ಡ್ರಿಲ್ಲಿಂಗ್ ಫಿಕ್ಸ್ಚರ್/ಜಿಗ್

@@NEWS_SUBHEADLINE_BLOCK@@

Udyam Prakashan Kannad    20-Nov-2020   
Total Views |
ಈ ತನಕ ನಾವು ಅನೇಕ ವಿಧದ ಡ್ರಿಲ್ಲಿಂಗ್ ಜಿಗ್ ಗಳ ಕುರಿತು ತಿಳಿದುಕೊಂಡೆವು ಮತ್ತು ಅವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಂಡೆವು. ಈ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ವಿಶಿಷ್ಟವಾದ ಡ್ರಿಲ್ಲಿಂಗ್ ಜಿಗ್ ಕುರಿತು ತಿಳಿದುಕೊಂಡೆವು. ವಿಶೇಷವಾಗಿ ರಂಧ್ರವು ಅರ್ಧಂಬರ್ಧ ತುಂಡಾಗುವಾಗ ಇಂತಹ ಕಾರ್ಯವಸ್ತುಗಳಿಗೆ ಜಿಗ್ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಲಾಯಿತು. ಈ ಲೇಖನದಲ್ಲಿ ನಾವು ಲೀಫ್ ಅಥವಾ ಲ್ಯಾಚ್ ಟೈಪ್ ಜಿಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಅರಿತುಕೊಳ್ಳೋಣ. ಈ ರೀತಿಯ ಜಿಗ್ ಗಳ ಆವಶ್ಯಕತೆ ಯಾಕೆ ಮತ್ತು ಯಾವಾಗ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಯುವುದೂ ಅಷ್ಟೇ ಉತ್ಸುಕತೆಯನ್ನು ಉಂಟುಮಾಡುತ್ತದೆ.

1_1  H x W: 0 x
ಲೀಫ್ ಅಥವಾ ಲ್ಯಾಚ್ ಟೈಪ್ ಜಿಗ್ ನಲ್ಲಿರುವ ಪ್ರಮುಖ ಅಂಶಗಳು
1.ಹಿಂಜ್ ಪ್ಲೇಟ್ (ಲೀಫ್) ಒಂದೇ ಕೇಂದ್ರದ ಸುತ್ತಮುತ್ತ ತಿರುಗಿಸಲಾಗುತ್ತದೆ. ಇದರಿಂದಾಗಿ ಕಾರ್ಯವಸ್ತುವನ್ನು ಜಿಗ್ ನಿಂದ ತೆಗೆಯುವುದು ಮತ್ತು ಅಳವಡಿಸುವುದು ಸುಲಭವಾಗುತ್ತದೆ.
2.ಡ್ರಿಲ್ ಬುಶ್ ಮತ್ತು ಕ್ಲ್ಯಾಂಪಿಂಗ್ ಸ್ಕ್ರೂ ಜಿಗ್ ಪ್ಲೇಟ್ ನಲ್ಲಿ ಅಳವಡಿಸಲಾಗುತ್ತದೆ.
3.ಜಿಗ್ ಪ್ಲೇಟ್ ಜಿಗ್ ಬಾಡಿಯಲ್ಲಿ ಮಶಿನ್ ಟೇಬಲ್ ನ ಸರ್ಫೇಸ್ ಗೆ ಸಮಾನಾಂತರವಾಗಿ ಇರುವ ರೀತಿಯಲ್ಲಿ ಒರಗಿಸಲಾಗುತ್ತದೆ.
4.ಜಿಗ್ ಪ್ಲೇಟ್ ಸ್ವಿಂಗ್ ಬೋಲ್ಟ್ ನ ಸಹಾಯದಿಂದ ಕ್ಲ್ಯಾಂಪ್ ಮಾಡಲಾಗುತ್ತದೆ.
5.ಕಾರ್ಯವಸ್ತು ವಿಶೇಷವಾಗಿ ತಯಾರಿಸಿರುವ ಸ್ಕ್ರೂಗಳ ಸಹಾಯದಿಂದ ಕೈಯ ಬಲದಿಂದಲೇ ಕ್ಲ್ಯಾಂಪ್ ಮಾಡಲಾಗುತ್ತದೆ.
6.ಜಿಗ್ ಪ್ಲೇಟ್ ಮತ್ತು ಕಾರ್ಯವಸ್ತು ಇವೆರಡರ ಕ್ಲ್ಯಾಂಪಿಂಗ್ ತುಂಬಾ ವೇಗವಾಗಿ ಆಗುತ್ತದೆ.
ಲೀಫ್ ಅಥವಾ ಲ್ಯಾಚ್ ಟೈಪ್ ಜಿಗ್ ನ ಎರಡು ವಿಧಗಳು
ಅ. ಕಾರ್ಯವಸ್ತು ಜಿಗ್ ಬಾಡಿಯಲ್ಲಿ ಇಡುವುದು ಮತ್ತು ಜಿಗ್ ಪ್ಲೇಟ್ ನಿಂದ ಕ್ಲ್ಯಾಂಪಿಂಗ್ ಮಾಡುವುದು.
ಆ. ಕಾರ್ಯವಸ್ತುವಿನ ಸ್ಥಾನ ಮತ್ತು ಕ್ಲ್ಯಾಂಪಿಂಗ್ ನ ವ್ಯವಸ್ಥೆ ಜಿಗ್ ಪ್ಲೇಟ್ ನಲ್ಲಿಯೇ ಮಾಡುವುದು. ಈ ಲೇಖನದಲ್ಲಿ ನಾವು ಅ ವಿಧದ ಜಿಗ್ (ಚಿತ್ರ ಕ್ರ. 2) ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ನೋಡೋಣ.
ಪ್ರಮುಖ ಬಾಡಿ
ಈ ಬಾಡಿಯನ್ನು ಬೇಸ್ ಪ್ಲೇಟ್ ನಲ್ಲಿ ಅಳವಡಿಸಲಾಗಿದೆ. ಜಿಗ್ ನ ಎಲ್ಲ ಭಾಗಗಳನ್ನು ಈ ಬಾಡಿಯಲ್ಲಿಯೇ ಅಳವಡಿಸಲಾಗಿದೆ. ಈ ಡಿಸೈನ್ ನಲ್ಲಿ ಬಾಡಿ ವೆಲ್ಡಿಂಗ್ ಮಾಡಿ ತಯಾರಿಸಲಾಗಿದ್ದರಿಂದ ಈ ಬಾಡಿಯನ್ನು ಸ್ಟ್ರೇಸ್ ರಿಲೀವ್ ಮಾಡುವುದೂ ಅತ್ಯಾವಶ್ಯಕವಾಗಿದೆ. ಆದರೆ ಒತ್ತಡವನ್ನು ಕಡಿಮೆ ಮಾಡದಿದ್ದರೆ ಅದು ಕಾಲಾಂತರದಲ್ಲಿ ಜಿಗ್ ನ ಮಹತ್ವದ ನಿಯಂತ್ರಿಸಲ್ಪಟ್ಟ ಮಾಪನಗಳು ಬದಲಾಯಿಸಲ್ಪಡುತ್ತವೆ ಮತ್ತು ಅದರಲ್ಲಿ ತಯಾರಿಸಿರುವ ಕಾರ್ಯವಸ್ತುಗಳನ್ನು ರಿಜೆಕ್ಟ್ ಮಾಡಲಾಗುತ್ತವೆ. ಈ ಬಾಡಿ ಬೇಸ್ ಪ್ಲೇಟ್ ನಲ್ಲಿ ಸ್ಕ್ರೂ ಮತ್ತು ಡಾವೆಲ್ ನ ಸಹಾಯದಿಂದ ಅಳವಡಿಸಲಾಗಿದೆ. ವಿವಿಧ ಭಾಗಗಳನ್ನು ಒಟ್ಟಾಗಿ ಅಳವಡಿಸಿ ಮಾಪನಗಳನ್ನು ನಿಯಂತ್ರಿಸಲ್ಪಡುವಾಗ, ಡಾವೆಲಿಂಗ್ ಮಾಡಲೇ ಬೇಕಾಗುತ್ತದೆ. ಕಾರಣ ಒಂದು ವೇಳೆ ಸ್ಕ್ರೂ ಸಡಿಲ ಮಾಡಿ ಮತ್ತೆ ದೃಢ ಮಾಡಿದಲ್ಲಿ ನಿಯಂತ್ರಿಸಲ್ಪಟ್ಟ ಮಾಪನವು ಬದಲಾಗಬಹುದು. ಮೊದಲಾಗಿ ಬೇಸ್ ಪ್ಲೇಟ್ ನಲ್ಲಿ ಲೊಕೇಟರ್ ಅಳವಡಿಸಲು ಇರುವ ØD1H7 ರಂಧ್ರವನ್ನು ಮಾಡಲಾಗಿದೆ. ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಸ್ವಿಂಗ್ ಬೋಲ್ಟ್ ನ ಬದಿಯಲ್ಲಿ ಮತ್ತು ಕೆಳಭಾಗಕ್ಕೆ ಸಮಾನಾಂತರವಾಗಿರುವ ಕಠಿಣ ಪ್ಯಾಡ್ 1 ಮತ್ತು 2 ಈ ವಿಧದ ಗ್ರೈಂಡ್ ಮಾಡಲಾಗುತ್ತವೆ, ಇಂದರಿಂದಾಗಿ ಜಿಗ್ ಪ್ಲೇಟ್ ನಲ್ಲಿರುವ ಕಠಿಣ ಪ್ಯಾಡ್ ಬಾಡಿಯಲ್ಲಿರುವ ಕಠಿಣವಾದ ಪ್ಯಾಡ್ 1 ರಲ್ಲಿ ಒರಗಿಸಲಾಗುತ್ತದೆ, ಆಗ ಜಿಗ್ ಪ್ಲೇಟ್ ನೆಲದ ಮೇಲ್ಭಾಗಕ್ಕೆ ಅಂದರೆ A ಸರ್ಫೇಸ್ ಗೆ 0.02 ಮಿ.ಮೀ.ನಲ್ಲಿ ಸಮಾನಾಂತರವಾಗಿರಬಹುದು. ಬಾಡಿಯಲ್ಲಿ ಎಡ ಬದಿಗೆ ಕಠಿಣ ಹಿಂಜ್ ಪಿನ್ ಅಳವಡಿಸಲಾಗಿದೆ, ಎಂಬುದು ತಮ್ಮ ಗಮನಕ್ಕೆ ಬರಬಹುದು. ಪ್ರತಿಯೊಂದು ಕಾರ್ಯವಸ್ತುಗೆ ಯಂತ್ರಣೆ ಮಾಡುವಾಗ ಈ ಜಿಗ್ ಪ್ಲೇಟ್ ನ ಚಟುವಟಿಕೆ ಎರಡು ಬಾರಿ ಆಗುತ್ತದೆ ಮತ್ತು ಇದರಿಂದಾಗಿ ಹಿಂಜ್ ಪಿನ್ ಬಾಡಿಯಲ್ಲಿ ತಿರುಗುವಾಗ ಬಾಡಿಯಲ್ಲಿರುವ ರಂಧ್ರವು ಸವೆದು ದೊಡ್ಡದಾಗಬಾರದು, ಎಂಬುದಕ್ಕೋಸ್ಕರ Ød2H7 ರಂಧ್ರಗಳಲ್ಲಿ ಎರಡು ಕಠಿಣ ಬುಶ್ (ಚಿತ್ರ ಕ್ರ. 2 ರಲ್ಲಿರುವ ಕ್ರ. 6) ಅಳವಡಿಸಲಾಗಿದೆ. ಬಾಡಿಯಲ್ಲಿರುವ ಕಠಿಣ ಬುಶ್ ಕ್ರ. 6 ಮತ್ತು ಜಿಗ್ ಪ್ಲೇಟ್ ನಲ್ಲಿ ಅಳವಡಿಸಿರುವ ಕಠಿಣ ಪ್ಯಾಡ್ ಕ್ರ. 5 ಇವೆರಡು ಭಾಗಗಳು ಗ್ರೈಂಡ್ ಮಾಡಿ ಬಾಡಿ ಮತ್ತು ಜಿಗ್ ಪ್ಲೇಟ್ ಈ ಎರಡರ ಎಡ ಬದಿಯ ಫಿಟ್ H7/g6 ರಲ್ಲಿ ನಿಯಂತ್ರಿಸಲಾಗಿದೆ.

3_1  H x W: 0 x
ಜಿಗ್ ಪ್ಲೇಟ್
ಜಿಗ್ ಪ್ಲೇಟ್ ಮೈಲ್ಡ್ ಸ್ಟೀಲ್ ನಿಂದ ತಯಾರಿಸಲಾಗುತ್ತದೆ. ಇದರಿಂದಾಗಿ ಅದು ಕಠಿಣ ಇರುವುದಿಲ್ಲ ಮತ್ತು ಕಠಿಣ ಮಾಡುವುದೂ ಸಾಧ್ಯವಿಲ್ಲ. ಆದುದರಿಂದ ಘರ್ಷಣೆ ಇರುವಲ್ಲಿ ಕಠಿಣ ಲೈನರ್ ಅಥವಾ ಕಠಿಣ ಪ್ಯಾಡ್ ಉಪಯೋಗಿಸಬೇಕಾಗುತ್ತದೆ. ಜಿಗ್ ಪ್ಲೇಟ್ ನ ಬಲ ಬದಿಯಲ್ಲಿ ಸ್ವಿಂಗ್ ಬೋಲ್ಟ್ ಇದೆ. ಸ್ವಿಂಗ್ ಬೋಲ್ಟ್ ನ ಹತ್ತಿರ ವ್ಯೂ X ನಲ್ಲಿ 3 ಮತ್ತು 4 ಕ್ರಮಾಂಕದ ಕಠಿಣ ಪ್ಯಾಡ್ ತೋರಿಸಲಾಗಿದೆ. ಈ ಪ್ಯಾಡ್ ಗ್ರೈಂಡಿಂಗ್ ಮಾಡಿ ಬಾಡಿ ಮತ್ತು ಜಿಗ್ ಪ್ಲೇಟ್ ಈ ಎರಡಲ್ಲಿರುವ ಫಿಟ್ H7/g6 ರಲ್ಲಿ ನಿಯಂತ್ರಿಸಲಾಗಿದೆ. H7/g6 ಈ ಫಿಟ್ ನಿಂದಾಗಿ ಜಿಗ್ ಪ್ಲೇಟ್ ನ ಚಟುವಟಿಕೆಯು ಸಹಜವಾಗಿ (ಗೈಡ್ ಫಿಟ್) ಮತ್ತು ನಿಯಂತ್ರಿಸಲ್ಪಡುತ್ತದೆ.
ಈಗ ನಾವು ಜಿಗ್ ಪ್ಲೇಟ್ ನ ಎಡ ಬದಿಯ ಕುರಿತು ವಿಚಾರ ಮಾಡೋಣ. ಎಡ ಬದಿಗೆ ಬಿಜಾಗರಿಯ (ಹಿಂಜ್) ಕೇಂದ್ರ ಬಿಂದುವಿದೆ. ಅದರ ಸುತ್ತಮುತ್ತ ಜಿಗ್ ಪ್ಲೇಟ್ ತಿರುಗಿಸಲಾಗುತ್ತದೆ. ಹಿಂಜ್ ಪಿನ್ ಗ್ರಬ್ ಸ್ಕ್ರೂಗಳ ಸಹಾಯದಿಂದ ಜಿಗ್ ಪ್ಲೇಟ್ ನಲ್ಲಿ ದೃಢವಾಗಿ ಅಳವಡಿಸಲಾಗಿದೆ. ಬುಶ್ ಕ್ರ. 6 ನ್ನು ಬಾಡಿಯಲ್ಲಿ ನೀಡಿದ್ದರಿಂದ ಹಿಂಜ್ ಪಿನ್ ತುಂಬಾ ಹೆಚ್ಚು ದೂರದಲ್ಲಿ ಗೈಡ್ ಆಗುತ್ತದೆ. ಇದರಿಂದಾಗಿ ಜಿಗ್ ಪ್ಲೇಟ್ ನ ಚಟುವಟಿಕೆಗಳು ತುಂಬಾ ನಿಖರವಾಗುತ್ತವೆ. ಎಡಬದಿಯಲ್ಲಿರುವ ಮತ್ತು ಬಲಬದಿಯಲ್ಲಿರುವ H7/ g6 ಫಿಟ್ ಒಂದೇ ಕೇಂದ್ರ ಬಿಂದುವಿನಲ್ಲಿ ಇರುವುದೂ ಅತ್ಯಾವಶ್ಯಕವಾಗಿದೆ.
ಜಿಗ್ ಪ್ಲೇಟ್, ಸ್ವಿಂಗ್ ಬೋಲ್ಟ್ ಮತ್ತು ವಿಂಗ್ ನಟ್ ಗಳ ಸಹಾಯದಿಂದ ಕಠಿಣ ಪ್ಯಾಡ್ ಕ್ರ. 1 ರಲ್ಲಿ ದೃಢವಾಗಿ ಹಿಡಿಯಬಹುದು.
ಜಿಗ್ ಪ್ಲೇಟ್ ಬಾಡಿಯಲ್ಲಿ ಯೋಗ್ಯವಾಗಿ ಅಳವಡಿಸಿದನಂತರ ಹಾಗೆಯೇ ಬಾಡಿಯು ಬೇಸ್ ಪ್ಲೇಟ್ ನಲ್ಲಿ ಸ್ಕ್ರೂ ಮತ್ತು ಡಾವೆಲ್ ನ ಸಹಾಯದಿಂದ ಅಳವಡಿಸಿದನಂತರ ಜಿಗ್ ಪ್ಲೇಟ್ ನಲ್ಲಿ ಜಿಗ್ ಬುಶ್ ಅಳವಡಿಸಲು ಬೇಕಾಗುವ 3 ರಂಧ್ರಗಳನ್ನು H7 ಮಾಪನದಲ್ಲಿ ಮಾಡಲಾಗುತ್ತವೆ. ಈ ರಂಧ್ರಗಳನ್ನು ತಯಾರಿಸುವಾಗ ಬೇಸ್ ಪ್ಲೇಟ್ ನಲ್ಲಿರುವ ØD1H7 ಇದರ ರೆಫರನ್ಸ್ ಪಡೆಯಲಾಗುತ್ತದೆ. ØD1H7 ರಂಧ್ರವನ್ನು ಮಾಡುವಾಗ ಎರಡೂ ಬದಿಗಳಲ್ಲಿರುವ H7/g6 ಇದರ ರೆಫರನ್ಸ್ ಪಡೆಯಬೇಕು. ಎರಡೂ ಬದಿಗಳಲ್ಲಿರುವ H7/g6 ಮತ್ತು ØD1H7 ಒಂದೇ ರೇಖೆಯಲ್ಲಿರಬೇಕು.
ವಿಶಿಷ್ಟವಾದ ಕ್ಲ್ಯಾಂಪಿಂಗ್ ಸ್ಕ್ರೂ
ಈ ವಿಶಿಷ್ಟವಾದ ಸ್ಕ್ರೂ ಕೆಳಗೆ ಫ್ಲೋಟಿಂಗ್ ಪ್ಯಾಡ್ ಅಳವಡಿಸಲಾಗಿದೆ. ಇದಕ್ಕೋಸ್ಕರ ಸ್ಕ್ರೂನ ಮುಂಭಾಗಕ್ಕೆ ವಿಶಿಷ್ಟವಾದ ಯಂತ್ರಣೆಯನ್ನು ಮಾಡಲಾಗಿದೆ. ಇಂತಹ ಫ್ಲೋಟಿಂಗ್ ಪ್ಯಾಡ್ ಪ್ರಮಾಣೀಕರಿಸಿಯೇ ಸಿಗುತ್ತದೆ. ಫ್ಲೋಟಿಂಗ್ ಪ್ಯಾಡ್ ಮತ್ತು ಸ್ಕ್ರೂವಿನ ಮುಂಭಾಗವು ಫ್ಲೇಮ್ ಕಠಿಣ ಮಾಡಲಾಗಿರುತ್ತದೆ. ಸ್ಕ್ರೂ ಟಫನ್ ಮಾಡಲಾಗಿರುತ್ತದೆ. ಇದಕ್ಕೋಸ್ಕರ 41Cr4 ಮಟೀರಿಯಲ್ ಉಪಯೋಗಿಸಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಕ್ಲ್ಯಾಂಪಿಂಗ್ ಕೈಯಿಂದಲೇ ಮಾಡಬೇಕು, ಅದಕ್ಕೆ ಸ್ಪೇನರ್ ಬಳಸಬಾರದು. ಸ್ಪೇನರ್ ಬಳಸಿದಲ್ಲಿ ಜಿಗ್ ಪ್ಲೇಟ್ ಬಗ್ಗುವ ಸಾಧ್ಯತೆ ಇರುತ್ತದೆ.

4_1  H x W: 0 x
ಕಚ್ಚುಗಳಿರುವ ಬುಶ್
ಜಿಗ್ ಪ್ಲೇಟ್ ಮತ್ತು ವಿಶಿಷ್ಟ ಸ್ಕ್ರೂನಲ್ಲಿ ಘರ್ಷಣೆಯಾಗುತ್ತಿದ್ದಲ್ಲಿ ಜಿಗ್ ಪ್ಲೇಟ್ ನಲ್ಲಿ ಕಚ್ಚುಗಳಿರುವ ವಿಶಿಷ್ಟ ಬುಶ್ ಬಳಸಲಾಗುತ್ತದೆ. ಇದಕ್ಕೆ ಎರಡು ಕಾರಣಗಳಿವೆ.
1. ಸ್ಕ್ರೂಗಳ ಮಟೀರಿಯಲ್ 41Cr4 ಇದೆ ಮತ್ತು ಜಿಗ್ ಪ್ಲೇಟ್ ನ ಮಟೀರಿಯಲ್ ಮೈಲ್ಡ್ ಸ್ಟೀಲ್ (M.S.) ಆಗಿರುತ್ತದೆ. ಇದರಿಂದಾಗಿ ಮೈಲ್ಡ್ ಸ್ಟೀಲ್ ನ ಜಿಗ್ ಪ್ಲೇಟ್ ಹಾಳಾಗಬಹುದು. ಜಿಗ್ ಪ್ಲೇಟ್ ಮತ್ತೆ ತಯಾರಿಸುವುದು ತುಂಬಾ ಖರ್ಚಿದ್ದಾಗಿದೆ ಹಾಗೆಯೇ ಹೆಚ್ಚು ಸಮಯವನ್ನು ವ್ಯರ್ಥ ಮಾಡುವ ಕೆಲಸವಾಗಿದೆ. ಆದರೆ ಆದಕ್ಕೆ ಹೋಲಿಸಿದರೆ ಬುಶ್ ಬದಲಾಯಿಸುವುದು ಸುಲಭವಾಗಿದೆ.
2. ಕಚ್ಚುಗಳಿರುವ ಬುಶ್ ನ ಮಟೀರಿಯಲ್ ಕೂಡಾ 41Cr4 ಆಗಿರುವುದರಿಂದ ಅದು ಹೆಚ್ಚು ಬಾಳಿಕೆ ಬರಬಹುದು. ಕಚ್ಚುಗಳಿರುವ ಬುಶ್ ವಿರುದ್ಧವಾಗಿ ಅಳವಡಿಸುವ ಕಾರಣವೆಂದರೆ, ವಿಶಿಷ್ಟವಾದ ಸ್ಕ್ರೂನಿಂದ ಕಾರ್ಯವಸ್ತುವನ್ನು ಹಿಡಿಯುವಾಗ ಕಾರ್ಯವಸ್ತುವಿನ ಪ್ರಕ್ರಿಯೆಯು ಮೇಲ್ಭಾಗದಲ್ಲಿ ನಿರ್ವಹಿಸಲ್ಪಡುತ್ತದೆ. ಆದುದರಿಂದ ಕಚ್ಚುಗಳಿರುವ ಬುಶ್ ನ ಕಾಲರ್ ಒಂದು ವೇಳೆ ಜಿಗ್ ಪ್ಲೇಟ್ ನ ಮೇಲ್ಭಾಗದಲ್ಲಿದ್ದಲ್ಲಿ ಅದು ಜಿಗ್ ಪ್ಲೇಟ್ ನಿಂದ್ ಹೊರಗೆ ಬರಬಹುದು. ಇದು ಪುಲರ್ ನಂತೆಯೇ ಕೆಲಸ ನಿರ್ವಹಿಸಬಹುದು. ಅದಕ್ಕೋಸ್ಕರವೇ, ಕಚ್ಚುಗಳಿರುವ ಬುಶ್ ಜಿಗ್ ಪ್ಲೇಟ್ ನ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಬುಶ್ ತಿರುಗಬಾರದು, ಎಂಬುದಕ್ಕಾಗಿ ಚಿಕ್ಕ ಡಾವೆಲ್ ಅಳವಡಿಸಲಾಗಿದೆ.
ಲೊಕೇಟರ್
ಕಾರ್ಯವಸ್ತುವಿನ ಲೊಕೇಟರ್ ನ ವ್ಯಾಸವು H7 ರಲ್ಲಿ ನಿಯಂತ್ರಿಸಲಾಗಿದೆ. ಇದರಿಂದಾಗಿ ಲೊಕೇಟರ್ ನ ವ್ಯಾಸ g6 ರಲ್ಲಿ ನಿಯಂತ್ರಿಸಲಾಗಿದೆ. ಲೊಕೇಟರ್ ಪೂರ್ಣವಾಗಿ ಕಠಿಣ ಮಾಡಿ ಗ್ರೈಂಡ್ ಮಾಡಲಾಗಿದೆ. ಲೊಕೇಟರ್ ನ ØD1g6 ಮತ್ತು ಕಾರ್ಯವಸ್ತು ಲೊಕೇಟರ್ ನ ಯಾವ ವ್ಯಾಸದಲ್ಲಿ ಅಳವಡಿಸಲ್ಪಡುತ್ತದೆಯೋ, ಆ ವ್ಯಾಸವು ಸಿಮಿಟ್ರಿಕ್ ಇರುವುದೂ ಅತ್ಯಾವಶ್ಯಕವಾಗಿದೆ.
ವಿಶಿಷ್ಟವಾದ ಪಿನ್
ಅನೇಕ ಬಾರಿ ಈ ವಿಧದ ಪಿನ್ ಬಳಸಲಾಗುತ್ತದೆ. ಕಾರ್ಯವಸ್ತುವಿನಲ್ಲಿ ಮೊದಲನೇ ರಂಧ್ರವನ್ನು ಮಾಡಿದ ನಂತರ ಆ ರಂಧ್ರದಲ್ಲಿ ಪಿನ್ ಅಳವಡಿಸಿ ಉಳಿದಿರುವ ರಂಧ್ರಗಳನ್ನು ಮಾಡಲಾಗುತ್ತದೆ. ಈ ಪಿನ್ ಗಳು ರಂಧ್ರಗಳಲ್ಲಿ ಅಳವಡಿಸಿದ್ದರಿಂದ ಇನ್ನಿತರ ರಂಧ್ರಗಳ ಡ್ರಿಲ್ಲಿಂಗ್ ಮಾಡುವಾಗ ಕಾರ್ಯವಸ್ತು ಅಲುಗಾಡುವುದಿಲ್ಲ. ಇದರಿಂದಾಗಿ ರಂಧ್ರಗಳ ಪರಸ್ಪರ ಸಂಬಂಧವು ನಿರ್ದೋಷವಾಗಿ ಲಭಿಸುತ್ತದೆ. ಈ ಪಿನ್ ಜಿಗ್ ಬುಶ್ ನಲ್ಲಿ ಗೈಡ್ ಆಗುತ್ತದೆ ಮತ್ತು ಕಾರ್ಯವಸ್ತುವಿನ ರಂಧ್ರದಲ್ಲಿ ಲೊಕೇಟ್ ಆಗುತ್ತದೆ.

ಫೂಲ್ ಪ್ರೂಫಿಂಗ್ ಪಿನ್
ಈ ಜಿಗ್ ನಲ್ಲಿ ಫುಲ್ ಪ್ರೂಫಿಂಗ್ ಪಿನ್ ನೀಡಲಾಗಿದೆ. ವಿವಿಧ ರೀತಿಯಲ್ಲಿ ಫುಲ್ ಪ್ರೂಫಿಂಗ್ ಮಾಡಲಾಗುತ್ತದೆ. ಇದರ ಸೂಕ್ತವಾದ ಉಪಯೋಗವನ್ನು ಮಾಡಿದಲ್ಲಿ ಕಾರ್ಯವಸ್ತು ತಪ್ಪು ರೀತಿಯಲ್ಲಿ ಜಿಗ್ ನಲ್ಲಿ (ಚಿತ್ರ ಕ್ರ. 3) ಅಳವಡಿಸುವುದು ಅಸಾಧ್ಯವಾಗಿದೆ. ಚುಟುಕಾಗಿ ಹೇಳುವುದಾದರೆ ಜಿಗ್ ನ ಕುರಿತು ಸ್ವಲ್ಪವೂ ಮಾಹಿತಿ ಇಲ್ಲದಿರುವವನೂ ಕೂಡಾ ಕಾರ್ಯವಸ್ತು ಯೋಗ್ಯರೀತಿಯಲ್ಲಿ ಜಿಗ್ ನಲ್ಲಿ ಅಳವಡಿಸಬಲ್ಲನು. ನಮ್ಮಲ್ಲಿರುವ ಜಿಗ್ ನಲ್ಲಿ ಕಾರ್ಯವಸ್ತುವನ್ನು ವಿರುದ್ಧವಾಗಿ ಅಳವಡಿಸುವುದು ಸಾಧ್ಯವೇ ಇಲ್ಲ.
ಈ ಜಿಗ್ ನಲ್ಲಿ ಜಿಗ್ ಪ್ಲೇಟ್ ಸ್ಟಾಪ್ ನಲ್ಲಿ ಒರಗಿಸಲಾಗಿರುತ್ತದೆ. ಇದರಿಂದಾಗಿ ಕಾರ್ಯವಸ್ತು ಸಹಜವಾಗಿ ಜಿಗ್ ನಲ್ಲಿ ಯೋಗ್ಯ ರೀತಿಯಲ್ಲಿ ಇಡಲಾಗುತ್ತದೆ. ನಂತರ ಈ ಜಿಗ್ ಪ್ಲೇಟ್ ತಿರುಗಿಸಿ ರೆಸ್ಟ್ ಪ್ಯಾಡ್ ಒಂದರಲ್ಲಿ ಒರಗಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಸ್ವಿಂಗ್ ಬೋಲ್ಟ್ ಹೆವಿ ಜಿಗ್ ಪ್ಲೇಟ್ ನಲ್ಲಿ ತಂದು ವಿಂಗ್ ನಟ್ ನ ಸಹಾಯದಿಂದ ಜಿಗ್ ಪ್ಲೇಟ್ ಕ್ಲ್ಯಾಂಪ್ ಮಾಡಲಾಗುತ್ತದೆ ಮತ್ತು ನಂತರ ವಿಶಿಷ್ಟ ಕ್ಲ್ಯಾಂಪಿಂಗ್ ಸ್ಕ್ರೂನ ಸಹಾಯದಿಂದ ಕಾರ್ಯವಸ್ತುವನ್ನು ಕ್ಲ್ಯಾಂಪ್ ಮಾಡಲಾಗುತ್ತದೆ. ನಂತರ ಕಾರ್ಯವಸ್ತುವಿನಲ್ಲಿ ಮೊದಲ ರಂಧ್ರವನ್ನು ಮಾಡಲಾಗುತ್ತದೆ. ಅದರ ನಂತರ ವಿಶಿಷ್ಟ ಪಿನ್ ಹಾಕಿ ಉಳಿದಿರುವ ರಂಧ್ರಗಳನ್ನು ಮಾಡಲಾಗುತ್ತದೆ. ಇದಾದನಂತರ ಪಿನ್ ಹೊರಗೆ ತೆಗೆಯಲಾಗುತ್ತದೆ. ವಿಶಿಷ್ಟ ಕ್ಲ್ಯಾಂಪಿಂಗ್ ಸ್ಕ್ರೂ ಸಡಿಲ ಮಾಡಲಾಗುತ್ತದೆ. ಇದರಿಂದಾಗಿ ವಿಂಗ್ ನಟ್ ಸಡಿಲ ಮಾಡುವುದು ಸುಲಭವಾಗುತ್ತದೆ. ಜಿಗ್ ಪ್ಲೇಟ್ ತಿರುಗಿಸಿ ಸ್ಟಾಪರ್ ನಲ್ಲಿ ಒರಗಿಸಲಾಗುತ್ತದೆ. ಈಗ ಕಾರ್ಯವಸ್ತು ಸಹಜವಾಗಿ ಹೊರಗೆ ತೆಗೆಯುವುದು ಸಾಧ್ಯವಾಗಿದೆ. ಈ ಜಿಗ್ ನಲ್ಲಿ ಕ್ಲ್ಯಾಂಪಿಂಗ್ ಮಾಡಲು ಸ್ಪೇನರ್ ನ ಆವಶ್ಯಕತೆ ಇರುವುದಿಲ್ಲ. ಕಾರ್ಯವಸ್ತು ಹೊರಗೆ ತೆಗೆದ ನಂತರ ಜಿಗ್ ನಲ್ಲಿ ಬಿದ್ದಿರುವ ಚಿಪ್ ಬ್ರಶ್ ನಿಂದ ತೆಗೆಯಬೇಕು. ಈ ಜಿಗ್ ನಲ್ಲಿ ಕಾರ್ಯವಸ್ತುವಿನ ಲೊಕೇಶನ್ ಜಿಗ್ ಬಾಡಿಯಲ್ಲಿ ಇಡಲಾಗಿದೆ ಮತ್ತು ಕ್ಲ್ಯಾಂಪಿಂಗ್ ಜಿಗ್ ಪ್ಲೇಟ್ ನಿಂದ ಮಾಡಲಾಗುತ್ತದೆ. ಮುಂದಿನ ಲೇಖನದಲ್ಲಿ ಇನ್ನೊಂದು ವಿಧದ ಜಿಗ್, ಅದರಲ್ಲಿ ಕಾರ್ಯವಸ್ತುವಿನ ಲೊಕೇಶನ್ ಮತ್ತು ಕ್ಲ್ಯಾಂಪಿಂಗ್ ನ ವ್ಯವಸ್ಥೆ ಇರುವ ಜಿಗ್ ಪ್ಲೇಟ್ ನಲ್ಲಿಯೇ ಮಾಡಿ ಜಿಗ್ ಹೇಗೆ ಕೆಲಸ ನಿರ್ವಹಿಸುತ್ತದೆ, ಎಂಬುದನ್ನು ನೋಡಲಿದ್ದೇವೆ.
@@AUTHORINFO_V1@@