ಲೋಹಕಾರ್ಯದ ಆಗಸ್ಟ್ 2020 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ಇಂಡೆಕ್ಸಿಂಗ್ ನ ವಿಧಗಳ ಡ್ರಿಲ್ ಜಿಗ್ ಹೇಗೆ ಕೆಲಸ ನಿರ್ವಹಿಸುತ್ತದೆ, ಎಂಬುದನ್ನು ತಿಳಿದುಕೊಂಡೆವು. ಸಪ್ಟೆಂಬರ್ 2020 ರ ಸಂಚಿಕೆಯಲ್ಲಿ ಇಂಡೆಕ್ಸಿಂಗ್ ಮಾಡಲು ಬಳಸಲಾಗುವ ಅನೇಕ ವಿಧದ ವ್ಯವಸ್ಥೆಯನ್ನು ತಿಳಿದುಕೊಂಡೆವು. ಈ ವಿವಿಧ ವ್ಯವಸ್ಥೆಗಳನ್ನು ಆವಶ್ಯಕತೆಗೆ ತಕ್ಕಂತೆ ತಯಾರಿಸಬಹುದು. ಡಿಸೈನರ್ ತನ್ನ ಸ್ವಂತದ ವಿವಿಧ ಕಲ್ಪನೆಗಳಿಂದ ಇಂತಹ ವ್ಯವಸ್ಥೆಯನ್ನು ವಿಕಸಿಸುತ್ತಾನೆ ಮತ್ತು ಅವನ ಯಶಸ್ವಿಯಾದ ಕೆಲಸವೇ ಅದನ್ನು ಪರಿಪೂರ್ಣವಾಗಿ ಮಾಡುತ್ತದೆ.
ಈ ಲೇಖನದಲ್ಲಿ ಒಂದು ವಿಶಿಷ್ಟವಾದ ಯಂತ್ರಣೆಯನ್ನು ಮಾಡಲು ಯಾವ ವಿಧದ ಜಿಗ್ ತಯಾರಿಸಬೇಕು ಎಂಬುದರ ಕುರಿತು ವಿವರಗಳನ್ನು ತಿಳಿದುಕೊಳ್ಳೋಣ. ಚಿತ್ರ ಕ್ರ. 1 ರಲ್ಲಿ ಕಾರ್ಯವಸ್ತುವನ್ನು ತೋರಿಸಲಾಗಿದೆ. ಇದರ ಎಲ್ಲ ವ್ಯಾಸಗಳು ಮತ್ತು ಇನ್ನಿತರ ಮಾಪನಗಳ ಯಂತ್ರಣೆಯು ಪೂರ್ತಿಯಾಗಿದೆ. ವ್ಯಾಸವನ್ನು 30 ಮಿ.ಮೀ. H7 ರಲ್ಲಿ ನಿಯಂತ್ರಿಸಲಾಗಿದೆ. ಈ ಕಾರ್ಯವಸ್ತುವಿನಲ್ಲಿ 10 ಮಿ.ಮೀ. ವ್ಯಾಸದ 10 ಮಿ.ಮೀ. ಆಳವಿರುವ ರಂಧ್ರವಿದೆ. ಇದರ ವೈಶಿಷ್ಟ್ಯವೆಂದರೆ, ಈ ರಂಧ್ರವು ಅರ್ಧಂಬರ್ಧ ತುಂಡಾಗಿದೆ. ಈ ರಂಧ್ರವನ್ನು ತಯಾರಿಸುವಾಗ ಅದಕ್ಕೆ ಬೇಕಾಗಿರುವ ಜಿಗ್ ತಯಾರಿಸುವುದು ಒಂದು ಸವಾಲಾಗಿದೆ. ಕಾರಣ ಡ್ರಿಲ್ ಗೆ ಜಿಗ್ ಬುಶ್ ನ ಗೈಡ್ ಕಾರ್ಯವಸ್ತುವಿನ ಮೇಲ್ಭಾಗದ ಸರ್ಫೇಸ್ ತನಕ ಸಿಗುತ್ತದೆ. ಒಂದು ಬಾರಿ ಡ್ರಿಲ್ ಕಾರ್ಯವಸ್ತುವಿನ ಒಳಗೆ ಹೊದಲ್ಲಿ ಡ್ರಿಲ್ ನ ಒಂದು ಬದಿಯಲ್ಲಿ ಯಂತ್ರಣೆಯ ಫೋರ್ಸ್ ಕಾರ್ಯನಿರತವಾಗಿದ್ದರಿಂದ ಡ್ರಿಲ್ ವಿರುದ್ಧ ದಿಕ್ಕಿನಲ್ಲಿ ಬಗ್ಗಬಹುದ ಅಥವಾ ತುಂಡಾಗಬಹುದು. ಡ್ರಿಲ್ ತುಂಡಾಗದಿದ್ದರೂ ಕೂಡಾ ತಯಾರಿಸಿರುವ ರಂಧ್ರಗಳು ಅಂಕ-ಡೊಂಕಾಗುತ್ತವೆ. ಡ್ರಿಲ್ ನ ಬಾಳಿಕೆಯೂ ಕಡಿಮೆಯಾಗಬಹುದು. ಈ ರಂಧ್ರಗಳನ್ನು ತಯಾರಿಸಲು A ಮತ್ತು B ಎಂಬ ಎರಡು ಪರ್ಯಾಯಗಳಿವೆ.
ಪರ್ಯಾಯ A
ಚಿತ್ರ ಕ್ರ. 2 ರಲ್ಲಿ 10 ಮಿ.ಮೀ. ವ್ಯಾಸದ ರಂಧ್ರಗಳ ಯಂತ್ರಣೆಯನ್ನು ಮಾಡಲು ಜಿಗ್ ತಯಾರಿಸಲಾಗಿದೆ. ಕಾರ್ಯವಸ್ತು 100 ಮಿ.ಮೀ.ವ್ಯಾಸದ ತುಂಬಾ ದೊಡ್ಡ ಸರ್ಫೇಸ್ ನಲ್ಲಿ ಇಡಲಾಗಿದೆ. ಅದು 30 H7 ಮಿ.ಮೀ. ಈ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಲೊಕೇಟರ್ ನ ವ್ಯಾಸ 30 g6 ಮಿ.ಮೀ.ನಲ್ಲಿ ನಿಯಂತ್ರಿಸಲಾಗಿರುವುದೇ, ಇದರ ಅರ್ಥ. ಈ ರಂಧ್ರವು 30 ಮಿ.ಮೀ. ಮತ್ತು 50 ಮಿ.ಮೀ. ಈ ವ್ಯಾಸಗಳಿಂದ ತಯಾರಿಸಲಾಗಿರುವ ಸರ್ಫೇಸ್ ನ ಯಾವುದೇ ಎಂಗಲ್ ನಲ್ಲಿ ಆದರೂ ನಡೆಯುತ್ತದೆ. ಈ ರಂಧ್ರಗಳ ಮಧ್ಯಭಾಗದಿಂದ ಇರುವ ದೂರವು 15 ±0.30 ಮಿ.ಮೀ. ಇರುತ್ತದೆ. ಇದರಿಂದ ಈ ರಂಧ್ರಗಳ ನಿರ್ದೋಷತ್ವಕ್ಕೆ ಹೆಚ್ಚೆನು ಮಹತ್ವವಿಲ್ಲ ಎಂದು ಗಮನಕ್ಕೆ ಬರುತ್ತದೆ.
ಲೊಕೇಟರ್ ನ ಮತ್ತು ಕಾರ್ಯವಸ್ತುವಿನ ಎತ್ತರ (50 ಮಿ.ಮೀ.) ಸಮಾನವಾಗಿರುವುದರಿಂದ ಕಾರ್ಯವಸ್ತುವನ್ನು ತೆಗೆಯುವಾಗ ಅದು ಸುಮಾರು 50 ರಿಂದ 60 ಮಿ.ಮೀ.ನಷ್ಟು ಎತ್ತಬೇಕಾಗಬಹುದು ಮತ್ತು ಇದರಿಂದಾಗಿ ಒಂದು ವೇಳೆ ಜಿಗ್ ಬುಶ್ ನೀಡಿದರೂ ಕೂಡಾ ಅದನ್ನು ಅಷ್ಟೇ ದೂರದಲ್ಲಿ ನೀಡಬೇಕಾಗುತ್ತದೆ, ಇದು ಅಸಾಧ್ಯವಾದ ವಿಷಯವಾಗಿದೆ. ಕಾರಣ ಬುಶ್ ಒಂದು ವೇಳೆ ಯಂತ್ರಣೆಯ ಸರ್ಫೇಸ್ ನಿಂದ 60 ಮಿ.ಮೀ. ಉದ್ದವಿದ್ದಲ್ಲಿ ಜಿಗ್ ಬುಶ್ ನ ಡ್ರಿಲ್ ನಲ್ಲಿ ಯಾವುದೇ ರೀತಿಯ ನಿಯಂತ್ರಣೆ ಇರುವುದಿಲ್ಲ. ಹಾಗೆಯೇ ಡ್ರಿಲ್ 10 ಮಿ.ಮೀ. ಹೆಚ್ಚು ಉದ್ದದ್ದಾಗಿರಬೇಕು. ಇದರಿಂದಾಗಿ ಜಿಗ್ ಬುಶ್ ಕಾರ್ಯವಸ್ತುವಿನ ತೆಗೆಯುವ ಮತ್ತು ಅಳವಡಿಸುವ ಜಾಗದಿಂದ ಒಂದು ಬದಿಗೆ ಸರಿಸುವಂತಿರಬೇಕು. ಇದಕ್ಕೋಸ್ಕರ ಬುಶ್ ಒಂದು ಸರಿಯುವ ಜಿಗ್ ಪ್ಲೇಟ್ ನಲ್ಲಿ ಅಳವಡಿಸಲಾಗಿದೆ. ಈ ಪ್ಲೇಟ್ ನ ಚಟುವಟಿಕೆಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಡ್ರಿಲ್ಲಿಂಗ್ ಮಾಡುವುದಾದಲ್ಲಿ ಜಿಗ್ ಪ್ಲೇಟ್ ನ ನಿಯಂತ್ರಣೆಯಿಲ್ಲದ ಚಟುವಟಿಕೆ ಆಗಲಾರಂಭಿಸುತ್ತದೆ. ಈ ಪರಿಸ್ಥಿತಿಯಲ್ಲಿ ಜಿಗ್ ಪ್ಲೇಟ್ ಮುಂದೆ ಸರಿಸಿ ಅದರಲ್ಲಿ ಒಂದು ಪಿನ್ ಅಳವಡಿಸಿದಲ್ಲಿ ಬೇಕಾಗಿರುವ ಜಾಗದಲ್ಲಿ ಬುಶ್ ನಿರ್ದೋಷವಾಗಿ ನಿಲ್ಲಬಹುದು ಮತ್ತು ಯಂತ್ರಣೆಯಾದ ನಂತರ ಜಿಗ್ ಪ್ಲೇಟ್ ಹಿಂದೆ ಎಳೆದಲ್ಲಿ ಕಾರ್ಯವಸ್ತುವನ್ನು ಸಹಜವಾಗಿ ತೆಗೆಯುವುದು ಸಾಧ್ಯವಾಗಬಹುದು.
ಜಿಗ್ ಪ್ಲೇಟ್ ನ ಚಟುವಟಿಕೆಯನ್ನು ನಿಯಂತ್ರಿಸಲು ಅದನ್ನು ಒಂದು ಬ್ಲಾಕ್ ನಲ್ಲಿ ಗೈಡ್ ಮಾಡಲಾಗಿದೆ. ಅದರಂತೆಯೇ ಬುಶ್ ಡ್ರಿಲ್ಲಿಂಗ್ ಮಾಡುವಾಗ ಒಂದು ನಿರ್ದಿಷ್ಟ ಜಾಗದಲ್ಲಿ ಬರಲು ಗೈಡ್ ಬ್ಲಾಕ್ ನಲ್ಲಿ ನಿಯಂತ್ರಿಸಿರುವ ರಂಧ್ರದಲ್ಲಿ ಒಂದು ಪಿನ್ ಅಳವಡಿಸಿಲಾಗಿದೆ. ಅದಕ್ಕೋಸ್ಕರ ಲೈನರ್ 1 ಮತ್ತು 2 ಇದರಲ್ಲಿ ಲೊಕೇಟಿಂಗ್ ಪಿನ್ ಬಳಸಲಾಗಿದೆ. ಲೈನರ್ 1, 2 ಮತ್ತು 3 ಹಾಗೆಯೇ ಲೊಕೇಟರ್ ಈ ಎಲ್ಲ ಭಾಗಗಳ ಕೇಂದ್ರಬಿಂದು ಒಂದೇ ರೇಖೆಯಲ್ಲಿ ಇರುವುದೂ ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಬ್ಲಾಕ್ ಮತ್ತು ಜಿಗ್ ಪ್ಲೇಟ್ ಒಟ್ಟಾಗಿ ಅಳವಡಿಸಿ (ಅಸೆಂಬ್ಲಿ ಮಾಡಿ) ಲೊಕೇಟರ್ ನ ØD1 H7 ಲೊಕೇಟರ್ ನ Ø30g6 ಈ ರಂಧ್ರದಿಂದ Ø1 (15 ± 0.02) ಮಿ.ಮೀ.ನಲ್ಲಿ ನಿಯಂತ್ರಿಸಲಾಗಿದೆ.
Ø2/D3 H7 ಈ ರಂಧ್ರಗಳನ್ನು ಲೊಕೇಟರ್ ನ Ø30 g6 ರಂಧ್ರದಿಂದ L2 ±0.02 ಮಿ.ಮೀ.ನಲ್ಲಿ ನಿಯಂತ್ರಿಸಲಾಗಿವೆ. ಹಾಗೆಯೇ ಗೈಡ್ ಬ್ಲಾಕ್ ನಲ್ಲಿರುವ H7/ g6 ಕಚ್ಚು ಮತ್ತು ಲೊಕೇಟರ್ ನ Ø30 g6 ಇದು ಒಂದೇ ರೇಖೆಯಲ್ಲಿರುವುದು ಆವಶ್ಯಕವಾಗಿದೆ. ಇದರಿಂದಾಗಿ ಗೈಡ್ ಬ್ಲಾಕ್ ಸೆಟ್ ಮಾಡಿ ಡಾವೆಲಿಂಗ್ ಮಾಡಲಾಗುತ್ತದೆ ಮತ್ತು ಅದರ ನಂತರ ØD2/D3 H7 ಈ ರಂಧ್ರವನ್ನು ಫಿನಿಶ್ ಮಾಡಲಾಗುತ್ತದೆ. ಫಿಕ್ಸ್ಚರ್ ತಯಾರಿಸುವಾಗ ಯಾವ ಪ್ರಕ್ರಿಯೆಯನ್ನು ಮಾಡಬೇಕು, ಈ ಕುರಿತಾದ ಅಂಶಗಳನ್ನು ನೀಡಲಾಗಿದೆ.
ಈಗ ಫಿಕ್ಸ್ಚರ್ ನಲ್ಲಿರುವ ಕೆಲವು ಮಹತ್ವದ ಭಾಗಗಳ (ಚಿತ್ರ ಕ್ರ. 2) ಕೆಲಸವನ್ನು ನೋಡೋಣ.
ಗೈಡ್ ಬ್ಲಾಕ್ (2)
ಜಿಗ್ ಪ್ಲೇಟ್ ಹಿಂದೆ – ಮುಂದೆ ಮಾಡುವಾಗ ಅದು ಅಂಕು-ಡೊಂಕಾಗಿ ಅಲುಗಾಡಬಾರದು, ಇದೇ ಗೈಡ್ ಬ್ಲಾಕ್ ನ ಕೆಲಸವಾಗಿದೆ. ಜಿಗ್ ಪ್ಲೇಟ್ ಆಗಾಗ ಹಿಂದೆ-ಮುಂದೆ ಮಾಡುವುದರಿಂದ ಗೈಡ್ ಬ್ಲಾಕ್ ನಲ್ಲಿ ಸವೆತವಾಗಬಾರದು, ಎಂಬುದಕ್ಕೋಸ್ಕರ ಅದನ್ನು ಕೇಸ್ ಹಾರ್ಡ್ ಮತ್ತು ಗ್ರೈಂಡ್ ಮಾಡಲಾಗಿದೆ. ಜಿಗ್ ಪ್ಲೇಟ್ ಮುಂದೆ ಬಂದು ಯೋಗ್ಯವಾದ ಜಾಗದಲ್ಲಿ ನಿಲ್ಲಬೇಕು, ಎಂಬುದಕ್ಕೆ ಗೈಡ್ ಬ್ಲಾಕ್ ನಲ್ಲಿ ØD2 H7 ವ್ಯಾಸದ ಲೈನರ್ 1 ಅಳವಡಿಸಲಾಗಿದೆ. ಈ ವ್ಯಾಸದಲ್ಲಿ ಲೊಕೇಟಿಂಗ್ ಪಿನ್ ನ D1 ವ್ಯಾಸವು ಗೈಡ್ ಆಗುತ್ತದೆ.
ಜಿಗ್ ಪ್ಲೇಟ್ (19)
ಈ ಜಿಗ್ ಪ್ಲೇಟ್ ಬ್ಲಾಕ್ ನಲ್ಲಿ ಯೋಗ್ಯವಾಗಿ ಗೈಡ್ (H7/g6) ಆಗಬೇಕು. ಜಿಗ್ ಪ್ಲೇಟ್ ಆಗಾಗ ಹಿಂದೆ ಮುಂದೆ ಮಾಡಿದ್ದರಿಂದ ಅದರ ಸವೆತವಾಗಬಾರದು ಎಂಬುದಕ್ಕೋಸ್ಕರ ಜಿಗ್ ಪ್ಲೇಟ್ ಕೇಸ್ ಹಾರ್ಡ್ ಮತ್ತು ಗ್ರೈಂಡ್ ಮಾಡಲಾಗಿದೆ. ಈ ಜಿಗ್ ಪ್ಲೇಟ್ ನಲ್ಲಿರುವ D1H7 ಮತ್ತು D3H7 ಈ ಎರಡು ರಂಧ್ರಗಳನ್ನು ಫಿಕ್ಸ್ಚರ್ ನಲ್ಲಿ ಅಳವಡಿಸಿಯೇ ಮಾಡಬೇಕಾಗುತ್ತದೆ. 10 ಮಿ.ಮೀ. ವ್ಯಾಸದ ರಂಧ್ರಗಳನ್ನು ಮಾಡಲು ಕೇವಲ ಒಂದೇ ಡ್ರಿಲ್ ಬಳಸಬೇಕಾಗುವುದರಿಂದ ಫಿಕ್ಸ್ ರಿನ್ಯುಯೇಬಲ್ ಬುಶ್ ಬಳಸಲಾಗಿದೆ. ಜಿಗ್ ಪ್ಲೇಟ್ ಮುಂದೆ ತಂದು ಮತ್ತು ಲೊಕೇಟಿಂಗ್ ಪಿನ್ ಲೊಕೇಟ್ ಮಾಡಿದ ನಂತರ ಅದನ್ನು ಕ್ಲ್ಯಾಂಪಿಂಗ್ ಸ್ಕ್ರೂನ ಸಹಾಯದಿಂದ ಕ್ಲ್ಯಾಂಪ್ ಮಾಡಲಾಯಿತು. ಇದರಿಂದಾಗಿ ಯಂತ್ರಣೆ ಮಾಡುವಾಗ ಹೊರಗೆ ಬರುವ ಚಿಪ್ ಗಳ ಘರ್ಷಣೆಯಿಂದಾಗಿ ಜಿಗ್ ಪ್ಲೇಟ್ ಎತ್ತಲ್ಪಡುವುದಿಲ್ಲ. ಜಿಗ್ ಪ್ಲೇಟ್ ನಲ್ಲಿ ನೀಡಿರುವ ಕಚ್ಚುಗಳಿಂದಾಗಿ ಅದು ಹಿಂದೆ-ಮುಂದೆ ಮಾಡುವುದೂ ಸಾಧ್ಯವಾಗುತ್ತದೆ.
ಲೊಕೇಟರ್
ಈಗ ನಾವು ಲೊಕೇಟರ್ ಕುರಿತು ತಿಳಿದುಕೊಳ್ಳೋಣ. ಲೊಕೇಟರ್ ನಲ್ಲಿರುವ ಅರ್ಧ ವರ್ತುಲಾಕಾರದ ರಂಧ್ರವು ಡ್ರಿಲ್ ಗೆ ಮಾರ್ಗದರ್ಶನ ಮಾಡುತ್ತಿದೆ ಮತ್ತು ಅದನ್ನು ನಿಯಂತ್ರಿಸಲಾಗಿದೆ. ಇದಕ್ಕೋಸ್ಕರ ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಲೊಕೇಟರ್ ನ 30g6 ಮಿ.ಮೀ. ವ್ಯಾಸವನ್ನು 50 ಮಿ.ಮೀ. ಮಾಡಲಾಗಿದೆ ಮತ್ತು Ø10F7 ರಂಧ್ರವನ್ನು ಮಾಡಲಾಗಿದೆ. ನಂತರ ಲೊಕೇಟರ್ ನ ವ್ಯಾಸ 30g6 ಮಿ.ಮೀ. ಮಾಡಲಾಗಿದೆ. ಇದರಿಂದಾಗಿ ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ ನ ಒಂದು ಎಡ್ಜ್ ಲೊಕೇಟರ್ ನ ಒಳಭಾಗದಲ್ಲಿರುವ ವಕ್ರ ಭಾಗದ ಆಧಾರವನ್ನು ಪಡೆಯುತ್ತದೆ ಮತ್ತು ಇನ್ನೊಂದು ಎಡ್ಜ್ ಕಾರ್ಯವಸ್ತುವಿನ ಡ್ರಿಲ್ ಮಾಡಲಾಗಿರುವ ಒಳಭಾಗದಲ್ಲಿರುವ ವಕ್ರ ಭಾಗದ ಆಧಾರವನ್ನು ಪಡೆಯುತ್ತದೆ. ಈ ರೀತಿಯಲ್ಲಿ ಇಂತಹ ಕಠಿಣವಾದ ಯಂತ್ರಣೆಯನ್ನು ಮಾಡುವುದು ಸುಲಭ ಸಾಧ್ಯವಾಗಿದೆ. ಲೊಕೇಟರ್ ಡಾವೆಲ್ ಮಾಡಿರುವುದರಿಂದ ಲೊಕೇಟರ್ ಹಾಳಾದಲ್ಲಿ ಅಥವಾ ತೆಗೆದು ಮತ್ತೆ ಅಳವಡಿಸಿದಲ್ಲಿ ಅದರ ಸ್ಥಿತಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಈ ಅರ್ಧ ವರ್ತುಲಾಕಾರದ ಸ್ಪಾರ್ಕ್ ಇರೋಜನ್ ನಿಂದಲೂ ಮಾಡಬಹುದು. ಹೀಗೆ ಮಾಡಿದಲ್ಲಿ ಲೊಕೇಟರ್ Ø30g6 ಮಾಡಿದ ನಂತರವೂ ಈ ಅರ್ಧವರ್ತುಲಾಕಾರದ ರಂಧ್ರಗಳು Ø10F7 ಈ ಮಾಪನದಲ್ಲಿ ಪಿನಿಶ್ ಮಾಡುವುದು ಸಾಧ್ಯ.
ಕಾರ್ಯವಸ್ತು ಸ್ಟ್ರಾಪ್ ಕ್ಲ್ಯಾಂಪ್ ನ ಸಹಾಯದಿಂದ ದೃಢವಾಗಿ ಹಿಡಿಯಲಾಗಿದೆ. ಸ್ಟ್ರಾಪ್ ಕ್ಲ್ಯಾಂಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಂಬುದನ್ನು ನಾವು ಈ ಹಿಂದೆಯೇ ನೋಡಿದ್ದೇವೆ. ಒಂದೇ ಜಾಗದಲ್ಲಿ ತಿರುಗುವ (ಸ್ವಿಂಗ್) ಅಥವಾ ಸರಿಯುವ (ಸ್ಲೈಡಿಂಗ್) ಸ್ಟ್ರಾಪ್ ಕ್ಲ್ಯಾಂಪ್ ಇವೆರಡರಲ್ಲಿ ಯಾವುದೇ ವಿಧವನ್ನು ನಾವು ಬಳಸಬಹುದು. ಉಳಿದಿರುವ ಭಾಗಗಳನ್ನು ಮತ್ತು ಅವುಗಳ ಕೆಲಸವನ್ನು ನಾವು ಆಗಾಗ ತಿಳಿದುಕೊಂಡಿದ್ದೇವೆ.
ಪರ್ಯಾಯ B
ಈ ಪರ್ಯಾಯದಲ್ಲಿ ನಾವು ಕಾರ್ಯವಸ್ತುವಿನ ಪ್ರಕ್ರಯೆಯನ್ನು ಬದಲಾಯಿಸಲಿದ್ದೇವೆ. ಕಾರ್ಯವಸ್ತುವಿನಲ್ಲಿರುವ ಅರ್ಧ ತುಂಡಾಗಿರುವ ರಂಧ್ರಗಳನ್ನು ತಯಾರಿಸುವುದು, ಇದೇ ಪ್ರಮುಖವಾದ ಸವಾಲಾಗಿದೆ. ಇದರ ಯಂತ್ರಣೆ ಸುಲಭವಾಗಿ ಮಾಡಲು ಹಲವಾರು ಬದಲಾವಣೆಗಳನ್ನು ಮಾಡಲಿದ್ದೇವೆ. ಅದರಲ್ಲಿರುವ ಮಹತ್ವದ ಬದಲಾವಣೆ ಅಂದರೆ, ಕಾರ್ಯವಸ್ತುವಿನ 30 H7 ವ್ಯಾಸ 15H7 ಮಿ.ಮೀ. (ಚಿತ್ರ ಕ್ರ. 4) ಮಾಡಲಾಯಿತು. ಈಗ ಒಂದು ವೇಳೆ ನಾವು 10 ವ್ಯಾಸದ ರಂಧ್ರಗಳನ್ನು ಮಾಡಿದಲ್ಲಿ ಅರ್ಧಂಬರ್ಧ ತುಂಡಾಗುವುದಿಲ್ಲ ಮತ್ತು ಈ ರಂಧ್ರಗಳನ್ನು ಮಾಡಿದ ನಂತರ ಮತ್ತೆ ಟರ್ನಿಂಗ್
(ಬೋರಿಂಗ್) ಮಾಡಿ 30H7 ಈ ರಂಧ್ರವನ್ನು ಫಿನಿಶ್ ಮಾಡಲಾಯಿತು. ಅಂದರೆ ಕಾರ್ಯವಸ್ತುವಿನ ಹೊಸ ಪ್ರಕ್ರಿಯೆಯು ಈ ಮುಂದಿನಂತಿದೆ.
1. ಮೊದಲು Ø30H7 ಈ ರಂಧ್ರದ ಜಾಗದಲ್ಲಿ Ø15H7 ನ ಯಂತ್ರಣೆಯನ್ನು ಮಾಡಿಕೊಂಡೆವು.
2. ನಂತರ 10 ಮಿ.ಮೀ. ವ್ಯಾಸದ ರಂಧ್ರಗಳನ್ನು ಮಾಡಿದೆವು.
3. ಕೊನೆಯಲ್ಲಿ 30H7 ವ್ಯಾಸದ ರಂಧ್ರವನ್ನು ಪೂರ್ಣಗೊಳಿಸಿದೆವು.
4. ಮುಂದಿನ ಯಂತ್ರಣೆಯನ್ನು ಮಾಡಿದೆವು.
10 ಮಿ.ಮೀ. ವ್ಯಾಸದ ರಂಧ್ರಗಳನ್ನು ಮಾಡಿದ ನಂತರ ಕಾರ್ಯವಸ್ತು ಮತ್ತೆ ಟರ್ನಿಂಗ್ ಮಶಿನ್ ನಲ್ಲಿ ತರಬೇಕಾಗುತ್ತದೆ, ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು. ಕಾರ್ಯವಸ್ತುವಿನ ಬ್ಯಾಕ್ ಫ್ಲೋ ಅಂದರೆ ಟರ್ನಿಂಗ್ ನಂತರ ಡ್ರಿಲ್ಲಿಂಗ್, ಮತ್ತೆ ಮುಂಚೆ ಟರ್ನಿಂಗ್ ಮತ್ತು ನಂತರ ಮುಂದಿನ ಯಂತ್ರಣೆ, ಈ ರೀತಿಯ ಬ್ಯಾಕ್ ಫ್ಲೋ ಸಾಧ್ಯವಾದಷ್ಟು ಮಟ್ಟಿಗೆ ತಡೆಯಬೇಕು.
ಇನ್ನೊಂದು ಮಹತ್ವದ ಅಂಶವೆಂದರೆ, ಆವಶ್ಯಕತೆ ಇಲ್ಲದಿದ್ದಾಗ Ø15 H7 ವ್ಯಾಸದಿಂದ ನಿಯಂತ್ರಿಸಲ್ಪಟ್ಟ ರಂಧ್ರಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ಸಮಯವು ತಗಲುತ್ತದೆ ಮತ್ತು ಖರ್ಚು ಕೂಡಾ ಹೆಚ್ಚಾಗುತ್ತದೆ. ಆದರೆ ಇದಕ್ಕೋಸ್ಕರ ಬೇಕಾಗುವ ಪಿಕ್ಸ್ಚರ್ ಸಾಮಾನ್ಯವಾಗಿರುತ್ತದೆ. ಈ ವಿಧದ ಫಿಕ್ಸ್ಚರ್ ನಲ್ಲಿ ಅಲುಗಾಡುವಂತಹ ಜಿಗ್ ಪ್ಲೇಟ್ ಇಡುವ ಆವಶ್ಯಕತೆ ಇರುವುದಿಲ್ಲ.
ಇದರಲ್ಲಿರುವ ಮಹತ್ವದ ಅಂಶವೆಂದರೆ, ನಾವು ಪಿಕ್ಸ್ಚರ್ ಒಂದೇ ಸಲ ತಯಾರಿಸುತ್ತೇವೆ. ಆದರೆ ಕಾರ್ಯವಸ್ತುವಿನ ವೇಳೆಯಲ್ಲಿ ಆಗುವ ಹೆಚ್ಚಳ ಇದು ಆಗಾಗ ಕಂಡುಬರುವಂತಹದ್ದು, ಇದು ನಮಗೆ ಪೂರೈಸುವಂತಹದ್ದಲ್ಲ. ಇದರಿಂದಾಗಿ ಮೊದಲ ಪರ್ಯಾಯದ ಆಯ್ಕೆ ಸೂಕ್ತವಾಗಿದೆ. ಎರಡನೇ ಪರ್ಯಾಯಕ್ಕೋಸ್ಕರ ಫಿಕ್ಸ್ಚರ್ (ಚಿತ್ರ ಕ್ರ. 5) ಹೇಗಿರಬಹುದು, ಎಂಬುದನ್ನು ನಾವು ನೋಡೋಣ.
ಜಗ್ ಪ್ಲೇಟ್
ಈ ಡಿಸೈನ್ ನಲ್ಲಿ ಜಿಗ್ ಪ್ಲೇಟ್ ಸ್ಥಿರವಾಗಿದೆ. ಜಿಗ್ ಪ್ಲೇಟ್ ಹಾರ್ಡನಿಂಗ್ ಮತ್ತು ಗ್ರೈಂಡ್ ಮಾಡುವ ಆವಶ್ಯಕತೆ ಇರುವುದಿಲ್ಲ. ಅದು ಒಂದು ಬ್ರೇಕೆಟ್ ನಲ್ಲಿ ಸ್ಕ್ರೂ ಮತ್ತು ಡಾವೇಲ್ ನ ಸಹಾಯದಿಂದ ತಯಾರಿಸಲಾಗಿದೆ. ಜಿಗ್ ಪ್ಲೇಟ್ ನಲ್ಲಿರುವ ಲೈನರ್ ಗೋಸ್ಕರ ಇರುವ H7 ರಂಧ್ರವನ್ನು ಅಸೆಂಬ್ಲಿಯಲ್ಲಿ ಮಾಡಬೇಕಾಗುತ್ತದೆ. ಅದರ ಮಾಪನಗಳ ಚಿತ್ರ ಕ್ರ. 2 ರಲ್ಲಿ ತಮಗೆ ಸಿಗಬಹುದು. ಈ ಫಿಕ್ಸ್ಚರ್ ನಲ್ಲಿ ಲೊಕೇಟರ್ ಡಾವೆಲ್ ಮಾಡುವ ಆವಶ್ಯಕತೆ ಇರುವುದಿಲ್ಲ.
ಒಂದೇ ಯಂತ್ರಣೆಗೋಸ್ಕರ ಅನೇಕ ವಿಧದ ಫಿಕ್ಸ್ಚರ್ ಡಿಸೈನ್ ಮಾಡಬಲ್ಲೆವು, ಎಂಬುದು ಈ ಮೇಲಿನ ಅಂಶಗಳಿಂದಾಗಿ ತಮ್ಮ ಗಮನಕ್ಕೆ ಬರಬಹುದು. ಡಿಸೈನ್ ಯಾವ ರೀತಿಯಲ್ಲಿ ಮಾಡಬೇಕು ಎಂಬುದು, ತಮ್ಮಲ್ಲಿರುವ ಸಂಪನ್ಮೂಲಗಳು, ಮಶಿನ್ ಮತ್ತು ಅವುಗಳ ಸಾಮರ್ಥ್ಯ, ಕಾರ್ಯವಸ್ತುಗಳ ಸಂಖ್ಯೆ ಮತ್ತು ಮಾಪನಗಳ ನಿಖರತೆ, ಆಪರೇಟರ್ ನ ಕುಶಲತೆ ಇತ್ಯಾದಿ ಅಂಶಗಳಿಗೆ ಅವಲಂಬಿಸಿರುತ್ತದೆ. ನಿರಂತರವಾಗಿ ಸುಧಾರಣೆಗಳನ್ನು ಮಾಡಲು ಪ್ರಯೋಗಗಳನ್ನು ಯಾವಾಗಲೂ ಮಾಡುತ್ತಿರುವುದೂ ತುಂಬಾ ಮಹತ್ವದ್ದಾಗಿದೆ.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,
ARAI SAE
9011018388
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.