ವಾಟರ್ ಜೆಟ್

@@NEWS_SUBHEADLINE_BLOCK@@

Udyam Prakashan Kannad    20-Nov-2020   
Total Views |
3_1 H x W: 0 x
ಸಾಸಾ ಇಂಜಿನಿಯರಿಂಗ್ ಈ ಕಂಪನಿಯು 2011 ರಲ್ಲಿ ಪ್ರಾರಂಭವಾಗಿದ್ದು ಮುಂಚೂಣಿಯಲ್ಲಿರುವ ಇಂಜಿನಿಯರಿಂಗ್ ಕಂಪನಿಯಾಗಿದ್ದು ಉತ್ಪಾದನೆಯನ್ನು ಮಾಡುತ್ತಿರುವ ಕಂಪನಿಯಾಗಿದೆ.
ನಾವು ಇಂಜಿನಿಯರಿಂಗ್ ಡಿಸೈನ್ ಮತ್ತು ಅಭಿವೃದ್ಧಿ, ಲೋಹಗಳ ಕಟಿಂಗ್ ಮತ್ತು ಪ್ರಕ್ರಿಯೆ, ಯಂತ್ರಣೆ ಮತ್ತು ಫ್ಯಾಬ್ರಿಕೇಶನ್ ಇತ್ಯಾದಿಗಳಿಗೆ ಸರ್ವಾಂಗೀಣ ಉಪಾಯಗಳನ್ನು ನೀಡುತ್ತೇವೆ. ನಾವು ಗ್ರಾಹಕರ ಎಲ್ಲ ರೀತಿಯ ಬೇಡಿಕೆಗಳನ್ನು ಅರಿತು ಮತ್ತು ಕೆಲಸದಲ್ಲಿರುವ ಚಿಕ್ಕ-ಪುಟ್ಟ ಅಂಶಗಳ ವಿವರಗಳ ಕುರಿತು ಮತ್ತು ಕಾರ್ಯಸಾಮರ್ಥ್ಯ ಇವುಗಳ ಕಡೆಗೆ ಸೂಕ್ಷ್ಮವಾಗಿ ಗಮನ ಹರಿಸುತ್ತೇವೆ. ಪಾರಂಪರಿಕವಲ್ಲದ ಉತ್ಪಾದನೆಯ ಪ್ರಕ್ರಿಯೆಯಲ್ಲಿ ನಮ್ಮ ಕಂಪನಿಯು ಉತ್ಕೃಷ್ಟವಾದ ಕೆಲಸವನ್ನು ನಿರ್ವಹಿಸುತ್ತದೆ.
ನಾವು ವಾಟರ್ ಜೆಟ್ ಕಟಿಂಗ್, ಲೇಸರ್ ಕಟಿಂಗ್, ಸಿ.ಎನ್.ಸಿ. ಬೆಂಡಿಂಗ್, ಹೆವಿ ಫ್ಯಾಬ್ರಿಕೇಶನ್, ಸಿ.ಎನ್.ಸಿ. ಯಂತ್ರಣೆ, ಡಿಸೈನ್ ಮತ್ತು ಅಭಿವೃದ್ಧಿ ಇಂತಹ ಸೇವೆಗಳನ್ನು ನಮ್ಮ ಗ್ರಾಹಕರಿಗೆ ಪೂರೈಸುತ್ತೇವೆ.
1_1  H x W: 0 x
ವಾಟರ್ ಜೆಟ್ ಯಂತ್ರಣೆ (ಕಟಿಂಗ್)
ಇನ್ನಿತರ ಯಂತ್ರಣೆಯ ರೀತಿಯಲ್ಲಿ ಲೋಹಗಳ ಯಂತ್ರಣೆಯನ್ನು ಮಾಡುವಾಗ ಉಂಟಾಗುವ ಉಷ್ಣತೆಯಿಂದಾಗಿ ಮಟೀರಿಯಲ್ ಅಥವಾ ಟೂಲ್ ಬಿಸಿಯಾಗುತ್ತದೆ, ಕರಗುತ್ತದೆ ಅಥವಾ ಅದಕ್ಕೆ ಬಿರುಕುಗಳು ಉಂಟಾಗುತ್ತವೆ. ತಂಪಾದ ಯಂತ್ರಣೆಯ ಪ್ರಕ್ರಿಯೆಯಿಂದ ಸಿಗುವ ಗುಣಮಟ್ಟವು ವಾಟರ್ ಜೆಟ್ ಕಟಿಂಗ್ ನಿಂದ ಲಭಿಸುವ ಮಹತ್ವಪೂರ್ಣವಾದ ಲಾಭಗಳಲ್ಲಿ ಒಂದಾಗಿದೆ. ವಾಟರ್ ಜೆಟ್ ಕಟಿಂಗ್ ಹೀಟ್ ಸೆನ್ಸೆಟಿವ್ ಮಟೀರಿಯಲ್ ಕತ್ತರಿಸಲು ಇರುವ ಒಂದು ಸೂಕ್ತವಾದ ಉಪಾಯವಾಗಿದೆ.
ಪ್ರಕ್ರಿಯೆ

3_1  H x W: 0 x 
• ವಾಟರ್ ಜೆಟ್ ಯಂತ್ರಣೆಯಲ್ಲಿ ಅಬ್ರೆಸಿವ್ ಕಣಗಳಿಂದ ಕೂಡಿರುವ ಅಲ್ಟ್ರಾ ಪ್ರೆಶರ್ ನೀರಿನ ಪ್ರವಾಹವನ್ನು ಬಳಸಲಾಗುತ್ತದೆ.
• ಅಬ್ರೆಸಿವ್ ಕಣಗಳಿಂದ ಕೂಡಿರುವ ನೀರನ್ನು ನೋಸಲ್ ಮೂಲಕ ಅದರ ಕೆಳಭಾಗದಲ್ಲಿರುವ ಕಾರ್ಯವಸ್ತುವಿನಲ್ಲಿ ಸಿಂಪಡಿಸಲಾಗುತ್ತದೆ. ನೋಸಲ್ ನ ಚಟುವಟಿಕೆಗಳು ಸಿಸ್ಟಮ್ ನಲ್ಲಿ ನೀಡಲಾಗಿರುವ ಡಿಸೈನ್ ಗೆ ಅನುಸಾರವಾಗಿ ಆಗುತ್ತವೆ.
• ನೋಸಲ್ ನ ವ್ಯಾಸ : 1.1 ಮಿ.ಮೀ., ರಂಧ್ರ : 0.35 ಮಿ.ಮೀ.
• ಅಬ್ರೆಸಿವ್ : 80 ಗಾರ್ನೆಟ್ ಮೇಶ್ (70% ನೀರು, 30% ಅಬ್ರೆಸಿವ್)
• ಪ್ರವಾಹದ ವೇಗ : 3 ಲೀಟರ್/ ನಿಮಿಷ (ನಿರಂತರ).
• ನೀರಿನ ಪ್ರವಾಹದ ಮೌಲ್ಯವು ಮಟೀರಿಯಲ್ ನ ವೈಶಿಷ್ಟ್ಯಗಳಲ್ಲಿ ಅವಲಂಬಿಸಿ ಇರುವುದಿಲ್ಲ. ಇದು ಎಲ್ಲ ರೀತಿಯ ಮಟೀರಿಯಲ್ ಗೋಸ್ಕರ ಒಂದೇ ರೀತಿ ಇರುತ್ತದೆ. ವಾಟರ್ ಜೆಟ್ ಕಟಿಂಗ್ ಮಶಿನ್ ನ ವಾಟರ್ ಜೆಟ್ ನ ವೇಗವು ಪಾರಂಪರಿಕ ಮಶಿನ್ ನಲ್ಲಿರುವ ಕಟಿಂಗ್ ಟೂಲ್ ನ ಫೀಡ್ ರೇಟ್ ನಂತೆ ಇರುವುದಿಲ್ಲ.
• ವಾಟರ್ ಜೆಟ್ ಯಂತ್ರಣೆಯು ಒಂದು ಸ್ವಚ್ಫ ಮತ್ತು ಪರಿಸರಕ್ಕೆ ಅನುಕೂಲವಾದ ತಂತ್ರಜ್ಞಾನವಾಗಿದೆ.
ವಾಟರ್ ಜೆಟ್ ಯಂತ್ರಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ ಎರಡು QR ಕೋಡ್ ಗಳನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
ಯಂತ್ರಣೆಯ ವೇಗ
• ಅಲ್ಯುಮಿನಿಯಮ್ (ದಪ್ಪ : 10 ಮಿ.ಮೀ.) : 165 ಮಿ.ಮೀ./ ನಿಮಿಷ.
• ಎಮ್.ಎಸ್. ಶೀಟ್ (ದಪ್ಪ : 5 ಮಿ.ಮೀ.) : 360 ಮಿ.ಮೀ./ ನಿಮಿಷ.
• ಸರ್ವೋತ್ಕೃಷ್ಟ ಕನಿಷ್ಠ ಟಾರಲನ್ಸ್ (ದಪ್ಪ : 5 ಮಿ.ಮೀ.) : ± 0.5 ಮಿ.ಮೀ.
• ಬೇರೆ ಬೇರೆ ಮಟೀರಿಯಲ್ ಗೋಸ್ಕರ ಬೇರೆ ಬೇರೆ ಯಂತ್ರಣೆಯ ವೇಗ ಇರುತ್ತದೆ.
• ಲಭಿಸುವ ಸರ್ವೋತ್ಕೃಷ್ಟ ಕನಿಷ್ಠ ಟಾರಲನ್ಸ್ : ± 0.5 ಮಿ.ಮೀ., ಟೇಪರ್ : 2˚.
• ಅಬ್ರೆಸಿವ್ ಯಾವುದೇ ರೀತಿಯ ಗರಗಸದಂತೆ ತುಂಡು ಮಾಡುವ ಕ್ರಿಯೆಯನ್ನು ಮಾಡಿ ನುಣುಪಾದ ಪ್ರಿಸಿಜನ್ ಸರ್ಫೇಸ್ ನೀಡುತ್ತದೆ. ವಾಟರ್ ಜೆಟ್ ಇದು ಅತ್ಯಂತ ಬಹುಮುಖವಾದ ಪ್ರಕ್ರಿಯೆಯಾಗಿದೆ. ಕಾರಣ ಇದರಲ್ಲಿ ಯಾವುದೇ ರೀತಿಯ ಮಟೀರಿಯಲ್ ಕತ್ತರಿಸುವ ಸಾಮರ್ಥ್ಯವಿದೆ.
ವಾಟರ್ ಜೆಟ್ ಯಂತ್ರಣೆಯ ಮಿತಿ
 
ವಾಟರ್ ಜೆಟ್ ಕಟಿಂಗ್ ನಲ್ಲಿ ಯಾವುದೇ ರೀತಿಯ ಉಷ್ಣಾಂಶವು ತಯಾರಾಗದೇ ಇರುವುದರಿಂದ ಡಿಸ್ಟಾರ್ಶನ್ ಆಗಲಾರದು. ಆದರೆ ಅದರಿಂದ ‘ಫಟಿಗ್’ (Fatigue) ಉಂಟಾಗುವುದು ಖಂಡಿತವಾಗಿಯೂ ಸಾಧ್ಯ.

5_1  H x W: 0 x
ಫಟಿಗ್
ಸೈಕ್ಲಿಕಲ್ ಸ್ಟ್ರೆಸ್ ನಿಂದ ಲೋಹಗಳಲ್ಲಿ ಉಂಟಾಗುವ ಗುಣಮಟ್ಟದ ವ್ಯತ್ಯಾಸವನ್ನು, ಹೆಚ್ಚಿನ ಒತ್ತಡದಿಂದಾಗಿ ಲೋಹಗಳಲ್ಲಿ ಉಂಟಾಗುವ ದೌರ್ಬಲ್ಯವನ್ನು ವರ್ಣಿಸಲು ‘ಫಟಿಗ್’ ಎಂಬ ಶಬ್ದವನ್ನು ಬಳಸಲಾಗುತ್ತದೆ. ನಿರಂತರವಾದ ಒತ್ತಡದಿಂದಾಗಿ ಮೊದಲು ತುಂಬಾ ಚಿಕ್ಕ ಚಿಕ್ಕ ಸೀಳುಗಳು ತಯಾರಾಗುತ್ತವೆ. ನಂತರ ಅವುಗಳು ಬೆಳೆಯುತ್ತಾ ಹೋಗುತ್ತವೆ. ಸ್ವಲ್ಪ ಸಮಯದ ನಂತರ ಅದರಲ್ಲಿ ದೊಡ್ಡ ದೊಡ್ಡ ರಂಧ್ರಗಳು ಉಂಟಾಗುತ್ತವೆ. ಇದರಿಂದಾಗಿ ಲೋಹಗಳ ರಚನೆಯು ಇನ್ನಷ್ಟು ದುರ್ಬಲವಾಗುತ್ತದೆ. ಇದರಿಂದಾಗಿ ಅದು ಅಕಸ್ಮಾತ್ತಾಗಿ ಮುರಿಯುತ್ತದೆ ಮತ್ತು ಪ್ರಕ್ರಿಯೆಯಲ್ಲಿ ಅಡಚಣೆಯು ಉಂಟಾಗುತ್ತದೆ.

6_1  H x W: 0 x
ಉಪಾಯಗಳು
• ಯಂತ್ರಭಾಗಗಳ ಡಿಸೈನ್ ಕನಿಷ್ಠ ಒತ್ತಡವಿರುವಂತೆ ಮಾಡಿರಬೇಕು.
• ಒತ್ತಡ ಇರುವಲ್ಲಿ ಚೂಪಾಗಿರುವ ಮೂಲೆಗಳನ್ನು ಅಳವಡಿಸಬಾರದು.
• ಉಚ್ಚಮಟ್ಟದ ಒತ್ತಡದಿಂದ ಕೂಡಿರುವ ಜಾಗವನ್ನು ತಡೆಯಲು ಯಾವುದೇ ಉಪಾಯ ಇಲ್ಲದಿದ್ದಲ್ಲಿ, ಆ ಜಾಗದಲ್ಲಿ ಕಂಪನಗಳು/ ಆಘಾತಗಳನ್ನು ಕಡಿಮೆ ಮಾಡಲು ಉಚ್ಚ ಗುಣಮಟ್ಟದ ಯಂತ್ರಣೆಯ ಪ್ರಕ್ರಿಯೆಯನ್ನು ಮಾಡಬೇಕು.
• ಒಂದು ವೇಳೆ ಫಟಿಗ್ ನಿಂದ ಬಾಳಿಕೆಯು ಹೆಚ್ಚು ಬೇಕಾದಲ್ಲಿ ಈ ಭಾಗಗಳಿಗೆ ಗ್ರಿಟ್ ಬ್ಲಾಸ್ಟಿಂಗ್ ಮಾಡಬೇಕು.
• ಫಟಿಗ್ ಕಡಿಮೆ ಮಾಡುವ ಮತ್ತು ಯಂತ್ರಭಾಗಗಳ ಬಾಳಿಕೆಯನ್ನು ಹೆಚ್ಚಿಸಲು ಎಲ್ಲಕ್ಕಿಂತಲೂ ಪ್ರಭಾವಶಾಲಿಯಾದ ದಾರಿ ಅಂದರೆ, ಕಡಿಮೆ ಒತ್ತಡದಲ್ಲಿ ಸಿಸ್ಟಮ್ ನಡೆಸುವುದು.
ಮಶಿನ್
ನಮ್ಮ ಹೈ ಟೆಕ್ ಮೂರು ಅಕ್ಷೀಯ ವಾಟರ್ ಜೆಟ್ ಕಟಿಂಗ್ ವ್ಯವಸ್ಥೆಯನ್ನು ವಿಸ್ತಾರವಾದ ಹಂತದಲ್ಲಿನ ಕೆಲಸಗಳಿಗೋಸ್ಕರ ಬಳಸಬಹುದು ಮತ್ತು ನಾವು 200 ಮಿ.ಮೀ. ದಪ್ಪದಷ್ಟು ಯಾವುದೇ ಮಟೀರಿಯಲ್ ಯಂತ್ರಣೆಯನ್ನು ನಿರ್ವಹಿಸಬಲ್ಲೆವು.
ನಾವು ರಕ್ಷಣೆ, ತೈಲ ಮತ್ತು ವಾಯು, ಏರೋಸ್ಟೇಸ್ ಮತ್ತು ಮರೀನ್ ಇಂತಹ ಮಹತ್ವಪೂರ್ಣವಾದ ಉದ್ಯಮಗಳೊಂದಿಗೆ ಇನ್ನಿತರ ವಿವಿಧ ಉದ್ಯಮಗಳಿಗೂ ನಮ್ಮ ಹೈಟೆಕ್ ಸೇವೆಯನ್ನು ಪೂರೈಸುತ್ತೇವೆ.
ಜರ್ಮನಿಯಿಂದ ಆಮದು ಮಾಡಿರುವ ಉಚ್ಚಮಟ್ಟದ ಮಶಿನ್ ಗಾಜು, ಸ್ಟೀಲ್ ಅಥವಾ ಟೈಟ್ಯಾನಿಯಮ್ ನಂತಹ ಯಾವುದೇ ಮಟೀರಿಯಲ್ ಗಳಲ್ಲಿ ಉತ್ಕೃಷ್ಟ ಪರಿಣಾಮವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ಮಶಿನ್ ನ ಕೆಲಸದಲ್ಲಿರುವ ಉಚ್ಚಗುಣಮಟ್ಟದ ನಿಖರತೆಯಿಂದಾಗಿ ಮಟೀರಿಯಲ್ ನ ಅಪವ್ಯಯವಾಗುವುದಿಲ್ಲ ಮತ್ತು ವಾಟರ್ ಜೆಟ್ ಯಂತ್ರಣೆಯಲ್ಲಿರುವ ನಮ್ಮ ಕುಶಲತೆಯನ್ನು ಇದು ನಿರ್ಧರಿಸುತ್ತದೆ. ಸಮತಟ್ಟಾಗಿರುವ ಸರ್ಫೇಸ್ ನಿಂದ ಡ್ರಾಯಿಂಗ್ ನೊಂದಿಗೆ ನಿಖರವಾಗಿ ಹೊಂದಾಣಿಕೆಯಾಗಬಲ್ಲ ಭಾಗಗಳನ್ನು ತಯಾರಿಸಬಲ್ಲದು. (ಸರ್ಫೇಸ್ ಸಮತಟ್ಟಾಗಿರದಿದ್ದಲ್ಲಿ ನಿಖರತೆಯಲ್ಲಿಯೂ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ.) ಕಾರ್ಯವಸ್ತುವಿಗೆ ಉಷ್ಣಾಂಶದಿಂದ ಉಂಟಾಗುವ ಯಾವುದೇ ರೀತಿಯ ಡಿಸ್ಟಾರ್ಶನ್ ನ ಹೊರತಾಗಿ ಪರಿಪೂರ್ಣವಾದ ಪರಿಣಾಮವನ್ನು ನಾವು ನೀಡಬಲ್ಲೆವು. ನಾವು ತಯಾರಿಸಿರುವ ಯಂತ್ರಭಾಗಗಳು ಅಂತಿಮವಾದ ಉತ್ಪಾದನೆಯಾಗಿದೆ ಮತ್ತು ಅದಕ್ಕೆ ಯಾವುದೇ ರೀತಿಯ ಸರ್ಫೇಸಿಂಗ್ ಅಥವಾ ಇನ್ನಿತರ ಯಂತ್ರಣೆಯ ಆವಶ್ಯಕತೆ ಇರುವುದಿಲ್ಲ, ಎಂಬುದೇ ಇದರ ಅರ್ಥವಾಗಿದೆ.

7_1  H x W: 0 x
ಮಶಿನ್ ನ ವಿವರಗಳು
ರೇಟೆಡ್ ಶಕ್ತಿ : 70 HP ಅಂದರೆ 52.199 kW
ಮಶಿನ್ ನ ಹೆಸರು : ವಾಟರ್ ಜೆಟ್ ಜರ್ಮನಿ S3015
ಸಾಮರ್ಥ್ಯ
• ಮಟೀರಿಯಲ್ : ಬಟ್ಟೆ, ರಬರ್, ಫೋಮ್, ಪ್ಲಾಸ್ಟಿಕ್, ಚರ್ಮ, ಕಾಂಪೋಸಿಟ್, ಕಲ್ಲು, ಟೈಲ್, ಗಾಜು, ಲೋಹ, ಕಾಗದ ಇತ್ಯಾದಿ.
• ಗರಿಷ್ಠ ಒತ್ತಡ : 3400 ಬಾರ್
• ದಪ್ಪ : 0.5 ರಿಂದ 200 ಮಿ.ಮೀ.
• ವಿಸ್ತೀರ್ಣ : 150 ಮಿ.ಮೀ. x 3000 ಮಿ.ಮೀ.

ವಾಟರ್ ಜೆಟ್ ಯಂತ್ರಣೆಯ ಉಪಯೋಗ
ಕಲ್ಲುಗಳು
ಇನ್ನಿತರ ಯಾವುದೇ ಪ್ರೊಫೈಲಿಂಗ್ ತಂತ್ರಕ್ಕಿಂತ ವಾಟರ್ ಜೆಟ್ ಕಲ್ಲುಗಳನ್ನು ಕತ್ತರಿಸುವಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದೆ. ಇದರ ಕಾರಣವೆಂದರೆ ಅದರಿಂದ ಲಭಿಸುವ ತೆಳ್ಳಗಿನ ಚೂಪುತನ. ವಾಟರ್ ಜೆಟ್ ನ ಚೂಪುತನವು ತುಂಬಾ ತೆಳ್ಳಗೆ ಅಂದರೆ ಅದರ ಅಗಲ 0.02 ಮಿ.ಮೀ. ನಷ್ಟು ಕಡಿಮೆ ಇರಬಲ್ಲದು. ಇದರಿಂದಾಗಿ ಸ್ಲ್ಯಾಬ್ ನಲ್ಲಿರುವ ಕೌಂಟರ್ ಟಾಪ್ ಭಾಗವನ್ನು ಆ ಜಾಗದಲ್ಲಿ ಹೆಚ್ಚು ನಿರ್ದೋಷವಾಗಿ ಅಳವಡಿಸಬಹುದಾಗಿದೆ. ಈ ರೀತಿಯಲ್ಲಿ ಮಟೀರಿಯಲ್ ಗರಿಷ್ಠ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ವೇಳೆ ಮತ್ತು ಬೆಲೆಯಲ್ಲಿ ಉಳಿತಾಯ ಮಾಡಲಾಗುತ್ತದೆ. ಉದಾಹರಣೆ, ಗ್ರ್ಯಾನೈಟ್, ಅಮೃತ ಶಿಲೆ, ಇಂಜಿನಿಯರಿಂಗ್ ಕಲ್ಲುಗಳು, ಸುಣ್ಣದ ಕಲ್ಲು, ಪೊರ್ಸೆಲಿನ್, ಸಿರಾಮಿಕ್ ಟೈಲ್ ಇತ್ಯಾದಿ.
ಕಾಂಪೊಸಿಟ್ ಮಟೀರಿಯಲ್
ಭಾರವನ್ನು ಹೋಲಿಸಿದಲ್ಲಿ ಉಟ್ಟಮಟ್ಟದ ದೃಢತೆ ಇರುವುದರಿಂದ ಕಾಂಪೊಸಿಟ್ ಕತ್ತರಿಸುವುದು, ಮಿಲ್ಲಿಂಗ್, ರೌಟಿಂಗ್ ಅಥವಾ ಸುಟ್ಟು ಹಾಕುವುದೂ ಕಷ್ಟಕರವಾಗಿರುತ್ತದೆ. ಈ ತಂತ್ರದ ಮೂಲಕ ಉಚ್ಚಮಟ್ಟದ ವೇಗದಿಂದ ಕಡಿಮೆ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯಲಾಗುತ್ತದೆ ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ಉಷ್ಣತೆಯು ತಯಾರಾಗುವುದಿಲ್ಲ. ಇದರಿಂದಾಗಿ ವಾಟರ್ ಜೆಟ್ ಕಟಿಂಗ್ ನ ಬಳಕೆಯಿಂದಾಗಿ ಈ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.
ಎಕ್ಸಾಟಿಕ್ ಲೋಹಗಳು
ಟೈಟ್ಯಾನಿಯಮ್ ಮತ್ತು ನಿಕೇಲ್ ಇವುಗಳಿಂದ ತಯಾರಿಸಿರುವ ಮಿಶ್ರಲೋಹಗಳ ಮಟೀರಿಯಲ್ ವಿಮಾನದ ಭಾಗಗಳಿಗೆ ಬಳಸಲಾಗುತ್ತದೆ. ಕಾರಣ ವಿಮಾನಕ್ಕೆ ಹಗುರವಾದ ಮತ್ತು ದೃಢವಾದ ಮಟೀರಿಯಲ್ ಬೇಕಾಗಿರುತ್ತದೆ. ಇದರಿಂದಾಗಿ ಈ ಕೆಲಸದಲ್ಲಿ ಅಬ್ರೆಸಿವ್ ವಾಟರ್ ಜೆಟ್ ಯಂತ್ರಣೆಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಕಾರಣ ಇದರಲ್ಲಿ ಉಷ್ಣತೆಯಿಂದಾಗಿ ಉಂಟಾಗುವ ಡಿಸ್ಟಾರ್ಶನ್ ನ ಹೊರತಾಗಿ ಮಟೀರಿಯಲ್ ಕತ್ತರಿಸಬಹುದು ಮತ್ತು ಸೂಕ್ತವಾದ ರೀತಿಯಲ್ಲಿ ಕೆಲಸ ಮಾಡಿದಲ್ಲಿ ಅದರ ಮೆಟಲ್ ಫಟಿಗ್ ನ ಸ್ತರವು ಕಡಿಮೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.
ಉದಾಹರಣೆ
ರಕ್ಷಣೆಯ ಕ್ಷೇತ್ರದಲ್ಲಿ ಬಳಸಲಾಗುವ ಹೈ ನೈಟ್ರೋಜನ್ ಸ್ಟೀಲ್ (HNS) ಮಟೀರಿಯಲ್ಲಿರುವ ಯಂತ್ರಣೆಯ ಯೋಜನೆಗೋಸ್ಕರ ಒಂದು ಕಂಪನಿಯವರು ನಮ್ಮನ್ನು ಸಂಪರ್ಕಿಸಿದರು. ನಾವು HNS ಮಟೀರಿಯಲ್ ನ ವಿಶ್ಲೇಷಣೆಯನ್ನು ಮಾಡಿದೆವು ಮತ್ತು ಯೋಜನೆಯ ಕೆಲಸಕ್ಕೆ ಕೊಟೇಶನ್ ಆ ಕಂಪನಿಗೆ ಕಳುಹಿಸಿದೆವು.
ಹೈ ನೈಟ್ರೋಜನ್ ಸ್ಟೀಲ್ ನ (HNS) ಗುಣಧರ್ಮ
• ಉಚ್ಚಮಟ್ಟದ ತುಕ್ಕು ಪ್ರತಿರೋಧಕತೆ.
• ಆಸ್ಟೆನಿಟಿಕ್ ಸ್ಟೆನ್ ಲೆಸ್ ಸ್ಟೀಲ್.
• ನಾನ್ ಮ್ಯಾಗ್ನೆಟಿಕ್.
HNS ನ್ನು ಸೈನ್ಯ ಪಡೆಯಲ್ಲಿ ಯುದ್ಧ ಕವಚ (ಆರ್ಮರ್) ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಸಂಬಂಧಪಟ್ಟ ಕಂಪನಿಯಿಂದ ಖರ್ಚಿನ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ನಾವು ಸೂಚಿಸಿರುವ ಖರ್ಚು ಹೆಚ್ಚಾಗಿದೆ ಮತ್ತು ಕಚ್ಚಾ ವಸ್ತುಗಳ ಬೆಲೆಯೇ ಜಾಸ್ತಿಯಾಗಿದೆ, ಎಂಬುದಾಗಿ ಹೇಳಿ ನಮ್ಮ ಕೊಟೇಶನ್ ತಿರಸ್ಕರಿಸಿದರು. ಅದರ ನಂತರ ಅವರು ಆ ಯೋಜನೆಯನ್ನು ಪ್ಲಾಸ್ಮಾ ಕಟಿಂಗ್ ಸೇವೆ ನೀಡುವ ಇನ್ನೊಂದು ಕಂಪನಿಗೆ ನೀಡಿದರು.
ಪ್ಲಾಸ್ಮಾ ಕಟಿಂಗ್ ಪ್ರಕ್ರಿಯೆ
ಪ್ಲಾಸ್ಮಾ ಆರ್ಕ್ ಕಟಿಂಗ್. ಇದನ್ನು ಪ್ಲಾಸ್ಮಾ ಫ್ಯುಜನ್ ಕಟಿಂಗ್ ಅಥವಾ ಪ್ಲಾಸ್ಮಾ ಕಟಿಂಗ್ ಎಂಬುದಾಗಿಯೂ ಕರೆಯುತ್ತಾರೆ. ಇದೊಂದು ಫ್ಯಾಬ್ರಿಕೇಶನ್ ಪ್ರಕ್ರಿಯೆಯಾಗಿದೆ. ಇದರಲ್ಲಿ ಪ್ಲಾಸ್ಮಾ ಟಾರ್ಚ್ ನಿಂದ ಬಿಡಲಾಗಿರುವ ಸುಪರ್ ಹೀಟೆಡ್, ಆಯೋನೈಜ್ಡ್ ಗಾಳಿಯನ್ನು ಬಳಸಿ ವಿದ್ಯುತ್ ಪ್ರವಾಹವಾಗುವಂತಹ ಮಟೀರಿಯಲ್ ಬಿಸಿ ಮಾಡಿ, ಕರಗಿಸಿ ತಮಗೆ ಬೇಕಾದ ಆಕಾರ ಮತ್ತು ಡಿಸೈನ್ ನಲ್ಲಿ ಕತ್ತರಿಸಲಾಗುತ್ತದೆ.
HNS ಕತ್ತರಿಸಲು ಒಂದು ತುಂಬಾ ಕಠಿಣವಾದ ಮಟೀರಿಯಲ್ ಆಗಿರುತ್ತದೆ. ಕತ್ತರಿಸುವ ಪ್ರಕ್ರಿಯೆಯನ್ನು ಪೂರ್ತಿ ಮಾಡುವಲ್ಲಿ ಪ್ಲಾಸ್ಮಾ ಕಟಿಂಗ್ ಮಶಿನ್ ವಿಫಲಗೊಂಡಿದೆ. ಪ್ಲಾಸ್ಮಾ ಕಟಿಂಗ್ ನಲ್ಲಿ ತಯಾರಾಗಿರುವ ಉಚ್ಚ ಉಷ್ಣಾಂಶದಿಂದಾಗಿ ಮಟೀರಿಯಲ್ ನಲ್ಲಿ ಅನಾವಶ್ಯಕವಾದ ಡಿಸ್ಟಾರ್ಶನ್ ತಯಾರಾಯಿತು. ಇದರಿಂದಾಗಿ ಸಂಬಂಧಪಟ್ಟ ಕಂಪನಿಗೆ ನಷ್ಟವಾಯಿತು. ಇದರಿಂದಾಗಿ ಆ ಕಂಪನಿಯು ನಮ್ಮನ್ನು ಮತ್ತೆ ಸಂಪರ್ಕಿಸಿದರು.
ಸಾಸಾ ಇಂಜಿನಿಯರಿಂಗ್ ನಲ್ಲಿ ನಾವು ಅವರಿಗೆ ವಾಟರ್ ಜೆಟ್ ಯಂತ್ರಣೆಯ ಎಲ್ಲ ಲಾಭಗಳನ್ನು ಮತ್ತು ತಂಪಾಗಿರುವ ಪ್ರಕ್ರಿಯೆಯಾಗಿರುವುದರಿಂದ ಪ್ಲಾಸ್ಮಾ ಕಟಿಂಗ್ ನಿಂದ ಯಂತ್ರಣೆಯನ್ನು ಮಾಡಲಾಗುತ್ತದೆ, ಅಲ್ಲದೇ ಉಚ್ಚ ಉಷ್ಣಾಂಶದಿಂದಾಗಿ ಅನಾವಶ್ಯಕವಾದ ಡಿಸ್ಟಾರ್ಶನ್ ಯಾವುದೇ ರೀತಿಯಲ್ಲಿ ಆಗುವುದಿಲ್ಲ, ಇತ್ಯಾದಿ ಅಂಶಗಳನ್ನು ಮನವರಿಕೆ ಆಗುವಂತೆ ಹೇಳಿದೆವು. ವಾಟರ್ ಜೆಟ್ ಮಶಿನ್ ತುಂಬಾ ಸಾಮರ್ಥ್ಯವುಳ್ಳದ್ದಾಗಿದೆ, ಇದರಿಂದಾಗಿ ಪ್ಲಾಸ್ಮಾ ಕಟಿಂಗ್ ಪ್ರಕ್ರಿಯೆಯ ಇಮ್ಮಡಿ ವೇಗದಿಂದ ಅದರ ಯಂತ್ರಣೆಯ ಪ್ರಕ್ರಿಯೆಯನ್ನು ಮಾಡಲಾಯಿತು. ನಮ್ಮ ಈ ಕೆಲಸದ ರೀತಿಯಿಂದಾಗಿ ಈ ಕಂಪನಿಯು ಪ್ರಭಾವಿತರಾದರು ಮತ್ತು ಅದರಿಂದಾಗಿ ಅವರ ಎಲ್ಲ ಹೈ ವ್ಯಾಲ್ಯೂ ಪ್ರೊಜೆಕ್ಟ್ ಗಳೂ ನಮ್ಮಲ್ಲಿಗೆ ಬರಲಾರಂಭಿಸಿದವು.
@@AUTHORINFO_V1@@