಿ, ಅವರೇ ಉದ್ಯಮದಲ್ಲಿ ನಿಜವಾದ ಫೈನಾನ್ಸ್ ವ್ಯಕ್ತಿಗಳಾಗಿರುತ್ತಾರೆ. ಕಾರಣ ಉದ್ಯಮಗಳಲ್ಲಿ ಹಣವು ಅವರ ಸ್ವಂತದ ಮತ್ತು ಅವರಲ್ಲಿರುವ ಕೋರ್ ಟೀಮ್ ನ ಪ್ರಯತ್ನದಿಂದಲೇ ಸಿಗುತ್ತಿರುತ್ತದೆ. ಸಾಮಾನ್ಯವಾಗಿ ಯಾರನ್ನು ಫೈನಾನ್ಸ್ ವ್ಯಕ್ತಿ ಎಂದು ತಿಳಿಯಲಾಗುತ್ತದೆಯೋ, ಅಂತಹ ಅಕೌಟಂಟ್ ವ್ಯಕ್ತಿಗಳು ಈ ರೀತಿಯಲ್ಲಿ ಹಣ ಗಳಿಸುವ ಮತ್ತು ಖರ್ಚು ಮಾಡುವ, ಉದ್ಯಮಗಳಲ್ಲಿ ಮಾಲಿಕರು ಮತ್ತು ಇನ್ನಿತರರ ವ್ಯವಹಾರಗಳ ಲೆಕ್ಕಾಚಾರವನ್ನು ಇಡುವ ಕೆಲಸವನ್ನೇ ಮಾಡುತ್ತಿರುತ್ತಾರೆ. ಯಾವುದೇ ಆಟದ ಉದಾಹರಣೆಯನ್ನು ನೋಡಿದಾಗ, ಆಟದ ಫಲಿತಾಂಶವು ಆಟಗಾರರ ಕಾರ್ಯ ನಿರ್ವಹಣೆಯಲ್ಲಿ ಅವಲಂಬಿಸಿರುತ್ತದೆ. ಆಟಗಳ ಸ್ಕೋರ್ ಪರಿಶೀಲಿಸುವ ಸ್ಕೋರ್ ಕೀಪರ್ ನ್ನು ಅವಲಂಭಿಸಿರುವುದಿಲ್ಲ. ಹಾಗೆಯೇ ಉದ್ಯಮದ ಆರ್ಥಿಕ ಯಶಸ್ಸು ಆ ಉದ್ಯಮದಲ್ಲಿರುವ ಪ್ರಮುಖ ತಂಡದ (ಕೋರ್ ಟೀಮ್) ಕಾರ್ಯಸಾಮರ್ಥ್ಯದಲ್ಲಿ (ಪರ್ಫಾರ್ಮನ್ಸ್) ಅವಲಂಬಿಸಿರುತ್ತದೆ. ಈ ಅರ್ಥವನ್ನು ವೀಕ್ಷಿಸಿದಾಗ ಅಂತಹ ನಾನ್ ಫೈನಾನ್ಸ್ ವ್ಯಕ್ತಿಗಳೇ ನಿಜವಾಗಿಯೂ ಉದ್ಯಮಗಳಲ್ಲಿ ಫೈನಾನ್ಸ್ ವ್ಯಕ್ತಿಗಳಾಗಿರುತ್ತಾರೆ. ಉದ್ಯಮಿಗಳು ತಾವು ನಾನ್ ಫೈನಾನ್ಸ್ ವ್ಯಕ್ತಿಗಳಾಗಿದ್ದೇವೆ, ಎಂಬ ತಿಳಿವಳಿಕೆಯಿಂದ ಹೊರ ಬರಲೇಬೇಕು. ಕಾರಣ ಇಂತಹ ತಪ್ಪು ತಿಳುವಳಿಕೆಯಿಂದಾಗಿ ಅವರ ಹಣಕಾಸಿದ ನಿರ್ವಹಣೆಯಲ್ಲಿ ಇನ್ನೆರಡು ರೀತಿಯ ತಪ್ಪು ತಿಳಿವಳಿಕೆಗಳು ಉಂಟಾಗುತ್ತವೆ. ಇದರಲ್ಲಿ ಒಂದು ಅಂದರೆ, ಅವರಿಗೆ ಅಕೌಂಟ್ಸ್, ಬ್ಯಾಲೆನ್ಸ್ ಶೀಟ್, ಕ್ಯಾಶ್ ಫ್ಲೋ, ಕಾಸ್ಟಿಂಗ್ (Costing) ಇತ್ಯಾದಿ ವಿಷಯಗಳು ತುಂಬಾ ಕ್ಲಿಷ್ಟ ಮತ್ತು ಕಠಿಣವಾಗಿವೆ ಎಂದು ಅನಿಸುತ್ತದೆ. ಈ ಎಲ್ಲ ಅಂಶಗಳಲ್ಲಿ ತುಂಬಾ ದೊಡ್ಡ ಲೆಕ್ಕಾಚಾರವನ್ನು ಮಾಡಬೇಕಾಗುತ್ತದೆ. ಈ ರೀತಿಯಲ್ಲಿ ಲೆಕ್ಕಾಚಾರವನ್ನು ಮಾಡುವುದು ತಮಗೆ ಸಾಧ್ಯವೇ, ಎಂಬ ಅನುಮಾನವು ಅವರನ್ನು ಕಾಡುತ್ತಿರುತ್ತದೆ. ಇಂತಹ ತಪ್ಪು ತಿಳುವಳಿಕೆಯಿಂದಾಗಿ ಅನೇಕ ಸಲ ಈ ವಿಷಯದಲ್ಲಿ ತಲೆ ಖರ್ಚು ಮಾಡುವುದಕ್ಕಿಂತ ಅದೇ ಸಮಯವನ್ನು ತಾವು ತಾಂತ್ರಿಕ ಮತ್ತು ಮಾರ್ಕೆಟಿಂಗ್ ನ ಕೆಲಸಗಳಿಗೆ ಬಳಸಿದಲ್ಲಿ ಹೆಚ್ಚು ಸೇಲ್ ಮತ್ತು ಲಾಭದ ಅವಕಾಶಗಳನ್ನು ಪಡೆಯಬಲ್ಲೆವು, ಎಂಬ ವಿಚಾರವನ್ನು ಮಾಡುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಕ್ಲಿಷ್ಟವಾದ ಕೆಲಸವನ್ನು ಔಟ್ ಸೋರ್ಸಿಂಗ್ ಮಾಡಲು ಕೊಟ್ಟು ಉದ್ಯಮದ ಪ್ರಮುಖ ಕೆಲಸಗಳಲ್ಲಿ (ಕೋರ್ ಏರಿಯಾ) ಗಮನ ಹರಿಸುವುದೇ, ತುಂಬಾ ಒಳ್ಳೆಯದು ಎಂಬುದಾಗಿ ಈ ಉದ್ಯಮಿಗಳಿಗೆ ಅನಿಸುತ್ತಿರುತ್ತದೆ.
ವಾಸ್ತವಿಕತೆ
ಪ್ರತಿಯೊಂದು ಉದ್ಯಮದಲ್ಲಿರುವ ಕೋರ್ ಕೆಲಸವು ಇನ್ನಿತರರಿಗೆ ಬೇರೆ ರೀತಿಯಲ್ಲಿ ಕಾಣುತ್ತದೆ. ಕಾರಣ ಪ್ರತಿಯೊಂದು ಉದ್ಯಮವು ಅನೇಕ ಕ್ಷೇತ್ರಗಳಲ್ಲಿ, ವಿವಿಧ ಸಾಮರ್ಥ್ಯಕ್ಕೆ ಅಧರಿಸಿ, ಅನೇಕ ಭೌಗೋಲಿಕ ಕ್ಷೇತ್ರದಲ್ಲಿ ಮತ್ತು ಇತರ ಅನೇಕ ರೀತಿಯಲ್ಲಿ ವಿವಿಧ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು, ಸರಿಯಾಗಿ ಗಮನಿಸಿದಾಗ ಕಂಡುಬರುತ್ತದೆ. ಆದರೆ ಯಾವುದೇ ಉದ್ಯಮದ ಮೂಲ ಉದ್ದೇಶವೆಂದರೆ ಹಣ ಗಳಿಸುವುದು ಇದೇ ಇರುತ್ತದೆ, ಎಂಬುದು ಕೋರ್ ನ ಕೋರ್ ನ್ನು ವೀಕ್ಷಿಸಿದಾಗ ಗಮನಕ್ಕೆ ಬರುತ್ತದೆ. ‘ಪೈಸಾ ಆಯಾ ಕಿತನಾ ಗಯಾ ಕಿತನಾ’ ಎಂಬ ಗಾದೆಯ ಪ್ರಕಾರ ಎಲ್ಲ ವ್ಯವಹಾರಗಳನ್ನು ಕೇವಲ ಹಣಕ್ಕಾಗಿಯೇ ಮಾಡಲಾಗುತ್ತದೆ. ಹಾಗೆ ನೋಡಿದರೆ ಇದೇ ಉದ್ಯಮದ ಅಥವಾ ವ್ಯವಹಾರದ ಪ್ರಮುಖವಾದ ಅಂಶವಾಗಿದೆ. ಇದರಿಂದಾಗಿ ಉದ್ಯಮದಲ್ಲಿರುವ ಮೂಲಭೂತವಾದ ಕೆಲಸಗಳನ್ನು ಹೊರಗಿನಿಂದ ಮಾಡಿಸುವ ವಿಚಾರವನ್ನು ಬಿಟ್ಟು ಬಿಡುವುದು ಉದ್ಯಮಿಗಳಿಗೆ ತುಂಬಾ ಆವಶ್ಯಕವಾಗಿದೆ.
ಅಕೌಂಟ್ಸ್, ಫೈನಾನ್ಸ್, ಬ್ಯಾಲೆನ್ಸ್ ಶೀಟ್, MIS, ಟ್ಯಾಕ್ಸ್ ರಿಟರ್ನ್ಸ್ ಇವುಗಳೆಲ್ಲವೂ ತುಂಬಾ ಕ್ಲಿಷ್ಟವಾಗಿರುತ್ತವೆ. ಇಂತಹ ತಪ್ಪು ತಿಳುವಳಿಕೆಯ ಕುರಿತು ಹೇಳುವುದಾದಲ್ಲಿ ಇಂತಹ ನೊಂದಾಣಿಕೆಗಳು ಮತ್ತು ಸ್ಟೇಟ್ ಮೆಂಟ್ ಕ್ಲಿಷ್ಟವಾಗಿರುವುದಿಲ್ಲ. ಅವುಗಳಿಗೆ ಒಂದು ವಿಶಿಷ್ಟವಾದ ಫಾರ್ಮೆಟ್ ಇರುತ್ತದೆ. ಅದನ್ನು ಪ್ರಸ್ತುತ ಪಡಿಸುವಲ್ಲಿ ಒಂದು ವಿಶೇಷವಾದ ರೀತಿ ಇರುತ್ತದೆ ಮತ್ತು ಹಲವಾರು ಮೂಲಭೂತ ಅಂಶಗಳನ್ನು ಅದರಲ್ಲಿ ಬಳಸಲಾಗಿರುತ್ತದೆ. ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಈ ಎಲ್ಲಕ್ಕೂ ಒಂದು ‘ಟೆಕ್ನಿಕಲ್ ಜಾರ್ಗನ್’ ತಯಾರಿಸಲಾಗಿರುತ್ತದೆ. ಇದರಿಂದಾಗಿ ಈ ಅಂಶಗಳು ಕ್ಲಿಷ್ಟವಾಗಿವೆ ಎಂದು ಅನಿಸಲಾರಂಭಿಸುತ್ತವೆ. ಹಾಗೆ ನೋಡಿದರೆ, ಕಾರ್ ನಲ್ಲಿರುವ ಡ್ಯಾಶ್ ಬೋರ್ಡ್ ಕೂಡಾ ಒಂದು ಫಾರ್ಮೆಟ್ ಆಗಿರುತ್ತದೆ. ಇದರಲ್ಲಿ ಸುಲಭವಾದ ಹಲವಾರು ಅಂಶಗಳನ್ನು ಬಳಸಲಾಗಿರುತ್ತದೆ. ಯಾವುದೇ ಡ್ರೈವರ್ ಗೆ ಸ್ವಲ್ಪ ಗಮನ ಹರಿಸಿ ಡ್ಯಾಶ್ ಬೋರ್ಡ್ ತಿಳಿದುಕೊಳ್ಳಲೇ ಬೇಕಾಗುತ್ತದೆ. ಆದರೆ ಒಂದು ಬಾರಿ ಇದಕ್ಕೋಸ್ಕರ ಸ್ವಲ್ಪ ಸಮಯವನ್ನು ಖರ್ಚು ಮಾಡಿದಲ್ಲಿ ನಂತರ ಪ್ರತಿಯೊಂದು ಬಾರಿಯೂ ಡೇಸ್ ಬೋರ್ಡ್ ಕುರಿತು ತಿಳಿದುಕೊಳ್ಳುವ ಆವಶ್ಯಕತೆ ಇರುವುದಿಲ್ಲ. ಅದರಲ್ಲಿ ಲಭ್ಯವಾಗುವ ಎಲ್ಲ ಅಂಶಗಳಿಂದಾಗಿ ತಮ್ಮ ವಾಹನವನ್ನು ಸುಲಭವಾಗಿ ನಡೆಸುವುದು ಮತ್ತು ಅದರಿಂದ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ.
ಇನ್ನೊಂದು ಅಂಶವೆಂದರೆ ಹಣಕಾಸಿನ ವರದಿ ಮತ್ತು ಅಕೌಂಟ್ಸ್ ಸೂಕ್ತವಾಗಿ ತಿಳಿದುಕೊಳ್ಳಲು ಮತ್ತು ಅದರ ಫಲಿತಾಂಶವನ್ನು ಪಡೆಯಲು ಬೃಹತ್ ಪ್ರಮಾಣದಲ್ಲಿ ಲೆಕ್ಕಾಚಾರವನ್ನು ಮಾಡಬೇಕಾಗುತ್ತದೆ, ಎಂಬುದೊಂದು ತಪ್ಪು ಕಲ್ಪನೆ ಇದೆ. ಪ್ರಕೃತ ಸ್ಥಿತಿಯಲ್ಲಿ ನಾವು ಕಂಪ್ಯೂಟರ್ ನ ವಿಶ್ವದಲ್ಲಿ ಬಾಳುತ್ತಿದ್ದೇವೆ. ಪ್ರತಿಯೊಬ್ಬರೂ ಕೂಡಾ ಕಂಪ್ಯೂಟರ್ ಬಳಸುತ್ತಾರೆ, ಅಲ್ಲದೇ ಪ್ರತಿಯೊಬ್ಬರ ಮನೆಯಲ್ಲಿ, ಆಫೀಸ್ ನಲ್ಲಿಯೂ ಕಂಪ್ಯೂಟರ್ ಇರುವುದು ಗಮನಕ್ಕೆ ಬರುತ್ತಿದೆ. ಎಲ್ಲ ರೀತಿಯ ಲೆಕ್ಕಾಚಾರಗಳನ್ನು ಕಂಪ್ಯೂಟರ್ ಸ್ವಯಂಚಾಲಿತವಾಗಿ ಮಾಡುತ್ತದೆ. ನಂತರ ಅದರಿಂದ ವಿವರವಾದ ವರದಿಯೂ ಲಭಿಸುತ್ತದೆ. ಊಟದ ತಟ್ಟೆಯಲ್ಲಿ ತಯಾರು ಊಟ ಸಿಕ್ಕಿದಂತೆ ಈ ವರದಿಗಳು ನಮ್ಮೆದುರು ಬರುತ್ತದೆ. ಕೇವಲ ವರದಿಯನ್ನು ತಿಳಿದುಕೊಳ್ಳುವುದು ಮತ್ತು ಅದರಲ್ಲಿ ಅಡಗಿರುವ ಫಾರ್ಮೆಟ್ ತಿಳಿದುಕೊಳ್ಳಲು ಮಾತ್ರ ಉದ್ಯಮಿಗಳ ಕೆಲಸವು ಸೀಮಿತವಾಗಿರುತ್ತದೆ. ಯಾವ ಮೂಲಭೂತ ಅಂಶಗಳಿಗೆ ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆಯೋ, ಅದನ್ನು ತಿಳಿದುಕೊಳ್ಳುವುದೇ ಉದ್ಯಮಿಗಳ ಕೆಲಸವಾಗಿದೆ. ಇದನ್ನು ಉದ್ಯಮಿಗಳ ಅರ್ಥಸಾಕ್ಷರತೆ ಎಂದು ಹೇಳುತ್ತೇವೆ ಮತ್ತು ಅದಕ್ಕೋಸ್ಕರವೇ ಈ ಲೇಖಮಾಲೆಯನ್ನು ನೀಡಲಾಗಿದೆ.
ಅರ್ಥಸಾಕ್ಷರತೆ
ಇಷ್ಟು ವಿಸ್ತಾರವಾದ ಹಿನ್ನೆಲೆಯನ್ನು ತಿಳಿದುಕೊಂಡನಂತರ ಈಗ ಅರ್ಥಸಾಕ್ಷರತೆಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ. ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟದ ವರದಿ ಇವೆರಡೂ ಲೆಕ್ಕಾಚಾರದ ರೂಪದಲ್ಲಿರುವ ಡ್ಯಾಶ್ ಬೋರ್ಡ್ ನ ಕುರಿತಾದ ಅರ್ಥಸಾಕ್ಷರತೆಯಲ್ಲಿ ತುಂಬಾ ಮಹತ್ವದ ಭಾಗವಾಗಿದೆ. ಉದ್ಯಮದಲ್ಲಿ ಯಾವುದೇ ತಾರೀಕಿನ ಆರ್ಥಿಕ ಸ್ಥಿತಿಯನ್ನು (ಅಸೆಟ್ಸ್ ಮತ್ತು ಪಾವತಿಸ ಬೇಕಾಗಿರುವ ಮೊತ್ತ ಎಷ್ಟಿದೆ) ಬ್ಯಾಲೆನ್ಸ್ ಶೀಟ್ ತೋರಿಸುತ್ತದೆ. ಈ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಹಿಂದೆ ಆಗಿರುವ ಲಾಭ ಮತ್ತು ನಷ್ಟಗಳು ಕಾರಣವಾಗಿರುತ್ತವೆ. ಈ ಕಾರಣದಿಂದ ಲಾಭ-ನಷ್ಟದ ವರದಿಯು ತಿಳಿಯುತ್ತದೆ. ಬ್ಯಾಲೆನ್ಸ್ ಶೀಟ್ ಅಂದರೆ ಕ್ಷಣಮಾತ್ರದಲ್ಲಿ ಪಡೆದಿರುವ ಸ್ನ್ಯಾಪ್ ಶಾಟ್ ನಂತೆ ಇರುತ್ತದೆ. ಲಾಭ-ನಷ್ಟದ ವರದಿಯು ಯಾವುದೇ ರೀತಿಯ ವಿಡಿಯೋದಂತೆ ಲಾಭ-ನಷ್ಟಕ್ಕೆ ಕಾರಣವಾಗಿರುವ ಅಂಶಗಳ ಪ್ರವಾಹವನ್ನು ತೋರಿಸುತ್ತವೆ.
ಉದ್ಯಮಗಳಲ್ಲಿ ಲಾಭ ಮತ್ತು ನಷ್ಟ, ಹಾಗೆಯೇ ಉದ್ಯಮದಲ್ಲಿ ಅಸೆಟ್ಸ್ ಮತ್ತು ಪಾವತಿಗಳ ಕಾಲಕ್ಕೆತಕ್ಕ ಸ್ಥಿತಿಯನ್ನು ನಿರ್ಧಾರಿತ ಸಮಯದಲ್ಲಿ ಅರಿತುಕೊಳ್ಳಬೇಕು, ಎಂಬುದಕ್ಕೆ ಒಂದು ಹಣಕಾಸು ವರ್ಷವನ್ನು ನಿರ್ಧರಿಸಲಾಗುತ್ತದೆ. ಉದ್ಯಮಗಳ ಲೆಕ್ಕಾಚಾರವನ್ನು ಡಬಲ್ ಎಂಟ್ರಿ ಅಕೌಂಟಿಂಗ್ ವ್ಯವಸ್ಥೆಗೆ ಅನುಸಾರವಾಗಿ ಮತ್ತು ಮರ್ಕಂಟೈಲ್ ರೀತಿಯಲ್ಲಿ ಇಡಲಾಗುತ್ತದೆ. ಪ್ರತಿಯೊಂದು ಹಣಕಾಸು ವರ್ಷದಲ್ಲಿ ಈ ಎರಡು ಅಂಶಗಳನ್ನು ಆಧರಿಸಿ ಉದ್ಯಮಗಳ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಅವುಗಳಿಗೆ ಅನುಸಾರವಾಗಿ ವರ್ಷದ ಕೊನೆಯಲ್ಲಿ ಲಾಭ-ನಷ್ಟದ ವರದಿ ಮತ್ತು ಬ್ಯಾಲೆನ್ಸ್ ಶೀಟ್ ಎಂಬ ಎರಡು ಮಹತ್ವದ ಹಣಕಾಸಿನ ವರದಿಗಳನ್ನು ತಯಾರಿಸಲಾಗುತ್ತದೆ. ನಮ್ಮ ದೇಶದಲ್ಲಿ ಎಪ್ರಿಲ್ ನಿಂದ ಪ್ರಾರಂಭಿಸಿ ಮಾರ್ಚ್ ಇದು ಸರ್ಕಾರವು ನಿಗದಿಸಿರುವ ಹಣಕಾಸು ವರ್ಷವಾಗಿದೆ. ಇದೇ ಹಣಕಾಸು ವರ್ಷವನ್ನು ಆದಾಯ ತೆರಿಗೆ, ಜಿ.ಎಸ್.ಟಿ. ಇಂತಹ ತೆರಿಗೆಗಳನ್ನು ಪಾವತಿಸಲು ಅವಲಂಬಿತ್ವವು ಉದ್ಯಮಗಳಲ್ಲಿ ಕಡ್ಡಾಯವಾಗಿರುತ್ತದೆ. ಇದರಿಂದಾಗಿ ಹೆಚ್ಚಿನ ಉದ್ಯಮಗಳಲ್ಲಿ ಹಣಕಾಸು ವರ್ಷವು ಪ್ರತಿವರ್ಷವೂ ಮಾರ್ಚ್ 31 ರಂದು ಮುಗಿಯುತ್ತದೆ ಮತ್ತು ಆ ತಾರೀಕಿಗೆ ಮುಗಿದಿರುವ ಹಣಕಾಸು ವರ್ಷದಲ್ಲಿ ಎಷ್ಟು ಲಾಭ ಅಥವಾ ನಷ್ಟವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಆ ವರ್ಷದ ಲಾಭ-ನಷ್ಟದ ವರದಿ (ಪ್ರಾಫಿಟ್ ಎಂಡ್ ಲಾಸ್ ಅಕೌಂಟ್) ತಯಾರಿಸಲಾಗುತ್ತದೆ. ವರ್ಷದ ಕೊನೆಯಲ್ಲಿ ವ್ಯವಹಾರದ ಅಸೆಟ್ಸ್ ಮತ್ತು ಪಾವತಿಸ ಬೇಕಾಗಿರುವ ಮೊತ್ತದ ಸ್ಥಿತಿಯು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಮಾರ್ಚ್ 31 ಈ ದಿನದ ಬ್ಯಾಲೆನ್ಸ್ ಶೀಟ್ ಅಂದರೆ ಲಾಭ-ನಷ್ಟದ ವರದಿಯನ್ನು ತಯಾರಿಸಲಾಗುತ್ತದೆ. ಈ ಎರಡೂ ವರದಿಗಳನ್ನು ಸೇರಿಸಿ ಮಾರ್ಚ್ 31 ಕ್ಕೆ ಮುಗಿದಿರುವ ಹಣಕಾಸು ವರ್ಷದ ಆರ್ಥಿಕ ಸ್ಥಿತಿಯು ಹೇಗಿತ್ತು, ಎಂಬುದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ. ಇದರಿಂದಾಗಿ ಎರಡೂ ವರದಿಗಳನ್ನು ಹೇಗೆ ತಯಾರಿಸಲಾಗುತ್ತದೆ, ಈ ವರದಿಗಳನ್ನು ತಿಳಿದುಕೊಳ್ಳಲು ಯಾವ ರೀತಿಯನ್ನು ಅವಲಂಬಿಸಬೇಕಾಗುತ್ತದೆ, ಯಾವ ರೀತಿಯ ತಿಳುವಳಿಕೆಯು ಇರಬೇಕು, ಅಲ್ಲದೇ ಈ ವರದಿಗಳನ್ನು ಆಧರಿಸಿ ಹಿಂದಿನ ಹಣಕಾಸು ವರ್ಷದಲ್ಲಿ ಮಾಡಿರುವ ವ್ಯವಹಾರಗಳು ಹಾಗೆಯೇ ಮಾರುಕಟ್ಟೆಯಲ್ಲಿರುವ ಇನ್ನಿತರ ಸ್ಪರ್ಧಕರ ಕುರಿತು ಹೋಲಿಕೆಯನ್ನು ವಿಚಾರ ಮಾಡುವುದು, ಇತ್ಯಾದಿ ಅಂಶಗಳು ಕುರಿತು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ತಿಳಿದುಕೊಳ್ಳಲಿದ್ದೇವೆ. ವರ್ಷ ಕೊನೆಯಲ್ಲಿ ಸಿಗುವ ಈ ಎರಡು ವರದಿಗಳ ಹೊರತಾಗಿ ಇಡಿ ವರ್ಷ ಆಗಾಗ ಮ್ಯಾನೆಜ್ ಮೆಂಟ್ ಗೆ ಸಂಬಂಧಪಟ್ಟ ವರದಿಗಳು ಉದ್ಯಮಿಗಳಿಗೆ ವ್ಯವಹಾರದ ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳಲು ಆವಶ್ಯಕವಾಗಿರುತ್ತವೆ, ಇದರ ಕುರಿತಾದ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ನೀಡಲಾಗುತ್ತದೆ.
ಮೇಲೆ ಉಲ್ಲೇಖಿಸಿರುವ ಎಲ್ಲ ಆರ್ಥಿಕ ವರದಿಗಳ ವಿಚಾರ ಮಾಡಿದಾಗ ನನಗೆ ಯಾವಾಗಲೂ ಸಿಂಹಾವಲೋಕನ ಎಂಬ ಶಬ್ದದ ನೆನಪಾಗುತ್ತದೆ. ಈ ಶಬ್ದದ ಮೂಲ ಹೀಗಿದೆ, ಕಾಡಿನಲ್ಲಿ ತಿರುಗುತ್ತಿರುವಾಗ ಸ್ವಲ್ಪ ಮುಂದೆ ಹೋದ ನಂತರ ಮತ್ತೆ ಹಿಂದೆ ತಿರುಗಿ ನೋಡುವ ಅಭ್ಯಾಸವು ಸಿಂಹಕ್ಕಿರುತ್ತದೆ. ಇದನ್ನೇ ಸಿಂಹಾವಲೋಕನ ಎಂದು ಹೇಳುತ್ತಾರೆ. ಈ ರೀತಿ ಹಿಂದಕ್ಕೆ ತಿರುಗಿ ನೋಡುವಲ್ಲಿ ಸಿಂಹವು ತಮಗೆ ಹಿಂದಿನಿಂದ ಯಾವುದೇ ಹೆದರಿಕೆ ಇಲ್ಲ ತಾನೇ, ಎಂಬುದನ್ನು ವೀಕ್ಷಿಸುವುದೇ ಆಗಿರುತ್ತದೆ. ಹಾಗೆಯೇ ಕಳೆದ ವರ್ಷದಲ್ಲಿ ಯಾವುದೇ ಹೊಸ ಸದವಕಾಶಗಳು ಇವೆಯೇ, ಇಲ್ಲವೇ ಅಥವಾ ಯಾವುದೇ ಸದವಕಾಶಗಳು ಅಡಗಿವೆಯೇ ಎಂಬುದನ್ನು ನೋಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಇದೇ ರೀತಿಯಲ್ಲಿ ಉದ್ಯಮಿಗಳೂ ಕೂಡಾ ಮುಗಿದಿರುವ ಹಣಕಾಸಿನ ಕುರಿತಾದ ವ್ಯವಹಾರಗಳನ್ನು ಈ ವರದಿಯಿಂದ ನಿರಂತರವಾಗಿ ಮರು ವಿಚಾರ ಮಾಡುತ್ತಿರುತ್ತಾರೆ. ಇದಕ್ಕೆ ಆಧರಿಸಿ ಮುಂಬರುವ ವರ್ಷಗಳಲ್ಲಿ ಹಣಕಾಸಿಗೆ ಕುರಿತಾದ ಅತ್ಯಾವಶ್ಯಕವಾದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರಯತ್ನವನ್ನು ಮಾಡುತ್ತಿರುತ್ತಾರೆ.
9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.