ಭವಿಷ್ಯತ್ಕಾಲದಲ್ಲಿ ಗುಣಮಟ್ಟದ ಮಾನದಂಡಗಳು

@@NEWS_SUBHEADLINE_BLOCK@@

Udyam Prakashan Kannad    21-Nov-2020
Total Views |

2_1  H x W: 0 x
 
 
 
1_1  H x W: 0 x
 
 
ದೀಪಕ ದೇವಧರ : ಜೋಶಿಯವರೇ, ವಿದೇಶದ ಮತ್ತು ಸ್ಥಳೀಯ ಗ್ರಾಹಕರಿಂದ ನಿಮ್ಮಲ್ಲಿ ಗುಣಮಟ್ಟದ ಕುರಿತು ಯಾವ ವಿಧದ ಮತ್ತು ಯಾವ ರೀತಿಯ ಆಪೇಕ್ಷೆಗಳನ್ನು ಮಂಡಿಸಲಾಗುತ್ತಿದೆ? ತಮಗೆ ಆ ಆಪೇಕ್ಷೆಗಳಲ್ಲಿ ಯಾವ ಬದಲಾವಣೆಗಳು ಕಂಡುಬರುತ್ತಿವೆ?
ವಿವೇಕ ಜೋಶಿ : ನನಗೋಸ್ಕರ ತಾವು ಕೇಳಿರುವ ಮೊದಲ ಪ್ರಶ್ನೆಯನ್ನು ಉತ್ತರಿಸುವ ಮುನ್ನ, ಗುಣಮಟ್ಟ ಅಂದರೆ ಏನು ಎಂಬುದರ ಕುರಿತು ಚರ್ಚೆ ಮಾಡಬೇಕು ಅನಿಸುತ್ತದೆ. ಪ್ರತಿಯೊಬ್ಬರ ವಿಚಾರದ ಪ್ರಕಾರ ಗುಣಮಟ್ಟದ ಪ್ರಮಾಣವು ವಿಭಿನ್ನವಾಗಿರುತ್ತದೆ. ಗ್ರಾಹಕರು ಬದಲಾಯಿಸಿದಂತೆ ಗುಣಮಟ್ಟದ ಮಾನದಂಡಗಳೂ ಬದಲಾಗುತ್ತವೆ. ಯಾವುದೇ ಗ್ರಾಹಕನು ಯಾವ ಮಾನದಂಡಗಳನ್ನು ನಿರ್ಧರಿಸಿದ್ದಾನೆಯೋ, ಅದಕ್ಕೆ ಅನುಸಾರವಾಗಿ ಒಂದು ವೇಳೆ ತಮ್ಮ ಉತ್ಪಾದನೆಯು ಇದ್ದಲ್ಲಿ, ಆ ಗ್ರಾಹಕರ ದೃಷ್ಟಿಯಲ್ಲಿ ಆ ಉತ್ಪಾದನೆಯು ಯೋಗ್ಯ ಗುಣಮಟ್ಟದ್ದಾಗಿರುತ್ತದೆ. ಇನ್ನೊಂದು ಗ್ರಾಹಕರ ವಿಚಾರವನ್ನು ನೋಡಿದರೆ, ಯಾವುದೇ ಒಂದು ಕೆಲಸಕ್ಕೋಸ್ಕರ (ಫಂಕ್ಷನ್) ಉತ್ಪಾದನೆ ಆಗುತ್ತಿತ್ತು. ಆದರೆ ಆ ಕೆಲಸವು ಪೂರ್ತಿಯಾಗುತ್ತಿದ್ದಲ್ಲಿ, ಅದರ ಗುಣಮಟ್ಟವು ಯೋಗ್ಯವಾಗಿದೆ. ಈ ಎರಡೂ ವ್ಯಾಖ್ಯೆಗಳ ಮುಂದೆ ವಿಚಾರ ಮಾಡಿದರೆ ಹೀಗೂ ಹೇಳಬಹುದು, “ನಿಮ್ಮ ಉತ್ಪಾದನೆಯು (ಪ್ರೋಡಕ್ಟ್) ಗ್ರಾಹಕರು ನೀಡಿರುವ ವೈಶಿಷ್ಟ್ಯಗಳಿಗೆ ಯೋಗ್ಯವಲ್ಲದೇ, ಅದು ಗ್ರಾಹಕರಿಗೆ ಸಂತೋಷವನ್ನು ನೀಡಲಿದೆ, ಪರಿಹಾರವನ್ನು ನೀಡಲಿದೆ, ಗ್ರಾಹಕರಿಗೆ ಸಂಪೂರ್ಣವಾದ ಸಮಾಧಾನ ನೀಡಬಲ್ಲದು, ಈ ವಿಧದ ಉತ್ಪಾದನೆಯು ಇರಬೇಕು ಎಂಬ ಆಪೇಕ್ಷೆಯು ಇರುತ್ತದೆ.
 
ಕಾಲಕ್ಕೆ ತಕ್ಕಂತೆ ಗ್ರಾಹಕರ ಅಪೇಕ್ಷೆ ಹೇಗೆ ಬದಲಾಯಿಸುತ್ತಾ ಹೋಗಿವೆ, ಎಂಬುದರ ಕುರಿತು ನಾವು ವಿಚಾರ ಮಾಡೋಣ. ಗುಣಮಟ್ಟದ ಪ್ರವಾಸವನ್ನು ವೀಕ್ಷಿಸಿದಲ್ಲಿ, ಕಾರ್ ಮ್ಯಾನ್ಯುಫ್ಯಾಕ್ಚರಿಂಗ್ ನ ಉತ್ಪಾದನೆಯಲ್ಲಿ ಪ್ರಾರಂಭದಲ್ಲಿ ಒಬ್ಬ ವ್ಯಕ್ತಿ ಆ ಕಾರ್ ನ ಇಂಜಿನ್ ಸಂಪೂರ್ಣವಾಗಿ ಜೋಡಿಸುವ (ಅಸೆಂಬ್ಲಿ) ಮಾಡುತ್ತಾನೆ. ಅಥವಾ ಒಂದೆರಡು ಜನರ ತಂಡವು ಸಂಪೂರ್ಣ ಕಾರ್ ನ ಇಂಜಿನ್ ಜೋಡಿಸುವ ಕೆಲಸವನ್ನು ಮಾಡುತ್ತಾರೆ. ಆ ಕಾರ್ ನಲ್ಲಿ ತಮ್ಮ ಹೆಸರನ್ನು ಅಭಿಮಾನದಿಂದ ಹೇಳುತ್ತಾರೆ. ಆ ಕಾಲದಲ್ಲಿ ಸ್ವಂತದ್ದೇ ಕಾರ್ ಅಂದರೆ ಅವರ ಗುಣಮಟ್ಟದ ಪರಿಚಯವನ್ನು ನೀಡುತ್ತಿತ್ತು. ಕಾಲಕ್ರಮೇಣ ಅಸೆಂಬ್ಲಿ ಲೈನ್ ನ ಉದಯವಾಯಿತು. ಅನೇಕರು ಒಟ್ಟಾಗಿ ಕಾರ್ ನ ಒಂದೊಂದು ಭಾಗಗಳನ್ನು ತಯಾರಿಸಲಾರಂಭಿಸಿದರು. ಇದರಿಂದಾಗಿ ಆ ಎಲ್ಲ ಕಡೆಯಲ್ಲಿ ಗುಣಮಟ್ಟದ ಪರಿಶೀಲನೆ ಮಾಡುವುದೊಂದು ಸಂಪೂರ್ಣ ಅಸೆಂಬ್ಲಿಯ ಒಂದು ಭಾಗವಾಯಿತು. ಪಾರ್ಟ್ ಗಳನ್ನು ಸರಬರಾಜು ಮಾಡುವವರು, ಪ್ರಾರಂಭದಲ್ಲಿಯೇ ಪಾರ್ಟ್ ಗಳು ಚೆನ್ನಾಗಿವೆಯೇ, ಯಾವ ಪಾರ್ಟ್ ಒಳ್ಳೆಯದಿಲ್ಲ ಇತ್ಯಾದಿ ಅಂಶಗಳಿಗೆ ಅನುಸಾರವಾಗಿ ಪಾರ್ಟ್ ಗಳ ವರ್ಗೀಕರಣವನ್ನು (ಸಾರ್ಟಿಂಗ್) ಮಾಡುತ್ತಿದ್ದರು. ನಂತರ ಅದರಲ್ಲಿರುವ ದೋಷಗಳನ್ನು ತಿಳಿದುಕೊಳ್ಳುತ್ತಿದ್ದರು. ಇಂತಹ ದೋಷಗಳ ಪರಿಣಾಮ ಕೂಡಾ ಶೇಕಡಾ 2, ಶೇಕಡಾ 5, ಶೇಕಡಾ 10 ಎಂಬುದಾಗಿ ಎಣಿಕೆ ಮಾಡಲಾಗುತ್ತಿತ್ತು. ಕಾಲಕ್ರಮೇಣ ಈ ಪ್ರಮಾಣದ ಅಂಕೆ-ಸಂಖ್ಯೆಗಳು ಶೇಕಡಾದಲ್ಲಿ ಬೇಡಾ ಎಂದು ಗ್ರಾಹಕರು ಹೇಳಲಾರಂಭಿಸಿದರು. ಈ ಅಂಕೆ-ಸಂಖ್ಯೆಗಳನ್ನು PPM ನಲ್ಲಿ ತಿಳಿಸಿರಿ, ಎಂಬುದಾಗಿ ತಮ್ಮ ಆಪೇಕ್ಷೆಯನ್ನು ತಿಳಿಸಲಾರಂಭಿಸಿದರು. ಅಂದರೆ 10 ಲಕ್ಷ ಭಾಗಗಳಲ್ಲಿ ಎಷ್ಟು ಭಾಗಗಳು ದೋಷದಿಂದ ಕೂಡಿವೆ, ಎಂಬ ಅಂಕೆ-ಸಂಖ್ಯೆಗಳನ್ನು ಎಣಿಸಲಾರಂಭಿಸಲಾಯಿತು. ಈ ಅಂಕೆ-ಸಂಖ್ಯೆಗಳ ಮೌಲ್ಯಮಾಪನಕ್ಕೆ ಅನುಸಾರವಾಗಿ ಗ್ರಾಹಕರು ನಿರ್ಮಾತರಿಗೆ ಗುಣಮಟ್ಟದ ರೇಟಿಂಗ್ ನೀಡುತ್ತಿದ್ದರು. ಡ್ಯಾಮ್ ಲರ್, ವೊಲ್ವೋ ಇಂತಹ ಕಂಪನಿಗಳ ದೃಷ್ಟಿಯಲ್ಲಿ ಗುಣಮಟ್ಟ ಅಂದರೆ, ಅವರಿಗೆ ನಿರ್ದೋಷವಾದ ಪಾರ್ಟ್ ಗಳ (ಝೀರೋ ಡಿಫೇಕ್ಟ್) ಪೂರೈಕೆ. ಈಗಿನ ಗ್ರಾಹಕರಿಗೆ ಕೇವಲ ‘ಝೀರೋ ಡಿಫೆಕ್ಟ್’ ಅಲ್ಲದಿದ್ದರೂ, ಅದರೊಂದಿಗೆ ‘ಝೀರೋ ಇಫೇಕ್ಟ್ ಟೂ ಎನ್ವಾಯರ್ನ್ ಮೆಂಟ್’ ಅಂದರೆ ಪರಿಸರಕ್ಕೆ ಪೂರಕ ಎಂಬುದನ್ನೂ ಅಪೇಕ್ಷಿಸುವುದೂ ವಿಶೇಷವಾಗಿ ವ್ಯಕ್ತಪಡಿಸುವುದು ಕಂಡುಬರುತ್ತದೆ. ಈ ಪದ್ಧತಿಯಲ್ಲಿರುವ ಗ್ರಾಹಕರ ಆಪೇಕ್ಷೆಗಳು ಮುಂದಿನ ಕಾಲಾವಧಿಯಲ್ಲಿ ಹೆಚ್ಚುತ್ತಾ ಹೋಗಲಿವೆ.
ವಿಕ್ರಮ ಸಾಳುಂಖೆ : ಮೆಜರಿಂಗ್ ಇನ್ ಸ್ಟ್ರುಮೆಂಟ್ ನ ವ್ಯವಸಾಯದಲ್ಲಿ ಕಾಲೂರಿ ನನಗೆ 30 ವರ್ಷಗಳು ಕಳೆದಿವೆ. ನಾನು ವ್ಯವಸಾಯವನ್ನು ಪ್ರಾರಂಭಿಸಿದಾಗ ಆ ಕಾಲದಲ್ಲಿ ಜರ್ಮನಿಯಲ್ಲಿ ಉತ್ಪಾದಿಸಿರುವ ಸಾಮಗ್ರಿಯು ಸಂಪೂರ್ಣ ಜಗತ್ತಿನಲ್ಲಿಯೇ ಉಚ್ಚಮಟ್ಟದೆಂದು ಪರಿಗಣಿಸಲಾಗುತ್ತಿತ್ತು. ಆ ಕಾಲದಲ್ಲಿ ಜಪಾನ್ ನಲ್ಲಿ ತಯಾರಾಗಿರುವ ಸಾಮಗ್ರಿಗಳ ಪರಿಗಣನೆಯು ಜರ್ಮನಿಯ ನಂತರವೇ ಮಾಡಲಾಗುತ್ತಿತ್ತು. ಕಾಲಕ್ರಮೇಣ ಜಪಾನ್ ನಲ್ಲಿ ತಯಾರಾಗಿರುವ ಸಾಮಗ್ರಿಗಳ ಪರಿಗಣನೆಯು ಮುಂಚೂಣಿಯಲ್ಲಿರುವ ಉತ್ಪಾದನೆಗಳೊಂದಿಗೆ ಮಾಡಲಾಯಿತು. ವಿವೇಕ ಜೋಶಿ ಇವರು ಹೇಳಿದಂತೆ, ಗ್ರಾಹಕರ ಆಪೇಕ್ಷೆಗಳನ್ನು ಸೂಕ್ತವಾಗಿ ಮತ್ತು ಸೂಕ್ಷ್ಮವಾಗಿ ಅಭ್ಯಾಸ ಮಾಡಿ ಗುಣಮಟ್ಟದೊಂದಿಗೆ ಗ್ರಾಹಕರಿಗೆ ಸಮಾಧಾನ ನೀಡುವ ಅಂಶಗಳಿಗೆ ಒತ್ತು ಹೇಗೆ ನೀಡಬೇಕು, ಎಂಬುದು ಜಪಾನ್ ನಲ್ಲಿ ತಯಾರಾಗಿರುವ ಉತ್ಪಾದನೆಗಳಲ್ಲಿ ಗಮನಕ್ಕೆ ಬರುತ್ತದೆ. ನನ್ನ ಅನಿಸಿಕೆಯಂತೆ, ಗುಣಮಟ್ಟದ ಪ್ರವಾಸವು ಒಂದು ನಿರಂತರವಾದ ಕ್ರಿಯೆಯಾಗಿದೆ. ಪ್ರತಿಯೊಂದು ದೇಶದಲ್ಲಿ ಈ ಪ್ರವಾಸಕ್ಕೆ ಅನೇಕ ರೀತಿಯ ಮೈಲ್ ಸ್ಟೋನ್ ಗಳಿವೆ. ನಮ್ಮ ದೇಶದಲ್ಲಿ ವಾಹನ ಉದ್ಯಮದಲ್ಲಿ ‘ಮಾರುತಿ’ಯ ಪ್ರವೇಶವು ಒಂದು ಬಹು ದೊಡ್ಡ ಮೈಲ್ ಸ್ಟೋನ್ ಆಗಿತ್ತು. ಅದರ ನಂತರ ನಮ್ಮ ದೇಶದಲ್ಲಿ ಗುಣಮಟ್ಟದ ಮಾನದಂಡಗಳು ತುಂಬಾ ದೊಡ್ಡ ಪ್ರಮಾಣದಲ್ಲಿ ಬದಲಾಗುತ್ತಾ ಹೋದವು.
 
ಗುಣಮಟ್ಟದ ಕುರಿತು ಎಲ್ಲರ ವಿಚಾರಗಳು ಭಿನ್ನವಾಗಿರುತ್ತವೆ. ಪ್ರತಿಯೊಂದಕ್ಕೂ ಗುಣಮಟ್ಟದ ಮಾನದಂಡಗಳು ಬೇರೆಬೇರೆ ಇರುತ್ತವೆ. ಕಳೆದ 20-25 ವರ್ಷಗಳಲ್ಲಿ ವಾಹನ ಉದ್ಯಮದಲ್ಲಿ ಗುಣಮಟ್ಟದ ಮಾನದಂಡಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಿವೆ, ಎಂಬ ಅಂಶವನ್ನು ಎಲ್ಲರೂ ನೋಡಿದ್ದೇವೆ. ಈ ಎಲ್ಲ ಪ್ರವಾಸದಲ್ಲಿ ಇಕ್ವಿಪ್ ಮೆಂಟ್ ಸಪ್ಲಾಯರ್ ಎಂಬುದಾಗಿ ನಾವು ಕೂಡಾ ತುಂಬಾ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದೇವೆ. ಪ್ರಾರಂಭದಲ್ಲಿ ಉದ್ಯಮಿಗಳಿಂದ ಯಾವುದೇ ಮೆಜರಿಂಗ್ ಇಕ್ವಿಪ್ ಮೆಂಟ್ ಅಂತಿಮ ತಪಾಸಣೆಯ ಸಮಯದಲ್ಲಿ ಎಲ್ಲ ಗುಣಮಟ್ಟದ ಪರೀಕ್ಷೆಗೋಸ್ಕರ ತುಂಬಾ ಮುತುವರ್ಜಿ ವಹಿಸಿ, ಅಂತಿಮ ವರ್ಗೀಕರಣವನ್ನು ಮಾಡಿ ಆಯಾ ಪಾರ್ಟ್ ಗಳನ್ನು ಪೂರೈಸಲಾಗುತ್ತಿತ್ತು. ಈಗ ಈ ರೀತಿಯಲ್ಲಿ ಬದಲಾವಣೆಗಳಾಗಿವೆ. ಯಾರು ಪ್ರತ್ಯಕ್ಷವಾಗಿ ಉತ್ಪಾದನೆಯನ್ನು ಮಾಡುತ್ತಾರೋ, ಗುಣಮಟ್ಟದ ಜವಾಬ್ದಾರಿಯು ಅವರದ್ದೇ ಆಗಿದೆ. ಅದಕ್ಕೋಸ್ಕರ ಎಲ್ಲ ಪೂರಕ ಸಾಧನಗಳು ಇಂದು ಆ ಮಶಿನ್ ನಲ್ಲಿಯೇ ಆಪರೇಟರ್ ಗೆ ಲಭ್ಯ ಮಾಡಿ ಕೊಡಲಾಗುತ್ತದೆ. ಗುಣಮಟ್ಟದ ನಿಯಂತ್ರಣೆ, ಗುಣಮಟ್ಟದ ಖಾತರಿ ಈ ರೀತಿಯ ಎಲ್ಲ ವ್ಯಾಖ್ಯೆಗಳು ಕಾಲಕ್ಕೆ ತಕ್ಕಂತೆ ಬದಲಾಯಿಸಲ್ಪಟ್ಟವು. ಅದರೊಂದಿಗೆ ನಮ್ಮ ದೇಶದಲ್ಲಿ ಎಲ್ಲ ಪೂರೈಕೆದಾರರಿಗೆ ಸಂಬಂಧಪಟ್ಟ ಮಾರುಕಟ್ಟೆಯಲ್ಲಿಯೂ ಬದಲಾವಣೆಗಳಾದವು. 
ದೀಪಕ ದೇವಧರ : ಜೋಶಿಯವರೇ, ಜಾಗತಿಕ ಮಟ್ಟದ ಗ್ರಾಹಕರು ಎಂಬುದಾಗಿ ನೀವು ಪೂರೈಕೆಯನ್ನು ಮಾಡುತ್ತೀರಿ, ಆಗ ತಮ್ಮ ಭಾರತೀಯ ಸಂಸ್ಕೃತಿಯ ಕುರಿತು ವಿಚಾರ ಮಾಡಿದಾಗ ಒಂದು ವಿಶೇಷವಾದ ಸಂಸ್ಥಾತ್ಮಕವಾದ ನಡವಳಿಕೆ (ಟಿಪಿಕಲ್ ಆರ್ಗನೈಸೇಶನಲ್ ಬಿಹೇವಿಯರ್) ನಮ್ಮಲ್ಲಿರುವ ಕಂಪನಿಗಳಲ್ಲಿ ಇರುತ್ತದೆ. ಬೇಡಿಕೆಯ ದೃಷ್ಟಿಯಲ್ಲಿ ಈ ಸಂಸ್ಕೃತಿಯ ಬಗ್ಗೆ ನಿಮ್ಮ ಅನುಭವ ಹೇಗಿದೆ? ನಿಮ್ಮ ಕಂಪನಿಯಲ್ಲಿ ಅಥವಾ ನಿಮ್ಮ ಪೂರೈಕೆದಾರರ ಕಂಪನಿಯಲ್ಲಿ ಯಾವ ಬದಲಾವಣೆಗಳನ್ನು ತಾವು ಅಪೇಕ್ಷಿಸುತ್ತೀರಿ? ಅದಕ್ಕೆ ತಮಗೆ ಪ್ರತಿಕ್ರಿಯೆ ಹೇಗೆ ಲಭಿಸುತ್ತದೆ, ಎಂಬುದರ ಕುರಿತು ತಮ್ಮ ಅನಿಸಿಕೆಗಳೇನು?
ವಿವೇಕ ಜೋಶಿ : ಇದೊಂದು ತುಂಬಾ ಸೂಕ್ತವಾದ ಪ್ರಶ್ನೆಯಾಗಿದೆ. ಕಾರಣ ಜಾಗತೀಕರಣದ ಕಡೆಗೆ ಮುಂದುವರಿದಂತೆ ನಾವು ಅನೇಕ ದೇಶಗಳಿಗೆ ನಮ್ಮ ಪಾರ್ಟ್ ಗಳನ್ನು ಒಬ್ಬ ಪ್ರಮುಖ ಪೂರೈಕೆದಾರರು ಎಂಬುದಾಗಿ ನೀಡುತ್ತೇವೆ. ಈ ಪರಿಸ್ಥಿತಿಯಲ್ಲಿ ನಮ್ಮ ಪೂರೈಕೆದಾರರಿಂದ ಗುಣಮಟ್ಟದಲ್ಲಿಯೂ ಅಂತಿಮ ಉತ್ಪಾದನೆಯಲ್ಲಿ ಪರಿಣಾಮವುಂಟಾಗುತ್ತದೆ. ಇದಕ್ಕೋಸ್ಕರ ನಮ್ಮ ಪೂರ್ಣವಾದ ವ್ಯಾಲ್ಯೂ ಚೇನ್ ಅಥವಾ ವ್ಯಾಲ್ಯೂ ಸಿಸ್ಟಮ್ ನ್ನು ನಮಗೆ ಅನೇಕ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ. ನೀವು ಇದಕ್ಕೋಸ್ಕರ ‘ಸಂಸ್ಕೃತಿ’ ಎಂಬ ಶಬ್ದವನ್ನು ಸೂಕ್ತವಾಗಿ ಬಳಸಿದ್ದೀರಿ. ಸಂಸ್ಕೃತಿ ಮತ್ತು ಟಿಪಿಕಲ್ ಆರ್ಗನೈಸೇಶನಲ್ ಬಿಹೇವಿಯರ್ ಇವುಗಳನ್ನು ಚಾಣಾಕ್ಷತೆಯಿಂದ ಸರಿಹೊಂದಾಣಿಸುವುದು ಸಾಧ್ಯ. ಇದನ್ನು ಜಪಾನ್ ನಲ್ಲಿರುವ ಕಂಪನಿಗಳು ಪ್ರಾರಂಭದಿಂದಲೂ ಅವಲಂಬಿಸಿವೆ. ಯಾವುದೇ ಉದ್ಯಮದಲ್ಲಿ ಪ್ರಾರಂಭದಿಂದಲೇ ಅದರ ನೈಸರ್ಗಿಕವಾದ ಮೌಲ್ಯಗಳು ಮತ್ತು ಸಂಸ್ಕೃತಿ ಇವುಗಳ ಪ್ರಭಾವವು ಅವರ ಉತ್ಪಾದನೆ ಅಥವಾ ಪ್ರಕ್ರಿಯೆಗಳಲ್ಲಿಯೂ ತಮಗೆ ಕಂಡುಬರುತ್ತವೆ. ಪ್ರಕ್ರಿಯೆ (ಪ್ರೊಸೆಸಿಂಗ್), ಉತ್ಪಾದನೆಗಳು ಇವುಗಳ ದೃಷ್ಟಿಯಲ್ಲಿ ತಮಗೆ ಅದ್ವಿತೀಯ ಅಥವಾ ವೈಶಿಷ್ಟ್ಯಪೂರ್ಣವಾದದ್ದು ಏನಿದೆ, ಎಂದು ವಿಚಾರಿಸಿದರೆ, ಅದು ಕೇವಲ ವ್ಯಾಲ್ಯೂ ಸಿಸ್ಟಮ್. ನಾವು ಧರ್ಮದಲ್ಲಿ ಇಟ್ಟಿರುವ ವಿಶ್ವಾಸ (ರಿಲೀಜಿಯಸ್ ಫೇಥ್), ನಮ್ಮಲ್ಲಿರುವ ವೈವಿಧ್ಯತೆ (ಡೈವರ್ಸಿಟಿ) ಈ ಎಲ್ಲ ಅಂಶಗಳನ್ನು ನಾವು ನಿರ್ಮಿತಿಯಲ್ಲಿ ಒಳಗೂಡಿಸಬಲ್ಲೆವು.
 
ನಮ್ಮಲ್ಲಿ ಏನಾದರೂ ಆಧುನಿಕವಾದದ್ದನ್ನು ಮಾಡುವುದಿದ್ದರೆ ನಾವು ಪಾಶ್ಚಿಮಾತ್ಯ ದೇಶಗಳೆಡೆಗೆ ಧಾವಿಸುತ್ತಿದ್ದೆವು, ಎಂಬ ರೂಢಿಯು ಈ ಮುಂಚೆ ಇತ್ತು. ಜಪಾನ್, ಯುರೋಪ್ ಅಥವಾ ಅಮೇರಿಕಾ ದಿಂದ ಇಂತಹ ಅಂಶಗಳನ್ನು ಕಾಪಿ ಮಾಡುತ್ತಿದ್ದೆವು. ಈಗ ಕಾಲವು ದೂರ ಸರಿದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ಪಾದನೆಗೆ ‘ಕಾಪಿ ಪೇಸ್ಟ್’ ನಡೆಯುವುದಿಲ್ಲ. ತಂತ್ರಜ್ಞಾನವನ್ನು ಕಾಪಿ-ಪೇಸ್ಟ್ ಮಾಡಬಹುದು, ಅದರಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡುವುದೂ ಸಾಧ್ಯವಿದೆ. ಆದರೆ ಯಾವ ಪ್ರಣಾಳಿಕೆಯಲ್ಲಿ ಅದು ಇದೆಯೋ, ಅದನ್ನು ಕಾಪಿ ಮಾಡಲಾರೆವು.
ಸಿ. ನರಸಿಂಹನ್ ಇವರು ನಿರ್ಮಾಣ ಕ್ಷೇತ್ರದಲ್ಲಿ ನನ್ನ ಗುರುಗಳಾಗಿದ್ದಾರೆ. ಅವರು ‘ಇಂಡಿಯನ್ ಪ್ರೊಡಕ್ಷನ್ ಸಿಸ್ಟಮ್’ ಈ ವಿಷಯದಲ್ಲಿ ಸ್ವಂತ ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರೊಂದಿಗೆ ನಾವು ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ನಾವು ಭಾರತೀಯ ಉತ್ಪಾದನೆಯ ಪ್ರಣಾಳಿಕೆಯನ್ನು ಅಭಿವೃದ್ಧಿ ಮಾಡಬೇಕು, ಎಂಬ ಅಂಶವು ಅವರೊಂದಿಗೆ ನಡೆಸಿದ ಚರ್ಚೆಯಿಂದ ಗಮನಕ್ಕೆ ಬಂತು. ಸಾಳುಂಖೆಯವರು ಹೇಳಿದಂತೆ, ಪ್ರತಿಯೊಬ್ಬರೂ ಉತ್ಪಾದನೆಯನ್ನು ನಿರ್ಮಿಸುವಾಗಲೇ ಅದನ್ನು ಯೋಗ್ಯವಾಗಿ ಮತ್ತು ಸಂಪೂರ್ಣವಾಗಿ ಪರಿಶೀಲಿಸಿದಲ್ಲಿ, ಅದಕ್ಕೋಸ್ಕರ ಬೇರೆ ಗುಣಮಟ್ಟದ ನಿಯಂತ್ರಣೆಯ (ಕ್ವಾಲಿಟಿ ಕಂಟ್ರೋಲ್), ಮತ್ತೆ ತಪಾಸಣೆಯ ಆವಶ್ಯಕತೆಯೂ ಇರುವುದಿಲ್ಲ. ಈ ಹಂತಕ್ಕೆ ತಲುಪುವ ಮುಂಚೆ ತಮಗೆ ಅನೇಕ ಅಂಶಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರ್ಗನೈಜೆಶನಲ್ ಬಿಹೇವಿಯರ್ ನಲ್ಲಿ ಮಹತ್ವದ ಅಂಶವೆಂದರೆ, ನಮ್ಮಂತಹ ದೊಡ್ಡ ಕಂಪನಿಗಳು, ವಿವಿಧ ಸ್ಥಾನಗಳಿಗೆ ಅನುಸಾರವಾಗಿ, ಪ್ಲಾಂಟ್ ಗಳಿಗೆ ಅನುಸಾರವಾಗಿ ಯುನಿಟ್ ಗಳ ರಚನೆ, ಯುನಿಟ್ ನಲ್ಲಿ ಲೈನ್, ಲೈನ್ ನಲ್ಲಿ ಸೆಲ್ (Cell) ಮತ್ತು ಸೆಲ್ ನಲ್ಲಿ ಮಶಿನ್ ಈ ರೀತಿಯ ವರ್ಗೀಕರಣವನ್ನು ಮಾಡಬೇಕು. ಇದರಿಂದಾಗಿ ತುಂಬಾ ಸೂಕ್ಷ್ಮ ಹಂತದಲ್ಲಿ (ಮೈಕ್ರೋ ಲೆವಲ್) ಎಲ್ಲ ಅಂಶಗಳನ್ನು ನಿಯಂತ್ರಿಸುವುದು (ಮಾನಿಟರ್) ಸಾಧ್ಯ.
 
ವ್ಯಾಲ್ಯೂ ಎಡೆಡ್ ಮತ್ತು ನಾನ್ ವ್ಯಾಲ್ಯೂ ಎಡೆಡ್ ಇವುಗಳ ವರ್ಗೀಕರಣವನ್ನು ಮಾಡಿ ನಾವು ನಾನ್ ವ್ಯಾಲ್ಯೂ ಎಡೆಡ್ ಕೆಲಸಗಳನ್ನು ಕಡಿಮೆ ಮಾಡುತ್ತಾ ಹೋದರೆ, ನಮ್ಮ ಉತ್ಪಾದನೆಗಳ ಗುಣಮಟ್ಟ ಮತ್ತು ಬೆಲೆ, ಈ ಎರಡೂ ವಿಷಯದಲ್ಲಿ ಖಂಡಿತವೂ ವ್ಯತ್ಯಾಸವಾಗಬಲ್ಲದು. ಉತ್ಪಾದನೆಯೂ ಯೋಗ್ಯವಾದ ವೇಳೆಯಲ್ಲಿ ನಿಯಂತ್ರಿಸಬಹುದಾಗಿದೆ.
 
ಶ್ರಮ ಶಕ್ತಿಯ ಉಪಲಬ್ಧತೆ, ಮಾನಸಿಕತೆ ಮತ್ತು ನಡವಳಿಕೆ ಈ ಮೂರೂ ವಿಷಯಗಳ ಕುರಿತು ಜಗತ್ತಿನೆಲ್ಲೆಡೆ ಸಕಾರಾತ್ಮಕವಾಗಿ ನೋಡಬೇಕು. ಆದರೆ ನಾವು ಭಾರತೀಯ ಅಂದಾಜಿನ ಪ್ರಕಾರ ಪ್ರೆಡಿಕ್ಟೆಬಲ್ ಬಿಹೇವಿಯರ್ ನಲ್ಲಿ ಹಿಂದುಳಿಯುತ್ತೇವೆ. ಇದೇ ನಮ್ಮಲ್ಲಿರುವ ಬಹು ದೊಡ್ಡ ದೋಷವನ್ನು ಇನ್ನಿತರ ದೇಶಗಳು ಒತ್ತಿ ಹೇಳುತ್ತಾರೆ. ಅಂದರೆ ಯಾವುದೇ ವಿಷಯವು ಸರಿಯಾದ ಸಮಯದಲ್ಲಿಯೇ ಆಗಬಲ್ಲದು, ಇಷ್ಟೇ ಅಂಕೆ-ಸಂಖ್ಯೆಗಳಿರಬಲ್ಲವು, ಅಪೇಕ್ಷಿಸಿರುವ ಗುಣಮಟ್ಟವು ಲಭಿಸಬಲ್ಲದು, ಅದರೊಂದಿಗೆ ನಾವು ತಯಾರಿಸಿರುವ ವಸ್ತುಗಳು ಅಪೇಕ್ಷಿಸಿರುವ ಸಮಯದಲ್ಲಿ ತಲುಪಬಲ್ಲವು, ಇಂತಹ ದಿನದಲ್ಲಿಯೇ ಉತ್ಪಾದನೆಗೆ ಪ್ರಾರಂಭವಾಗಬಲ್ಲದು ಇತ್ಯಾದಿ ಅಂಶಗಳ ಕುರಿತು ನಾವು ಅಂದಾಜನ್ನು ಮಾಡುವಲ್ಲಿಯೇ ನಿರತರಾಗಿರುತ್ತೇವೆ. ನಮಗೆ ನಮ್ಮ ನಿರಂತರತೆ, ವಿಶ್ವಾಸಾರ್ಹತೆ ಮತ್ತು ಅಂದಾಜಿನ ಸ್ತರವನ್ನು ವೃದ್ಧಿಸಬೇಕಾಗಬೇಕು.
 
ಉತ್ಪಾದನೆಯನ್ನು ಮಾಡುತ್ತಿರುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಡಾಟಾ ತುಂಬಾ ಮಹತ್ವದ್ದಾಗಿರುತ್ತದೆ. ಮೂಲತಃ ಭಾರತೀಯರು ‘ಡಾಟಾ ಓರಿಯೆಂಟೆಡ್’ ಆಗಿವೆಯೇ, ಎಂಬುದೇ ಒಂದು ಗಂಭೀರವಾದ ಪ್ರಶ್ನೆಯಾಗಿದೆ. ಡಾಟಾ, ಸ್ಟ್ರಕ್ಚರ್ ಓರಿಯೆಂಟೆಡ್ ಪ್ರಾಬ್ಲೆಮ್ ಸಾಲ್ವಿಂಗ್ ಇದರಲ್ಲಿ ನಾವು ಒತ್ತನ್ನು ನೀಡಬೇಕು. ತಾರ್ಕಿಕ ದೃಷ್ಟಿಯಲ್ಲಿ ಅಥವಾ ಊಹಿಸಿ ಯಾವುದೇ ಅಂಶಗಳನ್ನು ಬದಲಾಯಿಸಬಾರದು. ನಮ್ಮಲ್ಲಿ ಇರುವ ಕೆಲಸಗಾರರ ತಂಡ, ಟೀಮ್ ಲೀಡರ್, ಇಂಜಿನಿಯರ್ ಇವರೆಲ್ಲರ ನಿಪುಣತೆಯನ್ನು ಹೆಚ್ಚಿಸಬೇಕು. ಇದರೊಂದಿಗೆ ಸ್ವಯಂಚಾಲನೆ ಮಾಡಿ ಮಶಿನ್ ಪ್ರೊಸೆಸಿಂಗ್ ನಲ್ಲಿರುವ ಕುಶಲತೆಯ ಆವಶ್ಯಕತೆಯು ಕಡಿಮೆಯಾಗಬೇಕು. ಮಾಹಿತಿ ತಂತ್ರಜ್ಞಾನವನ್ನು ಬಳಸುವುದು ಭವಿಷ್ಯದ ದೃಷ್ಟಿಯಲ್ಲಿ ತುಂಬಾ ಲಾಭಕಾರಿಯಾಗಿದೆ. ನಿರಂತರವಾದ ಸುಧಾರಣೆಗಳನ್ನು ಮಾಡುತ್ತಾ ಸಂಸ್ಕೃತಿಯನ್ನು ಕಾಪಾಡಿದಲ್ಲಿ ಗುಣಮಟ್ಟವು ವೃದ್ಧಿಸಬಲ್ಲದು, ಬೆಲೆಯೂ ಕಡಿಮೆಯಾಗಬಲ್ಲದು. ನಮ್ಮಲ್ಲಿರುವ ನಿರ್ಮಿತಿಯ ವ್ಯವಸ್ಥೆಯಲ್ಲಿ ಇಂತಹ ಅನೇಕ ರೀತಿಯ ಸಂಸ್ಕೃತಿಯ ಬದಲಾವಣೆ, ಆರ್ಗನೈಜೆಶನಲ್ ಬದಲಾವಣೆಗಳನ್ನು ಕಾರ್ಯಗತಗೊಳಿಸಿದಲ್ಲಿ ಉಚ್ಚಮಟ್ಟದ ಉತ್ಪಾದನೆಯನ್ನು ಮಾಡಿ ಜಾಗತಿಕ ಸ್ತರದಲ್ಲಿ ಹೆಸರಾಂತ ಕಂಪನಿಗಳೊಂದಿಗೆ ನಾವು ಸ್ಪರ್ಧಿಸಬಲ್ಲೆವು. ಇದು ಖಂಡಿತವಾಗಿಯೂ ಸಾಧ್ಯವಾಗಿದೆ.
 
ಒಂದು ವೇಳೆ ನಮ್ಮೆದುರು ಯಾವುದೇ ಸಮಸ್ಯೆ ಎದುರಾದಲ್ಲಿ, ಸಾಮಾನ್ಯವಾಗಿ ಮಾಲಿಕರು ಅಥವಾ ಹಿರಿಯ ಅಧಿಕಾರಿಗಳ ಮೊದಲ ಪ್ರತಿಕ್ರಿಯೆ ಅಂದರೆ, ‘ಈ ಸಮಸ್ಯೆ ಯಾರಿಂದ ಉಂಟಾಯಿತು’. ಈ ಪ್ರಶ್ನೆಯು ಸಂಸ್ಕೃತಿಯ ಭಾಗವಾಗಿದೆ. ಇದರ ಹೊರತಾಗಿ ನಾವು 4W ಮತ್ತು 1H ಇದಕ್ಕೆ ಆಧರಿಸಿ ಈ ಸಮಸ್ಯೆ ಹೇಗೆ ಉಂಟಾಯಿತು, ಎಲ್ಲಿ ಉದ್ಭವಿಸಿತು, ಯಾವಾಗ ಕಾಣಿಸಿತು ಇತ್ಯಾದಿ ವಿಶ್ಲೇಷಣೆಗಳನ್ನು ಮಾಡಲೇಬೇಕು. ಕಂಪನಿಯ ಗೇಟ್ ನಿಂದ ಪ್ರವೇಶಿಸುವ ಕೆಲಸಗಾರರು, ನಾವು ಇಂದು ಕಂಪನಿಯಲ್ಲಿ ಏನಾದರೂ ಹಾಳಾಗಿ ಮಾಡಿಯೇ, ಮನೆಗೆ ಹೋಗುತ್ತೇನೆ, ಎಂಬ ವಿಚಾರವನ್ನು ಎಂದಿಗೂ ಮಾಡುವುದಿಲ್ಲ. ಇಂದು ನಾವು ಯಾವುದೇ ಒಳ್ಳೆಯ ಕೆಲಸವನ್ನೇ ಮಾಡುತ್ತೇನೆ, ಎಂಬ ವಿಚಾರವನ್ನು ಮಾಡುತ್ತಿರುತ್ತಾನೆ. ಪ್ರತಿಯೊಬ್ಬ ಕೆಲಸಗಾರರಿಗೆ ಒಳ್ಳೆಯ ಕೆಲಸವನ್ನು ನಿರ್ವಹಿಸಲು ಅವರಿಗೆ ಬೇಕಾಗಿರುವ ಸಿಸ್ಟಮ್ ಗಳನ್ನು ಪೂರೈಸುವುದು ಅವರ ವರಿಷ್ಠರ ಜವಾಬ್ದಾರಿಯಾಗಿದೆ. ಇದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಯಾವುದೇ ಸಮಸ್ಯೆ ಎದುರಾದಲ್ಲಿ, ದೋಷಗಳಿಂದ ಕೂಡಿರುವ ಭಾಗಗಳು ತಯಾರಾಗುತ್ತಿದ್ದಲ್ಲಿ, ಉತ್ಪಾದನೆಯು ಆಗಾಗ ನಿಲ್ಲುತ್ತಿದ್ದಲ್ಲಿ, ಅದಕ್ಕಿರುವ ಕಾರಣಗಳನ್ನು ಹುಡುಕಲು ಸಿಸ್ಟಮ್ ಗಳನ್ನು ಉಪಯೋಗಿಸಬೇಕು. ಈ ಸಿಸ್ಟಮ್ ಗಳಿಂದಾಗಿ ಡಾಟಾ ಸಂಗ್ರಹಿಸುವುದು ಸಹಜವಾಗಿ ಸಾಧ್ಯವಾಗುತ್ತದೆ. ಜಪಾನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವವರು ಇದಕ್ಕೋಸ್ಕರ ‘TEI ಅಂದರ ಟೋಟಲ್ ಎಂಪ್ಲಾಯಿ ಇನ್ವಾಲ್ವ್ ಮೆಂಟ್’ ಎಂಬ ಕೆಲಸದ ಪದ್ಧತಿಯನ್ನು ಅವಲಂಬಿಸಿದ್ದಾರೆ.
ದೀಪಕ ದೇವಧರ : ಸಾಳುಂಖೆಯವರೇ, ದೊಡ್ಡ ಮತ್ತು ಅದರೊಂದಿಗೆ ಚಿಕ್ಕ ಕಂಪನಿಗಳು ಕೂಡಾ ನಿಮ್ಮ ಗ್ರಾಹಕರಾಗಿದ್ದಾರೆ. ವಿವೇಕ ಜೋಶಿ ಇವರು ಹೇಳಿದಂತೆ, ಕಾರ್ಖಾನೆಯಲ್ಲಿ ಈ ರೀತಿಯ ಸಾಂಸ್ಕೃತಿಕ ಬದಲಾವಣೆಗಳನ್ನು ಮಾಡಲು ಚಿಕ್ಕ ಕಂಪನಿಗಳಿಂದ ಹೇಗೆ ಪ್ರತಿಕ್ರಿಯೆಯು ಲಭಿಸುತ್ತದೆ. ಇಕ್ವಿಪ್ ಮೆಂಟ್ ನ ಕುರಿತು ನಿಮ್ಮಿಂದ ಚಿಕ್ಕ ಕಂಪನಿಗಳು ಬೇರೆ ಯಾವ ರೀತಿಯ ಆಪೇಕ್ಷೆಗಳನ್ನು ಇಡುತ್ತಾರೆ?
ವಿಕ್ರಮ ಸಾಳುಂಖೆ : ಕಂಪನಿಯೂ ಎಷ್ಟೇ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ತಂತ್ರಜ್ಞಾನವನ್ನು ಬಳಸುವಲ್ಲಿ ಈಗ ಹೆಚ್ಚೇನು ವ್ಯತ್ಯಾಸ ಇರುವುದಿಲ್ಲ. 20 ವರ್ಷಗಳ ಹಿಂದೆ ಸಿ.ಎನ್.ಸಿ. ಮಶಿನ್ ಮಾರುಕಟ್ಟೆಯಲ್ಲಿ ಕಾಲೂರಿದಾಗ ಕೇವಲ ದೊಡ್ಡ ಕಂಪನಿಗಳೇ ಈ ಸಿ.ಎನ್.ಸಿ. ಮಶಿನ್ ಗಳನ್ನು ಖರೀದಿಸಬಲ್ಲರು, ಎಂಬುದಾಗಿ ತಿಳಿಯಲಾಗುತ್ತಿತ್ತು. ಚಿಕ್ಕ ಕಂಪನಿಗಳು ಮ್ಯಾನ್ಯುವಲ್ ಲೇಥ್ ಅಥವಾ ಮಿಲ್ಲಿಂಗ್ ಮಶಿನ್ ನಲ್ಲಿಯೇ ಕೆಲಸವನ್ನು ಮಾಡಬಲ್ಲರು. ಆದರೆ ಇಂದು ಆ ಪರಿಸ್ಥಿತಿ ಉಳಿದಿಲ್ಲ. ಯಾವುದೇ ಲಘು ಉದ್ಯಮಿಗಳಿದ್ದಲ್ಲಿ ಅಥವಾ ಯಾವುದೇ ಸ್ಟಾರ್ಟ್ ಅಪ್ ಇದ್ದರೂ ಕೂಡಾ, ಅವರಲ್ಲಿ ಮೊದಲಾಗಿ ಸಿ.ಎನ್.ಸಿ. ಮಶಿನ್ ಇರುತ್ತದೆ. ವಿವೇಕ ಜೋಶಿ ಇವರ ಹೇಳಿಕೆಯಂತೆ ದೊಡ್ಡ ಕಂಪನಿಗಳಲ್ಲಿ ಹೆಚ್ಚಿನ ಯಂತ್ರಣೆಗಳು ಡಾಟಾ ಡ್ರಿವನ್ ಆಗಿರುತ್ತವೆ. ಚಿಕ್ಕ ಕಂಪನಿಗಳಲ್ಲಿ ಅನುಭವಕ್ಕೆ ಹೆಚ್ಚು ಪ್ರಾಧಾನ್ಯತೆ ಇರತ್ತದೆ. ಕೋವಿಡ್ ನ ಕಾಲಾವಧಿಯಲ್ಲಿ ನಮ್ಮ ಶಾಪ್ ನಲ್ಲಿರುವ ಎಲ್ಲ ಯಂತ್ರಣೆಗಳೆಡೆಗೆ ಬೇರೆಯೇ ರೀತಿಯಲ್ಲಿ ನೋಡುವ ಸಮಯವು ಎದುರಾಗಿದೆ. ಚಿಕ್ಕ ಕಂಪನಿಗಳಲ್ಲಿರುವ ಮಿಸ್ಸಿಂಗ್ ಲಿಂಕ್ ಗಳಿಂದಾಗಿ ತಯಾರಾಗುವ ಡಾಟಾದ ಬಳಕೆಯನ್ನು ಪ್ರಭಾವಶಾಲಿಯಾಗಿ ಮಾಡಲಾಗುವುದಿಲ್ಲ. ಹಲವೆಡೆಗಳಲ್ಲಿ ಪಾರಂಪರಿಕವಾದ ಕ್ಯಾಲಿಪರ್ ಬದಲಾಗಿ ಡಿಜಿಟಲ್ ಕ್ಯಾಲಿಪರ್ ಬಳಸಲಾಗುತ್ತದೆ. ಅನೇಕ ಬಾರಿ ಕಂಪನಿಗಳಲ್ಲಿ CMM ಗಳಿರುತ್ತವೆ. ಈ ಎಲ್ಲ ಸಾಮಗ್ರಿಗಳ ಡಾಟಾ ಮಾಪನ ಮಾಡಿ, ಅದೇ ಸ್ಟೇಶನ್ ನಲ್ಲಿ ನಿಲ್ಲದೇ, ಅದು ಪೋರ್ಟ್ ನೊಂದಿಗೆ ಮುಂದಿನ ಪ್ರಕ್ರಿಯೆಯ ಕಡೆಗೆ ಸರಿಯಬೇಕು. ಇತ್ತೀಚೆಗೆ ಚಿಕ್ಕ ಕಾರ್ಖಾನೆಗಳಲ್ಲಿ ಈ ಪದ್ಧತಿಯು ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ.
 
ಒಮ್ಮೆ ಕಲ್ಯಾಣಿ ಫೋರ್ಜ್ ನ ಅಧ್ಯಕ್ಷರು ಮತ್ತು ನಿರ್ದೇಶಕರಾದ ಬಾಬಾಸಾಹೇಬ್ ಕಲ್ಯಾಣಿ ಇವರು ನಮ್ಮ ಕಂಪನಿಗೆ ಭೇಟಿ ನೀಡಿದ್ದರು. ಅವರು ತಮ್ಮ ಮಾತಿನಲ್ಲಿ ಮೀಡಿಯಾ ಬ್ರೇಕ್ಸ್ ಎಂಬ ಒಳ್ಳೆಯ ಟರ್ಮಿನಾಲಾಜಿ ಬಳಸಿದ್ದರು. ಅವರ ಅನುಭವದ ಪ್ರಕಾರ, ಅವರು ಹೇಳಿದರು, “ಪಾರ್ಟ್ ಮೊದಲು ಹೋಗುತ್ತದೆ ಮತ್ತು ಅದರ ನಂತರ ಡಾಟಾದ ಪ್ರವಾಸ (ಟ್ರೆವಲ್) ಆಗುತ್ತದೆ.’’ ಡಾಟಾ ಇದು ತುಂಬಾ ವೇಗವಾಗಿ ಪ್ರವಾಸ ಮಾಡುವ ಟೂಲ್ ಆಗಿದೆ, ಎಂಬ ಅಂಶವು ನಿಜವಾಗಿಯೂ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಮೀಡಿಯಾ ಬ್ರೇಕ್ಸ್ ನಿಂದಾಗಿ ಆ ಡಾಟಾ ಯಾವುದೇ ಮಶಿನ್ ನಲ್ಲಿ, ಯಾವುದೇ ಪುಸ್ತಕದಲ್ಲಿ, ಯಾವುದೇ ರೆಕಾರ್ಡ್ ನಲ್ಲಿ ಇರುತ್ತದೆ. ಯಾವಾಗಲಾದರೂ ಯಾವುದೇ ರೀತಿಯ ಸಮಸ್ಯೆ ಎದುರಾಗುತ್ತದೆಯೋ, ಆಗ ಭಾರತದಲ್ಲಿರುವ ಪೋಲಿಸ್ ವ್ಯವಸ್ಥೆಯಂತೆ ಅದರ ಶೋಧಿಸಲಾಗುತ್ತದೆ. ಆದರೆ ಅದೇ ಡಾಟಾ ದಲ್ಲಿ ಸೂಕ್ತ ವೇಳೆಯಲ್ಲಿ ಯಾವುದೇ ಕ್ರಿಯೆಯನ್ನು ಮಾಡಿದಲ್ಲಿ, ಅದರ ಕುರಿತು ಯೋಗ್ಯವಾಗಿರುವ ನೊಂದಾಣಿಕೆಯನ್ನು ಮಾಡಿದಲ್ಲಿ, ಅದರ ಉಪಯೋಗವು ಖಂಡಿತವಾಗಿಯೂ ಅಗುತ್ತದೆ.
 
ಮಾರಾಟ ಮಾಡಿರುವ ವಾಹನಗಳನ್ನು ಮರಳಿ ಪಡೆಯಲಾಗುತ್ತದೆ, ಎಂಬುದನ್ನು ವಾಹನ ಉದ್ಯಮದಲ್ಲಿ ನಾವು ಅನೇಕ ಬಾರಿ ಕೇಳುತ್ತೇವೆ. ಈ ಪರಿಸ್ಥಿತಿಯಲ್ಲಿ ನಮ್ಮ OEM ಗೋಸ್ಕರ ಟ್ರೆಸೆಬಿಲಿಟಿ ತುಂಬಾ ಮಹತ್ವದ್ದಾಗಿರುತ್ತದೆ. ಈಗ BS6 ಎಂಬ ಹೊಸ ರೀತಿಯ ಸ್ಟ್ಯಾಂಡರ್ಡ್ ಮೂಡಿಬಂದಿದೆ. ಅದಕ್ಕಿರುವ ರಿಕ್ವಾಯರ್ಮೆಂಟ್ ಈ ಟ್ರೆಸೆಬಿಲಿಟಿಯಲ್ಲಿ ಅವಲಂಬಿಸಿರುತ್ತದೆ. ಇದಕ್ಕೋಸ್ಕರ ಶಾಪ್ ಫ್ಲೋರ್ ನಲ್ಲಿರುವ ವಿವಿಧ ಪ್ರಕ್ರಿಯೆಗಳ ಡಾಟಾ ಕನೆಕ್ಟ್ ಮಾಡುವುದು, ಅದನ್ನು ಸೂಕ್ತ ರೀತಿಯಲ್ಲಿ ಬಳಸುವುದು, ಡಾಟಾ ಆಧರಿಸಿರುವ ತೀರ್ಮಾನವನ್ನು ಮಾಡುವುದು ಇಂತಹ ಕೆಲಸಗಳನ್ನು ದೊಡ್ಡ ಕಂಪನಿಗಳಲ್ಲಿ ಮಾಡಲಾಗುತ್ತದೆ. ಅದೇ ಸಂಸ್ಕೃತಿ ಈಗ ನಮ್ಮಲ್ಲಿಯೂ ಎಲ್ಲ ಗಾತ್ರದ (ಲಘು, ಸೂಕ್ಷ್ಮ, ಮಧ್ಯಮ ಇತ್ಯಾದಿ) ಕಂಪನಿಗಳಲ್ಲಿ ತಳವೂರಬೇಕು. ಇನ್ನು ಮುಂದೆ ಭಾರತಕ್ಕೆ ಜಗತ್ತಿನಲ್ಲಿ ವಾಹನ ನಿರ್ಮಾಣದ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆಯಬೇಕಾಗಿದ್ದಲ್ಲಿ, ಚೀನಾಕ್ಕೆ ಒಂದು ದೃಢವಾದ ಪರ್ಯಾಯವೆಂದು ನಮಗೆ ಜಾಗತಿಕ ಸ್ತರದಲ್ಲಿ ಬಲವಾಗಿ ನಿಲ್ಲುವುದಾದಲ್ಲಿ, ನಮಗೆ ಇದರ ಕುರಿತಾಗಿ ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡುವ ಆವಶ್ಯಕತೆ ಇದೆ.
ದೀಪಕ ದೇವಧರ : ಈ ರೀತಿಯ ಬದಲಾವಣೆಗಳಿಗೋಸ್ಕರ ನಾವು ವ್ಯಕ್ತಿಗತವಾದ ಮತ್ತು ಆರ್ಗನೈಜೆಶನಲ್ ಬಿಹೇವಿಯರ್ ಕುರಿತು ವಿಚಾರ ಮಾಡಿದೆವು. ಮಶಿನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರನು ಆಯಾ ವಿಭಾಗದ ಗುಣಮಟ್ಟಕ್ಕೋಸ್ಕರ ‘ಅಕೌಂಟೆಬಲ್’ ಇದ್ದಲ್ಲಿ ಮಾತ್ರ, ಗುಣಮಟ್ಟವು ವೃದ್ಧಿಸುತ್ತದೆ. ಈ ಪರಿಸ್ಥಿತಿಯಲ್ಲಿ ತಂತ್ರಜ್ಞಾನದ ದೃಷ್ಟಿಯಲ್ಲಿ ಕಂಪನಿಯು ಹೇಗೆ ವಿಚಾರ ಮಾಡಬೇಕು? ಇಂದಿನ ಪರಿಸ್ಥಿತಿಯಲ್ಲಿ MSME ಗೋಸ್ಕರ ಆಧುನಿಕ ಸಾಮಗ್ರಿಗಳೆಂಬ ವಿಷಯವು ಅಗತ್ಯದ್ದಾಗಿದೆಯೇ? ಈ ವಿಷಯದಲ್ಲಿ ತಮ್ಮ ಅನಿಸಿಕೆಗಳೇನು?
ವಿವೇಕ ಜೋಶಿ : ಝೀರೋ ಡಿಫೇಕ್ಟ್, ಝೀರೋ ಎರರ್, ನಿರ್ದೋಷವಾದ ಉತ್ಪಾದನೆಗಳು ಇಂದಿನ ಪರಿಸ್ಥಿತಿಯಲ್ಲಿ ಗ್ರಾಹಕರ ಮೂಲಭೂತವಾದ ಅಪೇಕ್ಷೆಗಳಾಗಿವೆ, ಎಂದು ನನಗೂ ಅನಿಸುತ್ತದೆ. ಉತ್ಪಾದನೆಗಳೊಂದಿಗೆ ಪ್ರಕ್ರಿಯೆಯಲ್ಲಿಯೂ ಯಾವುದೇ ರೀತಿಯ ಡಿಫೆಕ್ಟ್ ಇರಬಾರದು. ಇಂಡಸ್ಟ್ರೀ 4.0 ಅಥವಾ ಕ್ವಾಲಿಟಿ 4.0 ಇದರ ಪ್ರವಾಸವು ಮುಂದೆ ಮುಂದೆ ಸರಿದಂತೆ ಮಾಹಿತಿ ತಂತ್ರಜ್ಞಾನದ ಪ್ರವೇಶವೂ ನಿರ್ಮಾಣ ಕ್ಷೇತ್ರದಲ್ಲಿ ಹೆಚ್ಚಾಗಬಲ್ಲದು, ಆಗ ಅದು ನಮ್ಮ ಆವಶ್ಯಕತೆಯೇ ಆಗಬಲ್ಲದು. ಇದು ಮಾತ್ರ ಲಘು ಮಧ್ಯಮ ಕಾರ್ಖಾನೆಗಳಿಗೆ ಸುವರ್ಣಾವಕಾಶ. ಕಾರಣ ದೊಡ್ಡ ಕಂಪನಿಗಳಲ್ಲಿ 2000-3000 ಮಶಿನ್ ಗಳಿರುತ್ತವೆ. ಅವುಗಳನ್ನು ಒಂದಕ್ಕೊಂದು ಜೋಡಿಸಬೇಕಾಗುತ್ತದೆ. ಇದರ ಹೊರತಾಗಿ ಚಿಕ್ಕ ಕಾರ್ಖಾನೆಗಳಲ್ಲಿ ಅಥವಾ ಯಾವುದೇ ಶಾಪ್ ಪ್ಲೋರ್ ನಲ್ಲಿರುವ 10-12 ಮಶಿನ್ ಗಳ ಸೆಟಪ್ ಇಂಡಸ್ಟ್ರಿ 4.0 ಗೆ ರೂಪಾಂತರಿಸಲು ಕಡಿಮೆ ಸಮಯ ತಗಲುತ್ತದೆ ಮತ್ತು ಅದನ್ನು ತಕ್ಷಣ ಕಾರ್ಯಗತಗೊಳಿಸಬಹುದು. ಇದಕ್ಕೋಸ್ಕರ ಭವಿಷ್ಯತ್ಕಾಲದಲ್ಲಿ ಗುಣಮಟ್ಟದ ಈ ಕೆಳಗಿನ ಏಳು ಮಾನದಂಡಗಳಿರಬೇಕು.
 
1. ವ್ಯಕ್ತಿಗತ ಗುಣಮಟ್ಟ
(ಕ್ವಾಲಿಟಿ ಆಫ್ ಎ ಪರ್ಸನ್) : ಸ್ವಂತದ್ದು, ಕೆಲಸಗಾರರದ್ದು, ಅಧಿಕಾರಿಗಳ ಗುಣಮಟ್ಟ. ಕುಶಲತೆ (ಸ್ಕಿಲ್), ತಿಳುವಳಿಕೆ (ನಾಲೆಜ್) ಮತ್ತು ಮನೋವೃತ್ತಿ (ಎಟಿಟ್ಯೂಡ್) ಈ ಮೂರೂ ಮಾನದಂಡಗಳೊಂದಿಗೆ ಗುಣಮಟ್ಟದ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಕೆಲಸವನ್ನು ನಿರ್ವಹಿಸಬೇಕು.
 
2. ಕಂಪನಿಯಲ್ಲಿರುವ ಪ್ರಣಾಳಿಕೆ : ಗುಣಮಟ್ಟದಿಂದ ಕೂಡಿರುವ ಪ್ರಣಾಳಿಕೆಗೆ ಒತ್ತು ಕೊಡುವುದು, ಕಚ್ಚಾ ವಸ್ತುಗಳನ್ನು ಒಳಗೆ ತಂದು ಅಂತಿಮ ಉತ್ಪಾದನೆಯ ಪ್ಯಾಕೆಜಿಂಗ್ ಮಾಡಿ ಅದನ್ನು ಹೊರಗೆ ಕಳುಹಿಸುವ ತನಕ ಎಲ್ಲೆಡೆಯಲ್ಲಿಯೂ ಉಚ್ಚಗುಣಮಟ್ಟದ ಪ್ರಣಾಳಿಕೆಯು ಇರುವುದು ಅತ್ಯಾವಶ್ಯಕವಾಗಿದೆ. ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತದೆ, ಬ್ಯಾಚ್ ಇರಲಿ ಅಥವಾ ಮಾಸ್ ಪ್ರೊಡಕ್ಷನ್ ಇರಲಿ ಅಥವಾ ಉತ್ಪಾದನೆಯನ್ನು ಗ್ರಾಹಕರಿಗೆ ನೀಡಿದ ನಂತರ ಆಫ್ಟರ್ ಸೇಲ್ಸ್ ಸರ್ವಿಸ್ ಇರಲಿ, ಈ ಎಲ್ಲದರ ಗುಣಮಟ್ಟವು ಉಚ್ಚಮಟ್ಟದ್ದಾಗಿರುವುದು ಮಹತ್ವದ್ದಾಗಿದೆ.
3. ಮಶಿನ್ ಗಳ ಗುಣಮಟ್ಟ (ಕ್ವಾಲಿಟಿ ಆಫ್ ಮಶಿನ್) : ಮಶಿನ್ ಎಷ್ಟೇ ಹಳೆಯದಾಗಿರಲಿ ಅಥವಾ ಹೊಸದಾಗಿರಲಿ, ಯಾವುದೇ ಕಂಪನಿಯಿಂದ ತಯಾರಿಸಿದ್ದಾಗಿರಲಿ, ಇಂದು ಎಲ್ಲ ರೀತಿಯ ಮಶಿನ್ ಗಳಿಗೆ ಜೋಡಿಸಬಲ್ಲ, ಕಡಿಮೆ ಬೆಲೆಯ ಮತ್ತು ಉತ್ತಮ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಬಲ್ಲ ವಿವಿಧ ಸೆನ್ಸರ್ ಗಳು ಮಾರುಕಟ್ಟೆಯಲ್ಲಿ ಬರುತ್ತಿವೆ. ಅದನ್ನು ಜೋಡಿಸಬಲ್ಲ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳೂ ಕೂಡಾ ಲಭ್ಯವಿವೆ. ಡಾಟಾ ಸಂಗ್ರಹಿಸಿ ಸಾಫ್ಟ್ ವೇರ್ ಮೂಲಕ ಅದಕ್ಕೆ ಪ್ರಕ್ರಿಯೆ ಮಾಡಿ ಮಶಿನ್ ನ ಡಾಟಾ ಸಂಪೂರ್ಣವಾಗಿ ತಮ್ಮಲ್ಲಿ ಇಡುವುದೂ ಸಾಧ್ಯ. ಇದರಿಂದಾಗಿ ಬ್ರೇಕ್ ಡೌನ್ ಮೆಂಟೆನನ್ಸ್ ನ ಬದಲಾಗಿ ಪ್ರೆಡಿಕ್ಟಿವ್ ಮೆಂಟೆನನ್ಸ್ ಈ ವಿಧವು ಸದ್ಯಕ್ಕೆ ಪ್ರಚಲಿತವಾಗಿದೆ. ಇದರಲ್ಲಿ ಮಶಿನ್ ಸ್ವತಃ ಯಾವ ಸಮಸ್ಯೆ ಎಲ್ಲಿ ಬರಲಿದೆ ಎಂಬುದನ್ನು ತಿಳಿಸುತ್ತದೆ. ಎಲ್ಲಿ ಸಮಸ್ಯೆ ಬರಲಿದೆ, ಎಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು, ಎಂಬಿತ್ಯಾದಿ ಮಾಹಿತಿಯನ್ನು ಸ್ಕ್ರೀನ್ ನಲ್ಲಿ ನೋಡಬಹುದು. ಸೂಚನೆಗಳಿಗೆ ಅನುಸಾರವಾಗಿ ಮೆಂಟೆನನ್ಸ್ ತಂತ್ರಜ್ಞರು ಅಂತಹ ಬದಲಾವಣೆಗಳನ್ನು ಮಾಡಬಲ್ಲರು. ಈ ಎಲ್ಲ ಮಾಹಿತಿಯನ್ನು ಸ್ವತಃ ಪಡೆಯುತ್ತದೆ. ಯಾವ್ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದಕ್ಕೂ ಅಲಾರ್ಮ್ ನೀಡುತ್ತದೆ.
4. ಪ್ರಕ್ರಿಯೆಯ ಗುಣಮಟ್ಟ
(ಪ್ರೊಸೆಸ್ ಕ್ವಾಲಿಟಿ) : ಪ್ರಕ್ರಿಯೆಯು ಡಾಟಾ ಓರಿಯೆಂಟೆಡ್ ಇರಬೇಕು. ಮೆನ್, ಮೆಥಡ್, ಮಶಿನ್, ಮಟೀರಿಯಲ್ ಮತ್ತು ಟೂಲ್ ಈ 4M ಮತ್ತು 1T ಪ್ರಕಾರದ ಮುತುವರ್ಜಿಯನ್ನು ಈ ಪ್ರಕ್ರಿಯೆಯಲ್ಲಿ ವಹಿಸಬೇಕು.
5. ತಪಾಸಣೆಯ ಗುಣಮಟ್ಟ
(ಕ್ವಾಲಿಟಿ ಆಫ್ ಇನ್ಫರ್ಮೇಶನ್) : ಪ್ರಕ್ರಿಯೆ ಝೀರೋ ಡಿಫೆಕ್ಟ್ ಹೇಗೆ ಇದೆಯೋ, ಅದರಲ್ಲಿ ಕೆಲಸ ನಿರ್ವಹಿಸಬೇಕು. ಅದನ್ನು ಮಾಡುವ ಮುಂಚೆ ಗ್ರಾಹಕರ ಬೇಡಿಕೆಯನ್ನು ಗಮನಿಸಿ ಅದರ ಶೇಕಡಾ 100 ರಷ್ಟು ತಪಾಸಣೆಯನ್ನು ಸೂಕ್ತ ವೇಳೆಯಲ್ಲಿ ಮಾಡಬೇಕು. ಭಾರತದಲ್ಲಿ ಎಲ್ಲಕ್ಕಿಂತಲೂ ಮೊದಲಾಗಿ ಎಕ್ಸುರೇಟ್ ಕಂಪನಿಯು ಆಟೊ ಗೇಜ್ ತಯಾರಿಸಿದರು. 40-45 ಸೆಕಂಡುಗಳಲ್ಲಿ ಸುಮಾರು 150-170 ಪ್ಯಾರಾಮೀಟರ್ ಗಳ ತಪಾಸಣೆ ಮಾಡಲಾಗುತ್ತಿತ್ತು. ಅದರ ಫಲಿತಾಂಶವೂ ಒಂದು ಮೈಕ್ರಾನ್ ಗಿಂತ ಕಡಿಮೆ ಸಿಗುತ್ತವೆ. ಆ ಇಕ್ವಿಪ್ ಮೆಂಟ್ ನ ವಿಶ್ವಾಸಾರ್ಹತೆ 100% ಇದ್ದು 100% ಆನ್ ಲೈನ್ ಕೆಲಸ ನಿರ್ವಹಿಸಿ ‘ಝೀರೋ ಪರ್ಸೆಂಟ್ ಪಿಪಿಎಮ್ ಟೂ ಕಸ್ಟಮರ್’ ಎಂಬ ಉತ್ಪಾದನೆಯನ್ನು ಪಡೆಯಬಹುದು. ಈ ರೀತಿಯ ಗುಣಮಟ್ಟದಲ್ಲಿ ಗುಣಮಟ್ಟದ ಹೆಚ್ಚಳವಾಗಬೇಕು. ಮುಂದೆ ಹೋಗಿ ಪಾರ್ಟ್ ನ ಟ್ರೆಸೆಬಿಲಿಟಿಗೋಸ್ಕರ ಯೋಗ್ಯವಾದ ಮಾಹಿತಿಯನ್ನು ಒಟ್ಟು ಮಾಡಿ ಉಳಿಸುವುದು ಕೂಡಾ ಮಹತ್ವದ್ದಾಗಿದೆ.
6. ಉತ್ಪಾದನೆಯ ಗುಣಮಟ್ಟ
(ಕ್ವಾಲಿಟಿ ಆಫ್ ಪ್ರೊಡಕ್ಟ್) : ಆನ್ ಲೈನ್ ಗೇಜಿಂಗ್, ಮಶಿನ್ ಗೆ ನೇರವಾದ ಫೀಡ್ ಬ್ಯಾಕ್, ಆನ್ ಲೈನ್ SPC ಮತ್ತು ಪ್ರೆಡಿಕ್ಟ್ಯಾಬಿಲಿಟಿ.
7. ಪ್ಯಾಕೆಜಿಂಗ್ ಗುಣಮಟ್ಟ
(ಕ್ವಾಲಿಟಿ ಆಫ್ ಪ್ಯಾಕೆಜಿಂಗ್) : ಇಂತಹ ಎಲ್ಲಕ್ಕಿಂತಲೂ ಮಹತ್ವದ ಅಂಶದ ಕುರಿತು ನಮ್ಮಲ್ಲಿ ಅನೇಕ ಬಾರಿ ವಿಚಾರ ಮಾಡಲಾಗುವುದಿಲ್ಲ. ನಾವು ಯಾವ ಸಾಮಗ್ರಿಯನ್ನು ತಯಾರಿಸುತ್ತೇವೆಯೋ, ಅದರ ಪ್ಯಾಕೇಜಿಂಗ್ ಇದು ಯೋಗ್ಯವೇ ರೀತಿಯಲ್ಲಿಯೇ ಇರಬೇಕು, ಇದರಲ್ಲಿ ನಾವು ಎಲ್ಲ ಉದ್ಯಮಿಗಳು ಗಹನವಾದ ವಿಚಾರವನ್ನು ಮಾಡುವುದೂ ಅತ್ಯಾವಶ್ಯಕವಾಗಿದೆ.
ಈ ಏಳು ಮಾನದಂಡಗಳು ನಮಗೋಸ್ಕರ ಭವಿಷ್ಯತ್ಕಾಲದಲ್ಲಿ ಗುಣಮಟ್ಟವನ್ನು ನಿರ್ಧರಿಸಬಲ್ಲವು. ಈ ಅಂಶಗಳು ತಂತ್ರಜ್ಞಾನದಿಂದಾಗಿ ಇಂದಿನ ಕಾಲದಲ್ಲಿ ಸಹಜವಾಗಿ ಲಭ್ಯವಿವೆ. ಅದರ ಸೂಕ್ತವಾದ ಉಪಯೋಗವನ್ನು ಮಾಡಿ ನಿಗದಿಸಿರುವ ಸಮಯಕ್ಕಿಂತ ಮುಂಚೆ, ಯೋಗ್ಯ ವ್ಯಕ್ತಿಗಳಿಂದ, ಯೋಗ್ಯ ಗುಣಮಟ್ಟದಲ್ಲಿ ಮತ್ತು ಸೂಕ್ತವಾದ ಬೆಲೆಯಲ್ಲಿ ನೀವು ಸಾಮಗ್ರಿಗಳ ಉತ್ಪಾದನೆಯನ್ನು ಮಾಡಬಲ್ಲಿರೋ, ಎಂಬುದನ್ನು MSME ಉದ್ಯಮಿಗಳಿಗೆ ಈ ಮೂಲಕ ವಿನಂತಿಸುತ್ತೇನೆ. ದೊಡ್ಡ ಕಂಪನಿಗಳಿಗೆ ಪೂರೈಕೆದಾರರಾಗಲು ತಂತ್ರಜ್ಞಾನವನ್ನು ಉಪಯೋಗಿಸಿದಲ್ಲಿ ತಮಗೆ ಅನೇಕ ಅವಕಾಶಗಳು ಉಪಲಬ್ಧವಿವೆ, ಎಂದು ನನಗೆ ಅನಿಸುತ್ತದೆ.
ದೀಪಕ ದೇವಧರ : ಸಾಳುಂಖೆಯವರೇ, ಗ್ರಾಹಕರ ಎಲ್ಲ ರೀತಿಯ ಬೇಡಿಕೆಗಳನ್ನು ಗಮನಿಸಿ ನೀವು ಯಾವ ಸಾಮಗ್ರಿಗಳನ್ನು ತಯಾರಿಸುತ್ತಿರೋ, ಅದರಲ್ಲಿ MSME ಉದ್ಯಮವನ್ನೂ ಆಕರ್ಷಿಸಬಲ್ಲ ಇನ್ ಸ್ಟ್ರುಮೆಂಟ್ಸ್ ಗಳ ತಯಾರಿಕೆಯನ್ನು ನೀವು ಮಾಡಿದ್ದೀರೋ ಅಥವಾ ಮಾಡುತ್ತಿರೋ? ಈ ಉದ್ಯಮಿಗಳು CMM ಒಂದು ವೇಳೆ ಇಂದು ಖರೀದಿಸಲಾರರು, ಆದರೆ ಅದಕ್ಕೆ ಯಾವುದೇ ಪರ್ಯಾಯ ನಾವು ನೀಡಬಲ್ಲೆವೇ, ಇತ್ಯಾದಿ ವಿಷಯದಲ್ಲಿ ನೀವು ವಿಚಾರ ಮಾಡುತ್ತಿದ್ದಿರೋ?
ವಿಕ್ರಮ ಸಾಳುಂಖೆ : ಇಕ್ವಿಪ್ ಮೆಂಟ್ ಸಾಫಿಸ್ಟಿಕೇಟೆಡ್ ಇರುವುದು ಪರ್ಫಾರ್ಮನ್ಸ್ ನ ದೃಷ್ಟಿಯಲ್ಲಿ ಕೇವಲ ಒಂದು ಪ್ರದರ್ಶನವಲ್ಲದೇ, ಇದು ಈಗ ಅತ್ಯಾವಶ್ಯಕವಾಗಿದೆ. ಸಾಮಾನ್ಯವಾದ ಕ್ಯಾಲಿಪರ್ ಕೂಡಾ ಡೈಮೆನ್ಶನ್ ಪರಿಶೀಲಿಸುತ್ತದೆ ಮತ್ತು ಅದೇ ಡೈಮೆನ್ಶನ್ ನಾವು ಡಿಜಿಟಲ್ ಕ್ಯಾಲಿಪರ್ ನಿಂದಲೂ ಪರೀಕ್ಷಿಸಬಲ್ಲೆವು. ಎರಡೂ ಕ್ಯಾಲಿಪರ್ ಒಂದೇ ರೀತಿಯ ಕೆಲಸವನ್ನು ನಿರ್ವಹಿಸುತ್ತಿದ್ದರೂ ಕೂಡಾ ಎರಡರ ಬೆಲೆಯಲ್ಲಿ ವ್ಯತ್ಯಾಸವಿದೆಯೇ, ಎಂಬ ಪ್ರಶ್ನೆಯನ್ನು ಯಾರೇ ಕೇಳಿದಲ್ಲಿ, ಈ ಪರಿಸ್ಥಿತಿಯಲ್ಲಿ ಡಿಜಿಟಲ್ ಕ್ಯಾಲಿಪರ್ ಗೆ ನ್ಯಾಯವನ್ನು ನೀಡುವುದೂ ಕಠಿಣವಾಗಿದೆ. ಆದರೆ ಡಿಜಿಟಲ್ ಕ್ಯಾಲಿಪರ್ ನಲ್ಲಿರುವ ಮಹತ್ವದ ವೈಶಿಷ್ಟ್ಯಗಳೆಂದರೆ ಅದರಲ್ಲಿ ಲಭಿಸುವ ಡಾಟಾ ಮುಂದಿನ ಪ್ರಕ್ರಿಯೆಯಲ್ಲಿ ಬಳಸಲಾದಲ್ಲಿ ಮತ್ತು ಅದನ್ನು ಆಧರಿಸಿ ಯಾವುದೇ ತೀರ್ಮಾನವನ್ನು ಮಾಡಿದರೂ ಆ ಕ್ಯಾಲಿಪರ್ ನ ಬೆಲೆಗಿಂತ ಅದರ ಮೌಲ್ಯವು ಹೆಚ್ಚು ಇರಬಲ್ಲದು.
 
ಡಿಜಿಟಲ್ ಇಕ್ವಿಪ್ ಮೆಂಟ್ ನಿಂದ ಬರುವ ಡಾಟಾ ಕುರಿತಾದ ವಿಶ್ಲೇಷಣೆ ಹೇಗೆ ಮಾಡುವುದು ಎಂಬುದು ನಮಗೂ ತಿಳಿದಿರಬೇಕು. ಅದರ ಉಪಯೋಗವನ್ನು ಮಾಡುವುದು ಗೊತ್ತಿರಬೇಕು. ಅದರಿಂದ ಪ್ರೆಡಿಕ್ಟಿವ್ ಮೆಂಟೆನನ್ಸ್ ಮಾಡುವುದೂ ತಿಳಿದಿರಬೇಕು. ಬೆಲೆಯನ್ನು ಕಡಿಮೆ ಮಾಡಬಹುದು. ಈ ಎಲ್ಲಕ್ಕೋಸ್ಕರ ಡಾಟಾ ಕುರಿತಾದ ವಿಶ್ಲೇಷಣೆಯು ತುಂಬಾ ಮಹತ್ವದ್ದಾಗಿದೆ.
 
ಮುಂಬರುವ ಕಾಲದಲ್ಲಿ ಮಾನವ ಕೌಶಲ್ಯದಲ್ಲಿ ತುಂಬಾ ಸವಾಲುಗಳನ್ನು ಎದುರಿಸಬೇಕಾಗಲಿದೆ. ತಮ್ಮ ಡಾಟಾದೊಂದಿಗೆ ಕೆಲಸ ಮಾಡುವಲ್ಲಿ ಹೆಚ್ಚೇನು ಅಭ್ಯಾಸ ಇರುವುದಿಲ್ಲ. ತಮ್ಮ ಹೆಚ್ಚಿನ ಶ್ರಮವು ಸದ್ಯಕ್ಕೆ ಡಾಟಾ ತರುವಲ್ಲಿಯೇ ಖರ್ಚಾಗುತ್ತದೆ. ಅದರ ನಂತರ ಅದರ ಯೋಗ್ಯವಾಗ ವ್ಯವಸ್ಥೆ ಮಾಡುವುದು, ಇದರಿಂದಾಗಿ ಸಮಯವು ವ್ಯರ್ಥವಾಗುತ್ತದೆ ಮತ್ತು ವೇಳೆಯ ನಂತರ ಕೈಗೆಟಗಿರುವ ವಿಶ್ಲೇಷಣೆಯಿಂದ ಅಷ್ಟೇನು ಸಾಧಿಸಲಾಗುವುದಿಲ್ಲ. ತಂತ್ರಜ್ಞಾನದಿಂದಾಗಿ ಡಾಟಾ ನಿಮ್ಮ ಕೈಗೆ ತಕ್ಷಣ ಸಿಗಬಲ್ಲದು. ಆದರೆ ಅದನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸುವುದು ತಮಗೆ ತಿಳಿದಿರಬೇಕು.
 
ಫೋಕ್ಸ್ ವೇಗನ್ ಕಂಪನಿಯ ಕಾರ್ಖಾನೆಯ ಪ್ರಾರಂಭವು ಚಾಕಣ್ ಎಂಬಲ್ಲಿ ಆಯಿತು. ಆಗ ಎಲ್ಲಕ್ಕಿಂತಲೂ ಮೊದಲು ಕ್ವಾಲಿಟಿ ರೂಮ್ ಸೆಟಪ್ ಅಲ್ಲಿ ಮಾಡಲಾಗಿತ್ತು. ಅವರ ತತ್ಕಾಲೀನ ಸಿಇಓ ಇವರ ಆಫೀಸ್ ಪ್ಲಾಂಟ್ ನ ಪ್ರಾರಂಭದ ಕಾಲದಲ್ಲಿ ಮೆಜರ್ ಮೆಂಟ್ ಒಂದು ಕೊಠಡಿಯಲ್ಲಿತ್ತು. ಶಾಪ್ ಫ್ಲೋರ್ ನಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ಅವರು ಅದರ ಕುರಿತಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಮೊದಲು ಅವರು ಸ್ವಂತ ಪ್ರತ್ಯಕ್ಷವಾಗಿ CMM ವರದಿಯನ್ನು ಪರಿಶೀಲಿಸುತ್ತಿದ್ದರು ಮತ್ತು ವಿಶ್ಲೇಷಣೆಯನ್ನು ಮಾಡುತ್ತಿದ್ದರು. ಅದರ ನಂತರ ಮುಂದಿನ ಕೆಲಸವನ್ನು ನಿರ್ಧರಿಸುತ್ತಿದ್ದರು. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯು ಡಾಟಾ ಕಡೆಗೆ ಹೆಚ್ಚು ಗಮನ ಹರಿಸಿದಾಗ ಬೇರೆ ರೀತಿಯ ಸಂಸ್ಕೃತಿ ಆ ಕಂಪನಿಯಲ್ಲಿ ತಯಾರಾಗುತ್ತದೆ, ಇದು ಮಾತ್ರ ಖಂಡಿತ.
ದೀಪಕ ದೇವಧರ : ಗುಣಮಟ್ಟದ ಕುರಿತು ಭವಿಷ್ಯತ್ಕಾಲದಲ್ಲಿ ಯಾವ ಯಾವ ಮಾನದಂಡಗಳು ಇರಬಲ್ಲವು, ನಾವು ಆ ಮಾನದಂಡಗಳ ಕುರಿತು ತಮ್ಮಉತ್ಪಾದನೆಯ ಗುಣಮಟ್ಟವನ್ನು ಅದಕ್ಕೆ ಅನುಕೂಲವಾಗಿ ಮಾಡುವಲ್ಲಿ ಯಾವ ಉಪಾಯಗಳನ್ನು ಮಾಡಬೇಕು, ಈ ಕುರಿತು ವಿಸ್ತಾರವಾಗಿ ವಿಮರ್ಶೆಯನ್ನು ನಾವು ಮಾಡಿದೆವು. ಉದ್ಯಮ ಪ್ರಕಾಶನದ ‘ಯಾಂತ್ರಿಕ ವಿಚಾರ ಸಂಕೀರಣ’ದ (ಯಂತ್ರಗಪ್ಪಾ) ಮಾಧ್ಯಮದಿಂದ ಈ ರೀತಿಯ ಅನೇಕ ಪ್ರಮುಖವಾದ ವಿಷಯಗಳ ಕುರಿತು ಆಯಾ ಕ್ಷೇತ್ರದಲ್ಲಿರುವ ತಜ್ಞರನ್ನು ಈ ವೇದಿಕೆಯಲ್ಲಿ ಕರೆದು ‘ಲೋಹಕಾರ್ಯ’ದ ಓದುಗರಿಗೆ ವಿಶದ ಪಡಿಸಲಿದ್ದೇವೆ. ಇದಕ್ಕೋಸ್ಕರ ತಮ್ಮ ಸಹಕಾರ ಮತ್ತು ವಿಚಾರ ಸಂಕೀರಣವು ಇನ್ನಷ್ಟು ಅರ್ಥಪೂರ್ಣವಾಗಲು ತಮ್ಮ ಸಲಹೆ-ಸೂಚನೆಗಳನ್ನು ಸ್ವಾಗತಿಸುತ್ತೇವೆ.
ಶಬ್ದ ನಿರೂಪಣೆ : ಸಯಿ ವಾಬಳೆ
ಸಹಾಯಕ ಸಂಪಾದಕರು
ಉದ್ಯಮ ಪ್ರಕಾಶನ ಪ್ರೈ.ಲಿ.
@@AUTHORINFO_V1@@